ಟ್ರಾಫಿಕ್ ಕಿರಿಕಿರಿಗೆ ಗುಡ್ ಬೈ ಹೇಳಲು ಬೆಂಗಳೂರಿನ 5 ಕಡೆ ನಿರ್ಮಾಣವಾಗಲಿದೆ ಎಲಿವೇಟೆಡ್​​ ಕಾರಿಡಾರ್: ಎಲ್ಲೆಲ್ಲಿ ಗೊತ್ತಾ? – Kannada News | Five Elevated Corridors Planned in Bengaluru to Ease Traffic Congestion: Here’s the List

ಬೆಂಗಳೂರು, ಜನವರಿ 12: ಬೆಂಗಳೂರಿನ (Bangalore) ಜನರು ಅತಿಯಾಗಿ ಜಿಗುಪ್ಸೆಗೆ ಒಳಗಾಗುವುದು ಇಲ್ಲಿನ ಸಂಚಾರ (Traffic) ದಟ್ಟಣೆಯಿಂದ. ಹೀಗಾಗಿ ಸಂಚಾರ ದಟ್ಟಣೆ ನಿವಾರಣೆಗಾಗಿ ಸರ್ಕಾರ ನಾನಾ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಇದೀಗ ಪ್ರಮುಖ ಭಾಗಗಳಲ್ಲಿ ಎಲಿವೇಟೆಡ್​ ಕಾರಿಡಾರ್​​ ನಿರ್ಮಾಣಕ್ಕೆ ನಿರ್ಧರಿಸಿದೆ. ಒಟ್ಟು ಸುಮಾರು 75 ಕಿಲೋ ಮೀಟರ್​ ಉದ್ದದ 5 ಎತ್ತರಿಸಿದ ರಸ್ತೆಗಳು ಅಥವಾ ಎಲಿವೇಟೆಡ್​ ಕಾರಿಡಾರ್​ಗಳ ನಿರ್ಮಾಣದ ಜವಾಬ್ದಾರಿಯನ್ನು ಬೆಂಗಳೂರು ಸ್ಮಾರ್ಟ್​​ ಇನ್ಫ್ರಾಸ್ಟ್ರಕ್ಚರ್​​ ಲಿಮಿಟೆಡ್​ಗೆ ವಹಿಸಲಾಗಿದೆ.

ಎಲ್ಲೆಲ್ಲಿ ಎಲಿವೇಟೆಡ್​ ಕಾರಿಡಾರ್?

  • ನಾಗವಾರ ಜಂಕ್ಷನ್​​​ – ನ್ಯೂ ಏರ್ಪೋರ್ಟ್​​​ ರಸ್ತೆ (17.94 ಕಿ.ಮೀ)
  • ಹಲಸೂರು ಕೆರೆ ಜಂಕ್ಷನ್​​- ಬಾಗಲೂರು (27.19 ಕಿ.ಮೀ)
  • ಹಳೆ ಮದ್ರಾಸ್​ ರಸ್ತೆ – ಎಲೆಕ್ಟ್ರಾನಿಕ್​ ಸಿಟಿ ಫ್ಲೈಓವರ್​ (10.81 ಕಿ.ಮೀ)
  • ಸಿರ್ಸಿ ಸರ್ಕಲ್​​ – ಸ್ಯಾಟಲೈಟ್​​ ಬಸ್​ ಸ್ಟ್ಯಾಂಡ್ (5.22 ಕಿ.ಮೀ)
  • ರಾಗಿಗುಡ್ಡ ಜಂಕ್ಷನ್​​ – ಕನಕಪುರ ಮುಖ್ಯರಸ್ತೆ (18.47 ಕಿ.ಮೀ)

ಇದನ್ನೂ ಓದಿ: ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್: ಆ್ಯಂಬುಲೆನ್ಸ್ ಸಿಲುಕಿ ರೋಗಿ ನರಳಾಟ

ಇನ್ನು ಹೊಸ ಎಲಿವೇಟೆಡ್​ ರಸ್ತೆಗಳು ನಗರದ ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ನೀಡುವ ನಿರೀಕ್ಷೆಯಿದೆ. ಆದರೆ, ಇವುಗಳ ನಿರ್ಮಾಣದ ಬಳಿಕ ಟೋಲ್​ ಸಂಗ್ರಹ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಈ ಮೂಲಕ ದುಬಾರಿ ಕಾಮಗಾರಿಯ ವೆಚ್ಚವನ್ನು ಸವಾರರಿಂದಲೇ ವಸೂಲಿ ಮಾಡುವ ಚಿಂತನೆ ಕೂಡ ಸರ್ಕಾರದ್ದಾಗಿದೆ ಎನ್ನಲಾಗಿದೆ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶತಕ ತಪ್ಪಿಸಿ ಭರ್ಜರಿ ದಾಖಲೆ ಬರೆದ ವಿರಾಟ್ ಕೊಹ್ಲಿ – Kannada News | Virat Kohli is now Oldest Indian batter to be dismissed in 90s in ODI

ಇದಕ್ಕೂ ಮುನ್ನ ಈ ವಿಶೇಷ ದಾಖಲೆ ಸುನಿಲ್ ಗವಾಸ್ಕರ್ ಹೆಸರಿನಲ್ಲಿತ್ತು. 1986 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಗವಾಸ್ಕರ್ 92 ರನ್​​ಗಳಿಸಿ ಶತಕ ವಂಚಿತರಾಗಿದ್ದರು. ಈ ವೇಳೆ ಅವರ ವಯಸ್ಸು 36 ವರ್ಷ, 282 ದಿನಗಳು. ಈ ಮೂಲಕ ಭಾರತದ ಪರ ಏಕದಿನ ಕ್ರಿಕೆಟ್​​ನಲ್ಲಿ 90+ ರನ್​​​ಗಳಿಸಿ ಶತಕ ತಪ್ಪಿಸಿಕೊಂಡ ಅತ್ಯಂತ ಹಿರಿಯ ಬ್ಯಾಟ್ಸ್​​ಮನ್ ಎನಿಸಿಕೊಂಡಿದ್ದರು.

