ಸಲ್ಮಾನ್ ಖಾನ್ ಮನೆಯಲ್ಲಿ ಐಷಾರಾಮಿ ಜೀವನ ನಡೆಸಿದ್ದ ಪ್ರದೀಪ್ ರಾವತ್; ಹೊರ ಬಂದಿದ್ದೇಕೆ?? – Kannada News | Actor Pradeep Rawat Passes Away: Recalled Staying at Salman Khan’s Home Before Demise

ಭಾರತೀಯ ಚಿತ್ರರಂಗದ ಹಿರಿಯ ನಟ ಪ್ರದೀಪ್ ರಾವತ್ ಅವರು ನಿಧನರಾಗಿದ್ದಾರೆ. ಸರ್ಫರೋಷ್, ಲಗಾನ್ ಮತ್ತು ಗಜಿನಿ ಮುಂತಾದ ಸೂಪರ್ ಹಿಟ್ ಸಿನಿಮಾಗಳ ಮೂಲಕ ಅವರು ಪ್ರಸಿದ್ಧರಾಗಿದ್ದರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಅವರು ಅಭಿನಯ ಕ್ಷೇತ್ರದಲ್ಲಿದ್ದರು. ಸಲ್ಮಾನ್ ಖಾನ್ ಮತ್ತು ಆಮಿರ್ ಖಾನ್ ಜೊತೆ ಅವರು ನಟಿಸಿದ್ದರು. ನಟನ ಅಗಲಿಕೆಗೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ.

ಸಲ್ಮಾನ್ ಮನೆಗೆ ಪ್ರದೀಪ್ ಆಪ್ತತೆ

ಸಲ್ಮಾನ್ ಖಾನ್ ಮತ್ತು ಪ್ರದೀಪ್ ನಡುವೆ ಆಪ್ತ ಗೆಳೆತನವಿತ್ತು. 1990ರ ‘ಬಾಗಿ’ ಸಿನಿಮಾ ಸಮಯದಲ್ಲಿ ಇಬ್ಬರ ಸ್ನೇಹ ಬೆಳೆದಿತ್ತು. ಆರೇಳು ತಿಂಗಳು ಪ್ರದೀಪ್ ಸಲ್ಮಾನ್ ಮನೆಯಲ್ಲೇ ಉಳಿದುಕೊಂಡಿದ್ದರು. ಜೊತೆಯಾಗಿ ವರ್ಕೌಟ್ ಮಾಡುತ್ತಿದ್ದರು ಮತ್ತು ಪಾರ್ಟಿಗಳಿಗೆ ಹೋಗುತ್ತಿದ್ದರು.

ಸಲ್ಮಾನ್ ನೀಡಿದ ಐಷಾರಾಮಿ ಜೀವನಕ್ಕೆ ಪ್ರದೀಪ್ ಹೊಂದಿಕೊಂಡಿದ್ದರು. ಆದರೆ ಸ್ವಂತ ವೃತ್ತಿಜೀವನ ರೂಪಿಸಿಕೊಳ್ಳಲು ಅವರು ಆ ಮನೆಯನ್ನು ತೊರೆದರು. ಆ ಜೀವನದಲ್ಲೇ ಮುಳುಗಿಹೋದರೆ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಪ್ರದೀಪ್ ನಿರ್ಧರಿಸಿದ್ದರು.

ರಸ್ತೆಯಲ್ಲಿ ನಡೆದ ಅಪರೂಪದ ಭೇಟಿ

ವರ್ಷಗಳ ನಂತರ ಇಬ್ಬರೂ ರಸ್ತೆಯಲ್ಲಿ ಎದುರಾಗಿದ್ದರು. ಸಲ್ಮಾನ್ ಖಾನ್ ತಮ್ಮ ಕಾರನ್ನು ರಸ್ತೆ ಮಧ್ಯದಲ್ಲೇ ನಿಲ್ಲಿಸಿದ್ದರು. ಪ್ರದೀಪ್ ಅವರನ್ನು ತಬ್ಬಿಕೊಂಡು ಕುಶಲಕ್ಷೇಮ ವಿಚಾರಿಸಿದ್ದರು. ಪ್ರದೀಪ್ ಬ್ಯಾಂಕ್ ಉದ್ಯೋಗಿಯಾಗಿದ್ದಾಗ ಸಲ್ಮಾನ್ ಅಲ್ಲಿಗೂ ಬಂದು ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದರು.

ಪ್ರದೀಪ್ ಅವರ ಸಾವಿಗೆ ಸಲ್ಮಾನ್ ಖಾನ್ ತೀವ್ರ ಕಂಬನಿ ಮಿಡಿದಿದ್ದಾರೆ. “ನಿಮ್ಮೊಂದಿಗೆ ಹಂಚಿಕೊಂಡ ಕ್ಷಣಗಳು ನೆನಪಿನಲ್ಲಿರುತ್ತವೆ” ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ವಿಪರೀತ ತೂಕ ಕಡಿಮೆ ಆಗಿದ್ದರ ಬಗ್ಗೆ ಮೌನ ಮುರಿದ ನಟ ಸಲ್ಮಾನ್ ಖಾನ್

ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದ ನಟ

ಪ್ರದೀಪ್ ರಾವತ್ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅವರಿಗೆ ಪತ್ನಿ ಕಲ್ಯಾಣಿ ಮತ್ತು ಮಗ ವಿಕ್ರಮಾದಿತ್ಯ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ವಾಯು ಗುಣಮಟ್ಟ: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಗಾಳಿಯ ಮಟ್ಟ ಹೇಗಿದೆ? – Kannada News | Bengaluru and Karnataka AQI Good: Monsoon Rains Bring Fresh Air, Public Relief

ಬೆಂಗಳೂರು,ಆ. 6: ರಾಜ್ಯಾದ್ಯಂತ ಮುಂಗಾರು ಮಳೆ ಚುರುಕಾಗಿರುವುದರಿಂದ ಕರ್ನಾಟಕದ ಬಹುತೇಕ ನಗರಗಳಲ್ಲಿ ವಾಯು ಗುಣಮಟ್ಟ ಸೂಚಿ (AQI – Air Quality Index) ಸುಧಾರಿಸಿದ್ದು, ಸಾರ್ವಜನಿಕರಿಗೆ ನಿರಾಳತೆ ತಂದಿದೆ. ಮಳೆಯ ಕಾರಣದಿಂದಾಗಿ ಧೂಳು ಮತ್ತು ಮಾಲಿನ್ಯಕಾರಕ ಕಣಗಳು ಕಡಿಮೆಯಾಗಿದ್ದು, ಗಾಳಿಯ ಗುಣಮಟ್ಟ ‘ಉತ್ತಮ’ (Good) ಹಾಗೂ ‘ಸಾಧಾರಣ’ (Satisfactory) ವಿಭಾಗದಲ್ಲಿ ದಾಖಲಾಗಿದೆ.

ಮಳೆ ಮತ್ತು ಮೋಡಕವಿದ ವಾತಾವರಣದಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸುಧಾರಿಸಿದ್ದು, ಸರಾಸರಿ AQI 35 ರಿಂದ 55 ರಷ್ಟಿದೆ (ಉತ್ತಮದಿಂದ ಸಾಧಾರಣ). ಮೈಸೂರು ಹಾಗೂ ಮಂಡ್ಯದಲ್ಲಿ ಸಂಚಾರ ದಟ್ಟಣೆ ಕಡಿಮೆಯಿರುವ ಈ ಭಾಗಗಳಲ್ಲಿ AQI 25 ರಿಂದ 40 ರಷ್ಟಿದ್ದು, ‘ಉತ್ತಮ’ (Good) ವಿಭಾಗದಲ್ಲಿದೆ.

