‘ಜನ ನಾಯಗನ್’ಗೆ ಮತ್ತೆ ಶಾಕ್: ಬೆಳಿಗ್ಗೆ ನೀಡಿದ್ದ ಆದೇಶ ಮಧ್ಯಾಹ್ನಕ್ಕೆ ತಡೆ – Kannada News | Court temporarily stays single judge’s order directing UA Certificate to Jana Nayagan movie

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾಕ್ಕೆ ಸಂಕಷ್ಟಗಳ ಸರಮಾಲೆ ಮುಗಿಯುತ್ತಲೇ ಇಲ್ಲ. ಇಂದು (ಜನವರಿ 09)ಕ್ಕೆ ಬಿಡುಗಡೆ ಆಗಬೇಕಿದ್ದ ‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನಿರಾಕರಿಸಿ, ಸಿನಿಮಾವನ್ನು ರಿವ್ಯೂ ಕಮಿಟಿಗೆ ಕಳಿಸಿತ್ತು. ಇದಕ್ಕೆ ಆಕ್ಷೇಪಿಸಿ, ‘ಜನ ನಾಯಗನ್’ ಸಿನಿಮಾದ ನಿರ್ಮಾಪಕರು ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆದು ಇಂದು (ಜನವರಿ 09) ಬೆಳಿಗ್ಗೆ ಮದ್ರಾಸ್ ಹೈಕೋರ್ಟ್​​ನ ಏಕಸದಸ್ಯ ಪೀಠ ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡುವಂತೆ ಸಿಬಿಎಫ್​​ಸಿಗೆ ಆದೇಶಿಸಿತ್ತು, ಆದರೆ ಈಗ ಮಧ್ಯಾಹ್ನದ ವೇಳೆಗೆ ಸ್ವತಃ ಮದ್ರಾಸ್ ಹೈಕೋರ್ಟ್, ತನ್ನದೇ ಆದೇಶಕ್ಕೆ ತಡೆ ನೀಡಿದ್ದು, ಪ್ರಮಾಣ ಪತ್ರ ನೀಡುವಿಕೆ ತಾತ್ಕಾಲಿಕವಾಗಿ ಬೇಡ ಎಂದಿದೆ.

‘ತಮಿಳಗ ಮಕ್ಕಳ್ ಕಚ್ಚಿ’ ರಾಜಕೀಯ ಪಕ್ಷದ ಸಂಸ್ಥಾಪಕರೂ ಆಗಿರುವ ನಟ ವಿಜಯ್ ನಟಿಸಿರುವ ‘ಜನ ನಾಯಗನ್’ ಸಿನಿಮಾನಲ್ಲಿ ಸಾಕಷ್ಟು ರಾಜಕೀಯ ಅಂಶಗಳಿದ್ದು, ಇದೇ ಕಾರಣಕ್ಕೆ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕುತ್ತಿದ್ದು, ಇದು ರಾಜಕೀಯ ನಡೆ ಎನ್ನಲಾಗುತ್ತಿದೆ. ಆದರೆ ನ್ಯಾಯಾಲಯವು ಮಧ್ಯ ಪ್ರವೇಶಿಸಿ, ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡುವಂತೆ ಮಾಡಿತ್ತು. ಆದರೆ ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಮತ್ತೆ ಮರು ಆದೇಶ ಹೊರಡಿಸಿ, ಪ್ರಮಾಣ ಪತ್ರವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಇದೆಲ್ಲ ಪ್ರಕ್ರಿಯೆಗಳು ವಿಜಯ್ ಅಭಿಮಾನಿಗಳಲ್ಲಿ ತೀವ್ರ ಆಕ್ರೋಶ ಮೂಡಿಸಿದ್ದು, ವಿಜಯ್ ವಿರುದ್ಧ ರಾಜಕೀಯ ಕುತಂತ್ರದ ಭಾಗವಾಗಿ ಇದೆಲ್ಲ ನಡೆಯುತ್ತಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮದ್ರಾಸ್​​ ಹೈಕೋರ್ಟ್​​ನ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಲಾಗಿದ್ದು, ‘ಸಿನಿಮಾದ ನಿರ್ಮಾಪಕರು, ಸಿನಿಮಾ ಬಿಡುಗಡೆಯ ಕಾರಣ ನೀಡಿ ನ್ಯಾಯಾಲಯದ ಮೇಲೆ ಒತ್ತಡ ಹೇರಿದ್ದರು ಹಾಗಾಗಿ ಪ್ರಕರಣ ಸೂಕ್ತ ವಿಚಾರಣೆ ನಡೆದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದೀಗ ಪ್ರಕರಣದ ಮುಂದಿನ ವಿಚಾರಣೆಯನ್ನು ಇದೇ ತಿಂಗಳು 21ಕ್ಕೆ ಮುಂದೂಡಿದೆ. ಆ ಮೂಲಕ ‘ಜನ ನಾಯಗನ್’ ಸಿನಿಮಾ ಬಿಡುಗಡೆ ಮತ್ತೆ ಅನಿಶ್ಚತತೆಗೆ ಒಳಗಾಗಿದೆ.

ವಿಜಯ್ ವಿರುದ್ಧ ರಾ

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:06 pm, Fri, 9 January 26

Source link

WPL 2026: ಡಬ್ಲ್ಯುಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ; ಯಾರೆಲ್ಲ ಪ್ರದರ್ಶನ ನೀಡಲಿದ್ದಾರೆ? – Kannada News | WPL 2026: MI vs RCB Kickoff and Grand Opening Ceremony Details

2026 ರ ಮಹಿಳಾ ಪ್ರೀಮಿಯರ್ ಲೀಗ್‌ನ (Women’s Premier League) ನಾಲ್ಕನೇ ಸೀಸನ್ ಇಂದು ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಆರಂಭವಾಗಲಿದೆ. ಲೀಗ್​ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (MI vs RCB) ತಂಡಗಳು ಮುಖಾಮುಖಿಯಾಗುತ್ತಿವೆ. ಮೊದಲ ಪಂದ್ಯಕ್ಕೆ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣ ಆತಿಥ್ಯವಹಿಸುತ್ತಿದೆ. ಪಂದ್ಯ ರಾತ್ರಿ 7:30 ಕ್ಕೆ ಆರಂಭವಾಗಲಿದ್ದು, 7 ಗಂಟೆಗೆ ಟಾಸ್ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಪ್ರತಿ ಬಾರಿಯಂತೆ ಈ ಬಾರಿಯೂ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಾಲಿವುಡ್​ ಸ್ಟಾರ್ ಸೆಲೆಬ್ರಿಟಿಗಳು ನೃತ್ಯ ಹಾಗೂ ಹಾಡಿನ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಸೆಲೆಬ್ರಿಟಿಗಳಿಂದ ಕಾರ್ಯಕ್ರಮ

