ಕೆರೂರು ಠಾಣೆ ಪಿಎಸ್‌ಐ, ಪಿಸಿ ಲೋಕಾಯುಕ್ತ ಬಲೆಗೆ:ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ ಯುವಕರು – Kannada News | Youths Celebrations For Kerur PSI Bheemappa Caught in Lokayukta Trap Bagalkot

ಬಾಗಲಕೋಟೆ, (ಏಪ್ರಿಲ್ 22): ಇಸ್ಪೀಟ್ ಆಡುವವರ ಬಳಿ ಲಂಚ ಸ್ವೀಕರಿಸುವಾಗ ಪೊಲೀಸ್​ ಸಬ್ ಇನ್ಸ್​ಪೆಕ್ಟರ್ ( Kerur PSI Bheemappa) ಹಾಗೂ ಕಾನ್ಸ್​​​ಟೇಬಲ್ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ. ಬಾಗಲಕೋಟೆ (Bagalkot) ಜಿಲ್ಲೆ ಬಾದಾಮಿ ತಾಲೂಕಿನ ಕೆರೂರು ಠಾಣೆಯ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​​ ಭೀಮಪ್ಪ ರಬಕವಿ ಹಾಗೂ ಕಾನ್ಸ್​ಟೇಬಲ್ ಸಂತೋಷ್ ಬಿರಾದಾರ ಎನ್ನುವರು ಮುತ್ತಪ್ಪ ನಾಯ್ಕರ್​ ಎಂಬುವರಿಂದ ಲಂಚ ಸ್ವೀಕರಿಸುವಾಗ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇದರಿಂದ ಯುವಕ ಗುಂಪು ಕೆರೂರು ಪೊಲೀಸ್ ಠಾಣೆ ಮುಂದೆಯೇ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದೆ.

ಇಸ್ಪೀಟ್ ಆಡುತ್ತಿದ್ದ ಓರ್ವ ಆರೋಪಿ ರಕ್ಷಣೆಗೆ ಮುಂದಾಗಿದ್ದ ಪೊಲೀಸರು, ಬೈಕ್ ಬಿಡಲು 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಮುತ್ತಪ್ಪ ನಾಯ್ಕರ್ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರಿನ ಅನ್ವಯ ಲೋಕಾಯುಕ್ತ SP ಮಹಾಲಿಂಗ ನಂದಗಾಂವಿ ಮಾರ್ಗದರ್ಶನದಲ್ಲಿ ದಾಳಿ ನಡೆಸಿ, ಪಿಎಸ್​ಐ ಭೀಮಪ್ಪ, ಪಿಸಿ ಬಿರಾದಾರನನ್ನು 1.70 ಲಕ್ಷ ಲಂಚ ಸ್ವೀಕರಿಸುವಾಗ ಹಿಡಿದಿದ್ದರು. ಇದರ ಬೆನ್ನಲ್ಲೇ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: ಇನ್ಸ್‌ಪೆಕ್ಟರ್​​​ನಿಂದಲೇ ಲಂಚ ಸ್ವೀಕರಿಸುತ್ತಿದ್ದ ಎಸ್‌ಡಿಎ ಲೋಕಾಯುಕ್ತ ಬಲೆಗೆ!

ಇನ್ಸ್​​ಪೆಕ್ಟರ್ ಭೀಮಪ್ಪ ತಮ್ಮ ವರ್ತನೆಯಿಂದ ಸಾರ್ವಜನಿಕರ ವಿರೋಧ ಕಟ್ಟಿಕೊಂಡಿದ್ದರು. ಅಲ್ಲದೇ ಪಿಎಸ್​​ಐ ವಿರುದ್ಧ ಹಲವು ಆರೋಪ ಕೇಳಿಬಂದಿದ್ದವು. ಇದೀಗ ಲೋಕಾಯುಕ್ತಕ್ಕೆ ಬಲೆಗೆ ಬೀಳುತ್ತಿದ್ದಂತೆಯೇ ಜನರು ಫುಲ್ ಖುಷ್ ಆಗಿದ್ದಾರೆ. ಇನ್ನು ಇನ್ಸ್​​ಪೆಕ್ಟರ್​ ಏನೆಲ್ಲಾ ಕೆಟ್ಟ ಕೆಲಸ ಮಾಡಿದ್ದಾರೆ ಎನ್ನುವುದನ್ನು ಸಾಕ್ಷಿ ನೀಡುತ್ತೇವೆ. ಹೀಗಾಗಿ ಎಸ್ಪಿ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಈ ಘಟನೆ ಅಚ್ಚರಿ ಮೂಡಿಸಿದೆ. ಯಾಕಂದ್ರೆ, ಓರ್ವ ಪಿಎಸ್​ಐ ಲೋಕಾಯುಕ್ತ ಬಲಿಗೆ ಬಿದ್ದಿದ್ದರಿಂದ ಈ ಪರಿ ಸಂಭ್ರಮಾರಣೆ ಮಾಡುತ್ತಿರುವುದು ಅಪರೂಪ. ಇದರ ಅರ್ಥ ಪಿಎಸ್​​ಐ ಕಾರ್ಯವೈಖರಿ ತೋರಿಸುತ್ತಿದೆ.

