ಇರಾನ್ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಸಂಪರ್ಕಿಸುವುದು ತೀರಾ ಕಷ್ಟ: ಇರಾನ್ ಅಧ್ಯಕ್ಷ – Kannada News | Iran Political Crisis: President Pezeshkian Says New Supreme Leader Mojtaba Khamenei Hard to Contact

ಟೆಹ್ರಾನ್, ಆಗಸ್ಟ್​ 06 ಇರಾನ್ ರಾಜಕೀಯ ಮತ್ತು ಮಿಲಿಟರಿ ವಲಯದಲ್ಲಿ ಭಾರಿ ಬಿಕ್ಕಟ್ಟು ಎದುರಾಗಿರುವ ವರದಿಗಳ ನಡುವೆಯೇ, ದೇಶದ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ(Mojtaba Khamenei) ಅವರೊಂದಿಗೆ ಸಂವಹನ ನಡೆಸುವುದು ಈ ಪರಿಸ್ಥಿತಿಯಲ್ಲಿ ತೀರಾ ಕಷ್ಟಕರವಾಗಿದೆ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಬಹಿರಂಗಪಡಿಸಿದ್ದಾರೆ. ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಜಂಟಿ ವಾಯುದಾಳಿಯಲ್ಲಿ ಮಾಜಿ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದರು. ಆ ದಾಳಿಯಲ್ಲಿ ಗಾಯಗೊಂಡಿದ್ದ ಮೊಜ್ತಬಾ ಖಮೇನಿ ಅಧಿಕಾರ ವಹಿಸಿಕೊಂಡ ನಂತರ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ.

ಮೊಜ್ತಬಾ ಖಮೇನಿ ಅವರು ತಮ್ಮ ತಂದೆಯ ಅಂತ್ಯಕ್ರಿಯೆಯ ಕಾರ್ಯಕ್ರಮದಲ್ಲೂ ಭಾಗವಹಿಸಿರಲಿಲ್ಲ. ಕೇವಲ ಲಿಖಿತ ಪ್ರಕಟಣೆಗಳ ಮೂಲಕವೇ ಆದೇಶ ಹೊರಡಿಸುತ್ತಿದ್ದಾರೆ. ಈ ಕುರಿತು ಮಾತನಾಡಿದ ಅಧ್ಯಕ್ಷ ಪೆಜೆಶ್ಕಿಯಾನ್, ಅವರನ್ನು ಸಂಪರ್ಕಿಸುವುದು ಸದ್ಯಕ್ಕೆ ಸವಾಲಾಗಿದೆ. ಆದರೆ ಅವರು ನಮ್ಮೊಂದಿಗಿದ್ದಾರೆ ಎಂಬ ಭಾವನೆಯೇ ನಮಗೆ ಮುಂದೆ ಸಾಗಲು ಬಲ ನೀಡುತ್ತದೆ. ದುರುದ್ದೇಶಪೂರಿತ ವ್ಯಕ್ತಿಗಳು ಸುಪ್ರೀಂ ಲೀಡರ್ ಕುರಿತು ಇಲ್ಲಸಲ್ಲದ ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಭಿನ್ನಾಭಿಪ್ರಾಯದ ಸುದ್ದಿಗಳನ್ನು ತಳ್ಳಿಹಾಕಿದ್ದಾರೆ.

ಮೊಜ್ತಬಾ ಖಮೇನಿ ಅವರು ಇರಾನ್‌ ಅಧ್ಯಕ್ಷರಿಗಿಂತ ಹೆಚ್ಚಾಗಿ ಮಿಲಿಟರಿ ಶಕ್ತಿ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ಕಮಾಂಡರ್ ಅಹ್ಮದ್ ವಾಹಿದಿ ಅವರಿಗೆ ಹೆಚ್ಚಿನ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಿದ್ದಾರೆ. ವಿದೇಶಾಂಗ ನೀತಿ ಮತ್ತು ಯುದ್ಧದ ತಂತ್ರಗಳಲ್ಲಿ ತಮ್ಮ ಆಡಳಿತವನ್ನು ಸಂಪೂರ್ಣವಾಗಿ ಬದಿಗಿಡಲಾಗುತ್ತಿದೆ ಎಂದು ಆಕ್ರೋಶಗೊಂಡಿದ್ದ ಪೆಜೆಶ್ಕಿಯಾನ್, ಈಗಾಗಲೇ ಮೇ ತಿಂಗಳಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದರು.

ಮತ್ತಷ್ಟು ಓದಿ: ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಮೇಲೆ 2 ಬಾರಿ ಮಾರಣಾಂತಿಕ ದಾಳಿ; ಇರಾನ್ ಸಂಸದ ಮಾಹಿತಿ

ಇರಾನ್‌ನಲ್ಲಿ ಸುಪ್ರೀಂ ಲೀಡರ್ ಹುದ್ದೆಯು ದೇಶದ ಅತ್ಯುನ್ನತ ಸರ್ವಾಧಿಕಾರಿ ಅಧಿಕಾರ ಹೊಂದಿದ್ದು, ರಾಜಕೀಯ ಅಧ್ಯಕ್ಷರಿಗಿಂತ ಸಶಸ್ತ್ರ ಪಡೆಗಳು (IRGC) ಹೇಳಿದಂತೆ ಕೇಳುವ ವಾತಾವರಣ ಸೃಷ್ಟಿಯಾಗಿದೆ. ಇರಾನ್‌ನ ಪ್ರಮುಖ ಆಂತರಿಕ ಮತ್ತು ಮಿಲಿಟರಿ ನಿರ್ಧಾರಗಳನ್ನು ತಳೆಯುವಲ್ಲಿ ಪೆಜೆಶ್ಕಿಯಾನ್ ನೇತೃತ್ವದ ನಾಗರಿಕ ಸರ್ಕಾರಕ್ಕೆ ಯಾವುದೇ ಪ್ರಭಾವ ಇಲ್ಲದಿರುವುದು, ಅಮೆರಿಕ-ಇಸ್ರೇಲ್ ಜೊತೆಗಿನ ರಾಜತಾಂತ್ರಿಕ ಮಾತುಕತೆಗಳನ್ನು ಮತ್ತಷ್ಟು ಜಟಿಲಗೊಳಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕದಲ್ಲಿ ಅಡಿಕೆ ಉತ್ಪಾದನೆ, ಉತ್ಪಾದಕತೆ ಭಾರೀ ಕುಸಿತ! ಕಾರಣವೇನು? – Kannada News | Karnataka Arecanut Productivity Falls 37 percent Despite 32 percent Rise in Cultivation Area

ನವದೆಹಲಿ, ಆಗಸ್ಟ್ 6: ಕರ್ನಾಟಕದಲ್ಲಿ ಅಡಿಕೆ ಬೆಳೆಯುವ ಪ್ರದೇಶ ಕಳೆದ ಐದು ವರ್ಷಗಳಲ್ಲಿ ಗಣನೀಯವಾಗಿ ವಿಸ್ತರಣೆಯಾಗಿದೆ. ಆದರೆ, ಇದೇ ಅವಧಿಯಲ್ಲಿ ಅಡಿಕೆ ಉತ್ಪಾದಕತೆ (Arecanut Productivity) ತೀವ್ರವಾಗಿ ಕುಸಿದಿರುವುದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ (Lok Sabha) ಮಂಡಿಸಿರುವ ಅಂಕಿಅಂಶಗಳಿಂದ ಬಹಿರಂಗವಾಗಿದೆ. 2021-22ರಲ್ಲಿ ರಾಜ್ಯದಲ್ಲಿ 6,03,121 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿತ್ತು. 2025-26ರ ಎರಡನೇ ಮುಂಗಡ ಅಂದಾಜಿನ ಪ್ರಕಾರ ಈ ಪ್ರದೇಶ 7,98,677 ಹೆಕ್ಟೇರ್‌ಗೆ ಏರಿಕೆಯಾಗಿದೆ. ಅಂದರೆ ಸುಮಾರು 1,95,500 ಹೆಕ್ಟೇರ್‌ ಅಥವಾ ಶೇ 32ಕ್ಕೂ ಹೆಚ್ಚು ವಿಸ್ತರಣೆಯಾಗಿದೆ. ಆದರೆ, ಇದೇ ಅವಧಿಯಲ್ಲಿ ಪ್ರತಿ ಹೆಕ್ಟೇರ್‌ಗೆ ಸರಾಸರಿ ಉತ್ಪಾದಕತೆ 2.24 ಟನ್‌ನಿಂದ 1.42 ಟನ್‌ಗೆ ಇಳಿಕೆಯಾಗಿದೆ. ಇದು ಸುಮಾರು ಶೇ 37ರಷ್ಟು ಕುಸಿತವಾಗಿದೆ.

