IND vs SL: ಶುಭ್​ಮನ್ ಗಿಲ್​ಗೆ ಗಾಯ; ಮೊದಲ ದಿನ ಕಣಕ್ಕಿಳಿಯದ ನಾಯಕ – Kannada News | India vs SL Practice Match: Gill Injured, KL Rahul Captains in Colombo

ಭಾರತ ಹಾಗೂ ಶ್ರೀಲಂಕಾ ಕ್ರಿಕೆಟ್ ಇಲೆವೆನ್ ನಡುವಿನ ಮೂರು ಪಂದ್ಯಗಳ ಅಭ್ಯಾಸ ಪಂದ್ಯ ಇಂದಿನಿಂದ ಕೊಲಂಬೊದ ಎನ್‌ಸಿಸಿ ಮೈದಾನದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಇಲೆವೆನ್ ತಂಡ ಮೊದಲು ಬ್ಯಾಟಿಂಗ್‌ ಮಾಡತ್ತಿದೆ. ಇತ್ತ ಭಾರತ ತಂಡದಲ್ಲಿ ನಾಯಕನ ಬದಲಾವಣೆಯಾಗಿದ್ದು, ಈ ಅಭ್ಯಾಸ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ನಿಯಮಿತ ನಾಯಕ ಶುಭ್​ಮನ್ ಗಿಲ್ ಅಭ್ಯಾಸದ ಸಮಯದಲ್ಲಿ ಬೆರಳಿಗೆ ಗಾಯ ಮಾಡಿಕೊಂಡ ಕಾರಣದಿಂದಾಗಿ ಅವರು ಮೊದಲ ಕಣಕ್ಕಿಳಿದಿಲ್ಲ. ಹೀಗಾಗಿ ಅವರ ಬದಲಿಗೆ ರಾಹುಲ್ ತಂಡದ ನಾಯಕತ್ವವಹಿಸಿದ್ದಾರೆ.

ಅಭ್ಯಾಸದ ವೇಳೆ ಗಾಯ

ಅಭ್ಯಾಸ ಪಂದ್ಯ ಆರಂಭಕ್ಕೆ ಒಂದು ದಿನ ಮುಂಚಿತವಾಗಿ ಅಂದರೆ ಆಗಸ್ಟ್ 6 ರಂದು ತಂಡದೊಂದಿಗೆ ಬ್ಯಾಟಿಂಗ್‌ ಅಭ್ಯಾಸ ಮಾಡುವ ಸಮಯದಲ್ಲಿ ಶುಭ್​ಮನ್ ಗಿಲ್ ತಮ್ಮ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಕೂಡಲೇ ಮೈದಾನಕ್ಕೆ ಬಂದಿದ್ದ ಫಿಸಿಯೋ, ಅವರನ್ನು ಪರೀಕ್ಷಿಸಿ ಗಿಲ್ ಅವರ ಕೈಗೆ ಬ್ಯಾಂಡೆಜ್ ಸುತ್ತಿದ್ದರು. ಇದಾದ ಬಳಿಕ ಗಿಲ್ ತಮ್ಮ ಬ್ಯಾಟಿಂಗ್‌ ಅಭ್ಯಾಸವನ್ನು ಮುಂದುವರೆಸಿದ್ದರು. ಆದರೆ ಫಿಲ್ಡಿಂಗ್ ಅಭ್ಯಾಸದ ವೇಳೆ ಗಿಲ್ ಗಾಯಗೊಂಡಿರುವ ಕೈಗೆ ಚೆಂಡು ಮತ್ತೆ ಬಡಿದಿತ್ತು. ಇದರಿಂದ ತೀವ್ರ ನೋವಿಗೆ ಒಳಗಾಗಿದ್ದ ಗಿಲ್ ತಮ್ಮ ಅಭ್ಯಾಸವನ್ನು ಮೊಟಕುಗೊಳಿಸಿದ್ದರು. ಆ ಸಮಯದಲ್ಲಿ ಗಿಲ್ ಅವರ ಗಾಯದ ತೀವ್ರತೆಯ ಬಗ್ಗೆ ಬಿಸಿಸಿಐ ಏನನ್ನೂ ಹೇಳಿರಲಿಲ್ಲ. ಆದರೀಗ ಅವರು ಅಭ್ಯಾಸ ಪಂದ್ಯದ ಮೊದಲ ದಿನದಂದು ತಂಡದೊಂದಿಗೆ ಕಣಕ್ಕಿಳಿದಿಲ್ಲ

ಮಾಹಿತಿ ನೀಡಿದ ಬಿಸಿಸಿಐ

ಶುಭ್​ಮನ್ ಗಿಲ್ ಅವರ ಗಾಯದ ಬಗ್ಗೆ ಬಿಸಿಸಿಐ ಮಾಹಿತಿ ಹಂಚಿಕೊಂಡಿದ್ದು, ಗುರುವಾರ ಅಭ್ಯಾಸದ ಸಮಯದಲ್ಲಿ ನಾಯಕ ಶುಭಮನ್ ಗಿಲ್ ಅವರ ಬಲಗೈ ಉಂಗುರದ ಬೆರಳಿಗೆ ಗಾಯವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ, ಮೂರು ದಿನಗಳ ಅಭ್ಯಾಸ ಪಂದ್ಯದ ಮೊದಲ ದಿನದಂದು ಮೈದಾನಕ್ಕೆ ಇಳಿಯದಂತೆ ಅವರಿಗೆ ಸೂಚಿಸಲಾಗಿದೆ. ಬಿಸಿಸಿಐ ವೈದ್ಯಕೀಯ ತಂಡವು ಅವರ ಗಾಯ ಮತ್ತು ಚೇತರಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಮಾಹಿತಿ ಪ್ರಕಾರ, ಶುಭ್​ಮನ್ ಗಿಲ್ ಅವರ ಗಾಯ ತುಂಬಾ ಗಂಭೀರವಾಗಿಲ್ಲ. ಹೀಗಾಗಿ ಆಗಸ್ಟ್ 15 ರಂದು ಗಾಲೆಯಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೂ ಮೊದಲು ಅವರು ಸಂಪೂರ್ಣವಾಗಿ ಫಿಟ್ ಆಗುವ ಸಾಧ್ಯತೆಗಳಿವೆ. ಆದಾಗ್ಯೂ, ಅಭ್ಯಾಸ ಅವಧಿಗೆ ಆಡುವ ಹನ್ನೊಂದರ ಬಳಗವನ್ನು ಘೋಷಿಸದ ಕಾರಣ, ಗಿಲ್ ಟೀಂ ಇಂಡಿಯಾದ ಬ್ಯಾಟಿಂಗ್ ಸಮಯದಲ್ಲಿ ಮೈದಾನಕ್ಕೆ ಇಳಿಯಬಹುದು. ಆದಾಗ್ಯೂ, ಈ ನಿರ್ಧಾರವು ತಂಡದ ಆಡಳಿತ ಮಂಡಳಿಯ ಮೇಲೆ ಅವಲಂಬಿತವಾಗಿರುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಪಂಚತಾರಾ ಹೋಟೆಲ್​ಗಳ ಮೇಲೆ ದಿಢೀರ್ ರೇಡ್: ಆಹಾರ ಗುಣಮಟ್ಟ, ಸಂಸ್ಕರಣೆ, ಪರಿಶುದ್ಧತೆಯ ಪರಿಶೀಲನೆ – Kannada News | Bengaluru 5 Star Hotel Raids: Rotten Vegetables and Onions Found During Food Safety Checks