Source link

ಕರವೇ ನಾರಾಯಣ ಗೌಡಗೆ ನಿಂದನೆ; ರಾಜ್ಯಾದ್ಯಂತ ಕಿಡಿಗೇಡಿಗಳ ವಿರುದ್ಧ ಕೇಸ್ ಬುಕ್, ಆಗಿದ್ದೇನು? – Kannada News | Hindi Row: Karave Narayan Gowda Defamed, Cases Filed Against Trolls

ಬೆಂಗಳೂರು, ಏಪ್ರಿಲ್​ 22: ಕನ್ನಡ ಮತ್ತು ಹಿಂದಿ ಭಾಷಾ (Kannada-Hindi Conflict) ಯುದ್ಧದಲ್ಲಿ ಕನ್ನಡ ಹೋರಾಟಗಾರರ ಬಗ್ಗೆ ಅವಹೇಳನ ಮಾಡಲಾಗುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ (Narayana Gowda) ವಿರುದ್ಧ ನೇರವಾಗಿಯೇ ಕಿಡಿಗೇಡಿಗಳು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಕರವೇ ಪಡೆ ಕಾನೂನಿನ ಮೊರೆ ಹೋಗಿದ್ದು, ಅನೇಕ ಕಡೆ ಕೇಸ್ ದಾಖಲಾಗಿವೆ.

ಕನ್ನಡ ನಾಡು, ನುಡಿ, ಜಲದ ಹೋರಾಟಗಳಲ್ಲಿ ಕರವೇ ಸಂಘಟನೆ ಸದಾ ಮುಂಚೂಣಿಯಲ್ಲಿರುತ್ತೆ.‌ ಇತ್ತೀಚೆಗೆ ನಡೆಯುತ್ತಿರುವ ಕನ್ನಡ- ಹಿಂದಿ ಭಾಷಾ ಯುದ್ಧದಲ್ಲೂ ಕರವೇ ನಾರಾಯಣ ಗೌಡ ಹಿಂದಿ ಏರಿಕೆ ವಿರುದ್ಧ ಹರಿಹಾಯ್ದಿದ್ದರು. ಆದರೆ ಕೆಲ ಹಿಂದಿ ಪ್ರೇಮಿಗಳು ಇಷ್ಟಕ್ಕೆ ನಾರಾಯಣ ಗೌಡ ಮೇಲೆ‌ ಮುಗಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಟೀಕೆ ಮಾಡಿದ್ದಾರೆ.

ಇದನ್ನೂ ಓದಿ: SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ

ಎಸ್​​​ಎಸ್​​ಎಲ್​​ಸಿ ಪರೀಕ್ಷೆಯಲ್ಲಿ ಹಿಂದಿಗೆ ಅಂಕ ಬದಲು ಗ್ರೇಡ್ ನೀಡುವ ಬಗ್ಗೆ ಕರವೇ ನಾರಾಯಣ ಗೌಡ ಮಾತಾಡಿದ್ದರು. ಹೀಗಾಗಿ ಸುಭಾಷ್ ಮಾಲೀ ಎಂಬಾತ ಫೇಸ್ ಬುಕ್​​ನಲ್ಲಿ ನಾರಾಯಣ ಗೌಡ ಬಗ್ಗೆ ಅವಹೇಳನವಾಗಿ ಬರೆದುಕೊಂಡಿದ್ದ. ಇದು ಮಹೇಶ್ ವಿಕ್ರಮ ಹೆಗ್ಡೆ ಎಂಬಾತನ ಪೇಜ್​​ನಲ್ಲೂ ಪೋಸ್ಟ್ ಆಗಿತ್ತು. ಹೀಗಾಗಿ ಕರವೇ ಕಾರ್ಯಕರ್ತರು ಕಿಡಿಗೇಡಿಗಳ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿದ್ದಾರೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ, ಉಪ್ಪಾರಪೇಟೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲೂ ದೂರು ನೀಡಿದ್ದಾರೆ.

ಇಂತಹ ಕೆಲಸಕ್ಕೆ ನಾವು ಬಗ್ಗಲ್ಲ ಎಂದ ನಾರಾಯಣ ಗೌಡ 

ಇನ್ನು ಈ ಬಗ್ಗೆ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಮಾತನಾಡಿದ್ದು, ಇಂತಹ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸಕ್ಕೆ ನಾವು ಬಗ್ಗಲ್ಲ. ನಾವು ಕಾನೂನು ಬಿಟ್ಟು ಹೋಗಲ್ಲ. ಪೊಲೀಸರು ಬೇಗ ಕ್ರಮಕೈಗೊಳ್ಳಬೇಕು ಅಂತ ಆಗ್ರಹಿಸಿದ್ದಾರೆ.

