ವಿಶ್ವದಲ್ಲೇ ಹೆಚ್ಚು ಟ್ರಾಫಿಕ್ ಇರುವ ನಗರ: ಬೆಂಗಳೂರಿಗೆ 2ನೇ ಸ್ಥಾನ! – Kannada News | Bengaluru Ranks 2nd Among World’s Most Traffic Congested Cities: TomTom Traffic Index 2025

ಬೆಂಗಳೂರು, ಜನವರಿ 23: ವಿಶ್ವದ ಅತಿಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು (Bangalore Traffic) ಎರಡನೇ ಸ್ಥಾನ ಪಡೆದಿದೆ. ನೆದರ್ಲೆಂಡ್ಸ್ ಮೂಲದ ‘ಟಾಮ್‌ಟಾಮ್’ ಸಂಸ್ಥೆ ಬಿಡುಗಡೆ ಮಾಡಿರುವ 2025ರ ಸಂಚಾರ ಸೂಚ್ಯಂಕ (Traffic Index) ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ. ಸಂಚಾರ ದಟ್ಟಣೆ ಪಟ್ಟಿಯಲ್ಲಿ ಮೆಕ್ಸಿಕೊ ನಗರ ಮೊದಲ ಸ್ಥಾನದಲ್ಲಿದ್ದರೆ, ಭಾರತದ ಸಿಲಿಕಾನ್ ಸಿಟಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ.

ವರದಿ ಪ್ರಕಾರ, 2025ರಲ್ಲಿ ಬೆಂಗಳೂರಿನ ಸರಾಸರಿ ಸಂಚಾರ ದಟ್ಟಣೆ ಶೇ 74.4ಕ್ಕೆ ತಲುಪಿದೆ. 2024ರಲ್ಲಿ ಇದು ಶೇ 72.7 ಆಗಿದ್ದು, ಒಂದೇ ವರ್ಷದಲ್ಲಿ ಶೇ 1.7ರಷ್ಟು ದಟ್ಟಣೆ ಹೆಚ್ಚಾಗಿದೆ.

ಬೆಂಗಳೂರು ಟ್ರಾಫಿಕ್ ಸಮಸ್ಯೆ ಹೆಚ್ಚಳಕ್ಕೆ ಕಾರಣವೇನು?

ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ, ರಸ್ತೆ ಮೂಲಸೌಕರ್ಯದ ಒತ್ತಡ ಹಾಗೂ ನಿರಂತರ ಕಾಮಗಾರಿಗಳು ಸಂಚಾರ ಸಮಸ್ಯೆ ಮತ್ತಷ್ಟು ತೀವ್ರಗೊಳಿಸುತ್ತಿವೆ ಎನ್ನಲಾಗಿದೆ.

ವಾಹನ ಸಂಚಾರದ ಸರಾಸರಿ ವೇಗದಲ್ಲೂ ಸ್ವಲ್ಪ ಬದಲಾವಣೆ ಕಂಡುಬಂದಿದೆ. 2024ರಲ್ಲಿ ಗಂಟೆಗೆ 16.6 ಕಿಲೋಮೀಟರ್ ಇದ್ದ ಸರಾಸರಿ ವೇಗ, 2025ರಲ್ಲಿ 17.6 ಕಿಲೋಮೀಟರ್‌ಗೆ ಏರಿಕೆಯಾಗಿದೆ. ಆದರೂ ಸಂಚಾರದ ಒತ್ತಡ ಕಡಿಮೆಯಾಗಿಲ್ಲ. 2025ರಲ್ಲಿ 15 ನಿಮಿಷಗಳಲ್ಲಿ ಸರಾಸರಿ 4.4 ಕಿಲೋಮೀಟರ್ ಸಂಚರಿಸಬಹುದಾಗಿದ್ದು, 2024ರಲ್ಲಿ ಇದು 4.2 ಕಿಲೋಮೀಟರ್ ಆಗಿತ್ತು.

10 ಕಿಲೋಮೀಟರ್ ಪ್ರಯಾಣಕ್ಕೆ 36 ನಿಮಿಷ!

ಬೆಂಗಳೂರು ನಗರದಲ್ಲಿ 10 ಕಿಲೋಮೀಟರ್ ದೂರ ಕ್ರಮಿಸಲು ಸರಾಸರಿ 36 ನಿಮಿಷ 9 ಸೆಕೆಂಡ್ ಸಮಯ ಬೇಕಾಗುತ್ತಿದೆ ಎಂದು ವರದಿ ತಿಳಿಸಿದೆ. ಇದು ದಿನನಿತ್ಯದ ಪ್ರಯಾಣಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸಂಚಾರ ದಟ್ಟಣೆ ಪಟ್ಟಿಯಲ್ಲಿ ದುಬೈ ಮೂರನೇ ಸ್ಥಾನದಲ್ಲಿದ್ದು, ಪೊಲ್ಯಾಂಡ್‌ನ ಲೊಡ್ಜ್ ನಗರ ನಾಲ್ಕನೇ ಸ್ಥಾನ ಪಡೆದಿದೆ. ಭಾರತದ ಪುಣೆ ನಗರ ಐದನೇ ಸ್ಥಾನದಲ್ಲಿದ್ದರೆ, ಮುಂಬೈ 18ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಮ್ಯಾಪಲ್ಸ್ ಆ್ಯಪ್​ನಲ್ಲಿ ಸಿಗುತ್ತೆ ಬೆಂಗಳೂರು ಟ್ರಾಫಿಕ್ ಸಿಗ್ನಲ್ ಟೈಮಿಂಗ್ಸ್ ಲೈವ್ ಮಾಹಿತಿ! ದೇಶದಲ್ಲೇ ಮೊದಲು

ಬೆಂಗಳೂರು ವಿಶ್ವದ ಪ್ರಮುಖ ಐಟಿ ನಗರವಾಗಿರುವುದರ ಜೊತೆಗೆ, ಸಂಚಾರ ದಟ್ಟಣೆಯಲ್ಲೂ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ನಗರಾಭಿವೃದ್ಧಿ ಹಾಗೂ ಸಂಚಾರ ನಿರ್ವಹಣೆಯ ಕುರಿತು ಹೊಸ ಪ್ರಶ್ನೆಗಳನ್ನು ಎತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪತಿಯ ಉಸಿರುಗಟ್ಟಿಸಿ ಕೊಂದು ಶವದ ಬಳಿ ಪ್ರಿಯಕರನೊಂದಿಗೆ ಮಾಡಬಾರದ್ದನ್ನು ಮಾಡಿದ ಮಹಿಳೆ – Kannada News | Andhra Pradesh: Wife, Lover Suffocates Husband, Gruesome Post Murder Acts Emerge

ಗುಂಟೂರು, ಜನವರಿ 23: ಮಹಿಳೆಯೊಬ್ಬರು ತನ್ನ ಪತಿಯನ್ನು ಉಸಿರುಗಟ್ಟಿಸಿ ಕೊಲೆ(Murder)ಮಾಡಿರುವ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ. ಮಹಿಳೆಗೆ ಬೇರೊಬ್ಬ ಪುರುಷನ ಜತೆ ಅಕ್ರಮ ಸಂಬಂಧವಿತ್ತು, ತಮ್ಮ ಸಂಬಂಧಕ್ಕೆ ಅಡ್ಡವಾಗಿದ್ದ ಪತಿಯನ್ನು ಕೊಲ್ಲಲು ಇಬ್ಬರೂ ಸೇರಿ ಸಂಚು ಹೂಡಿದ್ದರು.
ಪತಿಗಾಗಿ ಬಿರಿಯಾನಿ ಸಿದ್ಧಪಡಿಸಿದ್ದಳು, ಅದರೊಳಗೆ ನಿದ್ರೆ ಮಾತ್ರೆಯ ಪುಡಿಯನ್ನು ಬೆರೆಸಿದ್ದಳು, ಪತಿ ನಿದ್ರೆಗೆ ಜಾರುತ್ತಿದ್ದಂತೆ ಪ್ರಿಯಕರನನ್ನು ಮನೆಗೆ ಕರೆದಿದ್ದಾಳೆ.

