ನ್ಯಾಯ ಬೇಕು ಎಂದು 9 ಮಹಡಿಗಳ ಬಿಲ್ಡಿಂಗ್ ಏರಿ ಯುವಕನ ಹೈಡ್ರಾಮಾ: ಮನವೊಲಿಕೆಗೂ ಬಗ್ಗದೆ ಮೊಂಡಾಟ – Kannada News | Youth Climbs 9 Story Building in Devanahalli Demanding Justice and District Collector’s Presence

ದೇವನಹಳ್ಳಿ, ಏಪ್ರಿಲ್​​ 21: ನನಗೆ ನ್ಯಾಯ ಬೇಕು, ಡಿಸಿ ಕರೆಸಿ ಎಂದು ಯುವಕನೋರ್ವ 9 ಮಹಡಿಗಳ ಬಿಲ್ಡಿಂಗ್ ಏರಿ ಹೈಡ್ರಾಮಾ ನಡೆಸಿರುವ ಘಟನೆ ದೇವನಹಳ್ಳಿ ಬೈಪಾಸ್​​ನ ಖಾಸಗಿ ಅಪಾರ್ಟ್ಮೆಂಟ್ ಬಳಿ ನಡೆದಿದೆ. ಪೋಕ್ಸೋ ಕೇಸ್​​ನ ಆರೋಪಿ ಆನಂದ್ ಎಂಬ ಯುವಕ ಈ ರೀತಿ ಹುಚ್ಚಾಟ ನಡೆಸಿದ್ದು, ಸ್ಥಳಕ್ಕೆ ಬಂದ ಪೊಲೀಸರ ಮನವೊಲಿಕೆಗೂ ಈತ ಬಗ್ಗಿಲ್ಲ. ಇಲ್ಲಿಗೆ ಡಿಸಿ ಬರಲೇ ಬೇಕು ಎಂದು ಪಟ್ಟುಹಿಡಿದಿರುವ ಈತ, ಸ್ಥಳಕ್ಕೆ ಬಂದ ತಾಯಿಯ ಮನವಿಗೂ ಕ್ಯಾರೇ ಎಂದಿಲ್ಲ. ಎಷ್ಟೇ ಮನವೊಲಿಕೆ ಮಾಡಿದ್ರೂ ಈತ ತನ್ನ ಹಠ ಬಿಡದ ಹಿನ್ನೆಲೆ ಪೊಲೀಸರಿಗೂ ಈತನ ಹೈಡ್ರಾಮಾ ತಲನೋವಾಗಿ ಮಾರ್ಪಟ್ಟಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಮಿನಿ ವ್ಯಾನ್ ಪುಡಿಪುಡಿ, ಬೈಕ್ ಸವಾರನ ಮೇಲೆ ಹರಿದ ವಾಹನ; ಮೈ ಜುಂ ಎನಿಸುವ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ! – Kannada News | Horrific Highway Accident: Lorry Crushes Mini Van, Hits Biker; CCTV Footage

ಹೆದ್ದಾರಿಯಲ್ಲಿ ಮಿನಿ ವ್ಯಾನ್ ಒಂದು ತಿರುವು ಪಡೆಯುತ್ತಿದ್ದ ಸಂದರ್ಭದಲ್ಲೇ, ಹಿಂದಿನಿಂದ ಅತಿ ವೇಗವಾಗಿ ಬಂದ ಲಾರಿಯೊಂದು ಮೃತ್ಯುವಿನಂತೆರಗಿ ಭೀಕರ ಅಪಘಾತ ಸಂಭವಿಸಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಮಿನಿ ವ್ಯಾನ್ ಕ್ಷಣಾರ್ಧದಲ್ಲಿ ಪುಡಿಪುಡಿಯಾಗಿದ್ದು, ನಿಯಂತ್ರಣ ತಪ್ಪಿದ ವಾಹನವು ಎದುರಿನಿಂದ ಬರುತ್ತಿದ್ದ ಬೈಕ್ ಸವಾರನಿಗೂ ಜೋರಾಗಿ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ಪಿಕಪ್ ವ್ಯಾನ್‌ನಲ್ಲಿದ್ದ ವಸ್ತುಗಳು ರಸ್ತೆಯಾದ್ಯಂತ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಬೈಕ್ ಸವಾರ ವಾಹನದ ಅಡಿಯಲ್ಲಿ ಸಿಲುಕಿರುವ ದೃಶ್ಯ ಎದೆ ನಡುಗಿಸುವಂತಿದೆ. ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದು, ಈ ಇಡೀ ಭೀಕರ ದೃಶ್ಯವು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಚಾಲಕರ ಅಜಾಗರೂಕತೆ ಮತ್ತು ಅತಿ ವೇಗವೇ ಇಂತಹ ಅನಾಹುತಗಳಿಗೆ ಕಾರಣ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಿನಲ್ಲಿ ಇಡಿ ದಾಳಿ: ನೆರೆ ರಾಜ್ಯದ ಚುನಾವಣೆಗೆ ದೊಡ್ಡ ಮೊತ್ತದ ಹಣ ಹೋಗಿರೋ ಶಂಕೆ – Kannada News | ED bitcoin Raid In Bengaluru: Likely big Amount transferred for Tamil nadu election

