ಚೀನಾ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ: ಅಮೆರಿಕ ಹಿಂದಿಕ್ಕಿ ಅಗ್ರಸ್ಥಾನ, ಹೆಚ್ಚಿದ ವ್ಯಾಪಾರ ಕೊರತೆ – Kannada News | China Overtakes US: India’s Top Trade Partner in FY26, Trade Deficit Soars

ನವದೆಹಲಿ, ಏಪ್ರಿಲ್ 15: ಜಾಗತಿಕ ವ್ಯಾಪಾರ ಮಾರುಕಟ್ಟೆಯಲ್ಲಿ ಮಹತ್ವದ್ದೆಂದು ಪರಿಗಣಿಸಬಹುದಾದ ಬೆಳವಣಿಗೆಯೊಂದರಲ್ಲಿ, ಭಾರತದ ಅತಿದೊಡ್ಡ ಟ್ರೇಡ್ ಪಾರ್ಟ್ನರ್ ದೇಶವಾಗಿ ಅಮೆರಿಕವನ್ನು ಚೀನಾ ಹಿಂದಿಕ್ಕಿದೆ. 2025-26ನೇ ಹಣಕಾಸು ವರ್ಷದಲ್ಲಿ ಭಾರತದ ಅತ್ಯಂತ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿ ಚೀನಾ ಹೊರಹೊಮ್ಮಿದೆ. ಸರ್ಕಾರದ ಇತ್ತೀಚಿನ ದತ್ತಾಂಶಗಳ ಪ್ರಕಾರ, ಉಭಯ ದೇಶಗಳ (ಭಾರತ ಚೀನಾ) ನಡುವಿನ ದ್ವಿಪಕ್ಷೀಯ ವ್ಯಾಪಾರವು (bilateral trade) ಬರೋಬ್ಬರಿ 151.1 ಬಿಲಿಯನ್ ಡಾಲರ್ ತಲುಪಿದೆ.

ಕಳೆದ ನಾಲ್ಕು ಸತತ ವರ್ಷಗಳಿಂದ (2021-22 ರಿಂದ 2024-25ರವರೆಗೆ) ಅಮೆರಿಕವು ಭಾರತದ ಅಗ್ರ ವ್ಯಾಪಾರ ಪಾಲುದಾರನಾಗಿತ್ತು. ಆದರೆ ಈ ಬಾರಿ ಚೀನಾ ಆ ಸ್ಥಾನವನ್ನು ಮರಳಿ ಪಡೆದಿದೆ. ಈ ಹಿಂದೆ 2013-14 ರಿಂದ 2017-18ರ ಅವಧಿಯಲ್ಲಿ ಹಾಗೂ 2020-21ರಲ್ಲಿ ಕೂಡ ಚೀನಾವೇ ಅಗ್ರಸ್ಥಾನದಲ್ಲಿತ್ತು.

ಹೆಚ್ಚಿದ ಟ್ರೇಡ್ ಡೆಫಿಸಿಟ್ ಆತಂಕ

ವ್ಯಾಪಾರ ವಹಿವಾಟು ಹೆಚ್ಚಾಗಿದ್ದರೂ, ಚೀನಾದೊಂದಿಗೆ ಭಾರತದ ವ್ಯಾಪಾರ ಕೊರತೆಯು ಗಣನೀಯವಾಗಿ ಏರಿರುವುದು ಕಳವಳಕಾರಿ ಸಂಗತಿಯಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಚೀನಾಕ್ಕೆ ಭಾರತದ ರಫ್ತು ಶೇ. 36.66 ರಷ್ಟು ಏರಿಕೆಯಾಗಿ 19.47 ಶತಕೋಟಿ ಡಾಲರ್ ತಲುಪಿದೆ. ಚೀನಾದಿಂದ ಭಾರತಕ್ಕೆ ಆಗುವ ಆಮದು ಶೇ. 16 ರಷ್ಟು ಹೆಚ್ಚಾಗಿದ್ದು, 131.63 ಶತಕೋಟಿ ಡಾಲರ್ ಮುಟ್ಟಿದೆ. ಇದರಿಂದಾಗಿ ವ್ಯಾಪಾರ ಕೊರತೆಯು 112.16 ಶತಕೋಟಿ ಡಾಲರ್​ಗೆ ಏರಿಕೆಯಾಗಿದೆ. ಕಳೆದ ವರ್ಷ ಇದು 99.2 ಶತಕೋಟಿ ಡಾಲರ್ ಇತ್ತು.

ಇದನ್ನೂ ಓದಿ: ವಿಶ್ವದ ದೊಡ್ಡ ಆರ್ಥಿಕತೆ: 5ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಕುಸಿದ ಭಾರತ; ಕಾರಣ ಏನು ಗೊತ್ತಾ?

ಮತ್ತೊಂದೆಡೆ, ಅಮೆರಿಕದೊಂದಿಗಿನ ವ್ಯಾಪಾರದಲ್ಲಿ ಭಾರತವು ಸರ್​ಪ್ಲಸ್​ನಲ್ಲಿದೆ. ಅಮೆರಿಕಕ್ಕೆ ಭಾರತದ ರಫ್ತು 87.3 ಶತಕೋಟಿ ಡಾಲರ್ ಆಗಿದ್ದು, ಆಮದು 52.9 ಶತಕೋಟಿ ಡಾಲರ್ ಆಗಿದೆ. ಆದರೂ, ಅಮೆರಿಕದೊಂದಿಗಿನ ವ್ಯಾಪಾರ ಮಿಗುತೆಯು ಅಥವಾ ಟ್ರೇಡ್ ಸರ್​ಪ್ಲಸ್ ಕಳೆದ ವರ್ಷದ 40.89 ಶತಕೋಟಿ ಡಾಲರ್‌ನಿಂದ 34.4 ಶತಕೋಟಿ ಡಾಲರ್‌ಗೆ ಕುಸಿದಿದೆ.

ಇತರ ದೇಶಗಳೊಂದಿಗಿನ ವಹಿವಾಟು ಹೇಗಿದೆ?

ವಾಣಿಜ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತದ ರಫ್ತು ಮತ್ತು ಆಮದು ಪ್ರವೃತ್ತಿ ವಿವಿಧ ದೇಶಗಳೊಂದಿಗೆ ಈ ಕೆಳಗಿನಂತಿದೆ:

  • ಧನಾತ್ಮಕ ರಫ್ತು ಬೆಳವಣಿಗೆ: ಯುಎಇ (UAE), ಜರ್ಮನಿ, ಹಾಂಗ್ ಕಾಂಗ್, ಇಟಲಿ, ನೇಪಾಳ, ಬ್ರೆಜಿಲ್ ಮತ್ತು ವಿಯೆಟ್ನಾಂ ದೇಶಗಳಿಗೆ ಭಾರತದ ರಫ್ತು ಹೆಚ್ಚಾಗಿದೆ.
  • ಋಣಾತ್ಮಕ ರಫ್ತು ಬೆಳವಣಿಗೆ: ನೆದರ್ಲೆಂಡ್ಸ್, ಯುಕೆ (UK), ಸಿಂಗಾಪುರ, ಬಾಂಗ್ಲಾದೇಶ, ಸೌದಿ ಅರೇಬಿಯಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಿಗೆ ಭಾರತದ ರಫ್ತು ಪ್ರಮಾಣ ಕುಸಿದಿದೆ.
  • ಆಮದು ಇಳಿಕೆ: ರಷ್ಯಾ, ಇರಾಕ್, ಇಂಡೋನೇಷ್ಯಾ ಮತ್ತು ಕತಾರ್‌ನಿಂದ ಭಾರತಕ್ಕೆ ಆಗುವ ಆಮದು ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.
  • ಆಮದು ಏರಿಕೆ: ಯುಎಇ, ಸೌದಿ ಅರೇಬಿಯಾ, ಸ್ವಿಟ್ಜರ್ಲೆಂಡ್, ಜಪಾನ್ ಮತ್ತು ಜರ್ಮನಿಯಿಂದ ಭಾರತಕ್ಕೆ ಆಗುವ ಆಮದು ಪ್ರಮಾಣದಲ್ಲಿ ಏರಿಕೆಯಾಗಿದೆ.

