‘ಕೈ ಕಟ್ಟಿ’ ಸಂಭ್ರಮದ ಹಿಂದಿನ ಕಾರಣ ಬಿಚ್ಚಿಟ್ಟ ಅಭಿಷೇಕ್ ಶರ್ಮಾ – Kannada News | Abhishek Sharma Decodes His New Celebration Style

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 31ನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ (Abhishek Sharma) ಅಕ್ಷರಶಃ ಅಬ್ಬರಿಸಿದ್ದರು. ಹೈದರಾಬಾದ್​ನ ರಾಜೀವ್​ ಗಾಂಧಿ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಎಸ್​ಆರ್​ಹೆಚ್ ಪರ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಕೇವಲ 47 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಈ ಶತಕದ ಬಳಿಕ ‘ಕೈ ಕಟ್ಟಿ’ ಪೋಸ್ ನೀಡುವ ಮೂಲಕ ಸಂಭ್ರಮಿಸಿದ್ದರು.

ಸಾಮಾನ್ಯವಾಗಿ ಅಭಿಷೇಕ್ ಶರ್ಮಾ ಅರ್ಧಶತಕ ಅಥವಾ ಶತಕ ಸಿಡಿಸಿದ ಬಳಿಕ ತಮ್ಮ ಹೆಬ್ಬೆರಳು ಮತ್ತು ತೋರುಬೆರಳಿನ ಮೂಲಕ ‘L’ ಆಕಾರವನ್ನು ತೋರಿಸುವುದು ವಾಡಿಕೆ. ಇದು ಅಭಿಮಾನಿಗಳ ಮೇಲಿನ ‘ಪ್ರೀತಿ’ (Love) ಮತ್ತು ಬೆಂಬಲವನ್ನು ಸೂಚಿಸುತ್ತದೆ ಎಂದು ಅವರು ಈ ಹಿಂದೆ ಸ್ಪಷ್ಟಪಡಿಸಿದ್ದರು.

ಆದರೆ ಈ ಬಾರಿ ಅವರು ‘L’  ಸಂಭ್ರಮದ ಬದಲಿಗೆ ಕೈ ಕಟ್ಟಿ ಪೋಸ್ ನೀಡಿದ್ದರು.  ಇದರ ಬೆನ್ನಲ್ಲೇ ಹೊಸ ಮಾದರಿಯ ಸಂಭ್ರಮಕ್ಕೇನು ಕಾರಣ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತು. ಈ ಪ್ರಶ್ನೆಗೆ ಖುದ್ದು ಅಭಿಷೇಕ್ ಶರ್ಮಾ ಉತ್ತರಿಸಿದ್ದಾರೆ.

ಕೈ ಕಟ್ಟಿದ ಸಂಭ್ರಮಕ್ಕೆ ಕಾರಣವೇನು?

ಪಂದ್ಯದ ಬಳಿಕ ಈ ಬಗ್ಗೆ ಮಾತನಾಡಿದ ಅಭಿಷೇಕ್ ಶರ್ಮಾ, “ಇದು ನಮ್ಮ ಬ್ಯಾಟಿಂಗ್ ಕೋಚ್ ಜೇಮ್ಸ್ ಫ್ರಾಂಕ್ಲಿನ್ ಮತ್ತು ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಅವರಿಗೆ ಅರ್ಪಿಸಿದ ಗೌರವ. ನಾನು ಪಂದ್ಯದ ಕೊನೆಯವರೆಗೂ (20ನೇ ಓವರ್‌ವರೆಗೆ) ಕ್ರೀಸ್‌ನಲ್ಲಿ ನಿಂತು ಬ್ಯಾಟಿಂಗ್ ಮಾಡಬೇಕೆಂದು ಅವರು ನನಗೆ ಸವಾಲು ಹಾಕಿದ್ದರು. ಆ ಗುರಿಯನ್ನು ತಲುಪಿದ ಖುಷಿಗಾಗಿ ಈ ರೀತಿ ಸಂಭ್ರಮಿಸಿದೆ,” ಎಂದು ತಿಳಿಸಿದ್ದಾರೆ.

