Video: ಸರ್ಕಸ್​ನಲ್ಲಿ ಸೇಫ್ಟಿನೆಟ್ ದಾಟಿ ವೇದಿಕೆ ಎದುರಿದ್ದ ಪ್ರೇಕ್ಷಕರೆಡೆಗೆ ಹಾರಿದ ಹುಲಿ – Kannada News | Russia Circus Chaos: Tiger Leaps Into Crowd After Safety Failure

ರಷ್ಯಾ, ಏಪ್ರಿಲ್ 22: ಸರ್ಕಸ್​​ನಲ್ಲಿ ಸೇಫ್ಟಿನೆಟ್ ದಾಟಿ ಹುಲಿಯೊಂದು ಪ್ರೇಕ್ಷಕರಿದ್ದಲ್ಲಿಗೆ ಹಾರಿರುವ ಘಟನೆ ರಷ್ಯಾದಲ್ಲಿ ನಡೆದಿದೆ. ಹುಲಿಯೊಂದು ಇದ್ದಕ್ಕಿದ್ದಂತೆ ಪ್ರೇಕ್ಷಕರತ್ತ ಹಾರಿತು. ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಈ ಕ್ಷಣವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸರ್ಕಸ್ ಕುರಿತು ಕಳವಳ ಹುಟ್ಟುಹಾಕಿದೆ. ಆ ಸರ್ಕಸ್​ನಲ್ಲಿ ಮೂರು ಹುಲಿಗಳು ಹಾಗೂ ಒಬ್ಬ ತರಬೇತುದಾರನಿದ್ದ. ಆ ಸುರಕ್ಷತಾ ನೆಟ್ ಹರಿದುಬೀಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಆಗ ಹುಲಿಯು ವೇದಿಕೆ ಎದುರಿದ್ದ ಪ್ರೇಕ್ಷಕರಿದ್ದಲ್ಲಿಗೆ ಹಾರಿದೆ. ಯಾರೂ ಕೂಗಾಡದಂತೆ ಓಡದಂತೆ ಪ್ರೇಕ್ಷಕರಿಗೆ ಸಲಹೆ ನೀಡಲಾಯಿತು. ಕೂಡಲೇ ತರಬೇತುದಾರ ಆ ಹುಲಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಭಿಷೇಕ್ ಶರ್ಮಾ ಶತಕ ಸಿಡಿಸಿದಾಗ ತಂದೆಯ ಸೆಲೆಬ್ರೇಷನ್ ಹೇಗಿತ್ತು ನೋಡಿ – Kannada News | Abhishek Sharma Father Celebration After he smash Century in SRH vs DC Match

ಹೈದರಾಬಾದ್ ಹಾಗೂ ಡೆಲ್ಲಿ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಹೈದರಾಬಾದ್ ಪರ ಆಡಿದ ಅಭಿಷೇಕ್ ಶರ್ಮ ಅವರು ಶತಕ ಸಿಡಿಸಿದ್ದಾರೆ. ಅವರು ಕೇವಲ 68 ಬಾಲ್​​ಗಳಿಗೆ 135 ರನ್ ಸಿಡಿಸಿದರು. ಸ್ಟ್ರೈಕ್ ರೇಟ್ 198 ಇತ್ತು. ಇದರಲ್ಲಿ 10 ಫೋರ್ ಹಾಗೂ 10 ಸಿಕ್ಸ್ ಸೇರಿವೆ. ಅವರು ಶತಕ ಸಿಡಿಸಿ ಸೆಲೆಬ್ರೇಷನ್ ಮಾಡುವಾಗ ಅವರ ತಂದೆ ಕೂಡ ಖುಷಿಯಾದರು. ಅಭಿಷೇಕ್ ತಂದೆ ಸೆಲೆಬ್ರೇಷನ್ ಮಾಡಿದ ರೀತಿ ಇಲ್ಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

‘ಮಂಚಕ್ಕೆ ಕೈ-ಕಾಲು ಕಟ್ಟಿ ಹಾಕಿ ಬೆಂಕಿ ಹಚ್ಚಿದೆ’: ಪ್ರಿಯಕರನ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿದ ಯುವತಿ ಬಿಚ್ಚಿಟ್ಟಳು ಹಲವು ರಹಸ್ಯ! – Kannada News | Byadarahalli Murder Case: Accused Prema Confesses to Burning Boyfriend Kiran Alive; Statements Revealed

ಬೆಂಗಳೂರು, ಏಪ್ರಿಲ್ 22: ಬೆಂಗಳೂರಿನ (Bengaluru) ಬ್ಯಾಡರಹಳ್ಳಿಯಲ್ಲಿ ನಡೆದ ಕಿರಣ್ ಕೊಲೆ ಪ್ರಕರಣ ಸಂಬಂಧ ಒಂದೊಂದೇ ಭಯಾನಕ ವಿಚಾರಗಳು ಇದೀಗ ಹೊರಬರುತ್ತಿವೆ. ಸದ್ಯ ಆತನ ಪ್ರೇಯಸಿ ಪ್ರೇಮಾ ಪೊಲೀಸರ ವಶದಲ್ಲಿದ್ದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾಳೆ. ಕಿರಣ್ ಕೈಕಾಲುಗಳನ್ನು ಮಂಚಕ್ಕೆ ಕಟ್ಟಿ ಹಾಕಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದೆ ಎಂದು ಆಕೆ ನೀಡಿರುವ ಹೇಳಿಕೆ ಕೇಳಿ ಖುದ್ದು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ನಾಲ್ಕುವರೆ ಲಕ್ಷದ ಗಿಫ್ಟ್ ನೀಡಲು ಮುಂದಾಗಿದ್ದ ಪ್ರೇಮಾ!