ಬೆಂಗಳೂರು, (ಏಪ್ರಿಲ್ 21): ಕರ್ನಾಟಕ ರಾಜ್ಯ ರಾಜಕೀಯದಲ್ಲಿ (Karnataka Politics)  ಭಾರೀ ಚರ್ಚೆಗೆ ಕಾರಣವಾಗಿರುವ ಬಿಟ್‌ಕಾಯಿನ್ ಹಗರಣವು (bitcoin Scam) ಇದೀಗ ಮತ್ತೆ ಹೊಸ ತಿರುವು ಪಡೆದಿದ್ದು, ಜಾರಿ ನಿರ್ದೇಶನಾಲಯ (ED) ದಾಳಿಗಳೊಂದಿಗೆ ಪ್ರಕರಣ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಹಲವು ವರ್ಷಗಳಿಂದ ತನಿಖೆಯಲ್ಲಿದ್ದ ಈ ಪ್ರಕರಣದಲ್ಲಿ ಹೊಸ ಅಂಶಗಳು ಹೊರಬರುತ್ತಿರುವುದರಿಂದ ಕುತೂಹಲ ಹೆಚ್ಚಾಗಿದೆ. ಹೌದು….ನೆರೆಯ ರಾಜ್ಯ ಚುನಾವಣೆ ಹೊತ್ತಲ್ಲೇ ಕರ್ನಾಟಕದಲ್ಲಿ ಇಡಿ ದಾಳಿ ಮಾಡಿರುವುದು ಕರ್ನಾಟಕ ರಾಜಕೀಯ ಪಡಸಾಲೆಯಲ್ಲಿ ಭಾರೀ ಚರ್ಚೆಯಾಗುತ್ತಿದೆ. ತಮಿಳುನಾಡು ವಿಧಾನಸಭೆ ಚುನಾವಣೆಗೆ ದೊಡ್ಡ ಮೊತ್ತದ ಹಣ ಹೋಗಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಒದಿ: ಹ್ಯಾಕರ್ ಶ್ರೀಕಿಯ ಐಷಾರಾಮಿ ಜೀವನ ನಲಪಾಡ್​ಗೆ ಕುತ್ತು ತಂದಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿ

 

Source link

ಪ್ರೇಯಸಿ ಕಣ್ಣೆದುರೇ ಪ್ರಿಯಕರ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ! ಯುವತಿಗೂ ಬೆಂಕಿ ಹಚ್ಚಲು ಯತ್ನ – Kannada News | Byadarahalli Incident: Lover’s Suicide by Fire, Attempted Murder on Girlfriend

ಲವರ್​​ ಮನೆಯಲ್ಲಿ ಬೆಂಕಿ ಹಚ್ಚಿಕೊಂಡ ಯುವಕ Image Credit source: Tv9 kannada

ಬೆಂಗಳೂರಿನ, ಏ.21: ರಾಜ್ಯದಲ್ಲಿ ಪ್ರೀತಿ-ಪ್ರೇಮಗಳಿಂದ ಉಂಟಾಗುವ ಅವಾಂತರಗಳು ಒಂದೆರಡಲ್ಲ, ಸಂಬಂಧಗಳ ನಡುವೆ ನಂಬಿಕೆಗಳು ಇಲ್ಲದಾಗ ಇಂತಹ ಘಟನೆಗಳು ಇದೆ. ಪ್ರೀತಿಗಾಗಿ ಗಂಡನನ್ನು ಕೊಲೆ ಮಾಡುವುದು, ಪ್ರೀತಿಸಿದವರು ಸಿಕ್ಕಿಲ್ಲ ಎಂದು ಪ್ರಾಣ ಕಳೆದುಕೊಳ್ಳುತ್ತಿರುವ ವರದಿಗಳು ಹೆಚ್ಚಾಗಿದೆ. ಇದೀಗ ಇಂತಹದೇ ಒಂದು ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನಾಪುರದಲ್ಲಿ ಪ್ರೇಮ ಪ್ರಕರಣವೊಂದು ದುರಂತ ಅಂತ್ಯ ಕಂಡಿದೆ. ಪ್ರೇಯಸಿಯ ಮನೆಗೆ ನುಗ್ಗಿದ ಪ್ರಿಯಕರ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಯುವತಿಗೂ ಬೆಂಕಿ ಹಚ್ಚಲು ಯತ್ನಿಸಿದ ಭೀಕರ ಘಟನೆ ಮಂಗಳವಾರ (ಏಪ್ರಿಲ್ 21) ನಡೆದಿದೆ.

ಮೃತ ಯುವಕನನ್ನು ಕಿರಣ್ ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಮತ್ತು ಯುವತಿ ನಡುವೆ ಸ್ನೇಹವಾಗಿ, ಅದು ನಂತರ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ. ಇಂದು ಯುವತಿಯ ತಾಯಿ ಮತ್ತು ಅಣ್ಣ ಮನೆಯಲ್ಲಿ ಇಲ್ಲದ್ದನ್ನು ಗಮನಿಸಿದ ಕಿರಣ್, ಮಾತನಾಡಲೆಂದು ಆಕೆಯ ಮನೆಗೆ ತೆರಳಿದ್ದಾನೆ. ಮನೆಗೆ ಪೆಟ್ರೋಲ್ ಸಮೇತ ಬಂದಿದ್ದ ಕಿರಣ್, ಯುವತಿಯೊಂದಿಗೆ ಜೋರಾಗಿ ಗಲಾಟೆ ಮಾಡಿಕೊಂಡಿದ್ದಾನೆ. ಮಾತಿಗೆ ಮಾತು ಬೆಳೆದಾಗ ತಾನು ತಂದಿದ್ದ ಪೆಟ್ರೋಲ್ ಅನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.

