ಬೆಂಗಳೂರು, ಜನವರಿ 22: ಕರ್ನಾಟಕ ವಿಧಾನಸಭೆ ವಿಶೇಷ ಅಧಿವೇಶನದ ಆರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಒಂದೇ ವಾಕ್ಯದಲ್ಲಿ ಭಾಷಣ ಮುಗಿಸಿ ನಿರ್ಗಮಿಸುವ ವೇಳೆ ನಡೆದ ಹೈಡ್ರಾಮಾದಲ್ಲಿ ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ ಬಟ್ಟೆ ಹರಿದಿದೆ. ಬಿಜೆಪಿಯವರೇ ಬಟ್ಟೆ ಎಳೆದು ಹರಿದಿದ್ದಾರೆ ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ. ರಾಜ್ಯಪಾಲರು ವಿಧಾನಸಭೆಯಿಂದ ಹೊರಗೆ ತೆರಳುತ್ತಿದ್ದ ವೇಳೆ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಐವಾನ್ ಡಿಸೋಜಾ, ಶಾಸಕರಾದ ಶರತ್ ಬಚ್ಚೇಗೌಡ, ಪ್ರದೀಪ್ ಈಶ್ವರ್, ಹೆಚ್.ಸಿ. ಬಾಲಕೃಷ್ಣ ಘೋಷಣೆ ಕೂಗುತ್ತಿದ್ದರು. ಈ ವೇಳೆ ಬಿ.ಕೆ. ಹರಿಪ್ರಸಾದ್ ಅವರನ್ನು ಮಾರ್ಷಲ್ಗಳು ಅಲುಗಾಡಲು ಸಾಧ್ಯವಾಗದಂತೆ ಪಕ್ಕಕ್ಕೆ ಎಳೆದೊಯ್ದಿದ್ದು ಬಿಟ್ಟಿದ್ದು ವಿಡಿಯೋದಲ್ಲಿ ಕಾಣಿಸಿದೆ. ಇದರಿಂದ ಸಿಟ್ಟಿಗೆದ್ದ ಬಿ.ಕೆ. ಹರಿಪ್ರಸಾದ್ ಮತ್ತು ಹೆಚ್.ಸಿ. ಬಾಲಕೃಷ್ಣ ವಾಪಸ್ ಬಂದು ಮಾರ್ಷಲ್ ಹಿಡಿದು ಎಳೆದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ, ಹರಿಪ್ರಸಾದ್ ಬಟ್ಟೆ ಹರಿದಿದೆ ಎನ್ನಲಾಗಿದೆ. ವಿಡಿಯೋ ಇಲ್ಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬೆಂಗಳೂರು, ಜನವರಿ 22: ಮಾಯನಗರಿ ಬೆಂಗಳೂರಿಗೆ (Bengaluru) ಕೆಲಸಕ್ಕೆಂದು ಬರುವ ಯುವಕರು ಯುವತಿಯರು ಮೊದಲು ಹುಡುಕುವುದೇ ಬಾಡಿಗೆ ಮನೆಯನ್ನು. ಆದರೆ ಇತ್ತೀಚೆಗಿನ ದಿನಗಳಲ್ಲಿ ಕಡಿಮೆ ಬಾಡಿಗೆಗೆ ಮನೆ ಇರುವ ಸಿಗೋದು ತುಂಬಾನೇ ಕಡಿಮೆ. ಸಾಫ್ಟ್‌ವೇರ್ ಇಂಜಿನಿಯರ್‌ರೊಬ್ಬರು ಬೆಂಗಳೂರಿನ ಕಾಡುಬೀಸನಹಳ್ಳಿಯಲ್ಲಿ ಮನೆ ಹುಡುಕುತ್ತಿದ್ದಾಗ ಬಾಡಿಗೆ ಮನೆ ಇರೋದು ತಿಳಿದಿದೆ. ಈ ಖಾಲಿ ಮನೆಯೊಂದಕ್ಕೆ ತೆರಳಿ ಅಲ್ಲಿನ ಮನೆಯ ಮಾಲೀಕರ ಬಳಿ ಬಾಡಿಗೆ ಬಗ್ಗೆ ವಿಚಾರಿಸಿದ್ದಾರೆ. ಆದರೆ ಮನೆ ಮಾಲೀಕ 70 ಸಾವಿರ ರೂ ಬಾಡಿಗೆ ಹೇಳಿದ್ದನ್ನು ಕೇಳಿ ಶಾಕ್ ಆಗಿದ್ದಾರೆ. ದುಬಾರಿ ಬಾಡಿಗೆ ಮನೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಅಸಮಾಧಾನ ಹೊರಹಾಕಿದ್ದಾರೆ.
ರಾಜ್ವಿ (rajvi) ಹೆಸರಿನ ಎಕ್ಸ್ ಖಾತೆಯಲ್ಲಿ ಬೆಂಗಳೂರಿನ ದುಬಾರಿ ಬಾಡಿಗೆ ಮನೆಯ ಬಗ್ಗೆ ಪೋಸ್ಟ್ ಮಾಡಲಾಗಿದೆ. ಬೆಂಗಳೂರಿನ ಮನೆಗಳ ಬಾಡಿಗೆ ದರಗಳು ಹೆಚ್ಚಾಗಿವೆ. ಈ ದರಗಳು ಮುಂಬೈಗೂ ಸ್ಪರ್ಧೆ ನೀಡುವಂತಿವೆ. 70,000 ರೂಪಾಯಿ ಬಾಡಿಗೆಗೆ ಸೆಮಿ-ಫರ್ನಿಶ್ಡ್ 2BHK ಕೇಳುತ್ತಾರೆ ಅಂದರೆ ಏನು ಅರ್ಥ? ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ
Bangalore rent scene is crazy and in immense competition with bombay because what do u mean u want 70k rent for a semi furnished 2bhk??
