ತಾಯಿನೇ ಹೊರ ಹಾಕಿದ ಜಯದೇವ್; ಒಬ್ಬಂಟಿಯಾಗ್ತಾನಾ ವಿಲನ್? – Kannada News | Amruthadhare: Jayadev’s Shocking Downfall Kicks Out Mother Amidst Plot Twists

‘ಅಮೃತಧಾರೆ’ ಧಾರಾವಾಹಿಯಲ್ಲಿ ಹಲವು ಟ್ವಿಸ್ಟ್​​ಗಳು ಎದುರಾಗುತ್ತಿರುವುದನ್ನು ನೋಡುತ್ತಿರಬಹುದು. ವಿಲನ್ ಜಯದೇವ್ ನಂಬಿ ಹೋದ ಎಲ್ಲರೂ ಬೀದಿಗೆ ಬೀಳುವುದು ಪಕ್ಕಾ ಆಗಿದೆ. ಇದಕ್ಕೆ ಹೊಸ ಸಾಕ್ಷಿ ಸಿಕ್ಕಿದೆ ಎಂದೇ ಹೇಳಬಹುದು. ಆತ ತನ್ನ ಸ್ವಂತ ತಾಯಿಯನ್ನೇ ಹೊರಹಾಕಿದ್ದಾನೆ. ಈ ಬೆಳವಣಿಗೆ ಧಾರಾವಾಹಿ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ.

ಜಯದೇವ್​​ಗೆ ತೊಂದರೆ ಮೇಲೆ ತೊಂದರೆ ಎದುರಾಗುತ್ತಿದೆ. ಆತ ದೀವಾನ್ ಕಂಪನಿ ಲೋಗೋ ತನ್ನದು ಎಂದು ಹೇಳಿಕೊಂಡಿದ್ದ. ಆದರೆ, ಇದು ಗೌತಮ್ ಹೆಸರಲ್ಲಿ ನೋಂದಣಿ ಆಗಿತ್ತು. ತಂದೆ ಈ ಕೆಲಸ ಮಾಡಿದ್ದ. ಈ ದಾಖಲೆಯನ್ನು ನೀಡಿದ್ದು ಪಾರ್ಥ ಮತ್ತು ಜಯದೇವ್​​ನಿಂದ ಪಾರ್ಥ ಈಗ ದೂರ ಆಗಿದ್ದಾನೆ. ಇದನ್ನು ನೋಡಿ ಸ್ವತಃ ಜಯದೇವ್ ಕೂಡ ಶಾಕ್ ಆದನು. ಈಗ ಆತ ತನ್ನ ತಾಯಿಗೆ ಕೆಟ್ಟದನ್ನು ಮಾಡುತ್ತಿದ್ದಾನೆ ಮತ್ತು ಇದನ್ನು ನೋಡಿ ಆತನ ಪತ್ನಿಗೂ ಶಾಕ್ ಆಗಿದೆ.

ಜಯದೇವ್ ತಾಯಿ ಶಕುಂತಲ ಕ್ಲಬ್​​ಗೆ ಹೋಗಿ ದುಡ್ಡು ಕಳೆದು ಬರುತ್ತಾಳೆ. ಈಗಲೂ ಹಾಗೆಯೇ ಆಗಿದೆ. ಆಕೆ, ತಾಯಿ ದುಡ್ಡು ಕಳೆದು ಬಂದಳು. ಅದು ಕೂಡ 3 ಕೋಟಿ ರೂಪಾಯಿ. ಹೀಗಾಗಿ, ಈ ಹಣವನ್ನು ಕೊಡುವಂತೆ ಜಯದೇವ್ ಬಳಿ ಕೇಳಿದಳು. ಇದನ್ನು ಕೇಳಿ ಜಯದೇವ್ ಶಾಕ್ ಆದ. ನಾನು ಕೊಡಲ್ಲ ಎಂದು ನೇರ ಮಾತಲ್ಲಿ ಹೇಳಿದ.

ಇದನ್ನೂ ಓದಿ: ಜಯದೇವ್​​ಗೆ ಶಾಕ್ ಕೊಟ್ಟ ಗೌತಮ್; ಲೋಗೋ ವಿವಾದಕ್ಕೆ ತೆರೆ

ಮಗನ ಈ ಮಾತನ್ನು ಕೇಳಿ ಶಕುಂತಲಗೆ ಬೇಸರ ಆಗಿದೆ. ಅವಳು ನೇರವಾಗಿ ಅಸಮಾಧಾನ ಹೊರಹಾಕಿದಳು ಮತ್ತು ಗೌತಮ್​​ನ ಹೊಗಳಿದಳು. ಇದನ್ನು ಕೇಳಿ ಜಯದೇವ್ ಸಿಟ್ಟು ಮಾಡಿಕೊಂಡಿದ್ದಾನೆ. ‘ನನ್ನ ಎದುರೇ ನನ್ನ ಶತ್ರುನ ಹೊಗಳುತ್ತೀಯಾ’ ಎಂದು ಕೋಪಗೊಂಡಿದ್ದಾನೆ. ಅಲ್ಲದೆ ತಾಯಿಯನ್ನು ಮನೆಯಿಂದ ಹೊರ ಹಾಕಿದ್ದಾಳೆ. ಈಗ ಆತನ ಪಾಲಿಗೆ ಉಳಿದುಕೊಂಡಿದ್ದು ಪತ್ನಿ ಮಾತ್ರ. ಅವಳು ಕೂಡ ಯಾವುದೇ ಸಂದರ್ಭದಲ್ಲಿ ಹೊರಹೋಗಬಹುದು. ಆಕೆ ಬಂದಿರೋದು ಆಸ್ತಿಗೆ ವಾರಸುದಾರ ಆಗಬೇಕು ಎಂದು. ಆದರೆ, ಜಯದೇವ್ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಹೀಗಾಗಿ, ಜಯದೇವ್ ವಿರುದ್ಧ ಆಕೆ ಒಳಗೊಳಗೆ ಸಂಚು ಮಾಡುವುದನ್ನು ನೀವು ಕಾಣಬಹುದು. ಅವಳು ಕೂಡ ಜೆಡಿಯಿಂದ ದೂರ ಆಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:51 am, Fri, 17 April 26

Source link

Video: ಐಸಿಯು ಬೆಡ್ ಮೇಲೆ ಮಲಗಿದ್ದ ವೃದ್ಧ ರೋಗಿಯ ಮೇಲೆ ಹಲ್ಲೆ ನಡೆಸಿದ ವೈದ್ಯ – Kannada News | Caught on Camera: Haryana Doctor Accused of Assaulting Elderly Patient