ಜನವರಿ 9, ಶುಕ್ರವಾರ ಸಂಜೆ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಾಹಿತಿ ಪ್ರಕಾರ ಸಂಜೆ 6:45 ಕ್ಕೆ, ಉದ್ಘಾಟನಾ ಸಮಾರಂಭ ಪ್ರಾರಂಭವಾಗಲಿದೆ. ಈ ಬಾರಿ ಬಿಸಿಸಿಐ ಉದ್ಘಾಟನಾ ಸಮಾರಂಭವನ್ನು ಬಹಳ ವಿಶೇಷ ರೀತಿಯಲ್ಲಿ ಯೋಜಿಸಿದೆ. ಜನಪ್ರಿಯ ಗಾಯಕ ಯೋ ಯೋ ಹನಿ ಸಿಂಗ್ ತಮ್ಮ ಜನಪ್ರಿಯ ಹಾಡುಗಳಿಂದ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಇವರೊಂದಿಗೆ ಬಾಲಿವುಡ್ ಸುಂದರಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ತಮ್ಮ ಅದ್ಭುತ ನೃತ್ಯ ಪ್ರದರ್ಶನದೊಂದಿಗೆ ರಂಜಿಸಲಿದ್ದಾರೆ. ವಿಶೇಷವೆಂದರೆ ಮಾಜಿ ವಿಶ್ವ ಸುಂದರಿ ಹರ್ನಾಜ್ ಸಂಧು ಕೂಡ ಈ ಸಮಾರಂಭದಲ್ಲಿ ಮಿಂಚಲಿದ್ದಾರೆ. ಇದರೊಂದಿಗೆ ಇಡೀ ಕ್ರಿಕೆಟ್ ಮೈದಾನವು ಸೆಲೆಬ್ರಿಟಿಗಳಿಂದ ತುಂಬಿ ತುಳುಕಲಿದೆ.

ಅಭಿಮಾನಿಗಳು ಈ ಭವ್ಯ ಕಾರ್ಯಕ್ರಮ ಮತ್ತು ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು. ನೀವು ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ವೀಕ್ಷಿಸಲು ಬಯಸಿದರೆ, ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಉಚಿತ ಲೈವ್ ಸ್ಟ್ರೀಮಿಂಗ್ ಲಭ್ಯವಿದೆ. ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಈ ಡಿಜಿಟಲ್ ಹಬ್ಬವನ್ನು ಆನಂದಿಸಬಹುದು.

5 ತಂಡಗಳ ನಡುವೆ ಫೈಟ್

ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ದೆಹಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ಸೇರಿದಂತೆ ಒಟ್ಟು ಐದು ತಂಡಗಳು ಸ್ಪರ್ಧಿಸಲಿವೆ. ಒಟ್ಟು 22 ಪಂದ್ಯಗಳು ನಡೆಯಲಿದ್ದು, ಲೀಗ್ ಪಂದ್ಯಗಳು ನವಿ ಮುಂಬೈನಲ್ಲಿ ನಡೆಯಲಿವೆ. ಪ್ಲೇಆಫ್‌ಗಳು ಮತ್ತು ಫೈನಲ್ ಪಂದ್ಯ ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆಯಲಿವೆ.

ಉಭಯ ತಂಡಗಳು

ಮುಂಬೈ ಇಂಡಿಯನ್ಸ್: ಹರ್ಮನ್‌ಪ್ರೀತ್ ಕೌರ್ (ನಾಯಕಿ), ನ್ಯಾಟ್ ಸಿವರ್-ಬ್ರಂಟ್, ಹೇಲಿ ಮ್ಯಾಥ್ಯೂಸ್, ಅಮನ್‌ಜೋತ್ ಕೌರ್, ಜಿ. ಕಮಲಿನಿ, ಅಮೆಲಿಯಾ ಕೆರ್, ಶಬ್ನಿಮ್ ಇಸ್ಮಾಯಿಲ್, ಸಂಸ್ಕೃತಿ ಗುಪ್ತಾ, ಸಜನಾ ಸಜೀವನ್, ರಾಹಿಲಾ ಫಿರ್ದೌಸ್, ನಿಕೋಲಾ ಕ್ಯಾರಿ, ಪೂನಂ ಖೆಮ್ನಾರ್, ತ್ರಿವೇಣಿ ವಸಿಷ್ಟ, ನಲ್ಲ ರೆಡ್ಡಿ, ಸೈಕಾ ಇಶಾಕ್, ಮಿಲ್ಲಿ ಇಲ್ಲಿಂಗ್‌ವರ್ತ್

ಆರ್​ಸಿಬಿ: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಲಾರೆನ್ ಬೆಲ್, ಲಿನ್ಸೆ ಸ್ಮಿತ್, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಗ್ರೇಸ್ ಹ್ಯಾರಿಸ್, ಗೌತಮಿ ನಾಯಕ್, ಪ್ರತ್ಯೂಷಾ ಕುಮಾರ್, ಡಿ. ಹೇಮಲತಾ, ಸಯಾಲಿ ಸತ್ಘರೆ (ಎಲ್ಲಿಸ್ ಪೆರಿ ಬದಲಿಗೆ)

Published On – 3:46 pm, Fri, 9 January 26

Source link

ಕುಟುಂಬಗಳ ನಡುವೆ ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​ – Kannada News | Fight Between Two Families Over 8 Acre Land in Ranebennur, Haveri

ಹಾವೇರಿ, ಜನವರಿ 09: ಆಸ್ತಿ ವ್ಯಾಜ್ಯ ಹಿನ್ನೆಲೆ ಕೆಸರು ಗದ್ದೆಯಲ್ಲೇ 2 ಕುಟುಂಬಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ನದಿಹರಹಳ್ಳಿಯಲ್ಲಿ ನಡೆದಿದೆ. 8 ಎಕರೆ ಗದ್ದೆ ಸಲುವಾಗಿ ಕೋಟೆಗೌಡ ಮತ್ತು ಚನ್ನಗೌಡ ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ‌ಈ ವೇಳೆ ಎರಡೂ ಕುಟುಂಬದ ಸದಸ್ಯರಿಗೆ ಗಂಭೀರ ಗಾಯಗಳಾಗಿವೆ. ಹಲ್ಲೆಗೊಳಗಾದವರನ್ನು ತಾಲೂಕು ಮತ್ತು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಕುಮಾರಪಟ್ಟಣಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ದಂಪತಿ ಸರಸದಲ್ಲಿದ್ದಾಗ ಮಾಸ್ಟರ್​​ ಕೀ ಬಳಸಿ ರೂಂಗೆ ಬಂದ ಸಿಬ್ಬಂದಿ; ಲೀಲಾ ಪ್ಯಾಲೇಸ್​​​ ಹೋಟೆಲ್​ಗೆ 10 ಲಕ್ಷ ರೂ. ದಂಡ! – Kannada News | Udaipur Leela Palace Hotel Fined Rs 10 Lakh For Privacy Breach as staff enters couple room without permission