ಇದನ್ನೂ ಓದಿ: SSLC ಹಿಂದಿ ಪರೀಕ್ಷೆ ಕೇಂದ್ರಗಳಿಗೆ ಕನ್ನಡ ಸಂಘಟನೆಗಳಿಂದ ಮುತ್ತಿಗೆ ಎಚ್ಚರಿಕೆ: ಪೊಲೀಸ್ ಮೊರೆ ಹೋದ ಶಿಕ್ಷಣ ಇಲಾಖೆ

ಕರವೇ ಆರೋಪಕ್ಕೆ ಫೇಸ್ ಬುಕ್​ನಲ್ಲೇ ಪ್ರತಿಕ್ರಿಯಿಸಿದ್ದ ಮಹೇಶ್ ಹೆಗ್ಡೆ ಎಂಬಾತ ತಾನು ಯಾವುದೇ ಪೋಸ್ಟ್ ಮಾಡಿಲ್ಲ, ತನ್ನ ಹೆಸರಿನ ಪೇಜ್​​ನಲ್ಲಿ ಪೋಸ್ಟ್​​ ಆಗಿದೆ ಎಂದಿದ್ದಾನೆ. ಸದ್ಯ ಅವಹೇಳನ ಮತ್ತು ಬೆದರಿಕೆ ಬಗ್ಗೆ ಅನೇಕ ಪೊಲೀಸ್ ಠಾಣೆಗಳಲ್ಲಿ ಕೇಸ್​​ಗಳು ದಾಖಲಾಗಿದ್ದು, ಮುಂದೇನಾಗುತ್ತೆ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪಂಜಾಬ್ ಲಾಟರಿಯಲ್ಲಿ 6 ಕೋಟಿ ಗೆದ್ದ 80 ವರ್ಷದ ನಿವೃತ್ತ ಪೋಸ್ಟ್ ಮಾಸ್ಟರ್ – Kannada News | Delhi 80 year old retired postmaster wins Rs 6 crore Punjab Baisakhi Bumper lottery

ನವದೆಹಲಿ, ಏಪ್ರಿಲ್ 22: ದೆಹಲಿಯ 80 ವರ್ಷದ ನಿವೃತ್ತ ಪೋಸ್ಟ್ ಮಾಸ್ಟರ್ ಪಂಜಾಬ್ ರಾಜ್ಯ ಡಿಯರ್ ಬೈಸಾಖಿ ಬಂಪರ್ ಲಾಟರಿಯಲ್ಲಿ (Bumper Lottery) 6 ಕೋಟಿ ರೂ. ಪ್ರಥಮ ಬಹುಮಾನವನ್ನು ಗೆದ್ದಿದ್ದಾರೆ. ದೆಹಲಿಯ ನಿವಾಸಿಯಾದ 80 ವರ್ಷದ ಓಂ ಪ್ರಕಾಶ್ ಲುಧಿಯಾನದ ಘಂಟಾ ಘರ್ ನಲ್ಲಿರುವ ಅಂಗಡಿಯಿಂದ 500 ರೂ.ಗೆ ಲಾಟರಿ ಟಿಕೆಟ್ ಖರೀದಿಸಿದ್ದರು. ಬಿ 520729 ಸಂಖ್ಯೆಯ ಅವರ ಲಾಟರಿ ಟಿಕೆಟ್ ಏಪ್ರಿಲ್ 19ರಂದು ಘೋಷಿಸಲಾದ ಡ್ರಾದಲ್ಲಿ ಮೊದಲ ಬಹುಮಾನವನ್ನು ಪಡೆದುಕೊಂಡಿದೆ. ಹೀಗಾಗಿ, ರಾತ್ರಿ ಬೆಳಗಾಗುವಷ್ಟರಲ್ಲಿ ಅವರು ಕೋಟ್ಯಧಿಪತಿಯಾಗಿದ್ದಾರೆ.

ಓಂ ಪ್ರಕಾಶ್ ಸುಮಾರು 30 ವರ್ಷಗಳಿಂದ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದರು. ಆಗಾಗ ಸಂಬಂಧಿಕರ ಮೂಲಕ ಲಾಟರಿ ಟಿಕೆಟ್ ಖರೀದಿಸುತ್ತಿದ್ದರು. ಅವರು ತಮ್ಮ ಅತ್ತಿಗೆಯನ್ನು ಭೇಟಿ ಮಾಡಲು ಆಗಾಗ ಲುಧಿಯಾನಕ್ಕೆ ಪ್ರಯಾಣಿಸುತ್ತಿದ್ದರು. ಅವರು ಅಲ್ಲಿಗೆ ಭೇಟಿ ನೀಡಿದ ಸಮಯದಲ್ಲಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದರು.

ಇದನ್ನೂ ಓದಿ: ಮಗ 49 ಕೋಟಿ ರೂ ಲಾಟರಿ ಗೆದ್ದ, ಕುಟುಂಬಸ್ಥರ ಸಂತೋಷ ಹೇಗಿತ್ತು ನೋಡಿ

ಲಾಟರಿ ಫಲಿತಾಂಶಗಳು ಘೋಷಣೆಯಾದ ನಂತರ, ಓಂ ಪ್ರಕಾಶ್ ಲುಧಿಯಾನಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿ ಅವರನ್ನು ಸಂಭ್ರಮಾಚರಣೆಗಳೊಂದಿಗೆ ಸ್ವಾಗತಿಸಲಾಯಿತು. ಈ ಹಣವನ್ನು ದತ್ತಿ ಉದ್ದೇಶಗಳಿಗಾಗಿ ಬಳಸಲು ಅವರ ಕುಟುಂಬ ಯೋಜಿಸಿದೆ. ಲುಧಿಯಾನ ಪ್ರದೇಶದ ನಿರ್ಗತಿಕರಿಗೆ ಮತ್ತು ಅನಾಥಾಶ್ರಮಗಳಲ್ಲಿ ಅಗತ್ಯವಿರುವವರಿಗೆ ಸಹಾಯ ಮಾಡುವುದಾಗಿ ಓಂ ಪ್ರಕಾಶ್ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:47 pm, Wed, 22 April 26

