ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ – Kannada News | Mrunal Thakur shared dance shoot video with Varun Dhawan

ನಟಿ ಮೃಣಾಲ್ ಠಾಕೂರ್ (Mrunal Thakur) ಬಲು ಬೇಡಿಕೆಯ ಪ್ಯಾನ್ ಇಂಡಿಯಾ ನಟಿ. ತೆಲುಗು ಸಿನಿಮಾಗಳ ಜೊತೆಗೆ ಬಾಲಿವುಡ್ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಮೃಣಾಲ್ ಠಾಕೂರ್ ನಟನೆಯ ತೆಲುಗು ಸಿನಿಮಾ ‘ಡಕಾಯತ್’ ಬಿಡುಗಡೆ ಆಗಿದೆ. ಇದೀಗ ಬಾಲಿವುಡ್​​ನ ನಟ ವರುಣ್ ಧವನ್ ಜೊತೆಗೆ ‘ಹೈ ಜವಾನಿ ಥೋ ಇಷ್ಕ್ ಹೋನಾ ಹೈ’ ಸಿನಿಮಾನಲ್ಲಿ ನಟಿಸಿದ್ದಾರೆ. ಹಾಡಿನ ಚಿತ್ರೀಕರಣದ ವಿಡಿಯೋ ಒಂದನ್ನು ನಟಿ ಮೃಣಾಲ್ ಠಾಕೂರ್ ಹಂಚಿಕೊಂಡಿದ್ದಾರೆ. ಹಾಡಿನಲ್ಲಿ ವರುಣ್ ಹಾಗೂ ಮೃಣಾಲ್ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ

ಸಂಗೀತ ನಿರ್ದೇಶಕರು ತಮ್ಮ ಸಿನಿಮಾಗಳಿಗೆ ಲೈವ್ ಸಂಗೀತವನ್ನು ರೆಕಾರ್ಡ್ ಮಾಡುವದು ಉಂಟು. ಲೈವ್ ರೆಕಾರ್ಡ್, ಅತ್ಯುತ್ತಮ ಸಂಗೀತವನ್ನು ನೀಡುತ್ತದೆ ಎಂಬ ನಂಬಿಕೆ ಇದೆ. ಭಾರತದಲ್ಲಿ ಚೆನ್ನೈನ ಪ್ರತಿಷ್ಠಿತ ಸನ್​​ಶೈನ್ ಆರ್ಕೆಸ್ಟ್ರಾ ಮೂಲಕ ರೆಕಾರ್ಡ್ ಮಾಡಲಾಗುತ್ತದೆ. ವಿದೇಶದಲ್ಲಿ ರಾಯಲ್ ಫಿಲಾರ್ಮೋನಿಕ್ ಆರ್ಕೆಸ್ಟ್ರಾ ಬಲು ಜನಪ್ರಿಯ ಆರ್ಕೆಸ್ಟ್ರಾ. ಇದೀಗ ಎಆರ್ ರೆಹಮಾನ್ ಅವರು ‘ರಾಮಾಯಣ’ ಸಿನಿಮಾಕ್ಕಾಗಿ ಈ ಎರಡೂ ಆರ್ಕೆಸ್ಟ್ರಾಗಳನ್ನು ಒಂದೆಡೆ ಸೇರಿಸಿ ಸಂಗೀತ ರೆಕಾರ್ಡ್ ಮಾಡುತ್ತಿದ್ದಾರೆ. ನೆನಪಿರಲಿ, ‘ರಾಮಾಯಣ’ ಸಿನಿಮಾಕ್ಕೆ ರೆಹಮಾನ್ ಜೊತೆಗೆ ಹಾಮ್ಸ್ ಝೀಮರ್ ಸಹ ಸಂಗೀತ ನೀಡುತ್ತಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆಟೋ, ಕ್ಯಾಬ್​​ ಚಾಲಕರಿಗೆ ಕನ್ನಡ ಕಡ್ಡಾಯ ಪ್ರಸ್ತಾಪಕ್ಕೆ ಭಾರಿ ವಿರೋಧ; ಕಾರಣ ಇಲ್ಲಿದೆ – Kannada News | Compulsory Kannada for Auto, Cab Drivers Faces Strong Opposition in Karnataka

ಬೆಂಗಳೂರು, ಏಪ್ರಿಲ್​​ 21: ರಾಜ್ಯದಲ್ಲಿ ಆಟೋ ಮತ್ತು ಕ್ಯಾಬ್ ಚಾಲನೆ ಮಾಡುವ ಚಾಲಕರಿಗೆ ಕಡ್ಡಾಯವಾಗಿ ಕನ್ನಡ ಗೊತ್ತಿರಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಆಗ್ರಹಿಸಿತ್ತು. ಮಹಾರಾಷ್ಟ್ರ ಸರ್ಕಾರ ಮರಾಠಿ ಭಾಷೆ ಕಡ್ಡಾಯಗೊಳಿಸಿ ಇತ್ತೀಚೆಗೆ ಆದೇಶ ಹೊರಡಿಸಿದ್ದು, ಎಲ್ಲಾ ವಾಣಿಜ್ಯ ವಾಹನ ಚಾಲಕರು ಪರವಾನಗಿ ಹೊಂದಲು ಸ್ಥಳೀಯ ಭಾಷೆಯಾದ ಮರಾಠಿ ಓದಲು, ಬರೆಯಲು ಮತ್ತು ಮಾತನಾಡಲು ಬರಬೇಕು ಎಂಬ ನಿಯಮ ಜಾರಿಗೆ ತರೋದಾಗಿ ಹೇಳಿತ್ತು. ಅದೇ ರೀತಿ ರಾಜ್ಯದಲ್ಲಿಯೂ ನಿಯಮ ತರಬೇಕೆಂಬ ಆಗ್ರಹ ಕೇಳಿಬಂದಿತ್ತು. ಆದರೆ ಈ ವಿಚಾರಕ್ಕೀಗ ಆಟೋ ಚಾಲಕರ ಸಂಘಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ (ARDU) ಪ್ರಧಾನ ಕಾರ್ಯದರ್ಶಿ ಡಿ. ರುದ್ರಮೂರ್ತಿ, ಬೆಂಗಳೂರು ನಗರದ ಬಹುಸಾಂಸ್ಕೃತಿಕ ಸ್ವಭಾವವನ್ನು ಗಮನಿಸಿದರೆ ಈ ನಿಯಮ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ಜನಸಂಚಾರ ವೈವಿಧ್ಯಮಯವಾಗಿದೆ. ಎಲ್ಲವೂ ಡಿಜಿಟಲ್ ಆಗಿರುವುದರಿಂದ ಆಟೋ ಓಡಿಸಲು ಕನ್ನಡ ತಿಳಿದಿರಬೇಕೆಂಬ ಅನಿವಾರ್ಯತೆ ಕಡಿಮೆ ಇದೆ. ಆ್ಯಪ್​​ನಲ್ಲಿ  ಸ್ಥಳ ನಮೂದಿಸಿ, ಮತ್ತೊಂದು ಆ್ಯಪ್ ಮೂಲಕ ಹಣ ಪಾವತಿಸಲಾಗುತ್ತದೆ. ಅಲ್ಲದೆ ಚಾಲಕರು ಬಹುತೇಕ ಬಹುಭಾಷಾ ಜ್ಞಾನ ಹೊಂದಿದ್ದಾರೆ. ಹೀಗಾಗಿ ಇಂತಹ ನಿಯಮ ಸಾವಿರಾರು ಚಾಲಕರ ಜೀವನೋಪಾಯಕ್ಕೆ ತೊಂದರೆ ಉಂಟುಮಾಡಬುದು ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಗುಂಡಿ ಬಿದ್ದ ರಸ್ತೆಗಳು, ಹದಗೆಟ್ಟ ವ್ಯವಸ್ಥೆ; ರಾಜ್ಯ ಸರ್ಕಾರದ ವಿರುದ್ಧ ಮೋಹನ್‌ದಾಸ್ ಪೈ ಸಿಡಿಮಿಡಿ!

