ಥೈಲ್ಯಾಂಡ್ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ, ಶಿಕ್ಷಕ ಸಾವು, 15ಕ್ಕೂ ಅಧಿಕ ಮಂದಿಗೆ ಗಾಯ – Kannada News | Thailand School Shooting: Student Kills Teacher, Injures 15 in Bangkok Attack

ಬ್ಯಾಂಕಾಕ್, ಆಗಸ್ಟ್ 07: ಥೈಲ್ಯಾಂಡ್‌ನ ರಾಜಧಾನಿ ಬ್ಯಾಂಕಾಕ್ ಬಳಿಯ ಪ್ರಸಿದ್ಧ ಶಾಲೆಯೊಂದರಲ್ಲಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ಸಹಪಾಠಿಗಳು ಹಾಗೂ ಶಿಕ್ಷಕರ ಮೇಲೆ ದಿಢೀರ್ ಗುಂಡಿನ ದಾಳಿ(Firing) ನಡೆಸಿದ್ದಾನೆ. ಈ ದಾರುಣ ಘಟನೆಯಲ್ಲಿ ಓರ್ವ ಶಿಕ್ಷಕ ಸ್ಥಳದಲ್ಲೇ ಮೃತಪಟ್ಟಿದ್ದು, ಕನಿಷ್ಠ 15 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ದಾಳಿ ನಡೆಸಿದ ವಿದ್ಯಾರ್ಥಿಯು ಕೃತ್ಯದ ಬೆನ್ನಲ್ಲೇ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯ ಪೊಲೀಸರು ದೃಢಪಡಿಸಿದ್ದಾರೆ.

ಬ್ಯಾಂಕಾಕ್ ಸಮೀಪದ ನೊಂಥಬುರಿಯ ಬ್ಯಾಂಗ್ ಕ್ರುವಾಯಿ ಜಿಲ್ಲೆಯಲ್ಲಿರುವ ದೇಬ್ಸಿರಿನ್ ನೊಂಥಬುರಿ ಶಾಲೆಯಲ್ಲಿ ಶುಕ್ರವಾರ ಬೆಳಗ್ಗೆ ತರಗತಿಗಳು ಆರಂಭವಾಗುವ ವೇಳೆಗೆ ಈ ಭೀಕರ ಘಟನೆ ನಡೆದಿದೆ. 9ನೇ ತರಗತಿಯ ವಿದ್ಯಾರ್ಥಿ ಬಂದೂಕಿನೊಂದಿಗೆ ಶಾಲೆಗೆ ಆಗಮಿಸಿ ದಿಢೀರನೆ ಗುಂಡಿನ ಸುರಿಮಳೆ ಗೈದಿದ್ದಾನೆ. ಗುಂಡೇಟಿನಿಂದ ಶಿಕ್ಷಕರೊಬ್ಬರು ಕೊನೆಯುಸಿರೆಳೆದಿದ್ದು, ಗಾಯಗೊಂಡ 15 ಜನರಲ್ಲಿ ಮೂವರು ವಿದ್ಯಾರ್ಥಿಗಳ ಪರಿಸ್ಥಿತಿ ಗಂಭೀರವಾಗಿದೆ.

ಆತ್ಮಹತ್ಯೆ ಮಾಡಿಕೊಂಡ ದಾಳಿಕೋರ: ಘಟನೆಯ ಬಳಿಕ ಭದ್ರತಾ ಪಡೆಗಳು ಶಾಲೆಯನ್ನು ಸುತ್ತುವರೆಯುತ್ತಿದ್ದಂತೆ, ದಾಳಿಕೋರ ವಿದ್ಯಾರ್ಥಿಯು ಶಾಲಾ ಆವರಣದಲ್ಲೇ ತನ್ನ ಮೇಲೆ ಗುಂಡು ಹಾರಿಸಿಕೊಂಡು ಶವವಾಗಿದ್ದಾನೆ. ಪ್ಲೈ ಬ್ಯಾಂಗ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿ ತಕ್ಷಣವೇ ಶಾಲಾ ಕ್ಯಾಂಪಸ್‌ಗೆ ಧಾವಿಸಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮತ್ತಷ್ಟು ಓದಿ: Video: ಎಎಪಿ ನಾಯಕನ ಮೇಲೆ ಗುಂಡಿನ ದಾಳಿ, ಹಾಡಹಗಲೇ ನಡೆಯಿತು ಕೊಲೆ

ಶಾಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಮತ್ತು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಸಾರ್ವಜನಿಕರು ಹಾಗೂ ಮಾಧ್ಯಮಗಳು ಘಟನೆಯ ದೃಶ್ಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನೇರ ಪ್ರಸಾರ ಮಾಡದಂತೆ ಪೊಲೀಸರು ಮನವಿ ಮಾಡಿದ್ದಾರೆ.

ಕಿರಿಯ ವಯಸ್ಸಿನ ವಿದ್ಯಾರ್ಥಿ ಬಂದೂಕನ್ನು ಹೇಗೆ ಪಡೆದುಕೊಂಡ ಮತ್ತು ದಾಳಿ ನಡೆಸಲು ಇದ್ದ ಮಾನಸಿಕ ಅಥವಾ ವೈಯಕ್ತಿಕ ಉದ್ದೇಶವೇನು ಎಂಬ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಗ್ನೇಯ ಏಷ್ಯಾದ ದೇಶಗಳ ಪೈಕಿ ಥೈಲ್ಯಾಂಡ್‌ನಲ್ಲಿ ಸಾರ್ವಜನಿಕರಲ್ಲಿ ಬಂದೂಕು ಹೊಂದುವ ಪ್ರಮಾಣ ಹೆಚ್ಚಾಗಿದೆ. ಕಾನೂನುಬದ್ಧ ಹಾಗೂ ಅಕ್ರಮ ಬಂದೂಕುಗಳು ಸುಲಭವಾಗಿ ಸಿಗುವುದೇ ಇಂತಹ ದುರಂತಗಳಿಗೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಪೋಸ್ಟ್​

2022 ರಲ್ಲಿ ಥೈಲ್ಯಾಂಡ್‌ನ ಮಕ್ಕಳ ಆರೈಕೆ ಕೇಂದ್ರವೊಂದರಲ್ಲಿ ಮಾಜಿ ಪೊಲೀಸ್ ಅಧಿಕಾರಿಯೊಬ್ಬ ನಡೆಸಿದ ಮಾರಣಾಂತಿಕ ದಾಳಿಯಲ್ಲಿ 24ಮಕ್ಕಳು ಸೇರಿದಂತೆ 36 ಜನರು ಮೃತಪಟ್ಟಿದ್ದರು. ಆ ಘಟನೆಯ ನಂತರ ಬಂದೂಕು ಕಾಯ್ದೆಯನ್ನು ಕಠಿಣಗೊಳಿಸಲಾಗಿದ್ದರೂ, ಶಾಲಾ ಮಟ್ಟದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗುತ್ತಿರುವುದು ದೇಶಾದ್ಯಂತ ಭಾರಿ ಆತಂಕ ಮೂಡಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೊಪ್ಪಳ ಕಾಂಗ್ರೆಸ್‌ನಲ್ಲಿ ಮತ್ತೆ ಅಸಮಾಧಾನ ಸ್ಫೋಟ; ತಂಗಡಗಿ, ರಾಯರೆಡ್ಡಿ ವಿರುದ್ಧ ಇಕ್ಬಾಲ್ ಅನ್ಸಾರಿ ವಾಗ್ದಾಳಿ – Kannada News | Koppal Congress Rift: Iqbal Ansari Hits Out at Shivraj Tangadagi, Basavaraj Rayareddy

ಇಕ್ಬಾಲ್ ಅನ್ಸಾರಿ (ಸಂಗ್ರಹ ಚಿತ್ರ)Image Credit source: tv9

ಕೊಪ್ಪಳ, ಆಗಸ್ಟ್ 7: ಕೊಪ್ಪಳ ಜಿಲ್ಲಾ ಕಾಂಗ್ರೆಸ್‌ನಲ್ಲಿ (Congress) ಮತ್ತೆ ಅಸಮಾಧಾನ ಸ್ಫೋಟಗೊಂಡಿದೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸಚಿವ ಶಿವರಾಜ್ ತಂಗಡಗಿ, ಸಚಿವ ಬಸವರಾಜ ರಾಯರೆಡ್ಡಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಿಂದ ಆಡಿಯೋ ಮೂಲಕ ಮಾತನಾಡಿರುವ ಅನ್ಸಾರಿ, ತಮ್ಮ ಸೋಲಿಗೆ ಈ ನಾಯಕರೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಚಿವ ಶಿವರಾಜ್ ತಂಗಡಗಿ, ‘ಇತರರ ಬಗ್ಗೆ ಮಾತನಾಡುವ ಬದಲು ಇಕ್ಬಾಲ್ ಅನ್ಸಾರಿ ಜನರ ಮಧ್ಯೆ ಹೋಗಿ ಗೆದ್ದು ತೋರಿಸಲಿ’ ಎಂದು ನೀಡಿದ್ದ ಹೇಳಿಕೆಗೆ ಅನ್ಸಾರಿ ತಿರುಗೇಟು ನೀಡಿದ್ದಾರೆ. ಗಂಗಾವತಿಗೆ ಬಂದು ಮಾಧ್ಯಮಗೋಷ್ಠಿ ನಡೆಸಿ ತಮ್ಮ ವಿರುದ್ಧ ಮಾತನಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿರುವ ಅವರು, ‘ಬಹಿರಂಗ ವೇದಿಕೆಗೆ ಬನ್ನಿ, ಯಾರು ಯಾರಿಗೆ ಮೋಸ ಮಾಡಿದ್ದಾರೆ ಎಂಬುದು ಗೊತ್ತಾಗಲಿದೆ’ ಎಂದು ಸವಾಲು ಹಾಕಿದ್ದಾರೆ.

