ಯೋಗೇಶ್ ಗೌಡ ಕೊಲೆ ಕೇಸ್: ಜೀವಾವಧಿ ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ವಿನಯ್ ಕುಲಕರ್ಣಿ! – Kannada News | Vinay Kulkarni Moves To High Court Seeking Bail And Stay On Life Sentence Yogesh Gowda Murder Case

ಬೆಂಗಳೂರು, ಏಪ್ರಿಲ್ 25: ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿನಯ್ ಕುಲಕರ್ಣಿ ಅವರು ಹೈಕೋರ್ಟ್‌ಗೆ ಮೇಲ್ಮನವಿಯನ್ನ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳ ಕೋರ್ಟ್ ವಿಧಿಸಿದ್ದ ಜೀವಾವಧಿ ಶಿಕ್ಷೆ ಹಾಗೂ ಸಕ್ಷಮ ನ್ಯಾಯಾಲಯ ನೀಡಿದ್ದ ಕನ್ವಿಕ್ಷನ್ ಆದೇಶವನ್ನ ಪ್ರಶ್ನಿಸಿ, ಶಿಕ್ಷೆಗೆ ತಡೆಯಾಜ್ಞೆ ಮತ್ತು ಜಾಮೀನು ನೀಡುವಂತೆ ಅವರು ಮನವಿ ಮಾಡಿದ್ದಾರೆ.

ತಮ್ಮ ಶಾಸಕ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಗಳಿರುವ ಕಾರಣ, ಶಿಕ್ಷೆಗೆ ತಕ್ಷಣ ತಡೆಯಾಜ್ಞೆ ನೀಡುವಂತೆ ಕೋರಿದ್ದಾರೆ. ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ಮುಂದಿನ ವಾರ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ವಿಚಾರಣೆಯ ವೇಳೆ ಸಿಬಿಐ ವಾದವನ್ನೂ ನ್ಯಾಯಾಲಯ ಆಲಿಸುವ ನಿರೀಕ್ಷೆಯಿದೆ. ಜೀವಾವಧಿ ಶಿಕ್ಷೆ ಆದೇಶವನ್ನು ರದ್ದುಪಡಿಸುವಂತೆ ತಮ್ಮ ಅರ್ಜಿಯಲ್ಲಿ ವಿನಯ್ ಕುಲಕರ್ಣಿ ಕೋರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

1,376 ಕಿ.ಮೀ ದೂರದ ತವರು ಮೈದಾನದಲ್ಲಿ 2 ಪಂದ್ಯಗಳನ್ನಾಡಲಿದೆ RCB

Source link

ಟಿಸಿಎಸ್ ಲೈಂಗಿಕ ಕಿರುಕುಳ, ಮತಾಂತರ ಪ್ರಕರಣ: ತನಿಖೆಯಲ್ಲಿ ಮಹತ್ವದ ಬೆಳವಣಿಗೆ, ಮತ್ತಷ್ಟು ಆಘಾತಕಾರಿ ವಿಚಾರ ಬಯಲು – Kannada News | Nashik TCS Case: SIT Bypasses High Level Digital Security on Accused’s Phone; Intoxicating Sheer Khurma Lead Emerges

ಟಿಸಿಎಸ್ (ಸಾಂದರ್ಭಿಕ ಚಿತ್ರ)Image Credit source: TV9 Network

ಮುಂಬೈ, ಏಪ್ರಿಲ್ 25: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನ ನಾಸಿಕ್ ಘಟಕದಲ್ಲಿ ನಡೆದಿರುವ ಮಹಿಳಾ ಉದ್ಯೋಗಿಗಳ ಮೇಲಿನ ಲೈಂಗಿಕ ಕಿರುಕುಳ ಹಾಗೂ ಬಲವಂತದ ಧಾರ್ಮಿಕ ಮತಾಂತರ ಪ್ರಕರಣ ಸಂಬಂಧ ಮತ್ತಷ್ಟು ಸ್ಫೋಟಕ ಮಾಹಿತಿ ಬಯಲಾಗಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಪ್ರಮುಖ ಆರೋಪಿಯ ಮೊಬೈಲ್ ದತ್ತಾಂಶಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಮುಖ ಆರೋಪಿ ದಾನಿಶ್ ಶೇಖ್ ಮೊಬೈಲ್ ಫೋನ್‌ನ ಪ್ರತಿ ಫೈಲ್ ಮತ್ತು ಅಪ್ಲಿಕೇಶನ್‌ಗೆ ಪ್ರತ್ಯೇಕ ಪಾಸ್‌ವರ್ಡ್ ಹಾಗೂ ಫೇಸ್ ಐಡಿ (Face ID) ಸೆಕ್ಯೂರಿಟಿ ಅಳವಡಿಸಿದ್ದರಿಂದ ಅದರಲ್ಲಿರುವ ಮಾಹಿತಿ ಕಲೆಹಾಕುವುದು ಪೊಲೀಸರಿಗೆ ಬಹಳ ಸವಾಲಿನ ಕೆಲಸವಾಗಿತ್ತು. ಅದನ್ನೀಗ ಪೊಲೀಸರು ಭೇದಿಸಿದ್ದಾರೆ.

