ಮಹಿಳೆಗೆ ಇಷ್ಟವಿಲ್ಲದಿದ್ದರೆ 30ನೇ ವಾರದಲ್ಲೂ ಗರ್ಭಪಾತ ಮಾಡಿಸಿಕೊಳ್ಳಬಹುದು; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು – Kannada News | Cannot force a woman to become Mother Supreme Court allows minor to terminate 30 week pregnancy

ನವದೆಹಲಿ, ಫೆಬ್ರವರಿ 6: ಒಂದುವೇಳೆ ಗರ್ಭಿಣಿಗೆ ಏಳೂವರೆ ತಿಂಗಳು (30 ವಾರ) ತುಂಬಿದ ಬಳಿಕವೂ ಆ ಮಗು ಬೇಡವೆನಿಸಿದರೆ ಗರ್ಭಪಾತ (Abortion) ಮಾಡಿಸುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಭಾರತದಲ್ಲಿ 5 ತಿಂಗಳವರೆಗೆ ಮಾತ್ರ ಗರ್ಭಪಾತಕ್ಕೆ ಅನುಮತಿಯಿದೆ. ಆದರೆ, ಇದೀಗ ವಿಶೇಷ ಪ್ರಕರಣವೊಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಹುಟ್ಟದೇ ಇರುವ ಮಗುವಿನ ಹಕ್ಕಿಗಿಂತಲೂ ತಾಯಿಯ ಹಕ್ಕು ಬಹಳ ಮುಖ್ಯ ಎಂದು ಹೇಳಿರುವ ನ್ಯಾಯಪೀಠ ಮಹಿಳೆಯನ್ನು ತಾಯಿಯಾಗಲು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಮದುವೆಯಾದ ಮಹಿಳೆಯಾಗಲಿ, ಮದುವೆಯಾಗದ ಯುವತಿಯಾಗಲಿ ಅಥವಾ ಅಪ್ರಾಪ್ತೆಯೇ ಆಗಲಿ ಅನಗತ್ಯ ಗರ್ಭಧಾರಣೆಯನ್ನು ಮುಂದುವರಿಸಲು ಒತ್ತಾಯಿಸಲು ಕಾನೂನಿಗೂ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಪ್ರಾಪ್ತ ವಯಸ್ಕಳಾಗಿದ್ದಾಗ ಗರ್ಭ ಧರಿಸಿದ ಹುಡುಗಿಯ 30 ವಾರಗಳ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸಲು ಅನುಮತಿ ನೀಡಿದ ಸುಪ್ರೀಂ ಕೋರ್ಟ್ ಈ ಹೇಳಿಕೆಗಳನ್ನು ನೀಡಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ನ್ಯಾಯಪೀಠವು ಗರ್ಭಿಣಿ ಹುಡುಗಿಯ ಸಂತಾನೋತ್ಪತ್ತಿ ಸ್ವಾಯತ್ತತೆಗೆ ಸರಿಯಾದ ಪ್ರಾಮುಖ್ಯತೆಯನ್ನು ನೀಡಬೇಕು ಎಂದು ಒತ್ತಿ ಹೇಳಿದೆ. ವಿಶೇಷವಾಗಿ ಅವಳಿಗೆ ಮಗುವನ್ನು ಹೆರಲು ಇಷ್ಟವಿಲ್ಲವೆಂದು ಸ್ಪಷ್ಟವಾಗಿ ಹೇಳುತ್ತಿರುವಾಗ ಆ ಮಗುವನ್ನು ಹೆರಲೇಬೇಕೆಂದು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮಗುವಿಗೆ ಜನ್ಮ ನೀಡಿದ 8ನೇ ಕ್ಲಾಸ್ ಬಾಲಕಿ; ಹಾಸ್ಟೆಲ್​ನಲ್ಲಿದ್ದ ಬಾಲಕಿ ಗರ್ಭಿಣಿಯಾಗಿದ್ದು ಹೇಗೆ?

ಅರ್ಜಿ ಸಲ್ಲಿಸಿರುವ ಅಪ್ರಾಪ್ತ ಯುವತಿಯ ವಯಸ್ಸು ಮತ್ತು ಆಕೆಯ ಹಕ್ಕನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಪು ನೀಡಲಾಗಿದೆ. ಈ ಪ್ರಕರಣದಲ್ಲಿ ಆ ಯುವತಿಯದ್ದು ಉದ್ದೇಶಪೂರ್ವಕವಾದ ಗರ್ಭಧಾರಣೆ ಅಲ್ಲದ ಕಾರಣದಿಂದ ಮತ್ತು ಆ ಹುಡುಗಿ ಮಗುವನ್ನು ಹೆರಲು ಬಯಸದ ಕಾರಣದಿಂದ ಆಕೆಗೆ ಗರ್ಭಪಾತಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ: ಹೆತ್ತ ಮಗಳ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ ಅಪ್ಪ; ಡಿಎನ್​ಎ ಪರೀಕ್ಷೆಯಲ್ಲಿ ಸತ್ಯ ಬಯಲು