Source link

ಬೇಕಿರುವುದು ತೈಲವಲ್ಲ ವೆನೆಜುವೆಲಾದ ಕೀಲಿಕೈ, ತಮ್ಮನ್ನು ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡ ಟ್ರಂಪ್ – Kannada News | Trump’s Truth Social Post Declares Him Acting President of Venezuela Amid Caracas Crisis

ವಾಷಿಂಗ್ಟನ್, ಜನವರಿ 12: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​(Donald Trump)ನ ಇತ್ತೀಚಿನ ಹೇಳಿಕೆಗಳನ್ನು ಗಮನಿಸಿದಾಗ ಅವರಿಗೆ ಬೇಕಾಗಿರುವುದು ಕೇವಲ ವೆನೆಜುವೆಲಾದ ತೈಲ ಮಾತ್ರವಲ್ಲ, ದೇಶದ ಕೀಲಿಕೈ ಕೂಡ ಎಂಬುದು ಸ್ಪಷ್ಟವಾಗುತ್ತದೆ. ಅಮೆರಿಕವು ಇತ್ತೀಚೆಗೆ ವೆನೆಜುವೆಲಾ ವಿರುದ್ಧ ಮಿಲಿಟರಿ ದಾಳಿ ನಡೆಸಿ, ಅದರ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿತ್ತು. ಈಗ ಅಷ್ಟೇ ಅಲ್ಲ ಡೊನಾಲ್ಡ್​ ಟ್ರಂಪ್ ತಮ್ಮನ್ನು ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿರುವುದು ಅಚ್ಚರಿಯನ್ನುಂಟು ಮಾಡಿದೆ.

ಅವರು ತಮ್ಮ ಟ್ರುತ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಇದರ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಜನರು ನಿಜವಾಗಿಯೂ ನಿಮಗೆ ಬೇಕಾಗಿರುವುದು ಏನು ಎಂದು ಟ್ರಂಪ್​ರನ್ನು ಪ್ರಶ್ನೆ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ಅಮೆರಿಕದ ಅಧ್ಯಕ್ಷ ಟ್ರಂಪ್ ತಮ್ಮನ್ನು “ವೆನೆಜುವೆಲಾದ ಹಂಗಾಮಿ ಅಧ್ಯಕ್ಷರು” ಎಂದು ಬಣ್ಣಿಸಿಕೊಂಡಿದ್ದಾರೆ.

ದೇಶದ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರನ್ನು ವೆನೆಜುವೆಲಾದ ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.ಈ ಪೋಸ್ಟ್ ತ್ವರಿತವಾಗಿ ವೈರಲ್ ಆಗಿದ್ದು, ಜನರು ಟ್ರಂಪ್ ಅವರ ಉದ್ದೇಶಗಳನ್ನು ಪ್ರಶ್ನಿಸಿದ್ದಾರೆ.

ಮತ್ತಷ್ಟು ಓದಿ: ಮೋದಿ ಟ್ರಂಪ್​ಗೆ ಕರೆ ಮಾಡ್ಲಿಲ್ಲ, ಭಾರತ-ಅಮೆರಿಕದ ವ್ಯಾಪಾರ ಒಪ್ಪಂದ ಮುಂದುವರೀಲಿಲ್ಲ: ವಾಣಿಜ್ಯ ಕಾರ್ಯದರ್ಶಿ

ವೆನೆಜುವೆಲಾದ ತೈಲ ನಿಕ್ಷೇಪಗಳ ಕುರಿತು ಟ್ರಂಪ್ ನಿರಂತರವಾಗಿ ತೈಲ ಕಂಪನಿಗಳೊಂದಿಗೆ ಸಭೆ ನಡೆಸುತ್ತಿರುವ ಮತ್ತು ಇರಾನ್ ಮತ್ತು ಗ್ರೀನ್‌ಲ್ಯಾಂಡ್ ಕುರಿತು ನಿರಂತರವಾಗಿ ಬೆದರಿಕೆ ಹೇಳಿಕೆಗಳನ್ನು ನೀಡುತ್ತಿರುವ ಸಮಯದಲ್ಲಿ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

ವೆನೆಜುವೆಲಾದ ನಾಯಕ ನಿಕೋಲಸ್ ಮಡುರೊ ಅವರ ಬಂಧನದ ನಂತರ, ಸುರಕ್ಷಿತ, ನ್ಯಾಯಯುತ ಮತ್ತು ವಿವೇಚನಾಯುಕ್ತ ಅಧಿಕಾರ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳುವವರೆಗೆ ಅಮೆರಿಕವು ವೆನೆಜುವೆಲಾದ ಸರ್ಕಾರವನ್ನು ನಡೆಸುತ್ತದೆ ಎಂದು ಟ್ರಂಪ್ ಹೇಳಿಕೊಂಡರು.