ಸರ್ಕಾರವು ಇಂತಹ ನಿಯಮಗಳನ್ನು ತರುವ ಬದಲು, ಪ್ರಸ್ತುತವಾಗಿ ಎದುರಿಸುತ್ತಿರುವ ಗ್ಯಾಸ್ ಸಮಸ್ಯೆ ನಿವಾರಣೆಗೆ ಗಮನಹರಿಸಬೇಕು. ಈಗ ನಮ್ಮ ದೊಡ್ಡ ಸಮಸ್ಯೆ LPG ದರ ಏರಿಕೆ. ಇದರಿಂದ ಆಟೋ ಚಾಲಕರ ಜೀವನೋಪಾಯದ ಮೇಲೆ ಪರಿಣಾಮ ಬೀಳುತ್ತಿದೆ. ಹೀಗಾಗಿ ಈ ನಿಟ್ಟಿನಲ್ಲಿ ಸರ್ಕಾರದಿಂದ ಸಹಾಯ ಬೇಕಾಗಿದೆ ಎಂದು ಆದರ್ಶ ಆಟೋ ಡ್ರೈವರ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಸಿ. ಸಂಪತ್ ತಿಳಿಸಿದ್ದಾರೆ.

ಇದಕ್ಕೆ ವಿರುದ್ಧವಾಗಿ ಕೆಲವು ಕ್ಯಾಬ್ ಚಾಲಕರು ನಿಯಂತ್ರಣದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ವರ್ಷ ಮಾತ್ರವೇ ಸುಮಾರು 5,000 ಕೇರಳದ ಕ್ಯಾಬ್ ಚಾಲಕರು ಕೆಲಸ ಆರಂಭಿಸಿದ್ದಾರೆ. ಪಂಜಾಬ್‌ನಿಂದಲೂ ಹಲವರು ಬರುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ಹೊರರಾಜ್ಯದ ಚಾಲಕರಯ ಡ್ರಗ್ಸ್​​ ದಂಧೆಯಲ್ಲಿ ಭಾಗಿಯಾಗಿರುವ ಉದಾಹರಣೆಗಳೂ ಇವೆ ಎಂದು ಓಲಾ-ಉಬರ್ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಹೇಳಿದ್ದಾರೆ. ಅವರ ಪ್ರಕಾರ ಭಾಷೆ ಸಂಬಂಧಿತ ನಿಯಮ ಅಥವಾ ಕಠಿಣ ನಿಯಂತ್ರಣ ಕ್ರಮಗಳನ್ನು ಸರ್ಕಾರ ಜಾರಿಗೆ ತರುವುದು ಅಗತ್ಯವಿದೆ ಎಂದು ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ! ಇಡಿ ದಾಳಿ ವೇಳೆ ಸಿಕ್ಕಿತು ಮಹತ್ವದ ದಾಖಲೆ – Kannada News | Nalapad Haris Under ED Scanner:Rs.37 Lakh Seized, Bitcoin Scam Link Probed