Source link

‘ಕೆಡಿ’ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್ ಅರವಿಂದ್ – Kannada News | Actor Ramesh Aravind speech in KD movie trailer launch event

ನಟ ರಮೇಶ್ ಅರವಿಂದ್ (Ramesh Aravind) ಅವರು ‘ಕೆಡಿ’ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರ ಪಾತ್ರ ಹೇಗಿರಲಿದೆ ಎಂಬುದರ ಝಲಕ್ ಈಗಾಗಲೇ ಟ್ರೇಲರ್​ನಲ್ಲಿ ಕಾಣಿಸಿದೆ. ಏಪ್ರಿಲ್ 30ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಶೀರ್ಷಿಕೆಯೇ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರು ಕಾಳಿದಾಸ ಎಂಬ ಪಾತ್ರ ಮಾಡಿದ್ದಾರೆ. ಅದರ ಸಂಕ್ಷಿಪ್ತ ರೂಪವೇ ಕೆಡಿ. ಆದರೆ ಈ ಸಿನಿಮಾದಲ್ಲಿ ಕೇವಲ ಅವರು ಮಾತ್ರ ಕೆಡಿ ಅಲ್ಲ. ಇನ್ನೂ ಅನೇಕರು ಕೆಡಿಗಳು ಇದ್ದಾರೆ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ. ‘ಕೆಡಿ’ ಸಿನಿಮಾದ ಟ್ರೇಲರ್ (KD Movie Trailer) ಬಿಡುಗಡೆಯ ವೇದಿಕೆಯಲ್ಲಿ ಅವರು ಆ ಬಗ್ಗೆ ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನ ಮನೆಯೊಂದರಲ್ಲಿ ದಂಪತಿ ಶವ ಪತ್ತೆ: ಗಂಡ-ಹೆಂಡ್ತಿ ಸಾವಿನ ರಹಸ್ಯ ನಿಗೂಢ – Kannada News | Couple Dead Body Found In gangenahalli Home at Bengaluru

ಬೆಂಗಳೂರು, (ಏಪ್ರಿಲ್ 22): ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಆರ್.ಟಿ.ನಗರದ ಗಂಗೇನಹಳ್ಳಿಯ ಮನೆಯೊಂದರಲ್ಲಿ ದಂಪತಿ (Couple) ಶವ ಪತ್ತೆಯಾಗಿದೆ. 10 ವರ್ಷಗಳ ಹಿಂದೆ ವಿವಾಹವಾಗಿದ್ದ ಸುಮಿತ್ರಾ ಹಾಗೂ ಡೇವಿಡ್ ಇದೀಗ ಏಕಾಏಕಿ ಸಾವನ್ನಪ್ಪಿದ್ದಾರೆ. ಆದ್ರೆ, ಇಬ್ಬರ ಸಾವಿಗೆ ನಿಖರ ಕಾರಣ ತಿಳಿದುಬಂದಿದ್ದಲ್ಲ. ಇನ್ನು ಸ್ಥಳಕ್ಕೆ ಆರ್​​ಟಿ ನಗರ ಪೊಲೀಸರು ಮತ್ತು ಸೊಕೊ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದು, ಕೌಟುಂಬಿಕ ಕಲಹದಿಂದ ಬೇಸತ್ತು ಡೇವಿಡ್, ಸುಮಿತ್ರಾಳನ್ನ ಉಸಿರುಗಟ್ಟಿಸಿ ಕೊಂದು ಬಳಿಕ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.

ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ಪತಿ ಡೇವಿಡ್, ಉಸಿರುಗಟ್ಟಿಸಿ ಕೊಂದು ಬಳಿಕ ಸೀರೆಯಿಂದ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಪತಿ ಡೇವಿಡ್ ಕೈಗಳ ಮೇಲೆ ಪ್ರತಿರೋಧವೊಡ್ಡಿ ತರಚಿರುವ ಗುರುತು ಸಹ ಕಂಡುಬಂದಿದೆ.  ಹೀಗಾಗಿ ಡೇವಿಡನೇ ಪತ್ನಿಯನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಪ್ರತಿಷ್ಠಿತ ಕಂಪನಿಯ ಮಹಿಳಾ ಶೌಚಾಲಯದಲ್ಲಿ ಭ್ರೂಣ ಪತ್ತೆ; ಬೆಚ್ಚಿಬಿದ್ದ ಸಿಬ್ಬಂದಿ!