ಚೆನ್ನೈ, ಜನವರಿ 9: ರಾಜಸ್ಥಾನದಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿತ್ತು. ಉದಯಪುರದ (Udaipur) ಐಷಾರಾಮಿ ಹೋಟೆಲ್ ಲೀಲಾ ಪ್ಯಾಲೇಸ್​​ನಲ್ಲಿ ರೂಂ ಬುಕ್ ಮಾಡಿದ್ದ ದಂಪತಿ ಬಾತ್​ರೂಂನಲ್ಲಿ ಒಟ್ಟಾಗಿ ಸ್ನಾನ ಮಾಡುತ್ತಾ, ಸರಸದಲ್ಲಿ ತೊಡಗಿದ್ದಾಗ ಆ ಹೋಟೆಲ್ ಸಿಬ್ಬಂದಿ ತಮ್ಮ ಬಳಿ ಇರುವ ಮಾಸ್ಟರ್ ಕೀ ಬಳಸಿ ರೂಂನೊಳಗೆ ಬಂದಿದ್ದರು. ಇದರಿಂದ ಆ ದಂಪತಿ ತೀವ್ರ ಮುಜುಗರಕ್ಕೀಡಾಗಿದ್ದರು. ಈ ಕುರಿತು ಹೋಟೆಲ್ ಸಿಬ್ಬಂದಿ ಕ್ಷಮಾಪಣೆ ಕೇಳಿದ್ದರೂ ಈ ವಿಷಯ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಈ ಕೇಸ್ ತೀರ್ಪು ಹೋಟೆಲ್​ನ ಗ್ರಾಹಕರಾಗಿದ್ದ ಆ ದಂಪತಿಯ ಪರವಾಗಿ ಬಂದಿದೆ.

ಚೆನ್ನೈನ ಗ್ರಾಹಕ ನ್ಯಾಯಾಲಯವು ದಿ ಲೀಲಾ ಪ್ಯಾಲೇಸ್ ಉದಯಪುರದ ಗೌಪ್ಯತೆಯ ಉಲ್ಲಂಘನೆಗಾಗಿ ಅದನ್ನು ತರಾಟೆಗೆ ತೆಗೆದುಕೊಂಡಿದೆ. ಜನಪ್ರಿಯ ಐಷಾರಾಮಿ ಹೋಟೆಲ್‌ನಲ್ಲಿ ಅತಿಥಿಗಳಾಗಿದ್ದ ದಂಪತಿಗಳಿಗೆ ಪರಿಹಾರವಾಗಿ 10 ಲಕ್ಷ ರೂ.ಗಳನ್ನು ಪಾವತಿಸಲು ಆದೇಶಿಸಿದೆ. ಚೆನ್ನೈ ಮೂಲದ ದಂಪತಿ ದಿ ಲೀಲಾ ಪ್ಯಾಲೇಸ್‌ನ ಹೌಸ್‌ಕೀಪಿಂಗ್ ಸಿಬ್ಬಂದಿ ಇಬ್ಬರೂ ಬಾತ್​​ರೂಮ್‌ನಲ್ಲಿರುವಾಗ ಮಾಸ್ಟರ್ ಕೀ ಬಳಸಿ ತಮ್ಮ ಕೋಣೆಗೆ ಪ್ರವೇಶಿಸಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: Viral: ಗೆಳೆಯನನ್ನು ಭೇಟಿಯಾಗಲು ಬೆಂಗಳೂರಿಗೆ ಬಂದ ವಿದೇಶಿ ಮಹಿಳೆ ಹೀಗೆಂದಿದ್ದೇಕೆ?

ಆದರೆ, ಲೀಲಾ ಪ್ಯಾಲೇಸ್ ಹೋಟೆಲ್ ತಾವು ಯಾವುದೇ ತಪ್ಪನ್ನು ಮಾಡಿಲ್ಲ ಎಂದು ಹೇಳಿತ್ತು. ಆ ದಂಪತಿ ತಮ್ಮ ಕೋಣೆಯ ಬಾಗಿಲಿನ ಮೇಲೆ ‘ಡಿಸ್ಟರ್ಬ್ ಮಾಡಬೇಡಿ’ (Do Not Disturb) ಫಲಕವನ್ನು ಹಾಕಿರಲಿಲ್ಲ ಎಂದು ಹೇಳಿದೆ.

ಜನವರಿ 26ರಂದು ಹೋಟೆಲ್‌ನಲ್ಲಿ ಒಂದು ದಿನದ ವಾಸ್ತವ್ಯವನ್ನು ಕಾಯ್ದಿರಿಸಿದ್ದ ಚೆನ್ನೈ ಮೂಲದ ದಂಪತಿ ಸಲ್ಲಿಸಿದ ದೂರಿನ ನಂತರ ಚೆನ್ನೈ (ಉತ್ತರ) ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗವು ದಿ ಲೀಲಾ ಪ್ಯಾಲೇಸ್‌ಗೆ ದಂಡ ವಿಧಿಸುವ ಆದೇಶವನ್ನು ಅಂಗೀಕರಿಸಿದೆ. “ನೋ ಸರ್ವಿಸ್” ಎಂದು ಕೂಗುತ್ತಿದ್ದರೂ ಆ ಸಿಬ್ಬಂದಿ ರೂಂನಿಂದ ಹೊರಗೆ ಹೋಗಲಿಲ್ಲ ಎಂದು ದಂಪತಿ ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:47 pm, Fri, 9 January 26

Source link

ಇದು ಮಹಿಳೆಯರಿಗಾಗಿಯೇ ಇರುವ ದ್ವೀಪ, ಪುರುಷರಿಗೆ ಇಲ್ಲ ಎಂಟ್ರಿ – Kannada News | Finland: SuperShe Island is a place accessible only to women, here’s what’s special about it