ಬೆಂಗಳೂರಿನ 5 ಸ್ಟಾರ್ ಹೋಟೆಲ್​ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ ಅಧಿಕಾರಿಗಳುImage Credit source: tv9

ಬೆಂಗಳೂರು, ಆಗಸ್ಟ್ 7: ಬೆಂಗಳೂರಿನ (Bengaluru) ಪಂಚತಾರಾ ಹೋಟೆಲ್‌ಗಳಿಗೆ ಆರೋಗ್ಯ ಸುರಕ್ಷತಾ ವಿಭಾಗದ ಅಧಿಕಾರಿಗಳು ಶುಕ್ರವಾರ ಶಾಕ್ ನೀಡಿದ್ದಾರೆ. ಆಹಾರದ ಗುಣಮಟ್ಟ, ಸಂಸ್ಕರಣೆ ಮತ್ತು ಸ್ವಚ್ಛತೆ ಪರಿಶೀಲನೆಗಾಗಿ 30ಕ್ಕೂ ಹೆಚ್ಚು ಅಧಿಕಾರಿಗಳ ತಂಡ ವಿವಿಧ ಪಂಚತಾರಾ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಕೆಲ ಹೋಟೆಲ್‌ಗಳಲ್ಲಿ ಕಳಪೆ ಗುಣಮಟ್ಟದ ತರಕಾರಿಗಳು, ಕೊಳೆತ ಈರುಳ್ಳಿ ಹಾಗೂ ಆಲೂಗಡ್ಡೆ ಪತ್ತೆಯಾಗಿವೆ.

ಆರೋಗ್ಯ ಸಚಿವ ಯುಟಿ ಖಾದರ್ ಸೂಚನೆ ಮೇರೆಗೆ ಕ್ರಮ

ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಸೂಚನೆ ಮೇರೆಗೆ ಆರೋಗ್ಯ ಸುರಕ್ಷತಾ ವಿಭಾಗದ ಅಧಿಕಾರಿಗಳು ಬೆಂಗಳೂರಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. 30ಕ್ಕೂ ಹೆಚ್ಚು ಅಧಿಕಾರಿಗಳ ತಂಡ ನಗರದ ಪಂಚತಾರಾ ಹೋಟೆಲ್‌ಗಳಿಗೆ ತೆರಳಿ ಆಹಾರದ ಗುಣಮಟ್ಟ, ಅಡುಗೆ ಪ್ರಕ್ರಿಯೆ, ಸ್ವಚ್ಛತೆ ಹಾಗೂ ಆಹಾರ ಸಂಗ್ರಹಣಾ ವ್ಯವಸ್ಥೆಯನ್ನು ಪರಿಶೀಲಿಸಿದೆ.

ಶಾಂಗ್ರೀಲಾ ಹೋಟೆಲ್‌ನಲ್ಲಿ ಕಳಪೆ ತರಕಾರಿ ಪತ್ತೆ

ಶಾಂಗ್ರೀಲಾ ಹೋಟೆಲ್‌ನಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಅಡುಗೆ ಕೋಣೆಯಲ್ಲಿನ ಕೆಲ ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಅನುಮಾನ ಮೂಡಿದೆ. ಪರಿಶೀಲನೆ ವೇಳೆ ಕಳಪೆ ಗುಣಮಟ್ಟದ ತರಕಾರಿಗಳು, ಕೊಳೆತ ಈರುಳ್ಳಿ ಹಾಗೂ ಆಲೂಗಡ್ಡೆ ಪತ್ತೆಯಾಗಿವೆ. ಅಧಿಕಾರಿಗಳು ಅವುಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಇನ್ನು ಕೆಲವು ಹೋಟೆಲ್‌ಗಳ ಮೇಲಿನ ದಾಳಿ ವೇಳೆ ಅಜಿನೊಮೋಟೊ ಸೇರಿದಂತೆ ಕೆಲವು ಹಾನಿಕಾರಕ ಅಂಶಗಳಿರುವ ಶಂಕಿತ ಪದಾರ್ಥಗಳು ಪತ್ತೆಯಾಗಿವೆ ಎನ್ನಲಾಗಿದೆ. ಅವುಗಳ ಮಾದರಿಯನ್ನೂ ಅಧಿಕಾರಿಗಳು ಸಂಗ್ರಹಿಸಿ ಲ್ಯಾಬ್ ಪರೀಕ್ಷೆಗೆ ಕಳುಹಿಸಿದ್ದಾರೆ. ಪರೀಕ್ಷಾ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಲಲಿತ್ ಅಶೋಕ್ ಹೋಟೆಲ್‌ನಲ್ಲೂ ಪರಿಶೀಲನೆ

ಇದೇ ವೇಳೆ ಲಲಿತ್ ಅಶೋಕ್ ಹೋಟೆಲ್‌ಗೂ ಆರೋಗ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. 10ಕ್ಕೂ ಹೆಚ್ಚು ಅಧಿಕಾರಿಗಳು ಅಡುಗೆ ಕೋಣೆ, ಆಹಾರ ಸಂಗ್ರಹಿಸುವ ಸ್ಥಳ ಹಾಗೂ ತಯಾರಿಸಲಾದ ಖಾದ್ಯಗಳನ್ನು ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳ ಸುತ್ತಮುತ್ತ ಜಂಕ್ ಫುಡ್ ನಿಷೇಧ: ಉದ್ದೇಶವೇನು?

ಪಂಚತಾರಾ ಹೋಟೆಲ್‌ಗಳಲ್ಲೂ ಆಹಾರ ಸುರಕ್ಷತಾ ನಿಯಮಗಳ ಪಾಲನೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ. ಲ್ಯಾಬ್ ಪರೀಕ್ಷೆಯ ವರದಿ ಬಳಿಕ ಆಹಾರ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಯಾವುದೇ ಉಲ್ಲಂಘನೆ ದೃಢಪಟ್ಟರೆ ನಿಯಮಾನುಸಾರ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸಿಗರ ಮನವೊಲಿಕೆಗೆ ಮಣಿದ ಬಸವರಾಜ ಹೊರಟ್ಟಿ: ಸಭಾಪತಿ ಸ್ಥಾನಕ್ಕೆ ರಾಜೀನಾಮೆ – Kannada News | Basavaraj Horatti Resigns as Karnataka Legislative Council Chairman

ಬೆಂಗಳೂರು, ಆಗಸ್ಟ್​​ 07: ಸಾಕಷ್ಟು ರಾಜಕೀಯ ಬೆಳವಣಿಗಳ ಬಳಿಕ ಕೊನೆಗೂ ಕರ್ನಾಟಕ ವಿಧಾನ ಪರಿಷತ್​​ನ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಿದ್ದಾರೆ. ಸಿಎಂ ಡಿಕೆಶಿ, ಕೆಪಿಸಿಸಿ ಅಧ್ಯಕ್ಷರ ಸುದೀರ್ಘ ಮನವೊಲಿಕೆ ಬಳಿಕ ಅವರು ಹುದ್ದೆ ತೊರೆದಿದ್ದು, ಸ್ವಇಚ್ಛೆಯಿಂದ ರಾಜೀನಾಮೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಹೊರಟ್ಟಿ ಅವರನ್ನು ಹಂಗಾಮಿ ಸಭಾಪತಿಯಾಗಿ ಸರ್ಕಾರ ಮುಂದುವರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಕಾರ್ಯಕ್ರಮದ ಬಳಿಕವೂ ವಿಧಾನಸೌಧದ ಸಭಾಪತಿಗಳ ಕಚೇರಿಯಲ್ಲಿ ಹೊರಟ್ಟಿ ಜೊತೆ ಸಿಎಂ ಡಿಕೆಶಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಚರ್ಚೆ ನಡೆಸಿದ್ದರು. ಅದಕ್ಕೂ ಮೊದಲು ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಬಸವರಾಜ ಹೊರಟ್ಟಿ ಭೇಟಿ ನೀಡಿದ್ದರು. ಸಿಎಂ ಜೊತೆ ಮಾತುಕತೆ ಬಳಿಕ ಬಹಳ ಸಿಟ್ಟಿನಿಂದಲೇ ಹೊರಬಂದಿದ್ದರು.

