ಬಿಎಸ್ಸೆನ್ನೆಲ್ ವೈಫೈ ಯೋಜನೆ ನೀರಲ್ಲಿ ಹೋಮ; ಸಾವಿರಾರು ಕೋಟಿ ರೂ ವೆಚ್ಚಕ್ಕೆ ಬದಲಾಗಿ ಸಿಕ್ಕ ಆದಾಯ ಸೊನ್ನೆ? – Kannada News | BSNL’s 25,000 Wi Fi Hotspots generate just Rs 3 lakh revenue in 4 years, reveals Parliamentary panel report

ನವದೆಹಲಿ, ಆಗಸ್ಟ್ 7: ಬಿಎಸ್ಸೆನ್ನೆಲ್ (BSNL- ಭಾರತೀಯ ಸಂಚಾರ ನಿಗಮ ನಿಯಮಿತ) ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸಿದ 25,000 ವೈ-ಫೈ ಹಾಟ್‌ಸ್ಪಾಟ್‌ಗಳ ಯೋಜನೆಯಲ್ಲಿ ತೀವ್ರ ಆರ್ಥಿಕ ನಷ್ಟ ಮತ್ತು ಯೋಜನಾ ಲೋಪಗಳು ಕಂಡುಬಂದಿವೆ ಎಂದು ಸಂಸದೀಯ ಸಮಿತಿಯು ಲೋಕಸಭೆಯಲ್ಲಿ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ನೂರಾರು ಕೋಟಿ ರೂ ವೆಚ್ಚ ಮಾಡಿ ಜಾರಿಗೊಳಿಸಿದ ಈ ಯೋಜನೆ ಬಹುತೇಕ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ವರ್ಷಕ್ಕೆ ₹75 ಕೋಟಿ ಆದಾಯ ಬರುವ ಗುರಿ ಇಟ್ಟಿದ್ದರೂ, ಸಿಕ್ಕಿದ್ದು ಕೇವಲ ₹3 ಲಕ್ಷ ಮಾತ್ರವೇ ಎಂದು ಸಂಸದೀಯ ಸಮಿತಿಯ ವರದಿಯಲ್ಲಿ ವಾಸ್ತವ ಸಂಗತಿ ತೆರೆದಿಡಲಾಗಿದೆ.

ವರದಿ ಪ್ರಕಾರ, 2018-19ರ ಸಾಲಿನಲ್ಲಿ ವರ್ಷಕ್ಕೆ ₹75 ಕೋಟಿ ಆದಾಯ ಗಳಿಸುವ ಗುರಿ ಹೊಂದಲಾಗಿತ್ತು. ಆದರೆ, 2017-18 ರಿಂದ 2021-22ರ ನಡುವೆ ಬಿಎಸ್‌ಎನ್‌ಎಲ್ ಗಳಿಸಿದ್ದು ಕೇವಲ ₹3.09 ಲಕ್ಷ ಮಾತ್ರ. ಬಿಎಸ್ಸೆನ್ನೆಲ್ ₹6,000 ಕೋಟಿ ವೆಚ್ಚದಲ್ಲಿ ದೇಶಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಒಂದು ಲಕ್ಷದಷ್ಟು ವೈಫೈ ಹಾಟ್​ಸ್ಪಾಟ್​ಗಳನ್ನು ಸ್ಥಾಪಿಸುವ ಬೃಹತ್ ಯೋಜನೆಯ ಭಾಗ ಇದು.

ಇದನ್ನೂ ಓದಿ: ನಂದನ್ ನಿಲೇಕಣಿ ಪ್ರಕಾರ ಎಐ ಪರಿಣಾಮದಲ್ಲಿ ಕೆಲಸಗಳು ಎಲ್ಲಿ ಹೆಚ್ಚು ನಷ್ಟ, ಎಲ್ಲಿ ಹೆಚ್ಚು ಸೃಷ್ಟಿ?

₹1.15 ಕೋಟಿ ಸಬ್ಸಿಡಿ ನಷ್ಟ

ಯುಎಸ್‌ಒಎಫ್ (USOF) ಬೆಂಬಲಿತ ಯೋಜನೆಯಡಿ ಸ್ಥಾಪಿಸಲಾದ 24,333 ಹಾಟ್‌ಸ್ಪಾಟ್‌ಗಳಲ್ಲಿ 700 ಹಾಟ್‌ಸ್ಪಾಟ್‌ಗಳು ಸಬ್ಸಿಡಿ ಅವಧಿ ಮುಗಿದ ನಂತರ ಚಾಲನೆಗೆ ಬಂದವು ಮತ್ತು 8 ಹಾಟ್‌ಸ್ಪಾಟ್‌ಗಳನ್ನು ಎಂದಿಗೂ ಪ್ರಾರಂಭಿಸಲೇ ಇಲ್ಲ. ಇದರಿಂದಾಗಿ ಸಂಸ್ಥೆಗೆ ₹1.15 ಕೋಟಿ ಕಾರ್ಯಚರಣಾ (OPEX) ಸಬ್ಸಿಡಿ ನಷ್ಟವಾಯಿತು.

ವೈಫಲ್ಯಕ್ಕೆ ಪ್ರಮುಖ ಕಾರಣಗಳು

  • ಉಚಿತ ವೈ-ಫೈ ಸೇವೆಯನ್ನು ನಿಗದಿಗಿಂತ ಹೆಚ್ಚಿನ ಅವಧಿಗೆ ಮುಂದುವರಿಸಿದ್ದು.
  • ಸರಿಯಾದ ಮಾರುಕಟ್ಟೆ ಸಮೀಕ್ಷೆ ನಡೆಸದಿರುವುದು.
  • ಉಚಿತ ಬಳಕೆದಾರರನ್ನು ಪಾವತಿಸುವ ಗ್ರಾಹಕರನ್ನಾಗಿ (paying subscribers) ಪರಿವರ್ತಿಸುವಲ್ಲಿ ವಿಫಲವಾಗಿದ್ದು.

ಇದನ್ನೂ ಓದಿ: ಆಭರಣದಂಗಡಿಗಳಿಗೆ ಭರ್ಜರಿ ಸುದ್ದಿ; ಜಿಎಂಎಸ್ ಸ್ಕೀಮ್​ನಲ್ಲಿ ಶೇ. 1 ಕಮಿಷನ್ ಕೊಡಲು ಸರ್ಕಾರದ ಮುಂದೆ ಪ್ರಸ್ತಾವ

ಸಂಸದೀಯ ಸಮಿತಿಯ ಶಿಫಾರಸುಗಳು

ಬಿಜೆಪಿ ಸಂಸದ ಬೈಜಯಂತ್ ಜೈ ಪಾಂಡಾ ಅವರ ನೇತೃತ್ವದ ಸಾರ್ವಜನಿಕ ಉದ್ದಿಮೆಗಳ ಸಮಿತಿಯು (CoPU), ಭವಿಷ್ಯದಲ್ಲಿ ಸಾರ್ವಜನಿಕ ಹಣದಿಂದ ಕೈಗೊಳ್ಳುವ ಟೆಲಿಕಾಂ ಯೋಜನೆಗಳಲ್ಲಿ ಹೊಣೆಗಾರಿಕೆ ನಿಗದಿಪಡಿಸಲು, ನಷ್ಟಕ್ಕೆ ಕಾರಣರಾದವರ ವಿರುದ್ಧ ಆಂತರಿಕ ಪರಿಶೀಲನೆ ನಡೆಸಲು ಮತ್ತು ಕಾಲಮಿತಿಯ ಹೊಣೆಗಾರಿಕೆ ಚೌಕಟ್ಟನ್ನು (accountability framework) ರೂಪಿಸಲು ಸೂಚಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಯೋಧ್ಯೆ ರಾಮ ಮಂದಿರ ದೇಣಿಗೆ ಹಗರಣ ವದಂತಿಗೆ ತೆರೆ: 3,300 ಕೋಟಿ ರೂ. ಲೆಕ್ಕಪತ್ರ ಪಕ್ಕಾ – Kannada News | Ayodhya Ram Mandir Donations: Rs 3300 Crore Secure, Scam Rumors Debunked by Govt