ಚಂಡೀಗಢ, ಏಪ್ರಿಲ್ 17: ಹರಿಯಾಣ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಯೊಂದರ ಐಸಿಯು (ICU) ವಾರ್ಡ್‌ನಲ್ಲಿ ನಡೆದ ದೃಶ್ಯವೊಂದು ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. ಚಿಕಿತ್ಸೆ ನೀಡಬೇಕಾದ ಕೈಗಳೇ ವೃದ್ಧ ರೋಗಿಯ ಎದೆಯನ್ನು ಅಪ್ಪಳಿಸಿರುವ ಆಘಾತಕಾರಿ ವಿಡಿಯೋ ಈಗ ಬಹಿರಂಗಗೊಂಡಿದೆ. ವೈದ್ಯರೊಬ್ಬರು ವೃದ್ಧ ರೋಗಿಯಿದ್ದ ಹಾಸಿಗೆಯ ಬಳಿ ಬಂದು ಮೊದಲು ಸುತ್ತಲೂ ಕಣ್ಗಾವಲು ಕ್ಯಾಮೆರಾ ಎಲ್ಲಿವೆ ಎಂದು ಗಮನಿಸುತ್ತಾನೆ. ನಂತರ ಯಾರಿಗೂ ಕಾಣದಂತೆ ಹಾಸಿಗೆಯ ಸುತ್ತಲಿನ ಪರದೆಗಳನ್ನು (Curtains) ಎಳೆದು, ಹಾಸಿಗೆಯ ಮೇಲಿದ್ದ ಅಸಹಾಯಕ ವೃದ್ಧ ರೋಗಿಯ ಎದೆಗೆ ತನ್ನ ಮೊಣಕೈಯಿಂದ ಬಲವಾಗಿ ಗುದ್ದಿ ಹಲ್ಲೆ ನಡೆಸಿದ್ದಾನೆ. ವೃದ್ಧ ರೋಗಿಯು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೆ, ಆತನನ್ನು ಆರೈಕೆ ಮಾಡಬೇಕಾದ ವೈದ್ಯನು ತನ್ನ ಕೋಪವನ್ನು ಅಥವಾ ವಿಕೃತಿಯನ್ನು ರೋಗಿಯ ಮೇಲೆ ತೀರಿಸಿಕೊಂಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Bengaluru Air Quality: ಕಲಬುರ್ಗಿ, ಉಡುಪಿಯಲ್ಲಿ ಏರ್ ಕ್ವಾಲಿಟಿ ಪುನಃ ಕಳಪೆ ಮಟ್ಟಕ್ಕೆ! – Kannada News | Bangalore Air Pollution Crisis: Bengaluru Air Quality dropped in Udupi and Kalaburagi

ಕಲಬುರ್ಗಿ, ಉಡುಪಿಯಲ್ಲಿ ಏರ್ ಕ್ವಾಲಿಟಿ ಪುನಃ ಕಳಪೆ ಮಟ್ಟಕ್ಕೆ!

ಬೆಂಗಳೂರು, ಏಪ್ರಿಲ್ 17: ರಾಜ್ಯದ ಏರ್ ಕ್ವಾಲಿಟಿಯಲ್ಲಿ ಕಳೆದ ಕೆಲ ದಿನಗಳಿಂದ ಸುಧಾರಣೆ ಕಂಡು ಬಂದಿದೆ. ದೇಶದ ಉಳಿದ ಯಾವುದೇ ಮೆಟ್ರೋ ಸಿಟಿಗಳಿಗೆ ಹೋಲಿಸಿದರೂ ಬೆಂಗಳೂರಿನ ವಾಯು ಗುಣಮಟ್ಟ  (Bengaluru Air Quality) ಉತ್ತಮವಾದದ್ದಾಗಿದೆ. ಇಷ್ಟು ದಿನ ಉಸಿರಾಟಕ್ಕೂ ಮಾರಕವಾಗಿದ್ದ ಗಾಳಿಯು ಇಂದು ಒಳ್ಳೆಯ ಗುಣಮಟ್ಟದಲ್ಲಿರುವುದು ಸ್ವಲ್ಪಮಟ್ಟಿಗೆ ಆತಂಕವನ್ನು ಕಡಿಮೆಯಾಗಿಸಿದೆ. ಆದರೂ ಕಲಬುರ್ಗಿ, ಉಡುಪಿಯಲ್ಲಿ ವಾಯು ಗುಣಮಟ್ಟ ಎಲ್​ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 140ಕ್ಕೆ ತಲುಪಿದೆ. ಕಲಬುರ್ಗಿ ಮತ್ತು ಉಡುಪಿಯ AQI 150 ದಾಟಿದ್ದು, ಆತಂಕ ಸೃಷ್ಟಿಸಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 140
  • ಮಂಗಳೂರು-120
  • ಮೈಸೂರು –126
  • ಬೆಳಗಾವಿ – 56
  • ಕಲಬುರ್ಗಿ-151
  • ಶಿವಮೊಗ್ಗ –120
  • ಬಳ್ಳಾರಿ – 102
  • ಹುಬ್ಬಳ್ಳಿ- 126
  • ಉಡುಪಿ –130
  • ವಿಜಯಪುರ –93

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೀ ಕನ್ನಡದಲ್ಲಿ ಬರ್ತಿದೆ ‘ಸರಿಗಮಪ ಲಿಟ್ಲ್​ ಚಾಂಪ್ಸ್’; ಈ ಬಾರಿಯ ವಿಶೇಷತೆ ಏನು? – Kannada News | Zee Kannada SaReGaMaPa Li’l Champs: New Season, Judges and show starts Details

ಜೀ ಕನ್ನಡದ ವಾಹಿನಿಯಲ್ಲಿ ಒಂದಾದ ಬಳಿಕ ಒಂದು ರಿಯಾಲಿಟಿ ಶೋಗಳು ಪ್ರಸಾರ ಕಾಣುತ್ತಲೇ ಇರುತ್ತವೆ. ಇತ್ತೀಚೆಗೆ ‘ಜೋಡಿ ನಂ.1’ ಶೋ ಪ್ರಸಾರ ಆರಂಭಿಸಿದೆ. ಇನ್ನು, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋ ಇತ್ತೀಚೆಗೆ ಪೂರ್ಣಗೊಂಡಿದೆ. ಹೀಗಿರುವಾಗಲೇ ಜನರ ಫೇವರಿಟ್ ಶೋ ಎನಿಸಿಕೊಂಡಿರುವ ‘ಸರಿಗಮಪ ಲಿಟ್ಲ್ ಚಾಂಪ್ಸ್’ (SAREGAMAPA) ಆಗಮನಕ್ಕೆ ಜೀ ಕನ್ನಡ ವೇದಿಕೆ ರೆಡಿ ಮಾಡಿದೆ. ಈ ವೀಕೆಂಡ್​​ನಿಂದ ಶೋ ಪ್ರಾರಂಭ ಆಗಲಿದೆ. ಇದಕ್ಕಾಗಿ ವೀಕ್ಷಕರು ಕಾದಿದ್ದಾರೆ.

