ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: NIA ಮೋಸ್ಟ್ ವಾಂಟೆಡ್‌ ಆರೋಪಿ ಉಮ್ಮರ್ ಫಾರೂಕ್ ಬಂಧನ – Kannada News | Praveen Nettaru Murder Case: NIA Arrests Most Wanted Accused Umar Farooq in Kerala Kochi

ಪ್ರವೀಣ್ ನೆಟ್ಟಾರು ಹಾಗೂ ಒಳಚಿತ್ರದಲ್ಲಿ ಬಂಧಿತ ಆರೋಪಿ ಉಮ್ಮರ್ ಫಾರೂಕ್Image Credit source: tv9

ಮಂಗಳೂರು, ಆಗಸ್ಟ್ 6: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ (Praveen Nettaru Case) ತಲೆಮರೆಸಿಕೊಂಡಿದ್ದ ಎನ್‌ಐಎ ಮೋಸ್ಟ್ ವಾಂಟೆಡ್‌ ಆರೋಪಿ ಉಮ್ಮರ್ ಫಾರೂಕ್ ಎಂ.ಆರ್.ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೇರಳದ ಕೊಚ್ಚಿಯಲ್ಲಿ ಬಂಧಿಸಿದೆ. ಈ ಮೂಲಕ ಪ್ರಕರಣದಲ್ಲಿ ಎನ್‌ಐಎ ಬಂಧಿಸಿರುವ ಆರೋಪಿಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಉಮ್ಮರ್ ಫಾರೂಕ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹಾಗೂ ಜಾಮೀನು ರಹಿತ ಬಂಧನ ವಾರಂಟ್ (NBW) ಜಾರಿಯಾಗಿತ್ತು. ಆತನ ಬಂಧನಕ್ಕೆ 4 ಲಕ್ಷ ರೂ. ಬಹುಮಾನವನ್ನೂ ಘೋಷಿಸಲಾಗಿತ್ತು.

ಆರೋಪಿಗೆ ನೆರವು ನೀಡಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ ಉಮ್ಮರ್ ಫಾರೂಕ್

ಎನ್‌ಐಎ ತನಿಖೆ ಪ್ರಕಾರ, ಉಮ್ಮರ್ ಫಾರೂಕ್ ಪಿಎಫ್‌ಐ ಕಚೇರಿಯಲ್ಲಿ ನಡೆದ ಸಂಚು ಸಭೆಯಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದ. ಪ್ರವೀಣ್ ನೆಟ್ಟಾರು ಹತ್ಯೆಗೂ ಮುನ್ನ ಆರೋಪಿಗೆ ಬೈಕ್ ನೀಡಿದ್ದ ಆರೋಪವೂ ಆತನ ಮೇಲಿತ್ತು. ಬಳಿಕ ಸಾಕ್ಷಿದಾರನ ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲೂ ಭಾಗಿಯಾಗಿದ್ದ ಆರೋಪ ಇತ್ತು.

ಪಿಎಫ್​ಐ ನೆರವಿನಿಂದ ಅಡಗಿಕೊಂಡಿದ್ದ ಆರೋಪಿ

ಹತ್ಯೆಯ ಬಳಿಕ ಪ್ರಮುಖ ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಉಮ್ಮರ್ ಫಾರೂಕ್ ಸಹಾಯ ಮಾಡಿದ್ದ ಎನ್ನಲಾಗಿದ್ದು, ನಂತರ ಕೇರಳದ ಕೊಚ್ಚಿಯಲ್ಲೇ ಅಡಗಿಕೊಂಡಿದ್ದ. ನಿಷೇಧಿತ ಪಿಎಫ್‌ಐ ಸಂಘಟನೆಯ ಪ್ರಮುಖರು ಆತನಿಗೆ ಕೊಚ್ಚಿಯಲ್ಲಿ ಆಶ್ರಯ ನೀಡಿದ್ದರು ಎನ್ನಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಹೊರಗಿನ ಪ್ರಪಂಚಕ್ಕೆ ಕಾಣಿಸಿಕೊಳ್ಳದಂತೆ ಆತನನ್ನು ಅಜ್ಞಾತ ಸ್ಥಳದಲ್ಲಿ ಇರಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಉಮ್ಮರ್ ಕೊಚ್ಚಿಯಲ್ಲೇ ವಾಸ್ತವ್ಯ ಹೂಡಿದ್ದ ಎನ್ನಲಾಗಿದೆ.

ಬಂಧಿತ ಆರೋಪಿಗಳಿಂದ ಸಿಕ್ಕಿತ್ತು ಸುಳಿವು

ಕಳೆದ ಜುಲೈ 11ರಂದು ನೌಷಾದ್ ಮತ್ತು ನಸೀರ್ ಎಂಬ ಆರೋಪಿಗಳನ್ನು ಎನ್‌ಐಎ ಬಂಧಿಸಿತ್ತು. ಈ ವೇಳೆ ಕೊಚ್ಚಿಯಲ್ಲಿರುವ ಅಜ್ಞಾತ ಸ್ಥಳದ ಕುರಿತು ಅವರು ಮಾಹಿತಿ ನೀಡಿದ್ದರು ಎನ್ನಲಾಗಿದ್ದು, ಅದರ ಆಧಾರದ ಮೇಲೆ ಎನ್‌ಐಎ ಕಾರ್ಯಾಚರಣೆ ನಡೆಸಿ ಉಮ್ಮರ್ ಫಾರೂಕ್‌ನನ್ನು ಬಂಧಿಸಿದೆ. ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಪತ್ತೆಹಚ್ಚಲು ಎನ್‌ಐಎ ಶೋಧ ಕಾರ್ಯ ಮುಂದುವರಿಸಿದೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಹಿನ್ನೆಲೆ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಾಗಿದ್ದ ಪ್ರವೀಣ್ ನೆಟ್ಟಾರು (32) ಅವರನ್ನು 2022ರ ಜುಲೈ 26ರಂದು ರಾತ್ರಿ ತಮ್ಮ ಅಂಗಡಿ ಮುಚ್ಚಿ ಮನೆಗೆ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಭೀಕರವಾಗಿ ಹತ್ಯೆ ಮಾಡಿದ್ದರು. ಘಟನೆಯ ಬಳಿಕ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ 2022ರ ಆಗಸ್ಟ್‌ನಲ್ಲಿ ಕೇಂದ್ರ ಗೃಹ ಸಚಿವಾಲಯವು ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ಹಸ್ತಾಂತರಿಸಿತ್ತು.

ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಪ್ರಕರಣ: ನಾಲ್ಕು ವರ್ಷಗಳ ಬಳಿಕ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ ಎನ್​ಐಎ

ಎನ್‌ಐಎ ಸಲ್ಲಿಸಿರುವ ದೋಷಾರೋಪಣಾ ಪಟ್ಟಿಯ ಪ್ರಕಾರ, ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ನಾಯಕರು ಹಾಗೂ ಅದರ ‘ಸರ್ವಿಸ್ ಟೀಮ್’ ಸದಸ್ಯರು ಸಮಾಜದಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ಎನ್‌ಐಎ ಹಲವು ಹಂತಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದು, ಹತ್ಯೆಯಲ್ಲಿ ನೇರವಾಗಿ ಶಾಮೀಲಾದವರು ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದವರು ಸೇರಿದಂತೆ 20ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳ ಪತ್ತೆ ಕಾರ್ಯವೂ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಲಾಕಪ್ 2’ ಗೆದ್ದ ಶ್ರೆಯಾ ಕಾಲ್ರಾ, ಸಿಕ್ಕ ಬಹುಮಾಣವೆಷ್ಟು ಕೋಟಿ? – Kannada News | Shreya Kalra became Lock Up 2 winner, how much money did she won

ಬಿಗ್​​ಬಾಸ್​​ ರಿಯಾಲಿಟಿ ಶೋ (Bigg Boss) ಭಾರತದಲ್ಲಿ ದೊಡ್ಡ ಯಶಸ್ಸು ಗಳಿಸಿದ ಬೆನ್ನಲ್ಲೆ ಅದನ್ನೇ ಹೋಲುವ ಹಲವು ರಿಯಾಲಿಟಿ ಶೋಗಳು ಭಾರತದ ಟಿವಿ ಮತ್ತು ಒಟಿಟಿ ಸ್ಪೇಸ್​​ನಲ್ಲಿ ಬಹಳ ಹೆಚ್ಚಾಗಿವೆ. ಅವುಗಳಲ್ಲಿ ತುಸು ಜನಪ್ರಿಯತೆ ಪಡೆದಿರುವುದು ‘ಲಾಕಪ್’ ಶೋ. ಈ ರಿಯಾಲಿಟಿ ಶೋ ಸಹ ಬಹುತೇಕ ಬಿಗ್​​ಬಾಸ್ ಅನ್ನೇ ಹೋಲುತ್ತದೆಯಾದರೂ ಕೆಲವು ಭಿನ್ನತೆಗಳು ಇದೆ. ಇದೀಗ ಈ ರಿಯಾಲಿಟಿ ಶೋನ ಎರಡನೇ ಸೀಸನ್ ಫಿನಾಲೆ ನಿನ್ನೆಯಷ್ಟೆ ಮುಗಿದಿದ್ದು, ಶ್ರೆಯಾ ಕಾಲ್ರಾ ವಿಜೇತರಾಗಿದ್ದಾರೆ.

