ಸಮುದ್ರದ ನೀರಿನಿಂದ ಅಡುಗೆ ಮನೆವರೆಗೆ: ಭಾರತದಲ್ಲಿ ಸ್ಪಟಿಕದಂತಹ ಉಪ್ಪು ತಯಾರಾಗುವುದು ಹೇಗೆ? – Kannada News | How Salt is Made in India: From Sea to Kitchen – A Complete Guide

ಪ್ರತಿಯೊಬ್ಬರ ನಿತ್ಯದ ಅಡುಗೆಯಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿರುವ, ಪ್ರಾಣಿ-ಪಕ್ಷಿ ಹಾಗೂ ಮಾನವಕುಲಕ್ಕೆ ಅತ್ಯಗತ್ಯವಾಗಿರುವ ಪದಾರ್ಥವೆಂದರೆ ಅದು ‘ಉಪ್ಪು’. ಭಾರತವು ಪ್ರಪಂಚದಲ್ಲೇ ಚೀನಾ ಮತ್ತು ಅಮೆರಿಕದ ನಂತರ ಮೂರನೇ ಅತಿ ದೊಡ್ಡ ಉಪ್ಪು ಉತ್ಪಾದನಾ ದೇಶವಾಗಿದೆ.

ಭಾರತದಲ್ಲಿ ಪ್ರತಿ ವರ್ಷ ಕೋಟ್ಯಾಂತರ ಟನ್ ಉಪ್ಪು ಉತ್ಪಾದನೆಯಾಗುತ್ತದೆ. ದೇಶದ ಶೇಕಡಾ 75ಕ್ಕೂ ಹೆಚ್ಚು ಉಪ್ಪನ್ನು ಗುಜರಾತ್ ಒಂದೇ ರಾಜ್ಯ ಉತ್ಪಾದಿಸಿದರೆ, ತಮಿಳುನಾಡು, ರಾಜಸ್ಥಾನ (ಸಾಂಭಾರ್ ಸರೋವರ) ಮತ್ತು ಆಂಧ್ರಪ್ರದೇಶಗಳು ನಂತರದ ಸ್ಥಾನದಲ್ಲಿವೆ. ಇನ್ನು ಈ ಉಪ್ಪು ಹೇಗೆ ಉತ್ಪಾದನೆ ಆಗುವ ಹಂತಗಳು ಇಲ್ಲಿದೆ ನೋಡಿ.

ಉಪ್ಪು ತಯಾರಿಕೆಯ ಹಂತಗಳು :

ಭಾರತದಲ್ಲಿ ಶೇಕಡಾ 70ಕ್ಕೂ ಹೆಚ್ಚು ಉಪ್ಪನ್ನು ಸೂರ್ಯನ ಶಾಖದಿಂದ ಆವಿ ಮಾಡುವ ತಂತ್ರಜ್ಞಾನ ಮೂಲಕವೇ ತಯಾರಿಸಲಾಗುತ್ತದೆ. ಈ ಇಡೀ ಪ್ರಕ್ರಿಯೆಯು ಪ್ರಕೃತಿಯ ಬೆಳಕು ಮತ್ತು ಗಾಳಿಯ ಮೇಲೆ ಅವಲಂಬಿತವಾಗಿರುತ್ತದೆ.

ಉಪ್ಪಿನ ಗದ್ದೆಗಳ ನಿರ್ಮಾಣ :

ಸಮುದ್ರ ತೀರದ ತಗ್ಗು ಪ್ರದೇಶಗಳಲ್ಲಿ ಅಥವಾ ಬೃಹತ್ ಬಯಲು ಜಾಗಗಳಲ್ಲಿ ಸಣ್ಣ ಸಣ್ಣ ಪಾತಿಗಳಂತಿರುವ ಗದ್ದೆಗಳನ್ನು ನಿರ್ಮಿಸಲಾಗುತ್ತದೆ. ಈ ಗದ್ದೆಗಳ ತಳಭಾಗದ ಮಣ್ಣನ್ನು ಗಟ್ಟಿಯಾಗಿ ಮೆತ್ತಿ, ನೀರು ಭೂಮಿಯೊಳಗೆ ಇಂಗಿ ಹೋಗದಂತೆ ತಡೆಯಲಾಗುತ್ತದೆ.

ಸಮುದ್ರದ ನೀರನ್ನು ಹಾಯಿಸುವುದು

ಹೈ-ಟೈಡ್ (ಅಲೆಗಳ ಉಬ್ಬರ) ಸಮಯದಲ್ಲಿ ಅಥವಾ ದೊಡ್ಡ ಮೋಟಾರ್ ಪಂಪ್‌ಗಳ ಸಹಾಯದಿಂದ ಸಮುದ್ರದ ಉಪ್ಪು ನೀರನ್ನು ಈ ಬೃಹತ್ ಗದ್ದೆಗಳಿಗೆ ತುಂಬಿಸಲಾಗುತ್ತದೆ.

ಸೂರ್ಯನ ತಾಪಕ್ಕೆ ಆವಿಯಾಗುವಿಕೆ

ಗದ್ದೆಗಳಲ್ಲಿ ಸಂಗ್ರಹವಾದ ನೀರು ಸುಮಾರು 2 ರಿಂದ 3 ವಾರಗಳ ಕಾಲ ಬಿಸಿಲಿನಲ್ಲಿ ಒಣಗಲು ಬಿಡಲಾಗುತ್ತದೆ. ಸೂರ್ಯನ ತೀವ್ರ ಶಾಖ ಮತ್ತು ಬೀಸುವ ಗಾಳಿಗೆ ನೀರಿನಲ್ಲಿದ್ದ ದ್ರವಾಂಶವು ಆವಿಯಾಗಿ ಗಾಳಿಯಲ್ಲಿ ವಿಲೀನವಾಗುತ್ತದೆ. ನೀರು ಕಡಿಮೆಯಾದಂತೆಲ್ಲಾ ನೀರಿನಲ್ಲಿದ್ದ ಉಪ್ಪಿನ ಸಾಂದ್ರತೆ ಹೆಚ್ಚಾಗುತ್ತಾ ಹೋಗುತ್ತದೆ.

ಸ್ಪಟಿಕ ರೂಪ ತಾಳುವುದು :

ನೀರು ಸಂಪೂರ್ಣವಾಗಿ ಆವಿಯಾದ ನಂತರ ಗದ್ದೆಯ ತಳದಲ್ಲಿ ದಪ್ಪನೆಯ ಬಿಳಿ ಬಣ್ಣದ ಉಪ್ಪಿನ ಪದರ ಅಥವಾ ಸ್ಪಟಿಕಗಳು ಉಳುಕಿಕೊಳ್ಳುತ್ತವೆ. ಇದನ್ನು ಸ್ಥಳೀಯ ಭಾಷೆಯಲ್ಲಿ “ಕಚ್ಚಾ ಉಪ್ಪು” ಎನ್ನಲಾಗುತ್ತದೆ.

ಉಪ್ಪು ಸಂಗ್ರಹಣೆ ಹಾಗೂ ಒಣಗಿಸುವಿಕೆ

ಉಪ್ಪಿನ ಗದ್ದೆ ಕಾರ್ಮಿಕರು (ಅಗರಿಯಾಗಳು) ಮರದ ಸಲಿಕೆಗಳು ಮತ್ತು ಕುಂಟೆಗಳನ್ನು ಬಳಸಿ ಗದ್ದೆಯ ತಳದಲ್ಲಿದ್ದ ಉಪ್ಪನ್ನು ರಾಶಿ ಹಾಕುತ್ತಾರೆ. ಈ ಕಚ್ಚಾ ಉಪ್ಪನ್ನು ಸಂಪೂರ್ಣವಾಗಿ ಒಣಗಿಸಲು ದೊಡ್ಡ ದೊಡ್ಡ ದಿಬ್ಬಗಳಾಗಿ ಸಂಗ್ರಹಿಸಿಡಲಾಗುತ್ತದೆ.

ಶುದ್ಧೀಕರಣ ಮತ್ತು ಅಯೋಡಿಕರಣ

ಗದ್ದೆಗಳಿಂದ ಸಂಗ್ರಹಿಸಿದ ಕಚ್ಚಾ ಉಪ್ಪು ನೇರವಾಗಿ ಬಳಕೆಗೆ ಯೋಗ್ಯವಾಗಿರುವುದಿಲ್ಲ. ಅದನ್ನು ಉಪ್ಪು ಸಂಸ್ಕರಣಾ ಘಟಕಗಳಿಗೆ ರವಾನಿಸಲಾಗುತ್ತದೆ.

