ಅಲ್ಲು ಅರ್ಜುನ್, ದೀಪಿಕಾ ಸಿನಿಮಾ ಬಗ್ಗೆ ಅಟ್ಲಿ ಕೊಟ್ಟರು ಅಪ್​​ಡೇಟ್ – Kannada News | Atlee talks about Allu Arjun and Deepika Padukone movie

‘ಪುಷ್ಪ’ ಮತ್ತು ‘ಪುಷ್ಪ 2’ (Pushpa 2) ಸಿನಿಮಾಗಳ ಮೂಲಕ ಭಾರಿ ದೊಡ್ಡ ಹಿಟ್ ಸಿನಿಮಾ ನೀಡಿದ ಅಲ್ಲು ಅರ್ಜುನ್ (Allu Arjun), ಮುಂದಿನ ಸಿನಿಮಾ ಆಗಿ ಅಟ್ಲಿಯ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಸ್ವತಃ ಅಲ್ಲು ಅಭಿಮಾನಿಗಳಿಗೇ ಗೊಂದಲ ಮೂಡಿಸಿತ್ತು. ಅಟ್ಲಿ ಕೆಲವಾರು ಹಿಟ್ ಸಿನಿಮಾ ನೀಡಿದ್ದಾರಾದರೂ ಅಟ್ಲಿ ಸ್ವಂತ ಸಿನಿಮಾ ಮಾಡುವುದಿಲ್ಲ ಬದಲಿಗೆ ನಕಲು ಮಾಡಿ ಸಿನಿಮಾ ಮಾಡುವ ನಿರ್ದೇಶಕ ಎಂಬ ಕೆಟ್ಟ ಹೆಸರಿದೆ. ಅದೂ ಅಲ್ಲದೆ, ಅಟ್ಲಿಯ ಈ ಬಾರಿ ಅಲ್ಲು ಅರ್ಜುನ್​​ಗಾಗಿ ಸೈ-ಫೈ ಸಿನಿಮಾ ಮಾಡುತ್ತಿದ್ದಾರೆ. ಇದೀಗ ಅಟ್ಲಿ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

ಪಿಕಲ್​​ಬಾಲ್​​​ ಟೂರ್ನಿಯಲ್ಲಿ ಬೆಂಗಳೂರು ತಂಡವನ್ನು ಖರೀದಿ ಮಾಡಿರುವ ಅಟ್ಲಿ, ತಮ್ಮ ತಂಡದ ಇವೆಂಟ್​​ಗೆಂದು ಬಂದಾಗ ಸಿನಿಮಾ ಬಗ್ಗೆಯೂ ಮಾತನಾಡಿದ್ದಾರೆ. ‘ಅಲ್ಲು ಅರ್ಜುನ್ ಅವರ ಹೊಸ ಸಿನಿಮಾಕ್ಕಾಗಿ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದೇನೆ. ಈ ರೀತಿಯ ಸಿನಿಮಾ ನನಗೂ ಹೊಸತು, ಅಲ್ಲು ಅರ್ಜುನ್ ಅವರಿಗೂ ಹೊಸತು. ಹಾಗಾಗಿ ಇಬ್ಬರೂ ಸಹ ಪ್ರತಿ ದಿನ ಸೆಟ್​​ನಲ್ಲಿ ಹೊಸ-ಹೊಸ ವಿಷಯಗಳನ್ನು ಕಲಿಯುತ್ತಾ ಇದ್ದೇವೆ’ ಎಂದಿದ್ದಾರೆ ಅಟ್ಲಿ.

‘ಎಲ್ಲರೂ ಸಹ ಸಿನಿಮಾದ ಅಪ್​​ಡೇಟ್ ಕೊಡಿ ಎಂದು ಕೇಳುತ್ತಿದ್ದಾರೆ. ಅಸಲಿಗೆ ಸಿನಿಮಾದ ಅಪ್​​ಡೇಟ್ ನೀಡಲು ನಾನು ಬಹಳ ಉತ್ಸುಕನಾಗಿದ್ದೇನೆ. ಪ್ರೇಕ್ಷಕರಿಗಾಗಿ ವಿಶೇಷ ಸರ್ಪ್ರೈಸ್ ಒಂದನ್ನು ರೆಡಿ ಮಾಡುತ್ತಿದ್ದೇವೆ. ಅದನ್ನು ಜನರ ಮುಂದೆ ತರಲು ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ಶೀಘ್ರವೇ ಅದನ್ನು ಜನರ ಮುಂದೆ ತರುತ್ತೇವೆ’ ಎಂದಿದ್ದಾರೆ ಅಟ್ಲಿ.

ಇದನ್ನೂ ಓದಿ: ‘ತುಂಬಾ ಚೆನ್ನಾಗಿ ಮಾಡಿದಿರಾ’ ಟ್ವೀಟ್​​ನಲ್ಲಿ ಕನ್ನಡ ಬಳಸಿದ ಅಲ್ಲು ಅರ್ಜುನ್, ಕಾರಣ?

ಇನ್ನು ನಟಿ ದೀಪಿಕಾ ಪಡುಕೋಣೆ ಬಗ್ಗೆ ಮಾತನಾಡಿರುವ ಅಟ್ಲಿ, ‘ದೀಪಿಕಾ ಪಡುಕೋಣೆ ನನ್ನ ಲಕ್ಕಿ ಚಾರ್ಮ್. ಇದು ಎರಡನೇ ಬಾರಿ ಅವರೊಟ್ಟಿಗೆ ನಾನು ಕೆಲಸ ಮಾಡುತ್ತಿದ್ದೇನೆ. ಅವರೊಟ್ಟಿಗೆ ಕೆಲಸ ಮಾಡುವುದು ಒಂದು ವಿಶೇಷ ಅನುಭವ. ತಾಯ್ತನದ ಬಳಿಕ ಅವರು ನಟಿಸುತ್ತಿರುವ ಮೊದಲ ಸಿನಿಮಾ ನಮ್ಮದು’ ಎಂದಿದ್ದಾರೆ ಅಟ್ಲಿ.

ಅಟ್ಲಿ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್ ಸಿನಿಮಾ ಹಾಲಿವುಡ್​ನ ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ ಮಾದರಿಯ ಸಿನಿಮಾ ಆಗಿರಲಿದೆ. ಕೆಲವು ಬಲು ಜನಪ್ರಿಯ, ಯಶಸ್ವಿ ಹಾಲಿವುಡ್ ಸ್ಟುಡಿಯೋಗಳೊಟ್ಟಿಗೆ ಸೇರಿಕೊಂಡು ಅಟ್ಲಿ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸಿನಿಮಾನಲ್ಲಿ ಚಿತ್ರ, ವಿಚಿತ್ರ ಜೀವಿಗಳು, ಅನಿಮೇಟೆಡ್ ವಿಲನ್, ಅತ್ಯಾಧುನಿಕ ವಾಹನಗಳು, ಆಯುಧಗಳು ಇರಲಿವೆ. ಸಿನಿಮಾದ ಕತೆ ಸಹ ಭೂಮಿಯ ಮೇಲಲ್ಲದೆ ಬೇರೆ ಯಾವುದೋ ಲೋಕದಲ್ಲಿ ನಡೆಯುತ್ತದೆಯಂತೆ. ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗಲಿದೆ. ಈ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಸಹ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಜಿತ್ ಪವಾರ್ ಸಾವಿನಲ್ಲಿ ಷಡ್ಯಂತ್ರವಿಲ್ಲ, ಅದೊಂದು ಅಪಘಾತ; ಶರದ್ ಪವಾರ್ ಮೊದಲ ಪ್ರತಿಕ್ರಿಯೆ – Kannada News | Purely an accident Sharad Pawar first reaction on Ajit Pawardeath in plane crash