ಇದನ್ನೂ ಓದಿ: ಕಳೆದ ವರ್ಷ ಭಾರತದಿಂದ 860 ಬಿಲಿಯನ್ ಡಾಲರ್ ರಫ್ತು; ಇದು ಹೊಸ ದಾಖಲೆ

ಒಟ್ಟಾರೆಯಾಗಿ, 2025-26ರ ಸಾಲಿನಲ್ಲಿ ಭಾರತದ ವಿದೇಶಿ ವ್ಯಾಪಾರದಲ್ಲಿ ಚೀನಾ ಮತ್ತೆ ತನ್ನ ಪ್ರಾಬಲ್ಯ ಮೆರೆದಿದ್ದು, ಆಮದು ಅವಲಂಬನೆಯನ್ನು ತಗ್ಗಿಸುವುದು ಭಾರತದ ಮುಂದಿರುವ ದೊಡ್ಡ ಸವಾಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅನ್ಯಕೋಮಿನ ಯುವಕನನ್ನ ಪ್ರೀತಿಸುತ್ತಿದ್ದ ಯುವತಿ ಆತ್ಮಹತ್ಯೆ, ಲವ್ ಜಿಹಾದ್ ಆರೋಪ – Kannada News | A Young Woman Commits Suicide Who Loves Muslim youth at Bagalkot

ಬಾಗಲಕೋಟೆ, (ಏಪ್ರಿಲ್ 15): ಅನ್ಯಕೋಮಿನ ಯುವಕನನ್ನ ಪ್ರೀತಿಸುತ್ತಿದ್ದ (Love) ಯುವತಿ ಆತ್ಮಹತ್ಯೆಗೆ(Suicide) ಮಾಡಿಕೊಂಡಿರುವ ಘಟನೆ ಬಾಗಲಕೋಟೆ ನಗರದ (Bagalkote) ಸೆಕ್ಟರ್ ನಂಬರ್ 48ರ ಮನೆಯಲ್ಲಿ ನಡೆದಿದೆ. ಟೈರ್ ಅಂಗಡಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಭೂಮಿಕಾ ತಿಪ್ಪಣ್ಣವರ್ (19) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನದಾಫ್ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಯುವತಿ ಸಂಬಂಧಿಕರು ಆರೋಪಿಸುತ್ತಿದ್ದಾರೆ. ಇನ್ನೊಂದಡೆ ಇದೊಂದು ಪಕ್ಕಾ ಲವ್ ಜಿಹಾದ್ ಎಂದು ಹಿಂದೂಪರ ಸಂಘಟನೆಗಳ ಆರೋಪವಾಗಿದೆ. ಹೀಗಾಗಿ ಈ ಪ್ರಕರಣ ತೀವ್ರ ಸ್ವರೂಪ ಪಡೆದಿದೆ.

ಟಯರ್‌ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದ ಭೂಮಿಕಾ ಮತ್ತು ಟಾಂಟಾಂ ಚಾಲಕ ಡೊಂಗ್ರಿಸಾಬ್ ನದಾಫ್‌ ಮಧ್ಯೆ ಕಳೆದ 2 ವರ್ಷಗಳಿಂದ ಪ್ರೀತಿಯಿತ್ತು. ಆದ್ರೆ, ಅದೇನಾಯ್ತೋ ಏನೋ ಇಂದು (ಏಪ್ರಿಲ್ 15) ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ಶರಣಾಗಿರುವ ಭೂಮಿಕಾ ಹಿಜಾಬ್‌ನಲ್ಲಿ ಕಾಣಿಸಿಕೊಂಡಿದ್ದ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಎಸ್‌ಪಿ ಸಿದ್ಧಾರ್ಥ್‌ ಗೋಯಲ್ ಭೇಟಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಬಾಗಲಕೋಟೆ ನವನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಪ್ರೇಮ ಸಂಬಂಧವೋ? ಲವ್​​ ಜಿಹಾದೋ?: ಅಸಲಿಗೆ ಹುಬ್ಬಳ್ಳಿ, ಧಾರವಾಡದಲ್ಲಿ ಆಗ್ತಿರೋದೇನು?

ನದಾಫ್‌  ಕಿರುಕಳದಿಂದಲೇ ಆತ್ಮಹತ್ಯೆ

ಇನ್ನು ಆತ್ಮಹತ್ಯೆಗೆ ಶರಣಾಗಿರುವ ಭೂಮಿಕಾ ಅತ್ತೆ ಲಕ್ಷ್ಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಆತ ನಿತ್ಯ ಟಂಟಂ ತಂದು ನಮ್ಮ ಮನೆ ಮುಂದೆ ನಿಲ್ಲಿಸುತ್ತಿದ್ದ. ಆಕೆಗೆ ಕರೆ ಮಾಡಿ, ಮೆಸ್ಸೇಜ್ ಮಾಡಿ ಮಾತನಾಡುವಂತೆ ಪೀಡಿಸುತ್ತಿದ್ದ. ತನ್ನೊಂದಿಗೆ ಓಡಾಡಲು ಬರುವಂತೆ ಹೇಳುತ್ತಿದ್ದ. ರಾತ್ರಿ 12 ರಿಂದ 1 ಗಂಟೆಯವರೆಗೂ ಫೋನಿನಲ್ಲೇ ಮಾತನಾಡುತ್ತಿದ್ದರು. ಮದುವೆ ಬೇಡ ಆದ್ರೆ ತನ್ನೊಂದಿಗೆ ಇರು ಅಂತ ಕಿರುಕುಳ ಕೊಡುತ್ತಿದ್ದ. ಅವನ ಕಿರುಕಳದಿಂದಲೇ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.

