ಇದು “ತೆರಿಗೆ ಅಥವಾ ಸುಲಿಗೆ?”: ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಬೆಂಗಳೂರು, ಏ.21: ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೈಕಲ್ ಮತ್ತು ದ್ವಿಚಕ್ರ ವಾಹನಗಳಿಗೆ ಟೋಲ್ ಮುಕ್ತ ಸಂಚಾರಕ್ಕೆ ಅವಕಾಶವಿರುವುದು ಸಾಮಾನ್ಯ. ಆದರೆ, ಬೆಂಗಳೂರಿನ ಈ ನಿರ್ದಿಷ್ಟ ಕಾರಿಡಾರ್‌ನಲ್ಲಿ ಸೈಕಲ್ ಸವಾರನೊಬ್ಬನಿಂದ 25 ರೂ. ಟೋಲ್ ವಸೂಲಿ ಮಾಡಿರುವ ವಿಡಿಯೋ ಈಗ “ತೆರಿಗೆ ಅಥವಾ ಸುಲಿಗೆ?” ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಸೈಕಲ್ ಸವಾರ ಟೋಲ್ ಬೂತ್‌ನಲ್ಲಿ ನಿಂತು ನಗದು ಹಣ ನೀಡುತ್ತಿರುವುದು ಮತ್ತು ಸಿಬ್ಬಂದಿ ಅದನ್ನು ಸ್ವೀಕರಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸರ್ಕಾರಿ ಸ್ವಾಮ್ಯದ ರಸ್ತೆಗಳಲ್ಲಿ ಸೈಕಲ್‌ಗಳಿಗೆ…