‘ಸರಿಗಮಪ’ ಶೋ ಅಂದರೆನೇ ಅನೇಕರಿಗೆ ಇಷ್ಟ. ಅದರಲ್ಲೂ ಈ ಬಾರಿ ಸಣ್ಣ ಮಕ್ಕಳಿಗೆ ಶೋ ವೇದಿಕೆ ಆಗಲಿದೆ ಎಂದಾಗ ಸಹಜವಾಗಿಯೇ ಕುತೂಹಲ ಹೆಚ್ಚಿರುತ್ತದೆ. ಈ ವರ್ಷ 3 ವರ್ಷದಿಂದ ಆರಂಭಿಸಿ 15 ವರ್ಷದೊಳಗಿನ ಮಕ್ಕಳು ಶೋನಲ್ಲಿ ಭಾಗವಹಿಸಬಹುದು ಎಂಬುದು ಈ ಬಾರಿಯ ವಿಶೇಷ. ಬೆಂಗಳೂರಿನಲ್ಲಿ ಮಾತ್ರ ಆಡಿಷನ್ ಮಾಡಿದರೆ ಕರ್ನಾಟಕದಲ್ಲಿರುವ ಅನೇಕರಿಗೆ ಇದರಲ್ಲಿ ಭಾಗವಹಿಸಲು ಸಾಧ್ಯವಾಗದೆ ಇರಬಹುದು. ಹೀಗಾಗಿ, ಕರ್ನಾಟಕದ ಮೂಲೆ ಮೂಲೆಗೆ ತೆರಳಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ.

‘ಸರಿಗಮಪ ಲಿಟ್ಲ್ ಚಾಂಪ್ಸ್’ ಏಪ್ರಿಲ್ 18ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಪ್ರಸಾರವಾಗಲಿದೆ. ಸಣ್ಣ ಮಕ್ಕಳು ತಮ್ಮ ಪ್ರತಿಭೆಯನ್ನು ಕರ್ನಾಟಕದ ಜನತೆ ಮುಂದೆ ಇಡುತ್ತಿದ್ದಾರೆ. ಈ ಶೋ ಉದಯೋನ್ಮುಖ ಗಾಯಕರಿಗೆ ಉತ್ತಮ ವೇದಿಕೆ ಆಗಿದೆ.

ಇದನ್ನೂ ಓದಿ: ತರಕಾರಿ ಮಾರುವ ಹುಡುಗನಿಗೆ ಹಾಡಲು ಅವಕಾಶ; ಟ್ರೋಲರ್​​ಗಳಿಗೆ ಸರಿಗಮಪ ಉತ್ತರ

‘ಸರಿಗಮಪ’ ಶೋನ ಮತ್ತೊಂದು ಹೈಲೈಟ್ ಎಂದರೆ ಜಡ್ಜ್​​ಗಳು ಹಾಗೂ ಆ್ಯಂಕರ್ಸ್. ರಾಜೇಶ್ ಕೃಷ್ಣನ್, ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಮತ್ತು ಗಾಯಕ ವಿಜಯ್ ಪ್ರಕಾಶ್ ಅವರು ತೀರ್ಪುಗಾರರಾಗಿ ಇರಲಿದ್ದಾರೆ. ಇವರುಗಳು ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಜನಪ್ರಿಯ ನಿರೂಪಕಿ ಅನುಶ್ರೀ ಅವರು ಈ ಶೋನ ನಡೆಸಿಕೊಡಲಿದ್ದಾರೆ. ಅವರು ಸಣ್ಣ ಮಕ್ಕಳ ಜೊತೆ ಮಗುವಾಗೇ ನಡೆದುಕೊಳ್ಳುವ ಗುಣ ಹೊಂದಿರೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಮಾಯಣದ ಬಗ್ಗೆ ಮಾತನಾಡಿದ ಪ್ರಕಾಶ್ ರಾಜ್ ವಿರುದ್ಧ ಬಿತ್ತು ಕ್ರಿಮಿನಲ್ ಕೇಸ್? – Kannada News | Prakash Raj Ramayana Comments Spark Criminal Case and Controversy

ಪ್ರಕಾಶ್ ರಾಜ್ ಅವರು (Prakash Raj) ಒಂದಲ್ಲ ಒಂದು ವಿಷಯಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಇತ್ತೀಚೆಗೆ ಅವರು ಸಿನಿಮಾ ಮಾಡೋದು ಕಡಿಮೆ ಆಗಿದೆ. ಆದರೆ, ವಿವಾದಗಳು ಕಡಿಮೆ ಆಗಿಲ್ಲ. ಒಬ್ಬಲ್ಲಾ ಒಬ್ಬರ ಭಾವನೆಗೆ ಧಕ್ಕೆ ತರುವ ಕೆಲಸ ಅವರಿಂದ ಆಗುತ್ತಲೇ ಇದೆ. ಈಗ ಅವರು ವಿವಾದಕ್ಕೆ ಗುರಿಯಾಗಿದ್ದಾರೆ. ರಾಮಾಯಣದ ಕಥೆಯನ್ನು ಬೇರೆ ರೀತಿಯಲ್ಲಿ ಹೇಳಿ ಕ್ರಿಮಿನಲ್ ಕೇಸ್ ಹಾಕಿಸಿಕೊಂಡಿದ್ದಾರೆ ಎಂದು ವರದಿ ಆಗಿದೆ.

ಪ್ರಕಾಶ್ ರಾಜ್ ಅವರು ವೇದಿಕೆ ಮೇಲೆ ಮಾತನಾಡುತ್ತಿದ್ದರು. ರಾಮ ಉತ್ತರ ಭಾರತದವನು ಹಾಗೂ ರಾವಣ ದಕ್ಷಿಣ ಭಾರತದ ಆದಿವಾಸಿ ಎಂದಿದ್ದರು ಪ್ರಕಾಶ್ ರಾಜ್​. ರಾಮ ಹಣ್ಣನ್ನು ಕಿತ್ತು ತಿಂದಿದ್ದರಿಂದ ಇಬ್ಬರ ಮಧ್ಯೆ ಕಿತ್ತಾಟ ಶುರುವಾಯಿತು ಎಂದು ಹೇಳಿ ಚರ್ಚೆ ಹುಟ್ಟುಹಾಕಿದ್ದಾರೆ. ಈಗ ಪ್ರಕಾಶ್ ರಾಜ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ ಎಂದು ಹೇಳಲಾಗುತ್ತಾ ಇದೆ.