ಆ ಹುಡುಗಿ 17ನೇ ವಯಸ್ಸಿನಲ್ಲಿ ಗರ್ಭ ಧರಿಸಿದ್ದಳು. ಆಕೆಗೆ ಈಗ 18 ವರ್ಷ. ಈಗ ಆಕೆಯ ಗರ್ಭಧಾರಣೆಯು 30 ವಾರಗಳನ್ನು ತಲುಪಿತ್ತು. ಸ್ನೇಹಿತನೊಂದಿಗಿನ ಸಂಬಂಧದಿಂದ ಆಕೆ ಗರ್ಭಿಣಿಯಾಗಿದ್ದು, ಮದುವೆಯಾಗದೆ ಗರ್ಭಧಾರಣೆಯನ್ನು ಮುಂದುವರಿಸುವುದು ಆ ಹುಡುಗಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಆಘಾತಕಾರಿಯಾಗಿದೆ ಎಂದು ವಾದಿಸಲಾಗಿತ್ತು. ಹೀಗಾಗಿ, ವೈದ್ಯಕೀಯ ಮಂಡಳಿಯ ವರದಿಯನ್ನು ಪರಿಶೀಲಿಸಿದ ನಂತರ, ಈ ಸಮಯದಲ್ಲಿ ಗರ್ಭಪಾತಕ್ಕೆ ಅನುಮತಿಸಿದರೆ ಆ ಹುಡುಗಿಗೆ ಯಾವುದೇ ಗಂಭೀರ ಅಪಾಯ ಆಗುವುದಿಲ್ಲ ಎಂದು ಪೀಠ ಗಮನಿಸಿತು. ಹೀಗಾಗಿ, ಆಕೆ ಬಯಸಿದರೆ ಗರ್ಭಪಾತಕ್ಕೆ ಅನುಮತಿ ನೀಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:13 pm, Fri, 6 February 26

Source link

Rose Day 2026 Date: ಪ್ರೇಮಿಗಳ ವಾರದ ಮೊದಲೇ ದಿನವೇ ರೋಸ್ ಡೇ; ಈ ದಿನದ ಇತಿಹಾಸ, ಮಹತ್ವವೇನು? – Kannada News | Valentine’s Week 2026 Rose Day Date, History, Significance, Importance, Celebration ideas in Kannada

ಪ್ರೇಮಿಗಳ ದಿನಕ್ಕೆ (Valentine’s Day) ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಆದರೆ ಫೆಬ್ರವರಿ 7 ರಿಂದ 14 ರವರೆಗೆ ಪ್ರೇಮಿಗಳ ವಾರವನ್ನು ಸಹ ಆಚರಿಸಲಾಗುತ್ತದೆ. ಇದು ಪ್ರೇಮಿಗಳಿಗಾಗಿಯೇ ಮೀಸಲಿಟ್ಟ ವಾರ. ಈ ವ್ಯಾಲೆಂಟೈನ್‌ ವೀಕ್‌ನಲ್ಲಿ ಮೊದಲ ದಿನದ ಆಚರಣೆಯೇ ರೋಸ್‌ ಡೇ. ನೀವು ಯಾರನ್ನಾದರೂ ಇಷ್ಟಪಟ್ಟಿದ್ದರೆ ಅಥವಾ ನಿಮ್ಮ ಜೀವನದಲ್ಲಿ ಯಾರಾದರೂ ವಿಶೇಷ ವ್ಯಕ್ತಿ ಇದ್ದರೆ, ರೋಸ್ ಡೇಯಂದು (Rose Day) ಕೆಂಪು ಬಣ್ಣದ ಗುಲಾಬಿ ಹೂವು ನೀಡಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು. ಈ ದಿನದ ಆಚರಣೆಗೂ ಮುನ್ನ ಇದರ ಇತಿಹಾಸ, ಮಹತ್ವ ತಿಳಿದುಕೊಳ್ಳಿ.

ರೋಸ್‌ ಡೇಯ ಇತಿಹಾಸ, ಮಹತ್ವವೇನು?

ವ್ಯಾಲೆಂಟೈನ್ಸ್ ವೀಕ್‌ನ ಮೊದಲ ದಿನವೇ ರೋಸ್ ಡೇ. ಪ್ರೇಮಿಗಳ ವಾರ ಆರಂಭವಾಗುವುದೇ ಈ ಬಣ್ಣ ಬಣ್ಣದ ಗುಲಾಬಿ ಹೂವುಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ. ಆದರೆ ಈ ರೋಜ್ ಡೇ ಇತಿಹಾಸದ ಬಗ್ಗೆ ಹೇಳುವುದಾದರೆ ರೋಸ್ ಡೇಗೂ ರೋಮನ್ ಪುರಾಣಗಳಿಗೂ ಸಂಬಂಧವಿದೆ. ಈ ಗುಲಾಬಿ ಹೂವುಗಳು ಪ್ರೀತಿ  ಪ್ರೇಮದ ಸಂಕೇತ.

ಇದನ್ನೂ ಓದಿ: Valentine’s Week 2026: ರೋಸ್‌ ಡೇಯಂದು ನಿಮ್ಮ ಲೈಫ್‌ ಪಾರ್ಟ್ನರ್‌ಗಾಗಿ ತಯಾರಿಸಿ ಈ ಸ್ವಾದಿಷ್ಟ ಗುಲಾಬಿ ತಿನಿಸು; ಇಲ್ಲಿದೆ ರೆಸಿಪಿ

