ಕಾಂಗ್ರೆಸ್ ಆಡಳಿತಕ್ಕೆ 1000 ದಿನಗಳ ಸಂಭ್ರಮ; ಒಂದು ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಿರುವ ಸಿಎಂ! – Kannada News | CM Siddaramaiah’s 1000 Days: 1 Lakh Property Titles for Karnataka Residents

ಕಾಂಗ್ರೆಸ್ ಆಡಳಿತಕ್ಕೆ 1000 ದಿನಗಳ ಸಂಭ್ರಮ; ಒಂದು ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಿರುವ ಸಿಎಂ!

ಬೆಂಗಳೂರು, ಜನವರಿ 30: ಕಾಂಗ್ರೆಸ್ (Congress) ಸರ್ಕಾರದ ಆಡಳಿತಕ್ಕೆ 1000 ದಿನಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ 13ರಂದು ಹಾವೇರಿಯಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಮನೆ ಮಾಲೀಕತ್ವ ಹಕ್ಕುಪತ್ರಗಳನ್ನು ವಿತರಿಸಲು ಮುಂದಾಗಿದ್ದಾರೆ. ದಶಕಗಳಿಂದ ತಮ್ಮ ಮನೆಗಳಲ್ಲಿ ವಾಸಿಸುತ್ತಿದ್ದರೂ ಕಾನೂನುಬದ್ಧ ಹಕ್ಕುಪತ್ರವಿಲ್ಲದೆ ಬದುಕುತ್ತಿದ್ದ ಅಸಹಾಯಕ ಕುಟುಂಬಗಳಿಗೆ ಭದ್ರತೆ ಒದಗಿಸುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಕೃಷ್ಣ ಭೈ​ರೇಗೌಡ ನೇತೃತ್ವದ ಅಭಿಯಾನ

ಈ ಮಹತ್ವಾಕಾಂಕ್ಷಿ ಯೋಜನೆಗೆ ಕಳೆದ ವರ್ಷ ಮೇ ತಿಂಗಳಲ್ಲಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಹೊಸಪೇಟೆಯಲ್ಲಿ ಚಾಲನೆ ನೀಡಿದ್ದು, 2015ರಲ್ಲಿ ಕರ್ನಾಟಕ ಪ್ರವಾಸದ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದರು. ಆಗ 1,11,111 ಜನರಿಗೆ ಮನೆ ಹಕ್ಕುಪತ್ರ ವಿತರಿಸಲಾಗಿತ್ತು. ಪ್ರಸ್ತುತ ಈ ಅಭಿಯಾನದ ನೇತೃತ್ವವನ್ನು ಆದಾಯ ಸಚಿವ ಕೃಷ್ಣ ಭೈ​ರೇಗೌಡ ವಹಿಸಿಕೊಂಡಿದ್ದಾರೆ. ಈ ಕುರಿತು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಸಚಿವರ ಎಕ್ಸ್ ಪೋಸ್ಟ್ ಇಲ್ಲಿದೆ

ನಿಮ್ಮ ಮನೆಗೇ ಬರುತ್ತೆ ಹಕ್ಕುಪತ್ರ

ಗುರುವಾರ ವೀಡಿಯೋ ಸಂವಾದದ ಮೂಲಕ ಉಪ ವಿಭಾಗಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವ ಕೃಷ್ಣ ಭೈ​ರೇಗೌಡ, ಮುಂದಿನ ಒಂದು ವಾರದಲ್ಲಿ ಎಲ್ಲ ದಾಖಲೆಗಳು ಮತ್ತು ಹಕ್ಕುಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಸೂಚಿಸಿದ್ದಾರೆ. ಯಾವುದೇ ಅರ್ಜಿ ಆಹ್ವಾನಿಸದೇ, ಮನೆ ಮನೆಗೆ ತೆರಳಿ ಹಕ್ಕುಪತ್ರ ವಿತರಿಸುವುದಾಗಿ ಸಚಿವ ಹೇಳಿದ್ದಾರೆಂದು ದಿ ಎಕನೊಮಿಕ್ಸ್ ಟೈಮ್ಸ್ ವರದಿ ಮಾಡಿದೆ. ಈ ಕಾರ್ಯಕ್ರಮದಿಂದ ಸುಮಾರು ನಾಲ್ಕು ಲಕ್ಷ ಜನರಿಗೆ ಲಾಭವಾಗಲಿದೆ ಎಂದು ಅಂದಾಜಿಸಲಾಗಿದೆ.

ಹಿಂದಿನ ಬಿಜೆಪಿ ಆಡಳಿತದ ಅವಧಿಯ ಆರು ವರ್ಷಗಳಲ್ಲಿ ಕೇವಲ 1.08 ಲಕ್ಷ ಕುಟುಂಬಗಳಿಗೆ ಮಾತ್ರ ಹಕ್ಕುಪತ್ರ ವಿತರಿಸಲಾಗಿತ್ತು. 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ, ಈ ಯೋಜನೆಯನ್ನು ಆದಾಯ ಇಲಾಖೆ ಪ್ರಮುಖ ಅಭಿಯಾನವಾಗಿ ಕೈಗೆತ್ತಿಕೊಂಡಿದ್ದು, ಸಮಾನ ವಸತಿಗಳನ್ನು ಗುರುತಿಸಿ ಪ್ರಕ್ರಿಯೆ ಪೂರ್ಣಗೊಳಿಸಲು ಮುಂದಾಗಿದೆ. ಸರ್ಕಾರ ನೀಡುತ್ತಿರುವ ಹಕ್ಕುಪತ್ರಗಳು ಡಿಜಿಟಲ್ ರೂಪದಲ್ಲಿದ್ದು, ದಾಖಲೆ ಕಳೆದುಹೋಗುವ ಅಥವಾ ಹಾನಿಯಾಗುವ ಸಮಸ್ಯೆ ತಪ್ಪಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ನಾ ಡ್ರೈವರ’: ಆರ್​​ಸಿಬಿ ಕ್ಯಾಂಪ್​​ನಲ್ಲಿ ಮಾಳು ಹಾಡಿನ ಹವಾ – Kannada News | RCB player Shreyanka Patil danced to Naa Drivara Kannada song