ಇನ್ನು ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಬಿ.ಎಸ್.ನೇಮಗೌಡ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದು, ಬಳಿಕ ಪ್ರತಿಕ್ರಿಯಿಸಿರುವ ಅವರು, ಸಂಬಂಧಿಕರ ಮಾಹಿತಿ ಪ್ರಕಾರ ಕೌಟುಂಬಿಕ ಕಲಹ ಇತ್ತು. ಜಗಳವಾಡಿದ್ದರಿಂದ ಮಕ್ಕಳನ್ನು ಸೋದರ ಸಂಬಂಧಿ ಕರೆದೊಯ್ದಿದ್ದರು. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಸದ್ಯ ಇಬ್ಬರ ಶವ ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ.

ಮೇಲ್ನೋಟಕ್ಕೆ ಕೌಟುಂಬಿಕ ಕಲಹ ಎನ್ನಲಾಗುತ್ತಿದೆಯಾರೂ ಮರಣೋತ್ತರ ಪರೀಕ್ಷೆ ವರದಿ ಹಾಗೂ ಪೊಲೀಸರ ತನಿಖೆ ಬಳಿಕ ಸಾವಿನ ರಹಸ್ಯ ಬಯಲಿಗೆ ಬರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೇಸಿಗೆಯಲ್ಲಿ ಹೀಟ್ ಸ್ಟ್ರೋಕ್ ಅಪಾಯ: ಈ ರೀತಿಯಾಗುವ ಮುನ್ನ ಕಾಣಿಸಿಕೊಳ್ಳುತ್ತೆ 3 ಲಕ್ಷಣಗಳು – Kannada News | Heat Stroke Warning Signs: Spot These 3 Symptoms Early

ದೇಶದ ಹಲವೆಡೆ ಉಷ್ಣಾಂಶ ದಿನೇ ದಿನೇ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೀಟ್ ಸ್ಟ್ರೋಕ್ (Heat Stroke) ಪ್ರಕರಣಗಳು ಹೆಚ್ಚಾಗುತ್ತಿದೆ. ತೀವ್ರ ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆದರೆ ದೇಹದ ತಾಪಮಾನ ನಿಯಂತ್ರಣ ತಪ್ಪಿ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ವಿಶೇಷವಾಗಿ ಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗೂ ಹೊರಗಡೆ ಕೆಲಸ ಮಾಡುವವರು ಹೆಚ್ಚಿನ ಅಪಾಯದಲ್ಲಿದ್ದಾರೆ. ಹಾಗಾಗಿ ಆರೋಗ್ಯ ತಜ್ಞರು ಈ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಹೇಳುತ್ತಿದ್ದಾರೆ. ಮಾತ್ರವಲ್ಲ, ಈ ರೀತಿಯಾಗುವ ಮುನ್ನ ಕಾಣಿಸಿಕೊಳ್ಳುವ 3 ಪ್ರಮುಖ ಲಕ್ಷಣಗಳ ಬಗ್ಗೆ ತಿಳಿಸಿದ್ದಾರೆ. ಇದನ್ನು ಸರಿಯಾಗಿ ತಿಳಿದುಕೊಂಡು ಈ ರೀತಿಯಾದಾಗ ತಕ್ಷಣ ಮುನ್ನೆಚ್ಚರಿಕೆ ವಹಿಸಿ ಆರೋಗ್ಯ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಹಾಗಾದರೆ ಈ ಲಕ್ಷಣಗಳು ಯಾವವು, ಈ ಸಮಸ್ಯೆ ತಡೆಗಟ್ಟುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೀಟ್ ಸ್ಟ್ರೋಕ್ ಕಂಡುಬರುವ ಮುನ್ನ ಕಾಸಿಕೊಳ್ಳುವ ಲಕ್ಷಣಗಳು:

ವೈದ್ಯಕೀಯ ಮಾಹಿತಿಯ ಪ್ರಕಾರ, ಹೀಟ್ ಸ್ಟ್ರೋಕ್ ಮೊದಲು ದೇಹವು ಕೆಲವು ಸ್ಪಷ್ಟ ಸೂಚನೆಗಳನ್ನು ನೀಡುತ್ತದೆ. ಮೊದಲನೆಯದಾಗಿ, ತೀವ್ರ ತಲೆನೋವು ಮತ್ತು ತಲೆ ಸುತ್ತುವಿಕೆ ಕಾಣಿಸಿಕೊಳ್ಳುತ್ತದೆ. ಇದು ದೇಹದ ತಾಪಮಾನ ಹೆಚ್ಚುತ್ತಿರುವ ಸೂಚನೆ ಆಗಿರಬಹುದು. ಎರಡನೇ ಲಕ್ಷಣ, ಅತಿಯಾದ ದುರ್ಬಲತೆ ಮತ್ತು ಆಯಾಸ ಕಾಣಿಸುತ್ತದೆ. ವ್ಯಕ್ತಿಗೆ ಸಣ್ಣ ಕೆಲಸ ಮಾಡುವುದು ಕೂಡ ಕಷ್ಟವಾಗುತ್ತದೆ ಮತ್ತು ದೇಹದಲ್ಲಿ ಶಕ್ತಿ ಕಡಿಮೆಯಾಗಿರುವಂತೆ ಅನಿಸುತ್ತದೆ. ಮೂರನೇ ಲಕ್ಷಣವೆಂದರೆ ಹೆಚ್ಚು ಬೆವರು ಬರುವುದು ಅಥವಾ ಕೆಲವೊಮ್ಮೆ ಏಕಾಏಕಿ ಬೆವರು ಬರುವುದು ನಿಲ್ಲುವುದು. ಇದು ದೇಹವು ತನ್ನ ತಾಪಮಾನವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂಬ ಸೂಚನೆಯಾಗಿದೆ. ಜೊತೆಗೆ ಅಶಾಂತಿ, ಬಾಯಾರಿಕೆ, ಗಮನ ಕೊಡಲು ಸಾಧ್ಯವಾಗದಿರುವುದು ಹಾಗೂ ಸ್ವಲ್ಪ ಜ್ವರದ ಅನುಭವವೂ ಆಗಬಹುದು.

