WPL 2026: ಮೊದಲ ಪಂದ್ಯದಲ್ಲಿ ಆರ್​ಸಿಬಿ- ಮುಂಬೈ ಕಣಕ್ಕೆ; ಪಂದ್ಯ ಎಷ್ಟು ಗಂಟೆಗೆ ಆರಂಭ? – Kannada News | WPL 2026: MI vs RCB Opener – Match Preview, Squads and Pitch Report

ಮಹಿಳಾ ಪ್ರೀಮಿಯರ್ ಲೀಗ್​ನ (Women’s Premier League) ನಾಲ್ಕನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (MI vs RCB) ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಈ ಲೀಗ್​ನಲ್ಲಿ ಹಾಲಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಎರಡು ಬಾರಿ ಟೂರ್ನಿಯನ್ನು ಗೆದ್ದಿದ್ದರೆ, ಆರ್‌ಸಿಬಿ ಒಮ್ಮೆ ಪ್ರಶಸ್ತಿ ಗೆದ್ದಿದೆ. ಆದ್ದರಿಂದ, ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗಿದೆ. ಮುಂಬೈ ಇಂಡಿಯನ್ಸ್ ತಂಡವನ್ನು ಹರ್ಮನ್​ಪ್ರೀತ್ ಕೌರ್ ಮುನ್ನಡೆಸುತ್ತಿದ್ದರೆ, ಆರ್‌ಸಿಬಿ ತಂಡಚನ್ನು ಸ್ಮೃತಿ ಮಂಧಾನ ಮುನ್ನಡೆಸುತ್ತಿದ್ದಾರೆ. ಮೊದಲ ಪಂದ್ಯ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರಾತ್ರಿ 7:30 ಕ್ಕೆ ಆರಂಭವಾಗಲಿದೆ.

ಉಭಯ ತಂಡಗಳ ಬಲಾಬಲ

ಮುಂಬೈ ಇಂಡಿಯನ್ಸ್ ಆರ್‌ಸಿಬಿಗಿಂತ ಕಾಗದದ ಮೇಲೆ ಬಲಿಷ್ಠವಾಗಿ ಕಾಣುತ್ತದೆ. ಈ ತಂಡದಲ್ಲಿ ಹರ್ಮನ್‌ಪ್ರೀತ್ ಕೌರ್, ಇಂಗ್ಲೆಂಡ್ ನಾಯಕಿ ನ್ಯಾಟ್ ಸಿವರ್ ಬ್ರಂಟ್ ಮತ್ತು ವೆಸ್ಟ್ ಇಂಡೀಸ್ ನಾಯಕಿ ಹೀಲಿ ಮ್ಯಾಥ್ಯೂಸ್ ಇದ್ದಾರೆ. ಇವರ ಜೊತೆಗೆ ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್, ಆಸ್ಟ್ರೇಲಿಯಾದ ಮಿಲ್ಲಿ ಇಲಿಂಗ್‌ವರ್ತ್ ಮತ್ತು ಭಾರತದ ಅಮನ್‌ಜೋತ್ ಕೌರ್ ಕೂಡ ಸೇರಿದ್ದಾರೆ.

ಮತ್ತೊಂದೆಡೆ, ಆರ್‌ಸಿಬಿ ತಂಡದಲ್ಲಿ ಸ್ಮೃತಿ ಮಂಧಾನ ಜೊತೆಗೆ, ಆಸ್ಟ್ರೇಲಿಯಾದ ಜಾರ್ಜಿಯಾ ವೋಲ್, ಆಲ್‌ರೌಂಡರ್ ಗ್ರೇಸ್ ಹ್ಯಾರಿಸ್ ಮತ್ತು ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ನಾಡಿನ್ ಡಿ ಕ್ಲಾರ್ಕ್ ಇದ್ದಾರೆ. ಅಷ್ಟೇ ಅಲ್ಲ, ಆಕ್ರಮಣಕಾರಿ ಬ್ಯಾಟ್ಸ್‌ಮನ್ ಮತ್ತು ವಿಕೆಟ್ ಕೀಪರ್ ರಿಚಾ ಘೋಷ್ ಕೂಡ ಇದ್ದಾರೆ.

ಪಿಚ್ ವರದಿ

ಟೂರ್ನಿಯ ಮೊದಲ 11 ಪಂದ್ಯಗಳು ನವಿ ಮುಂಬೈನ ಡಾ. ಡಿ.ವೈ. ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಲಿವೆ. ಮೊದಲ ಪಂದ್ಯವೂ ಇದೇ ಮೈದಾನದಲ್ಲಿ ನಡೆಯಲಿದೆ. ಡಾ. ಡಿ.ವೈ. ಪಾಟೀಲ್ ಪಿಚ್ ಬ್ಯಾಟ್ಸ್​ಮನ್​ಗಳಿಗೆ ಅನುಕೂಲಕರವಾಗಿದೆ. ಆದ್ದರಿಂದ, ಈ ಪಂದ್ಯದಲ್ಲಿ ರನ್ ಮಳೆ ಹರಿಯಲಿದೆ.

WPL 2026: ಡಬ್ಲ್ಯುಪಿಎಲ್​​ಗೆ ವೇದಿಕೆ ಸಜ್ಜು; ಎಲ್ಲಾ 5 ತಂಡಗಳು, ವೇಳಾಪಟ್ಟಿ, ನಿಯಮಗಳ ಪೂರ್ಣ ವಿವರ ಇಲ್ಲಿದೆ

ಸಂಭಾವ್ಯ ಪ್ಲೇಯಿಂಗ್ 11

ಮುಂಬೈ ಇಂಡಿಯನ್ಸ್: ಹಿಲ್ಲಿ ಮ್ಯಾಥ್ಯೂಸ್, ನ್ಯಾಟ್ ಸೈವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಸಜೀವನ್ ಸಜ್ನಾ, ಅಮನ್ಜೋತ್ ಕೌರ್, ಜಿ ಕಮಲಿನಿ, ಶಬ್ನೀಮ್ ಇಸ್ಮಾಯಿಲ್, ಸೈಕಾ ಇಶಾಕ್, ನಿಕೋಲಾ ಕ್ಯಾರಿ, ಪೂನಮ್ ಖೇಮ್ನಾರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಶ್ರೇಯಾಂಕ ಪಾಟೀಲ್, ನಡಿನ್ ಡಿ ಕ್ಲಾರ್ಕ್, ಗ್ರೇಸ್ ಹ್ಯಾರಿಸ್, ಜಾರ್ಜಿಯಾ ವಾಲ್, ರಾಧಾ ಯಾದವ್, ಲಾರೆನ್ ಬೆಲ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ದಯಾಲನ್ ಹೇಮಲತಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಿರುಪತಿ ತಿಮ್ಮಪ್ಪನ ದರ್ಶನದ ಬುಕಿಂಗ್​ನಲ್ಲಿ ನಾಳೆಯಿಂದಲೇ ಹೊಸ ಬದಲಾವಣೆ – Kannada News | TTD Tirupati Srivani Darshan tickets to be sell online from January 9th