ಪೊಲೀಸರ ತಾಂತ್ರಿಕ ಸವಾಲು ಮತ್ತು ಫೇಸ್ ಐಡಿ ಕಾರ್ಯಾಚರಣೆ

ದಾನಿಶ್ ಶೇಖ್ ಮೊಬೈಲ್​ನ ಫೋನ್‌ನ ಪ್ರತಿ ಫೈಲ್ ಮತ್ತು ಅಪ್ಲಿಕೇಶನ್‌ಗೆ ಪ್ರತ್ಯೇಕ ಪಾಸ್‌ವರ್ಡ್ ಹಾಗೂ ಫೇಸ್ ಐಡಿ ಸೆಕ್ಯೂರಿಟಿ ಅಳವಡಿಸಿದ್ದರಿಂದ ಪೊಲೀಸರು ಈ ಸವಾಲನ್ನು ಭೇದಿಸಲು ವಿಶೇಷ ನ್ಯಾಯಾಲಯದ ಅನುಮತಿ ಪಡೆದರು. ನಂತರ ಆರೋಪಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕರೆದೊಯ್ದು, ಆತನ ಮುಖದ ಚಹರೆ (Face ID) ಬಳಸಿ ಫೋನ್ ಅನ್‌ಲಾಕ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಪೊಲೀಸರಿಗೆ ಆ ಮೊಬೈಲ್‌ನಲ್ಲಿರುವ ಎನ್‌ಕ್ರಿಪ್ಟ್ ಆದ ಮಾಹಿತಿಗಳು ಮತ್ತು ಚಾಟ್‌ಗಳು ಮತಾಂತರ ಜಾಲದ ಹಣಕಾಸು ಮೂಲ ಹಾಗೂ ಜಾಲದ ಬಗ್ಗೆ ಮಹತ್ವದ ಮಾಹಿತಿ ದೊರೆಯುವ ನಿರೀಕ್ಷೆಯಿದೆ.

ಮತ್ತು ಬರಿಸುವ ಶೀರ್ ಕುರ್ಮಾ ತಿನ್ನಿಸಿ ಉದ್ಯೋಗಿಯ ಖೆಡ್ಡಾಕ್ಕೆ ಕೆಡವಿದ ಆರೋಪ

ಆರೋಪಿಗಳು ಮತ್ತು ಬರಿಸುವ ಸಿಹಿ ಪದಾರ್ಥ ನೀಡಿ ಉದ್ಯೋಗಿಯೊಬ್ಬರನ್ನು ಬಲೆಗೆ ಬೀಳಿಸಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಸಂತ್ರಸ್ತ ಉದ್ಯೋಗಿ ನೀಡಿರುವ ಹೇಳಿಕೆಯ ಪ್ರಕಾರ, ಆರೋಪಿ ತೌಸಿಫ್ ಬಿಲಾಲ್ ಅತ್ತಾರ್ ಎಂಬಾತ ಸಂತ್ರಸ್ತನನ್ನು ಸ್ನೇಹದ ಜಾಲಕ್ಕೆ ಸೆಳೆದಿದ್ದ. ಈದ್ ಹಬ್ಬದ ದಿನ ತೌಸಿಫ್ ಮನೆಯಲ್ಲಿ ‘ಶೀರ್ ಕುರ್ಮಾ’ ಸೇವಿಸಿದ ಬಳಿಕ ತನಗೆ ಅತಿಯಾದ ಅಮಲೇರಿದಂತಾಗಿ ದಿಕ್ಕುತೋಚದಂತಾಗಿತ್ತು ಎಂದು ಸಂತ್ರಸ್ತ ಉದ್ಯೋಗಿ ಹೇಳಿದ್ದಾರೆ. ಉದ್ಯೋಗಿಯ ಕುಟುಂಬದ ಸಮಸ್ಯೆಗಳು ಮತ್ತು ಮಾನಸಿಕ ಒತ್ತಡವನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು, ಇದಕ್ಕೆ ‘ಮಾಟ-ಮಂತ್ರ’ವೇ ಪರಿಹಾರ ಎಂದು ನಂಬಿಸಿ ಬಲವಂತವಾಗಿ ಮತಾಂತರಕ್ಕೆ ಪ್ರಚೋದನೆ ನೀಡಿದ್ದರು ಎನ್ನಲಾಗಿದೆ.

ಅಷ್ಟೇ ಅಲ್ಲದೆ, ಉದ್ಯೋಗಿಯು ಆರೋಪಿಗಳ ಗುಂಪಿನ ಮೇಲೆ ಅವಲಂಬಿತವಾಗುವಂತೆ ಮಾಡಲು ಆತನ ಕೆಲಸದ ಬಗ್ಗೆ ಕಚೇರಿಯ ಮೇಲಧಿಕಾರಿಗಳಿಗೆ ಸುಳ್ಳು ವರದಿಗಳನ್ನು ಕಳುಹಿಸಿ ವೃತ್ತಿಜೀವನದಲ್ಲಿ ಅಸ್ಥಿರತೆ ಉಂಟುಮಾಡಲಾಗಿತ್ತು ಎಂಬ ಭಯಾನಕ ಸತ್ಯ ಬಯಲಾಗಿದೆ.

