ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು – Kannada News | Elephant visited West Bengal poll booth in Jhargram

 

ಕೊಲ್ಕತ್ತಾ, ಏಪ್ರಿಲ್ 23: ಇಂದು ಪಶ್ಚಿಮ ಬಂಗಾಳ (West Bengal) ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದಿದೆ. ಜಾರ್ಗ್ರಾಮ್‌ನ ಮತಗಟ್ಟೆಯ ಬಳಿ ಇದ್ದಕ್ಕಿದ್ದಂತೆ ಆನೆಯೊಂದು ಮತಗಟ್ಟೆಗೆ ಬಂದಿತು. ಇದನ್ನು ನೋಡಿದ ಮತದಾರರು ಸ್ವಲ್ಪ ಆಘಾತಕ್ಕೊಳಗಾದರು. ಜಾರ್ಗ್ರಾಮ್‌ನ ಜಿಡುಸೋಲ್ ಪ್ರಾಥಮಿಕ ಶಾಲೆಯ ಬಳಿ ಈ ಘಟನೆ ನಡೆದಿದೆ. ಅಧಿಕಾರಿಗಳು ಈ ಪ್ರದೇಶದಲ್ಲಿ ಆನೆಗಳು ಇರುತ್ತವೆ ಎಂದು ಮೊದಲೇ ಎಚ್ಚರಿಸಿದ್ದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಮತ ಚಲಾಯಿಸಲು ಬಂದಿದ್ದ ಮತದಾರರಲ್ಲಿ ಒಬ್ಬರು ತಮ್ಮ ಮೊಬೈಲ್‌ನಲ್ಲಿ ಆನೆ ಮತಗಟ್ಟೆಯ ಬಳಿ ಚಲಿಸುತ್ತಿರುವುದನ್ನು ವೀಡಿಯೊ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಆಗಿದ್ದು, ವೈರಲ್ ಆಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

MI vs CSK: ತಾಯಿಯ ಅಗಲಿಕೆಯ ನೋವಿನಲ್ಲೂ ಕಣಕ್ಕಿಳಿದು ವಿಕೆಟ್ ಉರುಳಿಸಿದ ಮುಖೇಶ್ ಚೌದರಿ – Kannada News | Mukesh Choudhary’s Emotional IPL 2026 Wicket: Dedicates to Mother After Demise

ಐಪಿಎಲ್ 2026 ರ 33 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಿತು. ಆದರೆ ಈ ಪಂದ್ಯ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಯುವ ವೇಗದ ಮುಖೇಶ್ ಚೌಧರಿ ಅವರ ತಾಯಿ ಸಾವನ್ನಪ್ಪಿದರು. ಇದರಿಂದಾಗಿ ಈ ಪಂದ್ಯದಲ್ಲಿ ಮುಖೇಶ್ ಚೌಧರಿ ಆಡುವುದಿಲ್ಲ ಎಂಬ ಮಾತು ಕೇಳಿಬಂದಿತ್ತು. ಆದರೆ ತಾಯಿಯ ಅಗಲಿಕೆಯ ನೋವಿನಲ್ಲೂ ಸಿಎಸ್​​ಕೆ ಪರ ಕಣಕ್ಕಿದ ಮುಖೇಶ್ ತಾವು ಬೌಲ್ ಮಾಡಿದ ಮೊದಲ ಓವರ್​ನಲ್ಲೇ ವಿಕೆಟ್ ಉರುಳಿಸಿ ಅಗಲಿದೆ ಅಮ್ಮನಿಗೆ ಅರ್ಪಿಸಿದರು.

