‘ಹಲವು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ’; ವಿಜಯ್ ದೇವರಕೊಂಡ ಬೇಸರ – Kannada News | Vijay Deverakonda Exposes Fake Movie Reviews: Film Industry’s Biggest Threat

ಸಿನಿಮಾ ರಂಗಕ್ಕೆ ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ನಕಲಿ ವಿಮರ್ಶೆಗಳು. ಕಥೆ, ನಿರ್ದೇಶನ, ನಟನೆ ಮುಂತಾದ ಪ್ರತಿಯೊಂದು ಅಂಶವು ಸರಿಯಾಗಿದ್ದರೂ, ಕೆಲವರು ನಕಲಿ ವಿಮರ್ಶೆಗಳನ್ನು ನೀಡುತ್ತಾರೆ. ಇದು ಚಿತ್ರದ ಯಶಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.ಈ ಬಗ್ಗೆ ವಿಜಯ್ ದೇವರಕೊಂಡ ಮಾತನಾಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ವಿಮರ್ಶೆಗಳನ್ನು ಹಂಚಿಕೊಳ್ಳುವ ಮೂಲಕ ಚಿತ್ರಕ್ಕೆ ಹಿನ್ನಡೆ ಮಾಡಲಾಗುತ್ತದೆ. ಹಲವು ಸಿನಿಮಾಗಳು ಈ ರೀತಿ ಮಾಡದಂತೆ ಆದೇಶ ತಂದಿದೆ. ತೆಲುಗು ಸ್ಟಾರ್ ನಾಯಕ ವಿಜಯ್ ದೇವರಕೊಂಡ ಸಾಮಾಜಿಕ ಮಾಧ್ಯಮದಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ವಿಷಯವು ಅವರಿಗೆ ಸಂತೋಷವನ್ನು ನೀಡುತ್ತದೆಯಾದರೂ, ಇದು ಅವರಿಗೆ ಸ್ವಲ್ಪ ನೋವನ್ನು ನೀಡುತ್ತದೆ ಎಂದು ಅವರು ಹೇಳಿದರು. ಈ ವಿಷಯದ ಬಗ್ಗೆ ಅವರು ದೀರ್ಘವಾಗಿ ಬರೆದಿದ್ದಾರೆ.

‘ಬುಕ್ ಮೈ ಶೋನಲ್ಲಿ ಇದನ್ನು ನೋಡುವುದು ಒಂದು ರೀತಿಯಲ್ಲಿ ಸಂತೋಷ ಮತ್ತು ಒಂದು ರೀತಿಯಲ್ಲಿ ದುಃಖಕರ ವಿಷಯ. ಈ ಕ್ರಿಯೆಯಿಂದ, ಅನೇಕ ಜನರು ತಮ್ಮ ಕಷ್ಟಗಳು, ಕನಸುಗಳು ಮತ್ತು ಹಣವನ್ನು ಉಳಿಸಲು ಒಂದು ಮಾರ್ಗವನ್ನು ಕಂಡುಕೊಂಡಿದ್ದಾರೆ. ದುಃಖಕರವೆಂದರೆ ನಮ್ಮದೇ ಜನರೇ ಇಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ’ ಎಂದಿದ್ದಾರೆ ಅವರು.

‘ಬದುಕಿ ಮತ್ತು ಬದುಕಲು ಬಿಡಿ’ ಎಂಬ ಘೋಷಣೆ ಏನಾಯಿತು? ಎಲ್ಲರೂ ಒಟ್ಟಿಗೆ ಬೆಳೆಯುವ ಕಲ್ಪನೆ ಎಲ್ಲಿಗೆ ಹೋಯಿತು? ಡಿಯರ್ ಕಾಮ್ರೇಡ್ ಚಿತ್ರದ ಸಮಯದಲ್ಲಿ ಸಂಘಟಿತ ರಾಜಕೀಯದ ಇಂತಹ ದಾಳಿಗಳನ್ನು ನೋಡಿ ನಾನು ಆಘಾತಕ್ಕೊಳಗಾಗಿದ್ದೆ. ನಾನು ಮಾತನಾಡುವಾಗಲೆಲ್ಲಾ ಅದು ಕಿವುಡ ವ್ಯಕ್ತಿಯ ಮುಂದೆ ಶಂಖವನ್ನು ಊದಿದಂತಿತ್ತು. ಒಳ್ಳೆಯ ಚಿತ್ರವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಅವರು ನನಗೆ ಹೇಳಿದರು. ನನ್ನೊಂದಿಗೆ ಕೆಲಸ ಮಾಡಿದ ನಿರ್ದೇಶಕರು ಮತ್ತು ನಿರ್ಮಾಪಕರು ಈ ಸಮಸ್ಯೆಯನ್ನು ಅರ್ಥಮಾಡಿಕೊಂಡರು’ ಎಂದಿದ್ದಾರೆ ಅವರು.

ಇದನ್ನೂ ಓದಿ: ವಿದೇಶ ಪ್ರವಾಸ ಮುಗಿಸಿ ಮರಳಿದ ವಿಜಯ್ ದೇವರಕೊಂಡ-ರಶ್ಮಿಕಾ

‘ಅವರು ಯಾಕೆ ಹೀಗೆ ಮಾಡುತ್ತಿದ್ದಾರೆಂದು ಯೋಚಿಸುತ್ತಾ ನಾನು ಹಲವು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ ನನ್ನ ಕನಸುಗಳನ್ನು ಉಳಿಸಿಕೊಳ್ಳಲು ನಾನು ಅವರೊಂದಿಗೆ ಹೇಗೆ ಹೋರಾಡಬೇಕು ಎಂದು ನಾನು ಯೋಚಿಸಿದೆ. ಇಷ್ಟು ವರ್ಷಗಳ ನಂತರ ಈ ವಿಷಯ ಹೊರಬಂದಿದ್ದಕ್ಕೆ ನನಗೆ ಸಂತೋಷವಾಗಿದೆ. ಚಿರಂಜೀವಿಯಂತಹ ಟಾಪ್ ಹೀರೋ ಚಿತ್ರಕ್ಕೂ ಇಂತಹ ಬೆದರಿಕೆ ಇದೆ ಎಂದು ನ್ಯಾಯಾಲಯ ಗುರುತಿಸಿದೆ ಎಂದು ನನಗೆ ಸಂತೋಷವಾಗಿದೆ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಟಿಯರಾಯ್ತು ಈಗ ರಾಜಕಾರಣಿಗಳ ಸರದಿ; ಮೂಡಿಗೆರೆ ಶಾಸಕಿ ನಯನಾ ಮೋಟಮ್ಮಗೂ ಅಶ್ಲೀಲ ಕಾಮೆಂಟ್ ಕಾಟ! ಆರೋಪಿ ಅರೆಸ್ಟ್ – Kannada News | Nayana Motamma Obscene Comments: Instagram Abuser Arrested in MLA Harassment

ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ವಿರುದ್ಧ ಅಶ್ಲೀಲ ಕಾಮೆಂಟ್: ಆರೋಪಿ ಬಂಧನ

ಚಿಕ್ಕಮಗಳೂರು, ಜನವರಿ 12: ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರ ವಿರುದ್ಧ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಹಾಗೂ ಅವಮಾನಕಾರಿ ಕಾಮೆಂಟ್‌ಗಳನ್ನು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ರಾಮನಗರ ಮೂಲದ ಯಕ್ಷಿತ್ ರಾಜ್ ಎಂಬ ಯುವಕನನ್ನು ಮೂಡಿಗೆರೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಅಕ್ಟೋಬರ್​ನಲ್ಲೇ ದಾಖಲಾಗಿತ್ತು FIR

ಶಾಸಕಿ ನಯನಾ ಮೋಟಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಎರಡು ಅಧಿಕೃತ ಖಾತೆ ಹೊಂದಿದ್ದಾರೆ. ವೈಯಕ್ತಿಕ ವಿಚಾರ ಹಂಚಿಕೊಳ್ಳಲು ಒಂದು ಖಾತೆಯಾದರೆ ರಾಜಕೀಯ ವಿಚಾರ ಹಂಚಿಕೊಳ್ಳಲು ಮತ್ತೊಂದು ಖಾತೆ. ಖಾಸಗಿ ಪ್ರವಾಸ, ವೈಯಕ್ತಿಕ ವಿಚಾರ ಹಂಚಿಕೊಳ್ಳುತ್ತಿದ್ದ ವೈಯಕ್ತಿಕ ಖಾತೆಯಲ್ಲಿ ಬಟ್ಟೆ ಬಗ್ಗೆ ಕಿಡಿಗೇಡಿಗಳು ಅಶ್ಲೀಲ ಕಾಮೆಂಟ್​​ ಮಾಡಿದ್ದಾರೆ. ಈ ಕುರಿತು ಮೋಟಮ್ಮ ಅವರ ಪಿಎ ಸಂಸುದ್ದೀನ್ ಅವರು ಕಳೆದ ಅಕ್ಟೋಬರ್ ತಿಂಗಳಲ್ಲೇ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಆರೋಪಿಯು ನಿರಂತರವಾಗಿ ಶಾಸಕಿ ಅವರ ಬಟ್ಟೆ ವಿಚಾರವಾಗಿ ಅಶ್ಲೀಲವಾಗಿ ಕಾಮೆಂಟ್ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸುವ ಪ್ರಯತ್ನ ನಡೆಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಶಾಸಕಿ ಆಕ್ರೋಶ

ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ತನಿಖೆಯ ಬಳಿಕ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯಕ್ಷಿತ್ ರಾಜ್‌ನನ್ನು ಬಂಧಿಸಲಾಗಿದೆ. ಆರೋಪಿಯು ಶಾಸಕಿ ವಿರುದ್ಧ ಮರುಮರು ಅಶ್ಲೀಲ ಕಾಮೆಂಟ್‌ಗಳನ್ನು ಮಾಡಿದ್ದು, ಅವರ ಗೌರವಕ್ಕೆ ಧಕ್ಕೆ ತರುವ ಉದ್ದೇಶ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಶಾಸಕಿ ನಯನಾ ಮೋಟಮ್ಮ ಅವರು ಕೂಡ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ನನ್ನನ್ನು ವೇಶ್ಯೆ ಎಂದು ಕರೆಯುವ ಮಟ್ಟಕ್ಕೂ ಕೆಲವರು ಇಳಿಯುತ್ತಾರೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಇದನ್ನೂ ಓದಿ ರಮ್ಯಾ, ವಿಜಯಲಕ್ಷ್ಮಿ ಬೆನ್ನಲ್ಲೇ ಕಾಂಗ್ರೆಸ್ ಶಾಸಕಿಗೂ ಅಶ್ಲೀಲ ಕಾಮೆಂಟ್ ಕಾಟ

ಈ ಬಗ್ಗೆ ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಮಹಿಳಾ ವಿರೋಧಿ ಮನೋಭಾವವನ್ನು ನಾನು ವಿರೋಧಿಸುತ್ತೇನೆ. ಸ್ಲೀವ್ ಲೆಸ್ ಬಟ್ಟೆ ಹಾಕಿದರೆ ಕೆಲಸ ಮಾಡದ ರಾಜಕಾರಣಿ ಎನ್ನುತ್ತಾರೆ. ವೇಶ್ಯೆ ಎನ್ನುವ ಮಟ್ಟಕ್ಕೂ ಇಳಿಯುತ್ತಾರೆ. ಡಿಪಿ ಇಲ್ಲದ ಪ್ರೊಫೈಲ್ ಇಟ್ಟುಕೊಂಡು ಕಾಮೆಂಟ್ ಮಾಡುತ್ತಾರೆ. ಬಹುಶಃ ಒಂದು ದಿನ ನಾನವರನ್ನು ಎದುರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:48 am, Mon, 12 January 26

Source link

Optical Illusion: ಈ ಚಿತ್ರದಲ್ಲಿ ಅಡಗಿರುವ ಮೀನನ್ನು7 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ – Kannada News | Optical Illusion: Only one in ten people can find the fish in this bedroom