ನನ್ನ ಸೋಲಿಗೆ ನೀವೇ ಕಾರಣ: ಇಕ್ಬಾಲ್ ಅನ್ಸಾರಿ

ತಮ್ಮ ಸೋಲಿಗೆ ರಾಘವೇಂದ್ರ ಹಿಟ್ನಾಳ, ಅವರ ಕುಟುಂಬ, ಬಸವರಾಜ ರಾಯರೆಡ್ಡಿ ಹಾಗೂ ಶಿವರಾಜ್ ತಂಗಡಗಿ ಕಾರಣ ಎಂದು ಇಕ್ಬಾಲ್ ಅನ್ಸಾರಿ ಆರೋಪಿಸಿದ್ದಾರೆ. ಚುನಾವಣೆಯಲ್ಲಿ ತಮ್ಮ ವಿರುದ್ಧ ಯಾರು ಕೆಲಸ ಮಾಡಿದ್ದಾರೆ ಎಂಬುದು ತಮಗೆ ಗೊತ್ತಿದೆ ಎಂದಿರುವ ಅವರು, ಹಿಂದೆ ಬಸವರಾಜ ರಾಯರೆಡ್ಡಿ ಅವರ ಬಗ್ಗೆ ಗೌರವವಿತ್ತು ಎಂದು ಹೇಳಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರಕ್ಕೆ ಬಾರದಂತೆ ರಾಯರೆಡ್ಡಿ ಮಾಡಿದ್ದಾರೆ ಎಂದು ಅನ್ಸಾರಿ ಆರೋಪಿಸಿದ್ದಾರೆ. ತಾವು ರಾಯರೆಡ್ಡಿ ಅವರ ಕ್ಷೇತ್ರದಲ್ಲಿ ಮತ ಹಾಕಿಸಿದ್ದರೂ, ತಮ್ಮ ಕ್ಷೇತ್ರದಲ್ಲಿ ತಮ್ಮ ವಿರುದ್ಧ ಮತ ಹಾಕುವಂತೆ ಸಮಾಜದವರನ್ನು ಪ್ರೇರೇಪಿಸಲಾಗಿದೆ ಎಂದು ದೂರಿದ್ದಾರೆ.

‘ಅಧಿಕಾರಿಗಳ ವರ್ಗಾವಣೆಯಲ್ಲಿ ಕಮಿಷನ್ ಆರೋಪ’

ಅಧಿಕಾರಿಗಳ ವರ್ಗಾವಣೆಯಲ್ಲಿ ಹಣ ಪಡೆದು ತಮ್ಮ ಮಾತನ್ನು ಅಧಿಕಾರಿಗಳು ಕೇಳದಂತೆ ಮಾಡಲಾಗಿದೆ ಎಂಬ ಗಂಭೀರ ಆರೋಪವನ್ನೂ ಅನ್ಸಾರಿ ಮಾಡಿದ್ದಾರೆ. ಇನ್ಸ್‌ಪೆಕ್ಟರ್ ವರ್ಗಾವಣೆ ವಿಚಾರದಲ್ಲಿ ಅಧಿಕಾರ ವಹಿಸಿಕೊಳ್ಳದಂತೆ ಎಸ್‌ಪಿಗೆ ಸೂಚಿಸಲಾಗಿತ್ತು ಎಂದು ಹೇಳಿರುವ ಅವರು, ‘ಎಸ್‌ಪಿ ಅವರು ಸರ್ಕಾರದ ಪ್ರತಿನಿಧಿಯೋ ಅಥವಾ ನಿಮ್ಮ ಪ್ರತಿನಿಧಿಯೋ’ ಎಂದು ತಂಗಡಗಿಯನ್ನು ಪ್ರಶ್ನಿಸಿದ್ದಾರೆ.

ಗಂಗಾವತಿ ಕ್ಷೇತ್ರದ ನಿಗಮ-ಮಂಡಳಿಗಳಿಗೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಹಿನ್ನೆಲೆಯವರನ್ನು ನೇಮಕ ಮಾಡಲಾಗಿತ್ತು ಎಂಬ ಆರೋಪವನ್ನೂ ಮಾಡಿದ್ದಾರೆ. ತಮ್ಮ ವೈಯಕ್ತಿಕ ಜೀವನ ಹಾಗೂ ಪದ್ಧತಿ ಬಗ್ಗೆ ಮಾತನಾಡುವುದನ್ನು ನಿಲ್ಲಿಸುವಂತೆ ತಂಗಡಗಿಗೆ ತಿರುಗೇಟು ನೀಡಿದ್ದಾರೆ.

‘58 ಸಾವಿರ ಮತ ಬಂದಿದ್ದು ಹೇಗೆ?’

ತಾವು ಕ್ಷೇತ್ರದಲ್ಲಿ ಪ್ರಚಾರ ಮಾಡದೇ ಇದ್ದಿದ್ದರೆ 58 ಸಾವಿರ ಮತಗಳು ಹೇಗೆ ಬರುತ್ತಿದ್ದವು ಎಂದು ಪ್ರಶ್ನಿಸಿರುವ ಅನ್ಸಾರಿ, ತಮ್ಮ ಸೋಲಿನ ಬಗ್ಗೆ ಮಾತನಾಡಿದಾಗ ತಂಗಡಗಿಗೆ ಉರಿ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ. ತಮ್ಮ ಬಗ್ಗೆ ಮಾತನಾಡುವಾಗ ತಂಗಡಗಿ ಬೆವರಿಕೊಂಡು ಮಾತನಾಡಿದ್ದಾರೆ ಎಂದೂ ಟೀಕಿಸಿದ್ದಾರೆ.

ಇದನ್ನೂ ಓದಿ: ‘ನನಗೆ 2 ಸೆಕೆಂಡ್ ಸಾಕು, ಮಸೀದಿಗೆ ಒಂದು ಪತ್ರ ಬರೆದರೆ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ

ಇದು ತಮ್ಮ ಮೊದಲ ಎಪಿಸೋಡ್ ಎಂದು ಹೇಳಿರುವ ಅನ್ಸಾರಿ, ತಂಗಡಗಿ ಸಣ್ಣ ನೀರಾವರಿ ಸಚಿವರಾಗಿದ್ದ ಅವಧಿಯಲ್ಲಿ ನಡೆದ ವಿಚಾರಗಳ ಬಗ್ಗೆ ಮುಂದಿನ ಎಪಿಸೋಡ್‌ನಲ್ಲಿ ಮಾತನಾಡುವುದಾಗಿ ಎಚ್ಚರಿಸಿದ್ದಾರೆ. ಮುಂದಿನ ಎಲ್ಲ ವಿಚಾರಗಳನ್ನು ಜನರ ಮುಂದೆ ಬಹಿರಂಗಪಡಿಸುವುದಾಗಿ ಹೇಳಿರುವ ಅವರು, ‘ಮುಂದೆ ನಿಮಗೆ ತಕ್ಕ ಪಾಠ ಕಲಿಸುತ್ತೇನೆ’ ಎಂದು ಆಡಿಯೋ ಮೂಲಕ ಗುಡುಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Weekly Love Horoscope: ನಿಮ್ಮ ರಾಶಿಗನುಗುಣವಾಗಿ ಆ.9ರಿಂದ 15ರ ವರೆಗಿನ ವಾರದ ಪ್ರೇಮ – ಪ್ರೀತಿ ಭವಿಷ್ಯ ಇಲ್ಲಿ ತಿಳಿಯಿರಿ – Kannada News | Aug 9 15: Weekly Love Horoscope for All Zodiacs – Your Relationship Predictions!

​ಆಗಸ್ಟ್​​ 09ರಿಂದ 15ರ ತನಕದ ಎರಡನೇ ವಾರದಲ್ಲಿ ಪ್ರೀತಿಯ ರೀತಿಯನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗದು. ಪೂರ್ವಭಾವೀ ಆಲೋಚ‌ನೆಯಿಲ್ಲದೇ ಮುಂದೆಹೋಗಿ ದುಃಖಿಸಬೇಕಾಗುವುದು. ಪ್ರಯಾಣದಿಂದ ಪ್ರಯಾಸ ಸಾಧ್ಯತೆ ಇದೆ. ಎಲ್ಲರ ಪ್ರೇಮವೂ ಸಫಲವಾಗಲಿ.