5 ವರ್ಷಗಳ ಹಿಂದಿಗಿಂತ ಶೇ 16 ರಷ್ಟು ಕುಸಿದ ಅಡಿಕೆ ಉತ್ಪಾದನೆ

ಉತ್ಪಾದಕತೆ ಕುಸಿದ ಪರಿಣಾಮ ಅಡಿಕೆ ಉತ್ಪಾದನೆಯಲ್ಲೂ ಇಳಿಕೆ ಕಂಡುಬಂದಿದೆ. 2021-22ರಲ್ಲಿ ಕರ್ನಾಟಕದಲ್ಲಿ 13.5 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗಿತ್ತು. ಮುಂದಿನ ವರ್ಷ ಉತ್ಪಾದನೆ 10.2 ಲಕ್ಷ ಟನ್‌ಗೆ ಕುಸಿದಿತ್ತು. ಬಳಿಕ ನಿಧಾನವಾಗಿ ಚೇತರಿಸಿಕೊಂಡು 2025-26ರ ಅಂದಾಜಿನಲ್ಲಿ 11.3 ಲಕ್ಷ ಟನ್ ತಲುಪಿದೆ. ಆದರೂ ಐದು ವರ್ಷಗಳ ಹಿಂದಿನ ಮಟ್ಟಕ್ಕೆ ಹೋಲಿಸಿದರೆ ಉತ್ಪಾದನೆ ಸುಮಾರು ಶೇ 16ರಷ್ಟು ಕಡಿಮೆ ಇದೆ. ಈ ಅಂಕಿಅಂಶಗಳನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ರಾಮನಾಥ್ ಠಾಕೂರ್ ಅವರು ಲೋಕಸಭೆಯಲ್ಲಿ ಲಿಖಿತ ಉತ್ತರದ ಮೂಲಕ ನೀಡಿದ್ದಾರೆ. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಕೇಳಿದ ಪ್ರಶ್ನೆಗೆ ಸಚಿವರು ಈ ಮಾಹಿತಿ ನೀಡಿದ್ದಾರೆ.

ದೇಶದ ಅಡಿಕೆ ಕ್ಷೇತ್ರದಲ್ಲಿ ಕರ್ನಾಟಕದ್ದೇ ಪ್ರಾಬಲ್ಯ

ಉತ್ಪಾದಕತೆ ಕುಸಿದಿದ್ದರೂ, ದೇಶದ ಅಡಿಕೆ ಆರ್ಥಿಕತೆಯಲ್ಲಿ ಕರ್ನಾಟಕದ ಪ್ರಾಬಲ್ಯ ಮುಂದುವರಿದಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ದೇಶದ ಒಟ್ಟು ಅಡಿಕೆ ಬೆಳೆ ಪ್ರದೇಶದಲ್ಲಿ ಕರ್ನಾಟಕದ ಪಾಲು ಶೇ 71.56ರಷ್ಟಿದೆ. ರಾಷ್ಟ್ರೀಯ ಅಡಿಕೆ ಉತ್ಪಾದನೆಯಲ್ಲಿ ರಾಜ್ಯದ ಪಾಲು ಶೇ 75.47ರಷ್ಟಿದೆ.

ಶಿವಮೊಗ್ಗದಲ್ಲೂ ಅಡಿಕೆ ಉತ್ಪಾದಕತೆ ಭಾರೀ ಇಳಿಕೆ

ರಾಜ್ಯದ ಪ್ರಮುಖ ಅಡಿಕೆ ಉತ್ಪಾದನಾ ಜಿಲ್ಲೆ ಶಿವಮೊಗ್ಗದಲ್ಲೂ ಇದೇ ಪ್ರವೃತ್ತಿ ಕಂಡುಬಂದಿದೆ. 2021-22ರಲ್ಲಿ 1,11,758 ಹೆಕ್ಟೇರ್ ಇದ್ದ ಅಡಿಕೆ ಪ್ರದೇಶ 2025-26ರಲ್ಲಿ 1,34,692 ಹೆಕ್ಟೇರ್‌ಗೆ ಏರಿಕೆಯಾಗಿದೆ. ಆದರೆ, ಉತ್ಪಾದಕತೆ ಹೆಕ್ಟೇರ್‌ಗೆ 2.13 ಟನ್‌ನಿಂದ 1.11 ಟನ್‌ಗೆ ಕುಸಿದಿದೆ. ಪರಿಣಾಮ, ಉತ್ಪಾದನೆಯೂ 2,37,710 ಟನ್‌ನಿಂದ 1,49,593 ಟನ್‌ಗೆ ಇಳಿಕೆಯಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲೂ ಅಡಿಕೆ ಉತ್ಪಾದನೆ ಇಳಿಕೆ

ದಕ್ಷಿಣ ಕನ್ನಡದಲ್ಲೂ ಅಡಿಕೆ ಬೆಳೆಯುವ ಪ್ರದೇಶ 1,01,689 ಹೆಕ್ಟೇರ್‌ನಿಂದ 1,07,900 ಹೆಕ್ಟೇರ್‌ಗೆ ಹೆಚ್ಚಾಗಿದೆ. ಆದರೆ ಉತ್ಪಾದಕತೆ 2.70 ಟನ್‌ನಿಂದ 1.31 ಟನ್‌ಗೆ ಕುಸಿದಿದೆ. ಇದರ ಪರಿಣಾಮ ಉತ್ಪಾದನೆ 2,74,560 ಟನ್‌ನಿಂದ 1,41,349 ಟನ್‌ಗೆ ಇಳಿಕೆಯಾಗಿದೆ. ಉಡುಪಿಯಲ್ಲಿ ಉತ್ಪಾದಕತೆ 3.12 ಟನ್‌ನಿಂದ 1.50 ಟನ್‌ಗೆ ಇಳಿದಿದ್ದು, ಉತ್ಪಾದನೆಯೂ 72,430 ಟನ್‌ನಿಂದ 39,859 ಟನ್‌ಗೆ ಕುಸಿದಿದೆ. ಇದೇ ವೇಳೆ ಬೆಳೆಯುವ ಪ್ರದೇಶದಲ್ಲಿ ಸ್ವಲ್ಪ ಏರಿಕೆಯಾಗಿದೆ.

ಉತ್ತರ ಕನ್ನಡದಲ್ಲಿ ಅಡಿಕೆ ಪ್ರದೇಶ 32,698 ಹೆಕ್ಟೇರ್‌ನಿಂದ 39,354 ಹೆಕ್ಟೇರ್‌ಗೆ ಹೆಚ್ಚಾದರೂ, ಉತ್ಪಾದಕತೆ 2.90 ಟನ್‌ನಿಂದ 1.50 ಟನ್‌ಗೆ ಇಳಿಕೆಯಾಗಿದೆ. ಇದರಿಂದ ಉತ್ಪಾದನೆ 94,823 ಟನ್‌ನಿಂದ 59,031 ಟನ್‌ಗೆ ಕುಸಿದಿದೆ.

ಆದರೆ ಎಲ್ಲ ಜಿಲ್ಲೆಗಳಲ್ಲೂ ಇದೇ ಪ್ರವೃತ್ತಿ ಕಂಡುಬಂದಿಲ್ಲ. ಚಿಕ್ಕಮಗಳೂರಿನಲ್ಲಿ ಇತ್ತೀಚಿನ ಅಂದಾಜಿನ ಪ್ರಕಾರ ಉತ್ಪಾದನೆ ಹೆಚ್ಚಾಗಿದೆ. ಹಾವೇರಿ ಮತ್ತು ಹಾಸನ ಜಿಲ್ಲೆಗಳಲ್ಲೂ ಅಡಿಕೆ ಬೆಳೆಯುವ ಪ್ರದೇಶ ಹಾಗೂ ಉತ್ಪಾದನೆಯಲ್ಲಿ ಏರಿಕೆ ದಾಖಲಾಗಿದೆ.

ಅಡಿಕೆ ಉತ್ಪಾದನೆ ಕುಸಿತಕ್ಕೆ ಕಾರಣವೇನು?

ಉತ್ಪಾದಕತೆ ಕುಸಿತಕ್ಕೆ ನಿಖರ ಕಾರಣಗಳನ್ನು ಲೋಕಸಭೆಯಲ್ಲಿ ನೀಡಿರುವ ಉತ್ತರದಲ್ಲಿ ವಿವರಿಸಲಾಗಿಲ್ಲ. ಆದರೆ, ಅಡಿಕೆ ಮತ್ತು ಸಾಂಬಾರು ಅಭಿವೃದ್ಧಿ ನಿರ್ದೇಶನಾಲಯ (DASD) ಮೂಲಕ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಲಾಗಿದೆ. ಎಲೆ ಚುಕ್ಕೆ ರೋಗ, ಹಣ್ಣುಕೊಳೆ ರೋಗ ಮತ್ತು ಬೇರುಹುಳು ಬಾಧೆ ನಿರ್ವಹಣೆ, ಹೈಬ್ರಿಡ್ ಕುಬ್ಜ ತಳಿಗಳ ಪ್ರೋತ್ಸಾಹ, ಬಹುಬೆಳೆ ಪದ್ಧತಿ ಹಾಗೂ ಹವಾಮಾನ ಆಧಾರಿತ ರೋಗ ಮುನ್ಸೂಚನೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕರ್ನಾಟಕದ ಬಾಧಿತ 10 ತಾಲೂಕುಗಳಲ್ಲಿ ಸಮುದಾಯ ಆಧಾರಿತ ಎಲೆ ಚುಕ್ಕೆ ರೋಗ ನಿರ್ವಹಣಾ ಕಾರ್ಯಕ್ರಮವನ್ನೂ ಕೇಂದ್ರ ಸರ್ಕಾರ ಆರಂಭಿಸಿದೆ.