ಇದೊಂದು ಪಕ್ಕಾ ಲವ್ ಜಿಹಾದ್

ಈ ಪ್ರಕರಣ ಸಂಬಂಧ ಹಿಂದೂ ಜಾಗರಣ ವೇದಿಕೆ ಮುಖಂಡ ಕುಮಾರಸ್ವಾಮಿ ಹಿರೇಮಠ ಮಾತನಾಡಿ, ಇದೊಂದು ಪಕ್ಕಾ ಲವ್ ಜಿಹಾದ್ ಪ್ರಕರಣ. ನವನಗರದಲ್ಲಿ ಮುಸ್ಲಿಂ ಕಿಡಿಗೇಡಿಗಳು ಇದನ್ನೇ ದಂಧೆ ಮಾಡಿಕೊಂಡಿದ್ದಾರೆ. 46 ಗ್ಯಾಂಗ್ ಅಂತ ಮಾಡಿಕೊಂಡು ಗದ್ದಲ ಗಲಾಟೆ ಮಾಡುತ್ತಾರೆ. ಕಳೆದ ನಾಲ್ಕೈದು ವರ್ಷದಿಂದ ಯುವತಿ ಜೊತೆ ಡೋಂಗ್ರಿಸಾಬ್ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ. ರಸ್ತೆಯ ಮಧ್ಯೆ ಅಡ್ಡ ಹಾಕಿ ಕಾಡಿಸುತ್ತಿದ್ದ. ಮುಸ್ಲಿಂ ಧರ್ಮಕ್ಕೆ ಮತಾಂತರವಾಗು ಎಂದು ಪ್ರಚೋದನೆ ಮಾಡುತ್ತಿದ್ದನಂತೆ. ಅಲ್ಲದೇ ರಂಜಾನ್ ವೇಳೆ ಹಿಜಾಬ್ ಬುರ್ಖಾ ಹಾಕಿಸಿ ಕರೆದುಕೊಂಡು ಓಡಾಡುತ್ತಿದ್ದ. ಇದನ್ನೆಲ್ಲಾ ನೋಡಿದ್ರೆ ಇದೊಂದು ಪಕ್ಕಾ ಲವ್ ಜಿಹಾದ್ ಪ್ರಕರಣ ಎನಿಸುತ್ತೆ. ಯುವತಿ ಡೆತ್ ನೋಟು ಬರೆದಿದ್ದಳು ಅನ್ನೋ ಮಾಹಿತಿ ಇದೆ. ಪೊಲೀಸರು ಅದನ್ನು ತೆಗೆದಿರಿಸಿದ್ದಾರೆ ಎನ್ನುವ ಸಂಶಯ ಇದೆ. ಘಟನೆ ಬಗ್ಗೆ ನಾಳೆ (ಏಪ್ರಿಲ್ 16) ಹಿಂದೂಪರ ಸಂಘಟನೆಗಳೆಲ್ಲಾ ಸೇರಿ ಮುಂದಿನ ಹೋರಾಟ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ಒಟ್ಟಿನಲ್ಲಿ ಭೂಮಿಕಾ ಆತ್ಮಹತ್ಯೆ ಹಿಂದೆ ಹಲವು ಆರೋಪಗಳು ಕೇಳಿಬರುತ್ತಿದ್ದು, ಈ ಪ್ರಕರಣ ಮುಂದಿನ ದಿನಗಳಲ್ಲಿ ಹಂತಕ್ಕೆ ಹೋಗಿ ನಿಲ್ಲುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಫಸ್ಟ್​ ನೈಟ್​ಗೂ ಮೊದಲು ಹೆಂಡತಿಯ ಬೇಡಿಕೆ ಕೇಳಿ ಶಾಕ್ ಆದ ಗಂಡ! – Kannada News | Delhi Bride demands 90 lakh Rs to Touch her on First night groom shocked

ನವದೆಹಲಿ, ಏಪ್ರಿಲ್ 15: ಮದುವೆಯಾದ ಮೊದಲ ರಾತ್ರಿ ಹೆಂಡತಿಗಾಗಿ ಬೆಡ್​ ರೂಂನಲ್ಲಿ ಕಾದು ಕುಳಿತಿದ್ದ ಗಂಡನಿಗೆ ಶಾಕ್ (Viral News) ಕಾದಿತ್ತು. ಪ್ರೀತಿಯಿಂದ ಹೆಂಡತಿಯನ್ನು ಮುಟ್ಟಲು ಹೋದ ಗಂಡ ತನ್ನ ಹೆಂಡತಿಯ ಡಿಮ್ಯಾಂಡ್ ಕೇಳಿ ಆಘಾತಗೊಂಡಿದ್ದಾನೆ. ರೂಂನೊಳಗೆ ಬಂದ ಗಂಡನಿಗೆ ತನ್ನನ್ನು ಮುಟ್ಟಬೇಕೆಂದರೆ 90 ಲಕ್ಷ ರೂ. ಹಣ ಕೊಡಬೇಕೆಂದು ಹೆಂಡತಿ ಬೇಡಿಕೆ ಇಟ್ಟಿದ್ದಾಳೆ. ಇದನ್ನು ಕೇಳಿ ಗಂಡ ತಲೆ ತಿರುಗಿ ಬೀಳುವುದೊಂದೇ ಬಾಕಿ.

ದೆಹಲಿಯಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮದುವೆಯಾದ ಮೊದಲ ರಾತ್ರಿಯೇ ವಧು ತನ್ನ ಪತಿಗೆ ಶಾಕ್ ನೀಡಿದ್ದಾಳೆ. ತನ್ನನ್ನು ಮುಟ್ಟಿದರೆ 90 ಲಕ್ಷ ರೂ. ನೀಡಬೇಕಾಗುತ್ತದೆ ಎಂದು ಹೇಳಿದ ಆಕೆಯ ಮಾತುಗಳನ್ನು ಕೇಳಿ ವರ ಆಘಾತಕ್ಕೊಳಗಾಗಿದ್ದಾನೆ. ಆಗ್ರಾದಲ್ಲಿ ವಧುವಿನೊಬ್ಬಳು ತನ್ನ ಗಂಡನಿಂದ ಮೊದಲ ರಾತ್ರಿಯೇ 90 ಲಕ್ಷ ರೂ. ಕೇಳಿದ್ದ ಘಟನೆ ಬೆಳಕಿಗೆ ಬಂದಿದೆ. ದೆಹಲಿಯ ಜಗದೀಶಪುರದ ಯುವಕನೊಬ್ಬ ಇತ್ತೀಚೆಗೆ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಹತ್ರಾಸ್‌ನ ಯುವತಿಯನ್ನು ವಿವಾಹವಾಗಿದ್ದ. ಮದುವೆ ಸಮಾರಂಭ ಮುಗಿದ ತಕ್ಷಣ ಕುಟುಂಬ ಸದಸ್ಯರು ಮೊದಲ ರಾತ್ರಿಗೆ ಸಿದ್ಧತೆ ಮಾಡಿದ್ದರು. ಆದರೆ, ಮಲಗುವ ಕೋಣೆಯಲ್ಲಿ ವಧು 90 ಲಕ್ಷ ರೂ. ನೀಡಿದರೆ ಮಾತ್ರ ನನ್ನನ್ನು ಮುಟ್ಟಬಹುದು ಎಂದು ಹೇಳಿದ್ದಾಳೆ. ಅಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದು ಆತ ಹೇಳಿದಾಗ ಆಕೆ ಜಗಳವಾಡಿದ್ದಾಳೆ.

