Karnataka CET 2026: ಕರ್ನಾಟಕ CET ಪರೀಕ್ಷೆ ಆರಂಭ; 3.3 ಲಕ್ಷ ವಿದ್ಯಾರ್ಥಿಗಳು ಭಾಗಿ, ಈ ಬಾರಿ ಕಟ್ಟುನಿಟ್ಟಿನ ‘ಡ್ರೆಸ್ ಕೋಡ್’ ಜಾರಿ! – Kannada News | Karnataka CET 2026 Exam Begins: KEA Guidelines, Dress Code and Key Dates for Students
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನಡೆಸುವ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿನ ಸಾಮಾನ್ಯ ಪ್ರವೇಶ ಪರೀಕ್ಷೆ (CET) ರಾಜ್ಯಾದ್ಯಂತ ಇಂದಿನಿಂದ (ಏಪ್ರಿಲ್ 22) ಆರಂಭವಾಗುತ್ತಿದೆ. ಇಂಜಿನಿಯರಿಂಗ್, ಕೃಷಿ ವಿಜ್ಞಾನ ಮತ್ತು ಪಶುವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಈ ಪರೀಕ್ಷೆ ನಡೆಯುತ್ತಿದೆ. ಅಂಕಿ-ಅಂಶಗಳ ವಿವರ: ಈ ವರ್ಷ ದಾಖಲೆಯ ಸಂಖ್ಯೆಯ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಒಟ್ಟು 3,30,479 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಇವರಲ್ಲಿ 1,86,099 ಹುಡುಗಿಯರು ಮತ್ತು 1,44,380 ಹುಡುಗರು ಸೇರಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲೇ 163…