ಮುಖೇಶ್ ಅವರ ತಾಯಿ ಮಂಗಳವಾರ, ಏಪ್ರಿಲ್ 21 ರಂದು ನಿಧನರಾದರು. ಹೀಗಾಗಿ ಮನೆಗೆ ಮರಳಿದ್ದ ಮುಖೇಶ್ ತಮ್ಮ ತಾಯಿಯ ಅಂತ್ಯಕ್ರಿಯೆಯನ್ನು ನೆರವೇರಿಸಿ, ಎಲ್ಲಾ ಔಪಚಾರಿಕತೆಗಳನ್ನು ಪೂರ್ಣಗೊಳಿಸಿ ಕೆಲವೇ ಗಂಟೆಗಳಲ್ಲಿ ಚೆನ್ನೈ ತಂಡವನ್ನು ಸೇರಿಕೊಂಡಿದ್ದರು. ಇದಾದ ಬಳಿಕ ತಂಡದ ಆಡುವ ಹನ್ನೊಂದರ ಬಳಗದಲ್ಲೂ ಕಾಣಿಸಿಕೊಂಡ ಮುಖೇಶ್, ತಾವು ಬೌಲ್ ಮಾಡಿದ ಓವರ್‌ನ ಮೊದಲ 4 ಡಾಟ್ ಬಾಲ್‌ಗಳನ್ನು ಎಸೆದರು. ನಂತರ ಮುಖೇಶ್ ಐದನೇ ಎಸೆತದಲ್ಲಿ ಕ್ವಿಂಟನ್ ಡಿ ಕಾಕ್ ಅವರನ್ನು ಔಟ್ ಮಾಡಿ ಸಿಎಸ್​ಕೆಗೆ ಮೊದಲ ವಿಕೆಟ್ ತಂದುಕೊಟ್ಟರು. ಮುಖೇಶ್ ವಿಕೆಟ್ ಪಡೆದ ತಕ್ಷಣ ಆಕಾಶದತ್ತ ನೋಡಿ, ಅಗಲಿದ ಅಮ್ಮನಿಗೆ ಈ ವಿಕೆಟ್ ಸಮರ್ಪಿಸಿದರು. ಇದೀಗ ಮುಖೇಶ್ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Source link

ಹೇಗಿದ್ದೀರಾ, ಏನ್ಮಾಡ್ತಿದ್ದೀರಾ? IAS ಅಧಿಕಾರಿಗಳ ಹೆಸರಲ್ಲಿ ಮಹಿಳಾ ಆಫೀಸರ್ಸ್ ಜತೆ ವಾಟ್ಸಪ್ ಚಾಟ್ – Kannada News | WhatsApp Scam: Miscreants Pose as IAS Officers to Message Female Officers

ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada

ಬೆಂಗಳೂರು, ಏಪ್ರಿಲ್​ 23: ಹಿರಿಯ ಐಎಎಸ್ ಅಧಿಕಾರಿಗಳ (IAS Officers) ಫೋಟೋ ಹಾಗೂ ಹೆಸರನ್ನು ಬಳಸಿಕೊಂಡು ಕಿಡಿಗೇಡಿಗಳು ನಕಲಿ ವಾಟ್ಸಾಪ್ ಖಾತೆಗಳನ್ನು ಸೃಷ್ಟಿಸಿ, ಸಹೋದ್ಯೋಗಿಗಳಿಗೆ ಹಾಗೂ ಇತರೆ ಅಧಿಕಾರಿಗಳಿಗೆ ಮೆಸೇಜ್ (message) ಕಳುಹಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳಾ ಅಧಿಕಾರಿಗಳಿಗೂ ಕಿಡಿಗೇಡಿಗಳು ಮೆಸೇಜ್ ಮಾಡಿದ್ದು, ಸದ್ಯ ಅಮೃತಹಳ್ಳಿ ಹಾಗೂ ವೈಟ್​ಫೀಲ್ಡ್ ಸೈಬರ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಯುಕ್ತ ಮಹೇಶ್ವರ ರಾವ್ ಸೇರಿದಂತೆ ವಿವಿಧ ವಲಯ ಆಯುಕ್ತರ ಫೋಟೋಗಳನ್ನು ತಮ್ಮ ವಾಟ್ಸಾಪ್ ಡಿಪಿ ಆಗಿ ಬಳಸಿಕೊಂಡಿರುವ ಆರೋಪಿಗಳು, ಹಲವು ಅಧಿಕಾರಿಗಳಿಗೆ “ಹೇಗಿದ್ದೀರಾ? ಎಲ್ಲಿದ್ದೀರಾ? ಏನು ಮಾಡುತ್ತಿದ್ದೀರಾ?” ಎಂದು ವೈಯಕ್ತಿಕವಾಗಿ ವಿಚಾರಿಸುವ ಮಾದರಿಯಲ್ಲಿ ಮೆಸೇಜ್​​ ಮಾಡಿದ್ದಾರೆ.

