Headlines

ಸಾಗರ ಉತ್ಪನ್ನಗಳ ರಫ್ತಿನಲ್ಲಿ ಕರ್ನಾಟಕಕ್ಕೆ ಅಭೂತಪೂರ್ವ ಯಶಸ್ಸು: 5,371 ಕೋಟಿ ರೂ.ಗೆ ಜಿಗಿದ ರಫ್ತು ಮೌಲ್ಯ, ದೇಶದಲ್ಲೇ 5ನೇ ಸ್ಥಾನ – Kannada News | India’s Seafood Export Boom: Karnataka Leads South with 56.1% Growth and 5,371 Cr

ಮಂಗಳೂರು ಆ. 7: ದೇಶದ ಸಾಗರ ಉತ್ಪನ್ನಗಳ (Seafood) ರಫ್ತು ವಲಯದಲ್ಲಿ ಕರ್ನಾಟಕ ರಾಜ್ಯವು ಭರ್ಜರಿ ಸಾಧನೆ ಮಾಡಿದೆ. 2025-26ನೇ ಹಣಕಾಸು ವರ್ಷದಲ್ಲಿ ರಾಜ್ಯದ ಸಾಗರ ಉತ್ಪನ್ನಗಳ ರಫ್ತು ಮೌಲ್ಯವು ಬರೋಬ್ಬರಿ ಶೇ. 56.1 ರಷ್ಟು ಏರಿಕೆಯಾಗಿದ್ದು, 5,371.85 ಕೋಟಿ ರೂ.ಗೆ ತಲುಪಿದೆ. 2024-25ರಲ್ಲಿ ಈ ಮೊತ್ತ 3,440.57 ಕೋಟಿ ರೂ. ಯಷ್ಟಿತ್ತು. ರಾಷ್ಟ್ರೀಯ ಸರಾಸರಿ ಬೆಳವಣಿಗೆ ದರಕ್ಕಿಂತಲೂ (ಶೇ. 18.4) ಕರ್ನಾಟಕದ ಸಾಧನೆ ಅತ್ಯಂತ ಹೆಚ್ಚಾಗಿದೆ. ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಲಾದ ಅಧಿಕೃತ ವರದಿಯ ಪ್ರಕಾರ, ಸಾಗರ…

Read More

IND vs SL: ಶುಭ್​ಮನ್ ಗಿಲ್​ಗೆ ಗಾಯ; ಮೊದಲ ದಿನ ಕಣಕ್ಕಿಳಿಯದ ನಾಯಕ – Kannada News | India vs SL Practice Match: Gill Injured, KL Rahul Captains in Colombo

ಭಾರತ ಹಾಗೂ ಶ್ರೀಲಂಕಾ ಕ್ರಿಕೆಟ್ ಇಲೆವೆನ್ ನಡುವಿನ ಮೂರು ಪಂದ್ಯಗಳ ಅಭ್ಯಾಸ ಪಂದ್ಯ ಇಂದಿನಿಂದ ಕೊಲಂಬೊದ ಎನ್‌ಸಿಸಿ ಮೈದಾನದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಇಲೆವೆನ್ ತಂಡ ಮೊದಲು ಬ್ಯಾಟಿಂಗ್‌ ಮಾಡತ್ತಿದೆ. ಇತ್ತ ಭಾರತ ತಂಡದಲ್ಲಿ ನಾಯಕನ ಬದಲಾವಣೆಯಾಗಿದ್ದು, ಈ ಅಭ್ಯಾಸ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ನಿಯಮಿತ ನಾಯಕ ಶುಭ್​ಮನ್ ಗಿಲ್ ಅಭ್ಯಾಸದ ಸಮಯದಲ್ಲಿ ಬೆರಳಿಗೆ ಗಾಯ ಮಾಡಿಕೊಂಡ ಕಾರಣದಿಂದಾಗಿ ಅವರು ಮೊದಲ ಕಣಕ್ಕಿಳಿದಿಲ್ಲ. ಹೀಗಾಗಿ ಅವರ ಬದಲಿಗೆ ರಾಹುಲ್…