‘ನಾ ಡ್ರೈವರ, ನನ ಲವ್ವರ’ ಮಾಳು ನಿಪ್ಪಾಳ (Malu Nippala) ಹಾಡಿರುವ ಈ ಹಾಡು ಇತ್ತೀಚೆಗಿನ ಬಲು ಜನಪ್ರಿಯ ಕನ್ನಡ ಹಾಡುಗಳಲ್ಲಿ ಒಂದು. ಈ ಹಾಡೊಂದರ ಕಾರಣಕ್ಕೆ ಗಾಯಕ ಮಾಳು ನಿಪ್ಪಾಳಗೆ ಹಲವು ಅವಕಾಶಗಳು ಅರಸಿ ಬಂದವು. ಬಿಗ್​​ಬಾಸ್​​ ಶೋಗೂ ಸಹ ಬರುವಂತಾಯ್ತು. ಈ ಜವಾರಿ ಹಾಡು ಇಷ್ಟುದಿನ ಶ್ರಮಿಕರ, ಕಾಲೇಜು ಯುವಕ-ಯುವತಿಯರ ಬಾಯಲ್ಲಿ ನಲಿದಾಡುತ್ತಿತ್ತು, ಆದರೆ ಈಗ ‘ನಾ ಡ್ರೈವರ’ ಹಾಡಯ ಆರ್​​​ಸಿಬಿ ಕ್ಯಾಂಪನ್ನೂ ಸಹ ತಲುಪಿದೆ.

ಹೌದು, ಇದೀಗ ಮಹಿಳಾ ಐಪಿಎಲ್ ಚಾಲ್ತಿಯಲ್ಲಿದ್ದು, ಆರ್​​​ಸಿಬಿ ತಂಡ ಅದ್ಭುತ ಪ್ರದರ್ಶನ ತೋರಿ ಫೈನಲ್ ಪ್ರವೇಶಿಸಿದೆ. ಆರ್​​ಸಿಬಿ ತಂಡ ಮೊದಲಿನಿಂದಲೂ ಕ್ರಿಕೆಟ್​​ನ ಜೊತೆಗೆ ತನ್ನ ಸೋಷಿಯಲ್ ಮೀಡಿಯಾ ಕಂಟೆಂಟ್ ಗೇಮ್​​ನಲ್ಲೂ ಬಹಳ ಮುಂದಿದೆ. ಅದ್ಭುತ ಕಂಟೆಂಟ್ ಅನ್ನು ಅಭಿಮಾನಿಗಳಿಗೆ, ಜನರಿಗೆ ನೀಡುತ್ತಾ ಬಂದಿದೆ. ಆರ್​​ಸಿಬಿ ತಂಡದ ಭಾಗವೇ ಆಗಿರುವ ದಾನಿಷ್ ಸೇಠ್ ನಡೆಸಿಕೊಡುವ ಆರ್​​ಸಿಬಿ ಇನ್​​ಡೈಡರ್​ ಶೋ ವಿಶ್ವಪ್ರಸಿದ್ಧ. ಇದೀಗ ಆರ್​​ಸಿಬಿ ಇನ್​​ಸೈಡರ್​​ನಲ್ಲಿ ಮಾಳುವಿನ ‘ನಾ ಡ್ರೈವರ’ ಹಾಡಿಗೆ ಆರ್​​ಸಿಬಿ ಆಟಗಾರ್ತಿ ಸಖತ್ ಸ್ಟೆಪ್ಪು ಹಾಕಿದ್ದಾರೆ.

ದಾನಿಷ್ ಸೇಠ್, ‘ಆರ್​​ಸಿಬಿ ಇನ್​​ಡೈಡರ್ ಶೋ’ಗಾಗಿ ಆರ್​​ಸಿಬಿಯ ಆಲ್​​ರೌಂಡ್ ಆಟಗಾರ್ತಿ, ಕನ್ನಡತಿಯೂ ಆಗಿರುವ ಶ್ರೆಯಾಂಕಾ ಪಾಟೀಲ್ ಅವರನ್ನು ಸಂದರ್ಶನ ಮಾಡಿದ್ದಾರೆ. ಶ್ರೆಯಾಂಕಾ ಅವರೊಟ್ಟಿಗೆ ಹಾಸ್ಯಮಯ ಸಂದರ್ಶನ ಮಾಡಿರುವ ದಾನಿಷ್, ಸಂದರ್ಶನದ ಕೊನೆಯಲ್ಲಿ ಇಬ್ಬರೂ ಕ್ರೀಡಾಂಗಣದಲ್ಲಿ ಪಿಚ್ ರೋಲ್ ಮಾಡುವ ವಾಹನದ ಮೇಲೆ ಕೂತು ‘ನಾ ಡ್ರೈವರ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ಇದನ್ನೂ ಓದಿ:ವೇದಿಕೆ ಏರಿದ ಮಾಳು ವಿರುದ್ಧ ಸೇಡು ತೀರಿಸಿಕೊಂಡ ಗಿಲ್ಲಿ ಫ್ಯಾನ್ಸ್; ಭಾರೀ ಮುಜುಗರ

ಇನ್​​ಸ್ಟಾಗ್ರಾಂನಲ್ಲಿ ಸಖತ್ ಸಕ್ರಿಯವಾಗಿರುವ, ಡ್ಯಾನ್ಸ್ ರೀಲ್ಸ್​​ಗಳನ್ನು ಮಾಡಿ ಅನುಭವ ಇರುವ ಶ್ರೆಯಾಂಕಾ ಪಾಟೀಲ್ ‘ನಾ ಡ್ರೈವರ’ ಹಾಡಿಗೆ ಸಖತ್ತಾಗಿ ಸ್ಟೆಪ್ಪುಗಳನ್ನು ಹಾಕಿದ್ದಾರೆ. ಮೂಲ ಹಾಡಿನಲ್ಲಿ ಮಾಳು ಮಾಡಿರುವ ಸ್ಟೆಪ್ಪುಗಳನ್ನು ಅನುಕರಣೆ ಸಹ ಮಾಡಿದ್ದಾರೆ. ಶ್ರೆಯಾಂಕಾ ಹಾಗೂ ದಾನಿಷ್ ಅವರ ಡ್ಯಾನ್ಸ್ ನೋಡಿ ಆರ್​​ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂದಾನ ಆಶ್ಚರ್ಯ ಪಟ್ಟಿದ್ದಾರೆ.