ಜನವರಿ 20 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಮೂವತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಪೂರ್ವ ಬೆಂಗಳೂರು ಬಿಟ್ಟು, ಬೇರೆ ಕಡೆ 2ಬಿ ಹೆಚ್ ಕೆಗೆ 25 ರಿಂದ 30 ಸಾವಿರ ರೂಪಾಯಿ ಬಾಡಿಗೆ ಇದೆ. ಬೆಂಗಳೂರಿನ ಒಂದು ಪ್ರಾಂತ್ಯದಿಂದ ಮತ್ತೊಂದು ಪ್ರಾಂತ್ಯಕ್ಕೆ ಬಾಡಿಗೆ ದರಗಳು ಬದಲಾಗುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಬೆಂಗಳೂರಿನ ಮನೆ ಮಾಲೀಕರು ಆಸೆ ಬುರುಕರು ಎಂದಿದ್ದಾರೆ. ಇನ್ನೊಬ್ಬರು, ಬಾಡಿಗೆ ಮನೆಯಲ್ಲಿ ಇರೋ ಬದಲು ಸಾಲ ಮಾಡಿ ಮನೆ ಖರೀದಿ ಮಾಡಿದ್ರೆ ಸ್ವಂತ ಮನೆಯಾದ್ರೂ ಆಗುತ್ತೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಜನವರಿ 22: ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಆಗಮಿಸಿದ ರಾಜ್ಯಪಾಲ ಗೆಹ್ಲೋಟ್ಅವರು ಸರ್ಕಾರ ನೀಡಿದ್ದ ಭಾಷಣವನ್ನು ಓದದೆ ಕೇವಲ ಎರಡೇ ಮಾತುಗಳಲ್ಲಿ ಶುಭಾಶಯ ಕೋರಿ ಹೊರನಡೆದ ಘಟನೆ ಸದನದಲ್ಲಿ ಭಾರೀ ಹೈಡ್ರಾಮಾಗೆ ಕಾರಣವಾಯಿತು. ರಾಜ್ಯಪಾಲರ ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕರು, ಅವರನ್ನು ಬೀಳ್ಕೊಡುವ ಸಂದರ್ಭದಲ್ಲಿ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು. ಈ ಅನಿರೀಕ್ಷಿತ ನಡೆಯಿಂದ ಆಘಾತಕ್ಕೊಳಗಾದ ಶಾಸಕ ಬಿ.ಕೆ. ಹರಿಪ್ರಸಾದ್ ಅವರು, ರಾಜ್ಯಪಾಲರು ಹೊರಡುತ್ತಿದ್ದ ಸಂದರ್ಭದಲ್ಲಿ ಅವರನ್ನು ಅಡ್ಡಗಟ್ಟಿ ಸಂಪೂರ್ಣ ಭಾಷಣ ಓದುವಂತೆ ಪಟ್ಟು ಹಿಡಿದರು. ಆದರೆ, ರಾಜ್ಯಪಾಲ ಗೆಹ್ಲೋಟ್ ಅವರು ಇದನ್ನು ಲೆಕ್ಕಿಸದೆ ತಮ್ಮ ಪೂರ್ವ ನಿರ್ಧಾರದಂತೆ ಸದನದಿಂದ ಹೊರನಡೆದರು. ಮುಖ್ಯಮಂತ್ರಿಗಳು, ಸ್ಪೀಕರ್, ಸಭಾಪತಿಗಳು ಮತ್ತು ಕಾನೂನು ಸಚಿವರು ಗೌರವಾರ್ಥವಾಗಿ ರಾಜ್ಯಪಾಲರನ್ನು ವಾಹನದವರೆಗೂ ಬೀಳ್ಕೊಟ್ಟರು.
ಬಲೋಡಾ ಬಜಾರ್, ಜನವರಿ 22: ಛತ್ತೀಸ್ಗಢದ ಬಲೋಡಾ ಬಜಾರ್ ಜಿಲ್ಲೆಯಲ್ಲಿರುವ ಉಕ್ಕಿನ ಸ್ಥಾವರದಲ್ಲಿ ಗುರುವಾರ ಭಾರಿ ಸ್ಫೋಟ(Blast) ಸಂಭಿಸಿದ್ದು, 7 ಕಾರ್ಮಿಕರು ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಬಕುಲಾಹಿ ಮೂಲದ ರಿಯಲ್ ಇಸ್ಪಾಟ್ ಸ್ಟೀಲ್ ಪ್ಲಾಂಟ್‌ನಲ್ಲಿ ಕಲ್ಲಿದ್ದಲು ಕುಲುಮೆ ಇದ್ದಕ್ಕಿದ್ದಂತೆ ಸ್ಫೋಟಗೊಂಡು ಈ ಸ್ಫೋಟ ಸಂಭವಿಸಿದೆ.
ಘಟನೆಯ ಸಮಯದಲ್ಲಿ, ಕಾರ್ಮಿಕರ ಗುಂಪೊಂದು ಕುಲುಮೆ ಪ್ರದೇಶದ ಸುತ್ತಲೂ ಶುಚಿಗೊಳಿಸುವ ಕೆಲಸವನ್ನು ಮಾಡುತ್ತಿದ್ದರು. ಅವರು ಶಾಖದ ಉಲ್ಬಣ ಮತ್ತು ಸುಡುವ ಕಲ್ಲಿದ್ದಲಿನಲ್ಲಿ ಸಿಲುಕಿಕೊಂಡಿದ್ದರು, ಇದರಿಂದಾಗಿ ಹಲವಾರು ಕಾರ್ಮಿಕರು ಸ್ಥಳದಲ್ಲೇ ಬೆಂದು ಹೋದರು.
ಸ್ಫೋಟದ ನಂತರ ಬಿಸಿ ಕಲ್ಲಿದ್ದಲು ಮತ್ತು ಜ್ವಾಲೆಯ ನೇರ ಸಂಪರ್ಕಕ್ಕೆ ಬಂದ ನಂತರ ಕಾರ್ಮಿಕರು ಮಾರಣಾಂತಿಕ ಸುಟ್ಟ ಗಾಯಗಳನ್ನು ಅನುಭವಿಸಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಕೆಲವು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ, ಆದರೂ ಗಾಯಗೊಂಡವರ ನಿಖರವಾದ ಸಂಖ್ಯೆಯನ್ನು ಇನ್ನೂ ಅಧಿಕೃತವಾಗಿ ದೃಢಪಡಿಸಲಾಗಿಲ್ಲ.