ಇದನ್ನೂ ಓದಿ: “ನೀನು ತುಂಬಾ ಸಣ್ಣಗಿದ್ದೀಯ, ಜಿಮ್‌ಗೆ ಹೋದ್ರೆ ಸೆಕ್ಸಿಯಾಗಿ ಕಾಣ್ತೀಯ”: ಟಿಸಿಎಸ್ ಸಹೋದ್ಯೋಗಿ ಬಗ್ಗೆ ಯುವತಿ ಸ್ಫೋಟಕ ಹೇಳಿಕೆ

ಮತಾಂತರದ ಜೊತೆಗೆ, ಟಿಸಿಎಸ್‌ನ ಹಲವಾರು ಮಹಿಳಾ ಉದ್ಯೋಗಿಗಳು ಸಹೋದ್ಯೋಗಿಗಳ ವಿರುದ್ಧ ಲೈಂಗಿಕ ಕಿರುಕುಳದ ದೂರುಗಳನ್ನು ನೀಡಿದ್ದಾರೆ. ಪ್ರಕರಣ ಸಂಬಂಧ ಈವರೆಗೆ ಪೊಲೀಸರು 7 ಮಂದಿಯನ್ನು ಬಂಧಿಸಿ, 9 ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣದ ಗಂಭೀರತೆ ಅರಿತ ಟಿಸಿಎಸ್ ಸಂಸ್ಥೆಯು ಏಳು ಮಂದಿ ಆರೋಪಿಗಳನ್ನೂ ಕೆಲಸದಿಂದ ಅಮಾನತುಗೊಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Summer Health Tips: ಬೇಸಿಗೆಯಲ್ಲಿ ಇಡ್ಲಿ,ದೋಸೆ ಹಿಟ್ಟು ಬೇಗ ಹುಳಿಯಾಗುತ್ತಿದೆಯೇ? ಹಾಗಿದ್ದರೆ ಈ ಟಿಪ್ಸ್​ ಪಾಲಿಸಿ – Kannada News | Summer Batter Care: Prevent Idli/Dosa Spoilage and Ensure Health | Fermentation Tips

ಬೇಸಿಗೆಯಲ್ಲಿ ಇಡ್ಲಿ, ದೋಸೆ ಹಿಟ್ಟುImage Credit source: gemini ai

ನಮ್ಮ ದೈನಂದಿನ ಜೀವನದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಬಿಸಿಬಿಸಿ ಇಡ್ಲಿ ಅಥವಾ ಗರಿಗರಿಯಾದ ದೋಸೆ ಜೊತೆಗೆ ಒಂದು ಕಪ್ ಕಾಫಿ ಸಿಗದಿದ್ದರೆ ದಿನವೇ ಅಪೂರ್ಣ ಎನಿಸುತ್ತದೆ. ಈ ಪೌಷ್ಟಿಕ ಆಹಾರಗಳು ಕೇವಲ ಹೊಟ್ಟೆ ತುಂಬಿಸುವುದಲ್ಲದೆ, ನಾಲಿಗೆಗೂ ಹಿತ ನೀಡುತ್ತವೆ. ಆದರೆ, ಬೇಸಿಗೆಯ ಸುಡುವ ಬಿಸಿಲಿನಲ್ಲಿ ಒಂದು ಸಣ್ಣ ನಿರ್ಲಕ್ಷ್ಯವೂ ಈ ರುಚಿಕರ ಆಹಾರವನ್ನು ಆರೋಗ್ಯಕ್ಕೆ ಹಾನಿಕಾರಕವಾಗಿ ಬದಲಿಸಬಹುದು. ಹೀಗಾಗಿ, ಬೇಸಿಗೆಯಲ್ಲಿ ಹಿಟ್ಟಿನ ತಯಾರಿಕೆ ಮತ್ತು ಬಳಕೆಯ ಮೇಲೆ ಒಂದು ಕಣ್ಣಿಡುವುದು ಬಹಳ ಮುಖ್ಯ.

ಅಕ್ಕಿ ಮತ್ತು ಉದ್ದಿನ ಹಿಟ್ಟು ಹುಳಿಯಾಗುವ ಪ್ರಕ್ರಿಯೆಯನ್ನು ವಿಜ್ಞಾನದ ಭಾಷೆಯಲ್ಲಿ ‘ಫರ್ಮೆಂಟೇಶನ್’ ಎನ್ನಲಾಗುತ್ತದೆ. ಇದರಲ್ಲಿ ಲ್ಯಾಕ್ಟೋಬ್ಯಾಸಿಲಸ್ ಎಂಬ ಉತ್ತಮ ಬ್ಯಾಕ್ಟೀರಿಯಾಗಳು ಸಕ್ಕರೆಯನ್ನು ಒಡೆದು ಲ್ಯಾಕ್ಟಿಕ್ ಆ್ಯಸಿಡ್ ಆಗಿ ಪರಿವರ್ತಿಸುತ್ತವೆ. ಈ ಪ್ರಕ್ರಿಯೆಯಿಂದ ಹಿಟ್ಟು ಹಗುರವಾಗುವುದಲ್ಲದೆ, ಪ್ರೋಟೀನ್ ಜೀರ್ಣಕ್ರಿಯೆಗೆ ಸುಲಭವಾಗುತ್ತದೆ. ಅಲ್ಲದೆ, ಹಿಟ್ಟಿನಲ್ಲಿ ಬಿ12 ಮತ್ತು ಫೋಲೇಟ್ ಅಂಶಗಳು ಹೆಚ್ಚಿ, ನಮ್ಮ ಕರುಳಿಗೆ ಅಗತ್ಯವಿರುವ ‘ಪ್ರೋಬಯೋಟಿಕ್’ ಬ್ಯಾಕ್ಟೀರಿಯಾಗಳನ್ನು ಒದಗಿಸುತ್ತದೆ. ಸರಿಯಾದ ಪ್ರಮಾಣದಲ್ಲಿ ಹುಳಿಯಾದ ಹಿಟ್ಟು ಆರೋಗ್ಯಕ್ಕೆ ಅಮೃತವಿದ್ದಂತೆ.

