ಸಚಿವ ಸ್ಥಾನ ವಂಚಿತ ಶಾಸಕರ ಬಂಡಾಯ ಶಮನಕ್ಕೆ ‘ಕೈ’ ಕಸರತ್ತು; ಕೃಷ್ಣಪ್ಪ, ಹೆಚ್​ಕೆ ಪಾಟೀಲ್, ಜಯಚಂದ್ರ ಮನವೊಲಿಕೆ – Kannada News | Karnataka Cabinet Expansion: CM DK Shivakumar and high Command leaders Moves to Pacify Unhappy MLAs

ಬೆಂಗಳೂರಿನಲ್ಲಿ ಸಿಎಂ ಡಿಕೆ ಶಿವಕುಮಾರ್ ಜತೆ ಸುರ್ಜೇವಾಲ ಸಭೆImage Credit source: tv9

ಬೆಂಗಳೂರು, ಆಗಸ್ಟ್ 6: ಸಚಿವ ಸ್ಥಾನ ಸಿಗದೆ ಬಂಡಾಯ ಎದ್ದಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಜ್ಜಾಗಿದ್ದರು. ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಸಂಪುಟ ವಿಸ್ತರಣೆ ಬೆನ್ನಲ್ಲೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಸಚಿವ ಸ್ಥಾನ ವಂಚಿತ ಶಾಸಕರ ಬಂಡಾಯ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಅಸಮಾಧಾನಿತರ ಮನವೊಲಿಸಲು ಖುದ್ದು ಡಿಕೆ ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ (Congress) ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅಖಾಡಕ್ಕಿಳಿದಿದ್ದರು. ಒಂದು ಹಂತದಲ್ಲಿ ಅತೃಪ್ತರ ಆಕ್ರೋಶ ತಣಿಸುವಲ್ಲಿ ಮುಖ್ಯಮಂತ್ರಿ ಯಶಸ್ವಿಯಾಗಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ತಮ್ಮ ರಾಜೀನಾಮೆ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ.

ಸಚಿವ ಸ್ಥಾನ ಸಿಗದೆ ಕೆಂಡಾಮಂಡಲರಾಗಿದ್ದ ಶಾಸಕ ಎಂ. ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಕೃಷ್ಣ ಅವರನ್ನೂ ಮನವೊಲಿಸಲಾಗಿದೆ. ಬುಧವಾರ ಕೃಷ್ಣಪ್ಪ ಅವರ ನಿವಾಸಕ್ಕೆ ಖುದ್ದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸುರ್ಜೇವಾಲ ತೆರಳಿದ್ದರು. ಸಚಿವರಾದ ಜಮೀರ್ ಅಹಮದ್, ಹೆಚ್.ಸಿ. ಬಾಲಕೃಷ್ಣ ಸೇರಿದಂತೆ ಹಲವರೂ ಭೇಟಿ ನೀಡಿದ್ದರು. ಪಕ್ಷದಿಂದ ತಪ್ಪಾಗಿರುವುದು ನಿಜ. ಮುಂದಿನ ದಿನಗಳಲ್ಲಿ ಸರಿಪಡಿಸುವುದಾಗಿ ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣ ಅವರಿಗೆ ಸಿಎಂ ಡಿಕೆಶಿ ಮತ್ತು ಸುರ್ಜೇವಾಲ ಆಶ್ವಾಸನೆ ನೀಡಿದ್ದಾರೆ. ಯಾವುದೇ ಭಿನ್ನಮತ, ಅಸಮಾಧಾನ ಇಲ್ಲ ಎಂದು ಭೇಟಿ ಬಳಿಕ ಸಿಎಂ ಡಿಕೆಶಿ ಹಾಗೂ ಸುರ್ಜೇವಾಲ ಹೇಳಿದ್ದಾರೆ.