ಪೊಲೀಸರ ತನಿಖೆಯ ವೇಳೆ ದೊರೆತ ಮಾಹಿತಿ ಪ್ರಕಾರ, ಕಳೆದ ವರ್ಷ ಆಗಸ್ಟ್‌ನಲ್ಲಿ ಪ್ರೇಮಾಗೆ ಕಿರಣ್ ಪರಿಚಯವಾಗಿದ್ದ. ಈ ವರ್ಷದ ಫೆಬ್ರವರಿ 14ರ ‘ವ್ಯಾಲೆಂಟೈನ್ಸ್ ಡೇ’ ದಿನ ಪ್ರೇಮಾ ತನ್ನ ಪ್ರೀತಿಯನ್ನು ನಿವೇದಿಸಿದ್ದಳು. ಕಿರಣ್ ಕೂಡ ಒಪ್ಪಿಕೊಂಡಿದ್ದ. ಪ್ರಿಯಕರನಿಗಾಗಿ ಪ್ರೇಮಾ ಬರೋಬ್ಬರಿ 4.5 ಲಕ್ಷ ರೂಪಾಯಿ ಮೌಲ್ಯದ ಬೈಕ್ ಮತ್ತು ಮೊಬೈಲ್ ಫೋನ್ ಕೊಡಿಸಲು ಮುಂದಾಗಿದ್ದಳು. ಕೊಲೆ ಕೃತ್ಯ ನಡೆದ ದಿನವೂ ಇಬ್ಬರೂ ಸೇರಿ ಬೈಕ್ ನೋಡಲು ಹೋಗಿದ್ದರು ಎನ್ನಲಾಗಿದೆ.

ಪ್ರೀತಿ ದ್ರೋಹವಾಗಿ ಬದಲಾದಾಗ…

ಆದರೆ, ಇತ್ತೀಚೆಗೆ ಕಿರಣ್ ಪ್ರೇಮಾಳಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದ್ದ. ಇದರಿಂದ ಮನನೊಂದಿದ್ದ ಪ್ರೇಮಾ, ಆತನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಮೊದಲೇ ತೀರ್ಮಾನಿಸಿದ್ದಳು. ಅದಕ್ಕಾಗಿಯೇ ಪೆಟ್ರೋಲ್ ಮತ್ತು ಸೀಮೆಎಣ್ಣೆಯನ್ನು ಮೊದಲೇ ಖರೀದಿಸಿ ತಂದಿಟ್ಟುಕೊಂಡಿದ್ದಳು. ಮದುವೆ ವಿಚಾರವಾಗಿ ಮನೆಯಲ್ಲಿ ಮತ್ತೆ ಗಲಾಟೆ ಆರಂಭವಾದಾಗ, ಪ್ಲಾನ್ ಪ್ರಕಾರ ಕಿರಣ್‌ನನ್ನು ಮಂಚಕ್ಕೆ ಕಟ್ಟಿ ಹಾಕಿ ಬೆಂಕಿ ಹಚ್ಚಿದ್ದಾಳೆ.

ಇದನ್ನೂ ಓದಿ: ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಪ್ರಿಯತಮೆಯ ವಿಚಾರಣೆ ವೇಳೆ ಬಯಲಾಯ್ತು ಸ್ಫೋಟಕ ವಿಚಾರ! ಅಸಲಿಗೆ ಆಗಿದ್ದೇನು ಗೊತ್ತೇ?

ಸದ್ಯ ಬ್ಯಾಡರಹಳ್ಳಿ ಪೊಲೀಸರು ಈಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಹತ್ಯೆಗೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರೀತಿಯಲ್ಲಿ ಉಂಟಾದ ವೈಫಲ್ಯ ಇಷ್ಟೊಂದು ಭೀಕರ ಅಂತ್ಯ ಕಂಡಿರುವುದು ನಾಗರಿಕ ಸಮಾಜವನ್ನು ನಡುಗಿಸುವಂತೆ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್ ಮ್ಯಾಚ್ ನೋಡಲು ಬಂದ ಸ್ಟಾರ್ ನಟನಿಗೆ ಯಾರು ಎಂದು ಪ್ರಶ್ನೆ; ಮುಂದೇನಾಯ್ತು? – Kannada News | Victory Venkatesh Unrecognized at IPL Hyderabad Match; Fans React Strongly.

ಐಪಿಎಲ್ ಪಂದ್ಯ ನೋಡಲು ಅನೇಕ ಸೆಲೆಬ್ರಿಟಿಗಳು ಆಗಮಿಸುತ್ತಾರೆ. ಅವರಿಗೆ ವಿಐಪಿ ಸೌಲಭ್ಯ ಸಿಗುತ್ತದೆ. ವಿಶೇಷ ಆಸನದಲ್ಲಿ ಅವರನ್ನು ಕೂರಿಸಲಾಗುತ್ತದೆ. ಟಿವಿಯಲ್ಲೂ ಪದೇ ಪದೇ ಅವರನ್ನೇ ತೋರಿಸಲಾಗುತ್ತದೆ. ಆದರೆ, ಈಗ ಟಾಲಿವುಡ್​ ಸ್ಟಾರ್​ ನಟನಿಗೆ ಅವಮಾನ ಆಗಿದೆ. ಹೈದರಾಬಾದ್ ಪಂದ್ಯ ನೋಡಲು ಬಂದ ವಿಕ್ಟರಿ ವೆಂಕಟೇಶ್​​ ಅವರನ್ನು ಯಾರು ಎಂದು ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿದೆ. ಹೈದರಾಬಾದ್ ಹೋಂ ಮ್ಯಾಚ್ ನೋಡಲು ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ ಹಾಜರಿ ಹಾಕುತ್ತಿದ್ದಾರೆ. ಅವರು ಹೈದರಾಬಾದ್ ಬಾವುಟ ಹಿಡಿದು ಸೆಲೆಬ್ರೇಷನ್ ಮಾಡುತ್ತಿದ್ದಾರೆ. ಕೆಲ ಉತ್ತರ ಭಾರತದವರಿಗೆ ಆ ವ್ಯಕ್ತಿ ಯಾರು ಎಂಬುದು ಗೊತ್ತಾಗಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ.

‘ಕೈಯಲ್ಲಿ ಹೈದರಾಬಾದ್ ತಂಡದ ಬಾವುಟ ಹಿಡಿದಿರುವ ಈ ವ್ಯಕ್ತಿ ಯಾರು? ಎಸ್​​ಆರ್​​ಎಚ್​ ತಂಡ ಹೈದರಾಬಾದ್‌ನಲ್ಲಿ ಆಡುವಾಗ ನಾನು ಯಾವಾಗಲೂ ಅವರನ್ನು ನೋಡುತ್ತೇನೆ. ನಾನು ಅವರನ್ನು ಯಾವುದೋ ಸಿನಿಮಾದಲ್ಲಿ ನೋಡಿದಂತೆ ಇದೆ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಖ್ಯಾತ ತೆಲುಗು ನಟ ಎಂದು ಹೇಳಿದ್ದಾರೆ.