ಭಾನುವಾರದಂದು ಟ್ರಂಪ್, ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ಅವರೊಂದಿಗಿನ ಮಾತುಕತೆ ಸಕಾರಾತ್ಮಕವಾಗಿದೆ ಎಂದು ಹೇಳಿದರು. ವೆನೆಜುವೆಲಾದ ಪರಿಸ್ಥಿತಿಯ ಕುರಿತು ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದೇಶದಲ್ಲಿನ ಬೆಳವಣಿಗೆಗಳು ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿವೆ ಮತ್ತು ವಾಷಿಂಗ್ಟನ್ ತನ್ನ ನಾಯಕತ್ವದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಇತ್ತೀಚೆಗೆ, ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲಿ ವಿಶ್ವದ ಪ್ರಮುಖ ತೈಲ ಮತ್ತು ಅನಿಲ ಕಂಪನಿಗಳ ಉನ್ನತ ಅಧಿಕಾರಿಗಳನ್ನು ಭೇಟಿಯಾದರು, ಅಲ್ಲಿ ಅವರು ವೆನೆಜುವೆಲಾದಲ್ಲಿ ಹೂಡಿಕೆಗಳು ಈಗ ವೆನೆಜುವೆಲಾ ಸರ್ಕಾರದೊಂದಿಗೆ ಅಲ್ಲ, ನೇರವಾಗಿ ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಇರುತ್ತವೆ ಎಂದು ಸ್ಪಷ್ಟಪಡಿಸಿದರು.

ಟ್ರಂಪ್ ಭದ್ರತಾ ಖಾತರಿಗಳನ್ನು ನೀಡಿದರು ಮತ್ತು ಗಮನಾರ್ಹ ಹೂಡಿಕೆಗಳಿಗಾಗಿ ತೈಲ ಉದ್ಯಮಕ್ಕೆ ಮುಕ್ತ ಆಹ್ವಾನವನ್ನು ನೀಡಿದರು. ಯುನೈಟೆಡ್ ಸ್ಟೇಟ್ಸ್ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಚೀನಾ ಅಥವಾ ರಷ್ಯಾ ವೆನೆಜುವೆಲಾದಲ್ಲಿ ಬಲವಾದ ಹಿಡಿತ ಸಾಧಿಸುತ್ತಿತ್ತು ಎಂದು ಅವರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:16 am, Mon, 12 January 26

Source link

Bengaluru Air Quality: ಬೆಂಗಳೂರಿಗಿಂತ ಕಳಪೆ ಏರ್ ಕ್ವಾಲಿಟಿ ಇದೆ ಉಡುಪಿಯಲ್ಲಿ! – Kannada News | Bangalore Air Pollution Crisis: Udupi’s Air quality is getting worse than Bengaluru

ಬೆಂಗಳೂರಿಗಿಂಗ ಕಳಪೆ ಏರ್ ಕ್ವಾಲಿಟಿ ಇದೆ ಉಡುಪಿಯಲ್ಲಿ!

ಬೆಂಗಳೂರು, ಜನವರಿ 12: ಕಳೆದ ಕೆಲ ದಿನಗಳಿಂದ ಹೋಲಿಸಿದರೆ ಇಂದು ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (Bengaluru Air Quality) ಸುಧಾರಿಸುತ್ತಿದೆ. ಅಷ್ಟೇ ಅಲ್ಲ, ಮೈಸೂರು, ವಿಜಯಪುರದಲ್ಲೂ ಏರ್ ಕ್ವಾಲಿಟಿ ಸುಧಾರಿಸಿದಂತೆ ಕಾಣುತ್ತಿದೆ. ಆದರೆ ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ಮೊದಲು ಎರಡಂಕಿಯಲ್ಲಿದ್ದರೂ ಈಗ ಮೂರಂಕಿ ತಲುಪಿದೆ. ಈ ನಗರಗಳಲ್ಲಿ ವಾಹನಗಳ ಹೊಗೆ, ಧೂಳು ಮತ್ತು ನಿರ್ಮಾಣ ಚಟುವಟಿಕೆಗಳಿಂದ ವಾಯುಮಾಲಿನ್ಯ ಹೆಚ್ಚಾಗಿರುವುದು ಗಮನಕ್ಕೆ ಬರುತ್ತಿದೆ.

ಉಡುಪಿಯಲ್ಲಿ ಕಳೆದ ತಿಂಗಳೆಲ್ಲಾ 50 ರಿಂದ 100ರ ಆಸುಪಾಸಿನಲ್ಲಿ ಗಾಳಿಯ ಗುಣಮಟ್ಟ ಏರುಪೇರಾಗುತ್ತಿತ್ತು. ಆದರೆ ಇಂದು 166ಕ್ಕೆ ತಲುಪಿದೆ. ಈ ಪರಿಸ್ಥಿತಿಯಲ್ಲಿ ಸುರಕ್ಷತೆ ಅತ್ಯಂತ ಮುಖ್ಯ. ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು ಉತ್ತಮ. ಸಾಧ್ಯವಾದರೆ ಬೆಳಿಗ್ಗೆ ಅಥವಾ ಸಂಜೆ ಪೀಕ್ ಟ್ರಾಫಿಕ್ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಮನೆಯೊಳಗೆ ಗಿಡಗಳನ್ನು ಬೆಳೆಸುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಸ್ವಚ್ಛತೆ ಕಾಪಾಡುವುದು ಮಾಲಿನ್ಯದ ಪರಿಣಾಮವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ.