ಎಂ. ಕೃಷ್ಣಪ್ಪ ಮಾತನಾಡಿ, ‘ತಪ್ಪಾಗಿದೆ, ಸರಿಪಡಿಸುತ್ತೇವೆ’ ಎಂದು ಸಿಎಂ ಭರವಸೆ ನೀಡಿದ್ದಾರೆ. ಸಚಿವ ಸ್ಥಾನ ಹೊರತುಪಡಿಸಿ ಬೇರೆ ಏನು ಕೊಟ್ಟರೂ ಒಪ್ಪಿಗೆ ಇಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಹೆಚ್.ಕೆ. ಪಾಟೀಲ್ ಅವರಿಗೂ ಈ ಬಾರಿ ಸಚಿವ ಸ್ಥಾನ ಕೈತಪ್ಪಿದೆ. ಮುನಿಸಿಕೊಂಡಿದ್ದ ಹೆಚ್.ಕೆ. ಪಾಟೀಲ್ ಅವರ ನಿವಾಸಕ್ಕೆ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಬಿ.ಕೆ. ಹರಿಪ್ರಸಾದ್ ಭೇಟಿ ನೀಡಿ ಅತೃಪ್ತಿ ತಣಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಹಾಗೂ ಹಂಗಾಮಿ ಸ್ಪೀಕರ್ ಆಫರ್ ತಿರಸ್ಕರಿಸಿರುವ ಶಿರಾ ಕ್ಷೇತ್ರದ ಶಾಸಕ ಟಿ.ಬಿ. ಜಯಚಂದ್ರ ಅವರ ನಿವಾಸಕ್ಕೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಭೇಟಿ ನೀಡಿದ್ದಾರೆ. ಕೆಲಹೊತ್ತು ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಅಸಮಾಧಾನಿತ ಶಾಸಕರಾದ ಅಶೋಕ್ ಪಟ್ಟಣ್, ಎನ್.ವೈ. ಗೋಪಾಲಕೃಷ್ಣ ಅವರಿಗೂ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಸಮಾಧಾನ ಹೇಳಿದ್ದಾರೆ.

ಇದೆಲ್ಲದರ ನಡುವೆ ಆಳಂದ ಶಾಸಕ ಬಿ.ಆರ್. ಪಾಟೀಲ್ ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನು ಗುಬ್ಬಿ ಶ್ರೀನಿವಾಸ್ ಅವರಿಗೆ ಸಿಎಂ ಕರೆ ಮಾಡಿ ಮನವೊಲಿಸಿದರೂ ಅಸಮಾಧಾನ ತಣಿದಿಲ್ಲ. ಅತ್ತ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹಾಗೂ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಕೂಡ ಇನ್ನೂ ಅಸಮಾಧಾನ ಹೊರಹಾಕುತ್ತಿದ್ದಾರೆ.

ಇಂದು ಬಂಗಾರಪೇಟೆ ಬಂದ್‌ಗೆ ಕರೆ; ಶಿವಣ್ಣನವರ್ ಪರ ಹಾವೇರಿಯಲ್ಲಿ ಪ್ರತಿಭಟನೆ

ಎಸ್.ಎನ್. ನಾರಾಯಣಸ್ವಾಮಿ ಅವರ ಬೆಂಬಲಿಗರು ಇಂದು ಬಂಗಾರಪೇಟೆ ಪಟ್ಟಣ ಬಂದ್‌ಗೆ ಕರೆ ನೀಡಿದ್ದಾರೆ. ಮತ್ತೊಂದೆಡೆ ಹಾವೇರಿಯಲ್ಲಿ ಕುರುಬ ಸಮುದಾಯದ ಶಾಸಕ ಶಿವಣ್ಣನವರ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಬೆಂಬಲಿಗರು ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ.