ಮಹಿಳಾ ಅಧಿಕಾರಿಗಳಿಗೂ ಕಿಡಿಗೇಡಿಗಳಿಂದ ಮೆಸೇಜ್

ಕೇವಲ ಪುರುಷ ಅಧಿಕಾರಿಗಳಷ್ಟೇ ಅಲ್ಲದೆ, ಮಹಿಳಾ ಅಧಿಕಾರಿಗಳಿಗೂ ಇಂತಹ ನಕಲಿ ಖಾತೆಗಳಿಂದ ಮೆಸೇಜ್ ಬಂದಿರುವುದು ಸದ್ಯ ಆತಂಕಕ್ಕೆ ಕಾರಣವಾಗಿದೆ. ಹಿರಿಯ ಅಧಿಕಾರಿಗಳ ಅಧಿಕೃತ ಹೆಸರನ್ನು ದುರುಪಯೋಗಪಡಿಸಿಕೊಂಡು ವಂಚನೆಗೆ ಅಥವಾ ತಪ್ಪು ಮಾಹಿತಿ ಹರಡಲು ಈ ರೀತಿ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಬಾಗಲಕೋಟೆ ಕಾರ್ಮಿಕರ ಖಾತೆಗೆ ಕೋಟಿ ಕೋಟಿ ಹಣ: ಮುಂದಾಗಿದ್ದೇನು ಗೊತ್ತಾ?

ಅನಾಮಧೇಯ ವ್ಯಕ್ತಿಗಳಿಂದ ಬೇರೆ ಬೇರೆ ವ್ಯಕ್ತಿಗಳಿಗೆ ಮೆಸೇಜ್ ಕಳುಹಿಸುವ ಮೂಲಕ ಹಣಕಾಸಿನ ನೆರವು ಕೇಳುವ ಹಾಗೂ ಆರ್ಥಿಕ ಅಪರಾಧಗಳು ನಡೆಯುವ ಸಂಭವವಿರುತ್ತದೆ. ಹಾಗಾಗಿ ಅನಾಮಧೇಯವಾಗಿ ಮೆಸೇಜ್ ಮಾಡುತ್ತಿರುವುದನ್ನು ಕೂಡಲೇ ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಕೃತ್ಯ ಎಸಗಿರುವಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳ ಸಹಾಯಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಪೊಲೀಸರನ್ನೂ ಬಿಡದ ಸೈಬರ್ ವಂಚಕರು: ಬೆಂಗಳೂರಿನ ಹಲವು ಪೊಲೀಸರ ವಾಟ್ಸ್ಆ್ಯಪ್, ಮೊಬೈಲ್ ಹ್ಯಾಕ್!

ಸದ್ಯ ಈ ಸಂಬಂಧ ಈಗಾಗಲೇ ಬೆಂಗಳೂರಿನ ವೈಟ್‌ಫೀಲ್ಡ್ ಸೈಬರ್ ಕ್ರೈಂ ಪೊಲೀಸ್ ಠಾಣೆ ಹಾಗೂ ಅಮೃತಹಳ್ಳಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಪೊಲೀಸರು ಸದ್ಯ ಈ ಕಿಡಿಗೇಡಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ಐಪಿಎಲ್​ಗೆ ಎಂಟ್ರಿಕೊಟ್ಟ ಪಾಕಿಸ್ತಾನ ಮೂಲದ ಆಟಗಾರ

Source link

ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್ – Kannada News | Actor Diganth Manchale talks about Kannada and Telugu film industry during Rudra Kala press meet

ನಟ ದಿಗಂತ್ ಅವರು ‘ರುದ್ರ ಕಾಲ’ (Rudra Kala) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಇತ್ತೀಚೆಗೆ ನೆರವೇರಿತು. ಈ ವೇಳೆ ಸುದ್ದಿಗೋಷ್ಠಿ ನಡೆಸಲಾಯಿತು. ದಿಗಂತ್ ಅವರು ಮಾತನಾಡಿ ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ಚಿತ್ರರಂಗದ (Kannada Film Industry) ಸದ್ಯದ ಪರಿಸ್ಥಿತಿ ಹೇಗಿದೆ ಎಂಬುದನ್ನು ಅವರು ವಿವರಿಸಿದರು. ದಿಗಂತ್ ಅವರು ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿಗೂ ನಟಿಸುತ್ತಿದ್ದಾರೆ. ‘ಕನ್ನಡ ಸಿನಿಮಾ ಗೆಲ್ಲಲಿ. ಈಗ ನಾನು ಒಂದು ತೆಲುಗು ಸಿನಿಮಾದ ಶೂಟಿಂಗ್ ಮುಗಿಸಿ ಬಂದೆ. ಅಲ್ಲಿನವರಿಗೆ ಒಟಿಟಿಯಿಂದ ಎಫೆಕ್ಟ್ ಆಗಿಲ್ಲ. ಅಲ್ಲಿ ಪ್ರತಿ ವಾರ ಒಂದು ಸಿನಿಮಾ ಯಶಸ್ವಿ ಆಗುತ್ತಿದೆ. ನಮ್ಮ ಕನ್ನಡ ಚಿತ್ರರಂಗದಲ್ಲಿ ಯಾಕೆ ಆ ರೀತಿ ಆಗುತ್ತಿಲ್ಲ ಅಂತ ನನಗೆ ದುಃಖ ಆಯಿತು’ ಎಂದು ದಿಗಂತ್ (Diganth Manchale) ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ, ಆಗಿದ್ದೇನು? – Kannada News | Handicapped vehicles burnt after fire break out In godown at ramanagara

