ಜಲ ಮಾಲಿನ್ಯದ ಆತಂಕ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಿಒಪಿ ಗಣೇಶ ಮೂರ್ತಿ ಸ್ಥಾಪನೆಗಿಲ್ಲ ಅವಕಾಶ – Kannada News | Eco Friendly Ganeshotsava: Karnataka Bans PoP Ganesha Idols in Gram Panchayats to Prevent Water Pollution
ಬೆಂಗಳೂರು, ಆಗಸ್ಟ್ 06: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಿಒಪಿ ಗಣೇಶ ಮೂರ್ತಿ ಸ್ಥಾಪನೆಗೆ ಅವಕಾಶ ನಿರಾಕರಿಸುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸಚಿವ ಈಶ್ವರ್ ಖಂಡ್ರೆ ನಿರ್ದೇಶನ ನೀಡಿದ್ದಾರೆ. ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ, ದಾಸ್ತಾನು ಮತ್ತು ಸಾಗಾಟಕ್ಕೆ ತಡೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೆರವು ಪಡೆಯುವಂತೆಯೂ ಅವರು ತಿಳಿಸಿದ್ದಾರೆ. ಕೆರೆ, ನದಿಗಳಲ್ಲಿ ಪಿಒಪಿ ಮೂರ್ತಿ ವಿಸರ್ಜಿಸಿದರೆ ಜಲಚರಗಳಿಗೆ ಕಂಟಕವಾಗಲಿರುವ ಕಾರಣ ಜಲಮಾಲಿನ್ಯ ತಡೆ ಕಾಯ್ದೆ 1974ರ ಕಲಂ 33(ಎ)ರಡಿ ವಿಸರ್ಜನೆಗೆ ನಿಷೇಧ ವಿಧಿಸಲಾಗಿದೆ. ಗ್ರಾಮ ಪಂಚಾಯಿತಿ…