ಕರಾವಳಿ ಭಾಗ (ಮಂಗಳೂರು, ಉಡುಪಿ)ದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಗಾಳಿಯ ಶುದ್ಧತೆ ಹೆಚ್ಚಾಗಿದ್ದು, AQI 20 ರಿಂದ 35 ರಷ್ಟಿದೆ. ಉತ್ತರ ಕರ್ನಾಟಕ (ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ) ದಲ್ಲಿ ಪ್ರಮುಖ ನಗರ ಪ್ರದೇಶಗಳಲ್ಲಿ AQI 40 ರಿಂದ 65 ರ ನಡುವೆ ದಾಖಲಾಗಿದೆ.

ಹಾಸನ ನಗರ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ AQI 20 ರಿಂದ 45 ರ ರೇಂಜ್‌ನಲ್ಲಿದ್ದು, ವಾಯು ಮಾಲಿನ್ಯ ಅತ್ಯಂತ ಕಡಿಮೆಯಿದೆ. ಉತ್ತಮ ಗಾಳಿಯ ಲಭ್ಯತೆಯಿಂದ ಹೊರಾಂಗಣ ಚಟುವಟಿಕೆಗಳಿಗೆ ಸೂಕ್ತವಾಗಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿಯೂ ನಿರಂತರ ಮಳೆ ಹಾಗೂ ಹಸಿರಿನಿಂದಾಗಿ ಗಾಳಿಯ ಶುದ್ಧತೆ ಹೆಚ್ಚಿದ್ದು, AQI 25 ರ ಸುಮಾರಿಗೆ ದಾಖಲಾಗಿದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ಆರ್ಭಟ, ಪ್ರಮುಖ ಜಿಲ್ಲೆಗಳಿಗೆ ಅಲರ್ಟ್

ಕೊಡಗು ಜಿಲ್ಲೆಯ ಮಡಿಕೇರಿ ಭಾಗದಲ್ಲಿ ಮಳೆ ಮತ್ತು ಮೋಡಕವಿದ ವಾತಾವರಣದ ನಡುವೆ AQI ಸಾಧಾರಣ ಹಂತದಲ್ಲಿದ್ದು (50-75), ಪ್ರವಾಸಿಗರು ಮತ್ತು ಸ್ಥಳೀಯರಿಗೆ ಉತ್ತಮ ವಾತಾವರಣ ಸಿಗುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಲಬುರಗಿ ಕೇಂದ್ರಿಯ ವಿವಿ ಕ್ವಾರ್ಟರ್ಸ್‌ಗೆ ನುಗ್ಗಿದ ಆಗಂತುಕರು: ಚಾಕು ಹಿಡಿದು ಓಡಾಟ, CCTVಯಲ್ಲಿ ದೃಶ್ಯ ಸೆರೆ – Kannada News | Central University Karnataka: Masked Men Break Into Quarters With Knives, CCTV Captures Movement

ಕಲಬುರಗಿ, ಆಗಸ್ಟ್ 6: ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಬಳಿಯಿರುವ ಕೇಂದ್ರಿಯ ವಿಶ್ವವಿದ್ಯಾಲಯದ ವಸತಿ ಗೃಹಗಳಿಗೆ ಆಗಂತುಕರು ನುಗ್ಗಿರುವ ಘಟನೆ ನಡೆದಿದೆ. ಆಗಸ್ಟ್ 1ರ ಮಧ್ಯರಾತ್ರಿ ಮೂರ್ನಾಲ್ಕು ಮಂದಿ ಆಗಂತುಕರು ವಿಶ್ವವಿದ್ಯಾಲಯದ ಮೂರು ವಸತಿ ಗೃಹಗಳ ಬಾಗಿಲು ಮುರಿದು ಒಳನುಗ್ಗಿದ್ದಾರೆ. ಮುಖಕ್ಕೆ ಮಾಸ್ಕ್ ಧರಿಸಿ, ಕೈಯಲ್ಲಿ ಚಾಕು ಹಿಡಿದು ವಸತಿ ಗೃಹದೊಳಗೆ ಓಡಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ವಿಶ್ವವಿದ್ಯಾಲಯದ ಪ್ರೊಫೆಸರ್‌ಗಳಾದ ಮಹಿಮಾರಾಜ್, ಡಾ. ಸಂಗಮೇಶ್ ಹಾಗೂ ಡಾ. ಎಂ. ಶಿವಮೂರ್ತಿ ಅವರಿಗೆ ಹಂಚಿಕೆಯಾಗಿದ್ದ ವಸತಿ ಗೃಹಗಳಿಗೆ ಆಗಂತುಕರು ನುಗ್ಗಿದ್ದಾರೆ.

ವಸತಿ ಗೃಹದಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಘಟನೆಗೆ ಸಂಬಂಧಿಸಿದಂತೆ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆರೋಗ್ಯದ ಬಗ್ಗೆ ಹೊಸ ಅಪ್​​​ಡೇಟ್​ ನೀಡಿದ ನಟಿ ರಶ್ಮಿಕಾ ಮಂದಣ್ಣ – Kannada News | Rashmika Mandanna Shares Health Update After Hip Injury: ‘Not All That Bad to Slow Down’

ಚಿತ್ರರಂಗದ ಲಕ್ಕಿ ಗರ್ಲ್ ರಶ್ಮಿಕಾ ಮಂದಣ್ಣ ಅವರು ಸೊಂಟದ ಗಾಯದಿಂದಾಗಿ ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಶೂಟಿಂಗ್ ಹಾವಳಿ ಇಲ್ಲದೆ ಕಾಲ ಕಳೆಯುತ್ತಿರುವ ಅವರು, ತಮ್ಮ ಆರೋಗ್ಯದ ಹೊಸ ಮಾಹಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೆಲವೊಮ್ಮೆ ಜೀವನದ ವೇಗವನ್ನು ಕಡಿಮೆ ಮಾಡುವುದು ಕೆಟ್ಟದ್ದೇನಲ್ಲ ಎಂದು ನಟಿ ಹೇಳಿದ್ದಾರೆ. ಪ್ರಸ್ತುತ ಪ್ರಶಾಂತ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗಿದೆ.

ದಿನಚರಿಯ ಹೊಸ ಬದಲಿ ರೂಪು

ಅಲಾರಂ ಇಲ್ಲದೆ ಬೆಳಿಗ್ಗೆ ಏಳುತ್ತಿರುವುದಾಗಿ ರಶ್ಮಿಕಾ ಹೇಳಿದ್ದಾರೆ. ದಿನಕ್ಕೆ ಎರಡೇ ಬಾರಿಯ ಊಟಕ್ಕೆ ಅವರು ತಮ್ಮ ಆಹಾರವನ್ನು ಸೀಮಿತಗೊಳಿಸಿದ್ದಾರೆ. ಶ್ವಾನ ‘ಔರಾ’ ಜೊತೆ ಪಝಲ್ಸ್ ಆಡುವುದು ಮತ್ತು ಪುಸ್ತಕ ಓದುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ಸಭೆಗಳಲ್ಲಿ ಭಾಗವಹಿಸುವುದು ಮತ್ತು ಶೋಗಳನ್ನು ನೋಡುವುದು ಅವರ ದಿನಚರಿಯಾಗಿದೆ.