ಅಯೋಧ್ಯೆ, ಆಗಸ್ಟ್​ 07: ಅಯೋಧ್ಯೆ(Ayodhya)ಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ಬೃಹತ್ ಮಟ್ಟದ ಆರ್ಥಿಕ ಅಕ್ರಮ ಅಥವಾ ದೇಣಿಗೆ ಹಗರಣ ನಡೆದಿದೆ ಎಂಬ ಆರೋಪಗಳು ಸಂಪೂರ್ಣವಾಗಿ ಆಧಾರರಹಿತ ಎಂದು ಸರ್ಕಾರಿ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ಭಕ್ತರು ನೀಡಿದ 3,300 ಕೋಟಿ ರೂ. ದೇಣಿಗೆ ಹಣದ ಪ್ರತಿಯೊಂದು ಪೈಸೆಯೂ ಸುರಕ್ಷಿತವಾಗಿದ್ದು, ಸಂಪೂರ್ಣವಾಗಿ ಲೆಕ್ಕಪರಿಶೋಧನೆಗೊಳಪಟ್ಟಿದೆ ಎಂದು ತಿಳಿಸಲಾಗಿದೆ. ಟ್ರಸ್ಟ್‌ನ ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ, ಬದಲಿಗೆ ಹುಂಡಿಯಲ್ಲಿರುವ ನಗದು ಎಣಿಕೆ ಮಾಡುವ ಸಂದರ್ಭದಲ್ಲಿ ನಡೆದ ಪ್ರತ್ಯೇಕ ಕಳ್ಳತನ ಇದಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸಾರ್ವಜನಿಕರಿಂದ ಹರಿದುಬಂದಿರುವ 3,300 ಕೋಟಿ ರೂ. ದೇಣಿಗೆಯನ್ನು ‘ಮೆಸರ್ಸ್ ವಿ. ಶಂಕರ್ ಅಯ್ಯರ್ ಆ್ಯಂಡ್ ಕಂಪನಿ’ ಎಂಬ ಸ್ವತಂತ್ರ ಬಾಹ್ಯ ಆಡಿಟರ್ಸ್ ಸಂಸ್ಥೆಯು ಸಂಪೂರ್ಣವಾಗಿ ತಪಾಸಣೆ ಮಾಡಿದೆ. ದೇವಾಲಯ ನಿರ್ಮಾಣಕ್ಕಾಗಿ ಸುಮಾರು1,800 ಕೋಟಿ ರೂ. ಹಾಗೂ ಭೂ ಖರೀದಿಗಾಗಿ 400 ಕೋಟಿ ರೂ. ವೆಚ್ಚ ಮಾಡಲಾಗಿದೆ. ಪ್ರತಿಯೊಂದು ವಹಿವಾಟನ್ನೂ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕವೇ ಮಾಡಲಾಗಿದ್ದು, ಯಾವುದೇ ನಗದು ರೂಪದ ವಹಿವಾಟು ನಡೆದಿಲ್ಲ.

ನಗದು ಎಣಿಕೆ ವೇಳೆ ಕಳ್ಳತನ ಮಾಡಿದ್ದು ಯಾರು?
ಹುಂಡಿಯಿಂದ ಹಣವನ್ನು ತೆಗೆದು ಯಂತ್ರಗಳ ಮೂಲಕ ಎಣಿಕೆ ಮಾಡುವ ಮುನ್ನ ಕೈಯಿಂದ ಬೇರ್ಪಡಿಸುವ ಸಂದರ್ಭದಲ್ಲಿ ಈ ಕಳ್ಳತನ ನಡೆದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೇಮಿಸಿದ್ದ ‘ಸೈನಿಕ್ ಸೆಕ್ಯುರಿಟಿ ಸರ್ವೀಸಸ್’ (SSS) ಏಜೆನ್ಸಿಯ ಆರು ಬಾಹ್ಯ ಉದ್ಯೋಗಿಗಳು ಈ ಕಳ್ಳತನ ಎಸಗಿದ್ದಾರೆ. ಸಿಸಿಟಿವಿ (CCTV) ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿ ತಕ್ಷಣವೇ ಬಂಧಿಸಲಾಗಿದೆ. ಬಂದಿತರಲ್ಲಿ ಯಾರೂ ರಾಮ ಮಂದಿರ ಟ್ರಸ್ಟ್ ಅಥವಾ ದೇವಾಲಯ ಆಡಳಿತದ ನೇರ ನೌಕರರಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ಓದಿ: ಶ್ರೀರಾಮನ ಚಿನ್ನಾಭರಣ ದೋಚಲು 200 ಖದೀಮರ ಜಾಲ: ಅಯೋಧ್ಯೆಯಿಂದ ರೈಲಿನಲ್ಲಿ ಕರ್ನಾಟಕಕ್ಕೆ ಬರ್ತಿತ್ತಾ ಕದ್ದ ಚಿನ್ನ?

ಐಪಿಎಸ್ ಅಧಿಕಾರಿಗಳಿಂದ ತನಿಖೆ: ಈ ಕಳ್ಳತನದ ಪ್ರತ್ಯೇಕ ಪ್ರಕರಣದ ತನಿಖೆಗೆ ಹಿರಿಯ ಐಪಿಎಸ್ ಅಧಿಕಾರಿಗಳ ನೇತೃತ್ವದ ‘ವಿಶೇಷ ತನಿಖಾ ತಂಡ’ (SIT) ರಚಿಸಲಾಗಿದ್ದು, ಸುಪ್ರೀಂ ಕೋರ್ಟ್ ಈ ಪ್ರಕ್ರಿಯೆಯ ಸಂಪೂರ್ಣ ಮೇಲ್ವಿಚಾರಣೆ ನಡೆಸುತ್ತಿದೆ. ದೇವಸ್ಥಾನದ ಸುತ್ತಮುತ್ತಲಿನ ಭೂಮಿ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳನ್ನೂ ಸರ್ಕಾರ ತಳ್ಳಿಹಾಕಿದೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಅಯೋಧ್ಯೆಯಲ್ಲಿ ಭೂಮಿ ಬೆಲೆ ಹೆಚ್ಚಾಗಿದ್ದರಿಂದ ಮತ್ತು ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ಪರಿಹಾರ ನೀಡಿದ್ದರಿಂದ ವೆಚ್ಚ ಹೆಚ್ಚಾಗಿದೆಯೇ ವಿನಃ ಯಾವುದೇ ಅಕ್ರಮವಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಚಲವಾದ ಭಕ್ತರ ನಂಬಿಕೆ: ಕಳ್ಳತನದ ಘಟನೆಯ ನಂತರವೂ ಅಯೋಧ್ಯೆ ರಾಮ ಮಂದಿರಕ್ಕೆ ಹರಿದುಬರುವ ಭಕ್ತರ ಸಂಖ್ಯೆ ಹಾಗೂ ದೇಣಿಗೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ. 2026-27ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (Q1) ಹುಂಡಿ ದೇಣಿಗೆಯ ಮೂಲಕವೇ ಪ್ರತಿ ತಿಂಗಳು ಸರಾಸರಿ 5 ಕೋಟಿ ರೂ. ನಗದು ದೇಣಿಗೆ ಹರಿದುಬರುತ್ತಿದೆ. ಈ ಘಟನೆಯ ನಂತರ ಹುಂಡಿ ನಗದು ಎಣಿಕೆ ಕೇಂದ್ರಗಳಲ್ಲಿ ಡಿಜಿಟಲ್ ಸ್ಕ್ಯಾನಿಂಗ್ ಮತ್ತು ಹೆಚ್ಚುವರಿ ಬಯೋಮೆಟ್ರಿಕ್ ಭದ್ರತಾ ಕ್ರಮಗಳನ್ನು ಜಾರಿಗೆ ತರಲು ಎಸ್‌ಬಿಐ ಹಾಗೂ ಟ್ರಸ್ಟ್ ಜಂಟಿಯಾಗಿ ನಿರ್ಧರಿಸಿವೆ.