ಶ್ರೆಯಾಂಕಾ ಮತ್ತು ದಾನಿಷ್ ಅವರುಗಳು ‘ನಾ ಡ್ರೈವರ’ ಹಾಡಿಗೆ ಹಾಕಿರುವ ಸ್ಟೆಪ್ಪುಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಜವಾರಿ ಹಾಡಾದ ‘ನಾ ಡ್ರೈವರ’ ಆರ್​​ಸಿಬಿ ಮೂಲಕ ಅಂತರಾಷ್ಟ್ರೀಯ ಮಟ್ಟಕ್ಕೇರಿದೆ ಎಂದು ಕಮೆಂಟುಗಳನ್ನು ಹಾಕುತ್ತಿದ್ದಾರೆ ನೆಟ್ಟಿಗರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರೋಹಿತ್ ಶರ್ಮಾರ ವಿಶ್ವ ದಾಖಲೆ ಮುರಿದ ಐರ್ಲೆಂಡ್ ಆಟಗಾರ

Source link

ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಒಬಿಸಿ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಿ: ಬೆಂಗಳೂರು ವಕೀಲರ ಸಂಘ ಆಗ್ರಹ – Kannada News | AAB Writes to CJ Vibhu Bakhru: Demands Social Justice in High Court Judge Recommendations

ಕರ್ನಾಟಕ ಹೈಕೋರ್ಟ್‌ ಹಾಗೂ ಬೆಂಗಳೂರು ವಕೀಲರ ಸಂಘದ ಪತ್ರದ ಪ್ರತಿImage Credit source: tv9

ಬೆಂಗಳೂರು, ಜನವರಿ 30: ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಹಿಂದುಳಿದ ವರ್ಗಗಳಿಗೆ (OBC/BCM-A) ಸೂಕ್ತ ಪ್ರಾತಿನಿಧ್ಯ ನೀಡುತ್ತಿಲ್ಲ ಎಂದು ಬೆಂಗಳೂರು ವಕೀಲರ ಸಂಘ (AAB) ಅಸಮಾಧಾನ ವ್ಯಕ್ತಪಡಿಸಿದ್ದು, ಕರ್ನಾಟಕ ಹೈಕೋರ್ಟ್‌ನ (Karnataka High Court) ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿಗೆ ಪತ್ರ ಬರೆದಿದೆ. ಇತ್ತೀಚಿನ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಮಾಜಿಕ ನ್ಯಾಯವನ್ನು ಕಡೆಗಣಿಸಲಾಗಿದೆ ಎಂದು ಸಂಘವು ಜನವರಿ 28 ರಂದು ಬರೆದ ಈ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದೆ.

ವಕೀಲರ ಕೋಟಾದಡಿ (Bar Quota) ಇತ್ತೀಚೆಗೆ ಶಿಫಾರಸು ಮಾಡಲಾದ 10 ಅಭ್ಯರ್ಥಿಗಳಲ್ಲಿ ಒಬ್ಬರೂ ಒಬಿಸಿ ಅಥವಾ ಬಿಸಿಎಂ-ಎ ವರ್ಗಕ್ಕೆ ಸೇರಿದವರಿಲ್ಲ ಎಂಬುದು ಸಂಘದ ಮುಖ್ಯ ಆರೋಪವಾಗಿದೆ. ಇದು ಸಂವಿಧಾನದ 15 ಮತ್ತು 16ನೇ ವಿಧಿಗಳ ಅಡಿಯಲ್ಲಿ ನೀಡಲಾದ ಸಮಾನ ಪ್ರಾತಿನಿಧ್ಯದ ಆಶಯಕ್ಕೆ ವಿರುದ್ಧವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಒಬಿಸಿ ಪ್ರಾತಿನಿಧ್ಯದ ಕೊರತೆ

ಪ್ರಸ್ತುತ ಕರ್ನಾಟಕ ಹೈಕೋರ್ಟ್‌ನಲ್ಲಿರುವ 38 ಜಡ್ಜ್​​ಗಳ ಪೈಕಿ ಕೇವಲ 2 ರಿಂದ 3 ಮಂದಿ ಮಾತ್ರ ಒಬಿಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ರಾಜ್ಯದ ಜನಸಂಖ್ಯೆಯಲ್ಲಿ ಒಬಿಸಿ ಸಮುದಾಯದ ಪಾಲು ಶೇಕಡಾ 25ಕ್ಕಿಂತ ಹೆಚ್ಚಿದ್ದರೂ, ನ್ಯಾಯಾಂಗದಲ್ಲಿ ಅವರ ಪ್ರಾತಿನಿಧ್ಯ ಕೇವಲ ಶೇಕಡಾ 5 ರಿಂದ 7 ರಷ್ಟಿದೆ ಎಂದು ಸಂಘವು ಅಂಕಿ-ಅಂಶಗಳ ಸಮೇತ ವಿವರಿಸಿದೆ.

ಜಿಲ್ಲಾ ನ್ಯಾಯಾಧೀಶರ ಕೋಟಾದಲ್ಲಿ ಅವಕಾಶ ಕೊಟ್ಟು ಹಿಂದುಳಿದ ವರ್ಗಗಳ ನೇಮಕಾತಿಯನ್ನು ಸರಿದೂಗಿಸುವ ಪ್ರಯತ್ನ ಮಾಡಬಾರದು. ಏಕೆಂದರೆ ಅದು ಹಿರಿತನದ ಮೇಲೆ ಆಧಾರಿತವಾಗಿರುತ್ತದೆ. ಆದರೆ ವಕೀಲರ ಕೋಟಾದಡಿ ನೇಮಕ ಮಾಡುವಾಗ ಅರ್ಹ ಮತ್ತು ಪ್ರತಿಭಾವಂತ ಒಬಿಸಿ ವಕೀಲರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಸಂಘ ಒತ್ತಾಯಿಸಿದೆ.

ಇದನ್ನೂ ಓದಿ: ಕೊನೆಗೂ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್

ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಹೆಚ್.ವಿ. ಪ್ರವೀಣ್ ಗೌಡ ಮತ್ತು ಇತರ ಪದಾಧಿಕಾರಿಗಳು ಈ ಪತ್ರಕ್ಕೆ ಸಹಿ ಹಾಕಿದ್ದು, ಈಗಾಗಲೇ ಸಿದ್ಧಪಡಿಸಲಾದ ಪಟ್ಟಿಗೆ ಒಬಿಸಿ ಸಮುದಾಯದ ಇಬ್ಬರು ಹೆಚ್ಚುವರಿ ಅಭ್ಯರ್ಥಿಗಳನ್ನು ಸೇರಿಸಿ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ನ್ಯಾಯಾಂಗದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಲು ಈ ಕ್ರಮ ಅನಿವಾರ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ತಿಂಗಳಲ್ಲಿ ಸಾವಿರಾರು ಜನರಿಗೆ ನಾಯಿ ಕಡಿತ; ಕಾಫಿನಾಡಿನಲ್ಲಿ ರಸ್ತೆಗಿಳಿಯಲೂ ಭಯಪಡುತ್ತಿರುವ ಜನರು! – Kannada News | Chikmagalur Stray Dog Menace: 1000+ Bites in one month, Public Demands Action