ಇಲ್ಲಿಯವರೆಗೆ, ಸ್ಥಾವರ ಆಡಳಿತ ಮಂಡಳಿಯು ಸ್ಫೋಟದ ಕಾರಣ ಅಥವಾ ಗಾಯಗೊಂಡ ಕಾರ್ಮಿಕರ ಸ್ಥಿತಿಯ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದರು. ಅಧಿಕಾರಿಗಳು ಸ್ಥಾವರದಲ್ಲಿನ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಮತ್ತು ಕುಲುಮೆ ಸ್ಫೋಟಕ್ಕೆ ಕಾರಣವಾದ ಸಂದರ್ಭಗಳನ್ನು ಪರಿಶೀಲಿಸುತ್ತಿದ್ದಾರೆ.
ಬೆಂಗಳೂರು, ಜ.22: ಫೋನ್ ಪೇ ಮಾಡುವಾಗ ಸ್ವಲ್ಪ ಗಮನ ನೀಡಬೇಕು ಎನ್ನುವುದು ಇದೇ ಕಾರಣಕ್ಕೆ ನೋಡಿ, ಇಲ್ಲೊಬ್ಬ ವ್ಯಕ್ತಿ ಬಿಎಂಟಿಸಿಯಲ್ಲಿ (BMTC fare mistake) 6 ರೂ ಬದಲು 60 ಸಾವಿರ ಫೋನ್ ಪೇ ಮಾಡಿದ್ದಾರೆ. ಇದೀಗ ಈ ಸುದ್ದಿ ಭಾರೀ ವೈರಲ್ ಆಗಿದೆ. ಕೆಲವೊಂದು ಬಾರಿ ಫೋನ್ ಪೇ ಮಾಡುವಾಗ ತಪ್ಪಿ ಸೊನ್ನೆ ಹೆಚ್ಚು ಹಾಕಿ ಪಜೀತಿಗೆ ಸಿಲುಕಿಕೊಂಡಿರುವ ಘಟನೆಗಳು ಆಗ್ಗಾಗೆ ನಡೆಯುತ್ತಿರುತ್ತದೆ. ಕೆಲಸದ ಒತ್ತಡದಿಂದ ಅಥವಾ ಕೈ ತಪ್ಪಿಯು ಹೀಗೆ ಆಗಬಹುದು. ಹಾಗಾಗಿ ಎಚ್ಚರಿಕೆಯಿಂದ ಫೋನ್ ಪೇ ಮಾಡಬೇಕು. ಬಿಎಂಟಿಸಿಯಲ್ಲಿ ಪ್ರಯಾಣಿಕರೊಬ್ಬರ ಎಡವಟ್ಟಿನಿಂದ 60 ಸಾವಿರ ಖಾತೆಯಿಂದ ಹೋಗಿದೆ.
ಈ ಘಟನೆ ಜ.14ರಂದು ಬನಶಂಕರಿಯಲ್ಲಿ ನಡೆದಿದೆ. ರಾತ್ರಿ ವೇಳೆ ಈ ವ್ಯಕ್ತಿ ಬನಶಂಕರಿಯಿಂದ ಕದಿರೇನಹಳ್ಳಿಗೆ ಪ್ರಯಾಣ ಮಾಡುತ್ತಿದ್ದ ವೇಳೆ ಆರು ರೂಪಾಯಿ ಬದಲು ಆರವತ್ತು ಸಾವಿರ ಪೋನ್ ಪೇ ಮಾಡಿದ್ದಾರೆ. ಪ್ರಯಾಣಿಕ 60 ಸಾವಿರ ಫೋನ್ ಪೇ ಮಾಡಿರುವುದನ್ನು ನೋಡಿ ಕಂಡಕ್ಟರ್ ಶಾಕ್ ಆಗಿದ್ದಾರೆ. ಪ್ರಯಾಣಿಕ 6 ರೂ. ಮಾಡುವ ಬದಲು ತಪ್ಪಿ 60 ಸಾವಿರ ರೂ ಮಾಡಿದ್ದಾರೆ. ಇದೀಗ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲೂ ದೊಡ್ಡ ಸುದ್ದಿ ಮಾಡಿದೆ. ಈ ಬಗ್ಗೆ ಪ್ರಯಾಣಿಕ ಕಂಡಕ್ಟರ್ ಗೆ ಮಾಹಿತಿ ನೀಡಿದ್ದಾರೆ. ಬಸ್ ನಿರ್ವಾಹಕ ಖಾತೆ ಪರಿಶೀಲಿಸಿದಾಗ 62,316 ರೂ ಹಾಕಿರುವುದು ಗೊತ್ತಾಗಿದೆ.