ತೊಳೆಯುವುದು ಮತ್ತು ಶುದ್ಧೀಕರಣ: ಉಪ್ಪಿನಲ್ಲಿದ್ದ ಮಣ್ಣು, ಹುಳ ಹಾಗೂ ಕಸವನ್ನು ಅತ್ಯಾಧುನಿಕ ಯಂತ್ರಗಳ ಮೂಲಕ ತೊಳೆದು ತೆಗೆಯಲಾಗುತ್ತದೆ.

ಅಯೋಡಿನ್ ಬೆರೆಸುವುದು: ಭಾರತ ಸರ್ಕಾರದ ನಿಯಮಾವಳಿಗಳ ಪ್ರಕಾರ, ಥೈರಾಯ್ಡ್ ಮತ್ತು ಗಾಯಿಟರ್‌ನಂತಹ ಕಾಯಿಲೆಗಳನ್ನು ತಡೆಯಲು ಪ್ರತಿಯೊಂದು ಖಾದ್ಯ ಉಪ್ಪಿಗೂ ಕಡ್ಡಾಯವಾಗಿ ಪೊಟ್ಯಾಸಿಯಮ್ ಅಯೋಡೇಟ್ (ಅಯೋಡಿನ್) ಬೆರೆಸಲಾಗುತ್ತದೆ.

ಪುಡಿ ಮಾಡುವುದು ಮತ್ತು ಪ್ಯಾಕಿಂಗ್: ಕಲ್ಲು ಉಪ್ಪನ್ನು ಬೇಕಾದ ಗಾತ್ರಕ್ಕೆ ಪುಡಿ ಮಾಡಿ, ತೇವಾಂಶ ತಗಲದಂತೆ ಪ್ಯಾಕ್ ಮಾಡಿ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತದೆ.

ಇದನ್ನೂ ಓದಿ: Charm Pricing Strategy: ಬಹುತೇಕ ವಸ್ತುಗಳ ಬೆಲೆ 499, 999 ರೂ. ಏಕಿರುತ್ತವೆ, ಏನಿದು ಮಾರ್ಕೆಟಿಂಗ್ ಗಿಮಿಕ್‌?

ವಿಶ್ವದಲ್ಲೇ ಅತಿ ಹೆಚ್ಚು ಉಪ್ಪು ಉತ್ಪಾದಿಸುವ ಟಾಪ್ 7 ದೇಶಗಳು

ಚೀನಾ – ಪ್ರಥಮ ಸ್ಥಾನ:

ವಿಶ್ವದಲ್ಲೇ ಅತಿ ದೊಡ್ಡ ಉಪ್ಪು ಉತ್ಪಾದಕ ದೇಶವಾಗಿರುವ ಚೀನಾ, ವರ್ಷಕ್ಕೆ ಸುಮಾರು 64 ಮಿಲಿಯನ್ ಮೆಟ್ರಿಕ್ ಟನ್ ಉಪ್ಪನ್ನು ಉತ್ಪಾದಿಸುತ್ತದೆ. ಚೀನಾದ ವಿಶಾಲವಾದ ಭೂಪ್ರದೇಶ ಹಾಗೂ ಬೃಹತ್ ಉಪ್ಪಿನ ಅಗಳಿಗಳು ಇದರ ಪ್ರಮುಖ ಆಧಾರವಾಗಿವೆ. ಆವಿಯಾಗಿಸುವಿಕೆ ಹಾಗೂ ಬ್ರೈನ್ ಎಕ್ಸ್‌ಟ್ರಾಕ್ಷನ್ ತಂತ್ರಜ್ಞಾನಗಳ ಮೂಲಕ ಇಲ್ಲಿ ಉಪ್ಪು ತಯಾರಿಸಲಾಗುತ್ತದೆ.

ಅಮೆರಿಕ – ದ್ವಿತೀಯ ಸ್ಥಾನ

ಅಮೆರಿಕವು ವಾರ್ಷಿಕವಾಗಿ ಸುಮಾರು 42 ಮಿಲಿಯನ್ ಮೆಟ್ರಿಕ್ ಟನ್ ಉಪ್ಪನ್ನು ಉತ್ಪಾದಿಸುತ್ತದೆ. ಆಹಾರ ದರ್ಜೆಯ ಉಪ್ಪು ಹಾಗೂ ಕೈಗಾರಿಕಾ ಉಪ್ಪನ್ನು ಇಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತದೆ. ಓಹಿಯೋ, ಟೆಕ್ಸಾಸ್ ಮತ್ತು ಮಿಚಿಗನ್ ರಾಜ್ಯಗಳು ಅಮೆರಿಕದ ಪ್ರಮುಖ ಉಪ್ಪು ಉತ್ಪಾದನಾ ಕೇಂದ್ರಗಳಾಗಿವೆ.

ಭಾರತ – ತೃತೀಯ ಸ್ಥಾನ

ಭಾರತವು ವರ್ಷಕ್ಕೆ 30 ಮಿಲಿಯನ್ ಮೆಟ್ರಿಕ್ ಟನ್‌ಗೂ ಹೆಚ್ಚು ಉಪ್ಪು ಉತ್ಪಾದಿಸುವ ಮೂಲಕ ಜಾಗತಿಕವಾಗಿ 3ನೇ ಅತಿ ದೊಡ್ಡ ದೇಶವಾಗಿದೆ. ಗುಜರಾತ್ ಹಾಗೂ ತಮಿಳುನಾಡು ಕರಾವಳಿ ರಾಜ್ಯಗಳು ದೇಶದ ಪ್ರಮುಖ ಉಪ್ಪು ಉತ್ಪಾದನಾ ಹಬ್‌ಗಳಾಗಿವೆ. ಭಾರತವು ಏಷ್ಯಾ ಮತ್ತು ಆಫ್ರಿಕಾ ಖಂಡದ ಹಲವು ದೇಶಗಳಿಗೆ ಬೃಹತ್ ಪ್ರಮಾಣದಲ್ಲಿ ಉಪ್ಪನ್ನು ರಫ್ತು ಮಾಡುತ್ತದೆ.

ಚಿಲಿ – 4ನೇ ಸ್ಥಾನ

ದಕ್ಷಿಣ ಅಮೆರಿಕದ ಚಿಲಿ ದೇಶವು ವರ್ಷಕ್ಕೆ ಸುಮಾರು 15 ಮಿಲಿಯನ್ ಮೆಟ್ರಿಕ್ ಟನ್ ಉಪ್ಪನ್ನು ಉತ್ಪಾದಿಸುತ್ತದೆ. ತನ್ನ ಒಣ ಪ್ರದೇಶಗಳಲ್ಲಿರುವ ನೈಸರ್ಗಿಕ ಉಪ್ಪಿನ ನಿಕ್ಷೇಪಗಳನ್ನು ಬಳಸಿಕೊಂಡು ಆಹಾರ ಹಾಗೂ ಕೈಗಾರಿಕಾ ಅಗತ್ಯಗಳಿಗಾಗಿ ಉಪ್ಪು ತಯಾರಿಸಿ ವಿವಿಧ ಖಂಡಗಳಿಗೆ ರಫ್ತು ಮಾಡುತ್ತದೆ.

ಕೆನಡಾ – 5ನೇ ಸ್ಥಾನ

ಕೆನಡಾವು ವಾರ್ಷಿಕವಾಗಿ ಸುಮಾರು 14 ಮಿಲಿಯನ್ ಮೆಟ್ರಿಕ್ ಟನ್ ಉಪ್ಪನ್ನು ಉತ್ಪಾದಿಸುತ್ತದೆ. ಅತ್ಯಾಧುನಿಕ ಉಪ್ಪಿನ ಗಣಿಗಾರಿಕೆ ಹಾಗೂ ಸುಸ್ಥಿರ ಪದ್ಧತಿಗಳ ಮೂಲಕ ಜಾಗತಿಕ ಉಪ್ಪು ಮಾರುಕಟ್ಟೆಯಲ್ಲಿ ಕೆನಡಾ ಪ್ರಮುಖ ಪಾತ್ರ ವಹಿಸಿದೆ.