ಇದನ್ನೂ ಓದಿ: ಇದ್ದಕ್ಕಿದ್ದಂತೆ ಗಂಡ ನಾಪತ್ತೆ, ಮೈದುನನ ಜತೆ ಪತ್ನಿ ಮದುವೆ, 25 ವರ್ಷಗಳ ಬಳಿಕ ಬಂದ ಮೊದಲ ಪತಿ

ಕೋಣೆಯಿಂದ ಬರುತ್ತಿದ್ದ ಜಗಳದ ಶಬ್ದಗಳನ್ನು ಕೇಳಿ ಕುಟುಂಬದವರೆಲ್ಲರೂ ಅಲ್ಲಿಗೆ ಬಂದಿದ್ದಾರೆ. ಆಗ ವರನು ತನ್ನ ಕುಟುಂಬದ ಸದಸ್ಯರಿಗೆ ಅಲ್ಲಿ ನಡೆದ ಘಟನೆಯ ಬಗ್ಗೆ ತಿಳಿಸಿದನು. ಅವರೆಲ್ಲರೂ ಅವಳನ್ನು ಸುಮ್ಮನಾಗಿಸಲು ಪ್ರಯತ್ನಿಸಿದರೂ ಅವಳು ಸ್ವಲ್ಪವೂ ಶಾಂತವಾಗಲಿಲ್ಲ. ಅವಳು ತನ್ನ ಸಂಬಂಧಿಕರಿಗೆ ಕರೆ ಮಾಡಿದಳು. ಅಲ್ಲಿಗೆ ಬಂದ ಅವರು ವರನ ಕುಟುಂಬದ ಸದಸ್ಯರ ಮೇಲೆ ಹಲ್ಲೆ ಮಾಡಿದರು. ಇದಾದ ನಂತರ, ವರನ ಕುಟುಂಬದ ಸದಸ್ಯರು ಪೊಲೀಸರಿಗೆ ದೂರು ನೀಡಿದರು.

ಆದರೆ, ದೂರಿನಲ್ಲಿ ವರನ ಕುಟುಂಬದ ಸದಸ್ಯರು ವಧುವಿನ ಕಡೆಯವರು ತಮ್ಮನ್ನು ರೂಂನಲ್ಲಿ ಕೂಡಿಹಾಕಿ ಗ್ಯಾಸ್ ಸಿಲಿಂಡರ್ ಪೈಪ್ ತೆಗೆದು ಕೊಲ್ಲಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ಆರಂಭದಲ್ಲಿ ಪ್ರಕರಣ ದಾಖಲಿಸಲು ನಿರಾಕರಿಸಿದರು. ಕೊನೆಗೆ ವರನ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿತು, ನ್ಯಾಯಾಲಯವು ಪೊಲೀಸರಿಗೆ ಪ್ರಕರಣ ದಾಖಲಿಸುವಂತೆ ಆದೇಶಿಸಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ತನಿಖೆ ಆರಂಭಿಸಿದರು.

ಇದನ್ನೂ ಓದಿ: ಲವರ್​​ ಜೊತೆ ಕಾರಿನಲ್ಲೇ ಮದುವೆ ಪ್ರಕರಣಕ್ಕೆ ಟ್ವಿಸ್​​​: ಗಂಡ ಹೆಂಡ್ತಿ ಸಂಭಾಷಣೆ ಆಡಿಯೋ ವೈರಲ್

ಆದರೆ, ಪೊಲೀಸ್ ತನಿಖೆಯಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದವು. ತನಿಖೆಯ ಸಮಯದಲ್ಲಿ ವಧು ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಿದಳು. ಈ ಮದುವೆ ತನಗೆ ಬೇಡವೆಂದು ಮತ್ತು ಹಣಕ್ಕಾಗಿ ಮಾತ್ರ ಮದುವೆಗೆ ಒಪ್ಪಿಕೊಂಡೆ ಎಂದು ಅವಳು ಒಪ್ಪಿಕೊಂಡಳು. ಇದರಿಂದ ಪೊಲೀಸರು ಆಕೆ ಮತ್ತು ಆಕೆಯ ಕುಟುಂಬ ಸದಸ್ಯರನ್ನು ವಶಕ್ಕೆ ಪಡೆದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB vs LSG: ತವರಿನಲ್ಲಿ ಲಕ್ನೋ ವಿರುದ್ಧ ಆರ್​ಸಿಬಿಗೆ ಮೊಟ್ಟ ಮೊದಲ ಜಯ – Kannada News | RCB Dominates LSG at Chinnaswamy: Tops IPL Points Table 2026 with Second Straight Win

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆತಿಥೇಯ ಆರ್​ಸಿಬಿ ಸತತ ಎರಡನೇ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಲೀಗ್​ನಲ್ಲಿ ಇದುವರೆಗೆ 5 ಪಂದ್ಯಗಳನ್ನಾಡಿರುವ ಆರ್​​ಸಿಬಿ ಇದರಲ್ಲಿ 4 ಪಂದ್ಯಗಳನ್ನು ಗೆದ್ದು, ಒಂದು ಪಂದ್ಯವನ್ನು ಸೋತಿದೆ. ಹೀಗಾಗಿ 8 ಅಂಕಗಳು ಮತ್ತು ನೆಟ್​ ರನ್​ರೇಟ್​ನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಹಿಂದಿಕ್ಕಿ ಆ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 147 ರನ್​ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ 15.1 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.

Source link

RCB vs LSG: 4,4,4,4,4,4.. ಅರ್ಧಶತಕದಂಚಿನಲ್ಲಿ ಎಡವಿದ ವಿರಾಟ್ ಕೊಹ್ಲಿ

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತೊಮ್ಮೆ ಒಂದೊಳ್ಳೆ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾಗಿದ್ದಾರೆ. ಲಕ್ನೋ ನೀಡಿದ 147 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ ಪರ ಎಂದಿನಂತೆ ಆರಂಭಿಕರಾಗಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಲಕ್ನೋ ಬ್ಯಾಟರ್​ಗಳು ರನ್​ ಗಳಿಸಲು ಹೆಣಗಾಡಿದ ಪಿಚ್​ನಲ್ಲಿ ಬೌಂಡರಿಗಳ ಮಳೆಗರೆದರು. ತಮ್ಮ ಇನ್ನಿಂಗ್ಸ್​ನಲ್ಲಿ 34 ಎಸೆತಗಳನ್ನು ಎದುರಿಸಿದ ಕೊಹ್ಲಿ 6 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ ಸಹಿತ 49 ರನ್ ಬಾರಿಸಿ ಔಟಾದರು. ಇದರ ಜೊತೆಗೆ ಕೊಹ್ಲಿ, ಪಡಿಕ್ಕಲ್ ಜೊತೆಗೂಡಿ ಎರಡನೇ ವಿಕೆಟ್​ಗೆ ಅರ್ಧಶತಕದ ಜೊತೆಯಾಟವನ್ನು ನಿರ್ಮಿಸಿದರು.

ವಿರಾಟ್ ಕೊಹ್ಲಿ 49 ರನ್ ಗಳಿಸಿ ಅವೇಶ್ ಖಾನ್ ಎಸೆತದಲ್ಲಿ ಕ್ಯಾಚ್ ನೀಡಿ ಔಟ್ ಆದರು. ಆದಾಗ್ಯೂ ಕೊಹ್ಲಿ ಈ 49 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್‌ನ ಹೆನ್ರಿಕ್ ಕ್ಲಾಸೆನ್‌ ಅವರನ್ನು ಹಿಂದಿಕ್ಕಿದರು. ವಾಸ್ತವವಾಗಿ ಹೆನ್ರಿಕ್ ಕ್ಲಾಸೆನ್ 5 ಇನ್ನಿಂಗ್ಸ್‌ಗಳಲ್ಲಿ ಎರಡು ಅರ್ಧಶತಕಗಳ ಸಹಾಯದಿಂದ 224 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಆದರೀಗ ವಿರಾಟ್ ಕೊಹ್ಲಿ ಐದು ಪಂದ್ಯಗಳಲ್ಲಿ ಎರಡು ಅರ್ಧಶತಕಗಳ ಸಹಾಯದಿಂದ 228 ರನ್ ಗಳಿಸಿದ್ದು, ಆರೆಂಜ್ ಕ್ಯಾಪ್ ವಿಜೇತರಾಗಿದ್ದಾರೆ. ಮುಂದಿನ ಪಂದ್ಯದಲ್ಲಿ ಈ ಕ್ಯಾಪ್ ಅನ್ನು ಯಾರು ಧರಿಸುತ್ತಾರೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.