ಇದನ್ನೂ ಓದಿ: ಸಭಾಪತಿ ಹೊರಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್​​ ಸಿದ್ಧತೆ: ಇಂದೇ ನಿಲುವಳಿ ನೋಟಿಸ್​​?

ಸಿಎಂ ಭೇಟಿ ಬಗ್ಗೆ ಹೊರಟ್ಟಿ ಸ್ಪಷ್ಟನೆ

ಆಗಸ್ಟ್​​ 14ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ನಿನ್ನೆಯೇ ಹೊರಟ್ಟಿ ಅವರು ಘೋಷಿಸಿದ್ದರು. ಈ ನಡುವೆ ಇಂದು ಅವರು ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದು ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಭೇಟಿ ಹಿಂದನ ಕಾರಣವನ್ನು ಅವರು ಟಿವಿ9 ಜೊತೆ ಬಿಚ್ಚಿಟ್ಟಿದ್ದು, ಕೊನೇಯದಾಗಿ ಧನ್ಯವಾದ ಹೇಳಲು ಡಿಕೆಶಿ ಅವರ ಮನೆಗೆ ತೆರಳಿದ್ದೆ. ಇಲ್ಲಿಯವರೆಗೆ ಸಹಕಾರ ನೀಡಿದ್ದಕ್ಕೆ ಧನ್ಯವಾದ ಎಂದು ತಿಳಿಸಿರೋದಾಗಿ ಹೇಳಿದ್ದಾರೆ. ಕಾಂಗ್ರೆಸಿರ ಆರೋಪದ ಬಗ್ಗೆಯೂ ಪ್ರತಿಕ್ರಿಯಿಸಿರುವ ಅವರು, ಈಗ ಆ ಬಗ್ಗೆ ಮಾತನಾಡುತ್ತಿರೋದೇಕೆ. 23 ಮಂದಿ ಕಾಂಗ್ರೆಸ್​​ ಸದಸ್ಯರೇ ನನ್ನ ಕೆಲಸವನ್ನ ಕೊಂಡಾಡಿದ್ದಾರೆ. ಈಗ ಈ ರೀತಿ ಹೇಳಿದರೆ ಆಗಿನ ಹೇಳಿಕೆಗೆ ಏನು ಅರ್ಥವಿದೆ ಎಂದೂ ಅವರು ಪ್ರಶ್ನಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:05 pm, Fri, 7 August 26

Source link

ಆರ್ಥಿಕ ಸಂಕಷ್ಟದಲ್ಲೂ ವಿದೇಶಿಗರ ನೆರವಿನ ಹಸ್ತಕ್ಕೆ ಕೈಚಾಚದ ಬೆಂಗಳೂರು ಸ್ಟಾರ್ಟಪ್; ಭಾರತದ ಮೊದಲ ಎಂಆರ್​ಐ ನಿರ್ಮಿಸಿದವನ ಕಥೆ – Kannada News | India’s first indigenous MRI stayed in the country, as its founder rejected MNC offer

ಎಂಆರ್​ಐ ಸ್ಕ್ಯಾನರ್Image Credit source: Getty Images

ಹಣಕಾಸು ಸಂಕಷ್ಟ ಬಂದಾಗ ದೇಶದ ಹಿತದ ಬಗ್ಗೆ ಯೋಚನೆ ಮಾಡುವ ಉದ್ಯಮಿಗಳು ಬಹಳ ವಿರಳ. ಇಂಥ ಅಪರೂಪದ ಆಂಟ್ರಪ್ರನ್ಯೂರ್​ಗಳಲ್ಲಿ ಒಬ್ಬರು ಅರ್ಜುನ್ ಅರುಣಾಚಲಂ. ಬೆಂಗಳೂರು ಮೂಲದ ‘ವೊಕ್ಸೆಲ್‌ಗ್ರಿಡ್ಸ್’ (Voxelgrids) ಸ್ಟಾರ್ಟಪ್​ನ ಸ್ಥಾಪಕರು. ಭಾರತದ ಮೊದಲ ಸಂಪೂರ್ಣ ದೇಶೀಯವಾಗಿ ಎಂಆರ್​ಐ ಸ್ಕ್ಯಾನರ್ ಯಂತ್ರವನ್ನು ಅಭಿವೃದ್ಧಿಪಡಿಸಿದ ಕೀರ್ತಿ ಈ ಸ್ಟಾರ್ಟಪ್​ನದ್ದು. ಬಹಳ ಸಂಕಷ್ಟ, ಹೋರಾಟಗಳಲ್ಲಿ ಎಂಆರ್​ಐ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇವರ ಸ್ಟಾರ್ಟಪ್ ಫಂಡಿಂಗ್ ಇಲ್ಲದೇ ಹತಾಶೆಯ ಸ್ಥಿತಿಯಲ್ಲಿದ್ದಾಗ ವಿದೇಶಿಗರ ಪಾಲಾಗುವ ಅವಕಾಶ ಇತ್ತು. ಅಂಥ ಸಂದರ್ಭದಲ್ಲೂ ಎಂಎನ್​ಸಿ ಕಂಪನಿ ಒಡ್ಡಿದ ನೆರವಿನ ಹಸ್ತಕ್ಕೆ ಅರ್ಜುನ್ ಕೈ ಚಾಚಲಿಲ್ಲ. ಒಂದು ವೇಳೆ, ಒತ್ತಡಕ್ಕೆ ಸಿಲುಕಿದ್ದರೆ ಭಾರತದ ಮೊದಲ ಎಂಆರ್​ಐ ಸ್ಕ್ಯಾನರ್ ಯಂತ್ರವು ವಿದೇಶಿಗರ ಪಾಲಾಗಿ ಹೋಗುತ್ತಿತ್ತು. ಟಾಟಾ ಟ್ರಸ್ಟ್ಸ್ ಮತ್ತು ಜೋಹೋ ಸಂಸ್ಥೆಗಳು (Zoho) ಸಕಾಲಿಕವಾಗಿ ನೀಡಿದ ಫಂಡಿಂಗ್​ನಿಂದ ವೊಕ್ಸೆಲ್​ಗ್ರಿಡ್ಸ್ ಮತ್ತು ಅದರ ಎಂಆರ್​ಐ ಸ್ಕ್ಯಾನರ್​ಗೆ ಹೊಸ ಜೀವ ಸಿಕ್ಕಿತ್ತು.