ದೇಶದಲ್ಲೂ ಇದೇ ಪರಿಸ್ಥಿತಿ

ಕರ್ನಾಟಕ ಮಾತ್ರವಲ್ಲ, ದೇಶದ ಅಡಿಕೆ ಕ್ಷೇತ್ರದಲ್ಲೂ ಇದೇ ರೀತಿಯ ಬೆಳವಣಿಗೆ ಕಂಡುಬಂದಿದೆ. ಭಾರತದಲ್ಲಿ ಅಡಿಕೆ ಬೆಳೆಯುವ ಪ್ರದೇಶ 2021-22ರಲ್ಲಿ 8,49,330 ಹೆಕ್ಟೇರ್‌ನಿಂದ 2025-26ರಲ್ಲಿ 11.06 ಲಕ್ಷ ಹೆಕ್ಟೇರ್‌ಗೆ ಏರಿಕೆಯಾಗಿದೆ. ಆದರೆ ಇದೇ ಅವಧಿಯಲ್ಲಿ ಸರಾಸರಿ ಉತ್ಪಾದಕತೆ 1.96 ಟನ್‌ನಿಂದ 1.38 ಟನ್‌ಗೆ ಕುಸಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Rangoli: ಮನೆ ಮುಂದೆ ರಂಗೋಲಿ ಏಕೆ ಹಾಕಬೇಕು? ಧಾರ್ಮಿಕ, ವೈಜ್ಞಾನಿಕ ರಹಸ್ಯಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ – Kannada News | The Significance and Scientific Benefits of Drawing Rangoli

ರಂಗೋಲಿ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಇದು ಕೇವಲ ಮನೆಯ ಅಂಗಳವನ್ನು ಅಲಂಕರಿಸುವ ಕಲೆಯಲ್ಲ, ಧಾರ್ಮಿಕ, ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ಮಹತ್ವವನ್ನು ಹೊಂದಿರುವ ಒಂದು ನಿತ್ಯದ ಆಚರಣೆಯಾಗಿದೆ. ಸಂಸ್ಕೃತದ ‘ರಂಗವಲ್ಲಿ’ ಎಂಬ ಪದದಿಂದ ಬಂದಿರುವ ರಂಗೋಲಿ, ಮನೆಗೆ ಧನಾತ್ಮಕ ಶಕ್ತಿ, ನೆಮ್ಮದಿ ಮತ್ತು ಸಮೃದ್ಧಿಯನ್ನು ಆಹ್ವಾನಿಸುತ್ತದೆ ಎಂಬ ನಂಬಿಕೆ ಇದೆ. ಹಾಗಾದರೆ ಮನೆಯ ಮುಂದೆ ರಂಗೋಲಿ ಹಾಕುವುದರ ಹಿಂದಿರುವ ಕಾರಣಗಳೇನು? ಇಲ್ಲಿದೆ ವಿವರ.

ದೇವ-ದೇವತೆಗಳ ಕೃಪೆ ಪಡೆಯುವ ಸಂಕೇತ:

ಹಿಂದೂ ಸಂಪ್ರದಾಯದ ಪ್ರಕಾರ, ಮನೆಯ ಮುಖ್ಯ ದ್ವಾರವು ಹೊರಜಗತ್ತು ಮತ್ತು ಮನೆಯ ಪವಿತ್ರ ವಾತಾವರಣವನ್ನು ಸಂಪರ್ಕಿಸುವ ಸ್ಥಳವಾಗಿದೆ. ಪ್ರತಿದಿನ ಬೆಳಿಗ್ಗೆ ಅಂಗಳವನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕುವುದರಿಂದ ಮಹಾಲಕ್ಷ್ಮಿ ಹಾಗೂ ವಿಘ್ನನಿವಾರಕ ಗಣೇಶ ಮನೆಗೆ ಆಗಮಿಸುತ್ತಾರೆ ಎಂಬ ನಂಬಿಕೆಯಿದೆ. ವಿಶೇಷವಾಗಿ ದೀಪಾವಳಿ, ಸಂಕ್ರಾಂತಿ, ಯುಗಾದಿ ಮುಂತಾದ ಹಬ್ಬಗಳಲ್ಲಿ ಲಕ್ಷ್ಮಿಯ ಪಾದಚಿಹ್ನೆ, ಕಮಲದ ಹೂವು ಸೇರಿದಂತೆ ಶುಭ ಸಂಕೇತಗಳ ರಂಗೋಲಿ ಬಿಡಿಸುವುದು ಐಶ್ವರ್ಯ ಮತ್ತು ಅಭಿವೃದ್ಧಿಗೆ ಸಂಕೇತವೆಂದು ಪರಿಗಣಿಸಲಾಗುತ್ತದೆ.

ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ:

ಹಿಂದೂ ನಂಬಿಕೆಯ ಪ್ರಕಾರ, ಅಸ್ವಚ್ಛ ಮತ್ತು ಅಸ್ತವ್ಯಸ್ತ ವಾತಾವರಣವು ಅಶುಭ ಶಕ್ತಿಗಳನ್ನು ಆಕರ್ಷಿಸುತ್ತದೆ. ಸ್ವಚ್ಛವಾದ ಅಂಗಳದಲ್ಲಿ ಸುಂದರವಾಗಿ ಬಿಡಿಸಿದ ರಂಗೋಲಿ ಮನೆಯೊಳಗೆ ನಕಾರಾತ್ಮಕ ಶಕ್ತಿಗಳು ಪ್ರವೇಶಿಸದಂತೆ ರಕ್ಷಣಾ ಕವಚದಂತೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ.

ಜೀವನದ ಅನಿತ್ಯತೆಯನ್ನು ಸಾರುವ ಆಧ್ಯಾತ್ಮಿಕ ಸಂದೇಶ:

ರಂಗೋಲಿಯನ್ನು ಪ್ರತಿದಿನ ಹೊಸದಾಗಿ ಬಿಡಿಸಲಾಗುತ್ತದೆ. ಸಂಜೆ ಅಥವಾ ಮರುದಿನ ಅದನ್ನು ಅಳಿಸಿ ಮತ್ತೆ ಹೊಸ ರಂಗೋಲಿ ಹಾಕಲಾಗುತ್ತದೆ. ಈ ಆಚರಣೆಯು “ಜೀವನದಲ್ಲಿ ಯಾವುದೂ ಶಾಶ್ವತವಲ್ಲ” ಎಂಬ ಆಧ್ಯಾತ್ಮಿಕ ಸಂದೇಶವನ್ನು ನೀಡುತ್ತದೆ. ಸುಂದರ ಕ್ಷಣಗಳನ್ನು ಸವಿದು, ಅವುಗಳನ್ನು ಬಿಟ್ಟು ಮುಂದೆ ಸಾಗುವ ವೈರಾಗ್ಯದ ತತ್ವವನ್ನು ಇದು ನೆನಪಿಸುತ್ತದೆ.

ಜೀವಜಂತುಗಳ ಮೇಲಿನ ಕರುಣೆಯ ಸಂಕೇತ:

ಹಿಂದಿನ ಕಾಲದಲ್ಲಿ ರಂಗೋಲಿಯನ್ನು ಅಕ್ಕಿ ಹಿಟ್ಟು, ಅರಿಶಿನ ಮೊದಲಾದ ನೈಸರ್ಗಿಕ ವಸ್ತುಗಳಿಂದ ಬಿಡಿಸಲಾಗುತ್ತಿತ್ತು. ಇದರಿಂದ ಇರುವೆಗಳು, ಪಕ್ಷಿಗಳು ಹಾಗೂ ಸಣ್ಣ ಜೀವಿಗಳು ಆಹಾರವನ್ನು ಪಡೆಯುತ್ತಿದ್ದವು. ಇದು ಹಿಂದೂ ಧರ್ಮದ ‘ಭೂತ ಯಜ್ಞ’ ಪರಿಕಲ್ಪನೆಯೊಂದಿಗೆ ಸಂಬಂಧ ಹೊಂದಿದ್ದು, ಇತರ ಜೀವಿಗಳಿಗೆ ಅನ್ನದಾನ ಮಾಡುವ ಸಂದೇಶವನ್ನು ಸಾರುತ್ತದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಮಾನಸಿಕ ಶಾಂತಿ ಮತ್ತು ಏಕಾಗ್ರತೆ ಹೆಚ್ಚಿಸುತ್ತದೆ:

ಚುಕ್ಕೆಗಳನ್ನು ಸರಿಯಾಗಿ ಜೋಡಿಸಿ ಸಮತೋಲನದ ವಿನ್ಯಾಸವನ್ನು ಬಿಡಿಸಲು ಹೆಚ್ಚಿನ ಗಮನ ಅಗತ್ಯ. ಈ ಪ್ರಕ್ರಿಯೆಯು ಒಂದು ರೀತಿಯ ಸಕ್ರಿಯ ಧ್ಯಾನದಂತೆ ಕಾರ್ಯನಿರ್ವಹಿಸುತ್ತದೆ. ಇದರಿಂದ ಮನಸ್ಸು ಶಾಂತವಾಗುವುದರ ಜೊತೆಗೆ ಏಕಾಗ್ರತೆ ಮತ್ತು ಸಹನೆಯೂ ಹೆಚ್ಚುತ್ತದೆ.