ಬೆಂಗಳೂರು, ಏ.21: ಎನ್.ಎ. ಹ್ಯಾರಿಸ್ ಅವರ ನಿವಾಸದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ನೆನ್ನೆ (ಏ.20) 21 ಗಂಟೆಗಳ ಕಾಲ ನಿರಂತರವಾಗಿ ದಾಳಿ ನಡೆಸಿದ್ದಾರೆ. ಈ ಮಹತ್ವದ ಶೋಧ ಕಾರ್ಯಾಚರಣೆಯಲ್ಲಿ 37 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ನಗದು ಜೊತೆಗೆ, ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ದಾಖಲೆಗಳು, ಆಸ್ತಿಪಾಸ್ತಿ ವಿವರಗಳು ಮತ್ತು ವಿವಿಧ ಹೂಡಿಕೆಗಳಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ದಾಖಲೆಗಳು ಹ್ಯಾರಿಸ್ ಅವರ ದೊಡ್ಡ ಸಾಮ್ರಾಜ್ಯದ ಭಾಗವಾಗಿರಬಹುದು, ಆದರೆ ಇ.ಡಿ. ದಾಳಿಯಲ್ಲಿ ಅವುಗಳ ಪತ್ತೆ ಮಹತ್ವ ಪಡೆದಿದೆ. ದಾಳಿಯ ಸಂದರ್ಭದಲ್ಲಿ, ಅಧಿಕಾರಿಗಳು ರಾಯ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದ ವಿವರಗಳನ್ನೂ ಕಲೆಹಾಕಿದ್ದಾರೆ ಎಂದು ವರದಿಯಾಗಿದೆ. ಈ ದಾಳಿ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದ್ದು, ಇದರ ಪ್ರಮುಖ ಆರೋಪಿ ಶ್ರೀಕಿಯನ್ನು ಸಹ ತನಿಖೆಯ ವ್ಯಾಪ್ತಿಗೆ ತರಲಾಗಿದೆ. ಶ್ರೀಕಿ ಜೈಲಿನಿಂದ ಹೊರಬಂದ ನಂತರ ಐಷಾರಾಮಿ ಜೀವನ ನಡೆಸುತ್ತಿದ್ದ ಬಗ್ಗೆ ಇ.ಡಿ. ಪರಿಶೀಲನೆ ನಡೆಸುತ್ತಿದ್ದು, ಇದು ಹ್ಯಾರಿಸ್ ಪ್ರಕರಣದ ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆಯಿದೆ. ಶ್ರೀಕಿ ಮನೆಯಲ್ಲಿ ಸುಲಭವಾಗಿ ದಾಖಲೆಗಳು ಸಿಗದಿದ್ದರೂ, ಇ.ಡಿ. ಅಧಿಕಾರಿಗಳು ಪ್ರಮುಖ ಮಾಹಿತಿಗಾಗಿ ಶೋಧ ಮುಂದುವರಿಸಿದ್ದಾರೆ.  ಆದರೆ ಈ ಶೋಧದಲ್ಲಿ ತಮ್ಮ ಮನೆಯಿಂದ ಕೇವಲ ಎರಡು ಮೊಬೈಲ್ ಫೋನ್‌ಗಳನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದು, “ಒಂದು ನಯ ಪೈಸೆ” ಕೂಡ ಪತ್ತೆಯಾಗಿಲ್ಲ ಎಂದು ನಲಪಾಡ್​​ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Swapna Shastra: ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ನವಿಲು ಕಂಡರೆ ಏನರ್ಥ? – Kannada News | Peacock Dream Meaning: Good or Bad? Decoding Swapna Shastra Interpretations

ಸ್ವಪ್ನ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಕನಸಿಗೂ ಅದರದ್ದೇ ಆದ ಅರ್ಥ ಮತ್ತು ಸಂದೇಶವಿರುತ್ತದೆ. ಅದರಲ್ಲಿಯೂ ನವಿಲಿನ ಕನಸು ಬೀಳುವುದು ಅತ್ಯಂತ ವಿಶೇಷ. ಇದನ್ನು ಸೌಂದರ್ಯ, ಸಮೃದ್ಧಿ ಮತ್ತು ಆಧ್ಯಾತ್ಮಿಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ನವಿಲು ಕನಸಿನಲ್ಲಿ ಕಾಣಿಸಿಕೊಂಡರೆ, ಅದು ನಿಮ್ಮ ಜೀವನದಲ್ಲಿ ಬರಲಿರುವ ದೊಡ್ಡ ಬದಲಾವಣೆಯ ಮುನ್ಸೂಚನೆಯಾಗಿರುತ್ತದೆ. ಆದರೆ, ಕನಸಿನ ಸನ್ನಿವೇಶಕ್ಕೆ ಅನುಗುಣವಾಗಿ ಅದರ ಫಲಗಳು ಬದಲಾಗುತ್ತವೆ. ಅವುಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಶುಭ ಸೂಚನೆ ನೀಡುವ ನವಿಲಿನ ಕನಸುಗಳು:

ನೀವು ಅವಿವಾಹಿತರಾಗಿದ್ದು, ಕನಸಿನಲ್ಲಿ ಜೋಡಿ ನವಿಲುಗಳನ್ನು ಕಂಡರೆ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿಬರಲಿದೆ ಎಂದರ್ಥ. ಇದು ಸುಂದರ ದಾಂಪತ್ಯ ಮತ್ತು ಸ್ಥಿರ ಭವಿಷ್ಯದ ಸಂಕೇತವಾಗಿದೆ.

ಅಪರೂಪದ ಬಿಳಿ ನವಿಲು:

ಕನಸಿನಲ್ಲಿ ಬಿಳಿ ನವಿಲು ಕಾಣುವುದು ಅತ್ಯಂತ ವಿರಳ ಮತ್ತು ಶುಭ. ಇದು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಸೂಚಿಸುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಹಠಾತ್ ಸುಧಾರಣೆ ಕಂಡುಬರಲಿದ್ದು, ಅನಿರೀಕ್ಷಿತ ಧನಲಾಭವಾಗುವ ಸಾಧ್ಯತೆ ಇರುತ್ತದೆ.

ನವಿಲು ಗರಿಗಳು:

ಶ್ರೀಕೃಷ್ಣನ ಶಿರದಲ್ಲಿ ರಾರಾಜಿಸುವ ನವಿಲು ಗರಿ ಕನಸಿನಲ್ಲಿ ಕಂಡರೆ, ನಿಮ್ಮ ಜೀವನದ ಅಡೆತಡೆಗಳು ನಿವಾರಣೆಯಾಗಲಿವೆ ಎಂದರ್ಥ. ಇದು ಗ್ರಹ ದೋಷಗಳ ಶಾಂತಿ ಮತ್ತು ಸಕಾರಾತ್ಮಕ ಶಕ್ತಿಯ ಆಗಮನವನ್ನು ಸೂಚಿಸುತ್ತದೆ.