ತಿರುಮಲ, ಜನವರಿ 8: ಆಂಧ್ರಪ್ರದೇಶದ ತಿರುಪತಿಯಲ್ಲಿರುವ ತಿರುಮಲ ದೇವಸ್ಥಾನಕ್ಕೆ (TTD) ಪ್ರತಿದಿನ ಹೆಚ್ಚಿನ ಸಂಖ್ಯೆಯ ಭಕ್ತರು ದರ್ಶನಕ್ಕಾಗಿ ಭೇಟಿ ನೀಡುತ್ತಾರೆ. ಈ ಪ್ರಸಿದ್ಧ ದೇವಾಲಯದ ದರ್ಶನಕ್ಕಾಗಿ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮತ್ತು ನೇರವಾಗಿ ಕೌಂಟರ್‌ಗಳಲ್ಲಿ ನೀಡಲಾಗುತ್ತಿದೆ. ಆದರೆ, ಈಗ ಈ ಟಿಕೆಟ್ ವ್ಯವಸ್ಥೆಯಲ್ಲಿ ಬಹಳ ಮುಖ್ಯವಾದ ಬದಲಾವಣೆಯನ್ನು ಮಾಡಲಾಗಿದೆ. ತಿರುಮಲ ತಿರುಪತಿಯಲ್ಲಿ ಸ್ವಾಮಿ ದರ್ಶನಕ್ಕಾಗಿ ಶ್ರೀ ವಾಣಿ ದರ್ಶನದ ಟಿಕೆಟ್‌ಗಳನ್ನು ಆಫ್‌ಲೈನ್‌ನಲ್ಲಿ ನೀಡಲಾಗುತ್ತಿತ್ತು. ಈಗ ಈ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ನೀಡಲಾಗುತ್ತಿದೆ. ಈ ವ್ಯವಸ್ಥೆಯು 1 ತಿಂಗಳ ಪ್ರಾಯೋಗಿಕ ಅವಧಿಗೆ ಜಾರಿಯಲ್ಲಿರುತ್ತದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ. ಈ ವ್ಯವಸ್ಥೆಯು ನಾಳೆ (ಜನವರಿ 9)ಯಿಂದ ಜಾರಿಗೆ ಬರಲಿದೆ ಎಂದು ವರದಿಯಾಗಿದೆ.

ಈ ಹಿಂದೆ, ಲೈವ್ ಕೌಂಟರ್‌ಗಳ ಮೂಲಕ ಪ್ರತಿದಿನ 800 ಟಿಕೆಟ್‌ಗಳನ್ನು ನೀಡಲಾಗುತ್ತಿತ್ತು. ಈಗ, ಶ್ರೀವಾಣಿ ದರ್ಶನಕ್ಕಾಗಿ ಬುಕಿಂಗ್ ಅನ್ನು ಆನ್‌ಲೈನ್‌ನಲ್ಲಿ ಲಿಂಕ್ ಮಾಡಲಾಗಿದೆ. ಆದರೆ, ತಿರುಪತಿ ವಿಮಾನ ನಿಲ್ದಾಣದ ಕೇಂದ್ರದಲ್ಲಿ ಪ್ರತಿದಿನ ನೀಡಲಾಗುವ 200 ಟಿಕೆಟ್‌ಗಳನ್ನು ನೀಡುವುದನ್ನು ಮುಂದುವರಿಸಲಾಗುವುದು ಎಂದು ಹೇಳಲಾಗಿದೆ. ತಿರುಮಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಗೋಕುಲಂ ಇನ್ ಬಳಿಯ ಶ್ರೀವಾಣಿ ಟಿಕೆಟ್ ಕೌಂಟರ್‌ಗಳಲ್ಲಿ ಆಫ್‌ಲೈನ್‌ನಲ್ಲಿ ನೀಡಲಾಗುತ್ತಿದ್ದ 800 ಟಿಕೆಟ್‌ಗಳನ್ನು ನಾಳೆ ಅಂದರೆ ಜನವರಿ 9ರಿಂದ ಆನ್‌ಲೈನ್‌ನಲ್ಲಿ ನೀಡಲಾಗುವುದು.

ಇದನ್ನೂ ಓದಿ: Bhu Varaha Swamy: ತಿರುಪತಿ ದೇವಸ್ಥಾನಕ್ಕೆ ಹೋಗುವ ಮುನ್ನ ಭೂ ವರಾಹ ಸ್ವಾಮಿ ದರ್ಶನ ಮಾಡಲೇಬೇಕು ಯಾಕೆ ಗೊತ್ತಾ?

ಈ ಕಾರಣದಿಂದಾಗಿ ದರ್ಶನಕ್ಕಾಗಿ ದೇವಸ್ಥಾನಕ್ಕೆ ಬರುವ ಭಕ್ತರು ನೇರವಾಗಿ ಆನ್‌ಲೈನ್‌ನಲ್ಲಿ ದರ್ಶನದ ಟಿಕೆಟ್‌ಗಳನ್ನು ಖರೀದಿಸಬಹುದು. ಈ ಕೌಂಟರ್‌ನಲ್ಲಿ ದರ್ಶನದ ಟಿಕೆಟ್‌ಗಳನ್ನು ಪಡೆಯಲು ಭಕ್ತರು ದೀರ್ಘ ಸರತಿ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ಇತ್ತು. ಇದರಲ್ಲಿ ವಿವಿಧ ಕಾರ್ಯವಿಧಾನದ ಸಮಸ್ಯೆಗಳಿಂದಾಗಿ ಪ್ರಾಯೋಗಿಕ ಪ್ರಯತ್ನವಾಗಿ ಶ್ರೀವಾಣಿ ದರ್ಶನದ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಪಡೆಯುವ ಸೌಲಭ್ಯವನ್ನು ಒದಗಿಸಲಾಗಿದೆ.

ಇದನ್ನೂ ಓದಿ: ಪಾಟ್ನಾದಲ್ಲಿ ತಿರುಪತಿ ತಿರುಮಲ ದೇವಸ್ಥಾನ ನಿರ್ಮಾಣ; ಬಿಹಾರ ಸರ್ಕಾರದಿಂದ 10.11 ಎಕರೆ ಭೂಮಿ ಮಂಜೂರು

ಭಕ್ತರ ಪ್ರತಿಕ್ರಿಯೆಯ ಆಧಾರದ ಮೇಲೆ, ಈ ಪದ್ಧತಿ ಮುಂದುವರಿಯುತ್ತದೆಯೇ ಅಥವಾ ಹಳೆಯ ವ್ಯವಸ್ಥೆಯ ಪ್ರಕಾರ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ನೀಡಲಾಗುತ್ತದೆಯೇ ಎಂದು ನಿರ್ಧರಿಸಲಾಗುತ್ತದೆ. ಈ ಬುಕಿಂಗ್ ಪ್ರತಿದಿನ ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಕಾರ್ಯನಿರ್ವಹಿಸುತ್ತದೆ.