ಆದರೆ, ತಾಪಮಾನ ಹೆಚ್ಚಾದಂತೆ ಬ್ಯಾಕ್ಟೀರಿಯಾಗಳ ಚಟುವಟಿಕೆಯೂ ವೇಗವಾಗುತ್ತದೆ. ಚಳಿಗಾಲದಲ್ಲಿ ಹಿಟ್ಟು ಹುಳಿಯಾಗಲು 8 ರಿಂದ 10 ಗಂಟೆ ಬೇಕಾದರೆ, ಬೇಸಿಗೆಯ 30-37 ಡಿಗ್ರಿ ತಾಪಮಾನದಲ್ಲಿ ಕೇವಲ 3 ರಿಂದ 5 ಗಂಟೆಗಳಲ್ಲೇ ಹಿಟ್ಟು ಸಿದ್ಧವಾಗಿಬಿಡುತ್ತದೆ. ಒಂದು ವೇಳೆ ಸಮಯ ಮೀರಿದರೆ ಹಿಟ್ಟು ‘ಓವರ್ ಫರ್ಮೆಂಟ್’ ಆಗಿ, ಅದರಲ್ಲಿರುವ ಪೌಷ್ಟಿಕಾಂಶಗಳು ನಶಿಸಿ ಕೆಟ್ಟ ಬ್ಯಾಕ್ಟೀರಿಯಾಗಳು ಬೆಳೆಯಲು ಶುರುವಾಗುತ್ತವೆ. ಇದರಿಂದ ಹಿಟ್ಟು ಅತಿಯಾಗಿ ಹುಳಿಯಾಗುವುದು ಮಾತ್ರವಲ್ಲದೆ ಕಹಿಯಾಗುವ ಸಾಧ್ಯತೆಯೂ ಇರುತ್ತದೆ.

ಇದನ್ನೂ ಓದಿ: ಲಿವರ್‌ ಆರೋಗ್ಯಕರವಾಗಿರಬೇಕಂದ್ರೆ ತಪ್ಪದೇ ಈ ಆಹಾರಗಳನ್ನು ಸೇವನೆ ಮಾಡಲೇಬೇಕು

ಹಿಟ್ಟು ಹಾಳಾಗಿದೆಯೇ ಎಂದು ತಿಳಿಯುವುದು ಹೇಗೆ?

ನಿಮ್ಮ ಮನೆಯ ಹಿಟ್ಟು ಹಾಳಾಗಿದೆಯೇ ಎಂದು ತಿಳಿಯಲು ಕೆಲವು ಸುಲಭ ಮಾರ್ಗಗಳಿವೆ. ಹಿಟ್ಟಿನಿಂದ ಕಟು ಹುಳಿ ವಾಸನೆ ಅಥವಾ ಘಾಟು ವಾಸನೆ ಬರುತ್ತಿದ್ದರೆ, ಅದರ ಬಣ್ಣ ಬದಲಾಗಿದ್ದರೆ ಅಥವಾ ಅತಿಯಾಗಿ ನೊರೆ ಬರುತ್ತಿದ್ದರೆ ಅಂತಹ ಹಿಟ್ಟನ್ನು ಬಳಸಬೇಡಿ. ಇಂತಹ ಹಿಟ್ಟಿನಿಂದ ತಯಾರಿಸಿದ ಆಹಾರ ಸೇವನೆಯು ವಾಕರಿಕೆ, ಹೊಟ್ಟೆ ನೋವು ಮತ್ತು ಅತಿಸಾರದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಜ್ಞಾನದ ಪ್ರಕಾರ, ಸರಿಯಾದ ಹದದಲ್ಲಿರುವ ಹಿಟ್ಟು ಕಬ್ಬಿಣ ಮತ್ತು ಕ್ಯಾಲ್ಸಿಯಂ ಹೀರಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಆದರೆ ಅತಿಯಾಗಿ ಹುಳಿಯಾದ ಹಿಟ್ಟು ಅಸಿಡಿಟಿಯನ್ನು ಉಂಟುಮಾಡುತ್ತದೆ.

ಬೇಸಿಗೆಯಲ್ಲಿ ಹಿಟ್ಟು ಹಾಳಾಗದಂತೆ ತಡೆಯಲು ಕೆಲವು ಸರಳ ಸೂತ್ರಗಳನ್ನು ಪಾಲಿಸಬಹುದು. ಹಿಟ್ಟು ಅರೆದ ನಂತರ ಹೆಚ್ಚು ಕಾಲ ಹೊರಗಿಡದೆ, ಸರಿಯಾದ ಹದಕ್ಕೆ ಏರಿದ ತಕ್ಷಣ ಫ್ರಿಡ್ಜ್‌ನಲ್ಲಿ ಇರಿಸಿ. ಹಿಟ್ಟು ಅರೆಯಲು ತಣ್ಣನೆಯ ನೀರನ್ನು ಬಳಸಿ ಮತ್ತು ಪಾತ್ರೆಗಳು ಸಂಪೂರ್ಣವಾಗಿ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ.