ಎಚ್ಚರಿಕೆಯ ಅಗತ್ಯವಿರುವ ಸಂದರ್ಭಗಳು:

ಸ್ವಪ್ನ ಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ನವಿಲಿನ ಕನಸು ಎಚ್ಚರಿಕೆಯ ಗಂಟೆಯೂ ಆಗಿರಬಹುದು. ಸತ್ತ ನವಿಲು ಕನಸಲ್ಲಿ ಕಂಡರೆ ಆರ್ಥಿಕ ನಷ್ಟ ಅಥವಾ ವೃತ್ತಿಜೀವನದಲ್ಲಿ ಎದುರಾಗಬಹುದಾದ ಸಂಕಷ್ಟವನ್ನು ಸೂಚಿಸುತ್ತದೆ. ಇಂತಹ ಕನಸು ಬಿದ್ದರೆ ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರುವುದು ಉತ್ತಮ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ನವಿಲುಗಳ ಕಾದಾಟ:

ಕನಸಿನಲ್ಲಿ ನವಿಲುಗಳು ಪರಸ್ಪರ ಜಗಳವಾಡುತ್ತಿದ್ದರೆ, ಅದು ನಿಮ್ಮ ವೈಯಕ್ತಿಕ ಸಂಬಂಧಗಳಲ್ಲಿ ಬಿರುಕು ಮೂಡಬಹುದು ಅಥವಾ ನಿಮ್ಮಲ್ಲಿ ಅಹಂಕಾರ ಹೆಚ್ಚಾಗುತ್ತಿದೆ ಎಂಬುದರ ಸೂಚನೆಯಾಗಿದೆ. ಅದಲ್ಲದೇ ನವಿಲು ಹಾರದೆ ಅಥವಾ ನರ್ತಿಸದೆ ಸುಮ್ಮನೆ ನೆಲದ ಮೇಲೆ ಕುಳಿತಿದ್ದರೆ, ಅದು ನಿಮ್ಮ ಕೆಲಸಗಳಲ್ಲಿ ವಿಳಂಬ ಅಥವಾ ಅವಕಾಶಗಳು ಕೈತಪ್ಪುವ ಸಾಧ್ಯತೆಯನ್ನು ತೋರಿಸುತ್ತದೆ.

ಕಪ್ಪು ನವಿಲು:

ಕಪ್ಪು ಬಣ್ಣದ ನವಿಲು ಕನಸಿನಲ್ಲಿ ಕಂಡರೆ ಅದು ಮಾನಸಿಕ ಗೊಂದಲ ಅಥವಾ ಗೌರವಕ್ಕೆ ಧಕ್ಕೆ ಬರುವಂತಹ ಸಂದೇಶವನ್ನು ನೀಡುತ್ತದೆ ಎನ್ನಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಾಂಧಿ ಕುಟುಂಬವನ್ನು ಸಂತೋಷಪಡಿಸಲು ನಿಮ್ಮ ಘನತೆ ಕಳೆದುಕೊಂಡಿರಿ; ಖರ್ಗೆಗೆ ಯಡಿಯೂರಪ್ಪ ತಿರುಗೇಟು – Kannada News | Karnataka Former CM BS Yediyurappa condems Mallikarjun Kharges Terrorist Statement on PM Modi

ಬೆಂಗಳೂರು, ಏಪ್ರಿಲ್ 21: ತಮಿಳುನಾಡಿನ ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭಯೋತ್ಪಾದಕ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆದಿದ್ದಾರೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, “ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರೇ, ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಭಯೋತ್ಪಾದಕ’ ಎಂದು ನೀವು ನೀಡಿರುವ ಅತ್ಯಂತ ಹೇಯ ಹೇಳಿಕೆಯು ನಿಮ್ಮ ದುರಹಂಕಾರದ ಪರಮಾವಧಿಯಷ್ಟೇ ಅಲ್ಲ, ನಿಮ್ಮ ಕೊಳಕು, ವಿಷಕಾರಿ ಮನಸ್ಥಿತಿಯನ್ನು ಸಹ ಬಹಿರಂಗಪಡಿಸಿದೆ. ಭಾರತದ ಜನರು, ನಮ್ಮ ಗೌರವಾನ್ವಿತ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಅಚಲ ನಂಬಿಕೆಯೊಂದಿಗೆ, ಅವರನ್ನು ಸತತ ಮೂರನೇ ಬಾರಿಗೆ ಪ್ರಧಾನಿ ಕುರ್ಚಿಯಲ್ಲಿ ಕೂರಿಸಿದ್ದಾರೆ. ಅವರನ್ನು ಟೀಕಿಸುತ್ತಾ ಅವರನ್ನು ಈ ರೀತಿ ಅವಮಾನಿಸುವುದು ಮೋದಿ ಅವರನ್ನು ಬೆಂಬಲಿಸುವ ಕೋಟ್ಯಂತರ ಭಾರತೀಯರನ್ನು ಅವಮಾನಿಸಿದಂತೆ!” ಎಂದಿದ್ದಾರೆ.

“ಮೂರನೇ ಬಾರಿಗೆ ಜನ ಪ್ರಧಾನಿಯಾಗಿ ಮೋದಿ ಅವರನ್ನು ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಇಂತಹ ದುರ್ವರ್ತನೆ ಅಭ್ಯಾಸವಾಗಿದೆ. ನಿಮ್ಮ ರಾಜಕೀಯ ವೈಷಮ್ಯಕ್ಕೆ ಪ್ರಧಾನಿಯವರನ್ನು ಕೀಳಾಗಿ ನೋಡಬೇಡಿ. ಕೂಡಲೇ ಮಲ್ಲಿಕಾರ್ಜುನ ಖರ್ಗೆ ಕ್ಷಮೆ ಕೇಳಬೇಕು” ಎಂದು ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದ ಮಲ್ಲಿಕಾರ್ಜುನ ಖರ್ಗೆ; ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ

“ಇಂತಹ ನೀಚ ನಡವಳಿಕೆಯು ಕಾಂಗ್ರೆಸ್ ನಾಯಕರಿಗೆ ಅಭ್ಯಾಸವಾಗಿ ಹೋಗಿದೆ. ಪ್ರತಿ ಬಾರಿ ಚುನಾವಣೆಗಳು ಬಂದಾಗ, ಅವರು ಇಂತಹ ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಜನರು ಅವರಿಗೆ ಪ್ರತಿಕ್ರಿಯೆಯಾಗಿ ಪಾಠ ಕಲಿಸುತ್ತಿದ್ದಾರೆ. ಆದರೂ, ಸರಿಪಡಿಸಲು ನಿರಾಕರಿಸುವ ಅವರ ನಡವಳಿಕೆಯು ಅವರ ದುರಹಂಕಾರಕ್ಕೆ ಕನ್ನಡಿಯಾಗಿದೆ” ಎಂದು ಯಡಿಯೂರಪ್ಪ ಕಿಡಿಕಾರಿದ್ದಾರೆ.