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಮೆದುಳಿಗೆ ಕೆಲಸ ನೀಡುವ ಪಝಲ್‌ ಗೇಮ್‌ಗಳು, ಆಪ್ಟಿಕಲ್‌ ಇಲ್ಯೂಷನ್‌ (Optical Illusion), ಬ್ರೈನ್‌ ಟೀಸರ್‌ ಚಿತ್ರಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ನೀವು ಈಗಾಗಲೇ ಇಂತಹ ಒಗಟಿನ ಚಿತ್ರಗಳನ್ನು ಬಿಡಿಸಿರುತ್ತೀರಿ. ಆದರೆ ಪ್ರತಿ ಬಾರಿ ಈ ಒಗಟು ಬಿಡಿಸಲು ಸಾಧ್ಯವಾಗದೇ ಇದ್ದೀರಬಹುದು. ಆದರೆ ಇದೀಗ ಅಂತಹದ್ದೇ ಇಲ್ಯೂಷನ್ ಚಿತ್ರ ವೈರಲ್ ಆಗಿದ್ದು, ಈ ಮಲಗುವ ಕೋಣೆಯಲ್ಲಿರುವ ಮೀನನ್ನು ಕಂಡು ಹಿಡಿಯುವುದೇ ನಿಮ್ಮ ಮುಂದಿರುವ ಸವಾಲು. ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ ನೋಡಿ.

ಈ ಚಿತ್ರ ನೋಡಿದಾಗ ನಿಮಗೇನು ಕಾಣಿಸುತ್ತದೆ?

ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಒಗಟಿನ ಚಿತ್ರಗಳು ನಿಮಗೆ ಸಹಾಯ ಮಾಡುತ್ತದೆ. ಇದೀಗ ಈ ಒಗಟಿನ ಆಟವು ನಿಮ್ಮ ಮುಂದಿದೆ. ಈ ಇಲ್ಯೂಷನ್ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಕಾಣುವುದೇ ಬೆಡ್ ರೂಮ್. ಈ ಕೋಣೆಯಲ್ಲಿ ವಿವಿಧ ವಸ್ತುಗಳಿವೆ. ಆದರೆ ಇದೆಲ್ಲವರ ನಡುವೆ ಅಡಗಿರುವ ಮೀನನ್ನು 7 ಸೆಕೆಂಡುಗಳೊಳಗೆ ನೀವು ಪತ್ತೆ ಹಚ್ಚಬೇಕು. ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ಒಮ್ಮೆ ನೋಡಿ.

ಇದನ್ನೂ ಓದಿ: ಜಸ್ಟ್ 15 ಸೆಕೆಂಡುಗಳಲ್ಲಿ ಈ ಉದ್ಯಾನವನದಲ್ಲಿ ಅಡಗಿರುವ ಶ್ವಾನವನ್ನು ಹುಡುಕಿ

ಮೀನು ನಿಮ್ಮ ಕಣ್ಣಿಗೆ ಕಾಣಿಸಿತೇ?

ನಿಮ್ಮ ಕಣ್ಣಿಗೆ ಈ ಬೆಡ್ ರೂಮ್‌ನಲ್ಲಿರುವ ವಿವಿಧ ವಸ್ತುಗಳು ಬಿದ್ದಿರಬಹುದು. ಆದರೆ ಮೀನನ್ನು ಹುಡುಕುವುದೇ ನಿಮಗಿರುವ ಬಹುದೊಡ್ಡ ಸವಾಲು. ಇದೀಗ ನೀವು ಈ ಚಿತ್ರವನ್ನು ಸೂಕ್ಷವಾಗಿ ಗಮನಿಸಿ. ಎಷ್ಟೇ ಕಣ್ಣು ಅಗಲಿಸಿ ನೋಡಿದರೂ ಮೀನು ಕಾಣಿಸುತ್ತಿಲ್ಲವೇ. ನಿಮಗೆ ಅಂತಲ್ಲ. ನೂರರಲ್ಲಿ ಹತ್ತು ಜನರು ಮಾತ್ರ ಈ ಮೀನನ್ನು ಕಂಡು ಹಿಡಿಯಲು ಸಾಧ್ಯ. ಈ ಕೆಳಗಿನ ಚಿತ್ರದಲ್ಲಿ ಮೀನನ್ನು ಗುರುತಿಸಿದ್ದೇವೆ. ಬೆಡ್ ಮೇಲೆ ಮೀನು ಇರುವುದನ್ನು ನೀವು ಗಮನಿಸಬಹುದು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:34 am, Mon, 12 January 26

Source link

Video: ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್ – Kannada News | Chaos in Westwood: U Haul Plows Into Crowd at Anti Iran Regime Rally in Los Angeles

ವಾಷಿಂಗ್ಟನ್, ಜನವರಿ 12: ಇರಾನ್‌ನಲ್ಲಿ ನಡೆಯುತ್ತಿರುವ ದೊಡ್ಡ ಪ್ರಮಾಣದ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಇದುವರೆಗೆ 500 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಕ್ರಮ ಕೈಗೊಳ್ಳುವಂತೆ ನಿರಂತರವಾಗಿ ಎಚ್ಚರಿಕೆ ನೀಡುತ್ತಿದ್ದಾರೆ. ಏತನ್ಮಧ್ಯೆ, ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಅಪಘಾತವೊಂದು ಸಭವಿಸಿದೆ. ಇರಾನ್‌ನ ಗಡಿಪಾರುಗೊಂಡ ರಾಜಕುಮಾರ ಮೊಹಮ್ಮದ್ ರೆಜಾ ಪಹ್ಲವಿ ಅವರ ಬೆಂಬಲಿಗರು ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನಾಕಾರರನ್ನು ಬೆಂಬಲಿಸಿ ಬೀದಿಗಿಳಿದಾಗ ಈ ಘಟನೆ ಸಂಭವಿಸಿದೆ.