ಲೇಖನ: ಡಾ. ರವಿಕಿರಣ್ ಪಟವರ್ಧನ, ಪಟವರ್ಧನ ಆಯುರ್ವೇದ ಕ್ಲಿನಿಕ್, ಶಿರಸಿ (9242122874)

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

GBA Election: ಚುನಾವಣೆ ನಡೆಸಲು ಹಣವಿಲ್ಲ, ಸಿಬ್ಬಂದಿಯೂ ಇಲ್ಲ! ಸೆಪ್ಟೆಂಬರ್​ವರೆಗೆ ಗಡುವು ಕೋರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ಚುನಾವಣಾ ಆಯೋಗ! – Kannada News | GBA Election Delay: State Election Commission Seeks Extension Until September 30

ನವದೆಹಲಿ, ಏಪ್ರಿಲ್ 25: ಬೆಂಗಳೂರು ನಗರ ಪಾಲಿಕೆಗಳ ಚುನಾವಣೆಯ ಕುರಿತಾಗಿ ಮಹತ್ವದ ವಿಚಾರ ಬೆಳಕಿಗೆ ಬಂದಿದೆ. ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಚುನಾವಣೆಯನ್ನು ಜೂನ್ 30ರೊಳಗೆ ನಡೆಸುವ ಬದಲು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲು ಮನವಿ ಮಾಡಿದೆ.

ಜಾತಿಗಣತಿಯಲ್ಲೇ ನಿರತರಾಗಿರುವ ಸಿಬ್ಬಂದಿ

ಸುಪ್ರೀಂ ಕೋರ್ಟ್ ನಿಗದಿಪಡಿಸಿದ್ದ ಗಡುವಿನೊಳಗೆ ಚುನಾವಣೆಯನ್ನು ಪೂರ್ಣಗೊಳಿಸಲು ಸಿಬ್ಬಂದಿ ಮತ್ತು ಹಣದ ಕೊರತೆ ಇದೆ ಎಂದು ಆಯೋಗ ತಿಳಿಸಿದೆ. ಇದೇ ವೇಳೆ ಜನಗಣತಿ ಕಾರ್ಯಗಳು ಏಪ್ರಿಲ್ 16ರಿಂದ ಮೇ 15ರವರೆಗೆ ನಡೆಯುತ್ತಿರುವುದರಿಂದ ಕ್ಷೇತ್ರದ ಸಿಬ್ಬಂದಿ ಅದರಲ್ಲಿ ನಿರತರಾಗಿರುತ್ತಾರೆ ಎಂದು ಹೇಳಲಾಗಿದೆ. ಜೊತೆಗೆ, ಮತದಾರರ ಪಟ್ಟಿಯ ವಿಶೇಷ ತಿದ್ದುಪಡಿ (SIR) ಕಾರ್ಯವೂ ನಡೆಯುವ ಸಾಧ್ಯತೆ ಇರುವುದರಿಂದ ಚುನಾವಣಾ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಕ್ಷಣ ಹಣ ಬಿಡುಗಡೆ ಮಾಡುವಂತೆ ಬೇಡಿಕೆ

ಈ ಕುರಿತು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಖ್ಯ ಆಯುಕ್ತರು ಏಪ್ರಿಲ್ 6ರಂದು ಪತ್ರ ಬರೆದು ಚುನಾವಣೆಗೆ ಗಡುವು ವಿಸ್ತರಿಸುವಂತೆ ಕೇಳಿಕೊಂಡಿದ್ದರು. ಬಳಿಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯೂ ಇದೇ ಬೇಡಿಕೆಯನ್ನು ಪುನರಾವರ್ತಿಸಿದೆ. ಆಯೋಗವು ಏಪ್ರಿಲ್ 18ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಚುನಾವಣೆಯನ್ನು ಜೂನ್ 30ರೊಳಗೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದೆ.

ಚುನಾವಣೆ ನಡೆಸಲು ಅಗತ್ಯವಾದ ಸಿಬ್ಬಂದಿ, ಮೂಲಸೌಕರ್ಯ ಹಾಗೂ ಫಂಡ್​ಗಾಗಿ ರಾಜ್ಯ ಸರ್ಕಾರದ ಮೇಲೆಯೇ ಸಂಪೂರ್ಣ ಅವಲಂಬಿತವಾಗಿರುವುದಾಗಿ ಆಯೋಗ ಹೇಳಿದ್ದು, ತಕ್ಷಣ ಹಣ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಕೇಳಿಕೊಂಡಿದೆ. ಈ ಕುರಿತು ಸೂಕ್ತ ಆದೇಶ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಕ್ಕಳ ಜೊತೆ ಕೊಡಗು ಸುತ್ತಿದ ರಾಧಿಕಾ ಪಂಡಿತ್; ಇಲ್ಲಿವೆ ಸುಂದರ ಫೋಟೋಸ್ – Kannada News | Radhika Pandit Spend Summer Vacation In Coorg With Ayra And Yatharv

ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಹಾಗೂ ‘ರಾಮಾಯಣ’ ಸಿನಿಮಾ ಪ್ರಚಾರಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ರಾಧಿಕಾ ಪಂಡಿತ್ ಅವರು ಮಕ್ಕಳ ಜೊತೆ ಕೊಡಗಿಗೆ ತೆರಳಿದ್ದಾರೆ.