Read More

ಬೆಂಗಳೂರಿನಲ್ಲಿ ಪಂಚತಾರಾ ಹೋಟೆಲ್​ಗಳ ಮೇಲೆ ದಿಢೀರ್ ರೇಡ್: ಆಹಾರ ಗುಣಮಟ್ಟ, ಸಂಸ್ಕರಣೆ, ಪರಿಶುದ್ಧತೆಯ ಪರಿಶೀಲನೆ – Kannada News | Bengaluru 5 Star Hotel Raids: Rotten Vegetables and Onions Found During Food Safety Checks

ಬೆಂಗಳೂರಿನ 5 ಸ್ಟಾರ್ ಹೋಟೆಲ್​ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ ಅಧಿಕಾರಿಗಳುImage Credit source: tv9 ಬೆಂಗಳೂರು, ಆಗಸ್ಟ್ 7: ಬೆಂಗಳೂರಿನ (Bengaluru) ಪಂಚತಾರಾ ಹೋಟೆಲ್‌ಗಳಿಗೆ ಆರೋಗ್ಯ ಸುರಕ್ಷತಾ ವಿಭಾಗದ ಅಧಿಕಾರಿಗಳು ಶುಕ್ರವಾರ ಶಾಕ್ ನೀಡಿದ್ದಾರೆ. ಆಹಾರದ ಗುಣಮಟ್ಟ, ಸಂಸ್ಕರಣೆ ಮತ್ತು ಸ್ವಚ್ಛತೆ ಪರಿಶೀಲನೆಗಾಗಿ 30ಕ್ಕೂ ಹೆಚ್ಚು ಅಧಿಕಾರಿಗಳ ತಂಡ ವಿವಿಧ ಪಂಚತಾರಾ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಕೆಲ ಹೋಟೆಲ್‌ಗಳಲ್ಲಿ ಕಳಪೆ ಗುಣಮಟ್ಟದ ತರಕಾರಿಗಳು, ಕೊಳೆತ ಈರುಳ್ಳಿ ಹಾಗೂ ಆಲೂಗಡ್ಡೆ ಪತ್ತೆಯಾಗಿವೆ….

Read More

ಕಾಂಗ್ರೆಸಿಗರ ಮನವೊಲಿಕೆಗೆ ಮಣಿದ ಬಸವರಾಜ ಹೊರಟ್ಟಿ: ಸಭಾಪತಿ ಸ್ಥಾನಕ್ಕೆ ರಾಜೀನಾಮೆ – Kannada News | Basavaraj Horatti Resigns as Karnataka Legislative Council Chairman

ಬೆಂಗಳೂರು, ಆಗಸ್ಟ್​​ 07: ಸಾಕಷ್ಟು ರಾಜಕೀಯ ಬೆಳವಣಿಗಳ ಬಳಿಕ ಕೊನೆಗೂ ಕರ್ನಾಟಕ ವಿಧಾನ ಪರಿಷತ್​​ನ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಿದ್ದಾರೆ. ಸಿಎಂ ಡಿಕೆಶಿ, ಕೆಪಿಸಿಸಿ ಅಧ್ಯಕ್ಷರ ಸುದೀರ್ಘ ಮನವೊಲಿಕೆ ಬಳಿಕ ಅವರು ಹುದ್ದೆ ತೊರೆದಿದ್ದು, ಸ್ವಇಚ್ಛೆಯಿಂದ ರಾಜೀನಾಮೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಹೊರಟ್ಟಿ ಅವರನ್ನು ಹಂಗಾಮಿ ಸಭಾಪತಿಯಾಗಿ ಸರ್ಕಾರ ಮುಂದುವರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಕಾರ್ಯಕ್ರಮದ ಬಳಿಕವೂ ವಿಧಾನಸೌಧದ ಸಭಾಪತಿಗಳ ಕಚೇರಿಯಲ್ಲಿ ಹೊರಟ್ಟಿ ಜೊತೆ ಸಿಎಂ…