ಟ್ರಕ್ ಮೆರಣಿಗೆಯಲ್ಲಿ ಪಾಲ್ಗಂಡಿದ್ದ ಜನರ ಮೇಲೆ ಹರಿದಿದೆ. ಹಲವು ಮಂದಿ ಗಾಯಗೊಂಡಿದ್ದಾರೆ.ಲಾಸ್ ಏಂಜಲೀಸ್‌ನ ವೆಸ್ಟ್‌ವುಡ್ ಪ್ರದೇಶದ ವಿಲ್‌ಶೈರ್ ಫೆಡರಲ್ ಕಟ್ಟಡದ ಹೊರಗೆ ಜನರು ಜಮಾಯಿಸಿದ್ದರು. ಎಂಇಕೆಯ ಸ್ಟಿಕ್ಕರ್ ಹೊಂದಿರುವ ಟ್ರಕ್ ಪ್ರತಿಭಟನಾಕಾರರ ಮೇಲೆ ನುಗ್ಗಿ ವೇಗವಾಗಿ ಓಡಿತು. ದಾಳಿಯಲ್ಲಿ ಹಲವಾರು ಪ್ರತಿಭಟನಾಕಾರರು ಗಾಯಗೊಂಡರು. ಆ ಟ್ರಕ್ 1953 ರ ದಂಗೆಯ ಚರ್ಚೆ ಸೇರಿದಂತೆ ಇರಾನ್‌ನ ಇತಿಹಾಸಕ್ಕೆ ಸಂಬಂಧಿಸಿದ ರಾಜಕೀಯ ಸಂದೇಶವನ್ನು ಹೊಂದಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಧನ್ಯವಾದಗಳು ಸರ್, ನೀವು ನನ್ನ ಹಿರಿಯರು’; ಸುದೀಪ್ ಪ್ರಶಂಸೆಗೆ ಉತ್ತರಿಸಿದ ಯಶ್ – Kannada News | Toxic’ Teaser: Yash’s Humble Response to Sudeep’s Appreciation Delights Fans

ರಾಕಿಂಗ್ ಸ್ಟಾರ್ ಯಶ್ (Yash) ಅವರ ನಟನೆಯ ‘ಟಾಕ್ಸಿಕ್’ ಸಿನಿಮಾ ಟೀಸರ್ ಜನವರಿ 8ರಂದು ರಿಲೀಸ್ ಆಯಿತು. ಅವರ ಬರ್ತ್​​ಡೇ ಪ್ರಯುಕ್ತ ಈ ಟೀಸರ್ ರಿಲೀಸ್ ಆಗಿ ಅಬ್ಬರಿಸಿತ್ತು. ಈ ಟೀಸರ್ ಈವರೆಗೆ 83 ಮಿಲಿಯನ್ ವೀಕ್ಷಣೆ ಪಡೆದಿದೆ. ಈ ಟೀಸರ್ ನೋಡಿದ ಸುದೀಪ್ ಮೆಚ್ಚುಗೆ ಸೂಚಿಸಿದ್ದರು. ಈ ಟ್ವೀಟ್​​ಗೆ ಯಶ್ ಪ್ರತಿಕ್ರಿಯೆ ನೀಡಿದ್ದಾರೆ.

ಯಶ್ ಹಾಗೂ ಸುದೀಪ್ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಮಾತುಗಳು ಆಗಾಗ ಕೇಳಿ ಬರುತ್ತವೆ. ಇದು ಅಭಿಮಾನಿಗಳ ವಲಯದಲ್ಲಿ ಇರುವ ಚರ್ಚೆ. ಆದರೆ, ಇದನ್ನು ಅವರು ಸುಳ್ಳು ಮಾಡಿದ್ದಾರೆ. ಈ ಮೊದಲು ಒಟ್ಟಿಗೆ ಕಾಣಿಸಿಕೊಂಡಾಗ ಇಬ್ಬರೂ ಪರಸ್ಪರ ಹಗ್ ಮಾಡಿದ್ದು ಇದೆ. ಈಗ ‘ಟಾಕ್ಸಿಕ್’ ವಿಷಯದಲ್ಲಿ ಇವರ ಬಂಧ ಮತ್ತೆ ಸಾಬೀತಾಗಿದೆ.

ಟೀಸರ್ ರಿಲೀಸ್ ಬಳಿಕ ಟ್ವೀಟ್ ಮಾಡಿದ್ದ ಸುದೀಪ್, ‘ಯಶ್​​ಗೆ ಶುಭಾಶಯಗಳು. ಅಲೆಗಳ ವಿರುದ್ಧ ಸಾಗಲು ಯಾವಾಗಲೂ ಸಮಯ ಬೇಕಾಗುತ್ತದೆ.ಈ ಹೊಸ ಹೆಜ್ಜೆ ನಿಮ್ಮನ್ನು ಅದೃಷ್ಟದ ಬಳಿ ಕೊಂಡೊಯ್ಯಲಿ. ನೀವು ನಿಮ್ಮ ಗುರಿಯನ್ನು ನಿರ್ಧರಿಸಿದ್ದೀರಿ’ ಎಂದಿದ್ದರು. ಈ ಟ್ವೀಟ್​​ಗೆ ಯಶ್ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ‘ಅಲೆಗಳ ವಿರುದ್ಧ ಹೋಗಲು ಸಮಯ ಬೇಕು’; ‘ಟಾಕ್ಸಿಕ್’ ಟೀಸರ್​ಗೆ ಸುದೀಪ್ ವಿಶ್

‘ಧನ್ಯವಾದಗಳು ಸರ್. ಏಕಾಗ್ರತೆ ಅಥವಾ ಸಮಗ್ರತೆಯನ್ನು ಕಳೆದುಕೊಳ್ಳದೆ, ಪ್ರಾಮಾಣಿಕವಾಗಿ ಮತ್ತು ಧೈರ್ಯದಿಂದ ಉತ್ತಮವಾಗಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ನನ್ನ ಹಿರಿಯರಿಂದ ಕಲಿತಿದ್ದೇನೆ. ಆ ಹಿರಿಯರಲ್ಲಿ ನೀವು ಒಬ್ಬರು’ ಎಂದು ಅವರು ಉತ್ತರಿಸಿದ್ದಾರೆ.

