ಮೊದಲ 10 ಎಸೆತಗಳಲ್ಲಿ ಯಾವುದೇ ರನ್ ನೀಡದೆ ಚೊಚ್ಚಲ ವಿಕೆಟ್ ಉರುಳಿಸಿದ ಬೆಲ್ – Kannada News | WPL 2026: Lauren Bell’s RCB Debut Stuns MI Batters in Season Opener

ಮಹಿಳಾ ಪ್ರೀಮಿಯರ್ ಲೀಗ್​ನ 2026 ರ ನಾಲ್ಕನೇ ಸೀಸನ್ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಲೀಗ್​ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತ ಮುಂಬೈ ಮೊದಲು ಬ್ಯಾಟಿಂಗ್ ಮಾಡುತ್ತಿದ್ದು, ಆರ್​ಸಿಬಿ ತನ್ನ ಮಾರಕ ದಾಳಿಯ ಮೂಲಕ ಮುಂಬೈ ಬ್ಯಾಟರ್​ಗಳನ್ನು ಕಟ್ಟಿಹಾಕಿದೆ. ಅದರಲ್ಲೂ ಆರ್​​ಸಿಬಿ ಪರ ಚೊಚ್ಚಲ ಡಬ್ಲ್ಯುಪಿಎಲ್ ಪಂದ್ಯವನ್ನಾಡಿದ ಇಂಗ್ಲೆಂಡ್ ವೇಗಿ ಲಾರೆನ್ ಬೆಲ್, ಮುಂಬೈ ಆರಂಭಿಕರು ರನ್​ಗಾಗಿ ಪರದಾಡುವಂತೆ ಮಾಡಿದರು.

ಮುಂಬೈ ಪರ ಅಮೆಲಿಯಾ ಕೆರ್ ಮತ್ತು ಜಿ ಕಮಲಿನಿ ಇನ್ನಿಂಗ್ಸ್ ಆರಂಭಿಸಿದರು. ಇತ್ತ ಆರ್​​ಸಿಬಿ ಪರ ಲಾರೆನ್ ಬೆಲ್ ಮೊದಲ ಓವರ್​ ಬೌಲ್ ಮಾಡಿದರು. ಈ ಓವರ್​ನಲ್ಲಿ ಸ್ಟ್ರೈಕ್​ನಲ್ಲಿದ್ದ ಅನುಭವಿ ಅಮೆಲಿಯಾ ಕೆರ್ ಒಂದೇ ಒಂದು ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಹೀಗಾಗಿ ಬೆಲ್ ತಮ್ಮ ಚೊಚ್ಚಲ ಪಂದ್ಯದ ಚೊಚ್ಚಲ ಓವರ್​ ಅನ್ನು ಯಾವುದೇ ರನ್ ನೀಡದೆ ಕೊನೆಗೊಳಿಸಿದರು.

ತಮ್ಮ ಖೋಟಾದ ಎರಡನೇ ಓವರ್​ನಲ್ಲೂ ಲಾರೆನ್ ಬೆಲ್ ಕೇವಲ ಒಂದು ರನ್ ನೀಡಿ ಮುಂಬೈ ಬ್ಯಾಟರ್​ಗಳು ಒತ್ತಡಕ್ಕೊಳಗಾಗುವಂತೆ ಮಾಡಿದರು. ಲಾರೆನ್ ಬೆಲ್ ತಮ್ಮ ಮೊದಲ 10 ಎಸೆತಗಳಲ್ಲಿ ಯಾವುದೇ ರನ್ ನೀಡಲಿಲ್ಲ ಎಂಬುದು ಅವರ ಮಾರಕ ದಾಳಿಗೆ ಹಿಡಿದ ಕೈಗನ್ನಡಿಯಾಗಿತ್ತು. ಇನ್ನು ತಮ್ಮ ಖೋಟಾದ ಮೂರನೇ ಓವರ್​ನಲ್ಲಿ ದಾಳಿಗಿಳಿದ ಬೆಲ್, ಅಮೆಲಿಯಾ ಕೆರ್ ವಿಕೆಟ್ ಉರುಳಿಸಿ ಆರ್​ಸಿಬಿಗೆ ಮೊದಲ ಯಶಸ್ಸು ತಂದುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು: ಯುವತಿಯನ್ನು ತಬ್ಬಿ ಅಸಭ್ಯವಾಗಿ ವರ್ತಿಸಿದ್ದ ಡೆಲಿವರಿ ಬಾಯ್ ಅರೆಸ್ಟ್ – Kannada News | West Bengal Man Arrested Who harasses young woman in bengaluru

ಬೆಂಗಳೂರು, (ಜನವರಿ 09): ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ತಬ್ಬಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದವನನ್ನು ಬೆಂಗಳೂರಿನ (Bengaluru) ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ (West Bengal) ಮೂಲದ ಆರೋಪಿ ಮುನಿರುದ್ದೀನ್ ಖಾನ್ ಬಂಧಿತ ಆರೋಪಿ.

ಮನೆಯ ಮುಂದೆ ಬಿದ್ದಿದ್ದ ಬಾಕ್ಸ್‌ನ್ನು ಯುವತಿ ತೆಗೆದುಕೊಂಡು ಹೋಗುತ್ತಿದ್ದಳು. ಈ ವೇಳೆ ಯುವಕ ರಸ್ತೆಯಲ್ಲಿ ಬಟ್ಟೆಬಿಚ್ಚಿ ಅಸಭ್ಯವಾಗಿ ವರ್ತಿಸಿ ಬಾ ಎಂದು ಕರೆದಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯುವತಿಯನ್ನು ಹಿಂದಿನಿಂದ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ. ಇದಕ್ಕೆ ಪ್ರತಿರೋಧಿದ್ದಕ್ಕೆ ಯುವತಿಯ ಕೆನ್ನೆಗೆ ಹೊಡೆದಿದ್ದಾನೆ. ಬಳಿ ಯುವತಿ ಕಿರುಚಾಡಿದಾಗ ಕಾಮುಕ ಮುನಿರುದ್ದೀನ್ ಖಾನ್ ಅಲ್ಲಿಂದ ಪರಾರಿಯಾಗಿದ್ದ.

ಇದನ್ನೂ ಓದಿ: 14 ವರ್ಷದ ಬಾಲಕಿ ಮೇಲೆ ಚಲಿಸುವ ಕಾರಿನೊಳಗೆ ಯೂಟ್ಯೂಬರ್, ಪೊಲೀಸ್ ಸೇರಿ ಅತ್ಯಾಚಾರ

ಘಟನೆ ಬಳಿಕ ಯುವತಿ ಕೊತ್ತನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು,  ಈ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಕಾರ್ಯಚರಣೆ ನಡೆಸಿ ಮುನಿರುದ್ದೀನ್ ಖಾನ್ ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಮ್ಮನ ಎದೆಹಾಲು ಕುಡಿಯುವಾಗ ಮಗು ಸಾವು! – Kannada News | Newborn Baby dies of suffocation while Breastfeeding in Coimbatore

ಕೊಯಮತ್ತೂರು, ಜನವರಿ 9: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ತಾಯಿಯ ಎದೆ ಹಾಲು ಕುಡಿದ ಹೆಣ್ಣು ಮಗುವೊಂದು (Baby Death) ಕೆಮ್ಮಿನಿಂದಾಗಿ ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದು ಇಡೀ ಕುಟುಂಬಕ್ಕೆ ತೀವ್ರ ದುಃಖ ಉಂಟುಮಾಡಿದೆ. ಮುರಳಿ ಕೊಯಮತ್ತೂರು ಜಿಲ್ಲೆಯ ರಾಮನಾಥಪುರಂನವರು. ಅವರು ಕೂಲಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ವರದಲಕ್ಷ್ಮಿ. ಅವರು ಮದುವೆಯಾಗಿ ಒಂದೂವರೆ ವರ್ಷಗಳಾಗಿತ್ತು.

