ನಿವೃತ್ತಿ ಬಗ್ಗೆ ಯೋಚಿಸಿದ್ದೆ..! ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್

ಪ್ರಸ್ತುತ ಭಾರತದ ಟೆಸ್ಟ್ ಹಾಗೂ ಏಕದಿನ ತಂಡದ ಅತ್ಯಂತ ವಿಶ್ವಾಸಾರ್ಹ ಬ್ಯಾಟ್ಸ್‌ಮನ್ ಎಂದರೆ ಅದು ಕನ್ನಡಿಗ ಕೆ.ಎಲ್. ರಾಹುಲ್. ಕೆಎಲ್ ರಾಹುಲ್ ಭಾರತೀಯ ಟೆಸ್ಟ್ ತಂಡದಲ್ಲಿ ಆರಂಭಿಕ ಆಟಗಾರನಾಗಿ ಆಡುತ್ತಿದ್ದಾರೆ. ವಿಶೇಷವೆಂದರೆ ಅವರು ಏಕದಿನ ತಂಡದಲ್ಲಿ ಮ್ಯಾಚ್ ಫಿನಿಷರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದಲ್ಲದೇ ವಿಕೆಟ್ ಕೀಪರ್ ಪಾತ್ರವನ್ನೂ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಈ ಎರಡೂ ಸ್ವರೂಪಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಕೆಎಲ್ ರಾಹುಲ್, ಸಂದರ್ಶನವೊಂದರಲ್ಲಿ ನಿವೃತ್ತಿ ಹೊಂದುವ ಬಗ್ಗೆ ಯೋಚಿಸಿದ್ದೆ ಎಂದು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರೊಂದಿಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಕೆಎಲ್ ರಾಹುಲ್, ‘ನಾನು ನನ್ನ ಬಗ್ಗೆ ಪ್ರಾಮಾಣಿಕನಾಗಿದ್ದರೆ, ಆಟದಿಂದ ಹಿಂದೆ ಸರಿಯುವ ಸಮಯ ಬಂದಾಗ, ನಾನು ವಿಳಂಬ ಮಾಡುವುದಿಲ್ಲ. ಅದನ್ನು ವಿಳಂಬ ಮಾಡುವುದರಲ್ಲಿ ಅರ್ಥವಿಲ್ಲ. ನನಗೆ ಇನ್ನೂ ಸ್ವಲ್ಪ ಸಮಯ ಉಳಿದಿದೆ. ಆಟವನ್ನು ತೊರೆದ ನಂತರ ಮಾಡಲು ಹಲವು ಕೆಲಸಗಳಿವೆ. ಕುಟುಂಬದೊಂದಿಗೆ ಕಳೆಯಲು ಸಮಯವಿದೆ. ಇದು ಕಠಿಣ ಯುದ್ಧ. ನಾನು ತುಂಬಾ ಮುಖ್ಯನಲ್ಲ ಎಂದು ನಾನು ನನಗೆ ನಾನೇ ಹೇಳಿಕೊಳ್ಳಲು ಪ್ರಯತ್ನಿಸುತ್ತೇನೆ. ನನ್ನ ಹೊರತಾಗಿ, ನನ್ನ ದೇಶದ ಕ್ರಿಕೆಟ್ ಮುಂದುವರಿಯುತ್ತದೆ. ಕ್ರಿಕೆಟ್ ಕೂಡ ಜಗತ್ತಿನಲ್ಲಿ ಮುಂದುವರಿಯುತ್ತದೆ. ಜೀವನದಲ್ಲಿ ಇತರ ಪ್ರಮುಖ ವಿಷಯಗಳಿವೆ. ನನಗೆ ಮೊದಲ ಮಗು ಜನಿಸಿದಾಗಿನಿಂದ ಜೀವನದ ಬಗ್ಗೆ ನನ್ನ ದೃಷ್ಟಿಕೋನವು ಸಂಪೂರ್ಣವಾಗಿ ಬದಲಾಗಿದೆ’ ಎಂದಿದ್ದಾರೆ.

Source link

ಕೊನೆಗೂ ಎಚ್ಚೆತ್ತ ಸರ್ಕಾರ: ತುಮಕೂರಿನ ಸಿದ್ಧಗಂಗಾ ಮಠಕ್ಕೆ ಎದುರಾಗಿದ್ದ ನೀರಿನ ಆತಂಕ ದೂರ – Kannada News | Tumakuru: water crisis facing Siddaganga Mutt has been resolved; KIADB Clears BESCOM Dues

ತುಮಕೂರು, ಜನವರಿ 29: ಪಂಪ್ ಹೌಸ್​ನ ವಿದ್ಯುತ್ ಬಿಲ್ (Electricity bill) ಪಾವತಿಸದ ಪರಿಣಾಮ ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರಿನ ಸಂಪರ್ಕವನ್ನು ಕೆಐಎಡಿಬಿ ಅಧಿಕಾರಿಗಳು ಕಡಿತಗೊಳಿಸಿದ್ದರು. ಹೀಗಾಗಿ ಸಿದ್ಧಗಂಗಾ ಮಠಕ್ಕೆ ನೀರಿನ (Water) ಸಮಸ್ಯೆ ಆಗುವ ಆತಂಕ ಎದುರಾಗಿತ್ತು. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ಚರ್ಚೆ, ಟೀಕೆ ನಡೆದಿತ್ತು. ಟಿವಿ9 ವರದಿ ಕೂಡ ಮಾಡಿತ್ತು. ಇದೀಗ ವರದಿ ಬೆನ್ನಲ್ಲೇ ಬಾಕಿ ಉಳಿದಿದ್ದ ಸುಮಾರು 1.96 ಕೋಟಿ ರೂ ಹಣವನ್ನು ಬೆಸ್ಕಾಂಗೆ ಕೆಐಎಡಿಬಿ ಪಾವತಿಸಿದೆ. ಆ ಮೂಲಕ ಸಿದ್ದಗಂಗಾ ಮಠಕ್ಕೆ ಎದುರಾಗಿದ್ದ ನೀರಿನ ಆತಂಕ ಇದೀಗ ದೂರವಾಗಿದೆ.

ಕಳೆದ ವರ್ಷ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಸಿದ್ದಗಂಗಾ ಮಠಕ್ಕೆ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಅದರ ಪರಿಣಾಮ ಈ ವರ್ಷ ಮಠಕ್ಕೆ ನೀರಿನ ಅಭಾವ ಎದುರಾಗಿದೆ. ಹೊನ್ನೆನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರು ಹರಿಸಿ, ದೇವರಾಯಪಟ್ಟಣ ಕೆರೆಯಿಂದ ಮಠಕ್ಕೆ ನೀರು ಪಂಪ್ ಮಾಡಲಾಗುತ್ತದೆ.

ಇದನ್ನೂ ಓದಿ: ಮೆರವಣಿಗೆಗಳಲ್ಲಿ ಆನೆಗಳನ್ನು ಬಳಸುವುದು ಸರಿಯೇ? ಹೈಕೋರ್ಟ್​​​ ಆದೇಶದಲ್ಲಿ ಏನಿದೆ?