ಶ್ರೆಯಾ ಕಾಲ್ರಾ ವಿಜೇತರಾದರೆ, ನಟಿ ಶಿವಂಗಿ ಜೋಶಿ ಪ್ರಥಮ ರನ್ನರ್-ಅಪ್ ಆದರು, ಹಾಗೆಯೇ ರಿಯಾಲಿಟಿ ಶೋ ಸ್ಟಾರ್ ಯೋಗೇಶ್ ರಾವತ್ ಎರಡನೇ ರನ್ನರ್-ಅಪ್ ಆಗಿ ಹೊರಹೊಮ್ಮಿದರು. ಈ ಫಿನಾಲೆಯಲ್ಲಿ ಮಾಜಿ ಸ್ಪರ್ಧೆಗಳು ಮಾತ್ರವಲ್ಲದೆ, ಮಾಧ್ಯಮ ವೃತ್ತಿಪರರು ಮತ್ತು ನಟರನ್ನೊಳಗೊಂಡ ತೀರ್ಪುಗಾರರ ಮಂಡಳಿಯೂ ಇತ್ತು. ಅವರು ಸ್ಪರ್ಧಿಗಳನ್ನು ಪ್ರಶ್ನಿಸಿ, ವಿಜೇತರನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ದುರದೃಷ್ಟವಶಾತ್, ರಾಮ್ ಕಪೂರ್ ಮತ್ತು ಶಿಲ್ಪಾ ಶಿಂಧೆ ಟಾಪ್ ಮೂರಕ್ಕೆ ಬರಲು ಸಾಧ್ಯವಾಗಲಿಲ್ಲ.

ವಿನ್ನರ್ ಆದ ಶ್ರೇಯಾ ಕಾಲ್ರಾ ಅವರಿಗೆ ಬಹುಮಾನದ ಟ್ರೋಫಿಯೊಂದಿಗೆ 1 ಕೋಟಿ ರೂ. ನಗದು ಬಹುಮಾನ ಸಹ ಪಡೆದುಕೊಂಡರು. ಇತರರಿಗೆ ಯಾವುದೇ ಬಹುಮಾನ ದೊರೆತ ಬಗ್ಗೆ ವರದಿಯಾಗಿಲ್ಲ. ರಾಮ್ ಕಪೂರ್ ಮತ್ತು ಶಿಲ್ಪಾ ಶಿಂಧೆ ಬಹಳ ಪ್ರಬಲ ಸ್ಪರ್ಧಿಗಳಾಗಿದ್ದರು, ಆದರೆ ಅವರು ಗೆಲುವಿನ ಸಮೀಪದಲ್ಲಿದ್ದಾಗ ಎಲಿಮಿನೇಟ್ ಆದರು. ಫಿನಾಲೆ ದಿನದ ಟಾಸ್ಕ್‌ನಲ್ಲಿ ಸೋತ ನಂತರ ರಾಮ್ ಮತ್ತು ಶಿಲ್ಪಾ ಅವರ ಪ್ರಯಾಣ ಅಂತ್ಯವಾಯಿತು. ಟಾಪ್ 5 ಸ್ಪರ್ಧಿಗಳಾದ ರಾಮ್, ಶಿಲ್ಪಾ, ಶ್ರೇಯಾ, ಶಿವಂಗಿ ಮತ್ತು ಯೋಗೇಶ್ ಅವರು ಒಂದು ಪಜಲ್ ಅನ್ನು ಜೋಡಿಸುವ ಟಾಸ್ಕ್ ಮಾಡಬೇಕಿತ್ತು; ಯಾರಲ್ಲಿ ಹೆಚ್ಚು ತಪ್ಪು ತುಣುಕುಗಳಿರುತ್ತವೆಯೋ ಅವರನ್ನು ಹೊರಹಾಕಲಾಗುತ್ತಿತ್ತು. ರಾಮ್ ಕಪೂರ್ ಈ ಟಾಸ್ಕ್‌ನಲ್ಲಿ ಸೋತು ಐದನೇ ಸ್ಥಾನದಲ್ಲಿ ಹೊರನಡೆದರು.

ಇದನ್ನೂ ಓದಿ:‘ಮತ್ತೆ ಶುರು ಮಾಡೋಣ್ವ’ ಬಿಗ್​​ಬಾಸ್ ಬಾಗಿಲು ತೆರೆದ ಸುದೀಪ್

ಇದರ ನಂತರ, ಶಿಲ್ಪಾ, ಶ್ರೇಯಾ, ಶಿವಂಗಿ ಮತ್ತು ಯೋಗೇಶ್ ಟಾಪ್ ಮೂರರಲ್ಲಿ ತಮ್ಮ ಸ್ಥಾನಕ್ಕಾಗಿ ಸ್ಪರ್ಧಿಸಬೇಕಾಯಿತು. ಯೋಗೇಶ್ ಅವರನ್ನು ಒಂದುಪೆಟ್ಟಿಗೆಯ ಮುಂದೆ ನಿಲ್ಲಿಸಲಾಯಿತು ಮತ್ತು ‘ಟರ್ಮಿನೇಟೆಡ್’ ಎಂದು ಬರೆದಿರುವ ಪೆಟ್ಟಿಗೆಯನ್ನು ಆಯ್ಕೆ ಮಾಡಲು ಅವರು ಇತರರನ್ನು ಮನವೊಲಿಸಬೇಕಿತ್ತು. ಚುರುಕಾಗಿ ಆಡಿ, ‘ಟರ್ಮಿನೇಟೆಡ್’ ಎಂದಿರುವ ಪೆಟ್ಟಿಗೆಯನ್ನು ಆಯ್ಕೆ ಮಾಡುವಂತೆ ಅವರು ಶಿಲ್ಪಾ ಅವರನ್ನು ಪ್ರಭಾವಿಸುವಲ್ಲಿ ಯಶಸ್ವಿಯಾದರು, ಇದು ನಾಲ್ಕನೇ ಸ್ಥಾನದಲ್ಲಿ ಅವರು ಹೊರಹೋಗಲು ಕಾರಣವಾಯಿತು.

ಇದರ ತಕ್ಷಣವೇ, ಟಾಪ್ 3 ಫೈನಲಿಸ್ಟ್‌ಗಳು ಮಾಧ್ಯಮಗಳು ಮತ್ತು ತೀರ್ಪುಗಾರರಿಂದ ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಯಿತು. ಯೋಗೇಶ್ ರಾವತ್ ಅವರ ಅಹಂಕಾರ ಮತ್ತು ವರ್ತನೆಗಾಗಿ ತರಾಟೆಗೆ ತೆಗೆದುಕೊಳ್ಳಲ್ಪಟ್ಟರೆ, ಹರ್ಷದ್ ಚೋಪ್ರಾ ಅವರನ್ನು ದಾರಿ ತಪ್ಪಿಸಿ ಅವರ ಫೈನಲಿಸ್ಟ್ ಸ್ಥಾನವನ್ನು ಕಸಿದುಕೊಂಡಿದ್ದಕ್ಕಾಗಿ ಶಿವಾಂಗಿಯನ್ನು ಪ್ರಶ್ನಿಸಲಾಯಿತು. ಶ್ರೇಯಾ ಅವರ ಅದ್ಭುತ ಆಟದ ಶೈಲಿಯನ್ನು ಶ್ಲಾಘಿಸಲಾಯಿತಾದರೂ, ರಾಮ್ ಕಪೂರ್ ಅವರು ತಮಗೆ ಅನಾನುಕೂಲತೆಂಟು ಮಾಡಿದರು ಎಂದು ಆರೋಪಿಸಿದ್ದಕ್ಕಾಗಿ ಅವರನ್ನು ಪ್ರಶ್ನಿಸಲಾಯಿತು. ಜೊತೆಗೆ ಶೋನಲ್ಲಿ ಅವರ ಭಾಷೆ ಮತ್ತು ಅನುಚಿತ ಕಾಮೆಂಟ್‌ಗಳಿಗಾಗಿಯೂ ಟೀಕೆಗೆ ಗುರಿಯಾದರು.

ಇದರ ನಂತರ, ತೀರ್ಪುಗಾರರ ಮತಗಳ ಆಧಾರದ ಮೇಲೆ ಯೋಗೇಶ್ ರಾವತ್ ಹೊರಹಾಕಲ್ಪಟ್ಟರು. ಶ್ರೇಯಾ ಮತ್ತು ಶಿವಂಗಿ ನಡುವಿನ ವಿಜೇತರನ್ನು ಮಾಜಿ ಸ್ಪರ್ಧಿಗಳು, ತೀರ್ಪುಗಾರರು ಮತ್ತು ಜೈಲರ್ಸ್‌ಗಳ ಮತಗಳ ಆಧಾರದ ಮೇಲೆ ನಿರ್ಧರಿಸಲಾಯಿತು. ಗರಿಷ್ಠ ಸಂಖ್ಯೆಯ ಮತಗಳನ್ನು ಗಳಿಸಿದ ನಂತರ, ಏಕ್ತಾ ಕಪೂರ್ ಅವರು ಶ್ರೇಯಾ ಕಾಲ್ರಾ ಅವರನ್ನು ವಿಜೇತರೆಂದು ಘೋಷಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Hiroshima Day 2026: ಭೀಕರ ಪರಮಾಣು ದಾಳಿಗೆ ನಲುಗಿ ಹೋಗಿದ್ದ ಜಪಾನಿನ ಹಿರೋಷಿಮಾ ನಗರ ಇಂದು ಹೇಗಿದೆ? – Kannada News | Hiroshima Day 2026: The painful story of the atomic attack on Hiroshima