ಈ ಹಣವನ್ನು ನೋಡಿ ಕಂಡಕ್ಟರ್ ಬೆಚ್ಚಿಬಿದ್ದಿದ್ದಾರೆ. ನಂತರ ಈ ಹಣವನ್ನು ತಕ್ಷಣದಲ್ಲಿ ನೀಡಲು ಸಾಧ್ಯವಿಲ್ಲ. ಮೊದಲು ನಿರ್ವಾಹಕ ಈ ಬಗ್ಗೆ ತನ್ನ ಮೇಲಾಧಿಕಾರಿಗಳಿಗೆ ತಿಳಿಸಿ, ನಂತರ ಅವರ ನಂಬರ್ ಪಡೆದುಕೊಂಡಿದ್ದಾರೆ. ಡಿಪೋ ಮ್ಯಾನೇಜರ್ ಫೋನ್ ನಂಬರ್ ಕೂಡ ನೀಡಲಾಗಿದೆ. ಅವರು ಪರಿಶೀಲನೆ ನಡೆಸಿದ ನಂತರ ಹಣ ಪಡೆಯಬಹುದು. ಹಣ ಪಡೆಯಲು ಡಿಪೋಗೆ ಬರಬೇಕು ಎಂದು ಸಲಹೆ ನೀಡಿದ್ದಾರೆ. ಆದರೆ ಇನ್ನೂ ಕೂಡ ಹಣ ಪಾವತಿ ಆಗಿಲ್ಲ. ಇವತ್ತು ಅಥವಾ ನಾಳೆಯೊಳಗೆ ಹಣ ಪಾವತಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಹಣ ಕಳುಹಿಸುವ ಮೊದಲು ಅಮೌಂಟ್ ಸರಿಯಾಗಿದೆಯೇ ಎಂದು ಎರಡು ಬಾರಿ ನೋಡಬೇಕು. ಸಾಮಾನ್ಯವಾಗಿ ದೊಡ್ಡ ಮೊತ್ತವನ್ನು ಪಾವತಿಸುವಾಗ ಹೆಚ್ಚಿನ ಯುಪಿಐ ಆ್ಯಪ್‌ಗಳು ತಪ್ಪು ನೀಡುತ್ತದೆ. ಹಾಗಾಗಿ ಇದನ್ನು ಗಮನಿಸಲೇಬೇಕು. ಬಸ್ ಚಲಿಸುತ್ತಿರುವಾಗ ಅಥವಾ ಜನದಟ್ಟಣೆಯ ಸಮಯದಲ್ಲಿ ಡಿಜಿಟಲ್ ಪಾವತಿ ಮಾಡುವಾಗ ಎಚ್ಚರ ವಹಿಸುವುದು ಅಗತ್ಯವಾಗಿರುತ್ತದೆ.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ನಿಂದ ಬಾಬರ್ ಆಝಂ ಅರ್ಧದಲ್ಲೇ ಹೊರ ನಡೆದಿದ್ದಾರೆ. ಅದು ಸಹ ಮತ್ತೊಂದು ಅವಮಾನದ ಮುನ್ಸೂಚನೆ ಸಿಗುತ್ತಿದ್ದಂತೆ ಎಂಬುದು ವಿಶೇಷ. ಈ ಬಾರಿಯ ಬಿಬಿಎಲ್ನಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಕಣಕ್ಕಿಳಿದಿದ್ದ ಬಾಬರ್ ಆಝಂ ಸುದ್ದಿಯಾಗಿದ್ದು ಮಾತ್ರ ತನ್ನ ಕಳಪೆಯಾಟದಿಂದ. ಅದರಲ್ಲೂ ರನ್ಗಳಿಸಲು ತಡಕಾಡುತ್ತಿದ್ದ ಬಾಬರ್ ಅವರಿಗೆ ಸ್ಟೀವ್ ಸ್ಮಿತ್ ಸ್ಟ್ರೈಕ್ ನೀಡದಿರುವುದು ಭಾರೀ ಚರ್ಚೆಗೆ ಕಾರಣವಾಗಿತ್ತು.
ಅಷ್ಟೇ ಅಲ್ಲದೆ ಬಾಬರ್ ಆಝಂ ಅವರ ಕಳಪೆ ಫೀಲ್ಡಿಂಗ್ ಕೂಡ ಸಿಡ್ನಿ ಸಿಕ್ಸರ್ಸ್ ಆಟಗಾರರಲ್ಲಿ ಅಸಮಾಧಾನವನ್ನು ಉಂಟು ಮಾಡಿತ್ತು. ಇದಾಗ್ಯೂ ಕಳೆದ 11 ಪಂದ್ಯಗಳಲ್ಲಿ ಬಾಬರ್ ಆಝಂ ಅವರನ್ನು ಕಣಕ್ಕಿಳಿಸಲಾಗಿತ್ತು.
ಆದರೆ 11 ಪಂದ್ಯಗಳಿಂದ ಬಾಬರ್ ಆಝಂ ಕಲೆಹಾಕಿದ್ದು ಕೇವಲ 202 ರನ್ಗಳು. ಅಂದರೆ 22.44 ರ ಸರಾಸರಿಯಲ್ಲಿ ಮಾತ್ರ ರನ್ಗಳಿಸಿದ್ದರು. ಅದು ಕೂಡ 103 ರ ಸ್ಟ್ರೈಕ್ ರೇಟ್ನಲ್ಲಿ. ಹೀಗಾಗಿಯೇ ಬಾಬರ್ ಆಝಂ ಅವರನ್ನು ಚಾಲೆಂಜರ್ (ನಾಕೌಟ್) ಪಂದ್ಯದಿಂದ ಕೈ ಬಿಡಬೇಕು ಎಂಬ ಮಾತುಗಳು ಕೇಳಿ ಬಂದಿದ್ದವು.
ಚಾಲೆಂಜರ್ ಪಂದ್ಯವು ಸಿಡ್ನಿ ಸಿಕ್ಸರ್ಸ್ ತಂಡದ ಪಾಲಿಗೆ ನಿರ್ಣಾಯಕ. ಈ ಮ್ಯಾಚ್ನಲ್ಲಿ ಗೆಲ್ಲುವ ತಂಡ ಫೈನಲ್ಗೇರುತ್ತದೆ. ಅತ್ತ ಪರ್ತ್ ಸ್ಕಾಚರ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಬಾಬರ್ ಮೊದಲ ಓವರ್ನಲ್ಲೇ ಸ್ಟಂಪ್ ಔಟ್ ಆಗಿದ್ದರು.
ಹೀಗಾಗಿಯೇ ಚಾಲೆಂಜರ್ ಪಂದ್ಯದಲ್ಲಿ ಬಾಬರ್ ಆಝಂ ಅವರ ಬದಲಿಗೆ ಬೇರೊಬ್ಬ ಆರಂಭಿಕನನ್ನು ಕಣಕ್ಕಿಳಿಸಬೇಕೆಂದು ಆಸ್ಟ್ರೇಲಿಯಾದ ಮಾಜಿ ಆಟಗಾರರು ಅಭಿಪ್ರಾಯಪಟ್ಟಿದ್ದರು. ಅತ್ತ ಸಿಡ್ನಿ ಸಿಕ್ಸರ್ಸ್ ಮ್ಯಾನೇಜ್ಮೆಂಟ್ ಕೂಡ ಬಾಬರ್ ಅವರನ್ನು ನಿರ್ಣಾಯಕ ಪಂದ್ಯದಿಂದ ಕೈ ಬಿಡಲು ಯೋಜನೆ ರೂಪಿಸಿದ್ದರು.