ವಾಸ್ತು ಪ್ರಕಾರ ಸಕಾರಾತ್ಮಕ ಶಕ್ತಿಯ ಪ್ರವೇಶ:

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರದಿಂದಲೇ ಧನಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಆದ್ದರಿಂದ ಮುಖ್ಯದ್ವಾರದ ಮುಂದೆ ರಂಗೋಲಿ ಹಾಕುವುದರಿಂದ ಮನೆಗೆ ಶುಭಶಕ್ತಿ ಹೆಚ್ಚುತ್ತದೆ, ಮನೆಯ ಸದಸ್ಯರಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗುತ್ತದೆ ಹಾಗೂ ಮನೆಗೆ ಬರುವ ಅತಿಥಿಗಳ ಮೇಲೂ ಉತ್ತಮ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಇದೆ.

ರಂಗೋಲಿ ಎನ್ನುವುದು ಕೇವಲ ಅಲಂಕಾರಕ್ಕಾಗಿ ಮಾಡುವ ಕಲೆಯಲ್ಲ. ಅದು ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ, ಪ್ರಕೃತಿ ಪ್ರೇಮ ಮತ್ತು ಆರೋಗ್ಯಕರ ಜೀವನಶೈಲಿಯ ಸುಂದರ ಸಂಗಮವಾಗಿದೆ. ಪ್ರತಿದಿನ ಮನೆಯ ಅಂಗಳದಲ್ಲಿ ರಂಗೋಲಿ ಬಿಡಿಸುವುದು ನಮ್ಮ ಸಂಪ್ರದಾಯವನ್ನು ಉಳಿಸುವುದರ ಜೊತೆಗೆ, ಮನೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಿಸಲು ಸಹಕಾರಿಯಾಗುತ್ತದೆ. ಧಾರ್ಮಿಕ ನಂಬಿಕೆಗಳ ಜೊತೆಗೆ ಮಾನಸಿಕ ನೆಮ್ಮದಿ, ಏಕಾಗ್ರತೆ ಮತ್ತು ದೈಹಿಕ ಚಟುವಟಿಕೆಯನ್ನು ಉತ್ತೇಜಿಸುವ ಉತ್ತಮ ಅಭ್ಯಾಸವಾಗಿಯೂ ರಂಗೋಲಿಯನ್ನು ಪರಿಗಣಿಸಲಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:03 am, Thu, 6 August 26

Source link

Garuda Purana: ಧನಾತ್ಮಕ ಶಕ್ತಿ ಹಾಗೂ ಸಮೃದ್ಧಿಗಾಗಿ ಬೆಳಿಗ್ಗೆ ಮಾಡಬೇಕಾದ ಪ್ರಮುಖ ಕಾರ್ಯಗಳು – Kannada News | Garuda purana morning routine attract wealth and prosperity with daily positive habits

ನಿಮ್ಮ ದಿನವನ್ನು ಸಕಾರಾತ್ಮಕ ಮತ್ತು ಶಿಸ್ತಿನ ದಿನಚರಿಯೊಂದಿಗೆ ಪ್ರಾರಂಭಿಸುವುದರಿಂದ ಜೀವನದಲ್ಲಿ ಸಂಪತ್ತು, ಶಾಂತಿ ಹಾಗೂ ಸಮೃದ್ಧಿಯನ್ನು ಆಕರ್ಷಿಸಬಹುದು. ಬೆಳಿಗ್ಗೆ ಎದ್ದ ತಕ್ಷಣ ಕೆಲವು ಶುಭ ಕಾರ್ಯಗಳನ್ನು ಮಾಡುವುದರಿಂದ ದಿನವಿಡೀ ಧನಾತ್ಮಕ ಶಕ್ತಿ ನೆಲೆಸುತ್ತದೆ. ಹಿರಿಯರ ಪ್ರಕಾರ, ಶುಭ ಕಾರ್ಯಗಳೊಂದಿಗೆ ಆರಂಭವಾಗುವ ದಿನವು ನಮ್ಮ ಭವಿಷ್ಯದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ತರುತ್ತದೆ.

ದಿನದ ಸುಂದರ ಆರಂಭಕ್ಕಾಗಿ ಬೆಳಿಗ್ಗೆ ಬೇಗನೆ ಎದ್ದು, ಭೂತಾಯಿಗೆ ಧನ್ಯವಾದ ಅರ್ಪಿಸಿ ನೆಲವನ್ನು ಮುಟ್ಟುವುದು ಮತ್ತು ಸೂರ್ಯದೇವನಿಗೆ ನಮಸ್ಕರಿಸುವುದು ಅತ್ಯಂತ ಶ್ರೇಷ್ಠ. ಅದೇ ರೀತಿ, ಗರುಡ ಪುರಾಣದಲ್ಲೂ ಸಹ ಬೆಳಗಿನ ಜಾವ ಅನುಸರಿಸಬೇಕಾದ ಕೆಲವು ಮುಖ್ಯ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಇವುಗಳನ್ನು ದಿನನಿತ್ಯದ ಅಭ್ಯಾಸ ಮಾಡಿಕೊಂಡರೆ ಜೀವನದಲ್ಲಿ ನಿರಂತರ ಸಮೃದ್ಧಿ ನೆಲೆಸುತ್ತದೆ. ಆ ಪ್ರಮುಖ ಕಾರ್ಯಗಳ ವಿವರ ಇಲ್ಲಿದೆ.

ಬ್ರಹ್ಮ ಮುಹೂರ್ತದಲ್ಲಿ ಜಾಗರಣೆ ಹಾಗೂ ಸ್ನಾನ:

ಗರುಡ ಪುರಾಣದ ಪ್ರಕಾರ, ಪ್ರತಿದಿನ ಸೂರ್ಯೋದಯಕ್ಕೆ ಮುಂಚಿತವಾಗಿ ಬ್ರಹ್ಮ ಮುಹೂರ್ತದಲ್ಲಿ ಎಚ್ಚರಗೊಂಡು ಸ್ನಾನ ಮಾಡುವುದು ಅತ್ಯಂತ ಮಂಗಳಕರ. ಮುಂಜಾನೆಯೇ ಸ್ನಾನ ಮಾಡುವ ವ್ಯಕ್ತಿಯು ದಿನವಿಡೀ ಉತ್ಸಾಹ ಮತ್ತು ಶಕ್ತಿಯಿಂದ ತುಂಬಿರುತ್ತಾನೆ. ಬ್ರಹ್ಮ ಮುಹೂರ್ತದ ಸ್ನಾನವು ದೈಹಿಕ ಶುದ್ಧತೆಯನ್ನು ಕಾಯ್ದುಕೊಳ್ಳುವುದಲ್ಲದೆ, ಮನಸ್ಸನ್ನು ಪವಿತ್ರಗೊಳಿಸುತ್ತದೆ. ಇದು ನಕಾರಾತ್ಮಕತೆಯನ್ನು ಹಾಗೂ ಪಾಪಗಳನ್ನು ನಾಶಪಡಿಸಿ, ಬಡತನವನ್ನು ನಿವಾರಿಸಲು ಮತ್ತು ಆರ್ಥಿಕ ಯೋಗಕ್ಷೇಮವನ್ನು ಸುಧಾರಿಸಲು ನೆರವಾಗುತ್ತದೆ.

ಪೂಜಾಗೃಹದಲ್ಲಿ ದೀಪ ಬೆಳಗಿಸುವುದು:

ಬೆಳಿಗ್ಗೆ ಸ್ನಾನ ಮುಗಿಸಿದ ನಂತರ ಮನೆಯ ದೇವಸ್ಥಾನದಲ್ಲಿ ಅಥವಾ ಪೂಜಾಗೃಹದಲ್ಲಿ ದೀಪ ಹಚ್ಚುವುದು ಲಕ್ಷ್ಮೀದೇವಿಯ ಕೃಪೆಗೆ ಕಾರಣವಾಗುತ್ತದೆ. ದೇವರನ್ನು ಪ್ರಸನ್ನಗೊಳಿಸಲು ಮತ್ತು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ದೂರಮಾಡಲು ಇದು ಅತ್ಯಂತ ಸುಲಭವಾದ ಮಾರ್ಗವಾಗಿದೆ. ಮುಂಜಾನೆ ನಿಯಮಿತವಾಗಿ ದೀಪ ಬೆಳಗಿಸುವ ಮನೆಯಲ್ಲಿ ದರಿದ್ರತೆ ದೂರವಾಗಿ, ದುಃಖಗಳಿಂದ ಪರಿಹಾರ ಸಿಗುತ್ತದೆ ಹಾಗೂ ಉತ್ತಮ ಆರ್ಥಿಕ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಮಂತ್ರ ಪಠಣೆ ಮತ್ತು ಪವಿತ್ರ ನಾಮಸ್ಮರಣೆ:

ಸ್ನಾನ ಹಾಗೂ ದೀಪಾರಾಧನೆಯ ನಂತರ ತಮ್ಮ ಇಷ್ಟದೇವತೆಯ ಮಂತ್ರಗಳನ್ನು ಅಥವಾ ಶ್ಲೋಕಗಳನ್ನು ಪಠಿಸುವುದು ಮನಸ್ಸಿಗೆ ಅಪಾರವಾದ ಶಾಂತಿಯನ್ನು ನೀಡುತ್ತದೆ. ಗರುಡ ಪುರಾಣದ ಪ್ರಕಾರ, ಮುಂಜಾನೆ ಮಂತ್ರ ಪಠಣೆ ಮಾಡುವ ವ್ಯಕ್ತಿಯು ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಪಡೆಯುತ್ತಾನೆ. ಈ ಅಭ್ಯಾಸವು ವ್ಯಕ್ತಿಗೆ ದೈವಿಕ ರಕ್ಷಣೆ ಮತ್ತು ಆಶೀರ್ವಾದವನ್ನು ತರುವುದಲ್ಲದೆ, ಜೀವನದಲ್ಲಿ ಸುಖ-ಸಮೃದ್ಧಿಯನ್ನು ಆಕರ್ಷಿಸುವ ಶಕ್ತಿಯನ್ನು ಹೊಂದಿದೆ.

