ಕರೆಂಟ್ ಬಿಲ್‌ನಲ್ಲಿನ ಹೆಸರು ಬದಲಾವಣೆಗೆ ಬೇಕಾಗುವ ದಾಖಲೆಗಳು
- ಹಳೆಯ ಕರೆಂಟ್ ಬಿಲ್
- ಆಸ್ತಿ ತೆರಿಗೆ ಪಾವತಿ ರಶೀದಿ
- ಆಧಾರ್ ಕಾರ್ಡ್
- ಬಾಂಡ್ ಪೇಪರ್ ಮೇಲಿನ ಇಂಡೆಮ್ನಿಟಿ ಬಾಂಡ್
- ಆಸ್ತಿ ಖರೀದಿ ಪತ್ರ ಅಥವಾ ಖಾತಾ ಪ್ರಮಾಣಪತ್ರ
ಕರೆಂಟ್ ಬಿಲ್‌ನಲ್ಲಿನ ಹೆಸರು ಬದಲಾವಣೆ ಮಾಡುವುದು ಹೇಗೆ?
ಹಂತ 1: ನಿಮ್ಮ ಹತ್ತಿರದ ವಿದ್ಯುತ್ ಸರಬರಾಜು ಕಚೇರಿಯಿಂದ ಇಲ್ಲವಾದ್ರೆ ಆನ್‌ಲೈನ್ ಮೂಲಕ ಹೆಸರು ಬದಲಾವಣೆ ಅರ್ಜಿ ಪಡೆದು ವಿವರಗಳನ್ನು ಭರ್ತಿ ಮಾಡಿ.
ಹಂತ 2: ಮೇಲೆ ತಿಳಿಸಿದ ಎಲ್ಲಾ ಅಗತ್ಯ ದಾಖಲೆಗಳ ಜೆರಾಕ್ಸ್ ಅಥವಾ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ.
ಹಂತ 3: ಕಚೇರಿಯಲ್ಲಿ ಅಥವಾ ಆನ್‌ಲೈನ್‌ನಲ್ಲಿ ನಿಗದಿತ ಪ್ರಕ್ರಿಯೆ ಶುಲ್ಕ ಪಾವತಿ ಮಾಡಿ.
ಹಂತ 4: ಪರಿಶೀಲನೆ ಬಳಿಕ ಮುಂದಿನ ತಿಂಗಳ ಬಿಲ್ ನಲ್ಲಿ ಹೊಸ ಹೆಸರು ಆಪ್ ಡೇಟ್ ಆಗಿರುತ್ತದೆ.
ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)
ಪ್ರಶ್ನೆ: ಕರೆಂಟ್ ಬಿಲ್ ನಿಮ್ಮ ಹೆಸರಿನಲ್ಲಿರುವುದು ಯಾಕೆ ಮುಖ್ಯ?
ಉತ್ತರ: ಕರೆಂಟ್ ಬಿಲ್ ಆಸ್ತಿ ಮಾಲೀಕತ್ವದ ಕಾನೂನಾತ್ಮಕ ಸಾಕ್ಷ್ಯ, ಸರ್ಕಾರಿ ಸಬ್ಸಿಡಿ ಪಡೆಯಲು, ಬ್ಯಾಂಕ್ ಸಾಲಗಳಿಗೆ ವಿಳಾಸದ ಪುರಾವೆಯಾಗಿದೆ. ಹೀಗಾಗಿ ನಿಮ್ಮ ಹೆಸರಿನಲ್ಲಿ ಇರುವುದು ಮುಖ್ಯವಾಗಿದೆ.
ಪ್ರಶ್ನೆ: ಕರೆಂಟ್ ಬಿಲ್ ನಿಮ್ಮ ಹೆಸರಿಗೆ ಮಾಡಲು ಯಾವೆಲ್ಲಾ ದಾಖಲೆಗಳು ಬೇಕು?
ಉತ್ತರ: ಕರೆಂಟ್ ಬಿಲ್ ಹೆಸರು ಬದಲಾವಣೆ ಮಾಡಲು ಹಳೆ ಕರೆಂಟ್ ಬಿಲ್, ಆಸ್ತಿ ಖರೀದಿ ಪತ್ರ ಅಥವಾ ಖಾತಾ ಪ್ರಮಾಣಪತ್ರ, ಆಸ್ತಿ ತೆರಿಗೆ ಪಾವತಿ ರಶೀದಿ, ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ ಬಾಂಡ್ ಪೇಪರ್ ಮೇಲಿನ ಇಂಡೆಮ್ನಿಟಿ ಬಾಂಡ್ ಈ ದಾಖಲೆಗಳು ಬೇಕು.
ಪ್ರಶ್ನೆ: ಕರೆಂಟ್ ಬಿಲ್ ನಲ್ಲಿನ ಹೆಸರು ಬದಲಾವಣೆ ಮಾಡುವುದು ಹೇಗೆ?
ಉತ್ತರ: ನೀವು ಕರ್ನಾಟಕದ ನಿವಾಸಿಯಾಗಿದ್ದರೆ ಮೆಸ್ಕಾಂ, ಬೆಸ್ಕಾಂ ಕಚೇರಿಗೆ ಭೇಟಿ ನೀಡಿ ನಿಗದಿತ ಅರ್ಜಿ ಹಾಗೂ ದಾಖಲೆ ನೀಡಿದ್ರೆ ಕರೆಂಟ್ ಬಿಲ್ ನಿಮ್ಮ ಹೆಸರಿನಲ್ಲಿ ಆಗುತ್ತದೆ.