ಅದಲ್ಲದೇ, ಸೌಂದರ್ಯ ಹಾಗೂ ಪ್ರೀತಿಗೆ ಸಂಬಂಧಿಸಿದ ದೇವತೆಯಾದ ಶುಕ್ರಕ್ಕೆ ಗುಲಾಬಿ ಹೂವುಗಳನ್ನು ಬಳಸಲಾಗುತ್ತಿತ್ತು. ಈ ಗುಲಾಬಿ ಹೂವುಗಳು ಏಷ್ಯನ್ ಹಾಗೂ ಅರಬ್ ಸಂಸ್ಕೃತಿಗಳಂತಹ ಪೂರ್ವ ನಾಗರಿಕತೆಯಲ್ಲೂ ಪ್ರೀತಿಯೊಂದಿಗೆ ಸಂಬಂಧ ಹೊಂದಿದೆ.  ಇನ್ನು, ವಿಕ್ಟೋರಿಯನ್ನರು ಗುಲಾಬಿ ಹೂವುಗಳನ್ನು ನೀಡುವ ಮೂಲಕ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು. ಹೀಗಾಗಿ ಅಂದಿನಿಂದ ಪ್ರತಿ ವರ್ಷ ಫೆಬ್ರವರಿ 7ರಂದು ರೋಸ್ ಡೇ ಯನ್ನಾಗಿ ಆಚರಿಸಲಾಗುತ್ತದೆ. ಹೀಗಾಗಿ ಪ್ರೇಮಿಗಳು ಮಾತ್ರವಲ್ಲ, ಸ್ನೇಹಿತರು ಹಾಗೂ ತಮ್ಮ ಜೀವನದ ವಿಶೇಷ ವ್ಯಕ್ತಿಗಳಿಗೆ ಗುಲಾಬಿ ಹೂವುಗಳನ್ನು ನೀಡಿ ಈ ದಿನವನ್ನು ಆಚರಿಸುತ್ತಾರೆ.

ಇನ್ನಷ್ಟು ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಭಾಸ್ ‘ಭಾರ’ಕ್ಕೆ ಬೆಂಡಾದ ಜಿಯೋ ಹಾಟ್​​ಸ್ಟಾರ್: ಒಟಿಟಿ ಮಾಡಿದ ಮನವಿಯೇನು? – Kannada News | Prabhas The Raja Saab OTT release Jio Hotstar craze details

ಪ್ರಭಾಸ್ (Prabhas), ಭಾರತದ ನಂಬರ್ 1 ಪ್ಯಾನ್ ಇಂಡಿಯಾ ಸ್ಟಾರ್. ದೇಶದಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿಗಳು ಪ್ರಭಾಸ್ ಅವರಿಗಿದ್ದಾರೆ. ಅದ್ಯಾವ ಮಟ್ಟಿಗೆ ಪ್ರಭಾಸ್ ಕ್ರೇಜ್ ಇದೆಯೆಂದರೆ ಅವರ ಕೆಟ್ಟ ಸಿನಿಮಾಗಳು ಸಹ ಸುಲಭವಾಗಿ 200-300 ಕೋಟಿ ಹಣ ಗಳಿಕೆ ಮಾಡಿಬಿಡುತ್ತವೆ ಅದೂ ಮೊದಲ ಒಂದು ವಾರದ ಒಳಗೆ. ಇತ್ತೀಚೆಗೆ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾ ನಿರೀಕ್ಷಿಸಿದ ಮಟ್ಟದಲ್ಲಿರಲಿಲ್ಲ. ಆದರೂ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 300 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ. ಇದೀಗ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದ್ದು, ಇಲ್ಲಿಯೂ ಸಹ ಬಿಡುಗಡೆಗೆ ಮುಂಚೆಯೇ ಅಬ್ಬರ ಸೃಷ್ಟಿಸಿದೆ.

ಪ್ರಭಾಸ್ ನಟನೆಯ ಹಾರರ್ ಕಾಮಿಡಿ ಚಿತ್ರ ‘ದಿ ರಾಜಾ ಸಾಬ್’ ಈಗ ಡಿಜಿಟಲ್ ಪರದೆಯ ಮೇಲೆ ಅಬ್ಬರಿಸಲು ಸಿದ್ಧವಾಗಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 9ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ, ಈಗ ಕೇವಲ ಒಂದು ತಿಂಗಳ ಅಂತರದಲ್ಲಿ ಒಟಿಟಿ ಪ್ರಿಯರ ಮುಂದೆ ಬರುತ್ತಿದೆ. ಈ ಸಿನಿಮಾ ಕೆಲವೇ ದಿನಗಳಲ್ಲಿ ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಆದರೆ ಪ್ರಭಾಸ್ ಅಭಿಮಾನಿಗಳು ಅದ್ಯಾವ ಮಟ್ಟಿಗೆ ನಿರೀಕ್ಷೆ ವ್ಯಕ್ತಪಡಿಸಿದ್ದಾರೆಂದರೆ, ಸ್ವತಃ ಒಟಿಟಿಯ ಆಡಳಿತ ಮಂಡಳಿಯೇ ಶಾಕ್ ಆಗಿದೆ.

ಇದನ್ನೂ ಓದಿ:‘ಸಲಾರ್ 2’ ಸಿನಿಮಾ ನಿಂತೇ ಹೋಯ್ತೆ? ಪ್ರಭಾಸ್-ನೀಲ್ ಮಾಡಿರುವ ಚರ್ಚೆ ಏನು?

