Headlines

ಪಹಲ್ಗಾಮ್ ದಾಳಿಗೆ ವರ್ಷ: ಭಯೋತ್ಪಾದನೆಗೆ ಭಾರತ ತಲೆಬಾಗದು, ಹುತಾತ್ಮರಿಗೆ ಪ್ರಧಾನಿ ಮೋದಿ ಭಾವಪೂರ್ಣ ಶ್ರದ್ಧಾಂಜಲಿ – Kannada News | PM Modi Pays Tribute to Pahalgam Victims, Assures They Won’t Be Forgotten

ನವದೆಹಲಿ, ಏಪ್ರಿಲ್ 22: ಕಳೆದ ವರ್ಷ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಮೊದಲ ವಾರ್ಷಿಕೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಅವರು ಬಲಿಯಾದ ಮುಗ್ಧ ಜೀವಗಳನ್ನು ಸ್ಮರಿಸಿದ್ದಾರೆ. ಸಂತ್ರಸ್ತ ಕುಟುಂಬಗಳ ನೋವಿನಲ್ಲಿ ಇಡೀ ದೇಶವೇ ಭಾಗಿಯಾಗಿದೆ ಎಂದು ಅವರು ಹೇಳಿದ್ದಾರೆ. ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿರುವ ಪ್ರಧಾನಿ, ಕಳೆದ ವರ್ಷ ಈ ದಿನದಂದು ನಡೆದ ಭೀಕರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದ ಮುಗ್ಧ ಜೀವಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅವರನ್ನು ಎಂದಿಗೂ…

Read More

ಭೂಗತ ಲೋಕದ ನಂಟಿನಿಂದ ಭಯಬಿದ್ದಿದ್ದ ‘ಗಲಾಟೆ ಅಳಿಯಂದ್ರು’ ನಟಿ; ಬಾಲಿವುಡ್ ಶಾಶ್ವತಾಗಿ ತೊರೆದರು – Kannada News | Galate Aliyandru Actress Sakshi Shivanand Quit Bollywood Fearing Underworld Nexus

90 ರ ದಶಕದಲ್ಲಿ, ಬಾಲಿವುಡ್ ಭೂಗತ ಜಗತ್ತಿನೊಂದಿಗಿನ ಸಂಪರ್ಕ ಹೊಂದಿತ್ತು. ಆ ಸಮಯದಲ್ಲಿ, ಭೂಗತ ಜಗತ್ತಿನವರು ನಿರ್ಮಾಪಕರು, ನಟರು ಮತ್ತು ಫೈನಾನ್ಸರ್ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ನಿರಂತರ ವರದಿಗಳು ಬರುತ್ತಿದ್ದವು. ಕೆಲವು ನಟಿಯರು ಡಾನ್‌ಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳಿದ್ದವು. ಈ ಸಮಯದಲ್ಲಿ, ಉದಯೋನ್ಮುಖ ನಟಿಯ ವೃತ್ತಿಜೀವನ ನಾಶವಾಯಿತು ಮತ್ತು ಅವರು ಎಲ್ಲವನ್ನೂ ಬಿಟ್ಟು ಹೋಗಬೇಕಾಯಿತು. ನಾವು ಮಾತನಾಡುತ್ತಿರುವ ನಟಿ ಸಾಕ್ಷಿ ಶಿವಾನಂದ್. ಅವರು 1993 ರಲ್ಲಿ ತೆಲುಗು ಚಿತ್ರ ‘ಅನ್ನಾ ವದಿನಾ’ ಮೂಲಕ ತಮ್ಮ…

Read More

Bengaluru Air Quality: ಹುಬ್ಬಳ್ಳಿಯಲ್ಲಿ ಹಠಾತ್ತನೆ ಸುಧಾರಿಸಿದ ವಾಯು ಗುಣಮಟ್ಟ! – Kannada News | Bangalore Air Pollution Crisis: Hubballi Air Quality is getting better