​ಮೇಷ ರಾಶಿ :

ನಿಮ್ಮ ರಾಶ್ಯಧಿಪತಿ ಮಂಗಳ ಮಿಥುನದಲ್ಲಿದ್ದರೆ, ಶನಿ ಮೀನದಲ್ಲಿದ್ದಾನೆ. ಇದರಿಂದ ಪ್ರೇಮ ಸಂಬಂಧದಲ್ಲಿ ತಾಳ್ಮೆ ಬಹಳ ಮುಖ್ಯ. ಸಣ್ಣಪುಟ್ಟ ವಿಚಾರಗಳಿಗೂ ಸಂಗಾತಿಯ ಮೇಲೆ ಕೋಪಗೊಳ್ಳುವ ಸಾಧ್ಯತೆ ಇದೆ. ಭಾವನೆಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಮಾತುಕತೆ ನಡೆಸಿದರೆ ಬಾಂಧವ್ಯ ಗಟ್ಟಿಯಾಗುತ್ತದೆ.

​ವೃಷಭ ರಾಶಿ :

ಕನ್ಯಾ ರಾಶಿಯಲ್ಲಿ ಶುಕ್ರ ಮತ್ತು ಚಂದ್ರರು ಒಟ್ಟಾಗಿರುವುದರಿಂದ ನಿಮ್ಮ ಪ್ರೇಮ ಜೀವನ ಅತ್ಯಂತ ಸುಂದರವಾಗಿರಲಿದೆ. ನಿಮ್ಮ ಆಕರ್ಷಣೆ ಹೆಚ್ಚುತ್ತದೆ. ಅವಿವಾಹಿತರಿಗೆ ಹೊಸ ಪ್ರೇಮ ಪ್ರಸ್ತಾಪಗಳು ಒದಗಿಬರಲಿವೆ. ಪ್ರೇಮಿಗಳ ನಡುವೆ ಪರಸ್ಪರ ಪ್ರೀತಿ ಮತ್ತು ಗೌರವ ಹೆಚ್ಚಾಗುತ್ತದೆ.

​ಮಿಥುನ ರಾಶಿ :

ಮಂಗಳ ನಿಮ್ಮ ರಾಶಿಯಲ್ಲಿಯೇ ಇರುವುದರಿಂದ ಸ್ವಭಾವದಲ್ಲಿ ಕೊಂಚ ಉಗ್ರತೆ ಅಥವಾ ಚಂಚಲತೆ ಕಾಣಿಸಬಹುದು. ಪ್ರೇಮ ವಿಚಾರದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಸಂಗಾತಿಯ ಅಭಿಪ್ರಾಯಗಳಿಗೆ ಬೆಲೆ ನೀಡುವುದು ಸಂಶಯ ಮತ್ತು ಮನಸ್ತಾಪಗಳನ್ನು ದೂರ ಮಾಡುತ್ತದೆ.

​ಕರ್ಕಾಟಕ ರಾಶಿ :

ಗುರು, ಸೂರ್ಯ ಮತ್ತು ಬುಧ ನಿಮ್ಮ ರಾಶಿಯಲ್ಲಿ ಒಟ್ಟಾಗಿರುವುದರಿಂದ ಪ್ರೇಮ ಮತ್ತು ದಾಂಪತ್ಯದಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಸಂಬಂಧದಲ್ಲಿ ಪರಸ್ಪರ ಬೆಂಬಲ ಸಿಗಲಿದೆ. ಪ್ರೇಮಿಗಳು ತಮ್ಮ ಸಂಬಂಧವನ್ನು ಮದುವೆಯ ಹಂತಕ್ಕೆ ಕೊಂಡೊಯ್ಯಲು ಇದು ಸೂಕ್ತ ಸಮಯ.

​ಸಿಂಹ ರಾಶಿ :

ನಿಮ್ಮ ರಾಶಿಯಲ್ಲಿ ಕೇತು ಇರುವುದರಿಂದ ಮನಸ್ಸಿನಲ್ಲಿ ಕಾರಣವಿಲ್ಲದೆ ಆತಂಕ ಅಥವಾ ಗೊಂದಲ ಮೂಡಬಹುದು. ಪ್ರೇಮ ಜೀವನದಲ್ಲಿ ಸ್ಪಷ್ಟತೆ ಕೊರತೆಯಾಗದಂತೆ ನೋಡಿಕೊಳ್ಳಿ. ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡುವುದರಿಂದ ಪ್ರೀತಿಯಲ್ಲಿ ಆಪ್ತತೆ ಹೆಚ್ಚಾಗುತ್ತದೆ.

​ಕನ್ಯಾ ರಾಶಿ :

ನಿಮ್ಮ ರಾಶಿಯಲ್ಲಿ ಶುಕ್ರ ಹಾಗೂ ಚಂದ್ರರ ಶುಭ ಸಂಯೋಜನೆ ಇದೆ. ಪ್ರೇಮಿಗಳಿಗೆ ಇದು ಅತ್ಯಂತ ರೋಮಾಂಚನಕಾರಿ ಸಮಯ. ನವ ಜೋಡಿಗಳ ನಡುವೆ ಮಧುರವಾದ ಕ್ಷಣಗಳು ಸೃಷ್ಟಿಯಾಗಲಿವೆ. ಹಳೆಯ ಮನಸ್ತಾಪಗಳು ಕಳೆದು ಪ್ರೀತಿ ಚಿಗುರೊಡೆಯುತ್ತದೆ.

​ತುಲಾ ರಾಶಿ :

ನಿಮ್ಮ ರಾಶ್ಯಧಿಪತಿ ಶುಕ್ರ ೧೨ನೇ ಮನೆಯಲ್ಲಿ ಚಂದ್ರನೊಂದಿಗೆ ಇರುವುದರಿಂದ ಪ್ರೇಮ ವಿಷಯದಲ್ಲಿ ಕೊಂಚ ಭಾವನಾತ್ಮಕ ಒತ್ತಡವಿರಬಹುದು. ಸಂಗಾತಿಯ ಆರೋಗ್ಯ ಅಥವಾ ಅವರ ವೈಯಕ್ತಿಕ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಬಹುದು. ಕಾಳಜಿ ವಹಿಸುವುದು ಒಳಿತು.

​ವೃಶ್ಚಿಕ ರಾಶಿ :

ಕರ್ಕಾಟಕದ ಗುರು ಹಾಗೂ ಕನ್ಯೆಯ ಶುಕ್ರನ ಶುಭ ದೃಷ್ಟಿಯಿಂದ ಪ್ರೇಮ ಜೀವನದಲ್ಲಿ ಪ್ರಗತಿ ಕಂಡುಬರುತ್ತದೆ. ಪ್ರೀತಿಯಲ್ಲಿರುವವರಿಗೆ ಮನೆಯವರಿಂದ ಸಮ್ಮತಿ ಸಿಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಕಿರು ಪ್ರವಾಸ ಕೈಗೊಳ್ಳಲು ಇದು ಅನುಕೂಲಕರ ಸಮಯ.

​ಧನು ರಾಶಿ :

ವೃತ್ತಿ ಜೀವನದ ಒತ್ತಡದಿಂದಾಗಿ ಪ್ರೇಮ ಜೀವನಕ್ಕೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗದಿರಬಹುದು. ಆದಾಗ್ಯೂ, ಸಂಗಾತಿಯು ನಿಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಬೆಂಬಲವಾಗಿ ನಿಲ್ಲುತ್ತಾರೆ. ಸಣ್ಣ ಸಣ್ಣ ಗಿಫ್ಟ್‌ಗಳ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಿ.

ಇದನ್ನೂ ಓದಿ: ಈ ರಾಶಿಗೆ ಸೂರ್ಯನ ಆಗಮನ, ಈ ರಾಶಿಗಳಿಗೆ ಸೂರ್ಯನ ಬೆಳಕು…?

​ಮಕರ ರಾಶಿ :

ಪ್ರೇಮ ಸಂಬಂಧಗಳಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಸಂಗಾತಿಯೊಂದಿಗೆ ಆಧ್ಯಾತ್ಮಿಕ ಅಥವಾ ದೂರದ ಪ್ರಯಾಣ ಬೆಳೆಸುವ ಯೋಗವಿದೆ. ದೂರದಲ್ಲಿದ್ದ ಪ್ರೇಮಿಗಳು ಪರಸ್ಪರ ಭೇಟಿಯಾಗಲು ಹಾಗೂ ಸಂಬಂಧವನ್ನು ಗಟ್ಟಿಗೊಳಿಸಲು ಉತ್ತಮ ಅವಕಾಶ ಸಿಗಲಿದೆ.