ಪ್ರಕಾಶ್ ರಾಜ್ ಹೇಳಿಕೆ ಏನು?

ರಾಮ, ಲಕ್ಷ್ಮಣ ಹಾಗೂ ಸೀತೆ ದಕ್ಷಿಣ ಭಾರತಕ್ಕೆ ಬರುತ್ತಾರೆ. ಬಂದಾಗ ಲಕ್ಷ್ಮಣನಿಗೆ ಹಸಿವಾಗಿರುತ್ತದೆ. ಅಲ್ಲಿ ಹಣ್ಣಿನ ತೋಟ ಒಂದಿರುತ್ತದೆ. ಹೋಗಿ ಹಣ್ಣನ್ನು ತಿನ್ನೋಣ ಎಂದು ಲಕ್ಷ್ಮಣ ಹೇಳುತ್ತಾನೆ. ಎಲ್ಲರೂ ಹಣ್ಣು ತಿನ್ನುತ್ತಾರೆ. ಅಲ್ಲಿಗೆ ಬರುವ ಶೂರ್ಪನಖ, ಅಣ್ಣ ರಾವಣ ಯಾರೋ ಹಣ್ಣನ್ನು ತಿನ್ನುತ್ತಿದ್ದಾರೆ ಎನ್ನುತ್ತಾಳೆ. ಆಗ ರಾವಣ, ಅವರಿಗೆ ಹಸಿವಾಗಿದೆ ತಿನ್ನಲಿ ಎನ್ನುತ್ತಾನೆ’ ಎಂದು ಕಥೆ ಆರಂಭಿಸಿದ್ದಾರೆ ಪ್ರಕಾಶ್ ರಾಜ್.

ಇದನ್ನೂ ಓದಿ: ರಾಮಾಯಣದ ಬಗ್ಗೆ ಪ್ರಕಾಶ್ ರಾಜ್ ಮಾತನಾಡಿದ ವಿಡಿಯೋ ವೈರಲ್; ತೀವ್ರ ಟೀಕೆ

‘ಆ ಬಳಿಕ ರಾವಣ ಹಣ ಕೇಳುತ್ತಾನೆ. ರಾಮ ಇಲ್ಲ ಎನ್ನುತ್ತಾನೆ. 20 ಪರ್ಸೆಂಟ್ ಡಿಸ್ಕೌಂಟ್ ಕೊಡ್ತೀನಿ ಎಂದು ರಾವಣ ಹೇಳುತ್ತಾನೆ. ಹಣವೇ ಇಲ್ಲ ಎಂದಮೇಲೆ ಡಿಸ್ಕೌಂಟ್ ಕೊಟ್ಟು ಏನು ಪ್ರಯೋಜನ? ಅದೇ ರೀತಿ, ಹಿಂದಿ ಹೇರಿಕೆ ಮಾಡಬೇಡಿ. ಇಲ್ಲಿ ಬಂದು ನೀವು ಮಲಯಾಳಂ ಕಲಿಯಿರಿ. ನಾವು ಬೀಫ್ ಫೆಸ್ಟ್ ಮಾಡುತ್ತೇವೆ’ ಎಂದಿದ್ದಾರೆ ಪ್ರಕಾಶ್ ರಾಜ್. ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದೆ ಎಂದು ಹೇಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಸಿಲ ಝಳದಿಂದ ತತ್ತರಿಸಿದ ಜನತೆ: ಇನ್ನೂ 3 ದಿನ ಉಷ್ಣ ಅಲೆ, ಬೆಂಗಳೂರಿಗೂ ತಟ್ಟಲಿದೆ ತಾಪಮಾನ ಏರಿಕೆ ಬಿಸಿ – Kannada News | Karnataka Heatwave Alert: Kalaburagi Records 44 degree celsius, Special Wards for Children in Yadgir as Mercury Soars

ಬೆಂಗಳೂರು, ಏಪ್ರಿಲ್ 17: ಕರ್ನಾಟಕದಲ್ಲಿ (Karnataka Weather) ಬಿಸಿಲಿನ ಪ್ರತಾಪ ಮಿತಿಮೀರಿದ್ದು, ಜನಸಾಮಾನ್ಯರು ಅಕ್ಷರಶಃ ಕಾದ ಕಾವಲಿಯ ಮೇಲೆ ಕುಳಿತಂತಾಗಿದ್ದಾರೆ. ಹವಾಮಾನ ಇಲಾಖೆಯ (IMD) ಇತ್ತೀಚಿನ ವರದಿಯಂತೆ, ಬಿಸಿಲಿನ ತಾಪಮಾನ ಇಷ್ಟು ದಿನ ಒಂದು ಲೆಕ್ಕವಾದರೆ, ಇನ್ಮುಂದೆ ಇನ್ನೊಂದು ಲೆಕ್ಕ ಎಂಬಂತೆ ತೀವ್ರಗೊಳ್ಳಲಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಂತೂ ಸೂರ್ಯನ ಶಾಖಕ್ಕೆ ಜನ ಒದ್ದಾಡುವಂತಾಗಿದೆ. ಉತ್ತರ ಕರ್ನಾಟಕದ ಕೆಲವು ದೇಗುಲಗಳಲ್ಲಿ ದರ್ಶನದ ಸಮಯವನ್ನೇ ಬದಲು ಮಾಡಲಾಗಿದ್ದು, ಕೆಲವು ಜಿಲ್ಲೆಗಳ ಆಸ್ಪತ್ರೆಗಳಲ್ಲಿ ವಿಶೇಷ ‘ಹೀಟ್ ವೇವ್’ ವಾರ್ಡ್‌ಗಳನ್ನು ಆರಂಭಿಸಲಾಗಿದೆ.