ಅಲ್ಲದೆ ಈ ಶತಕವನ್ನು ಅನಾರೋಗ್ಯದಿಂದ ಬಳಲುತ್ತಿರುವ ಸಹೋದರಿಗೆ ಅರ್ಪಿಸುತ್ತಿರುವುದಾಗಿ ಅಭಿಷೇಕ್ ಇದೇ ವೇಳೆ ತಿಳಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ 68 ಎಸೆತಗಳನ್ನು ಎದುರಿಸಿದ ಅಭಿಷೇಕ್ ಶರ್ಮಾ 10 ಸಿಕ್ಸರ್ ಹಾಗೂ 10 ಫೋರ್​ಗಳೊಂದಿಗೆ ಅಜೇಯ 135 ರನ್ ಬಾರಿಸಿದರು. ಈ ಭರ್ಜರಿ ಶತಕದೊಂದಿಗೆ ಎಸ್​ಆರ್​ಹೆಚ್ ತಂಡವು 20 ಓವರ್​ಗಳಲ್ಲಿ 242 ರನ್​ ಕಲೆಹಾಕಿತು.

ಇದನ್ನೂ ಓದಿ: ದಾಖಲೆ… ವಿಶ್ವ ದಾಖಲೆ… ಅಭಿಷೇಕ್ ಶರ್ಮಾ ಹೆಸರಿಗೆ ಭರ್ಜರಿ ದಾಖಲೆ

ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 195 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಸನ್​ರೈಸರ್ಸ್ ಹೈದರಾಬಾದ್ ತಂಡವು 47 ರನ್​ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಎಸ್​ಆರ್​ಹೆಚ್ ತಂಡವು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.

Published On – 2:56 pm, Wed, 22 April 26

Source link

ಸಿದ್ದರಾಮಯ್ಯ ಸೈಲೆಂಟ್​​ ಆಗಲು ಮಾಟ ಮಂತ್ರ ಕಾರಣವಾ?: ಕಾಂಗ್ರೆಸ್​​ನಲ್ಲಿಯೇ ಹೀಗೊಂದು ಹೊಸ ಚರ್ಚೆ – Kannada News | Is Black Magic Behind Siddaramaiah’s Silence? Fresh Buzz Within Congress

ಸಿದ್ದರಾಮಯ್ಯ ಸೈಲೆಂಟ್​​ ಆಗಲು ಮಾಟ ಮಂತ್ರ ಕಾರಣವಾ?Image Credit source: Tv9 Kannada

ಬೆಂಗಳೂರು, ಏಪ್ರಿಲ್​​ 22: ಇತ್ತೀಚೆಗೆ ರಾಜ್ಯ ಕಾಂಗ್ರೆಸ್​​ನಲ್ಲಿ ಭಾರಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ತಮ್ಮ ಆಪ್ತರೇ ಪಕ್ಷದಲ್ಲಿ ಟಾರ್ಗೆಟ್​​ ಆಗುತ್ತಿದ್ದರೂ ಸಿಎಂ ಸಿದ್ದರಾಮಯ್ಯ ಮಾತ್ರ ಸೈಲೆಂಟ್​​ ಆಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ನಡುವೆ ಇದಕ್ಕೆ ಮಾಜಿ ಸಚಿವ, ಹಾಲಿ ಕಾಂಗ್ರೆಸ್​​ ಶಾಸಕ ಕೆ.ಎನ್​​. ರಾಜಣ್ಣ ಹೊಸ ವ್ಯಾಖ್ಯಾನ ನೀಡಿದ್ದಾರೆ. ಸಿದ್ದರಾಮಯ್ಯ ಇಷ್ಟೊಂದು‌ ಅಸಹಾಯಕ ರೀತಿ ಇದ್ದಾರೆ ಅಂದರೆ ಯಾರೋ ಮಾಟ ಮಂತ್ರ ಮಾಡಿಸಿರಬಹುದಾ ಎಂದು ಯೋಚಿಸ್ತಿದ್ದೇನೆ ಎಂದು ಅವರು ಹೇಳಿರೋದು ‘ಕೈ’ ಮನೆಯಲ್ಲಿಯೇ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

ರಾಜಣ್ಣ ಹೇಳಿದ್ದು ಏನು?