ನವದೆಹಲಿ, ಜನವರಿ 28: ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ (Ajit Pawar) ಅವರ ನಿಧನದ ನಂತರ ಅವರ ಚಿಕ್ಕಪ್ಪ, ಸಂಸದ ಶರದ್ ಪವಾರ್ ಕೂಡ ಬಾರಾಮತಿಗೆ ಆಗಮಿಸಿದ್ದಾರೆ. ಅವರು ಬಾರಾಮತಿಯ ಸರ್ಕಾರಿ ಆಸ್ಪತ್ರೆಗೆ ಹೋಗಿ ಅಜಿತ್ ಪವಾರ್ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಇದಾದ ನಂತರ, ಶರದ್ ಪವಾರ್ ಅವರು ಮೊದಲ ಬಾರಿಗೆ ಅಜಿತ್ ಪವಾರ್ ಅವರ ಆಕಸ್ಮಿಕ ಸಾವಿಗೆ ಪ್ರತಿಕ್ರಿಯಿಸಿದ್ದಾರೆ. ಅಜಿತ್ ಪವಾರ್ ಸಾವು ಆಕಸ್ಮಿಕ ಅಪಘಾತ. ಇದರಲ್ಲಿ ಯಾವುದೇ ರಾಜಕೀಯವಿಲ್ಲ, ಷಡ್ಯಂತ್ರವೂ ಇಲ್ಲ. ಈ ಸಾವಿನಿಂದ ಮಹಾರಾಷ್ಟ್ರವು ಭಾರೀ ನಷ್ಟವನ್ನು ಅನುಭವಿಸಿದೆ ಎಂದು ಅವರು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.

ಅಜಿತ್ ಪವಾರ್ ಅವರ ನಿಧನದ ಸುದ್ದಿ ತುಂಬಾ ದುಃಖಕರವಾಗಿದೆ. ಕಠಿಣ ಪರಿಶ್ರಮಿ ನಾಯಕನ ನಿಧನದಿಂದ ಮಹಾರಾಷ್ಟ್ರಕ್ಕೆ ಭಾರಿ ನಷ್ಟವಾಗಿದೆ. ರಾಜ್ಯಕ್ಕಾದ ನಷ್ಟವನ್ನು ಭರಿಸಲಾಗದು. ಇಂದಿಗೂ ಕೆಲವು ವಿಷಯಗಳು ನಮ್ಮ ಕೈಯಲ್ಲಿಲ್ಲ. ಈ ಸಾವಿನ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಇದು ಕೇವಲ ಅಪಘಾತ. ಮಹಾರಾಷ್ಟ್ರ ಮತ್ತು ನಾವೆಲ್ಲರೂ ಇದರಿಂದ ದುಃಖಕ್ಕೆ ಒಳಗಾಗಿದ್ದೇವೆ ಎಂದು ಶರದ್ ಪವಾರ್ ಹೇಳಿದ್ದಾರೆ. ದಯವಿಟ್ಟು ಇದರಲ್ಲಿ ರಾಜಕೀಯ ತರಬೇಡಿ ಎಂದು ಅವರು ವಿನಂತಿಸಿದ್ದಾರೆ.

ಇದನ್ನೂ ಓದಿ: ವಿಮಾನ ಪತನದಲ್ಲಿ ಡಿಸಿಎಂ ಅಜಿತ್ ಪವಾರ್​​ ನಿಧನ; ಇದುವರೆಗೂ ಏನೇನಾಯ್ತು?

ಮಮತಾ ಬ್ಯಾನರ್ಜಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಅಖಿಲೇಶ್ ಯಾದವ್ ಸೇರಿದಂತೆ ಹಲವಾರು ರಾಜಕೀಯ ನಾಯಕರು ಈ ಅಪಘಾತದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ ನಂತರ ಅವರ ಈ ಪ್ರತಿಕ್ರಿಯೆ ಬಂದಿದೆ.

ಅಜಿತ್ ಪವಾರ್ ಅವರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ಚಾರ್ಟರ್ಡ್ ವಿಮಾನವು ಬೆಳಿಗ್ಗೆ 8 ಗಂಟೆ ಸುಮಾರಿಗೆ ಮುಂಬೈನಿಂದ ಹೊರಟಿತು. ಸುಮಾರು 45 ನಿಮಿಷಗಳ ನಂತರ ಬಾರಾಮತಿ ವಿಮಾನ ನಿಲ್ದಾಣದ ಬಳಿ ಲ್ಯಾಂಡ್ ಆಗಲು ಪ್ರಯತ್ನಿಸುವಾಗ ವಿಮಾನ ಅಪಘಾತಕ್ಕೀಡಾಯಿತು. ಅಜಿತ್ ಪವಾರ್ ಜೊತೆಗೆ, ಇತರ ನಾಲ್ವರು ಜನರು ವಿಮಾನದಲ್ಲಿದ್ದರು. ಅವರು ಯಾರೂ ಅಪಘಾತದಲ್ಲಿ ಬದುಕುಳಿದಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ನಿಧನ, ಬೆಂಗಳೂರು ಚಲೋ ಮುಂದೂಡಿಕೆ – Kannada News | Transport employees leader ananth subbarao passes away, So tomorrows Workers Bengaluru chalo postponed

ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್

ಬೆಂಗಳೂರು, (ಜನವರಿ 28): ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ (85) (Transport employees leader ananth subbarao)ನಿಧನರಾಗಿದ್ದಾರೆ. ಇಂದು (ಜನವರಿ 28) ಸಂಜೆ ಅನಂತ್ ಸುಬ್ಬರಾವ್ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಬೆಂಗಳೂರಿನ ವಿಜಯನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. 85 ವರ್ಷದ ಅನಂತ್ ಸುಬ್ಬರಾವ್ ಅವರು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿದ್ದರು. ಕಳೆದ ಐದು ದಶಕಗಳಿಂದ ಸಾರಿಗೆ ನೌಕರರ ಪರ ಹೋರಾಟ ಮಾಡಿಕೊಂಡು ಬಂದಿದ್ದರು. ಇದರಂತೆ ನಾಳೆ(ಜನವರಿ 29) ಸಾರಿಗೆ ನೌಕರರಿಗೆ ಬೆಂಗಳೂರು ಚಲೋಗೆ ಕರೆ ನೀಡಿದ್ದರು. ಆದ್ರೆ, ಇದೀಗ ಅವರ ನಿಧನದಿಂದಾಗಿ ಬೆಂಗಳೂರು ಚಲೋ(Bengaluru Chalo Strike)  ಮುಂದೂಡಿಕೆಯಾಗಿದ್ದು, ಎಂದಿನಂತೆ ಬಸ್ ಸಂಚಾರ ಇರಲಿದೆ.

ಅನಂತ್ ಸುಬ್ಬರಾವ್ ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನವರು. ಅನಂತ ಸುಬ್ಬರಾವ್ ನೇತೃತ್ವದಲ್ಲೇ ನಾಳೆ ಮುಷ್ಕರ ಹಾಗೂ ಬೆಂಗಳೂರು ಚಲೋ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದರು. ಈಗ ಅನಂತ್ ಸುಬ್ಬರಾವ್ ನಿಧನರಾದ ಹಿನ್ನಲೆಯಲ್ಲಿ ನಾಳೆ ನಡೆಯಬೇಕಾಗಿದ್ದ ಸಾರಿಗೆ ನೌಕರರ ಮುಷ್ಕರ ಹಾಗೂ ಬೆಂಗಳೂರು ಚಲೋವನ್ನು ಮುಂದೂಡಲಾಗಿದೆ.