ಇದನ್ನೂ ಓದಿ: ಹೀಟ್ ಸ್ಟ್ರೋಕ್ ಅಪಾಯ ಹೆಚ್ಚಳ: ತಡೆಗಟ್ಟಲು ಇಲ್ಲಿದೆ ಸಿಂಪಲ್ ಟಿಪ್ಸ್

ಹೇಗೆ ತಡೆಯಬೇಕು?

ಹೀಟ್ ಸ್ಟ್ರೋಕ್ ನಿಂದ ತಪ್ಪಿಸಿಕೊಳ್ಳಲು ಮಧ್ಯಾಹ್ನದ ತೀವ್ರ ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸುವುದು ಅತ್ಯಂತ ಮುಖ್ಯ. ಹೊರಗೆ ಹೋಗುವಾಗ ತಲೆಗೆ ಮುಚ್ಚಿಕೊಳ್ಳುವುದು ಮತ್ತು ಹಗುರ, ಸಡಿಲ, ಹತ್ತಿ ಬಟ್ಟೆಗಳನ್ನು ಧರಿಸುವುದು ಒಳಿತು. ದಿನಪೂರ್ತಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ದೇಹ ಹೈಡ್ರೇಟೆಡ್ ಆಗಿರುತ್ತದೆ. ಎಳನೀರು ನೀರು, ಮಜ್ಜಿಗೆ ಮತ್ತು ನಿಂಬೆ ನೀರು ದೇಹವನ್ನು ತಂಪಾಗಿಡಲು ಸಹಕಾರಿ. ಹೊರಗಡೆ ಕೆಲಸ ಮಾಡುವವರು ಸ್ವಲ್ಪ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವುದು ಅಗತ್ಯ. ಬೇಸಿಗೆಯಲ್ಲಿ ಪೋಷಕಾಂಶಯುಕ್ತ ಆಹಾರ ಸೇವನೆ ಮುಖ್ಯ. ಹೆಚ್ಚು ಎಣ್ಣೆ ಮತ್ತು ಮಸಾಲೆಯುಕ್ತ ಆಹಾರ ತಪ್ಪಿಸಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮದುವೆ ವಿಡಿಯೋ ತೆಗೆಯುತ್ತಿದ್ದಾಗ ವೇಗವಾಗಿ ಬಂದ ಕಾರು, 25 ಅಡಿ ಮೇಲಕ್ಕೆ ಹಾರಿ ಬಿದ್ದ ಕ್ಯಾಮೆರಾಮನ್​! – Kannada News | Haryana wedding Cameraman Flung In Air After Car Hits Him During Brides Farewell

ಸಿರ್ಸಾ, ಏಪ್ರಿಲ್ 22: ಹರಿಯಾಣದ ಸಿರ್ಸಾದಲ್ಲಿ ವಧುವಿನ ಬೀಳ್ಕೊಡುಗೆಯ ಸಮಯದಲ್ಲಿ ಕ್ಯಾಮೆರಾಮನ್ ವಿಡಿಯೋ ಮಾಡುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಕ್ಯಾಮೆರಾಮನ್ 25 ಅಡಿ ಎತ್ತರಕ್ಕೆ ಹಾರಿ ಬಿದ್ದಿದ್ದಾರೆ. ವಧುವಿಗೆ ವಿದಾಯ ಹೇಳುವ ಸಮಾರಂಭದ ಸಮಯದಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕ್ಯಾಮೆರಾಮನ್ ಸುಮಾರು 25 ಮೀಟರ್ ಎತ್ತರಕ್ಕೆ ಹಾರಿದ್ದಾರೆ. ಈ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ

ಬೆಂಗಳೂರು, ಏಪ್ರಿಲ್​ 22: ಕರ್ನಾಟಕ ಎಸ್ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಗುರುವಾರ ಮಧ್ಯಾಹ್ನ 12 ಗಂಟೆಗೆ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ. ಇನ್ನು ತೃತೀಯ ಭಾಷೆಯ ವಿಷಯಕ್ಕೆ ಅಂಕನೋ ಇಲ್ಲಾ ಗ್ರೇಡೋ ಎಂಬ ಗೊಂದಲ ಉಂಟಾಗಿತ್ತು. ಸದ್ಯ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಸಚಿವ ಮಧು ಬಂಗಾರಪ್ಪ, ಗ್ರೇಡ್ ಬದಲು ಅಂಕ ನೀಡಲು ನಿರ್ಧರಿಸಲಾಗಿದೆ. ಆ ಮೂಲಕ ಈ ವರ್ಷ ಕೋರ್ಟ್ ಆದೇಶ ಪಾಲಿಸುವ ಬಗ್ಗೆ ನಿರ್ಧರಿಸಲಾಗಿದೆ. ಈಗಾಗಲೇ ಎಲ್ಲ ವಿಷಯಗಳಿಗೆ ಅಂಕಗಳನ್ನ ನೀಡಿ ಮೌಲ್ಯಮಾಪನ ಮಾಡಲಾಗಿದೆ. ಹೀಗಾಗಿ ನಾಳೆ ಅಂಕಗಳನ್ನೇ ನೀಡಲು ಇಲಾಖೆ ಮುಂದಾಗಿದೆ ಎಂದು ಅವರು ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

12 ವರ್ಷದ ಬಳಿಕ ಕನ್ನಡಕ್ಕೆ ಮರಳಿದ ‘ಅಧ್ಯಕ್ಷ’ ನಟಿ ಹೆಬಾ ಪಟೇಲ್; ದಿಗಂತ್ ಜೊತೆ ಸಿನಿಮಾ – Kannada News | Adyaksha actress Hebah Patel new movie Rudra Kala in Kannada with Diganth Manchale

ನಟಿ ಹೆಬಾ ಪಟೇಲ್ (Hebah Patel) ಅವರು ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ಕನ್ನಡದ ‘ಅಧ್ಯಕ್ಷ’ ಸಿನಿಮಾ ಮೂಲಕ. ಆ ಚಿತ್ರದಲ್ಲಿ ಅವರು ಶರಣ್​ ಜೊತೆ ನಟಿಸಿದ್ದರು. ಬಳಿಕ ಅವರಿಗೆ ಪರಭಾಷೆಯಲ್ಲಿ ಸಾಕಷ್ಟು ಅವಕಾಶಗಳು ಸಿಕ್ಕವು. ತಮಿಳು, ತೆಲುಗು ಚಿತ್ರರಂಗದಲ್ಲೇ ಅವರು ಬ್ಯುಸಿ ಆದರು. ಈಗ ಬರೋಬ್ಬರಿ 12 ವರ್ಷಗಳ ಬಳಿಕ ಅವರು ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ದಿಗಂತ್ ಮಂಚಾಲೆ (Diganth Manchale) ಅಭಿನಯದ ‘ರುದ್ರ ಕಾಲ’ ಸಿನಿಮಾಗೆ ಹೆಬಾ ಪಟೇಲ್ ಅವರು ನಾಯಕಿ ಆಗಿದ್ದಾರೆ. ಈ ಸಿನಿಮಾದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆಯಿತು.

ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ‘ರುದ್ರ ಕಾಲ’ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರುವ ಮೂಲಕ ಚಾಲನೆ ನೀಡಿದರು. ನಿರ್ದೇಶಕ ರಾಜ್ ಗುರು ಅವರು ಕ್ಯಾಮೆರಾ ಚಾಲನೆ ಮಾಡಿದರು. ಗೋಪಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹೆಬಾ ಪಟೇಲ್ ಮಾತನಾಡಿದರು.

‘ನನ್ನ ವೃತ್ತಿ ಜೀವನ ಆರಂಭ ಆಗಿದ್ದೇ ಕನ್ನಡ ಚಿತ್ರರಂಗದಿಂದ. ಇಷ್ಟು ವರ್ಷಗಳ ಬಳಿಕ ಮತ್ತೆ ಕನ್ನಡ ಸಿನಿಮಾ ಮಾಡುತ್ತಿದ್ದೇನೆ. ಮನೆಗೆ ವಾಪಸ್ ಬಂದಂತೆ ಫೀಲ್ ಆಗುತ್ತಿದೆ. ಅಧ್ಯಕ್ಷ ನನ್ನ ಮೊದಲ ಸಿನಿಮಾ. ಆ ಸಿನಿಮಾದಿಂದ ಜನರು ಈಗಲೂ ನನಗೆ ಪ್ರೀತಿ ತೋರಿಸುತ್ತಿದ್ದಾರೆ. ಕಮ್​ಬ್ಯಾಕ್ ಮಾಡಲು ರುದ್ರ ಕಾಲ ನಿಜಕ್ಕೂ ಉತ್ತಮ ಸಿನಿಮಾ. ಈ ಅವಕಾಶ ನೀಡಿದ ನಿರ್ದೇಶಕ ಗೋಪಿ ಅವರಿಗೆ ಧನ್ಯವಾದಗಳು. ದಿಗಂತ್ ಜೊತೆ ಕೆಲಸ ಮಾಡಬೇಕು ಎಂಬ ಆಸೆ ಮೊದಲಿಂದ ಇತ್ತು. ಈಗ ಅವಕಾಶ ಸಿಕ್ಕಿದೆ’ ಎಂದು ಹೆಬಾ ಪಟೇಲ್ ಹೇಳಿದರು.