ಈ ಸೂಚನೆ ಸಿಕ್ಕ ಬೆನ್ನಲ್ಲೇ ಬಾಬರ್ ಆಝಂ ಬಿಗ್ ಬ್ಯಾಷ್ ಲೀಗ್ನಿಂದ ಹೊರ ನಡೆದಿದ್ದಾರೆ. ಅದು ಕೂಡ ರಾಷ್ಟ್ರೀಯ ತಂಡದ ಪರ ಆಡುವ ನೆಪದೊಂದಿಗೆ. ಅಂದರೆ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಸಜ್ಜಾಗಲು ತವರಿಗೆ ಹಿಂತಿರುಗುತ್ತಿರುವುದಾಗಿ ಬಾಬರ್ ಆಝಂ ತಿಳಿಸಿದ್ದಾರೆ.
ಆದರೆ ಇಂಟ್ರೆಸ್ಟಿಂಗ್ ವಿಷಯ ಎಂದರೆ, ಪಾಕಿಸ್ತಾನ್ ಹಾಗೂ ಆಸ್ಟ್ರೇಲಿಯಾ ನಡುವಣ ಟಿ20 ಸರಣಿ ಶುರುವಾಗುವುದು ಜನವರಿ 29 ರಿಂದ ಎಂಬುದು. ಅಂದರೆ ಮುಂದಿನ ಸರಣಿಗೆ ಇನ್ನೂ ಒಂದು ವಾರವಿದೆ. ಇತ್ತ ಬಿಗ್ ಬ್ಯಾಷ್ ಲೀಗ್ನಲ್ಲಿ ಉಳಿದಿರುವುದು ಕೇವಲ 2 ಮ್ಯಾಚ್ಗಳು ಮಾತ್ರ.
ಅಂದರೆ ಜನವರಿ 23 ರಂದು ಸಿಡ್ನಿ ಸಿಕ್ಸರ್ಸ್ ಹಾಗೂ ಹೋಬಾರ್ಟ್ ಹರಿಕೇನ್ಸ್ ನಡುವೆ ಚಾಲೆಂಜರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಜನವರಿ 25 ರಂದು ಪರ್ತ್ ಸ್ಕಾಚರ್ಸ್ ವಿರುದ್ಧ ಫೈನಲ್ ಪಂದ್ಯವಾಡಲಿದೆ.
ಆದರೆ ಬಿಗ್ ಬ್ಯಾಷ್ ಲೀಗ್ ಮುಗಿಯಲು ಕೇವಲ ಮೂರು ದಿನಗಳಿರುವಾಗ ಬಾಬರ್ ಆಝಂ ಟೂರ್ನಿಯಿಂದ ಹೊರ ನಡೆದಿದ್ದಾರೆ. ಅದು ಸಹ ಮುಂದಿನ ವಾರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ನೆನಪೊಡ್ಡಿ.
ಇದರಾರ್ಥ ಬಾಬರ್ ಆಝಂ ಅವರನ್ನು ಚಾಲೆಂಜರ್ ಪಂದ್ಯದಿಂದ ಸಿಡ್ನಿ ಸಿಕ್ಸರ್ಸ್ ಕೈ ಬಿಡುವುದು ಖಚಿತವಾಗಿತ್ತು. ಅಲ್ಲದೆ ಸಿಡ್ನಿ ತಂಡವು ಪೈನಲ್ಗೇರಿದರೂ ಬಾಬರ್ನನ್ನು ಕಣಕ್ಕಿಳಿಸದಿರಲು ನಿರ್ಧರಿಸಿತ್ತು. ಹೀಗಾಗಿಯೇ ಮತ್ತೊಂದು ಅವಮಾನ ಎದುರಾಗುವ ಮುನ್ನವೇ ಬಾಬರ್ ಆಝಂ ಬಿಗ್ ಬ್ಯಾಷ್ ಲೀಗ್ನಿಂದ ಎಸ್ಕೇಪ್ ಆಗಿದ್ದಾರೆ.
ಬೆಂಗಳೂರು, ಜನವರಿ 22: ವಿಧಾನಸಭೆಯ ವಿಶೇಷ ಅಧಿವೇಶನದ (Karnataka Assembly Session) ವೇಳೆ ಭಾಷಣ ಮುಗಿಸಿ ಹೊರಟ ರಾಜ್ಯಪಾಲ (Karnataka Governor) ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಕಾಂಗ್ರೆಸ್ ಶಾಸಕರು ಅಡ್ಡಿಗಟ್ಟಿರುವುದನ್ನು ಖಂಡಿಸಿದ ವಿಪಕ್ಷ ನಾಯಕ ಆರ್ ಅಶೋಕ್ (R Ashoka), ಇದೊಂದು ‘ಕರಾಳ ದಿನ’ ಎಂದು ಕರೆದಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಂವಿಧಾನ ಪ್ರಕಾರ ರಾಜ್ಯಪಾಲರು ತಮ್ಮ ಕರ್ತವ್ಯ ನಿರ್ವಹಿಸಿ ಧನ್ಯವಾದ ಹೇಳಿ ಹೊರಟಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ರಾಜ್ಯಪಾಲರು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಿದ್ದು, ಅವರ ಭಾಷಣವನ್ನು ಓದದೇ ಹೊರಡುವುದಕ್ಕೂ ಅವರಿಗೆ ಅಧಿಕಾರವಿದೆ ಎಂದು ಅಶೋಕ್ ಹೇಳಿದರು. ಆದರೆ ಕಾಂಗ್ರೆಸ್ ಪಕ್ಷದವರು ರಾಜ್ಯಪಾಲರನ್ನು ಅಡ್ಡಗಟ್ಟಿ ಅಗೌರವ ತೋರಿಸಿದ್ದು ಗೂಂಡಾಗಿರಿ ಎಂದು ಕಿಡಿಕಾರಿದರು. ಅಧಿವೇಶನವನ್ನು ಕಾಂಗ್ರೆಸ್ ಕರಾಳ ರೀತಿಯಲ್ಲಿ ನಡೆಸಿದೆ ಎಂದು ಆರೋಪಿಸಿದರು.