ಜರ್ಮನಿ – 6ನೇ ಸ್ಥಾನ

ಯುರೋಪ್‌ನ ಪ್ರಮುಖ ಉತ್ಪಾದಕ ರಾಷ್ಟ್ರವಾಗಿರುವ ಜರ್ಮನಿ ವರ್ಷಕ್ಕೆ ಸುಮಾರು 12 ಮಿಲಿಯನ್ ಮೆಟ್ರಿಕ್ ಟನ್ ಉಪ್ಪು ಉತ್ಪಾದಿಸುತ್ತದೆ. ಹಿಮಾವೃತ ರಸ್ತೆಗಳ ಹಿಮ ಕರಗಿಸಲು (De-icing) ಹಾಗೂ ರಾಸಾಯನಿಕ ಕೈಗಾರಿಕೆಗಳಿಗೆ ಇಲ್ಲಿನ ಉಪ್ಪನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ಆಸ್ಟ್ರೇಲಿಯಾ– 7ನೇ ಸ್ಥಾನ

ಆಸ್ಟ್ರೇಲಿಯಾವು ನೈಸರ್ಗಿಕ ಉಪ್ಪಿನ ಸರೋವರಗಳು ಹಾಗೂ ಸುಧಾರಿತ ಹೊರತೆಗೆಯುವ ತಂತ್ರಜ್ಞಾನದ ನೆರವಿನಿಂದ ವಾರ್ಷಿಕ ಸುಮಾರು 11 ಮಿಲಿಯನ್ ಮೆಟ್ರಿಕ್ ಟನ್ ಉಪ್ಪನ್ನು ಉತ್ಪಾದಿಸುತ್ತದೆ. ಇದನ್ನು ದೇಶೀಯ ಬಳಕೆಯ ಜೊತೆಗೆ ಇತರ ದೇಶಗಳಿಗೂ ರಫ್ತು ಮಾಡಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಆಷಾಢದ ಕೊನೆಯ ಶುಕ್ರವಾರ; ಮಹಾಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡೇಶ್ವರಿ – Kannada News | Devotion at Chamundi Hills: Last Ashada Friday Sees Special Mahalakshmi Alankara

ಮೈಸೂರಿನ ಐತಿಹಾಸಿಕ ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಕೊನೆಯ ಶುಕ್ರವಾರದಂದು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಮತ್ತು ಅಲಂಕಾರಗಳು ನಡೆಯುತ್ತಿವೆ. ಈ ಶುಭ ಸಂದರ್ಭದಲ್ಲಿ, ಜಗನ್ಮಾತೆ ಚಾಮುಂಡೇಶ್ವರಿ ದೇವಿಯನ್ನು ಮಹಾಲಕ್ಷ್ಮೀ ಅಲಂಕಾರದಲ್ಲಿ ಸಿಂಗಾರಗೊಳಿಸಿದ್ದು, ದೇವಿಯ ಸೌಂದರ್ಯವು ಭಕ್ತರ ಮನಸೆಳೆಯುತ್ತಿದೆ.

ಬೆಳಗಿನ ಜಾವದಿಂದಲೇ ಸಾವಿರಾರು ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಾರೆ. ದೇವಸ್ಥಾನದ ಆವರಣದಲ್ಲಿ ಎಲ್ಲೆಡೆ ಭಕ್ತಿಯ ವಾತಾವರಣ ನೆಲೆಸಿತ್ತು. ಅಧಿಕಾರಿಗಳು ಮತ್ತು ಸ್ವಯಂಸೇವಕರು ಭಕ್ತರಿಗೆ ಸುಗಮ ದರ್ಶನಕ್ಕೆ ಸಹಕರಿಸುತ್ತಿದ್ದಾರೆ. ಆಷಾಢದ ಕೊನೆಯ ಶುಕ್ರವಾರದ ಈ ವಿಶೇಷ ದಿನವು ಭಕ್ತರಿಗೆ ಸ್ಮರಣೀಯ ಅನುಭವವನ್ನು ನೀಡುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ 

 

Source link

‘ಶಾಂತಿ ಕ್ರಾಂತಿ’ ಮರುಬಿಡುಗಡೆಗೆ ಹಲವು ಸವಾಲು; ಅಂದುಕೊಂಡಷ್ಟು ಸುಲಭವಿಲ್ಲ ರೀ-ರಿಲೀಸ್ – Kannada News | Re Release Challenges: Why Ravichandran Shanti Kranti Is not Easy to Bring Back to Theatres

‘ಶಾಂತಿ ಕ್ರಾಂತಿ’ ಇದು 1991ರಲ್ಲಿ ರಿಲೀಸ್ ಆದ ಅಸಲಿ ಪ್ಯಾನ್ ಇಂಡಿಯಾ ಸಿನಿಮಾ. ಕೇವಲ ಡಬ್ ಮಾಡದೆ ಹಲವು ಭಾಷೆಗಳಲ್ಲಿ ಬೇರೆ ಬೇರೆ ಕಲಾವಿದರನ್ನೇ ಇಟ್ಟುಕೊಂಡು ಶೂಟ್ ಮಾಡಲಾಗಿತ್ತು. ಆ ಸಮಯದಲ್ಲೇ ಇದರ ಬಜೆಟ್ 10 ಕೋಟಿ ರೂಪಾಯಿ ಮೀರಿತ್ತು. ಈಗ ‘ಶಾಂತಿ ಕ್ರಾಂತಿ’ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ರೀ-ರಿಲೀಸ್ ಮಾಡಬೇಕೆಂಬ ಒತ್ತಾಯ ಸೋಶಿಯಲ್ ಮೀಡಿಯಾದಲ್ಲಿ ಜೋರಾ್ಉದೆ. ಆದರೆ, ಸೋಶಿಯಲ್ ಮೀಡಿಯಾ ಟ್ರೆಂಡ್‌ಗೂ ಮತ್ತು ವಾಸ್ತವದ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ ಎಂಬ ವಿಶ್ಲೇಷಣೆ ವ್ಯಕ್ತವಾಗಿದೆ.

ಸೋಶಿಯಲ್ ಮೀಡಿಯಾ ಕ್ರೇಜ್ vs ವಾಸ್ತವ

ಸಾಮಾಜಿಕ ಜಾಲತಾಣಗಳಲ್ಲಿ ‘ಶಾಂತಿ ಕ್ರಾಂತಿ’ ರೀ-ರಿಲೀಸ್‌ಗೆ ಭಾರಿ ಬೆಂಬಲ ಸಿಗುತ್ತಿದೆ. ರೀ-ರಿಲೀಸ್ ಮಾಡಿ ಎಂಬ ರೀಲ್ಸ್‌ಗೆ ಲಕ್ಷಾಂತರ ವೀಕ್ಷಣೆ ಹಾಗೂ ಲೈಕ್ಸ್ ಬರುತ್ತಿದೆ. ಆದರೆ, ಈ ಪೈಕಿ ಎಷ್ಟು ಜನರು ಥಿಯೇಟರ್​​ಗೆ ಬರುತ್ತಾರೆ ಎಂಬುದು ಪ್ರಶ್ನೆ.

ಉಚಿತ ವೀಕ್ಷಣೆ

‘ಶಾಂತಿ ಕ್ರಾಂತಿ’ ಸಿನಿಮಾ ಈಗಾಗಲೇ ಯುಟ್ಯೂಬ್‌ನಲ್ಲಿ ಉಚಿತವಾಗಿ ಲಭ್ಯವಿದೆ ಹಾಗೂ ಉದಯ ಟಿವಿಯಲ್ಲಿ ವಾರಕ್ಕೆ ಎರಡೆರಡು ಬಾರಿ ಪ್ರಸಾರವಾಗುತ್ತಿದೆ. ಹೀಗಿರುವಾಗ ಜನರು ಥಿಯೇಟರ್​​ಗೆ ಹೋಗಿ ವೀಕ್ಷಿಸುತ್ತಾರೆ ಎಂಬುದನ್ನು ಹೇಗೆ ನಿರೀಕ್ಷಿಸಬಹುದು? ಇಂದಿನ ಕಾಲದಲ್ಲಿ ಪ್ರೇಕ್ಷಕರು ಅರ್ಧ ದಿನದ ಸಮಯ ಮೀಸಲಿಟ್ಟು, ಸಾವಿರಾರು ರೂಪಾಯಿಗಳನ್ನು ಟಿಕೆಟ್, ಪಾಪ್‌ಕಾರ್ನ್ ಹಾಗೂ ಪಾರ್ಕಿಂಗ್‌ಗೆ ಖರ್ಚು ಮಾಡಿ ಚಿತ್ರಮಂದಿರಕ್ಕೆ ಬರುವುದು ವಿರಳ.

