Pahalgam Attack: ಹಸಿರು ಕಣಿವೆಯಲ್ಲಿ ಹರಿಯಿತು ಅಮಾಯಕರ ರಕ್ತ: ವರ್ಷ ಕಳೆದರೂ ಚೇತರಿಸಿಕೊಳ್ಳದ ಪಹಲ್ಗಾಮ್ ಸಂತ್ರಸ್ತ ಕುಟುಂಬಗಳು – Kannada News | Pahalgam Terror Attack: One Year On, Survivors Still Battle Trauma and Loss
ಬೈಸರನ್, ಏಪ್ರಿಲ್ 22: ಮಿನಿ ಸ್ವಿಟ್ಜರ್ಲೆಂಡ್ ಎಂದು ಕರೆಯಲ್ಪಡುವ ಪಹಲ್ಗಾಮ್(Pahalgam)ನ ಬೈಸರನ್ ಕಣಿವೆಯಲ್ಲಿ ಇಂದು ಪ್ರವಾಸಿಗರ ಗದ್ದಲವಿರಬಹುದು, ಆದರೆ ಒಂದು ವರ್ಷದ ಹಿಂದೆ ಅಲ್ಲಿ ಕೇಳಿಬಂದ ಗುಂಡಿನ ಚಕಮಕಿ ಮತ್ತು ಸಾವು-ನೋವಿನ ಆಕ್ರಂದನ ಇಂದಿಗೂ ಅಲ್ಲಿನ ಗಾಳಿಯಲ್ಲಿ ಪ್ರತಿಧ್ವನಿಸುತ್ತಿದೆ. ಅಮಾಯಕ ಪ್ರವಾಸಿಗರನ್ನು, ವಿಶೇಷವಾಗಿ ಪುರುಷರನ್ನು ಗುರಿಯಾಗಿಸಿಕೊಂಡು ನಡೆದ ಆ ದಾಳಿ ಅನೇಕ ಸುಂದರ ಕುಟುಂಬಗಳನ್ನು ಛಿದ್ರಗೊಳಿಸಿದೆ. ಸಂತೋಷದ ಪ್ರವಾಸ ನೋವಿನಲ್ಲಿ ಅಂತ್ಯ ವಿಶಾಖಪಟ್ಟಣಂನ ನಿವೃತ್ತ ಬ್ಯಾಂಕ್ ಅಧಿಕಾರಿ, 68 ವರ್ಷದ ಚಂದ್ರಮೌಳಿ ಅವರು ತಮ್ಮ ಪತ್ನಿ ನಾಗಮಣಿ…