ಮದುವೆಯ ನೆನಪುಗಳ ಮೆಲುಕು

ವಿಜಯ್ ದೇವರಕೊಂಡ ಅವರನ್ನು ಉದಯಪುರದಲ್ಲಿ ಮದುವೆಯಾದ ಫೋಟೋಗಳನ್ನು ರಶ್ಮಿಕಾ ಈಗ ನೋಡುತ್ತಿದ್ದಾರೆ. ಸಮಯ ಸಿಗದ ಕಾರಣ ಅವರು ಮದುವೆಯ ಫೋಟೋ ಮತ್ತು ವಿಡಿಯೋಗಳನ್ನು ಇಷ್ಟು ದಿನ ನೋಡಿರಲಿಲ್ಲ. ಈಗ ಸಿಕ್ಕಿದ ಬಿಡುವಿನ ವೇಳೆಯಲ್ಲಿ ಆ ನೆನಪುಗಳನ್ನು ಕಣ್ಣುಂಬಿಕೊಳ್ಳುತ್ತಿದ್ದಾರೆ.

ವರ್ಕೌಟ್ ಇಲ್ಲದ ಕಷ್ಟದ ದಿನಗಳು

ತೀರಾ ಕಷ್ಟಪಟ್ಟು ವರ್ಕೌಟ್ ಮಾಡುತ್ತಿದ್ದ ರಶ್ಮಿಕಾ ಅವರಿಗೆ ಈಗ ವಿಶ್ರಾಂತಿ ಅನಿವಾರ್ಯವಾಗಿದೆ. ವರ್ಕೌಟ್ ಇಲ್ಲದೆ ತೂಕ ಹೆಚ್ಚಾಗುವ ಭಯದಲ್ಲಿದ್ದಾರೆ. ಆದ್ದರಿಂದ ಆಹಾರ ಸೇವನೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ನಿದ್ದೆ, ತ್ವಚೆಯ ಆರೈಕೆ ಮತ್ತು ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಸೊಂಟಕ್ಕೆ ಪೆಟ್ಟಾಗಿದ್ದು ಹೇಗೆ? ಎಲ್ಲವನ್ನೂ ವಿವರಿಸಿದ ನಟಿ

‘ಮೈಸಾ’ ಚಿತ್ರದ ಡ್ಯಾನ್ಸ್ ಶೂಟಿಂಗ್ ವೇಳೆ ಅವರಿಗೆ ಗಾಯವಾಗಿತ್ತು. ಇದು ಅವರ ಸತತ ಮೂರನೇ ಗಾಯವಾಗಿದೆ. ವೈದ್ಯರು ಅವರಿಗೆ ಆರು ವಾರಗಳ ಸಂಪೂರ್ಣ ವಿಶ್ರಾಂತಿ ಸೂಚಿಸಿದ್ದಾರೆ. ಪ್ರಸ್ತುತ ಅವರು ಫಿಸಿಯೋಥೆರಪಿ ಮತ್ತು ಚೇತರಿಕೆಯ ಹಂತದಲ್ಲಿದ್ದಾರೆ. ಅವರು ಬೇಗ ರಿಕವರಿ ಆಗಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಸಲ್ಲಿಕೆ ಮಾಡುತ್ತಾ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

3 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಪಾಕಿಸ್ತಾನ್! – Kannada News | Pakistan Team win first away Test in three years

ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಿಂದ ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ. ಇದು ವಿದೇಶಿ ನೆಲದಲ್ಲಿ ಪಾಕಿಸ್ತಾನಕ್ಕೆ ಕಳೆದ ಮೂರು ವರ್ಷಗಳಲ್ಲೇ ಸಿಕ್ಕ ಮೊದಲ ಟೆಸ್ಟ್ ಗೆಲುವಾಗಿದ್ದು, ಈ ಮೂಲಕ ಸತತ 8 ಪಂದ್ಯಗಳ ಸೋಲಿನ ಸರಪಳಿಯನ್ನು ಕಳಚಿಕೊಂಡಿದೆ.

  • 2023 ರಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಬಾರಿ ಪಾಕಿಸ್ತಾನ್ ತಂಡ ವಿದೇಶಿ ಟೆಸ್ಟ್ ಪಂದ್ಯ ಗೆದ್ದಿದ್ದರು.
  • ಇದಾದ ಬಳಿಕ ಸತತ 8 ವಿದೇಶಿ ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ತಾನ್ ತಂಡ ಸೋಲನುಭವಿಸಿತ್ತು.
  • ಮೂರು ವರ್ಷಗಳ ಬಳಿಕ ಇದೀಗ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ, ಪಾಕ್ ಪಡೆ ವಿದೇಶದಲ್ಲಿ ಟೆಸ್ಟ್ ಗೆಲುವಿನ ನಗೆ ಬೀರಿದೆ.

ಸ್ಪಿನ್ನರ್‌ಗಳ ಜಾದೂ, ಕಂಗೆಟ್ಟ ವಿಂಡೀಸ್:

ಪಾಕ್ ತಂಡದ ನಾಯಕ ಬಾಬರ್ ಆಝಂ ಅವರ ಹೆಚ್ಚುವರಿ ಸ್ಪಿನ್ನರ್ ಬಳಸುವ ತಂತ್ರ ಇಡೀ ಪಂದ್ಯದ ಗತಿಯನ್ನೇ ಬದಲಿಸಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನದ ಸ್ಪಿನ್ ಜೋಡಿಯಾದ ಸಾಜಿದ್ ಖಾನ್ ಮತ್ತು ಅಲಿ ಉಸ್ಮಾನ್ ತಲಾ 4 ವಿಕೆಟ್ ಪಡೆಯುವ ಮೂಲಕ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇದರಿಂದಾಗಿ ಆತಿಥೇಯ ವಿಂಡೀಸ್ ಕೇವಲ 117 ರನ್‌ಗಳಿಗೆ ಆಲೌಟ್ ಆಗಿ, ಪಾಕಿಸ್ತಾನಕ್ಕೆ 75 ರನ್‌ಗಳ ಸುಲಭ ಗುರಿ ನೀಡಿತು.

ಶಫೀಕ್ ಶತಕ, ಪಾಕ್​ಗೆ ಪ್ಲಸ್ ಪಾಯಿಂಟ್:

ಶಾನ್ ಮಸೂದ್ ಅವರ ಬದಲಿಯಾಗಿ ಕೊನೆಯ ಕ್ಷಣದಲ್ಲಿ ತಂಡ ಸೇರಿದ ಅಬ್ದುಲ್ಲಾ ಶಫೀಕ್, ಮೊದಲ ಇನ್ನಿಂಗ್ಸ್‌ನಲ್ಲಿ ಅಜೇಯ 160 ರನ್ ಬಾರಿಸಿ ತಂಡದ ಗೆಲುವಿಗೆ ಬಲವಾದ ಅಡಿಪಾಯ ಹಾಕಿದರು. ಅವರ ಈ ಅದ್ಭುತ ಪ್ರದರ್ಶನಕ್ಕಾಗಿ ಅವರಿಗೆ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ಒಲಿಯಿತು. ಅತ್ತ ಬೌಲಿಂಗ್​ನಲ್ಲಿ ಪಾಕ್​ ಪಾಲಿಗೆ ಗೆಲುವಿನ ರೂವಾರಿಗಳಾದರೆ, ಇತ್ತ ಬ್ಯಾಟಿಂಗ್​ನಲ್ಲಿ ಅಬ್ದುಲ್ಲಾ ಶಫೀಕ್ ಬಾರಿಸಿದ ಭರ್ಜರಿ ಶತಕ ಪಾಕ್ ಪಡೆಗೆ ಪ್ಲಸ್ ಪಾಯಿಂಟ್ ಆಯಿತು.