ದಿನದ ಆರಂಭದಲ್ಲೇ ಈ ಸಣ್ಣ ಆದರೆ ಅತ್ಯಂತ ಪ್ರಭಾವಶಾಲಿ ನಿಯಮಗಳನ್ನು ಪಾಲಿಸುವುದರಿಂದ ಪ್ರತಿಯೊಬ್ಬರೂ ತಮ್ಮ ಜೀವನದ ತೊಂದರೆಗಳಿಂದ ಮುಕ್ತಿ ಪಡೆಯಬಹುದು. ಈ ಧನಾತ್ಮಕ ದಿನಚರಿಯು ದೈವಿಕ ಆಶೀರ್ವಾದವನ್ನು ಕಾಯ್ದುಕೊಳ್ಳಲು ಮತ್ತು ಯಶಸ್ಸಿನತ್ತ ಸಾಗಲು ಮಾರ್ಗದರ್ಶನ ನೀಡುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

TV9 Kannada News Live: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಸ್ವಸಹಾಯ ಸಂಘದ ಹೆಸರಲ್ಲಿ ಬಡ ಮಹಿಳೆಯರಿಗೆ ಲಕ್ಷ ಲಕ್ಷ ವಂಚನೆ – Kannada News | TV9 Kannada Live Breaking News 6 August 2026 Karnataka SIR, Cabinet Reshuffle Cauvery Water issues Karnataka News Latest Updates Online

Breaking News Today Live Updates in Kannada: ನಟ ದರ್ಶನ್ ಅಂಡ್ ಗ್ಯಾಂಗ್ ಒಳಗೊಂಡಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇದೀಗ ಭಾರಿ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ 14ನೇ ಆರೋಪಿ (A-14) ಪ್ರದೋಷ್, ಪ್ರಕರಣದಲ್ಲಿ ಸತ್ಯ ಹೇಳುವುದಾಗಿ ತಿಳಿಸಿ ತಮ್ಮನ್ನು ‘ಮಾಫಿ ಸಾಕ್ಷಿ’ (Approver) ಯನ್ನಾಗಿ ಪರಿಗಣಿಸಿ ಕ್ಷಮೆ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇನ್ನು ರಾಯಚೂರು ಜಿಲ್ಲಾ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಗದಗ ನಗರದ ಬಳಗಾನೂರು ರಸ್ತೆಯಲ್ಲಿರುವ ಕಸ ನಿರ್ವಹಣಾ ಘಟಕಕ್ಕೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಪಣೀಂದ್ರ ಅವರು ಬೆಳ್ಳಂಬೆಳಗ್ಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ವಸಹಾಯ ಸಂಘದ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಲೋನ್ ಕೊಡಿಸುವುದಾಗಿ ನಂಬಿಸಿ ಬಡ ಮಹಿಳೆಯರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಹೊಸಕೋಟೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಬೆಳಕಿಗೆ ಬಂದಿದೆ. ಬೀದರ್ ತಾಲೂಕಿನ ಮಮದಾಪುರದಿಂದ ಮರಕಲ್‌ವರೆಗಿನ 5 ಕಿಲೋಮೀಟರ್ ರಸ್ತೆ ಕಾಮಗಾರಿಯನ್ನು ಅರ್ಧಕ್ಕೆ ಬಿಟ್ಟು ಗುತ್ತಿಗೆದಾರ ಪಲಾಯನ ಮಾಡಿದ್ದು, ಸಾರ್ವಜನಿಕರು ಹಾಗೂ ರೈತರು ನಿತ್ಯ ಪರದಾಡುವಂತಾಗಿದೆ. ಸ್ವಸಹಾಯ ಸಂಘದ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಲೋನ್ ಕೊಡಿಸುವುದಾಗಿ ನಂಬಿಸಿ ಬಡ ಮಹಿಳೆಯರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಹೊಸಕೋಟೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಬೆಳಕಿಗೆ ಬಂದಿದೆ. ಗದಗ ನಗರದ ಬಳಗಾನೂರು ರಸ್ತೆಯಲ್ಲಿರುವ ಕಸ ನಿರ್ವಹಣಾ ಘಟಕಕ್ಕೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಪಣೀಂದ್ರ ಅವರು ಬೆಳ್ಳಂಬೆಳಗ್ಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

Source link

ಭಲೇ ಬಟ್ಲರ್… ವಿಶ್ವ ದಾಖಲೆಯೇ ಧೂಳೀಪಟ! – Kannada News | Jos Buttler Creates New World Record in T20 Cricket

Jos Buttler World Record: ಇಂಗ್ಲೆಂಡ್ ತಂಡದ ಬ್ಯಾಟರ್ ಜೋಸ್ ಬಟ್ಲರ್, ವೆಸ್ಟ್ ಇಂಡೀಸ್‌ನ ದಿಗ್ಗಜ ಕೀರನ್ ಪೊಲಾರ್ಡ್​ ಅವರ ವಿಶ್ವದಾಖಲೆಯನ್ನು ಧೂಳೀಪಟ ಮಾಡಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.

ಭಲೇ ಬಟ್ಲರ್... ವಿಶ್ವ ದಾಖಲೆಯೇ ಧೂಳೀಪಟ!

Jos ButtlerImage Credit source: GettyImages



ಝಾಹಿರ್ ಯೂಸುಫ್
|

Updated on: Aug 06, 2026 | 9:26 AM

Share




Source link

‘ಶಾಂತಿ ಕ್ರಾಂತಿ’ ರೀ-ರಿಲೀಸ್ ಬಗ್ಗೆ ರವಿಚಂದ್ರನ್ ಮಗನಿಂದು ಸಿಕ್ತು ಅಪ್​​ಡೇಟ್ – Kannada News | Shanti Kranti Re Release: Ravichandran Son Vikram Shares Major Update

1991ರಲ್ಲಿ ರಿಲೀಸ್ ಆಗಿದ್ದ ‘ಶಾಂತಿ ಕ್ರಾಂತಿ’ ಸಿನಿಮಾ ದೊಡ್ಡ ಬಜೆಟ್​​ನಲ್ಲಿ ಸಿದ್ಧವಾಗಿತ್ತು. ಆದರೆ, ಅಂದುಕೊಂಡಂತೆ ಸಿನಿಮಾ ಕಮಾಲ್ ಮಾಡಲಿಲ್ಲ. ಆಗಿನ ಕಾಲದಲ್ಲೇ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಿನಿಮಾ ಸಿದ್ಧಪಡಿಸಲಾಗಿತ್ತು. ರವಿಚಂದ್ರನ್ (Ravichandran) ನಟಿಸಿ, ನಿರ್ದೇಶಿಸಿ, ನಿರ್ಮಿಸಿದ್ದ ಈ ಚಿತ್ರವನ್ನು ಈಗ ರೀ ರಿಲೀಸ್ ಮಾಡುವ ಆಗ್ರಹ ಕೇಳಿ ಬರುತ್ತಿದೆ. ಇದಕ್ಕೆ ರವಿಚಂದ್ರನ್ ಅವರ ಮಗ ಉತ್ತರಿಸಿದ್ದಾರೆ.

ರವಿಚಂದ್ರನ್ ಅವರಿಗೆ ಸಿನಿಮಾ ಬಗ್ಗೆ ಅಪಾರ ಪ್ರೇಮ. ಈ ಪ್ರೇಮದ ಕಾರಣಕ್ಕೆ ಆಗಿನ ಕಾಲದಲ್ಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮಾಡಿದ್ದರು. ಆದರೆ, ‘ಶಾಂತಿ ಕ್ರಾಂತಿ’ ಅಂದುಕೊಂಡಂತೆ ಕಮಾಯಿ ಮಾಡಲೇ ಇಲ್ಲ. ಈ ಚಿತ್ರ ಅಂದು ಸೋತಿತ್ತು. 10 ಕೋಟಿ ರೂಪಾಯಿ ಬಜೆಟ್​​ನಲ್ಲಿ ಸಿದ್ಧವಾಗಿದ್ದ ಈ ಚಿತ್ರವನ್ನು ‘ನಾವು ಗೆಲ್ಲಿಸುತ್ತೇವೆ ರಿಲೀಸ್ ಮಾಡಿ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಬೇಡಿಕೆ ಬರುತ್ತಿದೆ.
ಈ ಬಗ್ಗೆ ರವಿಚಂದ್ರನ್ ಮಗ ವಿಕ್ರಮ್ ಮಾತನಾಡಿದ್ದಾರೆ.