Source link

ಈ ದಾಖಲೆಗಳು ನಿಮ್ಮ ಬಳಿಯಿದ್ರೆ ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾವಣೆ ಸುಲಭ  – Kannada News | Electricity Bill: How to change the name on the electricity bill

ಹೊಸ ಮನೆ ಖರೀದಿಸಿದಾಗ ಮನೆ ದಾಖಲೆಗಳನ್ನು ಮಾತ್ರವಲ್ಲ ಕರೆಂಟ್ ಬಿಲ್‌ನ್ನು (Electricity Bill)  ನಿಮ್ಮ ಹೆಸರಿನಲ್ಲಿ ಮಾಡಿಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ಇದರಿಂದ ಭವಿಷ್ಯದಲ್ಲಿ ನಿಮಗೆ ಸಮಸ್ಯೆಯಾಗಬಹುದು. ಕರೆಂಟ್ ಬಿಲ್ ನಿಮ್ಮ ತಂದೆ ಅಥವಾ ನೀವು ಯಾರಿಂದ ಮನೆ ಖರೀದಿ ಮಾಡಿದ್ದೀರಾ ಅವರ ಹೆಸರಿನಲ್ಲಿದ್ದರೆ ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ. ನಿಮ್ಮ ಹತ್ತಿರದ ವಿದ್ಯುತ್ ಸರಬರಾಜು ಕಂಪನಿ ಅಂದರೆ ನೀವು ಕರ್ನಾಟಕದ ನಿವಾಸಿಯಾಗಿದ್ದರೆ ಮೆಸ್ಕಾಂ, ಬೆಸ್ಕಾಂ ಕಚೇರಿಗೆ ಭೇಟಿ ನೀಡಿ ನಿಗದಿತ ಅರ್ಜಿ ಹಾಗೂ ದಾಖಲೆ ನೀಡಿದರೆ ಕರೆಂಟ್ ಬಿಲ್ ನಿಮ್ಮ ಹೆಸರಿನಲ್ಲಾಗುತ್ತದೆ. ಈ ಕುರಿತಾದ ಸಂಪೂರ್ಣ ಮಾಹಿತಿ ತಿಳಿಯಿರಿ.

ಕರೆಂಟ್ ಬಿಲ್‌ನಲ್ಲಿನ ಹೆಸರು ಬದಲಾವಣೆಗೆ ಬೇಕಾಗುವ ದಾಖಲೆಗಳು

  •  ಹಳೆಯ ಕರೆಂಟ್ ಬಿಲ್
  • ಆಸ್ತಿ ತೆರಿಗೆ ಪಾವತಿ ರಶೀದಿ
  • ಆಧಾರ್ ಕಾರ್ಡ್
  • ಬಾಂಡ್ ಪೇಪರ್ ಮೇಲಿನ ಇಂಡೆಮ್ನಿಟಿ ಬಾಂಡ್‌
  • ಆಸ್ತಿ ಖರೀದಿ ಪತ್ರ ಅಥವಾ ಖಾತಾ ಪ್ರಮಾಣಪತ್ರ

ಕರೆಂಟ್ ಬಿಲ್‌ನಲ್ಲಿನ ಹೆಸರು ಬದಲಾವಣೆ ಮಾಡುವುದು ಹೇಗೆ?

ಹಂತ 1: ನಿಮ್ಮ ಹತ್ತಿರದ ವಿದ್ಯುತ್ ಸರಬರಾಜು ಕಚೇರಿಯಿಂದ ಇಲ್ಲವಾದ್ರೆ ಆನ್‌ಲೈನ್ ಮೂಲಕ ಹೆಸರು ಬದಲಾವಣೆ ಅರ್ಜಿ ಪಡೆದು ವಿವರಗಳನ್ನು ಭರ್ತಿ ಮಾಡಿ.

ಹಂತ 2: ಮೇಲೆ ತಿಳಿಸಿದ ಎಲ್ಲಾ ಅಗತ್ಯ ದಾಖಲೆಗಳ ಜೆರಾಕ್ಸ್ ಅಥವಾ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ.

ಹಂತ 3: ಕಚೇರಿಯಲ್ಲಿ ಅಥವಾ ಆನ್‌ಲೈನ್‌ನಲ್ಲಿ ನಿಗದಿತ ಪ್ರಕ್ರಿಯೆ ಶುಲ್ಕ ಪಾವತಿ ಮಾಡಿ.

ಹಂತ 4: ಪರಿಶೀಲನೆ ಬಳಿಕ ಮುಂದಿನ ತಿಂಗಳ ಬಿಲ್ ನಲ್ಲಿ ಹೊಸ ಹೆಸರು ಆಪ್ ಡೇಟ್ ಆಗಿರುತ್ತದೆ.

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಕರೆಂಟ್ ಬಿಲ್ ನಿಮ್ಮ ಹೆಸರಿನಲ್ಲಿರುವುದು ಯಾಕೆ ಮುಖ್ಯ?

ಉತ್ತರ: ಕರೆಂಟ್ ಬಿಲ್ ಆಸ್ತಿ ಮಾಲೀಕತ್ವದ ಕಾನೂನಾತ್ಮಕ ಸಾಕ್ಷ್ಯ, ಸರ್ಕಾರಿ ಸಬ್ಸಿಡಿ ಪಡೆಯಲು, ಬ್ಯಾಂಕ್‌ ಸಾಲಗಳಿಗೆ ವಿಳಾಸದ ಪುರಾವೆಯಾಗಿದೆ. ಹೀಗಾಗಿ ನಿಮ್ಮ ಹೆಸರಿನಲ್ಲಿ ಇರುವುದು ಮುಖ್ಯವಾಗಿದೆ.

ಪ್ರಶ್ನೆ: ಕರೆಂಟ್ ಬಿಲ್ ನಿಮ್ಮ ಹೆಸರಿಗೆ ಮಾಡಲು ಯಾವೆಲ್ಲಾ ದಾಖಲೆಗಳು ಬೇಕು?

ಉತ್ತರ: ಕರೆಂಟ್ ಬಿಲ್ ಹೆಸರು ಬದಲಾವಣೆ ಮಾಡಲು ಹಳೆ ಕರೆಂಟ್ ಬಿಲ್, ಆಸ್ತಿ ಖರೀದಿ ಪತ್ರ ಅಥವಾ ಖಾತಾ ಪ್ರಮಾಣಪತ್ರ, ಆಸ್ತಿ ತೆರಿಗೆ ಪಾವತಿ ರಶೀದಿ, ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ ಬಾಂಡ್ ಪೇಪರ್ ಮೇಲಿನ ಇಂಡೆಮ್ನಿಟಿ ಬಾಂಡ್ ಈ ದಾಖಲೆಗಳು ಬೇಕು.

ಪ್ರಶ್ನೆ: ಕರೆಂಟ್ ಬಿಲ್ ನಲ್ಲಿನ ಹೆಸರು ಬದಲಾವಣೆ ಮಾಡುವುದು ಹೇಗೆ?

ಉತ್ತರ: ನೀವು ಕರ್ನಾಟಕದ ನಿವಾಸಿಯಾಗಿದ್ದರೆ ಮೆಸ್ಕಾಂ, ಬೆಸ್ಕಾಂ ಕಚೇರಿಗೆ ಭೇಟಿ ನೀಡಿ ನಿಗದಿತ ಅರ್ಜಿ ಹಾಗೂ ದಾಖಲೆ ನೀಡಿದ್ರೆ ಕರೆಂಟ್ ಬಿಲ್ ನಿಮ್ಮ ಹೆಸರಿನಲ್ಲಿ ಆಗುತ್ತದೆ.