ಕಳೆದ ವರ್ಷ ಕೆಐಎಡಿಬಿ ಅಧಿಕಾರಿಗಳು ಹೊನ್ನೆನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ಪಂಪ್ ಮಾಡಿದ 70 ಲಕ್ಷ ರೂ ವಿದ್ಯುತ್ ಬಿಲ್ ಪಾವತಿಸುವಂತೆ ಮಠಕ್ಕೆ ನೋಟಿಸ್ ಕೊಟ್ಟಿತ್ತು. ಅಸಲಿಗೆ ಶ್ರೀಮಠ ಒಂದು ಹನಿ ನೀರನ್ನೂ ಉಪಯೋಗಿಸಿರಲಿಲ್ಲ. ಅಧಿಕಾರಿಗಳ ಈ ಎಡವಟ್ಟು ಗಮನಿಸಿದ ಕೈಗಾರಿಕಾ ಸಚಿವ ಎಂಬಿ ಪಾಟೀಲ್​, ಹಣವನ್ನು ನಾವೇ ಭರಿಸುತ್ತೇವೆ ಎಂದಿದ್ದರು. ಆದರೆ ಸಚಿವರು ಭರವಸೆ ಕೊಟ್ಟು ಒಂದು ವರ್ಷ ಆದರೂ ಕೆಐಎಡಿಬಿ ವಿದ್ಯುತ್ ಬಿಲ್ ಪಾವತಿ ಮಾಡಿರಲಿಲ್ಲ. ಬೆಸ್ಕಾಂ ಅಧಿಕಾರಿಗಳು ಹೊನ್ನೆನಹಳ್ಳಿಯಲ್ಲಿ ಇರುವ ನೀರು ಪಂಪ್ ಮಾಡುವ ಘಟಕದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಪ್ರತಿದಿನ ಲಕ್ಷಾಂತರ ಭಕ್ತರು ಬರುತ್ತಾರೆ. ಬಂದ ಭಕ್ತಾಧಿಗಳಿಗೆ ಊಟ‌, ವಸತಿ, ಸ್ನಾನಾದಿಗಳಿಗೆ ನೀರಿನ ಕೊರತೆ‌ ಉಂಟಾಗಬಹುದು. ಅಲ್ಲದೆ ನಿತ್ಯ 10 ಸಾವಿರ ವಿದ್ಯಾರ್ಥಿಗಳ ಉಪಯೋಗಕ್ಕೆ ನೀರಿನ ಅವಶ್ಯಕತೆ ಇದೆ. ಹಾಗಾಗಿ ಸಿದ್ದಗಂಗಾ ಮಠಕ್ಕೆ ಮತ್ತೆ ನೀರಿನ ಹಾಹಾಕಾರ ಎದುರಾಗಲಿದೆ ಎನ್ನಲಾಗುತ್ತಿತ್ತು.

ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿ 7ನೇ ಪುಣ್ಯ ಸಂಸ್ಮರಣೆ: ನಾಳೆ ತುಮಕೂರಿಗೆ ಉಪರಾಷ್ಟ್ರಪತಿ

ದೇವರಾಯಪಟ್ಟಣ ಕೆರೆಗೆ ಆರು ತಿಂಗಳಿಂದ ನೀರು ಬಾರದ ಹಿನ್ನೆಲೆ ಮಠ ಸೇರಿದಂತೆ ಸ್ಥಳೀಯ ರೈತರಿಗೂ ನೀರು ಸಿಗದ ಆತಂಕ ಶುರುವಾಗಿತ್ತು. ಹೀಗಾಗಿ ಸರ್ಕಾರ ಇದರ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿದ್ದರು. ಟಿವಿ9 ಕೂಡ ಈ ಕುರಿತು ವರದಿ ಮಾಡಿತ್ತು. ವರದಿ ಬಳಿಕ ಬಾಕಿ ಉಳಿದಿದ್ದ ಸುಮಾರು 1.96 ಕೋಟಿ ರೂ ಹಣವನ್ನು ಬೆಸ್ಕಾಂಗೆ ಕೆಐಎಡಿಬಿ ಪಾವತಿಸಿದೆ. ಇದರಿಂದ ಮಠಕ್ಕೆ ನೀರಿನ ಕೊರತೆಯ ಆತಂಕ ದೂರುವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

ಈ ಬಾರಿಯ ಬಜೆಟ್​ನಿಂದ ಇನ್ನಷ್ಟು ಸೂಕ್ಷ್ಮ ಕ್ರಮ ಎದುರು ನೋಡುತ್ತಿರುವ ಇನ್ಷೂರೆನ್ಸ್ ಸೆಕ್ಟರ್ – Kannada News | Insurance sector expectations from 2026 Budget

‘ಸೆಕ್ಷನ್ 80ಸಿ, 80ಸಿಸಿಸಿ, 80ಸಿಸಿಡಿ ಅಡಿಯಲ್ಲಿ ಟ್ಯಾಕ್ಸ್ ಇನ್ಸೆಂಟಿವ್​ಗಳನ್ನು ನೀಡುವುದರಿಂದ ಇನ್ಷೂರೆನ್ಸ್ ಬಳಕೆ ಮತ್ತು ದೀರ್ಘಾವಧಿ ಹಣ ಉಳಿತಾಯಕ್ಕೆ ಪ್ರೇರಣೆ ಸಿಗಬಹುದು. ಟರ್ಮ್ ಇನ್ಷೂರೆನ್ಸ್​ಗೆಯೇ ಪ್ರತ್ಯೇಕ ಟ್ಯಾಕ್ಸ್ ಡಿಡಕ್ಷನ್ ತರಬೇಕು’ ಎಂದು ಎಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಷೂರೆನ್ಸ್ ಸಂಸ್ಥೆಯ ಸಿಇಒ ಸುಮಿತ್ ಮದನ್ ಹೇಳಿದ್ದಾರೆ.

ಪಿಂಚಣಿದಾರರ ಆದಾಯದ ಮೇಲೆ ತೆರಿಗೆ ದೊಡ್ಡ ಹೊರೆಯಾಗುತ್ತದೆ. ಇತರ ನಿಶ್ಚಿತ ಬಡ್ಡಿ ಸ್ಕೀಮ್​ಗಳಲ್ಲಿರುವಂತೆ ಬಡ್ಡಿ ಅಥವಾ ಲಾಭಕ್ಕೆ ಮಾತ್ರವೇ ಟ್ಯಾಕ್ಸ್ ಹಾಕಬಹುದು. ಇದರಿಂದ ಪಿಂಚಣಿದಾರರಿಗೆ ನಿವೃತ್ತಿ ನಂತರದ ಆದಾಯ ಹೆಚ್ಚಲು ಸಾಧ್ಯವಾಗುತ್ತದೆ ಎಂದು ಟಾಟಾ ಎಐಎ ಲೈಫ್ ಇನ್ಷೂರೆನ್ಸ್ ಸಿಇಒ ವೆಂಕಿ ಅಯ್ಯರ್ ತಿಳಿಸಿದ್ದಾರೆ.

