ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಈ ಇತಿಹಾಸವನ್ನು ನಿರ್ಮಿಸಿರುವುದು ಭಾರತೀಯ ಬ್ಯಾಟರ್ ರುತುರಾಜ್ ಗಾಯಕ್ವಾಡ್ (Ruturaj gaikwad). ಅದು ಕೂಡ ಆಸ್ಟ್ರೇಲಿಯಾ ದಾಂಡಿಗನ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಈ ಇತಿಹಾಸವನ್ನು ನಿರ್ಮಿಸಿರುವುದು ಭಾರತೀಯ ಬ್ಯಾಟರ್ ರುತುರಾಜ್ ಗಾಯಕ್ವಾಡ್ (Ruturaj gaikwad). ಅದು ಕೂಡ ಆಸ್ಟ್ರೇಲಿಯಾ ದಾಂಡಿಗನ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
ಒಂದು ತಿಂಗಳಲ್ಲಿ ತಕ್ಕಮಟ್ಟಿಗೆ ಸುಧಾರಿಸಿದ ಬೆಂಗಳೂರು ಏರ್ ಕ್ವಾಲಿಟಿ
ಬೆಂಗಳೂರು, ಜನವರಿ 10: ಕಳೆದ ತಿಂಗಳಿಗೆ ಹೋಲಿಸಿದರೆ ಇಂದು ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (Bengaluru Air Quality) ಮಧ್ಯಮ ಮಟ್ಟದಲ್ಲಿದ್ದು, ರಾಜ್ಯದ ವಿವಿಧೆಡೆ ಏರ್ ಕ್ವಾಲಿಟಿ ಸುಧಾರಿಸಿದಂತೆ ಕಾಣುತ್ತಿದೆ. ನಗರದಲ್ಲಿನ ವಾಹನಗಳ ಹೊಗೆ, ಧೂಳು ಮತ್ತು ನಿರ್ಮಾಣ ಚಟುವಟಿಕೆಗಳಿಂದ ವಾಯುಮಾಲಿನ್ಯ ಹೆಚ್ಚಾಗಿರುವುದು ಗಮನಕ್ಕೆ ಬರುತ್ತಿದೆ. ಇದರಿಂದ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಹಾಗೂ ಉಸಿರಾಟ ಸಮಸ್ಯೆ ಇರುವವರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಬೆಂಗಳೂರಿನ ಗಾಳಿಯ ಗುಣಮಟ್ಟ 154 ಇದ್ದು, ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಸ್ವಲ್ಪ ಸುಧಾರಣೆ ಕಂಡಿದೆ. ಕಳೆದ ತಿಂಗಳಿನಲ್ಲಿ ಒಮ್ಮೆ 200ರ ಗಡಿ ದಾಟಿದ್ದ ಏರ್ ಕ್ವಾಲಿಟಿ, ನಗರವಾಸಿಗಳಲ್ಲಿ ಆತಂಕ ಮೂಡಿಸಿತ್ತು. ಸಿಲ್ಕ್ ಬೋರ್ಡ್, ವೈಟ್ಫೀಲ್ಡ್ ಸೇರಿದಂತೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿತ್ತು. ಇದೀಗ ವಾತಾವರಣ ಸಲ್ಪ ಸುಧಾರಣೆ ಕಂಡಿದ್ದರೂ, ಏರ್ ಕ್ವಾಲಿಟಿ ಅನಾರೋಗ್ಯಕಾರಿ ಹಂತದಲ್ಲೇ ಇದೆ. ಇದು ಹೀಗೆ ಮುಂದುವರೆದರೆ ಬೆಂಗಳೂರಿನ ಪರಿಸ್ಥಿತಿ ದೆಹಲಿಯಂತಾಗಬಹುದೆಂದು ತಜ್ಞರು ಎಚ್ಚರಿಸಿದ್ದಾರೆ.
ಇಂದು ಬೆಂಗಳೂರಿನ PM2.5 59 ಮತ್ತು PM10 76 ಇದೆ. PM10 ಎನ್ನುವುದು ನಮಗಿಂತ 7 ಪಟ್ಟು ತೆಳುವಾದ ಧೂಳಿನ ಕಣಗಳಾದರೆ, PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಆದರೆ ಬೆಂಗಳೂರಿನಲ್ಲಿಂದು ಈ ಸೂಕ್ಷ್ಮ ಕಣಗಳ ಪ್ರಮಾಣ ಕಡಿಮೆಯಿದ್ದು, ಉಸಿರಾಟಕ್ಕೆ ಯೋಗ್ಯವಲ್ಲದಿದ್ದರೂ ಮುಂಚಿನ ದಿನಗಳಷ್ಟು ಹಾನಿಕಾರಕವೇನಲ್ಲ.