ಜಿಯೋ ಹಾಟ್‌ಸ್ಟಾರ್ ತನ್ನ ಅಧಿಕೃತ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಒಂದು ವಿಶೇಷ ಸಂದೇಶವನ್ನು ಹಂಚಿಕೊಂಡಿದೆ. ಪ್ರಭಾಸ್ ಅವರ ‘ದಿ ರಾಜಾ ಸಾಬ್’ ಸಿನಿಮಾಕ್ಕಾಗಿ ಒಟಿಟಿ ಇತಿಹಾಸದಲ್ಲೇ ಕಾಣದಂತಹ ಕ್ರೇಜ್ ಸೃಷ್ಟಿಯಾಗಿದ್ದು, ಲಕ್ಷಾಂತರ ಮಂದಿ ‘Remind Me’ (ರಿಮೈಂಡ್ ಮೀ) ಬಟನ್ ಕ್ಲಿಕ್ ಮಾಡಿದ್ದಾರೆ. ಈ ಭಾರಿ ಪ್ರಮಾಣದ ಟ್ರಾಫಿಕ್ ಅನ್ನು ನಿಭಾಯಿಸಲು ಮತ್ತು ಪ್ರೇಕ್ಷಕರಿಗೆ ಯಾವುದೇ ಅಡಚಣೆಯಿಲ್ಲದೆ ಸಿನಿಮಾ ತೋರಿಸಲು ಜಿಯೋ ಹಾಟ್‌ಸ್ಟಾರ್ ತನ್ನ ಸರ್ವರ್‌ಗಳನ್ನು ಅಪ್‌ಗ್ರೇಡ್ ಮಾಡಿದೆ. ಇದು ಭಾರತೀಯ ಒಟಿಟಿ ಇತಿಹಾಸದಲ್ಲೇ ಅತ್ಯಂತ ಅಪರೂಪದ ವಿದ್ಯಮಾನವಾಗಿದೆ ಎಂದು ಸ್ವತಃ ಜಿಯೋ ಹಾಟ್​​ಸ್ಟಾರ್ ಹೇಳಿದೆ.

ಇದು ಪ್ರಭಾಸ್ ಅವರಿಗೆ ಇರುವ ಕ್ರೇಜ್​​ಗೆ ಉದಾಹರಣೆಯಾಗಿದೆ. ‘ದಿ ರಾಜಾ ಸಾಬ್’ ಸಿನಿಮಾ ಚಿತ್ರಮಂದಿರಗಳಲ್ಲಿ ಫ್ಲಾಪ್ ಎಂಬ ಹಣೆಪಟ್ಟಿ ಹಚ್ಚಿಸಿಕೊಂಡ ಸಿನಿಮಾ. ಹಲವಾರು ಮಂದಿ ವಿಮರ್ಶಕರು ಸಿನಿಮಾದ ಕತೆ, ಚಿತ್ರಕತೆ, ವಿಎಫ್​​ಎಕ್ಸ್ ಚೆನ್ನಾಗಿಲ್ಲವೆಂದು ಸಿನಿಮಾದ ಬಗ್ಗೆ ಟೀಕೆ ಮಾಡಿದ್ದಾರೆ. ಇಷ್ಟೆಲ್ಲದರ ಮಧ್ಯೆಯೂ ಸಹ ಜನ ಒಟಿಟಿಯಲ್ಲಿ ಸಿನಿಮಾ ನೋಡಲು ಕಾತರರಾಗಿ ಕಾಯುತ್ತಿದ್ದಾರೆ.

ಅಂದಹಾಗೆ ಒಟಿಟಿಯಲ್ಲಿ ‘ದಿ ರಾಜಾ ಸಾಬ್’ ಸಿನಿಮಾ ನೋಡುವವರಿಗೆ ಒಂದು ವಿಶೇಷ ಉಡುಗೊರೆ ಕಾದಿದೆ. ತಾಂತ್ರಿಕ ಕಾರಣಗಳಿಂದಾಗಿ ಚಿತ್ರಮಂದಿರಗಳಲ್ಲಿ ಕೈಬಿಡಲಾಗಿದ್ದ ಸುಮಾರು 4 ರಿಂದ 8 ನಿಮಿಷಗಳ ದೃಶ್ಯಗಳನ್ನು ಒಟಿಟಿ ಆವೃತ್ತಿಯಲ್ಲಿ ಸೇರಿಸಲಾಗಿದೆ. ಇದರಲ್ಲಿ ಪ್ರಭಾಸ್ ಅವರ ‘ಓಲ್ಡ್ ಗೆಟಪ್’ ದೃಶ್ಯಗಳು ಮತ್ತು ಒಂದು ಸಾಹಸ ಸನ್ನಿವೇಶ ಪ್ರಮುಖ ಆಕರ್ಷಣೆಯಾಗಲಿದೆ. ಈ ದೃಶ್ಯಗಳನ್ನು ಸಿನಿಮಾದ ಅವಧಿ ಹೆಚ್ಚಳ ಹಾಗೂ ಇನ್ನಿತರೆ ಕಾರಣಗಳಿಂದಾಗಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದಾಗ ಕೈಬಿಡಲಾಗಿತ್ತು. ಇದೀಗ ಅದನ್ನು ಸೇರಿಸಲಾಗಿದೆ.