ಒಂದೇ ತಿಂಗಳಲ್ಲಿ ಸಾವಿರಾರು ಜನರಿಗೆ ನಾಯಿ ಕಡಿತ

ಚಿಕ್ಕಮಗಳೂರು, ಜನವರಿ 30: ಜಿಲ್ಲೆಯಲ್ಲಿ ಬೀದಿ ನಾಯಿಗಳ ಕಾಟ (Dog attack) ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ. ಕೇವಲ ಒಂದೇ ತಿಂಗಳಲ್ಲಿ ಜಿಲ್ಲೆಯಾದ್ಯಂತ ಸಾವಿರಕ್ಕೂ ಹೆಚ್ಚು ಜನರು ಬೀದಿ ನಾಯಿಗಳ ದಾಳಿಗೆ ಒಳಗಾಗಿರುವುದು ಬೆಳಕಿಗೆ ಬಂದಿದ್ದು, ಸ್ಥಳೀಯರು ರಸ್ತೆಗಿಳಿಯಲು ಹೆದರುವ ಪರಿಸ್ಥಿತಿ ಎದುರಾಗಿದೆ. ನಾಯಿ ದಾಳಿಗೆ ಒಳಗಾದ ಎಲ್ಲಾ ಗಾಯಾಳುಗಳು ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಜಿಲ್ಲೆಯಲ್ಲಿ ಜನವರಿ 1ರಿಂದ 29ರವರೆಗೆ 1011 ನಾಯಿ ಕಡಿತ ಪ್ರಕರಣಗಳು ದಾಖಲಾಗಿದ್ದು, ಮಕ್ಕಳು, ಮಹಿಳೆಯರು ಸೇರಿ ವೃದ್ಧರೂ ನಾಯಿ ಕಡಿತಕ್ಕೆ ಒಳಗಾಗಿರುವುದು ಕಂಡುಬಂದಿದೆ. ನಗರದಲ್ಲಿ 6 ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳು ಇರುವುದಾಗಿ ಅಂದಾಜಿಸಲಾಗಿದ್ದು, ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ. ತಾಲೂಕುವಾರು ನೋಡಿದರೆ, ಚಿಕ್ಕಮಗಳೂರು , ಕಡೂರು ಸೇರಿ ಏಳು ಕಡೆ ಹೆಚ್ಚಿನ ದಾಳಿಗಳು ನಡೆದಿರುವುದು ಕಂಡುಬಂದಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಪ್ರಕರಣಗಳು?

  • ಚಿಕ್ಕಮಗಳೂರು:112
  • ಕಡೂರು:183
  • ತರೀಕೆರೆ :179
  • ಮೂಡಿಗೆರೆ ‌:194
  • ಕೊಪ್ಪ:218
  • ಎನ್‌.ಆರ್‌.ಪುರ:48
  • ಶೃಂಗೇರಿ:78

ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರ ಆಕ್ರೋಶ

ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಸ್ಥಳೀಯ ಆಡಳಿತ ಹಾಗೂ ನಗರಸಭೆ ಸೂಕ್ತ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ವಿಶೇಷವಾಗಿ ಶಾಲೆಗೆ ಹೋಗುವ ಮಕ್ಕಳು ಹಾಗೂ ಬೆಳಗಿನ ಜಾವ ಕೆಲಸಕ್ಕೆ ತೆರಳುವ ನಾಗರಿಕರು ಭಯಭೀತರಾಗಿದ್ದಾರೆ. ಬೀದಿ ನಾಯಿಗಳ ಸಂತಾನ ನಿಯಂತ್ರಣ, ಲಸಿಕೆ ಮತ್ತು ಪುನರ್ವಸತಿ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಸಾರ್ವಜನಿಕರು ಆಡಳಿತಕ್ಕೆ ಒತ್ತಾಯಿಸುತ್ತಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ದೊರಕದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ; 7 ಮಂದಿ ವಿರುದ್ಧ ಎಫ್‌ಐಆರ್ – Kannada News | Mysuru Bank Fraud: Seven Booked for Pawning Fake Gold at Mercantile Bank

ಮೈಸೂರು, ಜನವರಿ 30: ಜಿಲ್ಲೆಯ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ತಮಿಳುನಾಡು ಮೂಲದ ಮರ್ಕೆಂಟೈಲ್ ಬ್ಯಾಂಕ್‌ನಲ್ಲಿ ನಕಲಿ ಚಿನ್ನಾಭರಣಗಳನ್ನು ಗಿರವಿ ಇಟ್ಟು 56.78 ಲಕ್ಷ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಬ್ಯಾಂಕ್ ಸಿಬ್ಬಂದಿ ಸುರೇಶ್ ಕಣ್ಣನ್ ನೀಡಿದ ದೂರಿನ ಆಧಾರದ ಮೇಲೆ ದೇವರಾಜ ಪೊಲೀಸ್ ಠಾಣೆಯಲ್ಲಿ ಏಳು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮೈಸೂರಿನ ಅಬ್ದುಲ್ ಜಲೀಲ್, ಮಂಡ್ಯದ ಸಾಗರ್, ಪುಟ್ಟರಾಜು, ರವಿಕುಮಾರ್, ಆತನ ಪತ್ನಿ ದಿವ್ಯ, ಬೆಂಗಳೂರಿನ ನಾಗರತ್ನ ರೆಡ್ಡಿ ಹಾಗೂ ಟಿ.ನರಸೀಪುರದ ರವೀಂದ್ರ ಕುಮಾರ್ ಆರೋಪಿಗಳಾಗಿದ್ದಾರೆ.