ಪ್ರಶಾಂತ್​ ಬಿ. | Edited By: ರಮೇಶ್ ಬಿ. ಜವಳಗೇರಾ|

Updated on:Apr 23, 2026 | 10:29 PM

ಇನ್ನೇನು ಸರ್ಕಾರದ ವತಿಯಿಂದ ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮವಾಗಿರುವ ಘಟನೆ ಬೆಂಗಳೂರು ದಕ್ಷಿಣ ‌ಜಿಲ್ಲೆ ರಾಮನಗರದ ವಡೇರಹಳ್ಳಿ ಬಳಿ ನಡೆದಿದೆ. ವಿಶೇಷ ಚೇತನರಿಗೆ ನೀಡಲು ಸರ್ಕಾರದ CSR ಅನುದಾನದಡಿಯಲ್ಲಿ ಟೊಯೋಟಾ ಕಂಪನಿಯ 4 ಚಕ್ರದ 32 ವಾಹನಗಳನ್ನು ಖರೀದಿಸಿ ಭೋಜರಾಜ್ ಎಂಬವರಿಗೆ ಸೇರಿದ ಗೋದಾಮಿನಲ್ಲಿ ಇಡಲಾಗಿತ್ತು. ಆದ್ರೆ, ಇಂದು (ಏಪ್ರಿಲ್ 23) ಏಕಾಏಕಿ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 4 ಚಕ್ರದ 32 ವಾಹನಗಳ ಪೈಕಿ 10 ವಾಹನಗಳು ಸುಟ್ಟು ಭಸ್ಮವಾಗಿವೆ.

Published on: Apr 23, 2026 10:29 PM

Source link

ಡಾ. ರಾಜ್​ಕುಮಾರ್ ಮೇಲಿನ ಅಭಿಮಾನಕ್ಕೆ ಅಮೆರಿಕದಲ್ಲಿ ಕನ್ನಡ ಗೀತೆ ಹಾಡಿದ ಮೋಹನ್​ಲಾಲ್ – Kannada News | Mohanlal singing Dr Rajkumar movie song on US goes viral on Social Media

ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್​ಲಾಲ್ (Mohanlal) ಅವರಿಗೆ ಕನ್ನಡ ಸಿನಿಮಾಗಳ ಬಗ್ಗೆ ಒಲವು ಇದೆ. ಅದರಲ್ಲೂ ಡಾ. ರಾಜ್​ಕುಮಾರ್ (Dr Rajkumar) ಸಿನಿಮಾಗಳ ಬಗ್ಗೆ ವಿಶೇಷ ಪ್ರೀತಿ ಇದೆ. ಕನ್ನಡದ ಹಾಡುಗಳನ್ನು ಕೇಳಿ ಅವರು ಎಂಜಾಯ್ ಮಾಡುತ್ತಾರೆ. ಈ ಮೊದಲು ಅವರು ‘ಎಂದೆಂದೂ ನಿನ್ನನು ಮರೆತು ಬದುಕಿರಲಾರೆ..’ (Endendu Ninnanu Maretu) ಹಾಡನ್ನು ನೋಡುತ್ತಾ ಆನಂದಿಸಿದ ವಿಡಿಯೋ ವೈರಲ್ ಆಗಿತ್ತು. ಈಗ ಅವರು ಅದೇ ಹಾಡನ್ನು ವೇದಿಕೆಯಲ್ಲಿ ಹಾಡಿರುವುದು ಗಮನ ಸೆಳೆದಿದೆ. ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೋಹನ್​ಲಾಲ್ ಅವರು ಭಾಗಿ ಆಗಿದ್ದಾರೆ. ವೇದಿಕೆಯಲ್ಲಿ ಅವರು ಲೈವ್ ಆಗಿ ಹಾಡು ಹೇಳಿದ್ದಾರೆ. ಡಾ. ರಾಜ್​ಕುಮಾರ್, ಮಂಜುಳಾ ನಟನೆಯ ‘ಎರಡು ಕನಸು’ ಸಿನಿಮಾದ ‘ಎಂದೆಂದೂ ನಿನ್ನನು ಮರೆತು ಬದುಕಿರಲಾರೆ’ ಗೀತೆಯನ್ನು ಅವರು ಹಾಡಿದ್ದಾರೆ. ಅಪ್ಪಟ ಕನ್ನಡಿಗನ ರೀತಿ ಅವರು ಹಾಡು ಹೇಳಿದ್ದಾರೆ.

