ಹೊಸ ‘ರಾಜರಥ’ ಸಂಚಾರ ಆರಂಭ: ಕರ್ನಾಟಕದ 6 ಜಿಲ್ಲೆಗಳ ಪ್ರಯಾಣಿಕರಿಗೆ ಗುಡ್ ನ್ಯೂಸ್ – Kannada News | Hubballi Hyderabad AC Sleeper: NWKRTC Launches Rajaratha Luxury Bus Service
ಹುಬ್ಬಳ್ಳಿ, ಏ.20: ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರ ಬಹುಕಾಲದ ಬೇಡಿಕೆಯನ್ನು ಈಡೇರಿಸಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು, ತನ್ನ ಐಷಾರಾಮಿ ಬಸ್‌ಗಳ ಸಾಲಿಗೆ 4 ಹೊಸ ‘ರಾಜರಥ’ (Rajaratha) ಎಸಿ ಸ್ಲೀಪರ್ ಬಸ್‌ಗಳನ್ನು ಸೇರ್ಪಡೆಗೊಳಿಸಿದೆ. ಈ ಬಸ್‌ಗಳು ಪ್ರಮುಖವಾಗಿ ಕರ್ನಾಟಕದ ವಿವಿಧ ನಗರಗಳಿಂದ ಹೈದರಾಬಾದ್‌ಗೆ ಸಂಪರ್ಕ ಕಲ್ಪಿಸಲಿವೆ. ಈ ಹೊಸ ಬಸ್‌ಗಳ ಸಂಚಾರದಿಂದ ಧಾರವಾಡ, ಗದಗ, ಕೊಪ್ಪಳ, ಬಳ್ಳಾರಿ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಪ್ರಯಾಣಿಕರಿಗೆ ನೇರ ಅನುಕೂಲವಾಗಲಿದೆ. ಪ್ರಮುಖ ಎರಡು ಮಾರ್ಗಗಳು: ಹುಬ್ಬಳ್ಳಿ –…