ಹುಬ್ಬಳ್ಳಿಯಲ್ಲಿ ಹಠಾತ್ತನೆ ಸುಧಾರಿಸಿದ ವಾಯು ಗುಣಮಟ್ಟ! ಬೆಂಗಳೂರು, ಏಪ್ರಿಲ್ 22: ರಾಜ್ಯದ ಏರ್ ಕ್ವಾಲಿಟಿಯಲ್ಲಿ (Bengaluru Air Quality) ಕಳೆದ ಕೆಲ ದಿನಗಳಿಂದ ಸುಧಾರಣೆ ಕಂಡು ಬಂದಿದೆ. ದೇಶದ ಉಳಿದ ಯಾವುದೇ ಮೆಟ್ರೋ ಸಿಟಿಗಳಿಗೆ ಹೋಲಿಸಿದರೂ ಬೆಂಗಳೂರಿನ ವಾಯು ಗುಣಮಟ್ಟ ಉತ್ತಮವಾದದ್ದಾಗಿದೆ. ಇಷ್ಟು ದಿನ ಉಸಿರಾಟಕ್ಕೂ ಮಾರಕವಾಗಿದ್ದ ಗಾಳಿಯು ಇಂದು ಒಳ್ಳೆಯ ಗುಣಮಟ್ಟದಲ್ಲಿರುವುದು ಸ್ವಲ್ಪಮಟ್ಟಿಗೆ ಆತಂಕವನ್ನು ಕಡಿಮೆಯಾಗಿಸಿದೆ. ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಇಂದು ಹಲವೆಡೆ…

Read More

ಬದಲಾಗ್ತಾಳಾ ಜಯದೇವ್ ತಾಯಿ ಶಕುಂತಲ? ಸಹಾಯಕ್ಕೆ ಬಂದ ಗೌತಮ್ – Kannada News | Amruthadhare: Shakuntala’s Transformation? Gautam Saves Her After Jayadev Throws Her Out!

‘ಅಮೃತಧಾರೆ’ ಧಾರಾವಾಹಿಯಲ್ಲಿ ಈಗ ಜಯದೇವ್ ಒಂಟಿಯಾಗುವ ದಿನವು ಸಮೀಪಿಸಿದೆ ಎಂದೇ ಹೇಳಬಹುದು. ಏಕೆಂದರೆ, ಈಗಾಗಲೇ ತಾಯಿಯನ್ನು ಆತ ದೂರ ಮಾಡಿಕೊಂಡಿದ್ದಾನೆ. ತನ್ನ ತಾಯಿ ಹಣ ಕೇಳಿದ್ದಕ್ಕೆ ಸಿಟ್ಟಾದ ಜಯದೇವ್, ಕೋಪದಲ್ಲಿ ತಾಯಿಗೆ ಹೊಡೆದು ಮನೆಯಿಂದ ದೂರಕ್ಕೆ ತಳ್ಳಿದ್ದಾನೆ. ಆಕೆಯ ಸಹಾಯಕ್ಕೆ ಗೌತಮ್ ಆಗಮಿಸಿದ್ದಾನೆ. ಇದರಿಂದ ಶಕುಂತಲ ಬದಲಾಗುವ ಎಲ್ಲಾ ಸೂಚನೆ ಇದೆ. ಶಕುಂತಲ, ಗೌತಮ್​​ಗೆ ಮಲತಾಯಿ. ಆತನಿಗೆ ಕೆಟ್ಟದಾಗಲಿ ಎಂದೇ ಬಯಸುತ್ತಾ ಬಂದಳು ಶಕುಂತಲ. ಆದರೆ, ಗೌತಮ್ ಆ ರೀತಿಯ ವ್ಯಕ್ತಿ ಅಲ್ಲ ಎನ್ನಬಹುದು. ಆತ, ತಾಯಿಯನ್ನು…

Read More

ಗೋವಿನ ಚರ್ಮದ ಬ್ಯಾಗ್ ಹಿಡಿದು ಬಂದ್ರಾ ಕಂಗನಾ? ಶುರುವಾಗಿದೆ ಚರ್ಚೆ – Kannada News | Kangana Ranaut’s Cow Leather Bag Sparks Controversy: BJP MP Faces Heat for Hermes Choice

ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು (Kangana Ranaut) ಆಗಾಗ ವಿವಿಧ ಕಾರಣಕ್ಕೆ ಚರ್ಚೆ ಆಗುತ್ತಾ ಇರುತ್ತಾರೆ. ಅವರ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಾರೆ. ಅವರು ನಿಡುವ ಹೇಳಿಕೆ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತದೆ. ಈಗ ಅವರು ತೆಗೆದುಕೊಂಡು ಬಂದ ಬ್ಯಾಗ್ ಬಗ್ಗೆ ಚರ್ಚೆ ನಡೆದಿದೆ. ಅವರು ಗೋವಿನ ಚರ್ಮದ ಬ್ಯಾಗ್ ಹಿಡಿದು ಬಂದರೇ ಎಂಬ ಪ್ರಶ್ನೆ ಮೂಡಿದೆ. ಕಂಗನಾ ರಣಾವತ್ ಅವರು ಸದ್ಯ ಪಶ್ಚಿಮ ಬಂಗಾಳದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಹೀಗಿರುವಾಗಲೇ ಅವರ…

