8ನೇ ತರಗತಿಯ ವಿದ್ಯಾರ್ಥಿ ಕಣ್ಣಿಗೆ ಬಿದ್ದ ನಿಧಿಯ ಪಾತ್ರೆ: ಈ ಚಿನ್ನ ಯಾರಿಗೆ ಸೇರಲಿದೆ ಗೊತ್ತಾ? – Kannada News | Ancient Gold Unearthed in Lakkundi: Prajwal Rittis Integrity Praised in Historic Find
ಗದಗ, ಜ.10: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ರಾಜರ ಕಾಲದ ಅಪಾರ ಚಿನ್ನಾಭರಣಗಳ ನಿಧಿ ಪತ್ತೆಯಾಗಿದ್ದು, ಇದು ಇಡೀ ರಾಜ್ಯದ ಗಮನ ಸೆಳೆದಿದೆ. ಲಕ್ಕುಂಡಿ ಗ್ರಾಮದ ವಾರ್ಡ್ ನಂಬರ್ ನಾಲ್ಕರಲ್ಲಿರುವ ಗಂಗವ್ವ ಬಸವರಾಜ ರಿತ್ತಿ ಅವರ ಮನೆ ಜಾಗದಲ್ಲಿ ಅಡಿಪಾಯ ಅಗೆಯುವ ಸಂದರ್ಭದಲ್ಲಿ, 8ನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ ರಿತ್ತಿ ಎಂಬುವರಿಗೆ ಒಂದು ತಾಮ್ರದ ಚಂಬಿನಲ್ಲಿ ಚಿನ್ನಾಭರಣಗಳು ಸಿಕ್ಕಿವೆ. ಪ್ರಾಥಮಿಕ ಮಾಹಿತಿ ಪ್ರಕಾರ, ಪ್ರಜ್ವಲ್ಗೆ ತಾಮ್ರದ ಮಡಿಕೆಯಲ್ಲಿ ನಿಧಿ ಸಿಕ್ಕಿದೆ ಎಂಬ ಮಾಹಿತಿ ಮಧ್ಯಾಹ್ನ 2:30 ರಿಂದ…