ನಾನು, ಸಿಎಂ ಸಿದ್ದರಾಮಯ್ಯ ಇಬ್ಬರೂ ಮಾಟ ಮಂತ್ರ ನಂಬಲ್ಲ. ಆದರೆ ಗಟ್ಟಿಯಾಗಿ ನಿಲ್ಲಿ‌ ಅಂತಾ ಹೇಳಿಸಿಕೊಳ್ಳುವಷ್ಟು ಸಿಎಂ ಅಸಹಾಯಕರಲ್ಲ. ಹೀಗಾಗಿ ಮಾಟ ಮಂತ್ರ ಮಾಡಿಸಿರಬಹುದಾ ಅಂತ ಯೋಚಿಸ್ತಿದ್ದೇನೆ. ಮಾಟ ಮಂತ್ರದ ಬಗ್ಗೆ ಜನರು ಮಾತಾಡುತ್ತಿದ್ದಾರೆ. ನಮ್ಮ ಹಳೇ ಮನೆ ಮುಂದೆಯೂ ನಿಂಬೆಹಣ್ಣು, ದಾರ ಹಾಕಿ ಹೋಗಿದ್ರು. ಕೇರಳದಲ್ಲಿ ಮಾಟ ಮಂತ್ರ ಮಾಡಿಸುತ್ತಾರೆ ಎಂದು ರಾಜಣ್ಣ  ಹೇಳಿದ್ದರು.

ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಸದ್ದು ಮಾಡಿದ ಮಾಟ, ಮಂತ್ರ; ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆ

‘ಈಗ ಯಾವ ಮಾಟ ಮಂತ್ರ ನಡೆಯಲ್ಲ’


ಇನ್ನು ರಾಜಣ್ಣ ಅವರ ಈ ಹೇಳಿಕೆಗೆ ಶಾಸಕ ಹೆಚ್​.ಸಿ.ಬಾಲಕೃಷ್ಣ ಟಾಂಗ್​ ನೀಡಿದ್ದು, ಸಿಎಂ ಮೇಲೆ ಮಾಟ ಮಂತ್ರ ಮಾಡೋ ಶಕ್ತಿ ಇರೋದು ರಾಜಣ್ಣಗೆ ಮಾತ್ರ. ಇನ್ಯಾರಿಗೂ ಆ ಶಕ್ತಿ ಇಲ್ಲ ಎಂದಿದ್ದಾರೆ. ಮುಖ್ಯಮಂತ್ರಿಗೆ ಯಾರು ಆಪ್ತರು ಇರ್ತಾರೆ ಅವರೇ ಮಾಡಬೇಕು. ಬೇರೆಯವರು ಮಾಟ ಮಂತ್ರ ಮಾಡಿದ್ರೆ ಮುಖ್ಯಮಂತ್ರಿಗಳು ಬಿಡ್ತಾರಾ? ಎಂದು ಪ್ರಶ್ನಿಸಿದ್ದಾರೆ. ಬಳಿಕ ರಾಜಣ್ಣ ಮಾತುಗಳನ್ನ ಅಷ್ಟೊಂದು ಸೀರಿಯಸ್ ಆಗಿ ಪರಿಗಣಿಸಿದ್ದೀರಾ? ಹಾಗಾದ್ರೆ ನಾನು ಅದಕ್ಕೆ ಉತ್ತರ ಕೊಡಲು ಸಾಧ್ಯವಿಲ್ಲ. ಮಂತ್ರದ ಬಗ್ಗೆ ಕ್ಯಾಶುವಲ್ ಆಗಿ ಹೇಳಿದ್ದಾರೆ ಅಂತಾ ಕಾಣಿಸುತ್ತೆ. ಮಾಟದಮೂಲಕ ಅಧಿಕಾರ ಕಸಿದುಕೊಳ್ಳುವುದು, ಅಧಿಕಾರ ಕೊಡಿಸುವ ಕಾಲ ಹೋಯ್ತು. ಈಗ ಯಾವ ಮಾಟ ಮಂತ್ರ ನಡೆಯಲ್ಲ ಎಂದಿದ್ದಾರೆ. ಮತ್ತೊಂದೆಡೆ ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಜಣ್ಣಗೆ ಮಾಹಿತಿ ಇರಬಹುದು, ಇಲ್ಲ ಯಾರಾದರೂ ಹೇಳಿರಬಹುದು. ಅದಕ್ಕೆ ಅವರು ಹಾಗೆ ಹೇಳಿರಬೇಕು ಎಂದಿದ್ದಾರೆ. ಒಟ್ಟಾರೆಯಾಗಿ ಸಿದ್ದರಾಮಯ್ಯ ಅವರು ಸೈಲೆಂಟ್​ ಆಗಿರುವ ವಿಚಾರ ಈಗ ನಾನಾರೀತಿ ಚರ್ಚೆಗಳಿಗೆ ಕಾರಣವಾಗಿರೋದಂತೂ ಸುಳ್ಳಲ್ಲ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:50 pm, Wed, 22 April 26