ಇನ್ನೂ ಕೆಲವರು ಒಂದು ವಿಶೇಷ ಕ್ಲಿಪ್​ ಹಂಚಿಕೊಂಡಿದ್ದಾರೆ. ಈ ಕ್ಲಿಪ್​​ನಲ್ಲಿ ಶಾರುಖ್ ಖಾನ್ ಅವರು ವಿಕ್ಟರಿ ವೆಂಕಟೇಶ್​​​ಗೆ ನಮಸ್ಕಾರ ಮಾಡುತ್ತಿರುವ ದೃಶ್ಯ ಇದೆ. ‘ಶಾರುಖ್ ಅವರನ್ನು ಕೇಳಿ, ಆ ವ್ಯಕ್ತಿ ಯಾರೆಂದು ಹೇಳುತ್ತಾರೆ’ ಎಂದು ಬರೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:50 am, Wed, 22 April 26

Source link

ಪಹಲ್ಗಾಮ್ ದಾಳಿಗೆ ವರ್ಷ: ಭಯೋತ್ಪಾದನೆಗೆ ಭಾರತ ತಲೆಬಾಗದು, ಹುತಾತ್ಮರಿಗೆ ಪ್ರಧಾನಿ ಮೋದಿ ಭಾವಪೂರ್ಣ ಶ್ರದ್ಧಾಂಜಲಿ – Kannada News | PM Modi Pays Tribute to Pahalgam Victims, Assures They Won’t Be Forgotten

ನವದೆಹಲಿ, ಏಪ್ರಿಲ್ 22: ಕಳೆದ ವರ್ಷ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಮೊದಲ ವಾರ್ಷಿಕೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಅವರು ಬಲಿಯಾದ ಮುಗ್ಧ ಜೀವಗಳನ್ನು ಸ್ಮರಿಸಿದ್ದಾರೆ. ಸಂತ್ರಸ್ತ ಕುಟುಂಬಗಳ ನೋವಿನಲ್ಲಿ ಇಡೀ ದೇಶವೇ ಭಾಗಿಯಾಗಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿರುವ ಪ್ರಧಾನಿ, ಕಳೆದ ವರ್ಷ ಈ ದಿನದಂದು ನಡೆದ ಭೀಕರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದ ಮುಗ್ಧ ಜೀವಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಅಪಾರ ನಷ್ಟವನ್ನು ನಿಭಾಯಿಸುತ್ತಿರುವ ದುಃಖಿತ ಕುಟುಂಬಗಳೊಂದಿಗೆ ನಾನು ಸದಾ ಇರುತ್ತೇನೆ ಎಂದು ಬರೆದಿದ್ದಾರೆ.

ದಾಳಿಯ ನೆನಪಿನೊಂದಿಗೆ, ಭಯೋತ್ಪಾದನೆಯನ್ನು ಪೋಷಿಸುವ ಶಕ್ತಿಗಳಿಗೆ ಪ್ರಧಾನಿ ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ, ಒಂದು ರಾಷ್ಟ್ರವಾಗಿ, ನಾವು ದುಃಖ ಮತ್ತು ದೃಢಸಂಕಲ್ಪದಲ್ಲಿ ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಭಾರತವು ಯಾವುದೇ ರೀತಿಯ ಭಯೋತ್ಪಾದನೆಗೆ ಎಂದಿಗೂ ತಲೆಬಾಗುವುದಿಲ್ಲ, ಎಂದು ಅವರು ಘೋಷಿಸಿದ್ದಾರೆ.

ಭಯೋತ್ಪಾದಕರ ಯಾವುದೇ ಹೇಯ ಯೋಜನೆಗಳು ಭಾರತದ ಏಕತೆ ಮತ್ತು ಶಾಂತಿಯನ್ನು ಕದಡಲು ಯಶಸ್ವಿಯಾಗುವುದಿಲ್ಲ ಎಂಬ ಭರವಸೆಯನ್ನು ಅವರು ದೇಶದ ಜನತೆಗೆ ನೀಡಿದ್ದಾರೆ. ದಾಳಿಯ ನಂತರ ಭಾರತವು ಕೈಗೊಂಡಿದ್ದ ‘ಆಪರೇಷನ್ ಸಿಂಧೂರ್’ ಮತ್ತು ಅದರ ಮೂಲಕ ಭಯೋತ್ಪಾದಕ ನೆಲೆಗಳನ್ನು ಧೂಳೀಪಟ ಮಾಡಿದ್ದನ್ನು ಈ ಸಂದರ್ಭದಲ್ಲಿ ದೇಶದಾದ್ಯಂತ ಸ್ಮರಿಸಲಾಗುತ್ತಿದೆ. ಪ್ರಧಾನಿಯವರ ಈ ಇಂದಿನ ಹೇಳಿಕೆಯು, ಭದ್ರತಾ ವಿಚಾರದಲ್ಲಿ ಭಾರತ ಹೊಂದಿರುವ ‘ಜೀರೋ ಟಾಲರೆನ್ಸ್’ (Zero Tolerance) ನೀತಿಯನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದೆ.

ಮತ್ತಷ್ಟು ಓದಿ: ಆಪರೇಷನ್ ಮಹಾದೇವ್: ಪಹಲ್ಗಾಮ್ ದಾಳಿಕೋರರ ಮೇಲೆ ಸೇನೆಯ ಅಟ್ಟಹಾಸ, ಸಂಹಾರದ ಸಂಪೂರ್ಣ ರೋಚಕ ಕಥೆ

ಪ್ರಧಾನಿ ಮೋದಿ ಅವರ ಈ ಮಾತುಗಳು ಕೇವಲ ಸಾಂತ್ವನವಲ್ಲ, ಬದಲಾಗಿ ದೇಶದ ಪ್ರತಿಯೊಬ್ಬ ನಾಗರಿಕನ ಸುರಕ್ಷತೆಯ ಜವಾಬ್ದಾರಿಯನ್ನು ಎತ್ತಿ ಹಿಡಿಯುವ ಶಪಥವಾಗಿದೆ. ಪಹಲ್ಗಾಮ್‌ನ ಗಾಯಗಳು ಇನ್ನೂ ಹಸಿಯಾಗಿದ್ದರೂ, ಭಾರತದ ಆತ್ಮವಿಶ್ವಾಸ ಮತ್ತು ದೃಢಸಂಕಲ್ಪ ಬೆಟ್ಟದಂತೆ ಅಚಲವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಭೂಗತ ಲೋಕದ ನಂಟಿನಿಂದ ಭಯಬಿದ್ದಿದ್ದ ‘ಗಲಾಟೆ ಅಳಿಯಂದ್ರು’ ನಟಿ; ಬಾಲಿವುಡ್ ಶಾಶ್ವತಾಗಿ ತೊರೆದರು – Kannada News | Galate Aliyandru Actress Sakshi Shivanand Quit Bollywood Fearing Underworld Nexus