​ಕುಂಭ ರಾಶಿ :

ನಿಮ್ಮ ರಾಶಿಯಲ್ಲಿ ರಾಹು ಹಾಗೂ ಎಂಟನೇ ಮನೆಯಲ್ಲಿ ಶುಕ್ರ-ಚಂದ್ರರ ಪ್ರಭಾವವಿರುವುದರಿಂದ ಸಂಬಂಧದಲ್ಲಿ ಅನಗತ್ಯ ಅನುಮಾನಗಳಿಗೆ ಆಸ್ಪದ ನೀಡಬೇಡಿ. ಮೂರನೇ ವ್ಯಕ್ತಿಯ ಮಾತು ಕೇಳಿ ನಿರ್ಧಾರ ತೆಗೆದುಕೊಳ್ಳುವುದು ಒಳಿತಲ್ಲ. ಪಾರದರ್ಶಕತೆ ಕಾಯ್ದುಕೊಳ್ಳಿ.

​ಮೀನ ರಾಶಿ :

ಇದೇ ರಾಶಿಯಲ್ಲಿ ಶನಿ ಹಾಗೂ ಸಪ್ತಮ ರಾಶಿಯಲ್ಲಿ ಶುಕ್ರ, ಚಂದ್ರರ ಸಂಚಾರವಿರುವುದರಿಂದ ದಾಂಪತ್ಯ ಮತ್ತು ಪ್ರೇಮ ಜೀವನದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ. ಸಣ್ಣಪುಟ್ಟ ತಪ್ಪು ತಿಳುವಳಿಕೆಗಳು ಬಂದರೂ ಪ್ರೀತಿಯ ಗಾಂಭೀರ್ಯ ಕಡಿಮೆಯಾಗುವುದಿಲ್ಲ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bay Leaf Benefits: ಬಿರಿಯಾನಿ ಎಲೆ ಕೇವಲ ರುಚಿಗಷ್ಟೇ ಅಲ್ಲ, ಇದರ ಹಿಂದೆ ಅಡಗಿದೆ ಅದ್ಭುತ ಸಾಂಪ್ರದಾಯಿಕ ನಂಬಿಕೆ! – Kannada News | Bay Leaf Benefits: Beyond Cooking, Attract Peace and Positive Energy to Your Home

ಬಿರಿಯಾನಿ ಎಲೆ (Bay leaf) ಎಂದ ತಕ್ಷಣ ಪ್ರತಿಯೊಬ್ಬರ ಮನಸ್ಸಿಗೆ ಮೊದಲು ಬರುವುದು ಬಿರಿಯಾನಿ ಮತ್ತು ಪುಲಾವ್‌ನಂತಹ ಸ್ವಾದಿಷ್ಟ ಭಕ್ಷ್ಯಗಳ ಸುವಾಸನೆ. ಆದರೆ, ಇದು ಕೇವಲ ಅಡುಗೆಯ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುವ ಮಸಾಲೆ ಪದಾರ್ಥ ಮಾತ್ರವಲ್ಲ. ಅನೇಕ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳಲ್ಲಿ, ಈ ಎಲೆಯನ್ನು ಶಾಂತಿ, ಸಮೃದ್ಧಿ ಹಾಗೂ ಸಕಾರಾತ್ಮಕ ಶಕ್ತಿಯ ಸಂಕೇತವೆಂದು ಸುದೀರ್ಘ ಕಾಲದಿಂದ ಪರಿಗಣಿಸಲಾಗುತ್ತಿದೆ.

ಸಾಂಪ್ರದಾಯಿಕ ನಂಬಿಕೆಗಳು ಮತ್ತು ಮನೆಯ ವಾತಾವರಣ:

ಕೆಲವು ಕುಟುಂಬಗಳಲ್ಲಿ ವಿಶೇಷ ಹಾಗೂ ಪ್ರಮುಖ ದಿನಗಳಲ್ಲಿ, ಹೊಸ ಕಾರ್ಯಕ್ರಮಗಳ ಯಶಸ್ವಿ ಆರಂಭದಲ್ಲಿ ಅಥವಾ ಪೂಜಾ ಕಾರ್ಯಗಳ ಸಮಯದಲ್ಲಿ ಬಿರಿಯಾನಿ ಎಲೆಗಳನ್ನು ಬಳಸುವ ಪದ್ಧತಿ ಇಂದಿಗೂ ಮುಂದುವರೆದಿದೆ. ಈ ಪುರಾತನ ಸಂಪ್ರದಾಯದ ಹಿಂದೆ ಮನೆಯಲ್ಲಿ ಶಾಂತಿಯುತ ವಾತಾವರಣವನ್ನು ಸೃಷ್ಟಿಸುವ ಹಾಗೂ ಕುಟುಂಬದ ಪ್ರತಿಯೊಬ್ಬ ಸದಸ್ಯರ ನಡುವೆ ಏಕತೆ ಮತ್ತು ಸಾಮರಸ್ಯವನ್ನು ಹೆಚ್ಚಿಸುವ ಶುಭ ಬಯಕೆ ಅಡಗಿದೆ.

ಸಕಾರಾತ್ಮಕ ಆಲೋಚನೆಗಳಿಗೆ ಸಿಗುವ ಮಾನಸಿಕ ಉತ್ತೇಜನ:

ಮನೆಯ ನಿರ್ದಿಷ್ಟ ಸ್ಥಳಗಳಲ್ಲಿ ಬಿರಿಯಾನಿ ಎಲೆಯನ್ನು ಇಡುವುದರಿಂದ ಅಥವಾ ಪೂಜೆಗಳಲ್ಲಿ ಬಳಸುವುದರಿಂದ ಜೀವನದಲ್ಲಿ ಶುಭ ಬದಲಾವಣೆಗಳು ಉಂಟಾಗುತ್ತವೆ ಎಂದು ಅನೇಕ ಜನರು ಬಲವಾಗಿ ನಂಬುತ್ತಾರೆ. ಈ ನಂಬಿಕೆಯು ವ್ಯಕ್ತಿಯ ಮಾನಸಿಕ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಪ್ರೇರಣೆಯಾಗುತ್ತದೆ. ಇಂತಹ ಸಕಾರಾತ್ಮಕ ಆಚರಣೆಗಳನ್ನು ನಿಯಮಿತವಾಗಿ ಅನುಸರಿಸುವುದರಿಂದ ಮನಸ್ಸು ಶಾಂತವಾಗುತ್ತದೆ ಮತ್ತು ಭವಿಷ್ಯವನ್ನು ಆಶಾವಾದಿ ದೃಷ್ಟಿಕೋನದಿಂದ ಎದುರಿಸಲು ಸಹಾಯವಾಗುತ್ತದೆ. ಅಂದರೆ, ಎಲೆಯು ನೇರವಾಗಿ ಪವಾಡ ಮಾಡುವ ಬದಲು, ಅದರೊಂದಿಗೆ ಜಾಗೃತಗೊಳ್ಳುವ ಸಕಾರಾತ್ಮಕ ಚಿಂತನೆಗಳೇ ವ್ಯಕ್ತಿಗೆ ನಿಜವಾದ ಶಕ್ತಿಯಾಗಿ ಮಾರ್ಪಡುತ್ತವೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಸಾಂಪ್ರದಾಯಿಕ ನಂಬಿಕೆಗಳು:

ಬಿರಿಯಾನಿ ಎಲೆಯ ಮೇಲೆ ನಿಮ್ಮ ಕೋರಿಕೆಯನ್ನು ಬರೆದು ಅದನ್ನು ಸುಡುವುದರಿಂದ ಆಸೆಗಳು ಬೇಗನೆ ಈಡೇರುತ್ತವೆ ಎಂಬ ನಂಬಿಕೆಯಿದೆ. ಇದಲ್ಲದೇ ಮನೆಯಲ್ಲಿ ಬಿರಿಯಾನಿ ಎಲೆಯನ್ನು ಧೂಪದಂತೆ ಸುಟ್ಟರೆ ಬರುವ ಸುವಾಸನೆಯು ನಕಾರಾತ್ಮಕ ಶಕ್ತಿಯನ್ನು ಹೊಡೆದುಹಾಕಿ, ಮನಸ್ಸಿಗೆ ಶಾಂತಿ ನೀಡುತ್ತದೆ. ವ್ಯಾಪಾರ ಅಥವಾ ಹಣಕಾಸಿನ ಅಭಿವೃದ್ಧಿಗಾಗಿ ಪರ್ಸ್ ಅಥವಾ ತಿಜೋರಿಯಲ್ಲಿ ಈ ಎಲೆಯನ್ನು ಇಟ್ಟುಕೊಳ್ಳುವ ವಾಡಿಕೆಯೂ ಇದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಶಾಸಕ ಶ್ರೀನಿವಾಸ್ ಮಾನೆ ಜನ್ಮದಿನ: ಧರ್ಮಗುರುಗಳಿಗೆ ರಕ್ತ ತುಲಾಭಾರ, 901 ಜನರಿಂದ ರಕ್ತದಾನ! – Kannada News | MLA Srinivas Mane Birthday: Blood Donation Camp and Blood Thulabhara of Religious Leaders in Hangal