Read More

ಆರ್ಥಿಕ ಸಂಕಷ್ಟದಲ್ಲೂ ವಿದೇಶಿಗರ ನೆರವಿನ ಹಸ್ತಕ್ಕೆ ಕೈಚಾಚದ ಬೆಂಗಳೂರು ಸ್ಟಾರ್ಟಪ್; ಭಾರತದ ಮೊದಲ ಎಂಆರ್​ಐ ನಿರ್ಮಿಸಿದವನ ಕಥೆ – Kannada News | India’s first indigenous MRI stayed in the country, as its founder rejected MNC offer

ಎಂಆರ್​ಐ ಸ್ಕ್ಯಾನರ್Image Credit source: Getty Images ಹಣಕಾಸು ಸಂಕಷ್ಟ ಬಂದಾಗ ದೇಶದ ಹಿತದ ಬಗ್ಗೆ ಯೋಚನೆ ಮಾಡುವ ಉದ್ಯಮಿಗಳು ಬಹಳ ವಿರಳ. ಇಂಥ ಅಪರೂಪದ ಆಂಟ್ರಪ್ರನ್ಯೂರ್​ಗಳಲ್ಲಿ ಒಬ್ಬರು ಅರ್ಜುನ್ ಅರುಣಾಚಲಂ. ಬೆಂಗಳೂರು ಮೂಲದ ‘ವೊಕ್ಸೆಲ್‌ಗ್ರಿಡ್ಸ್’ (Voxelgrids) ಸ್ಟಾರ್ಟಪ್​ನ ಸ್ಥಾಪಕರು. ಭಾರತದ ಮೊದಲ ಸಂಪೂರ್ಣ ದೇಶೀಯವಾಗಿ ಎಂಆರ್​ಐ ಸ್ಕ್ಯಾನರ್ ಯಂತ್ರವನ್ನು ಅಭಿವೃದ್ಧಿಪಡಿಸಿದ ಕೀರ್ತಿ ಈ ಸ್ಟಾರ್ಟಪ್​ನದ್ದು. ಬಹಳ ಸಂಕಷ್ಟ, ಹೋರಾಟಗಳಲ್ಲಿ ಎಂಆರ್​ಐ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇವರ ಸ್ಟಾರ್ಟಪ್ ಫಂಡಿಂಗ್ ಇಲ್ಲದೇ ಹತಾಶೆಯ ಸ್ಥಿತಿಯಲ್ಲಿದ್ದಾಗ ವಿದೇಶಿಗರ ಪಾಲಾಗುವ ಅವಕಾಶ…

Read More

‘ಅವತಾರ್ 2’, ‘ಆರ್‌ಆರ್‌ಆರ್’ ರೆಕಾರ್ಡ್ ಬ್ರೇಕ್: 59,000 ಸ್ಕ್ರೀನ್‌ಗಳಲ್ಲಿ ‘ರಾಮಾಯಣ’ ತೆರೆಗೆ – Kannada News | Ramayana World Record Release: Ranbir Kapoor Starrer Eyes 59,000 Screens Worldwide

ನಿತೇಶ್​ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. 2026ರ ದೀಪಾವಳಿಗೆ ರಿಲೀಸ್ ಆಗಲಿರುವ ಈ ಬಹುನಿರೀಕ್ಷಿತ ಚಿತ್ರ ಪ್ರಪಂಚದಾದ್ಯಂತ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಈ ಸಿನಿಮಾ ವಿಶ್ವದಾದ್ಯಂತ 59,000ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಸೋನಿ ಪಿಕ್ಚರ್ಸ್ ಸಂಸ್ಥೆಯು ಈ ಚಿತ್ರದ ವಿದೇಶಿ ವಿತರಣೆಯ ಹಕ್ಕನ್ನು ಪಡೆದುಕೊಂಡಿದೆ. ವಿದೇಶಗಳಲ್ಲೇ ಬರೋಬ್ಬರಿ 50,000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರವನ್ನು ಪ್ರದರ್ಶಿಸಲು ಯೋಜನೆ ರೂಪಿಸಲಾಗಿದೆ. ಭಾರತದಲ್ಲಿ ಸುಮಾರು 9,000 ಚಿತ್ರಮಂದಿರಗಳಲ್ಲಿ…