Source link

RCB vs LSG: ಸಾಲ್ಟ್ ಸೂಪರ್ ಮ್ಯಾಚ್ ಕ್ಯಾಚ್; ಪಂತ್ ಒಂದೇ ರನ್​ಗೆ ಸುಸ್ತು – Kannada News | Phil Salt’s Superhuman IPL Catch: Rishabh Pant’s Dismissal vs LSG Highlights Fielding Prowess

ಸ್ಫೋಟಕ ಬ್ಯಾಟಿಂಗ್​ಗೆ ಹೆಸರು ವಾಸಿಯಾಗಿರುವ ಆರ್​ಸಿಬಿ ಸ್ಫೋಟಕ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಈ ಬಾರಿಯ ಐಪಿಎಲ್‌ನಲ್ಲಿ ತಮ್ಮ ಫಿಲ್ಡಿಂಗ್ ಮೂಲಕವು ಸಖತ್ ಸದ್ದು ಮಾಡುತ್ತಿದ್ದಾರೆ. ಈ ಅವೃತ್ತಿಯಲ್ಲಿ ಈಗಾಗಲೇ ಹಲವು ಅದ್ಭುತ ಕ್ಯಾಚ್​ಗಳನ್ನು ಹಿಡಿದು ಪಂದ್ಯದ ದಿಕ್ಕನ್ನು ಬದಲಿಸಿದ್ದ ಸಾಲ್ಟ್, ಇದೀಗ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧದ ಪಂದ್ಯದಲ್ಲೂ ಮತ್ತದೇ ಅದ್ಭುತ ಫಿಲ್ಡಿಂಗ್ ಮಾಡುವ ಮೂಲಕ ಸೂಪರ್​ ಮ್ಯಾನ್​ನಂತೆ ಎಗರಿ ಅಸಾಧಾರಣವಾದ ಕ್ಯಾಚ್​ವೊಂದನ್ನು ಹಿಡಿದಿದ್ದಾರೆ.

ವಾಸ್ತವವಾಗಿ ಲಕ್ನೋ ತಂಡದ ನಾಯಕ ರಿಷಭ್ ಪಂತ್ ಮೊದಲ ವಿಕೆಟ್ ಪತನದ ಬಳಿಕವೇ ಬ್ಯಾಟಿಂಗ್​ಗೆ ಬಂದಿದ್ದರು. ಆದರೆ ಹೇಜಲ್‌ವುಡ್ ಎಸೆದ ಮೂರನೇ ಓವರ್​ನಲ್ಲಿ ರಿಷಭ್ ಪಂತ್ ಖಾತೆಯನ್ನು ತೆರೆಯುವುದಕ್ಕೂ ಮುನ್ನವೇ ತಮ್ಮ ಎಡ ಮೊಣಕೈಗೆ ಗಂಭೀರವಾಗಿ ಗಾಯಮಾಡಿಕೊಂಡರು. ಹೀಗಾಗಿ ಪಂತ್ ಅರ್ಧದಲ್ಲೇ ಬ್ಯಾಟಿಂಗ್‌ ನಿಲ್ಲಿಸಿ ಮೈದಾನ ತೊರೆದಿದ್ದರು.

ಆದರೆ ತಂಡದ ಇನ್ನಿಂಗ್ಸ್ ಕುಸಿದಿದ್ದರಿಂದ ಪಂತ್ 17ನೇ ಓವರ್​ನಲ್ಲಿ ಮತ್ತೆ ಬ್ಯಾಟಿಂಗ್​ಗೆ ಬಂದರು. ಭುವನೇಶ್ವರ್ ಕುಮಾರ್ ಎಸೆದ ಈ ಓವರ್​ನಲ್ಲಿ ಪಂತ್​ಗೆ ದೊಡ್ಡ ಹೊಡೆತಗಳನ್ನು ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಓವರ್​ನ 5ನೇ ಎಸೆತದಲ್ಲಿ ಸಿಕ್ಸರ್ ಬಾರಿಸಲು ಪಂತ್ ಯತ್ನಿಸಿದರು. ಆದರೆ ಡೀಪ್ ಸ್ಕ್ವೈರ್​ನಲ್ಲಿ ನಿಂತಿದ್ದ ಸಾಲ್ಟ್ ಮುಂದಕ್ಕೆ ಓಡಿ ಬಂದು ಚಿರತೆಯಂತೆ ಎಗರಿ ಅದ್ಭುತ ಕ್ಯಾಚ್ ತೆಗೆದುಕೊಂಡರು. ಹೀಗಾಗಿ ಪಂತ್ 6 ಎಸೆತಗಳನ್ನು ಎದುರಿಸಿ ಕೇವಲ 1 ರನ್ ಬಾರಿಸಿ ಔಟಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಮಹಡಿ ಮೇಲಿಂದ ತಳ್ಳಿ ಕೊಂದ ಮಗ – Kannada News | A son kills his mother by pushing from home 3rd floor in rr nagar at bengaluru

ಬೆಂಗಳೂರು, (ಏಪ್ರಿಲ್ 15): ಬಹುಮಹಡಿ ಕಟ್ಟಡದಿಂದ ತಳ್ಳಿ ಹೆತ್ತ ತಾಯಿಯನ್ನು (Mother) ಮಗನೇ (Son) ಕೊಲೆ ಮಾಡಿರುವ ಘಟನೆ ಅಮಾನವೀಯ ಘಟನೆ ಬೆಂಗಳೂರಿನ ಆರ್‌ಆರ್ ನಗರ (RR Nagar) ಬೆಮಲ್ ಲೇಔಟ್‌ನಲ್ಲಿ ನಡೆದಿದೆ. ಪುತ್ರ ವೆಂಕಟೇಶ್ ಎನ್ನುವಾತನೆ ತನ್ನ ಹೆತ್ತ ತಾಯಿ ಸಾವಿತ್ರಮ್ಮ(72)ರನ್ನು ಮಹಡಿ ಮೇಲಿಂದ ತಳ್ಳಿ ಕೊಂದಿದ್ದಾನೆ. ಪಾರ್ಶ್ವವಾಯು ಪೀಡಿತರಾಗಿದ್ದ ಸಾವಿತ್ರಮ್ಮ,ಸುಮಾರು ಐದಾರು ವರ್ಷದಿಂದ ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದರಿಂದ ಬೇಸತ್ತು ತಾಯಿ ಸಾವಿತ್ರಮ್ಮಳನ್ನ 3ನೇ ಮಹಡಿಯಿಂದ ತಳ್ಳಿದ್ದಾನೆ.

ಸುಮಾರು ವರ್ಷಗಳಿಂದ ಸಾವಿತ್ರಮ್ಮ ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ತಾಯಿ ಅವಸ್ಥೆಯಿಂದ ನೊಂದು ಪುತ್ರ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.  ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಆರ್‌ಆರ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮಗ ವೆಂಕಟೇಶ್‌ನನ್ನ ಆರ್‌ಆರ್ ನಗರ ಪೊಲೀಸರು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದಾರೆ.