ಸಿಕ್ಸರ್ ಸಿಡಿಸಿ ಪಂದ್ಯ ಮುಗಿಸಿದ ಬಾಬರ್:

ಕೇವಲ 75 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ್ ಆರಂಭದಲ್ಲೇ ಇಮಾಮ್-ಉಲ್-ಹಕ್ ಮತ್ತು ಅಝಾನ್ ಅವೈಸ್ ವಿಕೆಟ್ ಕಳೆದುಕೊಂಡಿತು. ಆದರೆ, ನಾಯಕ ಬಾಬರ್ ಆಝಂ ಹಾಗೂ ಶಫೀಕ್ ಜವಾಬ್ದಾರಿಯುತ ಆಟವಾಡಿದರು. ಅಂತಿಮವಾಗಿ ಜೋಮೆಲ್ ವಾರಿಕನ್ ಓವರ್‌ನಲ್ಲಿ ಸತತ ಎರಡು ಸಿಕ್ಸರ್ ಚಚ್ಚುವ ಮೂಲಕ ಬಾಬರ್ ಆಝಂ ತಂಡವನ್ನು ಗೆಲುವಿನ ದಡ ಸೇರಿಸಿದರು.

ವಿಂಡೀಸ್‌ಗೆ ಗಾಯದ ಸಮಸ್ಯೆ:

ಮೊದಲ ಟೆಸ್ಟ್​ನಲ್ಲಿ ಪಾಕ್ ಪಡೆಯನ್ನು ಮಕಾಡೆ ಮಲಗಿಸಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕ ಆಟಗಾರ ಬ್ರ್ಯಾಂಡನ್ ಕಿಂಗ್ ಅವರ ಅನುಪಸ್ಥಿತಿ ಭಾರಿ ಹಿನ್ನಡೆಯಾಗಿ ಪರಿಣಮಿಸಿತು. ಮೂರನೇ ದಿನದಾಟದಲ್ಲಿ ಬಾಬರ್ ಆಝಂ ಅವರನ್ನು ರನ್ ಔಟ್ ಮಾಡುವ ವೇಳೆ ಬೆನ್ನುನೋವಿಗೆ ತುತ್ತಾಗಿದ್ದ ಕಿಂಗ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿಯಲಿಲ್ಲ. ಪ್ರಮುಖ ಆಟಗಾರನ ಅಲಭ್ಯತೆಯು ವೆಸ್ಟ್ ಇಂಡೀಸ್​ ಇನಿಂಗ್ಸ್ ಮೇಲೆ ಪರಿಣಾಮ ಬೀರಿತು.

ಸಂಕ್ಷಿಪ್ತ ಸ್ಕೋರ್ ವಿವರ:

  • ವೆಸ್ಟ್ ಇಂಡೀಸ್ (ಮೊದಲ ಇನ್ನಿಂಗ್ಸ್): 344/10 (ಜಸ್ಟಿನ್ ಗ್ರೀವ್ಸ್ 73, ರೋಸ್ಟನ್ ಚೇಸ್ 70; ಸಾಜಿದ್ ಖಾನ್ 4/85)
  • ಪಾಕಿಸ್ತಾನ್ (ಮೊದಲ ಇನ್ನಿಂಗ್ಸ್): 387/10 (ಅಬ್ದುಲ್ಲಾ ಶಫೀಕ್ 160*, ಬಾಬರ್ ಆಝಂ 88; ಜೋಮೆಲ್ ವಾರಿಕನ್ 6/112)
  • ವೆಸ್ಟ್ ಇಂಡೀಸ್ (ಎರಡನೇ ಇನ್ನಿಂಗ್ಸ್): 117/10 (ಕಾವೆಮ್ ಹಾಡ್ಜ್ 34; ಅಲಿ ಉಸ್ಮಾನ್ 4/39, ಸಾಜಿದ್ ಖಾನ್ 4/32)
  • ಪಾಕಿಸ್ತಾನ್ (ಎರಡನೇ ಇನ್ನಿಂಗ್ಸ್ – ಗುರಿ 75 ರನ್): 23.3 ಓವರ್‌ಗಳಲ್ಲಿ 77/2 (ಬಾಬರ್ ಆಝಂ 24*, ಅಬ್ದುಲ್ಲಾ ಶಫೀಕ್ 24*)

ಇದನ್ನೂ ಓದಿ: CWC 2027: 36 ತಂಡಗಳ ಕದನ: ಕೇವಲ 4 ತಂಡಗಳಿಗೆ ಅವಕಾಶ!

ಈ ಪಂದ್ಯದ ಗೆಲುವಿನೊಂದಿಗೆ ಪಾಕಿಸ್ತಾನ್ ತಂಡವು 2 ಮ್ಯಾಚ್​ಗಳ ಸರಣಿಯನ್ನು 1-1 ಅಂತರದಿಂದ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Source link

ದರ್ಶನ್​​ಗೆ ಶಾಕ್: ರೇಣುಕಾಸ್ವಾಮಿ ಕೇಸ್​​ನಲ್ಲಿ ಮಾಫಿ ಸಾಕ್ಷಿ ಮಾಡಿ; ಕೋರ್ಟ್​​ಗೆ ಎ14 ಪ್ರದೋಶ್ ಮನವಿ – Kannada News | Renukaswamy Murder Case: Actor Darshan Faces Trouble as A14 Pradosh Files Plea to Turn Approver

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ತಿರುವು ಸಿಗುತ್ತಿದೆ. ಇದೀಗ ಪ್ರಕರಣದ 14ನೇ ಆರೋಪಿ ಪ್ರದೋಷ್ ಶಾಕಿಂಗ್ ನಿರ್ಧಾರ ಕೈಗೊಂಡಿದ್ದಾರೆ. ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ತಮ್ಮನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ಪ್ರಕರಣದ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸುವುದಾಗಿ ಕೋರಿದ್ದಾರೆ. ತಮ್ಮನ್ನು ಕ್ಷಮಿಸುವಂತೆ ಕೋರ್ಟ್‌ಗೆ ಶರಣಾಗಿದ್ದಾರೆ. ಈ ಹೊಸ ಬೆಳವಣಿಗೆಯು ದರ್ಶನ್ (Darshan) ಗ್ಯಾಂಗ್‌ಗೆ ಭಾರಿ ಆಘಾತ ತಂದೊಡ್ಡಿದೆ.

ಕೋರ್ಟ್‌ಗೆ ಪ್ರದೋಷ್ ವಿಶೇಷ ಮನವಿ

ಪ್ರದೋಷ್ ಪರ ವಕೀಲರು 59ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆ ವೇಳೆ ದರ್ಶನ್ ಇರುವ ಕೊಠಡಿ ಬಿಟ್ಟು ತಮ್ಮನ್ನು ಪ್ರತ್ಯೇಕ ಜೈಲು ಕೊಠಡಿಯಿಂದ ಹಾಜರುಪಡಿಸಬೇಕು ಎಂದು ಮನವಿ ಮಾಡಿದ್ದಾರೆ. ದರ್ಶನ್ ಬೆದರಿಕೆ ಹಾಕುವುದು ಅಥವಾ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಈ ಭದ್ರತಾ ಮನವಿ ಸಲ್ಲಿಸಲಾಗಿದೆ. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಪ್ರಾಸಿಕ್ಯೂಷನ್ ತನ್ನ ನಿಲುವು ತಿಳಿಸುವಂತೆ ಸೂಚಿಸಿದೆ.