ಸುದೀಪ್ ಹಾಗೂ ಯಶ್ ಪರಪಸ್ಪರ ಪ್ರತಿಕ್ರಿಯೆ ನೀಡಿಕೊಂಡ ವಿಷಯ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಬಾಂಧವ್ಯ ಹೀಗೆಯೇ ಮುಂದುವರಿದರೆ ಚಿತ್ರರಂಗಕ್ಕೆ ಸಹಕಾರಿ ಆಗಲಿದೆ ಎಂದು ಅನೇಕರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

“ಸರಿಯಾಗಿರೋ ಬಟ್ಟೆ ಧರಿಸಿ” ಎಂದ ಮಹಿಳಾ ಪೊಲೀಸ್​​​ಗೆ ರಕ್ತ ಬರುವಂತೆ ಹೊಡೆದ ಬೆಂಗಳೂರಿನ ಯುವತಿ – Kannada News | Bengaluru Incident: Police Attire Advice Sparks Assault, Leads to Damini’s Arrest

ಬೆಂಗಳೂರು, ಜ.12: ಬೆಂಗಳೂರಿನಲ್ಲಿ ಬಟ್ಟೆಯ (Bangalore Dress Code Row) ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಪೊಲೀಸರೊಬ್ಬರು ಯುವತಿಯೊಬ್ಬಳಿಗೆ ಸರಿಯಾದ ಬಟ್ಟೆ ಹಾಕೊಳ್ಳಿ ಎಂದು ಹೇಳಿದಕ್ಕೆ ಪೊಲೀಸ್​​​ ಮೇಲೆ ಹಲ್ಲೆ ಮಾಡಿದ್ದಾಳೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಹಾಗೂ ಈ ಯುವತಿಯನ್ನು ಬಂಧಿಸಿದ್ದಾರೆ. ಮಹದೇವಪುರದ ನಾರಾಯಣಪುರ ನಿವಾಸಿ ದಾಮಿನಿ ಅಲಿಯಾಸ್ ಮೋಹಿನಿ ಎಂಬ ಯುವತಿಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ 20 ವಯಸ್ಸಿನ ಯುವತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಬಾಣಸವಾಡಿ ಸಂಚಾರ ಪೊಲೀಸ್ ಠಾಣೆಗೆ ಸೇರಿದ ಗೃಹರಕ್ಷಕ ದಳದ ಲಕ್ಷ್ಮಿ ನರಸಮ್ಮ ಅವರ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಶುಕ್ರವಾರ ಸಂಜೆ ಕೆ.ಆರ್. ಪುರಂ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ದಾಮಿನಿಯ ಉಡುಪಿನ ಬಗ್ಗೆ ಕೆಲವು ದುಷ್ಕರ್ಮಿಗಳು ಅಶ್ಲೀಲವಾಗಿ ಮಾತನಾಡಿದ್ದರು. ಈ ವೇಳೆ ಮಧ್ಯೆ ಬಂದ ಗೃಹರಕ್ಷಕ ದಳದ ಲಕ್ಷ್ಮಿ ನರಸಮ್ಮ ದುಷ್ಕರ್ಮಿಗಳನ್ನು ಅಲ್ಲಿಂದ ಓಡಿಸಿದ್ದಾರೆ. ನಂತರ ಆ ಹುಡುಗಿಗೆ ಬಟ್ಟೆಯ ಬಗ್ಗೆ ಸಲಹೆ ನೀಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಸರಿಯಾಗಿರೋ ಬಟ್ಟೆ ಧರಿಸಿ, ಈ ಪ್ರದೇಶದಲ್ಲಿ ಹೆಚ್ಚು ಜನ ಓಡಾಡುತ್ತಾರೆ. ಇಂತಹ ವ್ಯಕ್ತಿಗಳು ಕಾಯುತ್ತಿರುತ್ತಾರೆ ಹುಡುಗಿಯರು ಎಲ್ಲಿ ಸಿಗುತ್ತಾರೆ ಎಂದು, ತುಂಬಾ ಎಚ್ಚರದಿಂದ ಇರಿ ಎಂದು ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಹುಡುಗಿ, ಲಕ್ಷ್ಮಿ ನರಸಮ್ಮ ಅವರ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರೀತಿಸಿದವರ ವಶೀಕರಣಕ್ಕೆ ಆನ್‌ಲೈನ್‌ನಲ್ಲಿ ಉಡದ ಜನನಾಂಗ ಮಾರಾಟ ಮಾಡುತ್ತಿದ್ದ ಮಾಂತ್ರಿಕ

ಹಲ್ಲೆಯಿಂದ ನರಸಮ್ಮ ಅವರ ಮುಖ ಮತ್ತು ಮೂಗಿಯಿಂದ ರಕ್ತ ಬಂದಿದೆ. ಸ್ವಲ್ಪ ಸಮಯದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ದಾಮಿನಿಯನ್ನು ವಶಕ್ಕೆ ಪಡೆದಿದ್ದಾರೆ. ನರಸಮ್ಮ ಅವರ ದೂರಿನ ಆಧಾರದ ಮೇಲೆ, ದಾಮಿನಿಯನ್ನು ಬಂಧಿಸಿ ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು, ನ್ಯಾಯಾಲಯವು ಆಕೆಯನ್ನು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನಕ್ಕೆ ಕಳುಹಿಸುವಂತೆ ಹೇಳಿದೆ. ದಾಮಿನಿ ಮಾಲ್ಡೀವ್ಸ್‌ನಲ್ಲಿ ಶಾಲೆಯಲ್ಲಿ ಓದಿದ್ದು, ಬೆಂಗಳೂರಿನ ಖಾಸಗಿ ಕಾಲೇಜಿನಿಂದ ಬಿಬಿಎಂ ಪದವಿ ಪಡೆದಿದ್ದಾಳೆ ಎಂದು ಪೊಲೀಸರ ಹೇಳಿಕೆಯಲ್ಲಿ ಹೇಳಲಾಗಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Indias Space Mission: ಕಕ್ಷೆಯಲ್ಲಿರುವ ಉಪಗ್ರಹಗಳಿಗೆ ಇಂಧನ ತುಂಬಿಸುವ ಸಾಮರ್ಥ್ಯವಿರುವ ಎರಡನೇ ದೇಶವಾಗುವತ್ತ ಭಾರತ ಧಾಪುಗಾಲು – Kannada News | AyulSAT Fuel Stations in Space: OrbitAid’s Plan to Keep Satellites Alive Longer