Source link

ಹಂಪಿಯಲ್ಲಿ ಅಕ್ರಮ ಹೋಂಸ್ಟೇ, ಡ್ರಗ್ಸ್ ಹಾವಳಿ: 54 ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತ ‘ಸ್ವಯಂಪ್ರೇರಿತ’ ದೂರು – Kannada News | Lokayukta Takes Strict Action on Hampi Heritage Violations, Illegal Activities

ಹೊಸಪೇಟೆ ಆ.7: ವಿಶ್ವ ಪಾರಂಪರಿಕ ತಾಣವಾದ ಹಂಪಿಯಲ್ಲಿ ಪಾರಂಪರಿಕ ಸಂರಕ್ಷಣಾ ನಿಯಮಗಳ ಗಂಭೀರ ಉಲ್ಲಂಘನೆ, ಅಕ್ರಮ ವಾಣಿಜ್ಯ ಚಟುವಟಿಕೆಗಳು ಹಾಗೂ ನಿಯಮಬಾಹಿರ ಹೋಂಸ್ಟೇಗಳಿಗೆ ಅವಕಾಶ ನೀಡಿದ ಆರೋಪದಡಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಒಟ್ಟು 54 ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ (Suo Motu) ದೂರು ದಾಖಲಿಸಿಕೊಂಡಿರುವ ಅವರು, ಸೆಪ್ಟೆಂಬರ್ 1 ರೊಳಗೆ ‘ಕ್ರಮ ಕೈಗೊಂಡ ವರದಿ’ (Action Taken Report) ಸಲ್ಲಿಸುವಂತೆ ಆದೇಶಿಸಿದ್ದಾರೆ.

ಈ ಸಂಬಂಧ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು, ಹೊಸಪೇಟೆ ಹಾಗೂ ಕೊಪ್ಪಳ ವ್ಯಾಪ್ತಿಯ ಸಹಾಯಕ ಆಯುಕ್ತರು (AC), ತಹಸೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು (EO) ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (PDO) ನೋಟಿಸ್ ಜಾರಿ ಮಾಡಲಾಗಿದೆ.

ಉಪ ಲೋಕಾಯುಕ್ತರ ಮಾಹಿತಿಯಂತೆ, ಹಂಪಿ ಪಾರಂಪರಿಕ ಪ್ರಾಧಿಕಾರದ ಕೋರ್ ಝೋನ್ , ಬಫರ್ ಝೋನ್ ಹಾಗೂ ಪೆರಿಫೆರಲ್ ಝೋನ್ ಪ್ರದೇಶಗಳಲ್ಲಿ ಸುಮಾರು 200 ಅಕ್ರಮ ಹೋಂಸ್ಟೇಗಳು ಕಾರ್ಯನಿರ್ವಹಿಸುತ್ತಿವೆ. ಇದರ ಜೊತೆಗೆ ಹಂಪಿ ದೇವಾಲಯದ ಸಮೀಪವಿರುವ ಜನತಾ ಕಾಲೋನಿಯಲ್ಲಿಯೂ 250ಕ್ಕೂ ಹೆಚ್ಚು ಅಕ್ರಮ ಹೋಂಸ್ಟೇಗಳು ತಲೆಎತ್ತಿವೆ. ಪಾರಂಪರಿಕ ಪ್ರದೇಶಗಳು ಹಾಗೂ ಗಂಗಾವತಿ ವ್ಯಾಪ್ತಿಯ ಪ್ರವಾಸಿ ತಾಣಗಳಲ್ಲಿ ಮಾದಕ ದ್ರವ್ಯ (ಡ್ರಗ್ಸ್) ಜಾಲ ಹಾಗೂ ಅಕ್ರಮ ಮದ್ಯ ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ ಎಂಬ ದೂರುಗಳನ್ನೂ ಉಪ ಲೋಕಾಯುಕ್ತರು ಪರಿಗಣಿಸಿದ್ದಾರೆ.

ಇದನ್ನೂ ಓದಿ; ಗದಗ: ಹುಳು ಬಿದ್ದ ಆಹಾರ ಸರಬರಾಜು; ರಕ್ತ ಹೀರುವ ತಿಗಣೆ ಕಾಟಕ್ಕೆ ವಿದ್ಯಾರ್ಥಿಗಳು ವಿಲವಿಲ

ಯುನೆಸ್ಕೋ ಪಾರಂಪರಿಕ ನಿಯಮಾವಳಿಗಳ ಪ್ರಕಾರ, ಹಂಪಿಯ ಪುರಾತತ್ವ ಹಾಗೂ ಸಾಂಸ್ಕೃತಿಕ ಮಹತ್ವಕ್ಕೆ ಧಕ್ಕೆ ತರುವ ಯಾವುದೇ ಆರ್ಥಿಕ ಅಥವಾ ವಾಣಿಜ್ಯ ಚಟುವಟಿಕೆಗಳನ್ನು ಕೋರ್ ಮತ್ತು ಬಫರ್ ವಲಯಗಳಲ್ಲಿ ನಿಷೇಧಿಸಲಾಗಿದೆ. ಆದರೆ, ಸ್ಪಷ್ಟ ಮಾರ್ಗದರ್ಶಿ ಸೂತ್ರಗಳಿದ್ದರೂ ಅಧಿಕಾರಿಗಳು ಅಕ್ರಮ ರೆಸಾರ್ಟ್, ಹೋಂಸ್ಟೇ ಹಾಗೂ ಕಟ್ಟಡ ನಿರ್ಮಾಣ ತಡೆಯಲು ವಿಫಲರಾಗಿದ್ದು, ಕೆಲವು ಕಡೆ ನಿಯಮಗಳನ್ನು ಗಾಳಿಗೆ ತೂರಿ ಅನುಮತಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊನೆಯ ಆಷಾಢ ಶುಕ್ರವಾರ; ಚಾಮುಂಡಿ ದರ್ಶನ ಪಡೆದ ತೆಲುಗು ನಟ ಸುನಿಲ್ – Kannada News | Telugu Actor Sunil Visits Chamundeshwari Temple, Mysuru for Ashada Shukravara Darshan

ಮೈಸೂರಿನ ಚಾಮುಂಡಿಬೆಟ್ಟವು ಕೊನೆಯ ಆಷಾಢ ಶುಕ್ರವಾರದಂದು ಭಕ್ತಸಾಗರದಿಂದ ತುಂಬಿ ತುಳುಕುತ್ತಿದೆ. ಈ ಪವಿತ್ರ ದಿನದಂದು, ತೆಲುಗು ಚಿತ್ರರಂಗದ ಖ್ಯಾತ ನಟ ಸುನಿಲ್ ಅವರು ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಆಗಮಿಸಿದ್ದರು. ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಜಗನ್ಮಾತೆ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಭಕ್ತರ ದಂಡೇ ನೆರೆದಿತ್ತು. ದೇವಿಯ ದರ್ಶನಕ್ಕೆ ತೆರಳಿದ ನಟ ಸುನಿಲ್, ಭಕ್ತಿಯಿಂದ ದೇವಿಗೆ ನಮಿಸಿದರು.

ಆಷಾಢ ಮಾಸದ ಕೊನೆಯ ಶುಕ್ರವಾರವು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾವೇರಿ ವಿವಾದ: ಕರ್ನಾಟಕ ಸಿಎಂ ಭೇಟಿ ವಿಚಾರವಾಗಿ ಕೊನೆಗೂ ಮೌನ ಮುರಿದ ತಮಿಳುನಾಡು ಸಿಎಂ ವಿಜಯ್ – Kannada News | Cauvery water and Mekedatu Dispute: Tamil Nadu CM Vijay Breaks Silence on Karnataka CM Meeting

ತಮಿಳುನಾಡು ಸಿಎಂ ವಿಜಯ್ ಹಾಗೂ ಕರ್ನಾಟಕ ಸಿಎಂ ಡಿಕೆ ಶಿವಕುಮಾರ್Image Credit source: PTI

ಚೆನ್ನೈ, ಆಗಸ್ಟ್ 7: ಕಾವೇರಿ ನದಿ ನೀರು ಹಂಚಿಕೆ (Cauvery Dispute) ವಿವಾದ ಹಾಗೂ ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡು ಸಿಎಂ ಜೋಸೆಫ್ ವಿಜಯ್ (Joseph Vijay) ಹಾಗೂ ಕರ್ನಾಟಕ ಸಿಎಂ ಡಿಕೆ ಶಿವಕುಮಾರ್ ಮಾತುಕತೆ ನಿಗದಿಯಾದ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಆದರೆ, ಆಗಸ್ಟ್ 3 ರಂದು ನಡೆಯಬೇಕಿದ್ದ ಆ ಮಾತುಕತೆ ಆಗಿರಲೇ ಇಲ್ಲ. ಈ ವಿಚಾರವಾಗಿ ಇದೀಗ ಸಿಎಂ ವಿಜಯ್ ಮೌನಮುರಿದಿದ್ದಾರೆ. ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ತಮ್ಮ ಸರ್ಕಾರದ ಕಾನೂನು ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಸಕಾರಾತ್ಮಕ ಫಲಿತಾಂಶ ಸಿಗುವ ಸಾಧ್ಯತೆಯನ್ನು ಪರಿಗಣಿಸಿ, ಬೆಂಗಳೂರಿಗೆ ತೆರಳಿ ಕರ್ನಾಟಕದ ನಾಯಕರೊಂದಿಗೆ ಮಾತುಕತೆ ನಡೆಸುವ ಪ್ರಯತ್ನ ಮಾಡಬೇಕು ಎಂಬ ಆಲೋಚನೆ ತಮ್ಮಲ್ಲಿತ್ತು ಎಂದು ತಿಳಿಸಿದ್ದಾರೆ.