ಬದುಕಿನ ಜಂಜಾಟ ಮರೆತು ಪ್ರಶಾಂತ ಸ್ಥಳಕ್ಕೆ ಹೋಗಿ ಕುಳಿತು ಬಿಡುವ ಎಂದೆನಿಸುವುದು ಸಹಜ. ಹೀಗಾಗಿ ಕೆಲವರು ವೀಕೆಂಡ್‌ಗೆ ಟ್ರಿಪ್ (Trip) ಪ್ಲ್ಯಾನ್ ಮಾಡಿ ಸುತ್ತಾಡಲು ಹೋಗುತ್ತಾರೆ. ಎಲ್ಲಾ ಟೆನ್ಶನ್‌ಗಳಿಗೂ ಬ್ರೇಕ್ ಹಾಕಿ ಏಕಾಂಗಿ ಕಳೆಯಬೇಕೆನ್ನುವವರಿಗೆ ಒಂದು ವಿಶೇಷ ದ್ವೀಪವಿದೆ. ಅದುವೇ ಫಿನ್‌ಲ್ಯಾಂಡ್‌ನ ಸೂಪರ್‌ಶೀ ದ್ವೀಪ (SuperShe in Finland’s). ಆದರೆ ಈ ದ್ವೀಪಕ್ಕೆ ಫ್ಯಾಮಿಲಿ ಸಮೇತ ಹೋಗಬೇಕೆನ್ನುವವರಿಗೆ ಈ ಆಸೆ ಖಂಡಿತ ಈಡೇರಲ್ಲ. ಪುರುಷರಂತೂ ಈ ದ್ವೀಪದ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳೋ ಆಗಿಲ್ಲ. ಹೌದು, ಈ ದ್ವೀಪಕ್ಕೆ ಪುರುಷರಿಗೆ ಎಂಟ್ರಿ ಇಲ್ಲ. ಮಹಿಳೆಯರು ಮಾತ್ರ ಇಲ್ಲಿಗೆ ಹೋಗಬಹುದಾಗಿದೆ.

ಪಿನ್ ಲ್ಯಾಂಡ್‌ನಲ್ಲಿ ಹೆಲ್ಸಿಂಕಿ ನಗರದಿಂದ ಸರಿಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಬಾಲ್ಟಿಕ್ ಸಮುದ್ರದ ಕರಾವಳಿಯಲ್ಲಿರುವ ಈ ದ್ವೀಪವು 8.4 ಎಕರೆ ಪ್ರದೇಶದವರೆಗೆ ವ್ಯಾಪಿಸಿದೆ. ಮಹಿಳೆಯರು ಈ ದ್ವೀಪಕ್ಕೆ ಭೇಟಿ ಕೊಟ್ಟು ಯಾವುದೇ ಭಯವಿಲ್ಲದೇ ತಿರುಗಾಡಬಹುದು. ಆದರೆ ಈ ದ್ವೀಪಕ್ಕೆ ಏಕಕಾಲದಲ್ಲಿ ಎಂಟು ಮಹಿಳೆಯರಿಗೆ ಮಾತ್ರ ಹೋಗಲು ಅವಕಾಶವಿದೆ.

ಸಮುದ್ರದ ಅಲೆಗಳು ಹಾಗೂ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಬೆಳಿಗ್ಗೆ ಯೋಗ ಮತ್ತು ಧ್ಯಾನ ಮಾಡುವ ಮೂಲಕ ದಿನವನ್ನು ಆರಂಭಿಸಬಹುದಾಗಿದೆ. ದಟ್ಟವಾದ ಕಾಡಿನಲ್ಲಿ ನಡೆಯುವುದು, ಸಾಹಸಮಯ ಚಟುವಟಿಕೆಗಳು, ಸಾಂಪ್ರದಾಯಿಕ ಉಗಿಸ್ನಾನ ಹೀಗೆ ಇಲ್ಲಿಗೆ ಬಂದ್ರೆ ಮಹಿಳೆಯರು ಅನುಭವಿಸಬಹುದು. ಇನ್ನು ವಿಶೇಷ ಎಂಬಂತೆ ಇಲ್ಲಿ ಸಪ್ಲೈಯರ್‌ಯಿಂದ ಹಿಡಿದು ಕುಕ್, ಕ್ಲೀನರ್, ಟ್ರೇನರ್‌ವರೆಗೆ ಎಲ್ಲರೂ ಮಹಿಳೆಯರೇ ಆಗಿದ್ದಾರೆ.

ಇದನ್ನೂ ಓದಿ:ಈ ನಗರದಲ್ಲಿ ಬಟ್ಟೆ ಧರಿಸಿ ಹೊರ ಬಂದರೆ ಬೀಳುತ್ತೆ ಭಾರೀ ದಂಡ

ಟೆಕ್ ಕಂಪನಿಯ ಮಾಜಿ ಸಿಇಒ ಕ್ರಿಸ್ಟಿನಾ ರಾತ್ ಕಾರ್ಪೊರೇಟ್ ಜಗತ್ತಿನಲ್ಲಿನ ಒತ್ತಡದಿಂದ ಮುಕ್ತರಾಗಲು ಮಹಿಳೆಯರಿಗಾಗಿ ಸ್ಥಾಪಿಸಿದ್ದರಂತೆ. ಹಾಗಂತ ಈ ದ್ವೀಪದಲ್ಲಿ ಪುರುಷರಿಗೆ ಎಂಟ್ರಿ ಇಲ್ಲ ಎಂಬ ಜಾರಿಗೆ ತಂದದ್ದು ಪುರುಷರ ಮೇಲಿನ ದ್ವೇಷದಿಂದಲ್ಲ, ಬದಲಾಗಿ ಮಹಿಳೆಯರು ಮುಕ್ತವಾಗಿ ಓಡಾಡಲು ಹಾಗೂ ಒಂಟಿಯಾಗಿ ಸಮಯ ಕಳೆಯಬೇಕೆನ್ನುವ ಉದ್ದೇಶದಿಂದ ಮಾತ್ರ ಎನ್ನುವುದು ವಿಶೇಷ. ಆದರೆ ದುರಸ್ತಿ ಕೆಲಸಗಳಿಗಾಗಿ ಮಾತ್ರ ಪುರುಷರಿಗೆ ಸೀಮಿತ ಸಮಯದಲ್ಲಿ ಪ್ರವೇಶ ನೀಡಲಾಗುತ್ತದೆ. ಈ ಎಲ್ಲಾ ಕಾರಣದಿಂದ ಈ ದ್ವೀಪವನ್ನು ಮಹಿಳೆಯರ ಸ್ವರ್ಗ ಎಂದು ಕರೆಯಲಾಗುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್ – Kannada News | Rashika says Rakshitha Is not played well this week in Bigg Boss