ನಟ ದಿಗಂತ್ ಮಂಚಾಲೆ ಮಾತನಾಡಿ, ‘ಇದು ಕ್ರೈಮ್ ಥ್ರಿಲ್ಲರ್ ಜೊತೆಗೆ ಕೌಟುಂಬಿಕ ಕಥಾಹಂದರ ಇರುವ ಸಿನಿಮಾ‌. ರಮೇಶ್ ಅವರು ಒಳ್ಳೆಯ ಕಥೆ ಬರೆದಿದ್ದಾರೆ. ನಿರ್ದೇಶಕ ಗೋಪಿ ಅವರು ಕಥೆ ಹೇಳುವಾಗಲೇ ನನಗೆ ಕಥೆ ಬಹಳ ಇಷ್ಟವಾಯಿತು‌. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದರು. ಅವರ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ಕೌತುಕ ಮೂಡಿದೆ.

ಇದನ್ನೂ ಓದಿ: ಹೆಬಾ ಪಟೇಲ್​ ಬಣ್ಣದ ಬದುಕಿಗೆ ಮೈಲೇಜ್​ ಕೊಟ್ಟಿದ್ದು ಕನ್ನಡದ ‘ಅಧ್ಯಕ್ಷ’ ಸಿನಿಮಾ

ರಮೇಶ್ ನಾಯ್ಕ್ ಅವರು ‘ರುದ್ರ ಕಾಲ’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗೆ ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ಈ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದರು. ಈ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣ ಆಗಲಿದೆ. ಕ್ರಿಸ್ಟೋಫರ್ ಜೋಸೆಫ್ ಅವರು ಛಾಯಾಗ್ರಹಣ ಮಾಡಲಿದ್ದಾರೆ. ರುದ್ರ ಮಾಸ್ಟರ್ ಅವರ ನೃತ್ಯ ನಿರ್ದೇಶನ, ಚನ್ನಯ್ಯ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕೆ ಇರಲಿದೆ. ರಂಜಿತಾ ನವೀನ್ ಅವರು ಸಹ-ನಿರ್ಮಾಪಕರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

VIDEO: ಅದ್ಭುತ… ಅತ್ಯದ್ಭುತ: ರಿಷಭ್ ಪಂತ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು – Kannada News | Rishabh Pant’s ‘Spider Man’ Catch Stuns Yashasvi Jaiswal

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 32ನೇ ಪಂದ್ಯದಲ್ಲಿ ರಿಷಭ್ ಪಂತ್ (Rishabh Pant) ಹಿಡಿದ ಅದ್ಭುತ ಕ್ಯಾಚ್ ವಿಡಿಯೋ ಇದೀಗ ವೈರಲ್ ಆಗಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಯಶಸ್ವಿ ಜೈಸ್ವಾಲ್ ಸ್ಫೋಟಕ ಆರಂಭ ಒದಗಿಸಿದ್ದರು.

ಆದರೆ ಮೊಹಮ್ಮದ್ ಶಮಿ ಎಸೆದ ಮೂರನೇ ಓವರ್​ನ 5ನೇ ಎಸೆತವನ್ನು ಸರಿಯಾಗಿ ಗುರುತಿಸುವಲ್ಲಿ ಯಶಸ್ವಿ ಜೈಸ್ವಾಲ್ ಎಡವಿದರು. ಪರಿಣಾಮ ಚೆಂಡು ಜೈಸ್ವಾಲ್ ಅವರ ಗ್ಲೌಸ್‌ಗೆ ಬಡಿದು ಕೀಪರ್‌ನ ಮೇಲ್ಭಾಗದಲ್ಲಿ ಹಾರಿ ಹೋಗುತ್ತಿತ್ತು. ಈ ವೇಳೆ ಹದ್ದಿನ ಕಣ್ಣಿಟ್ಟಿದ್ದ ನಾಯಕ ರಿಷಭ್ ಪಂತ್, ಗಾಳಿಯಲ್ಲಿ ಜಿಗಿದು ಕೇವಲ ಒಂದು ಕೈಯಿಂದ ಅದ್ಭುತ ಕ್ಯಾಚ್ ಹಿಡಿದರು.

ಈ ಮೂಲಕ ರಿಷಭ್ ಪಂತ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟಿದ್ದರು. ಇದರ ಬೆನ್ನಲ್ಲೇ ಮೊಹಮ್ಮದ್ ಶಮಿ ಧ್ರುವ್ ಜುರೆಲ್ (0) ವಿಕೆಟ್ ಕೂಡ ಪಡೆದರು.

ಇದೀಗ ರಿಷಭ್ ಪಂತ್ ಹಿಡಿದ ಅದ್ಭುತ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸ್ಪೈಡಿ ಕ್ಯಾಚ್​ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್​ಗಳಲ್ಲಿ 159 ರನ್​ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್​ ತಂಡಕ್ಕೆ 160 ರನ್​ಗಳ ಗುರಿ ನೀಡಿದೆ.

 

Source link

Exit mobile version