ಮೇಕೆದಾಟು ಯೋಜನೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಮತ್ತೆ ವಿವಾದ ತೀವ್ರಗೊಂಡಿರುವ ಬೆನ್ನಲ್ಲೇ, ಜೋಸೆಫ್ ವಿಜಯ್ ಮಹತ್ವದ ಹೇಳಿಕೆ ನೀಡಿದ್ದಾರೆ. ಕಾವೇರಿ ವಿಚಾರದಲ್ಲಿ ಅಗ್ಗದ ರಾಜಕೀಯ ಮಾಡಲು ತಾವು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಧಾನಸಭೆಯಲ್ಲಿ ಕಾವೇರಿ ವಿಚಾರ ಪ್ರಸ್ತಾಪಿಸಿದ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರಿಗೆ ಉತ್ತರಿಸಿದ ಸಿಎಂ ವಿಜಯ್, 1969ರಿಂದ ತಮಿಳುನಾಡು ಕಾವೇರಿ ವಿವಾದವನ್ನು ಹೇಗೆ ಎದುರಿಸಿದೆ ಎಂಬುದನ್ನು ವಿವರಿಸಿದರು. ಆರಂಭದಲ್ಲಿ ಮಾತುಕತೆಗೆ ಆದ್ಯತೆ ನೀಡಲಾಗಿತ್ತು. ಬಳಿಕ ಕಾನೂನು ಹೋರಾಟದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ನಿಲುವು ಮುಂದುವರಿದಿದೆ ಎಂದರು.

ಸರ್ವಪಕ್ಷ ಸಭೆ ಕರೆಯಲು ಉದಯನಿಧಿ ಸ್ಟಾಲಿನ್ ಆಗ್ರಹ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡಿನಲ್ಲಿ ರಾಜಕೀಯ ಒತ್ತಡವೂ ಹೆಚ್ಚಾಗಿದೆ. ಕರ್ನಾಟಕ ಯೋಜನೆ ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ಎಲ್ಲ ಪಕ್ಷಗಳು ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಆಗ್ರಹಿಸಿದ್ದಾರೆ.

ಮೇಕೆದಾಟು ಜಲವಿವಾದದ ಕುರಿತು ಸರ್ವಪಕ್ಷ ಸಭೆ ಕರೆಯಬೇಕು ಹಾಗೂ ತಮಿಳುನಾಡಿನ ಕೃಷಿ ಮತ್ತು ನೀರಾವರಿ ಹಕ್ಕುಗಳ ರಕ್ಷಣೆಗೆ ಒಗ್ಗಟ್ಟಿನ ಹೋರಾಟ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅಲ್ಲದೆ, ಕರ್ನಾಟಕ ಪ್ರವಾಸ ಕೈಗೊಳ್ಳುವ ಬಗ್ಗೆ ಸಿಎಂ ವಿಜಯ್ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಹಿಂದಿನ ಡಿಎಂಕೆ ಸರ್ಕಾರದ ವಿರುದ್ಧ ಸಚಿವ ಆದವ್ ಅರ್ಜುನ್ ವಾಗ್ದಾಳಿ

ಇದೇ ವೇಳೆ, ಮೇಕೆದಾಟು ವಿಚಾರದಲ್ಲಿ ಹಿಂದಿನ ಡಿಎಂಕೆ ಸರ್ಕಾರದ ವಿರುದ್ಧ ತಮಿಳುನಾಡು ಸಚಿವ ಆದವ್ ಅರ್ಜುನ್ ವಾಗ್ದಾಳಿ ನಡೆಸಿದ್ದಾರೆ. ಡಿಎಂಕೆ ಆಡಳಿತದ ಅವಧಿಯಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಮೇಕೆದಾಟು ಸಂಬಂಧಿತ ಅರ್ಜಿಗಳು ಹಲವು ಬಾರಿ ಹಿನ್ನಡೆ ಅನುಭವಿಸಿವೆ ಎಂದು ಆರೋಪಿಸಿದ್ದಾರೆ. ಸ್ಟಾಲಿನ್ ಸರ್ಕಾರದ ಅವಧಿಯಲ್ಲಿ ಸಲ್ಲಿಸಲಾಗಿದ್ದ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ವಜಾಗೊಂಡಿತ್ತು. ಬಳಿಕ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ಹಾಗೂ ಕ್ಯೂರೇಟಿವ್ ಅರ್ಜಿಯೂ ತಿರಸ್ಕೃತವಾಗಿವೆ ಎಂದು ಸಚಿವರು ವಿಧಾನಸಭೆಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಮೇಕೆದಾಟು ಯೋಜನೆಗೆ ತಮಿಳುನಾಡು ಕ್ಯಾತೆ, ಮತ್ತೊಂದು ಹೆಜ್ಜೆ ಮುಂದಿಟ್ಟ ವಿಜಯ್: ಸಿಎಂ ಡಿಕೆ ಶಿವಕುಮಾರ್ ಖಡಕ್ ಪ್ರತಿಕ್ರಿಯೆ

ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣವನ್ನು ಸಮರ್ಪಕವಾಗಿ ಮಂಡಿಸದಿರುವುದೇ ಈ ಹಿನ್ನಡೆಗೆ ಕಾರಣ ಎಂದು ಆರೋಪಿಸಿದ ಅವರು, ಹೊಸ ಕಾನೂನು ತಂಡದೊಂದಿಗೆ ಟಿವಿಕೆ ಸರ್ಕಾರ ಕಾವೇರಿ ಹಾಗೂ ಮೇಕೆದಾಟು ವಿಚಾರದಲ್ಲಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಎತ್ತರಕ್ಕೆ ಬೆಳೆದರೆ ಅವರನ್ನು ಮುಗಿಸಲು ಪಿತೂರಿ ಮಾಡ್ತಾರೆ’: ಸಚಿವ ಜಮೀರ್​​ ಹೀಗಂದಿದ್ಯಾರಿಗೆ? – Kannada News | Minister Zameer Says, ‘Successful People Are Targeted’; Sparks Speculation Over His Remark