ದರ್ಶನ್ ಮತ್ತು ಪವಿತ್ರಾ ಗೌಡಗೆ ಸಂಕಷ್ಟ

ಈ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಮೊದಲನೇ ಆರೋಪಿ (A1) ಆಗಿದ್ದರೆ, ನಟ ದರ್ಶನ್ ಎರಡನೇ ಆರೋಪಿ (A2) ಆಗಿದ್ದಾರೆ. ಈಗ ಪ್ರದೋಷ್ ಮಾಫಿ ಸಾಕ್ಷಿಯಾಗಲು ಮುಂದಾಗಿರುವುದು ನಟ ದರ್ಶನ್‌ಗೆ ದೊಡ್ಡ ಮುಳ್ಳಾಗುವ ಸಾಧ್ಯತೆಯಿದೆ. ಪ್ರದೋಷ್ ನೀಡುವ ಹೇಳಿಕೆಗಳು ಈ ಪ್ರಕರಣದ ತನಿಖೆಯಲ್ಲಿ ಅತ್ಯಂತ ನಿರ್ಣಾಯಕವಾಗಲಿವೆ.

ಇದನ್ನೂ ಓದಿ: ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ

ಮಾಫಿ ಸಾಕ್ಷಿಯಾಗಿ ಪ್ರದೋಷ್ ಸತ್ಯ ಬಿಚ್ಚಿಟ್ಟರೆ, ಪ್ರಕರಣದ ಪ್ರಮುಖ ರೂವಾರಿಗಳಿಗೆ ಕಾನೂನಿನ ಕುಣಿಕೆ ಇನ್ನಷ್ಟು ಬಿಗಿಯಾಗಲಿದೆ. ಈ ಅರ್ಜಿ ಸಿನಿಮಾ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈ ವಿಷಯದಲ್ಲಿ ನ್ಯಾಯಾಲಯ ಪ್ರಾಸಿಕ್ಯೂಷನ್ ಅಭಿಪ್ರಾಯ ಕೇಳಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶೇಖ್ ಹಸೀನಾರ ಕಾರ್ಯಕ್ರಮದಲ್ಲಿ ಭಾಗಿ: ಬಾಂಗ್ಲಾ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು – Kannada News | Shakib Al Hasan’s Home Attacked After Sheikh Hasina Event: Bangladesh Political Violence

ಢಾಕಾ, ಆಗಸ್ಟ್ 06: ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಅವಾಮಿ ಲೀಗ್ ಪಕ್ಷದ ಮಾಜಿ ಸಂಸದ ಶಕೀಬ್ ಅಲ್ ಹಸನ್ ಅವರ ಮಗುರಾದಲ್ಲಿರುವ ನಿವಾಸದ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿ, ಬೆಂಕಿ ಹಚ್ಚಲು ಯತ್ನಿಸಿರುವ ಭೀಕರ ಘಟನೆ ಸಂಭವಿಸಿದೆ. ದೆಹಲಿಯ ‘ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ ಆಫ್ ಸೌತ್ ಏಷ್ಯಾ’ ಆಯೋಜಿಸಿದ್ದ ಸಭೆಯಲ್ಲಿ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಶಕೀಬ್ ವರ್ಚುವಲ್ (ಆನ್‌ಲೈನ್) ಮೂಲಕ ಕಾಣಿಸಿಕೊಂಡ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿದೆ.

ಬುಧವಾರ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು ಶಕೀಬ್ ಅವರ ಮನೆಯ ಕಿಟಕಿಗಳ ಮೇಲೆ ಇಟ್ಟಿಗೆಗಳನ್ನು ಎಸೆದು, ದಕ್ಷಿಣ ಭಾಗದ ಪ್ರಧಾನ ಗೇಟ್‌ನ ಮೇಲೆ ಪೆಟ್ರೋಲ್ ಬಾಂಬ್‌ನಂತಹ ವಸ್ತುವನ್ನು ಎಸೆದು ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಜ್ವಾಲೆಗಳನ್ನು ಕಂಡ ತಕ್ಷಣ ನೆರೆಹೊರೆಯವರು ಧಾವಿಸಿ ಬೆಂಕಿಯನ್ನು ನಂದಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಘಟನೆಯ ಸಮಯದಲ್ಲಿ ಮನೆಯೊಳಗೆ ಯಾರೂ ಇರಲಿಲ್ಲ ಎಂದು ಮಗುರಾ ಸದರ್ ಪೊಲೀಸ್ ಠಾಣೆಯ ಉಸ್ತುವಾರಿ ಎಂಡಿ ಅಬ್ದುಲ್ಲಾ ಅಲ್ ಮಾಮುನ್ ತಿಳಿಸಿದ್ದಾರೆ.

ಈ ದಾಳಿಯನ್ನು ಕಟುವಾಗಿ ಖಂಡಿಸಿರುವ ‘ಅವಾಮಿ ಲೀಗ್’, ಪ್ರಜಾಪ್ರಭುತ್ವದ ಹೆಸರಿನಲ್ಲಿ ವಿರೋಧಿಗಳ ವಿರುದ್ಧ ನರಮೇಧ ನಡೆಸಲಾಗುತ್ತಿದೆ. ಶೇಖ್ ಹಸೀನಾ ಅವರೊಂದಿಗೆ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ್ದಕ್ಕಾಗಿ ವಿಶ್ವಪ್ರಸಿದ್ಧ ಕ್ರಿಕೆಟಿಗನ ಮನೆಗೆ ಪೆಟ್ರೋಲ್ ಬಾಂಬ್ ಹಾಕಲಾಗಿದೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.

ಮತ್ತಷ್ಟು ಓದಿ:‘ನನ್ನನ್ನು ಕೊಲ್ಲಬಹುದು, ಜೈಲಿಗೆ ಹಾಕಬಹುದು, ಆದರೂ ಬಾಂಗ್ಲಾದೇಶಕ್ಕೆ ಹೋಗುತ್ತೇನೆ’; ಶೇಖ್ ಹಸೀನಾ ಶಪಥ

2024ರ ಆಗಸ್ಟ್‌ನಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಂಡ ನಂತರ ಶಕೀಬ್ ಅಲ್ ಹಸನ್ ಬಾಂಗ್ಲಾದೇಶದಿಂದ ಹೊರಗಿದ್ದಾರೆ. 2024 ರ ರಾಜಕೀಯ ಅಶಾಂತಿಯ ಸಮಯದಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಅವರ ವಿರುದ್ಧವೂ ಎಫ್‌ಐಆರ್ (FIR) ದಾಖಲಾಗಿದೆ. ಶಕೀಬ್ ಮಗುರಾ-1 ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಕಾನೂನು ಪ್ರಕ್ರಿಯೆಯನ್ನು ಎದುರಿಸಲು ದೇಶಕ್ಕೆ ಮರಳಲು ಸಿದ್ಧರಿದ್ದರೂ, ಅಲ್ಲಿನ ಸರ್ಕಾರ ತಮಗೆ ವೈಯಕ್ತಿಕ ಸುರಕ್ಷತೆಯ ಭರವಸೆ ನೀಡಬೇಕೆಂದು ಅವರು ಮನವಿ ಮಾಡಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 8:03 am, Thu, 6 August 26

Source link

ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ರ್ಯಾಗಿಂಗ್ ಭೂತ: ಕೇರಳದ ವಿದ್ಯಾರ್ಥಿಗಳಿಗೆ ಟಾರ್ಚರ್, ಇಬ್ಬರಿಗೆ ಥಳಿತ – Kannada News | Mangaluru Ragging Case: Junior Students From Kerala Assaulted Over Black Shoes, Six Seniors Detained

ಮಂಗಳೂರು, ಆಗಸ್ಟ್ 6: ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಮಂಗಳೂರಿನಲ್ಲಿ ರ್ಯಾಗಿಂಗ್ ಪ್ರಕರಣ ಮತ್ತೆ ಸದ್ದು ಮಾಡಿದೆ. ಕಪ್ಪು ಶೂ ಧರಿಸಿಕೊಂಡು ಬಂದ ಕಾರಣಕ್ಕೆ ಸೀನಿಯರ್ ವಿದ್ಯಾರ್ಥಿಗಳು ಇಬ್ಬರು ಜೂನಿಯರ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆಯಿಂದ ವಿದ್ಯಾರ್ಥಿಗಳು ಬೆಚ್ಚಿಬಿದ್ದಿದ್ದು, ಸಂತ್ರಸ್ತ ವಿದ್ಯಾರ್ಥಿಗಳು ರ್ಯಾಗಿಂಗ್‌ನ ಭಯಾನಕತೆಯನ್ನು ಬಿಚ್ಚಿಟ್ಟಿದ್ದಾರೆ.