Source link

Heat Waves: ಬಿಸಿಲಿಗೆ ಬಳಲಿ ಬೆಂಡಾದ ಉತ್ತರ ಕರ್ನಾಟಕ ಜನ, ಜಿಲ್ಲೆಗಳಲ್ಲಿ ಹನಿ ನೀರಿಗೂ ಶುರುವಾಯ್ತು ಪರದಾಟ – Kannada News | Karnataka Heatwave 2026: Green Nets in Yadgir Signals, Drinking Water Crisis Deepens Across Belagavi, Dharwad and Udupi

ಯಾದಗಿರಿಯ ಸುಭಾಷ್ ವೃತ್ತದಲ್ಲಿ ಬಿಸಿಲಿನಿಂದ ರಕ್ಷಣೆಗಾಗಿ ‘ಗ್ರೀನ್ ನೆಟ್’ ಅಳವಡಿಸಿರುವುದುImage Credit source: tv9

ಬೆಂಗಳೂರು, ಏಪ್ರಿಲ್ 22: ಕರ್ನಾಟಕದಲ್ಲಿ (Karnataka) ಬಿಸಿಲ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಂತೂ ಬಳಲಿ ಬೆಂಡಾಗಿವೆ. ಬೆಂಗಳೂರಿನಿಂದ ಬೆಳಗಾವಿವರೆಗೆ, ಬೀದರ್‌ನಿಂದ ಚಾಮರಾಜನಗರದವರೆಗೆ ಉಷ್ಣ ಅಲೆಗೆ (Karnataka Heatwave) ಜನ ಬೇಸತ್ತಿದ್ದಾರೆ. ರಣಬಿಸಿಲಿನಿಂದ ರಕ್ಷಣೆ ಪಡೆಯಲು ಜಿಲ್ಲಾಡಳಿತಗಳು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದರೆ, ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಜನ ಕಿಲೋಮೀಟರ್‌ಗಟ್ಟಲೆ ಅಲೆಯುವಂತಾಗಿದೆ.

ಬಿಸಿಲ ತಾಪದಿಂದ ಬಚಾವಾಗಲು ‘ಗ್ರೀನ್ ನೆಟ್’ ಮೊರೆ

ಯಾದಗಿರಿಯಲ್ಲಿ ಬಿಸಿಲಿನ ತಾಪ ಎಷ್ಟಿದೆಯೆಂದರೆ, ಸಿಗ್ನಲ್‌ಗಳಲ್ಲಿ ನಿಲ್ಲುವ ವಾಹನ ಸವಾರರಿಗೆ ನೆರಳು ನೀಡಲು ಸುಭಾಷ್ ವೃತ್ತದಲ್ಲಿ ‘ಗ್ರೀನ್ ನೆಟ್’ ಅಳವಡಿಸಲಾಗಿದೆ. ಇದು ದ್ವಿಚಕ್ರ ವಾಹನ ಸವಾರರಿಗೆ ಕೊಂಚ ನಿರಾಳತೆ ತಂದಿದೆ. ಇತ್ತ ಕಲಬುರಗಿಯಲ್ಲಿ ಜನ ಶಾಖದಿಂದ ಬಚಾವಾಗಲು ಸ್ವಿಮ್ಮಿಂಗ್ ಪೂಲ್‌ಗಳ ಮೊರೆ ಹೋಗುತ್ತಿದ್ದಾರೆ.

ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ

ರಾಯಚೂರಿನಲ್ಲಿ ಉಷ್ಣ ಅಲೆಯ ಪರಿಣಾಮ ನವಜಾತ ಶಿಶುಗಳ ಮೇಲೆ ಬೀರುತ್ತಿದ್ದು, ಮಕ್ಕಳಿಗೆ ಡಿಹೈಡ್ರೇಶನ್, ವಾಂತಿ-ಬೇಧಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಮಕ್ಕಳನ್ನು ಹೊರಗೆ ಕರೆತರದಂತೆ ವೈದ್ಯರು ಎಚ್ಚರಿಸಿದ್ದಾರೆ. ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಬಿಸಿಲಿನಿಂದ ಹೀಟ್ ಸ್ಟ್ರೋಕ್​ಗೆ ತುತ್ತಾದವರಿಗಾಗಿ ಪ್ರತ್ಯೇಕ 10 ಹಾಸಿಗೆಗಳ ವಾರ್ಡ್ ತೆರೆಯಲಾಗಿದೆ. ಬಿಸಿಲಿಗೆ ಹುತ್ತದೊಳಗೆ ಇರಲಾಗದೆ ಹಾವುಗಳು ಹೊರಬರುತ್ತಿರುವುದು ಚಾಮರಾಜನಗರ ಮತ್ತು ಚಿಕ್ಕಬಳ್ಳಾಪುರ ಭಾಗದಲ್ಲಿ ಆತಂಕ ಮೂಡಿಸಿದೆ.