ಇದನ್ನೂ ಓದಿ: ಚಿಕ್ಕಮಗಳೂರು: ರಬ್ಬರ್ ತೋಟದಲ್ಲಿ ಸುಟ್ಟ ಅಸ್ಥಿಪಂಜರ ಪತ್ತೆ! ನಾಪತ್ತೆಯಾಗಿದ್ದ ಕೇರಳ ಕಾರ್ಮಿಕನ ಹತ್ಯೆ ಶಂಕೆ

ಅಷ್ಟಕ್ಕೇ ನಿಲ್ಲದ ಕಿರಣ್, ಪ್ರೇಯಸಿಗೂ ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಈ ವೇಳೆ ಕಿರುಚಾಡುತ್ತಾ ತಪ್ಪಿಸಿಕೊಳ್ಳಲು ಯತ್ನಿಸಿದ ಯುವತಿ ಸಣ್ಣಪುಟ್ಟ ಸುಟ್ಟಗಾಯಗಳಾಗಿವೆ. ಬೆಂಕಿಯ ತೀವ್ರತೆಗೆ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಯುವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರೀತಿಯಲ್ಲಿ ಮನಸ್ತಾಪವಾಗಿದೆ ಆ ಕಾರಣಕ್ಕೆ ಈ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅತ್ತಿಗೆ ಜೊತೆ ಅನೈತಿಕ ಸಂಬಂಧ: ಸಹೋದರನಿಂದಲೇ ನಡೀತು ಚಿಕ್ಕಪ್ಪನ ಮಗನ ಬರ್ಬರ ಕೊಲೆ; ಮೂವರು ವಶಕ್ಕೆ – Kannada News | Bagalkote Car Burning Twist: Illicit Affair Led to Brutal Murder, 3 Arrested

ಸಹೋದರನಿಂದಲೇ ನಡೀತು ಚಿಕ್ಕಪ್ಪನ ಮಗನ ಬರ್ಬರ ಕೊಲೆ
Image Credit source: Tv9 Kannada

ಬಾಗಲಕೋಟೆ, ಏಪ್ರಿಲ್​​ 21: ಜಮಖಂಡಿ ತಾಲೂಕಿನ ಕನ್ನೊಳ್ಳಿ ಗ್ರಾಮದಲ್ಲಿ ಕಾರಲ್ಲೇ ವ್ಯಕ್ತಿಯೋರ್ವ ದಹನವಾಗಿರುವ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್​​ ಸಿಕ್ಕಿದೆ. ಮೃತನನ್ನು ಅದೇ ಗ್ರಾಮದ ಕೃಷಿಕ ಸೋಮು ಪಡಸಲಗಿ (36) ಎಂದು ಗುರುತಿಸಲಾಗಿದ್ದು, ಇದು ಆಕಸ್ಮಿಕ ಸಾವಲ್ಲ ಬದಲಾಗಿ ಕೊಲೆ ಎಂಬುದು ತನಿಖೆ ವೇಳೆ ಬಯಲಾಗಿದೆ. ತನ್ನ ಪತ್ನಿಯ ಜೊತೆ ಈತ ಅನೈತಿಕ ಸಂಬಂಧ ಹೊಂದಿರುವ ಹಿನ್ನೆಲೆ ಸೋಮು ದೊಡ್ಡಪ್ಪನ ಮಗ ಸದಾಶಿವ ಪಡಸಲಗಿ ಮತ್ತು ಆತನ ಸಹಚರರೇ ಕೊಲೆ ಮಾಡಿದ್ದಾರೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅನೈತಿಕ ಸಂಬಂಧ ವಿಚಾರವಾಗಿ ಮೃತ ಸೋಮು ಪಡಸಲಗಿ ಮತ್ತು ಸದಾಶಿವ ಪಡಸಲಗಿ ನಡುವೆ ಹಳೆಯ ವೈಷಮ್ಯ ಇತ್ತು. ಈ ನಡುವೆ ಬಸವಜಯಂತಿ ಶುಭದಿನ ಎಂದು ಸೋಮು ಹೊಸ ಕಾರು ಖರೀದಿಸಿದ್ದ.ಪೂಜೆ ಮಾಡಿಸಿಕೊಂಡು‌ ಊರ ಕಡೆ ಬರುತ್ತಿದ್ದ ಆತನನ್ನು ಹಿಂಬಾಲಿಸಿರುವ ಸದಾಶಿವ ಪಡಸಲಗಿ ಮತ್ತು ಆತನ ಸ್ನೇಹಿತರಾದ ರವಿ ಪಾಟಿಲ್ ಮತ್ತು ನಾವಿ, ಸೋಮು ಇದ್ದ ಕಾರನ್ನು ಅಡ್ಡಗಟ್ಟಿ ಜಗಳ ತೆಗೆದಿದ್ದಾರೆ. ನೋಡ ನೋಡುತ್ತಿದ್ದಂತೆ ಸೋಮು ಪಡಸಲಗಿಗೆ ಚಾಕು ಇರಿದು ಕೊಲೆ ಮಾಡಿದ್ದಾರೆ. ನಂತರ ಶವವನ್ನು ಕಾರಲ್ಲಿ ಕೂರಿಸಿ, ಕಾರಲ್ಲೇ ಇದ್ದ ಪೆಟ್ರೋಲ್​​ನ ಸೋಮು ಶವಕ್ಕೆ ಎರಚಿದ್ದಾರೆ. ನಂತರ ಕಾರಿಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಆ ಮೂಲಕ ಕಾರಿಗೆ ಬೆಂಕಿ ತಗುಲಿ ಸೋಮು ಸಜೀವ ದಹನವಾಗಿದ್ದಾನೆ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದರು ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ಬಾಗಲಕೋಟೆ ಲವ್‌ ಜಿಹಾದ್​ ಆರೋಪಕ್ಕೆ ಬಿಗ್ ಟ್ವಿಸ್ಟ್; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಸ್ಪಿ

ಇನ್ನು ಘಟನಾ ಸ್ಥಳಕ್ಕೆ ಬಾಗಲಕೋಟೆ ಎಸ್. ಪಿ. ಸಿದ್ದಾರ್ಥ್ ಗೋಯೆಲ್ ಮತ್ತು ಸಾವಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ನಡೆದ ಅರ್ಧ ಗಂಟೆಯಲ್ಲೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸೋಮು ಸದಾಶಿವ ಪಡಸಲಗಿ ಪತ್ನಿ ಜೊತೆ ಮೂರು ವರ್ಷದಿಂದ ಅನೈತಿಕ ಸಂಬಂಧ ಹೊಂದಿದ್ದ.ಇದರಿಂದ ಆಗಾಗ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು ಎಂಬ ವಿಚಾರವೂ ಕೊಲೆ ಬೆನ್ನಲ್ಲೇ ಬಯಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಚಿಕ್ಕಮಗಳೂರು: ರಬ್ಬರ್ ತೋಟದಲ್ಲಿ ಸುಟ್ಟ ಅಸ್ಥಿಪಂಜರ ಪತ್ತೆ! ನಾಪತ್ತೆಯಾಗಿದ್ದ ಕೇರಳ ಕಾರ್ಮಿಕನ ಹತ್ಯೆ ಶಂಕೆ – Kannada News | NR Pura Suspected Murder: Charred Skeleton of Missing Worker Bibin Found in Chikkamagaluru