ನವದೆಹಲಿ, ಜನವರಿ 12: ಭಾರತ ಬಾಹ್ಯಾಕಾಶ(Space)ದಲ್ಲಿ ಹೊಸ ಮೈಲಿಗಲ್ಲು ಸಾಧಿಸಲಿದೆ. ಸಾಮಾನ್ಯವಾಗಿ ಉಪಗ್ರಹಗಳು ಅವುಗಳಲ್ಲಿರುವ ಇಂಧನ ಖಾಲಿಯಾಗುವವರೆಗೆ ಕಾರ್ಯನಿರ್ವಹಿಸುತ್ತವೆ ಹಾಗಾಗಿ ಅದರ ಜೀವಿತಾವಧಿ ತುಂಬಾ ಕಡಿಮೆ. ಆದರೆ ಇಸ್ರೋದ PSLV-C62 ರಾಕೆಟ್ ಆರ್ಬಿಟ್ ಏಡ್ ನಿರ್ಮಿಸಿದ 25 ಕೆಜಿ ತೂಕದ ಆಯುಲ್ಸಾಟ್ ಉಪಗ್ರಹವನ್ನು ಸೋಮವಾರ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದರೆ ಭಾರತವು ಬಾಹ್ಯಾಕಾಶದಲ್ಲಿ ಉಪಗ್ರಹಗಳಿಗೆ ಇಂಧನ ತುಂಬಿಸುವ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಎರಡನೇ ರಾಷ್ಟ್ರವಾಗಲಿದೆ. ಕಕ್ಷೆಯಲ್ಲಿರುವ ಇಂಧನ ಮರುಪೂರಣವು ಉಪಗ್ರಹಗಳು ಹೆಚ್ಚು ಕಾಲ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ಇಸ್ರೋದ PSLV-C62 ರಾಕೆಟ್ ಆರ್ಬಿಟ್ ಏಡ್ ನಿರ್ಮಿಸಿದ 25 ಕಿಲೋಗ್ರಾಂ ತೂಕದ ಆಯುಲ್ಸಾಟ್ ಉಪಗ್ರಹವನ್ನು ಸೋಮವಾರ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದರೆ ಭಾರತವು ಬಾಹ್ಯಾಕಾಶದಲ್ಲಿ ಉಪಗ್ರಹಗಳಿಗೆ ಇಂಧನ ತುಂಬಿಸುವ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಎರಡನೇ ರಾಷ್ಟ್ರವಾಗಲಿದೆ.
ಇಲ್ಲಿಯವರೆಗೆ, ಚೀನಾ ಮಾತ್ರ ಈ ಸಾಧನೆಯನ್ನು ಸಾಧಿಸಿದೆ.

ಅಮೆರಿಕ ಸೇರಿದಂತೆ ಯಾವುದೇ ಬಾಹ್ಯಾಕಾಶ ಶಕ್ತಿ ಸಾರ್ವಜನಿಕವಾಗಿ ಇದನ್ನು ಸಾಧಿಸಿಲ್ಲ. ಈ ರಾಕೆಟ್ ಅನ್ನು ಇಂದು ಬೆಳಗ್ಗೆ 10.18 ಕ್ಕೆ ಉಡಾವಣೆ ಮಾಡಲಾಗುತ್ತದೆ. ಕಳೆದ ವರ್ಷ, ಚೀನಾ ಕಕ್ಷೆಯಲ್ಲಿ ಇಂಧನ ತುಂಬುವ ಪ್ರಯೋಗವನ್ನು ನಡೆಸಿತು. ಆದರೆ ಅದರ ಬಗ್ಗೆ ಬಹಳ ಕಡಿಮೆ ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು.

ಮತ್ತಷ್ಟು ಓದಿ: ಇಸ್ರೋದ ಬಾಹುಬಲಿ CMS-03 ಉಪಗ್ರಹ ಯಶಸ್ವಿ ಉಡಾವಣೆ, ಭಾರತೀಯ ಸೇನೆಗೆ ಸೇವೆ ಒದಗಿಸುವ ರಾಕೆಟ್

ಇಂಧನ ಮರುಪೂರಣ ಇಂಟರ್ಫೇಸ್

ಅಧಿಕೃತ ವಿವರಗಳನ್ನು ಹಂಚಿಕೊಂಡಿಲ್ಲ, ಖಾಸಗಿ ಅಮೆರಿಕನ್ ಕಂಪನಿಯಾದ ಆಸ್ಟ್ರೋಸ್ಕೇಲ್ ಈ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿದೆ, ಆದರೆ ಅದರ ಮಿಷನ್ ಇನ್ನೂ ಪ್ರಾರಂಭವಾಗಿಲ್ಲ. ಆರ್ಬಿಟ್‌ಎಐಡಿ ಸಂಸ್ಥಾಪಕ ಮತ್ತು ಸಿಇಒ ಶಕ್ತಿಕುಮಾರ್ ಆರ್ ಅವರ ಪ್ರಕಾರ, ಇದು ಭಾರತದ ಮೊದಲ ವಾಣಿಜ್ಯ ಡಾಕಿಂಗ್ ಮತ್ತು ಇಂಧನ ಮರುಪೂರಣ ಇಂಟರ್ಫೇಸ್ ಆಗಿದ್ದು, ಇದು ಭವಿಷ್ಯದಲ್ಲಿ ಉಪಗ್ರಹಗಳ ಜೀವಿತಾವಧಿಯನ್ನು ವಿಸ್ತರಿಸುತ್ತದೆ.