ಅರ್ಜುನ್ ಅರುಣಾಚಲಂಗೆ ಲಾಭಕ್ಕಿಂತ ದೇಶವಾಸಿಗಳೇ ಮುಖ್ಯವಾದರು…

ಬೆಂಗಳೂರಿನ ‘ವೊಕ್ಸೆಲ್‌ಗ್ರಿಡ್ಸ್’, ಭಾರತದಲ್ಲಿ ಅತ್ಯಂತ ಅಗ್ಗದ ದರದಲ್ಲಿ ಲಭ್ಯವಾಗುವ ಎಂಆರ್‌ಐ ಸ್ಕ್ಯಾನರ್ ಅನ್ನು ಅಭಿವೃದ್ಧಿಪಡಿಸಿದೆ. ಅದರ ಸ್ಥಾಪಕರಾದ ಅರ್ಜುನ್ ಅರುಣಾಚಲಂ ಅವರು ಜೆಇ ಹೆಲ್ತ್‌ಕೇರ್ (GE HealthCare) ಮಾಜಿ ವಿಜ್ಞಾನಿ ಹಾಗೂ ಐಐಟಿ ಬಾಂಬೆಯ ಮಾಜಿ ಪ್ರಾಧ್ಯಾಪಕರು. ಎಂಆರ್‌ಐ ಯಂತ್ರಗಳ ಅಭಿವೃದ್ಧಿಯು ಕಠಿಣ ಹಾಗೂ ಅಪಾರ ಬಂಡವಾಳ ಬೇಡುವ ಪ್ರಕ್ರಿಯೆಯಾಗಿದೆ.

ಇದನ್ನೂ ಓದಿ: ಬಿಎಸ್ಸೆನ್ನೆಲ್ ವೈಫೈ ಯೋಜನೆ ನೀರಲ್ಲಿ ಹೋಮ; ಸಾವಿರಾರು ಕೋಟಿ ರೂ ವೆಚ್ಚಕ್ಕೆ ಬದಲಾಗಿ ಸಿಕ್ಕ ಆದಾಯ ಸೊನ್ನೆ?

ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ವೊಕ್ಸೆಲ್‌ಗ್ರಿಡ್ಸ್ ತೀವ್ರ ಹಣಕಾಸಿನ ಅಭಾವ ಎದುರಿಸುತ್ತಿದ್ದಾಗ, ಜಾಗತಿಕ ಬಹುರಾಷ್ಟ್ರೀಯ ಸಂಸ್ಥೆಯೊಂದು (MNC) ಕಂಪನಿಯನ್ನು ಖರೀದಿಸಲು ಮುಂದಾಗಿತ್ತು. ಆದರೆ, ತಮ್ಮ ಆವಿಷ್ಕಾರವು ಬಹುರಾಷ್ಟ್ರೀಯ ಕಂಪನಿಯ ವಶವಾದರೆ ಭಾರತೀಯರಿಗೆ ಅಗ್ಗದ ದರದಲ್ಲಿ ಎಂಆರ್‌ಐ ಲಭ್ಯವಾಗುವ ಆಶಯ ಹಾಳಾಗುತ್ತದೆ ಎಂದು ಅರ್ಜುನ್ ಆ ಆಫರ್ ಅನ್ನು ತಿರಸ್ಕರಿಸಿದರು.

ಟಾಟಾ ಮತ್ತು ಜೋಹೋ ನೆರವು

ರತನ್ ಟಾಟಾ ನೇತೃತ್ವದ ಟಾಟಾ ಟ್ರಸ್ಟ್ಸ್ (FISE ಮೂಲಕ) ಆರಂಭಿಕ ಹಂತದಲ್ಲಿ ಬೆಂಬಲ ನೀಡಿದರು. ನಂತರ ಶ್ರೀಧರ್ ವೆಂಬು ಅವರ ಜೋಹೋ ಕಾರ್ಪೊರೇಷನ್ ₹35 ಕೋಟಿ ಹೂಡಿಕೆ ಮಾಡುವ ಮೂಲಕ ನವೋದ್ಯಮಕ್ಕೆ ಹೊಸ ಜೀವ ನೀಡಿತು.

ಈ ಸ್ವದೇಶಿ ಎಂಆರ್‌ಐ ಸ್ಕ್ಯಾನರ್‌ನ ವಿಶೇಷತೆಗಳು

  • ಶೇ. 70ರಷ್ಟು ವೆಚ್ಚ ಕಡಿತ: ಈ ಸ್ವದೇಶಿ ಎಂಆರ್‌ಐ ತಂತ್ರಜ್ಞಾನದಿಂದಾಗಿ ಸಾರ್ವಜನಿಕರಿಗೆ ಎಂಆರ್‌ಐ ಸ್ಕ್ಯಾನಿಂಗ್ ವೆಚ್ಚ ಶೇ. 60 ರಿಂದ 70 ರಷ್ಟು ಕಡಿಮೆಯಾಗಲಿದೆ.
  • ಲಿಕ್ವಿಡ್ ಹೀಲಿಯಂ ಬೇಕಿಲ್ಲ: ಸಾಂಪ್ರದಾಯಿಕ ಎಂಆರ್‌ಐಗಳಂತೆ ಇದಕ್ಕೆ ನಿರಂತರ ದ್ರವ ಹೀಲಿಯಂ (Liquid Helium) ಅಗತ್ಯವಿಲ್ಲ. ಇದರಿಂದ ಯಂತ್ರದ ನಿರ್ವಹಣಾ ವೆಚ್ಚ ಶೇ. 40ರಷ್ಟು ಕಡಿಮೆಯಾಗುತ್ತದೆ.
  • ಹಗುರ ಮತ್ತು ಸಾಗಿಸಲು ಸುಲಭ: ಸಾಮಾನ್ಯ ಎಂಆರ್‌ಐ ಯಂತ್ರಗಳು 4 ರಿಂದ 6 ಟನ್ ತೂಕವಿದ್ದರೆ, ಇದು ಕೇವಲ 2.3 ಟನ್ ತೂಕ ಹೊಂದಿದೆ. ಇದನ್ನು ಮೊಬೈಲ್ ವ್ಯಾನ್‌ಗಳ ಮೂಲಕ ಗ್ರಾಮೀಣ ಪ್ರದೇಶಗಳಿಗೂ ಸುಲಭವಾಗಿ ಕೊಂಡೊಯ್ಯಬಹುದು.
  • ವೇಗದ ಪ್ರಕ್ರಿಯೆ: ಸಾಂಪ್ರದಾಯಿಕ ಸ್ಕ್ಯಾನರ್‌ಗಳಿಗಿಂತ 3 ರಿಂದ 4 ಪಟ್ಟು ವೇಗವಾಗಿ ಇಮೇಜಿಂಗ್ ಪ್ರಕ್ರಿಯೆ ಪೂರ್ಣಗೊಳಿಸುತ್ತದೆ.

ಇದನ್ನೂ ಓದಿ: ನಂದನ್ ನಿಲೇಕಣಿ ಪ್ರಕಾರ ಎಐ ಪರಿಣಾಮದಲ್ಲಿ ಕೆಲಸಗಳು ಎಲ್ಲಿ ಹೆಚ್ಚು ನಷ್ಟ, ಎಲ್ಲಿ ಹೆಚ್ಚು ಸೃಷ್ಟಿ?

