ಡಾಲರ್ ಎದುರು ರುಪಾಯಿ 39 ಪೈಸೆ ವೃದ್ಧಿ; ಭಾರತದ ಕರೆನ್ಸಿಗೆ ಬಲ ಸಿಕ್ಕಿದ್ದು ಹೇಗೆ? – Kannada News | Rupee gains against US dollar as west asia tension eases, crude oil prices down and FII inflows rise
ಡಾಲರ್ ಎದುರು ರುಪಾಯಿImage Credit source: Shutterstock ನವದೆಹಲಿ, ಏಪ್ರಿಲ್ 17: ಇರಾನ್ ಯುದ್ಧ ಭೀತಿ ಸ್ವಲ್ಪ ತಗ್ಗುತ್ತಿದ್ದಂತೆಯೇ ವಿವಿಧ ಮಾರುಕಟ್ಟೆಗಳು ಸಮಾಧಾನದ ಉಸಿರು ಬಿಡುತ್ತಿವೆ. ಡಾಲರ್ ಎದುರು ಉಸಿರುಗಟ್ಟುತ್ತಿದ್ದ ರುಪಾಯಿಗೆ ಸ್ವಲ್ಪ ಜೀವ ಸಿಕ್ಕಿದೆ. ಶುಕ್ರವಾರದ ಬೆಳಗಿನ ಟ್ರೇಡಿಂಗ್ನಲ್ಲಿ ಡಾಲರ್ ಎದುರು ರುಪಾಯಿ 39 ಪೈಸೆ ಹೆಚ್ಚಿದೆ. ಟ್ರೇಡಿಂಗ್ನ ಒಂದು ಹಂತದಲ್ಲಿ ರುಪಾಯಿ ಮೌಲ್ಯ 92.75 ಮಟ್ಟದಲ್ಲಿತ್ತು. ಅಂತರಬ್ಯಾಂಕ್ ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ನಿನ್ನೆ ಗುರುವಾರ ಒಂದು ಡಾಲರ್ಗೆ ರುಪಾಯಿ 93ಕ್ಕಿಂತ ಹೆಚ್ಚು ಇತ್ತು. ಇವತ್ತು…