‘ದಿ ರಾಜಾ ಸಾಬ್’ ಸಿನಿಮಾವು ಜಿಯೋ ಹಾಟ್​​ಸ್ಟಾರ್​​​ನಲ್ಲಿ ಇಂದಿನಿಂದ (ಫೆಬ್ರವರಿ 06) ಪ್ರಸಾರ ಆಗಲಿದೆ. ಸಿನಿಮಾವನ್ನು ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಿಸಬಹುದಾಗಿದೆ. ಮಾರುತಿ ನಿರ್ದೇಶನದ ಈ ಚಿತ್ರದಲ್ಲಿ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯು ನಿರ್ಮಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹುಬ್ಬಳ್ಳಿ: ಹಿಂದೂ ಧರ್ಮಕ್ಕೆ ಅಪಮಾನವಾಗೋ ರೀತಿ ಸ್ಟೇಟಸ್​​ ಇಟ್ಟಿದ್ದ ಯುವಕನ ಬಂಧನ – Kannada News | Hubballi Police Arrested a man for Insulting Hindu Religion on WhatsApp Status

ಹುಬ್ಬಳ್ಳಿ, ಫೆಬ್ರವರಿ 06: ಹಿಂದೂ ಧರ್ಮಕ್ಕೆ ಅಪಮಾನವಾಗುವ ರೀತಿಯಲ್ಲಿ ವಾಟ್ಸಪ್​​ ಸ್ಟೇಟಸ್ ಇಟ್ಟಿದ್ದ ಯುವಕನನ್ನು ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ನೂರಾನಿ ಫ್ಲ್ಯಾಟ್ ನಿವಾಸಿ ದಾದಾಪೀರ್ ಹೆಬ್ಬಳ್ಳಿ (27) ಬಂಧಿತ ಯುವಕ. ಹಳೆ ಹುಬ್ಬಳ್ಳಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕಳೆದ ರಾತ್ರಿ ಬಂಧಿಸಿ‌ ಜೈಲಿಗಟ್ಟಿದ್ದಾರೆ. ಯೂಟ್ಯೂಬರ್ ಒಬ್ಬರು ಹಿಂದೂ ದೇವರ ಬಳಿ ಕಲ್ಮಾ ಹೇಳಿದ್ದ ವಿಡಿಯೋವನ್ನು ದಾದಾಪೀರ್ ತನ್ನ ವಾಟ್ಸಾಪ್ ಸ್ಟೇಟಸ್‌ಗೆ ಹಾಕಿಕೊಂಡಿದ್ದ. ಈ ಸ್ಟೇಟಸ್ ಹಿಂದೂ ಧರ್ಮಕ್ಕೆ ಅಪಮಾನ ಮಾಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Pakistan Mosque Blast: ಪಾಕಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ, 10ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಶಂಕೆ – Kannada News | Explosion Reported at Islamabad Mosque, many dead

ಇಸ್ಲಾಮಾಬಾದ್, ಫೆಬ್ರವರಿ 06: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿರುವ ಮಸೀದಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, 10ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಆಗ್ನೇಯ ಇಸ್ಲಾಮಾಬಾದ್‌ನ ತರ್ಲೈ ಕಲಾನ್ ಪ್ರದೇಶದ ಖದೀಜಾ ತುಲ್ ಕುಬ್ರಾ ಮಸೀದಿಯಲ್ಲಿ ಶುಕ್ರವಾರ ಪ್ರಾರ್ಥನೆಯ ಸಮಯದಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ಸ್ಥಳಕ್ಕೆ ರಕ್ಷಣಾ ತಂಡಗಳು ತಲುಪಿವೆ.ಸಾವುನೋವುಗಳ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ, ಆದರೆ ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಇದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಪ್ರೀತಿಗೆ ಒಪ್ಪಿಲ್ಲವೆಂದು ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ ಪಿಯುಸಿ ವಿದ್ಯಾರ್ಥಿ; ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ – Kannada News | Student Bites Teacher’s Lip Over Rejected Love; CCTV Viral

12ನೇ ತರಗತಿಯ ವಿದ್ಯಾರ್ಥಿಯೊಬ್ಬ ಶಿಕ್ಷಕಿ ತನ್ನ ಪ್ರೀತಿ ಪ್ರೀತಿಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲೇ ಶಿಕ್ಷಕಿಯ ತುಟಿಗೆ ಕಚ್ಚಿ ತುಂಡರಿಸಿದ ಭೀಕರ ಘಟನೆ ಉತ್ತರ ಪ್ರದೇಶದ ಮೈನ್​ಪುರಿಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ಶಿಕ್ಷಕಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ಸೋಶಿಯಲ್​ ಮಿಡಿಯಾಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಶಿಕ್ಷಕಿಯ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಫತೇ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ. ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ. ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಮತ್ತು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಪ್ರೀತಿ ಪ್ರೇಮದ ಹೆಸರಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರ: ಲವ್ ಜಿಹಾದ್​​ಗೆ ಬಲಿಯಾದ ಹಿಂದೂ ಯುವತಿ ರೀಟಾ

 

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೀಂ ಇಂಡಿಯಾಗೆ ಆಘಾತ; ಟಿ20 ವಿಶ್ವಕಪ್​ನಿಂದ ಹೊರಬಿದ್ದ ಸ್ಟಾರ್ ಆಲ್‌ರೌಂಡರ್

Source link

ಯತೀಂದ್ರ ಕಾಂಗ್ರೆಸ್ ಪಕ್ಷದ ಹೈಕಮಾಂಡ್: ಡಿಕೆ ಶಿವಕುಮಾರ್ ಮಾತಿನ ಮರ್ಮಾವೇನು? – Kannada News | DK Shivakumar sparks to MLC Yathindra’s Claim on Siddaramaiah CM Tenure