ಅದೇ ರೀತಿ, ತಿರುಮಲ ದೇವಸ್ಥಾನಕ್ಕೆ ನೇರವಾಗಿ ದೇಣಿಗೆ ನೀಡುವ ಅವಕಾಶವನ್ನು ದೇವಸ್ಥಾನವು ಪರಿಚಯಿಸಿದೆ. ಅಂತಹ ದೇಣಿಗೆ ನೀಡುವ ವ್ಯಕ್ತಿಗೆ ಶ್ರೀವಾಣಿ ದರ್ಶನ ವ್ಯವಸ್ಥೆಯಡಿಯಲ್ಲಿ ವಿಐಪಿ ದರ್ಶನದ ಟಿಕೆಟ್ ಸಿಗುತ್ತದೆ ಮತ್ತು ಭಗವಂತನ ದರ್ಶನವಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಕ್ತಿ ಯೋಜನೆಯಲ್ಲಿ ತಪ್ಪದ ಆಧಾರ್ ಕಾರ್ಡ್ ದುರ್ಬಳಕೆ: ನಿರ್ವಾಹಕರಿಗೆ ತಲೆನೋವಾದ ಫೇಕ್ ಆಧಾರ್ ಕಾರ್ಡ್​​​​ – Kannada News | Shakti Yojana Aadhaar Misuse: Fake Cards Trouble Karnataka Staff

ಬೆಂಗಳೂರು, ಜನವರಿ 08: ಶಕ್ತಿ ಯೋಜನೆ (Shakti Yojana) ದುರ್ಬಳಕೆ ಇನ್ನೂ ತಪ್ಪಿಲ್ಲ. ಆಧಾರ್ ಕಾರ್ಡ್​​ಗಳನ್ನ ಫೇಕ್ (Fake Aadhaar cards) ಮಾಡಿ ಕೆಲ ಮಹಿಳೆಯರು ಸಂಚರಿಸುತ್ತಿದ್ದು, ಇದರಿಂದ ನಿರ್ವಾಹಕರಿಗೆ ತಲೆ ನೋವು ತಪ್ಪಿಲ್ಲ. ಬೇರೆ ರಾಜ್ಯದ ಮಹಿಳೆಯರಿಗೆ ಕನ್ನಡದಲ್ಲಿ ಯಾರು ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದಾರೋ ಗೊತ್ತಿಲ್ಲ, ಆದರೆ ಇದರಿಂದ ಇತ್ತ ಸರ್ಕಾರಕ್ಕೂ ತಲೆ ನೋವಾಗಿದೆ.

ಶಕ್ತಿ ಯೋಜನೆಯಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬಂದಿದೆ. ನೌಕರರು ಕೂಡ ಅಷ್ಟೇ ಕಷ್ಟ ಪಟ್ಟು ಕೆಲಸ ಮಾಡ್ತಿದ್ದಾರೆ. ಅದರ ಭಾಗವಾಗಿ ಪ್ರಯಾಣಿಕರು ನೌಕರರ ಮೇಲೆ ಹಲ್ಲೆ ಮಾಡಿರುವ ಘಟನೆಗಳು ನಡೆದಿವೆ. ಇನ್ನು ಹೊರ ರಾಜ್ಯದಿಂದ ಬಂದ ಮಹಿಳೆಯರಿಂದ ಶಕ್ತಿ ಯೋಜನೆ ದುರ್ಬಳಕೆಯಾಗುತ್ತಿರುವ ಆರೋಪ ಕೇಳಿ ಬಂದಿದೆ. ಆಧಾರ್ ಕಾರ್ಡ್​​ನ ಒಂದು ಬದಿ ಒಂದು ನಂಬರ್ ಇದ್ದರೆ, ಇನ್ನೊಂದು‌ ಕಡೆ ಬೇರೆ ನಂಬರ್ ಇದೆ. ರಾಜ್ಯದ ಮಹಿಳೆಯರು ಕನ್ನಡದಲ್ಲಿ ಆಧಾರ್ ಪ್ರಿಂಟ್ ಮಾಡಿಸಿಕೊಂಡು ಫೇಕ್ ಆಧಾರ್ ಕಾರ್ಡ್ ಬಳಸಿ ಮೋಸದಿಂದ ಸಂಚರಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಸಾರಿಗೆ ನೌಕರರ ಮುಖಂಡ ಆನಂದ್​​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಇದೆ ಎಂಬುದನ್ನು ಒಪ್ಪಿಕೊಂಡ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ: ಪಾವತಿ ಬಗ್ಗೆ ಹೇಳಿದ್ದೇನು?

ಇನ್ನೂ ನಿರ್ವಾಹಕರಿಗೆ ಆಧಾರ್ ಕಾರ್ಡ್ ಸಂಪೂರ್ಣ ಪರಿಶೀಲನೆ ಕಷ್ಟವಾಗುತ್ತಿದೆ ಅಂತೆ. ಇದಕ್ಕೆ ಕಾರಣ ಒಂದು ನಿಲ್ದಾಣದಲ್ಲಿ 10 ರಿಂದ 15 ಪ್ರಯಾಣಿಕರು ಹತ್ತಿದಾಗ ಕಷ್ಟವಾಗುತ್ತೆ. ಇದನ್ನೆ ಬಂಡವಾಳ ಮಾಡಿಕೊಳ್ಳುವ ಕೆಲ ಕಿಲಾಡಿ ಮಹಿಳೆಯರು ಫೇಕ್ ಆಧಾರ್ ಕಾರ್ಡ್ ಬಳಕೆ‌ ಮಾಡುತ್ತಿದ್ದಾರಂತೆ.

ತನಿಖಾಧಿಕಾರಿಗಳು ತನಿಖೆ ಮಾಡಿದಾಗ ಹೊರರಾಜ್ಯದ ಮಹಿಳೆಯರು ಅನ್ನೋದು ಹಲವು ಸಂದರ್ಭಗಳಲ್ಲಿ ಗೊತ್ತಾಗಿದೆ. ಇಂತಹ ಸನ್ನಿವೇಶದಲ್ಲಿ ನಿರ್ವಾಹಕರು ಸರಿಯಾಗಿ ಪರಿಶೀಲನೆ ಮಾಡಿಲ್ಲ ಎಂದು ನಿರ್ವಾಹಕರಿಗೆ ಮೆಮೊ ಕೊಟ್ಟು ಕ್ರಮ ಕೂಡ ಜರುಗಿಸಲಾಗುತ್ತಿದೆ.

ಮಹಿಳಾ ಪ್ರಯಾಣಿಕರು ಹೇಳುವುದೇನು?

