ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಯುವತಿ ಕುಟುಂಬಸ್ಥರಿಂದ ಹಲ್ಲೆ ಆರೋಪ: ದೂರು-ಪ್ರತಿದೂರು ದಾಖಲು – Kannada News | Kundapura Shocked: Youth Tied to Tree and Assaulted Over 50,000 Loan Dispute; Complaints Filed
ಸನತ್, ನಂದೀಶ್ ಕುಮಾರ್, ರಾಮ ಕುಮಾರ್Image Credit source: Tv9 Kannada ಉಡುಪಿ, ಆಗಸ್ಟ್ 07: ಜಿಲ್ಲೆಯ ಕುಂದಾಪುರದ ಬೆಳ್ಳಾಲದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಯುವಕನೋರ್ವನನ್ನು ಮನೆಗೆ ಕರೆಸಿದ ಯುವತಿಯ ಕುಟುಂಬಸ್ಥರು ಆತನನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ಸನತ್ ಎನ್ನುವ ಯುವಕನ ಮೇಲೆ ಪೈಶಾಚಿಕ ಕೃತ್ಯ ನಡೆಸಲಾಗಿದ್ದು, ಯುವತಿ ಮತ್ತು ಈತ ಒಂದೇ ಸಂಸ್ಥೆಯಲ್ಲಿ ಕೆಲಸಕ್ಕಿದ್ದರು. ಬಳಿಕ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು. ಇದೇ ಸಮಯದಲ್ಲಿ ಸನತ್ ನಿಂದ 50 ಸಾವಿರ ಹಣವನ್ನು ಯವತಿ ಸಾಲ…