ಲೈಫ್ ಇನ್ಷೂರೆನ್ಸ್ ದೀರ್ಘಕಾಲದ ಸಾಮಾಜಿಕ ರಕ್ಷಣೆ ಉತ್ಪನ್ನವಾಗಿದೆ. ಟ್ಯಾಕ್ಸ್ ಎಕ್ಸೆಂಪ್ಷನ್ ಪಡೆಯುವ ಇನ್ಷೂರರ್​ಗಳಿಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅವಕಾಶ ಕೊಟ್ಟರೆ ವಿಮಾ ಉತ್ಪನ್ನವನ್ನು ಮತ್ತಷ್ಟು ಕಡಿಮೆ ಬೆಲೆಗೆ ಕೊಡಬಹುದು ಎಂಬುದು ಇಂಡಿಯಾಫಸ್ಟ್ ಲೈಫ್ ಇನ್ಷೂರೆನ್ಸ್ ಸಿಇಒ ರುಷಭ್ ಗಾಂಧಿ ಅನಿಸಿಕೆ.

ಹೊಸ ಟ್ಯಾಕ್ಸ್ ರೆಜೀಮ್​ನಲ್ಲಿ 80ಡಿ ಸೆಕ್ಷನ್​ಗೆ ಅವಕಾಶ ಕೊಡಬೇಕು. ಸದ್ಯ ಇರುವ 1 ಲಕ್ಷ ರೂ ಡಿಡಕ್ಷನ್ ಮಿತಿ ಯಾತಕ್ಕೂ ಸಾಲದು. ಇದನ್ನು 1.5 ಲಕ್ಷ ರೂಗೆ ಏರಿಸಬೇಕು. ಪರ್ಸನಲ್ ಆ್ಯಕ್ಸಿಡೆಂಟ್ ಮತ್ತು ಟ್ರಾವಲ್ ಇನ್ಷೂರೆನ್ಸ್ ಉತ್ಪನ್ನಗಳನ್ನೂ 80ಡಿ ಸೆಕ್ಷನ್ ವ್ಯಾಪ್ತಿಗೆ ತರುವುದು ಉತ್ತಮ ಎನ್ನುತ್ತಾರೆ ನಿವಾ ಬುಪಾ ಹೆಲ್ತ್ ಇನ್ಷೂರೆನ್ಸ್ ಸಿಇಒ ಕೃಷ್ಣನ್ ರಾಮಚಂದ್ರನ್.

ಭಾರತದ ಇನ್ಷೂರೆನ್ಸ್ ಸೆಕ್ಟರ್ ಸ್ಥಿರ ಪ್ರಗತಿ ಸಾಧಿಸಿದೆ. ಆದರೆ, ಹೆಚ್ಚು ಜನರನ್ನು ತಲಪುವ ನಿಟ್ಟಿನಲ್ಲಿ ಹಿಂದುಳಿದಿದೆ. ಅದರಲ್ಲೂ ರಿಟೈರ್ಮೆಂಟ್ ಪ್ಲಾನಿಂಗ್ ಮತ್ತು ಗ್ರಾಮೀಣ ರಕ್ಷಣೆ ವಿಚಾರದಲ್ಲಿ ವಿಮಾ ಕವರೇಜ್ ಕಡಿಮೆ ಇದೆ ಎಂದು ಬಜಾಜ್ ಲೈಫ್ ಇನ್ಷೂರೆನ್ಸ್ ಸಂಸ್ಥೆಯ ಸಿಇಒ ತರುಣ್ ಚುಗ್ ಅಭಿಪ್ರಾಯಪಟ್ಟಿದ್ಧಾರೆ.

Published On – 5:53 pm, Thu, 29 January 26

Source link

ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು? ರಚಿತಾ ರಾಮ್ ಹೇಳಿದ್ದೇನು? – Kannada News | Rachita Ram talks about landlord Kannada movie

ದುನಿಯಾ ವಿಜಯ್, ರಚಿತಾ ರಾಮ್ (Rachita Ram) ನಟನೆಯ ‘ಲ್ಯಾಂಡ್​ಲಾರ್ಡ್’ ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿದ್ದು, ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದ ಮಂದಿ ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದಾರೆ. ನಟಿ ರಚಿತಾ ರಾಮ್ ನಟನೆಗೆ ಸಖತ್ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಸಿನಿಮಾ ಬಗ್ಗೆ ನಟಿ ರಚಿತಾ ರಾಮ್ ಟಿವಿ9 ಜೊತೆಗೆ ಮಾತನಾಡಿದ್ದು, ತಮ್ಮ ಪಾತ್ರಕ್ಕೆ ಸಿಗುತ್ತಿರುವ ಮನ್ನಣೆಯ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಒಂದೊಮ್ಮೆ ದರ್ಶನ್ ಹೊರಗಿದ್ದು ‘ಲ್ಯಾಂಡ್ ಲಾರ್ಡ್’ ಸಿನಿಮಾ ನೋಡಿದ್ದರೆ ಏನು ಹೇಳುತ್ತಿದ್ದರು ಎಂಬುದನ್ನು ರಚಿತಾ ರಾಮ್ ಹೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Medical Career: ನೀಟ್ ಯುಜಿ ಪಾಸಾಗದೆಯೂ ನೀವು ವೈದ್ಯರಾಗಬಹುದು; ವಿವಿಧ ಕೋರ್ಸ್‌ಗಳ ವಿವರ ಇಲ್ಲಿದೆ – Kannada News | Medical Career Beyond NEET: Top Healthcare Courses After 12th

12ನೇ ತರಗತಿ ಮುಗಿಸಿದ ಬಳಿಕ ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿಜೀವನದ ಕನಸು ಕಾಣುವ ವಿದ್ಯಾರ್ಥಿಗಳಿಗೆ NEET ಪರೀಕ್ಷೆ ದೊಡ್ಡ ಅಡ್ಡಿಯಾಗುತ್ತದೆ ಎಂಬ ಭಾವನೆ ಸಾಮಾನ್ಯವಾಗಿದೆ. ಆದರೆ NEET ನಲ್ಲಿ ಉತ್ತೀರ್ಣರಾಗದಿದ್ದರೂ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ವೃತ್ತಿ ನಿರ್ಮಿಸಬಹುದು ಎಂಬುದು ಸತ್ಯ. MBBS ಮಾತ್ರವಲ್ಲದೆ, ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಗೌರವಾನ್ವಿತ ಮತ್ತು ಉತ್ತಮ ಉದ್ಯೋಗಾವಕಾಶಗಳನ್ನು ನೀಡುವ ಕೋರ್ಸ್‌ಗಳು ಲಭ್ಯವಿವೆ.