ಈ ಬಗ್ಗೆ ಮಾತನಾಡಿದ ಲಕ್ಷ್ಮೀ ಎಂಬ ಪ್ರಯಾಣಿಕರು, ಶಕ್ತಿ ಯೋಜನೆಯಿಂದ ನಮಗೆ ತುಂಬಾ ಉಪಯೋಗ ಆಗಿದೆ. ಆದರೆ ಬೇರೆ ರಾಜ್ಯದ ಮಹಿಳೆಯರು ನಕಲಿ ಆಧಾರ್ ಕಾರ್ಡ್ ಬಳಕೆ ಮಾಡಿಕೊಂಡು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ತಪ್ಪು ಎಂದಿದ್ದಾರೆ.

ಇದನ್ನೂ ಓದಿ: ಸದನದಲ್ಲಿ ಚರ್ಚೆ ಬೆನ್ನಲ್ಲೇ ಶಕ್ತಿ ಯೋಜನೆ ಹಣ ಬಾಕಿ ರಿಲೀಸ್: ಯಾವ ನಿಗಮಕ್ಕೆ ಎಷ್ಟು?

ಸಾರಿಗೆ ಇಲಾಖೆ ಈ‌ ರೀತಿ ಫೇಕ್ ಆಧಾರ್ ಕಾರ್ಡ್ ಬಳಕೆ ಮಾಡುವ ಮಹಿಳೆಯರ ವಿರುದ್ಧ ಕ್ರಮ ಜರುಗಿಸಿ, ನೌಕರರ ವಿರುದ್ಧ ಕ್ರಮ ಜರುಗಿಸುವುದನ್ನ ತಡೆಯಬೇಕಿದೆ ಅನ್ನೋದು ನೌಕರರ ಮನವಿ. ಆದರೆ ಸಾರಿಗೆ ಇಲಾಖೆ ಯಾವ ಕ್ರಮಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ! – Kannada News | Owner locks to Anganwadi centre for not provide job to his family member at Belagavi

ಬೆಳಗಾವಿ, (ಜನವರಿ 08):  ಅಂಗನವಾಡಿಯಲ್ಲಿ (Anganwadi centre) ತಮ್ಮ ಕುಟುಂಬಸ್ಥರಿಗೆ ಕೆಲಸ ನೀಡದ ಕೋಪದಲ್ಲಿ ಜಾಗದ ಮಾಲೀಕ ಕಟ್ಟಡಕ್ಕೆ ಬೀಗ ಹಾಕಿರುವ ಘಟನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಜಿಲ್ಲೆಯಲ್ಲಿ ನಡೆದಿದೆ. ರಾಯಭಾಗ ತಾಲೂಕಿನ ನಂದಿಕುರಳಿ ಗ್ರಾಮದ ವಂಜೇರಿ ತೋಟದ ಅಂಗನವಾಡಿ ಕೇಂದ್ರಕ್ಕೆ ಕಳೆದ ನಾಲ್ಕು ದಿನಗಳಿಂದ ಬಾಬುರಾವ್ ವಂಜೇರಿ ಎಂಬವರು ಬೀಗ ಹಾಕಿದ್ದಾರೆ. ಇದರಿಂದಾಗಿ ಮಕ್ಕಳು ಅಂಗನವಾಡಿಯ ಆವರಣದಲ್ಲಿಯೇ ಕುಳಿತು ಆಟವಾಡುತ್ತಿದ್ದಾರೆ.

ಶಾಲೆಗೆ ಸ್ಥಳ ಕೊಟ್ಟಿರುವ ಬಾಬುರಾವ್ ವಂಜೇರಿ ಅವರು ಮಾತನಾಡಿ, ಕಟ್ಟಡ ಕಟ್ಟಿ 20ರಿಂದ 22 ವರ್ಷ ಆಯ್ತು. 2000ನೇ ಇಸವಿಯಲ್ಲಿ ಈ ಜಾಗ ಕೊಟ್ಟಿದ್ದೇವೆ. ಅಂದಿನ ಅಧಿಕಾರಿಗಳು ಸ್ಥಳ ಪಡೆಯುವಾಗ ನಿಮ್ಮ ಕುಟುಂಬಕ್ಕೆ ಈ ಶಾಲೆಯಲ್ಲಿ ನೌಕರಿ ಕೊಡಲಾಗುವುದು ಎಂದು ಭರವಸೆ ನೀಡಿದ್ದರು. ಇದುವರೆಗೂ ನಮಗೆ ನೌಕರಿ ಕೊಟ್ಟಿಲ್ಲ. ನಮ್ಮ ಬದಲು ಬೇರೆಯವರಿಗೆ ಕೊಟ್ಟಿದ್ದಾರೆ. ಸಹಾಯಕರ ಕೆಲಸ ಬಂದಿತ್ತು. ಆಗ ಡಿಸಿಯವರಿಗೆ ಅರ್ಜಿ ಕೊಟ್ಟಿದ್ದೆವು. ಅಧಿಕಾರಿಗಳಲ್ಲಿ ನೌಕರಿ ಕೇಳಿದರೆ ಅವರು ನಿಮಗೆ ಕೊಡುತ್ತೇವೆ, ಅರ್ಜಿ ಸಲ್ಲಿಸಿ ಎಂದು ಹೇಳುತ್ತಾರೆ. ಅಧಿಕಾರಿಗಳು ಬಂದು ನೋಡಿಕೊಂಡೂ ಹೋಗಿದ್ದಾರೆ. ಸಿಡಿಪಿ ಮೇಡಂ ಇಲ್ಲಿಗೆ ಬರುತ್ತೇನೆ ಎಂದು ಹೇಳಿದ್ದಾರೆ. ಇದುವರೆಗೂ ಬಂದಿಲ್ಲ. ನಮಗೊಂದು ನೌಕರಿ ಕೊಟ್ಟರೆ ನಾವು ಬಾಗಿಲು ತೆಗೆಯುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೆನೆಜುವೆಲಾದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕಕ್ಕೆ ರಷ್ಯಾದ ಸಂಸದರ ಎಚ್ಚರಿಕೆ – Kannada News | Russian MP Zhuravlev warning to US after Venezuelan oil tanker seize

ನವದೆಹಲಿ, ಜನವರಿ 8: ಉತ್ತರ ಅಟ್ಲಾಂಟಿಕ್‌ನಲ್ಲಿ ಯುಎಸ್ ಪಡೆಗಳು ರಷ್ಯಾದ ಧ್ವಜ ಹೊತ್ತ ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಂಡ ನಂತರ ಇಂದು ರಷ್ಯಾದ (Russia) ಸಂಸದ ಅಲೆಕ್ಸಿ ಜುರಾವ್ಲೆವ್ ಅವರು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ. ಮಾಸ್ಕೋದ ಸಮುದ್ರಗಳಲ್ಲಿ ಅಮೆರಿಕ ಕಾನೂನುಬಾಹಿರ ಕ್ರಮಗಳನ್ನು ಮುಂದುವರಿಸಿದರೆ ನಮ್ಮ ದೇಶದ ಮಿಲಿಟರಿ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ. ಹಾಗೇ, ಅಮೆರಿಕದ ಹಡಗುಗಳನ್ನೂ ಮುಳುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಹಿಂದೆ ಬೆಲ್ಲಾ 1 ಎಂದು ಕರೆಯಲಾಗುತ್ತಿದ್ದ ಟ್ಯಾಂಕರ್ ಮರಿನೆರಾವನ್ನು ವಶಪಡಿಸಿಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಜುರಾವ್ಲೆವ್, ಅಮೆರಿಕವು ನಿರ್ಭಯದಿಂದ ವರ್ತಿಸುತ್ತಿದೆ ಎಂದು ಆರೋಪಿಸಿದರು. ಬಲವಂತದ ಪ್ರತೀಕಾರದ ಮೂಲಕ ಅದನ್ನು ನಿಲ್ಲಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: Video: ವೆನೆಜುವೆಲಾಗೆ ತೆರಳುತ್ತಿದ್ದ ರಷ್ಯಾದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕ

ಅಮೆರಿಕದ ಫೆಡರಲ್ ನ್ಯಾಯಾಲಯ ಹೊರಡಿಸಿದ ವಾರಂಟ್ ಅಡಿಯಲ್ಲಿ, ಕೋಸ್ಟ್ ಗಾರ್ಡ್ ಜೊತೆಗೆ ಕಾರ್ಯನಿರ್ವಹಿಸುತ್ತಿರುವ ಅಮೆರಿಕದ ಮಿಲಿಟರಿ ಪಡೆಗಳು ಸ್ಕಾಟ್ಲೆಂಡ್‌ನ ಉತ್ತರದ ಅಂತಾರಾಷ್ಟ್ರೀಯ ನೀರಿನಲ್ಲಿ ರಷ್ಯಾದ ಧ್ವಜ ಹೊಂದಿರುವ ಟ್ಯಾಂಕರ್ ಅನ್ನು ವಶಪಡಿಸಿಕೊಂಡ ಕೆಲವೇ ಗಂಟೆಗಳ ನಂತರ ಜುರಾವ್ಲೆವ್ ಈ ಹೇಳಿಕೆ ನೀಡಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಜಯಮಾಲಾ, ಸಾ.ರಾ. ಗೋವಿಂದುಗೆ ‘ಡಾ. ರಾಜ್​ಕುಮಾರ್ ಪ್ರಶಸ್ತಿ’ ಪ್ರಕಟ – Kannada News | Dr Rajkumar Award for actress Jayamala and Sa Ra Govindu for lifetime achievement

2020 ಹಾಗೂ 2021ನೇ ಸಾಲಿನ ‘ಡಾ. ರಾಜ್​ಕುಮಾರ್ ಪ್ರಶಸ್ತಿ’ (Dr Rajkumar Award) ಪ್ರಕಟ ಮಾಡಲಾಗಿದೆ. ಜೊತೆಗೆ ‘ಪುಟ್ಟಣ್ಣ ಕಣಗಾಲ್ ಪ್ರಶಸ್ತಿ’ ಹಾಗೂ ‘ಡಾ. ವಿಷ್ಣುವರ್ಧನ್ ಪ್ರಶಸ್ತಿ’ ಕೂಡ ಘೋಷಣೆ ಆಗಿದೆ. ಹಿರಿಯ ನಟಿ ಜಯಮಾಲಾ (Jayamala) ಅವರಿಗೆ 2020ನೇ ಸಾಲಿನ ಡಾ. ರಾಜ್​ಕುಮಾರ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಹಿರಿಯ ನಿರ್ದೇಶಕ ಎಂ.ಎಸ್. ಸತ್ಯು ಅವರು 2020ನೇ ಸಾಲಿನ ‘ಪುಟ್ಟಣ್ಣ ಕಣಗಾಲ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಹಿರಿಯ ಛಾಯಾಗ್ರಾಹಕರಾದ ಪ್ರಗತಿ ಅಶ್ವತ್ಥ್​ ನಾರಾಯಣ​ ಅವರಿಗೆ 2020ನೇ ಸಾಲಿನ ‘ಡಾ. ವಿಷ್ಣುವರ್ಧನ್ ಪ್ರಶಸ್ತಿ’ ಘೋಷಣೆ ಮಾಡಲಾಗಿದೆ. ಚಿತ್ರರಂಗದಲ್ಲಿ ಮಾಡಿದ ಜೀವಮಾನ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗುತ್ತದೆ.

ನಿರ್ಮಾಪಕ ಸಾ.ರಾ. ಗೋವಿಂದು ಅವರಿಗೆ 2021ನೇ ಸಾಲಿನ ‘ಡಾ. ರಾಜ್​ಕುಮಾರ್ ಪ್ರಶಸ್ತಿ’ ಘೋಷಣೆ ಆಗಿದೆ. ನಿರ್ದೇಶಕ ಶಿವರುದ್ರಯ್ಯ ಅವರು 2021ನೇ ಸಾಲಿನ ‘ಪುಟ್ಟಣ್ಣ ಕಣಗಾಲ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಹಿರಿಯ ನಟ ಎಂ.ಕೆ. ಸುಂದರ್ ರಾಜ್​ ಅವರಿಗೆ 2021ನೇ ಸಾಲಿನ ‘ಡಾ. ವಿಷ್ಣುವರ್ಧನ್ ಪ್ರಶಸ್ತಿ’ ಘೋಷಣೆ ಮಾಡಲಾಗಿದೆ.

‘ಡಾ. ರಾಜ್​ಕುಮಾರ್ ಪ್ರಶಸ್ತಿ’ ಪುರಸ್ಕೃತರಿಗೆ ತಲಾ 5 ಲಕ್ಷ ರೂಪಾಯಿ ನಗದು ಹಾಗೂ 50 ಗ್ರಾಂ ಚಿನ್ನದ ಪದಕ ನೀಡಲಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ಜೀವಮಾನ ಸಾಧನೆಗಾಗಿ 1993ರಿಂದ ‘ಡಾ. ರಾಜ್​ಕುಮಾರ್ ಪ್ರಶಸ್ತಿ’ ನೀಡಲಾಗುತ್ತಿದೆ. ಮೊದಲು ಈ ಪ್ರಶಸ್ತಿಯನ್ನು ಪಡೆದವರು ಕೆ.ಎಸ್. ಅಶ್ವತ್ಥ್. 2019ರಲ್ಲಿ ನಟಿ ಉಮಾಶ್ರೀ ಅವರು ‘ಡಾ. ರಾಜ್​ಕುಮಾರ್ ಪ್ರಶಸ್ತಿ’ ಪಡೆದಿದ್ದರು.