Read More

ಶಸ್ತ್ರಚಿಕಿತ್ಸೆ ವೇಳೆ ಜಪಾನ್​​ನಲ್ಲಿ 7.1 ತೀವ್ರತೆಯ ಭೂಕಂಪ, ವೈದ್ಯರು ರೋಗಿಯ ಜೀವ ಉಳಿಸಿದ್ಹೇಗೆ ನೋಡಿ – Kannada News | Doctors Stay Focused as Powerful Earthquake Strikes During Critical Surgery in Japan

ಟೋಕಿಯೊ, ಆಗಸ್ಟ್​ 07: ಜಪಾನ್‌ನ ಕುಮಾಮೊಟೊ ನಗರದ ಆಸ್ಪತ್ರೆಯೊಂದರಲ್ಲಿ ವೈದ್ಯರ ತಂಡವೊಂದು ರೋಗಿಗೆ ಸಂಕೀರ್ಣ ಶಸ್ತ್ರಚಿಕಿತ್ಸೆ(Surgery) ನಡೆಸುತ್ತಿದ್ದಾಗ ಬೃಹತ್ ಭೂಕಂಪ ಸಂಭವಿಸಿದೆ. ಇಡೀ ಶಸ್ತ್ರಚಿಕಿತ್ಸಾ ಕೊಠಡಿ ಹಾಗೂ ಉಪಕರಣಗಳು ತೀವ್ರವಾಗಿ ನಲುಗುತ್ತಿದ್ದರೂ, ಧೈರ್ಯಗೆಡದ ವೈದ್ಯರು ತಮ್ಮ ಜೀವವನ್ನೇ ಪಣಕ್ಕಿಟ್ಟು ಶಸ್ತ್ರಚಿಕಿತ್ಸಾ ಟೇಬಲ್ ಹಿಡಿದುಕೊಂಡು ರೋಗಿಯ ಜೀವ ಉಳಿಸಿದ್ದಾರೆ. ಈ ರೋಚಕ ದೃಶ್ಯಗಳು ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಶಸ್ತ್ರಚಿಕಿತ್ಸೆ ನಡೆಯುತ್ತಿದ್ದಾಗ ಏಕಾಏಕಿ ಭೂಮಿ ಕಂಪಿಸಿದ್ದು, ಕೊಠಡಿಯ ದೀಪಗಳು ಮಿನುಗುತ್ತಿದ್ದವು ಹಾಗೂ ಉಪಕರಣಗಳು ಅಕ್ಕಪಕ್ಕಕ್ಕೆ…

Read More

ಹೈಕಮಾಂಡ್​​ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಪ್ರಿಯಾಂಕ್​​ ಖರ್ಗೆ ಹೀಗದಿಂದ್ಯಾಕೆ? – Kannada News | Priyank Kharge on Cabinet Reshuffle: Minister Ready to Resign if High Command Directs Party Work

ಬೆಂಗಳೂರು, ಆಗಸ್ಟ್​​ 07: ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ ಮತ್ತು ಖಾತೆ ಹಂಚಿಕೆ ಕುರಿತ ಚರ್ಚೆಗಳ ನಡುವೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಯಾವುದೇ ಸಚಿವರಿಗೆ ಯಾವ ಜವಾಬ್ದಾರಿ ನೀಡಬೇಕು ಎಂಬುದು ಮುಖ್ಯಮಂತ್ರಿಗಳ ವಿವೇಚನೆಗೆ ಸೇರಿದ್ದು, ಅವರು ಹೈಕಮಾಂಡ್ ಜೊತೆ ಸಮಾಲೋಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ. ಪಕ್ಷದಲ್ಲಿ ಸುಮಾರು 140 ಶಾಸಕರಿದ್ದು, 30-33 ಸಚಿವ ಸ್ಥಾನಗಳಿವೆ. ಎಲ್ಲರಿಗೂ ತೃಪ್ತಿಪಡಿಸುವುದು ಕಷ್ಟದ ಕೆಲಸ. ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಪ್ರಾತಿನಿಧ್ಯ…