NEET ಅಗತ್ಯವಿರುವ ವೈದ್ಯಕೀಯ ಕೋರ್ಸ್‌ಗಳು:

  • MBBS: ಭಾರತದ ಅತ್ಯಂತ ಪ್ರತಿಷ್ಠಿತ ವೈದ್ಯಕೀಯ ಕೋರ್ಸ್. NEET-UG ಮೂಲಕ ಪ್ರವೇಶ. ಅವಧಿ 5.5 ವರ್ಷಗಳು. ವೈದ್ಯ, ಶಸ್ತ್ರಚಿಕಿತ್ಸಕ, ಸಂಶೋಧಕನಾಗಿ ವೃತ್ತಿ ಅವಕಾಶಗಳು.
  • BDS (ದಂತ ವೈದ್ಯಕೀಯ): ದಂತ ಮತ್ತು ಬಾಯಿಯ ಆರೋಗ್ಯದಲ್ಲಿ ಆಸಕ್ತಿ ಇರುವವರಿಗೆ ಉತ್ತಮ ಆಯ್ಕೆ. ಅವಧಿ 5 ವರ್ಷಗಳು. ಖಾಸಗಿ ಕ್ಲಿನಿಕ್ ಅಥವಾ ಆಸ್ಪತ್ರೆಗಳಲ್ಲಿ ಉದ್ಯೋಗ ಸಾಧ್ಯ.
  • ಆಯುಷ್ ಕೋರ್ಸ್‌ಗಳು (BAMS, BHMS, BUMS): ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿ ವೈದ್ಯಕೀಯದಲ್ಲಿ ವೃತ್ತಿ ನಿರ್ಮಿಸಲು ಅವಕಾಶ. ಪರ್ಯಾಯ ಚಿಕಿತ್ಸೆಗೆ ಬೇಡಿಕೆ ಹೆಚ್ಚುತ್ತಿದೆ.
  • BVSc & AH: ಪ್ರಾಣಿಗಳ ಆರೈಕೆಯಲ್ಲಿ ಆಸಕ್ತಿ ಇರುವವರಿಗೆ ಪಶುವೈದ್ಯಕೀಯ ಉತ್ತಮ ಆಯ್ಕೆ. ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಉದ್ಯೋಗ.
  • BSc ನರ್ಸಿಂಗ್: ಆರೋಗ್ಯ ವ್ಯವಸ್ಥೆಯ ಪ್ರಮುಖ ಕಂಬ. ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳಲ್ಲಿ ಉತ್ತಮ ಅವಕಾಶಗಳು.

ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 312 ಹುದ್ದೆಗಳಿಗೆ ಅರ್ಜಿ ಆಹ್ವಾನ; ಪದವೀಧರರು ಅರ್ಹರು

NEET ಇಲ್ಲದೆ ಮಾಡಬಹುದಾದ ವೈದ್ಯಕೀಯ ಕೋರ್ಸ್‌ಗಳು:

  • ANM / GNM ನರ್ಸಿಂಗ್: NEET ಇಲ್ಲದೆ ನರ್ಸಿಂಗ್ ವೃತ್ತಿ ಆರಂಭಿಸಲು ಉತ್ತಮ ಮಾರ್ಗ.
  • BSc ಮೆಡಿಕಲ್ ಲ್ಯಾಬ್ ಟೆಕ್ನಾಲಜಿ (MLT): ಪ್ರಯೋಗಾಲಯ ಪರೀಕ್ಷೆಗಳ ಕ್ಷೇತ್ರದಲ್ಲಿ ಉದ್ಯೋಗಾವಕಾಶ.
  • ಫಾರ್ಮಸಿ (B.Pharm): ಔಷಧ ಉತ್ಪಾದನೆ, ವಿತರಣೆ ಮತ್ತು ಫಾರ್ಮಾಸಿಸ್ಟ್ ವೃತ್ತಿಗೆ ಅವಕಾಶ.
  • ಫಿಸಿಯೋಥೆರಪಿ (BPT): ಭೌತಚಿಕಿತ್ಸೆಯ ಮೂಲಕ ರೋಗಿಗಳ ಪುನರ್ವಸತಿಗೆ ಸಹಾಯ. ಕ್ರೀಡೆ ಮತ್ತು ಆಸ್ಪತ್ರೆಗಳಲ್ಲಿ ಉತ್ತಮ ಅವಕಾಶ.
  • ಮನೋವಿಜ್ಞಾನ: ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಬೆಳೆಯುತ್ತಿರುವ ವೃತ್ತಿ. ಕೌನ್ಸೆಲಿಂಗ್ ಮತ್ತು ಶಿಕ್ಷಣ ವಲಯದಲ್ಲಿ ಅವಕಾಶಗಳು.

ಒಟ್ಟಾರೆಯಾಗಿ NEET ಮಾತ್ರವೇ ವೈದ್ಯಕೀಯ ವೃತ್ತಿಗೆ ದಾರಿ ಅಲ್ಲ. ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಸರಿಯಾದ ಕೋರ್ಸ್ ಆಯ್ಕೆ ಮಾಡಿಕೊಂಡರೆ, ಆರೋಗ್ಯ ಕ್ಷೇತ್ರದಲ್ಲಿ ಯಶಸ್ವಿ ಭವಿಷ್ಯ ಕಟ್ಟಿಕೊಳ್ಳಬಹುದು.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಳಚೆ ನೀರಲ್ಲಿ ಶಾಲಾ ವಿದ್ಯಾರ್ಥಿಗಳು ಪ್ಲೇಟ್ ತೊಳೆದ ವೈರಲ್ ಫೋಟೋ ಅಸಲಿಯತ್ತು ಬಿಚ್ಚಿಟ್ಟ ಬಿಇಓ – Kannada News | Jamakhandi BEO Visits Albal School And Clarify about Students Washed Plate in sewage water after midday meal