ಈ ಪರಿಸ್ಥಿತಿಯಲ್ಲಿ ಸುರಕ್ಷತೆ ಅತ್ಯಂತ ಮುಖ್ಯ. ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು ಉತ್ತಮ. ಸಾಧ್ಯವಾದರೆ ಬೆಳಿಗ್ಗೆ ಅಥವಾ ಸಂಜೆ ಪೀಕ್ ಟ್ರಾಫಿಕ್ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಮನೆಯೊಳಗೆ ಗಿಡಗಳನ್ನು ಬೆಳೆಸುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಸ್ವಚ್ಛತೆ ಕಾಪಾಡುವುದು ಮಾಲಿನ್ಯದ ಪರಿಣಾಮವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಮೈಸೂರು, ಜನವರಿ 10: ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ದಡದಳ್ಳಿ ಕಾಲೋನಿಯ ಅರಣ್ಯ ಅಂಚಿನಲ್ಲಿ ಕಾಡಾನೆ ಅರಣ್ಯ ಇಲಾಖೆ ವಾಹನವನ್ನು ಚೇಸ್ ಮಾಡಿದ ಘಟನೆ ಆತಂಕ ಮೂಡಿಸಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅರಣ್ಯ ಅಂಚಿನ ಬಳಿ ರೈಲು ಕಂಬಿ ಬ್ಯಾರಿಕೇಡ್ ಹಾಕಲಾಗಿದ್ದ ಪ್ರದೇಶದಲ್ಲಿ ಒಂಟಿ ಸಲಗ ಸಂಚರಿಸುತ್ತಿತ್ತು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಗಳು ಇರುವ ವಾಹನವನ್ನು ಕಂಡ ತಕ್ಷಣ ಕಾಡಾನೆ ಘೀಳಿಟ್ಟು ದೌಡಾಯಿಸಿದೆ. ಬ್ಯಾರಿಕೇಡ್ ಒಳಗಿಂದಲೇ ವಾಹನದತ್ತ ನುಗ್ಗಲು ಯತ್ನಿಸಿದ ಕಾಡಾನೆ, ಅಡ್ಡಿಯಿದ್ದ ಕಾರಣ ದಾಳಿ ನಡೆಸಲು ಸಾಧ್ಯವಾಗಿಲ್ಲ.
ರಾಜ್ಯದಲ್ಲಿ ಶೀತದಲೆಯ ಅಬ್ಬರ; 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಬೆಂಗಳೂರು, ಜನವರಿ 10: ರಾಜ್ಯದಲ್ಲಿ ನಿನ್ನೆಯಿಂದ ಚಳಿಯ ಪ್ರಮಾಣ ಹೆಚ್ಚಾಗಿದ್ದು, ನಿನ್ನೆ ಹಲವು ಜಿಲ್ಲೆಗಳಿಗೆ ಅಲರ್ಟ್ ನೀಡಲಾಗಿತ್ತು. ಇಂದೂ ಸಹ ತಾಪಮಾನದಲ್ಲಿ ಸುಧಾರಣೆಯಾಗದ ಕಾರಣ ಹಲವೆಡೆ ಮಂಜು ಹಾಗೂ ಒಣ ಹವೆಯ (Weather Forecast) ವಾತಾವರಣ ಜನಜೀವನದ ಮೇಲೆ ಪ್ರಭಾವ ಬೀರುತ್ತಿದೆ. ಪರಿಣಾಮವಾಗಿ ಹವಾಮಾನ ಇಲಾಖೆ ರಾಜ್ಯದ 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸೂಚಿಸಲಾಗಿದೆ.
ರಾಜ್ಯದಲ್ಲಿ ಅತಿಯಾದ ಶೀತದಲೆಯ ಕಾರಣದಿಂದಾಗಿ ಬೀದರ್, ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಸೂಚಿಸಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.
ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜಧಾನಿ ಬೆಂಗಳೂರಿನಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದೆ. ಇಂದು ನಗರದ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 26 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಬೆಚ್ಚಗಿನ ಉಡುಪು ಧರಿಸುವುದು ಹಾಗೂ ಬಿಸಿ ಆಹಾರ ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಚಾಮರಾಜನಗರ, ಜನವರಿ 10: ಗಡಿನಾಡು ಚಾಮರಾಜನಗರ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಒಂದೆಡೆ ಹುಲಿ ಉಪಟಳದಿಂದ ಜನತೆ ಆತಂಕದಲ್ಲಿರುವಾಗಲೇ, ಇದೀಗ ಚಿರತೆಯ ಭೀತಿ ಗ್ರಾಮಸ್ಥರನ್ನು ಕಾಡತೊಡಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ನೇನೆಕಟ್ಟೆ ಗ್ರಾಮದಲ್ಲಿ ಚಿರತೆ ರಾಜಾರೋಷವಾಗಿ ಸಂಚರಿಸಿರುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಗ್ರಾಮದ ಒಳಗೇ ನಿರ್ಭಯವಾಗಿ ಓಡಾಡುತ್ತಿರುವ ಚಿರತೆಯನ್ನು ಕಂಡು ಗ್ರಾಮಸ್ಥರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಕಳೆದ ಎರಡು ತಿಂಗಳಿನಿಂದ ಚಿರತೆ ಆಗಾಗ ಗ್ರಾಮಕ್ಕೆ ನುಗ್ಗಿ ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ನೇನೆಕಟ್ಟೆ ಗ್ರಾಮ ಬಂಡೀಪುರ ಟೈಗರ್ ರಿಸರ್ವ್ ಅರಣ್ಯಕ್ಕೆ ಅಂಟಿಕೊಂಡಂತಿರುವುದರಿಂದ ಕಾಡು ಪ್ರಾಣಿಗಳ ಓಡಾಟ ಹೆಚ್ಚಾಗಿದೆ ಎನ್ನಲಾಗಿದೆ.
ಪ್ರಭಾಸ್ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ. ಇದಾದ ಬಳಿಕ ಹೀರೋ ಆಗಿ ಅವರು ಯಾವ ಸಿನಿಮಾದಲ್ಲೂ ನಟಿಸಿಲ್ಲ. ಅವರು ಕೆಲವು ಚಿತ್ರಗಳಲ್ಲಿ ಅತಿಥಿ ಪಾತ್ರಗಳನ್ನು ಮಾಡಿದರು. ಈಗ ಪ್ರಭಾಸ್ ಅವರು ‘ರಾಜಾ ಸಾಬ್’ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ. ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ ಹೇಗಿದೆ ಎಂಬುದರ ಲೆಕ್ಕ ಸಿಕ್ಕಿದೆ. ಈ ಚಿತ್ರ ಉತ್ತಮ ವಿಮರ್ಶೆ ಪಡೆದ ಹೊರತಾಗಿಯೂ ಮೊದಲ ದಿನ ಒಳ್ಳೆಯ ಗಳಿಕೆ ಮಾಡಿದೆ ಎಂಬುದು ವಿಶೇಷ.
ಪ್ರಭಾಸ್ ಅವರು ಕಥೆಯನ್ನು ಒಪ್ಪಿಕೊಳ್ಳುವಾಗ ಸಾಕಷ್ಟು ಗಮನ ಹರಿಸುತ್ತಾರೆ. ಅವರು ‘ರಾಜಾ ಸಾಬ್’ ಚಿತ್ರವನ್ನು ಒಪ್ಪಿಕೊಂಡಾಗ ಎಲ್ಲರಿಗೂ ಅಚ್ಚರಿ ಆಗಿದ್ದಂತೂ ಸುಳ್ಳಲ್ಲ. ಈ ಸಿನಿಮಾ ಹಾರರ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ. ಈ ಚಿತ್ರ ನೋಡಿದ ಅನೇಕರು ನೆಗೆಟಿವ್ ಆಗಿ ವಿಮರ್ಶೆ ನೀಡಿದ್ದಾರೆ. ಅಭಿಮಾನಿಗಳಿಗೂ ಸಿನಿಮಾ ಇಷ್ಟ ಆಗಿಲ್ಲ ಎಂದೇ ಹೇಳಬಹುದು. ಈ ಸಿನಿಮಾ ಮೊದಲ ದಿನ ಕೇವಲ 45 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಪ್ರೀಮಿಯರ್ ಶೋಗಳಿಂದ ಚಿತ್ರಕ್ಕೆ 9.15 ಕೋಟಿ ರೂಪಾಯಿ ಹರಿದು ಬಂದಿದೆ. ಎಲ್ಲವೂ ಸೇರಿದರೆ ಸಿನಿಮಾ ಕಲೆಕ್ಷನ್ 54 ಕೋಟಿ ರೂಪಾಯಿ ಅಷ್ಟು ಆಗಿದೆ.