ನಂತರ ಇಬ್ಬರೂ ಸೇರ ಮಲಗಿದ್ದ ವ್ಯಕ್ತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಗುಂಟೂರಿನ ಚಿಲುವೂರು ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರಂಭದಲ್ಲಿ ಸಹಜ ಸಾವು ಎಂದು ಬಿಂಬಿಸಿದ್ದರು, ವಿಧಿವಿಜ್ಞಾನ ಪರೀಕ್ಷೆಯ ನಂತರ ಆ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂಬುದು ತಿಳಿದುಬಂದಿತ್ತು. ಇಬ್ಬರನ್ನು ಬಂಧಿಸಲಾಗಿದೆ.

ಮೃತ ವ್ಯಕ್ತಿ ಹೆಸರು ಲೋಕಂ ಶಿವನಾಗರಾಜು, ಪತ್ನಿ ಲಕ್ಷ್ಮಿ ಮಾಧುರಿ ಮತ್ತಾಕೆಯ ಪ್ರಿಯಕರ ಗೋಪಿ ಇಬ್ಬರೂ ಸೇರಿ ಕೊಲೆ ಮಾಡಿದ್ದಾರೆ. ಅಪರಾಧ ನಡೆಯುವ ಮೊದಲು ಮಾಧುರಿ ಗೋಪಿ ಜೊತೆ ವಿವಾಹೇತರ ಸಂಬಂಧ ಹೊಂಂದಿದ್ದಳು. ಶಿವನಾಗರಾಜು ಊಟ ಮಾಡಿ ಗಾಢ ನಿದ್ರೆಗೆ ಜಾರಿದ ನಂತರ ಲಕ್ಷ್ಮಿ ಗೋಪಿಯನ್ನು ಮನೆಗೆ ಕರೆಸಿದ್ದಳು.

ಮತ್ತಷ್ಟು ಓದಿ: ಬೆತ್ತಲೆ ಮಾಡಿ, ಕರೆಂಟ್​​ ಶಾಕ್​​ ಕೊಟ್ಟು ಹಿಂಸೆ: ಬದುಕಿರುವಾಗಲೇ ನರಕ ನೋಡಿ ಪ್ರಾಣಬಿಟ್ಟ ಮಹಿಳೆ

ಇಬ್ಬರೂ ಶಿವನಾಗರಾಜು ಅವರ ಮುಖದ ಮೇಲೆ ದಿಂಬನ್ನು ಇಟ್ಟು ಸಾಯುವವರೆಗೂ ಉಸಿರುಗಟ್ಟಿಸಿದ್ದರು. ಮಾಧುರಿ ತನ್ನ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಹೇಳಿಕೆಯನ್ನು ನೀಡಿದ್ದರು. ಬೆಳಗಿನ ಜಾವ ಅಕ್ಕಪಕ್ಕದ ಮನೆಯವರ ಬಳಿ ಹೋಗಿ ಪತಿ ಸಾವಿನ ಕುರಿತು ಮಾಹಿತಿ ನೀಡಿದ್ದಳು.

ಶಿವನಾಗರಾಜು ಅವರ ತಂದೆ ಮತ್ತು ಸ್ನೇಹಿತರು ಶವವನ್ನು ಪರೀಕ್ಷಿಸಿದಾಗ ರಕ್ತದ ಕಲೆಗಳ ಜೊತೆಗೆ ಗಾಯಗಳನ್ನು ಗಮನಿಸಿದಾಗ ಅನುಮಾನ ಹುಟ್ಟಿಕೊಂಡಿತ್ತು. ಸ್ಥಳೀಯ ಪೊಲೀಸರಿಗೆ ದೂರು ಸಲ್ಲಿಸಿದರು, ಅಧಿಕೃತ ತನಿಖೆಗೆ ಮುಂದಾದರು. ಮರಣೋತ್ತರ ಪರೀಕ್ಷೆಯ ವೇಳೆ ಎದೆಯಲ್ಲೂ ಗಾಯವಾಗಿದ್ದನ್ನು ಕಂಡರು. ಸಹಜ ಸಾವಲ್ಲ ಎನ್ನುವ ನಿರ್ಧಾರಕ್ಕೆ ಬರಲಾಯಿತು.

ನಂತರ ಮಾಧುರಿ ಮತ್ತು ಗೋಪಿಯನ್ನು ಬಂಧಿಸಲಾಯಿತು. ಮಾಧುರಿಯ ಮೊಬೈಲ್ ಫೋನ್‌ನ ವಿಧಿವಿಜ್ಞಾನ ಪರಿಶೀಲನೆಯ ಸಮಯದಲ್ಲಿ ತನಿಖೆಯಿಂದ ಪ್ರಮುಖ ಮಾಹಿತಿ ಬಹಿರಂಗವಾಯಿತು. ಮಾಧುರಿ ತನ್ನ ಪತಿಯ ದೇಹದ ಬಳಿ ಕುಳಿತುಕೊಂಡು ಇಡೀ ರಾತ್ರಿ ಅಶ್ಲೀಲ ವೀಡಿಯೊಗಳನ್ನು ವೀಕ್ಷಿಸುತ್ತಿದ್ದಳು, ಪ್ರಿಯಕರನ ಜತೆ ಮಾಡಬಾರದ್ದನ್ನು ಮಾಡಿದ್ದಳು ಎಂಬುದು ತಿಳಿದುಬಂದಿದೆ. ವಿಚಾರಣೆಯ ಸಮಯದಲ್ಲಿ, ಮಾಧುರಿ ಸಂಪೂರ್ಣ ತಪ್ಪೊಪ್ಪಿಗೆಯನ್ನು ನೀಡಿದ್ದು, ಗೋಪಿಯೊಂದಿಗೆ ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:14 am, Fri, 23 January 26