ನೀರಡಿಕೆಯಿಂದ ತತ್ತರಿಸಿದ ಕರುನಾಡು

ಒಂದೆಡೆ ಬಿಸಿಲು ಸುಡುತ್ತಿದ್ದರೆ, ಮತ್ತೊಂದೆಡೆ ನೀರಿನ ಹಾಹಾಕಾರ ಮಿತಿಮೀರಿದೆ.

  • ಬೆಳಗಾವಿ: ಚಿಕ್ಕೋಡಿ ತಾಲೂಕಿನ ನರಲಗುಡ್ಡದಲ್ಲಿ ಮಹಿಳೆಯರು 2 ಕಿ.ಮೀ ದೂರ ಹೋಗಿ ನೀರು ತರುವಂತಾಗಿದೆ.
  • ಧಾರವಾಡ: ಕುಂದಗೋಳದ ಬೆನಕನಹಳ್ಳಿಯಲ್ಲಿ 300 ಮನೆಗಳಿಗೆ ಒಂದೇ ನಲ್ಲಿ ಇದ್ದು, ಒಂದು ಕೊಡ ನೀರಿಗಾಗಿ ಜನ 3 ಗಂಟೆ ಕಾಯುತ್ತಿದ್ದಾರೆ.
  • ಉಡುಪಿ: ಬೈಂದೂರಿನ ಅತ್ತಿಕೋಣೆಯಲ್ಲಿ ಸೌಪರ್ಣಿಕಾ ನದಿಯನ್ನು ದೋಣಿ ಮೂಲಕ ದಾಟಿ ನೀರು ತರುವ ಹೀನಾಯ ಸ್ಥಿತಿ ಎದುರಾಗಿದೆ.
  • ಜಲಾಶಯಗಳ ಸ್ಥಿತಿ: ತುಂಗಭದ್ರಾ ಜಲಾಶಯದಲ್ಲಿ ಕೇವಲ 12 ಟಿಎಂಸಿ ನೀರು ಬಾಕಿ ಇದ್ದು, ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ವಿಜಯನಗರ ಜಿಲ್ಲೆಗಳಿಗೆ ಕುಡಿಯುವ ನೀರಿನ ಆತಂಕ ಶುರುವಾಗಿದೆ.

ಇದನ್ನೂ ಓದಿ: ಮುಂದಿನ 7 ದಿನ ಕರ್ನಾಟಕ ಕೂಲ್​ ಕೂಲ್: ಈ ಜಿಲ್ಲೆಗಳಿಗೆ ಬರಲಿದ್ದಾನೆ ವರುಣ; ಬಿಸಿಲ ಧಗೆಯಿಂದ ಸಿಗಲಿದೆ ಮುಕ್ತಿ!

ಕೇವಲ ಮನುಷ್ಯರಷ್ಟೇ ಅಲ್ಲದೆ, ಪ್ರಾಣಿ-ಪಕ್ಷಿಗಳು ಕೂಡ ನೀರಿಲ್ಲದೆ ಪರದಾಡುತ್ತಿವೆ. ಚಾಮರಾಜನಗರದಲ್ಲಿ ಕಾಡಾನೆಗಳು ನೀರನ್ನು ಹುಡುಕುತ್ತಾ ಪಾಲಾರ್ ಹಳ್ಳದತ್ತ ಗುಳೆ ಹೋಗುತ್ತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ: ನಟಿ ರನ್ಯಾ ರಾವ್​​ಗೆ ಜಾಮೀನು

ಬೆಂಗಳೂರು, ಏಪ್ರಿಲ್​ 22: ಗೋಲ್ಡ್ ಸ್ಮಗ್ಲಿಂಗ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾ ರಾವ್​​​ಗೆ ಜಾಮೀನು ಲಭಿಸಿದೆ. ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಇಂದು ಪರಪ್ಪನ ಅಗ್ರಹಾರದಿಂದ ರನ್ಯಾ ರಾವ್ ಬಿಡುಗಡೆಯಾಗಲಿದ್ದಾರೆ.

ಮತ್ತಷ್ಟು ಮಾಹಿತಿ ಅಪ್​ಡೇಟ್ ಆಗಲಿದೆ.