ಯಾದಗಿರಿ, ಕಲಬುರಗಿ ಕಾದ ಕೆಂಡ

ಯಾದಗಿರಿಯಲ್ಲಿ ತಾಪಮಾನ 42 ಡಿಗ್ರಿ ಸೆಲ್ಸಿಯಸ್‌ ತಲುಪಿದ್ದು, ಬಿಸಿಲಿನಿಂದಾಗಿ ಮಕ್ಕಳಲ್ಲಿ ನಿರ್ಜಲೀಕರಣ (Dehydration), ವಾಂತಿ-ಭೇದಿ ಕಾಣಿಸಿಕೊಳ್ಳುತ್ತಿದೆ. ಇದಕ್ಕಾಗಿ ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ‘ಹೀಟ್ ವೇವ್’ ವಾರ್ಡ್‌ಗಳನ್ನು ತೆರೆಯಲಾಗಿದೆ. ಇನ್ನು ಕಲಬುರಗಿಯಲ್ಲಿ ಬರೋಬ್ಬರಿ 44 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗುವ ಮೂಲಕ ರಾಜ್ಯದಲ್ಲೇ ಅತಿ ಹೆಚ್ಚು ಬಿಸಿಲು ಇರುವ ಜಿಲ್ಲೆಯಾಗಿ ಹೊರಹೊಮ್ಮಿದೆ. ಕೊಪ್ಪಳದ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸಿಗರ ಹಿತದೃಷ್ಟಿಯಿಂದ ದರ್ಶನದ ಸಮಯವನ್ನು ಬದಲಿಸಲಾಗಿದ್ದು, ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ದರ್ಶನಕ್ಕೆ ಬ್ರೇಕ್ ಹಾಕಲಾಗಿದೆ.

ಮುಂದಿನ 3 ದಿನ ಹೀಟ್ ವೇವ್ ಅಲರ್ಟ್

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಮುಂದಿನ 48 ರಿಂದ 72 ಗಂಟೆಗಳ ಕಾಲ ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ವಿಜಯಪುರ, ಕಲಬುರಗಿ ಮತ್ತು ರಾಯಚೂರಿನಲ್ಲಿ ಹೀಟ್ ವೇವ್ (ಉಷ್ಣ ಅಲೆ) ಮುಂದುವರಿಯಲಿದೆ. ಬೆಂಗಳೂರಿನಲ್ಲಿ ತಾಪಮಾನ 36-38 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿರಲಿದ್ದು, ಸಂಜೆಯ ವೇಳೆಗೆ ಕೆಲವು ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದ ಮೋಡ ಕವಿದ ವಾತಾವರಣವಿರಲಿದೆ. ಆದರೆ, ಕರಾವಳಿ ಭಾಗದಲ್ಲಿ ಉಷ್ಣಾಂಶದ ಜೊತೆಗೆ ತೇವಾಂಶ ಹೆಚ್ಚಾಗಿರುವುದರಿಂದ ಸೆಖೆ ಅತಿ ಹೆಚ್ಚಾಗಿ ಕಾಡಲಿದೆ.

  • ಉಷ್ಣ ಅಲೆಯಲ್ಲಿ ಕಲಬುರಗಿ ಫಸ್ಟ್: 44 ಡಿಗ್ರಿ ಸೆಲ್ಸಿಯಸ್ ತಾಪಮಾನದೊಂದಿಗೆ ರಾಜ್ಯದ ಅತಿ ಬಿಸಿಲ ಜಿಲ್ಲೆ.
  • ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಬಿಸಿಲು ತಗುಲಿದ ಮಕ್ಕಳ ಚಿಕಿತ್ಸೆಗಾಗಿ ವಿಶೇಷ ವಾರ್ಡ್ ಸಿದ್ಧ.
  • ಅಂಜನಾದ್ರಿ ದರ್ಶನ ಬದಲು: ಮಧ್ಯಾಹ್ನದ ಉರಿ ಬಿಸಿಲಿನಿಂದಾಗಿ ಭಕ್ತರಿಗೆ ಅಂಜನಾದ್ರಿ ಬೆಟ್ಟ ಹತ್ತಲು ನಿರ್ಬಂಧ.
  • ರಾಜಸ್ಥಾನದಲ್ಲಿ 50 ಡಿಗ್ರಿ ಹಾಗೂ ಉತ್ತರ ಪ್ರದೇಶದಲ್ಲಿ 49.8 ಡಿಗ್ರಿಯಷ್ಟು ದಾಖಲೆ ಮಟ್ಟದ ತಾಪಮಾನ.
  • ವೈದ್ಯರ ಸಲಹೆ: ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಅನಗತ್ಯವಾಗಿ ಹೊರಗೆ ಬರಬೇಡಿ, ಹೆಚ್ಚು ನೀರು ಸೇವಿಸಿ.

ಇದನ್ನೂ ಓದಿ: ಬಿಸಿಲ ಬೇಗೆಯ ನಡುವೆ ಮಳೆಯ ಮುನ್ಸೂಚನೆ: ರಾಜ್ಯದ 10 ಜಿಲ್ಲೆಗಳಲ್ಲಿ ‘ಹೀಟ್ ವೇವ್’ ಎಚ್ಚರಿಕೆ; ಎಲ್ಲೆಲ್ಲಿ ಮಳೆಯಾಗಲಿದೆ?

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಕೆಲವು ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಅಲ್ಪ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ಆದರೆ ಕಲಬುರಗಿ, ಯಾದಗಿರಿ ಮತ್ತು ಬಳ್ಳಾರಿಯಂತಹ ಅತೀ ಹೆಚ್ಚು ತಾಪಮಾನವಿರುವ ಜಿಲ್ಲೆಗಳಲ್ಲಿ ಮಳೆಯಾಗುವ ಲಕ್ಷಣಗಳಿಲ್ಲ. ಹವಾಮಾನದ ಏರುಪೇರಿನಿಂದಾಗಿ ಸಂಜೆಯ ವೇಳೆ ಮೋಡ ಕವಿದ ವಾತಾವರಣ ಕಂಡುಬಂದರೂ, ಅದು ಬಿಸಿಲಿನ ತಾಪವನ್ನು ಕಡಿಮೆ ಮಾಡಲು ಪೂರಕವಾಗಿರುವುದಿಲ್ಲ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಾಗತಿಕ ರಾಜಕೀಯದಲ್ಲಿ ಬದಲಾದ ಲೆಕ್ಕಾಚಾರ, ಪಾಕಿಸ್ತಾನ ಭೇಟಿಗೆ ಇರಾನ್ ಒಪ್ಪಂದದ ಷರತ್ತು ವಿಧಿಸಿದ ಟ್ರಂಪ್ – Kannada News | Trump’s Iran Peace Deal: Pakistan Visit for Uranium Pact Signals Geopolitical Shift