Source link

‘ಯಾರೇ ಗೆದ್ರು ಖುಷೀನೆ’; ಅಶ್ವಿನಿ ಹೇಳಿದ್ದ ಕೊನೆಯ ಮಾತು ನನೆಪಿಸಿಕೊಂಡ ಗಿಲ್ಲಿ

ಗಿಲ್ಲಿ ನಟ ಅವರು ಅಶ್ವಿನಿ ಗೌಡ ಬಗ್ಗೆ ಮಾತನಾಡಿದ್ದಾರೆ. ‘ಗಿಲ್ಲಿ ಗೆಲುವಿಗೆ ಅರ್ಹನಲ್ಲ. ಬಡವ ಕಾರ್ಡ್ ಬಳಸಿದ್ದಾನೆ’ ಎಂದು ಅಶ್ವಿನಿ ಹೇಳಿದ್ದರು. ಅಶ್ವಿನಿ ಗೌಡ ಅವರ ಹೇಳಿಕೆ ಬಗ್ಗೆ ಗಿಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಬಿಗ್ ಬಾಸ್​ ಫಿನಾಲೆ ವೇಳೆ ನಾನು, ರಕ್ಷಿತಾ ಹಾಗೂ ಅಶ್ವಿನಿ ಇದ್ದೆವು.ಯಾರೇ ಗೆದ್ದರೂ ಖುಷಿನೇ ಎಂದು ಅಶ್ವಿನಿ ಹೇಳಿದ್ದರು. ಈಗ ಅವರು ಯಾಕೆ ಹೀಗೆ ಮಾತನಾಡುತ್ತಿದ್ದಾರೆ ಗೊತ್ತಿಲ್ಲ’ ಎಂದಿದ್ದಾರೆ ಗಿಲ್ಲಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತನ್ನ ಪಾಸ್ಪೋರ್ಟ್​, ವೀಸಾದಲ್ಲಿ ಸ್ನೇಹಿತನನ್ನು ಯುಕೆಗೆ ಕಳಿಸಿದ ಆರೋಪಿ ಅರೆಸ್ಟ್! – Kannada News | Bengaluru Airport Arrest: Man Sent Friend to UK on Own Passport

ತನ್ನ ಪಾಸ್ಪೋರ್ಟ್​, ವೀಸಾದಲ್ಲಿ ಸ್ನೇಹಿತನನ್ನು ಯುಕೆಗೆ ಕಳಿಸಿದ ಆರೋಪಿ ಅರೆಸ್ಟ್!

ದೇವನಹಳ್ಳಿ, ಜನವರಿ 23: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru International Airport) ಒಂದೇ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಇಬ್ಬರು ವ್ಯಕ್ತಿಗಳು ಬಳಸಿ ಯುಕೆ ಪ್ರಯಾಣಿಸಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಶ್ರೀಲಂಕಾ ಮೂಲದ ಕಾಂಡಿಯಾ ರಾಜಗೋಪಾಲ್ ಎಂಬಾತನನ್ನು ಏರ್‌ಪೋರ್ಟ್ ಪೊಲೀಸರು ಬಂಧಿಸಿದ್ದಾರೆ.

ಪಾಸ್​ಪೋರ್ಟ್​ ಕಾಣೆಯಾಗಿದೆ ಎಂದು ಆರೋಪಿ ಹೈಡ್ರಾಮಾ

ಬಂಧಿತ ಆರೋಪಿ ಕಳೆದ ಭಾನುವಾರ ಯುನೈಟೆಡ್ ಕಿಂಗ್‌ಡಂಗೆ ಪ್ರಯಾಣಿಸಬೇಕಿತ್ತು. ವಿಮಾನ ನಿಲ್ದಾಣದ ಪ್ಯಾಸೆಂಜರ್ ಎಕ್ಸ್‌ಚೇಂಜ್ ಪ್ರದೇಶದಲ್ಲಿ ಫ್ಲೈಟ್‌ಗಾಗಿ ಕಾಯುತ್ತಿದ್ದ ವೇಳೆ, ತನ್ನ ಪಾಸ್‌ಪೋರ್ಟ್ ಹಾಗೂ ವೀಸಾ ಕಳೆದುಹೋಗಿದೆ ಎಂದು ಆರೋಪಿಯು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ಬದಲಿ ದಾಖಲಾತಿ ಪಡೆಯಲು ಯತ್ನಿಸಿದ್ದ.ಆದರೆ ಪೊಲೀಸ್ ವಿಚಾರಣೆ ವೇಳೆ ಆರೋಪಿಯ ಸಂಚು ಬಹಿರಂಗವಾಗಿದೆ. ಆರೋಪಿಯ ಸ್ನೇಹಿತ ಶಾರುಷನ್ ಕುನಸೇಕರನ್ ಎಂಬಾತ ಈಗಾಗಲೇ ರಾಜಗೋಪಾಲ್‌ನ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಬಳಸಿ ಯುಕೆ ಪ್ರಯಾಣಿಸಿರುವುದು ತಿಳಿದುಬಂದಿದೆ.

ಈ ಅಕ್ರಮ ನಡೆದಿದ್ದು ಹೇಗೆ?

ಆರೋಪಿ ಮೊದಲೇ ತನ್ನ ಸ್ನೇಹಿತನನ್ನು ವಿಮಾನ ನಿಲ್ದಾಣಕ್ಕೆ ಕರೆಸಿಕೊಂಡು, ತನ್ನ ಮೂಲ ದಾಖಲಾತಿಗಳನ್ನು ನೀಡಿದ್ದಾನೆ. ನಂತರ ದಾಖಲೆಗಳು ಕಳೆದುಹೋಗಿವೆ ಎಂದು ನಾಟಕವಾಡಿ ಅಧಿಕಾರಿಗಳನ್ನು ದಾರಿ ತಪ್ಪಿಸಲು ಯತ್ನಿಸಿದ್ದಾನೆ. ಯುಕೆಯಲ್ಲಿ ಶರಣಾರ್ಥಿ (refugee) ಸ್ಥಾನ ಪಡೆಯುವ ಉದ್ದೇಶದಿಂದ ಈ ಕೃತ್ಯ ನಡೆಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವನ್ನು ಬಿಐಎಎಲ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಮತ್ತೊಬ್ಬ ಆರೋಪಿ ಹೇಗೆ ಕಣ್ತಪ್ಪಿಸಿ ಪ್ರಯಾಣಿಸಿದ್ದಾನೆ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ತುಂಬಾ ಗೊಂದಲ್ಲಿದ್ದೇನೆ’; ಮುಂದಿನ ಪ್ಲ್ಯಾನ್ ಬಗ್ಗೆ ಕನ್​​ಫ್ಯೂಸ್ ಆದ ಗಿಲ್ಲಿ ನಟ – Kannada News | Gilli Nata Wins Bigg Boss: Overwhelmed by Fame, Seeks Future Direction

ಗಿಲ್ಲಿ ನಟ ಅವರಿಗೆ ಬಿಗ್ ಬಾಸ್ (Bigg Boss) ಅಲ್ಲಿ ಅಭೂತಪೂರ್ವ ಗೆಲುವು ಸಿಕ್ಕಿದೆ. 45 ಕೋಟಿಗೂ ಅಧಿಕ ಮತಗಳನ್ನು ಪಡೆದು ಗೆಲುವು ಕಂಡಿದ್ದಾರೆ. ಎರಡನೇ ಸ್ಥಾನಕ್ಕೂ ಇವರಿಗೂ ಅಜಗಜಾಂತರ ವ್ಯತ್ಯಾಸವಿದೆ ಎನ್ನಲಾಗುತ್ತಿದೆ. ಈಗ ಅವರು ಮುಂದಿನ ಪ್ಲ್ಯಾನ್ ಬಗ್ಗೆ ಮಾತನಾಡಿದ್ದಾರೆ. ಅವರು ಸಖತ್ ಗೊಂದಲ್ಲಿದ್ದಾರಂತೆ. ಆ ಬಗ್ಗೆ ವಿವರಿಸಿದ್ದಾರೆ.