ರಬ್ಬರ್ ತೋಟದಲ್ಲಿ ಸುಟ್ಟ ಅಸ್ಥಿಪಂಜರ ಪತ್ತೆImage Credit source: Tv9 kannada

ಚಿಕ್ಕಮಗಳೂರು, ಏ.21: ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಅರಳಿಕೊಪ್ಪ ಗ್ರಾಮದಲ್ಲಿ ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ರಬ್ಬರ್ ತೋಟವೊಂದರಲ್ಲಿ ಯುವಕನೊಬ್ಬನ ಅಸ್ಥಿಪಂಜರ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಕೊಲೆ ಇರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.ಅರಳಿಕೊಪ್ಪ ಗ್ರಾಮದ ನಿವಾಸಿ ಎಲ್ಡೋ ಎಂಬುವವರಿಗೆ ಸೇರಿದ ರಬ್ಬರ್ ತೋಟದಲ್ಲಿ ಈ ಅಸ್ಥಿಪಂಜರ ಪತ್ತೆಯಾಗಿದೆ. ಶವವು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಕೇವಲ ಮೂಳೆಗಳು ಮಾತ್ರ ಉಳಿದಿವೆ. ಈ ಭೀಕರ ದೃಶ್ಯವನ್ನು ಕಂಡ ತೋಟದ ಕೆಲಸಗಾರರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತದೇಹವು ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ ಕಾರ್ಮಿಕ ಬಿಬಿನ್ ಎನ್ನುವವನದೇ ಇರಬಹುದು ಎಂದು ಶಂಕಿಸಲಾಗಿದೆ. ಬಿಬಿನ್ ಇದೇ ಎಲ್ಡೋ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದನು. ಅಸ್ಥಿಪಂಜರ ದೊರೆತ ಸ್ಥಳದಲ್ಲಿ ಬಿಬಿನ್ ಬಳಸುತ್ತಿದ್ದ ಜರ್ಕಿನ್ (ಜಾಕೆಟ್) ಪತ್ತೆಯಾಗಿರುವುದು ಈ ಶಂಕೆಯನ್ನು ಬಲಪಡಿಸಿದೆ. ಬಿಬಿನ್ ಸಂಬಂಧಿಕರು ಈಗಾಗಲೇ ಎನ್.ಆರ್. ಪುರ ಪೊಲೀಸ್ ಠಾಣೆಯಲ್ಲಿ ಆತನ ಹತ್ಯೆಯಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ‘ಹೀಟ್ ವೇವ್’ ಅಬ್ಬರ: ಆಸ್ಪತ್ರೆಗಳಲ್ಲಿ ಎಮರ್ಜೆನ್ಸಿ ಬೆಡ್ ಮೀಸಲಿಡಲು ದಿನೇಶ್ ಗುಂಡೂರಾವ್ ಸೂಚನೆ!

ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಜಿತೇಂದ್ರ ಕುಮಾರ್ ದಯ್ಮಾ ಹಾಗೂ ಎನ್.ಆರ್. ಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಸುಟ್ಟು ಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಎಫ್‌ಎಸ್‌ಎಲ್ (FSL) ತಂಡದ ಸಹಾಯದಿಂದ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rates: ಬೆಳ್ಳಿ ಬೆಲೆ ಭರ್ಜರಿ ಕುಸಿತ; ಇಲ್ಲಿದೆ ಚಿನ್ನ, ಬೆಳ್ಳಿ ದರಪಟ್ಟಿ – Kannada News | Gold Price Today on 21st April 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಏಪ್ರಿಲ್ 21: ನಿನ್ನೆ ಚಿನ್ನದ ಬೆಲೆ ಇಳಿದಿತ್ತು. ಇವತ್ತು ಬೆಳ್ಳಿಯ ಸರದಿ. ಇಂದು ಮಂಗಳವಾರ ಬೆಳ್ಳಿ ಬೆಲೆಯಲ್ಲಿ (Silver Rates) 10 ರೂ ಕಡಿಮೆಗೊಂಡಿದೆ. ಬೆಂಗಳೂರು, ಮುಂಬೈ ಮೊದಲಾದೆಡೆ ಇದರ ಬೆಲೆ 275 ರೂನಿಂದ 265 ರೂಗೆ ಇಳಿದಿದೆ. ಕೆಲವೆಡೆ ಬೆಲೆ 280 ರೂನಿಂದ 5 ರೂ ಕಡಿಮೆಗೊಂಡು 275 ರೂ ಆಗಿದೆ. ಆದರೆ, ಚಿನ್ನದ ಬೆಲೆಯಲ್ಲಿ ಇವತ್ತು ಬದಲಾವಣೆ ಆಗಿಲ್ಲ. ವಿದೇಶಗಳಲ್ಲಿ ಕೆಲವೆಡೆ ಅಲ್ಪಸ್ವಲ್ಪ ಏರಿಳಿತಗಳಾಗಿವೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,42,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,55,290 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,42,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 21ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,529 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,235 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,647 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,529 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,235 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,235 ರೂ
  • ಚೆನ್ನೈ: 14,300 ರೂ
  • ಮುಂಬೈ: 14,235 ರೂ
  • ದೆಹಲಿ: 14,250 ರೂ
  • ಕೋಲ್ಕತಾ: 14,235 ರೂ
  • ಕೇರಳ: 14,235 ರೂ
  • ಅಹ್ಮದಾಬಾದ್: 14,240 ರೂ
  • ಜೈಪುರ್: 14,250 ರೂ
  • ಲಕ್ನೋ: 14,250 ರೂ
  • ಭುವನೇಶ್ವರ್: 14,235 ರೂ