9 ತಿಂಗಳು ತುಂಬಿದ ಗರ್ಭಿಣಿಯಾಗಿದ್ದ ವರದಲಕ್ಷ್ಮಿಗೆ ಹೆರಿಗೆ ನೋವು ಅನುಭವಿಸಿದ್ದರು. ಇದರ ನಂತರ ವರದಲಕ್ಷ್ಮಿ ಅವರನ್ನು ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಡಿಸೆಂಬರ್ 20ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಇದಾದ ನಂತರ, ತಾಯಿ ಮತ್ತು ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಮರಳಿದರು.

ಇದನ್ನೂ ಓದಿ: ತಾಯಿ ಮೇಲಿನ ದ್ವೇಷಕ್ಕೆ ಮುಗ್ಧ ಮಗುವಿನ ಕತ್ತು ಹಿಸುಕಿ ಕೊಲೆ!

ಆ ವೇಳೆ ಹೆಣ್ಣು ಮಗುವಿಗೆ ಹೊಟ್ಟೆ ನೋವು ಮತ್ತು ಕೆಲವು ಆರೋಗ್ಯ ಸಮಸ್ಯೆಗಳಿದ್ದವು ಎಂದು ಹೇಳಲಾಗಿದೆ. ಇದರಿಂದಾಗಿ, ಮಗು ಇದ್ದಕ್ಕಿದ್ದಂತೆ ಅಸ್ವಸ್ಥವಾಯಿತು. ತಕ್ಷಣ, ಮುರಳಿ ಮತ್ತು ಅವರ ಪತ್ನಿ ವರದಲಕ್ಷ್ಮಿ ಮಗುವನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಮಗುವಿಗೆ ವೈದ್ಯರು ಚಿಕಿತ್ಸೆ ನೀಡಿದರು. ಆ ನಂತರ, ಮಗು ಬಹಳ ಹೊತ್ತು ಅಳುತ್ತಿದ್ದ ಕಾರಣದಿಂದಾಗಿ ತಾಯಿ ವರದಲಕ್ಷ್ಮಿ ಮಗುವಿಗೆ ಹಾಲು ಕುಡಿಸಿದ್ದಾರೆ. ಆ ಸಮಯದಲ್ಲಿ, ಹಾಲು ಕುಡಿಯುತ್ತಿದ್ದ ಮಗು ಇದ್ದಕ್ಕಿದ್ದಂತೆ ಚಲನರಹಿತವಾಯಿತು.

ಇದನ್ನು ನೋಡಿ ತಾಯಿ ವರದಲಕ್ಷ್ಮಿ ಆಘಾತಕ್ಕೊಳಗಾದರು ಮತ್ತು ವೈದ್ಯರಿಗೆ ತಿಳಿಸಿದರು. ಅವರು ಮಗುವನ್ನು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಆ ಮೇಲೆ ವರದಲಕ್ಷ್ಮಿ ಮತ್ತು ಅವರ ಪತಿ ಮುರಳಿ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಮಗುವನ್ನು ಪರೀಕ್ಷಿಸಿದಾಗ ಮಗು ಮೃತಪಟ್ಟಿದೆ ಎಂದು ಹೇಳಿದರು. ತಾಯಿ ಮಗುವಿಗೆ ಹಾಲುಣಿಸುತ್ತಿದ್ದಾಗ ಕೆಮ್ಮಿನಿಂದಾಗಿ ಉಸಿರುಗಟ್ಟಿ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಆಗಷ್ಟೇ ಹುಟ್ಟಿದ ಮಗುವನ್ನು ಕಸದ ತೊಟ್ಟಿಗೆ ಎಸೆದ ತಾಯಿ!

ನಂತರ, ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಯಿತು. ತಾಯಿಯ ಹಾಲು ಕುಡಿಯುವಾಗಲೇ ಮಗು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಆ ಕುಟುಂಬ ಮತ್ತು ಸುತ್ತಲಿನ ಗ್ರಾಮದಲ್ಲಿ ದುಃಖವನ್ನು ಉಂಟುಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಡರಾತ್ರಿ ಊಟ ಮಾಡುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾಗುತ್ತದೆಯೇ? ಇಲ್ಲಿದೆ ತಜ್ಞರ ಮಾಹಿತಿ – Kannada News | Does Eating Late Increase Sugar Levels?

ಇಂದಿನ ಒತ್ತಡದ ಜೀವನ ಅನೇಕ ರೀತಿಯ ಬದಲಾವಣೆಗಳಿಗೆ ಕಾರಣವಾಗಿದೆ. ಕೆಲಸ, ಅತಿಯಾದ ಮೊಬೈಲ್ ಫೋನ್‌ಗಳ ಬಳಕೆ ಮತ್ತು ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಜನರ ಆಹಾರ ಪದ್ಧತಿಯಲ್ಲಿ ಅಡಚಣೆ ಉಂಟಾಗುತ್ತಿದೆ. ಹೀಗಾಗಿ ಅನೇಕರು ತಡವಾಗಿ ಊಟ ಮಾಡುವುದನ್ನು ರೂಢಿಸಿಕೊಂಡಿದ್ದು ಇದನ್ನು ಸಾಮಾನ್ಯ ಅಭ್ಯಾಸವೆಂದು ತಿಳಿದುಕೊಂಡಿದ್ದಾರೆ, ಆದರೆ ಇದರ ಪರಿಣಾಮ ತಕ್ಷಣವೇ ಗಮನಕ್ಕೆ ಬರದಿದ್ದರೂ ಕೂಡ ಕ್ರಮೇಣ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ತಡರಾತ್ರಿ ಅಥವಾ ತಡವಾಗಿ ಊಟವನ್ನು (Eating Late) ಮಾಡುವುದರಿಂದ ದೇಹದ ಸಮತೋಲನ ಹಾಳಾಗಬಹುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟದ ಹೆಚ್ಚಳಕ್ಕೆ ಕಾರಣವಾಗಬಹುದು. ಹಾಗಾದರೆ ತಡರಾತ್ರಿ ಊಟ ಮಾಡುವುದರಿಂದ ನಿಜವಾಗಿಯೂ ರಕ್ತದಲ್ಲಿನ ಗ್ಲೂಕೋಸ್ ಮಟ್ಟ (Blood Sugar) ಹೆಚ್ಚಾಗುತ್ತದೆಯೇ, ಈ ರೀತಿಯಾಗುವುದಕ್ಕೆ ಕಾರಣವೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ತಡರಾತ್ರಿ ಆಹಾರ ಸೇವನೆ ಮಾಡುವುದಕ್ಕೂ, ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವುದಕ್ಕೂ ಬಲವಾದ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಊಟದ ಸಮಯ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಹಲವಾರು ಅಧ್ಯಯನಗಳಿಂದಲೂ ಸಾಬೀತಾಗಿದೆ. ಅದಕ್ಕಾಗಿಯೇ ತಜ್ಞರು ಈ ಅಭ್ಯಾಸದ ಬಗ್ಗೆ ಬಹಳ ಜಾಗರೂಕರಾಗಿರಲು ಸಲಹೆ ನೀಡುತ್ತಾರೆ.