ಇದನ್ನೂ ಓದಿ: ಜ.29ರಂದು ಬೆಂಗಳೂರು ಚಲೋ ಕೈಗೊಂಡ ಸಾರಿಗೆ ನೌಕರರಿಗೆ ಶಾಕ್ ಕೊಟ್ಟ KSRTC

ಬೆಂಗಳೂರು ಚಲೋ ಮುಷ್ಕರ ಮುಂದೂಡಿಕೆ

ಅನಂತ್ ಸುಬ್ಬರಾವ್ ಆಪ್ತ ಡಿ.ಎ.ವಿಜಯ ಭಾಸ್ಕರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಇಂದು ಸಂಜೆ 5.30ರ ಸುಮಾರಿನಲ್ಲಿ ಅನಂತ್ ಸುಬ್ಬರಾವ್ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ವಿಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೆ ಅನಂತ್ ಸುಬ್ಬರಾವ್ ಸಾವನ್ನಪ್ಪಿದ್ದಾರೆ. 5 ದಶಕಗಳಿಂದ ಸಾರಿಗೆ ನೌಕರರ ಪರ ಹೋರಾಟ ನಡೆಸುತ್ತಿದ್ದರು. ಅನಂತ್ ಸುಬ್ಬರಾವ್ ನಿಧನ ಹಿನ್ನೆಲೆಯಲ್ಲಿ ನಾಳೆ ಕರೆ ನೀಡಿದ್ದ ಬೆಂಗಳೂರು ಚಲೋ ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದರು.

ಎಂದಿನಂತೆ ಬಸ್ ಓಡಾಟ

ವಿವಿಧ ಬೇಡಿಕೆ ಈಡೇರಿಸುವಂತೆ ನಾಲ್ಕು ನಿಗಮದ ಸಾರಿಗೆ ನೌಕರರು ಬೆಂಗಳೂರು ಚಲೋ ಪ್ರತಿಭಟನೆಗೆ ಕರೆ ನೀಡಿದ್ದರು.  ಇದರಿಂದ ನಾಳೆ (ಜನವರಿ 28) ಬಸ್ ಸಂಚಾರ ಇರುತ್ತಾ ಇಲ್ಲಾ ಎಂದು ಪ್ರಯಾಣಿಕರಲ್ಲಿ ಗೊಂದಲ ಮೂಡಿಸಿತ್ತು.  ಆದ್ರೆ, ಸಾರಿಗೆ ನೌಕರರ ಸಂಘದ ಮುಖಂಡ ಸಾವನ್ನಪ್ಪಿರುವುದರಿಂದ ಬೆಂಗಳೂರು ಚಲೋ ಮುಷ್ಕರವನ್ನು ಮುಂದೂಡಿದ್ದಾರೆ. ಹೀಗಾಗಿ ನಾಳೆ (ಜನವರಿ 29) ಎಂದಿನಂತೆ ಬಸ್ ಸಂಚಾರ ಇರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 8:34 pm, Wed, 28 January 26

Source link

ರಾಜಕೀಯಕ್ಕೆ ಬರಲು ಜೈ ಭೀಮ್ ಎನ್ನುತ್ತೀರಾ? ಉತ್ತರಿಸಿದ ದುನಿಯಾ ವಿಜಯ್ – Kannada News | Landlord movie actor Duniya Vijay says he has no intention to enter politics

ನಟ ದುನಿಯಾ ವಿಜಯ್ ಅವರು ‘ಲ್ಯಾಂಡ್​ಲಾರ್ಡ್’ (Landlord) ಸಿನಿಮಾದಲ್ಲಿ ನಟಿಸಿದ್ದು, ಶೋಷಿತರ ಬಗ್ಗೆ ಈ ಚಿತ್ರದಲ್ಲಿ ತೋರಿಸಲಾಗಿದೆ. ರಾಜಕೀಯಕ್ಕೆ ಬರುವ ಯೋಜನೆಯಿಂದ ವಿಜಯ್ ಅವರು ಈ ರೀತಿಯ ಸಿನಿಮಾ ಮಾಡಿದ್ದಾರಾ ಎಂಬ ಪ್ರಶ್ನೆ ಕೆಲವರಿಗೆ ಇದೆ. ಅಂಥವರಿಗೆ ವಿಜಯ್ (Duniya Vijay) ಅವರು ಉತ್ತರ ನೀಡಿದ್ದಾರೆ. ‘ಒರಿಜಿನಲ್ ಆಗಿ ಯೋಚನೆ ಮಾಡುವವರಿಗೆ ಅದು ಗೊತ್ತಿದೆ. ಡೂಪ್ಲಿಕೇಟ್ ಆಗಿ ಯೋಚನೆ ಮಾಡುವವರಿಗೆ ಮಾತ್ರ ರಾಜಕೀಯ ಕಾಣುತ್ತಿದೆ. ನನಗೆ ಸಿನಿಮಾದಲ್ಲಿ ಇರುವ ರಾಜಕೀಯ ತಡೆದುಕೊಳ್ಳೋಕೇ ಕಷ್ಟ ಆಗುತ್ತಿದೆ. ಇನ್ನು ಆ ರಾಜಕೀಯಕ್ಕೆ ಹೋಗಿ ನಾನು ಏನು ಮಾಡಲಿ? ನಾನು ಅಷ್ಟು ದೊಡ್ಡ ಶ್ರೀಮಂತ ಅಲ್ಲ. ದುಡ್ಡು ಕೊಟ್ಟು ವೋಟ್ ಹಾಕಿಸಿಕೊಳ್ಳಬೇಕಾದ ಅವಶ್ಯಕತೆ ನನಗೆ ಇಲ್ಲ. ನನ್ನ ಕೆಲಸದ ಮೂಲಕ ಒಳ್ಳೆಯದು ಮಾಡುತ್ತೇನೆ. ಅಂಬೇಡ್ಕರ್ ಬಗ್ಗೆ ಓದಿಕೊಂಡ ಎಲ್ಲರೂ ಖಂಡಿತವಾಗಿ ಜೈ ಭೀಮ್ (Jai Bhim) ಅಂತಾರೆ. ಓದದೇ ಯಾರೂ ಮಾತನಾಡಬಾರದು’ ಎಂದು ದುನಿಯಾ ವಿಜಯ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Patanjali Online: ಈ ಪತಂಜಲಿ ಪ್ಲಾಟ್​ಫಾರ್ಮ್​ಗಳಲ್ಲಿ ರಿಯಾಯಿತಿ ದರದಲ್ಲಿ ಉತ್ಪನ್ನಗಳನ್ನು ಖರೀದಿಸುವ ಅವಕಾಶ – Kannada News | Patanjali Ayurveda’s online platforms give good discounts and cashback offers on its products

ಪತಂಜಲಿ ಆಯುರ್ವೇದ (Patanjali Ayurveda) ತನ್ನ ಗ್ರಾಹಕರಿಗೆ ಆನ್‌ಲೈನ್ ಶಾಪಿಂಗ್ ಸೇವೆ ನೀಡುತ್ತಿದೆ. ಸೋಪ್, ಟೂತ್‌ಪೇಸ್ಟ್, ಹಿಟ್ಟು, ತುಪ್ಪ ಮತ್ತು ಆಯುರ್ವೇದ ಔಷಧಿಗಳಿಂದ ಹಿಡಿದು, ಅದರ ಎಲ್ಲಾ ಉತ್ಪನ್ನಗಳನ್ನು ಈಗ ನಿಮ್ಮ ಮನೆಯಿಂದಲೇ ಆನ್​ಲೈನ್ ಮೂಲಕ ಆರ್ಡರ್ ಮಾಡಬಹುದು. ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಆರ್ಡರ್ ಮಾಡುವಾಗ ಗ್ರಾಹಕರು ಗಮನಾರ್ಹ ರಿಯಾಯಿತಿಗಳನ್ನು ಸಹ ಪಡೆಯುತ್ತಾರೆ. ಪತಂಜಲಿ ಉತ್ಪನ್ನಗಳನ್ನು ಖರೀದಿಸಲು ಅಂಗಡಿಗೆ ಹೋಗಲು ಸಾಧ್ಯವಾಗದವರಿಗೆ ಈ ಫೀಚರ್ ಪ್ರಯೋಜನಕಾರಿಯಾಗಿದೆ. ಅವರು ಈಗ ತಮ್ಮ ಮನೆಯಿಂದಲೇ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದು.