90 ರ ದಶಕದಲ್ಲಿ, ಬಾಲಿವುಡ್ ಭೂಗತ ಜಗತ್ತಿನೊಂದಿಗಿನ ಸಂಪರ್ಕ ಹೊಂದಿತ್ತು. ಆ ಸಮಯದಲ್ಲಿ, ಭೂಗತ ಜಗತ್ತಿನವರು ನಿರ್ಮಾಪಕರು, ನಟರು ಮತ್ತು ಫೈನಾನ್ಸರ್ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ನಿರಂತರ ವರದಿಗಳು ಬರುತ್ತಿದ್ದವು. ಕೆಲವು ನಟಿಯರು ಡಾನ್‌ಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳಿದ್ದವು. ಈ ಸಮಯದಲ್ಲಿ, ಉದಯೋನ್ಮುಖ ನಟಿಯ ವೃತ್ತಿಜೀವನ ನಾಶವಾಯಿತು ಮತ್ತು ಅವರು ಎಲ್ಲವನ್ನೂ ಬಿಟ್ಟು ಹೋಗಬೇಕಾಯಿತು.

ನಾವು ಮಾತನಾಡುತ್ತಿರುವ ನಟಿ ಸಾಕ್ಷಿ ಶಿವಾನಂದ್. ಅವರು 1993 ರಲ್ಲಿ ತೆಲುಗು ಚಿತ್ರ ‘ಅನ್ನಾ ವದಿನಾ’ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಶಿವರಾಜ್​ಕುಮಾರ್ ನಟನೆಯ ‘ಗಲಾಟೆ ಅಳಿಯಂದ್ರು’ ಸಿನಿಮಾದಲ್ಲಿ ನಟಿಸಿದರು. ಆ ಬಳಿಕ ‘ನಾನು ನಾನೇ’, ‘ಸೈನಿಕ’, ಕೋದಂಡ ರಾಮ’ ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. 2007ರಲ್ಲಿ ಅವರು ಕನ್ನಡದಲ್ಲಿ ‘ಸೌಂದರ್ಯ’ ಹೆಸರಿನ ಸಿನಿಮಾ ಮಾಡಿದರು. ಅವರಿಗೆ ನಿಜವಾದ ಖ್ಯಾತಿ ಸಿಕ್ಕಿದ್ದು ತಮಿಳು ಮತ್ತು ತೆಲುಗು ಚಿತ್ರಗಳಿಂದ. ಸಾಕ್ಷಿ ಮಲಯಾಳಂ ಸೂಪರ್‌ಸ್ಟಾರ್‌ಗಳಾದ ಮಮ್ಮುಟ್ಟಿ ಮತ್ತು ಚಿರಂಜೀವಿಯಂತಹ ಹಿರಿಯ ನಟರೊಂದಿಗೆ ಕೆಲಸ ಮಾಡಿದರು.

ಸಾಕ್ಷಿ 2000 ರ ದಶಕದಲ್ಲಿ ಬಾಲಿವುಡ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಗೋವಿಂದ ಅವರೊಂದಿಗೆ ಕೆಲಸ ಮಾಡಿದರು ಮತ್ತು ಹಿಂದಿ ಚಿತ್ರರಂಗದಲ್ಲಿ ಅವರ ಜನಪ್ರಿಯತೆ ಹೆಚ್ಚಾಗಲು ಪ್ರಾರಂಭಿಸಿತು. ಆದರೆ ಅವರ ಜನಪ್ರಿಯತೆ ಹೆಚ್ಚಾದಂತೆ, ಅವರಿಗೆ ಭೂಗತ ಲೋಕದಿಂದ ಕರೆಗಳು ಬರಲು ಪ್ರಾರಂಭಿಸಿದವು.

ಸಾಕ್ಷಿ ಅವರು ನಟಿಸಿದ ‘ತುಮ್’ ಚಿತ್ರದ ನಿರ್ಮಾಪಕರು ಭೂಗತ ಜಗತ್ತಿನೊಂದಿಗೆ ಸಂಬಂಧ ಹೊಂದಿದ್ದಾರೆಂದು ತಿಳಿದುಕೊಂಡರು. ಸಂದರ್ಶನವೊಂದರಲ್ಲಿ ಅವರು, ‘ಚಿತ್ರದ ನಿರ್ಮಾಪಕರು ಭೂಗತ ಜಗತ್ತಿನೊಂದಿಗೆ ಸಂಬಂಧ ಹೊಂದಿದ್ದಾರೆಂದು ತಿಳಿದಾಗ, ನಾನು ತುಂಬಾ ಭಯಭೀತನಾಗಿದ್ದೆ. ನಾನು ಸಂಪೂರ್ಣವಾಗಿ ನಡುಗಿದೆ. ಬಾಲಿವುಡ್‌ನಲ್ಲಿ ಭೂಗತ ಜಗತ್ತು ತುಂಬಾ ಆಳವಾಗಿ ಬೇರೂರಿದೆ ಎಂದು ಎಲ್ಲರೂ ನನಗೆ ಹೇಳುತ್ತಿದ್ದರು. ಹಾಗಾಗಿ ನಾನು ಅಲ್ಲಿಂದ ಓಡಿಹೋಗಿ ಮತ್ತೆ ತೆಲುಗು ಮತ್ತು ಕನ್ನಡ ಚಿತ್ರಗಳನ್ನು ಮಾಡಲು ಪ್ರಾರಂಭಿಸಿದೆ’ ಎಂದು ಹೇಳಿದ್ದರು.

ಇದನ್ನೂ ಓದಿ: ‘ರೆಹಮಾನ್ ಡಕಾಯಿತ್ ಪಾತ್ರದಲ್ಲಿ ನೀವೇ ನಟಿಸಬೇಕಿತ್ತು’; ಶಿವಣ್ಣನ ಎದುರು ಫ್ಯಾನ್ಸ್ ಬೇಡಿಕೆ ಇಟ್ಟಿದ್ದೇಕೆ?