ತಡವಾಗಿ ಊಟ ಮಾಡಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಯಾಕೆ ಹೆಚ್ಚಾಗುತ್ತದೆ?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಹೇಳುವ ಪ್ರಕಾರ, ಒಬ್ಬ ವ್ಯಕ್ತಿ ತಡವಾಗಿ ಊಟ ಮಾಡಿದಾಗ, ದೇಹವು ಅದನ್ನು ಸರಿಯಾಗಿ ಸಂಸ್ಕರಿಸಲು ಕಷ್ಟವಾಗಬಹುದು. ಹಗಲಿನ ಸಮಯಕ್ಕೆ ಹೋಲಿಸಿದರೆ ರಾತ್ರಿಯಲ್ಲಿ ದೇಹದ ಕಾರ್ಯನಿರ್ವಹಣೆ ನಿಧಾನವಾಗುತ್ತದೆ. ಅಂತಹ ಸಂದರ್ಭದಲ್ಲಿ, ಸೇವಿಸುವ ಆಹಾರವನ್ನು ತಕ್ಷಣವೇ ಶಕ್ತಿಯಾಗಿ ಪರಿವರ್ತಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾಗಬಹುದು. ಅದರಲ್ಲಿಯೂ ಹೊಟ್ಟೆ ಬಿರಿಯುವಷ್ಟು ಊಟ ಅಥವಾ ಸಿಹಿಯಾದ ಆಹಾರಗಳನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ವೇಗವಾಗಿ ಹೆಚ್ಚಾಗಬಹುದು.

ಇದನ್ನೂ ಓದಿ: ಸಿಟಿ ಜನರೇ ಜೋಪಾನ! ನಿಮ್ಮ ಜೀವಕ್ಕೆ ಕುತ್ತಾಗಬಹುದು ವಾಯುಮಾಲಿನ್ಯ

ಅಧಿಕ ಸಕ್ಕರೆ ಮಟ್ಟದ ಸಮಸ್ಯೆ ಕೇವಲ ಮಧುಮೇಹಿಗಳಿಗೆ ಮಾತ್ರವಲ್ಲ. ಆರೋಗ್ಯವಂತ ವ್ಯಕ್ತಿಯೂ ಸಹ, ತಡರಾತ್ರಿಯಲ್ಲಿ ತಿನ್ನುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಭವಿಷ್ಯದಲ್ಲಿ ಸಮಸ್ಯೆಗಳಿಗೆ ಕಾರಣವಾಗಬಹುದು. ದೀರ್ಘಕಾಲದವರೆಗೆ ಇದನ್ನು ಮಾಡುವುದರಿಂದ ದೇಹದ ಸಕ್ಕರೆ ನಿಯಂತ್ರಣ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ. ಕ್ರಮೇಣ, ಇದು ಇನ್ಸುಲಿನ್ ಮೇಲೆ ಪರಿಣಾಮ ಬೀರುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚಾಗಲು ಪ್ರಾರಂಭಿಸುತ್ತದೆ. ಅನೇಕ ಸಂದರ್ಭಗಳಲ್ಲಿ, ಈ ಅಭ್ಯಾಸವು ನಂತರ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಸಹ ಸಮಯಕ್ಕೆ ಸರಿಯಾಗಿ ಮತ್ತು ಸಮತೋಲಿತ ಆಹಾರವನ್ನು ಸೇವನೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ.

ಸಮಸ್ಯೆ ತಡೆಯಲು ಈ ಸಲಹೆಗಳನ್ನು ತಪ್ಪದೆ ಪಾಲಿಸಿ:

  • ಮಲಗುವ 2- 3 ಗಂಟೆಗಳ ಮೊದಲು ಊಟ ಮಾಡಿ.
  • ಸಮತೋಲಿತ ಆಹಾರವನ್ನು ಸೇವಿಸಿ.
  • ತಡರಾತ್ರಿಯಲ್ಲಿ ಸಿಹಿತಿಂಡಿ ಮತ್ತು ಕರಿದ ಆಹಾರಗಳ ಸೇವನೆ ಮಾಡುವುದನ್ನು ತಪ್ಪಿಸಿ.
  • ತಪ್ಪದೆ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ.
  • ಊಟ ಮತ್ತು ನಿದ್ರೆಗೆ ಸರಿಯಾದ ಸಮಯವನ್ನು ನಿಗದಿಪಡಿಸಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs PAK: ‘ಮೈದಾನದಲ್ಲೇ ಉತ್ತರ ಕೊಡ್ತೀವಿ’; ಟೀಂ ಇಂಡಿಯಾಗೆ ಪಾಕ್ ವೇಗಿ ಎಚ್ಚರಿಕೆ

Source link

ಪಿಎಂ ಶ್ರೀ ಶಾಲಾ ಯೋಜನೆ: ಪ್ರೆಸಿಡೆನ್ಸಿ ವಿವಿಯಲ್ಲಿ ಶಿಕ್ಷಕರಿಗೆ ನಾವೀನ್ಯತೆ, ಉದ್ಯಮಶೀಲತೆ ಶಿಬಿರ – Kannada News | PM SHRI: Bengaluru Teachers Boost Innovation and NEP 2020 Skills at IDE Camp

ಬೆಂಗಳೂರು, ಜನವರಿ 09: ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಶಿಕ್ಷಣ ಒದಗಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ‘ಪಿಎಂ ಶ್ರೀ’ ಶಾಲಾ ಯೋಜನೆಯನ್ನು (pm shri scheme) ರೂಪಿಸಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ನಾವೀನ್ಯತೆ, ವಿನ್ಯಾಸ ಮತ್ತು ಉದ್ಯಮಶೀಲತೆ (IDE) ಶಿಬಿರ ನಡೆಯುತ್ತಿದೆ. ಶಿಬಿರದ ಮೂರನೇ ದಿನದಂದು ಕೂಡ ಹಲವು ಗಣ್ಯರು ಭಾಗಿಯಾಗಿದ್ದರು.