ಹಳೆಯ ಸಿನಿಮಾವನ್ನು ಈಗಿನ ಕಾಲಕ್ಕೆ ತಕ್ಕಂತೆ 4K ನೆಗೆಟಿವ್ ಕ್ಲೀನಿಂಗ್, ಸೌಂಡ್ ಮಿಕ್ಸಿಂಗ್ ಸೇರಿದಂತೆ ತಾಂತ್ರಿಕವಾಗಿ ಸಿದ್ಧಪಡಿಸಿ ರೀ-ರಿಲೀಸ್ ಮಾಡಲು ಲಕ್ಷಾಂತರ ರೂಪಾಯಿ ಹೂಡಿಕೆ ಬೇಕಾಗುತ್ತದೆ. ಹೂಡಿಕೆ ಮಾಡಿದ ಹಣ ವಾಪಸ್ ಬರುವುದು ಅನುಮಾನ.

ಶೇ. 95 ರೀ-ರಿಲೀಸ್ ಸಿನಿಮಾಗಳು ವಿಫಲ

ಕನ್ನಡ ಚಿತ್ರರಂಗದಲ್ಲಿ ರೀ-ರಿಲೀಸ್ ಆದ ಶೇ. 95ರಷ್ಟು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸೋತಿವೆ. ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಥಿಯೇಟರ್ ಮುಂದೆ ಸಂಭ್ರಮಿಸಿ ಹಾಕುವ ವಿಡಿಯೋಗಳು ಕೇವಲ ಶೇ. 2ರಷ್ಟು ಮಾತ್ರ ವಾಸ್ತವ. ಉಳಿದ ಶೇ. 98ರಷ್ಟು ಶೋಗಳು ಹಾಗೂ ಥಿಯೇಟರ್‌ಗಳು ಖಾಲಿ ಉಳಿಯುತ್ತವೆ ಮತ್ತು ಥಿಯೇಟರ್ ಬಾಡಿಗೆಯೂ ವಾಪಸ್ ಬರುವುದಿಲ್ಲ.

ಇದನ್ನೂ ಓದಿ: ‘ಶಾಂತಿ ಕ್ರಾಂತಿ’ ರೀ-ರಿಲೀಸ್ ಬಗ್ಗೆ ರವಿಚಂದ್ರನ್ ಮಗನಿಂದ ಸಿಕ್ತು ಅಪ್​​ಡೇಟ್

ರವಿಚಂದ್ರನ್​ಗೆ ಇತ್ತು ಅನುಮಾನ

ರವಿಚಂದ್ರನ್ ಅವರಿಗೆ ಈ ಸಿನಿಮಾ ಮಾಡುವಾಗಲೇ ಇದರ ಫಲಿತಾಂಶದ ಅರಿವಿತ್ತು. ಆದರೆ ತಂದೆಯ ಸೂಚನೆಯಂತೆ ರಜನಿಕಾಂತ್, ನಾಗಾರ್ಜುನ ಅವರಂತಹ ಸೂಪರ್ ಸ್ಟಾರ್‌ಗಳ ಕಾಲ್‌ಶೀಟ್ ವೃಥಾ ಹೋಗಬಾರದೆಂದು ಕಷ್ಟಪಟ್ಟು ಸಿನಿಮಾವನ್ನು ಪೂರ್ಣಗೊಳಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 9:02 am, Fri, 7 August 26

Source link

TV9 Kannada News Live: ಕರಾವಳಿ, ಮಲೆನಾಡಿಗೆ ಭಾರಿ ಮಳೆ ಅಲರ್ಟ್! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | TV9 Kannada Live Breaking News 07 August 2026 Monsoon, Cabinet expansion, winter session, Politics Cinema Latest Updates Online

Breaking News Today Live Updates in Kannada: ದೇಶ ಮತ್ತು ವಿದೇಶಗಳ ಇಂದಿನ ಪ್ರಮುಖ ಸುದ್ದಿಗಳ ಲೈವ್ ಅಪ್ಡೇಟ್ಸ್‌ಗೆ ಸುಸ್ವಾಗತ. ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಇಂದು (ಆಗಸ್ಟ್ 7) ಕರಾವಳಿ ಹಾಗೂ ಮಲೆನಾಡಿನ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮತ್ತೊಂದೆಡೆ, ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರ ಅನುಕೂಲಕ್ಕಾಗಿ ವಿಶೇಷ ‘ಸುಗಮ ದರ್ಶನ’ ನೀತಿಯನ್ನು ಜಾರಿಗೆ ತರಲಾಗಿದೆ. ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಯುದ್ಧ ಶೀಘ್ರ ಅಂತ್ಯಗೊಳ್ಳುವ ಸುಳಿವು ನೀಡಿದ್ದು, ಯುಎಸ್ ಮಿಲಿಟರಿ ಶಸ್ತ್ರಾಸ್ತ್ರ ಕೊರತೆ ವರದಿ ಮಾಡಿದ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ಕೆಂಡಾಮಂಡಲರಾಗಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

Source link

Sugama Darshan: ಅಯೋಧ್ಯೆಯಲ್ಲಿ ವೃದ್ಧರಿಗೆ ‘ಸುಗಮ ದರ್ಶನ’ ಪಾಸ್; 3 ವರ್ಷದೊಳಗಿನ ಮಕ್ಕಳ ತಾಯಂದಿರಿಗೂ ನೇರ ದರ್ಶನ! – Kannada News | Ayodhya Ram Temple: Sugama Darshana for Elders and Kids, Easy Darshan Policy

ದೇಶಾದ್ಯಂತ ಶ್ರೀರಾಮ ಮಂದಿರಕ್ಕೆ ಪ್ರತಿದಿನ ಆಗಮಿಸುವ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ಶ್ರೀರಾಮ ಜನ್ಮಭೂಮಿ ದೇವಾಲಯ ಟ್ರಸ್ಟ್ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ವೃದ್ಧರು, ಸಣ್ಣ ಮಕ್ಕಳಿರುವ ತಾಯಂದಿರು ಹಾಗೂ ಕುಟುಂಬಗಳಿಗೆ ಯಾವುದೇ ಅಡೆತಡೆಯಿಲ್ಲದೆ ಶ್ರೀರಾಮನ ದರ್ಶನ ಕಲ್ಪಿಸಲು ವಿಶೇಷ ‘ಸುಗಮ ದರ್ಶನ’ ನೀತಿಯನ್ನು ಜಾರಿಗೆ ತರಲಾಗಿದೆ. ಈ ಹೊಸ ವ್ಯವಸ್ಥೆಯಿಂದಾಗಿ ಸುದೀರ್ಘ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವ ಭಕ್ತರ ಶ್ರಮ ತಪ್ಪಲಿದ್ದು, ಎಲ್ಲರಿಗೂ ಶಾಂತಿಯುತ ಹಾಗೂ ಆರಾಮದಾಯಕವಾಗಿ ಶ್ರೀರಾಮನ ದರ್ಶನ ಪಡೆಯಲು ಹಾದಿ ಸುಗಮವಾಗಿದೆ.

ಹಿರಿಯ ನಾಗರಿಕರಿಗೆ ಕೇವಲ 10 ನಿಮಿಷಗಳಲ್ಲಿ ಸಿಗಲಿದೆ ‘ಸುಗಮ ದರ್ಶನ’ ಪಾಸ್:

70 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಇನ್ಮುಂದೆ ಆನ್‌ಲೈನ್‌ನಲ್ಲಿ ಅಥವಾ ಸಾಮಾನ್ಯ ಸಾಲಿನಲ್ಲಿ ನಿಂತು ಮುಂಗಡ ಅನುಮತಿ ಪಡೆಯುವ ಅಗತ್ಯವಿಲ್ಲ. ದೇವಾಲಯದ ಆವರಣದಲ್ಲಿರುವ ‘ಸುಗಮ ದರ್ಶನ ಕೌಂಟರ್’ಗೆ ಭೇಟಿ ನೀಡಿ ತಮ್ಮ ವಯಸ್ಸಿನ ಪರಿಶೀಲನೆಗಾಗಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಅಥವಾ ಯಾವುದೇ ಸರ್ಕಾರಿ ಗುರುತಿನ ಚೀಟಿಯನ್ನು ತೋರಿಸಿದರೆ ಸಾಕು, ಕೇವಲ 10 ನಿಮಿಷಗಳಲ್ಲಿ ಅವರಿಗೆ ಪಾಸ್ ನೀಡಲಾಗುತ್ತದೆ. ಈ ಮೂಲಕ ಅವರು ದೀರ್ಘ ಸಮಯ ಕಾಯದೆ ಸುಲಭವಾಗಿ ದರ್ಶನ ಪಡೆಯಬಹುದು.