Source link

ದೆಹಲಿಯಲ್ಲಿ ಡಿಕೆ ಸಹೋದರರ ಬಿಗಿ ಪಟ್ಟು: ಮೇ ಮೊದಲ ವಾರವೇ ದೊಡ್ಡ ಬೆಳವಣಿಗೆ ಸಾಧ್ಯತೆ? – Kannada News | Karnataka Power Tussle: DK Shivakumar, DK Suresh Meet Mallikarjun Kharge in Delhi; Major Announcement Likely in May

ನವದೆಹಲಿ, ಏಪ್ರಿಲ್ 25: ಕರ್ನಾಟಕ ರಾಜ್ಯ ರಾಜಕಾರಣದ ಪ್ರಮುಖ ಬೆಳವಣಿಗೆಯೊಂದರಲ್ಲಿ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ‘ಕೇವಲ ಗಾಳಿ ಸೇವನೆಗೆ ಇಲ್ಲಿಗೆ ಬಂದಿಲ್ಲ’ ಎಂದು ಡಿಕೆ ಶಿವಕುಮಾರ್ ಹೇಳಿರುವ ಮಾತು, ಅವರ ಭೇಟಿಯ ಹಿಂದಿನ ರಾಜಕೀಯ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಮೇ ಮೊದಲ ವಾರದಲ್ಲಿ ಕೆಲವು ಪ್ರಮುಖ ನಿರ್ಧಾರಗಳು ಹೊರಬರಬಹುದು. ರಾಜ್ಯ ನಾಯಕರನ್ನು ಹೈಕಮಾಂಡ್ ದೆಹಲಿಗೆ ಕರೆದು ಮಾತುಕತೆ ನಡೆಸಬಹುದು ಎಂದು ಡಿಕೆ ಸಹೋದರರು ನಿರೀಕ್ಷಿಸುತ್ತಿದ್ದಾರೆ ಎನ್ನಲಾಗಿದೆ. ಆ ಭೇಟಿಯ ಪೂರ್ವಭಾವಿಯಾಗಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸುದೀರ್ಘ ಚರ್ಚೆ ನಡೆಸಿದ್ದಾರೆ. ಒಂದು ಕಡೆ ಸರ್ಕಾರಿ ಕೆಲಸಗಳ ನೆಪದಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದರೂ, ಅವರ ಮುಖ್ಯ ಉದ್ದೇಶ ಪಕ್ಷದ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿ ತಮ್ಮ ಹಕ್ಕೊತ್ತಾಯವನ್ನು ಗಟ್ಟಿಗೊಳಿಸುವುದಾಗಿದೆ ಎಂದು ಮೂಳಗಳು ತಿಳಿಸಿವೆ.

ಸಂಪುಟ ವಿಸ್ತರಣೆ ಅಥವಾ ಪುನರಚನೆಗಿಂತ ಮೊದಲು ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆ ಆಗಬೇಕು ಎಂಬ ಪ್ರಸ್ತಾಪವನ್ನು ಡಿಕೆ ಬಣ ಮುಂದಿಡುತ್ತಿದೆ. ಇತ್ತ ಸಿಎಂ ಬಣ ಕೂಡ ಮೇಲಿಂದ ಮೇಲೆ ಸಭೆಗಳನ್ನು ನಡೆಸಿ ಹೈಕಮಾಂಡ್ ಕರೆದರೆ ಮುಂದಿನ ತಂತ್ರಗಾರಿಕೆ ಏನು ಎಂಬುದರ ಬಗ್ಗೆ ಸಿದ್ಧತೆ ನಡೆಸುತ್ತಿದೆ. ಮೇ ಮೊದಲ ವಾರದ ಬಳಿಕ ರಾಜ್ಯ ರಾಜಕಾರಣ ದೆಹಲಿಗೆ ಶಿಫ್ಟ್‌ ಆಗುವ ಎಲ್ಲ ಸಾಧ್ಯತೆಗಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tirumala Darshan: ತಿರುಮಲ ಭಕ್ತರಿಗೆ ಗುಡ್ ನ್ಯೂಸ್; 300 ರೂ. ದರ್ಶನ ಟಿಕೆಟ್ ಸಿಗಲಿಲ್ಲವೇ? ಇಲ್ಲಿದೆ ತಿಮ್ಮಪ್ಪನ ಭೇಟಿಗೆ ಮತ್ತೊಂದು ಸುಲಭ ದಾರಿ! – Kannada News | Tirumala Darshan: TTD’s New Srinivasa Divyanugraha Homam for Special Entry

ತಿರುಮಲ ಭಕ್ತರಿಗೆ ಗುಡ್ ನ್ಯೂಸ್Image Credit source: Pinterest

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಬಯಸುವ ಭಕ್ತರಿಗೆ 300 ರೂ.ಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ಪಡೆಯುವುದು ದೊಡ್ಡ ಸವಾಲಾಗಿದೆ. ಆನ್‌ಲೈನ್‌ನಲ್ಲಿ ಟಿಕೆಟ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಅವು ಖಾಲಿಯಾಗುವುದರಿಂದ ಲಕ್ಷಾಂತರ ಭಕ್ತರು ದರ್ಶನ ಭಾಗ್ಯದಿಂದ ವಂಚಿತರಾಗುತ್ತಿದ್ದರು. ಇಂತಹ ಭಕ್ತರಿಗಾಗಿ ತಿರುಮಲ ತಿರುಪತಿ ದೇವಸ್ಥಾನಂ (TTD) ಈಗ ‘ಶ್ರೀನಿವಾಸ ದಿವ್ಯಾನುಗ್ರಹ ವಿಶೇಷ ಹೋಮ’ ಎಂಬ ಹೊಸ ಪರ್ಯಾಯ ಮಾರ್ಗವನ್ನು ಪರಿಚಯಿಸಿದೆ. ಈ ಹೋಮದಲ್ಲಿ ಪಾಲ್ಗೊಳ್ಳುವ ಮೂಲಕ ಭಕ್ತರು ಸುಲಭವಾಗಿ ದೇವರ ದರ್ಶನ ಪಡೆಯಬಹುದಾಗಿದೆ.