ರವೀಂದ್ರ ಕುಮಾರ್ ಬ್ಯಾಂಕ್‌ನ ಚಿನ್ನಾಭರಣ ಮೌಲ್ಯಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ವಂಚಕರೊಂದಿಗೆ ಶಾಮೀಲಾಗಿ ನಕಲಿ ಚಿನ್ನಾಭರಣಗಳನ್ನು ಮೌಲ್ಯಮಾಪನ ಮಾಡಿದ್ದಾರೆ ಎನ್ನಲಾಗಿದೆ. ಆರೋಪಿಗಳು ವಿವಿಧ ಹೆಸರುಗಳಲ್ಲಿ ಒಟ್ಟು 782 ಗ್ರಾಂ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ಪಡೆದಿದ್ದರು. 2026ರ ಜನವರಿ 26ರಂದು ಮರುಮೌಲ್ಯಮಾಪನ ವೇಳೆ ವಂಚನೆ ಪತ್ತೆಯಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಬೆಂಗಳೂರು ಏರ್​ಪೋರ್ಟ್​ನಲ್ಲಿ ಬಾಂಬ್ ಬೆದರಿಕೆ ಹಾಕಿದ ಯುವಕನ ಬಂಧನ – Kannada News | Bomb Threat at Kempegowda Airport: Passenger Arrested for Fake Bomb Scare in Bengaluru

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬಂಧಿತ ಆರೋಪಿ ಅಬು ಅಕಿಲ್ ಅಜರ್ ಚಾದ್Image Credit source: tv9

ದೇವನಹಳ್ಳಿ, ಜನವರಿ 30: ಬೆಂಗಳೂರು (Bangalore) ಅಹಮದಾಬಾದ್‌ ವಿಮಾನದ ಪ್ರಯಾಣಿಕನೊಬ್ಬ ಬ್ಯಾಗ್​ನಲ್ಲಿ ಬಾಂಬ್ ಇದೆ ಎಂದು ಬೆದರಿಕೆ (Bomb Threat) ಹಾಕಿದ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಶುಕ್ರವಾರ ನಡೆದಿದೆ. ಪರಿಣಾಮ ಕೆಲ ಕಾಲ ಏರ್​ಪೋರ್ಟ್​​ನಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಯಿತು. ಸದ್ಯ, ಬಾಂಬ್ ಬೆದರಿಕೆ ಹಾಕಿದ ಬೆಂಗಳೂರು ಮೂಲದ ಅಬು ಅಕಿಲ್ ಅಜರ್ ಚಾದ್ ಎಂಬಾತನನ್ನು ಏರ್‌ಪೋರ್ಟ್ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೆಂಗಳೂರಿನಿಂದ ಅಹಮದಾಬಾದ್‌ಗೆ ತೆರಳಲು ಆಗಮಿಸಿದ್ದ ಅಬು ಅಕಿಲ್, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವೇಶದ ವೇಳೆ ತಪಾಸಣೆಗೆ ಒಳಗಾಗಿದ್ದ. ಈ ವೇಳೆ ಭದ್ರತಾ ನಿಯಮಾನುಸಾರ ಎರಡು ಹಂತಗಳಲ್ಲಿ ಬ್ಯಾಗ್ ಪರಿಶೀಲನೆ ನಡೆಸಲಾಗಿತ್ತು. ಇದರಿಂದ ಅಸಮಾಧಾನಗೊಂಡ ಅಬು ಅಕಿಲ್, ತನ್ನ ಬ್ಯಾಗ್‌ನಲ್ಲಿ ಎರಡು ಸಣ್ಣ ಬಾಂಬ್‌ಗಳಿವೆ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಬೆದರಿಕೆ ವಿಚಾರ ತಿಳಿದ ಕೂಡಲೇ ಎಚ್ಚೆತ್ತ ಏರ್‌ಪೋರ್ಟ್ ಭದ್ರತಾ ಸಿಬ್ಬಂದಿ, ಆರೋಪಿಯನ್ನು ತಕ್ಷಣ ವಶಕ್ಕೆ ಪಡೆದು, ಬ್ಯಾಗ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಿದರು. ಪರಿಶೀಲನೆಯಲ್ಲಿ ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ. ಆದರೂ ಬಾಂಬ್ ಬೆದರಿಕೆ ಹಾಕಿದ ಕಾರಣ ಆರೋಪಿಯನ್ನು ಕೆಂಪೇಗೌಡ ಏರ್‌ಪೋರ್ಟ್ ಪೊಲೀಸ್ ಠಾಣೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಈ ಸಂಬಂಧ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಇಂತಹ ಬೆದರಿಕೆಗಳನ್ನು ಲಘುವಾಗಿ ಪರಿಗಣಿಸಲಾಗುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇತ್ತೀಚಿನ ದಿನಗಳಲ್ಲಿ ಹುಸಿ ಬಾಂಬ್ ಬೆದರಿಕೆಗಳು ಹೆಚ್ಚಾಗಿವೆ. ಕಳೆದ ನವೆಂಬರ್​​ನಲ್ಲಿ ಉಗ್ರ ಸಂಘಟನೆ ಹೆಸರಿನಲ್ಲಿ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿತ್ತು. ನವೆಂಬರ್ 30 ರಂದು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ಹೆಸರಿನಲ್ಲಿ ವಿಮಾನ ನಿಲ್ದಾಣ ಮತ್ತು ಪ್ರಮುಖ ಮಾಲ್‌ಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ ರವಾನೆಯಾಗಿತ್ತು. ಇದೇ ತಿಂಗಳ (ಜನವರಿ) 14ರಂದು ವಿಮಾನ ನಿಲ್ದಾಣದ ಟರ್ಮಿನಲ್‌ಗಳಲ್ಲಿ ಆತ್ಮಾಹುತಿ ದಾಳಿ ನಡೆಸುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿತ್ತು.

ಇದನ್ನೂ ಓದಿ: ಚಾಮರಾಜನಗರ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ: ನೌಕರರಿಗೆ ರಜೆ ಘೋಷಣೆ

ಕಳೆದ ವರ್ಷ ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನದ ವೇಳೆಯೂ ಡ್ರೋನ್ ದಾಳಿಯ ಬೆದರಿಕೆ ಇ-ಮೇಲ್ ಬಂದಿತ್ತು. 2025 ರ ಅಕ್ಟೋಬರ್ 22 ರಿಂದ 28 ರ ಅವಧಿಯಲ್ಲಿ ಸತತವಾಗಿ ಹಲವು ಬಾರಿ ಹುಸಿ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದವು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chartered Co-op Bank Recruitment 2026: ಚಾರ್ಟರ್ಡ್ ಸಹಕಾರಿ ಬ್ಯಾಂಕ್​ನಲ್ಲಿ ಜೂ.ಅಸಿಸ್ಟೆಂಟ್ ಮತ್ತು ಡ್ರೈವರ್ ಹುದ್ದೆಗೆ ಅರ್ಜಿ ಆಹ್ವಾನ – Kannada News | Chartered Co op Bank Recruitment 2026: Jr Assistant and Driver Jobs in Bengaluru, Apply Now!