ಸಾಕ್ಷಿ ತನ್ನ ಫೋನ್ ಸಂಖ್ಯೆಯನ್ನು ಬದಲಾಯಿಸಿಕೊಂಡು ‘ತುಮ್’ ಚಿತ್ರದ ತಂಡದಿಂದ ಎಲ್ಲರನ್ನೂ ದೂರವಿಡಲು ಪ್ರಾರಂಭಿಸಿದರು. ಇದು ಅವರು ಬಾಲಿವುಡ್ ವೃತ್ತಿಜೀವನವನ್ನು ಶಾಶ್ವತವಾಗಿ ಕೊನೆಗೊಳಿಸಿತು. ‘ಆ ಅಂಡರ್‌ವರ್ಲ್ಡ್ ಘಟನೆಯಿಂದ ನಾನು ಭಯಪಡದಿದ್ದರೆ, ನಾನು ಇಂದು ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ಆ ಸಮಯದಲ್ಲಿ, ನಾನು ಒಳಗೊಳಗೆ ಸಂಪೂರ್ಣವಾಗಿ ನಡುಗುತ್ತಿದ್ದೆ. ನಿರ್ಮಾಪಕರಿಂದ ನನಗೆ ನಿರಂತರವಾಗಿ ಕರೆಗಳು ಬರುತ್ತಿದ್ದರಿಂದ ನಾನು ನನ್ನ ಸಂಖ್ಯೆಯನ್ನು ಬದಲಾಯಿಸಿದ್ದೆ’ ಎಂದು ಅವರು ಸಂದರ್ಶನವೊಂದರಲ್ಲಿ ಒಪ್ಪಿಕೊಂಡರು. ಸಾಕ್ಷಿ ಶಿವಾನಂದ್ ಈಗ ತುಂಬಾ ಸರಳ ಜೀವನವನ್ನು ನಡೆಸುತ್ತಿದ್ದಾರೆ. ಅವರು ತಮ್ಮ ಸಾಮಾನ್ಯ ಜೀವನದಲ್ಲಿ ಸಂತೋಷವಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಹುಬ್ಬಳ್ಳಿಯಲ್ಲಿ ಹಠಾತ್ತನೆ ಸುಧಾರಿಸಿದ ವಾಯು ಗುಣಮಟ್ಟ! – Kannada News | Bangalore Air Pollution Crisis: Hubballi Air Quality is getting better

ಹುಬ್ಬಳ್ಳಿಯಲ್ಲಿ ಹಠಾತ್ತನೆ ಸುಧಾರಿಸಿದ ವಾಯು ಗುಣಮಟ್ಟ!

ಬೆಂಗಳೂರು, ಏಪ್ರಿಲ್ 22: ರಾಜ್ಯದ ಏರ್ ಕ್ವಾಲಿಟಿಯಲ್ಲಿ (Bengaluru Air Quality) ಕಳೆದ ಕೆಲ ದಿನಗಳಿಂದ ಸುಧಾರಣೆ ಕಂಡು ಬಂದಿದೆ. ದೇಶದ ಉಳಿದ ಯಾವುದೇ ಮೆಟ್ರೋ ಸಿಟಿಗಳಿಗೆ ಹೋಲಿಸಿದರೂ ಬೆಂಗಳೂರಿನ ವಾಯು ಗುಣಮಟ್ಟ ಉತ್ತಮವಾದದ್ದಾಗಿದೆ. ಇಷ್ಟು ದಿನ ಉಸಿರಾಟಕ್ಕೂ ಮಾರಕವಾಗಿದ್ದ ಗಾಳಿಯು ಇಂದು ಒಳ್ಳೆಯ ಗುಣಮಟ್ಟದಲ್ಲಿರುವುದು ಸ್ವಲ್ಪಮಟ್ಟಿಗೆ ಆತಂಕವನ್ನು ಕಡಿಮೆಯಾಗಿಸಿದೆ. ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 135ಕ್ಕೆ ತಲುಪಿದೆ. ಕಲಬುರ್ಗಿ ಮತ್ತು ಉಡುಪಿಯ AQI 100ಕ್ಕಿಂತ ಕಡಿಮೆಯಿದ್ದು, ಇಷ್ಟು ದಿನ ಮಾರಕವಾಗಿದ್ದ ಗಾಳಿ ಇಂದು ಉಸಿರಾಟಕ್ಕೆ ಯೋಗ್ಯವಾಗಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 135
  • ಮಂಗಳೂರು-111
  • ಮೈಸೂರು – 153
  • ಬೆಳಗಾವಿ – 74
  • ಕಲಬುರ್ಗಿ-73
  • ಶಿವಮೊಗ್ಗ –133
  • ಬಳ್ಳಾರಿ – 144
  • ಹುಬ್ಬಳ್ಳಿ- 86
  • ಉಡುಪಿ –120
  • ವಿಜಯಪುರ – 101

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬದಲಾಗ್ತಾಳಾ ಜಯದೇವ್ ತಾಯಿ ಶಕುಂತಲ? ಸಹಾಯಕ್ಕೆ ಬಂದ ಗೌತಮ್ – Kannada News | Amruthadhare: Shakuntala’s Transformation? Gautam Saves Her After Jayadev Throws Her Out!

‘ಅಮೃತಧಾರೆ’ ಧಾರಾವಾಹಿಯಲ್ಲಿ ಈಗ ಜಯದೇವ್ ಒಂಟಿಯಾಗುವ ದಿನವು ಸಮೀಪಿಸಿದೆ ಎಂದೇ ಹೇಳಬಹುದು. ಏಕೆಂದರೆ, ಈಗಾಗಲೇ ತಾಯಿಯನ್ನು ಆತ ದೂರ ಮಾಡಿಕೊಂಡಿದ್ದಾನೆ. ತನ್ನ ತಾಯಿ ಹಣ ಕೇಳಿದ್ದಕ್ಕೆ ಸಿಟ್ಟಾದ ಜಯದೇವ್, ಕೋಪದಲ್ಲಿ ತಾಯಿಗೆ ಹೊಡೆದು ಮನೆಯಿಂದ ದೂರಕ್ಕೆ ತಳ್ಳಿದ್ದಾನೆ. ಆಕೆಯ ಸಹಾಯಕ್ಕೆ ಗೌತಮ್ ಆಗಮಿಸಿದ್ದಾನೆ. ಇದರಿಂದ ಶಕುಂತಲ ಬದಲಾಗುವ ಎಲ್ಲಾ ಸೂಚನೆ ಇದೆ.