ಇದನ್ನೂ ಓದಿ: RSS ಬಗ್ಗೆ ಅವಹೇಳನಕಾರಿ ಮಾತು: ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸಿಡಿದೆದ್ದ ಬಿಜೆಪಿ, ದೂರು ದಾಖಲು

“ಖರ್ಗೆಯವರೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವದಾದ್ಯಂತ ಅನೇಕ ದೇಶಗಳ ನಾಯಕರು ಅಪ್ರತಿಮ ಜಾಗತಿಕ ನಾಯಕ ಎಂದು ಹೊಗಳುತ್ತಿದ್ದಾರೆ. ವಿಶ್ವದ 26ಕ್ಕೂ ಹೆಚ್ಚು ರಾಷ್ಟ್ರಗಳು ಮೋದಿ ಅವರ ನಾಯಕತ್ವವನ್ನು ಗೌರವಿಸಿ ಅವರಿಗೆ ತಮ್ಮ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಇಡೀ ಜಗತ್ತು ಭಾರತದತ್ತ ಹೆಮ್ಮೆಯಿಂದ ನೋಡುತ್ತಿರುವಾಗ, ನಿಮ್ಮ ರಾಜಕೀಯ ದುರುದ್ದೇಶಕ್ಕಾಗಿ ದೇಶದ ಪ್ರಧಾನಿಯ ವಿರುದ್ಧ ಇಂತಹ ಕೀಳು ಮಟ್ಟದ ಪದಗಳನ್ನು ಬಳಸುತ್ತಿರುವುದು ನಿಮ್ಮ ಕೀಳು ಮನಸ್ಥಿತಿ ಮತ್ತು ನಿಮ್ಮ ರಾಜಕೀಯ ಹತಾಶೆಯನ್ನು ಸಾಬೀತುಪಡಿಸುತ್ತದೆ. ಅಧಿಕಾರಕ್ಕಾಗಿ ನಡೆಯುತ್ತಿರುವ ಹುಚ್ಚು ಹೋರಾಟದಲ್ಲಿ ಒಂದು ಕುಟುಂಬವನ್ನು ಸಂತೋಷಪಡಿಸುವ ಸಲುವಾಗಿ ನೀವು ನಿಮ್ಮ ಘನತೆಯನ್ನು ಕಳೆದುಕೊಂಡಿದ್ದೀರಿ. ನಿಮ್ಮಂತಹ ಹಿರಿಯ ವ್ಯಕ್ತಿಯ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ರಾಷ್ಟ್ರದ ಜನರು ಎಂದಿಗೂ ಕ್ಷಮಿಸುವುದಿಲ್ಲ. ಇಂತಹ ಕೀಳು ಮಟ್ಟದ ಹೇಳಿಕೆಗಾಗಿ ನೀವು ತಕ್ಷಣ ಕ್ಷಮೆಯಾಚಿಸಬೇಕೆಂದು ನಾನು ಒತ್ತಾಯಿಸುತ್ತೇನೆ” ಎಂದು ಮಾಜಿ ಸಿಎಂ ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:56 pm, Tue, 21 April 26

Source link

‘ಧುರಂಧರ್’ ತಯಾರಾಗಿದ್ದು ಹೇಗೆ ಗೊತ್ತಾ? ಚಿತ್ರಮಂದಿರದಲ್ಲೇ ನೋಡಿ ಮೇಕಿಂಗ್ ವಿಡಿಯೋ – Kannada News | Dhurandhar Making Video to release in theatres after box office success

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಮತ್ತು ‘ಧುರಂಧರ್ 2’ (Dhurandhar 2) ಚಿತ್ರಗಳು ಸದ್ಯ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿವೆ. 2025ರ ಡಿಸೆಂಬರ್‌ನಲ್ಲಿ ಮೊದಲ ಭಾಗ ಮತ್ತು 2026ರ ಮಾರ್ಚ್ 19ರಂದು ಎರಡನೇ ಭಾಗ ಬಿಡುಗಡೆಯಾಗಿ ಪ್ರೇಕ್ಷಕರನ್ನು ರಂಜಿಸಿದ್ದವು. ಇದೀಗ ರಣವೀರ್ ಸಿಂಗ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ‘ಧುರಂಧರ್’ ಸಿನಿಮಾದ ಮೇಕಿಂಗ್ ವಿಡಿಯೋವನ್ನು (BTS Video) ದೊಡ್ಡ ಪರದೆಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ.

ಬಿಡುಗಡೆಯಾದ ಕೇವಲ ಒಂದು ತಿಂಗಳೊಳಗೆ ‘ಧುರಂಧರ್ 2’ ಸಿನಿಮಾ ಅನೇಕ ದಾಖಲೆಗಳನ್ನು ಪುಡಿಪುಡಿ ಮಾಡಿದೆ. ಭಾರತದ ಮೂರನೇ ಅತಿದೊಡ್ಡ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ. ಚಿತ್ರದ ಯಶಸ್ಸಿನ ಬೆನ್ನಲ್ಲೇ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯಾಗಿ ಮೇಕಿಂಗ್ ವಿಡಿಯೋ ಬಿಡುಗಡೆ ಆಗಲಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಚಿತ್ರದ ಶೂಟಿಂಗ್ ಹಂತದ ಸ್ವಾರಸ್ಯಕರ ಘಟನೆಗಳು, ತಾಂತ್ರಿಕ ಸವಾಲುಗಳು ಮತ್ತು ನಟ-ನಟಿಯರ ವಿಶೇಷ ಸಂದರ್ಶನಗಳನ್ನು ಒಳಗೊಂಡ ಪೂರ್ಣ ಪ್ರಮಾಣದ ಡಾಕ್ಯುಮೆಂಟರಿ ರೂಪಿಸಲಾಗುತ್ತಿದೆ. ಅದನ್ನು 2026ರ ಕೊನೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಸಿದ್​ಧವಾಗಿದೆ ಎನ್ನಲಾಗಿದೆ.