ಹಂತ ಹಂತವಾಗಿ ಸುಧಾರಿಸುತ್ತಿದೆಯಾ ಏರ್ ಕ್ವಾಲಿಟಿ?

ಬೆಂಗಳೂರಿನ ಗಾಳಿಯ ಗುಣಮಟ್ಟ 138 ಇದ್ದು, ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಸ್ವಲ್ಪ ಸುಧಾರಣೆ ಕಂಡಿದೆ. ಕಳೆದ ತಿಂಗಳಿನಲ್ಲಿ ಒಮ್ಮೆ 200ರ ಗಡಿ ದಾಟಿದ್ದ ಏರ್ ಕ್ವಾಲಿಟಿ, ನಗರವಾಸಿಗಳಲ್ಲಿ ಆತಂಕ ಮೂಡಿಸಿತ್ತು. ಸಿಲ್ಕ್ ಬೋರ್ಡ್​, ವೈಟ್​ಫೀಲ್ಡ್ ಸೇರಿದಂತೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿತ್ತು. ಇದೀಗ ವಾತಾವರಣ ಸಲ್ಪ ಸುಧಾರಣೆ ಕಂಡಿದ್ದರೂ, ಏರ್ ಕ್ವಾಲಿಟಿ ಅನಾರೋಗ್ಯಕಾರಿ ಹಂತದಲ್ಲೇ ಇದೆ. ಇದು ಹೀಗೆ ಮುಂದುವರೆದರೆ ಬೆಂಗಳೂರಿನ ಪರಿಸ್ಥಿತಿ ದೆಹಲಿಯಂತಾಗಬಹುದೆಂದು ತಜ್ಞರು ಎಚ್ಚರಿಸಿದ್ದಾರೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –138
  • ಮಂಗಳೂರು-161
  • ಮೈಸೂರು – 59
  • ಬೆಳಗಾವಿ – 140
  • ಕಲಬುರ್ಗಿ-79
  • ಶಿವಮೊಗ್ಗ – 154
  • ಬಳ್ಳಾರಿ – 144
  • ಹುಬ್ಬಳ್ಳಿ- 87
  • ಉಡುಪಿ –166
  • ವಿಜಯಪುರ –62

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 

ಗಿಲ್ಲಿ ನಟ ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಅವರು ಫಿನಾಲೆ ವೀಕ್ ತಲುಪಿದ್ದಾರೆ. ಕಳೆದ ವೀಕೆಂಡ್​​ನಲ್ಲಿ ಗಿಲ್ಲಿ ನಟ ಎವಿಕ್ಷನ್ ಭಾಷಣ ನೀಡಿದ್ದಾರೆ. ‘ಎವಿಕ್ಷನ್ ಆದ್ರೆ ಹೇಗೆ ಮಾತಾಡ್ತೀರಾ’ ಎಂದು ಸುದೀಪ್ ಕೇಳಿದರು. ಗಿಲ್ಲಿ ಅದ್ಭುತವಾಗಿ ಮಾತನಾಡಿದರು. ‘ಸೋಲಬಹುದು, ಸತ್ತಿಲ್ಲ’ ಎಂಬ ಸುದೀಪ್ ಮಾತನ್ನು ನೆನಪಿಸಿಕೊಂಡರು. ಆ ಸಂದರ್ಭದ ವಿಡಿಯೋ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..! – Kannada News | WPL 2026: Sneh Rana bowls most expensive over in WPL history

ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್ ಎಸೆದ ಹೀನಾಯ ದಾಖಲೆಯೊಂದು ಸ್ನೇಹ್ ರಾಣಾ ಹೆಸರಿಗೆ ಸೇರ್ಪಡೆಯಾಗಿದೆ. ಇದರೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್​ನ ಒಂದು ಓವರ್​ನಲ್ಲಿ ಅತ್ಯಧಿಕ ರನ್​ಗಳಿಸಿದ ಭರ್ಜರಿ ದಾಖಲೆಯೊಂದು ಸೋಫಿ ಡಿವೈನ್ ಹೆಸರಿಗೆ ಸೇರ್ಪಡೆಯಾಗಿದೆ.

ಹೌದು, ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ 4ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಸ್ನೇಹ್ ರಾಣಾ ವಿರುದ್ಧ ಸೋಫಿ ಡಿವೈನ್ ಬರೋಬ್ಬರಿ 32 ರನ್​ ಚಚ್ಚಿದ್ದಾರೆ. ಈ ಪಂದ್ಯದ 6ನೇ ಓವರ್​ನಲ್ಲಿ ದಾಳಿಗಿಳಿದ ರಾಣಾ ಎಸೆತಗಳಿಗೆ ಸೋಫಿ 4,4,6,6,6,6 ಉತ್ತರ ನೀಡಿದ್ದಾರೆ.

ಈ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಒಂದೇ ಓವರ್​ನಲ್ಲಿ ಅತೀ ಹೆಚ್ಚು ರನ್​ಗಳಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಸೋಫಿ ಡಿವೈನ್ ತಮ್ಮದಾಗಿಸಿಕೊಂಡಿದ್ದಾರೆ.

