ವಿಜಯ್‌ಗೆ ಬಹುಮತ ಸಾಬೀತಿನ ಸವಾಲು ಹಾಕಿದ ರಾಜ್ಯಪಾಲರು, ಕೋರ್ಟ್ ಮೆಟ್ಟಿಲೇರಲು ಟಿವಿಕೆ ಸಿದ್ಧತೆ – Kannada News | Vijay’s TVK Tamil Nadu Majority Test: Governor Demands Proof Amidst Coalition Hurdles
ಚೆನ್ನೈ, ಮೇ 07: ತಮಿಳುನಾಡು(Tamil Nadu) ವಿಧಾನಸಭಾ ಚುನಾವಣೆಯಲ್ಲಿ ಚೊಚ್ಚಲ ಪ್ರಯತ್ನದಲ್ಲೇ ಭರ್ಜರಿ ಜಯ ದಾಖಲಿಸಿರುವ ನಟ ವಿಜಯ್ ಅವರ ‘ತಮಿಳುಗ ವೆಟ್ರಿ ಕಳಗಂ’ (TVK) ಅಧಿಕಾರದ ಗದ್ದುಗೆ ಏರಲು ಕೊನೆಯ ಹಂತದ ಕಾನೂನು ಮತ್ತು ಸಂಖ್ಯಾಬಲದ ಹೋರಾಟ ನಡೆಸುತ್ತಿದೆ. ಗುರುವಾರ ಬೆಳಿಗ್ಗೆ ವಿಜಯ್ ಅವರನ್ನು ರಾಜಭವನಕ್ಕೆ ಕರೆಸಿಕೊಂಡ ರಾಜ್ಯಪಾಲ ಆರ್‌ವಿ ಅರ್ಲೇಕರ್, ಮೊದಲು 118 ಶಾಸಕರ ಬೆಂಬಲವಿರುವ ಅಧಿಕೃತ ಪತ್ರ ತನ್ನಿ ಎಂದು ಕಠಿಣ ಷರತ್ತು ವಿಧಿಸಿದ್ದಾರೆ. ಸುಮಾರು ಎರಡು ದಿನಗಳಲ್ಲಿ ಎರಡನೇ ಬಾರಿಗೆ ರಾಜ್ಯಪಾಲರನ್ನು…