ಚಿತ್ರಮಂದಿರದಲ್ಲಿ ರಿಲೀಸ್ ಆದ ನಂತರ ಇದೇ ಸಾಕ್ಷ್ಯಚಿತ್ರವು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲೂ ವೀಕ್ಷಣೆಗೆ ಲಭ್ಯವಾಗಲಿದೆ. ಈ ಪ್ಲ್ಯಾನ್ ಇರುವ ಕಾರಣದಿಂದಲೇ ರಣವೀರ್ ಸಿಂಗ್, ಅರ್ಜುನ್ ರಾಮ್​ಪಾಲ್ ಮತ್ತು ನಿರ್ದೇಶಕ ಆದಿತ್ಯ ಧರ್ ಸದ್ಯಕ್ಕೆ ಮಾಧ್ಯಮಗಳಿಂದ ದೂರವಿದ್ದು, ತಮ್ಮ ಮೊದಲ ಅಧಿಕೃತ ಸಂದರ್ಶನಗಳನ್ನು ಈ ಮೇಕಿಂಗ್ ಸಿನಿಮಾದಲ್ಲೇ ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಧುರಂಧರ್ ಕಥೆ ಕದ್ದ ಆರೋಪ: ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಹೈಕೋರ್ಟ್ ಸೂಚನೆ

ಹಾಗಂತ ‘ಧುರಂಧರ್’ ತಂಡದವರು ಚಿತ್ರಮಂದಿರದಲ್ಲಿ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡುವುದು ಸಂಪೂರ್ಣ ಹೊಸ ಐಡಿಯಾ ಏನಲ್ಲ. ಈ ಹಿಂದೆ ವಿಕ್ರಾಂತ್ ಮಾಸ್ಸಿ ಅಭಿನಯದ ‘12th ಫೇಲ್’ ಚಿತ್ರದ ಮೇಕಿಂಗ್ ವಿಡಿಯೋವನ್ನು ‘ಜೀರೋ ಸೆ ರಿಸ್ಟಾರ್ಟ್’ ಹೆಸರಿನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ ಅದೇ ಹಾದಿಯಲ್ಲಿ ‘ಧುರಂಧರ್’ ಚಿತ್ರತಂಡ ಕೂಡ ಸಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬರಲಿದೆ ಆಲ್ಕೋಹಾಲ್ ಆಧಾರಿತ ಸುಂಕ; ಇಲ್ಲಿವೆ ಕರ್ನಾಟಕದ ಪ್ರಸ್ತಾಪಿತ ಹೊಸ ಮದ್ಯ ನೀತಿ ಮುಖ್ಯಾಂಶಗಳು – Kannada News | Karnataka liquor rules draft, higher alcohol content attracts higher tax

ಕರ್ನಾಟಕದ ಹೊಸ ಮದ್ಯ ನೀತಿImage Credit source: AI/Mediaforge/TV9

ಬೆಂಗಳೂರು, ಏಪ್ರಿಲ್ 21: ಕರ್ನಾಟಕ ಸರ್ಕಾರವು ಇತ್ತೀಚೆಗೆ ರಾಜ್ಯದ ಅಬಕಾರಿ ನೀತಿಯಲ್ಲಿ (Karnataka Excise Policy) ಐತಿಹಾಸಿಕ ಬದಲಾವಣೆಗಳನ್ನು ತರಲು ಪ್ರಸ್ತಾಪಿಸಿದೆ. ಈ ಹೊಸ ನಿಯಮಗಳು ಮದ್ಯದ ಬೆಲೆ, ಮಾರಾಟ ಮತ್ತು ಪರವಾನಗಿ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ತರಲಿವೆ. ಹೆಚ್ಚು ಪಾರದರ್ಶಕವಾದ ಮತ್ತು ವೈಜ್ಞಾನಿಕವಾದ ಟ್ಯಾಕ್ಸ್ ಸಿಸ್ಟಂ ತರುವುದು ಇದರ ಉದ್ದೇಶ. 1968ರ ಕರ್ನಾಟಕ ಅಬಕಾರಿ ನಿಯಮಗಳಿಗೆ ಕರಡು ತಿದ್ದುಪಡಿಯನ್ನು ಸರ್ಕಾರ ಹೊರಡಿಸಿದೆ. ಡ್ರಿಂಕ್ಸ್​ನಲ್ಲಿ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ಅಬಕಾರಿ ಸುಂಕ ವಿಧಿಸುವ ಕ್ರಮವನ್ನು ಯೋಜಿಸಲಾಗಿದೆ.

ಕರ್ನಾಟಕದ ಹೊಸ ಮದ್ಯ ನೀತಿ: ಕರಡು ನಿಯಮಗಳ ಮುಖ್ಯಾಂಶಗಳು

1. ಮದ್ಯದ ಬೆಲೆ ನಿಗದಿ ಪ್ರಕ್ರಿಯೆಯಲ್ಲಿ ಬದಲಾವಣೆ

ಪ್ರಸ್ತುತ ಮದ್ಯದ ಬೆಲೆಯನ್ನು ಸರ್ಕಾರವೇ ನಿರ್ಧರಿಸುತ್ತದೆ. ಆದರೆ ಕರಡು ಪ್ರಸ್ತಾವನೆಯಲ್ಲಿ, ಮದ್ಯದ ಬೆಲೆ ನಿಗದಿಪಡಿಸುವ ಹಕ್ಕನ್ನು ಮಾರುಕಟ್ಟೆ ಅಥವಾ ಉತ್ಪಾದಕರಿಗೆ ಬಿಟ್ಟುಕೊಡುವ ಬಗ್ಗೆ ಚರ್ಚೆಯಲ್ಲಿದೆ. ಇದರಿಂದ ಪ್ರೀಮಿಯಂ ಮದ್ಯದ ಬೆಲೆಗಳಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ.