ರಾಜ್ಯಪಾಲರಿಗೆ ಅಡ್ಡಿಪಡಿಸಿದ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅಶೋಕ್, ಈ ಕುರಿತು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಪತ್ರ ನೀಡುವುದಾಗಿ ತಿಳಿಸಿದರು. ಸದನದಲ್ಲಿ ಅಗೌರವ ತೋರಿದವರನ್ನು ಹೊರಹಾಕಬೇಕು ಎಂದೂ ಒತ್ತಾಯಿಸಿದರು. ಇದೇ ರಾಜ್ಯಪಾಲರು ಸರ್ಕಾರದ ಅನೇಕ ಬಿಲ್‌ಗಳಿಗೆ ಸಹಿ ಹಾಕಿದ್ದಾರೆ. ಆಗ ರಾಜ್ಯಪಾಲರು ಸರಿಯಾಗಿದ್ದರಾ ಎಂದು ಕಾಂಗ್ರೆಸ್ ಅನ್ನು ಪ್ರಶ್ನಿಸಿದರು.
ವಿಧಾನಸಭೆಯನ್ನು ಕಾಂಗ್ರೆಸ್ ಭವನವನ್ನಾಗಿಸಲು ‘ಕೈ’ ಸರ್ಕಾರ ಹೊರಟಿದೆ. ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸುವ ಕುತಂತ್ರ ಇದಾಗಿದೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ
ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಹಾಗೂ ದ್ವೇಷ ರಾಜಕಾರಣ ಮಾಡಲು ಸದನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು.
ನರೇಗಾ ಯೋಜನೆಯಲ್ಲಿ ಕೇಂದ್ರ ಸರ್ಕಾರ ಕೆಲ ಸುಧಾರಣೆಗಳನ್ನು ತಂದಿದ್ದು, ಅದನ್ನೇ ನೆಪ ಮಾಡಿಕೊಂಡು ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು. 140 ಶಾಸಕರ ಬೆಂಬಲವಿದೆ ಎಂಬ ದರ್ಪದಲ್ಲಿ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ ಎಂದು ಅವರು ಕಿಡಿಕಾರಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ನವದೆಹಲಿ, ಜನವರಿ 22: ಬ್ಲಿಂಕಿಟ್ ಮತ್ತು ಜೊಮಾಟೊದ ಮಾಲಕ ಸಂಸ್ಥೆಯಾದ ಎಟರ್ನಲ್ನ ಗ್ರೂಪ್ ಸಿಇಒ ಸ್ಥಾನಕ್ಕೆ ದೀಪಿಂದರ್ ಗೋಯಲ್ (Deepinder Goyal) ನಿನ್ನೆ ರಾಜೀನಾಮೆ ಕೊಟ್ಟಿದ್ದಾರೆ. ಬ್ಲಿಂಕಿಟ್ನ ಸಿಇಒ ಆಗಿದ್ದ ಆಲ್ಬೀಂದರ್ ಧಿಂಡ್ಸ ಅವರು ಎಟರ್ನಲ್ ಗ್ರೂಪ್ನ ಸಿಇಒ ಆಗಿ ಬಡ್ತಿ ಮತ್ತು ಜವಾಬ್ದಾರಿ ಪಡೆಯಲಿದ್ದಾರೆ. ದೀಪಿಂದರ್ ಗೋಯಲ್ ಅವರು ಸ್ಟಾಕ್ ಫೈಲಿಂಗ್ನಲ್ಲಿ ಇದನ್ನು ಪ್ರಕಟಿಸಿದ್ದಾರೆ. ಷೇರುದಾರರು ಅನುಮಸತಿಸಿದರೆ ಎಟರ್ನಲ್ ನಿರ್ದೇಶಕರ ಮಂಡಳಿಯಲ್ಲಿ ವೈಸ್ ಛೇರ್ಮನ್ ಆಗಿ ಮುಂದುವರಿಯುವುದಾಗಿ ಅವರು ಹೇಳಿದ್ದಾರೆ. ಹಾಗೆಯೇ, ತಾನು ಎಟರ್ನಲ್ ಸಿಇಒ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಯಾಕೆ? ಮುಂದೆ ಏನು ಮಾಡಲು ಹೊರಟಿದ್ದೇನೆ ಎಂಬುದರ ಮಾಹಿತಿ ನೀಡಿದ್ದಾರೆ.
ದೀಪಿಂದರ್ ಗೋಯಲ್ ಅವರಿಗೆ ಹಲವು ಕನಸುಗಳ ಸಾಕಾರಗೊಳಿಸುವ ಹುಮ್ಮಸ್ಸು
ದೀಪಿಂದರ್ ಗೋಯಲ್ ಜೊಮಾಟೊವನ್ನು ಯಶಸ್ವಿ ಕಂಪನಿಯಾಗಿಸಿದರು. ಬ್ಲಿಂಕಿಟ್ ಅನ್ನೂ ಸೂಪರ್ ಸಕ್ಸಸ್ ಆಗಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಎಟರ್ನಲ್ ಎನ್ನುವ ಗ್ರೂಪ್ ಕಂಪನಿಯ ನಿರ್ಮಾಣವಾಗಿದ್ದು, ಇದರ ಅಡಿಯಲ್ಲಿ ಜೊಮಾಟೊ ಮತ್ತು ಬ್ಲಿಂಕಿಟ್ ಇವೆ. ಎಟರ್ನಲ್ಗೆ ಪ್ರಮುಖ ಆದಾಯ ಮೂಲವೇ ಬ್ಲಿಂಕಿಟ್ ಆಗಿದೆ. ಯಶಸ್ವಿ ಬ್ಯುಸಿನೆಸ್ ಮಾಡಲ್ ಅನ್ನು ರೂಪಿಸಿದ್ದರ ಹಿಂದೆ ದೀಪಿಂದರ್ ಅವರ ಶ್ರಮ ಇದೆ.