ಚಿತ್ರದುರ್ಗ, ಆಗಸ್ಟ್​​ 07: ಯಾರಾದರೂ ಎತ್ತರಕ್ಕೆ ಬೆಳೆಯುತ್ತಾರೆ ಎಂದು ಗೊತ್ತಾದರೆ ಅವರನ್ನು ಮುಗಿಸುವ ಯತ್ನಗಳು ನಡೆಯುತ್ತವೆ ಎಂದು ಸಚಿವ ಜಮೀರ್​​ ಅಹ್ಮದ್​​ ಖಾನ್​​ ಹೇಳಿದ್ದಾರೆ. ತಮ್ಮನ್ನು ಸೇರಿ ಬಿ. ನಾಗೇಂದ್ರ ವಿಚಾರದಲ್ಲಿಯೂ ಇದೇ ರೀತಿ ಆಗಿದೆ ಎಂದವರು ತಿಳಿಸಿದ್ದಾರೆ. ಮಂತ್ರಿ ಸ್ಥಾನ ಸಿಗದಿದ್ದಾಗ ಅಸಮಾಧಾನಗಳು ಸಹಜ ಎಂದಿರುವ ಜಮೀರ್​​, ಹೈಕಮಾಂಡ್​​ಗೆ ಹಣ ಕೊಟ್ರೆ ಮಂತ್ರಿ ಆಗ್ತಾರೆ ಎಂಬ ಕೆಲ ಸ್ವಪಕ್ಷ ಶಾಸಕರ ಹೇಳಿಕೆಗಳನ್ನು ಅಲ್ಲಗಳೆದಿದ್ದಾರೆ. ಅವೆಲ್ಲವೂ ಊಹಾಪೋಹ ಎಂದವರು ತಿಳಿಸಿದ್ದಾರೆ. ತಮಗೆ ಯಾವುದೇ ಖಾತೆ ಕೊಟ್ಟರು ನಿಭಾಯಿಸೋದಾಗಿಯೂ ಅವರು ಇದೇ ವೇಳೆ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಶಾಂತಿ ಕ್ರಾಂತಿ’ ಸಿನಿಮಾದಲ್ಲಿ ನಟಿಸಿದ್ದ ಆ ಬಾಲಕಿ ಈಗ ಸ್ಟಾರ್ ನಟಿ – Kannada News | Shanti Kranti Child Artist to South Superstar: The Surprising Journey of Actress Sangitha

ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ‘ಶಾಂತಿ ಕ್ರಾಂತಿ’ ಸಿನಿಮಾವನ್ನು ಮರುಬಿಡುಗಡೆ ಮಾಡಬೇಕೆಂಬ ಸೋಷಿಯಲ್ ಮೀಡಿಯಾ ಟ್ರೆಂಡ್‌ಗೆ ನಟ ಮಾಸ್ಟರ್ ಆನಂದ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಕುರಿತು ವೀಡಿಯೋ ಹಂಚಿಕೊಂಡಿರುವ ಅವರು, ಚಿತ್ರದಲ್ಲಿ ಅಭಿನಯಿಸಿದ್ದ ಬಾಲ್ಯದ ಸಿಹಿ ನೆನಪುಗಳನ್ನು ಹಾಗೂ ನಟಿ ಸಂಗೀತಾ ಕುರಿತಾದ ಸ್ವಾರಸ್ಯಕರ ಸತ್ಯವನ್ನು ಹಂಚಿಕೊಂಡಿದ್ದಾರೆ.

ಬಾಲ್ಯದ ನೆನಪು ಹಾಗೂ ಬೆಂಬಲದ ಕರ್ತವ್ಯ

‘ಕಳೆದ 2-3 ದಿನಗಳಿಂದ ಶಾಂತಿ ಕ್ರಾಂತಿ ಸಿನಿಮಾವನ್ನು ರೀ-ರಿಲೀಸ್ ಮಾಡಬೇಕು ಎಂಬ ವಿಷಯದಲ್ಲಿ ನನಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನರು ಟ್ಯಾಗ್ ಮಾಡುತ್ತಿದ್ದಾರೆ. ಈ ಚಿತ್ರದ ರೀ-ರಿಲೀಸ್‌ಗೆ ಸಪೋರ್ಟ್ ಮಾಡುವುದು ನಮ್ಮ ಕರ್ತವ್ಯ. ಬಾಲ್ಯದಲ್ಲಿ ನಾವು ಬೆಳೆಯುವ ವಯಸ್ಸಿನಲ್ಲಿ ಮಾಡಿದ ಸಿನಿಮಾ ಇದು. ನಮಗೆ ಸಿಹಿ ನೆನಪುಗಳನ್ನು ತಂದುಕೊಡುವ ಇಂತಹ ಪ್ರಯತ್ನಕ್ಕೆ ನಾವು 100% ಬೆಂಬಲ ನೀಡುತ್ತೇವೆ’ ಎಂದು ಆನಂದ್ ಹೇಳಿದ್ದಾರೆ. ಆದರೆ, ಈ ಬಗ್ಗೆ ರವಿಚಂದ್ರನ್ ಅವರ ಕಡೆಯಿಂದ ಅಧಿಕೃತ ಮಾಹಿತಿ ಬರಬೇಕಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ಶಾಂತಿ ಕ್ರಾಂತಿ’ ರೀ-ರಿಲೀಸ್ ಬಗ್ಗೆ ರವಿಚಂದ್ರನ್ ಮಗನಿಂದ ಸಿಕ್ತು ಅಪ್​​ಡೇಟ್

ರವಿಚಂದ್ರನ್ ನುಡಿದಿದ್ದ ಆ ದಿನದ ಭವಿಷ್ಯ

ಇದೇ ವೇಳೆ ಮಾತನಾಡಿದ ಆನಂದ್, ‘ಶಾಂತಿ ಕ್ರಾಂತಿ’ ಚಿತ್ರೀಕರಣದ ಸಮಯದ ಒಂದು ರೋಚಕ ವಿಚಾರವನ್ನು ಹಂಚಿಕೊಂಡರು. ‘ಚಿತ್ರದಲ್ಲಿ ನನ್ನಂತೆಯೇ ಬಾಲಕಲಾವಿದೆಯಾಗಿ ನಟಿಸಿದ್ದ ಕಮಲಿ (ಸಂಗೀತಾ) ಅವರು, ‘ನನ್ನನ್ನು ನಿಮ್ಮ ಸಿನಿಮಾಗೆ ನಾಯಕಿ ಮಾಡಲ್ವಾ?’ ಎಂದು ರವಿಚಂದ್ರನ್ ಸರ್ ಅವರನ್ನು ಕೇಳಿದ್ದರು. ಅದಕ್ಕೆ ರವಿ ಸರ್, ‘ನಿನಗೆ ಈಗ ಎಷ್ಟು ವಯಸ್ಸು? 8 ವರ್ಷ ಅಲ್ವಾ? ಇನ್ನೊಂದು 8 ವರ್ಷ ಬಿಟ್ಟು ಬಾ, ನಿನ್ನನ್ನ ನಾಯಕಿ ಮಾಡ್ತೀನಿ’ ಎಂದಿದ್ದರು. ಆಶ್ಚರ್ಯವೆಂದರೆ 1991ರಲ್ಲಿ ‘ಶಾಂತಿ ಕ್ರಾಂತಿ’ ಬಂದ ನಂತರ, ಸರಿಯಾಗಿ 8 ವರ್ಷಗಳ ಬಳಿಕ (1998ರಲ್ಲಿ) ‘ಯಾರೇ ನೀನು ಚೆಲುವೆ’ ಚಿತ್ರದ ಮೂಲಕ ಸಂಗೀತಾ ಅವರನ್ನು ರವಿ ಸರ್ ನಾಯಕಿಯನ್ನಾಗಿ ಮಾಡಿದರು’ ಎಂದು ನೆನಪಿಸಿಕೊಂಡರು.