2. ಆಲ್ಕೋಹಾಲ್ ಪ್ರಮಾಣದ ಆಧಾರಿತ ತೆರಿಗೆ (AIB)

ಮದ್ಯದ ಮೇಲಿನ ತೆರಿಗೆಯನ್ನು ಬಾಟಲಿಯ ಗಾತ್ರಕ್ಕಿಂತ ಹೆಚ್ಚಾಗಿ, ಅದರಲ್ಲಿರುವ ಆಲ್ಕೋಹಾಲ್ ಅಂಶದ (Alcohol content) ಆಧಾರದ ಮೇಲೆ ವಿಧಿಸಲು ಸರ್ಕಾರ ಉದ್ದೇಶಿಸಿದೆ.

ಇದನ್ನೂ ಓದಿ: ಬೆಂಗಳೂರು ಟೆಕ್ಕಿಯ ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್ ರಾದ್ದಾಂತ; ಬ್ಲ್ಯಾಕ್​ಮೈಲ್, ಆತ್ಮಹತ್ಯೆ ಬೆದರಿಕೆ, ಅಶ್ಲೀಲ ಚಿತ್ರಗಳ ಕರ್ಮಕಾಂಡ

ಈ ನಿಯಮ ಜಾರಿಯಾದರೆ ಕಡಿಮೆ ಆಲ್ಕೋಹಾಲ್ ಇರುವ ಬಿಯರ್, ವೈನ್ ಇತ್ಯಾದಿ ಪಾನೀಯಗಳಿಗೆ ಕಡಿಮೆ ಸುಂಕ ಇರುತ್ತದೆ. ವೈನ್ ಮತ್ತು ಬಿಯರ್​ಗಳಲ್ಲಿ ಆಲ್ಕೋಹಾಲ್ ಪ್ರಮಾಣ ಶೇ. 5ರಿಂದ 10ರಷ್ಟು ಇರುತ್ತದೆ. ಕಂಟ್ರಿ ಸಾರಾಯಿಗಳಲ್ಲಿ ಶೇ. 40ಕ್ಕಿಂತಲೂ ಹೆಚ್ಚು ಆಲ್ಕೋಹಾಲ್ ಇರುವುದರಿಂದ, ಅಂಥವು ದುಬಾರಿಗೊಳ್ಳಬಹುದು. ಪ್ರೀಮಿಯಮ್ ವಿಸ್ಕಿ, ಬ್ರಾಂಡಿ ಇತ್ಯಾದಿ ಹಾಟ್ ಡ್ರಿಂಕ್ಸ್​ಗಳಲ್ಲಿ ಆಲ್ಕೋಹಾಲ್ ಪ್ರಮಾಣ ಸುಮಾರು ಶೇ. 40ರಷ್ಟು ಇರುತ್ತದೆ.

3. ಪರವಾನಗಿ (Licence) ಅವಧಿಯ ವಿಸ್ತರಣೆ

ಈಗಿರುವ ನಿಯಮದಂತೆ ಪ್ರತಿ ವರ್ಷ ಮದ್ಯದ ಅಂಗಡಿಗಳ ಪರವಾನಗಿ ನವೀಕರಿಸಬೇಕು. ಆದರೆ ಹೊಸ ಕರಡು ಪ್ರಸ್ತಾವನೆಯಲ್ಲಿ ಈ ಅವಧಿಯನ್ನು 5 ವರ್ಷಗಳವರೆಗೆ ವಿಸ್ತರಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಇದು ವ್ಯಾಪಾರಿಗಳಿಗೆ ಪದೇ ಪದೇ ಪರವಾನಗಿ ನವೀಕರಣದ ಕಿರಿಕಿರಿ ತಪ್ಪಿಸಲಿದೆ.

4. ಇ-ಹರಾಜು ಮೂಲಕ ಹೊಸ ಪರವಾನಗಿ

ರಾಜ್ಯದಲ್ಲಿ ವರ್ಷಗಳಿಂದ ಬಾಕಿ ಉಳಿದಿರುವ ಅಥವಾ ಹಂಚಿಕೆಯಾಗದ CL-2 (Retail) ಮತ್ತು CL-9 (Bar and Restaurant) ಪರವಾನಗಿಗಳನ್ನು ಪಾರದರ್ಶಕವಾಗಿ ಇ-ಹರಾಜಿನ (E-auction) ಮೂಲಕ ನೀಡಲು ಸರ್ಕಾರ ಯೋಜಿಸುತ್ತಿದೆ.

5. ಮದ್ಯ ಪ್ರವಾಸೋದ್ಯಮಕ್ಕೆ ಉತ್ತೇಜನ

ಬ್ರೂವರಿ ಮತ್ತು ಡಿಸ್ಟಿಲರಿಗಳಲ್ಲಿ ಪ್ರವಾಸಿಗರಿಗೆ ಭೇಟಿ ನೀಡಲು ಅವಕಾಶ ನೀಡುವುದು ಮತ್ತು ಅಲ್ಲಿಯೇ ಮದ್ಯದ ರುಚಿ ನೋಡುವ (Tasting units) ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ಕರಡಿನಲ್ಲಿ ಉಲ್ಲೇಖಿಸಲಾಗಿದೆ. ಇದು ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ನಡೆಯುವ ಸಾಧ್ಯತೆಯಿದೆ.

ಇದನ್ನೂ ಓದಿ: ರಾಜ್‌ಕೋಟ್ ಸೈಬರ್ ವಂಚನೆ: 2,500 ಕೋಟಿ ರೂ ಹಗರಣ ಬಯಲು, ಪ್ರಮುಖ ಬ್ಯಾಂಕ್ ಅಧಿಕಾರಿಗಳ ಬಂಧನ

ಇವುಗಳು ಕೇವಲ ಪ್ರಸ್ತಾವನೆಗಳು. ಸಾರ್ವಜನಿಕರು ಮತ್ತು ಮದ್ಯ ಮಾರಾಟಗಾರರ ಸಂಘದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಪಡೆದ ನಂತರವೇ ಸರ್ಕಾರ ಅಂತಿಮ ಅಧಿಸೂಚನೆಯನ್ನು ಹೊರಡಿಸಲಿದೆ. ಅಲ್ಲಿಯವರೆಗೆ ಈಗಿರುವ ಹಳೆಯ ನಿಯಮಗಳೇ ಮುಂದುವರಿಯಲಿವೆ. ರಾಜ್ಯದಲ್ಲಿ ಮದ್ಯದ ಬೆಲೆ ಏರಿಕೆ ಅಥವಾ ನಿಯಮಗಳ ಬದಲಾವಣೆಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸರ್ಕಾರವು ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಲಿದೆ.