AYULSat ಮತ್ತೊಂದು ಉಪಗ್ರಹಕ್ಕೆ ಇಂಧನ ತುಂಬಿಸುವುದಿಲ್ಲ. ಇದನ್ನು ನಿರ್ದಿಷ್ಟವಾಗಿ ಗುರಿ ಉಪಗ್ರಹವಾಗಿ ವಿನ್ಯಾಸಗೊಳಿಸಲಾಗಿದೆ. ಬಾಹ್ಯಾಕಾಶ ಪರಿಸರದಲ್ಲಿ ಇಂಧನದ ನಡವಳಿಕೆಯನ್ನು ಅರ್ಥಮಾಡಿಕೊಳ್ಳುವುದು ಇದರ ಉದ್ದೇಶವಾಗಿದೆ. ಈ ಕಾರ್ಯಾಚರಣೆಯು ಒಂದೇ ಉಪಗ್ರಹದೊಳಗಿನ ಇಂಧನ ವರ್ಗಾವಣೆ ಪ್ರಕ್ರಿಯೆಯನ್ನು ಪರೀಕ್ಷಿಸುತ್ತದೆ.

ಸೂಕ್ಷ್ಮ ಗುರುತ್ವಾಕರ್ಷಣೆ ಅಥವಾ ಶೂನ್ಯ ಗುರುತ್ವಾಕರ್ಷಣೆಯಲ್ಲಿ ದ್ರವ ಇಂಧನವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಎಂಜಿನಿಯರ್‌ಗಳು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಉಪಗ್ರಹ ಸೇವಾ ಕಾರ್ಯಾಚರಣೆಗಳು ಸಾಮಾನ್ಯವಾಗಿ ಎರಡು ಪ್ರತ್ಯೇಕ ಬಾಹ್ಯಾಕಾಶ ನೌಕೆಗಳನ್ನು ಒಳಗೊಂಡಿರುತ್ತವೆ.

ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಗಾಗಿ ಕಳುಹಿಸಲಾಗುತ್ತಿರುವ ಈ ಕಾರ್ಯಾಚರಣೆಯು 14 ದೇಶೀಯ ಮತ್ತು ವಿದೇಶಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ. 260 ಟನ್ ತೂಕದ PSLV-C62 ರಾಕೆಟ್ ಅನ್ನು ಇಂದು ಬೆಳಗ್ಗೆ 10.18 ಕ್ಕೆ ಉಡಾವಣೆ ಮಾಡಲಾಗುವುದು ಎಂದು ಇಸ್ರೋ ತಿಳಿಸಿದೆ.

13 ಉಪಗ್ರಹಗಳ ಉಡಾವಣೆ

ಉಡಾವಣೆಯಾದ ಸುಮಾರು 17 ನಿಮಿಷಗಳ ನಂತರ, 13 ಇತರ ಉಪಗ್ರಹಗಳನ್ನು ಸೂರ್ಯ-ಸಿಂಕ್ರೊನಸ್ ಕಕ್ಷೆಗೆ ಸೇರಿಸಲಾಗುತ್ತದೆ. ಇದರ ನಂತರ, ರಾಕೆಟ್‌ನ ನಾಲ್ಕನೇ ಹಂತ (PS4) ಸ್ಪ್ಯಾನಿಷ್ ಸ್ಟಾರ್ಟ್‌ಅಪ್‌ಗೆ ಸೇರಿದ ಸುಮಾರು 25-ಕಿಲೋಗ್ರಾಂಗಳಷ್ಟು ಕೆಸ್ಟ್ರೆಲ್ ಇನಿಶಿಯಲ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್ (KID) ಕ್ಯಾಪ್ಸುಲ್ ಅನ್ನು ಬೇರ್ಪಡಿಸುತ್ತದೆ .

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:59 am, Mon, 12 January 26

Source link

ಜೊತೆಯಾಗಿ ಕಣಕ್ಕಿಳಿದು ಹೊಸ ವಿಶ್ವ ದಾಖಲೆ ಬರೆದ ತಂದೆ-ಮಗ – Kannada News | Mohammad nabi and his son hassan eisakhil creates new history in T20 Cricket

ಈ ಪಂದ್ಯದಲ್ಲಿ ಹಸನ್ ಐಸಾಖಿಲ್ ಆರಂಭಿಕನಾಗಿ ಕಣಕ್ಕಿಳಿದರೆ, ಮೊಹಮ್ಮದ್ ನಬಿ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು. ಅಲ್ಲದೆ ಈ ಜೋಡಿಯು 53 ರನ್​ಗಳ ಜೊತೆಯಾಟವಾಡುವ ಮೂಲಕ ಟಿ20 ಇತಿಹಾಸದಲ್ಲೇ ಅರ್ಧಶತಕದ ಪಾಲುದಾರಿಕೆ ನಿಭಾಯಿಸಿದ ವಿಶ್ವದ ಮೊದಲ ತಂದೆ-ಮಗ ಜೋಡಿ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Source link

SSLC ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್: ಮುಖ್ಯೋಪಾಧ್ಯಾಯರು ಸೇರಿ 8 ಮಂದಿ ಅರೆಸ್ಟ್ – Kannada News | SSLC Preparatory Exam Question Paper Leak Busted: Teachers and Students Among 8 Arrested in Karnataka

ಬೆಂಗಳೂರು, ಜನವರಿ 12: ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯ (SSLC Preparatory Exam) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಒಟ್ಟು ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು (Bangalore) ಉತ್ತರ ವಿಭಾಗದ ಸೈಬರ್ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದು, ಬಂಧಿತರಲ್ಲಿ ವಿವಿಧ ಜಿಲ್ಲೆಗಳ ಶಾಲಾ ಶಿಕ್ಷಕರು, ಸಹ ಶಿಕ್ಷಕರು, ಮುಖ್ಯೋಪಾಧ್ಯಾಯರು ಹಾಗೂ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಸೇರಿದ್ದಾರೆ.

ಹಿಂದಿ ವಿಷಯದ ಪ್ರಶ್ನೆ ಪತ್ರಿಕೆ ಯೂಟ್ಯೂಬ್‌ನಲ್ಲಿ ಹರಿದಾಡುತ್ತಿರುವುದು ಪತ್ತೆಯಾಗಿತ್ತು. ಈ ಸಂಬಂಧ ಬೆಂಗಳೂರು ಉತ್ತರ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು. ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರಿಗೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ದೃಢಪಟ್ಟಿತ್ತು.