ಭಾರತವು ಪ್ರತಿವರ್ಷ ಸುಮಾರು ₹3,500 ಕೋಟಿ ಮೌಲ್ಯದ ಎಂಆರ್‌ಐ ಯಂತ್ರಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದು, ಈ ಸ್ವದೇಶಿ ಆವಿಷ್ಕಾರವು ಆ ಆಮದು ಅವಲಂಬನೆಯನ್ನು ತಪ್ಪಿಸಿ, ದೇಶದ ಮೂಲ ಮೂಲೆಗೂ ವೈದ್ಯಕೀಯ ತಪಾಸಣೆಯನ್ನು ತಲುಪಿಸಲು ನೆರವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಅವತಾರ್ 2’, ‘ಆರ್‌ಆರ್‌ಆರ್’ ರೆಕಾರ್ಡ್ ಬ್ರೇಕ್: 59,000 ಸ್ಕ್ರೀನ್‌ಗಳಲ್ಲಿ ‘ರಾಮಾಯಣ’ ತೆರೆಗೆ – Kannada News | Ramayana World Record Release: Ranbir Kapoor Starrer Eyes 59,000 Screens Worldwide

ನಿತೇಶ್​ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. 2026ರ ದೀಪಾವಳಿಗೆ ರಿಲೀಸ್ ಆಗಲಿರುವ ಈ ಬಹುನಿರೀಕ್ಷಿತ ಚಿತ್ರ ಪ್ರಪಂಚದಾದ್ಯಂತ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಈ ಸಿನಿಮಾ ವಿಶ್ವದಾದ್ಯಂತ 59,000ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

ಸೋನಿ ಪಿಕ್ಚರ್ಸ್ ಸಂಸ್ಥೆಯು ಈ ಚಿತ್ರದ ವಿದೇಶಿ ವಿತರಣೆಯ ಹಕ್ಕನ್ನು ಪಡೆದುಕೊಂಡಿದೆ. ವಿದೇಶಗಳಲ್ಲೇ ಬರೋಬ್ಬರಿ 50,000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರವನ್ನು ಪ್ರದರ್ಶಿಸಲು ಯೋಜನೆ ರೂಪಿಸಲಾಗಿದೆ. ಭಾರತದಲ್ಲಿ ಸುಮಾರು 9,000 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ. ಇದು ಭಾರತೀಯ ಸಿನಿಮಾವೊಂದಕ್ಕೆ ಸಿಗುತ್ತಿರುವ ಅತಿದೊಡ್ಡ ರಿಲೀಸ್ ಆಗಿದೆ.

ಈ ಹಿಂದೆ ‘ಪುಷ್ಪ 2’ ಚಿತ್ರ 13,000 ಹಾಗೂ ‘ಆರ್‌ಆರ್‌ಆರ್’ ಚಿತ್ರ 11,000 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದ್ದವು. ಜೇಮ್ಸ್ ಕ್ಯಾಮರೂನ್ ಅವರ ‘ಅವತಾರ್: ದಿ ವೇ ಆಫ್ ವಾಟರ್’ ಸಿನಿಮಾ 52,000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿತ್ತು. ಈಗ ‘ರಾಮಾಯಣ’ ಸಿನಿಮಾ ಅವತಾರ್ ಚಿತ್ರದ ದಾಖಲೆಯನ್ನೂ ಮುರಿಯಲು ಹೊರಟಿದೆ.

ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಈ ಚಿತ್ರವನ್ನು ಐಮ್ಯಾಕ್ಸ್ ರೂಪದಲ್ಲಿ ತರುತ್ತಿದ್ದಾರೆ. ಪ್ರಪಂಚದಾದ್ಯಂತ 50ಕ್ಕೂ ಹೆಚ್ಚು ಭಾಷೆಗಳಲ್ಲಿ ಚಿತ್ರ ಮೂಡಿಬರಲಿದೆ. ವಿಶೇಷ ಎಐ ತಂತ್ರಜ್ಞಾನದ ಮೂಲಕ ನಟರ ತುಟಿ ಚಲನೆಗೆ ತಕ್ಕಂತೆ ಡಬ್ ಮಾಡಲು ‘ಬ್ರಹ್ಮ ಎಐ’ ಬಳಸಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಇಂಗ್ಲಿಷ್ ಟ್ರೇಲರ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾದ ಇಂಗ್ಲಿಷ್ ಟ್ರೇಲರ್ ನೋಡಿ ವಿದೇಶಿ ಪ್ರೇಕ್ಷಕರು ಹೇಳಿದ್ದೇನು?

ಈ ಬಿಗ್ ಬಜೆಟ್ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ ನಟಿಸಿದ್ದಾರೆ. ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ಅಭಿನಯಿಸಿದ್ದಾರೆ. ಪ್ರಸಿದ್ಧ ಸಂಗೀತ ನಿರ್ದೇಶಕ ಆಸ್ಕರ್ ವಿಜೇತ ಹ್ಯಾನ್ಸ್ ಝಿಮ್ಮರ್ ಮತ್ತು ಎ.ಆರ್. ರೆಹಮಾನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸುಮಾರು 4,000 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರದ ಮೊದಲ ಭಾಗ 2026ರ ದೀಪಾವಳಿಗೆ ಹಾಗೂ ಎರಡನೇ ಭಾಗ 2027ರ ದೀಪಾವಳಿಗೆ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಸ್ತ್ರಚಿಕಿತ್ಸೆ ವೇಳೆ ಜಪಾನ್​​ನಲ್ಲಿ 7.1 ತೀವ್ರತೆಯ ಭೂಕಂಪ, ವೈದ್ಯರು ರೋಗಿಯ ಜೀವ ಉಳಿಸಿದ್ಹೇಗೆ ನೋಡಿ – Kannada News | Doctors Stay Focused as Powerful Earthquake Strikes During Critical Surgery in Japan

ಟೋಕಿಯೊ, ಆಗಸ್ಟ್​ 07: ಜಪಾನ್‌ನ ಕುಮಾಮೊಟೊ ನಗರದ ಆಸ್ಪತ್ರೆಯೊಂದರಲ್ಲಿ ವೈದ್ಯರ ತಂಡವೊಂದು ರೋಗಿಗೆ ಸಂಕೀರ್ಣ ಶಸ್ತ್ರಚಿಕಿತ್ಸೆ(Surgery) ನಡೆಸುತ್ತಿದ್ದಾಗ ಬೃಹತ್ ಭೂಕಂಪ ಸಂಭವಿಸಿದೆ. ಇಡೀ ಶಸ್ತ್ರಚಿಕಿತ್ಸಾ ಕೊಠಡಿ ಹಾಗೂ ಉಪಕರಣಗಳು ತೀವ್ರವಾಗಿ ನಲುಗುತ್ತಿದ್ದರೂ, ಧೈರ್ಯಗೆಡದ ವೈದ್ಯರು ತಮ್ಮ ಜೀವವನ್ನೇ ಪಣಕ್ಕಿಟ್ಟು ಶಸ್ತ್ರಚಿಕಿತ್ಸಾ ಟೇಬಲ್ ಹಿಡಿದುಕೊಂಡು ರೋಗಿಯ ಜೀವ ಉಳಿಸಿದ್ದಾರೆ. ಈ ರೋಚಕ ದೃಶ್ಯಗಳು ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಶಸ್ತ್ರಚಿಕಿತ್ಸೆ ನಡೆಯುತ್ತಿದ್ದಾಗ ಏಕಾಏಕಿ ಭೂಮಿ ಕಂಪಿಸಿದ್ದು, ಕೊಠಡಿಯ ದೀಪಗಳು ಮಿನುಗುತ್ತಿದ್ದವು ಹಾಗೂ ಉಪಕರಣಗಳು ಅಕ್ಕಪಕ್ಕಕ್ಕೆ ಓಲಾಡಿದವು.