ಡಿಆರ್‌ಡಿಓದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವ್ಯವಸ್ಥೆಗಳ ವಿಶೇಷ ವಿಜ್ಞಾನಿ ಮತ್ತು ಮಹಾನಿರ್ದೇಶಕಿ ಡಾ. ಬಿ. ಕೆ. ದಾಸ್ ಮತ್ತು ಡಾ. ವಿದ್ಯಾ ಕುಮಾರಿ ಶಿಬಿರವನ್ನು ಉದ್ಘಾಟಿಸಿದರು. ಈ ಉಪಕ್ರಮವು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಗುರಿಗಳನ್ನು ಬೆಂಬಲಿಸುತ್ತದೆ.

ಡಾ. ಅಭಯ್ ಜೆರೆ ಹೇಳಿದ್ದಿಷ್ಟು 

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಮತ್ತು ಶಿಕ್ಷಣ ಸಚಿವಾಲಯ ಅಧಿಕಾರಿ ಡಾ. ಅಭಯ್ ಜೆರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಪ್ರಾಂಶುಪಾಲರು ಮತ್ತು ಶಿಕ್ಷಕರೊಂದಿಗೆ ಮಾತನಾಡಿದ ಅವರು, ಚಿಕ್ಕ ವಯಸ್ಸಿನಿಂದಲೇ ಶಾಲೆಗಳು ನಾವೀನ್ಯತೆ, ಸಮಸ್ಯೆ ಪರಿಹಾರ ಮತ್ತು ಉದ್ಯಮಶೀಲತಾ ಚಿಂತನೆಯನ್ನು ಪ್ರೋತ್ಸಾಹಿಸಬೇಕು ಎಂದರು. ವಾಡಿಕೆಯಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಸುವ ಬದಲು ಕುತೂಹಲ, ಪ್ರಯೋಗ ಮತ್ತು ನಿಜ ಜೀವನದ ಉದಾಹರಣೆಗಳ ಮೂಲಕ ಕಲಿಸುವಂತೆ ಸಲಹೆ ನೀಡಿದರು.

ನಾವೀನ್ಯತೆ, ವಿನ್ಯಾಸ ಮತ್ತು ಉದ್ಯಮಶೀಲತೆ (IDE) ಶಿಬಿರ ‘ಪಿಎಂ ಶ್ರೀ ಶಾಲಾ’ ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ವಿನ್ಯಾಸ ಚಿಂತನೆ, ನವೀನ ಬೋಧನಾ ವಿಧಾನಗಳು, ಉದ್ಯಮಶೀಲತೆಯ ಮೂಲಭೂತ ಅಂಶಗಳು ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳಲ್ಲಿ ಪ್ರಾಯೋಗಿಕ ತರಬೇತಿಯನ್ನು ನೀಡುವ ಗುರಿಯನ್ನು ಹೊಂದಿದೆ. ಇದು ಅವರ ಶಾಲೆಗಳಲ್ಲಿ ನಾವೀನ್ಯತೆಯ ಸಂಸ್ಕೃತಿಯನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಶಿಕ್ಷಕರ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ: ಪ್ರೆಸಿಡೆನ್ಸಿ ಲೀಗಲ್ ಇಂಡಸ್ಟ್ರಿ ಇಂಟರ್‌ಫೇಸ್ ಸಮಿಟ್ 2025 ಸಂಪನ್ನ

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕುಲಪತಿ ಡಾ. ನಿಸ್ಸಾರ್ ಅಹ್ಮದ್, ಪ್ರಭಾರ ಉಪ ಕುಲಪತಿ ಡಾ. ಎಸ್. ಜೆ. ತಿರುವೆಂಗಡಂ ಮತ್ತು ಪ್ರೊ. ಡಾ. ಶಿವಪೆರುಮಾಳ್, ಅಧ್ಯಾಪಕ ಸದಸ್ಯರು ಮತ್ತು ಸಂಯೋಜಕರೊಂದಿಗೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. ಎಐಸಿಟಿಇ ಅಧಿಕಾರಿಗಳು ಸಹ ಆನ್‌ಲೈನ್‌ ಮುಖಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:16 pm, Fri, 9 January 26

Source link

ಪ್ರಧಾನಿ ಮೋದಿಯ ದೃಷ್ಟಿ ಮತ್ತು ನಿಲುವು ಕಂಡು ಅಚ್ಚರಿಗೊಂಡ ಎಐ ಸ್ಟಾರ್ಟಪ್​ಗಳ ಮುಖ್ಯಸ್ಥರು – Kannada News | PM Modi’s AI Vision: Boosting Indian Startups for Global Leadership

ಎಐ ಸ್ಟಾರ್ಟಪ್​ಗಳ ಮುಖಂಡರೊಂದಿಗೆ ಪ್ರಧಾನಿ ಸಂವಾದ

ನವದೆಹಲಿ, ಜನವರಿ 9: ಪ್ರಧಾನಿ ನರೇಂದ್ರ ಮೋದಿ (Narendra Modi) ನಿವಾಸದಲ್ಲಿ ನಡೆದ ಎಐ ಸ್ಟಾರ್ಟಪ್​ಗಳ ಸಭೆ, ಅದರಲ್ಲಿ ಭಾಗವಹಿಸಿದವರೆಲ್ಲರ ಹೃದಯ ಹಗುರಾಗಿಸಿದೆ. ಎಐ ವಿಚಾರದಲ್ಲಿ ಪ್ರಧಾನಿ ಹೊಂದಿರುವ ದೃಷ್ಟಿಕೋನ, ನಿಲುವು ಏನು ಎಂಬುದು ಭಾರತೀಯ ಸ್ಟಾರ್ಟಪ್​ಗಳ ಮುಖ್ಯಸ್ಥರ ಅರಿವಿಗೆ ಬಂದಿತ್ತು. ಫೆಬ್ರುವರಿಯಲ್ಲಿ ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಪ್ರಧಾನಿಗಳು 12 ಸ್ಟಾರ್ಟಪ್​ಗಳ ಮುಖಂಡರನ್ನು ತಮ್ಮ ನಿವಾಸಕ್ಕೆ ಕರೆಸಿ ವಿಚಾರ ವಿನಿಮಯ ಮಾಡಿದ್ದಾರೆ.