ಪೊಲೀಸರ ಮಾಹಿತಿ ಪ್ರಕಾರ, ತುಮಕೂರು, ರಾಮನಗರ ಮತ್ತು ಕಲಬುರಗಿ ಜಿಲ್ಲೆಗಳ ಕೆಲವು ಶಾಲೆಗಳ ಶಿಕ್ಷಕರು ಈ ಸೋರಿಕೆ ಪ್ರಕರಣದಲ್ಲಿ ಶಾಮೀಲಾಗಿರುವುದು ಪತ್ತೆಯಾಗಿದೆ. ತುಮಕೂರಿನ ಶಾಲೆಯೊಂದರ ಮುಖ್ಯೋಪಾಧ್ಯಾಯ ವಿ.ಡಿ. ಗಿರೀಶ್, ರಾಮನಗರದ ಸಹ ಶಿಕ್ಷಕ ಅಮ್ಜದ್ ಖಾನ್ ಸೇರಿದಂತೆ ಕಲಬುರಗಿ ಜಿಲ್ಲೆಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಬಂಧನಕ್ಕೊಳಗಾಗಿದ್ದಾರೆ.

ಬಂಧಿತರ ಪೈಕಿ ಕಲಬುರಗಿ ಜಿಲ್ಲೆಯ ಮುಖ್ಯ ಶಿಕ್ಷಕಿ ಶಾಹಿದಾ ಬೇಗಂ, ಶಿಕ್ಷಕ ಮೊಹಮ್ಮದ್ ಸಿರಾಜುದ್ದೀನ್, ಸಹ ಶಿಕ್ಷಕಿ ಫಾಹ್ಮಿದಾ ಹಾಗೂ ಶಿಕ್ಷಕಿ ಫರ್ಜಾನಾ ಬೇಗಂ ಇದ್ದಾರೆ. ಇವರ ಜೊತೆಗೆ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಎಸ್​ಎಸ​ಲ್​ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಬಂಧಿತರ ವಿವರ

  • ವಿ.ಡಿ. ಗಿರೀಶ್ – ಮುಖ್ಯೋಪಾಧ್ಯಾಯ, ತುಮಕೂರು
  • ಅಮ್ಜದ್ ಖಾನ್ – ಸಹ ಶಿಕ್ಷಕ, ರಾಮನಗರ
  • ಶಾಹಿದಾ ಬೇಗಂ – ಮುಖ್ಯ ಶಿಕ್ಷಕಿ, ಕಲಬುರಗಿ
  • ಫಾಹ್ಮಿದಾ – ಸಹ ಶಿಕ್ಷಕಿ, ಕಲಬುರಗಿ
  • ಮೊಹಮ್ಮದ್ ಸಿರಾಜುದ್ದೀನ್ – ಶಿಕ್ಷಕ, ಕಲಬುರಗಿ
  • ಫರ್ಜಾನಾ ಬೇಗಂ – ಶಿಕ್ಷಕಿ, ಕಲಬುರಗಿ
  • ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು

ಇದನ್ನೂ ಓದಿ: SSLC ವಿದ್ಯಾರ್ಥಿಗಳೇ ಎಚ್ಚರ! ಹಣ ಕೊಟ್ರೆ ಪ್ರಶ್ನೆ ಪತ್ರಿಕೆ ಸಿಗತ್ತೆ ಅಂತಾ ಯಾಮಾರಬೇಡಿ

ಸದ್ಯ ಬಂಧಿತ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಯಾವ ರೀತಿಯಲ್ಲಿ ನಡೆದಿದೆ, ಇನ್ನಿತರರು ಶಾಮೀಲಾಗಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ. ಶಿಕ್ಷಣ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ತಂದಿರುವ ಈ ಪ್ರಕರಣ ರಾಜ್ಯಾದ್ಯಂತ ಆತಂಕ ಮೂಡಿಸಿದೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today 12 January: ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 12-01-2026 ರ ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ಪುಷ್ಯ ಮಾಸ, ಹೇಮಂತ ಋತು, ಕೃಷ್ಣಪಕ್ಷ, ನವಮಿ, ಸ್ವಾತಿ ನಕ್ಷತ್ರದ ಈ ದಿನದ ರಾಹುಕಾಲ ಬೆಳಿಗ್ಗೆ 8:09 ರಿಂದ 9:35 ರವರೆಗೆ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಬೆಳಿಗ್ಗೆ 9:36 ರಿಂದ 11:02 ರವರೆಗೆ.

ಇಂದು ರಾಷ್ಟ್ರೀಯ ಯುವ ದಿನ ಹಾಗೂ ಶಿವ ಮತ್ತು ಕಾಲಭೈರವನ ಕೃಪೆಗೆ ಪಾತ್ರರಾಗಲು ಸೂಕ್ತ ದಿನವಾಗಿದೆ. ಧನು ರಾಶಿಯಲ್ಲಿ ರವಿ ಮತ್ತು ತುಲಾ ರಾಶಿಯಲ್ಲಿ ಚಂದ್ರ ಸಂಚಾರ ಮಾಡುತ್ತಿದ್ದಾರೆ. ಡಾ. ಗುರೂಜಿ ಅವರು ದ್ವಾದಶ ರಾಶಿಗಳಾದ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಗಳಿಗೆ ವಿವರವಾದ ಫಲಗಳನ್ನು ನೀಡಿದ್ದಾರೆ. ಪ್ರತಿಯೊಂದು ರಾಶಿಗೂ ಗ್ರಹಗಳ ಶುಭಫಲ, ಆರೋಗ್ಯ, ಉದ್ಯೋಗ, ಆರ್ಥಿಕ ಸ್ಥಿತಿ, ಕುಟುಂಬ ಜೀವನ, ಮತ್ತು ಪ್ರಯಾಣದ ಕುರಿತು ಸಲಹೆಗಳನ್ನು ನೀಡಲಾಗಿದೆ. ಅದೃಷ್ಟದ ಬಣ್ಣ, ಸಂಖ್ಯೆ ಮತ್ತು ಜಪಿಸಬೇಕಾದ ಮಂತ್ರಗಳನ್ನೂ ತಿಳಿಸಲಾಗಿದೆ.

 

 

 

Source link

Exit mobile version