ಮಂಗಳೂರು, ಫೆಬ್ರವರಿ 06: ಸಿದ್ದರಾಮಯ್ಯ 5 ವರ್ಷ ಸಿಎಂ. ಪೂರ್ಣಾವಧಿ ಆಡಳಿತಕ್ಕೆ ಹೈಕಮಾಂಡ್ ಗ್ರೀನ್​ ಸಿಗ್ನಲ್ ಕೊಟ್ಟಿದೆ. ನಾಯಕತ್ವ ಬದಲಾವಣೆ ಇಲ್ಲವೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹೊಸ ಬಂಬ್ ಸಿಡಿಸಿದ್ದಾರೆ. ಇದು ಕಾಂಗ್ರೆಸ್​​​ನಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಇದಕ್ಕೆ ಸಿಎಂ ಆಕಾಂಕ್ಷಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ ಯತೀಂದ್ರ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಮಂಗಳೂರಿನ ಬಜ್ಪೆ ಏರ್​ಪೋರ್ಟ್​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಎಂಎಲ್​ಸಿ ಯತೀಂದ್ರ ಅವರೇ ಕಾಂಗ್ರೆಸ್ ಪಕ್ಷದ ಹೈಕಮಾಂಡ್. ಅವರು ಏನು ಹೇಳ್ತಾರೋ ಅದನ್ನು ಗೌರವದಿಂದ ಸ್ವೀಕಾರ ಮಾಡೋಣ. ಯತೀಂದ್ರ ಅವರನ್ನೇ ನಮ್ಮ ಹೈಕಮಾಂಡ್ ಅಂತ ಸ್ವೀಕಾರ ಮಾಡೋಣ. ನಾನು ಈ ಬಗ್ಗೆ ಯಾರಿಗೂ ಪ್ರತಿಕ್ರಿಯೆ ಕೊಡಲ್ಲ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಸತೀಶ್ ಜಾರಕಿಹೊಳಿಯನ್ನು ‘ಕ್ಲೀನ್ ಬೋಲ್ಡ್’ ಮಾಡಿದ ಲಕ್ಷ್ಮೀ ಹೆಬ್ಬಾಳಕರ್..! – Kannada News | Minister Lakshmi hebbalkar clean bowled to satish jarkiholi in Cricket at Belagavi

ಬೆಳಗಾವಿ, (ಫೆಬ್ರವರಿ 06): ರಾಜಕೀಯದ ಜಂಜಾಟ, ಅಧಿಕಾರದ ಒತ್ತಡಗಳನ್ನು ಬದಿಗಿಟ್ಟು ಬೆಳಗಾವಿಯ (Belagavi)  ಪ್ರಭಾವಿ ಕಾಂಗ್ರೆಸ್ ನಾಯಕರು ಇಂದು (ಫೆಬ್ರವರಿ 06) ಕ್ರಿಕೆಟ್ ಆಟವಾಡಿ ಗಮನ ಸೆಳೆದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi)  ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್  ಅವರ ‘ಬಾಕ್ಸ್ ಕ್ರಿಕೆಟ್’  ನೆರೆದಿದ್ದ ಜನರಿಗೆ ಭರಪೂರ ಮನರಂಜನೆ ನೀಡಿದೆ.  ಹೌದು.. ಬೆಳಗಾವಿಯಲ್ಲಿ ಬಾಲಭವನ ವತಿಯಿಂದ ನಿರ್ಮಿಸಲಾದ ನೂತನ ಬಾಕ್ಸ್ ಕ್ರಿಕೆಟ್ ಮೈದಾನದ ಉದ್ಘಾಟನೆ  ನೆರವೇರಿತು. ಉದ್ಘಾಟನೆಯ ಪ್ರಯುಕ್ತ ಸಚಿವ ಸತೀಶ್ ಜಾರಕಿಹೊಳಿ ಬ್ಯಾಟಿಂಗ್‌ಗೆ ಇಳಿದರು.  ಮತ್ತೊಂದೆಡೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಡಿದ ಬೌಲಿಂಗ್​​​​ಗೆ  ಸತೀಶ್ ಜಾರಕಿಹೊಳಿ ‘ಕ್ಲೀನ್ ಬೋಲ್ಡ್’ ಆಗಿದ್ದಾರೆ. ಇದನ್ನು ಕಂಡ ನೆರೆದಿದ್ದ ಕಾರ್ಯಕರ್ತರು ಮತ್ತು ಜನರು ಶಿಳ್ಳೆ, ಚಪ್ಪಾಳೆ ತಟ್ಟಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Rakkasapuradhol Review: ರಾಜ್ ಬಿ. ಶೆಟ್ಟಿ ಅಭಿಮಾನಿಗಳಿಗೆ ‘ರಕ್ಕಸಪುರದೋಳ್’ ಮನರಂಜನೆಯ ಪ್ಯಾಕೇಜ್ – Kannada News | Rakkasapuradhol Movie Review: Raj B Shetty new film is a complete entertainer package