ಪ್ರಧಾನಿಯನ್ನು ಭೇಟಿ ಮಾಡಿರುವ ಎಐ ಸ್ಟಾರ್ಟಪ್​ಗಳು ಇಂಡಿಯಾ ಎಐ ಮಿಷನ್ ಅಡಿಯಲ್ಲಿ ಫೌಂಡೇಶನ್ ಮಾಡಲ್​ಗಳನ್ನು ಅಭಿವೃದ್ಧಿಪಡಿಸಲು ಆಯ್ಕೆಯಾಗಿರುವಂಥವಾಗಿವೆ. ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಡಾ. ಅಶ್ವಿನಿ ವೈಷ್ಣವ್, ರಾಜ್ಯ ಸಚಿವರಾದ ಜಿತಿನ್ ಪ್ರಸಾದ, ಕಾರ್ಯದರ್ಶಿ ಎಸ್ ಕೃಷ್ಣನ್ ಹಾಗೂ ಈ 12 ಸ್ಟಾರ್ಟಪ್​ಗಳ ಮುಖಂಡರು ಪ್ರಧಾನಿಗಳೊಂದಿಗೆ ಮಾತನಾಡಿದ್ದಾರೆ. ಈ ಮಾತುಕತೆ ಸಕಾರಾತ್ಮಕವಾಗಿತ್ತು ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಎಐ ಇಂಪ್ಯಾಕ್ಟ್ ಸಮಿಟ್​ಗೆ ಪೂರ್ವಭಾವಿಯಾಗಿ 12 ಸ್ಟಾರ್ಟಪ್​ಗಳೊಂದಿಗೆ ಪ್ರಧಾನಿ ಮೋದಿ ಸಭೆ

ಪ್ರಧಾನಮಂತ್ರಿಗಳು ತಮ್ಮ ನಿಜಜೀವನದ ಅನುಭವಗಳೊಂದಿಗೆ ಮಾತನಾಡಿದ್ದು ನಮಗೆ ತಾಂತ್ರಿಕ ವಿಷಯಗಳ ಬಗ್ಗೆ ಪ್ರೇರಣೆ ಕೊಟ್ಟಿತು ಎಂದು ಸರ್ವಂ ಎಐ ಸಹ-ಸಂಸ್ಥಾಪಕ ಡಾ. ಪ್ರತ್ಯೂಶ್ ಕುಮಾರ್ ಹೇಳಿದ್ದಾರೆ.

ಪ್ರಧಾನಿಯವರಿಗೆ ತಾನು ಏನು ಹೇಳುತ್ತಿದ್ದೇನೆ ಎನ್ನುವ ಸ್ಪಷ್ಟ ಅರಿವು ಇದೆ. ಭಾರತ ಎಐನಲ್ಲಿ ವಿಶ್ವಗುರು ಆಗಬೇಕಾದರೆ ವಿಶ್ವಕ್ಕೆ ಯಾವುದನ್ನು ಪರಿಹರಿಸಲು ಸಾಧ್ಯವಿಲ್ಲವೋ ಆ ಸಮಸ್ಯೆ ಬಗೆಹರಿಸಬೇಕು ಎನ್ನುತ್ತಾರೆ. ಅವರೊಂದಿಗೆ ಮಾತನಾಡಿದ್ದು ಖುಷಿಯಾಯಿತು ಎಂದು ಟೆಕ್ ಮಹೀಂದ್ರ ಸಿಇಒ ನಿಖಿಲ್ ಮಲ್ಹೋತ್ರಾ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಧಾನಿಯವರ ಅನುಭವವು ನಮ್ಮ ಚಿಂತನೆಯನ್ನು ಹರಿತಗೊಳಿಸಲು ಸಹಾಯವಾಯಿತು. ಭಾರತಕ್ಕೆ ಏನು ಬೇಕು ಎಂಬುದನ್ನು ಅವರಿಗಿಂತ ತಿಳಿದವರು ಯಾರೂ ಇಲ್ಲ. ನಾವು ಪಾಶ್ಚಿಮಾತ್ಯರನ್ನು ನಕಲು ಮಾಡುವುದು ಬೇಡ. ನಮಗೆ ಏನು ಬೇಕೋ, ಏನು ಅಗತ್ಯವೋ ಅದನ್ನು ನಿರ್ಮಿಸಬೇಕು ಎಂಬುದು ಅವರ ನಿಲುವು ಎಂದು ನ್ಯೂರೋಡಿಎಕ್ಸ್ ಸಿಇಒ ಡಾ. ಸಿದ್ಧಾರ್ಥ್ ಪನ್ವರ್ ವಿವರಿಸಿದ್ದಾರೆ.

ಪ್ರಧಾನಿಗಳ ವಿಶನ್ ಗಮನಿಸಿ ಅಮೆರಿಕದಿಂದ ಭಾರತಕ್ಕೆ ಬಂದಿದ್ದೇನೆ. ಅಮೆರಿಕದಲ್ಲಿ ಅವಕಾಶಗಳು ಸಿಗುತ್ತವೆ. ಆದರೆ, ಭಾರತದಲ್ಲೂ ಮಾಡಲ್ ನಿರ್ಮಿಸಲು ಫಂಡಿಂಗ್ ಸಿಗುತ್ತದೆ ಎನ್ನುವುದು ಉತ್ತೇಜನಕಾರಿ ಸಂಗತಿ ಎಂದು ಗ್ಯಾನ್ ಎಐನ ರಿಸರ್ಚ್ ಎಂಜಿನಿಯರ್ ಆಗಿರುವ ಪಾರ್ಥಸಾರಥಿ ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಕಾಫಿಗೆ ಯೂರೋಪ್​ನಲ್ಲಿ ಬಲು ಬೇಡಿಕೆ; 2025ರಲ್ಲಿ 2 ಬಿಲಿಯನ್ ಡಾಲರ್ ಮುಟ್ಟಿದ ಭಾರತದ ಒಟ್ಟಾರೆ ಕಾಫಿ ರಫ್ತು

ಇಂಡಿಯಾ ಎಐ ಮಿಷನ್​ನಲ್ಲಿ ಆಯ್ಕೆಯಾಗಿರುವ 12 ಸ್ಟಾರ್ಟಪ್​ಗಳು ಅವತಾರ್, ಭಾರತ್​ಜೆನ್, ಫ್ರಾಕ್ಟಲ್, ಗ್ಯಾನ್, ಜೆನ್​ಲೂಪ್, ಜ್ಞಾನಿ, ಇಂಟೆಲಿಹೆಲ್ತ್, ಸರ್ವಂ, ಶೋಧ್ ಎಐ, ಸಾಕೆಟ್ ಎಐ, ಟೆಕ್ ಮಹೀಂದ್ರ ಮತ್ತು ಝೆನ್​ಟೀಕ್ ಆಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಳ್ಳಾರಿ ಬ್ಯಾನರ್​​ ಗಲಾಟೆ ಕೇಸ್​​ ತನಿಖೆ ಹೊಣೆ ಸಿಐಡಿಗೆ: ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ – Kannada News | Ballari Banner Firing Case: CID Probe Ordered by Karnataka Government

ಜನಾರ್ದನ ರೆಡ್ಡಿ ಮತ್ತು ಭರತ್​​ ರೆಡ್ಡಿ

ಬೆಂಗಳೂರು, ಜನವರಿ 09: ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ವೇಳೆ ಗುಂಡಿನ ದಾಳಿ ಪ್ರಕರಣದ ತನಿಖೆಯನ್ನುಸಿಐಡಿಗೆ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಲ್ಲಾ ಪ್ರಕರಣವನ್ನ ಸಿಐಡಿಗೆ ವರ್ಗಾಯಿಸಲಾಗಿದೆ. ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡು ತೀವ್ರ ವಿವಾದ ಸೃಷ್ಟಿಸಿರುವ ಹಿನ್ನೆಲೆ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ. ಬಳ್ಳಾರಿ ಪ್ರಕರಣ ಸಿಐಡಿಗೆ ವಹಿಸುವ ವಿಚಾರ ಸಂಬಂಧ ಇಂದೇ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಚರ್ಚೆ ಮಾಡ್ತೇನೆ ಎಂದು ಗೃಹ ಸಚಿವ ಪರಮೇಶ್ವರ್​​ ಹೇಳಿದ್ದರು. ಆ ಬೆನ್ನಲ್ಲೇ ಆದೇಶ ಹೊರಬಿದ್ದಿದೆ.