ಬಾಗಲಕೋಟೆ, (ಜನವರಿ 29): ಜಿಲ್ಲೆಯ ಆಲಬಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳು(School Students) ಬಿಸಿಯೂಟದ (midday meal) ನಂತರ ಚರಂಡಿ ಪಕ್ಕದಲ್ಲಿ ತಟ್ಟೆ ತೊಳೆಯುತ್ತಿರುವ ಪೋಟೋ ವೈರಲ್ ಆಗಿದೆ. ಶಾಲೆಯಲ್ಲಿ ಸೂಕ್ತ ನೀರಿನ ವ್ಯವಸ್ಥೆ ಇಲ್ಲದಿರುವುದು ಈ ದುಸ್ಥಿತಿಗೆ ಕಾರಣವಾಗಿದ್ದು, ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದಾರೆ. ಇದು ಮಕ್ಕಳ ಹಕ್ಕು ಆಯೋಗದ ಗಮನಕ್ಕೂ ಬಂದಿದ್ದು, ಕೂಡಲೇ ಬಾಗಲಕೋಟೆ ಜಿಲ್ಲಾಡಳಿತಕ್ಕೆ ಪತ್ರ ಬರೆದು ಘಟನೆ ಬಗ್ಗೆ ಗಮನಹರಿಸಬೇಕು. ಹಾಗೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಲು ಕೂಡಲೇ ಸೂಚನೆ ನೀಡಬೇಕು ಎಂದು ತಿಳಿಸಿದೆ. ಇದರ ಬೆನ್ನಲ್ಲೇ ಜಮಖಂಡಿ ಬಿ ಇ ಒ ಅಶೋಕ ಬಸಣ್ಣವರ್ , ಶಾಲೆಗೆ ಓಡೋಡಿ ಬಂದು ಪರಿಶೀಲಿಸಿದ್ದು, ಮಕ್ಕಳು ಚರಂಡಿ ನೀರಲ್ಲಿ ಪ್ಲೇಟ್ ತೊಳೆದಿಲ್ಲ. ಬದಲಾಗಿ ಚರಂಡಿ ಪಕ್ಕದ ಫಿಲ್ಟರ್ ನೀರಿನ ಪೈಪ್ ನಲ್ಲಿ ಪ್ಲೇಟ್ ತೊಳೆದಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಕೊಳಚೇ ನೀರಲ್ಲಿ ಪ್ಲೇಟ್ ತೊಳೆದ ಬಗ್ಗೆ ಬಿಇಓ ಹೇಳಿದ್ದೇನು?

ಜಿಲ್ಲಾಡಳಿತ ಸೂಚನೆ ಮೇರೆಗೆ ಜಮಖಂಡಿ ಬಿ ಇ ಒ ಅಶೋಕ ಬಸಣ್ಣವರ್ , ಆಲಬಾಳ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು. ಶಾಲೆಯಲ್ಲಿ ಪ್ರತ್ಯೇಕ ಕುಡಿಯುವ ನೀರಿನ ವ್ಯವಸ್ಥೆ ಇದೆ. ಹಾಗೇ ಪ್ಲೇಟ್ ತೊಳೆಯಲು ವ್ಯವಸ್ಥೆ ಇದೆ. ಮಕ್ಕಳು ಚರಂಡಿ ನೀರಲ್ಲಿ ಪ್ಲೇಟ್ ತೊಳೆದಿಲ್ಲ. ಬದಲಾಗಿ ಚರಂಡಿ ಪಕ್ಕದ ಫಿಲ್ಟರ್ ನೀರಿನ ಪೈಪ್ ನಲ್ಲಿ ಪ್ಲೇಟ್ ತೊಳೆದಿದ್ದಾರೆ. ಈ ಕುರಿತು ಮೇಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಇದನ್ನೂ ನೋಡಿ: ಆಂಜನೇಯನ ದೇವಸ್ಥಾನದಲ್ಲಿ ಭಕ್ತರಿಗೆ ವಿಶೇಷ ದರ್ಶನ ಕೊಟ್ಟ ವಾನರ!

ಡಿಸಿಗೆ ಪತ್ರ ಬರೆದಿದ್ದ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ

ಬಿಸಿಯೂಟ ಮಾಡಿದ ಬಳಿಕ ಕೆಲ ವಿದ್ಯಾರ್ಥಿಗಳು ಕೊಳಚೆ ನೀರಿನಲ್ಲಿ ಪ್ಲೇಟ್ ತೊಳೆದಿರುವ ಫೋಟೋ ವೈರಲ್ ಆಗಿರುವುದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಗಮನಕ್ಕೆ ಬಂದಿತ್ತು. ಕೂಡಲೇ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬಿ ಅವರು ಬಾಗಲಕೋಟೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಆಲಬಾಳ ಶಾಲೆಯಲ್ಲಿ ನಡೆದ ಈ ಘಟನೆ ಬಗ್ಗೆ ಗಮನಹರಿಸಬೇಕು. ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಲು ಕೂಡಲೇ ಸೂಚನೆ ನೀಡಬೇಕು. ಎಸ್ ಡಿ ಎಮ್ ಸಿ ಹಾಗೂ ಶಾಲಾ ಶಿಕ್ಷಕರ ವಿರುದ್ದ ಇಲಾಖಾ ನಿಯಮಾನುಸಾರ ಕ್ರಮ ಜರುಗಿಸಿ. ಕೈಗೊಂಡ ಕ್ರಮದ ವರದಿ ಆಯೋಗಕ್ಕೆ ಪುನಃ ತಿಳಿಸಲು ಪತ್ರದ ಮೂಲಕ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ, ಜಮಖಂಡಿ ಬಿಇಓಗೆ ಕರೆ ಮಾಡಿ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

ಇನ್ನು ಆಲಬಾಳ ಶಾಲೆಯ ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿ ಬಳಿಕ ಪ್ಲೇಟ್ ಕೊಳಚೆ ನೀರಿನಲ್ಲಿ ತೊಳೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆಗಿತ್ತು.  ಇದು ಭಾರೀ ಸುದ್ದು ಮಾಡಿದ್ದು,  ಶಿಕ್ಷಣ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ಛೀಮಾರಿ ಹಾಕಿದ್ದಾರೆ. ಬಿಸಿಯೂಟದ ನಂತರ ಪ್ಲೇಟ್ ತೊಳೆಯಲು ಸೂಕ್ತ ಸ್ಥಳ ಅಥವಾ ನೀರಿನ ಸೌಲಭ್ಯ ಕಲ್ಪಿಸದೆ ಶಾಲಾ ಸುಧಾರಣಾ ಸಮಿತಿ (SDMC) ಹಾಗೂ ಶಿಕ್ಷಕರ ನಿರ್ಲಕ್ಷ್ಯ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದರು. ಮಕ್ಕಳು ಕೊಳಚೆ ನೀರಿನ ಪಕ್ಕದಲ್ಲೇ ನಿಂತಿರುವುದು ಅವರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದರು.

ಕರ್ನಾಟದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್​​ಬಾಸ್​​ಗೆ ಹೋಗಲು ಗಿಲ್ಲಿ ಖರ್ಚು ಮಾಡಿದ ಹಣ ಎಷ್ಟು? – Kannada News | Gilli Nata said he only spent nearly ten thousand for Bigg Boss