‘ಶಾಂತಿ ಕ್ರಾಂತಿ ಸಿನಿಮಾ ರೀ-ರಿಲೀಸ್ ಮಾಡುವಂತೆ ತುಂಬಾ ಜನ ತಂದೆ ಬಳಿ ಕೇಳಿದ್ದಾರೆ. ಇವತ್ತು ನಾನು ಡ್ಯಾಡಿ ಅದರ ಬಗ್ಗೆ ಚರ್ಚೆ ಮಾಡಿದ್ದೇವೆ. ಅದರ ಬಗ್ಗೆ ಒಂದು ಮಾತುಕತೆ ನಡೀತಾ ಇದೆ. ನಮ್ಮ ಅಣ್ಣ ಮನು ಈ ಸಿನಿಮಾನ ರೀ ರೀಲೀಸ್ ಮಾಡಬೇಕು ಅಂತ ಆಸೆ ಪಟ್ಟರು’ ಎಂದರು ವಿಕ್ರಮ್.

‘ಇಷ್ಟೊಂದು ಜನ ಆಸೆ ಪಡ್ತಾ ಇದ್ದಾರೆ, ನೋಡು ಏನು ಮಾಡ್ತೀಯಾ ಅಂದ್ರು. ಆ ಗ್ರೀನ್ ಸಿಗ್ನಲ್ ನನಗೆ ಬಂದಿದೆ. ಇವತ್ತು ಶುರು ಮಾಡಿದ್ದೀನಿ ಅದರ ಬಗ್ಗೆ. ಎಲ್ಲಾ ಏನು ಪಾಸಿಟಿವ್ಸ್ ಏನಿದೆ, ಹೆಂಗೆ ಆಗುತ್ತೆ, ಯಾವ ತರ ಆಗುತ್ತೆ ನೋಡೋಣ’ ಎಂದಿದ್ದಾರೆ ವಿಕ್ರಮ್.

ಇದನ್ನೂ ಓದಿ: ‘ಶಾಂತಿ ಕ್ರಾಂತಿ’ ಸಿನಿಮಾದಿಂದ ಆದ ಸಾಲ ತೀರಿಸಲು ರವಿಚಂದ್ರನ್​​ಗೆ ಹಿಡಿದಿತ್ತು 15 ವರ್ಷ

‘ಸೆಪ್ಟೆಂಬರ್ 19, 1991ರಲ್ಲಿ ಆ ಸಿನಿಮಾ ರಿಲೀಸ್ ಆಯ್ತು. ಅದರ ಬಗ್ಗೆ ತುಂಬಾ ವಿಷಯ ಆಡಿಯನ್ಸ್ ಮಾತಾಡ್ತಾ ಇದ್ದಾರೆ. ಆ ಸಿನಿಮಾ 10 ಕೋಟಿ ಅಲ್ಲ, 10 ಕೋಟಿಗಿಂತ ಜಾಸ್ತಿ ಖರ್ಚಾಗಿದೆ’ ಎಂಬ ಮಾಹಿತಿ ನೀಡಿದರು.

ಪ್ರಶ್ನೆ: ಶಾಂತಿ ಕ್ರಾಂತಿ ರಿಲೀಸ್ ಆಗಿದ್ದು ಯಾವಾಗ?
ಉತ್ತರ:
ಸೆಪ್ಟೆಂಬರ್ 19, 1991

ಪ್ರಶ್ನೆ:ಶಾಂತಿ ಕ್ರಾಂತಿ ಸಿನಿಮಾ ಬಜೆಟ್ ಎಷ್ಟು?
ಉತ್ತರ:
10 ಕೋಟಿ ರೂಪಾಯಿ

ಪ್ರಶ್ನೆ: ಶಾಂತಿ ಕ್ರಾಂತಿ ನಿರ್ದೇಶಕರು ಯಾರು?
ಉತ್ತರ: 
ರವಿಚಂದ್ರನ್

Source link

ಬಿಸಿಸಿಐ ಸಭೆ ಮುಂದೂಡಿಕೆಗೆ ಇದುವೇ ಅಸಲಿ ಕಾರಣ! – Kannada News | BCCI Review Delayed by Shock Twist After England Disaster

ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿ ಭಾರತೀಯ ಕ್ರಿಕೆಟ್ ತಂಡದ ಹೀನಾಯ ಪ್ರದರ್ಶನದ ಬೆನ್ನಲ್ಲೇ, ಟೀಮ್ ಇಂಡಿಯಾದ ಕೋರ್ ಕಮಿಟಿ ಜೊತೆ ಬಿಸಿಸಿಐ (BCCI) ನಡೆಸಬೇಕಿದ್ದ ಮಹತ್ವದ ಪರಾಮರ್ಶನಾ ಸಭೆಯು ಕೊನೆ ಕ್ಷಣದಲ್ಲಿ ಮುಂದೂಡಲ್ಪಟ್ಟಿದೆ. ಸಭೆ ಮುಂದೂಡಲು ಕಾರಣವಾಗಿರುವ ಆಂತರಿಕ ಬೆಳವಣಿಗೆಯೇ ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸಭೆ ಮುಂದೂಡಿಕೆಗೆ ಕಾರಣವೇನು?

ಟೀಮ್ ಇಂಡಿಯಾ ತನ್ನ ಇತ್ತೀಚಿನ ಪ್ರವಾಸದಲ್ಲಿ ಆಡಿದ 10 ಪಂದ್ಯಗಳ ಪೈಕಿ 8 ರಲ್ಲಿ ಸೋತು ತೀವ್ರ ಮುಖಭಂಗ ಅನುಭವಿಸಿತ್ತು. ಇದರ ಬೆನ್ನಲ್ಲೇ ತಂಡದ ಪ್ರದರ್ಶನದ ತನಿಖೆ ನಡೆಸಿ ‘ಕೋರ್ಸ್ ಕರೆಕ್ಷನ್’ (ತಪ್ಪುಗಳ ತಿದ್ದುಪಡಿ) ಮಾಡಲು ಬಿಸಿಸಿಐ ಆಗಸ್ಟ್ ಮೊದಲ ವಾರದಲ್ಲಿ ಹೈ-ಲೆವೆಲ್ ಸಭೆಯೊಂದನ್ನು ಆಯೋಜಿಸಿತ್ತು.

ಆದರೆ, ಈ ಇಡೀ ವಿಮರ್ಶೆಯ ನೇತೃತ್ವ ವಹಿಸಬೇಕಿದ್ದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಇದ್ದಕ್ಕಿದ್ದಂತೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಕಾರ್ಯದರ್ಶಿಗಳ ಆರೋಗ್ಯ ಕೈಕೊಟ್ಟಿರುವುದರಿಂದ ಬಿಸಿಸಿಐ ಈ ಸಭೆಯನ್ನು ಅಧಿಕೃತವಾಗಿ ಮುಂದೂಡಬೇಕಾಗಿ ಬಂದಿದೆ.

ಪರಾಮರ್ಶನಾ ಸಭೆ ಯಾಕೆ?

ಟಿ20 ವಿಶ್ವಕಪ್ ಗೆದ್ದು ಬೀಗುತ್ತಿದ್ದ ಭಾರತ ತಂಡಕ್ಕೆ ಹೊಸ ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಐರ್ಲೆಂಡ್ ವಿರುದ್ಧ 2-0 ಅಂತರದ ಕ್ಲೀನ್ ಸ್ವೀಪ್ ಸೋಲು ಎದುರಾಗಿತ್ತು. ಅದಾದ ಬಳಿಕ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ 4-0 ಅಂತರದಿಂದ ಮುಖಭಂಗ ಅನುಭವಿಸಿದ ಟೀಮ್ ಇಂಡಿಯಾ (ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು), ನಂತರ ನಡೆದ ಏಕದಿನ ಸರಣಿಯಲ್ಲೂ 2-1 ಅಂತರದಿಂದ ಸೋಲೊಪ್ಪಿಕೊಂಡಿತು.

ಸೂರ್ಯಕುಮಾರ್ ಯಾದವ್ ಬದಲಿಗೆ ಶ್ರೇಯಸ್ ಅಯ್ಯರ್ ಅವರನ್ನು ಟಿ20 ನಾಯಕನನ್ನಾಗಿ ಮಾಡಿದ ಬಿಸಿಸಿಐ ನಿರ್ಧಾರ ಆರಂಭದಲ್ಲೇ ತಲೆಕೆಳಗಾಗಿದೆ. ಅಯ್ಯರ್ ನೇತೃತ್ವದಲ್ಲಿ ಭಾರತ ಸತತ ಪಂದ್ಯಗಳನ್ನು ಸೋತಿರುವುದು ಬಿಸಿಸಿಐ ಚಿಂತೆಗೆ ಕಾರಣವಾಗಿದೆ.

ಹಾಗೆಯೇ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ವಿರುದ್ಧ ಕೂಡ ಕೆಲ ಆಟಗಾರರು ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಬಿಸಿಸಿಐ ಮಹತ್ವದ ಪರಾಮರ್ಶನಾ ಸಭೆಯನ್ನು ಕರೆದಿದೆ.

ಸಭೆಯಲ್ಲಿ ಚರ್ಚಿಸಲಿರುವ ಪ್ರಮುಖ ಅಂಶಗಳು:

ಮರುನಿಗದಿಯಾಗಲಿರುವ ಮುಂದಿನ ಸಭೆಯಲ್ಲಿ ಬಿಸಿಸಿಐ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ. ಅದರಲ್ಲೂ ಟೀಮ್ ಇಂಡಿಯಾ ಕೋಚ್ ಹಾಗೂ ನಾಯಕರುಗಳಿಂದ ಸ್ಪಷ್ಟನೆ ಕೇಳಲಿದ್ದಾರೆ.