ನಟಿ ಸಂಗೀತಾ ಅವರಿಗೂ ಟ್ಯಾಗ್ ಮಾಡಿ ಎಂದ ಆನಂದ್

‘ಪ್ರಸ್ತುತ ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ದೊಡ್ಡ ನಟಿಯಾಗಿ ಗುರುತಿಸಿಕೊಂಡಿರುವ ಸಂಗೀತಾ (ಕಮಲಿ) ಅವರು ‘ಬರಿ ಬೆತ್ತಲೆ ಜನರ ನಡುವೆ’ ಹಾಡಿನ ಮೊದಲ ಸಾಲಿನಲ್ಲೇ ಬರುವ ಬಾಲಕಲಾವಿದೆ. ಆದ್ದರಿಂದ ಸೋಷಿಯಲ್ ಮೀಡಿಯಾದಲ್ಲಿ ಕೇವಲ ನನಗೆ ಮಾತ್ರವಲ್ಲದೆ, ‘ಶಾಂತಿ ಕ್ರಾಂತಿ’ ರೀ-ರಿಲೀಸ್‌ಗೆ ಬೆಂಬಲ ನೀಡಲು ನಟಿ ಸಂಗೀತಾ ಅವರಿಗೂ ಟ್ಯಾಗ್ ಮಾಡಿ’ ಎಂದು ಆನಂದ್ ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಭಾಪತಿ ಹೊರಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್​​ ಸಿದ್ಧತೆ: ಇಂದೇ ನಿಲುವಳಿ ನೋಟಿಸ್​​? – Kannada News | Karnataka Council Politics: Congress Prepares No Confidence Motion Against Chairman Basavaraj Horatti

ಸಭಾಪತಿ ಹೊರಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್​​ ಸಿದ್ಧತೆImage Credit source: IamMGoudar X Account

ಬೆಂಗಳೂರು, ಆಗಸ್ಟ್​​ 07: ಕರ್ನಾಟಕ ವಿಧಾನ ಪರಿಷತ್​​ ಸಭಾಪತಿ ವಿಚಾರದಲ್ಲಿ ರಾಜಕೀಯ ಹೈಡ್ರಾಮಾಗಳು ಮುಂದುವರಿದಿವೆ. ಇಂದು ಕಾಂಗ್ರೆಸ್​​ ಅವಿಶ್ವಾಸ ನಿರ್ಣಯ ನಿಲುವಳಿ ನೋಟಿಸ್ ನೀಡುವ ಸಾಧ್ಯತೆ ಹಿನ್ನೆಲೆ ಸಿಎಂ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ನೀಡಿದ್ದಾರೆ. ತಮ್ಮ ಸ್ಥಾನಕ್ಕೆ ಆಗಸ್ಟ್​​ 14ರಂದು ರಾಜೀನಾಮೆ ನೀಡೋದಾಗಿ ಹೇಳಿದ್ದ ಹೊರಟ್ಟಿ, ಇದೀಗ ರಾಜೀನಾಮೆಗೆ ಸಮಯಾವಕಾಶ ಬೇಕು ಎಂದಿದ್ದಾರೆ ಎನ್ನಲಾಗಿದೆ. ಇನ್ನು ಡಿಕೆಶಿ ಭೇಟಿ ಬಳಿಕ ಅಸಮಾಧಾನದಿಂದಲೇ ಸಿಎಂ ನಿವಾಸದಿಂದ ಹೊರಟ್ಟಿ ಹೊರ ಬಂದ ದೃಶ್ಯಗಳು ಕೂಡ ಕಂಡುಬಂದಿವೆ.

‘ಏನು ಹೇಳಿದ್ದೇನೋ ಅದಕ್ಕೆ ಬದ್ಧನಿದ್ದೇನೆ’

ಇನ್ನು ಸಿಎಂ ಡಿಕೆಶಿ ಭೇಟಿ ವಿಚಾರ ಸಂಬಂಧ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿದ್ದು, ಮೊನ್ನೆ ನಾನು ಏನು ಹೇಳಿದ್ದೇನೋ ಅದಕ್ಕೆ ಬದ್ಧನಿದ್ದೇನೆ. ಅವರು ಅವಿಶ್ವಾಸ ನಿರ್ಣಯ ಮಂಡಿಸಿದ್ರೆ ಮಂಡಿಸಲಿ. ಕಾನೂನು ಪ್ರಕಾರ ಏನು ಬೇಕಾದರೂ ಮಾಡಲಿ ಎಂದು ಬೆಂಗಳೂರಿನ ಸದಾಶಿವನಗರದ ಸಿಎಂ ಡಿಕೆಶಿ ನಿವಾಸದ ಬಳಿ ಹೇಳಿದ್ದಾರೆ.

ಇದನ್ನೂ ಓದಿ: ಸಭಾಪತಿ ಹುದ್ದೆ ತೊರೆಯಲು ಮುಂದಾದ ಬಸವರಾಜ ಹೊರಟ್ಟಿ: ಆಗಸ್ಟ್ 14ರಂದು ರಾಜೀನಾಮೆಗೆ ನಿರ್ಧಾರ

ಕಾಂಗ್ರೆಸ್​​ ಮುಂದಿನ ನಡೆ ಏನು?

ರಾಜೀನಾಮೆ ಬಗ್ಗೆ ಹೊರಟ್ಟಿ ಅಡ್ಡಗೋಡೆ ಮೇಲೆ ದೀಪವಿಟ್ಟಿರುವ ಕಾರಣ, ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ಬಸವರಾಜ ಹೊರಟ್ಟಿ ಪಕ್ಷಪಾತಿ ಧೋರಣೆ ಅನುಸರಿಸುತ್ತಿದ್ದು, ಬಿಜೆಪಿ ನಾಯಕರ ಜೊತೆಗೆ ಚರ್ಚಿಸಿ ಎಲ್ಲವನ್ನೂ ನಿರ್ಣಯಿಸುತ್ತಿದ್ದಾರೆ. ಅಲ್ಲದೆ ಸಭಾಪತಿ ಹೊರಟ್ಟಿ ಅವಧಿಯಲ್ಲಿ ಅಕ್ರಮ ನೇಮಕಾತಿ ಆಗಿದ್ದು, ಪರಿಷತ್​ನ 8 ಸಿಬ್ಬಂದಿ ನೇಮಕದ ಅಕ್ರಮದಲ್ಲಿ ಹೊರಟ್ಟಿ ಪಾತ್ರವಿದೆ ಎಂಬ 2 ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ಅವಿಶ್ವಾಸ ನಿರ್ಣಯ ಮಂಡನೆಗೆ ಆಡಳಿತ ಪಕ್ಷ ಸಿದ್ಧತೆ ನಡೆಸಿದೆ. ಅವಿಶ್ವಾಸ ನಿರ್ಣಯ ನಿಲುವಳಿ ನೋಟಿಸ್​ಗೆ ಅದಾಯಲೇ ಐವನ್ ಡಿಸೋಜಾ ತಯಾರಿ ಕೂಡ ನಡೆಸಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Hindu Symbol: ಸ್ವಸ್ತಿಕದ ಎರಡೂ ಬದಿಗಳಲ್ಲಿ ಎರಡು ನೇರ ರೇಖೆ ಏಕೆ ಎಳೆಯಲಾಗುತ್ತದೆ? ಆಧ್ಯಾತ್ಮಿಕ ರಹಸ್ಯ ಇಲ್ಲಿದೆ – Kannada News | Swastika’s Hidden Meaning: Why Two Lines Are Drawn Beside This Sacred Hindu Symbol

ಸ್ವಸ್ತಿಕದ ಎರಡೂ ಬದಿಗಳಲ್ಲಿ ಎರಡು ನೇರ ರೇಖೆImage Credit source: shutterstock.com

ಸನಾತನ ಧರ್ಮದಲ್ಲಿ, ಯಾವುದೇ ಶುಭ ಕಾರ್ಯ, ಹೊಸ ವ್ಯವಹಾರ ಅಥವಾ ಪೂಜಾ ಕೈಂಕರ್ಯಗಳನ್ನು ಪ್ರಾರಂಭಿಸುವ ಮೊದಲು ಸ್ವಸ್ತಿಕವನ್ನು ಚಿತ್ರಿಸುವ ಸಂಪ್ರದಾಯವು ಶತಮಾನಗಳಿಂದಲೂ ನಡೆದು ಬಂದಿದೆ. ಸ್ವಸ್ತಿಕವನ್ನು ವಿಘ್ನನಿವಾರಕ ಶ್ರೀ ಗಣೇಶನ ಗೋಚರ ಸಂಕೇತ ಹಾಗೂ ಸಕಾರಾತ್ಮಕ ಶಕ್ತಿಯ ಮೂಲವೆಂದು ಪರಿಗಣಿಸಲಾಗುತ್ತದೆ. ಮನೆಯ ಮುಖ್ಯ ದ್ವಾರ, ತಿಜೋರಿ, ವಾಹನಗಳು ಅಥವಾ ಪೂಜಾ ತಟ್ಟೆಯ ಮೇಲೆ ಸ್ವಸ್ತಿಕವನ್ನು ಬರೆಯುವಾಗ, ಅದರ ಎರಡು ಬದಿಗಳಲ್ಲಿ ಎರಡು ನೇರ ಲಂಬ ರೇಖೆಗಳನ್ನು ಎಳೆಯುವುದನ್ನು ನೀವು ಗಮನಿಸಿರಬಹುದು. ಬರಿ ಸ್ವಸ್ತಿಕವನ್ನು ಬರೆಯುವುದಕ್ಕಿಂತ ಈ ರೇಖೆಗಳನ್ನು ಎಳೆಯುವುದರ ಹಿಂದೆ ಆಳವಾದ ಧಾರ್ಮಿಕ, ಆಧ್ಯಾತ್ಮಿಕ ಮತ್ತು ವಾಸ್ತು ಆಧಾರಿತ ರಹಸ್ಯಗಳಿವೆ.