ಏಪ್ರಿಲ್ 24ರಂದು ಡಾ. ರಾಜ್​ಕುಮಾರ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿಯೇ ಮೋಹನ್​ಲಾಲ್ ಅವರ ಈ ವಿಡಿಯೋ ವೈರಲ್ ಆಗಿರುವುದು ವಿಶೇಷ. ಅಣ್ಣಾವ್ರ ಬಗ್ಗೆ ಮೋಹನ್​ಲಾಲ್ ಅವರಿಗೂ ಎಷ್ಟು ಅಭಿಮಾನ ಇದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ನಿಜಕ್ಕೂ ಅಚ್ಚರಿ ಆಯಿತು’ ಎಂದು ಅನೇಕರು ಹೇಳಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ:

ರಾಜನ್-ನಾಗೇಂದ್ರ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ‘ಎಂದೆಂದೂ ನಿನ್ನನು ಮರೆತು..’ ಹಾಡು ಇಂದಿಗೂ ಎವರ್​ಗ್ರೀನ್ ಆಗಿ ಉಳಿದುಕೊಂಡಿದೆ. ಪಿ.ಬಿ. ಶ್ರೀನಿವಾಸ್ ಮತ್ತು ವಾಣಿ ಜಯರಾಮ್ ಅವರು ಈ ಗೀತೆಗೆ ಧ್ವನಿ ನೀಡಿದ್ದರು. 1974ರಲ್ಲಿ ‘ಎರಡು ಕನಸು’ ಸಿನಿಮಾ ಬಿಡುಗಡೆ ಆಗಿತ್ತು. 50 ವರ್ಷ ಕಳೆದರೂ ಈ ಹಾಡು ಹಳೆಯದಾಗಿಲ್ಲ.

ಇದನ್ನೂ ಓದಿ: ದಾದಾಸಾಹೇಬ್ ಫಾಲ್ಕೆ ಗೌರವ ಪಡೆದ ಮಲಯಾಳಂ ನಟ ಮೋಹನ್​ಲಾಲ್​

ವಿಶೇಷವಾಗಿ ಮೋಹನ್​ಲಾಲ್ ಅವರಿಗೆ ‘ಎಂದೆಂದೂ ನಿನ್ನನು ಮರೆತು..’ ಹಾಡು ಬಹಳ ಇಷ್ಟ. ಈ ಮೊದಲು ಕೂಡ ಅವರ ವಿಡಿಯೋ ವೈರಲ್ ಆಗಿತ್ತು. ಈ ಗೀತೆಯನ್ನು ನೋಡುತ್ತಾ ಅವರು ಎಂಜಾಯ್ ಮಾಡಿದ್ದನ್ನು ಕಂಡು ಡಾ. ರಾಜ್​ಕುಮಾರ್ ಅಭಿಮಾನಿಗಳು ಸಂತಸಪಟ್ಟಿದ್ದರು. ಈ ಬಾರಿಯಂತೂ ಅವರು ಸಾಹಿತ್ಯವನ್ನು ನೋಡದೆಯೇ ಪಕ್ಕಾ ಕನ್ನಡಿಗನಂತೆ ಹಾಡಿದ್ದಾರೆ. ಅವರ ಕಂಠದಲ್ಲಿ ಈ ಗೀತೆಯನ್ನು ಕೇಳಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ ಪ್ರತಿಕ್ರಿಯೆ – Kannada News | Press the button with the lotus symbol to liberate Bengal from infiltrators amit shah says