ಆಗಸ್ಟ್ 6, 1945 ಮಾನವ ಇತಿಹಾಸದಲ್ಲಿ ಒಂದು ಕರಾಳ ದಿನ. ಎರಡನೇ ಮಹಾಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಈ ದಿನ ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ ಜಪಾನಿನ ಹಿರೋಷಿಮಾ (Hiroshima) ನಗರದ  ಮೇಲೆ ಪರಮಾಣು ಬಾಂಬ್‌ ದಾಳಿಯನ್ನು ನಡೆಸಿತು. ಈ ಸ್ಫೋಟವು ಎಷ್ಟು ವಿನಾಶಕಾರಿಯಾಗಿತ್ತೆಂದರೆ, ಇಡೀ ನಗರವು ಕ್ಷಣಗಳಲ್ಲಿ ಬೆಂಕಿಯಲ್ಲಿ ಆವರಿಸಿತು. ಸರಿಸುಮಾರು 70,000 ಜನರು ಕ್ಷಣದಲ್ಲೇ ಸಾವನ್ನಪ್ಪಿದರು. ಈ ದಾಳಿ ನಡೆದ ಮೂರು ದಿನಗಳ ನಂತರ, ಅಮೆರಿಕ ಫ್ಯಾಟ್ ಮ್ಯಾನ್ ಎಂಬ ಪರಮಾಣು ಬಾಂಬ್‌ ಅನ್ನು ನಾಗಸಾಕಿಯ ಮೇಲೆ ಹಾಕಿತು. ಈ ದಾಳಿ ಎಷ್ಟ್ರು ತೀವ್ರವಾಗಿತ್ತೆಂದರೆ ಸಾವಿರಾರು ಕಟ್ಟಡಗಳು ಕ್ಷಣಾರ್ಧದಲ್ಲಿ ಬೂದಿಯಾದವು,  ಸುಮಾರು 74,000 ಜನರು ಸಾವನ್ನಪ್ಪಿದರು. ಈ ಕರಾಳ ಘಟನೆ ಹಾಗೂ ಆ ಸಮಯದಲ್ಲಿ ಸಾವನ್ನಪ್ಪಿದ್ದ ಮುಗ್ಧ ಜೀವಗಳ ನೆನಪಿಗಾಗಿ ಪ್ರತಿವರ್ಷ ಆಗಸ್ಟ್‌ 6 ರಂದು ಹಿರೋಷಿಮಾ ದಿನವನ್ನು ಆಚರಿಸಲಾಗುತ್ತದೆ. ಹಿರೋಷಿಮಾ ದಿನವು ಕೇವಲ ಇತಿಹಾಸವನ್ನು ನೆನಪಿಸಿಕೊಳ್ಳುವ ದಿನವಲ್ಲ, ಪರಮಾಣು ಶಸ್ತ್ರಾಸ್ತ್ರಗಳ ವಿನಾಶಕಾರಿ ಪರಿಣಾಮಗಳ ಬಗ್ಗೆ ಜಗತ್ತಿಗೆ ಸಂದೇಶವನ್ನು ಸಾರುವ ದಿನವಾಗಿದೆ.

ಹಿರೋಷಿಮಾ ಮೇಲೆ ಪರಮಾಣು ಬಾಂಬ್ ದಾಳಿ:

ಎರಡನೇ ಮಹಾಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಆಗಸ್ಟ್ 6, 1945 ರಂದು ಅಮೆರಿಕ ಜಪಾನಿನ  ಹಿರೋಷಿಮಾ ನಗರದ ಮೇಲೆ ನಡೆದ ಪರಮಾಣು ಬಾಂಬ್ ದಾಳಿ ನಡೆಸಿತು. ಯುನೈಟೆಡ್ ಸ್ಟೇಟ್ಸ್ ಜಪಾನಿನ ಹಿರೋಷಿಮಾ ನಗರವನ್ನು ಗುರಿಯಾಗಿಸಿಕೊಂಡು ಎನೋಲಾ ಗೇ ವಿಮಾನದಿಂದ ಲಿಟಲ್ ಬಾಯ್ ಎಂಬ ಪರಮಾಣು ಬಾಂಬ್ ಅನ್ನು ಹಾಕಿತು. ಕೆಲವೇ ಸೆಕೆಂಡುಗಳಲ್ಲಿ, ಇಡೀ ಹಿರೋಷಿಮಾ ನಗರವೇ ನಾಶವಾದವು. ಸಾವಿರಾರು ಜನರು ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು ಲಕ್ಷಾಂತರ ಜನರು ಗಾಯಗೊಂಡರು. ಮನೆಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ಇತರ ಪ್ರಮುಖ ಕಟ್ಟಡಗಳು ಭೀಕರವಾಗಿ ನಾಶವಾದವು. ಈ ದಾಳಿಯ ಮೂರು ದಿನಗಳ ನಂತರ, ನಾಗಸಾಕಿಯ ಮೇಲೆ ಎರಡನೇ ಪರಮಾಣು ಬಾಂಬ್ ದಾಳಿ ನಡೆಸಲಾಯಿತು.

ಲಿಟಲ್‌ ಬಾಯ್‌ಬಾಂಬ್‌ನ ಶಕ್ತಿ ಮತ್ತು ವಿನಾಶ:

ಲಿಟಲ್‌ ಬಾಯ್‌ ಎಂಬ ಹೆಸರು ಕೇಳಲು ಚಿಕ್ಕದಾಗಿದ್ದರೂ, ಇದರ ಶಕ್ತಿ ಮಾತ್ರ ವಿನಾಶಕಾರಿಯಾಗಿತ್ತು. ಈ ಪರಮಾಣು ಬಾಂಬ್‌ ಯುರೇನಿಯಂ-235 ಅನ್ನು ಆಧರಿಸಿದ ಬಾಂಬ್‌ ಆಗಿತ್ತು. ಇದು ಸರಿಸುಮಾರು 4,400 ಕಿಲೋಗ್ರಾಂಗಳಷ್ಟು ತೂಕವಿತ್ತು. ಈ ಪರಮಾಣು ಅಸ್ತ್ರವು 15 ಕಿಲೋಟನ್‌ಗಳಷ್ಟು ಟಿಎನ್‌ಟಿಗೆ ಸಮಾನವಾದ ಶಕ್ತಿಯನ್ನು ಹೊಂದಿತ್ತು. ಈ ಭಯಾನಕ ದಾಳಿಯು ತಕ್ಷಣವೇ ಇಡೀ ಹಿರೋಷಿಮಾ ನಗರಗಳನ್ನು ಬೂದಿ ಮಾಡಿತು. ಈ ಅಣುಬಾಂಬ್‌ನ ವಿಕಿರಣದಿಂದಾಗಿ ಗಾಳಿ ಮತ್ತು ನೀರು ಸಂಪೂರ್ಣವಾಗಿ ವಿಷಪೂರಿತವಾಗಿತ್ತು.‌ ಪರಮಾಣು ದಾಳಿಯ ನಂತರ, 30 ಕಿಲೋಮೀಟರ್ ಪ್ರದೇಶದಲ್ಲಿ ಕಪ್ಪು ಮಳೆ ಸುರಿಯಿತು.

ಹಿರೋಷಿಮಾ ದಾಳಿಯ ಪರಿಣಾಮಗಳು:

  • ಸ್ಫೋಟ ಮತ್ತು ಅದರ ತೀವ್ರ ಶಾಖದಿಂದಾಗಿ ಸ್ಥಳದಲ್ಲೇ ಸುಮಾರು 70,000 ರಿಂದ 80,000 ಜನರನ್ನು ಸಾವನ್ನಪ್ಪಿದರು. 1945 ರ ಅಂತ್ಯದ ವೇಳೆಗೆ, ಈ ಸಂಖ್ಯೆ ಸರಿಸುಮಾರು 140,000 ಕ್ಕೆ ಏರಿತು.
  • ಬದುಕುಳಿದ ಸಾವಿರಾರು ಜನರು ಅಣುಬಾಂಬ್‌ನ ವಿಕಿರಣಕ್ಕೆ ತುತ್ತಾಗಿ ಅವರು ವಾಂತಿ, ಜ್ವರ, ಕೂದಲು ಉದುರುವಿಕೆ, ರೋಗನಿರೋಧಕ ಶಕ್ತಿಯ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ತುತ್ತಾದರು. ಅಲ್ಲದೆ ಈ ದಾಳಿಯಲ್ಲಿ ಬದುಕಿಳಿದ ಅನೇಕ ಜನರು ತಮ್ಮ ನಂತರದ ಜೀವನದಲ್ಲಿ ಲ್ಯುಕೇಮಿಯಾ, ಥೈರಾಯ್ಡ್ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಮತ್ತು ಕಣ್ಣಿನ ಪೊರೆಗಳಂತಹ ಗಂಭೀರ ಕಾಯಿಲೆಗಳಿಗೆ ಒಳಗಾಗಿದ್ದಾರೆ.
  • ದಾಳಿಯಿಂದ ಬದುಕುಳಿದವರು ಭಯ, ಒತ್ತಡ, ಖಿನ್ನತೆ ಮತ್ತು ತಮ್ಮ ಕುಟುಂಬವನ್ನು ಕಳೆದುಕೊಂಡ ದುಃಖದಿಂದ ದೀರ್ಘಕಾಲ ಹೋರಾಡಿದರು. ಈ ದಾಳಿಯಲ್ಲಿ ಅನೇಕ ಮಕ್ಕಳು ಅನಾಥರಾದರು, ಅನೇಕರು ವಿಕಿರಣಕ್ಕೆ ಸಂಬಂಧಿಸಿದ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದರು.
  • ಈ ದಾಳಿಯಿಂದ ಬದುಕುಳಿದವರನ್ನು ಹಿಬಾಕುಶಾ ಎಂದು ಕರೆಯಲಾಗುತ್ತದೆ. ಅವರು ಇಂದಿಗೂ ದುರಂತದ ಜೀವಂತ ಸಾಕ್ಷಿಗಳಾಗಿದ್ದಾರೆ.
  • ಹಿರೋಷಿಮಾದ ಸುಮಾರು 90 ಪ್ರತಿಶತ ಕಟ್ಟಡಗಳು ನಾಶವಾದವು ಅಥವಾ ತೀವ್ರವಾಗಿ ಹಾನಿಗೊಳಗಾದವು. ಆ ಸಮಯದಲ್ಲಿ ಸಾವಿರಾರು ಜನರು ನಿರಾಶ್ರಿತರಾದರು ಮತ್ತು ಆಹಾರ, ಕುಡಿಯುವ ನೀರು ಮತ್ತು ವೈದ್ಯಕೀಯ ಆರೈಕೆಯಂತಹ ಮೂಲಭೂತ ಸೌಲಭ್ಯಗಳನ್ನು ಪಡೆಯಲು ಹೆಣಗಾಡುವ ಪರಿಸ್ಥಿತಿ ಎದುರಾಯಿತು.
  • ಹಿರೋಷಿಮಾ ಮತ್ತು ನಾಗಸಾಕಿಯ ದುರಂತಗಳು ಕೇವಲ ಇತಿಹಾಸವಲ್ಲ, ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯು ಮಾನವಕುಲಕ್ಕೆ ಎಷ್ಟು ಅಪಾಯಕಾರಿ ಎಂಬುದರ ಎಚ್ಚರಿಕೆಯೂ ಆಗಿದೆ.