ಅತ್ತ ಸ್ನೇಹ್ ರಾಣಾ ವುಮೆನ್ಸ್ ಪ್ರೀಮಿಯರ್​ ಲೀಗ್​ನಲ್ಲಿ ಒಂದೇ ಓವರ್​ನಲ್ಲಿ ಅತ್ಯಧಿಕ ರನ್ ಬಿಟ್ಟು ಕೊಟ್ಟ ಹೀನಾಯ ದಾಖಲೆಗೆ ಕೊರೊಳೊಡ್ಡಿದ್ದಾರೆ. ಇದಕ್ಕೂ ಮುನ್ನ ಈ ಬೇಡದ ದಾಖಲೆ ಯುಪಿ ವಾರಿಯರ್ಸ್ ತಂಡದ ದೀಪ್ತಿ ಶರ್ಮಾ ಹೆಸರಿನಲ್ಲಿತ್ತು.

2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ದೀಪ್ತಿ ಶರ್ಮಾ 28 ರನ್ ನೀಡುವ ಮೂಲಕ ಈ ಹೀನಾಯ ದಾಖಲೆ ಬರೆದಿದ್ದರು. ಇದೀಗ 32 ರನ್​ ಚಚ್ಚಿಸಿಕೊಳ್ಳುವ ಮೂಲಕ ಸ್ನೇಹ್ ರಾಣಾ ಈ ಬೇಡದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡದಿ ಗುಜರಾತ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 209 ರನ್​ ಕಲೆಹಾಕಿದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 205 ರನ್​ಗಳಿಸಿ 4 ರನ್​ಗಳಿಂದ ಸೋಲೊಪ್ಪಿಕೊಂಡಿತು.

 

 

Source link

ಬೆಂಗಳೂರಿನಲ್ಲಿ ಮಂಗಳೂರು ಮೂಲದ ಟೆಕ್ಕಿ ಕೊಲೆ ಕೇಸ್​ಗೆ ಸ್ಫೋಟಕ ಟ್ವಿಸ್ಟ್: ಹತ್ಯೆಗೂ ಮುನ್ನ ರೇಪ್ ಮಾಡಿರುವ ಶಂಕೆ – Kannada News | Another Twist in Bengaluru Techie Murder Case: Police Suspect Assault Before Killing

ಬೆಂಗಳೂರು, ಜನವರಿ 12: ಬೆಂಗಳೂರಿನಲ್ಲಿ (Bangalore) ಮಂಗಳೂರು ಮೂಲದ ಟೆಕ್ಕಿ ಶರ್ಮಿಳಾ ಹತ್ಯೆ (34) (Techie Murder Case) ಪ್ರಕರಣದ ತನಿಖೆ ವೇಳೆ ಸ್ಫೋಟಕ ಮಾಹಿತಿಗಳು ಬಯಲಾಗಿವೆ. ಇದು ಕೇವಲ ಕೊಲೆ ಪ್ರಕರಣವಲ್ಲ, ಹತ್ಯೆಗೂ ಮುನ್ನ ಸಂತ್ರಸ್ತೆ ಮೇಲೆ ಆರೋಪಿ ಅತ್ಯಾಚಾರ ಎಸಗಿರುವ ಸಾಧ್ಯತೆ ಇದೆ ಎಂಬ ಗಂಭೀರ ಅನುಮಾನ ಪೊಲೀಸರಿಗೆ ವ್ಯಕ್ತವಾಗಿದೆ. ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದಲ್ಲಿ ಆರೋಪಿಯಾಗಿರುವ ಕೇರಳ ಮೂಲದ ಕರ್ನಲ್ ಕುರೈ (18) ವಿರುದ್ಧ ಈಗಾಗಲೇ ಕೊಲೆ ಪ್ರಕರಣದ ಜೊತೆಗೆ ಲೈಂಗಿಕ ದೌರ್ಜನ್ಯ ಪ್ರಕರಣವನ್ನೂ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಬಿಎನ್​ಎಸ್ ಸೆಕ್ಷನ್ 103, 64(2), 67 ಮತ್ತು 238ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರ ತನಿಖೆ ವೇಳೆ ತಿಳಿದುಬಂದ ಮಾಹಿತಿ ಪ್ರಕಾರ, ಜನವರಿ 3ರ ರಾತ್ರಿ ಸುಮಾರು 9 ಗಂಟೆ ವೇಳೆಗೆ ಕರ್ನಲ್ ಕುರೈ ಅಪಾರ್ಟ್‌ಮೆಂಟ್‌ನ ಸ್ಲೈಡಿಂಗ್ ವಿಂಡೋ ಮೂಲಕ ಶರ್ಮಿಳಾ ಮನೆಯೊಳಗೆ ನುಗ್ಗಿದ್ದಾನೆ. ಆ ವೇಳೆ ಮನೆಯಲ್ಲಿ ಶರ್ಮಿಳಾ ಒಬ್ಬರೇ ಇದ್ದರು. ಒಳನುಗ್ಗಿದ ಆರೋಪಿ, ಶರ್ಮಿಳಾಳ ಮೇಲೆ ದೌರ್ಜನ್ಯಕ್ಕೆ ಯತ್ನಿಸಿದ್ದು, ಇದಕ್ಕೆ ಆಕೆ ತೀವ್ರವಾಗಿ ಪ್ರತಿರೋಧ ವ್ಯಕ್ತಪಡಿಸಿದ್ದಾಳೆ. ಪ್ರತಿರೋಧದ ವೇಳೆ ಆರೋಪಿ ಬಲವಂತವಾಗಿ ಆಕೆಯ ಮೇಲೆ ಎರಗಿದ್ದು, ಶರ್ಮಿಳಾ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿ ಬಿದ್ದ ಶರ್ಮಿಳಾಳನ್ನು ಬಳಿಕ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಶರ್ಮಿಳಾ ಮೊಬೈಲ್ ಕೊಂಡುಹೋಗಿ ಸಿಕ್ಕಿಬಿದ್ದ ಆರೋಪಿ