ಫಿನಾಲೆ ಹತ್ತಿರ ಬರುತ್ತಿದ್ದಂತೆ ಬಿಗ್​​ಬಾಸ್ (Bigg Boss) ಮನೆಯಲ್ಲಿ ಜಗಳಗಳು ಸಹ ಹೆಚ್ಚಾಗಿವೆ. ಫಿನಾಲೆ ಹತ್ತಿರ ಇರುವುದರಿಂದ ಸ್ಪರ್ಧಿಗಳು ತಮ್ಮ 100% ನೀಡಿ ಆಡುತ್ತಿದ್ದಾರೆ. ಎಲ್ಲರೂ ತಮ್ಮ ಬೆಸ್ಟ್ ಅನ್ನು ನೀಡುವ ಪ್ರಯತ್ನದಲ್ಲಿದ್ದಾರೆ. ಆದರೆ ಇದೀಗ ಮನೆಯಲ್ಲಿ ಈ ವಾರದ ಕಳಪೆ ಆಯ್ಕೆ ಪ್ರಕ್ರಿಯೆ ನಡೆದಿದೆ. ಸಂಪ್ರದಾಯದಂತೆ ಒಬ್ಬೊಬ್ಬರು ಒಬ್ಬೊಬ್ಬರಿಗೆ ಕಳಪೆ ಕೊಟ್ಟಿದ್ದಾರೆ. ರಾಶಿಕಾ, ರಕ್ಷಿತಾ ಶೆಟ್ಟಿಗೆ ಕಳಪೆ ಕೊಟ್ಟಿದ್ದಾರೆ ಆದರೆ ಇದು ರಕ್ಷಿತಾ ಶೆಟ್ಟಿಗೆ ಸಹನೀಯವಾಗಿಲ್ಲ. ರಕ್ಷಿತಾರ ಜಗಳ, ವಾದ ನೋಡಿ ಧ್ರುವಂತ್ ನಕ್ಕಿದ್ದಾರೆ. ಇದು ರಕ್ಷಿತಾಗೆ ಇನ್ನಷ್ಟು ಸಿಟ್ಟು ತರಿಸಿದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಬೆಂಗಳೂರಿನಲ್ಲಿ ಸಲಿಂಗಿ ಜೋಡಿಯಲ್ಲಿ ಒಬ್ಬಳು ಗರ್ಭಿಣಿ? ಎಚ್ಚರಿಕೆ ನೀಡಿದ ತಜ್ಞರು – Kannada News | Viral AI Image: Bengaluru Lesbian Couple Pregnancy Story Debunked?

ಬೆಂಗಳೂರು, ಜ.9: ಪ್ರತಿಯೊಂದು ಹೆಣ್ಣಿಗೂ ತಾಯಿಯಾಗುವ ಹಕ್ಕಿದೆ. ಆದರೆ ಆ ಮಗುವನ್ನು ಪಡೆಯುವ ರೀತಿಯೂ ಮುಖ್ಯವಾಗಿರುತ್ತದೆ. ಈ ಪ್ರಕೃತಿಯ ಪ್ರಕಾರ ಒಂದು ಹೆಣ್ಣು ಗಂಡಿನಿಂದಲ್ಲೇ ಪಡೆಯಬೇಕು ಎಂಬ ನಿಯಮವಿದೆ. ಗಂಡು-ಹೆಣ್ಣು ಸೇರಿದಾಗ ಮಾತ್ರ ಸಂಬಂಧಗಳಿಗೆ ಅರ್ಥ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದಕ್ಕೆ ವಿರುದ್ಧವಾಗಿ ಕೆಲವರು ನಡೆದುಕೊಳ್ಳುತ್ತಿದ್ದಾರೆ. ಈಗಿನ ಟ್ರೆಂಡ್​​ ಪ್ರಕಾರ ಸಮಲಿಂಗಿ ಸಂಬಂಧಗಳು ಅಂದರೆ ಸಲಿಂಗ ಪ್ರೇಮ, ಇದು ಸಾಮಾಜಿಕ ವ್ಯವಸ್ಥೆಯಲ್ಲಿ ಹಾಗೂ ಭಾರತದ ಪದ್ಧತಿಗೂ ವಿರುದ್ಧವಾಗಿದೆ. ಇಂದಿಗೂ ಕೂಡ ಸಲಿಂಗ ಸಂಬಂಧಕ್ಕೆ ಕಾನೂನತ್ಮಕ ಸ್ಥಾನಮಾನ ಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಇದರ ಮಧ್ಯೆ ಬೆಂಗಳೂರಿನಲ್ಲಿ ಒಂದು ವಿಚಿತ್ರ ಘಟನೆ ನಡೆದಿರುವ ಪೋಸ್ಟ್​ವೊಂದು ವೈರಲ್ ಆಗಿದೆ. ಬೆಂಗಳೂರಿನ ಸಲಿಂಗಕಾಮಿ ದಂಪತಿಯಲ್ಲಿ (lesbian couple) ಒಬ್ಬಾಕೆ ಗರ್ಭಿಣಿಯಾಗಿದ್ದಾಳೆ ಎಂಬ ಪೋಸ್ಟ್​​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ವ್ಯಾಪಕ ಚರ್ಚೆಗೂ ಕಾರಣವಾಗಿದೆ.

ಇದೀಗ ಈ ಬಗ್ಗೆ ಫೋಟೋವೊಂದು ಇನ್ಸ್ಟಾಗ್ರಾಮ್​​​ನಲ್ಲಿ ವೈರಲ್​​ ಆಗಿದೆ. ಕೆಲವರು ಈ ಸುದ್ದಿಗ ನಿಜವಲ್ಲ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಟೋವೊಂದು ವೈರಲ್​ ಆಗಿದೆ. ಈ ಜೋಡಿ ತಮ್ಮ ಸಂಬಂಧ ಹಾಗೂ ಗರ್ಭಿಣಿಯಾಗಿರುವ ಬಗ್ಗೆ ಎಲ್ಲೂ ಹಂಚಿಕೊಂಡಿಲ್ಲ. ಆದರೆ ಈ ಫೋಟೋವನ್ನು ನೋಡಿ ಅನೇಕರು ಇದು ಎಐಯಿಂದ ರಚನೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇಬ್ಬರೂ ಈ ಸಲಿಂಗ ಸಂಬಂಧವನ್ನು ಹೊಂದಿದ್ದಾರೆ ಎಂಬುದಕ್ಕೆ ಯಾವ ಮಾಹಿತಿ ಇಲ್ಲ. ಒಂದು ಹೆಣ್ಣಿನಿಂದ ಮತ್ತೊಂದು ಹೆಣ್ಣು ಮಗು ಪಡೆಯಲು ಹೇಗೆ? ಸಾಧ್ಯ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇದು ಸುಳ್ಳು ಸುದ್ದಿ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಜೀವನಶೈಲಿ ದುಬಾರಿ ಅಲ್ಲ: ತಿಂಗಳಿಗೆ 27,300 ರೂ ಖರ್ಚು ಮಾಡುವ ಯುವತಿಯ ಸಲಹೆ