ಗಂಭೀರ್ ಭಾಗಿ: ಭಾರತ ತಂಡವು ಈಗಾಗಲೇ ಆಗಸ್ಟ್ 15 ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ತಲುಪಿದೆ. ಹೀಗಾಗಿ ಮುಖ್ಯ ಕೋಚ್ ಗೌತಮ್ ಗಂಭೀರ್ ಈ ಸಭೆಗೆ ಆನ್‌ಲೈನ್ (ವರ್ಚುವಲ್) ಮೂಲಕ ಹಾಜರಾಗಲಿದ್ದಾರೆ.

ಆಯ್ಕೆ ಪ್ರಕ್ರಿಯೆಯ ಗೊಂದಲ: ಸರಣಿಯುದ್ದಕ್ಕೂ ಪ್ರಮುಖ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಬೆಂಚ್ ಕಾಯಿಸಿದ ನಿರ್ಧಾರ ಮತ್ತು ನಂ.8 ರವರೆಗೆ ಬ್ಯಾಟಿಂಗ್ ಆಳ ಇಟ್ಟುಕೊಳ್ಳುವ ಗಂಭೀರ್ ಅವರ ತಂತ್ರಗಾರಿಕೆಯ ಬಗ್ಗೆ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರನ್ನು ಬಿಸಿಸಿಐ ಪ್ರಶ್ನಿಸಲಿದೆ.

ರೋಹಿತ್ ಶರ್ಮಾ ಭವಿಷ್ಯದ ಲೀಕ್ ವಿವಾದ: ನಾಯಕ ರೋಹಿತ್ ಶರ್ಮಾ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಭವಿಷ್ಯಕ್ಕೆ ಸಂಬಂಧಿಸಿದ ಆಂತರಿಕ ಮಾಹಿತಿ ಮಾಧ್ಯಮಗಳಿಗೆ ಲೀಕ್ ಆಗಿರುವ ಬಗ್ಗೆಯೂ ಬಿಸಿಸಿಐ ತನಿಖೆ ನಡೆಸಲಿದೆ.

ಇದನ್ನೂ ಓದಿ: ಕ್ರಿಸ್ಟಿಯಾನೊ ರೊನಾಲ್ಡೊ ಮದುವೆಗೆ ಡೇಟ್ ಫಿಕ್ಸ್​!

ಬಿಸಿಸಿಐ ಹೇಳುವುದೇನು?

ಈ ಸಭೆಯು ಕೇವಲ ತಂಡದ ಕ್ರಿಕೆಟ್ ಪ್ರದರ್ಶನ ಮತ್ತು ತಪ್ಪುಗಳ ಸುಧಾರಣೆಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ದೇವಜಿತ್ ಸೈಕಿಯಾ ಸ್ಪಷ್ಟಪಡಿಸಿದ್ದಾರೆ. ಯಾವುದೇ ಆತುರದ ಅಥವಾ ಭಾವನಾತ್ಮಕ ನಿರ್ಧಾರಗಳನ್ನು ಬೋರ್ಡ್ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಲಾಗಿದ್ದು, ಗೌತಮ್ ಗಂಭೀರ್ ಅವರ ಕೋಚ್ ಹುದ್ದೆಯ ಒಪ್ಪಂದ 2027ರ ವಿಶ್ವಕಪ್ ವರೆಗೆ ಸುರಕ್ಷಿತವಾಗಿದೆ ಎಂದು ಬಿಸಿಸಿಐ ಮೂಲಗಳು ಖಚಿತಪಡಿಸಿವೆ.

Source link

ಕ್ರಿಸ್ಟಿಯಾನೊ ರೊನಾಲ್ಡೊ ಮದುವೆಗೆ ಡೇಟ್ ಫಿಕ್ಸ್​! – Kannada News | Cristiano Ronaldo Wedding Date

ಫುಟ್‌ಬಾಲ್ ಜಗತ್ತಿನ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಅವರ ಪ್ರೇಯಸಿ ಜಾರ್ಜಿನಾ ರೋಡ್ರಿಗಸ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಆಗಸ್ಟ್ 2025 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಈಗ ಅಧಿಕೃತವಾಗಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡುತ್ತಿವೆ.

ಮದುವೆಗೆ ಡೇಟ್ ಫಿಕ್ಸ್​!

ಬ್ರಿಟಿಷ್ ಸುದ್ದಿ ಸಂಸ್ಥೆ ‘The Sun’ ವರದಿ ಮಾಡಿರುವ ಪ್ರಕಾರ, ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಜಾರ್ಜಿನಾ ರೋಡ್ರಿಗಸ್ ಜೋಡಿಯು ಆಗಸ್ಟ್ 8, 2026 ರಂದು ವಿವಾಹವಾಗಲಿದ್ದಾರೆ.

ಮದುವೆ ನಡೆಯುವುದು ಎಲ್ಲಿ?

ಕ್ರಿಸ್ಟಿಯಾನೊ ರೊನಾಲ್ಡೊ ಅವರ ತಾಯ್ನಾಡಾದ ಪೋರ್ಚುಗಲ್‌ನ ಮಾಡೈರಾ ದ್ವೀಪದಲ್ಲಿರುವ ಐತಿಹಾಸಿಕ ಫುಂಚಾಲ್ ಕ್ಯಾಥೆಡ್ರಲ್ ಚರ್ಚ್‌ನಲ್ಲಿ ಧಾರ್ಮಿಕ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ವರದಿಯಾಗಿದೆ.

ಐಷಾರಾಮಿ ಹೋಟೆಲ್ ಬುಕ್ಕಿಂಗ್:

ಮದುವೆಯ ನಂತರದ ಭರ್ಜರಿ ರಿಸೆಪ್ಷನ್ ಪಾರ್ಟಿಗಾಗಿ ಅಲ್ಲಿನ ಪ್ರಸಿದ್ಧ 5-ಸ್ಟಾರ್ ಹೋಟೆಲ್ ಆದ ಸವಾಯ್ ಪ್ಯಾಲೇಸ್​ನ ಹಲವು ಫ್ಲೋರ್‌ಗಳನ್ನು ಮತ್ತು ಬಾರ್ ಏರಿಯಾಗಳನ್ನು ಈಗಾಗಲೇ ಕಾಯ್ದಿರಿಸಲಾಗಿದೆ ಎಂಬ ಸುದ್ದಿಯಿದೆ.

10 ವರ್ಷಗಳ ಬಳಿಕ ಮದುವೆ!

ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಜಾರ್ಜಿನಾ ರೋಡ್ರಿಗಸ್ ಮೊದಲ ಬಾರಿಗೆ ಭೇಟಿಯಾಗಿದ್ದು 2016 ರಲ್ಲಿ. ಜಾರ್ಜಿನಾ  ಮ್ಯಾಡ್ರಿಡ್‌ನ ಪ್ರತಿಷ್ಠಿತ ‘ಗುಸ್ಸಿ’ ಐಷಾರಾಮಿ ಬಟ್ಟೆ ಮಳಿಗೆಯಲ್ಲಿ ಸಾಮಾನ್ಯ ಸೇಲ್ಸ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಶಾಪ್​ಗೆ ಆಗಮಿಸಿದ್ದ ರೊನಾಲ್ಡೊ ಅವರಿಗೆ ಜಾರ್ಜಿನಾ ಪರಿಚಯವಾಗಿದ್ದರು. ಇದಾದ ಬಳಿಕ ಇಬ್ಬರ ನಡುವೆ ಫ್ರೆಂಡ್​ಶಿಪ್ ಬೆಳೆಯಿತು.  ಇದರ ಬೆನ್ನಲ್ಲೇ ಇಬ್ಬರು ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.

ಜನವರಿ 2017 ರಲ್ಲಿ ಜ್ಯೂರಿಚ್‌ನಲ್ಲಿ ನಡೆದ ಪ್ರತಿಷ್ಠಿತ ‘ಬೆಸ್ಟ್ ಫಿಫಾ ಫುಟ್‌ಬಾಲ್ ಅವಾರ್ಡ್ಸ್’ ರೆಡ್ ಕಾರ್ಪೆಟ್ ಮೇಲೆ ರೊನಾಲ್ಡೊ ಮತ್ತು ಜಾರ್ಜಿನಾ ಜೋಡಿಯಾಗಿ ಒಟ್ಟಿಗೆ ಹೆಜ್ಜೆ ಹಾಕುವ ಮೂಲಕ ತಮ್ಮ ಸಂಬಂಧವನ್ನು ಜಗತ್ತಿನ ಮುಂದೆ ಅಧಿಕೃತಗೊಳಿಸಿದರು.

ಇದನ್ನೂ ಓದಿ: 3 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಪಾಕಿಸ್ತಾನ್!

ಕಳೆದ ಸುಮಾರು ಹತ್ತು ವರ್ಷಗಳಿಂದ ಅತ್ಯಂತ ಬಲವಾದ ಸಂಬಂಧವನ್ನು ಕಾಯ್ದುಕೊಂಡಿರುವ ಈ ಜೋಡಿಗೆ ಈಗಾಗಲೇ ಇಬ್ಬರು ಜಂಟಿ ಮಕ್ಕಳಿದ್ದಾರೆ (ಒಟ್ಟು ಐದು ಮಕ್ಕಳ ಕುಟುಂಬ). ಇದೀಗ ದೀರ್ಘಾವಧಿಯ ಪ್ರೇಮ ಪ್ರಯಾಣದ ಬಳಿಕ, ಈ ಜೋಡಿಯು ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದೆ.