‘ರಾಜಾ ಸಾಬ್’ ಚಿತ್ರವನ್ನು ಏಕೆ ಮಾಡಿದಿರಿ ಎಂದು ಕೇಳಿದಾಗ ಪ್ರಭಾಸ್ ಇದಕ್ಕೆ ಸ್ಪಷ್ಟನೆ ನೀಡಿದ್ದರು. ಕಾಮಿಡಿ ಸಿನಿಮಾಗಳನ್ನು ತಾವು ಮಾಡಬಲ್ಲರು ಎಂಬುದನ್ನು ತೋರಿಸಲು ಅವರು ಈ ಚಿತ್ರವನ್ನು ಒಪ್ಪಿಕೊಂಡಿದ್ದರಂತೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಈಗ ಅವರು ಈ ವಿಷಯದಲ್ಲಿ ಸೋತಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಅಂದುಕೊಂಡ ಮಟ್ಟದಲ್ಲಿ ಪ್ರದರ್ಶನ ಕಾಣದೆ ಇರಬಹುದು ಎಂದು ಹೇಳಲಾಗುತ್ತಾ ಇದೆ.
ಇದನ್ನೂ ಓದಿ: ಮತ್ತೊಂದು ‘ರಾಧೆ ಶ್ಯಾಮ್’; ‘ರಾಜಾ ಸಾಬ್’ ನೋಡಿ ತಲೆಕೆಡಿಸಿಕೊಂಡ ಪ್ರೇಕ್ಷಕ
‘ರಾಜಾ ಸಾಬ್’ ನೋಡಿದ ಮೊದಲ ದಿನವೇ ಜನರು ಹೀನಾಯ ವಿಮರ್ಶೆ ನೀಡಿದರು. ಅನೇಕರು ಈ ಚಿತ್ರವನ್ನು ‘ರಾಧೆ ಶ್ಯಾಮ್’ ಚಿತ್ರದ ದುರಂತಕ್ಕೆ ಹೋಲಿಸಿದರು. ರಾಜಾ ಸಾಬ್ ಚಿತ್ರವನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಇಷ್ಟ ಆಗಿಲ್ಲ ಎಂದರೆ ಮನೆಗೆ ಬನ್ನಿ ಎಂದು ಅಡ್ರೆಸ್ ಕೊಟ್ಟಿದ್ದರು. ಫ್ಯಾನ್ಸ್ ಅಲ್ಲಿ ಹೋಗಿ ಗಲಾಟೆ ಮಾಡದಿದ್ದರೆ ಅದುವೇ ಅವರ ಅದೃಷ್ಟ ಎಂದು ಹೇಳಬಹುದು. ಪ್ರಭಾಸ್ ಅವರು ‘ಸ್ಪಿರಿಟ್’ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕಿದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಬೆಂಗಳೂರು, ಜನವರಿ 10: ವಾಸ್ತುಶಾಸ್ತ್ರದ ಪ್ರಕಾರ, ನಮ್ಮ ವಾಸಸ್ಥಳ, ಕಚೇರಿ ಅಥವಾ ವ್ಯಾಪಾರ ಸ್ಥಳದಲ್ಲಿ ಕೆಲವು ಸಸ್ಯಗಳನ್ನು ಇಡುವುದು ಅದೃಷ್ಟ ಮತ್ತು ಸಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ. ಇಂತಹ ಸಸ್ಯಗಳನ್ನು ನೋಡಿದಾಗ ನಮ್ಮ ಮನಸ್ಸು ಕೂಡ ಸಕಾರಾತ್ಮಕವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇರುತ್ತದೆ. ಲೋಳೆ ರಸ ಅಥವಾ ಅಲೋವೆರಾ ಒಂದು ವಿಶೇಷವಾದ ಗಿಡವಾಗಿದೆ. ಇದನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಶುಭವಾಗುತ್ತದೆ ಎಂಬ ನಂಬಿಕೆ ಇದೆ.