ಪತಂಜಲಿ ಆನ್​ಲೈನ್ ಪ್ಲಾಟ್​ಫಾರ್ಮ್

ಯೋಗ ಗುರು ಬಾಬಾ ರಾಮದೇವ್ ಅವರ ಕಂಪನಿಯಾದ ಪತಂಜಲಿ, ಗ್ರಾಹಕರ ಅನುಕೂಲಕ್ಕಾಗಿ ತನ್ನ ಅಧಿಕೃತ ಆನ್​ಲೈನ್ ಪ್ಲಾಟ್​ಫಾರ್ಮ್ ಸೌಲಭ್ಯ ಕೊಟ್ಟಿದೆ. ಗ್ರಾಹಕರು ಪತಂಜಲಿ ಸ್ಟೋರ್​ಗೆ ಹೋಗಿ ಖರೀದಿಸುವ ಅನಿವಾರ್ಯತೆಯನ್ನು ತಪ್ಪಿಸುತ್ತದೆ. ವೆಬ್​ಸೈಟ್ ಮತ್ತು ಮೊಬೈಲ್ ಆ್ಯಪ್ ಮೂಲಕ ಉತ್ಪನ್ನಗಳಿಗೆ ಆರ್ಡರ್ ಮಾಡಿ ಮನೆ ಬಾಗಿಲಿಗೆ ಡೆಲಿವರಿ ಪಡೆಯಬಹುದು.

ಇದನ್ನೂ ಓದಿ: Patanjali Model: ಜಾಗತಿಕ ಬ್ರ್ಯಾಂಡ್​ಗಳಿಗೆ ಪೈಪೋಟಿ ನೀಡುತ್ತಿರುವ ಪತಂಜಲಿಯ ಯಶಸ್ಸಿನ ಗುಟ್ಟೇನು?

ಒಂದು ಕ್ಲಿಕ್​ಗೆ ಸಿಗುತ್ತವೆ ಪತಂಜಲಿ ಉತ್ಪನ್ನಗಳು

ಪತಂಜಲಿಯ ಆನ್‌ಲೈನ್ ಪ್ಲಾಟ್‌ಫಾರ್ಮ್ ಆಯುರ್ವೇದ ಔಷಧಿಗಳ ಜೊತೆಗೆ ದಿನನಿತ್ಯದ ಉತ್ಪನ್ನಗಳನ್ನು ನೀಡುತ್ತದೆ. ಗ್ರಾಹಕರು ತಮ್ಮ ಮನೆಗಳಿಂದಲೇ ಸೋಪ್, ಶಾಂಪೂ, ಟೂತ್‌ಪೇಸ್ಟ್, ಬಿಸ್ಕತ್ತು, ತುಪ್ಪ, ಹಿಟ್ಟು ಮತ್ತು ಹರ್ಬಲ್ ಜ್ಯೂಸ್ ಸೇರಿದಂತೆ ನೂರಾರು ಉತ್ಪನ್ನಗಳನ್ನು ಆರ್ಡರ್ ಮಾಡಬಹುದು. ಇದು ಸಣ್ಣ ಪಟ್ಟಣಗಳು ​​ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೂ ಸುಲಭವಾಗಿ ಶುದ್ಧ ಹಾಗೂ ದೇಶೀಯ ಉತ್ಪನ್ನಗಳು ಸಿಗುವಂತಾಗುತ್ತದೆ.

ಆನ್‌ಲೈನ್ ಶಾಪಿಂಗ್‌ನಲ್ಲಿ ರಿಯಾಯಿತಿ

ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ಗ್ರಾಹಕರು ಅನೇಕ ಉತ್ಪನ್ನಗಳ ಮೇಲೆ 3% ರಿಂದ 10% ವರೆಗಿನ ರಿಯಾಯಿತಿಗಳನ್ನು ಪಡೆಯುತ್ತಾರೆ. ವಿಶೇಷವಾಗಿ PNB-Patanjali ಮತ್ತು RBL ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಪಾವತಿಸುವಾಗ ಕ್ಯಾಶ್‌ಬ್ಯಾಕ್ ಪ್ರಯೋಜನಗಳು ಸಹ ಲಭ್ಯವಿದೆ. ಆಯ್ದ ಉತ್ಪನ್ನಗಳಿಗೆ ಉಚಿತ ಡೆಲಿವರಿ ಸಹ ನೀಡಲಾಗುತ್ತದೆ. ಇದು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಂತೆ ಗ್ರಾಹಕರಿಗೆ ಅನುಕೂಲಗಳನ್ನು ಒದಗಿಸುತ್ತದೆ.

ಇದನ್ನೂ ಓದಿ: ನರನೋವು ಶಮನ ಮಾಡಬಲ್ಲ ‘ಪೀಡಾನಿಲ್ ಗೋಲ್ಡ್’; ಇದು ಪತಂಜಲಿ ಆಯುರ್ವೇದದ ಕೊಡುಗೆ

ಮನೆಯಲ್ಲಿ ಕುಳಿತು ಪತಂಜಲಿಯಿಂದ ಆರ್ಡರ್ ಮಾಡುವುದು ಹೇಗೆ?

  • ಪತಂಜಲಿಯಿಂದ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು, ಗ್ರಾಹಕರು patanjaliayurved.net ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
  • ಇಲ್ಲಿ ನಿಮ್ಮ ಅಕೌಂಟ್ ತೆರೆಯಬೇಕು.
  • ಅಕೌಂಟ್ ಇದ್ದರೆ, ಲಾಗಿನ್ ಆಗಿರಿ.
  • ನಿಮಗೆ ಬೇಕಾದ ಉತ್ಪನ್ನಗಳನ್ನು ಹುಡುಕಿ ಆಯ್ಕೆ ಮಾಡಿಕೊಂಡು ಕಾರ್ಟ್​ಗೆ ಸೇರಿಸಬೇಕು
  • ಕಾರ್ಟ್​ಗೆ ಹೋಗಿ ನಿಮ್ಮ ವಸ್ತುಗಳಿಗೆ ಆನ್‌ಲೈನ್ ಪಾವತಿಯನ್ನು ಮಾಡಿದ ನಂತರ ಆರ್ಡರ್ ಅನ್ನು ದೃಢೀಕರಿಸಬಹುದು.
  • ಸರಕುಗಳು ಕೆಲವೇ ದಿನಗಳಲ್ಲಿ ನೇರವಾಗಿ ಗ್ರಾಹಕರ ಮನೆಗೆ ತಲುಪುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಾಯಚೂರು: ಗರ್ಭಿಣಿ ಅಂತಾ ನೋಡದೆ ಸೊಸೆಯ ಕತ್ತು ಸೀಳಿ ಕೊಂದ ಮಾವ – Kannada News | Raichur: Pregnant Daughter in Law Murdered by Father in Law Amidst Family Feud

ಪ್ರಾತಿನಿಧಿಕ ಚಿತ್ರImage Credit source: meltzerandbell.com

ರಾಯಚೂರು, ಜನವರಿ 28: ಹಣ ಕೊಡದಿದ್ದಕ್ಕೆ ಮಗನೋರ್ವ ಹೆತ್ತ ತಾಯಿಯನ್ನೇ ಅಟ್ಟಾಡಿಸಿ ಕೊಲೆ (murder) ಮಾಡಿದ್ದ ಘಟನೆ ಮಂಗಳವಾರ ನಗರದಲ್ಲಿ ನಡೆದಿತ್ತು. ಇಂದು ಇದೇ ರಾಯಚೂರಿನಲ್ಲಿ (Raichur) ಮತ್ತೊಂದು ಭೀಕರ ಘಟನೆ ನಡೆದಿದೆ. ಗರ್ಭಿಣಿ ಸೊಸೆಯನ್ನ ಕತ್ತು ಸೀಳಿ ಮಾವ ಕೊಲೆ ಮಾಡಿರುವಂತಹ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಅಣಗಿ ಗ್ರಾಮದಲ್ಲಿ ನಡೆದಿದೆ. ರೇಖಾ(25) ಕೊಲೆಯಾದ ಸೊಸೆ. ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೌಟುಂಬಿಕ ಕಲಹ: ಸೊಸೆ ಕೊಲೆ