ಕೊಲ್ಕತ್ತಾ, ಏಪ್ರಿಲ್ 23: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಟಿಎಂಸಿಯ ಭ್ರಷ್ಟಾಚಾರ ಮತ್ತು ಗೂಂಡಾಗಿರಿಯ ಸೂರ್ಯ ಮುಳುಗಿದ್ದಾನೆ. ಇಂದು ಮೊದಲ ಹಂತದ ಮತದಾನ ಬಹುತೇಕ ಪೂರ್ಣಗೊಂಡಿದೆ. ಮೇ 5ರಂದು ದೀದಿ ಸಂಪೂರ್ಣ ಸೋಲನ್ನು ಎದುರಿಸಲಿದ್ದಾರೆ. ಬಂಗಾಳದಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಬಂಗಾಳವನ್ನು ನುಸುಳುಕೋರರಿಂದ ಮುಕ್ತಗೊಳಿಸಲು ಬಂಗಾಳ ಚುನಾವಣೆಯಲ್ಲಿ ಏಪ್ರಿಲ್ 29ರಂದು ನೀವೆಲ್ಲರೂ ಕಮಲದ ಚಿಹ್ನೆಯಿರುವ ಗುಂಡಿಯನ್ನು ಒತ್ತಬೇಕು” ಎಂದು ಅಮಿತ್ ಶಾ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಖಂಡಿತ ಪಕ್ಷದ ಕೆಲವರನ್ನ ಭೇಟಿ ಮಾಡಿ ಚರ್ಚಿಸಿದ್ದೇನೆ: ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಡಿಕೆಶಿ ಹೇಳಿಕೆ – Kannada News | DK Shivakumar Reacts after Mets Congress high command In Delhi about Karnataka Politics

ನವದೆಹಲಿ, (ಏಪ್ರಿಲ್ 23): ಕರ್ನಾಟಕ ಕಾಂಗ್ರೆಸ್​​ನಲ್ಲಿ (Karnataka Congress) ನಡೆಯುತ್ತಿರುವ ಕೆಲ ರಾಜಕೀಯ ವಿದ್ಯಮಾನಗಳ ಮಧ್ಯೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್  (DK Shivakumar) ದೆಹಲಿಗೆ ತೆರಳಿದ್ದು, ಅಲ್ಲಿ ಗೌಪ್ಯವಾಗಿ ವರಿಷ್ಠರನ್ನ ಭೇಟಿಯಾಗಿ ಮಹತ್ವದ ಚರ್ಚೆ ಮಾಡಿದ್ದಾರೆ. ಬಳಿಕ ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, ದೆಹಲಿಗೆ ನಾನೇನು ಗಾಳಿ ಕುಡಿಯುವುದಕ್ಕೆ ಬಂದಿಲ್ಲ. ಖಂಡಿತ ಪಕ್ಷದ ಕೆಲವರನ್ನ ಭೇಟಿ ಮಾಡಿ ಚರ್ಚಿಸಿದ್ದೇನೆ. ಯಾರನ್ನ ಭೇಟಿಯಾಗಿದ್ದೇನೆ ಎಂದು ಹಾಗೆ ಹೇಳಬಾರದು. ವರಿಷ್ಠರನ್ನ ಭೇಟಿಯಾಗಿ ಚರ್ಚೆ ಮಾಡಿದ್ದು, ನನ್ನ ಕೆಲಸ ನಾನು ಮಾಡುತ್ತಿರುತ್ತೇನೆ. ಪಕ್ಷದ ವಿಚಾರವಾಗಿಯೂ ವರಿಷ್ಠರ ಬಳಿ ಚರ್ಚಿಸಿದ್ದೇನೆ. ನನ್ನಂಥವನು ಬಹಿರಂಗವಾಗಿ ಮಾತನಾಡಲು ಆಗುತ್ತಾ? ಎಂದು ಹೇಳಿದ್ದಾರೆ.

ಇದರೊಂದಿಗೆ ಡಿಕೆ ಶಿವಕುಮಾರ್ ಯಾರನ್ನ ಭೇಟಿ ಮಾಡಿದ್ದು? ಯಾಕಾಗಿ-ಯಾವ ವಿಚಾರವಾಗಿ ಭೇಟಿಯಾಗಿ ಏನೆಲ್ಲಾ ಚರ್ಚೆ ನಡೆಯಿತು ಎನ್ನುವ ಗುಟ್ಟು ಬಿಟ್ಟುಕೊಟ್ಟಿಲ್ಲ. ಬದಲಾಗಿ ಪಕ್ಷದ ವಿಚಾರವಾಗಿಯೂ ವರಿಷ್ಠರ ಬಳಿ ಚರ್ಚಿಸಿದ್ದೇನೆ . ಆದ್ರೆ, ಯಾರನ್ನ ಭೇಟಿಯಾಗಿದ್ದೇನೆಂದು ಹಾಗೆ ಹೇಳಬಾರದು ಎಂದು ಹೇಳಿಕೆ ನೀಡಿರುವುದು ಭಾರೀ ಸಂಚಲನ ಮೂಡಿಸಿದೆ.