ಅಲೋವೆರಾ ಗಿಡವನ್ನು ವಾಸ್ತುಶಾಸ್ತ್ರದ ನಿಯಮಗಳ ಪ್ರಕಾರ ಇರಿಸಿದಾಗ, ಅದು ವೃತ್ತಿ ಜೀವನ, ಆರ್ಥಿಕ ಸ್ಥಿತಿ ಮತ್ತು ಆರೋಗ್ಯದ ಮೇಲೆ ಧನಾತ್ಮಕ ಪ್ರಭಾವ ಬೀರುತ್ತದೆ. ಈ ಗಿಡವು ಸುತ್ತಮುತ್ತಲಿನ ವಾತಾವರಣದಲ್ಲಿ ಸಕಾರಾತ್ಮಕ ಮತ್ತು ಧನಾತ್ಮಕ ಶಕ್ತಿಗಳನ್ನು ಹೆಚ್ಚಿಸುತ್ತದೆ. ಅಲೋವೆರಾವನ್ನು ಬಾಲ್ಕನಿಯಲ್ಲಿ, ಗಾಳಿ ಬರುವ ಜಾಗದಲ್ಲಿ ಮತ್ತು ಸ್ವಲ್ಪ ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ಇಡುವುದು ಬಹಳ ಶುಭಕರ.
ಆದರೆ, ಅಲೋವೆರಾವನ್ನು ಯಾವುದೇ ಕಾರಣಕ್ಕೂ ವಾಯುವ್ಯ ಮತ್ತು ಆಗ್ನೇಯ ದಿಕ್ಕುಗಳಲ್ಲಿ ಇಡಬಾರದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಇದು ಋಣಾತ್ಮಕ ಶಕ್ತಿಗಳನ್ನು ನಿವಾರಿಸುವ ಗುಣವನ್ನು ಹೊಂದಿದೆ. ಅಲೋವೆರಾ ಒಂದು ಮಂಗಳಕರ ಮತ್ತು ಪವಿತ್ರ ಗಿಡವೆಂದು ಪರಿಗಣಿಸಲಾಗುತ್ತದೆ, ಇದು ಶಾಂತಿ, ನೆಮ್ಮದಿ ಮತ್ತು ಸೌಖ್ಯವನ್ನು ತರುತ್ತದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
ಬೆಂಗಳೂರು, ಜನವರಿ 10: ಬೆಂಗಳೂರು (Bangalore) ನಗರದ ಬಡಾವಣೆಗಳಲ್ಲಿನ ಬಿ-ಖಾತಾ ನಿವೇಶನ, ಕಟ್ಟಡಗಳಿಗೆ ಮತ್ತು ನಗರ ಪಾಲಿಕೆಗಳ ವ್ಯಾಪ್ತಿಯ ಅಧಿಕೃತ ಅಪಾರ್ಟ್‌ಮೆಂಟ್‌ಗಳಲ್ಲಿನ ಫ್ಲಾಟ್‌ಗಳಿಗೆ ಎ-ಖಾತಾ ಸೌಲಭ್ಯ ಸಿಗಲಿದೆ. ಕಾಯ್ದೆ 1961 ಅನ್ನು ಉಲ್ಲಂಘಿಸಿ ನಿರ್ಮಿಸಿರುವ ಅಧಿಕೃತ ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್‌ಗಳಲ್ಲಿನ ಫ್ಲಾಟ್‌ಗಳಿಗೆ ಮಾತ್ರ ಖಾತಾ ಪರಿವರ್ತನೆಗೆ ಅವಕಾಶ ನೀಡಲಾಗುತ್ತದೆ. ಜೊತೆಗೆ ಸುಮಾರು 10 ಲಕ್ಷ ಬಿ ಖಾತಾ ಆಸ್ತಿಗಳಿವೆ. ಜಿಬಿಎ ವ್ಯಾಪ್ತಿಯಲ್ಲಿ ವಿಧಿಸಲಾಗಿದ್ದ ನಿಯಮಗಳನ್ನೇ ಉಳಿದ ಕಡೆಗಳಿಗೂ ಅನ್ವಯಿಸಲಾಗುವುದು ಎನ್ನಲಾಗಿದೆ. ಒತ್ತುವರಿ ಮತ್ತು ಉಲ್ಲಂಘನೆಯ ಪ್ರಮಾಣಕ್ಕೆ ಅನುಗುಣವಾಗಿ ದಂಡದ ಪ್ರಮಾಣವನ್ನು ನಿಗದಿ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ, ಎ ಖಾತಾಗೆ ಪರಿವರ್ತನೆ ಮಾಡಿಕೊಡುವ ಈ ಪ್ರಕ್ರಿಯೆಯನ್ನು ಕೇವಲ ಸರ್ಕಾರದ ಆದಾಯ ಹೆಚ್ಚಿಸುವ ಉದ್ದೇಶದಿಂದ ಮಾಡುತ್ತಿದ್ದಾರೆ. ಇದು ಕಾನೂನು ಪ್ರಕಾರ ಸರಿಯಾಗುವುದಿಲ್ಲ. ಜನರನ್ನು ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದಾರೆ ಎಂಬ ಆರೋಪಗಳೂ ಹಲವೆಡೆ ಕೇಳಿಬರುತ್ತಿವೆ.