ಇದನ್ನೂ ಓದಿ: ಮಾರ್ಚ್​ನಲ್ಲಿ ಪ್ರಮುಖ ವಲಯಗಳ ಉತ್ಪಾದನೆಯಲ್ಲಿ ಕುಸಿತ; ಆರ್ಥಿಕ ವರ್ಷದ ಒಟ್ಟಾರೆ ಬೆಳವಣಿಗೆ ಶೇ. 2.6ಕ್ಕೆ ಇಳಿಕೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 585 ರಿಂಗಿಟ್ (13,844 ರುಪಾಯಿ)
  • ದುಬೈ: 537.50 ಡಿರಾಮ್ (13,693 ರುಪಾಯಿ)
  • ಅಮೆರಿಕ: 149.50 ಡಾಲರ್ (13,987 ರುಪಾಯಿ)
  • ಸಿಂಗಾಪುರ: 190.60 ಸಿಂಗಾಪುರ್ ಡಾಲರ್ (14,015 ರುಪಾಯಿ)
  • ಕತಾರ್: 532 ಕತಾರಿ ರಿಯಾಲ್ (13,655 ರೂ)
  • ಸೌದಿ ಅರೇಬಿಯಾ: 544 ಸೌದಿ ರಿಯಾಲ್ (13,572 ರುಪಾಯಿ)
  • ಓಮನ್: 57.05 ಒಮಾನಿ ರಿಯಾಲ್ (13,866 ರುಪಾಯಿ)
  • ಕುವೇತ್: 44.43 ಕುವೇತಿ ದಿನಾರ್ (13,571 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 265 ರೂ
  • ಚೆನ್ನೈ: 275 ರೂ
  • ಮುಂಬೈ: 265 ರೂ
  • ದೆಹಲಿ: 265 ರೂ
  • ಕೋಲ್ಕತಾ: 265 ರೂ
  • ಕೇರಳ: 275 ರೂ
  • ಅಹ್ಮದಾಬಾದ್: 265 ರೂ
  • ಜೈಪುರ್: 265 ರೂ
  • ಲಕ್ನೋ: 265 ರೂ
  • ಭುವನೇಶ್ವರ್: 275 ರೂ
  • ಪುಣೆ: 265

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹೈದರಾಬಾದ್‌ನಿಂದ ಮುಂಬೈಗೆ ಶಿಫ್ಟ್ ಆಗ್ತಾರಾ ಅಲ್ಲು ಅರ್ಜುನ್? – Kannada News | Allu Arjun shifting to Mumbai from Hyderabad his father reacts to news

ಅಲ್ಲು ಅರ್ಜುನ್ (Allu Arjun), ಭಾರತದ ಸ್ಟಾರ್ ಪ್ಯಾನ್ ಇಂಡಿಯಾ ನಟ. ತೆಲುಗು ಚಿತ್ರರಂಗದ ನಟರಾಗಿದ್ದರೂ ಸಹ ಅಲ್ಲು ಅರ್ಜುನ್ ಅವರಿಗೆ ಭಾರತದಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗಳು ಭಾರತದ ಹಲವು ಭಾಷೆಗಳಿಗೆ ಡಬ್ ಆಗುತ್ತದೆ. ಅಲ್ಲು ಅರ್ಜುನ್ ಅವರಿಗೆ ತೆಲುಗು ಮಾತ್ರವಲ್ಲದೆ ಭಾರತದ ಬಹುತೇಕ ಎಲ್ಲ ಚಿತ್ರರಂಗಗಳಲ್ಲಿಯೂ ಅವರಿಗೆ ಗೆಳೆಯರಿದ್ದಾರೆ. ಅಲ್ಲು ಅರ್ಜುನ್ ಅವರಿಗೆ ತೆಲುಗನಲ್ಲಿ ಮಾತ್ರವಲ್ಲ, ಬಾಲಿವುಡ್​ನಿಂದಲೂ ಅವಕಾಶಗಳು ಬರುತ್ತಿವೆ. ಇದೀಗ ನಟ ಅಲ್ಲು ಅರ್ಜುನ್, ಹೈದರಾಬಾದ್ ಬಿಟ್ಟು ಮುಂಬೈಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ.

ಅಲ್ಲು ಅರ್ಜುನ್ ಚಿತ್ರರಂಗ ಬದಲಿಸುತ್ತಿಲ್ಲ ಬದಲಿಗೆ ತಮ್ಮ ವಾಸ್ತವ್ಯ ಬದಲಿಸಲಿದ್ದಾರೆ ಎಂಬ ಸುದ್ದಿ ಇದೆ. ಅಲ್ಲು ಅರ್ಜುನ್ ಅವರು ಪ್ರಸ್ತುತ ಕುಟುಂಬದೊಂದಿಗೆ ಹೈದರಾಬಾದ್​​ನಲ್ಲಿ ನೆಲೆಸಿದ್ದಾರೆ. ಹೈದರಾಬಾದ್​​ನ ಜೂಬ್ಲಿ ಹಿಲ್ಸ್​​ನಲ್ಲಿ ಐಶಾರಾಮಿ ಮನೆ ಹೊಂದಿದ್ದಾರೆ. ಅವರ ಇಬ್ಬರು ಮಕ್ಕಳು ಸಹ ಹೈದರಾಬಾದ್​​ನಲ್ಲೇ ಶಾಲೆಗೆ ತೆರಳುತ್ತಾರೆ. ಆದರೆ ಇದೀಗ ಅವರು ತಮ್ಮ ಕುಟುಂಬದೊಂದಿಗೆ ಹೈದರಾಬಾದ್ ತೊರೆದು ಮುಂಬೈಗೆ ಹೋಗಿ ನೆಲೆಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಳೆದ ವರ್ಷ ನಡೆದ ಕೆಲವು ಘಟನೆಗಳಿಂದ ಬೇಸರಗೊಂಡು ಅವರು ಈ ನಿರ್ಧಾರ ತಳೆದಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ದೀಪಿಕಾಗಾಗಿ ಶೂಟಿಂಗ್ ಶೆಡ್ಯೂಲ್ ಬದಲಿಸಲಿರುವ ಅಲ್ಲು ಅರ್ಜುನ್, ಶಾರುಖ್ ಖಾನ್