ಕಂಪನದ ರಭಸಕ್ಕೆ ಓರ್ವ ವೈದ್ಯರು ನೆಲಕ್ಕೆ ಬಿದ್ದರೂ, ಇತರ ಇಬ್ಬರು ಶಸ್ತ್ರಚಿಕಿತ್ಸಕರು ಆಪರೇಟಿಂಗ್ ಟೇಬಲ್ ಜಾರದಂತೆ ಗಟ್ಟಿಯಾಗಿ ಹಿಡಿದುಕೊಂಡರು. ಕಂಪನ ನಿಂತ ನಂತರ ಕಾರ್ಯಾಚರಣೆಯನ್ನು ಪುನರಾರಂಭಿಸಿದ ವೈದ್ಯರು, ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ರೋಗಿಯನ್ನು ರಕ್ಷಿಸಿದರು.

ವಿಡಿಯೋ

ದಕ್ಷಿಣ ದ್ವೀಪದಲ್ಲಿ ಭೀಕರ ಕಂಪನ: ಜುಲೈ 28 ರಂದು ಜಪಾನ್‌ನ ದಕ್ಷಿಣ ದ್ವೀಪವಾದ ಕ್ಯುಶುದಲ್ಲಿ (Kyushu) ಸಂಭವಿಸಿದ 7,1 ತೀವ್ರತೆಯ ಭೀಕರ ಭೂಕಂಪಕ್ಕೆ ಕನಿಷ್ಠ 38 ಜನರು ಸಾವನ್ನಪ್ಪಿದ್ದು, 120ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನೂರಾರು ಕಟ್ಟಡಗಳು ಕುಸಿದಿದ್ದು, ರಸ್ತೆಗಳು ಬಿರುಕು ಬಿಟ್ಟಿವೆ. 3,500ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, 29,000ಕ್ಕೂ ಹೆಚ್ಚು ಜನರು ಕುಡಿಯುವ ನೀರಿನ ಅಭಾವ ಎದುರಿಸುತ್ತಿದ್ದಾರೆ. ಈ ಭೂಕಂಪದ ತೀವ್ರತೆ ಎಷ್ಟಿತ್ತೆಂದರೆ, ಜಪಾನ್‌ನ ಗಡಿ ದಾಟಿ ದಕ್ಷಿಣ ಕೊರಿಯಾದ ಕರಾವಳಿ ಪ್ರದೇಶಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹೈಕಮಾಂಡ್​​ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಪ್ರಿಯಾಂಕ್​​ ಖರ್ಗೆ ಹೀಗದಿಂದ್ಯಾಕೆ? – Kannada News | Priyank Kharge on Cabinet Reshuffle: Minister Ready to Resign if High Command Directs Party Work

ಬೆಂಗಳೂರು, ಆಗಸ್ಟ್​​ 07: ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ ಮತ್ತು ಖಾತೆ ಹಂಚಿಕೆ ಕುರಿತ ಚರ್ಚೆಗಳ ನಡುವೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಯಾವುದೇ ಸಚಿವರಿಗೆ ಯಾವ ಜವಾಬ್ದಾರಿ ನೀಡಬೇಕು ಎಂಬುದು ಮುಖ್ಯಮಂತ್ರಿಗಳ ವಿವೇಚನೆಗೆ ಸೇರಿದ್ದು, ಅವರು ಹೈಕಮಾಂಡ್ ಜೊತೆ ಸಮಾಲೋಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ. ಪಕ್ಷದಲ್ಲಿ ಸುಮಾರು 140 ಶಾಸಕರಿದ್ದು, 30-33 ಸಚಿವ ಸ್ಥಾನಗಳಿವೆ. ಎಲ್ಲರಿಗೂ ತೃಪ್ತಿಪಡಿಸುವುದು ಕಷ್ಟದ ಕೆಲಸ. ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಪ್ರಾತಿನಿಧ್ಯ ನೀಡುವ ಸವಾಲುಗಳಿದ್ದರೂ, ಎಲ್ಲರೂ ಒಟ್ಟಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಒಂದು ವೇಳೆ ಹೈಕಮಾಂಡ್ ಸೂಚಿಸಿದರೆ, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದ ಕೆಲಸ ಮಾಡಲು ತಾನು ಬದ್ಧ ಎಂದು ಪ್ರಿಯಾಂಕ್ ಖರ್ಗೆ ಘೋಷಿಸಿದ್ದಾರೆ. ಈ ತೀರ್ಮಾನವು ತಮಗೆ ಮಾತ್ರವಲ್ಲದೆ ಎಲ್ಲರಿಗೂ ಅನ್ವಯಿಸುತ್ತದೆ ಎಂದೂ ಅವರು ಹೇಳಿದ್ದು, ಹೈಕಮಾಂಡ್‌ನ ಯಾವುದೇ ನಿರ್ಧಾರಕ್ಕೆ ತಾನು ಸಂಪೂರ್ಣವಾಗಿ ಬದ್ಧವಾಗಿರುವುದಾಗಿ ಪುನರುಚ್ಚರಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ತಲೆನೋವು ಕಡಿಮೆ ಮಾಡಲು ಕಾಫಿ ಸಹಾಯ ಮಾಡುತ್ತದೆಯೇ? ಈ ಬಗ್ಗೆ ವೈದ್ಯರ ಅಭಿಪ್ರಾಯವೇನು? – Kannada News | Best Ways to Relieve a Headache Naturally

ತಲೆನೋವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಒತ್ತಡ, ನಿದ್ರೆಯ ಕೊರತೆ, ದೇಹದಲ್ಲಿ ನೀರಿನ ಕೊರತೆ, ದೀರ್ಘಕಾಲ ಮೊಬೈಲ್ ಅಥವಾ ಕಂಪ್ಯೂಟರ್ ಪರದೆ ನೋಡುವುದು, ಅಸಮಯದ ಆಹಾರ ಸೇವನೆ ಸೇರಿದಂತೆ ಹಲವು ಕಾರಣಗಳಿಂದ ತಲೆನೋವು ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭಗಳಲ್ಲಿ ಅನೇಕರು ತಕ್ಷಣ ಒಂದು ಕಪ್ ಟೀ ಅಥವಾ ಕಾಫಿ ಕುಡಿಯುತ್ತಾರೆ. ಆದರೆ ಇದು ಎಲ್ಲರಿಗೂ ಪ್ರಯೋಜನಕಾರಿಯೇ? ಅಥವಾ ಕೆಲವರಲ್ಲಿ ತಲೆನೋವನ್ನು ಇನ್ನಷ್ಟು ಹೆಚ್ಚಿಸಬಹುದೇ? ಈ ಕುರಿತು ಆರೋಗ್ಯ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

ತಲೆನೋವಿನ ಸಮಯದಲ್ಲಿ ಟೀ ಅಥವಾ ಕಾಫಿ ಕುಡಿಯಬಹುದೇ?