ಬೆಂಗಳೂರು ಹಾಗೂ ಕರ್ನಾಟಕ ಸರ್ಕಾರದ ವಲಯದಲ್ಲಿ ಭದ್ರ ಮತ್ತು ಗೌರವಯುತ ವೃತ್ತಿಜೀವನವನ್ನು ಕನಸು ಕಾಣುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇದು ಒಳ್ಳೆಯ ಸುದ್ದಿ. ಚಾರ್ಟರ್ಡ್ ಸಹಕಾರಿ ಬ್ಯಾಂಕ್ 2026ರ ಅಧಿಕೃತ ಅಧಿಸೂಚನೆಯ ಮೂಲಕ ಜೂನಿಯರ್ ಅಸಿಸ್ಟೆಂಟ್ ಮತ್ತು ಡ್ರೈವರ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 9 ಹುದ್ದೆಗಳು ಭರ್ತಿಯಾಗಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಯಲಿದೆ. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 18 ರೊಳಗೆ ಅರ್ಜಿ ಸಲ್ಲಿಸಬಹುದು.

ಶೈಕ್ಷಣಿಕ ಅರ್ಹತೆ:

ಚಾರ್ಟರ್ಡ್ ಸಹಕಾರಿ ಬ್ಯಾಂಕ್‌ನ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, ಪದವಿ, ಬಿ.ಕಾಂ, ಎಂ.ಕಾಂ ಅಥವಾ ಎಂಬಿಎ ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ:

  • ಕನಿಷ್ಠ ವಯಸ್ಸು: 18 ವರ್ಷ
  • ಗರಿಷ್ಠ ವಯಸ್ಸು: 40 ವರ್ಷ

ವಯಸ್ಸಿನ ಸಡಿಲಿಕೆಗಳ ಕುರಿತು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವುದು ಒಳಿತು.

ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಭರ್ತಿಗೊಂಡ ಅರ್ಜಿ ನಮೂನೆಯನ್ನು ಅಗತ್ಯವಿರುವ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:

ಚಾರ್ಟರ್ಡ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ , ನಂ–1, 1ನೇ ಮುಖ್ಯ ರಸ್ತೆ, 1ನೇ ಬ್ಲಾಕ್, ಕೋರಮಂಗಲ, ಬೆಂಗಳೂರು – 560034

ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 312 ಹುದ್ದೆಗಳಿಗೆ ಅರ್ಜಿ ಆಹ್ವಾನ; ಪದವೀಧರರು ಅರ್ಹರು

ಅರ್ಜಿ ಸಲ್ಲಿಸಲು ಹಂತಗಳು:

  • ಮೊದಲು ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಮತ್ತು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಿರುವುದನ್ನು ಖಚಿತಪಡಿಸಿಕೊಳ್ಳಿ.
  • ಮಾನ್ಯ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸಿದ್ಧವಾಗಿಟ್ಟುಕೊಳ್ಳಿ. ವಯಸ್ಸು, ಶೈಕ್ಷಣಿಕ ಅರ್ಹತೆ, ಐಡಿ ಪ್ರೂಫ್, ಇತ್ತೀಚಿನ ಛಾಯಾಚಿತ್ರ, ರೆಸ್ಯೂಮ್ ಹಾಗೂ ಅನುಭವ ಪ್ರಮಾಣಪತ್ರಗಳು (ಇದ್ದಲ್ಲಿ) ಸಿದ್ಧಪಡಿಸಿಕೊಳ್ಳಿ.
  • ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ.
  • ಅರ್ಜಿ ಶುಲ್ಕ ಅನ್ವಯಿಸಿದರೆ, ನಿಮ್ಮ ವರ್ಗದ ಪ್ರಕಾರ ಪಾವತಿಸಿ. ಅರ್ಜಿಯಲ್ಲಿನ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ.
  • ಅಂತಿಮವಾಗಿ, ಭರ್ತಿಗೊಂಡ ಅರ್ಜಿಯನ್ನು ನಿಗದಿತ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್ / ಸ್ಪೀಡ್ ಪೋಸ್ಟ್ ಅಥವಾ ಯಾವುದೇ ವಿಶ್ವಾಸಾರ್ಹ ಸೇವೆಯ ಮೂಲಕ ಕಳುಹಿಸಿ.

ಸರ್ಕಾರಿ ವಲಯದಲ್ಲಿ ಭದ್ರ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ. ಅರ್ಹರಾಗಿರುವವರು ಕೊನೆಯ ದಿನಾಂಕದೊಳಗೆ ತಪ್ಪದೇ ಅರ್ಜಿ ಸಲ್ಲಿಸಿ ಮತ್ತು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶ್ರವಣ ನಕ್ಷತ್ರದಲ್ಲಿ ಸೂರ್ಯ, ಬುಧ, ಶುಕ್ರ ಮತ್ತು ಮಂಗಳ ಸಂಯೋಗ; ಜ್ಯೋತಿಷ್ಯ ವಿಶ್ಲೇಷಣೆ ಪ್ರಕಾರ ಇವರಿಗೆಲ್ಲಾ ಲಾಭ – Kannada News | Sun, Mercury, Venus, and Mars Conjunction in Shravana Nakshatra, Capricorn: Astrological Impacts and Benefits for 12 zodiac signs

ಗ್ರಹಗಳು ಒಂದೇ ರಾಶಿಯಲ್ಲಿ ಬರುವುದು ಒಂದಾದರೆ, ಒಂದೇ ನಕ್ಷತ್ರದಲ್ಲಿ ಇರುವುದು ಮತ್ತೂ ಸಾಮಿಪ್ಯವನ್ನು ಹೇಳುತ್ತದೆ. ಒಂದೇ ಪಾದವಂತೂ ನಿಕಟವರ್ತಿತ್ವದ ಸೂಚಕ. ಈ ವಾರ ಸೂರ್ಯ, ಬುಧ, ಶುಕ್ರ ಮತ್ತು ಮಂಗಳ ಈ ನಾಲ್ಕು ಪ್ರಮುಖ ಗ್ರಹಗಳು ಶ್ರವಣ ನಕ್ಷತ್ರದಲ್ಲಿ ಅಂದರೆ ಮಕರ ರಾಶಿಯಲ್ಲಿ ಒಂದೇ ಬಾರಿಗೆ ಸಂಧಿಸಿದಾಗ ಅದು ಅತ್ಯಂತ ಪ್ರಭಾವಶಾಲಿ ಸಮಯವಾಗಿರುತ್ತದೆ. ಶ್ರವಣ ನಕ್ಷತ್ರವು ಚಂದ್ರನ ಆಧಿಪತ್ಯದಲ್ಲಿದ್ದು, ಮನಸ್ಸು, ತಾಯಿ, ನೀರಿಗೆ ಸಂಬಂಧಿಸಿದ ವಿಚಾರ, ಜ್ಞಾನ ಮತ್ತು ಶಿಸ್ತಿನ ಸಂಕೇತವಾಗಿದೆ. ​ಈ ಸಂಯೋಜನೆಯಿಂದ ಜ್ಯೋತಿಷ್ಯ ರಿತ್ಯಾ ಬಗ್ಗೋಣ ಪಂಚಾಂಗ ವಿಶ್ಲೇಷಣೆಯ ಪ್ರಕಾರ ಯಾವ ರಾಶಿಗಳಿಗೆ ಏನು ಫಲ ಇಲ್ಲಿದೆ:

ಶುಭ ಫಲ ರಾಶಿಗಳು

​ಮಕರ:
ನಿಮ್ಮದೇ ರಾಶಿಯಲ್ಲಿ ಗ್ರಹಗಳ ಸಮ್ಮಿಲನವಿರುವುದರಿಂದ ಆತ್ಮವಿಶ್ವಾಸ ಹೆಚ್ಚಲಿದೆ. ವೃತ್ತಿಯಲ್ಲಿ ದೊಡ್ಡ ಬದಲಾವಣೆ ಮತ್ತು ಗೌರವ ಪ್ರಾಪ್ತಿಯಾಗಲಿದೆ.

ವೃಷಭ:
ಭಾಗ್ಯ ಸ್ಥಾನದಲ್ಲಿ ಈ ಗ್ರಹಗಳಿರುವುದರಿಂದ ಅದೃಷ್ಟ ಒಲಿಯಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮತ್ತು ವಿದೇಶ ಪ್ರಯಾಣದ ಯೋಗವಿದೆ.

ಕನ್ಯಾ:
ಪಂಚಮ ಸ್ಥಾನದಲ್ಲಿ ಈ ಸಂಯೋಜನೆ ಇರುವುದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಜಯ, ಮಕ್ಕಳಿಂದ ಸುಖ ಮತ್ತು ಆಕಸ್ಮಿಕ ಧನಲಾಭವಾಗಲಿದೆ.

ಮಿಶ್ರ ಫಲ ರಾಶಿಗಳು

​ಮೇಷ:
ದಶಮ ಸ್ಥಾನದಲ್ಲಿ ಗ್ರಹಗಳಿರುವುದರಿಂದ ಕೆಲಸದಲ್ಲಿ ಒತ್ತಡವಿದ್ದರೂ ಯಶಸ್ಸು ಸಿಗಲಿದೆ.

​ಕರ್ಕಾಟಕ:
ಸಪ್ತಮ ಸ್ಥಾನದಲ್ಲಿ ಗ್ರಹಗಳಿರುವುದರಿಂದ ವೈವಾಹಿಕ ಜೀವನದಲ್ಲಿ ಮಿಶ್ರ ಫಲ ಇರಲಿದೆ. ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರಬಹುದು.

​ವೃಶ್ಚಿಕ:
ಧೈರ್ಯ ಹೆಚ್ಚಲಿದೆ, ಆದರೆ ಸಹೋದರರೊಂದಿಗೆ ಜಾಗರೂಕತೆಯಿಂದ ಇರಿ.

​ಅಶುಭ ಫಲ ರಾಶಿಗಳು

​ಧನು:
ದ್ವಿತೀಯ ಸ್ಥಾನದಲ್ಲಿ ಮಂಗಳ ಮತ್ತು ಸೂರ್ಯ ಇರುವುದರಿಂದ ಮಾತಿನಲ್ಲಿ ಕಟುತ್ವ ಬರಬಹುದು. ಕುಟುಂಬದಲ್ಲಿ ಕಲಹ ಸಾಧ್ಯತೆ, ಹಣಕಾಸಿನ ವ್ಯಯವಾಗಬಹುದು.

​ಮಿಥುನ:
ಅಷ್ಟಮ ಸ್ಥಾನದಲ್ಲಿ ಈ ಗ್ರಹಗಳಿರುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವಾಹನ ಚಾಲನೆಯಲ್ಲಿ ಜಾಗ್ರತೆ ಅಗತ್ಯ.

​ಕುಂಭ:
ವ್ಯಯ ಸ್ಥಾನದಲ್ಲಿ ಗ್ರಹಗಳಿರುವುದರಿಂದ ಅನಗತ್ಯ ಖರ್ಚುಗಳು ಹೆಚ್ಚಾಗಲಿವೆ ಮತ್ತು ನಿದ್ರಾಹೀನತೆ ಕಾಡಬಹುದು.

– ಲೋಹಿತ ಹೆಬ್ಬಾರ್

Source link

ಅಕ್ಷಯ್ ಕುಮಾರ್ ಯಶಸ್ಸಿನ ಗುಟ್ಟು ಬಹಳ ಸರಳ: ನೀವೂ ಪಾಲಿಸಿ – Kannada News | Akshay Kumar talks about how he got opportunities

ಅಕ್ಷಯ್ ಕುಮಾರ್ (Akshay Kumar), ಭಾರತದ ಅತ್ಯಂತ ಬ್ಯುಸಿ ಸೂಪರ್ ಸ್ಟಾರ್. ಭಾರತದ ಇತರೆ ಸ್ಟಾರ್ ನಟರು ವರ್ಷಕ್ಕೆ ಒಂದು ಸಿನಿಮಾ ನೀಡಲು ಏದುಸಿರು ಬಿಡುತ್ತಿರುವಾಗ ಅಕ್ಷಯ್ ಕುಮಾರ್ ಅನಾಯಾಸವಾಗಿ ಐದಾರು ಸಿನಿಮಾಗಳನ್ನು ಪ್ರತಿ ವರ್ಷ ತೆರೆಗೆ ತರುತ್ತಿರುತ್ತಾರೆ. ಸಿನಿಮಾಗಳು ಮಾತ್ರವೇ ಅಲ್ಲದೆ, ಖಾಸಗಿ ಕಾರ್ಯಕ್ರಮಗಳು ಇದೀಗ ಟಿವಿ ರಿಯಾಲಿಟಿ ಶೋ ಅನ್ನೂ ಸಹ ನಡೆಸಿಕೊಡುತ್ತಾರೆ. ಅಷ್ಟಕ್ಕೂ ಸಾಮಾನ್ಯ ಕರಾಟೆ ಶಿಕ್ಷಕ ಹಾಗೂ ಬಾಣಸಿಗ ಆಗಿದ್ದ ಅಕ್ಷಯ್ ಕುಮಾರ್ ಅವರಿಗೆ ಇಷ್ಟು ದೊಡ್ಡ ಯಶಸ್ಸು ದೊರೆತಿದ್ದು ಹೇಗೆ? ಅವರೇ ಆ ಗುಟ್ಟನ್ನು ರಟ್ಟು ಮಾಡಿದ್ದಾರೆ.