ಇದನ್ನೂ ನೋಡಿ: ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?

ಮುಪ್ಪಾದ ಕಾಲಕ್ಕೆ ಒಂದು ಸೂರು, ತುತ್ತು ಅನ್ನ ಇದ್ರೆ ವಯೋವೃದ್ಧರು ಹೇಗೋ ಇರುವಷ್ಟು ದಿನ ಪಾಲಿಗೆ ಬಂದಿದ್ದು ಪಂಚಾಮೃತ ಅಂತ ಕಾಲ ದೂಡ್ತಾರೆ. ಆದ್ರೆ, ಪುತ್ರ ವೆಂಕಟೇಶ್ ಮಾತ್ರ ತಾಯಿಯ ಅನಾರೋಗ್ಯಕ್ಕೆ ಬೇಸತ್ತಿದ್ದು, ಕೈಯಾರೇ ತಾಯಿಯನ್ನು ಮಹಡಿ ಮೇಲಿಂದ ತಳ್ಳಿ ಬಲಿಕೊಟ್ಟಿದ್ದಾನೆ.

ಮುಪ್ಪಿನ ಕಾಲವು ಜೀವನದ ಅತ್ಯಂತ ಸೂಕ್ಷ್ಮ ಮತ್ತು ಹಿರಿಯರ ಆರೈಕೆ ಅಗತ್ಯವಿರುವ ಹಂತವಾಗಿದೆ. ಇಳಿ ವಯಸ್ಸಿನಲ್ಲಿ ಆರ್ಥಿಕ ಸ್ವಾವಲಂಬನೆ, ಮಕ್ಕಳ ಪ್ರೀತಿ-ವಿಶ್ವಾಸ, ಮತ್ತು ಉತ್ತಮ ಆರೋಗ್ಯ ಸೌಲಭ್ಯಗಳು ಅತ್ಯಗತ್ಯ. ಆದರೆ, ದುರದೃಷ್ಟವಶಾತ್ ಅನೇಕರು ಈ ಸಮಯದಲ್ಲಿ ಮೂಲೆಗುಂಪಾಗುತ್ತಿದ್ದು, ವೃದ್ಧಾಶ್ರಮಗಳ ಆಸರೆ ಪಡೆಯುವಂತಾಗಿದೆ. ಇನ್ನೊಂದೆಡೆ ವಯಸ್ಸಾದ ತಂದೆ ತಾಯಿ ಮಕ್ಕಳಿಂದ ಕೈಯಿಂದಲೇ ಜೀವ ಕಳೆದುಕೊಳ್ಳುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಮಹಡಿ ಮೇಲಿಂದ ತಳ್ಳಿ ಕೊಂದ ಮಗ – Kannada News | A son kills his mother by pushing from home 3rd floor in rr nagar at bengaluru

ಬೆಂಗಳೂರು, (ಏಪ್ರಿಲ್ 15): ಬಹುಮಹಡಿ ಕಟ್ಟಡದಿಂದ ತಳ್ಳಿ ಹೆತ್ತ ತಾಯಿಯನ್ನು (Mother) ಮಗನೇ (Son) ಕೊಲೆ ಮಾಡಿರುವ ಘಟನೆ ಅಮಾನವೀಯ ಘಟನೆ ಬೆಂಗಳೂರಿನ ಆರ್‌ಆರ್ ನಗರ (RR Nagar) ಬೆಮಲ್ ಲೇಔಟ್‌ನಲ್ಲಿ ನಡೆದಿದೆ. ಪುತ್ರ ವೆಂಕಟೇಶ್ ಎನ್ನುವಾತನೆ ತನ್ನ ಹೆತ್ತ ತಾಯಿ ಸಾವಿತ್ರಮ್ಮ(72)ರನ್ನು ಮಹಡಿ ಮೇಲಿಂದ ತಳ್ಳಿ ಕೊಂದಿದ್ದಾನೆ. ಪಾರ್ಶ್ವವಾಯು ಪೀಡಿತರಾಗಿದ್ದ ಸಾವಿತ್ರಮ್ಮ,ಸುಮಾರು ಐದಾರು ವರ್ಷದಿಂದ ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದರಿಂದ ಬೇಸತ್ತು ತಾಯಿ ಸಾವಿತ್ರಮ್ಮಳನ್ನ 3ನೇ ಮಹಡಿಯಿಂದ ತಳ್ಳಿದ್ದಾನೆ.

ಸುಮಾರು ವರ್ಷಗಳಿಂದ ಸಾವಿತ್ರಮ್ಮ ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ತಾಯಿ ಅವಸ್ಥೆಯಿಂದ ನೊಂದು ಪುತ್ರ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.  ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಆರ್‌ಆರ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮಗ ವೆಂಕಟೇಶ್‌ನನ್ನ ಆರ್‌ಆರ್ ನಗರ ಪೊಲೀಸರು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದಾರೆ.

ಇದನ್ನೂ ನೋಡಿ: ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?

ಮುಪ್ಪಾದ ಕಾಲಕ್ಕೆ ಒಂದು ಸೂರು, ತುತ್ತು ಅನ್ನ ಇದ್ರೆ ವಯೋವೃದ್ಧರು ಹೇಗೋ ಇರುವಷ್ಟು ದಿನ ಪಾಲಿಗೆ ಬಂದಿದ್ದು ಪಂಚಾಮೃತ ಅಂತ ಕಾಲ ದೂಡ್ತಾರೆ. ಆದ್ರೆ, ಪುತ್ರ ವೆಂಕಟೇಶ್ ಮಾತ್ರ ತಾಯಿಯ ಅನಾರೋಗ್ಯಕ್ಕೆ ಬೇಸತ್ತಿದ್ದು, ಕೈಯಾರೇ ತಾಯಿಯನ್ನು ಮಹಡಿ ಮೇಲಿಂದ ತಳ್ಳಿ ಬಲಿಕೊಟ್ಟಿದ್ದಾನೆ.

ಮುಪ್ಪಿನ ಕಾಲವು ಜೀವನದ ಅತ್ಯಂತ ಸೂಕ್ಷ್ಮ ಮತ್ತು ಹಿರಿಯರ ಆರೈಕೆ ಅಗತ್ಯವಿರುವ ಹಂತವಾಗಿದೆ. ಇಳಿ ವಯಸ್ಸಿನಲ್ಲಿ ಆರ್ಥಿಕ ಸ್ವಾವಲಂಬನೆ, ಮಕ್ಕಳ ಪ್ರೀತಿ-ವಿಶ್ವಾಸ, ಮತ್ತು ಉತ್ತಮ ಆರೋಗ್ಯ ಸೌಲಭ್ಯಗಳು ಅತ್ಯಗತ್ಯ. ಆದರೆ, ದುರದೃಷ್ಟವಶಾತ್ ಅನೇಕರು ಈ ಸಮಯದಲ್ಲಿ ಮೂಲೆಗುಂಪಾಗುತ್ತಿದ್ದು, ವೃದ್ಧಾಶ್ರಮಗಳ ಆಸರೆ ಪಡೆಯುವಂತಾಗಿದೆ. ಇನ್ನೊಂದೆಡೆ ವಯಸ್ಸಾದ ತಂದೆ ತಾಯಿ ಮಕ್ಕಳಿಂದ ಕೈಯಿಂದಲೇ ಜೀವ ಕಳೆದುಕೊಳ್ಳುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