ಶಕುಂತಲ, ಗೌತಮ್​​ಗೆ ಮಲತಾಯಿ. ಆತನಿಗೆ ಕೆಟ್ಟದಾಗಲಿ ಎಂದೇ ಬಯಸುತ್ತಾ ಬಂದಳು ಶಕುಂತಲ. ಆದರೆ, ಗೌತಮ್ ಆ ರೀತಿಯ ವ್ಯಕ್ತಿ ಅಲ್ಲ ಎನ್ನಬಹುದು. ಆತ, ತಾಯಿಯನ್ನು ಅಪಾರ ಗೌರವ ಹಾಗೂ ಪ್ರೀತಿಯಿಂದ ಕಂಡಿದ್ದಾನೆ. ಇದು ಆತನ ದೊಡ್ಡ ಗುಣ. ಆದರೆ, ಈ ವಿಷಯ ಶಕುಂತಲಗೆ ಗೊತ್ತಾಗಿಲ್ಲ. ಜಯದೇವ್ ತನ್ನ ಪ್ರೀತಿಯ ಮಗ ಎನ್ನುತ್ತಿದ್ದಳು.

ಕ್ಲಬ್​ಗೆ ತೆರಳಿದ್ದ ಶಕುಂತಲ, 3 ಕೋಟಿ ರೂಪಾಯಿ ಕಳೆದುಕೊಂಡಳು ಮತ್ತು ಈ ವೇಳೆ ಸಹಾಯಕ್ಕಾಗಿ ಜಯದೇವ್ ಬಳಿ ಹಣ ಕೇಳಿದಳು. ಜಯದೇವ್ ಆ್ಯಪ್ ಒಂದನ್ನು ಮಾಡಿ, ನೂರಾರು ಕೋಟಿ ಸುರಿದು ಅಲ್ಲಿ ಹಣ ಕಳೆದುಕೊಂಡ ಟೆನ್ಶನ್ ಅಲ್ಲಿ ಇದ್ದ. ಇದೇ ಸಮಯಕ್ಕೆ ಬಂದ ಶಕುಂತಲಾ ಹಣ ಕೇಳಿದಳು ಮತ್ತು ಇದು ಜಯದೇವ್ ಕೋಪಕ್ಕೆ ಕಾರಣ ಆಯಿತು. ಆತ ಕೂಗಾಡಿದ್ದಾನೆ. ಈ ಕೂಗಾಟದ ಬಳಿಕ ಮತ್ತಷ್ಟು ಸಿಟ್ಟಾದ ಜೆಡಿ, ಆಕೆಯನ್ನು ಕತ್ತು ಹಿಡಿದು ಹೊರಕ್ಕೆ ತಳ್ಳಿದ್ದಾನೆ. ಇದರಿಂದ ಜೆಡಿ ಪತ್ನಿ ಕೂಡ ಖುಷಿ ಆಗಿದ್ದಾಳೆ. ಈ ವೇಳೆ ಆಕೆಗೆ ತಪ್ಪಿತಸ್ಥ ಭಾವನೆ ಕಾಡಿದೆ. ಗೌತಮ್​​ನ ಆ ರೀತಿ ನಡೆಸಿಕೊಂಡು ತಪ್ಪು ಮಾಡಿದೆ ಎನಿಸಿದೆ.

ಇದನ್ನೂ ಓದಿ: ‘ಅಮೃತಧಾರೆ’: ದೊಡ್ಡ ಸಾಧನೆ ಮಾಡಿದ ಮಲ್ಲಿ; ಜಯದೇವ್ ಬಾಳಲ್ಲಿ ಕತ್ತಲು

ಈಗ ತನ್ನ ತಾಯಿಯನ್ನು ಮನೆಯಿಂದ ಹೊರ ಹಾಕಲಾಗಿದೆ ಎಂಬ ವಿಷಯ ಗೌತಮ್​​ಗೆ ತಿಳಿದಿದೆ ಎಂದೇ ಹೇಳಬಹುದು. ಈ ವಿಷಯವನ್ನು ಗೌತಮ್​​ಗೆ ತಿಳಿಸಿದ್ದು ಲಕ್ಷ್ಮೀಕಾಂತ್. ಈ ವಿಷಯ ತಿಳಿದ ಬಳಿಕ ಗೌತಮ್ ಕರುಳು ಚುರಕ್ ಎಂದಿದೆ. ಆತ ತಾಯಿಯನ್ನು ಸೇವ್ ಮಾಡಬಹುದು. ಈ ಘಟನೆ ಬಳಿಕವಾದರೂ ಗೌತಮ್ ಮೇಲೆ ಮಾಳವಿಕಾಗೆ ಪ್ರೀತಿ ಮೂಡಬಹುದೇ? ಆಕೆ ಬದಲಾಗಬಹುದೇ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:09 am, Wed, 22 April 26

Source link

ಗೋವಿನ ಚರ್ಮದ ಬ್ಯಾಗ್ ಹಿಡಿದು ಬಂದ್ರಾ ಕಂಗನಾ? ಶುರುವಾಗಿದೆ ಚರ್ಚೆ – Kannada News | Kangana Ranaut’s Cow Leather Bag Sparks Controversy: BJP MP Faces Heat for Hermes Choice

ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು (Kangana Ranaut) ಆಗಾಗ ವಿವಿಧ ಕಾರಣಕ್ಕೆ ಚರ್ಚೆ ಆಗುತ್ತಾ ಇರುತ್ತಾರೆ. ಅವರ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಾರೆ. ಅವರು ನಿಡುವ ಹೇಳಿಕೆ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತದೆ. ಈಗ ಅವರು ತೆಗೆದುಕೊಂಡು ಬಂದ ಬ್ಯಾಗ್ ಬಗ್ಗೆ ಚರ್ಚೆ ನಡೆದಿದೆ. ಅವರು ಗೋವಿನ ಚರ್ಮದ ಬ್ಯಾಗ್ ಹಿಡಿದು ಬಂದರೇ ಎಂಬ ಪ್ರಶ್ನೆ ಮೂಡಿದೆ.