ಬ್ಯಾನರ್​​ ಗಲಾಟೆ ಪ್ರಕರಣದ ಕೇಸ್​​ ತನಿಖೆ ಸಿಐಡಿಗೆ ವಹಿಸುವ ವಿಚಾರ ಸಂಬಂಧ ಈ ಹಿಂದೆಯೂ ಗೃಹ ಸಚಿವ ಪರಮೇಶ್ವರ್​​ ಸುಳಿವು ನೀಡಿದ್ದರು. ಪೊಲೀಸರ ಗನ್ ಹಾಗೂ ರಿವಾಲ್ವರ್​ನಿಂದ ಫೈರಿಂಗ್​ ಆಗಿಲ್ಲ, ಖಾಸಗಿ ಗನ್​ನಿಂದ ಫೈರಿಂಗ್​ ಆಗಿದ್ದೆಂದು ಎಡಿಜಿಪಿ ದೃಢಪಡಿಸಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಆರೋಪಿಗಳನ್ನು ಬಂಧಿಸ್ತೇವೆ. ಹತ್ಯೆಗೆ ಪೆಟ್ರೋಲ್ ಬಾಂಬ್ ಬಳಕೆ ಮಾಡಿದ್ದಾರೆಂಬ ಆರೋಪವೂ ಇದ್ದು,ತನಿಖೆ ಆದಮೇಲೆ ಅದೆಲ್ಲ ಗೊತ್ತಾಗುತ್ತೆ. ಅಗತ್ಯಬಿದ್ದರೆ ಸಿಐಡಿಗೆ ಪ್ರಕರಣ ಕೊಡುತ್ತೇವೆ ಎಂದು ಹೇಳಿದ್ದರು.

ಇದನ್ನೂ ಓದಿ: ಬಳ್ಳಾರಿ ಗಲಭೆ ಕೇಸ್​​; ಗನ್‌ಮ್ಯಾನ್‌ ಹೊರತು ಪಡಿಸಿ 25 ಆರೋಪಿಗಳಿಗೆ ಜಾಮೀನು

ಸಿಬಿಐ ತನಿಖೆಗೆ ಆಗ್ರಹಿಸಿದ್ದ ಜನಾರ್ದನ ರೆಡ್ಡಿ

ಗಲಾಟೆ ಪ್ರಕರಣದ ತನಿಖೆ ಬಗ್ಗೆ ಶಾಸಕ ಜನಾರ್ದನ ರೆಡ್ಡಿ ಭಾರಿ ಅಸಮಾಧಾನ ಹೊರ ಹಾಕಿದ್ದರು. ಘಟನೆಯಲ್ಲಿ ಮೃತಪಟ್ಟಿದ್ದ ರಾಜಶೇಖರ್​​ ಮತೃದೇಹ ಹೂಳಲು ಮೊದಲು ಗುಂಡಿ ತೋಡಿ, ಆ ನಂತರ ಶವ ಸುಡಲಾಗಿದೆ. ಶಾಸಕ ಭರತ್ ರೆಡ್ಡಿ ನಿರ್ದೇಶನದಂತೆ ಕೊಲೆಯಾಗಿದೆ. ತಂದೆ ಸಮಾಧಿ ಬಳಿ ರಾಜಶೇಖರ್ ಅಂತ್ಯಕ್ರಿಯೆ ಆಗಬೇಕು ಎಂದಿದ್ದರು. ಆದರೆ ಹೂಳಲು ತೋಡಿದ್ದ ಗುಂಡಿ ಮುಚ್ಚುವಂತೆ ನಿರ್ದೇಶನ ಬಂದಿದೆ. ಹೀಗಾಗಿ ಸ್ಮಶಾನದಲ್ಲಿ ತೋಡಿದ್ದ ಗುಂಡಿಯನ್ನು ತೆಂಗಿನಕಾಯಿ ನೀರು ಹಾಕಿ ಮುಚ್ಚಿದ್ದಾರೆ. ಬಳಿಕ ಯಾವುದೇ ಸಾಕ್ಷ್ಯ ಸಿಗದ ಹಾಗೆ ರಾಜಶೇಖರ್​ ಮೃತದೇಹವನ್ನು ಗ್ಯಾಸ್‌ನಿಂದ ಸುಡಲಾಗಿದೆ. ಘಟನೆ ನಡೆದು 9 ದಿನಗಳಾದರೂ ಒಬ್ಬ ಗನ್​ಮ್ಯಾನ್ ಮಾತ್ರ ಬಂಧನ ಮಾಡಲಾಗಿದೆ. ಭರತ್​​ ರೆಡ್ಡಿಯನ್ನು ಯಾಕೆ ಬಂಧಿಸಿಲ್ಲ ಎಂದು ರೆಡ್ಡಿ ಪ್ರಶ್ನಿಸಿದ್ದರು. ಘಟನೆಗೆ ಕಾರಣಕರ್ತರಾದ ಶಾಸಕನ ಬಂಧನವಾಗಬೇಕು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:52 pm, Fri, 9 January 26

Source link

ಹಿಮಾಚಲ ಪ್ರದೇಶದ ಸಿರ್ಮೌರ್‌ನಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ – Kannada News | 9 killed and 40 injured as bus rolled down into deep gorge in Himachal Pradesh

ಶಿಮ್ಲಾ, ಜನವರಿ 9: ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ ಖಾಸಗಿ ಬಸ್ ಸುಮಾರು 500 ಅಡಿ ಆಳದ ಕಂದಕಕ್ಕೆ ಉರುಳಿದೆ. ಇದರ ಪರಿಣಾಮವಾಗಿ 9 ಜನರು ಸಾವನ್ನಪ್ಪಿದ್ದು, ಸುಮಾರು 40 ಮಂದಿ ಗಾಯಗೊಂಡಿದ್ದಾರೆ. ಶಿಮ್ಲಾದಿಂದ ರಾಜ್‌ಗಢ ಮೂಲಕ ಕುಪ್ವಿಗೆ ತೆರಳುತ್ತಿದ್ದ ಬಸ್ ಹರಿಪುರ್ಧರ್ ಗ್ರಾಮದ ಬಳಿ ರಸ್ತೆಯಿಂದ ಜಾರಿ ಕಣಿವೆಗೆ ಉರುಳಿ ಬಿದ್ದಾಗ ಈ ಅಪಘಾತ (Accident) ಸಂಭವಿಸಿದೆ.