ಇದನ್ನೂ ಓದಿ: ಬಿ ಖಾತಾದಿಂದ ಎ ಖಾತಾಗೆ ಬದಲಾವಣೆ: ಜನರ ಪ್ರಶ್ನೆಗಳಿಗೆ ಯಾರಿಗೂ ಉತ್ತರವೇ ಗೊತ್ತಿಲ್ಲ
ಒಟ್ಟಿನಲ್ಲಿ ರಾಜ್ಯದಲ್ಲಿ ಇ ಖಾತಾ ಅಡಿಯಲ್ಲಿ ಇರುವ ಅನೇಕ ಸ್ವತ್ತುಗಳಿಗೆ ಎ ಖಾತಾದ ಭಾಗ್ಯ ಸಿಕಿಲ್ಲ. ಆದರೆ ಅಪಾರ್ಟ್ಮೆಂಟ್ಗಳಿಗೆಮಾತ್ರ ಎ ಖಾತಾ ನೀಡುವ ಭರವಸೆ ನೀಡಿರುವ ಸರ್ಕಾರ ಆ ಮೂಲಕ ಆದಾಯ ಹೆಚ್ಚಳಕ್ಕೆ ಮುಂದಾಗಿದೆ.
ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 10-01-2026 ರ ಶನಿವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ವಿಶ್ವಾವಸುನಾಮ ಸಂವತ್ಸರ, ಪುಷ್ಯ ಮಾಸದ ಈ ದಿನ ಶನಿವಾರವಾಗಿದ್ದು, ರವಿ ಧನುಸ್ಸು ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚರಿಸಲಿದ್ದಾನೆ. ಈ ದಿನ ಸ್ವಾಮಿ ವಿವೇಕಾನಂದರ ಜಯಂತೋತ್ಸವ ಮತ್ತು ಕೆಂಗಲ್‌ನಲ್ಲಿ ಆಂಜನೇಯ ಸ್ವಾಮಿಗಳ ರಥೋತ್ಸವ ನಡೆಯಲಿದೆ.
ಈ ದಿನದ ರಾಹುಕಾಲ ಬೆಳಿಗ್ಗೆ 9:34 ರಿಂದ 11:00ರ ತನಕ ಇರಲಿದ್ದು, ಸರ್ವಸಿದ್ದಿ ಕಾಲ ಮಧ್ಯಾಹ್ನ 1:52 ರಿಂದ 3:18ರ ವರೆಗೆ ಇರುತ್ತದೆ. ಚಿತ್ತ ನಕ್ಷತ್ರದಲ್ಲಿ ಚಂದ್ರನ ಸಂಚಾರದ ಪರಿಣಾಮವಾಗಿ, ಪ್ರತಿ ರಾಶಿಯವರು ಆರ್ಥಿಕವಾಗಿ, ಉದ್ಯೋಗದಲ್ಲಿ, ಆರೋಗ್ಯದಲ್ಲಿ ಮತ್ತು ಸಂಬಂಧಗಳಲ್ಲಿ ವಿವಿಧ ರೀತಿಯ ಫಲಗಳನ್ನು ಅನುಭವಿಸುವರು. ಕೆಲವು ರಾಶಿಗಳಿಗೆ ಶುಭಫಲಗಳಿದ್ದರೆ, ಇನ್ನು ಕೆಲವರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಪ್ರತಿಯೊಬ್ಬರಿಗೂ ಅದೃಷ್ಟದ ಬಣ್ಣ, ಸಂಖ್ಯೆ ಮತ್ತು ಜಪಿಸಬೇಕಾದ ಮಂತ್ರವನ್ನು ನೀಡಲಾಗಿದೆ. ಈ ಮುನ್ನೋಟಗಳು ದಿನವನ್ನು ಉತ್ತಮವಾಗಿ ಯೋಜಿಸಲು ಸಹಕಾರಿಯಾಗಲಿವೆ ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.