ಇದನ್ನೂ ಓದಿ: ಆಗಸ್ಟ್‌ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ-ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಪಟ್ಟಿ

ಇಂದು ಹಿರೋಷಿಮಾ ನಗರ ಹೇಗಿದೆ?

ಅಂದು ಪರಮಾಣು ದಾಳಿಗೆ ತುತ್ತಾಗಿ ನಲುಗಿ ಹೋಗಿದ್ದ ಹಿರೋಷಿಮಾ ಮತ್ತು ನಾಗಸಾಕಿ ಎರಡೂ ಇಂದು ಅಭಿವೃದ್ಧಿ ಹೊಂದಿದ ನಗರಗಳಾಗಿ ಜಗತ್ತಿನ ಮುಂದೆ ತಲೆ ಎತ್ತಿ ನಿಂತಿವೆ. ಅಭಿವೃದ್ಧಿಯ ಮೂಲಕವೇ ಜಪಾನ್‌ ತನ್ನ ಶಕ್ತಿಯನ್ನು ಜಗತ್ತಿಗೆ ಸಾರಿದೆ. ಹಿರೋಷಿಮಾ ನಗರವು ಜಪಾನ್‌ನ ಅತಿದೊಡ್ಡ ದ್ವೀಪವಾದ ಹೊನ್ಶುನಲ್ಲಿದೆ. ಪರಮಾಣು ಬಾಂಬ್ ದಾಳಿಯಿಂದ ನಗರವು ಧ್ವಂಸಗೊಂಡಿತು. ಇಂದು, ಇದು ಸುಂದರವಾದ, ಉತ್ತಮವಾಗಿ ಅಭಿವೃದ್ಧಿ ಹೊಂದಿದ ನಗರವಾಗಿ ವಿಕಸನಗೊಂಡಿದೆ.  ನಗರವು ಅಸ್ಟ್ರಾಮ್ ಲೈನ್, ಸೀನೋ ಲೈನ್ ಮತ್ತು ರೈಲು ಸೇವೆಗಳನ್ನು ಹೊಂದಿದೆ. ಆಧುನಿಕ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಜೊತೆಗೆ ಪ್ರಮುಖ ಕಂಪನಿಗಳು ಅಲ್ಲಿ ನೆಲೆಗೊಂಡಿವೆ. ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹಿರೋಷಿಮಾವು ಸುಂದರವಾದ ವಿಮಾನ ನಿಲ್ದಾಣವನ್ನು ಸಹ ಹೊಂದಿದೆ.ಶಾಂತಿ ಸ್ಮಾರಕಗಳು ಮತ್ತು ವಸ್ತು ಸಂಗ್ರಹಾಲಯಗಳನ್ನು ಸಹ ನಿರ್ಮಿಸಲಾಗಿದ್ದು, ಇವು ಪರಮಾಣು ಬಾಂಬ್ ದಾಳಿಯಿಂದ ಉಂಟಾದ ವಿನಾಶವನ್ನು ಜನರಿಗೆ ನೆನಪಿಸುತ್ತಲೇ ಇದೆ. ಪ್ರತಿ ವರ್ಷ ಪ್ರಪಂಚದಾದ್ಯಂತದ ಲಕ್ಷಾಂತರ ಪ್ರವಾಸಿಗರು ನಗರಕ್ಕೆ ಭೇಟಿ ನೀಡುತ್ತಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪುತ್ತೂರು ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಮತ್ತೆ ವಿವಾದ: 30 ಕೋಟಿ ರೂ. ಮೌಲ್ಯದ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಭಕ್ತರ ವಿರೋಧ, ಶಾಸಕರ ನಡೆಗೆ ಆಕ್ರೋಶ – Kannada News | Dakshina Kannada: Puttur Temple’s 3 Acre Land for Public Road Ignites Debate

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವಿವಾದ

ಮಂಗಳೂರು, ಆ. 6: ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾಸಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಇದೀಗ ಮತ್ತೊಂದು ಹೊಸ ವಿವಾದ ತಲೆದೋರಿದೆ. ದೇವಸ್ಥಾನಕ್ಕೆ ಸೇರಿದ ಅಂದಾಜು 30 ಕೋಟಿ ರೂಪಾಯಿ ಮೌಲ್ಯದ 3 ಎಕರೆ ಜಾಗದಲ್ಲಿ ಸಾರ್ವಜನಿಕ ರಸ್ತೆ ನಿರ್ಮಿಸಲು ಮುಂದಾಗಿರುವುದು ಭಕ್ತರ ಹಾಗೂ ಆಡಳಿತ ಮಂಡಳಿಯ ನಡುವೆ ಪರ-ವಿರೋಧದ ತೀವ್ರ ಚರ್ಚೆಗೆ ಕಾರಣವಾಗಿದೆ.

ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಕ್ಷೇತ್ರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಆದರೆ, ಈ ಯೋಜನೆಯ ಭಾಗವಾಗಿ ವರ್ಷಗಳ ಇತಿಹಾಸ ಹೊಂದಿದ್ದ ‘ನಟರಾಜ ವೇದಿಕೆ’ಯನ್ನು ನೆಲಸಮಗೊಳಿಸಿ, ಅದೇ ಜಾಗದಲ್ಲಿ ಸಾರ್ವಜನಿಕ ರಸ್ತೆ ನಿರ್ಮಿಸಲು ತೀರ್ಮಾನಿಸಿರುವುದು ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ.

ಧಾರ್ಮಿಕ ದತ್ತಿ (ಮುಜರಾಯಿ) ವ್ಯಾಪ್ತಿಗೆ ಬರುವ ದೇವಸ್ಥಾನಗಳಲ್ಲಿ ಯಾವುದೇ ಕಾಮಗಾರಿ ನಡೆಸಬೇಕಿದ್ದರೂ ಅಧಿಕೃತ ಟೆಂಡರ್ ಪ್ರಕ್ರಿಯೆ ನಡೆಯಬೇಕು. ಆದರೆ, ಇಲ್ಲಿ ಯಾವುದೇ ಟೆಂಡರ್ ಕರೆಯದೆ ಏಕಾಧಿಪತ್ಯದ ರೀತಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಭಕ್ತರು ಗಂಭೀರ ಆರೋಪ ಮಾಡಿದ್ದಾರೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಜಾಗದಲ್ಲಿ ರಸ್ತೆ ನಿರ್ಮಿಸುವ ಬದಲು ಪರ್ಯಾಯ ರಸ್ತೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಭಕ್ತರ ವಿರೋಧ ಹಾಗೂ ಆರೋಪಗಳಿಗೆ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ತಿರುಗೇಟು ನೀಡಿದ್ದಾರೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಸದ್ಯ ಇರುವ ರಸ್ತೆಯಲ್ಲಿ ತೀವ್ರ ವಾಹನ ದಟ್ಟಣೆ ಉಂಟಾಗುತ್ತಿರುವುದರಿಂದ ಅಗಲವಾದ ರಸ್ತೆಯ ನಿರ್ಮಾಣ ಅತ್ಯಂತ ಅನಿವಾರ್ಯವಾಗಿದೆ.

ಇದನ್ನೂ ಓದಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಇಳಿಕೆ: KRS, ಕಬಿನಿ ಸೇರಿ ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ

ಕ್ಷೇತ್ರಕ್ಕೆ ಬರುವ ಭಕ್ತರ ಹಿತದೃಷ್ಟಿ ಹಾಗೂ ಸುರಕ್ಷತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಈ ರಸ್ತೆ ಅಭಿವೃದ್ಧಿ ನಿರ್ಧಾರ ಕೈಗೊಳ್ಳಲಾಗಿದೆ. ಸಾರ್ವಜನಿಕರು ಹಾಗೂ ಭಕ್ತರು ಈ ಯೋಜನೆಗೆ ಸಹಕರಿಸಬೇಕೆಂದು ಸಮಿತಿ ಮನವಿ ಮಾಡಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೀಪಿಕಾ ಪ್ರೆಗ್ನೆನ್ಸಿಯಿಂದ ‘ರಾಕಾ’ ಚಿತ್ರದ ಶೂಟ್​​ಗೆ ಇಲ್ಲ ಅಡ್ಡಿ – Kannada News | Deepika Padukone’s Maternity Break Wont Affect Allu Arjun’s Raaka Shoot Schedule

ಅಲ್ಲು ಅರ್ಜುನ್ ಮತ್ತು ಹಿಟ್ ನಿರ್ದೇಶಕ ಅಟ್ಲಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ‘ರಾಕಾ’ ಸಿನಿಮಾ ಸದ್ಯ ಭಾರತೀಯ ಚಿತ್ರರಂಗದಲ್ಲೇ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಈ ಚಿತ್ರದಲ್ಲಿ ಬಾಲಿವುಡ್‌ನ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ ದೀಪಿಕಾ ಪಡುಕೋಣೆ (Deepika Padukone) ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಇದಕ್ಕಾಗಿ ಅವರು ಬ್ರೇಕ್ ಪಡೆದುಕೊಂಡಿದ್ದಾರೆ. ಆದರೆ ಈ ಬ್ರೇಕ್‌ನಿಂದಾಗಿ ‘ರಾಕಾ’ ಸಿನಿಮಾದ ಚಿತ್ರೀಕರಣಕ್ಕೆ ಯಾವುದೇ ರೀತಿಯ ತೊಂದರೆ ಅಥವಾ ಅಡೆತಡೆ ಉಂಟಾಗುವುದಿಲ್ಲ ಎಂಬ ಸಿಹಿ ಸುದ್ದಿ ಸಿಕ್ಕಿದೆ.