Read More

ತಲೆನೋವು ಕಡಿಮೆ ಮಾಡಲು ಕಾಫಿ ಸಹಾಯ ಮಾಡುತ್ತದೆಯೇ? ಈ ಬಗ್ಗೆ ವೈದ್ಯರ ಅಭಿಪ್ರಾಯವೇನು? – Kannada News | Best Ways to Relieve a Headache Naturally

ತಲೆನೋವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಒತ್ತಡ, ನಿದ್ರೆಯ ಕೊರತೆ, ದೇಹದಲ್ಲಿ ನೀರಿನ ಕೊರತೆ, ದೀರ್ಘಕಾಲ ಮೊಬೈಲ್ ಅಥವಾ ಕಂಪ್ಯೂಟರ್ ಪರದೆ ನೋಡುವುದು, ಅಸಮಯದ ಆಹಾರ ಸೇವನೆ ಸೇರಿದಂತೆ ಹಲವು ಕಾರಣಗಳಿಂದ ತಲೆನೋವು ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭಗಳಲ್ಲಿ ಅನೇಕರು ತಕ್ಷಣ ಒಂದು ಕಪ್ ಟೀ ಅಥವಾ ಕಾಫಿ ಕುಡಿಯುತ್ತಾರೆ. ಆದರೆ ಇದು ಎಲ್ಲರಿಗೂ ಪ್ರಯೋಜನಕಾರಿಯೇ? ಅಥವಾ ಕೆಲವರಲ್ಲಿ ತಲೆನೋವನ್ನು ಇನ್ನಷ್ಟು ಹೆಚ್ಚಿಸಬಹುದೇ? ಈ ಕುರಿತು ಆರೋಗ್ಯ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ. ತಲೆನೋವಿನ ಸಮಯದಲ್ಲಿ…

Read More

ವಾಹನ ಸವಾರರೇ ಗಮನಿಸಿ: ಕೆಆರ್ ಮಾರುಕಟ್ಟೆ ಫ್ಲೈಓವರ್ ಮೂಲಕ ಚಾಮರಾಜಪೇಟೆ ಕಡೆ ಹೋಗುವ ಲೂಪ್ ರಸ್ತೆ ಬಂದ್ – Kannada News | Bengaluru Traffic Alert: KR Market Flyover Loop Road to Chamarajpet Closed for 3 Months

ಬೆಂಗಳೂರು, ಆಗಸ್ಟ್ 7: ಬೆಂಗಳೂರು ನಗರದ ಪ್ರಮುಖ ಸಂಚಾರ ಮಾರ್ಗವಾದ ಕೆಆರ್ ಮಾರ್ಕೆಟ್ ಫ್ಲೈ ಓವರ್ (ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ) ಯ ಒಂದು ಭಾಗವನ್ನು ವೈಟ್ ಟಾಪಿಂಗ್ ಕಾಮಗಾರಿಗಾಗಿ ಮುಚ್ಚಲಾಗಿದೆ. ಚಾಮರಾಜಪೇಟೆಗೆ ಸಂಪರ್ಕ ಕಲ್ಪಿಸುವ ಲೂಪ್ ರಸ್ತೆಯು ಸುಮಾರು ಮೂರು ತಿಂಗಳ ಕಾಲ ಬಂದ್ ಆಗಿರಲಿದೆ ಎಂದು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ. ಬಿ ಸ್ಮೈಲ್ ಸಂಸ್ಥೆಯು ಕೈಗೆತ್ತಿಕೊಂಡಿರುವ ಈ ಕಾಮಗಾರಿಯು ಟೌನ್ ಹಾಲ್‌ನಿಂದ ಬಿಜಿಎಸ್ ಫ್ಲೈ ಓವರ್ ಹತ್ತಿ ಚಾಮರಾಜಪೇಟೆ ಕಡೆಗೆ ಹೋಗುವ ವಾಹನಗಳಿಗೆ ಸಂಚಾರ…

Read More