ಗಿಲ್ಲಿ ನಟ ಅವರು ಗೊಂದಲದಲ್ಲೇ ಬಿಗ್ ಬಾಸ್​​ಗೆ ಬಂದರು. ಇರೋ ಅಭಿಮಾನಿಗಳನ್ನು ಕಾಪಾಡಿಕೊಂಡು ಹೋದರೆ ಸಾಕು ಎಂಬುದು ಅವರ ಆಲೋಚನೆ ಆಗಿತ್ತು. ಅವರು ಬಿಗ್ ಬಾಸ್​​ಗೆ ಹೋಗುವಾಗ ಇನ್​​ಸ್ಟಾಗ್ರಾಮ್​ ಅಲ್ಲಿ ಅವರಿಗೆ ಇದ್ದಿದ್ದು ಕೇವಲ ಒಂದು ಲಕ್ಷದಷ್ಟು ಹಿಂಬಾಲಕರು. ಆದರೆ, ಈ ಸಂಖ್ಯೆ ಈಗ 2 ಮಿಲಿಯನ್ ಅಂದರೆ 20 ಲಕ್ಷಕ್ಕೆ ಏರಿದೆ. ಇದೆಲ್ಲವೂ ಗಿಲ್ಲಿಗೆ ಶಾಕ್​ ತಂದಿದೆ.

ಗಿಲ್ಲಿ ನಟ ಅವರಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ತಿಳಿಯುತ್ತಿಲ್ಲ. ಕೆಲವರು ಗಿಲ್ಲಿಯ ಹಚ್ಚೆ ಹಾಕಿಸಿಕೊಂಡಿದ್ದಾರೆ. ರೋಡ್​​ಶೋನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದಾರೆ. ಇದೆಲ್ಲ ಗಿಲ್ಲಿಗೆ ಅಚ್ಚರಿ ತಂದಿದೆ. ಮುಂದೆ ಯಾವ ರೀತಿಯ ಹೆಜ್ಜೆ ಇಡಬೇಕು ಎಂಬ ಗೊಂದಲ ಅವರನ್ನು ಬಹುವಾಗಿ ಕಾಡುತ್ತಿದೆ.

‘ತುಂಬಾ ಗೊಂದಲ್ಲಿ ಇದ್ದೇನೆ. ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಸಾಮಾನ್ಯ ಊಟವನ್ನಾದರೆ ಮಾಡಬಹುದು. ಆದರೆ, ಮೃಷ್ಟಾನ್ನನ ಇಟ್ಟಿದ್ದಾರೆ. ಅದನ್ನು ತಿಂದು ಹೇಗೆ ಅರಗಿಸಿಕೊಳ್ಳಬೇಕು ಎಂಬುದೇ ಕನ್​ಫ್ಯೂಷನ್. ನನಗೆ ಅಷ್ಟು ಅನುಭವ ಇಲ್ಲ. ವಯಸ್ಸು ಕೂಡ ಸಣ್ಣದು. ಇದನ್ನು ಹೇಗೆ ಹ್ಯಾಂಡಲ್ ಮಾಡಬೇಕು ಗೊತ್ತಾಗುತ್ತಾ ಇಲ್ಲ’ ಎಂದಿದ್ದಾರೆ ಗಿಲ್ಲಿ ನಟ.

ಇದನ್ನೂ ಓದಿ: ‘ಹೊಸ ದಾರಿ ಕಡೆ ಮುಖ ಮಾಡೋ ಹೊತ್ತು’; ದೊಡ್ಡ ಘೋಷಣೆ ಮಾಡಿದ ಗಿಲ್ಲಿ ನಟ

ಗಿಲ್ಲಿ ನಟ ಅವರಿಗೆ ನೋಡಿ ಹೆಜ್ಜೆ ಇಡುವಂತೆ ಸುದೀಪ್ ಅವರು ಸೂಚಿಸಿದ್ದಾರೆ. ಇದನ್ನು ಪಾಲಿಸೋದಾಗಿ ಅವರು ಹೇಳಿದ್ದಾರೆ. ‘ನಾನು ಇನ್ನೂ ಶಾಕ್​​ನಿಂದ ಹೊರ ಬಂದಿಲ್ಲ’ ಎನ್ನುತ್ತಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಲವು ಯುವತಿಯರಿಗೆ ವಂಚನೆ, ಮಾಜಿ ಸಂಸದನ ಆಪ್ತನೆಂದುಕೊಂಡು ಉಂಡೆ ನಾಮ! ಬಯಲಾಯ್ತು ಮ್ಯಾಟ್ರಿಮೋನಿ ವಂಚಕನ ಕರ್ಮಕಾಂಡ – Kannada News | Matrimony Fraud Exposed: Man Cheating Women by Posing as Ex MPs Aide Arrested

ಬೆಂಗಳೂರು, ಜನವರಿ 23: ಮ್ಯಾಟ್ರಿಮೋನಿಯಲ್ಲಿ ಮದುವೆ ಆಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದಾನೆ ಎಂದು ಯುವತಿಯೊಬ್ಬರು ನೀಡಿದ ದೂರಿನ ಅನ್ವಯ ಕೆಲವು ದಿನಗಳ ಹಿಂದೆ ಬೆಂಗಳೂರಿನ (Bangalore) ಕಾಡುಗೋಡಿ ಠಾಣೆಯಲ್ಲಿ ವಿಜಯ್ ರಾಜ್ ಗೌಡ ಎಂಬಾತ ಸೇರಿ ಆತನ ಇಡೀ ಕುಟುಂಬದ ವಿರುದ್ಧ ಕೇಸ್ ದಾಖಲಾಗಿತ್ತು. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಆಸಾಮಿ ಮ್ಯಾಟ್ರಿಮೋನಿಯಲ್ಲಿ ಮೋಸ ಮಾಡಿರುವುದು ಇದೇ ಮೊದಲಲ್ಲ ಎಂಬುದು ಗೊತ್ತಾಗಿದೆ. ಕಳೆದ ಏಳೆಂಟು ವರ್ಷಗಳಿಂದ 2019 ರಿಂದಲೂ 2026 ರ ವರೆಗೆ ಹಲವಾರು ಯುವತಿಯರಿಗೆ ಮೋಸ ಮಾಡಿದ್ದು, ಕಂಡು ಬಂದಿದೆ.

2019 ರಲ್ಲಿ ಕುಣಿಗಲ್​ನಲ್ಲಿ, 2022 ರಲ್ಲಿ ಅತ್ತಿಬೆಲೆಯಲ್ಲಿ 2023 ರಲ್ಲಿ ಶಿವಮೊಗ್ಗ, 2025 ರಲ್ಲಿ ಬೆಂಗಳೂರು, 2026 ರಲ್ಲಿ ಕಾಡುಗೋಡಿ ಠಾಣೆಯಲ್ಲಿ ಕೇಸ್ ದಾಖಲಾಗಿವೆ. ಮ್ಯಾಟ್ರಿಮೋನಿಯಲ್ಲಿ ಪರಿಚಯ ಆದ ನಂತರ, ‘ನಾನು ದೊಡ್ಡ ಉದ್ಯಮಿ, ಇಡಿಯಲ್ಲಿ ಕೇಸ್ ಒಂದರ ಸಂಬಂದ ಹಣ ಪ್ರೀಜ್ ಆಗಿದೆ. ಅದನ್ನು ರಿಲೀಸ್ ಮಾಡಿಸಲು ಹಣ ಬೇಕು’ ಎಂದು ಹೇಳುತ್ತಿದ್ದ. ಅಲ್ಲದೆ, ಲಕ್ಷ ಲಕ್ಷ ಹಣ ಬ್ಯಾಂಕ್​ನಲ್ಲಿ ಪ್ರೀಜ್ ಆಗಿರುವುದಕ್ಕೆ ಬೇಕಾದ ನಕಲಿ ದಾಖಲೆಗಳನ್ನು, ಕೋರ್ಟ್ ಪ್ರತಿಗಳನ್ನು ತೋರಿಸಿ ಹಣ ಪಡೆದುಕೊಂಡು ನಂತರ ಪೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗುತ್ತಿದ್ದ.