‘ರಾಕಾ’ ಚಿತ್ರತಂಡ ಈ ಸನ್ನಿವೇಶವನ್ನು ಮೊದಲೇ ಊಹಿಸಿತ್ತು. ಹೀಗಾಗಿ, ಅತ್ಯಂತ ಅಚ್ಚುಕಟ್ಟಾದ ಮುಂಜಾಗ್ರತಾ ಯೋಜನೆಯನ್ನು ರೂಪಿಸಿಕೊಂಡಿತ್ತು. ದೀಪಿಕಾ ಅವರ ಪ್ರೆಗ್ನೆನ್ಸಿ ಹಾಗೂ ವಿಶ್ರಾಂತಿಯ ಸಮಯವನ್ನು ಗಮನದಲ್ಲಿಟ್ಟುಕೊಂಡು ನಿರ್ದೇಶಕ ಅಟ್ಲಿ ಶೂಟಿಂಗ್ ಶೆಡ್ಯೂಲ್ ಅನ್ನು ಮೊದಲೇ ಪ್ಲಾನ್ ಮಾಡಿದ್ದರು. ದೀಪಿಕಾ ಅವರಿಗೆ ಸಂಬಂಧಿಸಿದ ಬಹುತೇಕ ಪ್ರಮುಖ ದೃಶ್ಯಗಳ ಚಿತ್ರೀಕರಣವನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಹೀಗಾಗಿ ನಟಿ ವಿರಾಮದಲ್ಲಿದ್ದರೂ ಸಿನಿಮಾಗೆ ಯಾವುದೇ ತೊಂದರೆ ಆಗುವುದಿಲ್ಲ.

ದೀಪಿಕಾ ಗೈರುಹಾಜರಾಗಿರುವ ಈ ಸಮಯದಲ್ಲಿ ನಿರ್ಮಾಪಕರು ಹಾಗೂ ನಿರ್ದೇಶಕರು ಒಂದು ದಿನವೂ ವ್ಯರ್ಥವಾಗದಂತೆ ಇತರ ಪ್ರಮುಖ ನಟ-ನಟಿಯರ ಭಾಗದ ಶೂಟಿಂಗ್ ನಡೆಸುತ್ತಿದ್ದಾರೆ. ‘ರಾಕಾ’ ಚಿತ್ರದಲ್ಲಿ ದೀಪಿಕಾ ಅವರ ಪಾತ್ರ ಕಥೆಗೆ ಅತ್ಯಂತ ನಿರ್ಣಾಯಕವಾಗಿದೆ. ಅಟ್ಲಿ ತಮ್ಮ ಹಿಂದಿನ ‘ಜವಾನ್’ ಸಿನಿಮಾದಲ್ಲೂ ದೀಪಿಕಾ ಅವರನ್ನು ವಿಶೇಷವಾಗಿ ತೋರಿಸಿ ಸೈ ಎನಿಸಿಕೊಂಡಿದ್ದರು. ಈಗ ‘ರಾಕಾ’ ಚಿತ್ರದಲ್ಲೂ ಅಲ್ಲು ಅರ್ಜುನ್ ಮತ್ತು ದೀಪಿಕಾ ಕಾಂಬಿನೇಷನ್ ಬೆಳ್ಳಿಪರದೆಯ ಮೇಲೆ ಮ್ಯಾಜಿಕ್ ಸೃಷ್ಟಿಸಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ: ‘ಸಂಸ್ಕೃತಿ ಅರ್ಥೈಸಿಕೊಂಡು ಅದಕ್ಕೆ ಗೌರವ ನೀಡಬೇಕು’; ದೀಪಿಕಾ ಪಡುಕೋಣೆಗೆ ಕೌಂಟರ್

ಯಾವುದೇ ವಿಳಂಬವಿಲ್ಲದೆ ಅಂದುಕೊಂಡ ಸಮಯಕ್ಕೇ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿ ತೆರೆಗೆ ತರಲು ‘ರಾಕಾ’ ಚಿತ್ರತಂಡ ಶ್ರಮಿಸುತ್ತಿದೆ. ಇದರಿಂದಾಗಿ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಯಾವುದೇ ಆತಂಕವಿಲ್ಲದೆ ಸಿನಿಮಾ ನಿಗದಿತ ಸಮಯಕ್ಕೆ ಸೆಟ್ಟೇರುವ ಭರವಸೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Gold Rates 06 Aug: ಹತ್ತು ಗ್ರಾಮ್ ಚಿನ್ನದ ಬೆಲೆ ಎರಡೇ ದಿನದಲ್ಲಿ 5,250 ರೂ ಹೆಚ್ಚಳ – Kannada News | Gold Price Today on 6th August 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಆಗಸ್ಟ್ 6: ಚಿನ್ನದ ಬೆಲೆ ಸತತ ಏರಿಕೆಯಾಗಿದೆ. ನಿನ್ನೆ ಗ್ರಾಮ್​ಗೆ 160 ರೂ ಹೆಚ್ಚಿದ್ದ ಬಂಗಾರದ ದರ (Gold Price) ಇವತ್ತು ಬರೋಬ್ಬರಿ 365 ರೂಗಳಷ್ಟು ಜಿಗಿತ ಕಂಡಿದೆ. ಕೇವಲ ಎರಡು ದಿನದಲ್ಲಿ ಇದರ ಬೆಲೆ 525 ರೂಗಳಷ್ಟು ಹೆಚ್ಚಳವಾಗಿದೆ. ವಿದೇಶಗಳಲ್ಲಿ ಬಹುತೇಕ ರಾಷ್ಟ್ರಗಳಲ್ಲಿ ಅಪರಂಜಿ ಚಿನ್ನದ ಬೆಲೆ 13,000 ರೂ ಗಡಿ ದಾಟಿ ಹೋಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,37,250 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,49,730 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,37,250 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 25,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಆಗಸ್ಟ್ 6ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,973 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,725 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,230 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,973 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,725 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,725 ರೂ
  • ಚೆನ್ನೈ: 13,725 ರೂ
  • ಮುಂಬೈ: 13,725 ರೂ
  • ದೆಹಲಿ: 13,740 ರೂ
  • ಕೋಲ್ಕತಾ: 13,725 ರೂ
  • ಕೇರಳ: 13,725 ರೂ
  • ಅಹ್ಮದಾಬಾದ್: 13,730 ರೂ
  • ಜೈಪುರ್: 13,740 ರೂ
  • ಲಕ್ನೋ: 13,740 ರೂ
  • ಭುವನೇಶ್ವರ್: 13,725 ರೂ

ಇದನ್ನೂ ಓದಿ: ಆಫ್ರಿಕಾದ ಅತಿದೊಡ್ಡ ಏರ್ಲೈನ್ಸ್ ಬೆಳೆಸಿದ್ದ ತೆವೊಲ್ಡೆ ಗೆಬ್ರೆಮರಿಯಮ್ ಈಗ ಏರ್ ಇಂಡಿಯಾದ ನೂತನ ಸಾರಥಿ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 578 ರಿಂಗಿಟ್ (13,453 ರುಪಾಯಿ)
  • ದುಬೈ: 510.25 ಡಿರಾಮ್ (13,217 ರುಪಾಯಿ)
  • ಅಮೆರಿಕ: 140 ಡಾಲರ್ (13,318 ರುಪಾಯಿ)
  • ಸಿಂಗಾಪುರ: 186 ಸಿಂಗಾಪುರ್ ಡಾಲರ್ (13,812 ರುಪಾಯಿ)
  • ಕತಾರ್: 510.50 ಕತಾರಿ ರಿಯಾಲ್ (13,322 ರೂ)
  • ಸೌದಿ ಅರೇಬಿಯಾ: 526 ಸೌದಿ ರಿಯಾಲ್ (13,323 ರುಪಾಯಿ)
  • ಓಮನ್: 54.25 ಒಮಾನಿ ರಿಯಾಲ್ (13,405 ರುಪಾಯಿ)
  • ಕುವೇತ್: 42.08 ಕುವೇತಿ ದಿನಾರ್ (13,036 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 240 ರೂ
  • ಚೆನ್ನೈ: 250 ರೂ
  • ಮುಂಬೈ: 240 ರೂ
  • ದೆಹಲಿ: 240 ರೂ
  • ಕೋಲ್ಕತಾ: 240 ರೂ
  • ಕೇರಳ: 250 ರೂ
  • ಅಹ್ಮದಾಬಾದ್: 240 ರೂ
  • ಜೈಪುರ್: 240 ರೂ
  • ಲಕ್ನೋ: 240 ರೂ
  • ಭುವನೇಶ್ವರ್: 250 ರೂ
  • ಪುಣೆ: 240