ಹಾವೇರಿ, ಆಗಸ್ಟ್ 07: ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಅವರ ಹುಟ್ಟುಹಬ್ಬದ ಅಂಗವಾಗಿ ಹಾನಗಲ್‌ನ ಕುಮಾರೇಶ್ವರ ಕಲ್ಯಾಣ ಮಂಟಪದಲ್ಲಿ ಅಭೂತಪೂರ್ವ ರಕ್ತದಾನ ಶಿಬಿರ ಹಾಗೂ ಧರ್ಮಗುರುಗಳ ರಕ್ತ ತುಲಾಭಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೋಮು ಸೌಹಾರ್ದತೆಯ ಸಂಕೇತವಾಗಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದ ಪ್ರಮುಖ ಗುರುಗಳಿಗೆ ರಕ್ತದ ಮೂಲಕ ತುಲಾಭಾರ ನಡೆಸಿ ಗೌರವಿಸಲಾಯಿತು. ಇದೇ ವೇಳೆ ಕುಮಾರೇಶ್ವರ ಮಠದ ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಅವರಿಗೂ ರಕ್ತ ತುಲಾಭಾರ ನೆರವೇರಿಸಲಾಯಿತು. ಶಾಸಕರ ಜನ್ಮದಿನದ ಅಂಗವಾಗಿ ಸಾರ್ವಜನಿಕರು ಹಾಗೂ ಅಭಿಮಾನಿಗಳು ಸೇರಿದಂತೆ ಬರೋಬ್ಬರಿ 901 ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು. ಈ ಅಪರೂಪದ ಸೌಹಾರ್ದ ಕಾರ್ಯಕ್ರಮ ಜಿಲ್ಲೆಯಾದ್ಯಂತ ಭಾರಿ ಶ್ಲಾಘನೆಗೆ ಪಾತ್ರವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

National Handloom Day 2026: ಭಾರತದ ಪ್ರಮುಖ ಕೈಮಗ್ಗ ತಾಣಗಳು – Kannada News | National Handloom Day 2026: Why is National Handloom Day celebrated? Here is the information

ರಾಷ್ಟ್ರೀಯ ಕೈಮಗ್ಗ ದಿನImage Credit source: Unsplash

ಶತಮಾನಗಳಷ್ಟು ಹಳೆಯ ಇತಿಹಾಸವನ್ನು ಹೊಂದಿರುವ ಕೈಮಗ್ಗ (Handloom) ಉದ್ಯಮವು ಭಾರತದ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದೆ. ಈ ಉದ್ಯಮವು ಜೀವನೋಪಾಯದ ಪ್ರಮುಖ ಮೂಲವಾಗಿದ್ದು, ಇದು ಹೆಚ್ಚಿನ ಜನರಿಗೆ ಉದ್ಯೋಗವನ್ನು ಒದಗಿಸಿಕೊಟ್ಟಿದೆ. ಅಲ್ಲದೆ ಕೈಮಗ್ಗವು ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ತನ್ನದೇ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಿದೆ. ಆದರೆ ಇಂದು ಆದರೆ ಇಂದು ತಂತ್ರಜ್ಞಾನ ಹಾಗೂ ಪಾಶ್ಚಿಮಾತ್ಯ ಉತ್ಪನ್ನಗಳ ಪ್ರಭಾವದಿಂದಾಗಿ ಭಾರತದ ಕೈಮಗ್ಗ ಉದ್ಯಮವು ಕುಂಠಿತಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ದೇಶದ ಈ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವ ಹಾಗೂ ಕೈಮಗ್ಗ ಉದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ  ಹಾಗೂ ಕೈಮಗ್ಗ ಉದ್ಯಮದ ಮಹತ್ವ ಮತ್ತು ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಅದರ ಕೊಡುಗೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಗಸ್ಟ್‌ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ.

ರಾಷ್ಟ್ರೀಯ ಕೈಮಗ್ಗ ದಿನದ ಇತಿಹಾಸವೇನು?

1905 ರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ನಡೆದ  ‘ಸ್ವದೇಶಿ’ ಚಳುವಳಿಯ ನೆನಪಿಗಾಗಿ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ. ಸ್ವದೇಶಿ ಚಳುವಳಿ 1905 ರಲ್ಲಿ ಪ್ರಾರಂಭವಾಯಿತು. ಬ್ರಿಟೀಷರ ಹಾಗೂ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ, ಸ್ವದೇಶಿ ಉತ್ಪನ್ನಗಳನ್ನು ಜಾಗೃತಗೊಳಿಸುವುದು ಈ ಚಳುವಳಿಯ  ಉದ್ದೇಶವಾಗಿತ್ತು. ಈ ಆಂದೋಲನದಲ್ಲಿ ಹೆಚ್ಚಿನ ಸಂಖ್ಯೆಯ ಕೈಮಗ್ಗ ನೇಕಾರರು ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಈ ಚಳುವಳಿಯ ಕಾರಣದಿಂದಾಗಿ ಭಾರತದ ಬಹುತೇಕ ಪ್ರತಿಯೊಂದು ಮನೆಯಲ್ಲೂ ಖಾದಿ ಪ್ರಾರಂಭವಾಯಿತು. ಈ ಚಳುವಳಿಯ ಗೌರವಾರ್ಥವಾಗಿ ಆಗಸ್ಟ್‌ 7, 2015 ರಲ್ಲಿ  ರಾಷ್ಟ್ರೀಯ ಕೈಮಗ್ಗ ದಿನದ ಆಚರಣೆ ಪ್ರಾರಂಭವಾಯಿತು.

ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಕೈಮಗ್ಗ ಉದ್ಯಮದ ಕೊಡುಗೆಯನ್ನು ಎತ್ತಿ ತೋರಿಸಲು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳನ್ನು ಉತ್ತೇಜಿಸಲು ಹಾಗೂ ನೇಕಾರರ ಸಮುದಾಯವನ್ನು ಗೌರವಿಸಲು, ಅವರ ಕೊಡುಗೆಗಳನ್ನು ಶ್ಲಾಘಿಸುವುದು ಈ ದಿನದ ಆಚರಣೆಯ ಪ್ರಮುಖ ಉದ್ದೇಶವಾಗಿದೆ.

ಇದನ್ನೂ ಓದಿ: ಭೀಕರ ಪರಮಾಣು ದಾಳಿಗೆ ನಲುಗಿ ಹೋಗಿದ್ದ ಜಪಾನಿನ ಹಿರೋಷಿಮಾ ನಗರ ಇಂದು ಹೇಗಿದೆ?

ಭಾರತದ ಪ್ರಮುಖ ಕೈಮಗ್ಗ ತಾಣಗಳು:

ಮೊಳಕಾಲ್ಮೂರು: ಚಿತ್ರದುರ್ಗದ ಮೊಳಕಾಲ್ಮೂರಿನಲ್ಲಿ ನೇಯಲಾಗುವ ಮೊಳಕಾಲ್ಮೂರು ಸೀರೆಗಳು ಹತ್ತಿ ಮತ್ತು ರೇಷ್ಮೆ ಸೀರೆಗಳಿಗೆ ಹಾಗೂ ಸಾಂಪ್ರದಾಯಿಕ ಪಲ್ಲು ವಿನ್ಯಾಸಕ್ಕೆ ಪ್ರಸಿದ್ಧಿ ಪಡೆದಿದೆ.

ಮೈಸೂರು:  ಮೈಸೂರು ರೇಷ್ಮೆ ಸೀರೆಗಳು ತನ್ನ ಶ್ರೀಮಂತ ಹೊಳಪಿಗೆ ಹೆಸರುವಾಸಿಯಾಗಿವೆ. ಶುದ್ಧ ಮಲ್ಬೆರಿ ರೇಷ್ಮೆಯನ್ನು ಬಳಸಿ ಕೈಯಿಂದ ನೇಯಲಾಗುವ ಈ ಸೀರೆಯ ಸ್ಪರ್ಶ ತುಂಬಾನೇ ಮೃದುವಾಗಿದೆ.

ಇಳಕಲ್:‌ ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿ ನೇಯಲಾಗುವ ಇಳ್ಕಲ್‌ ಸೀರೆಗಳು ತನ್ನ ವಿಶಿಷ್ಟವಾದ ಪರಳಿ ಅಂಚು ಮತ್ತು ಚಾರಣ ಅಂಚಿನ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. ಇದಲ್ಲದೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತನ್ನ ಸಾಂಪ್ರದಾಯಿಕ ಹಾಗೂ ವಿಶಿಷ್ಟ ಜ್ಯಾಮಿತೀಯ ನಮೂನೆಗಳ ಖಣ ಬ್ಲೌಸ್ ಬಟ್ಟೆಗಳಿಗೆ ಪ್ರಸಿದ್ಧಿಯಾಗಿದೆ.

ನವಲಗುಂದ: ಧಾಡವಾರ ಜಿಲ್ಲೆಯ ನವಲಗುಂದವು ಕೈಯಿಂದ ನೇಯ್ದ ಜಮಖಾನಾ ಉತ್ಪನ್ನಗಳಿಗೆ ಖ್ಯಾತಿ ಪಡೆದಿದೆ. ಜ್ಯಾಮಿತೀಯ ವಿನ್ಯಾಸಗಳನ್ನು ಹೊಂದಿರುವ ಈ ಹತ್ತಿ ಜಮಖಾನಗಳು ಭೌಗೋಳಿಕ ಸೂಚ್ಯಾಂಕ (GI Tag) ಪಡೆದಿದೆ.