ದೀಪಿಂದರ್ ಗೋಯಲ್ ಕೆಲ ಕುತೂಹಲಕಾರಿ ಪ್ರಾಜೆಕ್ಟ್ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲಿ ಟೆಂಪಲ್ ಒಂದು. ಮುಖದ ಬದಲಿಯಲ್ಲಿ, ಅಂದರೆ ಕಣ್ಣು ಮತ್ತು ಕಿವಿ ನಡುವೆ ತುಸು ಮೇಲಿನ ಪ್ರದೇಶವನ್ನು ಟೆಂಪಲ್ ಎನ್ನುತ್ತಾರೆ. ಆ ಜಾಗದಲ್ಲಿ ಧರಿಸಬಹುದಾದ ಒಂದು ಉಪಕರಣವನ್ನು (Temple Device) ಗೋಯಲ್ ಅಭಿವೃದ್ಧಿಪಡಿಸುತ್ತಿದ್ದಾರೆ. ಮಿದುಳಿಗೆ ರಕ್ತದ ಹರಿವವನ್ನು ಇದು ಅಳೆಯಬಲ್ಲುದು. ಗುರುತ್ವಾಕರ್ಷಣ ಶಕ್ತಿಯಿಂದ ಮಿದುಳಿಗೆ ರಕ್ತದ ಚಲನೆ ಕಡಿಮೆ ಆಗಬಲ್ಲುದು ಎಂದು ಕೆಲ ತಜ್ಞರು ವಾದಿಸುತ್ತಿದ್ದಾರೆ. ಟೆಂಪಲ್ ಸಾಧನದ ಮೂಲಕ ಇದನ್ನು ಪರೀಕ್ಷಿಸಲಾಗುತ್ತಿದೆ. ಇದು ನಿಜವೇ ಎಂಬುದಕ್ಕೆ ಸಾಕ್ಷ್ಯಾಧಾರ ಸಿಕ್ಕರೆ ನರರೋಗ ಸಮಸ್ಯೆಗಳಿಗೆ ಚಿಕಿತ್ಸೆ ಕೊಡುವುದು ಸುಲಭವಾಗಬಹುದು.
ಎಲ್ಎಟಿ ಏರೋಸ್ಪೇಸ್ ಮೂಲಕ ವೈಮಾನಿಕ ಕ್ರಾಂತಿ ಮಾಡ ಹೊರಟಿರುವ ಗೋಯಲ್
ಎಲ್ಎಟಿ ಏರೋಸ್ಪೇಸ್ (LAT Aerospace) ಸದ್ಯ ದೀಪಿಂದರ್ ಗೋಯಲ್ ಅವರ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್. ದೇಶದಲ್ಲಿ ವೈಮಾನಿಕ ಕ್ರಾಂತಿ ಮಾಡಲು ಹೊರಟಂತಿದೆ. ಬಸ್ಸು, ಮೆಟ್ರೋಗಳಂತೆ ವಿಮಾನಗಳೂ ಕೂಡ ನಗರದ ವಿವಿಧ ಏರಿಯಾಗಳಲ್ಲಿ ಇಳಿಯಬಲ್ಲಂತಹ ಒಂದು ವ್ಯವಸ್ಥೆಯ ಪರಿಕಲ್ಪನೆ ಅದು. ಫ್ಲೈಯಿಂಗ್ ಟ್ಯಾಕ್ಸಿ ರೀತಿಯದ್ದು. 10-20 ಸೀಟರ್ಗಳ ಸಣ್ಣ ಸಣ್ಣ ವಿಮಾನಗಳನ್ನು ನಿರ್ಮಿಸಲು ಯತ್ನಿಸಲಾಗುತ್ತಿದೆ. ಈಗಾಗಲೇ ಈ ನಿಟ್ಟಿನಲ್ಲಿ ಪ್ರಯೋಗಗಳಾಗಿವೆ. ಲಂಬವಾಗಿ ಟೆಕಾಫ್ ಆಗಿ ನಂತರ ಸುರಕ್ಷಿತವಾಗಿ ಇಳಿಯಬಲ್ಲಂತೆ ಆಗುವವರೆಗೂ ಪ್ರಯೋಗಗಳು ನಡೆಯಲಿವೆ.
ವಿಶ್ವದಲ್ಲಿ ಯಾರೂ ಕೂಡ ಈ ಪ್ರಯೋಗ ಮಾಡಿಲ್ಲ. ತಾವೇ ಮೊದಲು ಮಾಡುತ್ತಿರುವುದು. ಇದು ವಿಫಲವಾದರೂ ಪರವಾಗಿಲ್ಲ. ಪ್ರಯತ್ನವನ್ನಂತೂ ಮಾಡುವುದಾಗಿ ರಾಜ್ ಶಮಾನಿ ಪೋಡ್ಕ್ಯಾಸ್ಟ್ನಲ್ಲಿ ದೀಪಿಂದರ್ ಗೋಯಲ್ ಹೇಳಿಕೊಂಡಿದ್ದಾರೆ. ಗೋಯಲ್ ಅವರು ಇವಿಷ್ಟೂ ಮಾತ್ರವಲ್ಲ, ಇನ್ನೂ ಕೆಲ ಬ್ಯುಸಿನೆಸ್ ಹಾಗೂ ಇತರ ಪರಿಕಲ್ಪನೆಗಳನ್ನು ಇಟ್ಟುಕೊಂಡಿದ್ದಾರೆ.
ಗಿಲ್ಲಿ ನಟ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್. ಅವರು ವಿನ್ ಆದ ಬಳಿಕ ಇದೇ ಮೊದಲ ಬಾರಿಗೆ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಈ ವೇಳೆ ‘ಇದೆಲ್ಲ ನಿಜ ಎಂದು ನಂಬೋಕೆ ಇನ್ನೂ ಸಾಧ್ಯವಾಗುತ್ತಿಲ್ಲ’ ಎಂದಿದ್ದಾರೆ. ಅಂದರೆ, ಅವರಿಗೆ ಇನ್ನೂ ವಾಸ್ತವಕ್ಕೆ ಬರೋಕೆ ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಅವರು ಎಲ್ಲಾ ಅಭಿಮಾನಿಗಳಿಗೆ, ಬೆಂಬಲಿಗರಿಗೆ, ಮಾಧ್ಯಮದವರಿಗೆ, ಸೋಶಿಯಲ್ ಮೀಡಿಯಾ ಮೀಮ್ ಪೇಜ್ಗಳಿಗೆ ಧನ್ಯವಾದ ಹೇಳಿದ್ದಾರೆ. ಆ ಸಂಧರ್ಭದ ವಿಡಿಯೋ ಮೇಲಿದೆ.