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಏಕದಿನ ವಿಶ್ವಕಪ್​ಗೆ ಬಲಿಷ್ಠ ಭಾರತ ತಂಡ ಹೆಸರಿಸಿದ ಸುನಿಲ್ ಗವಾಸ್ಕರ್ – Kannada News | Sunil Gavaskar Picks India’s 2027 WC Squad

ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಜಂಟಿಯಾಗಿ ಆಯೋಜನೆಯಾಗಲಿರುವ 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್‌ಗಾಗಿ ಟೀಮ್ ಇಂಡಿಯಾದ ಮಾಜಿ ದಿಗ್ಗಜ ಸುನಿಲ್ ಗಾವಸ್ಕರ್ 15 ಸದಸ್ಯರ ಬಲಿಷ್ಠ ತಂಡವನ್ನು ಹೆಸರಿಸಿದ್ದಾರೆ. ಖಾಸಗಿ ವಾಹಿನಿಯ ವಿಶೇಷ ಕಾರ್ಯಕ್ರಮದಲ್ಲಿ ಅವರು ಪ್ರಕಟಿಸಿರುವ ಈ ತಂಡದಲ್ಲಿ ಯುವ ಹಾಗೂ ಹಿರಿಯ ಆಟಗಾರರ ಸಮತೋಲನ ಕಂಡುಬಂದಿದೆ. ಆದರೆ, ಪ್ರಸ್ತುತ ಫಾರ್ಮ್‌ನಲ್ಲಿರುವ ಕೆಲವು ಸ್ಟಾರ್ ಆಟಗಾರರನ್ನು ಕೈಬಿಟ್ಟಿರುವುದು ಚರ್ಚೆಗೆ ಕಾರಣವಾಗಿದೆ.

ಗಿಲ್‌ಗೆ ನಾಯಕತ್ವ, ರೋಹಿತ್-ವಿರಾಟ್‌ಗೆ ಸ್ಥಾನ:

ಸುನಿಲ್ ಗಾವಸ್ಕರ್ ತಮ್ಮ ತಂಡದ ಸಾರಥ್ಯವನ್ನು ಯುವ ಬ್ಯಾಟರ್ ಶುಭ್‌ಮನ್ ಗಿಲ್ ಹೆಗಲಿಗೇರಿಸಿದ್ದಾರೆ. ಇನ್ನು 2027ರ ವೇಳೆಗೆ ವಯಸ್ಸಿನ ಕಾರಣದಿಂದಾಗಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿಶ್ವಕಪ್ ಆಡುವುದು ಅನುಮಾನ ಎಂಬ ಕ್ರಿಕೆಟ್ ಪಂಡಿತರ ಲೆಕ್ಕಾಚಾರವನ್ನು ಗಾವಸ್ಕರ್ ತಳ್ಳಿಹಾಕಿದ್ದಾರೆ. ಆಫ್ರಿಕನ್ ಪಿಚ್‌ಗಳಲ್ಲಿ ಟೀಮ್ ಇಂಡಿಯಾ ಗೆಲ್ಲಬೇಕಾದರೆ ಈ ಇಬ್ಬರು ದಿಗ್ಗಜರ ಅನುಭವ ಅತಿ ಮುಖ್ಯ ಎಂದು ಗಾವಸ್ಕರ್ ನಂಬಿದ್ದಾರೆ.

ಪಂತ್, ಜೈಸ್ವಾಲ್ ಮತ್ತು ಶಮಿಗೆ ಶಾಕ್:

ಪ್ರಸ್ತುತ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಅಬ್ಬರಿಸುತ್ತಿರುವ ಯುವ ಓಪನರ್ ಯಶಸ್ವಿ ಜೈಸ್ವಾಲ್ ಮತ್ತು ಮ್ಯಾಚ್ ವಿನ್ನರ್ ವಿಕೆಟ್ ಕೀಪರ್ ರಿಷಭ್ ಪಂತ್ ಅವರಿಗೆ ಗಾವಸ್ಕರ್ ತಂಡದಲ್ಲಿ ಜಾಗ ನೀಡಿಲ್ಲ. ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಇವರ ಬದಲಿಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಕೆ.ಎಲ್. ರಾಹುಲ್ ಮತ್ತು ಇಶಾನ್ ಕಿಶನ್‌ಗೆ ನೀಡಿದ್ದಾರೆ. ಇನ್ನು ಹಿರಿಯ ವೇಗಿ ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ಅವರ ಹೆಸರನ್ನೂ ಗಾವಸ್ಕರ್ ಕೈಬಿಟ್ಟಿದ್ದಾರೆ.

ಯುವ ಆಲ್‌ರೌಂಡರ್ ಮತ್ತು ವೇಗಿಗಳಿಗೆ ಮಣೆ:

ಸೌತ್ ಆಫ್ರಿಕಾದ ವೇಗದ ಪಿಚ್‌ಗಳನ್ನು ಗಮನದಲ್ಲಿಟ್ಟುಕೊಂಡು ಸುನಿಲ್ ಗಾವಸ್ಕರ್ ಅವರು ಯುವ ವೇಗಿ ಹರ್ಷಿತ್ ರಾಣಾ ಹಾಗೂ ಉದಯೋನ್ಮುಖ ವೇಗದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರಿಗೆ ತಂಡದಲ್ಲಿ ಅವಕಾಶ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ಜೊತೆಗೆ ನಿತೀಶ್ ರೆಡ್ಡಿ ತಂಡಕ್ಕೆ ಹೆಚ್ಚುವರಿ ಬೌಲಿಂಗ್ ಬಲ ತುಂಬಲಿದ್ದಾರೆ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಭಲೇ ಬಟ್ಲರ್… ವಿಶ್ವ ದಾಖಲೆಯೇ ಧೂಳೀಪಟ!

ಸುನಿಲ್ ಗಾವಸ್ಕರ್ ಆಯ್ಕೆಯ 15 ಸದಸ್ಯರ ಬಲಿಷ್ಠ ಭಾರತ ತಂಡ:

  • ಬ್ಯಾಟರ್‌ಗಳು: ಶುಭ್‌ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್.
  • ವಿಕೆಟ್ ಕೀಪರ್‌ಗಳು: ಕೆ. ಎಲ್. ರಾಹುಲ್ ಮತ್ತು ಇಶಾನ್ ಕಿಶನ್.
  • ಆಲ್‌ರೌಂಡರ್‌ಗಳು: ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ನಿತೀಶ್ ಕುಮಾರ್ ರೆಡ್ಡಿ.
  • ಬೌಲರ್‌ಗಳು: ಜಸ್‌ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಮತ್ತು ಕುಲ್ದೀಪ್ ಯಾದವ್.

Source link

Karnataka Dam Water Level: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಇಳಿಕೆ: KRS, ಕಬಿನಿ ಸೇರಿ ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ – Kannada News | Karnataka Reservoir Water Level on August 6: KRS, Kabini, Hemavathi Inflow Declines Amid Reduced Rainfall

ಹೇಮಾವತಿ ಡ್ಯಾಂ (ಸಂಗ್ರಹ ಚಿತ್ರ)Image Credit source: tv9

ಬೆಂಗಳೂರು, ಆಗಸ್ಟ್ 6: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ (Monsoon Rain) ಪ್ರಮಾಣ ತಗ್ಗಿರುವ ಹಿನ್ನೆಲೆಯಲ್ಲಿ ಪ್ರಮುಖ ಜಲಾಶಯಗಳಿಗೆ ಒಳಹರಿವು (Dam Water Level) ಕಡಿಮೆಯಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಜಲಾಶಯಕ್ಕೆ ಬುಧವಾರ ಬೆಳಗ್ಗೆ 19,275 ಕ್ಯೂಸೆಕ್ ಇದ್ದ ಒಳಹರಿವು ಇಂದು 10,176 ಕ್ಯೂಸೆಕ್‌ಗೆ ಇಳಿಕೆಯಾಗಿದೆ. 124.80 ಅಡಿ ಗರಿಷ್ಠ ಮಟ್ಟದ ಕೆಆರ್‌ಎಸ್‌ ಡ್ಯಾಂನಲ್ಲಿ ಸದ್ಯ 105.87 ಅಡಿ ನೀರು ಸಂಗ್ರಹವಾಗಿದೆ. ಕುಡಿಯುವ ಉದ್ದೇಶಕ್ಕಾಗಿ ಜಲಾಶಯದಿಂದ 2,015 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 27.770 ಟಿಎಂಸಿ ನೀರು ಸಂಗ್ರಹವಿದೆ.