ಈ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿರುವ ಅಲ್ಲು ಅರ್ಜುನ್ ತಂದೆ ಹಾಗೂ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್, ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಅಲ್ಲು ಅರ್ಜುನ್ ಮುಂಬೈಗೆ ಶಿಫ್ಟ್ ಆಗುವ ಯಾವುದೇ ಆಲೋಚನೆ ಇಲ್ಲ ಅವರು ಇಲ್ಲಿಯೇ (ಹೈದರಾಬಾದ್​​ನಲ್ಲಿ) ಇರಲಿದ್ದಾರೆ ಎಂದಿದ್ದಾರೆ. ಅಲ್ಲು ಅರ್ಜುನ್ ಮುಂಬೈನಲ್ಲಿ ಒಂದು ಆಫೀಸ್ ಅಥವಾ ಫ್ಲ್ಯಾಟ್ ಖರೀದಿಸಿರುವುದು ನಿಜ ಇರಬಹುದು, ಅದು ಕೇವಲ ಅವರ ಕೆಲಸದ ಕಾರಣಕ್ಕಾಗಿ ಆಗಿದೆಯೇ ಹೊರತು ಬೇರೆ ಉದ್ದೇಶಕ್ಕಲ್ಲ. ಅವರು ಹೈದರಾಬಾದ್ ಬಿಟ್ಟು ಎಲ್ಲಿಗೂ ಹೋಗುತ್ತಿಲ್ಲ ಎಂದು ಹೇಳಿದ್ದಾರೆ.

ಅಲ್ಲು ಅರ್ಜುನ್ ಪ್ರಸ್ತುತ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಅಟ್ಲಿ ನಿರ್ದೇಶಿಸುತ್ತಿದ್ದು ಸಿನಿಮಾನಲ್ಲಿ ದೀಪಿಕಾ ಪಡುಕೋಣೆ, ಮೃಣಾಲ್ ಠಾಕೂರ್ ಮತ್ತು ರಶ್ಮಿಕಾ ಮಂದಣ್ಣ ನಾಯಕಿ. ಅದರ ಬಳಿಕ ಲೋಕೇಶ್ ಕನಗರಾಜ್ ನಿರ್ದೇಶನದ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಮಲಯಾಳಂನ ಬಾಸಿಲ್ ನಿರ್ದೇಶಿಸಲಿರುವ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಮತ್ತೊಮ್ಮೆ ‘ಪುಷ್ಪ’ ನಿರ್ದೇಶಕ ಸುಕುಮಾರ್ ಜೊತೆಗೆ ಕೈ ಜೋಡಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಭೂತ್ ಬಂಗ್ಲ’ ಕಲೆಕ್ಷನ್: 3 ದಿನಕ್ಕೆ 100 ಕೋಟಿ ರೂಪಾಯಿ ಗಳಿಸಿದ ಅಕ್ಷಯ್ ಕುಮಾರ್ ಸಿನಿಮಾ – Kannada News | Akshay Kumar Bhooth Bangla worldwide Box Office Collection day 3 crosses Rs 100 crores

ಬಾಲಿವುಡ್​ನ ಖ್ಯಾತ ನಟ ಅಕ್ಷಯ್ ಕುಮಾರ್ (Akshay Kumar) ಮತ್ತು ಹಿರಿಯ ನಿರ್ದೇಶಕ ಪ್ರಿಯದರ್ಶನ್ ಕಾಂಬಿನೇಷನ್​ನಲ್ಲಿ ಬಂದ ‘ಭೂತ್ ಬಂಗ್ಲ’ (Bhooth Bangla) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಮಾಧಾನಕರ ಗಳಿಕೆ ಮಾಡಿದೆ. ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ ಈ ಚಿತ್ರವು ವಿಶ್ವಾದ್ಯಂತ 100 ಕೋಟಿ ರೂಪಾಯಿಗಳ ಗಡಿಯನ್ನು ದಾಟುವ ಮೂಲಕ ಗಮನ ಸೆಳೆದಿದೆ. ಸುಮಾರು 14 ವರ್ಷಗಳ ಸುದೀರ್ಘ ಬಿಡುವಿನ ನಂತರ ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಒಂದಾಗಿ ಮಾಡಿರುವ ಈ ಹಾರರ್-ಕಾಮಿಡಿ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

‘ಬಾಲಾಜಿ ಮೋಷನ್ ಪಿಕ್ಚರ್ಸ್’ ಸಂಸ್ಥೆಯು ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ‘ಭೂತ್ ಬಂಗ್ಲ’ ಚಿತ್ರವು ಕೇವಲ ಮೂರು ದಿನಗಳಲ್ಲಿ ಜಾಗತಿಕವಾಗಿ 102.05 ಕೋಟಿ ರೂಪಾಯಿ ಗಳಿಸಿದೆ. 21.60 ಕೋಟಿ ರೂಪಾಯಿ, ಎರಡನೇ ದಿನ 25.65 ಕೋಟಿ ರೂಪಾಯಿ ಹಾಗೂ ಮೂರನೇ ದಿನವಾದ ಭಾನುವಾರ 30.20 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

ಭಾನುವಾರದ ರಜೆಯ ದಿನದಂದು ‘ಭೂತ್ ಬಂಗ್ಲ’ ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡುಬಂದಿದ್ದು, ಭಾರತದ ಮಾರುಕಟ್ಟೆಯಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಹೆಚ್ಚಾಗಬಹುದು ಎಂಬ ಭರವಸೆ ಮೂಡಿದೆ. ಆದರೆ ವಿಮರ್ಶೆಯ ದೃಷ್ಟಿಯಿಂದ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.