ಕಪ್ಪು ಶೂ ವಿಚಾರಕ್ಕೆ ಜೂನಿಯರ್‌ಗಳ ಮೇಲೆ ಹಲ್ಲೆ

ಎಜುಕೇಶನ್ ಹಬ್ ಮಂಗಳೂರಿನಲ್ಲಿ ರ್ಯಾಗಿಂಗ್ ಎಂಬ ಪಿಡುಗು ಮತ್ತೆ ಸದ್ದು ಮಾಡಿದೆ. ಕೇವಲ ಕಪ್ಪು ಶೂ ಧರಿಸಿಕೊಂಡು ಬಂದ ಕಾರಣಕ್ಕೆ ಸೀನಿಯರ್ ವಿದ್ಯಾರ್ಥಿಗಳು ಜೂನಿಯರ್ ವಿದ್ಯಾರ್ಥಿಗಳಿಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕೇರಳದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಕಾಲೇಜು ಪರಿಸರದಲ್ಲಿ ಆತಂಕ ಮೂಡಿಸಿದೆ.

ಕಾಲೇಜಿನಲ್ಲಿ ಪ್ರಥಮ ವರ್ಷದ ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ಕೇರಳದ ಇಬ್ಬರು ವಿದ್ಯಾರ್ಥಿಗಳು ನಗರದ ಗುಜ್ಜರಕೆರೆ ಎಂಬಲ್ಲಿ ವಿಹರಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಅದೇ ಕಾಲೇಜಿನ ಸೀನಿಯರ್ ವಿದ್ಯಾರ್ಥಿಗಳು ಕಪ್ಪು ಶೂ ಧರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜಗಳ ತೆಗೆದಿದ್ದಾರೆ ಎನ್ನಲಾಗಿದೆ.

ಬಳಿಕ ಜೂನಿಯರ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದು, ಕುತ್ತಿಗೆ ಭಾಗಕ್ಕೂ ಮನಬಂದಂತೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಆದರ್ಶ್ ಮತ್ತು ಜಾಸೀನ್ ಖಾದರ್ ಎಂಬವರು ಹಲ್ಲೆಗೊಳಗಾದ ವಿದ್ಯಾರ್ಥಿಗಳಾಗಿದ್ದು, ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರು ಮಂದಿ ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ

ಘಟನೆ ಬೆಳಕಿಗೆ ಬರುತ್ತಿದ್ದಂತೆ ಪಾಂಡೇಶ್ವರ ಠಾಣೆ ಪೊಲೀಸರು ಕಾಲೇಜಿಗೆ ತೆರಳಿ, ಹಲ್ಲೆ ನಡೆಸಿದ ಆರು ಮಂದಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ.

ರ್ಯಾಗಿಂಗ್‌ನ ಭಯಾನಕತೆಯನ್ನು ಬಿಚ್ಚಿಟ್ಟ ವಿದ್ಯಾರ್ಥಿಗಳು

ರ್ಯಾಗಿಂಗ್‌ನ ಭಯಾನಕತೆಯನ್ನು ಗಾಯಾಳು ವಿದ್ಯಾರ್ಥಿಗಳು ಬಿಚ್ಚಿಟ್ಟಿದ್ದಾರೆ. ಕೆಲವು ಹಿರಿಯ ವಿದ್ಯಾರ್ಥಿಗಳು ತಮ್ಮ ಖಾಸಗಿ ಕೊಠಡಿಗಳಿಗೆ ಕರೆದುಕೊಂಡು ಹೋಗಿ ಜೂನಿಯರ್ ವಿದ್ಯಾರ್ಥಿಗಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳನ್ನು ಬಟ್ಟೆ ಬಿಚ್ಚಿಸಿ ಒಳಉಡುಪಿನಲ್ಲಿ ಕೂರಿಸುವುದು, ಬಾಯಿಯಿಂದ ಗಾಳಿ ಊದಿ ಎಲ್‌ಇಡಿ ಬಲ್ಬ್ ಆರಿಸಲು ಹಾಗೂ ಫ್ಯಾನ್ ತಿರುಗಿಸಲು ಒತ್ತಾಯಿಸುವಂತಹ ಅಮಾನವೀಯ ಕೃತ್ಯಗಳನ್ನು ನಡೆಸಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಕೇರಳದ ವಿದ್ಯಾರ್ಥಿಗಳೇ ಕೇರಳದ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ನಡೆಸುತ್ತಿದ್ದು, ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದ್ದಾರೆ.

ಕ್ರಮಕ್ಕೆ ಶಾಸಕ ಭರತ್ ಶೆಟ್ಟಿ ಆಗ್ರಹ

ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಪದೇಪದೇ ರ್ಯಾಗಿಂಗ್ ಪ್ರಕರಣಗಳಲ್ಲಿ ಶಾಮೀಲಾಗುತ್ತಿದ್ದಾರೆ ಎಂದು ಆರೋಪಿಸಿರುವ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ, ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಪ್ರತಿ ಕಾಲೇಜಿನಲ್ಲಿರುವ ಆ್ಯಂಟಿ ರ್ಯಾಗಿಂಗ್ ಕಮಿಟಿಗಳು ನಿಷ್ಕ್ರಿಯವಾಗುತ್ತಿವೆ ಎಂದು ಆರೋಪಿಸಿರುವ ಅವರು, ಪೊಲೀಸರು ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳು ಹಾಗೂ ಕಾಲೇಜು ಆಡಳಿತ ಮಂಡಳಿಗೆ ರ್ಯಾಗಿಂಗ್ ವಿರುದ್ಧ ಅರಿವು ಮೂಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಮಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರಕ್ಕೆ ಮುಹೂರ್ತ ಫಿಕ್ಸ್, ಆ ಘಾಟಿನಲ್ಲಿ ಹೋಗುವುದೇ ಮಜಾ

ಮಂಗಳೂರಿನಲ್ಲಿ ರ್ಯಾಗಿಂಗ್ ನಿರಂತರವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಕಡಿವಾಣ ಹಾಕಬೇಕಿದೆ. ದೂರದೂರಿನಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಮನಸ್ಥೈರ್ಯ ತುಂಬುವ ಅಗತ್ಯವಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಾರುಖ್ ‘ಕಿಂಗ್’ ಚಿತ್ರದ ಹೈಪ್​​ಗೆ ದಕ್ಷಿಣದಲ್ಲಿ ಹಬ್ಬಿಸಲಾಗುತ್ತಿದೆ ಸುಳ್ಳುಸುದ್ದಿ? – Kannada News | Shah Rukh Khan Cameos in South Films is Just Rumours it looks like a pre planned