‘ಭೂತ್ ಬಂಗ್ಲ’ ಅಡ್ವಾನ್ಸ್ ಬುಕ್ಕಿಂಗ್‌: ಅಕ್ಷಯ್ ಕುಮಾರ್ ಸಿನಿಮಾಗೆ 15 ಕೋಟಿ ರೂ. ಓಪನಿಂಗ್ ನಿರೀಕ್ಷೆ – Kannada News | Akshay Kumar Bhooth Bangla movie Advance Booking Box Office Collection

ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಮತ್ತು ನಿರ್ದೇಶಕ ಪ್ರಿಯದರ್ಶನ್ ಜೋಡಿಯ ಬಹುನಿರೀಕ್ಷಿತ ಹಾರರ್ ಕಾಮಿಡಿ ಚಿತ್ರ ‘ಭೂತ್ ಬಂಗ್ಲ’ (Bhooth Bangla) ಬಿಡುಗಡೆಗೆ ಸಜ್ಜಾಗಿದೆ. ಏಪ್ರಿಲ್ 17ರಂದು ಈ ಸಿನಿಮಾ ತೆರೆಕಾಣಲಿದೆ. ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಶುರುವಾಗಿದೆ. ಟಿಕೆಟ್ ಬುಕ್ ಮಾಡುವಲ್ಲಿ ಜನರು ಆಸಕ್ತಿ ತೋರಿಸುತ್ತಿದ್ದಾರೆ. ಆ ಮೂಲಕ ‘ಭೂತ್ ಬಂಗ್ಲ’ ಸಿನಿಮಾ ಉತ್ತಮ ಓಪನಿಂಗ್ ಪಡೆಯುವ ಸೂಚನೆ ಸಿಕ್ಕಿದೆ. ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಹೆಚ್ಚಿದೆ.

ಬುಧವಾರ (ಏಪ್ರಿಲ್ 15) ಸಂಜೆ 4.30ರ ಸುಮಾರಿಗೆ ಲಭ್ಯವಾದ ಅಂಕಿಅಂಶಗಳ ಪ್ರಕಾರ, ಪಿವಿಆರ್ ಐನಾಕ್ಸ್ ಮತ್ತು ಸಿನಿಪೊಲಿಸ್‌ ಮಲ್ಟಿಪ್ಲೆಕ್ಸ್​ಗಳಲ್ಲಿ ಸುಮಾರು 20 ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ. ಗುರುವಾರ ಪ್ರಿವ್ಯೂ ಶೋಗೆ 10,500 ಟಿಕೆಟ್ ಹಾಗೂ ಶುಕ್ರವಾರದ ಶೋಗೆ 9,000 ಟಿಕೆಟ್ ಮಾರಾಟ ಆಗಿವೆ. ಇದರಿಂದ ಚಿತ್ರಕ್ಕೆ ಪಾಸಿಟಿವ್ ಫೀಲ್ ಸಿಕ್ಕಿದೆ.

ಏಪ್ರಿಲ್ 15ರ ರಾತ್ರಿಯ ವೇಳೆಗೆ ಒಟ್ಟು ಟಿಕೆಟ್ ಮಾರಾಟ 25,000ರಿಂದ 30,000 ಗಡಿಯನ್ನು ದಾಟುವ ಸಾಧ್ಯತೆಯಿದೆ. ಗುರುವಾರ ರಾತ್ರಿ ಪ್ರಿವ್ಯೂ ಶೋಗಳು ಆರಂಭವಾಗುವ ಹೊತ್ತಿಗೆ ಇದು 60,000ರಿಂದ 70,000ಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಹಾಗಾಗಿ ‘ಭೂತ್ ಬಂಗ್ಲ’ ಸಿನಿಮಾಗೆ ಬಿಡುಗಡೆಗೂ ಮೊದಲೇ ಗೆಲುವಿನ ಸೂಚನೆ ಸಿಗುತ್ತಿದೆ.

ಅಕ್ಷಯ್ ಕುಮಾರ್ ಅವರ ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ‘ಭೂತ್ ಬಂಗ್ಲ’ ಟಿಕೆಟ್ ಬುಕಿಂಗ್ ಸಾಧಾರಣ ಎನಿಸುತ್ತಿದೆ. ‘ಹೌಸ್‌ಫುಲ್ 5’ ಸಿನಿಮಾಗೆ ಮೊದಲ ದಿನ 96,000 ಟಿಕೆಟ್ ಮಾರಾಟವಾಗಿತ್ತು. ಪ್ರಸ್ತುತ ಟ್ರೆಂಡ್ ಗಮನಿಸಿದರೆ, ‘ಭೂತ್ ಬಂಗ್ಲಾ’ ಚಿತ್ರವು ಮೊದಲ ದಿನ, ಪ್ರಿವ್ಯೂ ಶೋಗಳನ್ನೂ ಸೇರಿ, ಸುಮಾರು 15 ಕೋಟಿ ರೂಪಾಯಿ ಗಳಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ‘ಭೂತ್ ಬಂಗ್ಲ’ ಟ್ರೇಲರ್: ಮತ್ತದೇ ಹಳೇ ಕಥೆ ಹೇಳುತ್ತಾರಾ ಅಕ್ಷಯ್ ಕುಮಾರ್?

ಸದ್ಯ ಬಾಲಿವುಡ್ ಬಿಸ್ನೆಸ್ ಚೆನ್ನಾಗಿದೆ. ‘ಧುರಂಧರ್: ದಿ ರಿವೇಂಜ್’ ದೊಡ್ಡ ಮಟ್ಟದ ಹಿಟ್ ಆಗಿದೆ. ಇದರ ಜೊತೆ ‘ಮರ್ದಾನಿ 3’ ಮತ್ತು ‘ದಿ ಕೇರಳ ಸ್ಟೋರಿ 2’ ಕೂಡ ಯಶಸ್ಸು ಕಂಡಿವೆ. ‘ಭೂತ್ ಬಂಗ್ಲ’ ಸಿನಿಮಾದ ನಿರ್ಮಾಣ ವೆಚ್ಚ ಮಿತವಾಗಿದ್ದು, ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳಿಂದ ಈಗಾಗಲೇ ಉತ್ತಮ ಲಾಭ ಕಂಡಿದೆ. ಮೊದಲ ದಿನ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕರೆ ಅಕ್ಷಯ್ ಕುಮಾರ್ ಖಾತೆಗೆ ಒಂದು ಸಕ್ಸಸ್ ಸೇರ್ಪಡೆ ಆಗುವುದು ಗ್ಯಾರಂಟಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Vivo T5 Pro 5G: ಭಾರತದಲ್ಲಿ ಬರೋಬ್ಬರಿ 9,020mAh ಬ್ಯಾಟರಿಯ ಹೊಸ ಸ್ಮಾರ್ಟ್​​ಫೋನ್ ಬಿಡುಗಡೆ: ಬೆಲೆ ಕೇವಲ.. – Kannada News | Vivo launched its new 9020mah big battery smartphone called vivo t5 pro 5g