Read More

Pahalgam Attack: ಹಸಿರು ಕಣಿವೆಯಲ್ಲಿ ಹರಿಯಿತು ಅಮಾಯಕರ ರಕ್ತ: ವರ್ಷ ಕಳೆದರೂ ಚೇತರಿಸಿಕೊಳ್ಳದ ಪಹಲ್ಗಾಮ್ ಸಂತ್ರಸ್ತ ಕುಟುಂಬಗಳು – Kannada News | Pahalgam Terror Attack: One Year On, Survivors Still Battle Trauma and Loss

ಬೈಸರನ್, ಏಪ್ರಿಲ್ 22: ಮಿನಿ ಸ್ವಿಟ್ಜರ್ಲೆಂಡ್ ಎಂದು ಕರೆಯಲ್ಪಡುವ ಪಹಲ್ಗಾಮ್‌(Pahalgam)ನ ಬೈಸರನ್ ಕಣಿವೆಯಲ್ಲಿ ಇಂದು ಪ್ರವಾಸಿಗರ ಗದ್ದಲವಿರಬಹುದು, ಆದರೆ ಒಂದು ವರ್ಷದ ಹಿಂದೆ ಅಲ್ಲಿ ಕೇಳಿಬಂದ ಗುಂಡಿನ ಚಕಮಕಿ ಮತ್ತು ಸಾವು-ನೋವಿನ ಆಕ್ರಂದನ ಇಂದಿಗೂ ಅಲ್ಲಿನ ಗಾಳಿಯಲ್ಲಿ ಪ್ರತಿಧ್ವನಿಸುತ್ತಿದೆ. ಅಮಾಯಕ ಪ್ರವಾಸಿಗರನ್ನು, ವಿಶೇಷವಾಗಿ ಪುರುಷರನ್ನು ಗುರಿಯಾಗಿಸಿಕೊಂಡು ನಡೆದ ಆ ದಾಳಿ ಅನೇಕ ಸುಂದರ ಕುಟುಂಬಗಳನ್ನು ಛಿದ್ರಗೊಳಿಸಿದೆ. ಸಂತೋಷದ ಪ್ರವಾಸ  ನೋವಿನಲ್ಲಿ ಅಂತ್ಯ ವಿಶಾಖಪಟ್ಟಣಂನ ನಿವೃತ್ತ ಬ್ಯಾಂಕ್ ಅಧಿಕಾರಿ, 68 ವರ್ಷದ ಚಂದ್ರಮೌಳಿ ಅವರು ತಮ್ಮ ಪತ್ನಿ ನಾಗಮಣಿ…

Read More

ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಪ್ರಿಯತಮೆಯ ವಿಚಾರಣೆ ವೇಳೆ ಬಯಲಾಯ್ತು ಸ್ಫೋಟಕ ವಿಚಾರ! ಅಸಲಿಗೆ ಆಗಿದ್ದೇನು ಗೊತ್ತೇ? – Kannada News | Bengaluru Love Tragedy: Girl Planned end life After Burning Boyfriend Alive in Byadarahalli; Stunning Details Emerge

ಮೃತ ಕಿರಣ್‌ (ಎಡಚಿತ್ರ) ಹಾಗೂ ಆರೋಪಿImage Credit source: tv9 ಬೆಂಗಳೂರು, ಏಪ್ರಿಲ್ 22: ಬೆಂಗಳೂರಿನ (Bengaluru) ಬ್ಯಾಡರಹಳ್ಳಿಯಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನನ್ನೇ ಜೀವಂತ ದಹನ ಮಾಡಿದ (Byadarahalli Murder Case) ಭೀಕರ ಘಟನೆಗೆ ಸಂಬಂಧಿಸಿದಂತೆ ಈಗ ಮತ್ತಷ್ಟು ಆಘಾತಕಾರಿ ವಿಚಾರಗಳು ಬಯಲಾಗಿವೆ. ಪ್ರಿಯಕರ ಕಿರಣ್‌ನನ್ನು ಕೊಲೆ ಮಾಡಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಆರೋಪಿ ಪ್ರೇಮಾ ಸ್ಕೆಚ್ ಹಾಕಿದ್ದಳು ಎಂಬ ಸ್ಫೋಟಕ ವಿಚಾರ ಪೊಲೀಸ್ ವಿಚಾರಣೆ ವೇಳೆ ಬಯಲಾಗಿದೆ. ಅಲ್ಲದೆ, ಅದಕ್ಕಾಗಿ ಏನೇನು ಸಿದ್ಧತೆ ಮಾಡಿಕೊಂಡಿದ್ದಳು…