ಈ ಫೋಟೋವನ್ನು ನೋಡಿ ಹಲವು ತಜ್ಞರು ತುಂಬಾ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ. ತಮ್ಮ ಪೋಟೋಗಳನ್ನು ಎಐಗೆ ಹಾಕುವ ಮುನ್ನ ತಂತ್ರಿಕಾ ರಕ್ಷಣೆಯ ಬಗ್ಗೆ ನೋಡಬೇಕು. ಕೆಲವೊಂದು ಬಾರಿ ಎಐಗೆ ಹಾಕುವ ಕಾರಣ ಫೋಟೋಗಳನ್ನು ಕದಿಯುವ ಸಾಧ್ಯತೆಗಳು ಇದೆ ಎಂದು ಹೇಳಿದ್ದಾರೆ. ಅದರಲ್ಲಿಯೂ ನೋಡಲು ಸುಂದರ ಆಗಿರುವ ಯುವತಿಯರು ಇದರಲ್ಲಿ ಅಪ್ಲೋಡ್​​ ಮಾಡಿದ್ರೆ ಮುಗಿದೇ ಹೋಯ್ತು. ಇಂತಹ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಹೇಳಲಾಗಿದೆ. ಸಲಿಂಗಿಗಳ ವಿವಾಹಕ್ಕೆ ಸುಪ್ರೀಂಕೋರ್ಟ್ ಅಕ್ಟೋಬರ್ 2023 ರಲ್ಲಿ ಕಾನೂನು ಮಾನ್ಯತೆ ನೀಡಲು ನಿರಾಕರಿಸಿದ್ದರೂ, ಅದಕ್ಕೂ ಮುನ್ನ ಅವರ ಹಕ್ಕುಗಳನ್ನು ಕೋರ್ಟ್ ಎತ್ತಿಹಿಡಿದಿದೆ, ಸಲಿಂಗ ಸಂಬಂಧಗಳು ಈಗ ಅಪರಾಧವಲ್ಲ ಎಂದು ಹೇಳಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಿತ್ತಳೆಯ ಏಳು ಪಟ್ಟು ಪ್ರಯೋಜನ 100 ಗ್ರಾಂ ನುಗ್ಗೆ ಸೊಪ್ಪಿನಲ್ಲಿದೆ ಎಂದ್ರೆ ನಂಬುತ್ತೀರಾ? – Kannada News | Moringa Leaves: Super food for Health

ನುಗ್ಗೆ ಸೊಪ್ಪು (ಮೊರಿಂಗ) ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದು ನಿಮಗೆ ತಿಳಿದಿರಬಹುದು. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಈ ಎಲೆಗಳನ್ನು ನಿಯಮಿತವಾಗಿ ಸೇವನೆ ಮಾಡುವುದು ಬಹಳ ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಬಹುತೇಕ ಎಲ್ಲಾ ಋತುಗಳಲ್ಲಿ ಲಭ್ಯವಿರುವ ನುಗ್ಗೆಕಾಯಿ ಮತ್ತು ಅವುಗಳ ಸೊಪ್ಪು ಆರೋಗ್ಯಕ್ಕೆ ಅಗತ್ಯವಿರುವಂತಹ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ನೀಡುತ್ತದೆ. ಸೂಪ್‌ಗಳಿಂದ ಹಿಡಿದು ಸಾಂಬಾರ್, ಪಲ್ಯ ಹೀಗೆ ನಾನಾ ರೀತಿಯ ಭಕ್ಷ್ಯಗಳಲ್ಲಿ ಉಪಯೋಗ ಮಾಡಬಹುದಾಗಿದೆ. ಆಯುರ್ವೇದದ ಪ್ರಕಾರ, ನುಗ್ಗೆ ಸೊಪ್ಪಿನ (Moringa Leaves) ಸೇವನೆಯಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಹಾಗಾದರೆ ಇದರ ಸೇವನೆಯಿಂದ ಯಾವ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು? ಯಾವ ಸಮಸ್ಯೆಗೆ ರಾಮಬಾಣ ಎಂಬುದನ್ನು ತಿಳಿದುಕೊಳ್ಳಿ.

ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನ:

  • ನುಗ್ಗೆ ಸೊಪ್ಪು ಪೋಷಕಾಂಶಗಳ ಶಕ್ತಿ ಕೇಂದ್ರ. ಕೇವಲ 100 ಗ್ರಾಂ ಸೊಪ್ಪಿನಲ್ಲಿ ಕಿತ್ತಳೆಗಿಂತ ಏಳು ಪಟ್ಟು ಹೆಚ್ಚು ವಿಟಮಿನ್ ಸಿ ಅಂಶವಿದ್ದು ಮೆಗ್ನೀಸಿಯಮ್, ವಿಟಮಿನ್ ಕೆ ಮತ್ತು ಇ ಗಳಿಂದಲೂ ಸಮೃದ್ಧವಾಗಿವೆ.
  • ಟೈಫಾಯಿಡ್ ಜ್ವರದಿಂದ ಬಳಲುತ್ತಿರುವವರು ನುಗ್ಗೆ ಸೊಪ್ಪಿನ ಜೊತೆಗೆ ಅವುಗಳ ಬೇರುಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಜ್ವರ ಬೇಗನೆ ಕಡಿಮೆಯಾಗುತ್ತದೆ.
  • ತೀವ್ರ ತಲೆನೋವು ಇದ್ದಲ್ಲಿ ನುಗ್ಗೆ ಸೊಪ್ಪಿನ ಎಲೆಗಳನ್ನು ಪುಡಿಮಾಡಿ ತಲೆಗೆ ಹಚ್ಚುವುದರಿಂದ ನೋವು ಕ್ರಮೇಣ ಕಡಿಮೆಯಾಗುತ್ತದೆ.
  • ನುಗ್ಗೆ ಮರದ ಬೇರುಗಳು ಕೂಡ ಆರೋಗ್ಯಕ್ಕೆ ಪ್ರಯೋಜನಕಾರಿ. ಗಂಟಲು ನೋವು ಇದ್ದರೆ, ಅದರ ಕಾಂಡಗಳಿಂದ ಕಷಾಯ ಮಾಡಿ ಬಾಯಿ ಮುಕ್ಕಳಿಸುವುದರಿಂದ ನೋವು ಶಮನವಾಗುತ್ತದೆ.
  • ನುಗ್ಗೆ ಸೊಪ್ಪನ್ನು ನೆನೆಸಿ ಅಥವಾ ಅದನ್ನು ಕುದಿಸಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.
  • ದೈಹಿಕ ದೌರ್ಬಲ್ಯ ಅಥವಾ ಆಯಾಸದಿಂದ ಬಳಲುತ್ತಿದ್ದರೆ, ಹೂವು ಮತ್ತು ನುಗ್ಗೆ ಸೊಪ್ಪನ್ನು ನೀರಿನಲ್ಲಿ ಕುದಿಸಿ ಕುಡಿಯಬಹುದು. ಇದು ಸಂಧಿವಾತ ನೋವಿನಿಂದ ಪರಿಹಾರ ನೀಡುತ್ತದೆ.
  • ನುಗ್ಗೆ ಸೊಪ್ಪು ಯಕೃತ್ತಿನ ಆಂತರಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದನ್ನು ಸೇವನೆ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸಿ ಆ ಬಳಿಕ ಸೇವನೆ ಮಾಡುವುದು ಬಹಳ ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಾಲಾ ಪಠ್ಯಪುಸ್ತಕದಲ್ಲಿ ಇರಲಿದೆ ಪುನೀತ್ ರಾಜ್​ಕುಮಾರ್ ಜೀವನದ ಪಾಠ – Kannada News | Karnataka school textbooks to have lesson on actor Puneeth Rajkumar