ಕಂಗನಾ ರಣಾವತ್ ಅವರು ಸದ್ಯ ಪಶ್ಚಿಮ ಬಂಗಾಳದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಹೀಗಿರುವಾಗಲೇ ಅವರ ಫೋಟೋ ಒಂದು ವೈರಲ್ ಆಗಿದೆ. ಇದರಲ್ಲಿ ಅವರು ಬ್ಯಾಗ್ ಒಂದನ್ನು ಹಿಡಿದು ನಿಂತಿದ್ದಾರೆ. ಬಿಳಿ ಬಣ್ಣದಲ್ಲಿ ಈ ಬ್ಯಾಗ್ ಇದೆ. ಇದು ಹೆರ್ಮ್ಸ್ ವಚೆ ಹಂಟರ್ ಕಂಪನಿಯ ಬ್ಯಾಗ್. ಈ ಬ್ಯಾಗ್​​ನ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ.

ಬ್ಯಾಗ್​​​ನ ಬೆಲೆ ಇಲ್ಲಿ ಅಷ್ಟಾಗಿ ಚರ್ಚೆ ಆಗುತ್ತಿಲ್ಲ. ಏಕೆಂದರೆ ಅನೇಕ ಸೆಲೆಬ್ರಿಟಿಗಳು ಲಕ್ಷಾಂತರ ರೂಪಾಯಿ ಬೆಲೆಯ ಬ್ಯಾಗ್ ಅನ್ನೇ ಹಿಡಿದು ಓಡಾಡುತ್ತಾರೆ. ಆದರೆ, ಇಲ್ಲಿ ಚರ್ಚೆ ಆಗುತ್ತಿರುವುದು ಕಂಗನಾ ಬ್ಯಾಗ್ ತಯಾರಿಸಲು ಬಳಕೆ ಮಾಡಿದ ವಸ್ತುವಿನ ಬಗ್ಗೆ. ಹೆರ್ಮ್ಸ್ ವಚೆ ಹಂಟರ್ ಕಂಪನಿಯವರು ತಯಾರಿಸುವ ಬ್ಯಾಗ್ ಗೋವಿನ ಚರ್ಮದ್ದು. ಇದು ಫ್ರಾನ್ಸ್ ಕಂಪನಿ ಆಗಿದೆ. ಈಗ ಕಂಗನಾ ಬ್ಯಾಗ್ ವಿಷಯ ಸಾಕಷ್ಟು ಚರ್ಚೆ ಆಗುತ್ತಿದೆ.

ಅಂದಹಾಗೆ ಇದು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆ. ಆ ಬ್ಯಾಗ್ ನಿಜಕ್ಕೂ ಹೆರ್ಮ್ಸ್ ವಚೆ ಹಂಟರ್ ಕಂಪನಿಯದ್ದೇನಾ ಅಥವಾ ಇದನ್ನು ಆ ರೀತಿ ಊಹಿಸಲಾಗಿದೆಯೇ ಎಂಬ ಬಗ್ಗೆ ಕಂಗನಾ ಅವರಿಂದಲೇ ಸ್ಪಷ್ಟನೆ ಸಿಗಬೇಕಿದೆ. ಅವರ ಅಭಿಮಾನಿಗಳು ಕಂಗನಾ ಪರ ಬ್ಯಾಟ್ ಬೀಸುತ್ತಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿಯ ಭಾಷಣವೇ ದೊಡ್ಡ ತಲೆನೋವು; ಕಂಗನಾ ರಣಾವತ್ ಟೀಕೆ

ಕಂಗನಾ ರಣಾವತ್ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟ ಮೇಲೆ ಸಿನಿಮಾ ರಂಗ ತೊರೆಯೋದಾಗಿ ಹೇಳಿದ್ದರು. ಆದರೆ, ಈಗ ಅವರಿಗೆ ರಾಜಕೀಯವೇ ಸಾಕಾದಂತೆ ಇದೆ. ಮುಂದಿನ ದಿನಗಳಲ್ಲಿ ಅವರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Pahalgam Attack: ಹಸಿರು ಕಣಿವೆಯಲ್ಲಿ ಹರಿಯಿತು ಅಮಾಯಕರ ರಕ್ತ: ವರ್ಷ ಕಳೆದರೂ ಚೇತರಿಸಿಕೊಳ್ಳದ ಪಹಲ್ಗಾಮ್ ಸಂತ್ರಸ್ತ ಕುಟುಂಬಗಳು – Kannada News | Pahalgam Terror Attack: One Year On, Survivors Still Battle Trauma and Loss

ಬೈಸರನ್, ಏಪ್ರಿಲ್ 22: ಮಿನಿ ಸ್ವಿಟ್ಜರ್ಲೆಂಡ್ ಎಂದು ಕರೆಯಲ್ಪಡುವ ಪಹಲ್ಗಾಮ್‌(Pahalgam)ನ ಬೈಸರನ್ ಕಣಿವೆಯಲ್ಲಿ ಇಂದು ಪ್ರವಾಸಿಗರ ಗದ್ದಲವಿರಬಹುದು, ಆದರೆ ಒಂದು ವರ್ಷದ ಹಿಂದೆ ಅಲ್ಲಿ ಕೇಳಿಬಂದ ಗುಂಡಿನ ಚಕಮಕಿ ಮತ್ತು ಸಾವು-ನೋವಿನ ಆಕ್ರಂದನ ಇಂದಿಗೂ ಅಲ್ಲಿನ ಗಾಳಿಯಲ್ಲಿ ಪ್ರತಿಧ್ವನಿಸುತ್ತಿದೆ. ಅಮಾಯಕ ಪ್ರವಾಸಿಗರನ್ನು, ವಿಶೇಷವಾಗಿ ಪುರುಷರನ್ನು ಗುರಿಯಾಗಿಸಿಕೊಂಡು ನಡೆದ ಆ ದಾಳಿ ಅನೇಕ ಸುಂದರ ಕುಟುಂಬಗಳನ್ನು ಛಿದ್ರಗೊಳಿಸಿದೆ.