Published On – 8:43 am, Thu, 6 August 26

Source link

ಟ್ರಂಪ್ ಸರ್ಕಾರದಿಂದ 100 ಬಿಲಿಯನ್ ಡಾಲರ್ ಸುಂಕ ಮರುಪಾವತಿ: ಭಾರತೀಯ ಕಂಪನಿಗಳಿಗೂ ಲಾಭ – Kannada News | Trump Tariffs Refund: US Court Orders 100Billion Dollar Payback; Indian Firms to Benefit

ವಾಷಿಂಗ್ಟನ್ , ಆಗಸ್ಟ್ 06: ಡೊನಾಲ್ಡ್ ಟ್ರಂಪ್(Donald Trump) ಆಡಳಿತವು ವಿದೇಶಿ ಆಮದುಗಳ ಮೇಲೆ ವಿಧಿಸಿದ್ದ ಹೆಚ್ಚುವರಿ ಆಮದು ಸುಂಕಗಳನ್ನು (Import Tariffs) ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬೆನ್ನಲ್ಲೇ, ಯುಎಸ್ ಸರ್ಕಾರವು ಕಂಪನಿಗಳಿಗೆ 100 ಶತಕೋಟಿ ಡಾಲರ್ ಮರುಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಅಮೆರಿಕ ಸುಪ್ರೀಂ ಕೋರ್ಟ್ ಟ್ರಂಪ್ ಅವರ ಸುಂಕ ನೀತಿಯನ್ನು ‘ಕಾನೂನುಬಾಹಿರ’ ಎಂದು ಘೋಷಿಸಿದ್ದು, ಒಟ್ಟು 166 ಬಿಲಿಯನ್ ಡಾಲರ್ ಧನಸಹಾಯ ಮತ್ತು ಮರುಪಾವತಿ ನೀಡುವಂತೆ ಆದೇಶಿಸಿದೆ. ಜುಲೈ ಅಂತ್ಯದ ವೇಳೆಗೆ ಮೊದಲ ಕಂತಿನ ಮರುಪಾವತಿ ಕಂಪನಿಗಳ ಬ್ಯಾಂಕ್ ಖಾತೆಗಳನ್ನು ತಲುಪಿದೆ.

ಆಪಲ್ ಮತ್ತು ಅಮೆಜಾನ್‌ಗೆ ಬಿಲಿಯನ್‌ಗಟ್ಟಲೆ ಮರುಪಾವತಿ: ಟೆಕ್ ದೈತ್ಯ ಆಪಲ್ 2.2 ಬಿಲಿಯನ್ ಡಾಲರ್ ಹಾಗೂ ಅಮೆಜಾನ್ (Amazon) ಸುಮಾರು 600 ಮಿಲಿಯನ್ ಡಾಲರ್ ಮರುಪಾವತಿ ಪಡೆದಿವೆ. ಅಮೆಜಾನ್ ಈ ಹಣವನ್ನು ಗ್ರಾಹಕರಿಗೆ ಹಿಂತಿರುಗಿಸುವುದಾಗಿ ಹೇಳಿದ್ದರೆ, ಆಪಲ್ ಅಮೆರಿಕದಲ್ಲೇ ಉತ್ಪಾದನೆ ವಿಸ್ತರಿಸಲು ಬಳಸುವುದಾಗಿ ತಿಳಿಸಿದೆ.

ವಾಲ್ಮಾರ್ಟ್ (Walmart), ಕಾಸ್ಟ್ಕೊ (Costco) ಹಾಗೂ ಪೆಪ್ಸಿ (Pepsi) ಕಂಪನಿಗಳು ಈ ಮರುಪಾವತಿ ಹಣದಿಂದ ಉತ್ಪನ್ನಗಳ ಬೆಲೆಗಳನ್ನು ಇಳಿಕೆ ಮಾಡಲು ಹಾಗೂ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳನ್ನು ಸರಿದೂಗಿಸಲು ನಿರ್ಧರಿಸಿವೆ.

ಭಾರತೀಯ ಕಂಪನಿಗಳಿಗೆ ಸಿಗಲಿದೆಯೇ ಲಾಭ?
10 ರಿಂದ 12 ಬಿಲಿಯನ್ ಡಾಲರ್ ಸರಕುಗಳ ಮೇಲಿನ ಸುಂಕ ಹಿಂಪಡೆತ: ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ (GTRI) ವರದಿಯ ಪ್ರಕಾರ, ಸುಂಕ ಜಾರಿಯಲ್ಲಿದ್ದಾಗ ಭಾರತದಿಂದ ಅಮೆರಿಕಕ್ಕೆ ರಫ್ತಾದ ಸುಮಾರು 166 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳ ಪೈಕಿ 10 ರಿಂದ 12 ಬಿಲಿಯನ್ ಡಾಲರ್ ಮೌಲ್ಯದ ರಫ್ತುಗಳಿಗೆ ಈ ನಿರ್ಧಾರ ಅನ್ವಯಿಸಲಿದೆ.

ಮತ್ತಷ್ಟು ಒದಿ:

ಇರಾನ್ ಜತೆ ಮತ್ತೆ ಶಾಂತಿ ಮಾತುಕತೆ, ದಾಳಿ ರದ್ದು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು

ಅಮೆರಿಕದಲ್ಲಿ ತಮ್ಮ ಸ್ವಂತ ಅಂಗಸಂಸ್ಥೆಗಳನ್ನು ಹೊಂದಿರುವ ಹಾಗೂ ‘DDP’ ಆಧಾರದಲ್ಲಿ ಸಾಗಣೆ ಮಾಡಿರುವ ಭಾರತದ ಸಿಯೆಟ್ (CEAT), ಬಾಲಕೃಷ್ಣ ಇಂಡಸ್ಟ್ರೀಸ್, ಸಿಎನ್​ಎಚ್ ಇಂಡಿಯಾ ಹಾಗೂ ಗೋಕಲ್ದಾಸ್ ಎಕ್ಸ್‌ಪೋರ್ಟ್ಸ್ ನಂತಹ ಪ್ರಮುಖ ಕಂಪನಿಗಳು ತಾವು ಪಾವತಿಸಿದ್ದ ಹೆಚ್ಚುವರಿ ಸುಂಕವನ್ನು ಮರಳಿ ಪಡೆಯುವ ನಿರೀಕ್ಷೆಯಲ್ಲಿವೆ.

ಹೆಚ್ಚಿನ ಸಣ್ಣ ವ್ಯಾಪಾರಿಗಳು ಈ ಮರುಪಾವತಿಯನ್ನು ಸ್ವಾಗತಿಸಿದ್ದರೂ, ಸುಂಕಗಳಿಂದ ಉಂಟಾದ ಹಾನಿಯನ್ನು ಇದು ಸಂಪೂರ್ಣವಾಗಿ ಸರಿದೂಗಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಅನೇಕ ಸಣ್ಣ ಕಂಪನಿಗಳು ನೌಕರರನ್ನು ವಜಾಗೊಳಿಸಬೇಕಾಯಿತು ಹಾಗೂ ಉಳಿತಾಯದ ಹಣವನ್ನು ಖಾಲಿ ಮಾಡಿಕೊಳ್ಳಬೇಕಾಯಿತು ಎಂದು ಅಳಲು ತೋಡಿಕೊಂಡಿವೆ.

ಇಂಟರ್ನ್ಯಾಷನಲ್ ಎಮರ್ಜೆನ್ಸಿ ಎಕನಾಮಿಕ್ ಪವರ್ಸ್ ಆಕ್ಟ್ (IEEPA) ಅಡಿಯಲ್ಲಿ ಟ್ರಂಪ್ ಆಡಳಿತವು ಚೀನಾ, ಮೆಕ್ಸಿಕೋ, ಕೆನಡಾ ಮತ್ತು ಭಾರತದ ಉತ್ಪನ್ನಗಳ ಮೇಲೆ 130 ಬಿಲಿಯನ್‌ ಡಾಲರ್​ಗೂ ಹೆಚ್ಚು ಸುಂಕ ವಸೂಲಿ ಮಾಡಿತ್ತು. ಸುಪ್ರೀಂ ಕೋರ್ಟ್ ಈ ನಿಲುವನ್ನು ಸಂವಿಧಾನಬಾಹಿರ ಎಂದು ತೀರ್ಪು ನೀಡಿದೆ.

ಮರುಪಾವತಿ ಪ್ರಕ್ರಿಯೆಯ ಸವಾಲುಗಳು: ಅಮೆರಿಕದ ಸುಂಕ ಮತ್ತು ಗಡಿ ರಕ್ಷಣೆ (CBP) ವಿಭಾಗದ ಮೂಲಕ ಕಾನೂನು ಪ್ರಕ್ರಿಯೆ ನಡೆಯುತ್ತಿರುವುದರಿಂದ ಪೂರ್ಣ ಮರುಪಾವತಿ ತಲುಪಲು ಕೆಲವು ತಿಂಗಳುಗಳ ಕಾಲಾವಕಾಶ ಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version