ನಟ ಪುನೀತ್ ರಾಜ್​ಕುಮಾರ್ (Puneeth Rajkumar) ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ ಅವರು ಮಾಡಿದ ಸಾಧನೆ ಎಲ್ಲರಿಗೂ ಸ್ಫೂರ್ತಿ ಆಗಿದೆ. ಬಾಲನಟನಾಗಿ ಚಿತ್ರರಂಗದಲ್ಲಿ ಮಿಂಚಿ, ಹೀರೋ ಆಗಿಯೂ ಜನಮನ ಗೆದ್ದ ಪುನೀತ್ ಅವರು ಸಾಮಾಜಿಕ ಕಾರ್ಯಗಳ ಮೂಲಕವೂ ಗುರುತಿಸಿಕೊಂಡಿದ್ದರು. ಅವರ ಸಾಧನೆಯ ಕಥೆ ಅನೇಕರಿಗೆ ಸ್ಫೂರ್ತಿ ಆಗುತ್ತದೆ. ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಪಡೆದ ಪುನೀತ್ ರಾಜ್​​ಕುಮಾರ್ ಅವರ ಜೀವನದ ಕಥೆ ಈಗ ಶಾಲಾ ಪಠ್ಯಪುಸ್ತಕದಲ್ಲಿ (Karnataka School Textbooks) ಸೇರ್ಪಡೆ ಆಗಲಿದೆ. ಆ ಬಗ್ಗೆ ತಯಾರಿ ನಡೆದಿದೆ. ಇದು ಪುನೀತ್ ರಾಜ್​ಕುಮಾರ್ ಅವರ ಅಭಿಮಾನಿಗಳಿಗೆ ಸಖತ್ ಸಂತಸ ತಂದಿದೆ.

ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭದಲ್ಲಿ ಈ ವಿಷಯವನ್ನು ಪರಿಗಣಿಸಲು ‘ಪಠ್ಯ ಪುಸ್ತಕ ಸಂಘ’ ತೀರ್ಮಾನಿಸಿದೆ. ಅಂದರೆ, ಮುಂದಿನ ದಿನಗಳಲ್ಲಿ ಕರ್ನಾಟಕದ ಶಾಲೆಗಳ ಪಠ್ಯಪುಸ್ತಕದಲ್ಲಿ ಪುನೀತ್ ರಾಜ್​ಕುಮಾರ್ ಅವರ ಸಾಧನೆಗಳನ್ನು ಸೇರಿಸಲಾಗುವುದು. ಆ ಮೂಲಕ ಮುಂದಿನ ಪೀಳಿಗೆಗೆ ಪುನೀತ್ ರಾಜ್​ಕುಮಾರ್ ಬಗ್ಗೆ ತಿಳಿಸಿಕೊಡಲಾಗುವುದು.

ಪುನೀತ್ ರಾಜ್​ಕುಮಾರ್ ಅವರು ಜನಿಸಿದ್ದು 1975ರ ಮಾರ್ಚ್ 17ರಂದು. ಬಾಲನಟನಾಗಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಹಲವು ಸಿನಿಮಾಗಳಿಗೆ ನಟಿಸಿ ಭೇಷ್ ಎನಿಸಿಕೊಂಡರು. ‘ಹೆಟ್ಟದ ಹೂವು’ ಸಿನಿಮಾಗಾಗಿ ‘ಅತ್ಯುತ್ತಮ ಬಾಲ ನಟ’ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡರು. ‘ಅಪ್ಪು’ ಸಿನಿಮಾದ ಮೂಲಕ 2002ರಲ್ಲಿ ನಾಯಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದರು.

30ಕ್ಕೂ ಅಧಿಕ ಸಿನಿಮಾಗಳಲ್ಲಿ ಪುನೀತ್ ರಾಜ್​ಕುಮಾರ್ ಅವರು ಹೀರೋ ಆಗಿ ಅಭಿನಯಿಸಿದರು. ಹಲವು ಬಗೆಯ ಪಾತ್ರಗಳನ್ನು ಮಾಡಿ ಅಭಿಮಾನಿಗಳನ್ನು ರಂಜಿಸಿದರು. ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಕಳಕಳಿ ಮೂಲಕವೂ ಅವರು ಜನರಿಗೆ ಹತ್ತಿರ ಆಗಿದ್ದರು. ಈ ಎಲ್ಲ ಅಂಶಗಳನ್ನು ಪಠ್ಯಪುಸ್ತಕದ ಮೂಲಕ ಮುಂದಿನ ಪೀಳಿಗೆಗೆ ತಿಳಿಸಲಾಗುವುದು.

