Weekly Love Horoscope: ನಿಮ್ಮ ರಾಶಿಗನುಗುಣವಾಗಿ ಆ.9ರಿಂದ 15ರ ವರೆಗಿನ ವಾರದ ಪ್ರೇಮ – ಪ್ರೀತಿ ಭವಿಷ್ಯ ಇಲ್ಲಿ ತಿಳಿಯಿರಿ – Kannada News | Aug 9 15: Weekly Love Horoscope for All Zodiacs – Your Relationship Predictions!
ಆಗಸ್ಟ್ 09ರಿಂದ 15ರ ತನಕದ ಎರಡನೇ ವಾರದಲ್ಲಿ ಪ್ರೀತಿಯ ರೀತಿಯನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗದು. ಪೂರ್ವಭಾವೀ ಆಲೋಚನೆಯಿಲ್ಲದೇ ಮುಂದೆಹೋಗಿ ದುಃಖಿಸಬೇಕಾಗುವುದು. ಪ್ರಯಾಣದಿಂದ ಪ್ರಯಾಸ ಸಾಧ್ಯತೆ ಇದೆ. ಎಲ್ಲರ ಪ್ರೇಮವೂ ಸಫಲವಾಗಲಿ. ಮೇಷ ರಾಶಿ : ನಿಮ್ಮ ರಾಶ್ಯಧಿಪತಿ ಮಂಗಳ ಮಿಥುನದಲ್ಲಿದ್ದರೆ, ಶನಿ ಮೀನದಲ್ಲಿದ್ದಾನೆ. ಇದರಿಂದ ಪ್ರೇಮ ಸಂಬಂಧದಲ್ಲಿ ತಾಳ್ಮೆ ಬಹಳ ಮುಖ್ಯ. ಸಣ್ಣಪುಟ್ಟ ವಿಚಾರಗಳಿಗೂ ಸಂಗಾತಿಯ ಮೇಲೆ ಕೋಪಗೊಳ್ಳುವ ಸಾಧ್ಯತೆ ಇದೆ. ಭಾವನೆಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಮಾತುಕತೆ ನಡೆಸಿದರೆ ಬಾಂಧವ್ಯ ಗಟ್ಟಿಯಾಗುತ್ತದೆ. ವೃಷಭ ರಾಶಿ : ಕನ್ಯಾ ರಾಶಿಯಲ್ಲಿ ಶುಕ್ರ…