ಹತ್ಯೆ ಮಾಡಿದ ಬಳಿಕ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ರಕ್ತದಲ್ಲಿ ನೆನೆದಿದ್ದ ಬಟ್ಟೆಗಳನ್ನು ಹಾಸಿಗೆಯ ಮೇಲೆ ಹಾಕಿ, ಕೋಣೆಗೆ ಬೆಂಕಿ ಹಚ್ಚಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಾರಿಯಾಗುವ ವೇಳೆ ಶರ್ಮಿಳಾಳ ಮೊಬೈಲ್ ಫೋನ್‌ನ್ನು ಕೂಡ ತೆಗೆದುಕೊಂಡು ಹೋಗಿದ್ದಾನೆ. ಅದೇ ಮೊಬೈಲ್‌ ಆಧಾರವಾಗಿಯೇ ಆರೋಪಿ ಕರ್ನಲ್ ಕುರೈ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ರೇಪ್ ಬಗ್ಗೆ ಕೇಳಿದಾಗ ಆರೋಪಿ ಹೇಳೋದೇನು?

ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ರಾಮಮೂರ್ತಿನಗರ ಪೊಲೀಸರು, ಲೈಂಗಿಕ ದೌರ್ಜನ್ಯ ಕುರಿತು ಪ್ರಶ್ನಿಸಿದಾಗ ‘‘ಗೊತ್ತಿಲ್ಲ’’ ಎಂದು ಆತ ನುಣುಚಿಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಸತ್ಯಾಂಶ ತಿಳಿಯಲು ಪೊಲೀಸರು ಎಫ್‌ಎಸ್‌ಎಲ್ ಪರೀಕ್ಷೆಗೆ ಮಾದರಿಗಳನ್ನು ಕಳುಹಿಸಿದ್ದಾರೆ.

ಆರಂಭದಲ್ಲಿ ಈ ಘಟನೆ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿ ಅವಘಡ ಎಂದು ಹೇಳಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯ ಬಳಿಕ ಇದು ಪೂರ್ವಯೋಜಿತ ಹತ್ಯೆ ಎಂಬುದು ಸ್ಪಷ್ಟವಾಗಿತ್ತು. ಟೆಕ್ಕಿ ಶರ್ಮಿಳಾಳನ್ನು ವನ್ ಸೈಡೆಡ್ ಲವ್ ಮಾಡಿದ್ದ ಆರೋಪಿ ಕೊಲೆ ಮಾಡಿದ್ದಾನೆ. ನಂತರ ಮನೆಗೆ ಬೆಂಕಿ ಹಚ್ಚಿ ತಪ್ಪಿಸಿಕೊಳ್ಳಲು ಯತ್ನಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್​: ತನಿಖೆಯಲ್ಲಿ ಕೊಲೆ ರಹಸ್ಯ ಬಯಲು!

ಸದ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬೀಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್ ಬಾಸ್​ಗೆ ಮರಳಿದ ಮಲ್ಲಮ್ಮ; ಅಟ್ಯಾಟ್​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್ – Kannada News | Mallamma Back to Bigg Boss House Dhruvanth Feels Detached to Her

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಮನೆಗೆ ಮಲ್ಲಮ್ಮ ಅವರು ಮರಳಿದ್ದಾರೆ. ಈ ಮೊದಲು ಧ್ರುವಂತ್ ಹಾಗೂ ಮಲ್ಲಮ್ಮ ಕ್ಲೋಸ್ ಆಗಿದ್ದರು. ಈ ಕ್ಲೋಸ್​​ನೆಸ್ ಈಗ ಉಳಿದಿಲ್ಲ ಎಂದು ಧ್ರುವಂತ್​​ಗೆ ಅನಿಸಿದೆ. ಈ ವಿಷಯವನ್ನು ಅವರು ಅಶ್ವಿನಿ ಗೌಡ ಬಳಿ ಹೇಳಿಕೊಂಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯಾರಾದರೂ ನಮಿಸಿದರೆ ರಾಜ್​​ಕುಮಾರ್ ಏನು ಹೇಳುತ್ತಿದ್ದರು? ರಜನಿ ಕೂಡ ಅಚ್ಚರಿಪಟ್ಟರು – Kannada News | Dr. Rajkumar’s Humility: Upendra Reveals Legend’s Timeless Wisdom

ರಾಜ್​​ಕುಮಾರ್ ಅವರು ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಹಲವು ವರ್ಷಗಳ ಕಾಲ ಆ್ಯಕ್ಟೀವ್ ಆಗಿದ್ದರು. ಅವರು ಚಿತ್ರರಂಗದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಚಿತ್ರರಂಗದಲ್ಲಿ ಮೇರು ನಟನಾಗಿ ಮೆರೆದರು. ಅವರಿಗೆ ಸರಿಸಾಟಿಯಾಗಿ ಮತ್ತೋರ್ವ ಹೀರೋ ನಿಲ್ಲೋಕೆ ಸಾಧ್ಯವಿಲ್ಲ. ರಾಜ್​​ಕುಮಾರ್ ಅವರು ಇಷ್ಟು ದೊಡ್ಡ ಹೀರೋ ಆದರು ಎಂದಿಗೂ ಅಹಂನಿಂದ ಮೆರೆದವರು ಅಲ್ಲ. ಇದಕ್ಕೆ ಉಪೇಂದ್ರ ಅವರು ಕೊಟ್ಟ ಒಳ್ಳೆಯ ಉದಾಹರಣೆಯನ್ನು ಇಲ್ಲಿ ನೋಡೋಣ.