ಈ ವಿಶೇಷ ಸೌಲಭ್ಯದ ಅಡಿಯಲ್ಲಿ, ದಿವ್ಯಾನುಗ್ರಹ ಹೋಮದ ಟಿಕೆಟ್ ಪಡೆದವರಿಗೆ ಟಿಟಿಡಿ ನೇರವಾಗಿ 300 ರೂ. ಮೌಲ್ಯದ ವಿಶೇಷ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತದೆ. ಒಂದು ಹೋಮದ ಟಿಕೆಟ್ ದರ 1600 ರೂ. ಆಗಿದ್ದು, ಇದರಲ್ಲಿ ಇಬ್ಬರು ಭಕ್ತರು ಭಾಗವಹಿಸಬಹುದು. ಹೋಮವು ಅಲಿಪಿರಿಯ ಸಪ್ತಗೋಪ್ರದಕ್ಷಿಣ ಶಾಲೆಯಲ್ಲಿ ಪ್ರತಿದಿನ ನಡೆಯಲಿದ್ದು, ಹೋಮ ಪೂರ್ಣಗೊಂಡ ನಂತರ ಅಂದೇ ಮಧ್ಯಾಹ್ನ 3 ಗಂಟೆಗೆ ಭಕ್ತರಿಗೆ ಶ್ರೀವಾರಿಯ ದರ್ಶನಕ್ಕೆ ಕಳುಹಿಸಿಕೊಡಲಾಗುತ್ತದೆ. ಈ ಮೂಲಕ ದರ್ಶನ ಟಿಕೆಟ್ ಸಿಗದವರು ಈ ಹೋಮದ ಮೂಲಕ ಪವಿತ್ರ ಕಾರ್ಯದಲ್ಲಿ ಭಾಗಿಯಾಗಿ ಸ್ವಾಮಿಯ ಕೃಪೆಗೆ ಪಾತ್ರರಾಗಬಹುದು.

ಇದನ್ನೂ ಓದಿ: ಭಾರತದ ಈ ಪಟ್ಟಣದಲ್ಲಿ ಈರುಳ್ಳಿ ಮಾರಾಟ ಮಾಡುವಂತಿಲ್ಲ, ನಿಷೇಧದ ಹಿಂದಿನ ಕುತೂಹಲಕಾರಿ ಸಂಗತಿ ಇಲ್ಲಿದೆ

ಮೇ ತಿಂಗಳ ಕೋಟಾಕ್ಕೆ ಸಂಬಂಧಿಸಿದ ದಿವ್ಯಾನುಗ್ರಹ ಹೋಮದ ಟಿಕೆಟ್‌ಗಳನ್ನು ಟಿಟಿಡಿ ಏಪ್ರಿಲ್ 25 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದೆ. ಭಕ್ತರು ಟಿಟಿಡಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಈ ಟಿಕೆಟ್‌ಗಳನ್ನು ಕಾಯ್ದಿರಿಸಬಹುದಾಗಿದೆ. ಸಾಮಾನ್ಯ ದರ್ಶನ ಟಿಕೆಟ್‌ಗಳಿಗಾಗಿ ತಿಂಗಳುಗಟ್ಟಲೆ ಕಾಯುವ ಬದಲು, ಈ ಅವಕಾಶವನ್ನು ಬಳಸಿಕೊಳ್ಳುವುದು ಭಕ್ತರಿಗೆ ಹೆಚ್ಚು ಅನುಕೂಲಕರವಾಗಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ದರ್ಶನದ ಜೊತೆಗೆ ತಿರುಮಲದಲ್ಲಿ ಈಗ ಉತ್ಸವಗಳ ಸಂಭ್ರಮವೂ ಮನೆಮಾಡಿದೆ. ಏಪ್ರಿಲ್ 25 ರಿಂದ ಮೂರು ದಿನಗಳ ಕಾಲ ಶ್ರೀ ಪದ್ಮಾವತಿ ಮತ್ತು ಶ್ರೀನಿವಾಸರ ‘ಪರಿಣಯೋತ್ಸವ’ ವೈಭವದಿಂದ ಜರುಗಲಿದೆ. ಮೊದಲ ದಿನ ಗಜ ವಾಹನ, ಎರಡನೇ ದಿನ ಅಶ್ವ ವಾಹನ ಮತ್ತು ಮೂರನೇ ದಿನ ಗರುಡ ವಾಹನದ ಮೇಲೆ ಮಲಯಪ್ಪ ಸ್ವಾಮಿಯ ಮೆರವಣಿಗೆ ನಡೆಯಲಿದೆ. ಈ ಸಂದರ್ಭದಲ್ಲಿ ತಿರುಮಲಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಿರುವುದರಿಂದ, ದರ್ಶನಕ್ಕೆ ಯಾವುದೇ ತೊಂದರೆಯಾಗದಂತೆ ಟಿಟಿಡಿ ವತಿಯಿಂದ ವ್ಯಾಪಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಫಿಲ್ ಸಾಲ್ಟ್ ಹೊರಗುಳಿಯಲು ಇದುವೇ ಕಾರಣ..!