ಹೀಗೆ ಒಬ್ಬೊಬರಿಂದ 10 ಲಕ್ಷ, 30 ಲಕ್ಷ, 13 ಲಕ್ಷ ಪಡೆದಿದ್ದಾನೆ. ಕೆಂಗೇರಿಯಲ್ಲಿ 1.53 ಕೋಟಿ ರೂ. ಹಣ ಪಡೆದುಕೊಂಡು ಹೆಂಡತಿಯನ್ನು ಅಕ್ಕ ಎಂದು ಪರಿಚಯ ಮಾಡಿಕೊಟ್ಟಿದ್ದ.

ಮಾಜಿ ಸಂಸದ ಡಿಕೆ ಸುರೇಶ್ ಹೆಸರು ದುರ್ಬಳಕೆ

ಈ ಆರೋಪಿ ಟೆಂಡರ್ ಕೊಡಿಸುವ ಡೀಲ್​​ನಲ್ಲಿ ಕುಣಿಗಲ್​​ನಲ್ಲಿ ಮಾಜಿ ಸಂಸದ ಡಿಕೆ ಸುರೇಶ್ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪವೂ ಇದೆ. ಡಿಕೆ ಸುರೇಶ್ ನನಗೆ ಆಪ್ತರು ಎಂದು ಹೇಳಿಕೊಂಡು ಟೆಂಡರ್ ಕೊಡಿಸುವುದಾಗಿ ನಂಬಿಸಿದ್ದ. ಟಾಟಾ ಪವರ್ ಡಿಡಿಎಲ್ ಕಂಪನಿಗೆ ವಾಹನದ ಗುತ್ತಿಗೆ ಕೊಡಿಸುವುದಾಗಿ ಕೂಡ ಹೇಳಿದ್ದ. 2019 ರಲ್ಲಿ ಕುಣಿಗಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಾಜೆಕ್ಟ್ ಕೊಡಿಸುವುದಕ್ಕೆ ನಕಲಿ ಸಹಿ ಸೀಲ್ ರೆಡಿ ಉಪಯೋಗಿಸಿಕೊಂಡು ವಂಚನೆ ಮಾಡಿದ್ದ.

ಆನೇಕಲ್​​ನಲ್ಲಿ ಸಿಮೆಂಟ್ ಫ್ಯಾಕ್ಟರಿಯನ್ನು ಮಾರಾಟ ಮಾಡಿ ಹಣ ಪಾವಸ್ ಕೊಡುತ್ತೇನೆ ಎಂದು ನಂಬಿಸಿ ಯುವತಿಗೆ ಮೋಸ ಮಾಡಿದ್ದ. ಆರೋಪಿ ವಿರುದ್ಧ ಶಿವಮೊಗ್ಗ, ಆನೇಕಲ್, ಅತ್ತಿಬೆಲೆ, ಬೆಂಗಳೂರು ಉತ್ತರ ವಿಭಾಗದ ಸೆನ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಹೀಗೆ ಕಳೆದ ಕೆಲವು ವರ್ಷಗಳಿಂದ ಮೋಸ, ವಂಚನೆ ಮಾಡಿಕೊಂಡು ಜೀವನ ನಡೆಸುತ್ತಿರುವ ಆರೋಪಿ ಈಗ ಲಾಕ್ ಆಗಿದ್ದಾನೆ.

ಇದನ್ನೂ ಓದಿ: ಪತ್ನಿಯನ್ನೇ ಅಕ್ಕ ಎಂದು ಪರಿಚಯಿಸಿ ಮತ್ತೊಬ್ಬಳಿಗೆ ಗಾಳ! ಬರೋಬ್ಬರಿ 1.53 ಕೋಟಿ ರೂ. ವಂಚನೆ

ಒಟ್ಟಿನಲ್ಲಿ ತಂದೆಯನ್ನು ನಿವೃತ್ತ ತಹಶೀಲ್ದಾರ್, ಹೆಂಡತಿಯನ್ನು ಅಕ್ಕ, ತಾಯಿಯನ್ನು ಪ್ರೊಫೆಸರ್ ಎಂದು ಹೇಳಿಕೊಂಡಿದ್ದ ವಂಚಕನ ಕುಟುಂಬ ಇವನಿಗೆ ಸಾಥ್ ಕೊಟ್ಟಿರುವುದು ಮಾತ್ರ ದುರಂತ. ಆರೋಪಿ ವಿರುದ್ದ ಮತ್ತಷ್ಟು ಪ್ರಕರಣಗಳು ದಾಖಲಾಗುವ ಸಾಧ್ಯತೆಗಳಿದ್ದು, ವಂಚನೆಗೊಳಾಗದವರು ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ಶಿವಮೊಗ್ಗ, ಬಳ್ಳಾರಿ ಏರ್ ಕ್ವಾಲಿಟಿಯಲ್ಲಿ ಕುಸಿತ; ಬೆಂಗಳೂರಿಗಿಂತಲೂ ಕಳಪೆ AQI – Kannada News | Bangalore Air Pollution Crisis: Shivamogga and Ballari have Air quality worse than Bengaluru

ಶಿವಮೊಗ್ಗ ಮತ್ತು ಬಳ್ಳಾರಿಯಲ್ಲಿ ಕಳಪೆ ಏರ್ ಕ್ವಾಲಿಟಿ

ಬೆಂಗಳೂರು, ಜನವರಿ 23: ಬೆಂಗಳೂರಿನ ಗಾಳಿಯ ಗುಣಮಟ್ಟ 162 ಇದ್ದು, ಏರ್ ಕ್ವಾಲಿಟಿ (Bengaluru Air Quality) ಅನಾರೋಗ್ಯಕಾರಿ ಹಂತದಲ್ಲೇ ಇದೆ. ಆದರೆ ಬೆಂಗಳೂರನ್ನೂ ಮೀರಿಸುವ ಹಂತಕ್ಕೆ ತಲುಪಿರುವುದು ಶಿವಮೊಗ್ಗ ಮತ್ತು ಬಳ್ಳಾರಿಯ ವಾಯು ಗುಣಮಟ್ಟ. ಕೆಲ ದಿನಗಳಿಂದ 100ರ ಆಸುಪಾಸಿನಲ್ಲಿದ್ದ ಶಿವಮೊಗ್ಗದ ಏರ್ ಕ್ವಾಲಿಟಿ ಇಂದು ಒಮ್ಮೆಲೇ ಬೆಂಗಳೂರಿಗಿಂತಲೂ ಹೆಚ್ಚಿನ AQIಗೆ ತಲುಪಿದೆ. ಇದರಿಂದ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಹಾಗೂ ಉಸಿರಾಟ ಸಮಸ್ಯೆ ಇರುವವರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಕೆಲ ದಿನಗಳ ಹಿಂದೆ ಶಿವಮೊಗ್ಗದ ಗಾಳಿಯ ಗುಣಮಟ್ಟ ನೂರರ ಆಸುಪಾಸಿನಲ್ಲಿತ್ತು. ಆದರಿಂದು ಏಕಾಏಕಿ 175ಕ್ಕೆ ತಲುಪಿರುವುದು ಆತಂಕ ಸೃಷ್ಟಿಸಿದೆ. ಬಳ್ಳಾರಿಯೂ 178 AQI ಹೊಂದಿದ್ದು, ಬೆಂಗಳೂರಿಗಿಂತ ಕಳಪೆ ಗುಣಮಟ್ಟದ ಏರ್ ಕ್ವಾಲಿಟಿಯಾಗಿದೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ.

ಬೆಂಗಳೂರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಿತಿಗಿಂತ 5 ಪಟ್ಟು ಹೆಚ್ಚಿರುವ ಸೂಕ್ಷ್ಮ ಕಣಗಳ ಪ್ರಮಾಣ ಆತಂಕಕಾರಿಯಾಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –162
  • ಮಂಗಳೂರು-156
  • ಮೈಸೂರು –94
  • ಬೆಳಗಾವಿ – 138
  • ಕಲಬುರ್ಗಿ-129
  • ಶಿವಮೊಗ್ಗ – 175
  • ಬಳ್ಳಾರಿ – 178
  • ಹುಬ್ಬಳ್ಳಿ- 156
  • ಉಡುಪಿ –157
  • ವಿಜಯಪುರ –111

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾತ್ರಿ 8 ಗಂಟೆಯ ಮೇಲೆ ಯಾರಿಗೂ ಸಿಗಲ್ಲ ಅಮಿತಾಭ್; ಕಾರಣ ಏನು? – Kannada News | Amitabh Bachchan’s Strict Routine: No Industry Meetings After 8 PM and His Unwavering Discipline

ಅಮಿತಾಭ್ ಬಚ್ಚನ್ (Amitabh Bachchan) ಅವರು ಬಾಲಿವುಡ್ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು. ಸಿನಿಮಾ ರಂಗದಲ್ಲಿ ಅವರು ಐದು ದಶಕಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಸಿನಿಮಾ ಮಾತ್ರವಲ್ಲದೆ, ಕಿರುತೆರೆಯಲ್ಲೂ ಅವರು ಆ್ಯಕ್ಟೀವ್ ಆಗಿದ್ದಾರೆ. ಅವರು ತುಂಬಾನೇ ಶಿಸ್ತಿನ ವ್ಯಕ್ತಿ. ನಟನೆಯ ಜೊತೆಗೆ ಅವರು ಶಿಸ್ತನ್ನು ರೂಢಿಸಿಕೊಂಡು ಬಂದಿದ್ದಾರೆ. ಅವರನ್ನು ರಾತ್ರಿ 8 ಗಂಟೆ ಬಳಿಕ ಇಂಡಸ್ಟ್ರಿಯವರು ಭೇಟಿ ಮಾಡಲು ಸಾಧ್ಯವಿಲ್ಲ.

ಸಾಮಾನ್ಯವಾಗಿ ಬಾಲಿವುಡ್ ಹೀರೋಗಳು ಹೆಚ್ಚೆಚ್ಚು ಪಾರ್ಟಿ ಮಾಡೋಕೆ ಇಷ್ಟಪಡುತ್ತಾರೆ. ಅವರ ರಾತ್ರಿ ಜೀವನವೇ ಬೇರೆ ರೀತಿ ಇರುತ್ತದೆ. ಬೇರೆ ಹೀರೋಗಳು ಕರೆದರು ಎಂದು ಪಾರ್ಟಿಗೆ ಜಾಯಿನ್ ಆಗುತ್ತಾರೆ. ಇಲ್ಲವೇ ಸಿನಿಮಾ ಶೂಟ್​​​ನಲ್ಲಿ ರಾತ್ರಿಯಿಡಿ ಪಾಲ್ಗೊಳ್ಳುತ್ತಾರೆ. ಆದರೆ, ಖಾಸಗಿ ಜೀವನವನ್ನು ಅಮಿತಾಭ್ ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದು, ಒಂದಷ್ಟು ನಿಯಮಗಳನ್ನು ಹಾಕಿಕೊಂಡಿದ್ದಾರೆ.

ರಾಜಾ ಬುಂದೇಲಾ ಅವರು ಅಮಿತಾಭ್ ಬಚ್ಚನ್ ಜೊತೆ 1989ರ ‘ಮೇ ಆಜಾದ್ ಹೂ’ ಸಿನಿಮಾದಲ್ಲಿ ನಟಿಸಿದ್ದರು. ಅವರು ಅಮಿತಾಭ್ ಕುರಿತ ಒಂದಷ್ಟು ವಿಷಗಳನ್ನು ಹಂಚಿಕೊಂಡಿದ್ದಾರೆ. ‘ಅಮಿತಾಭ್ ಬಚ್ಚನ್ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ನಾನು ಅವರ ಜೊತೆ ಒಂದು ಸಿನಿಮಾ ಮಾಡಿದ್ದೆ. ಅವರಿಗೆ ಎಲ್ಲಾ ಸಂಭಾಷಣೆಗಳು ಚೆನ್ನಾಗಿ ನೆನಪಿದ್ದವು’ ಎಂದಿದ್ದಾರೆ.

‘ಒಮ್ಮೆ ನಾವು ಗೋವಾದಲ್ಲಿ ಚಿತ್ರೀಕರಣ ಮಾಡುತ್ತಿದ್ದಾಗ, ಅಮಿತಾಭ್ ಬಚ್ಚನ್ ಮುಂಬೈನಲ್ಲಿಯೇ ಉಳಿದುಹೋಗಿವೆ ಎಂದು ತಿಳಿದುಬಂತು. ಈ ಹಿಂದೆ ಅದೇ ಶೂನಲ್ಲಿ ಶೂಟ್ ಮಾಡಿದ್ದರಿಂದ ಕಂಟ್ಯೂನಿಟಿಗೆ ಅದೇ ಶೋಗಳು ಬೇಕಾಗಿದ್ದವು. ಆ ದಿನಗಳಲ್ಲಿ ವಿಮಾನದ ಕನೆಕ್ಟಿವಿಟಿ ಇಷ್ಟಾಗಿ ಇರಲಿಲ್ಲ’ ಎಂದಿದ್ದಾರೆ ಅವರು.
‘ಮರುದಿನ ಶೂಟ್ ಇರಲ್ಲ ಎಂದು ಎಲ್ಲರೂ ಖುಷಿಪಟ್ಟರು. ಆದರೆ, ಅಮಿತಾಭ್ ಅದೇ ಶೋಗಳ ಜೊತೆ ಮರುದಿನ 7.30ಕ್ಕೆ ಸೆಟ್​​​ನಲ್ಲಿ ಇದ್ದರು. ಅದು ಶಿಸ್ತು’ ಎಂದಿದ್ದಾರೆ ಬುಂದೇಲಾ.