ಕ್ಲೀವ್‌ಲ್ಯಾಂಡ್ ಕ್ಲಿನಿಕ್ (Cleveland Clinic) ಮಾಹಿತಿಯ ಪ್ರಕಾರ, ಟೀ ಮತ್ತು ಕಾಫಿಯಲ್ಲಿ ಇರುವ ಕ್ಯಾಫೀನ್ (Caffeine) ಕೆಲವರಲ್ಲಿ ತಲೆನೋವು ಅಥವಾ ಮೈಗ್ರೇನ್‌ನಿಂದ ತಾತ್ಕಾಲಿಕ ಪರಿಹಾರ ನೀಡಬಹುದು. ಈ ಕಾರಣದಿಂದಲೇ ಕೆಲವು ತಲೆನೋವಿನ ಔಷಧಿಗಳಲ್ಲಿಯೂ ಕ್ಯಾಫೀನ್ ಬಳಸಲಾಗುತ್ತದೆ. ಆದರೆ ಇದರ ಪರಿಣಾಮ ಎಲ್ಲರಲ್ಲೂ ಒಂದೇ ರೀತಿಯಾಗಿರುವುದಿಲ್ಲ. ಮಿತ ಪ್ರಮಾಣದ ಕ್ಯಾಫೀನ್ ಕೆಲವರಿಗೆ ನೋವು ಕಡಿಮೆ ಮಾಡಬಹುದು. ಕೆಲವೊಮ್ಮೆ ಪ್ರತಿದಿನ ಹೆಚ್ಚು ಕ್ಯಾಫೀನ್ ಸೇವಿಸುವವರಲ್ಲಿ ತಲೆನೋವು ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ಪ್ರತಿದಿನ ಟೀ ಅಥವಾ ಕಾಫಿ ಕುಡಿಯುವವರು ಏಕಾಏಕಿ ಅದನ್ನು ಸಂಪೂರ್ಣ ನಿಲ್ಲಿಸಿದರೆ Caffeine Withdrawal Headache ಕಾಣಿಸಿಕೊಳ್ಳಬಹುದು. ಕ್ಯಾಫೀನ್ ಸೇವಿಸಿದ ಬಳಿಕ ತಲೆನೋವು ಹೆಚ್ಚಾಗುತ್ತಿರುವುದನ್ನು ಗಮನಿಸಿದರೆ ಅದರ ಪ್ರಮಾಣವನ್ನು ಕಡಿಮೆ ಮಾಡುವುದು ಅಥವಾ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ತಲೆನೋವು ಕಡಿಮೆ ಮಾಡಲು ಏನು ಮಾಡಬೇಕು?

ತಲೆನೋವು ಕಾಣಿಸಿಕೊಂಡಾಗ ಈ ಕ್ರಮಗಳನ್ನು ಅನುಸರಿಸಬಹುದು.

  • ಸಾಕಷ್ಟು ನೀರು ಕುಡಿಯಿರಿ.
  • ಶಾಂತ ಮತ್ತು ಕತ್ತಲೆಯ ವಾತಾವರಣದಲ್ಲಿ ವಿಶ್ರಾಂತಿ ಪಡೆಯಿರಿ.
  • ಮೊಬೈಲ್, ಲ್ಯಾಪ್‌ಟಾಪ್ ಮತ್ತು ಟಿವಿ ಪರದೆ ಬಳಕೆಯನ್ನು ಕಡಿಮೆ ಮಾಡಿ.
  • ಸಮರ್ಪಕ ನಿದ್ರೆ ಪಡೆಯಿರಿ.
  • ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ.
  • ಹೆಚ್ಚು ಹೊತ್ತು ಹೊಟ್ಟೆ ಖಾಲಿ ಇರಬೇಡಿ.
  • ತೀವ್ರ ಬೆಳಕು ಮತ್ತು ಜೋರಾದ ಶಬ್ದದಿಂದ ದೂರವಿರಿ.
  • ವೈದ್ಯರ ಸಲಹೆಯಿಲ್ಲದೆ ಪದೇ ಪದೇ ನೋವಿನ ಮಾತ್ರೆ ಸೇವಿಸಬೇಡಿ.

ತಲೆನೋವಿಗೆ ಕಾರಣವಾಗುವ ಸಾಮಾನ್ಯ ಅಂಶಗಳು

  • ಡಿಹೈಡ್ರೇಶನ್ (ನೀರಿನ ಕೊರತೆ)
  • ಒತ್ತಡ ಮತ್ತು ಆತಂಕ
  • ನಿದ್ರಾಹೀನತೆ
  • ಹೆಚ್ಚು ಸಮಯ ಕಂಪ್ಯೂಟರ್ ಅಥವಾ ಮೊಬೈಲ್ ಬಳಕೆ
  • ಕಣ್ಣಿನ ದೃಷ್ಟಿ ಸಮಸ್ಯೆಗಳು
  • ಹೆಚ್ಚು ಅಥವಾ ಕಡಿಮೆ ಕ್ಯಾಫೀನ್ ಸೇವನೆ
  • ಸೈನಸ್ ಸೋಂಕು
  • ಮೈಗ್ರೇನ್

ತಲೆನೋವಿನ ಸಮಯದಲ್ಲಿ ಯಾವ ಆಹಾರಗಳು ಸಹಾಯ ಮಾಡಬಹುದು?

  • ಎಳನೀರು
  • ನಿಂಬೆ ನೀರು
  • ಹಣ್ಣುಗಳು
  • ಮೊಸರು
  • ಬಾದಾಮಿ
  • ಓಟ್ಸ್
  • ಬಾಳೆಹಣ್ಣು
  • ಹಸಿರು ತರಕಾರಿಗಳು

ಇದನ್ನೂ ಓದಿ: ಪ್ರೋಟೀನ್ ಕೊರತೆಯಿಂದ ಕೂದಲು ಉದುರುತ್ತದೆಯೇ? ತಜ್ಞರು ನೀಡಿದ ವಿವರಣೆ ಇಲ್ಲಿದೆ

ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

  • ಏಕಾಏಕಿ ತೀವ್ರ ತಲೆನೋವು
  • ತಲೆನೋವಿನ ಜೊತೆಗೆ ಜ್ವರ
  • ಕುತ್ತಿಗೆ ಬಿಗಿಯಾಗುವುದು
  • ಪದೇ ಪದೇ ವಾಂತಿ
  • ಪ್ರಜ್ಞೆ ತಪ್ಪುವುದು
  • ಮಾತನಾಡಲು ತೊಂದರೆ
  • ಕೈ ಅಥವಾ ಕಾಲುಗಳಲ್ಲಿ ದುರ್ಬಲತೆ
  • ದೃಷ್ಟಿ ಮಸುಕಾಗುವುದು
  • ಔಷಧಿ ತೆಗೆದುಕೊಂಡರೂ ಕಡಿಮೆಯಾಗದ ತಲೆನೋವು
  • ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ತಲೆನೋವು

ಇವು ಕೆಲವೊಮ್ಮೆ ಗಂಭೀರ ಆರೋಗ್ಯ ಸಮಸ್ಯೆಗಳ ಲಕ್ಷಣಗಳಾಗಿರಬಹುದು.

ತಲೆನೋವು ತಡೆಗಟ್ಟಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

  • ಪ್ರತಿದಿನ 7–8 ಗಂಟೆಗಳ ನಿದ್ರೆ
  • ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು
  • ನಿಯಮಿತ ವ್ಯಾಯಾಮ
  • ಒತ್ತಡ ನಿಯಂತ್ರಣ
  • ಊಟದ ಸಮಯ ಪಾಲನೆ
  • ಹೆಚ್ಚು ಹೊತ್ತು ಟಿವಿ ಮೊಬೈಲ್ ನೋಡುವುದನ್ನು ತಪ್ಪಿಸುವುದು

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಾಹನ ಸವಾರರೇ ಗಮನಿಸಿ: ಕೆಆರ್ ಮಾರುಕಟ್ಟೆ ಫ್ಲೈಓವರ್ ಮೂಲಕ ಚಾಮರಾಜಪೇಟೆ ಕಡೆ ಹೋಗುವ ಲೂಪ್ ರಸ್ತೆ ಬಂದ್ – Kannada News | Bengaluru Traffic Alert: KR Market Flyover Loop Road to Chamarajpet Closed for 3 Months