(ಗಮನಿಸಿ: ಆಲ್ಕೋಹಾಲ್​ಯುಕ್ತ ಪಾನೀಯ ಅಥವಾ ಮದ್ಯ ಆರೋಗ್ಯಕ್ಕೆ ಹಾನಿಕರ.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನದಿಗೆ ಈಜಲು ಇಳಿದಿದ್ದ ಇಬ್ಬರು ವಿದ್ಯಾರ್ಥಿನಿಯರು ಜಲಸಮಾಧಿ: ಮೂರೇ ದಿನದಲ್ಲಿ 10 ಮಂದಿ ಕಾವೇರಿ ಪಾಲು! – Kannada News | 2 Students Drown in Cauvery at Talakad, 10 Lives Lost in 3 Days to River Tragedy

ನದಿಗೆ ಈಜಲು ಇಳಿದಿದ್ದ ಇಬ್ಬರು ವಿದ್ಯಾರ್ಥಿನಿಯರು ಜಲಸಮಾಧಿImage Credit source: Tv9 Kannada

ಮೈಸೂರು, ಏಪ್ರಿಲ್​​ 21: ಕಾವೇರಿ ನದಿಗೆ ಈಜಲು ಇಳಿದಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರುಪಾಲಾಗಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತಲಕಾಡಿನ ನಿಸರ್ಗಧಾಮದಲ್ಲಿ ನಡೆದಿದೆ. ಬೆಂಗಳೂರಿನಿಂದ ಪ್ರವಾಸಕ್ಕೆ ತೆರಳಿದ್ದ ಚಾರ್ವಿ(15), ರಮ್ಯಾ(16) ಮೃತ ಬಾಲಕಿಯರಾಗಿದ್ದು, ಮತ್ತೊಬ್ಬ ವಿದ್ಯಾರ್ಥಿನಿ ಸುಚಿತ್ರಾ ಸ್ಥಿತಿ ಗಂಭೀರವಾಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನ ಶಾಲೆಯಿಂದ ಪ್ರವಾಸಕ್ಕೆಂದು 72 ವಿದ್ಯಾರ್ಥಿಗಳು ತಲಕಾಡಿಗೆ ಆಗಮಿಸಿದ್ದರು ಎನ್ನಲಾಗಿದೆ.

3 ದಿನಗಳಲ್ಲಿ 10 ಮಂದಿ ಕಾವೇರಿ ನದಿ ಪಾಲು

ಈಜಲು ಹೋಗಿ ಕಾವೇರಿ ನದಿ ಪಾಲಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಕಳೆದ 3 ದಿನಗಳ ಅವಧಿಯಲ್ಲಿಯೇ 10 ಜನ ನೀರಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಊರುಸ್​​ ಹಿನ್ನೆಲೆ ಮೈಸೂರು ಜಿಲ್ಲೆಯ ಕೆ.ಆರ್.ನಗರಕ್ಕೆ ಬಂದಿದ್ದ ಎಂಟು ಜನರ ತಂಡ ಅರ್ಕೇಶ್ವರ ದೇವಸ್ಥಾನದ ಸಮೀಪವಿರುವ ಕಾವೇರಿ ನದಿಗೆ ಈಜಲು ತೆರಳಿ ನೀರುಪಾಲಾಗಿತ್ತು. ಈ ವೇಳೆ ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದರೆ, ಉಳಿದ 6 ಮಂದಿ ಜೀವ ಕಳೆದುಕೊಂಡಿದ್ದರು. ಮೃತರನ್ನು ಬೆಂಗಳೂರಿನ ಯಾಸಿನ್​(23) ಹಾಗೂ ಹೈಮಾ(13), ಊಟಿ ಮೂಲದ ಸೈದ್ ಫಾತಿಮಾ (38), ಮೈಸೂರು ಜಿಲ್ಲೆಯ ನೇಹಾ(20), ಉಮೇರ್(7) ಮತ್ತು ಅಫಿಯಾ(20) ಎಂದು ಗುರುತಿಸಲಾಗಿತ್ತು.

ಇದನ್ನೂ ಓದಿ: ಕಾವೇರಿ ನದಿಯಲ್ಲಿ 6 ಜನ‌ ಜಲಸಮಾಧಿ; ದರ್ಗಾಕ್ಕೆ ಬಂದವರು ದುರಂತ ಅಂತ್ಯ

ಮತ್ತೊಂದು ದುರ್ಘಟನೆಯಲ್ಲಿ ಪಿರಿಯಾಪಟ್ಟಣದ ದೊಡ್ಡ ಹರವೆ ಗ್ರಾಮದ ಬಳಿ ಕಾವೇರಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಪ್ರಾಣಕಳೆದುಕೊಂಡಿದ್ದರು. ಪಟ್ಟಣದಲ್ಲಿ ಟೈಲ್ಸ್‌ ಮತ್ತು ಪೇಂಟಿಂಗ್‌ ಕೆಲಸ ಮಾಡುತ್ತಿದ್ದ ನಾಲ್ವರು ಯುವಕರು ಭಾನುವಾರ ಮಧ್ಯಾಹ್ನ ಈಜಲೆಂದು ನದಿಗೆ ತೆರಳಿದ್ದರು. ಈ ವೇಳೆ ಗಣೇಶ್ (22) ಮತ್ತು ಇಮ್ರಾನ್ (28) ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಈಗ ಮತ್ತಿಬ್ಬರು ಬಾಲಕಿಯರು ಕಾವೇರಿ ನದಿ ಪಾಲಾಗಿರೋದು ಭಾರಿ ಆತಂಕಕ್ಕೆ ಕಾರಣವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

CSK ತಂಡಕ್ಕೆ ಬಿಗ್ ಶಾಕ್: ಯುವ ದಾಂಡಿಗ ಐಪಿಎಲ್​ನಿಂದ ಔಟ್

Source link

Exit mobile version