ವಾರಣಾಸಿ, ಉತ್ತರ ಪ್ರದೇಶ: ವಾರಣಾಸಿಯು ತನ್ನ ಸೊಗಸಾದ ಕೈಮಗ್ಗ ಉತ್ಪನ್ನಗಳಿಗೆ, ವಿಶೇಷವಾಗಿ ಬನಾರಸಿ ರೇಷ್ಮೆ ಸೀರೆಗಳು, ಜರಿ ಕಸೂತಿ ಮತ್ತು ಬ್ರೊಕೇಡ್‌ಗಳಿಗೆ ಹೆಸರುವಾಸಿಯಾಗಿದೆ. ಇದು ನೇಯ್ಗೆ ಕರಕುಶಲ ವಸ್ತುಗಳ ಕೇಂದ್ರವೂ ಆಗಿದೆ.

ಸೂರತ್, ಗುಜರಾತ್: ಭಾರತದ ಪ್ರಮುಖ ಜವಳಿ ಕೇಂದ್ರಗಳಲ್ಲಿ ಒಂದೆಂದು ಕರೆಯಲ್ಪಡುವ ಸೂರತ್, ಅಭಿವೃದ್ಧಿ ಹೊಂದುತ್ತಿರುವ ಕೈಮಗ್ಗ ಮಾರುಕಟ್ಟೆಯಾಗಿದೆ. ಸಾಂಪ್ರದಾಯಿಕ ಪಟೋಲಾ, ರೇಷ್ಮೆಯಿಂದ ನೇಯ್ದ ಡಬಲ್ ಇಕಾತ್ ಸೀರೆ ಇಲ್ಲಿನ ಪ್ರಮುಖ ಕೈಮಗ್ಗ ಉತ್ಪನ್ನಗಳಾಗಿವೆ.

ಪಾಣಿಪತ್, ಹರಿಯಾಣ: ಈ ನಗರ ಕೈಮಗ್ಗದಿಂದ ತಯಾರಿಸಲಾದಕಾರ್ಪೆಟ್‌ಗಳು, ಮ್ಯಾಟ್‌ಗಳು, ರತ್ನಗಂಬಳಿ, ಟವೆಲ್‌ಗಳಿಗೆ ಹೆಸರುವಾಸಿಯಾಗಿವೆ.

ಕಾಂಚೀಪುರಂ, ತಮಿಳುನಾಡು: ಈ ನಗರ ಸುಂದರವಾದ ಕಾಂಚಿಪುರಂ ಸೀರೆಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ.

ಮಹೇಶ್ವರ, ಮಧ್ಯಪ್ರದೇಶ: ಈ ಸ್ಥಳವು ಜನಪ್ರಿಯ ಮಹೇಶ್ವರಿ ಸೀರೆಗಳು ಮತ್ತು ಬಟ್ಟೆಗಳಿಗೆ ಹೆಸರುವಾಸಿಯಾಗಿದೆ.

ಲಕ್ನೋ, ಉತ್ತರ ಪ್ರದೇಶ: ಚಿಕನ್ಕರಿ ಒಂದು ಪ್ರಸಿದ್ಧ ಕೈಮಗ್ಗ ಬಟ್ಟೆಯಾಗಿದ್ದು, ಲಕ್ನೋ ಇವುಗಳ ಉತ್ಪಾದನೆಗೆ ಸಖತ್‌ ಹೆಸರುವಾಸಿಯಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಪ್ಪಳ ಉಸ್ತುವಾರಿ ಸ್ಥಾನಕ್ಕೆ ರಾಯರೆಡ್ಡಿ, ತಂಗಡಗಿ ಪೈಪೋಟಿ: ಬರ ಪರಿಶೀಲನೆ ನೆಪದಲ್ಲಿ ಸಕ್ರಿಯ – Kannada News | Koppal District In Charge Post Race: Ministers Basavaraj Rayareddy and Shivraj Tangadagi in Focus

ಕೊಪ್ಪಳ, ಆಗಸ್ಟ್ 7: ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್‌ನ (Congress) ಇಬ್ಬರು ಸಚಿವರ ನಡುವೆ ಪೈಪೋಟಿ ಶುರುವಾಯಿತೇ ಎಂಬ ಚರ್ಚೆ ಇದೀಗ ಮುನ್ನೆಲೆಗೆ ಬಂದಿದೆ. ಸಚಿವರಾದ ಬಸವರಾಜ ರಾಯರೆಡ್ಡಿ ಹಾಗೂ ಶಿವರಾಜ ತಂಗಡಗಿ ಕೊಪ್ಪಳ (Koppal) ಜಿಲ್ಲಾ ಉಸ್ತುವಾರಿ ಸ್ಥಾನದ ಮೇಲೆ ಆಸಕ್ತಿ ಹೊಂದಿದ್ದಾರೆ ಎನ್ನಲಾಗುತ್ತಿದ್ದು, ಇಬ್ಬರ ಹೇಳಿಕೆಗಳು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿವೆ.

ಗದಗ ಜಿಲ್ಲೆಯ ಬರ ಪರಿಸ್ಥಿತಿ ಪರಿಶೀಲನೆಗೆ ತೆರಳಿದ್ದ ಸಚಿವ ಬಸವರಾಜ ರಾಯರೆಡ್ಡಿ, ಗುರುವಾರ ಯಲಬುರ್ಗಾ ಹಾಗೂ ಕುಕನೂರು ಭಾಗಗಳಲ್ಲಿ ಬರ ಪರಿಶೀಲನೆ ನಡೆಸಿದರು. ಸಚಿವ ಶಿವರಾಜ ತಂಗಡಗಿ ಅವರೊಂದಿಗೆ ರಾಯರೆಡ್ಡಿ ಈ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಇದಕ್ಕೂ ಮುನ್ನವೇ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಚಯ ಮಾಡಿಕೊಂಡಿದ್ದರು ಎನ್ನಲಾಗಿದೆ.

ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿ ಕುರಿತು ಮಾತನಾಡಿದ್ದ ರಾಯರೆಡ್ಡಿ, ಜಿಲ್ಲಾ ಉಸ್ತುವಾರಿ ಎಂದರೆ ವಿಶೇಷವಾದದ್ದೇನಿಲ್ಲ, ಕೆಡಿಪಿ ಸಭೆ ನಡೆಸುವುದು ಮತ್ತು ಧ್ವಜಾರೋಹಣ ಮಾಡುವುದು ಅಷ್ಟೇ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು. ಆದರೆ ಇದೀಗ ಕೊಪ್ಪಳದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಅವರು ನಡೆಸಿದ ಭೇಟಿಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.

ಇತ್ತ ಸಚಿವ ಶಿವರಾಜ ತಂಗಡಗಿ ಅವರು ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿಯ ಮಹತ್ವವನ್ನು ಪ್ರತಿಪಾದಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಎಂದರೆ ಜಿಲ್ಲೆಗೆ ಮುಖ್ಯಮಂತ್ರಿ ಇದ್ದಂತೆ ಎಂದು ಅವರು ಹೇಳಿದ್ದಾರೆ. ರಾಯರೆಡ್ಡಿ ಅವರು ಜಿಲ್ಲಾ ಉಸ್ತುವಾರಿ ಕುರಿತು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ ಎಂದೂ ತಂಗಡಗಿ ಪ್ರತಿಕ್ರಿಯಿಸಿದ್ದಾರೆ. ರಾಯರೆಡ್ಡಿ ಅವರು ತಮ್ಮಗಿಂತ ಹಿರಿಯ ನಾಯಕರು. ಆದರೆ ತಮ್ಮ ಮುಂದೆ ಅವರು ಆ ರೀತಿಯ ಯಾವುದೇ ನಡೆ ತೋರಿಸಿಲ್ಲ ಎಂದು ತಂಗಡಗಿ ಹೇಳಿದ್ದಾರೆ. ಅಲ್ಲದೆ, ರಾಯರೆಡ್ಡಿ ಅವರಿಗೆ ಎರಡು ಜಿಲ್ಲೆಗಳ ಬರ ಪರಿಶೀಲನೆ ಜವಾಬ್ದಾರಿ ನೀಡಲಾಗಿದ್ದರೆ ಮತ್ತೊಂದು ಜಿಲ್ಲೆಯನ್ನು ನೀಡಲಿ ಎಂದು ಅವರು ಹೇಳಿದ್ದಾರೆ.

ಮತ್ತೊಂದೆಡೆ, ರಾಯರೆಡ್ಡಿ ‘ನನಗೆ ಕೊಪ್ಪಳ ಎಂದು ಹೇಳಿದ್ದರು, ಹಾಗಾಗಿ ಕೊಪ್ಪಳಕ್ಕೆ ಬಂದಿದ್ದೇನೆ. ನನ್ನ ಜಿಲ್ಲೆಯಲ್ಲಿ ನಾನು ಇರಬೇಕು ಎಂಬ ಆಸೆ ನನಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಅಹಿಂದ ಶಾಸಕರ ಅಸಮಾಧಾನ, ಅಷ್ಟಕ್ಕೂ ಆಗಿದ್ದೇನು?

ಹೀಗಾಗಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸ್ಥಾನ ಯಾರಿಗೆ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಸದ್ಯ ಇಬ್ಬರು ಸಚಿವರ ಹೇಳಿಕೆಗಳು ಹಾಗೂ ಕೊಪ್ಪಳದಲ್ಲಿ ಅವರ ಚಟುವಟಿಕೆಗಳು ಉಸ್ತುವಾರಿ ಸ್ಥಾನದ ಪೈಪೋಟಿಯ ಚರ್ಚೆಗೆ ಮತ್ತಷ್ಟು ಬಲ ನೀಡಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಕೊಲೆ ಪ್ರಕರಣ: ಸದಾ ‘ರೀಲ್ಸ್’ ಮಾಡುತ್ತಿದ್ದ ಪತ್ನಿ, ಊಟ ಹಾಕದಿದ್ದಕ್ಕೆ ಕುತ್ತಿಗೆ ಹಿಸುಕಿ ಕೊಂದ ಪತಿ ಧೀರಜ್ ಬಂಧನ – Kannada News | Shocking Gerupalya Murder: Husband Arrested for Killing Wife Amidst Reels and Dispute

ಬೆಂಗಳೂರು, ಆ.7: ನಗರದ ಕುಂಬಳಗೋಡು ಸಮೀಪದ ಗೇರುಪಾಳ್ಯದಲ್ಲಿ ಕಳೆದ ತಿಂಗಳು ಜುಲೈ 25ರಂದು ನಡೆದಿದ್ದ ಬಿಹಾರ ಮೂಲದ ರೀಮಾಕುಮಾರಿ (24) ಭೀಕರ ಕೊಲೆ ಪ್ರಕರಣದ ಅಸಲಿ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣದ ಆರೋಪಿ, ಆಕೆಯ ಪತಿ ಧೀರಜ್ ಕುಮಾರ್ (24) ಎಂಬಾತನನ್ನು ಬಿಹಾರದಲ್ಲಿ ಬಂಧಿಸಿ ಕರೆತಂದ ಕುಂಬಳಗೋಡು ಠಾಣೆ ಪೊಲೀಸರು ಸುದೀರ್ಘ ವಿಚಾರಣೆಗೆ ಒಳಪಡಿಸಿದಾಗ ಕೊಲೆಗೆ ಕಾರಣ ಬಹಿರಂಗವಾಗಿದೆ.

ಪ್ರೀತಿಸಿ ಮದುವೆಯಾಗಿದ್ದ ದಂಪತಿ ನಡುವೆ ಬಿರುಕು:

ಬಿಹಾರ ಮೂಲದ ಧೀರಜ್ ಮತ್ತು ರೀಮಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಜೀವನೋಪಾಯಕ್ಕಾಗಿ ಸುಮಾರು 10 ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಕುಂಬಳಗೋಡಿನ ಗೇರುಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಬೆಂಗಳೂರಿಗೆ ಬಂದ ಕೆಲವೇ ತಿಂಗಳುಗಳಲ್ಲಿ ರೀಮಾ ಪತಿ ಧೀರಜ್ ಮೇಲೆ ಆಸಕ್ತಿ ಕಳೆದುಕೊಂಡಿದ್ದಳು. ಮನೆಯಲ್ಲಿದ್ದಾಗ ಸದಾ ಮೊಬೈಲ್‌ನಲ್ಲಿ ‘ರೀಲ್ಸ್’ (Reels) ಮಾಡುತ್ತಾ ಕಾಲ ಕಳೆಯುತ್ತಿದ್ದಳು.

ದಾಂಪತ್ಯ ಜೀವನದಲ್ಲೂ ಪತಿಯೊಂದಿಗೆ ಸಹಕರಿಸದೆ ಲೈಂಗಿಕ ಕ್ರಿಯೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಳು. ರೀಮಾ ದಿನನಿತ್ಯ ತನಗೆ ಬೇಕಾಗುವಷ್ಟು ಮಾತ್ರ ಅಡುಗೆ ಮಾಡಿ ತಿಂದು ಮಲಗುತ್ತಿದ್ದಳು. ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಪತಿ ಧೀರಜ್‌ಗೆ ಊಟ ನೀಡುತ್ತಿರಲಿಲ್ಲ. ಅಲ್ಲದೆ, ತನಗೆ ಬೆಂಗಳೂರು ಬೇಡ, ವಾಪಸ್ ಬಿಹಾರಕ್ಕೆ ಹೋಗಬೇಕೆಂದು ಪಟ್ಟು ಹಿಡಿದಿದ್ದಳು. ಇದರಿಂದ ದಂಪತಿ ನಡುವೆ ನಿತ್ಯ ಗಲಾಟೆ ನಡೆಯುತ್ತಿತ್ತು.

ಜುಲೈ 25ರಂದು ನಡೆದಿದ್ದೇನು?:

ಕೊಲೆಯಾದ ದಿನ ಧೀರಜ್ ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಯಲ್ಲಿ ಊಟ ಇರಲಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆ ಸಣ್ಣದಾಗಿ ಗಲಾಟೆ ಆರಂಭವಾಗಿದೆ. ಬಳಿಕ ಧೀರಜ್ ‘ಮಲಗೋಣ ಬಾ’ ಎಂದು ಪತ್ನಿಯನ್ನು ಕರೆದಾಗ ಆಕೆ ನಿರಾಕರಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಇಬ್ಬರ ನಡುವೆ ಜಗಳ ತೀವ್ರಗೊಂಡಿದೆ. ಜಗಳದ ಭರದಲ್ಲಿ ರೀಮಾ ಮೊದಲು ದೊಣ್ಣೆಯಿಂದ ಪತಿ ಧೀರಜ್‌ಗೆ ಹೊಡೆದಿದ್ದಾಳೆ. ಇದರಿಂದ ತೀವ್ರ ಕುಪಿತಗೊಂಡ ಧೀರಜ್, ಪತ್ನಿಯ ವೇಲ್‌ನಿಂದ (ದುಪಟ್ಟಾ) ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಮುಖಕ್ಕೆ ಪ್ಲಾಸ್ಟಿಕ್ ಪೇಪರ್ ಸುತ್ತಿ, ಶವವನ್ನು ಮನೆಯಲ್ಲೇ ಬಿಟ್ಟು ಬಿಹಾರಕ್ಕೆ ಪರಾರಿಯಾಗಿದ್ದ.

ಇದನ್ನೂ ಓದಿ: ಕಲಾಸಿಪಾಳ್ಯ ಗ್ಯಾಂಗ್‌ವಾರ್ ಪ್ರಕರಣಕ್ಕೆ ಟ್ವಿಸ್ಟ್: ತನಿಖೆ ವೇಳೆ ಅಸಲಿ ಕಾರಣ ಬಯಲು

ಬಿಹಾರದಲ್ಲಿ ಆರೋಪಿ ಬಂಧನ:

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕುಂಬಳಗೋಡು ಪೊಲೀಸರು, ತಾಂತ್ರಿಕ ಕಾರ್ಯಾಚರಣೆ ನಡೆಸಿ ಬಿಹಾರದಲ್ಲಿದ್ದ ಆರೋಪಿ ಧೀರಜ್‌ನನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ವಿಚಾರಣೆ ವೇಳೆ ಆರೋಪಿ ಧೀರಜ್ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೆಜೆಸ್ಟಿಕ್​​ನಲ್ಲಿ ಆದ ಕೆಟ್ಟ ಅನುಭವ ಬಿಚ್ಚಿಟ್ಟ ನಟಿ ಮೋನಿಷಾ ವಿಜಯ್ – Kannada News | Monisha Vijay Reveals Majestic Bengalurus Dark Side During City Lights Shoot

ದುನಿಯಾ ವಿಜಯ್ ಪುತ್ರಿ ಮೋನಿಷಾ ವಿಜಯ್, ‘ಸಿಟಿ ಲೈಟ್ಸ್’ ಚಿತ್ರೀಕರಣದ ವೇಳೆ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಸವಾಲಿನ ಹಾಗೂ ಅಚ್ಚರಿಯ ಅನುಭವಗಳನ್ನು ಎದುರಿಸಿದ್ದಾರೆ. ಹೆಚ್ಚಿನ ಚಿತ್ರೀಕರಣ ಮೆಜೆಸ್ಟಿಕ್‌ನ ಲೈವ್ ಲೊಕೇಶನ್‌ಗಳಲ್ಲಿ ನಡೆದಿದ್ದು, ಇದು ಸೆಟ್‌ನಲ್ಲಿ ಚಿತ್ರೀಕರಣ ಮಾಡುವುದಕ್ಕಿಂತ ವಿಭಿನ್ನವಾಗಿತ್ತು. ಸಾರ್ವಜನಿಕರ ನಡುವೆ ಶೂಟಿಂಗ್ ಮಾಡುವುದು ಅವರಿಗೆ ಹೊಸ ಸವಾಲಾಗಿತ್ತು.