ವಾಷಿಂಗ್ಟನ್, ಏಪ್ರಿಲ್ 17: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಮತ್ತೊಮ್ಮೆ ತಮ್ಮ ಎಂದಿನ ಶೈಲಿಯ ಭರವಸೆಯ ಮಾತುಗಳ ಮೂಲಕ ಜಗತ್ತಿನ ಗಮನಸೆಳೆದಿದ್ದಾರೆ. ನೆವಾಡಾ ಪ್ರವಾಸಕ್ಕೆ ತೆರಳುವ ಮುನ್ನ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರಾನ್ ಬಹುತೇಕ ಎಲ್ಲದಲ್ಲೂ ಒಪ್ಪಿಕೊಂಡಿದೆ. ಒಂದು ವೇಳೆ ಪಾಕಿಸ್ತಾನದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭ ಬಂದರೆ ನಾನು ಖಂಡಿತ ಅಲ್ಲಿಗೆ ಹೋಗುತ್ತೇನೆ, ಏಕೆಂದರೆ ಪಾಕಿಸ್ತಾನಿಗಳನ್ನು ನನ್ನನ್ನು ಬಯಸುತ್ತಾರೆ ಎಂದು ಹೇಳಿದ್ದಾರೆ. ಜತೆಗೆ ಇರಾನ್ ಒಪ್ಪಂದಕ್ಕೆ ಬಂದರೆ ಮಾತ್ರ ತಾವು ಪಾಕಿಸ್ತಾನಕ್ಕೆ ಹೋಗುವುದಾಗಿಯೂ ಹೇಳಿದ್ದಾರೆ.

ಇರಾನ್‌ನಿಂದ ಯುರೇನಿಯಂ ತ್ಯಾಗದ ಭರವಸೆ?
ಯಾವುದೇ ಬಲವಾದ ಪುರಾವೆಗಳನ್ನು ನೀಡದಿದ್ದರೂ,  ಟೆಹ್ರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಕೈಬಿಡಬೇಕು ಎಂಬ ಅಮೆರಿಕದ ದೀರ್ಘಕಾಲದ ಒತ್ತಾಯಕ್ಕೆ ಇರಾನ್ ಮಣಿಯುತ್ತಿರುವ ಸೂಚನೆಯನ್ನು ಟ್ರಂಪ್ ನೀಡಿದ್ದಾರೆ.

ರಾಜಕೀಯ ತಲೆನೋವಾದ ತೈಲ ಬೆಲೆ ಮತ್ತು ಯುದ್ಧ
ಫೆಬ್ರವರಿ 28 ರಿಂದ ಆರಂಭವಾದ ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷವು ಸಾವಿರಾರು ಜೀವಗಳನ್ನು ಬಲಿಪಡೆದಿದೆ. ಜಾಗತಿಕವಾಗಿ ತೈಲ ಬೆಲೆ ಏರಿಕೆಗೆ ಕಾರಣವಾಗಿರುವ ಈ ಯುದ್ಧವು ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿ ಪರಿಣಮಿಸಿತ್ತು. “ಈ ಯುದ್ಧವು ಶೀಘ್ರದಲ್ಲೇ ಕೊನೆಗೊಳ್ಳಬೇಕು ಎಂದು ಲಾಸ್ ವೇಗಾಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಂಪ್ ಘೊಷಿಸಿದ್ದಾರೆ.

ಇಸ್ರೇಲ್-ಲೆಬನಾನ್ ಕದನ ವಿರಾಮದ ಗೆಲುವು
ಇಸ್ರೇಲ್ ಪ್ರಧಾನಿ ನೆತನ್ಯಾಹು ಮತ್ತು ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಅವರೊಂದಿಗೆ ಸಮಾಲೋಚನೆ ನಡೆಸಿರುವುದಾಗಿ ಹೇಳಿದ ಟ್ರಂಪ್, ಇಬ್ಬರನ್ನೂ ಶ್ವೇತಭವನಕ್ಕೆ ಆಹ್ವಾನಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಗುರುವಾರದಿಂದಲೇ ಇಸ್ರೇಲ್ ಮತ್ತು ಲೆಬನಾನ್ ನಡುವೆ 10 ದಿನಗಳ ಕದನ ವಿರಾಮ ಜಾರಿಗೆ ಬಂದಿದ್ದು, ಇದನ್ನು ಶಾಶ್ವತ ಶಾಂತಿಯನ್ನಾಗಿ ಪರಿವರ್ತಿಸಲು ಜೆಡಿ ವ್ಯಾನ್ಸ್ ಮತ್ತು ಮಾರ್ಕೊ ರೂಬಿಯೊ ನೇತೃತ್ವದ ತಂಡಕ್ಕೆ ಟ್ರಂಪ್ ಜವಾಬ್ದಾರಿ ನೀಡಿದ್ದಾರೆ.

ಮತ್ತಷ್ಟು ಓದಿ: ಪ್ರಧಾನಿ ಮೋದಿ ಜೊತೆ ಟ್ರಂಪ್ 40 ನಿಮಿಷ ಫೋನ್ ಸಂಭಾಷಣೆ; ಹಾರ್ಮುಜ್ ಕುರಿತು ಚರ್ಚೆ

ಪಾಕಿಸ್ತಾನದ ಮಧ್ಯಸ್ಥಿಕೆ ಮತ್ತು ಇರಾನ್ ಸ್ವಾಗತ
ವಿಶೇಷವೆಂದರೆ, ಈ ಶಾಂತಿ ಪ್ರಕ್ರಿಯೆಯಲ್ಲಿ ಪಾಕಿಸ್ತಾನವು ಪ್ರಮುಖ ಮಧ್ಯಸ್ಥಿಕೆ ವಹಿಸುತ್ತಿದೆ. ಲೆಬನಾನ್ ಕದನ ವಿರಾಮವನ್ನು ಇರಾನ್ ಕೂಡ ಸ್ವಾಗತಿಸಿದ್ದು, ಇದು ಅಮೆರಿಕದೊಂದಿಗೆ ಪಾಕಿಸ್ತಾನದ ಮೂಲಕ ತಲುಪಿರುವ ಮಹತ್ವದ ತಿಳುವಳಿಕೆಯ ಭಾಗವಾಗಿದೆ ಎಂದು ಟೆಹ್ರಾನ್ ಮೂಲಗಳು ತಿಳಿಸಿವೆ.