ಇದನ್ನೂ ಓದಿ: ಅಮಿತಾಭ್ ಬಚ್ಚನ್ ಮನೆಯಲ್ಲಿದೆ ಚಿನ್ನದ ಟಾಯ್ಲೆಟ್

‘ಅವರು ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ಮಾಡುತ್ತಾರೆ. ನಾವು ಅವರ ಮನೆಯಲ್ಲಿ ಭೇಟಿಯಾದಾಗಲೂ ಅವರು ಎಂದಿಗೂ ಗಾಸಿಪ್ ಮಾಡುತ್ತಿರಲಿಲ್ಲ. ನಾನು ಕೇಳಿರುವಂತೆ, ರಾತ್ರಿ 8 ಗಂಟೆಯ ನಂತರ ಅವರು ಉದ್ಯಮದ ಯಾರನ್ನೂ ತಮ್ಮ ಮನೆಗೆ ಬಿಡುತ್ತಿರಲಿಲ್ಲ. ಅವರು ತಮ್ಮ ಬಾಗಿಲುಗಳಿಗೆ ಬೀಗ ಹಾಕಿಕೊಳ್ಳುತ್ತಿದ್ದರು. ಅವರು ತಮ್ಮ ವ್ಯವಹಾರ ಮತ್ತು ಕುಟುಂಬದ ನಡುವೆ ಆ ಸಮತೋಲನವನ್ನು ಕಾಯ್ದುಕೊಳ್ಳಲು ಇಷ್ಟಪಡುತ್ತಾರೆ’ ಎಂದಿದ್ದಾರೆ ರಾಜಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:07 am, Fri, 23 January 26

Source link

ಮನೆಕೆಲಸಕ್ಕೆಂದು 10 ವರ್ಷದ ಬಾಲಕಿಯ ಕರೆತಂದು ಬೆನ್ನು ಮೂಳೆ ಮುರಿಯುವಂತೆ ಚಿತ್ರಹಿಂಸೆ ಕೊಟ್ಟ ಸಿಆರ್​ಪಿಎಫ್ ಕಾನ್​ಸ್ಟೆಬಲ್ – Kannada News | CRPF Couple Arrested: 10 Year Old Maid Severely Tortured, Spine Fractured in Noida

ಬಾಲಕಿ-ಸಾಂದರ್ಭಿಕ ಚಿತ್ರImage Credit source: Vector Solutions

ನೋಯ್ಡಾ, ಜನವರಿ 23: ಮನೆಗೆಲಸಕ್ಕೆಂದು 10 ವರ್ಷದ ಬಾಲಕಿ(Girl)ಯ ಕರೆತಂದು ಸರಿಯಾಗಿ ಆಹಾರವನ್ನೂ ನೀಡದೆ, ಬೆನ್ನು ಮೂಳೆ ಮುರಿಯುವಂತೆ ಹೊಡೆದು ಚಿತ್ರ ಹಿಂಸೆ ಕೊಟ್ಟ ಸಿಆರ್​ಪಿಎಫ್ ಕಾನ್​ಸ್ಟೆಬಲ್ ಮತ್ತವರ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಗ್ರೇಟರ್ ನೋಯ್ಡಾದಲ್ಲಿ ಘಟನೆ ನಡೆದಿದೆ. ಬಾಲಕಿ ಗಂಭೀರವಾಗಿ ಗಾಯಗೊಂಡು ವೆಂಟಿಲೇಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಬಾಲಕಿಯನ್ನು ದಂಪತಿ ಮನೆಗೆಲಸಕ್ಕೆಂದು ಕರೆತಂದು ತಮ್ಮ ಸೋದರ ಸೊಸೆ ಎಂದು ಸುಳ್ಳು ಹೇಳಿದ್ದರು. ಕೇಂದ್ರ ಮೀಸಲು ಪೊಲೀಸ್ ಪಡೆಯ 235 ನೇ ಬೆಟಾಲಿಯನ್‌ನಲ್ಲಿ ನಿಯೋಜಿತರಾಗಿದ್ದ ಕಾನ್‌ಸ್ಟೆಬಲ್ ಜಿಡಿ ತಾರಿಕ್ ಅನ್ವರ್, ಅವಳು ತನ್ನ ಪತ್ನಿ ರಿಂಪಾ ಖಾತುನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಹಿರಿಯ ಅಧಿಕಾರಿಗಳಿಂದ ಔಪಚಾರಿಕ ಅನುಮತಿಯಿಲ್ಲದೆ ಬಾಲಕಿ ಸಿಆರ್‌ಪಿಎಫ್ ಕ್ಯಾಂಪಸ್‌ನಲ್ಲಿ ದಂಪತಿಯೊಂದಿಗೆ ಬಾಲಕಿ ವಾಸವಿದ್ದಳು.

ಸಿಆರ್‌ಪಿಎಫ್ ಶಿಬಿರದಲ್ಲಿ ನಿಯೋಜಿಸಲಾದ ಸುಬೇದಾರ್ ಮೇಜರ್ ಭಾನುವಾರ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಇಕೋಟೆಕ್ 3 ಸಿಆರ್‌ಪಿಎಫ್ ಕ್ಯಾಂಪಸ್‌ನೊಳಗೆ ಬ್ಲಾಕ್ 60 ರ ಕ್ವಾರ್ಟರ್ ಸಂಖ್ಯೆ 13 ರಲ್ಲಿ ವಾಸಿಸುತ್ತಿದ್ದರು ಮತ್ತು ಬಾಲಕಿಗೆ ತಮ್ಮ ಮಕ್ಕಳನ್ನು ನೋಡಿಕೊಳ್ಳುವುದು ಸೇರಿದಂತೆ ಮನೆಕೆಲಸಗಳನ್ನು ಕೊಡಲಾಗುತ್ತಿತ್ತು ಮತ್ತು ಥಳಿಸಲಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮತ್ತಷ್ಟು ಓದಿ: ಅಪರಿಚಿತರೊಂದಿಗೆ ನಾನು ಮಾತನಾಡಲ್ಲ ಎಂದಿದ್ದಕ್ಕೆ ಬಾಲಕಿ ಮೇಲೆ ಆ್ಯಸಿಡ್ ಎರಚಿದ ಫೋಟೊಗ್ರಾಫರ್

ಜನವರಿ 15 ರ ಮಧ್ಯರಾತ್ರಿ, ಬಾಲಕಿಯನ್ನು ದಂಪತಿ ಕ್ರೂರವಾಗಿ ಥಳಿಸಿದ್ದರಿಂದ ತೀವ್ರ ಗಾಯಗಳಾಗಿತ್ತ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆಕೆಯನ್ನು ಸಿಆರ್‌ಪಿಎಫ್ ಆಸ್ಪತ್ರೆಗೆ ಕರೆದೊಯ್ಯುವ ಬದಲು, ಅನ್ವರ್ ಆಕೆಯನ್ನು ಸರ್ವೋದಯ ಆಸ್ಪತ್ರೆಗೆ ದಾಖಲಿಸಿದ್ದರು ಬಾಲಕಿ ಸ್ನಾನ ಮಾಡುವಾಗ ಎಡವಿ ಬಿದ್ದಿದ್ದಾಳೆ ಎಂದು ಕಥೆ ಕಟ್ಟಿದ್ದರು.

ವೈದ್ಯರು ಆಕೆಯ ಪಕ್ಕೆಲುಬು ಮುರಿದಿದೆ, ಕಾಲುಗಳಲ್ಲಿ ಊತವಿದೆ, ಕಣ್ಣಿನ ಸುತ್ತ ಚರ್ಮ ಕಪ್ಪುಗಟ್ಟಿದೆ, ತಲೆ ಮತ್ತು ಎದೆಯ ಮೇಲೆ ಆಳವಾದ ಗಾಯಗಳಿವೆ. ಬಾಲಕಿಗೆ ಆಹಾರವನ್ನೂ ಕೊಟ್ಟಿಲ್ಲ ಹಿಮೋಗ್ಲೋಬಿನ್ ಮಟ್ಟವೂ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.

