IND vs NZ: ಟಿ20 ಸರಣಿ ಮೊದಲ 3 ಪಂದ್ಯಗಳಿಂದ ತಿಲಕ್ ವರ್ಮಾ ಔಟ್; ಉಳಿದೆರಡು ಪಂದ್ಯಗಳಿಗೂ ಅನುಮಾನ! – Kannada News | India vs New Zealand T20: Tilak Varma Injury Update and World Cup Impact
ಈ ತಿಂಗಳು ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯನ್ನು ಆಡಲಿದ್ದು, ಆ ಬಳಿಕ ಫೆಬ್ರವರಿ 7 ರಿಂದ ಆರಂಭವಾಗುವ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯಲಿದೆ. ಹೀಗಾಗಿ ತಿಲಕ್ ವರ್ಮಾ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದು ತಂಡವನ್ನು ಸಂಕಷ್ಟಕ್ಕೀಡುಮಾಡಿದೆ. ಏಕೆಂದರೆ ತಿಲಕ್ ವರ್ಮಾ ಭಾರತ ಟಿ20 ತಂಡದ ಆಧಾರಸ್ತಂಭವೂ ಆಗಿದ್ದಾರೆ. ಒಂದು ವೇಳೆ ತಿಲಕ್ ವಿಶ್ವಕಪ್ ವೇಳೆಗೆ ಗುಣಮುಖರಾಗದಿದ್ದರೆ, ಅವರ ಬದಲಿಗೆ ಶ್ರೇಯಸ್ ಅಯ್ಯರ್ಗೆ ಆಡುವ ಅವಕಾಶ ಸಿಗಬಹುದು. Source link