ಸಂತೋಷದ ಪ್ರವಾಸ  ನೋವಿನಲ್ಲಿ ಅಂತ್ಯ
ವಿಶಾಖಪಟ್ಟಣಂನ ನಿವೃತ್ತ ಬ್ಯಾಂಕ್ ಅಧಿಕಾರಿ, 68 ವರ್ಷದ ಚಂದ್ರಮೌಳಿ ಅವರು ತಮ್ಮ ಪತ್ನಿ ನಾಗಮಣಿ ಮತ್ತು ಸ್ನೇಹಿತರೊಂದಿಗೆ ಕಾಶ್ಮೀರದ ಸೌಂದರ್ಯ ಸವಿಯಲು ಹೋಗಿದ್ದರು. ದಾಲ್ ಸರೋವರದ ಶಿಕಾರ ಸವಾರಿ, ಟುಲಿಪ್ ಗಾರ್ಡನ್‌ನ ಸೌಂದರ್ಯ ಎಲ್ಲವನ್ನೂ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ಅವರಿಗೆ ಆ ಪ್ರವಾಸವೇ ಕೊನೆಯದಾಗುತ್ತದೆ ಎಂದು ತಿಳಿದಿರಲಿಲ್ಲ. ಏಪ್ರಿಲ್ 22ರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೈಸರನ್ ಕಣಿವೆಯಲ್ಲಿ ಎಲ್ಲವೂ ಸುಂದರವಾಗಿತ್ತು. ಆದರೆ ಹಠಾತ್ ಅಪ್ಪಳಿಸಿದ ಗುಂಡಿನ ಸದ್ದು ಎಲ್ಲವನ್ನೂ ಬದಲಿಸಿತು.

ಬೇಡಿದರೂ ಬಿಡದ ಹಂತಕರು
ಪ್ರತ್ಯಕ್ಷದರ್ಶಿಗಳ ಪ್ರಕಾರ, ಚಂದ್ರಮೌಳಿ ಅವರು ಶೌಚಾಲಯದಿಂದ ಹಿಂತಿರುಗುತ್ತಿದ್ದಾಗ ದಾಳಿ ನಡೆಯಿತು. ಜೀವ ಉಳಿಸಿಕೊಳ್ಳಲು ಅವರು ಬೇಲಿ ದಾಟಲು ಪ್ರಯತ್ನಿಸಿದರೂ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ವೇಗವಾಗಿ ಓಡಲು ಸಾಧ್ಯವಾಗಲಿಲ್ಲ. ಹತ್ತಿರ ಬಂದ ಭಯೋತ್ಪಾದಕರ ಮುಂದೆ ಚಂದ್ರಮೌಳಿ ಅವರು ಕರುಣೆಗಾಗಿ ಬೇಡಿಕೊಂಡರೂ, ಕ್ರೂರ ದಾಳಿಕೋರರು ಕಿಂಚಿತ್ತೂ ದಯೆ ತೋರದೆ ಅವರ ಮೇಲೆ ಗುಂಡು ಹಾರಿಸಿದರು.

ಕಣ್ಣೆದುರೇ ಕಂಡ ನರಕಯಾತನೆ
ಪತ್ನಿ ನಾಗಮಣಿ ಮತ್ತು ಇತರರು ಪೊದೆಗಳ ಹಿಂದೆ ಅಡಗಿ ಪ್ರಾಣ ಉಳಿಸಿಕೊಂಡರಾದರೂ, ತಮ್ಮ ಪ್ರೀತಿಪಾತ್ರರನ್ನು ತಮ್ಮ ಕಣ್ಣೆದುರೇ ಕಳೆದುಕೊಂಡಿದ್ದರು. ಏಪ್ರಿಲ್ 23ರಂದು ಚಂದ್ರಮೌಳಿ ಅವರ ಪಾರ್ಥಿವ ಶರೀರ ವಿಶಾಖಪಟ್ಟಣಕ್ಕೆ ಬಂದಾಗ ಇಡೀ ನಗರವೇ ಕಣ್ಣೀರು ಸುರಿಸಿತ್ತು. ‘ಆಪರೇಷನ್ ಸಿಂಧೂರ್’ ಮೂಲಕ ಸರ್ಕಾರ ಉಗ್ರರನ್ನು ಸದೆಬಡಿದಿರಬಹುದು, ಆದರೆ ಕಳೆದುಹೋದ ಜೀವಗಳು ಮತ್ತೆ ಬರಲು ಸಾಧ್ಯವಿಲ್ಲ.

ಮತ್ತಷ್ಟು ಓದಿ: Operation Mahadev:ಆಪರೇಷನ್ ಮಹಾದೇವ್: ಪಹಲ್ಗಾಮ್ ದಾಳಿಕೋರರ ಮೇಲೆ ಸೇನೆಯ ಅಟ್ಟಹಾಸ, ಸಂಹಾರದ ಸಂಪೂರ್ಣ ರೋಚಕ ಕಥೆ

ಬದುಕುಳಿದವರ ಹೋರಾಟ
ಇಂದು ಒಂದು ವರ್ಷ ಕಳೆದರೂ, ಆ ಘಟನೆಯಿಂದ ಬದುಕುಳಿದವರು ‘ಪೋಸ್ಟ್ ಟ್ರಾಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್’ (PTSD) ನಿಂದ ಬಳಲುತ್ತಿದ್ದಾರೆ. ಸಣ್ಣ ಶಬ್ದ ಕೇಳಿದರೂ ನಡುಗುವುದು, ಜನದಟ್ಟಣೆಯ ಸ್ಥಳಗಳನ್ನು ಕಂಡು ಹೆದರುವುದು ಅವರ ಜೀವನದ ಭಾಗವಾಗಿದೆ. ನಾಗಮಣಿ ಅವರಂತಹ ಎಷ್ಟೋ ಮಹಿಳೆಯರಿಗೆ ಕಾಶ್ಮೀರದ ನೆನಪು ಎಂದರೆ ಈಗ ಕೇವಲ ರಕ್ತ ಮತ್ತು ಗುಂಡಿನ ಸದ್ದಾಗಿದೆ. ಬೈಸರನ್ ಕಣಿವೆ ಇಂದು ಸುಂದರವಾಗಿ ಕಾಣುತ್ತಿರಬಹುದು, ಆದರೆ ಅಲ್ಲಿನ ಮಣ್ಣಿನಲ್ಲಿ ಬೆರೆತಿರುವ ಅಮಾಯಕರ ರಕ್ತದ ಕಥೆ ಇಂದಿಗೂ ನ್ಯಾಯಕ್ಕಾಗಿ ಕಾಯುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version