Source link

ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ – Kannada News | Rakshita Shetty Visist Bigg Boss Malu Native Nippanal

ರಕ್ಷಿತಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಬಿಗ್ ಬಾಸ್ ರನ್ನರ್ ಅಪ್ ಆದ ಬಳಿಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಿತು. ಈಗ ರಕ್ಷಿತಾ ಶೆಟ್ಟಿ ಅವರ ಹೊಸ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಮಾಳು ಊರಿಗೆ ತೆರಳಿದ್ದಾರೆ. ಅಲ್ಲಿ ಮಾಳು ಜೊತೆ ಬೈಕ್ ಅಲ್ಲಿ ಲಾಂಗ್ ಡ್ರೈವ್ ಹೋಗಿದ್ದಾರೆ. ಮಾಳು ಅವರ ಊರನ್ನು ನೋಡಿ ರಕ್ಷಿತಾ ಶೆಟ್ಟಿಗೆ ಖುಷಿ ಆಗಿದೆ. ಇತ್ತೀಚೆಗೆ ರಕ್ಷಿತಾ ಅವರ ಊರಿಗೆ ರಘು ಅವರು ಆಗಮಿಸಿದ್ದರು. ಅವರ ಯೂಟ್ಯೂಬ್ ವಿಡಿಯೋ ಗಮನ ಸೆಳೆದಿತ್ತು. ಈಗ ರಕ್ಷಿತಾ ಶೆಟ್ಟಿ ಹಾಗೂ ಮಾಳು ಕಾಂಬಿನೇಷನ್​ ಅಲ್ಲಿ ಯೂಟ್ಯೂಬ್ ವಿಡಿಯೋ ಬರಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ದಾಖಲೆ… ವಿಶ್ವ ದಾಖಲೆ… ಅಭಿಷೇಕ್ ಶರ್ಮಾ ಹೆಸರಿಗೆ ಭರ್ಜರಿ ದಾಖಲೆ – Kannada News | Abhishek Sharma Creates Massive Record in IPL

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅಭಿಷೇಕ್ ಶರ್ಮಾ (Abhishek Sharma) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಭರ್ಜರಿ ಶತಕ ಸಿಡಿಸುವ ಮೂಲಕ. ಈ ಸೆಂಚುರಿಯೊಂದಿಗೆ ಐಪಿಎಲ್​ನಲ್ಲಿ ಯಾರಿಂದಲೂ ಸಾಧ್ಯವಾಗದ ವಿಶೇಷ ದಾಖಲೆಯೊಂದು ಅಭಿಷೇಕ್ ಪಾಲಾಗಿದೆ.

Source link

ಮಂಗಳೂರು: ಅತ್ತಾವರದಲ್ಲಿ ಕುಸಿದು ಬಿದ್ದ ಕಾಂಪೌಂಡ್ ಗೋಡೆ, ಪಕ್ಕದಲ್ಲೇ ನಿಲ್ಲಿಸಿದ್ದ ಕಾರುಗಳು ನಜ್ಜುಗುಜ್ಜು! – Kannada News | Mangaluru Rain: Compound Wall Collapses in Attavar; Multiple Cars Smashed Under Debris

ಮಂಗಳೂರು, ಏಪ್ರಿಲ್ 22: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆ ಕೆಲವೆಡೆ ಅವಾಂತರ ಸೃಷ್ಟಿಸಿದೆ. ಮಂಗಳೂರಿನ ಅತ್ತಾವರದಲ್ಲಿ ವರ್ಷದ ಹಿಂದೆಯಷ್ಟೇ ನಿರ್ಮಿಸಲಾಗಿದ್ದ ಕಾಂಪೌಂಡ್ ಗೋಡೆಯೊಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಗೋಡೆಯ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕಾರುಗಳು ಗೋಡೆಯ ಅವಶೇಷಗಳಡಿ ಸಿಲುಕಿ ಸಂಪೂರ್ಣ ಜಖಂಗೊಂಡಿವೆ. ಸ್ಥಳೀಯವಾಗಿ ಧಾರ್ಮಿಕ ಕಾರ್ಯಕ್ರಮವೊಂದು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ವಾಹನಗಳು ಬಂದಿದ್ದವು. ಪಾರ್ಕಿಂಗ್‌ಗೆ ಜಾಗವಿಲ್ಲದ ಕಾರಣ ಕಾರು ಮಾಲೀಕರು ಅನಿವಾರ್ಯವಾಗಿ ಗೋಡೆಯ ಪಕ್ಕದಲ್ಲಿ ವಾಹನಗಳನ್ನು ನಿಲ್ಲಿಸಿದ್ದರು. ಆದರೆ, ಮಳೆಯ ತೀವ್ರತೆಗೆ ಗೋಡೆ ಕುಸಿತಗೊಂಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಕಾರುಗಳು ಹಾನಿಗೊಳಗಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ! – Kannada News | Chikkodis Naralagudda Villagers Walk 2km Daily Amidst Severe Water Crisis