ಕೌಟುಂಬಿಕ ಕಲಹ ಹಿನ್ನೆಲೆ ಮಾವ ಸಿದ್ದಪ್ಪ ನಾಲ್ಕು ತಿಂಗಳ ಗರ್ಭಿಣಿ ಸೊಸೆ ರೇಖಾರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ. ಈ ವೇಳೆ ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಹೊರಬಂದು ನರಳಾಡಿ ರೇಖಾ ಸಾವನ್ನಪ್ಪಿದ್ದಾರೆ. ಇತ್ತ ಕೃತ್ಯವೆಸಗಿ ಪರಾರಿಯಾಗಿದ್ದ ಆರೋಪಿ ಮಾವ ಸಿದ್ದಪ್ಪನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಹೆತ್ತ ತಾಯಿಯನ್ನೇ ಅಟ್ಟಾಡಿಸಿ ಕೊಂದ ಮಗ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂನಿಕ ಜಕ್ಕೇರು ತಾಂಡಾ ನಿನ್ನೆ ಕರುಳು ಹಿಂಡುವಂಥ ಕೃತ್ಯಕ್ಕೆ ಸಾಕ್ಷಿಯಾಗಿತ್ತು. ಹೆತ್ತ ತಾಯಿಯನ್ನೇ ಮಗ ಅಟ್ಟಾಡಿಸಿ ಕೊಲೆ ಮಾಡಿದ್ದ. ಚಂದವ್ವ (45) ಕೊಲೆಯಾದ ತಾಯಿ. ಈ ಚಂದವ್ವಗೆ ಆರು ಜನ ಮಕ್ಕಳು. ನಾಲ್ಕು ಜನ ಹೆಣ್ಣು ಮಕ್ಕಳಿಗೆ ಮದುವೆಯಾಗಿದ್ದು, ಗಂಡನ ಮನೆಯಲ್ಲಿದ್ದಾರೆ. ಇಬ್ಬರು ಗಂಡು ಮಕ್ಕಳ ಪೈಕಿ ಮೊದಲನೇ ಮಗ ಕುಮಾರ್​​​. ಇತನಿಗೂ ಮದುವೆಯಾಗಿದ್ದು, ಬೆಂಗಳೂರಿನಲ್ಲಿ ಹೆಂಡ್ತಿ-ಮಕ್ಕಳ ಜೊತೆ ಜೀವನ ಮಾಡುತ್ತಿದ್ದಾರೆ.

ಇದನ್ನೂ ಓದಿ: ಖಾಸಗಿ ಬಸ್​​- ಕ್ರೂಸರ್​ ನಡುವೆ ಮುಖಾಮುಖಿ ಡಿಕ್ಕಿ: ಮೂವರು ಸಾವು, 8 ಮಂದಿ ಗಂಭೀರ

ಇನ್ನೊಬ್ಬ ಮಗ ಸಂತೋಷ್. ಇತ ಇದೇ ಜಕ್ಕೇರು ತಾಂಡಾದಲ್ಲಿ ಜೆಸಿಬಿ ಆಪರೇಟರ್ ಆಗಿದ್ದಾನೆ. ಹೀಗೆ ಎಲ್ಲವೂ ಚೆನ್ನಾಗಿತ್ತು. ಆದರೆ ಮೊದಲ ಮಗ ಕುಮಾರ್ ಕಿರಿಕ್ ಪಾರ್ಟಿ. ಕುಡಿಯೋದು, ಗಲಾಟೆ ಮಾಡುತ್ತಿದ್ದ. ಇತ್ತೀಚೆಗೆ ಬೆಂಗಳೂರಿನಿಂದ ಜಕ್ಕೇರು ತಾಂಡಾ ಗ್ರಾಮಕ್ಕೆ ಬಂದಿದ್ದ ಕುಮಾರ್ ತಾಯಿ ಚಂದವ್ವ ಜೊತೆ ಗಲಾಟೆ ಮಾಡಿದ್ದ. ನಿನ್ನೆ ಸಂಜೆ ತಾಯಿ ಜೊತೆ ಗಲಾಟೆ ಮಾಡಿದ್ದು, ತಾಯಿ ಕೂದಲು ಹಿಡಿದು ಎಳೆದಾಡಿ, ಮನೆ ಪಕ್ಕದ ಸೇವಾಲಾಲ್ ಭವನದ ಕಟ್ಟಡ ಮೇಲೆ ಬಿಸಾಡಿದ್ದ. ಈ ವೇಳೆ ತಾಯಿ ತಲೆ ಮೇಲೆ ಕುಮಾರ್ ಕಲ್ಲು ಎತ್ತಿ ಹಾಕಿ‌ ಹತ್ಯೆಗೈದಿದ್ದ. ಸದ್ಯ ಮುದಗಲ್ ಪೊಲೀಸರು ಆರೋಪಿ ಕುಮಾರ್​​ನನ್ನು ಬಂಧಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನಾಳೆ ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್​ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಭಾಗಿ ಸಾಧ್ಯತೆ – Kannada News | PM Modi and Amit Shah Likely To Attend Maharashtra Deputy CM Ajit Pawar Funeral in Baramati

ಮುಂಬೈ, ಜನವರಿ 28: ಇಂದು ಬೆಳಗ್ಗೆ ಬಾರಾಮತಿ ಬಳಿಯ ವಿಮಾನ ಅಪಘಾತದಲ್ಲಿ ಮೃತಪಟ್ಟ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರ ಅಂತ್ಯಕ್ರಿಯೆ ನಾಳೆ (ಗುರುವಾರ) ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ಎಲ್ಲ ಪಕ್ಷದ ನಾಯಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್​ಸಿಪಿ) ಹೇಳಿದೆ. ಡಿಸಿಎಂ ಅಜಿತ್ ಪವಾರ್ ಅವರ ಪಾರ್ಥಿವ ಶರೀರವನ್ನು ನಾಳೆಯವರೆಗೂ ಬಾರಾಮತಿಯಲ್ಲಿರುವ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ಇರಿಸಲಾಗುವುದು. ಅಲ್ಲಿ ಜನರು ಮೃತ ನಾಯಕನಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.

ಇದನ್ನೂ ಓದಿ: ಅಜಿತ್ ಪವಾರ್ ಪಕ್ಷದ ಚಿಹ್ನೆಯಾದ ಗಡಿಯಾರವೇ ಅವರ ಸಾವಿಗೆ ಸಾಕ್ಷಿಯಾಯ್ತು!

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂದು ಸಾರ್ವಜನಿಕ ರಜೆ ಘೋಷಿಸಿದ್ದು, 3 ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ. ಅಜಿತ್ ಪವಾರ್ ಮತ್ತು ಇತರ ನಾಲ್ವರು ಮುಂಬೈನಿಂದ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ಬೆಳಿಗ್ಗೆ ವಿಮಾನ ಅಪಘಾತ ಸಂಭವಿಸಿತ್ತು.

ಅಜಿತ್ ಪವಾರ್ ಅವರು ಪತ್ನಿ ಸುನೇತ್ರಾ, ರಾಜ್ಯಸಭಾ ಸದಸ್ಯೆ ಮತ್ತು ಇಬ್ಬರು ಪುತ್ರರಾದ ಪಾರ್ಥ್ ಮತ್ತು ಜೇ ಅವರನ್ನು ಅಗಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾತ್ರಿ ವೇಳೆ ಈ ಅಭ್ಯಾಸಗಳನ್ನು ಪಾಲಿಸಿದರೆ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ – Kannada News | If you follow these habits at night, you will have radiant skin