ಗಿಲ್ಲಿ ನಟ, ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss Kannada) ವಿನ್ನರ್ ಆಗಿದ್ದಾರೆ. ಬಿಗ್​​ಬಾಸ್ ಇತಿಹಾಸದಲ್ಲೇ ಯಾರೂ ಪಡೆಯದಷ್ಟು ಮತಗಳನ್ನು ಪಡೆದು ಬಿಗ್​​ಬಾಸ್ ಗೆದ್ದಿದ್ದಾರೆ ಗಿಲ್ಲಿ ನಟ. ಆದರೆ ಗಿಲ್ಲಿಯ ಕೆಲ ಸಹ ಸ್ಪರ್ಧಿಗಳು ಗಿಲ್ಲಿ ತನ್ನ ಬಡತನವನ್ನು ಮುಂದೆ ಮಾಡಿ ಸಿಂಪತಿ ಗಿಟ್ಟಿಸಿಕೊಂಡ ಎಂದು ದೂರಿದ್ದಾರೆ. ಅಸಲಿಗೆ ಬಿಗ್​​ಬಾಸ್ ಮುಗಿಯುವವರೆಗೆ ಗಿಲ್ಲಿ ಎಲ್ಲಿಯೂ ತನ್ನ ಬಡತನವದ ಬಗ್ಗೆ ಹೇಳಿಕೊಂಡಿದ್ದಿಲ್ಲ. ಈ ಬಾರಿ ಬಿಗ್​​ಬಾಸ್​​ಗೆ ಹೋದ ಕೆಲವರು ಬಿಗ್​​ಬಾಸ್ ಮನೆಯಲ್ಲಿ ಧರಿಸಲು ಇರಿಸಿಕೊಂಡಿದ್ದ ಬಟ್ಟೆಗಳಿಗಾಗಿಯೇ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿದ್ದಿದೆ. ಆದರೆ ಗಿಲ್ಲಿ ಬಿಗ್​​ಬಾಸ್​ಗಾಗಿ ಖರ್ಚು ಮಾಡಿದ್ದೆಷ್ಟು? ಅವರೇ ಕೊಟ್ಟಿದ್ದಾರೆ ಉತ್ತರ.

ಬಿಗ್​​ಬಾಸ್ ಮನೆಯಿಂದ ಹೊರ ಬಂದ ಬಳಿಕ ಬಿಡುವಿಲ್ಲದಂತೆ ಕಾರ್ಯಕ್ರಮಗಳು, ಸಂದರ್ಶನಗಳಲ್ಲಿ ಗಿಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಪಾಲ್ಗೊಂಡಿರುವ ಗಿಲ್ಲಿ, ತಾವು ಬಿಗ್​​ಬಾಸ್ ಮನೆಗೆ ಹೋಗಲು ಎಷ್ಟು ಹಣ ಖರ್ಚು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಗಿಲ್ಲಿ ಬಿಗ್​​ಬಾಸ್ ಮನೆಗೆ ಹೋಗಲು ಬಟ್ಟೆಗಾಗಿ ಬಿಟ್ಟರೆ ಇನ್ನೇನಕ್ಕೂ ಹಣ ಖರ್ಚು ಮಾಡಿಲ್ಲವಂತೆ.

‘ನಾನು ಬಿಗ್​​ಬಾಸ್ ಮನೆಗೆ ಹೋಗಲು ಬಟ್ಟೆಗಾಗಿ ಸುಮಾರು ಐದರಿಂದ ಹತ್ತು ಸಾವಿರ ರೂಪಾಯಿ ಮಾತ್ರವೇ ಹಣ ಖರ್ಚು ಮಾಡಿದ್ದೆ. ಸುಮಾರು ಹತ್ತು ಸಾವಿರಕ್ಕೆ ಬಟ್ಟೆಗಳನ್ನು ಖರೀದಿ ಮಾಡಿದ್ದೆ. ವೀಕೆಂಡ್ ಬಟ್ಟೆಗಳು ಪ್ರತಿ ವಾರ ಬರುತ್ತಿದ್ದವು. ನಾನು ತೆಗೆದುಕೊಂಡು ಹೋದ ಬಟ್ಟೆಗಳಲ್ಲಿಯೂ ಜಾಸ್ತಿ ಏನು ಬಳಸಲಿಲ್ಲ. ನನಗೆ ಕಂಪರ್ಟ್ ಅನಿಸಿದ್ದನ್ನು ನಾನು ಹಾಕಿಕೊಳ್ಳುತ್ತಿದ್ದೆ’ ಎಂದಿದ್ದಾರೆ ಗಿಲ್ಲಿ.

ಇದನ್ನೂ ಓದಿ:ಬಿಗ್​​ಬಾಸ್​​ ಗೆದ್ದ ಗಿಲ್ಲಿ ನಟನಿಗೆ ಸಿಎಂ ಸಿದ್ದರಾಮಯ್ಯ ಆಶೀರ್ವಾದ: ಚಿತ್ರಗಳ ನೋಡಿ

‘ಬಿಗ್​​ಬಾಸ್​​ಗೆ ಹೋಗುವ ಮುಂಚೆ ನನ್ನ ತಾಯಿ ವಾಷಿಂಗ್ ಮಷಿನ್ ಕೊಡಿಸಿಕೊಡು ಎಂದು ಕೇಳುತ್ತಿದ್ದರು. ಅದಕ್ಕಾಗಿ ನನ್ನ ಬಳಿ ಇದ್ದ ಹಣದಲ್ಲಿ ಅಮ್ಮನಿಗೆ ವಾಷಿಂಗ್ ಮಷಿನ್ ತೆಗೆಸಿಕೊಟ್ಟೆ. ಹತ್ತು ಸಾವಿರದಲ್ಲಿ ಬಟ್ಟೆ ಖರೀದಿ ಮಾಡಿ ಒಳಗೆ ಹೋದೆ. ನಾನು ಹಣದ ವಿಷಯದಲ್ಲಿ ಸ್ವಲ್ಪ ಜಾಗೃತೆ ಹೆಚ್ಚು. ಹಣವನ್ನು ನಾನು ಹೆಚ್ಚು ಖರ್ಚು ಮಾಡುವುದಿಲ್ಲ. ದುಬಾರಿ ಬಟ್ಟೆಗಳಿಗೆಲ್ಲ ನಾನು ಖರೀದಿಸುವುದಿಲ್ಲ’ ಎಂದು ಗಿಲ್ಲಿ ಹೇಳಿದ್ದಾರೆ.

ಅದೇ ಸೀಸನ್​​ನ ಸ್ಪರ್ಧಿಯಾಗಿ ಭಾಗವಹಿಸಿ ಮೊದಲ ಕೆಲ ವಾರಗಳಲ್ಲೇ ಮನೆಯಿಂದ ಹೊರಗೆ ಬಂದ ಡಾಗ್ ಸತೀಶ್ ಅವರು ಸುಮಾರು 80 ಲಕ್ಷ ರೂಪಾಯಿ ಹಣ ತೆತ್ತು ಬಟ್ಟೆಗಳನ್ನು ಖರೀದಿ ಮಾಡಿದ್ದಾಗಿ ಹೇಳಿಕೊಂಡಿದ್ದರು. ಪ್ರತಿ ಶರ್ಟ್​​ಗೆ ಒಂದೊಂದು ಲಕ್ಷ ರೂಪಾಯಿ ಹಣವನ್ನು ನೀಡಿರುವುದಾಗಿ ಅವರು ಹೇಳಿಕೊಂಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Vastu Tips: ಗಂಡ- ಹೆಂಡತಿ ಒಂದೇ ತಟ್ಟೆಯಲ್ಲಿ ಊಟ ಮಾಡಬಾರದು ಯಾಕೆ ಗೊತ್ತಾ? – Kannada News | Vastu Eating Rules: Avoid Shared Plates and Bed Eating for Home Harmony and Prosperity