ಸಿನಿಮಾ ರಂಗದಲ್ಲಿ ಪ್ರತಿದಿನ ಒಂದಲ್ಲಾ ಒಂದು ಹೊಸ ವದಂತಿಗಳು ಹುಟ್ಟಿಕೊಳ್ಳುತ್ತವೆ. ಅದರಲ್ಲೂ ಶಾರುಖ್ (Shah Rukh Khan) ಬಗ್ಗೆ ಸಾಕಷ್ಟು ಗಾಳಿ ಸುದ್ದಿ ಕೇಳಿ ಬರುತ್ತಿದೆ. ಅವರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಮತ್ತೆ ಕೇಳಿಬರುತ್ತಿವೆ. ಶಾರುಖ್ ಅತಿಥಿ ಪಾತ್ರಗಳಲ್ಲಿ ನಟಿಸಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿವೆ. ದಕ್ಷಿಣದ ಸ್ಟಾರ್ ನಟರ ಚಿತ್ರಗಳಲ್ಲಿ ಶಾರುಖ್ ಅಬ್ಬರಿಸಲಿದ್ದಾರೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಆದರೆ ಈ ಸುದ್ದಿಗಳಿಗೆ ಯಾವುದೇ ಅಧಿಕೃತ ಆಧಾರಗಳಿಲ್ಲ. ಇದು ಕೇವಲ ಗಾಳಿಸುದ್ದಿ ಎಂಬುದು ಬಹುತೇಕ ಸ್ಪಷ್ಟವಾಗಿದೆ.

ಈ ಹಿಂದೆ ‘ಜೈಲರ್ 2’ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸುತ್ತಾರೆ ಎನ್ನಲಾಗಿತ್ತು. ಅವರು ಒಂದು ವಿಶೇಷ ಪಾತ್ರ ಮಾಡಲಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು. ಚಿತ್ರತಂಡದಿಂದ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಕೊನೆಗೆ ಆ ಕ್ಯಾಮಿಯೋ ನಡೆಯಲೇ ಇಲ್ಲ. ಇದರಿಂದ ಇಂತಹ ವರದಿಗಳ ನೈಜತೆಯ ಬಗ್ಗೆಯೇ ಅಭಿಮಾನಿಗಳಲ್ಲಿ ಪ್ರಶ್ನೆಗಳು ಮೂಡಿವೆ. ಸುಳ್ಳು ಸುದ್ದಿಗಳನ್ನು ನಂಬಬಾರದು ಎಂಬ ಪಾಠವೂ ಸಿಕ್ಕಿದೆ.

ಇದೀಗ ಮತ್ತೊಂದು ಹೊಸ ವದಂತಿ ಹುಟ್ಟಿಕೊಂಡಿದೆ. ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಅಟ್ಲೀ ಕಾಂಬಿನೇಷನ್‌ನಲ್ಲಿ ‘ರಾಕಾ’ ಸಿನಿಮಾ ಮೂಡಿಬರುತ್ತಿದೆ. ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಶಾರುಖ್ ಇರಲಿದ್ದಾರೆ ಎನ್ನಲಾಗುತ್ತಿದೆ. ‘ಜವಾನ್’ ಸಿನಿಮಾವನ್ನು ಅಟ್ಲೀ ನಿರ್ದೇಶನ ಮಾಡಿದ್ದರು. ಆ ಸ್ನೇಹದ ಮೇಲೆ ಶಾರುಖ್ ಈ ಚಿತ್ರದಲ್ಲಿ ನಟಿಸಬಹುದು ಎಂಬ ಲೆಕ್ಕಾಚಾರವಿದೆ. ಇದನ್ನು ಬಿಟ್ಟರೆ ಶಾರುಖ್ ‘ರಾಕಾ’ ಚಿತ್ರದಲ್ಲಿ ನಟಿಸುತ್ತಾರೆ ಎಂಬುದಕ್ಕೆ ಬೇರೆ ಯಾವುದೇ ಬಲವಾದ ಆಧಾರವಿಲ್ಲ. ಅವರು ಈ ಪ್ರಾಜೆಕ್ಟ್‌ನಲ್ಲಿ ನಿಜಕ್ಕೂ ಇದ್ದಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇಂತಹ ಕ್ಯಾಮಿಯೋ ವದಂತಿಗಳು ಹಬ್ಬಿದಾಗಲೆಲ್ಲಾ ಶಾರುಖ್ ಖಾನ್ ಅವರ ಮುಂಬರುವ ‘ಕಿಂಗ್’ ಸಿನಿಮಾದ ಚರ್ಚೆಯೂ ಹೆಚ್ಚಾಗುತ್ತದೆ. ಈ ಬೆಳವಣಿಗೆಯು ಸಿನಿಮಾ ಪಂಡಿತರ ಗಮನ ಸೆಳೆದಿದೆ. ಇವೆಲ್ಲವೂ ಕೇವಲ ವದಂತಿ ಎಂದು ಕೆಲವರು ಭಾವಿಸಿದ್ದಾರೆ. ‘ಕಿಂಗ್’ ಸಿನಿಮಾ ಬಿಡುಗಡೆಗೂ ಮುನ್ನ ಶಾರುಖ್ ಖಾನ್ ಸದಾ ಸುದ್ದಿಯಲ್ಲಿರುವಂತೆ ಮಾಡಲು ಈ ತಂತ್ರ ಬಳಸಲಾಗುತ್ತಿದೆ ಎಂಬ ಅನುಮಾನವೂ ಇದೆ. ಇದು ಪಕ್ಕಾ ಪ್ರಚಾರದ ಗಿಮಿಕ್ ಇರಬಹುದು ಎನ್ನುವವರೂ ಇದ್ದಾರೆ.

ಇದನ್ನೂ ಓದಿ: ಹಾಲಿವುಡ್‌ ಸಿನಿಮಾಗಳಿಗೆ ಶಾರುಖ್‌ ಖಾನ್‌ ಪೈಪೋಟಿ: ಬದಲಾಗಲ್ಲ ‘ಕಿಂಗ್‌’ ರಿಲೀಸ್‌ ದಿನಾಂಕ

ಪ್ರಸ್ತುತ ಈ ವದಂತಿಗಳು ಪ್ರಚಾರ ತಂತ್ರದ ಭಾಗ ಎಂಬುದಕ್ಕೂ ಯಾವುದೇ ಪುರಾವೆಗಳಿಲ್ಲ. ಅಧಿಕೃತ ಪ್ರಕಟಣೆ ಹೊರಬೀಳುವವರೆಗೂ ‘ರಾಕಾ’ ಸಿನಿಮಾದಲ್ಲಿ ಶಾರುಖ್ ನಟಿಸುವ ಸುದ್ದಿಯನ್ನು ಕೇವಲ ವದಂತಿ ಎಂದೇ ಪರಿಗಣಿಸಬೇಕಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಕಾಶದಲ್ಲಿ ಅಪಾಯದಿಂದ ಪಾರಾದ ಟ್ರಂಪ್: ಮರೀನ್ ಒನ್ ಹೆಲಿಕಾಪ್ಟರ್ ಬಳಿ ಬಂದ ವಿಮಾನ, ಎಫ್‌ಎಎ ತನಿಖೆ – Kannada News | Trump’s Marine One Near Miss: Investigation into Airspace Safety Breach