ಪ್ರತಿಯೊಬ್ಬರೂ ಕಾಂತಿಯುತ, ಆರೋಗ್ಯಕರ ತ್ವಚೆ ನಮ್ಮದಾಗಬೇಕೆಂದು ಬಯಸುತ್ತಾರೆ. ಆದರೆ ಹಗಲಿನ ಧೂಳು, ಮಾಲಿನ್ಯ, ಬೆವರು ಮತ್ತು ಮೇಕಪ್ ಮುಖದ ನೈಸರ್ಗಿಕ ಹೊಳಪನ್ನು ಕಡಿಮೆ ಮಾಡುತ್ತದೆ. ಹೀಗಿರುವಾಗ ರಾತ್ರಿ ಹೊತ್ತು ಚರ್ಮವನ್ನು ಸರಿಪಡಿಸಲು ಮತ್ತು ಗುಣಪಡಿಸಲು ಉತ್ತಮ ಸಮಯವಾಗಿದ್ದು,  ಈ ಸಮಯದಲ್ಲಿ ಸರಿಯಾದ ರೀತಿಯಲ್ಲಿ ತ್ವಚೆಯ ಆರೈಕೆಯನ್ನು (skin care) ಮಾಡಿದರೆ ಖಂಡಿತವಾಗಿಯೂ ಮೃದು, ಕಾಂತಿಯುತ ತ್ವಚೆಯನ್ನು ಪಡೆಯಬಹುದು. ಹೀಗೆ ನಿಮ್ಮ ತ್ವಚೆಯೂ ಕಾಂತಿಯುತವಾಗಿರಬೇಕೆಂದು ಬಯಸಿದರೆ ರಾತ್ರಿ ಮಲಗುವ ಮುನ್ನ ಈ ಕೆಲವೊಂದು ಆರೋಗ್ಯಕರ ಅಭ್ಯಾಸಗಳನ್ನು ಚಾಚು ತಪ್ಪದೆ ಪಾಲಿಸಿ.

ತ್ವಚೆಯ ಕಾಂತಿಯನ್ನು ಹೆಚ್ಚಿಸಲು ರಾತ್ರಿ ವೇಳೆ ಈ ಅಭ್ಯಾಸಗಳನ್ನು ಪಾಲಿಸಿ:

ಸಮಯಕ್ಕೆ ಸರಿಯಾಗಿ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ:  ನಮ್ಮ ಚರ್ಮವು ರಾತ್ರಿಯ ಸಮಯದಲ್ಲಿ ತನ್ನನ್ನು ತಾನೇ ಸರಿಪಡಿಸಿಕೊಳ್ಳುತ್ತದೆ. ಆದ್ದರಿಂದ, ರಾತ್ರಿ 10 ರಿಂದ 11 ರ ನಡುವೆ ಮಲಗಲು ಪ್ರಯತ್ನಿಸಿ. ನೀವು ನಿಯಮಿತವಾಗಿ ಸರಿಯಾದ ಸಮಯಕ್ಕೆ ಮಲಗಿದಾಗ, ನಿಮ್ಮ ಚರ್ಮವು ಆರೋಗ್ಯಕರವಾಗಿ ಮತ್ತು ಕಾಂತಿಯುತವಾಗಿ ಕಾಣುತ್ತದೆ.

ಮಲಗುವ ಮುನ್ನ ನೀರು ಕುಡಿಯಿರಿ:  ನಮ್ಮ ಚರ್ಮಕ್ಕೆ ಸಾಕಷ್ಟು ಜಲಸಂಚಯನ ಬೇಕು. ಹೀಗಿರುವಾಗ  ಮಲಗುವ ಒಂದು ಗಂಟೆ ಮೊದಲು ಒಂದು ಲೋಟ ನೀರು ಕುಡಿಯುವುದರಿಂದ ನಿಮ್ಮ ಚರ್ಮವು ಒಳಗಿನಿಂದ ತೇವಾಂಶದಿಂದ ಕೂಡಿರುತ್ತದೆ ಮತ್ತು ಶುಷ್ಕತೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ತ್ವಚೆಯ ಹೊಳಪನ್ನೂ ಹೆಚ್ಚಿಸುತ್ತದೆ.

ಮಲಗುವ ಮುನ್ನ  ಮುಖವನ್ನು ಸ್ವಚ್ಛಗೊಳಿಸಿ: ದಿನವಿಡೀ ಮುಖ ಧೂಳು, ಬೆವರು ಮತ್ತು ಮೇಕಪ್‌ನಿಂದ ಆವೃತವಾಗಿರುತ್ತವೆ. ಹಾಗಾಗಿ ರಾತ್ರಿಯ ಹೊತ್ತು  ಮುಖವನ್ನು ಸ್ವಚ್ಛಗೊಳಿಸುವುದು ತುಂಬಾನೇ ಮುಖ್ಯ. ರಾತ್ರಿಯಲ್ಲಿ ಮುಖ ತೊಳೆಯದಿದ್ದರೆ ತೊಳೆಯದೆ ರಂಧ್ರಗಳು ಮುಚ್ಚಿಹೋಗುತ್ತವೆ ಇದು ಚರ್ಮವು ಉಸಿರಾಡುವುದನ್ನು ತಡೆಯುತ್ತದೆ. ಆದ್ದರಿಂದ, ಮಲಗುವ ಮುನ್ನ ನಿಮ್ಮ ಮುಖವನ್ನು ಚೆನ್ನಾಗಿ ತೊಳೆಯುವುದು ಬಹಳ ಮುಖ್ಯ. ಇದಕ್ಕಾಗಿ, ಸೌಮ್ಯವಾದ ಫೇಸ್ ವಾಶ್ ಅಥವಾ ಸೌಮ್ಯವಾದ ಕ್ಲೆನ್ಸರ್ ಬಳಸಬಹುದು.

ಮಾಯಿಶ್ಚರೈಸರ್ ಹಚ್ಚಿ: ನಮ್ಮ ಚರ್ಮವು ರಾತ್ರಿಯಲ್ಲಿ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಹಗುರವಾದ ಮಾಯಿಶ್ಚರೈಸರ್ ಅಥವಾ ನೈಟ್ ಕ್ರೀಮ್ ಹಚ್ಚಿ. ಇದು ಶುಷ್ಕತೆಯನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಮರುದಿನ ಬೆಳಿಗ್ಗೆ ನಿಮ್ಮ ಚರ್ಮವನ್ನು ತಾಜಾ ಮತ್ತು ಹೊಳೆಯುವಂತೆ ಮಾಡುತ್ತದೆ.

ಇದನ್ನೂ ಓದಿ: ಆರೋಗ್ಯಕರ ಜೀವನಕ್ಕಾಗಿ ಬೆಳಗ್ಗೆ ಎದ್ದ ತಕ್ಷಣ ಆಯುರ್ವೇದ ನಿಯಮಗಳನ್ನು ಪಾಲಿಸಿ

ಫೋನ್ ಮತ್ತು ಲ್ಯಾಪ್‌ಟಾಪ್‌ನಿಂದ ದೂರವಿರಿ:ಮಲಗುವ ಮುನ್ನ  ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್ ಬಳಸುವುದರಿಂದ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಿದ್ರೆ ಕಡಿಮೆಯಾದಾಗ  ನಿಮ್ಮ ಚರ್ಮವು ದಣಿದಂತೆ ಕಾಣುತ್ತದೆ. ಆದ್ದರಿಂದ, ಮಲಗುವ ಕನಿಷ್ಠ ಒಂದು ಗಂಟೆ ಮೊದಲು ನಿಮ್ಮ ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ದೂರವಿಡಲು ಪ್ರಯತ್ನಿಸಿ.

ಲಘು ಭೋಜನವನ್ನು ಸೇವಿಸಿ:  ಭಾರವಾದ ಮತ್ತು ಎಣ್ಣೆಯುಕ್ತ ಆಹಾರಗಳು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುವುದಲ್ಲದೆ, ನಿಮ್ಮ ಚರ್ಮವನ್ನು ದಣಿದಂತೆ ಕಾಣುವಂತೆ ಮಾಡುತ್ತದೆ. ಆದ್ದರಿಂದ, ರಾತ್ರಿಯಲ್ಲಿ ಸಲಾಡ್, ಸೂಪ್ ಅಥವಾ ಹಣ್ಣಿನಂತಹ ಹಗುರವಾದ ಮತ್ತು ಆರೋಗ್ಯಕರ ಊಟವನ್ನು ಸೇವಿಸಿ. ಇದು ನಿಮ್ಮ ಚರ್ಮವನ್ನು ತಾಜಾ ಮತ್ತು ಹೊಳೆಯುವಂತೆ ಮಾಡುತ್ತದೆ.