ವಾಸ್ತು ಶಾಸ್ತ್ರದ ಪ್ರಕಾರ, ಆಹಾರವು ಕೇವಲ ದೇಹವನ್ನು ಪೋಷಿಸುವುದಷ್ಟೇ ಅಲ್ಲ, ಅದು ನಮ್ಮ ಜೀವನಶಕ್ತಿಯ ಮೂಲವೂ ಹೌದು. ನಾವು ತಿನ್ನುವ ಪ್ರತಿಯೊಂದು ಆಹಾರವೂ ನಮ್ಮ ಶಕ್ತಿಯನ್ನು, ಮನಸ್ಸಿನ ಸ್ಥಿತಿಯನ್ನು ಮತ್ತು ಮನೆಯ ವಾತಾವರಣವನ್ನು ಪ್ರಭಾವಿಸುತ್ತದೆ. ಆದರೆ ಅನೇಕರು ಆಹಾರ ಸೇವಿಸುವಾಗ ಕೆಲವು ನಿಯಮಗಳನ್ನು ಪಾಲಿಸುವುದಿಲ್ಲ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಉಂಟಾಗುವ ಸಾಧ್ಯತೆ ಇರುತ್ತದೆ. ಈ ನಕಾರಾತ್ಮಕ ಶಕ್ತಿಯ ಪರಿಣಾಮ ವ್ಯಕ್ತಿಗೆ ಮಾತ್ರವಲ್ಲ, ಇಡೀ ಕುಟುಂಬದ ಮೇಲೆ ಬೀಳುತ್ತದೆ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ, ಗಂಡ ಮತ್ತು ಹೆಂಡತಿ ಒಂದೇ ತಟ್ಟೆಯಲ್ಲಿ ಊಟ ಮಾಡುವುದು ಶುಭಕರವಲ್ಲ. ಇದರಿಂದ ಮನೆಯಲ್ಲಿ ವಾಸ್ತು ದೋಷಗಳು ಉಂಟಾಗಿ, ಅನಾವಶ್ಯಕ ಕಲಹಗಳು ಮತ್ತು ಅಸಮಾಧಾನಗಳು ಹೆಚ್ಚಾಗಬಹುದು ಎಂದು ನಂಬಲಾಗಿದೆ. ಕುಟುಂಬದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಜವಾಬ್ದಾರಿಯಿರುತ್ತದೆ. ಕುಟುಂಬದ ಮುಖ್ಯಸ್ಥನು ತನ್ನ ಪತ್ನಿಯ ಜೊತೆಗೆ ಮನೆಯ ಎಲ್ಲ ಸದಸ್ಯರ ಕಲ್ಯಾಣವನ್ನು ನೋಡಿಕೊಳ್ಳಬೇಕಾದ ಹೊಣೆಗಾರಿಕೆಯನ್ನು ಹೊಂದಿರುತ್ತಾನೆ. ಆದರೆ ಗಂಡ-ಹೆಂಡತಿ ಒಂದೇ ತಟ್ಟೆಯಲ್ಲಿ ಊಟ ಮಾಡಿದರೆ, ಕುಟುಂಬದ ಮುಖ್ಯಸ್ಥನು ಪತ್ನಿಯ ಕಡೆಗೆ ಹೆಚ್ಚು ಗಮನ ನೀಡುತ್ತಾನೆ ಮತ್ತು ಇತರ ಕುಟುಂಬ ಸದಸ್ಯರನ್ನು ನಿರ್ಲಕ್ಷಿಸುವ ಪರಿಸ್ಥಿತಿ ಉಂಟಾಗಬಹುದು. ಇದರಿಂದ ಮನೆಮಾತುಗಳಲ್ಲಿ ಅಸಮತೋಲನ ಉಂಟಾಗಿ, ಕಾರಣವಿಲ್ಲದೆ ಜಗಳಗಳು ಮತ್ತು ಅಶಾಂತಿ ಕಾಣಿಸಿಕೊಳ್ಳಬಹುದು. ಆದ್ದರಿಂದ, ವಾಸ್ತು ಶಾಸ್ತ್ರ ಗಂಡ ಮತ್ತು ಹೆಂಡತಿ ಒಂದೇ ತಟ್ಟೆಯಲ್ಲಿ ಊಟ ಮಾಡಬಾರದು ಎಂದು ಸಲಹೆ ನೀಡುತ್ತದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ಜೋಡಿ ಒಂಟೆಯ ಪ್ರತಿಮೆ ಇರಿಸಿ; ಹಣಕ್ಕೆಂದೂ ಕೊರತೆಯಾಗದು!

ಇದೇ ರೀತಿಯಲ್ಲಿ, ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದನ್ನೂ ವಾಸ್ತು ಶಾಸ್ತ್ರ ತಪ್ಪು ಎಂದು ಪರಿಗಣಿಸುತ್ತದೆ. ಆಹಾರವನ್ನು ದೇವರ ಪ್ರಸಾದದಂತೆ ಗೌರವದಿಂದ ಸೇವಿಸಬೇಕು ಎಂಬ ನಂಬಿಕೆ ಇದೆ. ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದನ್ನು ಆಹಾರಕ್ಕೆ ಅವಮಾನವೆಂದು ಭಾವಿಸಲಾಗುತ್ತದೆ. ಇದರಿಂದ ಮನೆಯಲ್ಲಿ ವಾಸ್ತು ದೋಷಗಳು ಉಂಟಾಗಿ, ಆಶೀರ್ವಾದಗಳ ಕೊರತೆ ಕಾಣಿಸಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ಇದು ಆರ್ಥಿಕ ತೊಂದರೆಗಳು ಮತ್ತು ಅಸ್ಥಿರತೆಯಿಗೂ ಕಾರಣವಾಗಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಆದ್ದರಿಂದ, ಆಹಾರ ಸೇವಿಸುವಾಗ ಸರಿಯಾದ ಸ್ಥಳ, ಶಿಸ್ತು ಮತ್ತು ಗೌರವವನ್ನು ಪಾಲಿಸುವುದು ಬಹಳ ಮುಖ್ಯ. ಈ ಸಣ್ಣ ನಿಯಮಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಿ, ಕುಟುಂಬದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷ ನೆಲೆಸುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:07 pm, Thu, 29 January 26

Source link

ಅಣ್ಣನಿಗೆ ಕೊನೆಯ ಕರೆ, ಕಿರುಚಾಟ, ಫೋನ್ ಕಟ್, ಮಹಿಳಾ ಪೊಲೀಸ್ ಅಧಿಕಾರಿಯ ಕೊನೇ ಕ್ಷಣ ಏನೇನಾಯ್ತು? – Kannada News | Delhi Cops Death: Husband Taken Into Custody After Confession

ನವದೆಹಲಿ, ಜನವರಿ 29: ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಪತಿ ಲೋಹದ ಡಂಬಲ್​ನಿಂದ ಜಜ್ಜಿ ಕೊಲೆ(Murder) ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಸಾಯುವ ಮುನ್ನ ಕಾಜಲ್ ಕೊನೆಯ ಕರೆಯನ್ನು ತನ್ನ ಸಹೋದರನಿಗೆ ಮಾಡಿದ್ದರು. ಕರೆ ಮಾಡಿದಾಗ ಆಕೆಯ ಕಿರುಚಾಟವೇ ಕೇಳುತ್ತಿತ್ತು. ಕೂಡಲೇ ಫೋನ್ ಸಂಪರ್ಕವೇ ಕಡಿತಗೊಂಡಿತ್ತು ಎಂದು ಆಕೆಯ ಸಹೋದರ ಮಾಹಿತಿ ನೀಡಿದ್ದಾರೆ.