ಋದ್ಧಿ-ಸಿದ್ಧಿ ಮತ್ತು ಶುಭ-ಲಾಭ ದೈವಿಕ ಶಕ್ತಿಗಳ ಸಂಕೇತ:

ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಸ್ವಸ್ತಿಕವನ್ನು ಗಣಪತಿಯ ಸಾಕ್ಷಾತ್ ಸ್ವರೂಪವೆಂದು ಭಾವಿಸಲಾಗುತ್ತದೆ. ಸ್ವಸ್ತಿಕದ ಪಕ್ಕದಲ್ಲಿ ಎಳೆಯುವ ಎರಡು ಲಂಬ ರೇಖೆಗಳು ಗಣೇಶನ ಧರ್ಮಪತ್ನಿಯರಾದ ಋದ್ಧಿ (ಸಮೃದ್ಧಿ) ಮತ್ತು ಸಿದ್ಧಿ (ಜ್ಞಾನ/ಸಫಲತೆ) ಯ ಸಂಕೇತಗಳಾಗಿವೆ. ಹಾಗೆಯೇ, ಮತ್ತೊಂದು ಬದಿಯ ರೇಖೆಗಳು ಗಣೇಶನ ಪುತ್ರರಾದ ಶುಭ ಮತ್ತು ಲಾಭಗಳನ್ನು ಪ್ರತಿನಿಧಿಸುತ್ತವೆ. ಸ್ವಸ್ತಿಕದ ಎರಡೂ ಬದಿಗಳಲ್ಲಿ ಈ ರೇಖೆಗಳನ್ನು ಎಳೆಯುವುದರಿಂದ ಮನೆಯಲ್ಲಿ ಸಮೃದ್ಧಿ, ಸಫಲತೆ ಮತ್ತು ಲಾಭಗಳು ಶಾಶ್ವತವಾಗಿ ನೆಲೆಸುತ್ತವೆ ಎಂಬ ಆಳವಾದ ನಂಬಿಕೆಯಿದೆ.

ಧನಾತ್ಮಕ ಶಕ್ತಿಯನ್ನು ಬಂಧಿಸಿಡುವ ರಕ್ಷಾ ಕವಚ:

ವಾಸ್ತು ಮತ್ತು ಶಕ್ತಿ ವಿಜ್ಞಾನದ ಪ್ರಕಾರ, ಸ್ವಸ್ತಿಕವು ಅಪಾರ ಪ್ರಮಾಣದ ಸಕಾರಾತ್ಮಕ ಶಕ್ತಿಯನ್ನು (Positive Energy) ತನ್ನತ್ತ ಆಕರ್ಷಿಸುತ್ತದೆ. ಬರಿ ಸ್ವಸ್ತಿಕವನ್ನು ಬರೆದಾಗ ಆ ದೈವಿಕ ಶಕ್ತಿಯು ಸುತ್ತಲೂ ಹರಡಿ ಚದುರಿಹೋಗುವ ಸಾಧ್ಯತೆಯಿರುತ್ತದೆ. ಆದರೆ, ಎರಡೂ ಬದಿಗಳಲ್ಲಿ ನೇರ ರೇಖೆಗಳನ್ನು ಎಳೆದಾಗ, ಅದು ಆ ಸಕಾರಾತ್ಮಕ ಶಕ್ತಿಯನ್ನು ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಬಂಧಿಸಿಡುತ್ತದೆ (Energy Boundary). ಇದರಿಂದ ಆ ಸ್ಥಳದಲ್ಲಿ ಸುದೀರ್ಘ ಕಾಲ ಧನಾತ್ಮಕ ಸ್ಪಂದನಗಳು ನೆಲೆಸಿ, ನಕಾರಾತ್ಮಕ ಶಕ್ತಿಗಳು (Negative Energy) ಪ್ರವೇಶಿಸದಂತೆ ತಡೆಯುತ್ತವೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಪೂರ್ಣತೆಯ ಸಂಕೇತ ಮತ್ತು ಮಂಗಳಕರ ವಾತಾವರಣ:

ಶಾಸ್ತ್ರಗಳ ಪ್ರಕಾರ, ಬರಿ ಸ್ವಸ್ತಿಕವನ್ನು ಎಳೆಯುವುದು ಆಧ್ಯಾತ್ಮಿಕವಾಗಿ ಅಸಂಪೂರ್ಣ ಅಥವಾ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಎರಡೂ ಬದಿಗಳಲ್ಲಿ ಎರಡು ರೇಖೆಗಳನ್ನು ಎಳೆದಾಗ ಮಾತ್ರ ಸ್ವಸ್ತಿಕ ರಚನೆಯ ಪ್ರಕ್ರಿಯೆಯು ‘ಪೂರ್ಣ’ಗೊಳ್ಳುತ್ತದೆ. ಹೀಗೆ ಪೂರ್ಣಗೊಂಡ ಸ್ವಸ್ತಿಕವು ಮಂಗಳಕರ ವಾತಾವರಣವನ್ನು ಸೃಷ್ಟಿಸಿ, ಮನೆಯಲ್ಲಿ ಕೈಗೊಂಡ ಪ್ರತಿಯೊಂದು ಶುಭ ಕಾರ್ಯಗಳು ಯಾವುದೇ ವಿಘ್ನವಿಲ್ಲದೆ ಪೂರ್ಣಗೊಳ್ಳಲು ಅನುವು ಮಾಡಿಕೊಡುತ್ತದೆ.

ನಾಲ್ಕು ಪುರುಷಾರ್ಥಗಳ ಸಮತೋಲನ ಮತ್ತು ರಕ್ಷಣೆ:

ಮಾನವ ಜೀವನದ ನಾಲ್ಕು ಮುಖ್ಯ ಗುರಿಗಳಾದ ಧರ್ಮ, ಅರ್ಥ, ಕಾಮ, ಮತ್ತು ಮೋಕ್ಷಗಳನ್ನು ಸ್ವಸ್ತಿಕದ ನಾಲ್ಕು ಭುಜಗಳು ಸೂಚಿಸುತ್ತವೆ. ಇವುಗಳನ್ನು ಜೀವನದಲ್ಲಿ ಸಮತೋಲನದಲ್ಲಿಟ್ಟು ಕಾಪಾಡುವ ದೈವಿಕ ರಕ್ಷಾ ಕವಚವಾಗಿ ಸ್ವಸ್ತಿಕದ ಪಕ್ಕದಲ್ಲಿರುವ ಈ ಲಂಬ ರೇಖೆಗಳು ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಮನೆ ಅಥವಾ ಪೂಜಾ ಸ್ಥಳಗಳಲ್ಲಿ ಸ್ವಸ್ತಿಕವನ್ನು ಬರೆಯುವಾಗ ಎಂದಿಗೂ ಬರಿ ಸ್ವಸ್ತಿಕವನ್ನು ಬಿಡದೆ, ಅದರ ಎರಡೂ ಬದಿಗಳಲ್ಲಿ ಜೋಡಿ ನೇರ ರೇಖೆಗಳನ್ನು ಎಳೆಯುವುದರಿಂದ ಮಾತ್ರ ಧರ್ಮಗ್ರಂಥಗಳಲ್ಲಿ ಹೇಳಲಾದ ಸಂಪೂರ್ಣ ಶುಭ ಫಲಗಳು ಲಭಿಸುತ್ತವೆ ಎಂದು ನಂಬಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version