ಈ ಅಭ್ಯಾಸಗಳು ಸರಳವಾಗಿ ಕಾಣಿಸಬಹುದು, ಆದರೆ ನಿಮ್ಮ ರಾತ್ರಿಯ ದಿನಚರಿಯಲ್ಲಿ ಈ ಅಭ್ಯಾಸಗಳನ್ನು ಪಾಲಿಸಿದರೆ ಖಂಡಿತವಾಗಿಯೂ ಕೆಲವೇ ಕೆಲವು ದಿನಗಳಲ್ಲಿ ನಿಮ್ಮ ತ್ವಚೆಯು ಕಾಂತಿಯುತವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕಟ್ಲೆ’ ಸಿನಿಮಾ ಮೂಲಕ ಹೀರೋ ಆದ ಕೆಂಪೇಗೌಡ; ಟ್ರೇಲರ್ ರಿಲೀಸ್ – Kannada News | Comedy actor Kempegowda turns hero in Katle movie

ಮೊದಲು ಹಾಸ್ಯ ನಟರಾಗಿ, ನಂತರ ಹೀರೋ ಆಗಿ ಯಶಸ್ಸು ಕಂಡವರು ಹಲವರು ಇದ್ದಾರೆ. ಈಗ ಕಾಮಿಡಿ ಕಲಾವಿದ ಕೆಂಪೇಗೌಡ (Kempegowda) ಕೂಡ ಹೀರೋ ಆಗಿದ್ದಾರೆ. ಹೌದು, ಅವರು ಹೀರೋ ನಟಿಸಿರುವ ಸಿನಿಮಾ ‘ಕಟ್ಲೆ’. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಸಿ.ಎನ್. ಅಶ್ವತ್ಥ್ ನಾರಾಯಣ, ರವಿಕುಮಾರ್‌ ಗೌಡ, ಪ್ರಥಮ್, ಕಾಕ್ರೋಚ್ ಸುಧಿ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ‘ಕಟ್ಲೆ’ (Katle) ಸಿನಿಮಾಗೆ ಶ್ರೀವಿಧಾ ಅಭಿನಂದನ್ ಅವರು ಕಥೆ, ಚಿತ್ರಕತೆ, ಸಂಭಾಷಣೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ಹೊಸಕೋಟೆ ಮೂಲದ ಭರತ್‌ ಗೌಡ ಅವರು ನಿರ್ಮಾಣ ಮಾಡಿದ್ದಾರೆ.

ಈ ಸಿನಿಮಾದಲ್ಲಿ ಸನ್ಮಿತಾ ಹಾಗೂ ಅಮೃತಾ ಅವರು ನಾಯಕಿಯರಾಗಿ ಅಭಿನಯಿಸಿದ್ದಾರೆ. ಇನ್ನೊಂದು ಪ್ರಮುಖ ಪಾತ್ರದಲ್ಲಿ ಹರ್ಷಿಕಾ ಪೂರ್ಣಚ್ಚ ಕಾಣಿಸಿಕೊಂಡಿದ್ದಾರೆ. ಟೆನ್ನಿಸ್‌ ಕೃಷ್ಣ, ತಬಲ ನಾಣಿ, ಹರೀಶ್‌ ರಾಜ್, ಪವನ್‌ ಕುಮಾರ್, ಗಣೇಶ್‌ ರಾವ್ ಕೇಸರಕರ್, ಬಿರಾದಾರ್, ಎಂ.ಎಸ್. ಉಮೇಶ್, ಕರಿಸುಬ್ಬು, ಯತಿರಾಜ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.

ಬೆಂಗಳೂರು, ಶಿರಸಿ ಮುಂತಾದ ಕಡೆಗಳಲ್ಲಿ ಈ ಸಿನಿಮಾಗೆ ಚಿತ್ರೀಕರಣ ಮಾಡಲಾಗಿದೆ. ವಿ. ನಾಗೇಂದ್ರ ಪ್ರಸಾದ್, ಚೇತನ್‌ ಕುಮಾರ್ ಮತ್ತು ಕಿನ್ನಾಳ್‌ ರಾಜ್ ಅವರು ಈ ಸಿನಿಮಾದ ಹಾಡುಗಳನ್ನು ಬರೆದಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಅವರು ‘ಕಟ್ಲೆ’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಅನಿರುದ್ಧ್ ಅವರ ಛಾಯಾಗ್ರಹಣ, ಚಲುವಮೂರ್ತಿ ಅವರ ಸಂಕಲನ, ಅಲ್ಟೆಮೇಟ್‌ ಶಿವು ಅವರ ಸಾಹಸ ನಿರ್ದೇಶನ, ಭಜರಂಗಿ ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

‘ಕಟ್ಲೆ’ ಸಿನಿಮಾ ಟ್ರೇಲರ್:

ಟ್ರೇಲರ್ ಬಿಡುಗಡೆ ವೇಳೆ ನಿರ್ದೇಶಕ ಶ್ರೀವಿಧಾ ಅಭಿನಂದನ್ ಅವರು ಮಾತನಾಡಿದರು. ‘ಕಟ್ಲೆಗೆ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಅದರದೇ ಆದ ಅರ್ಥ ಇರುತ್ತದೆ. ಪ್ರತಿಯೊಂದು ಜೀವ ರಾಶಿಗೆ ಕಾಲ ಅನ್ನೋದು ಇರುತ್ತೆ. ಅದು ಸರಿಯಾಗಿ ಆಗಲಿಲ್ಲ ಅಂದರೆ ಕಾಲಚಕ್ರದಲ್ಲಿ ಸ್ಥಗಿತಗೊಳ್ಳುತ್ತದೆ. ಇದರ ಆಧಾರದ ಮೇಲೆ ಚಿತ್ರ ಸಾಗುತ್ತದೆ. ಕಟ್ಲೆ ಅಳಿಸುತ್ತೆ, ನಗಿಸುತ್ತೆ, ಕಾಡುತ್ತೆ, ಕಾಡಿಸುತ್ತೆ. ಕ್ಲೈಮಾಕ್ಸ್‌ನಲ್ಲಿ ಸಂದೇಶ ಇದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು ವಿವಿ ವಿದ್ಯಾರ್ಥಿಗಳ ಜೊತೆ ‘ಲ್ಯಾಂಡ್​ಲಾರ್ಡ್’ ವಿಜಯ್ ಜಾಥಾ

ನಟ ಕೆಂಪೇಗೌಡ ಅವರು ಮಾತನಾಡಿ, ‘ಕಳೆದ 18 ವರ್ಷದ ಸಿನಿಪಯಣದಲ್ಲಿ 75ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ, ಈಗ ಬಡ್ತಿ ಎನ್ನುವಂತೆ ಹೀರೋ ಆಗಿ ಅಭಿನಯಿಸಿದ್ದೇನೆ. ನಿರ್ಮಾಪಕರು ಕಾಮಿಡಿ ಕಲಾವಿದನಿಗೆ ಹೀರೋ ಪಟ್ಟ ಕಟ್ಟಿ, ದೊಡ್ಡ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದು ಹಾರರ್, ಥ್ರಿಲ್ಲರ್, ಸೈಕಲಾಜಿಕಲ್ ಎಲ್ಲವನ್ನೂ ಒಳಗೊಂಡಿರುವ ಸಿನಿಮಾ’ ಎಂದು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಮಾನ ಪತನದಲ್ಲಿ ಡಿಸಿಎಂ ಅಜಿತ್ ಪವಾರ್​​ ನಿಧನ; ಇದುವರೆಗೂ ಏನೇನಾಯ್ತು? – Kannada News | Ajit Pawar Plane Crash What Happened in 40 Minutes before Aircraft Crash in Baramati