‘ರಕ್ಕಸಪುರದೋಳ್’ (Rakkasapuradhol) ಎಂಬ ಶೀರ್ಷಿಕೆ ಕೇಳಿದರೆ ಇದು ಕ್ರೈಂ ಥ್ರಿಲ್ಲರ್ ಕಥೆ ಎಂಬುದು ತಿಳಿಯುತ್ತದೆ. ಆದರೆ ಅಷ್ಟು ಮಾತ್ರವಲ್ಲ, ಈ ಕಥೆಯೊಳಗೆ ಇನ್ನೂ ಹಲವು ಅಂಶಗಳು ಇವೆ. ರಾಜ್ ಬಿ. ಶೆಟ್ಟಿ (Raj B Shetty) ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾಗೆ ರವಿ ಸಾರಂಗ ಆ್ಯಕ್ಷನ್-ಕಟ್ ಹೇಳಿದ್ದಾರೆ. ರವಿವರ್ಮಾ ನಿರ್ಮಾಣದ ಈ ಸಿನಿಮಾ ಫೆ.6ರಂದು ಬಿಡುಗಡೆ ಆಗಿದ್ದು, ಗಟ್ಟಿಯಾದ ಕಥೆ ಮತ್ತು ಉತ್ತಮವಾದ ಮೇಕಿಂಗ್​​ನಿಂದ ಗಮನ ಸೆಳೆಯುತ್ತಿದೆ. ‘ರಕ್ಕಸಪುರದೋಳ್’ ಚಿತ್ರದ ವಿಮರ್ಶೆ (Rakkasapuradhol Review) ಇಲ್ಲಿದೆ..

ರಾಜ್ ಬಿ. ಶೆಟ್ಟಿ ಅವರು ಎಲ್ಲ ಬಗೆಯ ಪಾತ್ರಗಳನ್ನು ಮಾಡುತ್ತಾರೆ. ಎಲ್ಲ ರೀತಿಯ ಪ್ರಯೋಗಕ್ಕೂ ಅವರು ಒಗ್ಗಿಕೊಳ್ಳುತ್ತಾರೆ. ‘ರಕ್ಕಸಪುರದೋಳ್’ ಸಿನಿಮಾದಲ್ಲಿ ಅವರು ಪೊಲೀಸ್ ಇನ್ಸ್​ಪೆಕ್ಟರ್ ಪಾತ್ರ ಮಾಡಿದ್ದಾರೆ. ಈ ಪೊಲೀಸ್ ಪಾತ್ರ ಸ್ವಲ್ಪ ಡಿಫರೆಂಟ್ ಆಗಿದೆ. ಮಾನಸಿಕ ಸಮಸ್ಯೆ ಹೊಂದಿರುವ ಆತನನ್ನು ರಕ್ಕಸಪುರ ಎಂಬ ಊರಿಗೆ ಕಳಿಸಲಾಗುತ್ತದೆ. ಆತ ಕಾಲಿಟ್ಟ ನಂತರವೇ ಆ ಊರಿನಲ್ಲಿ ಸರಣಿ ಕೊಲೆ ಸಂಭವಿಸುತ್ತವೆ.

ಆ ಸಾವುಗಳಿಗೂ, ಕಥಾನಾಯಕನಿಗೂ ಏನಾದರೂ ಸಂಬಂಧ ಇದೆಯಾ ಎಂಬ ಅನುಮಾನ ಆರಂಭದಲ್ಲೇ ಮೂಡುತ್ತದೆ. ನಂತರ ಅನುಮಾನದ ದೃಷ್ಟಿ ಬೇರೆ ಬೇರೆ ಪಾತ್ರಗಳ ಮೇಲೆ ಬೀಳುತ್ತದೆ. ಇದರ ನಡುವೆ ದೆವ್ವ ಭೂತದ ಕಾಟ ಕೂಡ ಶುರುವಾಗತ್ತದೆ. ಈ ಕೊಲೆಗಳಿಗೆ ಕಾರಣ ಆಗಿರುವುದು ಮನುಷ್ಯನಾ ಅಥವಾ ದೆವ್ವನಾ ಎಂಬ ಪ್ರಶ್ನೆ ಮೂಡುತ್ತದೆ. ಪ್ರೇಕ್ಷಕರು ಪ್ರತಿ ದೃಶ್ಯವನ್ನೂ ಭಾರಿ ಕುತೂಹಲದಿಂದ ನೋಡುವಂತಾಗುತ್ತದೆ. ಕೊಲೆಗಳ ರಹಸ್ಯ ಏನು ಎಂಬುದು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

‘ರಕ್ಕಸಪುರದೋಳ್’ ಸಿನಿಮಾದಲ್ಲಿ ಟ್ವಿಸ್ಟ್​​ಗಳಿಗೆ ಬರವೇ ಇಲ್ಲ. ಪ್ರತಿ ಹಂತದಲ್ಲೂ ಒಂದೊಂದು ಟ್ವಿಸ್ಟ್ ಎದುರಾಗುತ್ತದೆ. ಅದರಲ್ಲೂ, ದ್ವಿತೀಯಾರ್ಧದಲ್ಲಿ ಪ್ರೇಕ್ಷಕರು ಊಹಿಸದ ಅನೇಕ ಸಂಗತಿಗಳು ಎದುರಾಗುತ್ತವೆ. ಮೂಢನಂಬಿಕೆ ಮತ್ತು ವಿಜ್ಞಾನದ ವಿಚಾರಗಳನ್ನು ಕಥೆಯಲ್ಲಿ ಹೇಳಲಾಗಿದೆ. ಸಸ್ಪೆನ್ಸ್, ಥ್ರಿಲ್ಲರ್, ಹಾರರ್, ಕಾಮಿಡಿ ಮುಂತಾದ ಅಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಿ ಅಚ್ಚುಕಟ್ಟಾದ ಸಿನಿಮಾ ಮಾಡಲಾಗಿದೆ.