ಈಗ ಹಿರಿಯ ನಟಿ ಜಯಮಾಲಾ ಅವರು ‘ಡಾ. ರಾಜ್​ಕುಮಾರ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಜಯಮಾಲಾ ಅವರು 1974ರಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ‘ಭೂತಯ್ಯನ ಮಗ ಅಯ್ಯು’, ‘ಗಿರಿ ಕನ್ಯೆ’, ‘ಪ್ರೇಮದ ಕಾಣಿಕೆ’, ‘ಶಂಕರ್ ಗುರು’, ‘ದಾರಿ ತಪ್ಪಿದ ಮಗ’, ‘ತಾಯಿ ಸಾಹೇಬ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಮೊದಲ ಬಾರಿಗೆ ಮಹಿಳೆಗೆ ‘ಕರ್ನಾಟಕ ರತ್ನ’ ಪ್ರಶಸ್ತಿ: ಜಯಮಾಲಾ, ಶ್ರುತಿ, ಮಾಳವಿಕಾ ಸಂತಸ

2021ನೇ ಸಾಲಿನ ‘ಡಾ. ರಾಜ್​ಕುಮಾರ್ ಪ್ರಶಸ್ತಿ’ಗೆ ಭಾಜನರಾಗಿರುವ ಹಿರಿಯ ನಿರ್ಮಾಪಕ ಸಾರಾ ಗೋವಿಂದು ಅವರು ಕೂಡ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಸಿನಿಮಾ ನಿರ್ಮಾಣ ಮಾತ್ರವಲ್ಲದೇ ಕನ್ನಡ ಪರ ಹೋರಾಟದಲ್ಲೂ ಅವರು ಗುರುತಿಸಿಕೊಂಡಿದ್ದಾರೆ. ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಅಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಟಾಕ್ಸಿಕ್’ ಟೀಸರ್​​: ಯಶ್ ಜೊತೆ ಕಾರಿನಲ್ಲಿರುವ ನಟಿ ಇವರೇ ನೋಡಿ – Kannada News | Who is the actress with Yash in Toxic Teaser

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಪ್ರಸ್ತುತ ಭಾರತ ಚಿತ್ರರಂಗದ ಬಲು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಸಿನಿಮಾ ಬಿಡುಗಡೆಗೆ ದೇಶದಾದ್ಯಂತ ಸಿನಿಮಾ ಪ್ರೇಮಿಗಳು ಕಾತರರಾಗಿ ಕಾಯುತ್ತಿದ್ದಾರೆ.

ಇಂದು (ಜನವರಿ 08) ಯಶ್ ಹುಟ್ಟುಹಬ್ಬದ ಪ್ರಯುಕ್ತ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಟೀಸರ್ ಸಖತ್ ಹಾಟ್ ಆಗಿಯೂ ಸಖತ್ ಮಾಸ್ ಆಗಿಯೂ ಇದೆ.

ಟೀಸರ್​​ನಲ್ಲಿ ಯಶ್​​ ಕಾರೊಂದರಲ್ಲಿ ಯುವತಿಯೊಟ್ಟಿಗೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಯುವತಿಯ ಕೆಲವು ಹಾಟ್ ದೃಶ್ಯಗಳು ಟೀಸರ್​​ನಲ್ಲಿ ಇವೆ. ಅಷ್ಟಕ್ಕೂ ಆ ಯುವತಿ ಯಾರು?

‘ಟಾಕ್ಸಿಕ್’ ಟೀಸರ್​​ನಲ್ಲಿ ಯಶ್ ಜೊತೆಗೆ ಇರುವ ನಟಿಯ ಹೆಸರು ನಟೇಲಿ ಬರ್ನ್. ಈ ನಟಿ ಮೂಲತಃ ಉಕ್ರೇನ್​​ವರು ಆದರೆ ಹಾಲಿವುಡ್​ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

ನಟೇಲಿ ಬರ್ನ್ ನಟಿ ಆಗಿರುವ ಜೊತೆಗೆ ನಿರ್ಮಾಪಕಿ ಮತ್ತು ಚಿತ್ರಕತೆ ಬರಹಗಾರ್ತಿಯೂ ಆಗಿದ್ದಾರೆ. ಕೆಲವು ಇಂಗ್ಲೀಷ್ ಸಿನಿಮಾಗಳಿಗೆ, ಕಿರು ಚಿತ್ರಗಳಿಗೆ ಬಂಡವಾಳ ಸಹ ಹೂಡಿದ್ದಾರೆ.

7 ಹೆವೆನ್ ಹೆಸರಿನ ಸಿನಿಮಾ ನಿರ್ಮಾಣ ಸಂಸ್ಥೆ ಹೊಂದಿರುವ ನಟೇಲಿ ಬರ್ನ್, ನಟರ ತರಬೇತಿ ಮತ್ತು ಸ್ಟುಡಿಯೋ ‘ಬಾರ್ನ್ ಟು ಬರ್ನ್’ ನ ಸಿಇಓ ಸಹ ಆಗಿದ್ದಾರೆ. ಆಕ್ಟರ್ಸ್ ಸ್ಟುಡಿಯೋ ಮತ್ತು ಟೆಲಿವಿಷನ್ ಅಕಾಡೆಮಿಯ ಸದಸ್ಯೆಯೂ ಆಗಿದ್ದಾರೆ.

ನಟೇಲಿ ಬರ್ನ್ ಹಾಲಿವುಡ್​ನ ‘ದಿ ಎಕ್ಸ್​ಪ್ಯಾಂಡೆಬಲ್ಸ್ 3’, ‘ಮೆಕ್ಯಾನಿಕ್ ರಿಸರಕ್ಷನ್’, ‘ಫಾರ್ಸೆಸ್ಟ್ರೆಸ್’ ಇನ್ನೂ ಹಲವು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.

Published On – 3:33 pm, Thu, 8 January 26

Source link

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ – Kannada News | K Manju talks about Toxic Movie actor Yash and Gaja Kesari Yoga

ನಟ ಯಶ್ (Yash) ಅವರು ‘ಟಾಕ್ಸಿಕ್’ ಸಿನಿಮಾ ಮೂಲಕ ಜಾಗತಿಕ ಮಟ್ಟದಲ್ಲಿ ಮಿಂಚಲು ರೆಡಿ ಆಗಿದ್ದಾರೆ. ಅವರ ಪ್ಲ್ಯಾನ್ ಬಹಳ ದೊಡ್ಡದಾಗಿದೆ. ಈಗ ಬಿಡುಗಡೆ ಆಗಿರುವ ಟೀಸರ್ (Toxic Teaser) ನೋಡಿದರೆ ಇಡೀ ಸಿನಿಮಾದ ಝಲಕ್ ಕಾಣಿಸುತ್ತಿದೆ. ಯಶ್ ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ಆ ಬಗ್ಗೆ ನಿರ್ಮಾಪಕ ಕೆ. ಮಂಜು (K Manju) ಅವರು ಮಾತನಾಡಿದ್ದಾರೆ. ‘ಯಶ್​ಗೆ ಹುಟ್ಟುಹಬ್ಬದ ಶುಭಾಶಯಗಳು. 40ನೇ ವಯಸ್ಸಿನಲ್ಲಿ ಊಹೆ ಮಾಡಿರದಷ್ಟು ಮಟ್ಟಕ್ಕೆ ತಲುಪಿದ್ದಾನೆ. ಅವನಿಗೆ ಮೊದಲೇ ಗಜಕೇಸರಿ ಯೋಗ ಇತ್ತು. 2011-12ರ ಸಮಯದಲ್ಲಿ ಅವನಿಗೆ ಗಜಕೇಸರಿ ಯೋಗ ಶುರು ಆಯಿತು. 45 ವರ್ಷಗಳ ತನಕ ಅವನನ್ನು ಯಾರೂ ಟಚ್ ಮಾಡೋಕೆ ಆಗಲ್ಲ. ಯಶ್ ರೀತಿ ಯಾರೂ ಪ್ಲ್ಯಾನ್ ಮಾಡಲ್ಲ. ಅವನು ಯಾರಿಗೂ ಹರ್ಟ್ ಮಾಡಲ್ಲ. ಯಶ್​ಗೆ ಕನ್ನಡ ಚಿತ್ರರಂಗ ಎಂದರೆ ಪ್ರಾಣ. ಅವನು ಬೆಳೆದರೆ ಕನ್ನಡ ಚಿತ್ರಂಗಕ್ಕೆ ಒಳ್ಳೆಯದು’ ಎಂದಿದ್ದಾರೆ ಕೆ. ಮಂಜು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs NZ: ಟಿ20 ಸರಣಿ ಮೊದಲ 3 ಪಂದ್ಯಗಳಿಂದ ತಿಲಕ್ ವರ್ಮಾ ಔಟ್; ಉಳಿದೆರಡು ಪಂದ್ಯಗಳಿಗೂ ಅನುಮಾನ! – Kannada News | India vs New Zealand T20: Tilak Varma Injury Update and World Cup Impact