ವೃದ್ಧ ಭಕ್ತರ ನೆರವಿಗೆ ಬರುವ ಸಹಾಯಕರಿಗೂ ದೇವಾಲಯ ಪ್ರವೇಶಿಸಲು ಅವಕಾಶ:

ಹಿರಿಯ ನಾಗರಿಕರು ಒಂಟಿಯಾಗಿ ಪ್ರಯಾಣಿಸಲು ಅಥವಾ ನಡೆಯಲು ಕಷ್ಟಪಡಬೇಕಾಗಬಹುದು ಎಂಬುದನ್ನು ದೇವಾಲಯ ಟ್ರಸ್ಟ್ ವಿಶೇಷವಾಗಿ ಪರಿಗಣಿಸಿದೆ. ಆದ್ದರಿಂದ ಸುಗಮ ದರ್ಶನ ಸೌಲಭ್ಯದ ಅಡಿಯಲ್ಲಿ ವೃದ್ಧರ ಜೊತೆಯಲ್ಲಿರುವ ಒಬ್ಬ ವ್ಯಕ್ತಿಗೆ ಅಥವಾ ಸಹಾಯಕರಿಗೆ (Helper) ಅವರೊಂದಿಗೆ ದೇವಾಲಯದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು. ಈ ವ್ಯವಸ್ಥೆಯು ಹಿರಿಯ ಭಕ್ತರು ಸಂಪೂರ್ಣ ಸುರಕ್ಷಿತ ಮತ್ತು ಹೆಚ್ಚು ಆರಾಮದಾಯಕ ವಾತಾವರಣದಲ್ಲಿ ದೇವರ ದರ್ಶನ ಪಡೆಯಲು ಸಹಾಯ ಮಾಡುತ್ತದೆ.

ಸಣ್ಣ ಮಕ್ಕಳಿರುವ ತಾಯಂದಿರಿಗೆ ವಿಶೇಷ ಆದ್ಯತೆ ಮತ್ತು ನೇರ ದರ್ಶನ:

ಮೂರು ವರ್ಷದೊಳಗಿನ ಕಂದಮ್ಮಗಳೊಂದಿಗೆ ಬರುವ ತಾಯಂದಿರಿಗೆ ದೇವಾಲಯ ಟ್ರಸ್ಟ್ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿದೆ. ಅವರು ಸಾಮಾನ್ಯ ಕ್ಯೂನಲ್ಲಿ ಗಂಟೆಗಟ್ಟಲೆ ನಿಲ್ಲುವ ಅಗತ್ಯವಿಲ್ಲದೆ, ನೇರವಾಗಿ ‘ಸುಗಮ ದರ್ಶನಂ ಕೌಂಟರ್’‌ನಲ್ಲಿ ಪಾಸ್ ಪಡೆದುಕೊಂಡು ದೇವರ ದರ್ಶನಕ್ಕೆ ತೆರಳಬಹುದು. ಇದು ಚಿಕ್ಕ ಮಕ್ಕಳನ್ನು ಕರೆದುಕೊಂಡು ಬರುವ ಮಹಿಳೆಯರಿಗೆ ಅನಗತ್ಯ ಶ್ರಮ ಹಾಗೂ ತೊಂದರೆಯಾಗುವುದನ್ನು ತಪ್ಪಿಸಲಿದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

10 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಶುಲ್ಕ ಹಾಗೂ ಪಾಸ್ ಇಲ್ಲದೆ ಉಚಿತ ಪ್ರವೇಶ:

ಹತ್ತು ವರ್ಷದೊಳಗಿನ ಮಕ್ಕಳಿಗೆ ದೇವಾಲಯ ಪ್ರವೇಶಿಸಲು ಯಾವುದೇ ವಿಶೇಷ ಪಾಸ್ ಅಥವಾ ಶುಲ್ಕದ ಅಗತ್ಯವಿರುವುದಿಲ್ಲ. ಅವರು ಸಂಪೂರ್ಣವಾಗಿ ಉಚಿತವಾಗಿ ನೇರವಾಗಿ ದೇವಾಲಯವನ್ನು ಪ್ರವೇಶಿಸಬಹುದು ಮತ್ತು ತಮ್ಮ ಪೋಷಕರೊಂದಿಗೆ ಶ್ರೀರಾಮನ ದರ್ಶನ ಪಡೆಯಬಹುದು. ಮಕ್ಕಳೊಂದಿಗೆ ಆಗಮಿಸುವ ಕುಟುಂಬಗಳಿಗೆ ದರ್ಶನ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಭಕ್ತರ ಸೇವೆಗೆ ಆದ್ಯತೆ ನೀಡಿರುವ ಟ್ರಸ್ಟ್ ನಿರ್ಧಾರಕ್ಕೆ ದೇಶಾದ್ಯಂತ ಮೆಚ್ಚುಗೆ:

ಅಯೋಧ್ಯೆಗೆ ಹರಿದುಬರುತ್ತಿರುವ ಭಕ್ತರ ಬೃಹತ್ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ವೃದ್ಧರು, ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ಗೌರವ ನೀಡುವ ಉದ್ದೇಶದಿಂದ ಈ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಭಕ್ತರಿಗೆ ಸೇವೆ ಸಲ್ಲಿಸುವುದನ್ನೇ ಮುಖ್ಯ ಧ್ಯೇಯವಾಗಿಸಿಕೊಂಡಿರುವ ದೇವಾಲಯ ಟ್ರಸ್ಟ್‌ನ ಈ ಮಾನವೀಯ ಕ್ರಮಕ್ಕೆ ದೇಶಾದ್ಯಂತ ಇರುವ ಕೋಟ್ಯಂತರ ಶ್ರೀರಾಮ ಭಕ್ತರಿಂದ ವ್ಯಾಪಕ ಮೆಚ್ಚುಗೆ ಮತ್ತು ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಲೈಂಗಿಕ ದೌರ್ಜನ್ಯಕ್ಕೂ ಮುನ್ನ ಆಕೆ ಬಳಿ ನಾನು ನಿನ್ನ ಬಾಸ್, ನಾನು ಏನು ಬೇಕಿದ್ರೂ ಮಾಡಬಹುದು ಎಂದಿದ್ದ ತರುಣ್ ತೇಜ್​ಪಾಲ್ – Kannada News | ‘I’m Your Boss’: Tarun Tejpal’s Conversation Referenced in Court Verdict Draws Attention

ಪಣಜಿ, ಆಗಸ್ಟ್​ 07: ಗೋವಾದ ಪಂಚತಾರಾ ಹೋಟೆಲ್​ ಒಂದರ ಲಿಫ್ಟ್​ನಲ್ಲಿ ತಮ್ಮ ಉದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ತೆಹಲ್ಕಾ ನಿಯತಕಾಲಿಕೆ ಸಂಸ್ಥಾಪಕ ಹಾಗೂ ಮಾಜಿ ಸಂಪಾದಕ ತರುಣ್ ತೇಜ್​ಪಾಲ್(Tarun Tejpal)​ಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಘಟನೆ ನಡೆದಿದ್ದು, 2013ರಲ್ಲಿ, ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌ಗೆ ಪ್ರಾಸಿಕ್ಯೂಷನ್ ಸಲ್ಲಿಸಿದ ಸಾಕ್ಷ್ಯಾಧಾರಗಳ ಪೈಕಿ, ಘಟನೆಯ ನಂತರ ತೇಜ್‌ಪಾಲ್ ಸಂತ್ರಸ್ತೆಗೆ ಬರೆದಿದ್ದ ಕ್ಷಮೆಯಾಚನೆಯ ಇ-ಮೇಲ್ ಈ ಐತಿಹಾಸಿಕ ತೀರ್ಪಿಗೆ ಅತ್ಯಂತ ಪ್ರಮುಖ ತಿರುವಾಯಿತು.

ಲಿಫ್ಟ್‌ನಲ್ಲಿ ನಡೆದ ಘಟನೆ: 2013 ರ ನವೆಂಬರ್ 7 ಮತ್ತು 8 ರಂದು ಗೋವಾದಲ್ಲಿ ನಡೆದ ‘ಥಿಂಕ್‌ಫೆಸ್ಟ್’ ಕಾರ್ಯಕ್ರಮದ ವೇಳೆ, ತಮ್ಮ ಸಂಪಾದಕ ಹುದ್ದೆಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕಿರಿಯ ಮಹಿಳಾ ಪತ್ರಕರ್ತೆಯ ಮೇಲೆ ತೇಜ್‌ಪಾಲ್ ಲೈಂಗಿಕ ದೌರ್ಜನ್ಯ ಎಸಗಿದ್ದರು.