ಒಂದು ಕಾಲದಲ್ಲಿ ಯುದ್ಧದ ಅಂಚಿನಲ್ಲಿದ್ದ ಅಮೆರಿಕ ಮತ್ತು ಇರಾನ್, ಈಗ ಪಾಕಿಸ್ತಾನದ ನೆಲದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಹಂತಕ್ಕೆ ಬಂದಿರುವುದು ಜಾಗತಿಕ ರಾಜಕೀಯದ ದೊಡ್ಡ ತಿರುವು. ಟ್ರಂಪ್ ಅವರ ಈ ‘ಇಸ್ಲಾಮಾಬಾದ್ ಪ್ರವಾಸ’ ಅಂತಿಮವಾದರೆ, ಅದು ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯದ ಮೇಲೆಯೂ ದೊಡ್ಡ ಪರಿಣಾಮ ಬೀರಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Daily Devotional: ಕೋಪವೇ ಮನುಷ್ಯನ ದಾರಿದ್ರ್ಯಕ್ಕೆ ಕಾರಣವಾ? – Kannada News | Is Anger the Root Cause of Human Misfortune

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಕೋಪವೇ ಮನುಷ್ಯನ ದಾರಿದ್ರ್ಯಕ್ಕೆ ಕಾರಣವಾ? ಎಂದು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಮಾನವನ ಜೀವನದಲ್ಲಿ ಎದುರಾಗುವ ಸಂಕಷ್ಟಗಳಿಗೆ ದಾರಿದ್ರ್ಯ ಎಂಬ ಪದವನ್ನು ಬಳಸುತ್ತೇವೆ. ಎಷ್ಟೇ ಕಷ್ಟಪಟ್ಟರೂ ಪ್ರಯೋಜನವಿಲ್ಲದೆ ಇರುವುದು, ಉದ್ಯೋಗ ಸಿಗದಿರುವುದು, ಅಥವಾ ಶಿಕ್ಷಣದಲ್ಲಿ ಯಶಸ್ಸು ಕಾಣದಿರುವುದು ದಾರಿದ್ರ್ಯದ ಲಕ್ಷಣಗಳು. ಈ ದಾರಿದ್ರ್ಯಕ್ಕೆ ಅನೇಕ ಕಾರಣಗಳಲ್ಲಿ ಕೋಪವೂ ಒಂದು ಪ್ರಮುಖ ಕಾರಣವಾಗಿದೆ. ಗ್ರಹದೋಷ, ಪೂರ್ವ ಜನ್ಮದ ದೋಷಗಳು ಅಥವಾ ಪಿತೃ ದೋಷಗಳಷ್ಟೇ ಅಲ್ಲದೆ, ಕೋಪವು ವ್ಯಕ್ತಿಯನ್ನು ಅದೋಗತಿಗೆ ಕೊಂಡೊಯ್ಯುತ್ತದೆ.

ಒಬ್ಬ ಕಂಪನಿಯ ಮಾಲೀಕನು ತನ್ನ ನೌಕರರ ಮೇಲೆ ಅತಿಯಾದ ಕೋಪ ಮಾಡಿಕೊಂಡರೆ, ನೌಕರರು ಆ ಸಂಸ್ಥೆಯನ್ನು ತೊರೆಯುತ್ತಾರೆ. ಇದರಿಂದ ಕಂಪನಿಯು ನಷ್ಟ ಅನುಭವಿಸಿ ಮಾಲೀಕನು ದಾರಿದ್ರ್ಯಕ್ಕೆ ತುತ್ತಾಗುತ್ತಾನೆ. ಕೋಪದಲ್ಲಿ ಆವೇಶಭರಿತ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಪುರಾಣಗಳಲ್ಲಿ ಕಂಸನ ಅಹಂಕಾರ ಮತ್ತು ರಾವಣನ ಕೋಪ ಇಡೀ ಕುಟುಂಬದ ನಾಶಕ್ಕೆ ಕಾರಣವಾಯಿತು. ಅತಿಯಾದ ಕೋಪಿಷ್ಠನಾಗಿದ್ದ ವಿಶ್ವಾಮಿತ್ರ ಮಹರ್ಷಿಗಳು ತಮ್ಮ ಕೋಪವನ್ನು ನಿಯಂತ್ರಿಸಿ ಬ್ರಹ್ಮಋಷಿ ಸ್ಥಾನವನ್ನು ಪಡೆದರು. ಕೋಪವು ಧನಹಾನಿ, ಮಾನಹಾನಿ ಮತ್ತು ಪ್ರಾಣಹಾನಿಗೆ ಕಾರಣವಾಗುತ್ತದೆ. ಯಾವುದೇ ಹೋಮ, ಪೂಜೆ, ವ್ರತಗಳನ್ನು ಕೋಪದಿಂದ ಮಾಡಿದರೆ ಫಲ ಸಿಗುವುದಿಲ್ಲ. ಕೋಪವನ್ನು ಬಿಟ್ಟರೆ ಕುಬೇರನಾಗಬಹುದು ಎಂದು ಗುರೂಜಿ ಹೇಳಿದ್ದಾರೆ.

 

 

 

Source link

Horoscope Today: ಇಂದು ಈ ರಾಶಿಯವರು ಕಡಿಮೆ ಚರ್ಚೆ ಮಾಡಿದರೆ ಒಳಿತು

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 17, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣ ಪಕ್ಷದ ಅಮವಾಸ್ಯಾ ತಿಥಿಯಾಗಿದೆ. ಶುಕ್ರವಾರದಂದು ಬಂದಿರುವ ಅಮಾವಾಸ್ಯೆಯು ಮಹಾಲಕ್ಷ್ಮಿ ಪೂಜೆಗೆ ಪ್ರಾಶಸ್ತ್ಯವಾದ ದಿನವಾಗಿದೆ. ನಾಳೆಯಿಂದ ವೈಶಾಖ ಮಾಸ ಪ್ರಾರಂಭವಾಗುವುದರಿಂದ ಇದನ್ನು ವೈಶಾಖ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ.

ರೇವತಿ ನಕ್ಷತ್ರ, ವೈದೃತಿ ಯೋಗ ಮತ್ತು ಚತುಷ್ಪಾತ್ಕರಣ ಇರತಕ್ಕಂತ ಈ ದಿನ ಮೀನರಾಶಿಯಲ್ಲಿ ಚಂದ್ರ ಸಂಚಾರ ಮಾಡುತ್ತಿದ್ದರೆ, ಮೇಷ ರಾಶಿಯಲ್ಲಿ ರವಿ ಸಂಚಾರ ಮಾಡುತ್ತಿದ್ದಾನೆ. ಇಂದು ಗಜಕೇಸರಿ ಯೋಗ ಕೂಡ ಇರಲಿದೆ. ಡಾ. ಬಸವರಾಜ ಗುರೂಜಿ ಅವರು ಪ್ರತಿ ರಾಶಿಗಳಿಗೂ ಗ್ರಹಗಳ ಶುಭ ಫಲ, ಧನ ಯೋಗ, ಆರೋಗ್ಯ, ವ್ಯವಹಾರ, ಅದೃಷ್ಟ ಸಂಖ್ಯೆ, ಬಣ್ಣ ಮತ್ತು ದಿಕ್ಕಿನ ಬಗ್ಗೆ ವಿವರಿಸಿದ್ದಾರೆ.