ಬೆಂಗಳೂರು (ಏ. 15): ಪ್ರಸಿದ್ಧ ವಿವೋ (Vivo) ಕಂಪನಿ ಭಾರತದಲ್ಲಿ ತನ್ನ ಹೊಸ ವಿವೋ ಟಿ5 ಪ್ರೊ 5ಜಿ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಹ್ಯಾಂಡ್‌ಸೆಟ್ ಈ ತಿಂಗಳ ಕೊನೆಯಲ್ಲಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮತ್ತು ಕಂಪನಿಯ ಆನ್‌ಲೈನ್ ಸ್ಟೋರ್ ಮೂಲಕ ದೇಶದಲ್ಲಿ ಮಾರಾಟಕ್ಕೆ ಬರಲಿದೆ. ಹೊಸ ವಿವೋ ಟಿ5 ಪ್ರೊ 5ಜಿ ಎರಡು ಬಣ್ಣ ಆಯ್ಕೆಗಳು ಮತ್ತು ಮೂರು RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 7 ಸರಣಿ ಚಿಪ್‌ಸೆಟ್‌ನಿಂದ ಚಾಲಿತವಾಗಿರುವ ಈ ಫೋನ್​ನಲ್ಲಿ ಬರೋಬ್ಬರಿ 9,020mAh ಬ್ಯಾಟರಿಯನ್ನು ನೀಡಲಾಗಿದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ವಿವೋ T5 ಪ್ರೊ 5G ಬೆಲೆ, ಲಭ್ಯತೆ

ಭಾರತದಲ್ಲಿ ವಿವೋ ಟಿ5 ಪ್ರೊ 5ಜಿಯ 8 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ಹೊಂದಿರುವ ಬೇಸ್ ರೂಪಾಂತರದ ಬೆಲೆ 29,999 ರೂ. ಗಳಿಂದ ಪ್ರಾರಂಭವಾಗುತ್ತದೆ. 8 ಜಿಬಿ + 256 ಜಿಬಿ RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್ ಬೆಲೆ 33,999 ರೂ. ಕೊನೆಯದಾಗಿ, 12 ಜಿಬಿ RAM ಮತ್ತು 256 ಜಿಬಿ ಸ್ಟೋರೇಜ್ ನೀಡುವ ಟಾಪ್-ಆಫ್-ಲೈನ್ ಆಯ್ಕೆಯ ಬೆಲೆ 39,999 ರೂ. ಆಗಿದೆ.

ಕಂಪನಿಯು HDFC ಬ್ಯಾಂಕ್, SBI ಮತ್ತು Axis ಬ್ಯಾಂಕ್ ಕಾರ್ಡ್‌ಗಳೊಂದಿಗೆ ರೂ. 3,000 ವರೆಗೆ ತಕ್ಷಣದ ಬ್ಯಾಂಕ್ ರಿಯಾಯಿತಿ ಮತ್ತು ಆರು ತಿಂಗಳವರೆಗೆ ಬಡ್ಡಿರಹಿತ EMI ಆಯ್ಕೆಗಳನ್ನು ನೀಡುತ್ತಿದೆ. ಹೊಸ ಹ್ಯಾಂಡ್‌ಸೆಟ್ ಭಾರತದಲ್ಲಿ ಏಪ್ರಿಲ್ 21 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮತ್ತು ವಿವೋ ಇಂಡಿಯಾ ಆನ್‌ಲೈನ್ ಸ್ಟೋರ್ ಮೂಲಕ ಮಾರಾಟಕ್ಕೆ ಬರಲಿದೆ.

ವಿವೋ T5 ಪ್ರೊ 5G ಫೀಚರ್ಸ್

ವಿವೋ T5 ಪ್ರೊ 5G ಡ್ಯುಯಲ್ ಸಿಮ್ ಹ್ಯಾಂಡ್‌ಸೆಟ್ ಆಗಿದ್ದು ಅದು ಆಂಡ್ರಾಯ್ಡ್ 16 ಆಧಾರಿತ ColorOS 16 ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 6.83-ಇಂಚಿನ 1.5K (1,260×2,800 ಪಿಕ್ಸೆಲ್‌ಗಳು) AMOLED ಡಿಸ್ಪ್ಲೇಯನ್ನು ಹೊಂದಿದ್ದು, 144Hz ವರೆಗೆ ರಿಫ್ರೆಶ್ ದರ, HDR10+ ಬೆಂಬಲ, ಸ್ಲೀಪ್ ಕಂಫರ್ಟ್ ಮೋಡ್ ಮತ್ತು ಆಂಟಿ-ಮೋಷನ್ ಸಿಕ್‌ನೆಸ್ ಮೋಡ್ ಜೊತೆಗೆ SGS ಕಡಿಮೆ ನೀಲಿ ಬೆಳಕು ಮತ್ತು ಕಡಿಮೆ ಫ್ಲಿಕರ್ ಪ್ರಮಾಣೀಕರಣಗಳನ್ನು ಹೊಂದಿದೆ.

Tech Tips: ಆಂಡ್ರಾಯ್ಡ್ ಬಳಕೆದಾರರು ಇನ್ಮುಂದೆ ಸ್ಟೋರೇಜ್ ಬಗ್ಗೆ ಚಿಂತಿಸಬೇಕಿಲ್ಲ, ಗೂಗಲ್ ಮಾಸ್ಟರ್ ಪ್ಲ್ಯಾನ್

ಈ ಫೋನ್​ನಲ್ಲಿ ಕ್ವಾಲ್ಕಾಮ್‌ನ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 7s Gen 4 ಚಿಪ್‌ಸೆಟ್ ಶಕ್ತಿಯನ್ನು ನೀಡಲಾಗಿದ್ದು, AnTuTu ಬೆಂಚ್‌ಮಾರ್ಕಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಹ್ಯಾಂಡ್‌ಸೆಟ್ 11,80,000 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ, ವಿವೋ T5 ಪ್ರೊ 5G ಡ್ಯುಯಲ್ ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ, ಇದರಲ್ಲಿ 50-ಮೆಗಾಪಿಕ್ಸೆಲ್ ಮುಖ್ಯ ಶೂಟರ್, ಸೋನಿ IMX882 ಸಂವೇದಕ, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಮತ್ತು 10x ವರೆಗೆ ಜೂಮ್, ಜೊತೆಗೆ 2-ಮೆಗಾಪಿಕ್ಸೆಲ್ ಬೊಕೆ ಕ್ಯಾಮೆರಾ ಇದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ ಹ್ಯಾಂಡ್‌ಸೆಟ್ ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಸಹ ಹೊಂದಿದೆ. ಇದು ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳೊಂದಿಗೆ 4K ವಿಡಿಯೋಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಈ ಫೋನ್​ ಬರೋಬ್ಬರಿ 9,020mAh ಸಿಲಿಕಾನ್ ಕಾರ್ಬನ್ ಬ್ಯಾಟರಿಯಿಂದ ಬೆಂಬಲಿತವಾಗಿದೆ. 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಆನ್‌ಬೋರ್ಡ್ ಸೆನ್ಸರ್‌ಗಳ ಪಟ್ಟಿಯಲ್ಲಿ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಇ-ದಿಕ್ಸೂಚಿ, ಸಾಮೀಪ್ಯ ಸೆನ್ಸರ್ ಮತ್ತು ಗೈರೊಸ್ಕೋಪ್ ಸೇರಿವೆ. ಸಂಪರ್ಕಕ್ಕಾಗಿ 5G, 4G LTE, Wi-Fi 6, ಬ್ಲೂಟೂತ್ 5.2, GPS ಮತ್ತು USB ಟೈಪ್-C ಪೋರ್ಟ್ ಅನ್ನು ಸಹ ಬೆಂಬಲಿಸುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version