ಅಕ್ಷಯ್ ಕುಮಾರ್, ಒಬ್ಬ ಸಮರ ಕಲೆ ಕಲಿಸುವ ಶಿಕ್ಷಕರಾಗಿದ್ದರು, ಅದಕ್ಕೂ ಮುಂಚೆ ಅವರೊಬ್ಬ ಬಾಣಸಿಗ ಆಗಿದ್ದರು. ಆದರೆ ಅವರ ಸತತ ಪರಿಶ್ರಮ ಅವರನ್ನು ಇಂದು ಭಾರತದ ಅತ್ಯಂತ ಬ್ಯುಸಿ ಸ್ಟಾರ್ ಮಾತ್ರವಲ್ಲ, ಭಾರತದ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರನ್ನಾಗಿ ಮಾಡಿದೆ. ಇದೀಗ ಅಕ್ಷಯ್ ಅವರು ‘ಇಂಡಿಯಾಸ್ ವೀಳ್ ಆಫ್ ಫಾರ್ಚ್ಯೂನ್’ ಟಿವಿ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದು, ಶೋನ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಆಯೋಜಿಸಲಾಗಿದ್ದ ಗೋಷ್ಠಿಯಲ್ಲಿ ತಮ್ಮ ಯಶಸ್ಸಿನ ಹಿಂದಿನ ಸರಳ ಸೂತ್ರದ ಬಗ್ಗೆ ಮಾತನಾಡಿದ್ದಾರೆ.

ಅಕ್ಷಯ್ ಹೇಳಿರುವಂತೆ, ಅವರ ಯಶಸ್ಸಿಗೆ ಮುಖ್ಯ ಕಾರಣ ಅವರ ಶಿಸ್ತು ಮತ್ತು ಸಮಯ ಪಾಲನೆ. ಅಕ್ಷಯ್ ಹೇಳಿರುವಂತೆ ಅವರು ಈ ವರೆಗೆ ಸಮಯ ಪಾಲನೆ ತಪ್ಪಿಸಿಲ್ಲವಂತೆ. ಇಂದೂ ಅಷ್ಟೆ ಆರಂಭದ ದಿನಗಳಲ್ಲೂ ಅಷ್ಟೆ. ನಿಮಗೆ ಅವಕಾಶಗಳು ಬೇಕಿದ್ದರೆ ಸಮಯಕ್ಕೆ ಸರಿಯಾಗಿ ನೀವು ಆ ಸ್ಥಳದಲ್ಲಿ ಇರಬೇಕು. ಇಲ್ಲವಾದರೆ ಆ ಅವಕಾಶ ಬೇರೆಯವರ ಪಾಲಾಗುತ್ತದೆ. ನಾನು ಸಮಯ ಪಾಲನೆ ಮೂಲಕ ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ಇದ್ದೆ ಹಾಗಾಗಿ ನಾನು ಯಾವ ಅವಕಾಶಗಳನ್ನೂ ಸಹ ಮಿಸ್ ಮಾಡಿಕೊಳ್ಳಲಿಲ್ಲ’ ಎಂದಿದ್ದಾರೆ ಅಕ್ಷಯ್ ಕುಮಾರ್.

ಇದನ್ನೂ ಓದಿ:ತಮ್ಮ ಹೆಸರು ಬದಲಿಸಿದ್ದೇಕೆ ಅಕ್ಷಯ್ ಕುಮಾರ್? ಕಾರಣ ವಿವರಿಸಿದ ನಟ

‘ಯಾವುದೋ ಒಂದು ಸಂದರ್ಭ, ಒಂದು ಘಳಿಗೆ ನನ್ನ ಜೀವನವನ್ನು ಬದಲಾಯಿಸಲಿಲ್ಲ ಬದಲಿಗೆ ನನ್ನ ಯಶಸ್ಸು ಸತತ ಪ್ರಯತ್ನ, ಸತತ ಶಿಸ್ತು, ಸಮಯ ಪಾಲನೆ, ಸೂಕ್ತ ಆಯ್ಕೆಗಳಿಂದ ಬಂದಿದೆ. ಇದೆಲ್ಲದಕ್ಕಿಂತಲೂ ನಾನು ಆರಾಮದ ಬದಲಿಗೆ ಶ್ರಮವನ್ನು ಆಯ್ಕೆ ಮಾಡಿಕೊಂಡೆ ಅದಕ್ಕಾಗಿ ನನಗೆ ಈ ಯಶಸ್ಸು ದೊರಕಿದೆ. ನನಗೆ ಸಿಕ್ಕಿರುವ ಪ್ರತಿ ಅವಕಾಶವೂ ನನ್ನ ಸಮಯ ಪಾಲನೆ, ಶ್ರಮ ಮತ್ತು ನನ್ನ ಕಲೆಗೆ, ಪ್ರತಿಭೆಗೆ ನಾನು ನ್ಯಾಯ ಒದಗಿಸಿದ್ದರಿಂದಲೇ ದೊರೆತಿದೆ’ ಎಂದಿದ್ದಾರೆ ಅಕ್ಷಯ್ ಕುಮಾರ್.

2025 ರಲ್ಲಿ ಅಕ್ಷಯ್ ಕುಮಾರ್ ನಟಿಸಿರುವ ಐದು ಸಿನಿಮಾಗಳು ಬಿಡುಗಡೆ ಆಗಿದ್ದವು. 2026ರ ಮೊದಲ ತಿಂಗಳಲ್ಲೇ ಅವರ ಕೈಯಲ್ಲಿ ನಾಲ್ಕು ಸಿನಿಮಾಗಳಿವೆ. ಅವುಗಳಲ್ಲಿ ಎರಡು ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದೆ. ಇದೀಗ ಹೊಸ ರಿಯಾಲಿಟಿ ಶೋ ಅನ್ನು ಸಹ ನಡೆಸಿಕೊಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version