ಭಾರತದಲ್ಲಿ ಪೇಯ್ಡ್ ಪ್ರಿವ್ಯೂಗಳ ಮೂಲಕ 3.50 ಕೋಟಿ ಗಳಿಸಿದ್ದ ಈ ಸಿನಿಮಾ, ಮೊದಲ ದಿನ 12.25 ಕೋಟಿ ರೂಪಾಯಿ (ನೆಟ್) ಸಂಗ್ರಹಿಸಿತ್ತು. ಶನಿವಾರ 19 ಕೋಟಿ ಮತ್ತು ಭಾನುವಾರ 23 ಕೋಟಿ ರೂಪಾಯಿ ಗಳಿಸುವ ಮೂಲಕ ದೇಶೀಯ ಮಾರುಕಟ್ಟೆಯಲ್ಲೂ ಗಮನ ಸೆಳೆದಿದೆ. ಇದು ಉತ್ತಮ ಮೊತ್ತ ಆಗಿದ್ದರೂ ಕೂಡ ಸ್ಟಾರ್ ಸಿನಿಮಾಗೆ ಸಾಧಾರಣ ಕಲೆಕ್ಷನ್ ಎನ್ನಬಹುದು.

ಇದನ್ನೂ ಓದಿ: ಅಕ್ಷಯ್ ಕುಮಾರ್ ಪುತ್ರ ಆರವ್ ಭಾಟಿಯಾ ತಿಂಗಳ ಸಂಬಳ ಕೇವಲ 4,500 ರೂಪಾಯಿ

ನಿರ್ದೇಶಕ ಪ್ರಿಯದರ್ಶನ್ ಐದು ವರ್ಷಗಳ ನಂತರ ಹಿಂದಿ ಚಿತ್ರರಂಗಕ್ಕೆ ಮರಳಿದ್ದು, ತಮ್ಮ ಹಳೆಯ ಖದರ್ ಮತ್ತೆ ತೋರಿಸಲು ಪ್ರಯತ್ನಿಸಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಟಬು, ವಾಮಿಕಾ ಗಬ್ಬಿ, ಪರೇಶ್ ರಾವಲ್, ರಾಜ್‌ಪಾಲ್ ಯಾದವ್ ಮತ್ತು ಮಿಥಿಲಾ ಪಾಲ್ಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಪರೇಷನ್ ಸಿಂಧೂರ್ ಅಬ್ಬರ, ಪಾಕ್ ಉಗ್ರರ ಕೋಟೆಗೆ ಲಗ್ಗೆ, ಒಂದು ವರ್ಷವಾದ್ರೂ ಹೊರಬರಲು ಹೆದರುತ್ತಿದ್ದಾರೆ ಸಯೀದ್-ಅಜರ್ – Kannada News | Operation Sindhoor: India’s Strike on Pakistan Terror, Hafiz Saeed and Azhar in Hiding

ಪಹಲ್ಗಾಮ್, ಏಪ್ರಿಲ್ 21: ಪಹಲ್ಗಾಮ್(Pahalgam) ದಾಳಿಯ ರಕ್ತಸಿಕ್ತ ನೆನಪುಗಳಿಗೆ ಭಾರತ ನೀಡಿದ ಪ್ರತ್ಯುತ್ತರ ಕೇವಲ ಒಂದು ಮಿಲಿಟರಿ ಕಾರ್ಯಾಚರಣೆಯಾಗಿರಲಿಲ್ಲ, ಅದು ಗಡಿಯ ಆಚೆಗಿದ್ದ ಭಯೋತ್ಪಾದಕ ಸಾಮ್ರಾಜ್ಯದ ಅಡಿಪಾಯವನ್ನೇ ನಡುಗಿಸಿದ ಚಂಡಮಾರುತ. ‘ಆಪರೇಷನ್ ಸಿಂಧೂರ್’ ಹೆಸರಿನ ಈ ಮಹಾಪ್ರಹಾರದ ರೋಚಕ ಕಥೆ ಇಲ್ಲಿದೆ. ಏಪ್ರಿಲ್ 22, 2025ರಂದು ಪಹಲ್ಗಾಮ್‌ನಲ್ಲಿ 26 ಅಮಾಯಕ ಜೀವಗಳನ್ನು ಬಲಿ ಪಡೆದ ಉಗ್ರರ ಕೃತ್ಯಕ್ಕೆ ಭಾರತ ಮೌನವಾಗಿರಲಿಲ್ಲ. ಕೇವಲ 15 ದಿನಗಳಲ್ಲಿ, ಅಂದರೆ ಮೇ 7ರಂದು ಭಾರತೀಯ ವಾಯುಪಡೆ ಮತ್ತು ವಿಶೇಷ ಪಡೆಗಳು ‘ಆಪರೇಷನ್ ಸಿಂಧೂರ್’ ಅನ್ನು ಪ್ರಾರಂಭಿಸಿತ್ತು. ಇದರ ಗುರಿ ಲಷ್ಕರ್-ಎ-ತೊಯ್ಬಾ (LeT), ಜೈಶ್-ಎ-ಮೊಹಮ್ಮದ್ (JeM) ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನ ಹುಟ್ಟಡಗಿಸುವುದಾಗಿತ್ತು.