Read More

ಕರ್ನಾಟಕ ಹವಾಮಾನ ವರದಿ: ಕಾದ ಕೆಂಡದಂತಾಗಿದ್ದ ಕರಾವಳಿಯಲ್ಲಿ ಇಂದು ವರ್ಷಧಾರೆ! – Kannada News | Karnataka Weather Forecast: Thunderstorm all over Karnataka

ಕಾದ ಕೆಂಡದಂತಾಗಿದ್ದ ರಾಜ್ಯಕ್ಕಿಂದು ವರ್ಷಧಾರೆ! ಬೆಂಗಳೂರು, ಏಪ್ರಿಲ್ 22: ಬೆಂಗಳೂರು ಸೇರಿದಂತೆ ಹಲವೆಡೆ ತಾಪಮಾನ  (Karnataka Weather)   ಹೆಚ್ಚಾಗಿದ್ದು, ಈಗಾಗಲೇ ಕರಾವಳಿ ಹಾಗೂ ಕಲ್ಯಾಣ ಕರ್ನಾಟಕವು ಬಿಸಿಲಿನ ಬೇಗೆ ತತ್ತರಿಸಿದೆ. ಆದರೆ ಇಂದು ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆಯಿದೆ. ಹೀಗಾಗಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಅನಗತ್ಯವಾಗಿ…

Read More

ಸುಡುವ ಬಿಸಿಲಿನ ನಡುವೆ ಎಲ್ ನಿನೋ ಆತಂಕ: ಮುಂಗಾರು ಮಳೆಗೆ ಕಂಟಕ, ದೇಶಾದ್ಯಂತ ಬರಗಾಲದ ಭೀತಿ! – Kannada News | El Nino Threat in Karnataka, India: IMD Warns of Drought and Monsoon Failure Amid Rising Temperatures

ಬೆಂಗಳೂರು, ಏಪ್ರಿಲ್ 22: ಕರ್ನಾಟಕದಲ್ಲಿ (Karnataka) ಸೂರ್ಯನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇಂತಹ ಸಮಯದಲ್ಲಿ ಹವಾಮಾನ ಇಲಾಖೆಯು ‘ಎಲ್ ನಿನೋ (El Nino)’ ಸುಳಿವು ನೀಡಿದ್ದು, ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಪೆಸಿಫಿಕ್ ಸಾಗರದ ಉಷ್ಣಾಂಶದಲ್ಲಿನ ಏರಿಕೆಯಿಂದ ಉಂಟಾಗುವ ಈ ಹವಾಮಾನ ವೈಪರೀತ್ಯವು ಭಾರತದ ಮುಂಗಾರು ಮಳೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಎಲ್ ನಿನೋ ಎಂದರೇನು? ಪೆಸಿಫಿಕ್ ಸಾಗರದ ಮೇಲ್ಮೈ ಉಷ್ಣಾಂಶವು ವಾಡಿಕೆಗಿಂತ ಹೆಚ್ಚಾಗುವುದನ್ನೇ ‘ಎಲ್…

Read More

ಇರಾನ್ ವಿರುದ್ಧದ ದಾಳಿಗೆ ಸದ್ಯಕ್ಕೆ ‘ಬ್ರೇಕ್’: ಪಾಕಿಸ್ತಾನದ ಮಧ್ಯಸ್ಥಿಕೆಗೆ ಒಪ್ಪಿದ ಟ್ರಂಪ್ – Kannada News | Trump Halts Iran Attack Amid Pakistan Mediation: Diplomatic Push for Peace

ವಾಷಿಂಗ್ಟನ್ , ಏಪ್ರಿಲ್ 22: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತು ಬಿಗುವಿನ ವಾತಾವರಣದ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇರಾನ್ ವಿರುದ್ಧದ ದಾಳಿಯನ್ನು ಸದ್ಯಕ್ಕೆ ತಡೆಹಿಡಿದಿರುವ ಟ್ರಂಪ್, ರಾಜತಾಂತ್ರಿಕತೆಗೆ ಮತ್ತೊಂದು ಅವಕಾಶ ನೀಡಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಸ್ಫೋಟಕ ಹಂತ ತಲುಪಿರುವಾಗಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮವನ್ನು ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ಪಾಕಿಸ್ತಾನದ ನಾಯಕರ ವಿಶೇಷ ವಿನಂತಿಯ ಮೇರೆಗೆ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು…

Read More