Weekly Love Horoscope: ವಾರದ ಪ್ರೇಮ ಭವಿಷ್ಯ; ಏ. 19-25ರವರೆಗಿನ ಈ ವಾರ ನಿಮ್ಮ ಪ್ರೇಮ ಜೀವನ ಹೇಗಿರಲಿದೆ? – Kannada News | Weekly Love Horoscope April 19 25: Zodiac Predictions and Relationship Insights
ಏಪ್ರಿಲ್ 19ರಿಂದ ಏಪ್ರಿಲ್ 25ರವರೆಗಿನ ಮೂರನೇ ವಾರ ವಿಶೇಷವಾಗಿ ಇರಲಿದೆ. ನಿಮಗೆ ಅದೃಷ್ಟವು ಯಾವ ಸಂದರ್ಭದಲ್ಲಿ ಯಾರಿಂದಲೂ ಬರಬಹುದು. ನಿಮಗೆ ಅದರ ಬಗ್ಗೆ ನಂಬಿಕೆ ಇರಬೇಕು. ಸಂಬಂಧವಿಲ್ಲದಂತೆ ಕುಳಿತರೆ ಆಸೆಯು ಆಸೆಯಾಗಿಯೇ ಉಳಿಯುತ್ತದೆ. ಮೇಷ: ಈ ವಾರ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡಬಹುದು. ಮಾತಿನ ಮೇಲೆ ನಿಗಾ ಇರಲಿ. ಪ್ರೇಮಿಗಳಿಗೆ ಮನೆಯಲ್ಲಿ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ತಾಳ್ಮೆಯಿಂದ ವರ್ತಿಸಿದರೆ ಸಂಬಂಧ ಗಟ್ಟಿಯಾಗುತ್ತದೆ. ವೃಷಭ: ಪ್ರೇಮ ಜೀವನದಲ್ಲಿ ಮಧುರವಾದ ಕ್ಷಣಗಳನ್ನು ಕಳೆಯುವಿರಿ. ಹಳೆಯ ಗೆಳೆಯ ಅಥವಾ ಗೆಳತಿಯಿಂದ…