ಭಾರತೀಯ ಕ್ಷಿಪಣಿಗಳು ಪಾಕಿಸ್ತಾನದ ಒಳಗಿರುವ ಒಂಬತ್ತು ಪ್ರಮುಖ ಅಡಗುತಾಣಗಳನ್ನು ಧೂಳೀಪಟ ಮಾಡಿದವು.ಲಾಹೋರ್ ಸಮೀಪದ 200 ಎಕರೆ ವಿಸ್ತೀರ್ಣದ ಲಷ್ಕರ್ ಕೇಂದ್ರ ಕಚೇರಿ ಮುರಿಡ್ಕೆ ಅಕ್ಷರಶಃ ಸ್ಮಶಾನವಾಯಿತು. ಜೈಶ್-ಎ-ಮೊಹಮ್ಮದ್‌ನ ಭದ್ರಕೋಟೆಯಾಗಿದ್ದ ಜಾಮಿಯಾ ಮಸೀದಿ ಸುಭಾನ್ ಅಲ್ಲಾ ಕ್ಯಾಂಪಸ್ ಅನ್ನು ಭಾರತೀಯ ಪಡೆಗಳು ಗುರಿಯಾಗಿಸಿಕೊಂಡವು. ಈ ದಾಳಿಯಲ್ಲಿ ಮಸೂದ್ ಅಜರ್ ಕೇವಲ ತನ್ನ ನೆಲೆಗಳನ್ನಷ್ಟೇ ಅಲ್ಲ, ತನ್ನ ಕುಟುಂಬದ 10 ಸದಸ್ಯರನ್ನೂ ಕಳೆದುಕೊಂಡಿದ್ದಾನೆ ಎಂದು ಪಾಕ್ ಮಾಧ್ಯಮಗಳೇ ಒಪ್ಪಿಕೊಂಡವು.

ಇಲಿಗಳಂತೆ ಅಡಗಿದ ಹಂತಕರು
ಆಪರೇಷನ್ ಸಿಂಧೂರ್ ಸೃಷ್ಟಿಸಿದ ನಡುಕ ಎಷ್ಟಿತ್ತೆಂದರೆ, ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ ಎಂಬ ‘ಭಯೋತ್ಪಾದಕ ದೊರೆಗಳು’ ಇಂದು ಪ್ರಾಣಭೀತಿಯಿಂದ ಬಿಲ ಸೇರಿದ್ದಾರೆ. ಬಹಾವಲ್ಪುರದಿಂದ 1,200 ಕಿ.ಮೀ ದೂರದ ಗಿಲ್ಗಿಟ್-ಬಾಲ್ಟಿಸ್ತಾನ್‌ಗೆ ಓಡಿಹೋದ ಅಜರ್, ನಂತರ ಸ್ಕಾರ್ಡುವಿನ ಮಸೀದಿಗಳು ಮತ್ತು ಅತಿಥಿ ಗೃಹಗಳಲ್ಲಿ ಅಲೆಮಾರಿಯಂತೆ ದಿನ ಕಳೆದಿದ್ದಾನೆ. ಅವನು ಅಫ್ಘಾನಿಸ್ತಾನಕ್ಕೆ ಓಡಿಹೋಗಿದ್ದಾನೆ ಎಂಬ ವದಂತಿಗಳಿದ್ದರೂ, ಅವನು ಇನ್ನೂ ಪಾಕ್ ಸೇನೆಯ ಕಾವಲಲ್ಲೇ ತಲೆಮರೆಸಿಕೊಂಡಿದ್ದಾನೆ.

ಮತ್ತಷ್ಟು ಓದಿ: Pahalgam Terror Attack: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಒಂದು ವರ್ಷ, ಗಾಯಗೊಂಡಿದ್ದ ಸ್ವರ್ಗಕ್ಕೆ ಮರಳಿದ ಚೈತನ್ಯ, ಚೇತರಿಕೆಯ ಹಾದಿ ಹೇಗಿದೆ?

2019ರಿಂದ 46 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದೇನೆ ಎಂದು ನಾಟಕವಾಡುವ ಹಫೀಜ್ ಸಯೀದ್, ಫೆಬ್ರವರಿ 2025ರವರೆಗೆ 20ಕ್ಕೂ ಹೆಚ್ಚು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ. ಆದರೆ ಆಪರೇಷನ್ ಸಿಂಧೂರ್ ನಂತರ ಅವನು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಹೆದರುತ್ತಿದ್ದಾನೆ.

ಪ್ರಸ್ತುತ, ಈ ಇಬ್ಬರೂ ಹಂತಕರು ರಾವಲ್ಪಿಂಡಿ, ಕರಾಚಿ ಮತ್ತು ಲಾಹೋರ್‌ ನಡುವೆ ಪದೇ ಪದೇ ಸ್ಥಳಾಂತರಗೊಳ್ಳುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಲಾವಲ್ ಭುಟ್ಟೋ ಅವರಂತಹ ನಾಯಕರು ಇವರು ಪಾಕಿಸ್ತಾನದಲ್ಲಿಲ್ಲ ಎಂಬ ನಾಟಕವಾಡುತ್ತಿದ್ದರೂ, ಭಾರತೀಯ ಗುಪ್ತಚರ ಸಂಸ್ಥೆಗಳು ಅವರ ಪ್ರತಿ ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟಿವೆ.

ಭಾರತವನ್ನು ಕೆಣಕಿದರೆ, ಭೂಮಿಯ ಆಳದಲ್ಲಿದ್ದರೂ ನಾವು ನಿಮ್ಮನ್ನು ಹುಡುಕಿ ಹೊಡೆಯುತ್ತೇವೆ. ಒಂದು ವರ್ಷದ ನಂತರವೂ ಹಫೀಜ್ ಮತ್ತು ಮಸೂದ್ ಅಜರ್ ಅನುಭವಿಸುತ್ತಿರುವ ಈ ‘ನಿರಂತರ ಭಯ’ವೇ ಭಾರತ ಸಾಧಿಸಿದ ಅತಿದೊಡ್ಡ ವಿಜಯ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 2:37 pm, Tue, 21 April 26

Source link

Exit mobile version