ಈ ತಿಂಗಳು ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯನ್ನು ಆಡಲಿದ್ದು, ಆ ಬಳಿಕ ಫೆಬ್ರವರಿ 7 ರಿಂದ ಆರಂಭವಾಗುವ ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಲಿದೆ. ಹೀಗಾಗಿ ತಿಲಕ್ ವರ್ಮಾ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದು ತಂಡವನ್ನು ಸಂಕಷ್ಟಕ್ಕೀಡುಮಾಡಿದೆ. ಏಕೆಂದರೆ ತಿಲಕ್ ವರ್ಮಾ ಭಾರತ ಟಿ20 ತಂಡದ ಆಧಾರಸ್ತಂಭವೂ ಆಗಿದ್ದಾರೆ. ಒಂದು ವೇಳೆ ತಿಲಕ್ ವಿಶ್ವಕಪ್ ವೇಳೆಗೆ ಗುಣಮುಖರಾಗದಿದ್ದರೆ, ಅವರ ಬದಲಿಗೆ ಶ್ರೇಯಸ್ ಅಯ್ಯರ್​ಗೆ ಆಡುವ ಅವಕಾಶ ಸಿಗಬಹುದು.

Source link

ದಾಯಾದಿಗಳ ಜಗಳ: ಅಣ್ಣನ ಮನೆಗೆ ಬೆಂಕಿಯಿಟ್ಟ ತಮ್ಮ; ತಾನೂ ಸುಟ್ಟುಕೊಂಡು ಆಸ್ಪತ್ರೆ ಸೇರಿದ – Kannada News | Devanahalli: Property Dispute; Arson Attempt Over Land Dispute Injures Accused

ದೇವನಹಳ್ಳಿ, ಜನವರಿ 08: ಅವರಿಬ್ಬರು ಒಂದೇ ತಂದೆ-ತಾಯಿ ಹೊಟ್ಟೆಯಲ್ಲಿ ಹುಟ್ಟಿದವರು. ಒಂದೇ ಮನೆ, ಒಂದೇ ತಟ್ಟೆಯಲ್ಲಿ ತಿಂದವರು. ಆದರೆ ಸಹೋದರರ (Brother) ನಡುವೆ ಆಸ್ತಿ ವಿಚಾರಕ್ಕೆ ಶುರುವಾದ ಕಲಹ ಬೆಂಕಿ (fire) ಹಚ್ಚಿ ಇಡೀ ಕುಟುಂಬವನ್ನೇ ಮುಗಿಸಲು ಹೋಗಿದ್ದ ತಮ್ಮ, ತನ್ನದೆ ಪ್ಲಾನ್​​ನಿಂದ ಆಸ್ಪತ್ರೆ ಸೇರುವಂತಾಗಿದೆ. ಆ ಮೂಲಕ ಪೊಲೀಸರ ವಿಚಾರಣೆ ವೇಳೆ ಹೊಸ ಟ್ವಿಸ್ಟ್ ನೀಡಿದ್ದಾನೆ.‘

ನಡೆದದ್ದೇನು?

ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗೋವಿಂದಪುರ ನಿವಾಸಿ ಮುನಿರಾಜು, ಕಳೆದ ಹಲವು ವರ್ಷಗಳಿಂದ ಪಟಾಕಿ ಚೀಟಿ ನಡೆಸಿ ಲಾಸ್ ಆಗಿದ್ದು, ಚೀಟಿ ಕಟ್ಟಿದವರಿಗೆ ಹಣ ಕೊಡುವುದಕ್ಕೆ ಜಮೀನು ಮಾರಾಟ ಮಾಡುವಂತೆ ತಂದೆ ಮತ್ತು ಸಹೋದರನಿಗೆ ಒತ್ತಡ ಹೇರಿದ್ದಾರೆ. ಆದರೆ ಈ ಹಿಂದೆ ಸ್ವಲ್ಪ ಜಮೀನು ಮಾರಾಟ ಮಾಡಿ ಸಾಲ ತೀರಿಸುವುದಕ್ಕೆ ಅಂತ ಹಣ ನೀಡಿದ್ದ ಕುಟುಂಬಸ್ಥರು ಇದೀಗ ಇರುವ ಜಮೀನು ಮಾರಾಟ ಮಾಡುವುದು ಬೇಡ ಅಂದಿದ್ದರಂತೆ.

ಇದನ್ನೂ ಓದಿ: ಪ್ರತ್ಯೇಕ ಘಟನೆ: ರಸ್ತೆ ಬದಿ‌ ನಿಲ್ಲಿಸಿದ್ದ ಕಾರಿನಲ್ಲಿ ವ್ಯಕ್ತಿಯ ಶವ ಪತ್ತೆ, 16ನೇ ಮಹಡಿಯಿಂದ ಬಿದ್ದು ಟೆಕ್ಕಿ ಸಾವು