ಸ್ವ್ಯಾಟ್(SWAT) ಕಮಾಂಡೋ ಆಗಿ ನೇಮಕಗೊಂಡಿದ್ದ 27 ವರ್ಷದ ಅಧಿ ಮಂಗಳವಾರ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಪತಿ ಅವರ ಮೇಲೆ ಹಲ್ಲೆ ನಡೆಸಿದ ಬಳಿಕ ಕೆಲ ದಿನಗಳ ಕಾಲ ಅವರು ಬದುಕಿದ್ದರು.

ನೈಋತ್ಯ ದೆಹಲಿಯ ದ್ವಾರಕಾ ಮೋರ್‌ನಲ್ಲಿರುವ ಅವರ ಮನೆಯಲ್ಲಿ ಕಾಜಲ್ ಎಂಬ ಮಹಿಳೆಯ ಮೇಲೆ ಆಕೆಯ ಪತಿ ಅಂಕುರ್ ಚೌಧರಿ (28) ಲೋಹದ ಡಂಬಲ್​ನಿಂದ ಹಲ್ಲೆ ನಡೆಸಿದ್ದು, ಆಕೆಯ ತಲೆಯನ್ನು ಬಾಗಿಲಿನ ಚೌಕಟ್ಟಿಗೆ ಹೊಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅಂದು ಕೌಟುಂಬಿಕ ವಿಚಾರ ಮತ್ತು ವರದಕ್ಷಿಣೆ ಬಗ್ಗೆ ನಡೆದ ಜಗಳದಲ್ಲಿ ಕಾಜಲ್ ಮೇಲೆ ಹಲ್ಲೆ ನಡೆಸಿದ ನಂತರ ಅಂಕುರ್ ಕಾಜಲ್ ಸಹೋದರ ನಿಖಿಲ್ ಗೆ ಕರೆ ಮಾಡಿದ್ದ ಎನ್ನಲಾಗಿದೆ. ಅಂಕುರ್ ತನ್ನ ಸಹೋದರಿಯನ್ನು ಕೊಂದಿರುವುದಾಗಿ ನಿಖಿಲ್‌ಗೆ ಹೇಳಿದ್ದಾನೆ ಎಂದು ಪೊಲೀಸರು ನಿಖಿಲ್ ಹೇಳಿಕೆಯನ್ನು ಉಲ್ಲೇಖಿಸಿ ತಿಳಿಸಿದ್ದಾರೆ.

ಜನವರಿ 22 ರಂದು ರಾತ್ರಿ 10 ಗಂಟೆ ಸುಮಾರಿಗೆ ಅಂಕುರ್ ತನಗೆ ಕರೆ ಮಾಡಿ ತನ್ನ ಸಹೋದರಿ ತನ್ನೊಂದಿಗೆ ಜಗಳವಾಡುತ್ತಿದ್ದಾಳೆ ಎಂದು ಹೇಳಿದ್ದ,  ಏನಾಯಿತು ಎಂದು ವಿವರಿಸಲು ಕಾಜಲ್ ಫೋನ್ ತೆಗೆದುಕೊಂಡಳು ಆದರೆ ಅಂಕುರ್ ಅದನ್ನು ಕಸಿದುಕೊಂಡಿದ್ದ.

ಸುಮಾರು ಐದು ನಿಮಿಷಗಳ ನಂತರ, ಅಂಕುರ್ ಮತ್ತೆ ಕರೆ ಮಾಡಿ ನಿಖಿಲ್‌ಗೆ ತಂಗಿಯನ್ನು ಕೊಂದಿರುವುದಾಗಿ ತಿಳಿಸಿದ್ದ, ಅಂಕುರ್ ಶವವನ್ನು ತೆಗೆದುಕೊಂಡು  ಹೋಗಿ ಎಂದು ಕೇಳಿದ್ದ.

ಅದಕ್ಕೆ ನಿಖಿಲ್  ಮಧ್ಯರಾತ್ರಿ ದೆಹಲಿಗೆ ಓಡಿ ಬಂದಿದ್ದರು, ಅಷ್ಟರಲ್ಲೇ  ಕುಟುಂಬದವರು ಅಲ್ಲಿಗೆ ಬಂದಿದ್ದರು ಮತ್ತು ಅವರು ಕಾಜಲ್​ರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಅಲ್ಲಿ ವೈದ್ಯರು ಆಕೆಯ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದ್ದರು. ಜನವರಿ 25 ರಂದು, ಅವರನ್ನು ಗಾಜಿಯಾಬಾದ್‌ನ ನೆಹರು ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಅಲ್ಲಿ ನಿಧನರಾಗಿದ್ದಾರೆ.

Published On – 3:33 pm, Thu, 29 January 26

Source link

Ajit Pawar Funeral: ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ! – Kannada News | Uncontrolled crowd in Maharashra DCM ajit pawar funeral in Baramati

ಪುಣೆ, ಜನವರಿ 29: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ್ (Ajit Pawar) ಅವರ ಅಕಾಲಿಕ ನಿಧನ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಇಂದು ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಈ ವೇಳೆ ಹಿರಿಯ ರಾಜಕೀಯ ನಾಯಕರು, ಪವಾರ್ ಕುಟುಂಬಸ್ಥರು ಮಾತ್ರವಲ್ಲದೆ ಸಾವಿರಾರು ಜನರು ತಮ್ಮ ನೆಚ್ಚಿನ ದಾದಾ ಅಜಿತ್ ಪವಾರ್ ಅವರ ಅಂತ್ಯಕ್ರಿಯೆಯನ್ನು ನೋಡಲು ಆಗಮಿಸಿದ್ದರು. ಅಲ್ಲಿ ಸೇರಿದ್ದವರ ಕಣ್ಣುಗಳು ಕಣ್ಣೀರಿನಿಂದ ತುಂಬಿದ್ದವು. ಅಲ್ಲಿದ್ದ ಪ್ರತಿಯೊಬ್ಬರೂ ಅಜಿತ್ ಪವಾರ್​​ಗಾಗಿ ಕಂಬನಿ ಮಿಡಿಯುತ್ತಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version