ಅಪಘಾತದಲ್ಲಿ ಸಾವನ್ನಪ್ಪಿದವರ ಬಗ್ಗೆ ದುಃಖ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅಪಘಾತದಲ್ಲಿ ಸಾವನ್ನಪ್ಪಿದವರ ಹತ್ತಿರದ ಸಂಬಂಧಿಕರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವಂತೆ ಮತ್ತು ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಆರೈಕೆಯನ್ನು ಖಚಿತಪಡಿಸಿಕೊಳ್ಳುವಂತೆ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ರಸ್ತೆಯ ಮೇಲಿನ ಹಿಮದಿಂದಾಗಿ ಚಾಲಕ ನಿಯಂತ್ರಣ ಕಳೆದುಕೊಂಡಿರಬಹುದು ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜನವರಿ 30-31ರಂದು ಹೈದರಾಬಾದ್​ನಲ್ಲಿ ಅಪೋಲೋ ಹಾಸ್ಪಿಟಲ್ಸ್​ನಿಂದ ‘ಇಂಟರ್ನ್ಯಾಷನಲ್ ಹೆಲ್ತ್ ಡೈಲೋಗ್’ – Kannada News | Apollo Hospitals organizing International Health Dialogue 2026 on Jan 30 31 at Hyderabad

ಹಿಂದಿನ ವರ್ಷದ ಐಎಚ್​ಡಿ ಸಮಾವೇಶದ ಒಂದು ಚಿತ್ರ

ಹೈದರಾಬಾದ್, ಜನವರಿ 9: ಇದೇ ತಿಂಗಳ ಕೊನೆಯ ಎರಡು ದಿನಗಳಂದು ಅಂತಾರಾಷ್ಟ್ರೀಯ ಆರೋಗ್ಯ ಸಂವಾದ ಕಾರ್ಯಕ್ರಮ ನಡೆಯಲಿದೆ. ಅಪೋಲೋ ಹಾಸ್ಪಿಟಲ್ಸ್ ಆಯೋಜಿಸುತ್ತಿರುವ ಇಂಟರ್ನ್ಯಾಷನಲ್ ಹೆಲ್ತ್ ಡೈಲೋಗ್​ನ 13ನೇ ಆವೃತ್ತಿ (IHD- International Health Dialogue) ಜನವರಿ 30-31ರಂದು ನಡೆಯಲಿದೆ. ಹೈದರಾಬಾದ್​ನಲ್ಲಿ ನಡೆಯುವ 2026ರ ಆವೃತ್ತಿಯ ಈ ಕಾರ್ಯಕ್ರಮದ ಥೀಮ್ ‘ಗ್ಲೋಬಲ್ ವಾಯ್ಸಸ್, ಒನ್ ವಿಶನ್’ (ಜಾಗತಿಕ ಧ್ವನಿಗಳು, ಒಂದೇ ದೃಷ್ಟಿ). ಜಾಗತಿಕ ಹೊರಹೊಮ್ಮುವ ಹೊಸ ಐಡಿಯಾಗಳು, ಇನ್ನೋವೇಶನ್​ಗಳು ಮತ್ತು ನಾಯಕತ್ವವನ್ನು ಒಂದು ಸಾಮಾನ್ಯ ಗುರಿಯತ್ತ ಕೊಂಡೊಯ್ಯುವ ಮೂಲಕ ಪ್ರಬಲವಾದ ಹೆಲ್ತ್​ಕೇರ್ ಸಿಸ್ಟಂಗಳನ್ನು ರೂಪಿಸುವ ಮಾರ್ಗಗಳನ್ನು ಅವಲೋಕಿಸುವುದು ಈ ಸಭೆಯ ಪ್ರಮುಖ ಅಜೆಂಡಾ ಆಗಿರುತ್ತದೆ.

ಆಸ್ಪತ್ರೆ ಕಾರ್ಯಾಚರಣೆಗಳು, ರೋಗಿ ಅನುಭವ ಮತ್ತು ಕ್ಲಿನಿಕಲ್ ಪರಿಣಾಮಗಳ ವಿಚಾರದಲ್ಲಿ ನಾಯಕತ್ವ ಪ್ರೇರಿತ ಸೇಫ್ಟಿ ಮಾಡಲ್​ಗಳು, ಮಾನವ ಕೇಂದ್ರಿತ ವಿನ್ಯಾಸ, ಡಿಜಿಟಲ್ ಪರಿವರ್ತನೆ ಮತ್ತು ಶ್ರೇಷ್ಠತೆ ಸಾಧಿಸುವುದು ಈ ಆಯಾಮಗಳ ಬಗ್ಗೆ ಐಎಚ್​ಡಿ 2026 ಕಾರ್ಯಕ್ರಮದಲ್ಲಿ ಗಮನ ಹರಿಸಲಾಗುತ್ತದೆ.

ಈ ಕಾರ್ಯಕ್ರಮ ಆಯೋಜಿಸುತ್ತಿರುವ ಅಪೋಲೋ ಹಾಸ್ಪಿಟಲ್ಸ್ ಗ್ರೂಪ್​ನ ಜಂಟಿ ಎಂಡಿಯಾಗಿರುವ ಡಾ. ಸಂಗೀತಾ ರೆಡ್ಡಿ ಅವರು ಈ ಕಾರ್ಯಕ್ರಮದ ಬಗ್ಗೆ ಮಾತನಾಡಿ, ಎಐ, ಡಾಟಾ ಮತ್ತು ಡಿಜಿಟಲ್ ಇಕೋಸಿಸ್ಟಂಗಳ ಶಕ್ತಿಯನ್ನು ಒಗ್ಗೂಡಿಸುತ್ತಿದೆ ಎಂದು ಹೇಳಿದ್ದಾರೆ.

‘ಹೆಲ್ತ್​ಕೇರ್ ತಜ್ಞರು, ಇನ್ನೋವೇಟರ್​ಗಳು, ನೀತಿ ರೂಪಕರು, ಪ್ರೇರಕರು (Evangelists) ಒಂದೆಡೆ ಸೇರಿ ಹೆಲ್ತ್​ಕೇರ್ ಕ್ಷೇತ್ರದ ಮುಂದಿನ ಹಾದಿಯನ್ನು ರೂಪಿಸುವ ಒಂದು ವೇದಿಕೆಯಾಗಿ ಇಂಟರ್ನ್ಯಾಷನಲ್ ಹೆಲ್ತ್ ಡೈಲೋಗ್ ಮಾರ್ಪಾಡಾಗಿದೆ. ಹೆಲ್ತ್​ಕೇರ್ ಅನ್ನು ಹೆಚ್ಚು ಸುಸ್ಥಿರವಾಗುವ ನಿಟ್ಟಿನಲ್ಲಿ ಜಾಗತಿಕ ಬದ್ಧತೆಯನ್ನು ಐಎಚ್​ಡಿ ಪ್ರತಿನಿಧಿಸುತ್ತದೆ. ಪ್ರತಿಯೊಂದು ಇನ್ನೋವೇಶನ್ ಕೂಡ ಮಾನವತೆಗೆ ಸೇವೆ ಸಲ್ಲಿಸುತ್ತದೆ. ಪ್ರತಿಯೊಂದು ಜೊತೆಗಾರಿಕೆಯೂ ಕೂಡ ವಿಶ್ವದ ಆರೋಗ್ಯಕ್ಕೆ ಕಾರಣವಾಗುತ್ತದೆ’ ಎಂದು ಡಾ. ಸಂಗೀತಾ ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: ಎಐ ಇಂಪ್ಯಾಕ್ಟ್ ಸಮಿಟ್​ಗೆ ಪೂರ್ವಭಾವಿಯಾಗಿ 12 ಸ್ಟಾರ್ಟಪ್​ಗಳೊಂದಿಗೆ ಪ್ರಧಾನಿ ಮೋದಿ ಸಭೆ