ಮನೆಯವರು ಜಮೀನು ಮಾರಾಟ ಬೇಡ ಎನ್ನುತ್ತಿದ್ದಂತೆ ಇತ್ತ ಸಾಲಗಾರರು ಮುನಿರಾಜು ಮೇಲೆ ಒತ್ತಡ ಹೇರಿದ್ದಾರೆ. ಸಾಲಗಾರರ ಕಾಟದಿಂದ ಬೆಸತ್ತ ತಮ್ಮ, ಅಣ್ಣನ ಕುಟುಂಬವನ್ನೇ ಮುಗಿಸುವ ಸಂಚು ಮಾಡಿದ್ದಾನೆ. ಬೆಂಕಿ ಹಚ್ಚುವುದಕ್ಕೆ ಅಂತ ಪಂಜು ಸಿದ್ದಪಡಿಸಿದ್ದು, ಪೆಟ್ರೋಲ್ ಕೂಡ ಖರೀದಿಸಿ ಮನೆಗೆ ಬಂದಿದ್ದ. ಸುತ್ತಿಗೆಯಿಂದ ಕಿಟಕಿ ಗ್ಲಾಸ್ ಒಡೆದು ಮನೆ ಒಳಗಡೆ ಪೆಟ್ರೋಲ್ ಸುರಿದಿದ್ದಾನೆ. ಇನ್ನೂ ಪೆಟ್ರೋಲ್ ಸುರಿಯುತ್ತಿದ್ದಂತೆ ರೂಮ್​ನಲ್ಲಿ ಮಲಗಿದ್ದ ಅಣ್ಣ ರಾಮಕೃಷ್ಣ ಅತ್ತಿಗೆ ಮತ್ತು ಮಗು ಎಚ್ಚರಗೊಂಡು ಕಿರುಚಾಡಿದ್ದಾರೆ. ಮನೆಯವರು ಕಿರುಚಾಡುತ್ತಿದ್ದಂತೆ ಗಡಿಬಿಡಿಯಲ್ಲಿ ಸ್ವಲ್ಪ ಪೆಟ್ರೋಲ್ ಮನೆ ಒಳಗಡೆ ಸುರಿದು ಉಳಿದದ್ದು, ಕೈಯಲ್ಲಿ ಹಿಡಿದುಕೊಂಡು ಬೆಂಕಿ ಹಚ್ಚಿದ್ದಾನೆ. ಇನ್ನೂ ಪೆಟ್ರೋಲ್​​ ಕೈಯಲ್ಲಿದ್ದ ಕಾರಣ ಮನೆ ಒಳಗಡೆ ಹಾಗೂ ಹೊರಗಡೆ ಎರಡು ಕಡೆ ಬೆಂಕಿ ಶರವೇಗದಲ್ಲಿ ಆವರಿಸಿದ್ದು, ಬೆಂಕಿ ಹಚ್ಚಿದ ಮುನಿರಾಜು ಸಹ ಅದೇ ಬೆಂಕಿಗೆ ಸಿಲುಕಿ ಸುಟ್ಟುಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಬೆಂಕಿ ತನಗೂ ಹೊತ್ತಿಕೊಳ್ಳುತ್ತಿದ್ದಂತೆ ಮುನಿರಾಜು ಹೊರಗಡೆ ಕಿರುಚಾಡಿದರೆ, ಒಳಗಡೆ ಪುಟ್ಟ ಮಗು ಜೊತೆ ಸಹೋದರ ರಾಮಕೃಷ್ಣ ಸಹ ಬೆಂಕಿಯ ಹೊಗೆಯಲ್ಲಿ ನರಳಾಡಿ ಅಕ್ಕಪಕ್ಕದವರನ್ನ ಸಹಾಯಕ್ಕೆ ಕೂಗಿದ್ದಾರೆ. ಜೊತೆಗೆ ಮನೆಯಿಂದ ಹೊರಗಡೆ ಬರಲು ಯತ್ನಿಸಿದರೆ ಬೆಂಕಿ ಹಚ್ಚುವ ಮೊದಲೇ ಮುನಿರಾಜು ಮನೆಯ ಬಾಗಿಲನ್ನು ಲಾಕ್​ ಮಾಡಿದ್ದು, ಹೊರ ಬರಲಾಗದೆ ಪರದಾಡಿದ್ದಾರೆ. ಇನ್ನು ಅಕ್ಕ ಪಕ್ಕದ ಮನೆಯವರು ಕಿರುಚಾಟ ಕೇಳಿ ಅಣ್ಣ, ತಮ್ಮಂದಿರ ಸಹಾಯಕ್ಕೆ ಬಂದಿದ್ದು ರಾಮಕೃಷ್ಣ ಕುಟುಂಬವನ್ನ ರಕ್ಷಿಸಿದ್ದಾರೆ. ಜೊತೆಗೆ ಬೆಂಕಿಯಲ್ಲಿ ಬೆಂದು ನರಳಾಡುತ್ತಿದ್ದ ಮುನಿರಾಜು ನನ್ನು ಸಹ ರಕ್ಷಿಸಿದ್ದಾರೆ. ಬಳಿಕ ಹೊಸಕೋಟೆ ಆಸ್ವತ್ರೆಗೆ ದಾಖಲಿಸಿದ್ದಾರೆ. ಸದ್ಯ ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ವತ್ರೆಗೆ ರವಾನಿಸಲಾಗಿದೆ.

ಘಟನೆ ಸಂಬಂಧ ಅಣ್ಣ ರಾಮಕೃಷ್ಣ ನೀಡಿದ ದೂರಿನನ್ವಯ ತಿರಮಲಶೆಟ್ಟಿಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಏಕೆ ಹೀಗೆ ಮಾಡಿದೆ ಅಂತ ಗಾಯಗೊಂಡ ಮುನಿರಾಜು ನನ್ನ ಕೇಳಿದರೆ ನನಗೆ ಸಾಲಗಾರರ ಕಾಟ ಹೆಚ್ಚಾಗಿತ್ತು. ಮನೆಯವರು ನನ್ನ ಮುಂದೆ ಜಮೀನು ಮಾರಾಟ ಮಾಡುವುದಾಗಿ ಹೇಳಿ ಖರೀದಿದಾರರನ್ನ ಕರೆದುಕೊಂಡು ಹೋದರೆ ಮಾರುವುದಿಲ್ಲ ಎನ್ನುತ್ತಿದ್ದಾರೆ. ಹೀಗಾಗೆ ಅವರನ್ನು ಸಾಯಿಸಿ ನಾನು ಸಾಯಬೇಕು ಅಂತ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಲು ಹೋಗಿದ್ದೆ ಅಂತ ಹೊಸ ಕಥೆ ಹೇಳಿದ್ದಾನೆ.

ಇದನ್ನೂ ಓದಿ: ಪೊಲೀಸರ ಕಿರುಕುಳಕ್ಕೆ ಹೊಸಕೋಟೆಯಲ್ಲಿ ವ್ಯಕ್ತಿ ಬಲಿ?: ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಒಟ್ಟಾರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ಜಮೀನು ಮಾರಾಟ ಮಾಡಲ್ಲ ಅಂತ ಕುಟುಂಬವನ್ನು ಮುಗಿಸುವ ಸಂಚು ಮಾಡಿದ್ದವನು ಇದೀಗ ಆಸ್ವತ್ರೆ ಬೆಡ್​ನಲ್ಲಿ ನರಳಾಡುತ್ತಿದ್ದಾನೆ. ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತಿಗೆ ಈ ಸ್ಟೋರಿ ಸೂಕ್ತ ಉದಾಹರಣೆ ಅಂದರು ತಪ್ಪಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version