ಉಪೇಂದ್ರ ನಟನೆಯ ‘45’ ಸಿನಿಮಾ ಕಳೆದ ವರ್ಷಾಂತ್ಯಕ್ಕೆ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಉಪೇಂದ್ರ ಅವರ ಜೊತೆ ಶಿವಣ್ಣ, ರಾಜ್ ಬಿ ಶೆಟ್ಟಿ ಕೂಡ ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರವನ್ನು ಇಡೀ ತಂಡ ಮಾಡಿದೆ. ಅರ್ಜುನ್ ಜನ್ಯ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸಂಗೀತ ಸಂಯೋಜನೆ ಕೂಡ ಅವರದ್ದೇ. ಇಡೀ ತಂಡ ಡಿಕೆಡಿ ವೇದಿಕೆ ಏರಿತ್ತು. ಈ ಸಂದರ್ಭದಲ್ಲಿ ಉಪೇಂದ್ರ ಅವರು ಅಪರೂಪದ ಮಾಹಿತಿ ಹಂಚಿಕೊಂಡಿದ್ದರು.

‘ಶೂಟಿಂಗ್ ವೇಳೆ ರಾಜ್​ಕುಮಾರ್ ಅವರಿಗೆ ರಜನಿ ಮೈಸೂರಲ್ಲಿ ಸಿಕ್ತಿದ್ರಂತೆ. ರಾಜ್​ಕುಮಾರ್​ಗೆ ಎಲ್ಲರೂ ನಮಸ್ಕಾರ ಮಾಡ್ತಿದ್ರಂತೆ. ಇದನ್ನು ನೋಡಿ ರಜನಿಗೆ ಅಚ್ಚರಿ ಆಗಿತ್ತು. ನಿಮಗೆ ಎಲ್ಲರೂ ನಮಸ್ಕಾರ ಮಾಡುತ್ತಾರಲ್ಲ, ಅದು ಹೇಗೆ ಅನಿಸುತ್ತದೆ ಎಂದು ಕೇಳಿದಾಗ, ಅವರು ನಮಸ್ಕಾರ ಮಾಡುತ್ತಿರುವುದು ನನಗಲ್ಲ, ನನ್ನ ಒಳಗೆ ಇರುವ ಕಲಾ ದೇವಿಗೆ ಎಂದು ಹೇಳುತ್ತಿದ್ದರಂತೆ. ಇದು ಅವರ ದೊಡ್ಡ ಗುಣ’ ಎಂದರು ಉಪೇಂದ್ರ.

ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್​​ಕುಮಾರ್ ಮೆಚ್ಚಿದ ‘ಪ್ರಣಯ ಪಯಣ’ ಗೀತೆ; ಡಿ.27ಕ್ಕೆ ಬಿಡುಗಡೆ

ಯಾರಾದರೂ ನಮಸ್ಕಾರ ಮಾಡಿದರೆ ಹೆಮ್ಮೆ ಆಗುತ್ತದೆ. ನನಗೆ ಅವರು ನಮಸ್ಕಾರ ಮಾಡುತ್ತಾರೆ ಎಂದು ಮೆರೆಯುತ್ತಾರೆ. ಆದರೆ, ರಾಜ್​​ಕುಮಾರ್ ಮಾತ್ರ ಆ ರೀತಿ ಆಗಿರಲೇ ಇಲ್ಲ. ಈ ಘಟನೆಯೇ ಅದಕ್ಕೆ ಸಾಕ್ಷಿ
‘ನಾನು ಸಿನಿಮಾ ತಿಳಿದುಕೊಂಡು ಮಾಡಿದ್ರೆ ಏನು ಮಾಡ್ತಿದ್ನೋ ಗೊತ್ತಿಲ್ಲ. ಆದರೆ, ಕಲಿಯದೆ ಮಾಡಿಕೊಂಡು ಹೋದೆ. ಶಕ್ತಿ ಎಲ್ಲವನ್ನೂ ಮಾಡಿಸುತ್ತದೆ ಎಂದು ರಾಜ್​​ಕುಮಾರ್ ಹೇಳುತ್ತಿದ್ದರು. ಕಾರಂತರಿಗೆ ಪ್ರಕೃತಿಯಲ್ಲಿ, ಕುವೆಂಪುಗೆ ಅಕ್ಷರಗಳಲ್ಲಿ ಹಾಗೂ ರಾಜ್​​ಕುಮಾರ್​ಗೆ ಅಭಿಮಾನಿಗಳಲ್ಲಿ ದೇವರು ಕಾಣಿಸಿದರು. ನನಗೆ ಈಗ ಎಲ್ಲ ಕಡೆಗಳಲ್ಲಿ ದೇವರು ಕಾಣಿಸುತ್ತಿದ್ದಾರೆ’ ಎಂದರು ಉಪ್ಪಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:52 am, Mon, 12 January 26