ಸನಾತನ ಸಂಪ್ರದಾಯದಲ್ಲಿ ಅನ್ನಕ್ಕೆ ವಿಶೇಷ ಸ್ಥಾನಮಾನವಿದೆ. ಅನೇಕ ಯಜ್ಞ, ಹೋಮ, ಹವನಗಳಲ್ಲಿ ಅನ್ನ ಯಜ್ಞಕ್ಕೆ ಮಹತ್ವ ನೀಡಲಾಗಿದೆ. ಭಗವದ್ಗೀತೆಯಲ್ಲಿ ‘ಅನ್ನಾತ್ ಭವಂತಿ ಭೂತಾನಿ ಪರ್ಜನ್ಯಾತ್ ಅನ್ನಸಂಭವಃ’ ಎಂದು ಹೇಳಿದಂತೆ, ಅನ್ನವು ಜೀವರಕ್ಷಕ ಮತ್ತು ಪ್ರಾಣ ರಕ್ಷಕವಾಗಿದೆ. ಅನ್ನಪೂರ್ಣೇಶ್ವರಿಯನ್ನು ನಾವು ಸದಾ ಪೂರ್ಣೆಯೆಂದು ಪೂಜಿಸುತ್ತೇವೆ. ನಾವು ಅನ್ನಕ್ಕೆ ಎಷ್ಟು ಗೌರವ ಮತ್ತು ಭಕ್ತಿ ಸಮರ್ಪಿಸುತ್ತೇವೆಯೋ, ನಮ್ಮ ದೇಹವೂ ಅಷ್ಟು ಚೆನ್ನಾಗಿರುತ್ತದೆ.
ಆದರೆ, ಅನ್ನದ ವಿಷಯದಲ್ಲಿ ಕೆಲವು ಅಭ್ಯಾಸಗಳನ್ನು ತ್ಯಜಿಸುವುದು ಅವಶ್ಯಕ. ಅವುಗಳಲ್ಲಿ ಪ್ರಮುಖವಾದುದು ಹಾಸಿಗೆ ಮೇಲೆ ಕುಳಿತು ಆಹಾರ ಸೇವಿಸುವುದು. ಹಾಸಿಗೆ ಮೇಲೆ ಕುಳಿತು ಅನ್ನ, ನೀರು, ಕಾಫಿ, ಅಥವಾ ಯಾವುದೇ ಹಣ್ಣುಗಳನ್ನು ತಿನ್ನುವುದು ಸಮಂಜಸವಲ್ಲ. ಈ ಅಭ್ಯಾಸವು ಸಕಾರಾತ್ಮಕ ಶಕ್ತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.
ಈ ಅಭ್ಯಾಸದಿಂದ ಮಕ್ಕಳಾಗಲಿ, ವಿದ್ಯಾರ್ಥಿಗಳಾಗಲಿ ಜ್ಞಾಪಕ ಶಕ್ತಿ ಕಡಿಮೆಯಾಗಲು ಕಾರಣವಾಗಬಹುದು. ವ್ಯಾಪಾರಸ್ಥರಿಗೆ ವ್ಯಾಪಾರದಲ್ಲಿ ನಷ್ಟಗಳು ಸಂಭವಿಸುತ್ತವೆ. ಒಟ್ಟಾರೆ, ಜೀವನದಲ್ಲಿ ಕಷ್ಟಗಳು ಹೆಚ್ಚಾಗುತ್ತವೆ ಮತ್ತು ಕೆಲವರು ಇದನ್ನು ನರಕ ಪ್ರಾಪ್ತಿಗೆ ಸಮವೆಂದು ಹೇಳುತ್ತಾರೆ. ಹಾಸಿಗೆ ಮೇಲೆ ಆಹಾರ ಸೇವನೆಯಿಂದ ಮಹಾಲಕ್ಷ್ಮಿಗೆ ಕೋಪ ಬರುತ್ತದೆ. ಇದರ ಜೊತೆಗೆ ನಮ್ಮ ನವಗ್ರಹಗಳು ಸಹ ವಿಚಿತ್ರವಾಗಿ ಮತ್ತು ವಿರೋಧವಾಗಿ ವರ್ತಿಸುತ್ತವೆ. ಇದರಿಂದ ಸಕಲ ದೇವಾನುದೇವತೆಗಳ ಕೃಪೆಗೆ ಪಾತ್ರರಾಗಲು ಸಾಧ್ಯವಾಗುವುದಿಲ್ಲ.
ಪರಿಣಾಮವಾಗಿ, ಮನೆಯಲ್ಲಿ ಕಲಹಗಳು, ಗಲಾಟೆಗಳು, ಕೋಪ-ತಾಪಗಳು ಹೆಚ್ಚಾಗುತ್ತವೆ. ಮನಸ್ಸು ವಿಚಲಿತವಾಗುತ್ತದೆ ಮತ್ತು ಶುದ್ಧತೆ ಇರುವುದಿಲ್ಲ. ಸನಾತನ ಸಂಪ್ರದಾಯದಲ್ಲಿ ಹಾಸಿಗೆ ಮೇಲೆ ಕುಳಿತು ಆಹಾರವಾಗಲಿ, ಕಾಫಿಯಾಗಲಿ, ಪಾನೀಯವಾಗಲಿ ಅಥವಾ ಹಣ್ಣುಗಳಾಗಲಿ ಸೇವಿಸುವುದು ಒಳ್ಳೆಯದಲ್ಲ ಎಂದು ವಾಸ್ತು ತಜ್ಞರು ಎಚ್ಚರಿಸಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