ಕೆಆರ್‌ಎಸ್‌ ಡ್ಯಾಂ ನೀರಿನ ಮಟ್ಟ

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ಮಟ್ಟ: 105.87 ಅಡಿ
  • ಒಳಹರಿವು: 10,176 ಕ್ಯೂಸೆಕ್
  • ಹೊರಹರಿವು: 2,015 ಕ್ಯೂಸೆಕ್
  • ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
  • ಇಂದಿನ ಸಂಗ್ರಹ: 27.770 ಟಿಎಂಸಿ

ಕಬಿನಿ ಜಲಾಶಯದ ನೀರಿನ ಮಟ್ಟ

  • ಗರಿಷ್ಠ ಮಟ್ಟ: 84.00 ಅಡಿ
  • ಇಂದಿನ ಮಟ್ಟ: 81.82 ಅಡಿ
  • ಒಳಹರಿವು: 13,969 ಕ್ಯೂಸೆಕ್
  • ಹೊರಹರಿವು: 7,000 ಕ್ಯೂಸೆಕ್
  • ನೀರಿನ ಸಂಗ್ರಹ: 18.13 ಟಿಎಂಸಿ

ಮೈಸೂರು ಭಾಗದಲ್ಲೂ ಕಬಿನಿ ಜಲಾಶಯದ ಒಳಹರಿವು ಕಡಿಮೆಯಾಗಿದೆ. ಸದ್ಯ ಜಲಾಶಯಕ್ಕೆ 13,969 ಕ್ಯೂಸೆಕ್ ಒಳಹರಿವು ಇದ್ದು, ಹೊರಹರಿವನ್ನು 7,000 ಕ್ಯೂಸೆಕ್‌ಗೆ ಇಳಿಸಲಾಗಿದೆ. ಜಲಾಶಯದಲ್ಲಿ 81.82 ಅಡಿ ನೀರಿನ ಮಟ್ಟವಿದ್ದು, 18.13 ಟಿಎಂಸಿ ನೀರು ಸಂಗ್ರಹವಾಗಿದೆ. ಒಳಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ನದಿಗೆ ನೀರು ಬಿಡುವ ಪ್ರಮಾಣವನ್ನು 27,000 ಕ್ಯೂಸೆಕ್‌ನಿಂದ 7,000 ಕ್ಯೂಸೆಕ್‌ಗೆ ಇಳಿಸಲಾಗಿದೆ.

ಬಸವಸಾಗರ ಜಲಾಶಯ ನೀರಿನ ಮಟ್ಟ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯಕ್ಕೆ 1.50 ಲಕ್ಷ ಕ್ಯೂಸೆಕ್ ಒಳಹರಿವು ಇದ್ದು, 1.45 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

  • ಗರಿಷ್ಠ ಮಟ್ಟ: 492.25 ಮೀಟರ್
  • ಇಂದಿನ ಮಟ್ಟ: 491.30 ಮೀಟರ್
  • ಒಳಹರಿವು: 1,50,000 ಕ್ಯೂಸೆಕ್
  • ಹೊರಹರಿವು: 1,45,000 ಕ್ಯೂಸೆಕ್
  • ಹಾರಂಗಿ ಜಲಾಶಯ

ಹಾರಂಗಿ ಜಲಾಶಯದ ನೀರಿನ ಮಟ್ಟ

ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿಯಲ್ಲಿರುವ ಜಲಾಶಯದಲ್ಲಿ ಸದ್ಯ 2858.15 ಅಡಿ ನೀರಿನ ಮಟ್ಟವಿದೆ. ಜಲಾಶಯಕ್ಕೆ 3,562 ಕ್ಯೂಸೆಕ್ ಒಳಹರಿವು ಇದ್ದು, ನದಿಗೆ 3,883 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

  • ಗರಿಷ್ಠ ಮಟ್ಟ: 2859 ಅಡಿ
  • ಇಂದಿನ ಮಟ್ಟ: 2858.15 ಅಡಿ
  • ಒಳಹರಿವು: 3,562 ಕ್ಯೂಸೆಕ್
  • ನದಿಗೆ ಹೊರಹರಿವು: 3,883 ಕ್ಯೂಸೆಕ್
  • ಹೇಮಾವತಿ ಜಲಾಶಯ

ಹೇಮಾವತಿ ಜಲಾಶಯದ ನೀರಿನ ಮಟ್ಟ

ಹಾಸನ ತಾಲೂಕಿನ ಗೊರೂರು ಸಮೀಪದ ಹೇಮಾವತಿ ಜಲಾಶಯದಲ್ಲಿ ಸದ್ಯ 2913.36 ಅಡಿ ನೀರಿನ ಮಟ್ಟವಿದ್ದು, 29.318 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 6,758 ಕ್ಯೂಸೆಕ್ ಒಳಹರಿವು ಇದೆ. 500 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ 2921.92 ಅಡಿ ನೀರಿನ ಮಟ್ಟವಿದ್ದು, 37.026 ಟಿಎಂಸಿ ನೀರು ಸಂಗ್ರಹವಾಗಿತ್ತು. ಆಗ 7,282 ಕ್ಯೂಸೆಕ್ ಒಳಹರಿವು, ನದಿಗೆ 2,400 ಕ್ಯೂಸೆಕ್ ಹಾಗೂ ಕಾಲುವೆಗೆ 4,600 ಕ್ಯೂಸೆಕ್ ನೀರು ಹೊರಹರಿವು ಇತ್ತು.

  • ಗರಿಷ್ಠ ಮಟ್ಟ: 2922 ಅಡಿ (37 TMC)
  • ಇಂದಿನ ಮಟ್ಟ: 2913.36 ಅಡಿ
  • ಇಂದಿನ ಸಂಗ್ರಹ: 29.318 TMC
  • ಒಳಹರಿವು: 6,758 ಕ್ಯೂಸೆಕ್
  • ಹೊರಹರಿವು: 500 ಕ್ಯೂಸೆಕ್
  • ಕಾಲುವೆಗೆ: 0 ಕ್ಯೂಸೆಕ್
  • ಕಬಿನಿ ಜಲಾಶಯ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CWC 2027: 36 ತಂಡಗಳ ಕದನ: ಕೇವಲ 4 ತಂಡಗಳಿಗೆ ಅವಕಾಶ! – Kannada News | CWC 2027: 36 Teams, 3 Rounds, But Only 4 Ultimate Spots

2027ರ ಐಸಿಸಿ ಏಕದಿನ ವಿಶ್ವಕಪ್‌ನ ಪ್ರಧಾನ ಸುತ್ತಿಗೂ ಮುನ್ನ ನಡೆಯಲಿರುವ ಅರ್ಹತಾ ಸುತ್ತಿನಲ್ಲಿ ಒಟ್ಟು 36 ದೇಶಗಳು ವಿವಿಧ ಹಂತಗಳಲ್ಲಿ ಕಣಕ್ಕಿಳಿಯುತ್ತಿವೆ. ಅಂತಿಮವಾಗಿ ಇವುಗಳಲ್ಲಿ ಕೇವಲ 4 ತಂಡಗಳು ಮಾತ್ರ ಮುಖ್ಯ ವಿಶ್ವಕಪ್ ಟೂರ್ನಿಗೆ ಲಗ್ಗೆ ಇಡಲಿವೆ. ಅರ್ಹತಾ ಸುತ್ತಿನ ವಿವಿಧ ಹಂತಗಳು ಮತ್ತು ಅದರಲ್ಲಿ ಆಡಲಿರುವ ತಂಡಗಳ ಸಂಪೂರ್ಣ ಪಟ್ಟಿ ಇಲ್ಲಿದೆ:

ಗ್ಲೋಬಲ್ ಕ್ವಾಲಿಫೈಯರ್ (10 ತಂಡಗಳು):

ಈ ಬಾರಿಯ ವಿಶ್ವಕಪ್‌ನಲ್ಲಿ ಒಟ್ಟು 14 ತಂಡಗಳು ಕಣಕ್ಕಿಳಿಯಲಿವೆ. ಈ ಹದಿನಾಲ್ಕು ತಂಡಗಳಲ್ಲಿ 10 ತಂಡಗಳು ನೇರ ಅರ್ಹತೆಯ ಮೂಲಕ ಲಗ್ಗೆ ಇಡಲಿವೆ. ಇದರಲ್ಲಿ ಜಂಟಿ ಆತಿಥೇಯರಾದ ಸೌತ್ ಆಫ್ರಿಕಾ ಮತ್ತು ಝಿಂಬಾಬ್ವೆ ಸ್ವಯಂಚಾಲಿತವಾಗಿ ಅರ್ಹತೆ ಪಡೆದರೆ, ಇನ್ನುಳಿದ 8 ತಂಡಗಳನ್ನು ಐಸಿಸಿ ಏಕದಿನ ರ‍್ಯಾಂಕಿಂಗ್ ಆಧಾರದ ಮೇಲೆ ನೇರವಾಗಿ ಎಂಟ್ರಿ ಕೊಡಲಿವೆ.

ಇನ್ನುಳಿದ 4 ಅಂತಿಮ ಸ್ಥಾನಗಳಿಗಾಗಿ ವಿವಿಧ ಲೀಗ್‌ಗಳ ಮೂಲಕ ತಂಡಗಳನ್ನು ಶೋಧಿಸಿ, ಕೊನೆಯಲ್ಲಿ 10 ತಂಡಗಳ ಬೃಹತ್ ‘ಗ್ಲೋಬಲ್ ಕ್ವಾಲಿಫೈಯರ್’ ಟೂರ್ನಿಯನ್ನು ನಡೆಸಲಾಗುತ್ತದೆ. ಈ ಮುಖ್ಯ ಕ್ವಾಲಿಫೈಯರ್ ಸುತ್ತಿನಲ್ಲಿ ಕಣಕ್ಕಿಳಿಯುವ 10 ತಂಡಗಳ ರಚನೆ ಹೀಗಿರುತ್ತದೆ:

  • ಮೊದಲ ಹಂತ (ಪೂರ್ಣ ಸದಸ್ಯರು): ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಅತ್ಯಂತ ಕೆಳಗಿನ ಸ್ಥಾನಕ್ಕೆ ಕುಸಿಯುವ 2 ಪೂರ್ಣಾವಧಿ ಸದಸ್ಯ ರಾಷ್ಟ್ರಗಳು ನೇರವಾಗಿ ಈ ಕ್ವಾಲಿಫೈಯರ್ ಟೂರ್ನಿಗೆ ಬರಲಿವೆ.
  • ದ್ವಿತೀಯ ಹಂತ (ಐಸಿಸಿ ಲೀಗ್-2): ಪ್ರಸ್ತುತ ನಡೆಯುತ್ತಿರುವ ಐಸಿಸಿ ಸಿಡಬ್ಲ್ಯೂಸಿ ಲೀಗ್-2 ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ 4 ಅತ್ಯುತ್ತಮ ತಂಡಗಳು ನೇರವಾಗಿ ಇಲ್ಲಿಗೆ ಪ್ರವೇಶಿಸುತ್ತವೆ.
  • ತೃತೀಯ ಹಂತ (ಕ್ವಾಲಿಫೈಯರ್ ಪ್ಲೇ-ಆಫ್): ಲೀಗ್-2 ರ ಕೊನೆಯ 4 ತಂಡಗಳು ಮತ್ತು ಕೆಳಹಂತದ ಚಾಲೆಂಜ್ ಲೀಗ್‌ನ 4 ತಂಡಗಳ ನಡುವೆ ‘ಪ್ಲೇ-ಆಫ್’ ಪಂದ್ಯಗಳು ನಡೆದು, ಅದರಿಂದ ಜಯಗಳಿಸಿ ಬರುವ ಉಳಿದ 4 ತಂಡಗಳು ಇಲ್ಲಿ ಕಣಕ್ಕಿಳಿಯಲಿವೆ.

