ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯಲು ಅಮೆರಿಕ ಬಲ ಪ್ರಯೋಗ ಮಾಡುವುದಿಲ್ಲ: ಡೊನಾಲ್ಡ್ ಟ್ರಂಪ್ – Kannada News | Greenland Acquisition: Trump Drops Force, Prioritizes Talks for US Security
ವಾಷಿಂಗ್ಟನ್, ಜನವರಿ 22: ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕವು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ದಾವೋಸ್ನಲ್ಲಿ ಮಾಡಿರುವ ಭಾಷಣದಲ್ಲಿ ಹೇಳಿದ್ದಾರೆ. ಭಾಷಣದ ಸಮಯದಲ್ಲಿ ಡ್ಯಾನಿಶ್ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಬೇಕೆಂಬ ತಮ್ಮ ಬೇಡಿಕೆಗೆ ದೃಢವಾಗಿ ಅಂಟಿಕೊಂಡಿದ್ದಾರೆ. ಅಮೆರಿಕ ಹೊರತುಪಡಿಸಿ ಬೇರೆ ಯಾವುದೇ ರಾಷ್ಟ್ರವು ಗ್ರೀನ್‌ಲ್ಯಾಂಡ್ ಅನ್ನು ಸುರಕ್ಷಿತವಾಗಿಡಲು ಸಾಧ್ಯವಿಲ್ಲ ಮತ್ತು ಆದ್ದರಿಂದ ಯುರೋಪಿಯನ್ ನಾಯಕರು ಸ್ವ-ಆಡಳಿತ ದ್ವೀಪವನ್ನು ಅಮೆರಿಕದ ನಿಯಂತ್ರಣಕ್ಕೆ ವರ್ಗಾಯಿಸುವುದು ಅತ್ಯಗತ್ಯ ಎಂದು ಟ್ರಂಪ್ ಪ್ರತಿಪಾದಿಸಿದರು. ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕ ಸ್ವಾಧೀನಪಡಿಸಿಕೊಳ್ಳುವ…