ಹೈದರಾಬಾದ್​ನಲ್ಲಿ ನಡೆಯುವ ಐಎಚ್​ಡಿ 2026 ಸಮಾವೇಶದಲ್ಲಿ ಈ ಕೆಳಗಿನ ನಾಲ್ಕು ಕಾನ್ಫರೆನ್ಸ್​ಗಳು ಮತ್ತು ಲರ್ನಿಂಗ್ ಸ್ಟ್ರೀಮ್​ಗಳು ಇರಲಿವೆ:

  1. ಐಪಿಎಸ್​ಸಿ (ಇಂಟರ್ನ್ಯಾಷನಲ್ ಪೇಶೆಂಟ್ ಸೇಫ್ಟಿ ಕಾನ್ಫರೆನ್ಸ್): ಸ್ವಯಂಪ್ರೇರಿತವಾದ ಪ್ರಾಕ್ಟಿಸ್ ಮತ್ತು ಹೆಲ್ತ್​ಕೇರ್ ಸಿಸ್ಟಂಗಳು ರೋಗಿ ಸುರಕ್ಷತೆಯನ್ನು ಹೇಗೆ ಸುಧಾರಿಸುತ್ತವೆ ಎಂಬುದನ್ನು ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ.
  2. ಎಚ್​ಒಪಿಇ (ಹೆಲ್ತ್​ಕೇರ್ ಆಪರೇಷನ್ಸ್ ಮತ್ತು ಪೇಷೆಂಟ್ ಎಕ್ಸ್​ಪೀರಿಯನ್ಸ್ ಕಾನ್ಫರೆನ್ಸ್): ರೋಗಿಗೆ ಚಿಕಿತ್ಸೆ ನೀಡುವ ಪ್ರತೀ ಮುಖ್ಯ ಘಟ್ಟಗಳಲ್ಲೂ ಕ್ಷಮತೆ, ನಾವೀನ್ಯತೆ ತರುವ ಬಗ್ಗೆ ವಿಧಾನಗಳ ಬಗ್ಗೆ ಚರ್ಚಿಸಲಾಗುತ್ತದೆ.
  3. ಟಿಎಚ್​ಐಟಿ (ಟ್ರಾನ್ಸ್​ಫಾರ್ಮಿಂಗ್ ಹೆಲ್ತ್​ಕೇರ್ ವಿತ್ ಐಟಿ): ಈ ಕಾನ್ಫರೆನ್ಸ್​ನಲ್ಲಿ ವಿಶ್ವಾದ್ಯಂತ ಹೆಲ್ತ್​​ಕೇರ್ ಮತ್ತು ಐಟಿ ಮುಖಂಡರನ್ನು ಒಟ್ಟಿಗೆ ಸೇರಲಿದ್ದಾರೆ. ಅವರ ಅತ್ಯಾಧುನಿಕ ವಿಧಾನಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ.
  4. ಕ್ಲಿನೋವೇಟ್: ಕ್ಯಾನ್ಸರ್ ರೋಗ, ಹೃದ್ರೋಗ, ಮಹಿಳಾ ಆರೋಗ್ಯ, ಲ್ಯಾಬ್ ಮೆಡಿಸಿನ್ ಮೇಲೆ ಕ್ಲಿನಿಕಲ್ ಸಿಎಂಇ ಸೀರೀಸ್ ಇರುತ್ತದೆ. ಇದರಲ್ಲಿ ಹೆಲ್ತ್​ಕೇರ್ ವೃತ್ತಿಪರರು ಮತ್ತು ಸಂಶೋಧಕರಿಗೆ ತಜ್ಞರಿಂದ ಕಲಿಕೆ ನೀಡಲಾಗುತ್ತದೆ.

ಜನವರಿ 30 ಮತ್ತು 31ರಂದು ನಡೆಯುವ ಈ ಸಮಾವೇಶದಲ್ಲಿ ಆರೋಗ್ಯ ಕ್ಷೇತ್ರದ ಹಲವು ಮುಖಂಡರು ಮತ್ತು ನೀತಿ ರೂಪಕರು ಪಾಲ್ಗೊಳ್ಳುತ್ತಾರೆ. ನೈಜರ್ ರಿಪಬ್ಲಿಕ್​ನ ಪಬ್ಲಿಕ್ ಹೆಲ್ತ್ ಸಚಿವ ಕರ್ನಲ್ ಮೇಜರ್ ಗರ್ಬಾ ಹಕಿಮಿ, ಪಪುವಾ ನ್ಯೂಗಿನಿಯಾದ ಆರೋಗ್ಯ ಸಚಿವ ಇಲಿಯಾಸ್ ಕಪವೋರೆ, ಕಾಂಗೋ ರಿಪಬ್ಲಿಕ್​ನ ಆರೋಗ್ಯ ಸಚಿವ ಇಬಾರ, ಬರ್ಮುಡಾದ ಆರೋಗ್ಯ ಸಚಿವ ಕಿಮ್ ವಿಲ್ಸನ್ ಅವರು ಭಾಗವಹಿಸುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಕಾಫಿಗೆ ಯೂರೋಪ್​ನಲ್ಲಿ ಬಲು ಬೇಡಿಕೆ; 2025ರಲ್ಲಿ 2 ಬಿಲಿಯನ್ ಡಾಲರ್ ಮುಟ್ಟಿದ ಭಾರತದ ಒಟ್ಟಾರೆ ಕಾಫಿ ರಫ್ತು

ಆರೋಗ್ಯ ಕ್ಷೇತ್ರದ ಹಲವು ಸಂಘ ಸಂಸ್ಥೆಗಳ ಮುಖ್ಯಸ್ಥರಾದ ಡಾ. ಜೋನಾತನ್ ಪೆರ್ಲಿನ್, ಡಾ. ಕಾರ್ಸ್ಟನ್ ಎಂಜೆಲ್, ಡಾ. ಡೀನ್ ಹೋ, ಡಾ ಅತುಲ್ ಮೋಹನ್ ಕೋಚ್ಚರ್, ಡಾ. ನೀಲಮ್ ಧಿಂಗ್ರ, ಡಾ. ಇಯಾಲ್ ಝಿಮ್ಲಿಕ್ಮನ್ ಮೊದಲಾದವರು ಪಾಲ್ಗೊಳ್ಳುತ್ತಿದ್ದಾರೆ.

ಈ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಅಧಿಕೃತ ವೆಬ್​ಸೈಟ್​ಗಳ ಲಿಂಕ್ ಇಲ್ಲಿದೆ:

internationalhealthdialogue.com/

www.patient-safety.co.in

www.hopeconference.co.in/

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 7:52 pm, Fri, 9 January 26

Source link

Exit mobile version