ಬೆಳಗಾವಿ, ಏಪ್ರಿಲ್ 22: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನರಲಗುಡ್ಡ ಗ್ರಾಮದಲ್ಲಿ ತೀವ್ರ ನೀರಿನ ಅಭಾವ ಸೃಷ್ಟಿಯಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜೀವಜಲಕ್ಕಾಗಿ ಹಾಹಾಕಾರ ಸೃಷ್ಟಿಯಾಗಿದ್ದು, ನರಲಗುಡ್ಡ ಗ್ರಾಮವೂ ಇದಕ್ಕ ಹೊರತಾಗಿಲ್ಲ. ಇಲ್ಲಿನ ನಿವಾಸಿಗಳು ಪ್ರತಿದಿನ ಎರಡು ಕಿಲೋಮೀಟರ್ ದೂರ ನಡೆದುಕೊಂಡು ಹೋಗಿ ನೀರನ್ನು ತರುವ ಸಂಕಷ್ಟ ಎದುರಿಸುತ್ತಿದ್ದಾರೆ.

ಗ್ರಾಮದಲ್ಲಿನ ಬೋರ್‌ವೆಲ್ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿರುವುದೇ ಈ ಸಮಸ್ಯೆಗೆ ಪ್ರಮುಖ ಕಾರಣವೆಂದು ಸ್ಥಳೀಯರು ಹೇಳುತ್ತಾರೆ. ಬಿಸಿಲಿನಲ್ಲಿ ದಿನಕ್ಕೆ ಹಲವಾರು ಬಾರಿ ನಡೆದುಕೊಂಡು ಹೋಗಿ ನೀರು ತರುವುದು ಮಕ್ಕಳು ಮತ್ತು ವೃದ್ಧರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಧಿಕಾರಿಗಳಿಗೆ ಈ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ನೀರಿನ ಕೊರತೆಯಿಂದಾಗಿ ಮನೆಗೆ ಅಡುಗೆ ಮಾಡುವುದು ಸೇರಿದಂತೆ ದೈನಂದಿನ ಚಟುವಟಿಕೆಗಳೂ ಸವಾಲಾಗಿ ಪರಿಣಮಿಸಿವೆ. ಕುಡಿಯುವ ನೀರಿಗಾಗಿ ಗ್ರಾಮಸ್ಥರು ಕಷ್ಟಪಡುತ್ತಿದ್ದು, ಅಧಿಕಾರಿಗಳು ತಕ್ಷಣ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು: ಬೆಂಕಿ ಇಟ್ಟಿದ್ದು ದುಷ್ಕರ್ಮಿಗಳು! – Kannada News | Miscreants Set Plywood Warehouse Ablaze in Nelamangala

ನೆಲಮಂಗಲ, ಏಪ್ರಿಲ್​​ 22: ಫ್ಲೈವುಡ್ ಗೋದಾಮೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ. ಈ ಅವಘಡದಿಂದ ಗೋದಾಮಿನಲ್ಲಿದ್ದ ಫ್ಲೈವುಡ್ ಮತ್ತು ಇತರ ಸಾಮಗ್ರಿ ಬೆಂಕಿಗೆ ಆಹುತಿಯಾಗಿ ಭಾರಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ, ಸ್ಥಳಕ್ಕೆ ಬಂದ ಜನರು ಮತ್ತು ವೀಕ್ಷಕರಿಗೆ ಸುರಕ್ಷತೆ ದೃಷ್ಟಿಯಿಂದ ದೂರ ಉಳಿಯುವಂತೆ ಎಚ್ಚರಿಕೆ ನೀಡಲಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವ ಪ್ರಯತ್ನ ನಡೆಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಈ ಬೆಂಕಿ ಅವಘಡವು ದುಷ್ಕರ್ಮಿಗಳ ಕೃತ್ಯ ಎಂದು ಶಂಕಿಸಲಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ವರದಿ: ಮಂಜುನಾಥ್​​, ಟಿವಿ9 ನೆಲಮಂಗಲ