Source link

Virat Kohli: ಎಷ್ಟಿದೆ ಅಂತ ಗೊತ್ತಿಲ್ಲ, ಎಲ್ಲವನ್ನೂ ಅಮ್ಮನಿಗೆ ಕಳಿಸ್ತೀನಿ..! – Kannada News | I send my awards to my mother, she likes to keeping the awards: Virat Kohli

2026ರ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ ಭಾರತ ತಂಡ ಶುಭಾರಂಭ ಮಾಡಿದೆ. ಹೀಗೆ ಶುಭಾರಂಭ ಮಾಡಲು ಕಾರಣಕರ್ತರು ವಿರಾಟ್ ಕೊಹ್ಲಿ. ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶುಭ್​​ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 50 ಓವರ್​ಗಳಲ್ಲಿ ಬರೋಬ್ಬರಿ 300 ರನ್​ಗಳಿಸುವಲ್ಲಿ ಯಶಸ್ವಿಯಾದರು.

ಈ ಕಠಿಣ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಇನಿಂಗ್ಸ್ ಕಟ್ಟಿದ ಕೊಹ್ಲಿ 91 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 93 ರನ್ ಬಾರಿಸಿ ಔಟಾದರು. ಈ ಅರ್ಧಶತಕದ ನೆರವಿನೊಂದಿಗೆ ಭಾರತ ತಂಡವು 49 ಓವರ್​ಗಳಲ್ಲಿ 306 ರನ್​ಗಳಿಸಿ 4 ವಿಕೆಟ್​ಗಳ ಜಯ ಸಾಧಿಸಿತು.

ನಿರೀಕ್ಷೆಯಂತೆ ಈ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ವಿರಾಟ್ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು. ಹೀಗೆ ಒಲಿದ ಪಂದ್ಯ ಶ್ರೇಷ್ಠ ಪ್ರಶಸ್ತಿ ಎಷ್ಟನೇದು ಎಂಬುದು ಖುದ್ದು ಕೊಹ್ಲಿಗೆ ಗೊತ್ತಿರಲಿಲ್ಲ.

ಪ್ಲೇಯರ್ ಆಫ್ ದಿ ಮ್ಯಾಚ್ ಸ್ವೀಕರಿಸಿದ ಬಳಿಕ ಕೊಹ್ಲಿಗೆ ಇದು ನಿಮ್ಮ ಎಷ್ಟನೆಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಎಂಬ ಪ್ರಶ್ನೆಯನ್ನು ಮುಂದಿಡಲಾಗಿತ್ತು. ಈ ಪ್ರಶ್ನೆಗೆ ನಗುತ್ತಾ ಉತ್ತರರಿಸಿದ ವಿರಾಟ್, ನಿಜವಾಗಿಯೂ ನನಗೆ ಗೊತ್ತಿಲ್ಲ.

ನನಗೆ ಸಿಕ್ಕಾ ಟ್ರೋಫಿಗಳನ್ನು ನಾನು ಗುರುಗಾಂವ್​ನಲ್ಲಿರುವ ನನ್ನ ತಾಯಿಗೆ ಕಳಿಸುತ್ತೇನೆ. ಪ್ರಶಸ್ತಿ ನೋಡಿ ಅವರು ತುಂಬಾ ಹೆಮ್ಮೆಪಡುತ್ತಾರೆ. ಅಲ್ಲದೆ ಅವರು ಈ ಪ್ರಶಸ್ತಿಗಳನ್ನೆಲ್ಲಾ ಇಟ್ಟುಕೊಳ್ಳುತ್ತಾರೆ ಎಂದರು.

ಈ ಮೂಲಕ ತನಗೆ ಸಿಕ್ಕ ಟ್ರೋಫಿಗಳನ್ನು ಅಮ್ಮ ಒಂದು ಕಡೆಗೆ ಜೋಪಾನವಾಗಿ ಜೋಡಿಸುತ್ತಿರುವ ವಿಚಾರವನ್ನು ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ಅಂದಹಾಗೆ ವಿರಾಟ್ ಕೊಹ್ಲಿಗೆ ಈವರೆಗೆ ಎಷ್ಟು ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದೆ ಎಂದು ನೋಡಿದರೆ…

  • ಏಕದಿನ ಕ್ರಿಕೆಟ್​ನಲ್ಲಿ ಅವರು 45 ಬಾರಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
  • ಟೆಸ್ಟ್ ಕ್ರಿಕೆಟ್​ನಲ್ಲಿ ಕೊಹ್ಲಿ ಪಡೆದಿರುವ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಂಖ್ಯೆ 10.
  • ಟಿ20 ಕ್ರಿಕೆಟ್​ನಲ್ಲಿ 16 ಬಾರಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದಿದ್ದಾರೆ.

ಇದನ್ನೂ ಓದಿ: ಶತಕ ತಪ್ಪಿಸಿ ಭರ್ಜರಿ ದಾಖಲೆ ಬರೆದ ವಿರಾಟ್ ಕೊಹ್ಲಿ

ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ವಿಶ್ವದ 2ನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಒಟ್ಟು 76 ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿರುವ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಇದೀಗ 71 ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿರುವ ವಿರಾಟ್ ಕೊಹ್ಲಿ ಮುಂಬರುವ ದಿನಗಳಲ್ಲಿ ಸಚಿನ್ ಅವರ ಈ ದಾಖಲೆಯನ್ನು ಅಳಿಸಿ ಹಾಕಿದರೂ ಅಚ್ಚರಿಪಡಬೇಕಿಲ್ಲ.

Source link

Exit mobile version