ನಿರ್ದೇಶಕ ರವಿ ಸಾರಂಗ ಅವರು ಗಟ್ಟಿಯಾದ ಕಥೆ ಮತ್ತು ಬಿಗಿಯಾದ ಚಿತ್ರಕಥೆಯನ್ನು ಹೆಣೆದುಕೊಳ್ಳುವ ಮೂಲಕ ಮೊದಲ ಹಂತದಲ್ಲೇ ಗೆದ್ದಿದ್ದಾರೆ. ಅದನ್ನು ಅಷ್ಟೇ ಉತ್ತಮವಾಗಿ ತೆರೆಗೆ ತರಲಾಗಿದೆ. ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ, ಅರ್ಜುನ್ ಜನ್ಯ ಅವರ ಸಂಗೀತದಿಂದಾಗಿ ಸಿನಿಮಾಗೆ ದೊಡ್ಡ ಬಲ ಬಂದಂತೆ ಆಗಿದೆ. ಹಿನ್ನೆಲೆ ಸಂಗೀತದಲ್ಲಿ ಅರ್ಜುನ್ ಜನ್ಯ ಹೆಚ್ಚು ಇಷ್ಟ ಆಗುತ್ತಾರೆ.

ಈ ಚಿತ್ರದಲ್ಲಿ ಹಲವು ಪಾತ್ರಗಳಿವೆ ಎಲ್ಲ ಪಾತ್ರಗಳಿಗೆ ಸ್ಕೋಪ್ ಇದೆ. ಸ್ವಾತಿಷ್ಟ ಕೃಷ್ಣನ್, ಅರ್ಚನಾ ಕೊಟ್ಟಿಗೆ, ಬಿ. ಸುರೇಶ, ಜಹಾಂಗೀರ್, ಅನಿರುದ್ಧ್ ಭಟ್, ಗೋಪಾಲ್ ದೇಶಪಾಂಡೆ ಮುಂತಾದವರು ಮಾಡಿರುವ ಪಾತ್ರಗಳು ಗಮನ ಸೆಳೆದಿವೆ. ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂಬ ಕುತೂಹಲದಲ್ಲೇ ಇಡೀ ಸಿನಿಮಾ ನೋಡಿಸಿಕೊಳ್ಳುತ್ತದೆ. ರಾಜ್ ಬಿ. ಶೆಟ್ಟಿ ಅವರ ವೃತ್ತಿಜೀವನದಲ್ಲಿ ಇದೊಂದು ಡಿಫರೆಂಟ್ ಸಿನಿಮಾವಾಗಿ ನಿಲ್ಲುತ್ತದೆ.

ಇದನ್ನೂ ಓದಿ: ನಾನು ಇರೋದೇ ಬೋಡ ಕಣೇ: ಬಾಲಕಿ ಜತೆ ರಾಜ್ ಬಿ. ಶೆಟ್ಟಿ ಕ್ಯೂಟ್ ಮಾತುಕಥೆ

ವಿಶೇಷ ಏನೆಂದರೆ, ‘ರಕ್ಕಸಪುರದೋಳ್’ ಚಿತ್ರದಲ್ಲಿ ಸಾಕಷ್ಟು ವಿಷಯಗಳನ್ನು ಹೇಳಲಾಗಿದೆ. ಹತ್ತಾರು ಪಾತ್ರಗಳ ಹಿಂದೆಯೂ ಸಾಕಷ್ಟು ಕಥೆ ಇದೆ. ಆ ಎಲ್ಲ ವಿಷಯಗಳನ್ನು ಪ್ರೇಕ್ಷಕರ ಎದುರು ತೆರೆದಿಡಲು ತೆಗೆದುಕೊಂಡಿರುವ ಸಮಯ ಕೇವಲ 2 ಗಂಟೆ 7 ನಿಮಿಷ! ಅಂದರೆ, ಅಷ್ಟು ಅಚ್ಚುಕಟ್ಟಾಗಿ, ಚುಟುಕಾಗಿ, ಮನಮುಟ್ಟುವಂತೆ ನಿರೂಪಣೆ ಮಾಡಲಾಗಿದೆ. ಅನೇಕ ಟ್ವಿಸ್ಟ್​​ಗಳು ಇದ್ದರೂ ಕೂಡ ಪ್ರೇಕ್ಷಕರಿಗೆ ಗೊಂದಲ ಮೂಡದಂತೆ ವಿವರಿಸಲಾಗಿದೆ. ಅದು ಈ ಸಿನಿಮಾದ ಶಕ್ತಿ ಆಗಿದೆ.

ಒಂದೇ ಸಿನಿಮಾದಲ್ಲಿ ಹಾರರ್, ಮರ್ಡರ್ ಮಿಸ್ಟರಿ, ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್, ಆ್ಯಕ್ಷನ್ ಎಲ್ಲವೂ ಬೇಕು ಎಂಬ ಪ್ರೇಕ್ಷಕರಿಗೆ ‘ರಕ್ಕಸಪುರದೋಳ್’ ಚಿತ್ರ ಒಂದು ಉತ್ತಮ ಆಯ್ಕೆ. ರಾಜ್ ಬಿ. ಶೆಟ್ಟಿ ಅವರ ಅಭಿಮಾನಿಗಳಿಗೆ ಈ ಚಿತ್ರ ಇಷ್ಟ ಆಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version