ಸಂತ್ರಸ್ತೆ ತೇಜ್‌ಪಾಲ್ ಅವರನ್ನು ತಡೆಯಲು ಯತ್ನಿಸಿದಾಗ, ತೇಜ್‌ಪಾಲ್ ನಾನು ನಿನ್ನ ಬಾಸ್, ನಾನು ಏನು ಬೇಕಾದರೂ ಮಾಡಬಹುದು ಎಂದು ಹೇಳಿದ್ದಾಗಿ ಬರೆದಿದ್ದ ಇ-ಮೇಲ್ ಸಂಭಾಷಣೆಯನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿತು.

ಬೇಷರತ್ ಕ್ಷಮೆಯಾಚನೆ: ಘಟನೆ ನಡೆದ ಕೆಲವೇ ದಿನಗಳಲ್ಲಿ ತೇಜ್‌ಪಾಲ್ ಸಂತ್ರಸ್ತೆಗೆ ಕಳುಹಿಸಿದ ಇಮೇಲ್‌ನಲ್ಲಿ,ನನ್ನ ನಿರ್ಧಾರದ ವೈಫಲ್ಯ ಮತ್ತು ನಾಚಿಕೆಗೇಡಿನ ವರ್ತನೆಗಾಗಿ ನಾನು ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ. ಕಚೇರಿಯ ನಂಬಿಕೆ ಮತ್ತು ಗೌರವದ ಸಂಬಂಧವನ್ನು ನಾನು ಉಲ್ಲಂಘಿಸಿದ್ದೇನೆ ಎಂದು ಬರೆದುಕೊಂಡಿದ್ದರು.

ಮತ್ತಷ್ಟು ಓದಿ: Tarun Tejpal: ತರುಣ್ ತೇಜ್‌ಪಾಲ್‌ಗೆ ಭಾರಿ ಆಘಾತ: 2013ರ ಅತ್ಯಾಚಾರ ಪ್ರಕರಣದಲ್ಲಿ ತೇಜ್‌ಪಾಲ್ ದೋಷಿ, ಹೈಕೋರ್ಟ್ ತೀರ್ಪು

ಸಾಲಿಸಿಟರಲ್ ಜನರಲ್ ತುಷಾರ್ ಮೆಹ್ತಾ ಅವರು ಈ ಇಮೇಲ್ ಅನ್ನು ನ್ಯಾಯಾಲಯದ ಮುಂದೆ ಪ್ರಬಲ ಸಾಕ್ಷಿಯಾಗಿ ಮಂಡಿಸಿ, ಆರೋಪಿಯು ತನ್ನ ಕೃತ್ಯವನ್ನು ಇ-ಮೇಲ್ ಮೂಲಕ ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ ಎಂದು ವಾದಿಸಿದರು. 10 ವರ್ಷಗಳ ಜೈಲು ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಪ್ರತಿಕ್ರಿಯಿಸಿದ62 ವರ್ಷದ ತೇಜ್‌ಪಾಲ್, ಕಳೆದ 13 ವರ್ಷಗಳಿಂದ ನನ್ನನ್ನು  ಗುರಿ ಮಾಡಲಾಗುತ್ತಿದೆ. ತೆಹಲ್ಕಾ ಮಾಡಿದ ಪತ್ರಿಕೋದ್ಯಮದ ತನಿಖೆಗಳಿಂದಾಗಿ ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ವಿಚಾರಣಾ ನ್ಯಾಯಾಲಯದ ಖುಲಾಸೆಯನ್ನು ರದ್ದುಗೊಳಿಸಿರುವ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ, ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ತೇಜ್‌ಪಾಲ್ ವಕೀಲರು ತಿಳಿಸಿದ್ದಾರೆ. ಉದ್ಯೋಗಸ್ಥ ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಯುವ ಕಾನೂನಿನ (POSH Act) ಇತಿಹಾಸದಲ್ಲಿ ಈ ಪ್ರಕರಣ ಅತ್ಯಂತ ಪ್ರಮುಖ ಮೈಲಿಗಲ್ಲಾಗಿದೆ. ಸಂಸ್ಥೆಯ ವರಿಷ್ಠರು ಅಥವಾ ‘ಬಾಸ್’ ಸ್ಥಾನದಲ್ಲಿರುವವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕಿರಿಯ ನೌಕರರ ಮೇಲೆ ಶೋಷಣೆ ನಡೆಸುವುದಕ್ಕೆ ಈ ತೀರ್ಪು ಬಲವಾದ ಎಚ್ಚರಿಕೆಯಾಗಿದೆ.

ಸಂತ್ರಸ್ತೆಯ ಸುದೀರ್ಘ ಹೋರಾಟ: ಕಳೆದ 13 ವರ್ಷಗಳಿಂದ ಅತ್ಯಂತ ಪ್ರಭಾವಿ ಮಾಧ್ಯಮ ವ್ಯಕ್ತಿಯೊಬ್ಬರ ವಿರುದ್ಧ ಸತತ ಕಾನೂನು ಹೋರಾಟ ನಡೆಸಿದ ಸಂತ್ರಸ್ತೆಗೆ ಕೊನೆಗೂ ನ್ಯಾಯ ಸಿಕ್ಕಂತಾಗಿದೆ ಎಂದು ಮಹಿಳಾ ಹಕ್ಕುಗಳ ಹೋರಾಟಗಾರರು ಶ್ಲಾಘಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಿನಲ್ಲಿ ಐದು ದಿನಗಳಲ್ಲಿ 4000 ಟನ್ ಕಟ್ಟಡ ನಿರ್ಮಾಣ ತ್ಯಾಜ್ಯ ತೆರವು: ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನಕ್ಕೆ ವೇಗ – Kannada News | Bengaluru Clears 4,000 Tonnes of Construction Waste in Five Days Under Freedom From Waste Campaign

ಸಾಂದರ್ಭಿಕ ಚಿತ್ರImage Credit source: Indian Institute for Human Settlements

ಬೆಂಗಳೂರು, ಆಗಸ್ಟ್ 7: ಬೆಂಗಳೂರು ಉತ್ತರ ನಗರ ಪಾಲಿಕೆ (BNCC) ಮತ್ತು ಬೆಂಗಳೂರು ದಕ್ಷಿಣ ನಗರ ಪಾಲಿಕೆ (BSCC) ಜಂಟಿಯಾಗಿ ನಡೆಸುತ್ತಿರುವ ‘ತ್ಯಾಜ್ಯದಿಂದ ಸ್ವಾತಂತ್ರ್ಯ (Freedom From Waste)’ ಅಭಿಯಾನದಡಿ ಕಳೆದ ಐದು ದಿನಗಳಲ್ಲಿ ಸುಮಾರು 4,000 ಟನ್ ಕಟ್ಟಡ ನಿರ್ಮಾಣ ಮತ್ತು ತೆರವು (Construction & Demolition – C&D) ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ಈ ಪೈಕಿ ಬೆಂಗಳೂರು ಉತ್ತರ ನಗರ ಪಾಲಿಕೆ 2,500 ಟನ್ ಹಾಗೂ ಬೆಂಗಳೂರು ದಕ್ಷಿಣ ನಗರ ಪಾಲಿಕೆ 1,500 ಟನ್ ತ್ಯಾಜ್ಯವನ್ನು ತೆರವುಗೊಳಿಸಿವೆ. ನಗರದ ವಿವಿಧ ಭಾಗಗಳಿಂದ ಸಂಗ್ರಹಿಸಿದ ನಿರ್ಮಾಣ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು 18 ಟಿಪ್ಪರ್‌ಗಳು ಹಾಗೂ 4 ಲೋಡರ್‌ಗಳನ್ನು ಬಳಸಲಾಗುತ್ತಿದೆ. ಸಂಗ್ರಹಿಸಲಾದ ತ್ಯಾಜ್ಯವನ್ನು ಮಾರೆನಹಳ್ಳಿ ವಿಲೇವಾರಿ ಕೇಂದ್ರಕ್ಕೆ ಸಾಗಿಸಲಾಗುತ್ತಿದೆ.

ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಮಾರೆನಹಳ್ಳಿ ವಿಲೇವಾರಿ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ತ್ಯಾಜ್ಯ ನಿರ್ವಹಣೆ, ವಾಹನಗಳ ಸಂಚಾರ, ವಿಲೇವಾರಿ ಪ್ರಕ್ರಿಯೆ ಹಾಗೂ ಇತರೆ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಅಲ್ಲಿನ ಭದ್ರತಾ ಸಿಬ್ಬಂದಿಗೆ ಸೂಕ್ತ ವಸತಿ ಹಾಗೂ ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಶೀಘ್ರದಲ್ಲಿ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರವನ್ನು ನಿರ್ಮಾಣ ತ್ಯಾಜ್ಯ ಮುಕ್ತಗೊಳಿಸುವ ಗುರಿಯೊಂದಿಗೆ ಈ ಕಾರ್ಯಾಚರಣೆಯನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ. ಸಾರ್ವಜನಿಕರು ರಸ್ತೆ ಬದಿ, ಚರಂಡಿ, ಖಾಲಿ ನಿವೇಶನ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣ ತ್ಯಾಜ್ಯವನ್ನು ಎಸೆಯದೆ, ಪಾಲಿಕೆ ಸೂಚಿಸಿರುವ ವ್ಯವಸ್ಥೆಯ ಮೂಲಕವೇ ವಿಲೇವಾರಿ ಮಾಡುವಂತೆ ಮನವಿ ಮಾಡಿದ್ದಾರೆ.

‘ಕ್ಲಿಯರ್ ಇಟ್’ ಮೊಬೈಲ್ ಆ್ಯಪ್ ಮೂಲಕವೂ ಮಾಹಿತಿ ನೀಡಬಹುದು!

ಇದೇ ವೇಳೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆ ಮಾಹಿತಿ ಪ್ರಕಾರ, ಕ್ಲಿಯರ್ ಇಟ್ (Clear It) ಮೊಬೈಲ್ ಅಪ್ಲಿಕೇಶನ್ ಮೂಲಕ 637 ದೂರುಗಳು ದಾಖಲಾಗಿವೆ. ಈ ಪೈಕಿ 75 ಸ್ಥಳಗಳಿಂದ ಸುಮಾರು 2,174 ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಗಿದ್ದು, ತೂಕ ಪರಿಶೀಲನೆಯ ಬಳಿಕ ಒಟ್ಟು 1,476 ಟನ್ ತ್ಯಾಜ್ಯ ವಿಲೇವಾರಿಯಾಗಿರುವುದಾಗಿ ಪಾಲಿಕೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೆಂಗಿನ ಮರವನ್ನೇ ಹೊತ್ತೊಯ್ದ ಪುಂಡಾನೆಗಳು: ಸಿಸಿಟಿವಿಯಲ್ಲಿ ಸೆರೆಯಾಯ್ತು ಗಜಪಡೆಯ ದಾಂಧಲೆ! – Kannada News | Viral Video: Wild Elephants Destroy Farms, Carry Away Entire Coconut Tree in Gudalur

ಚಾಮರಾಜನಗರ, ಆಗಸ್ಟ್ 07: ಗಡಿ ಜಿಲ್ಲೆ ಚಾಮರಾಜನಗರಕ್ಕೆ ಹೊಂದಿಕೊಂಡಂತಿರುವ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗೂಡಲೂರಿನಲ್ಲಿ ಕಾಡಾನೆಗಳ ಹಿಂಡು ರೈತರ ಜಮೀನಿಗೆ ಲಗ್ಗೆ ಇಟ್ಟು ಭಾರಿ ದಾಂಧಲೆ ನಡೆಸಿವೆ. ಆಹಾರ ಅರಸಿ ಬಂದ ಪುಂಡಾನೆಗಳು ತೆಂಗಿನ ಮರಗಳನ್ನೇ ಬುಡಸಮೇತ ಕಿತ್ತು, ಗೋನೆ ಸಮೇತ ಹೊತ್ತೊಯ್ದಿರುವ ಆಘಾತಕಾರಿ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿನಿಮೀಯ ಶೈಲಿಯಲ್ಲಿ ಎಳನೀರನ್ನು ಕಾಲಿನಿಂದ ತುಳಿದು ಕುಡಿದ ಸಲಗಗಳು, ಬಳಿಕ ಮರವನ್ನೇ ಹೊತ್ತು ಸಾಗಿವೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ನಿರಂತರವಾಗಿ ದಾಳಿ ನಡೆಸುತ್ತಿರುವ ಆನೆಗಳ ಉಪಟಳದಿಂದಾಗಿ ಗಡಿ ಭಾಗದ ಬಾಳೆ ಹಾಗೂ ತೆಂಗು ಬೆಳೆಗಾರರು ಕಂಗಾಲಾಗಿದ್ದು, ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಂದುಕೊಂಡಿದ್ದೇ ಒಂದು, ಆಗಿದ್ದೇ ಇನ್ನೊಂದು; ವಿಜಯ್ ಭೇಟಿ ಬಗ್ಗೆ ಮಾತನಾಡಿದ ನಿರ್ಮಾಪಕಿ – Kannada News | Why Bigil Producer Archana Kalpathi Avoided Meeting Thalapathy Vijay For Years

ತಮಿಳು ಚಿತ್ರರಂಗದ ದಳಪತಿ ವಿಜಯ್ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದ ಸೂಪರ್ ಸ್ಟಾರ್. ಅವರ ಸರಳತೆ ಮತ್ತು ಶಿಸ್ತು ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಆದರೆ ಇಂತಹ ನಟನನ್ನು ಭೇಟಿಯಾಗಲು ಪ್ರಸಿದ್ಧ ನಿರ್ಮಾಪಕಿ ಅರ್ಚನಾ ಕಲ್ಪತಿ ವರ್ಷಗಳ ಕಾಲ ಹಿಂಜರಿದಿದ್ದರು. ಆ ಕುತೂಹಲಕಾರಿ ಸಂಗತಿಯನ್ನು ಅವರು ಈಗ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಅರ್ಚನಾ ಕಲ್ಪತಿ ಅವರು ಎಜಿಎಸ್ ಎಂಟರ್‌ಟೇನ್‌ಮೆಂಟ್ ಸಂಸ್ಥೆಯ ಸಿಇಒ ಆಗಿದ್ದಾರೆ. ಅವರ ತಂದೆ ಕಲ್ಪತಿ ಎಸ್ ಅಘೋರಂ ಅವರಿಗೆ ವಿಜಯ್ ಜೊತೆ ಉತ್ತಮ ಒಡನಾಟವಿತ್ತು. ವಿಜಯ್ ಅವರ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದರು. ಆದರೂ ಅರ್ಚನಾ ಮಾತ್ರ ವಿಜಯ್ ಅವರ ಭೇಟಿಯಿಂದ ದೂರವೇ ಉಳಿದಿದ್ದರು.

ಇದಕ್ಕೆ ಬಲವಾದ ಕಾರಣ ಒಂದಿತ್ತು. ನಮಗೆ ಇಷ್ಟವಾದ ನಾಯಕರನ್ನು ಎಂದಿಗೂ ನೇರವಾಗಿ ಭೇಟಿಯಾಗಬಾರದು ಎಂಬ ಮಾತು ಅವರ ಮನಸ್ಸಿನಲ್ಲಿತ್ತು. ನಾವು ಮನಸ್ಸಿನಲ್ಲಿ ನೆಚ್ಚಿನ ನಾಯಕರ ಬಗ್ಗೆ ದೊಡ್ಡ ಚಿತ್ರಣ ಕಟ್ಟಿಕೊಂಡಿರುತ್ತೇವೆ. ನೇರವಾಗಿ ಭೇಟಿಯಾದಾಗ ಆ ನಿರೀಕ್ಷೆ ಸುಳ್ಳಾಗಬಹುದು ಎಂಬ ಭಯ ಅರ್ಚನಾಗೆ ಇತ್ತು.

ಆದರೆ ‘ಬಿಗಿಲ್’ ಸಿನಿಮಾ ಮಾಡುವಾಗ ಅವರ ಈ ಅಭಿಪ್ರಾಯ ಸಂಪೂರ್ಣವಾಗಿ ಬದಲಾಯಿತು. ವಿಜಯ್ ಅವರ ಜೊತೆ ಕೆಲಸ ಮಾಡಿದಾಗ ಅವರ ಶಿಸ್ತು ಕಂಡು ಅರ್ಚನಾ ಆಶ್ಚರ್ಯಪಟ್ಟರು. ವಿಜಯ್ ತಮ್ಮ ನಿರೀಕ್ಷೆಗಿಂತಲೂ ಅತ್ಯಂತ ಸರಳ ವ್ಯಕ್ತಿ ಎಂಬುದು ಅವರಿಗೆ ಮನವರಿಕೆಯಾಯಿತು.