CWC ಲೀಗ್-2 (8 ತಂಡಗಳು):

ಈ ಎಂಟು ಅಸೋಸಿಯೇಟ್ ತಂಡಗಳು ಗ್ಲೋಬಲ್ ಕ್ವಾಲಿಫೈಯರ್‌ಗೆ ಪ್ರವೇಶ ಪಡೆಯಲು ಪ್ರಸ್ತುತ ಲೀಗ್ ಪಂದ್ಯಗಳನ್ನು ಆಡುತ್ತಿವೆ. ಆ ತಂಡಗಳಾವುವು ಎಂದರೆ…

  • ಯುನೈಟೆಡ್ ಸ್ಟೇಟ್ಸ್
  • ಸ್ಕಾಟ್ಲೆಂಡ್
  • ನೆದರ್ಲ್ಯಾಂಡ್ಸ್
  • ಒಮಾನ್
  • ನಮೀಬಿಯಾ
  • ಕೆನಡಾ
  • ನೇಪಾಳ
  • ಯುಎಇ

CWC ಚಾಲೆಂಜ್ ಲೀಗ್ (12 ತಂಡಗಳು):

ಈ 12 ತಂಡಗಳನ್ನು ಎರಡು ಗುಂಪುಗಳಾಗಿ (Group A & Group B) ವಿಂಗಡಿಸಲಾಗಿದ್ದು, ಇವು ಕ್ವಾಲಿಫೈಯರ್ ಪ್ಲೇ-ಆಫ್ ಹಂತ ತಲುಪಲು ಹೋರಾಡುತ್ತಿವೆ. ಆ ತಂಡಗಳಾವುವು ಎಂದರೆ…

  • ಗುಂಪು A
  • ಜರ್ಸಿ
  • ಕುವೈತ್
  • ಪಪುವಾ ನ್ಯೂ ಗಿನಿಯಾ
  • ಡೆನ್ಮಾರ್ಕ್​
  • ಖತಾರ್
  • ರ್ಗುಂಪು B
  • ಉಗಾಂಡಾ
  • ಇಟಲಿ
  • ತಾಂಜಾನಿಯಾ
  • ಹಾಂಗ್ ಕಾಂಗ್
  • ಬಹ್ರೇನ್
  • ಸಿಂಗಾಪುರ್

ಪ್ರಾದೇಶಿಕ ಅರ್ಹತಾ ಸುತ್ತುಗಳು (ಉಳಿದ 16 ತಂಡಗಳು):

ಮೇಲಿನ ಚಾಲೆಂಜ್ ಲೀಗ್‌ಗೆ ಅರ್ಹತೆ ಪಡೆಯಲು ಆಫ್ರಿಕಾ, ಅಮೆರಿಕ, ಏಷ್ಯಾ, ಈಸ್ಟ್-ಏಷ್ಯಾ ಪೆಸಿಫಿಕ್ ಮತ್ತು ಯುರೋಪ್ ವಲಯಗಳ ಸ್ಥಳೀಯ ಟೂರ್ನಿಗಳಿಂದ ಒಟ್ಟು 16 ಕೆಳಹಂತದ ಕ್ರಿಕೆಟ್ ತಂಡಗಳು ಚಾಲೆಂಜ್ ಲೀಗ್ ಪ್ಲೇ-ಆಫ್ಸ್ ಮೂಲಕ ತಮ್ಮ ಅರ್ಹತಾ ಪ್ರಯಾಣವನ್ನು ಆರಂಭಿಸಿವೆ.

ಇದನ್ನೂ ಓದಿ: 12 ಸ್ಟೇಡಿಯಂ, 57 ಪಂದ್ಯಗಳು: ಹೀಗಿರಲಿದೆ ಏಕದಿನ ವಿಶ್ವಕಪ್​ ಟೂರ್ನಿ!

ಅಂತಿಮವಾಗಿ, ಈ ಎಲ್ಲಾ ವಿಭಾಗಗಳಿಂದ ಒಟ್ಟುಗೂಡುವ 10 ತಂಡಗಳ ನಡುವೆ ಫೆಬ್ರವರಿ-ಮಾರ್ಚ್ 2027ರಲ್ಲಿ ಮುಖ್ಯ ಕ್ವಾಲಿಫೈಯರ್ ಪಂದ್ಯಗಳು ನಡೆದು, ಅದರಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಕೊನೆಯ 4 ತಂಡಗಳು ವಿಶ್ವಕಪ್‌ನ ಪ್ರಧಾನ 14ರ ಘಟ್ಟವನ್ನು ತಲುಪಲಿದೆ. ಅಂದರೆ 2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗೆ ಅರ್ಹತೆ ಪಡೆಯಲಿದೆ.

Source link

ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ಲಕ್ಷಾಂತರ ರೂ. ಮೌಲ್ಯದ ಕಂಪ್ಯೂಟರ್, AC ಮಾಯ: ಅಧಿಕಾರಿಗಳೇ ಲೂಟಿ ಮಾಡಿದ್ರಾ? – Kannada News | Gadag Govt. Hostel Loot: Officials Accused as Millions Worth of Digital Assets Disappear

ಗದಗ, ಆ.6: ಜಿಲ್ಲೆಯ ಸೂರ್ಯ ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸರ್ಕಾರಿ ಸ್ವತ್ತುಗಳು ಗಾಯಬ್ ಆಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಾಸ್ಟೆಲ್‌ನಲ್ಲಿ ಸೂಕ್ತ ಸ್ಥಿತಿಯಲ್ಲಿದ್ದ 20ಕ್ಕೂ ಹೆಚ್ಚು ಕಂಪ್ಯೂಟರ್‌ಗಳು ಹಾಗೂ 6 ಏರ್‌ ಕಂಡೀಷನರ್‌ಗಳು (AC) ನಾಪತ್ತೆಯಾಗಿದ್ದು, ಇಲಾಖೆಯ ಅಧಿಕಾರಿಗಳೇ ಇದನ್ನು ಲೂಟಿ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ. ಬಡ ಮತ್ತು ದಲಿತ ವಿದ್ಯಾರ್ಥಿಗಳ ಡಿಜಿಟಲ್ ಶಿಕ್ಷಣಕ್ಕೆ ಅನುಕೂಲವಾಗಲೆಂದು ಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಕಂಪ್ಯೂಟರ್ ಲ್ಯಾಬ್ ನಿರ್ಮಿಸಿತ್ತು. ಆದರೆ, ಈಗ ಲ್ಯಾಬ್‌ನಲ್ಲಿದ್ದ 20ಕ್ಕೂ ಹೆಚ್ಚು ಸುಸ್ಥಿತಿಯಲ್ಲಿದ್ದ ಕಂಪ್ಯೂಟರ್‌ಗಳು ಹಾಗೂ 6 ಎಸಿಗಳು ಮಾಯವಾಗಿವೆ. ಗದಗ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ‘ಹೇಳೋರಿಲ್ಲ ಕೇಳೋರಿಲ್ಲ’ ಎಂಬಂತಾಗಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಖರೀದಿಸಿದ ವಸ್ತುಗಳನ್ನು ಸ್ವತಃ ಅಧಿಕಾರಿಗಳೇ ತೆಗೆದುಕೊಂಡು ಹೋಗಿ ಲೂಟಿ ಮಾಡಿದ್ದಾರೆ ಎಂದು ಹಾಸ್ಟೆಲ್ ವಿದ್ಯಾರ್ಥಿಗಳು ದೂರಿದ್ದಾರೆ. ಅಭ್ಯಾಸ ಮಾಡಲು ಹಾಗೂ ಆನ್‌ಲೈನ್ ಕಲಿಕೆಗೆ ಕಂಪ್ಯೂಟರ್‌ಗಳೇ ಇಲ್ಲದೆ ವಸತಿ ನಿಲಯದ ಬಡ ವಿದ್ಯಾರ್ಥಿಗಳು ತೀವ್ರ ಪರದಾಟ ನಡೆಸುತ್ತಿದ್ದು, ಅಧಿಕಾರಿಗಳ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಆರೋಪಿ ಅಧಿಕಾರಿಗಳ ವಿರುದ್ಧ ತಕ್ಷಣವೇ ತನಿಖೆ ನಡೆಸಿ, ನಾಪತ್ತೆಯಾಗಿರುವ ಕಂಪ್ಯೂಟರ್ ಹಾಗೂ ಎಸಿಗಳನ್ನು ಮರಳಿ ಹಾಸ್ಟೆಲ್‌ಗೆ ತಂದು ಕೊಡುವಂತೆ ವಿದ್ಯಾರ್ಥಿಗಳು ಮತ್ತು ದಲಿತ ಸಂಘಟನೆಗಳು ಆಗ್ರಹಿಸಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version