ಐಪಿಎಲ್ನಲ್ಲಿ ತಲಾ ಐದು ಬಾರಿ ಚಾಂಪಿಯನ್ ಆಗಿರುವ ಎರಡು ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳಿಗೆ ಈ ಆವೃತ್ತಿಯಲ್ಲಿ ನಿರೀಕ್ಷಿತ ಆರಂಭ ಸಿಕ್ಕಿಲ್ಲ. ಉಭಯ ತಂಡಗಳು ಗೆದ್ದಿದ್ದಕ್ಕಿಂತ ಸೋತಿದ್ದೆ ಹೆಚ್ಚು ಇದಕ್ಕಾ ಕಾರಣ, ಉಭಯ ತಂಡಗಳಲ್ಲಿರುವ ಗಾಯದ ಸಮಸ್ಯೆ. ಇದೆಲ್ಲದರ ನಡುವೆ ಎರಡು ತಂಡಗಳಿಗೆ ಒಳ್ಳೆಯ ಸುದ್ದಿ ಸಿಕ್ಕಿದೆ. ಈ ಎರಡೂ ತಂಡಗಳಿಗೆ ಇಬ್ಬರು ಸ್ಟಾರ್ ಆಟಗಾರರ ಆಗಮನವಾಗಿದೆ.
ನಾಥನ್ ಎಲಿಸ್ ಮತ್ತು ಖಲೀಲ್ ಅಹ್ಮದ್ ಅವರ ನಿರ್ಗಮನದಿಂದ ತೊಂದರೆಗೀಡಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಸ್ಟ್ರೇಲಿಯಾದ ಸ್ಟಾರ್ ವೇಗಿ ಸ್ಪೆನ್ಸರ್ ಜಾನ್ಸನ್ ಅವರ ಸೇರ್ಪಡೆಯಾಗಿದೆ. ಈ ವಿಚಾರವನ್ನು ಸ್ವತಃ ಸಿಎಸ್ಕೆ ಫ್ರಾಂಚೈಸಿಯೇ ತನ್ನ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದೆ. ನಾಥನ್ ಎಲಿಸ್ ಬದಲಿಗೆ ಸ್ಪೆನ್ಸರ್ ಜಾನ್ಸನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಇತ್ತ ಕ್ರಿಕ್ಬಜ್ ಪ್ರಕಾರ, ಇಂಗ್ಲೆಂಡ್ನ ಅಪಾಯಕಾರಿ ಆಲ್ರೌಂಡರ್ ವಿಲ್ ಜ್ಯಾಕ್ಸ್ ಮುಂಬೈ ಇಂಡಿಯನ್ಸ್ ಶಿಬಿರವನ್ನು ಸೇರಿಕೊಂಡಿದ್ದಾರೆ. ಗಾಯದಿಂದಾಗಿ ಐಪಿಎಲ್ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದ ಜ್ಯಾಕ್ಸ್ ಇದೀಗ ಗಾಯದಿಂದ ಚೇತರಿಸಿಕೊಂಡು ತಂಡವನ್ನು ಸೇರಿಕೊಂಡಿದ್ದಾರೆ. ಜ್ಯಾಕ್ಸ್ ಭಾರತಕ್ಕೆ ಬಂದಿದ್ದು ತಂಡದೊಂದಿಗೆ ತರಬೇತಿ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಮುಂಬೈ ಇಂಡಿಯನ್ಸ್ ತಂಡ: ಕ್ವಿಂಟನ್ ಡಿ ಕಾಕ್, ರಿಯಾನ್ ರಿಕಲ್ಟನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ , ಹಾರ್ದಿಕ್ ಪಾಂಡ್ಯ (ನಾಯಕ), ಶೆರ್ಫೇನ್ ರುದರ್ಫೋರ್ಡ್, ನಮನ್ ಧೀರ್, ಮಯಾಂಕ್ ರಾವತ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ, ರೋಹಿತ್ ಶರ್ಮಾ, ಟ್ರೆಂಟ್ ಬೌಲ್ಟ್, ಆಶ್ವನಿ ಕುಮಾರ್, ಕಾರ್ಬಿನ್ ಬಾಷ್, ಮಯಾಂಕ್ ಮಾರ್ಕಂಡೆ, ರಘು ಶರ್ಮಾ, ರಾಜ್ ಬಾವಾ, ರಾಬಿನ್ ಮಿಂಜ್, ಅಲ್ಲಾ ಗಜನ್ಫರ್, ಡ್ಯಾನಿಶ್ ಮಾಲೆವಾರ್, ಕ್ರಿಶ್ ಭಗತ್, ಮೊಹಮ್ಮದ್ ಸಲಾವುದ್ದೀನ್ ಇಝಾರ್.
ಚೆನ್ನೈ ಸೂಪರ್ ಕಿಂಗ್ಸ್ ತಂಡ: ಮಹೇಂದ್ರ ಸಿಂಗ್ ಧೋನಿ, ರುತುರಾಜ್ ಗಾಯಕ್ವಾಡ್ (ನಾಯಕ), ಸಂಜು ಸ್ಯಾಮ್ಸನ್, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಉರ್ವಿಲ್ ಪಟೇಲ್, ನೂರ್ ಅಹ್ಮದ್, ನಾಥನ್ ಎಲ್ಲಿಸ್, ಶ್ರೇಯಸ್ ಗೋಪಾಲ್, ರಾಮಕೃಷ್ಣ ಘೋಷ್, ಮುಕೇಶ್ ಚೌಧರಿ, ಜೇಮಿ ಓವರ್ಟನ್, ಗುರ್ಜಪನೀತ್ ಸಿಂಗ್, ಮ್ಯಾಥ್ಯೂ ಶಾರ್ಟ್, ಅಮನ್ ಖಾನ್, ಸರ್ಫರಾಜ್ ಖಾನ್, ಮ್ಯಾಟ್ ಹೆನ್ರಿ, ರಾಹುಲ್ ಚಾಹರ್, ಸ್ಪೆನ್ಸರ್ ಜಾನ್ಸನ್