ಪುಣೆ, ಜನವರಿ 28: ಮಹಾರಾಷ್ಟ್ರದ ಪುಣೆ ಬಳಿ ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಮತ್ತು ಇತರ 5 ಜನರು ಸಾವನ್ನಪ್ಪಿದ್ದಾರೆ. ಅಜಿತ್ ಪವಾರ್ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಜನವರಿ 29ರಂದು ಬೆಳಿಗ್ಗೆ 11 ಗಂಟೆಗೆ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಗುವುದು. ಅಜಿತ್ ಪವಾರ್ ಅವರ ನಿಧನದ ನಂತರ 3 ದಿನಗಳ ರಾಜ್ಯ ಶೋಕಾಚರಣೆಯನ್ನು ಘೋಷಿಸಲಾಗಿದೆ. ಈ ಅವಧಿಯಲ್ಲಿ ಯಾವುದೇ ಸರ್ಕಾರಿ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗುವುದಿಲ್ಲ.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿಮಾನ ಬಾರಾಮತಿಯಲ್ಲಿ ಇಳಿಯುವ ಮೊದಲೇ ಅಪಘಾತಕ್ಕೀಡಾಯಿತು. ವಿಮಾನ ಡಿಕ್ಕಿ ಹೊಡೆದ ತಕ್ಷಣ ಬೆಂಕಿ ಹೊತ್ತಿಕೊಂಡಿತು, ವಿಮಾನ ಛಿದ್ರವಾಯಿತು. ಅಜಿತ್ ಪವಾರ್ ಇಂದು ಬಾರಾಮತಿಯಲ್ಲಿ ಮೂರು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಈ ಹಿನ್ನೆಲೆಯಲ್ಲಿ ಅವರು ತಮ್ಮ ತವರು ಕ್ಷೇತ್ರವಾದ ಬಾರಾಮತಿಗೆ ತೆರಳುತ್ತಿದ್ದರು. ಭದ್ರತಾ ಪಡೆಗಳು, ಪೊಲೀಸ್ ಮತ್ತು ಅಗ್ನಿಶಾಮಕ ದಳದ ತಂಡಗಳು ತಕ್ಷಣ ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸಿದವು.

ಇಂದು ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನವಾಗುವ ಆ 40 ನಿಮಿಷಗಳ ಕಾಲ ಏನೇನಾಯ್ತು? ಇದುವರೆಗೂ ಏನೆಲ್ಲ ಬೆಳವಣಿಗೆಗಳಾದವು ಎಂಬುದರ ಪೂರ್ತಿ ಮಾಹಿತಿ ಇಲ್ಲಿದೆ.

  1. ದೆಹಲಿ ಮೂಲದ ವಿಎಸ್ಆರ್ ವೆಂಚರ್ಸ್‌ನ ಲಿಯರ್‌ಜೆಟ್ 45 ವಿಮಾನ (ವಿಟಿ-ಎಸ್‌ಎಸ್‌ಕೆ) ಇಂದು ಬೆಳಿಗ್ಗೆ 8.10ಕ್ಕೆ ಮುಂಬೈನಿಂದ ಹೊರಟಿತು. ಬೆಳಿಗ್ಗೆ 8.45ರ ಸುಮಾರಿಗೆ ರಾಡಾರ್ ಸಂಪರ್ಕವನ್ನು ಕಳೆದುಕೊಂಡಿತು.
  2. ಕೆಟ್ಟ ಹವಾಮಾನದಿಂದಾಗಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನದ ಪೈಲಟ್​ಗೆ ಸರಿಯಾಗಿ ಏನೂ ಕಾಣುತ್ತಿರಲಿಲ್ಲ. ಅತಿಯಾದ ಮಂಜು ಈ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. ಆ ವಿಮಾನದಿಂದ ಕರೆ ಬಂದ ನಂತರ ಅವರಿಗೆ ಲ್ಯಾಂಡ್ ಮಾಡಲು ಸಲಹೆ ನೀಡಲಾಯಿತು.
  3. ಆಗ ಸಿಬ್ಬಂದಿಯ ಬಳಿ ಆಗಸದಲ್ಲಿ ಗಾಳಿ ಮತ್ತು ಗೋಚರತೆಯ ಬಗ್ಗೆ ವಿಚಾರಿಸಲಾಯಿತು. ಆಗ ಗಾಳಿಯು ಶಾಂತವಾಗಿದೆ ಮತ್ತು ಗೋಚರತೆ ಸುಮಾರು 3000 ಮೀಟರ್‌ಗಳಿವೆ ಎಂದು ಪೈಲಟ್​​ಗೆ ತಿಳಿಸಲಾಯಿತು.
  4. ಮುಂದೆ ವಿಮಾನವು ರನ್‌ವೇ 11ರ ಅಂತಿಮ ಮಾರ್ಗವನ್ನು ವರದಿ ಮಾಡಿದೆ. ಆದರೆ, ರನ್‌ವೇ ಅವರಿಗೆ ಕಾಣುತ್ತಿರಲಿಲ್ಲ. ಅಷ್ಟರಲ್ಲಿ ವಿಮಾನ ಪತನವಾಯಿತು. ಆ ವಿಮಾನದಲ್ಲಿ ಒಟ್ಟು 5 ಜನರಿದ್ದರು. ಪೊಲೀಸ್ ಅಧಿಕಾರಿಗಳ ಪ್ರಕಾರ, ವಿಮಾನ ಬೆಳಿಗ್ಗೆ 8.50ಕ್ಕೆ ಪತನವಾಯಿತು.
  5. ಅಜಿತ್ ಪವಾರ್ ಅವರ ದೇಹವನ್ನು ಅವರ ಕೈಗಡಿಯಾರದಿಂದ ಗುರುತಿಸಲಾಯಿತು. ಈ ವಾಚ್ ಅವರ ಗುರುತಿನ ಮುಖ್ಯ ಸುಳಿವು ಆಯಿತು.
  6. ಪೈಲಟ್ ಕ್ಯಾಪ್ಟನ್ ಸುಮಿತ್ ಕಪೂರ್ ಮತ್ತು ಸಹ ಪೈಲಟ್ ಕ್ಯಾಪ್ಟನ್ ಶಾಂಭವಿ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ತನಿಖೆಯ ನಂತರವೇ ಅಪಘಾತಕ್ಕೆ ನಿಖರವಾದ ಕಾರಣ ತಿಳಿದುಬರಲಿದೆ.
  7. ಅಜಿತ್ ಪವಾರ್ ಅವರ ಜೊತೆ ಅವರ ಭದ್ರತಾ ಸಿಬ್ಬಂದಿ ವಿದೀಪ್ ಜಾಧವ್ ಇದ್ದರು. ಈ ಅಪಘಾತದಲ್ಲಿ ವಿದೀಪ್ ಜಾಧವ್ ಕೂಡ ಸಾವನ್ನಪ್ಪಿದರು.
  8. ಅಜಿತ್ ಪವಾರ್ ಅವರ ನಿಧನದ ನಂತರ, ಮಹಾರಾಷ್ಟ್ರ ಸರ್ಕಾರ ಇಂದಿನ ಎಲ್ಲಾ ರಾಜಕೀಯ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ಮಹಾರಾಷ್ಟ್ರದಲ್ಲಿ 3 ದಿನಗಳ ರಾಜ್ಯ ಶೋಕಾಚರಣೆ ಘೋಷಿಸಲಾಗಿದೆ.
  9. ಬಾರಾಮತಿ ವಿಮಾನ ಅಪಘಾತದ ತನಿಖೆ ಪೂರ್ಣ ವೇಗದಲ್ಲಿ ಆರಂಭವಾಗಿದೆ. ಎಎಐಬಿ (ವಿಮಾನ ಅಪಘಾತ ತನಿಖಾ ಬ್ಯೂರೋ) ತಂಡವು ದೆಹಲಿಯಿಂದ ಬಾರಾಮತಿಗೆ ತೆರಳಿದ್ದು, ತನಿಖೆ ನಡೆಸಲು ಸ್ಥಳಕ್ಕೆ ತೆರಳಲಿದೆ.
  10. ಈಗಾಗಲೇ ಅಜಿತ್ ಪವಾರ್ ಅವರ ದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಗಿದ್ದು, ನಾಳೆ ಅಂತ್ಯಕ್ರಿಯೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version