 

 

 

Source link

ಸಂಪುಟ ಸಭೆಯಲ್ಲಿ ಕಿಡಿ ಹೊತ್ತಿಸಿದ ದಾವಣಗೆರೆ ದಂಗಲ್: ಮುಸ್ಲಿಂ ನಾಯಕರ ತಲೆದಂಡಕ್ಕೆ ಸಚಿವರ ಆಕ್ಷೇಪ – Kannada News | Congress Rift Widens Over Davanagere By poll: Ministers Clash in Cabinet Meeting Over Action Against Muslim Leaders

ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಜಮೀರ್ ಅಹ್ಮದ್ ಖಾನ್ ಜೊತೆ ಮಾತನಾಡುತ್ತಿರುವುದುImage Credit source: tv9

ಬೆಂಗಳೂರು, ಏಪ್ರಿಲ್ 17: ದಾವಣಗೆರೆ ದಕ್ಷಿಣ ಉಪಚುನಾವಣೆಯ ಫಲಿತಾಂಶದ ಹಣೆಬರಹ ಇನ್ನಷ್ಟೇ ಹೊರಬೀಳಬೇಕಿದೆ. ಆದರೆ, ಕಾಂಗ್ರೆಸ್ (Congress) ನಾಯಕರ ನಡುವಿನ ಶೀತಲ ಸಮರ ಮಾತ್ರ ಬೀದಿಗೆ ಬಂದಿದ್ದು, ಪಕ್ಷದ ಒಗ್ಗಟ್ಟು ಮೂರಾಬಟ್ಟೆಯಾಗಿದೆ. ಮುಸ್ಲಿಂ ನಾಯಕರ (Muslim Leaders) ವಿರುದ್ಧ ತೆಗೆದುಕೊಂಡ ಕಠಿಣ ಕ್ರಮಗಳು ಈಗ ಸರ್ಕಾರದ ಒಳಗೂ ಸಂಚಲನ ಮೂಡಿಸಿವೆ. ಎಂಎಲ್​ಸಿ ಅಬ್ದುಲ್ ಜಬ್ಬಾರ್ ಅಮಾನತು ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಸೀರ್ ಅಹ್ಮದ್ ತಲೆದಂಡದ ವಿಚಾರ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಸ್ಫೋಟಗೊಂಡಿದೆ.

ಸಂಪುಟ ಸಭೆಯಲ್ಲಿ ಏನೇನು ಚರ್ಚೆಯಾಯ್ತು?

ಮುಸ್ಲಿಂ ನಾಯಕರ ವಿರುದ್ಧದ ಕ್ರಮಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾವು ಮುಸ್ಲಿಂ ಸಮುದಾಯವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಸಿದರೆ, ಅಬ್ದುಲ್ ಜಬ್ಬಾರ್ ಮೇಲೆ ಕ್ರಮ ಕೈಗೊಂಡಿದ್ದು ತೀರಾ ಅವಸರದ ನಿರ್ಧಾರ. ಇದು ಸಮುದಾಯವೇ ನಮಗೆ ಸವಾಲು ಹಾಕುವಂತೆ ಮಾಡಿದೆ ಎಂದು ಸತೀಶ್ ಜಾರಕಿಹೊಳಿ ವಾದಿಸಿದ್ದಾರೆ.

ಲಿಂಗಾಯತ ಸಚಿವರ ಪ್ರತಿವಾದ

ಈ ವೇಳೆ ಮಧ್ಯಪ್ರವೇಶಿಸಿದ ಲಿಂಗಾಯತ ಸಮುದಾಯದ ಸಚಿವರು, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ, ತಪ್ಪಾದಾಗ ಕ್ರಮ ಅನಿವಾರ್ಯ ಎಂದು ವಾದ ಮಂಡಿಸಿದರು. ವಾದ-ಪ್ರತಿವಾದಗಳು ತಾರಕಕ್ಕೇರುತ್ತಿದ್ದಂತೆಯೇ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸಭೆಯಿಂದ ಹೊರನಡೆದ ಘಟನೆ ನಡೆದಿದೆ.

ಸಂಪುಟ ಸಭೆಯಲ್ಲಿ ಏನೇನಾಯ್ತು?

  • ಮುಸ್ಲಿಂ ನಾಯಕರ ಟಾರ್ಗೆಟ್: ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹ್ಮದ್ ಮೇಲಿನ ಕ್ರಮಕ್ಕೆ ಸಂಪುಟದ ಹಲವು ಸಚಿವರಿಂದ ಅಸಮಾಧಾನ.
  • ಪ್ರಿಯಾಂಕ್ ಖರ್ಗೆ ಕಿಡಿ: ಮುಸ್ಲಿಂ ಸಮುದಾಯದ ಮ್ಯಾಪಿಂಗ್ ಮತ್ತು ಪ್ರಚಾರದ ವೈಫಲ್ಯಕ್ಕೆ ನಾಯಕರನ್ನು ಹೊಣೆ ಮಾಡುವುದು ಸರಿಯಲ್ಲ ಎಂದ ಸಚಿವರು.
  • ಸತೀಶ್ ಜಾರಕಿಹೊಳಿ ಆಕ್ಷೇಪ: ಶೀಘ್ರವಾಗಿ ಕೈಗೊಂಡ ಶಿಸ್ತು ಕ್ರಮದಿಂದ ಮೈನಾರಿಟಿ ಮತದಾರರ ಕೆಂಗಣ್ಣಿಗೆ ಗುರಿಯಾಗುವ ಭೀತಿ.
  • ನಾಯಕರ ವಾಕ್ಸಮರ: ಲಿಂಗಾಯತ ಮತ್ತು ಮುಸ್ಲಿಂ ನಾಯಕರ ಪರ ವಾದ ಮಂಡಿಸಿದ ಸಚಿವರ ನಡುವೆ ಸಂಘರ್ಷ; ಸಭೆಯಿಂದ ಹೊರನಡೆದ ಡಿಕೆಶಿ ಮತ್ತು ಮಲ್ಲಿಕಾರ್ಜುನ್.

ಸಿಎಂ ಸಮಾಧಾನದ ತಂತ್ರ

ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಜಮೀರ್ ಅಹ್ಮದ್ ಖಾನ್ ಜೊತೆ ಮಾತನಾಡಿ, ದಾವಣಗೆರೆ ಮತ್ತು ಬಾಗಲಕೋಟೆ ಎರಡೂ ಕ್ಷೇತ್ರಗಳನ್ನು ನಾವೇ ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿಯುವ ಮೂಲಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸಮಾಧಾನದ ಸಂದೇಶ ರವಾನಿಸಲು ಯತ್ನಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version