ಚಿತ್ರೀಕರಣದ ಸಂದರ್ಭದಲ್ಲಿ, ಮೋನಿಷಾ ಅವರಿಗೆ ಅನಿರೀಕ್ಷಿತವಾಗಿ ಕಹಿ ಘಟನೆಯೊಂದು ಎದುರಾಯಿತು. ಯಾರೋ ಒಬ್ಬರು ಕೆಟ್ಟ ಉದ್ದೇಶದಿಂದ ಅವರನ್ನು ಸಮೀಪಿಸಿದ್ದರು. ಇದು ಮೆಜೆಸ್ಟಿಕ್‌ನ ಮತ್ತೊಂದು ಮುಖವನ್ನು ಅವರಿಗೆ ಪರಿಚಯಿಸಿತು. ಬೆಂಗಳೂರಿನಲ್ಲಿ ಇಂತಹ ಕರಾಳ ಅಂಶವೂ ಇದೆ ಎಂದು ಅರಿತಾಗ ಅವರಿಗೆ ಆಶ್ಚರ್ಯವಾಯಿತು. ಆದಾಗ್ಯೂ, ಚಿತ್ರತಂಡದ ಸುರಕ್ಷತಾ ವ್ಯವಸ್ಥೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಅನುಭವವನ್ನು ಒಬ್ಬ ಕಲಾವಿದೆಯಾಗಿ ಕಲಿಕೆಯ ಭಾಗವೆಂದು ಪರಿಗಣಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕತ್ತಲೆಯಲ್ಲಿ ಇರಾನ್ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿಯನ್ನು ಭೇಟಿಯಾದ್ರಾ ಇರಾನ್ ಅಧ್ಯಕ್ಷ? – Kannada News | Iran Supreme Leader Mystery: Pezeshkian’s Secret Dark Encounter with Mojtaba Khamenei

ಟೆಹ್ರಾನ್, ಆಗಸ್ಟ್​ 07: ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ(Mojtaba Khamenei) ಅವರ ಆರೋಗ್ಯ ಮತ್ತು ಅವರಿರುವ ರಹಸ್ಯ ಸ್ಥಳದ ಕುರಿತು ಜಾಗತಿಕ ಮಟ್ಟದಲ್ಲಿ ಅನುಮಾನಗಳು ಹೆಚ್ಚುತ್ತಿರುವ ನಡುವೆಯೇ ಮತ್ತೊಂದು ರಹಸ್ಯ ವರದಿ ಹೊರಬಿದ್ದಿದೆ. ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ (Masoud Pezeshkian) ಅವರು ಟೆಹ್ರಾನ್‌ನ ಅಜ್ಞಾತ ಸ್ಥಳದಲ್ಲಿ ಕಾರಿನ ಹಿಂಭಾಗದ ಸೀಟಿನಲ್ಲಿ ಮೊಜ್ತಬಾ ಖಮೇನಿ ಅವರನ್ನು ಭೇಟಿಯಾಗಿದ್ದಾರೆ. ಆದರೆ ಸಂಪೂರ್ಣ ಕತ್ತಲೆಯಿಂದಾಗಿ ಮುಖ ಕಾಣಿಸದಿದ್ದಾಗ, ನೀವು ನಿಜವಾಗಿಯೂ ಖಮೇನಿಯೇ ಎಂದು ಪೆಜೆಶ್ಕಿಯಾನ್ ಆ ವ್ಯಕ್ತಿಯನ್ನೇ ಕೇಳಿದ್ದಾರೆ ಎಂದು ‘ಇರಾನ್ ಇಂಟರ್ನ್ಯಾಷನಲ್’ ವರದಿ ಮಾಡಿದೆ.

ಇರಾನ್ ರಾಜಕೀಯ ಬಿಕ್ಕಟ್ಟಿನ ನಡುವೆ ಅಧ್ಯಕ್ಷ ಪೆಜೆಶ್ಕಿಯಾನ್ ರಾಜೀನಾಮೆ ಬೆದರಿಕೆ ಹಾಕಿದ ನಂತರ ಈ ಭೇಟಿಯನ್ನು ಏರ್ಪಡಿಸಲಾಗಿತ್ತು. ಟೆಹ್ರಾನ್‌ನ ರಹಸ್ಯ ಸ್ಥಳವೊಂದರಲ್ಲಿ ಗಾಢ ಕಪ್ಪು ಕಿಟಕಿಗಳಿದ್ದ ಕಾರಿನ ಹಿಂಭಾಗದಲ್ಲಿ ಖಮೇನಿ ಎಂದ ಹೇಳಲಾದ ವ್ಯಕ್ತಿ ಕುಳಿತಿದ್ದರು.

ಕೈಕುಲುಕಲೂ ಸಿಗದ ಅವಕಾಶ: ಸಂಪೂರ್ಣ ಕತ್ತಲೆಯಲ್ಲಿ ನಡೆದ ಈ ಭೇಟಿಯಲ್ಲಿ ಯಾವುದೇ ಹಸ್ತಲಾಘವಕ್ಕೆ ಅವಕಾಶವಿರಲಿಲ್ಲ. ಅಧ್ಯಕ್ಷರನ್ನು ನಡೆಸಿಕೊಂಡ ರೀತಿಯಿಂದ ಅವರು ತೀವ್ರ “ಅವಮಾನಿತರಾಗಿದ್ದಾರೆ” ಎಂದು ಅಧ್ಯಕ್ಷರ ಕಚೇರಿಯ ಮೂಲಗಳು ತಿಳಿಸಿವೆ. ಎರಡನೇ ಸಭೆಗೆ ಪೆಜೆಶ್ಕಿಯಾನ್ ವಿನಂತಿಸಿದರೂ ಅದನ್ನು ತಕ್ಷಣವೇ ನಿರಾಕರಿಸಲಾಗಿದೆ.

ಮತ್ತಷ್ಟು ಓದಿ: ‘ಭಾರತವನ್ನು ಇರಾನ್ ಎಂದೂ ಮರೆಯುವುದಿಲ್ಲ’; ಅಯತೊಲ್ಲಾ ಖಮೇನಿ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿದ್ದಕ್ಕೆ ಟೆಹ್ರಾನ್ ಕೃತಜ್ಞತೆ

ಖಮೇನಿ ಬದುಕಿದ್ದಾರೆಯೇ? ಟ್ರಂಪ್ ಹೇಳಿಕೆ ಮತ್ತು ಊಹಾಪೋಹ
ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಲೀಡರ್: ಫೆಬ್ರವರಿಯಲ್ಲಿ ಅಮೆರಿಕ-ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಮಾಜಿ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದರು. ಆ ದಾಳಿಯಲ್ಲಿ ಮೊಜ್ತಬಾ ಕೂಡ ತೀವ್ರವಾಗಿ ಗಾಯಗೊಂಡಿದ್ದರು ಎನ್ನಲಾಗಿದೆ. ಅವರು ತಮ್ಮ ತಂದೆಯ ಅಂತ್ಯಕ್ರಿಯೆಗೂ ಹಾಜರಾಗಿರಲಿಲ್ಲ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಪ್ರತಿಕ್ರಿಯಿಸಿ, “ಇರಾನ್‌ನ ಉನ್ನತ ನಾಯಕರೆಲ್ಲರೂ ಕೊಲ್ಲಲ್ಪಟ್ಟಿದ್ದಾರೆ. ಮೊಜ್ತಬಾ ಖಮೇನಿ ಇದ್ದಾರೋ ಇಲ್ಲವೋ ಗೊತ್ತಿಲ್ಲ ಎಂದು ಪ್ರತಿಪಾದಿಸಿದ್ದರು. ಇರಾನ್‌ನಲ್ಲಿ ನಾಗರಿಕ ಸರ್ಕಾರಕ್ಕಿಂತ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ಮಿಲಿಟರಿ ಶಕ್ತಿಗಳೇ ಸಂಪೂರ್ಣ ಆಡಳಿತ ನಿಯಂತ್ರಣ ತೆಗೆದುಕೊಂಡಿವೆ. ಅಧ್ಯಕ್ಷ ಪೆಜೆಶ್ಕಿಯಾನ್ ಇತ್ತೀಚೆಗೆ ಈ ಪರಿಸ್ಥಿತಿಯಲ್ಲಿ ಸುಪ್ರೀಂ ಲೀಡರ್ ಅವರನ್ನು ಸಂಪರ್ಕಿಸುವುದು ತೀರಾ ಕಷ್ಟಕರವಾಗಿದೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದರು.

ಬೋಗಸ್ ಭೇಟಿಯ ಅನುಮಾನ: ಈ ಇತ್ತೀಚಿನ ವರದಿಯು ಇರಾನ್ ಸೇನೆಯು ಅಧ್ಯಕ್ಷರನ್ನು ಸಮಾಧಾನಪಡಿಸಲು ಖಮೇನಿ ರೀತಿಯೇ ಇರುವವರನ್ನು ಕಾರಿನಲ್ಲಿ ಕೂರಿಸಿ ಭೇಟಿ ಮಾಡಿಸಿದೆಯೇ ಎಂಬ ಬಲವಾದ ಅನುಮಾನಗಳನ್ನು ಹುಟ್ಟುಹಾಕಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version