ವಾಷಿಂಗ್ಟನ್,ಆಗಸ್ಟ್​ 06: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಪ್ರಯಾಣಿಸುತ್ತಿದ್ದ ಸೇನೆಯ ‘ಮರೀನ್ ಒನ್’ ಹೆಲಿಕಾಪ್ಟರ್ ಸಮೀಪ ಅಮೆರಿಕದ ವಾಣಿಜ್ಯ ವಿಮಾನವೊಂದು ಬಂದಿರುವ ಘಟನೆ ನಡೆದಿದೆ. ವಾಷಿಂಗ್ಟನ್ ಡಿಸಿ ವಿಮಾನ ನಿಲ್ದಾಣದ ಬಳಿ ಆಗಸ್ಟ್ 4 ರಂದು ಮಧ್ಯಾಹ್ನ 2.30 ರ ಸುಮಾರಿಗೆ ಈ ತಾಂತ್ರಿಕ ಅಡಚಣೆ ಸಂಭವಿಸಿದೆ.ಶ್ವೇತಭವನದಿಂದ ಜಂಟಿ ಸೇನಾ ನೆಲೆಗೆ ಟ್ರಂಪ್ ಅವರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಹಾರಾಟ ನಡೆಸುತ್ತಿದ್ದಾಗ, ಅದೇ ಮಾರ್ಗದಲ್ಲಿ ಪ್ರಯಾಣಿಕರ ಜೆಟ್ ವಿಮಾನವೊಂದು ಟೇಕ್-ಆಫ್ ಆಗಿತ್ತು.ವಾಯು ಸಂಚಾರ ನಿಯಂತ್ರಕರ ನಡುವಿನ ತಾಂತ್ರಿಕ ದೋಷದಿಂದಾಗಿ ‘ಎನ್ವಾಯ್ ಏರ್’ ವಿಮಾನವು ಮೆರೈನ್ ಒನ್ ಸಾಗುತ್ತಿದ್ದ ಮಾರ್ಗದಲ್ಲೇ ಭಾರಿ ಸಮೀಪದಲ್ಲಿ ಹಾದುಹೋಗಿದೆ.

ಅಧ್ಯಕ್ಷರಿಗೆ ಅಪಾಯವಿಲ್ಲ: ಘಟನೆಯ ಕುರಿತು ಸ್ಪಷ್ಟನೆ ನೀಡಿರುವ ಶ್ವೇತಭವನದ ವಕ್ತಾರ ಕುಶ್ ದೇಸಾಯಿ, “ಮರೀನ್ ಒನ್ ವಿಮಾನಗಳನ್ನು ವಿಶ್ವದ ಅತ್ಯುನ್ನತ ಪೈಲಟ್‌ಗಳು ನಿರ್ವಹಿಸುತ್ತಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುರಕ್ಷತೆಗೆ ಯಾವುದೇ ಕ್ಷಣದಲ್ಲೂ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಹೆಲಿಕಾಪ್ಟರ್ ಮತ್ತು ವಾಣಿಜ್ಯ ವಿಮಾನವೆರಡೂ ಯಾವುದೇ ಅಪಘಾತವಿಲ್ಲದೆ ನಿಗದಿತ ನಿಲ್ದಾಣಗಳಲ್ಲಿ ಸುರಕ್ಷಿತವಾಗಿ ಇಳಿದಿವೆ.

ಜನವರಿ 2025 ರ ಭೀಕರ ದುರಂತ: ಜನವರಿ 29, 2025 ರಂದು ವಾಷಿಂಗ್ಟನ್‌ನಲ್ಲಿ ಬ್ಲ್ಯಾಕ್ ಹಾಕ್ ಮಿಲಿಟರಿ ಹೆಲಿಕಾಪ್ಟರ್ ಮತ್ತು ಪ್ರಯಾಣಿಕರ ವಿಮಾನದ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ 67 ಜನರು ಮೃತಪಟ್ಟಿದ್ದರು.

ಬಿಗಿಗೊಳಿಸಲಾದ ಭದ್ರತಾ ನಿಯಮಗಳು: ಈ ಘಟನೆಯ ನಂತರ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಮಿಲಿಟರಿ ಹೆಲಿಕಾಪ್ಟರ್ ಮತ್ತು ಪ್ರಯಾಣಿಕರ ವಿಮಾನಗಳು ಒಂದೇ ಮಾರ್ಗದಲ್ಲಿ ಒಟ್ಟಿಗೆ ಸಾಗದಂತೆ ಎಫ್‌ಎಎ (FAA) ನಿಯಮಗಳನ್ನು ಅತ್ಯಂತ ಬಿಗಿಗೊಳಿಸಿತ್ತು. ಇದೀಗ ಆ ನಿಯಮ ಪಾಲನೆಯಲ್ಲಿ ಲೋಪವಾಗಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ. ಅಮೆರಿಕ ಅಧ್ಯಕ್ಷರು ಪ್ರಯಾಣಿಸುವ ಹೆಲಿಕಾಪ್ಟರ್‌ಗೆ ‘ಮರೀನ್ ಒನ್’ ಎಂದು ಕರೆಯಲಾಗುತ್ತದೆ. ಇದಕ್ಕೆ ವಿಶ್ವದಲ್ಲೇ ಅತ್ಯಂತ ಅನುಭವಸ್ಥ ಮಿಲಿಟರಿ ಪೈಲಟ್‌ಗಳು ಚಾಲಕರಾಗಿರುತ್ತಾರೆ.

ಮತ್ತಷ್ಟು ಓದಿ: ಇರಾನ್ ಜತೆ ಮತ್ತೆ ಶಾಂತಿ ಮಾತುಕತೆ, ದಾಳಿ ರದ್ದು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು

ಆ ದುರಂತದ ನಂತರ ವಾಷಿಂಗ್ಟನ್ ಆಕಾಶದಲ್ಲಿ ಹೆಲಿಕಾಪ್ಟರ್‌ಗಳ ಚಲನವಲನದ ಸಮಯದಲ್ಲಿ ಇತರ ವಿಮಾನಗಳ ಸಂಚಾರವನ್ನು ಕಡ್ಡಾಯವಾಗಿ ತಡೆಹಿಡಿಯುವ ನಿಯಮವನ್ನು ಎಫ್‌ಎಎ ಜಾರಿಗೆ ತಂದಿತ್ತು. ಈ ನಿಯಮ ಇರುವಾಗಲೂ ಮೆರೈನ್ ಒನ್ ಹೆಲಿಕಾಪ್ಟರ್ ಸಾಗುವಾಗ ಪ್ರಯಾಣಿಕ ವಿಮಾನಕ್ಕೆ ಟೇಕ್-ಆಫ್ ಮಾಡಲು ಅನುಮತಿ ನೀಡಿದ್ದು ಹೇಗೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.

ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣವು ಅಮೆರಿಕದ ಅತ್ಯಂತ ಐತಿಹಾಸಿಕ ಹಾಗೂ ಜನನಿಬಿಡ ವಾಯುಮಾರ್ಗಗಳಲ್ಲಿ ಒಂದಾಗಿದೆ. ಈ ಘಟನೆಯ ನಂತರ ವಾಯು ಸಂಚಾರ ನಿಯಂತ್ರಕರ ಶಿಫ್ಟ್ ಸಮಯ ಮತ್ತು ವಿಮಾನ ನಿಯಂತ್ರಣ ತಂತ್ರಜ್ಞಾನದಲ್ಲಿ ತಕ್ಷಣದ ತಿದ್ದುಪಡಿ ತರಲು ಎಫ್‌ಎಎ ಸೂಚಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version