ಬೆಂಗಳೂರು, ಆಗಸ್ಟ್ 7: ಬೆಂಗಳೂರು ನಗರದ ಪ್ರಮುಖ ಸಂಚಾರ ಮಾರ್ಗವಾದ ಕೆಆರ್ ಮಾರ್ಕೆಟ್ ಫ್ಲೈ ಓವರ್ (ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ) ಯ ಒಂದು ಭಾಗವನ್ನು ವೈಟ್ ಟಾಪಿಂಗ್ ಕಾಮಗಾರಿಗಾಗಿ ಮುಚ್ಚಲಾಗಿದೆ. ಚಾಮರಾಜಪೇಟೆಗೆ ಸಂಪರ್ಕ ಕಲ್ಪಿಸುವ ಲೂಪ್ ರಸ್ತೆಯು ಸುಮಾರು ಮೂರು ತಿಂಗಳ ಕಾಲ ಬಂದ್ ಆಗಿರಲಿದೆ ಎಂದು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ. ಬಿ ಸ್ಮೈಲ್ ಸಂಸ್ಥೆಯು ಕೈಗೆತ್ತಿಕೊಂಡಿರುವ ಈ ಕಾಮಗಾರಿಯು ಟೌನ್ ಹಾಲ್‌ನಿಂದ ಬಿಜಿಎಸ್ ಫ್ಲೈ ಓವರ್ ಹತ್ತಿ ಚಾಮರಾಜಪೇಟೆ ಕಡೆಗೆ ಹೋಗುವ ವಾಹನಗಳಿಗೆ ಸಂಚಾರ ಅಡಚಣೆ ಉಂಟುಮಾಡಲಿದೆ. ವಾಹನ ಸವಾರರು ಮೈಸೂರು ರಸ್ತೆಯ ಕಡೆಗೆ ಸಾಗಿ ಅಥವಾ ಪರ್ಯಾಯ ಮಾರ್ಗಗಳನ್ನು ಬಳಸಿಕೊಂಡು ರಾಯನ್ ಸರ್ಕಲ್ ಮೂಲಕ ಚಾಮರಾಜಪೇಟೆ ತಲುಪಬೇಕಾಗುತ್ತದೆ.

ಈ ರಸ್ತೆಯಲ್ಲಿ ಸಂಚಾರ ನಿರ್ಬಂಧದಿಂದ ಚಾಮರಾಜಪೇಟೆ ಮತ್ತು ಬಸವನಗುಡಿ ಕಡೆಗೆ ತೆರಳುವ ವಾಹನಗಳಿಗೆ ತೀವ್ರ ಅನಾನುಕೂಲವಾಗಲಿದ್ದು, ಟ್ರಾಫಿಕ್ ದಟ್ಟಣೆ ಹೆಚ್ಚಾಗುವ ನಿರೀಕ್ಷೆಯಿದೆ. ಟ್ರಾಫಿಕ್ ಪೊಲೀಸರು ಸಾರ್ವಜನಿಕರಿಗೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಲಹೆ ನೀಡಿದ್ದಾರೆ. ಬಿ ಸ್ಮೈಲ್ ಮತ್ತು ಜಿಬಿಎ ಅಧಿಕಾರಿಗಳು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಿ ರಸ್ತೆ ತೆರೆಯಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಟ್ಟ ಹಣ ವಾಪಸ್​​ ಕೇಳಿದ್ದಕ್ಕೆ ಯುವತಿ ಕುಟುಂಬಸ್ಥರಿಂದ ಹಲ್ಲೆ ಆರೋಪ: ದೂರು-ಪ್ರತಿದೂರು ದಾಖಲು – Kannada News | Kundapura Shocked: Youth Tied to Tree and Assaulted Over 50,000 Loan Dispute; Complaints Filed

ಸನತ್, ನಂದೀಶ್ ಕುಮಾರ್, ರಾಮ ಕುಮಾರ್Image Credit source: Tv9 Kannada

ಉಡುಪಿ, ಆಗಸ್ಟ್​​ 07: ಜಿಲ್ಲೆಯ ಕುಂದಾಪುರದ ಬೆಳ್ಳಾಲದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಯುವಕನೋರ್ವನನ್ನು ಮನೆಗೆ ಕರೆಸಿದ ಯುವತಿಯ ಕುಟುಂಬಸ್ಥರು ಆತನನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ಸನತ್ ಎನ್ನುವ ಯುವಕನ ಮೇಲೆ ಪೈಶಾಚಿಕ ಕೃತ್ಯ ನಡೆಸಲಾಗಿದ್ದು, ಯುವತಿ ಮತ್ತು ಈತ ಒಂದೇ ಸಂಸ್ಥೆಯಲ್ಲಿ ಕೆಲಸಕ್ಕಿದ್ದರು. ಬಳಿಕ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು. ಇದೇ ಸಮಯದಲ್ಲಿ ಸನತ್ ನಿಂದ 50 ಸಾವಿರ ಹಣವನ್ನು ಯವತಿ ಸಾಲ ತೆಗೆದುಕೊಂಡಿದ್ದಳು ಎಂಬುದು ತಿಳಿದುಬಂದಿದೆ.

ದೂರು-ಪ್ರತಿದೂರುಗಳು ದಾಖಲು

ಸನತ್​​​ನಿಂದ ಸಾಲ ಪಡೆದ ಬಳಿಕ ಯುವತಿ ಕೆಲಸ ತೊರೆದಿದ್ದಲ್ಲದೆ, ಈತನ ಕರೆ ಸ್ವೀಕರಸದೆ ಸತಾಯಿಸುತ್ತಿದ್ದಳು. ಸಾಲ ನೀಡಿದ್ದ 50 ಸಾವಿರ ಹಣ ವಾಪಸ್ಸು ಕೇಳಿದಾಗ ಮನೆಗೆ ಬರುವಂತೆ ಆಕೆ ತಿಳಿಸಿದ್ದಳು. ಯುವತಿ ಕರೆದಳೆಂದು ಮನೆ ಬಳಿ ಹೋಗಿದ್ದ ಸನತ್ ಮೇಲೆ ಹಲ್ಲೆ ನಡೆಸಲಾಗಿದ್ದು, ಸಾಲದ್ದಕ್ಕೆ ಆತನ ಮೇಲೆಯೇ ಅಟ್ರಾಸಿಟಿ ಕಾಯ್ದೆ, ಲೈಂಗಿಕ‌ ದೌರ್ಜನ್ಯದಡಿ ದೂರು ದಾಖಲಿದ್ದಳು ಎಂದು ದೂರಲಾಗಿದೆ. ಘಟನೆ ಬಗ್ಗೆ ಯುವಕ ಸನತ್​​ ಕೂಡ ಬೈಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕಾರ್ಕಳದ ರೇಂಜಾಳದಲ್ಲಿ ಭಾರೀ ಭೂಕುಸಿತದ ಆತಂಕ, ಕುಟುಂಬಗಳ ಸ್ಥಳಾಂತರಕ್ಕೆ ಸೂಚನೆ

ಆರೋಪಿಗಳ ಬಂಧನ

ಘಟನೆ ಸಂಬಂಧ ದೂರು-ಪ್ರತಿದೂರುಗಳು ದಾಖಲಾಗಿದ್ದು, ಮನೆಗೆ ನುಗ್ಗಿ ದಲಿತ ಯುವತಿ ಮೇಲೆ ದೌರ್ಜನ್ಯ ಆರೋಪ ಸಂಬಂಧ ಸನತ್ ಮತ್ತು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ ಪ್ರಕರಣದಲ್ಲಿ ರಾಮ ಕುಮಾರ್, ನಂದೀಶ್ ಕುಮಾರ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version