Source link

ನನಗೆ 1 ಕೋಟಿ ರೂಪಾಯಿ ಯಾರೂ ಕೊಟ್ಟಿಲ್ಲ; ಸ್ಪಷ್ಟನೆ ಕೊಟ್ಟ ಜಮಿಲ್ ಜಮಾಲಿ – Kannada News | Rakesh Bedi’s Jameel Jamali Role in Dhurandhar Hits Big; Denies Aditya Dhar Bonus Rumor

‘ಧುರಂಧರ್’ ಮತ್ತು ‘ಧುರಂಧರ್: ದಿ ರಿವೆಂಜ್’ ಎರಡೂ ಚಿತ್ರಗಳಲ್ಲಿ ಜಮಿಲ್ ಜಮಾಲಿ ಪಾತ್ರವನ್ನು ನಿರ್ವಹಿಸುವ ಮೂಲಕ ನಟ ರಾಕೇಶ್ ಬೇಡಿ ಅಪಾರ ಜನಪ್ರಿಯತೆಯನ್ನು ಗಳಿಸಿದ್ದಾರೆ. ಈ ಚಿತ್ರಗಳ ಐತಿಹಾಸಿಕ ಯಶಸ್ಸಿನ ನಂತರ, ಈಗ ನಿರ್ದೇಶಕ ಆದಿತ್ಯ ಧರ್ ಅವರಿಗೆ ಬೋನಸ್ ನೀಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಮತ್ತು ‘ಧುರಂಧರ್: ದಿ ರಿವೆಂಜ್’ ಎರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಇತಿಹಾಸ ಸೃಷ್ಟಿಸಿವೆ. ಈ ಚಿತ್ರದೊಂದಿಗೆ ಸಂಬಂಧ ಹೊಂದಿರುವ ಪ್ರತಿಯೊಬ್ಬ ಕಲಾವಿದರು ಇದರಿಂದ ಪ್ರಯೋಜನ ಪಡೆಯುತ್ತಿದ್ದಾರೆ. ರಾಕೇಶ್ ಬೇಡಿ ಈ ಎರಡೂ ಚಿತ್ರಗಳಲ್ಲಿ ‘ಜಮೀಲ್ ಜಮಾಲಿ’ ಪಾತ್ರವನ್ನು ನಿರ್ವಹಿಸಿದ್ದಾರೆ. ಇದು ಅವರ ಜನಪ್ರಿಯತೆ ಹೆಚ್ಚಿಸಿದೆ.

ನಿರ್ದೇಶಕ ಆದಿತ್ಯ ಧರ್ ಮತ್ತು ನಿರ್ಮಾಪಕರು ರಾಕೇಶ್ ಕೆಲಸದಿಂದ ತುಂಬಾ ಪ್ರಭಾವಿತರಾಗಿದ್ದಾರೆ. ತಮ್ಮ ಔದಾರ್ಯವನ್ನು ಪ್ರದರ್ಶಿಸಿ, ಅವರು ರಾಕೇಶ್ ಬೇಡಿ ಅವರಿಗೆ 1 ಕೋಟಿ ರೂಪಾಯಿ ಹೆಚ್ಚು ಹಣ ನೀಡಲಾಗಿದೆ ಎಂದು ವರದಿ ಆಗಿತ್ತು. ಇದಕ್ಕೆ ಉತ್ತರಿಸಿರುವ ಅವರು, ‘ನನ್ನ ಖಾತೆಗಂತೂ ಬಂದಿಲ್ಲ.ಎಲ್ಲಿ ಬಂದಿದೆ ಹೇಳಿ ಹೋಗಿ ತೆಗೆದುಕೊಂಡು ಬರುತ್ತೇನೆ’ ಎಂದು ಉತ್ತರಿಸಿದ್ದಾರೆ.

ಅವರ ‘ಬಚ್ಚಾ ಹೈ ತು ಮೇರಾ’ ಎಂಬ ಸಂಭಾಷಣೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅವರ ಅನೇಕ ಮೀಮ್ಸ್‌ಗಳು ಸಹ ವೈರಲ್ ಆಗುತ್ತಿವೆ. ‘ಧುರಂಧರ್: ದಿ ರಿವೆಂಜ್’ ಚಿತ್ರದಲ್ಲಿ ಅವರ ಪಾತ್ರಕ್ಕೆ ದೊಡ್ಡ ಟ್ವಿಸ್ಟ್ ಇತ್ತು. ಚಿತ್ರದಲ್ಲಿ ರಣವೀರ್ ಸಿಂಗ್, ಅರ್ಜುನ್ ರಾಂಪಾಲ್, ಸಂಜಯ್ ದತ್, ಆರ್. ಮಾಧವನ್, ಸಾರಾ ಅರ್ಜುನ್ ನಟಿಸಿದ್ದಾರೆ.

ಇದನ್ನೂ ಓದಿ: ‘ಧುರಂಧರ್’ ಗೆದ್ದಿದ್ದಕ್ಕೆ ನಟ ರಾಕೇಶ್ ಬೇಡಿಗೆ 1 ಕೋಟಿ ರೂಪಾಯಿ ಬೋನಸ್ ಕೊಟ್ಟ ನಿರ್ಮಾಪಕರು

ರಾಕೇಶ್ ಬೇಡಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಧಾರಾವಾಹಿಗಳು ಮತ್ತು ರಂಗಭೂಮಿಯಲ್ಲೂ ಕೆಲಸ ಮಾಡಿದ್ದಾರೆ. ಆದಿತ್ಯ ಧರ್ ಅವರ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರದಲ್ಲಿ ಅವರು ಸಣ್ಣ ಪಾತ್ರವನ್ನು ನಿರ್ವಹಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version