ಕಾಂಗ್ರೆಸ್ ಮುಸ್ಲಿಂ ನಾಯಕ ನಡುವಿನ ಅಸಮಾಧಾನ, ಸಂಪುಟ ಪುನಾರಚನೆ ಹಾಗೂ ನಾಯಕತ್ವ ಬದಲಾವಣೆ ಕೂಗಿನ ಮಧ್ಯೆ  ಡಿಕೆ ಶಿವಕುಮಾರ್  ರಹಸ್ಯವಾಗಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿದ್ದು, ನಾನಾ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಾಗಲಕೋಟೆ ಕಾರ್ಮಿಕರ ಖಾತೆಗೆ ಕೋಟಿ ಕೋಟಿ ಹಣ: ಮುಂದಾಗಿದ್ದೇನು ಗೊತ್ತಾ? – Kannada News | Online Trading Fraud: Workers’ Accounts Misused, Rs 2 Cr Scam Uncovered

ಬಾಗಲಕೋಟೆ, ಏಪ್ರಿಲ್​ 23: ಜಿಲ್ಲೆಯಲ್ಲಿ ಆನ್​​ಲೈನ್​ ಟ್ರೇಡಿಂಗ್ (Online Trading) ಹೆಸರಲ್ಲಿ ಮೇಲಿಂದ ಮೇಲೆ ವಂಚನೆಗಳು (Fraud) ನಡೆಯುತ್ತಿವೆ. ಸಾಮಾಜಿ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ವಂಚನೆ ಮಾಡುತ್ತಿರುವುದು ಈಗಾಗಲೇ ಅನೇಕ ಬಾರಿ ನಡೆದಿದೆ. ಈಗ ಮತ್ತೊಬ್ಬರ ಖಾತೆಗಳನ್ನು ಬಳಸಿಕೊಂಡು ಕೋಟ್ಯಂತರ ರೂ ವಂಚನೆ ಬೆಳಕಿಗೆ ಬಂದಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ಆನ್​​​ಲೈನ್​ ವಂಚನೆ ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿವೆ. ಇದೀಗ ಸುಣ್ಣದ ಬಟ್ಟಿ ಕಾರ್ಮಿಕರ ಖಾತೆಗಳನ್ನು ಬಳಸಿಕೊಂಡು ರಾಜಸ್ಥಾನದ ಮೂಲದ ವಂಚಕರು ಮೋಸ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಮುಧೋಳ ಭಾಗದ ಸುಣ್ಣದ ಬಟ್ಟಿಯ ಹತ್ತಕ್ಕೂ ಅಧಿಕ ಕಾರ್ಮಿಕರ ಬ್ಯಾಂಕ್ ಖಾತೆಗಳನ್ನು ರಾಜಸ್ಥಾನದ ಮೂಲದ ಮನೋಜ್ ಪೋತದಾರ ಬಳಸಿಕೊಂಡು ವಂಚನೆ ಮಾಡಿದ್ದಾನೆ.