ಜನವರಿ 15 ರಂದು ಮಗುವನ್ನು ಗಂಭೀರ ಸ್ಥಿತಿಯಲ್ಲಿ ತುರ್ತು ವಿಭಾಗಕ್ಕೆ ಕರೆತರಲಾಯಿತು, ಈಗಾಗಲೇ ವೆಂಟಿಲೇಟರ್ ಬೆಂಬಲದೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅನ್ವರ್ ಅವರನ್ನು ಅಮಾನತುಗೊಳಿಸಲಾಗಿದೆ. ಬಾಲಕಿಯ ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಆ ವಿಷಯಕ್ಕೆ ಜಮೀರ್-ಝೈದ್ ಮಧ್ಯೆ ಆಗಿದೆ ಸಾಕಷ್ಟು ಜಗಳ; ವಿವರಿಸಿದ ನಟ – Kannada News | Cult Hero Zaid Khan’s Film Passion Clashes with Zameer’s Business Push

ಸಚಿವ ಜಮೀರ್ ಅಹ್ಮದ್ ಖಾನ್ ಮಗ ಝೈದ್ ಖಾನ್ (Zaid Khan) ಅವರು ‘ಬನಾರಸ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಈಗ ಅವರು ‘ಕಲ್ಟ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಇಂದು (ಜನವರಿ 23) ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರ ಎ ಪ್ರಮಾಣ ಪತ್ರ ಪಡೆದುಕೊಂಡಿದೆ. ಸಿನಿಮಾ ಸಖತ್ ರಾ ಆಗಿರೋದು ಇದಕ್ಕೆ ಕಾರಣ. ಈಗ ಝೈದ್ ಖಾನ್ ಅವರು ತಂದೆ ಜೊತೆ ಆಗೋ ಕಿರಿಕ್​​​ಗಳ ಬಗ್ಗೆ ಮಾತನಾಡಿದ್ದಾರೆ. ಒಂದು ವಿಷಯದಲ್ಲಿ ಇಬ್ಬರ ಮಧ್ಯೆ ಸಾಕಷ್ಟು ಜಗಳ ಆಗಿದೆಯಂತೆ.

ಸಾಮಾನ್ಯವಾಗಿ ರಾಜಕಾರಣಿಗಳ ಮಕ್ಕಳು ರಾಜಕೀಯದಲ್ಲೇ ಮುಂದುವರಿಯುವ ಪ್ರಯತ್ನ ಮಾಡುತ್ತಾರೆ. ಪಾಲಕರಿಗೂ ಇದೆ ಹಾರೈಕೆ ಇರುತ್ತದೆ. ಆದರೆ, ಜಮೀರ್​​ಗೆ ಇದು ಇಷ್ಟ ಇಲ್ಲ. ಸದ್ಯಕ್ಕೆ ಅವರು ಸಿನಿಮಾ ರಂಗದಲ್ಲಿ ನಟನಾಗಿ ಮಿಂಚುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ಝೈದ್ ಖಾನ್ ಅವರು ತಂದೆಯ ಬಗ್ಗೆ ಮಾತನಾಡಿದ್ದಾರೆ.

‘ಕೆಲಸ ಎಂಬುದು ಬಂದರೆ ನಾನು ರಾಕ್ಷಸ. ನನ್ನ ನೂರರಷ್ಟು ಶ್ರಮ ಹಾಕುತ್ತೇನೆ . ಆದರೆ, ಕೆಲಸ ಇಲ್ಲ ಎಂದರೆ ನಾನು ಬೆಡ್ ಮೇಲೆ ಇರುತ್ತೇನೆ. ಯಾವಾಗಲೂ ಸುದ್ದಿಯಲ್ಲಿರಬೇಕು, ಕಾಣಿಸಿಕೊಳ್ಳುತ್ತಾ ಇರಬೇಕು ಎಂಬುದು ನಂಗೆ ಇಲ್ಲ. ನನಗೆ ನನ್ನದೇ ಆದ ಖಾಸಗಿ ಜೀವನ ಇದೆ’ ಎಂದಿದ್ದಾರೆ ಝದ್ ಖಾನ್.

ಇದನ್ನೂ ಓದಿ: ‘ನನ್ನ ಸಿನಿಮಾ ಯಾಕೆ ಕೊಲ್ತೀರ?’ ದುನಿಯಾ ವಿಜಿಯ ಪ್ರಶ್ನಿಸಿದ ಝೈದ್ ಖಾನ್, ಉತ್ತರ ಏನಿತ್ತು?

‘ಸಿನಿಮಾ ಇಂಡಸ್ಟ್ರಿಗೆ ನಾನು ಪ್ಯಾಷನ್​​ಗೆ ಬಂದಿದ್ದು. ನನ್ನ ಮನೆಯ ಬಿಸ್ನೆಸ್​​​ನ ನಡೆಸಿಕೊಂಡು ಹೋಗುವ ಜವಾಬ್ದಾರಿ ನನಗೆ ಇದೆ. ತಂದೆ ದುಡ್ಡು ಕೊಡ್ತಾರೆ ಎಂದು ಬದುಕೋದು ಜೀವನ ಅಲ್ಲ’ ಎಂದಿದ್ದಾರೆ ಅವರು.
‘ಸಿನಿಮಾ ಕರಿಯರ್​​ಗೆ ಹೋಗೋವಾಗ ತಂದೆ ಬಿಸ್ನೆಸ್ ಮಾಡುವಂತೆ ಸೂಚಿಸಿದ್ದರು. ದುಡ್ಡು ಬೇಕಿದ್ರೂ ಕೊಡ್ತೀನಿ ಎಂದರು. ನಾನು ರಾಜಕೀಯಕ್ಕೆ ಬರೋದು ಅವರಿಗೆ ಇಷ್ಟ ಇಲ್ಲ. ಬಿಸ್ನೆಸ್ ಮಾಡಬೇಕು ಎಂಬ ವಿಷಯಕ್ಕೆ ನನ್ನ ತಂದೆ ಹಾಗೂ ನನ್ನ ಮಧ್ಯೆ ಸಾಕಷ್ಟು ಜಗಳ ಆಗಿದೆ’ ಎಂದು ಝೈದ್ ಖಾನ್ ವಿವರಿಸಿದ್ದಾರೆ.

ತಂದೆಯ ಜೊತೆಗಿನ ಜಗಳದ ಬಗ್ಗೆ ವಿಡಿಯೋ ಅಂತ್ಯದಲ್ಲಿ ಝೈದ್ ಮಾತನಾಡಿದ್ದಾರೆ

ಝೈದ್ ಖಾನ್ ಅವರು ಚಿತ್ರರಂಗಕ್ಕೆ ಬರುತ್ತಾರೆ ಎಂದಾಗ ಅವರೇ ಎಲ್ಲವನ್ನೂ ಪ್ಲ್ಯಾನ್ ಮಾಡಿಕೊಂಡು ಬಂದರು. ಅವರಿಗೆ ತಂದೆಯ ಬೆಂಬಲ ಅಷ್ಟಾಗಿ ಸಿಕ್ಕಿಲ್ಲವಂತೆ. ತಂದೆ ಕೂಡ ಅವರ ಸಿನಿಮಾ ಕಾರ್ಯಕ್ರಮಗಳಿಗೆ ಬರೋದು ಕಡಿಮೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version