ಇದನ್ನೂ ಓದಿ: ಪುನೀತ್ ರಾಜ್​​ಕುಮಾರ್ ಸಮಾಧಿಗೆ ನಮಿಸಲು ಬಂದ ಜನಸಾಗರ; ಕಿಂಚಿತ್ತೂ ಕಡಿಮೆ ಆಗಿಲ್ಲ ಅಭಿಮಾನ

ಈ ಬಗ್ಗೆ ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರು ‘ಟೈಮ್ಸ್ ಆಫ್ ಇಂಡಿಯಾ’ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನನಗೆ ಬಹಳ ಖುಷಿಯಾಗಿದೆ. ಈ ಗೌರವಕ್ಕಾಗಿ ಕರ್ನಾಟಕ ಸರ್ಕಾರಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ತಂದೆಗೆ ಸಿಕ್ಕ ದೊಡ್ಡ ಗೌರವ ಇದು ಎಂದು ನಮ್ಮ ಮಕ್ಕಳಿಗೆ ತಿಳಿದಿದೆ. ಚಿತ್ರರಂಗದಲ್ಲಿ ಹಲವರು ಇದ್ದಾರೆ. ಆದರೆ ಈ ರೀತಿಯ ಗೌರವ ಎಲ್ಲರಿಗೂ ಸಿಗುವುದಿಲ್ಲ’ ಎಂದು ಅಶ್ವಿನಿ ಪುನೀತ್ ರಾಜ್​​ಕುಮಾರ್ ಹೇಳಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 4:13 pm, Fri, 9 January 26

Source link

ರೆಡ್ಡಿಗಳ ದಂಗಲ್​​ಗೆ ಖಾಕಿ ತಲೆದಂಡ: ಸಚಿವ ಜಮೀರ್​​ ಎದುರು ದಕ್ಷ ಅಧಿಕಾರಿ ಕಣ್ಣೀರು! – Kannada News | Ballari Clash: Senior Officer Vertika Katiyar Breaks Down in Front of Minister Zameer Over Her Transfer

ಸಚಿವರ ಬಳಿ ಅಧಿಕಾರಿ ಕಣ್ಣೀರು.

ಬೆಂಗಳೂರು, ಜನವರಿ 09: ಬ್ಯಾನರ್​​ ವಿಚಾರವಾಗಿ ಬಳ್ಳಾರಿಯಲ್ಲಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್​​ ಕಾರ್ಯಕರ್ತ ಸಾವನ್ನಪ್ಪಿದ್ದ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಹಿರಿಯ ಅಧಿಕಾರಿಗಳ ತಲೆದಂಡ ಮಾಡಿತ್ತು. ಆರಂಭದಲ್ಲಿ ಎಸ್ಪಿ ಪವನ್ ನೆಜ್ಜೂರು ಅವರನ್ನು ಮಾತ್ರ ಅಮಾನತು ಮಾಡಲಾಗಿತ್ತಾದರೂ ಬಳಿಕ ಡಿಐಜಿಪಿ ವರ್ತಿಕಾ ಕಟಿಯಾರ್ ವರ್ಗಾವಣೆ ಮಾಡಿ ಆದೇಶಿಸಲಾಗಿತ್ತು. ಸಿವಿಲ್ ರೈಟ್ಸ್ ಮತ್ತು ಎನ್ಫೋರ್ಸ್​ಮೆಂಟ್​ ವಿಭಾಗಕ್ಕೆ ಟ್ರಾನ್ಸ್​​ಫರ್​​ ಆಗಿರುವ ವರ್ತಿಕಾ, ಸರ್ಕಾರದ ನಿಲುವಿಗೆ ತೀವ್ರ ಬೇಸರಗೊಂಡಿದ್ದಾರೆ ಎನ್ನಲಾಗಿದೆ.

ಸಚಿವರ ಮುಂದೆ ಕಣ್ಣೀರು

ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್‌ ಮುಂದೆ ದಕ್ಷ ಅಧಿಕಾರಿ ವರ್ತಿಕಾ ಕಟಿಯಾರ್​​ ಕಣ್ಣೀರು ಹಾಕಿದ್ದು, ತಡರಾತ್ರಿಯೂ ಸ್ಥಳದಲ್ಲಿದ್ದು ನ್ಯಾಯುತವಾಗಿ ಕೆಲಸ ಮಾಡಿದ್ದೇನೆ. ಇಷ್ಟಾದರೂ ತನ್ನ ವರ್ಗಾವಣೆ ಮಾಡಿ ಅನ್ಯಾಯ ಮಾಡಿದ್ದು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ. ತೀವ್ರ ಬೇಸರಗೊಂಡಿದ್ದ ವರ್ತಿಕಾರಿಗೆ ಈ ವೇಳೆ ಸಚಿವ ಜಮೀರ್ ಅಹಮ್ಮದ್‌ ಖಾನ್ ಧೈರ್ಯತುಂಬಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬಳ್ಳಾರಿ ಬ್ಯಾನರ್ ಗಲಾಟೆ; ಭರತ್ ರೆಡ್ಡಿ ಬೆಂಬಲಿಗರಿಂದ ಜನಾರ್ದನ ರೆಡ್ಡಿ ವಿರುದ್ಧ ಸ್ಫೋಟಕ ಸಾಕ್ಷ್ಯ ಬಿಡುಗಡೆ

ಇನ್ನು ಸರ್ಕಾರ ತಮ್ಮನ್ನು ಅಮಾನತು ಮಾಡಿರುವ ವಿಚಾರವಾಗಿ ಪವನ್ ನೆಜ್ಜೂರು ಕೂಡ ಮಾನಸಿಕವಾಗಿ ಬಹಳ ನೊಂದಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ತುಮಕೂರಿನಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಆಘಾತಕಾರಿ ಸುದ್ದಿಗಳು ಹರಿದಾಡಿದ್ದವು. ಸ್ನೇಹಿತನ ಫಾರ್ಮ್‌ಹೌಸ್‌ನಲ್ಲಿ ಮಾತ್ರೆ ಸೇವಿಸಿದ್ದ ನಜ್ಜೂರ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ ಎನ್ನಲಾಗಿತ್ತು. ಬಳಿಕ ಈ ಬಗ್ಗೆ ಖುದ್ಧು ಸ್ಪಷ್ಟನೆ ನೀಡಿದ್ದ ಪವನ್ ನೆಜ್ಜೂರ್ ಅವರ ತಂದೆ, ಯಾವುದೇ ಕಾರಣಕ್ಕೂ ನನ್ನ ಪುತ್ರ ಆತ್ಮಹತ್ಯೆಯ ಪ್ರಯತ್ನ ಮಾಡಿಲ್ಲ ಎಂದು ಹೇಳಿದ್ದರು.

ಬ್ಯಾನರ್​​ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರು ಅವರನ್ನ ಅಮಾನತು ಮಾಡಿತ್ತು. ದುರ್ದೈವ ಅಂದರೆ ಬಳ್ಳಾರಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲಿ ಪವನ್ ನೆಜ್ಜೂರು ಸಸ್ಪೆಂಡ್ ಆಗಿದ್ದರು. ರೆಡ್ಡಿಗಳ ದಂಗಲ್‌ನಲ್ಲಿ ಪೊಲೀಸ್ ಅಧಿಕಾರಿಗಳ ತಲೆದಂಡದ ಬಗ್ಗೆ ಕಿಡಿ ಕಾರಿದ್ದ ವಿಪಕ್ಷಗಳು, ಸರ್ಕಾರದ ಮಾನ ಉಳಿಸಿಕೊಳ್ಳುವುದಕ್ಕೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದ್ದವು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version