ಬರೋಬ್ಬರಿ 2 ಕೋಟಿಗೂ ಅಧಿಕ ಹಣ ವರ್ಗಾವಣೆ

ಮನೋಜ್ ಪೋತದಾರ ಅಲ್ಪಸ್ವಲ್ಪ ಹಣ ನೀಡಿ ಮಾರುತಿ ಎಂಬ ವ್ಯಕ್ತಿಯ ಕಡೆಯಿಂದ ಹತ್ತಕ್ಕೂ ಅಧಿಕ ಕಾರ್ಮಿಕರ ಖಾತೆಗಳನ್ನು ಪಡೆದಿದ್ದ. ಅದರ ಜೊತೆಗೆ ಫೋನ್ ನಂಬರ್​ ಕೂಡ ಪಡೆದು ತಾನೇ ಆ ಖಾತೆಗಳನ್ನು ನಿರ್ವಹಣೆ ಮಾಡುತ್ತಿದ್ದ. ಆ ಮೂಲಕ ಬೇರೆಯವರಿಗೆ ಟ್ರೇಡಿಂಗ್ ಹೆಸರಲ್ಲಿ ಮೋಸ ಮಾಡಿ ಅದರಿಂದ ಬಂದ ಹಣವನ್ನು ಈ ಖಾತೆಗಳಿಗೆ ವರ್ಗಾಯಿಸಿ ಆ ಹಣವನ್ನು ಲೂಟಿ ಮಾಡಿದ್ದಾನೆ. ಬರೋಬ್ಬರಿ 2 ಕೋಟಿಗೂ ಅಧಿಕ ಹಣವನ್ನು ಹತ್ತಕ್ಕೂ ಅಧಿಕ ಜನ ಕಾರ್ಮಿಕರ ಖಾತೆಗೆ ವರ್ಗಾವಣೆಯಾಗಿತ್ತು. ಇತ್ತ ತಮ್ಮ ಖಾತೆಗೆ ಅಧಿಕ ಹಣ ಬಂದ ತಕ್ಷಣ ಕಾರ್ಮಿಕರು ಬಾಗಲಕೋಟೆ ಸಿಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಬಾಗಲಕೋಟೆ ಸಿಇಎನ್‌ ಪೊಲೀಸರು ಮನೋಜ್ ಪೋತದಾರ ಹಾಗೂ ಮಾರುತಿಯನ್ನ ಬಂಧಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 410 ಕೋಟಿ ರೂಪಾಯಿ ಜಿಎಸ್‌ಟಿ ಹಗರಣ: ಜನರ ಆಧಾರ್, ಪಾನ್ ಕಾರ್ಡ್ ಬಳಸಿ 102 ಕೋಟಿ ತೆರಿಗೆ ಲೂಟಿ ಮಾಡಿದ ಕಿಲಾಡಿಗಳು!

ಟ್ರೇಡಿಂಗ್ ವಂಚನೆಯಲ್ಲಿ ಈ ಹಿಂದೆ ವೈದ್ಯರು, ಇಂಜಿನಿಯರ್​ಗಳು, ಶಿಕ್ಷಕರು ಸೇರಿದಂತೆ ಕೆಲ ಜನರು ಕೂಡ ಮೋಸ ಹೋದ ಪ್ರಕರಣಗಳಿವೆ. ಇದೀಗ ಕಾರ್ಮಿಕರ ಖಾತೆಗಳನ್ನು ಬಳಸಿಕೊಂಡು ವಂಚಿಸಲಾಗಿದೆ. ಸದ್ಯ ಈ ಕೃತ್ಯ ಸಾರ್ವಜನಿಕರಿಲ್ಲಿ ಆತಂಕ ಮೂಡಿಸಿದೆ.

ಕಠಿಣ ಶಿಕ್ಷೆಗೆ ಸಾರ್ವಜನಿಕರು ಆಗ್ರಹ

ಯಾವುದೇ ವ್ಯಕ್ತಿಗಳು ತಮ್ಮ ಖಾತೆಗಳನ್ನು ಬೇರೆಯವರಿಗೆ ನೀಡಬಾರದು. ಜೊತೆಗೆ ಅವುಗಳನ್ನು ನಿರ್ವಹಣೆ ಮಾಡುವುದಕ್ಕೆ ಅವಕಾಶ ಕೊಡಬಾರದು. ಮುಗ್ಧ ಜನರನ್ನು ತಮ್ಮ ವಂಚನೆಗೆ ಬಳಸಿಕೊಂಡು ಮೋಸ ಮಾಡುವ ಇಂತಹ ಕೃತ್ಯಕ್ಕೆ ಜನರು ಆಸ್ಪದ ನೀಡಬಾರದು, ಜೊತೆಗೆ ಪೊಲೀಸರು ಇಂತಹ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ: ದೇಣಿಗೆ ಕೊಡಿಸುವ ನೆಪದಲ್ಲಿ ವಂಚನೆ: ಎರಡು ದಿನದಲ್ಲೇ 2 ಕೋಟಿ ರೂ ಪಂಗನಾಮ

ಒಟ್ಟಿನಲ್ಲಿ ಟ್ರೇಡಿಂಗ್ ಹೆಸರಲ್ಲಿ ಮೇಲಿಂದ ಮೇಲೆ ಇಂತಹ ಕೃತ್ಯಗಳು ನಡೆಯುತ್ತಿದ್ದು, ಪೊಲೀಸರು ಇಂತಹ ಜಾಲವನ್ನು ಬೇರು ಸಮೇತ ಕಿತ್ತೆಸೆಯಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version