ವಿಜಯ್ ಕ್ಯಾರವಾನ್ ಅಥವಾ ದೊಡ್ಡ ಬಳಗವನ್ನು ನೆಚ್ಚಿಕೊಳ್ಳುವುದಿಲ್ಲ. ತಮ್ಮ ಕೊಡೆಯನ್ನು ತಾವೇ ಹಿಡಿದುಕೊಂಡು ಸೆಟ್‌ಗೆ ಬರುತ್ತಿದ್ದರು. ಬೆಳಿಗ್ಗೆ ಸರಿಯಾಗಿ 7.30ಕ್ಕೆ ಸೆಟ್‌ನಲ್ಲಿ ಇರುತ್ತಿದ್ದರು. ಸಂಭಾಷಣೆಯ ಹಾಳೆಯನ್ನು ಒಂದು ವಾರ ಮುಂಚಿತವಾಗಿಯೇ ಕೇಳಿ ಪಡೆಯುತ್ತಿದ್ದರು.

‘ಬಿಗಿಲ್’ ಚಿತ್ರದ ಫುಟ್‌ಬಾಲ್ ದೃಶ್ಯಗಳಲ್ಲಿ ವಿಜಯ್ ಡ್ಯೂಪ್ ಬಳಸಲಿಲ್ಲ. ಕಷ್ಟಪಟ್ಟು ಫುಟ್‌ಬಾಲ್ ಆಟವನ್ನು ಕಲಿತು ಸ್ವತಃ ತಾವೇ ನಟಿಸಿದರು. ಅವರ ಈ ಅದ್ಭುತ ಶ್ರಮ ಮತ್ತು ಕಟಿಬದ್ಧತೆ ಅರ್ಚನಾ ಅವರಿಗೆ ತೀವ್ರ ಗೌರವ ತಂದಿತು.

ಇದನ್ನೂ ಓದಿ: ದಳಪತಿ ವಿಜಯ್ ಹಾದಿಯಲ್ಲಿ ಧನುಷ್; ರಾಜಕೀಯ ಪ್ರವೇಶದ ಸುಳಿವು ನೀಡಿದ ನಟ 

ಈ ಸೂಪರ್ ಹಿಟ್ ಸಿನಿಮಾದ ನಂತರ ಅವರಿಬ್ಬರ ಕಾಂಬಿನೇಷನ್‌ನಲ್ಲಿ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಸಿನಿಮಾ ಮೂಡಿಬಂತು. ವಿಜಯ್ ಅವರಂತಹ ಶಿಸ್ತಿನ ನಟನ ಜೊತೆ ಕೆಲಸ ಮಾಡಿದ್ದು ಅತ್ಯಂತ ಅದ್ಭುತ ಅನುಭವ ಎಂದು ಅರ್ಚನಾ ನೆನಪಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಗಸ್ಟ್ 8ರಿಂದ ಜೀ ಕನ್ನಡದಲ್ಲಿ ‘ಹಳ್ಳಿ ಪವರ್ ರಿಲೋಡೆಡ್’; ಇಲ್ಲಿದೆ ಸ್ಪರ್ಧಿಗಳ ವಿವರ – Kannada News | Halli Power Reloaded on Zee Kannada: Akul Balaji to Host New Rural Reality Show From August 8

ತನ್ನ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಕನ್ನಡಿಗರ ಮನಗೆದ್ದಿರುವ ಜೀ ಕನ್ನಡ ವಾಹಿನಿ, ಈಗ ‘ಹಳ್ಳಿ ಪವರ್ ರಿಲೋಡೆಡ್’ ಎಂಬ ಅತ್ಯಂತ ಕುತೂಹಲಕಾರಿ ಹಾಗೂ ವಿನೂತನ ರಿಯಾಲಿಟಿ ಶೋವನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದೆ. ಕರ್ನಾಟಕದ ಗ್ರಾಮೀಣ ಸೊಗಡು, ಕಲ್ಚರ್ ಮತ್ತು ಹಳ್ಳಿಯ ಸವಾಲುಗಳನ್ನು ಅನಾವರಣಗೊಳಿಸುವ ಈ ಶೋ, ಆಗಸ್ಟ್ 8ರಿಂದ ಪ್ರಸಾರ ಕಾಣಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9:00 ಗಂಟೆಗೆ ಹಾಗೂ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30ಕ್ಕೆ ಈ ಕಾರ್ಯಕ್ರಮ ಜೀ ಕನ್ನಡದಲ್ಲಿ ಮೂಡಿಬರಲಿದೆ.

ಐಷಾರಾಮಿ ಬದುಕಿಗೆ ಗುಡ್‌ಬೈ

ನಗರದಲ್ಲಿ ಐಷಾರಾಮಿಯಾಗಿ ಬೆಳೆದಿರುವ ಸ್ಪರ್ಧಿಗಳು ಈ ಶೋನಲ್ಲಿ ಹಳ್ಳಿಯ ಕಠಿಣ ಹಾಗೂ ಸರಳ ಜೀವನಕ್ಕೆ ಹೊಂದಿಕೊಳ್ಳಬೇಕಿದೆ. ಟೆಲಿವಿಷನ್, ಮೊಬೈಲ್, ಇಂಟರ್ನೆಟ್‌ನಂತಹ ಯಾವುದೇ ಆಧುನಿಕ ಸೌಕರ್ಯಗಳಿಲ್ಲದೆ, ಕುಟುಂಬದಿಂದ ದೂರವಿದ್ದು ದಿನ ದೂಡುವುದು ಇಲ್ಲಿನ ದೊಡ್ಡ ಸವಾಲು. ಕೃಷಿ ಕಾಯಕ, ಜಾನುವಾರುಗಳ ಆರೈಕೆ, ಸ್ವತಃ ಅಡುಗೆ ಮಾಡಿಕೊಳ್ಳುವುದು ಹಾಗೂ ಮನೆಯ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಮೂಲಕ ಸ್ಪರ್ಧಿಗಳು ತಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿದೆ.

ಖ್ಯಾತ ನಿರೂಪಕ ಅಕುಲ್ ಬಾಲಾಜಿ ಸಾರಥ್ಯ

ಕರ್ನಾಟಕದ ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ ಈ ಶೋಗೆ ನಿರೂಪಣೆಯ ಮೆರುಗು ನೀಡಲಿದ್ದಾರೆ. ಸಿಟಿ ಲೈಫ್‌ಗೆ ಒಗ್ಗಿಕೊಂಡಿರುವ ಸ್ನೇಹ ಹೆಚ್, ಬಿಬಿ ಹಾಜಿರಾ, ಏಂಜೆಲೀನ್, ರಿಗ್ಮ್ಯಾ ರಾಜಶ್ರೀ, ದರ್ಶಿನಿ ಗೌಡ, ಪೂಜಾ ಚಂದ್ರಶೇಖರ್, ಅನಿಷಾ ಲಕ್ಷ್ಮಣ್, ಸುಷ್ಮಾ ತೊಗರೆ, ತೇಜಸ್ವಿನಿ, ಅಂಕಿತ ದೇವ್, ಪೂರ್ವಿಕ ಆರ್ ಕೆ, ಚಿತ್ರಶ್ರೀ, ಪೂರ್ವ ವೈ, ರಚನಾ, ನಿಖಿತಾ ಸ್ವಾಮಿ ಹಾಗೂ ನಿವೇದಿತಾ ರೈ ಈ ಶೋನಲ್ಲಿ ಸ್ಪರ್ಧಿಗಳಾಗಿ ಕಣಕ್ಕಿಳಿಯುತ್ತಿದ್ದಾರೆ.

ಇದನ್ನೂ ಓದಿ: ಹಳ್ಳಿ ಪವರ್ ಅಂಗಳಕ್ಕೆ ಘಾಟಿ ಗಾನವಿ ಸಹೋದರಿ ದರ್ಶಿನಿ ಎಂಟ್ರಿ: ಮೊದಲ ದಿನವೇ ಜಗಳ

ಹಳ್ಳಿಯ ಈ ಹೊಸ ಪಯಣದಲ್ಲಿ ಎದುರಾಗುವ ಸವಾಲುಗಳು, ಸ್ಪರ್ಧಿಗಳ ನಡುವಿನ ಸ್ನೇಹ, ಜಗಳ, ಗೆಲುವು-ಸೋಲು ಮತ್ತು ಅವರಲ್ಲಿ ಆಗುವ ಅದ್ಭುತ ಬದಲಾವಣೆಗಳು ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version