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Optical Illusion: ಹಚ್ಚ ಹಸಿರಿನ ಗಿಡ ಮರಗಳ ನಡುವೆ ಅಡಗಿರುವ ಹಾವನ್ನು 10 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರಾ? – Kannada News | Optical Illusion: Can you find the snake hidden in this picture

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: imgur.com

ಈಗಂತೂ ಬುದ್ಧಿವಂತಿಕೆ, ಕಣ್ಣಿನ ಚುರುಕುತನ ಎಷ್ಟಿದೆ ಎಂದು ಪರೀಕ್ಷಿಸಲು ಆಪ್ಟಿಕಲ್‌ ಇಲ್ಯೂಷನ್ ನಂತಹ (optical illusion) ಒಗಟಿನ ಚಿತ್ರಗಳು ಸಹಾಯ ಮಾಡುತ್ತವೆ. ಆದರೆ ಈ ಒಗಟಿನ ಚಿತ್ರಗಳನ್ನು ಬಿಡಿಸುವ ಮಜಾನೇ ಬೇರೆ. ಇದೀಗ ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ವೈರಲ್ ಆಗಿದೆ. ದಟ್ಟವಾದ ಹಸಿರು ಗಿಡ ಮರಗಳ ನಡುವೆ ಅಡಗಿರುವ ಹಾವನ್ನು ಪತ್ತೆ ಹಚ್ಚುವ ಸವಾಲು ನೀಡಲಾಗಿದೆ. ನೀವು ಈ ಸವಾಲನ್ನು ಸ್ವೀಕರಿಸಲು ರೆಡಿ ಇದ್ದೀರಾ.

ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?

ಈ ಇಲ್ಯೂಷನ್ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ದಟ್ಟವಾದ ಕಾಡು ಮತ್ತು ಹಚ್ಚ ಹಸಿರಾದ ಗಿಡ ಮರಗಳು ಗೋಚರಿಸುತ್ತವೆ. ಆದರೆ ಹಸಿರು ಹಾವು ಜಾಣತನದಿಂದ ಈ ಎಲೆಗಳ ನಡುವೆ ಅಡಗಿ ಕುಳಿತಿದೆ. ಅದರ ಬಣ್ಣವು ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ಸಂಪೂರ್ಣವಾಗಿ ಬೆರೆತು ಹೋಗಿರುವುದರಿಂದ ಹಾವನ್ನು ಗುರುತಿಸುವುದು ಕಷ್ಟಕರ. ನೀವು ಈ ಒಗಟನ್ನು ಕೇವಲ 10 ಸೆಕೆಂಡುಗಳಲ್ಲಿ ಸಾಧ್ಯವೇ ಎಂದು ಒಮ್ಮೆ ಪ್ರಯತ್ನಿಸಿ ನೋಡಿ.

ಇದನ್ನೂ ಓದಿ: ಜಸ್ಟ್ 30 ಸೆಕೆಂಡುಗಳಲ್ಲಿ ಬೆಟ್ಟದ ಮೇಲೆ ಅಡಗಿರುವ ಕುರಿಯನ್ನು ಗುರುತಿಸಬಲ್ಲಿರಾ

ಹಾವು ನಿಮ್ಮ ಕಣ್ಣಿಗೆ ಬಿದ್ದಿತೇ?

ಈ ಒಗಟಿನ ಚಿತ್ರಗಳು ನಿಮ್ಮ ಕಣ್ಣನು ಮೋಸಗೊಳಿಸುತ್ತವೆ ಎನ್ನುವ ಮಾತು ನಿಜ. ಈ ಇಲ್ಯೂಷನ್ ಚಿತ್ರ ನೋಡಿದಾಗ ನಿಮಗೆ ಅದೇ ರೀತಿ ಅನಿಸಬಹುದು. ಇದೀಗ ಈ ಹಚ್ಚ ಹಸಿರಿನ ಗಿಡ ಮರಗಳ ನಡುವೆ ಅಡಗಿರುವ ಹಸಿರು ಹಾವನ್ನು ಗುರುತಿಸಲು ಸಾಧ್ಯವಾಗದೇ ಇರಬಹುದು. ಹಸಿರು ಹಾವು ಎಲ್ಲಿದೆ ಎಂದು ಈ ಕೆಳಗಿನ ಚಿತ್ರದಲ್ಲಿ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version