‘ಇದೊಂದು ಪೇಮೆಂಟ್ ಸಂಪುಟ’ ಎಂದು ವಿಪಕ್ಷ ನಾಯಕ ಅಶೋಕ್ ಕಿಡಿ

ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಹೈಕಮಾಂಡ್ ನಾಯಕರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆಡಿಯೋ ವೈರಲ್ ಆಗಿದ್ದು, ಇದು ವಿಪಕ್ಷ ನಾಯಕರಿಗೆ ಅಸ್ತ್ರವಾಗಿದೆ. ಇದನ್ನು ಉಲ್ಲೇಖಿಸಿ ವಿಪಕ್ಷ ನಾಯಕ ಅಶೋಕ್, ‘ಇದು ಪೇಮೆಂಟ್ ಸಂಪುಟ’ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಅಸಮಾಧಾನಿತ ಹಿರಿಯ ಶಾಸಕನ ಮನವೊಲಿಕೆಗೆ ಅಖಾಡಕ್ಕಿಳಿದ ಹೈಕಮಾಂಡ್

ಅದೇನೇ ಇರಲಿ, ಸಚಿವ ಸ್ಥಾನ ವಂಚಿತ ಶಾಸಕರ ಬಂಡಾಯ ಸದ್ಯಕ್ಕೆ ತಣ್ಣಗಾಗಿರಬಹುದು. ಆದರೆ, ಬೂದಿ ಮುಚ್ಚಿದ ಕೆಂಡದಂತೆ ಯಾವಾಗ ಬೇಕಾದರೂ ಕಿಡಿ ಹೊತ್ತಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೈಕ್ ಸವಾರನ ಮೇಲಿನ ದರ್ಪ ಪ್ರಕರಣ: ಮಾಲೂರು JMFC ಜಡ್ಜ್ ಗಾಯತ್ರಿ ಬೀದರ್‌ಗೆ ವರ್ಗಾವಣೆ – Kannada News | Judge Gayatri Transferred: High Court Acts on Malur JMFC’s Public Misconduct

ಬೆಂಗಳೂರು ಆ.6: ಬೈಕ್ ಸವಾರನ ಮೇಲೆ ದರ್ಪ ತೋರಿ, ಹೈಕೋರ್ಟ್‌ನಿಂದ ತರಾಟೆಗೆ ಒಳಗಾಗಿದ್ದ ಕೋಲಾರ ಜಿಲ್ಲೆಯ ಮಾಲೂರು ಜೆಎಂಎಫ್‌ಸಿ (JMFC) ನ್ಯಾಯಾಧೀಶೆ ಗಾಯತ್ರಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ. ಈ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಚಂದ್ರಶೇಖರ ರೆಡ್ಡಿ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಬೈಕ್ ಸವಾರ ವಿನಯ್ ಎಂಬಾತ ನ್ಯಾಯಾಧೀಶೆ ಗಾಯತ್ರಿ ಅವರ ಇನೋವಾ ಕಾರನ್ನು ಓವರ್‌ಟೇಕ್ ಮಾಡಿದ್ದಾನೆ ಎಂಬ ಕಾರಣಕ್ಕೆ ಆಕ್ರೋಶಗೊಂಡ ನ್ಯಾಯಾಧೀಶೆ ಬೈಕ್ ಸವಾರನ ಫಾಲೋ ಮಾಡಿಕೊಂಡು ಹೊಗಿ ಸಾರ್ವಜನಿಕವಾಗಿ ರಂಪಾಟ ನಡೆಸಿದ್ದರು. ಈ ಜಗಳದ ದೃಶ್ಯಾವಳಿಗಳು ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು. ಘಟನೆಯ ಬಳಿಕ ಬೈಕ್ ಸವಾರ ವಿನಯ್ ವಿರುದ್ಧ ಮಾಲೂರು ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲು ಮಾಡಲಾಗಿತ್ತು.

ತಮ್ಮ ವಿರುದ್ಧದ ನಕಲಿ ಪ್ರಕರಣ ರದ್ದುಗೊಳಿಸುವಂತೆ ಕೋರಿ ಬೈಕ್ ಸವಾರ ವಿನಯ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆದಿತ್ತು. ಪ್ರಕರಣವನ್ನು ತೀವ್ರವಾಗಿ ಪರಿಗಣಿಸಿದ ಪೀಠವು, ಎಫ್‌ಐಆರ್ ದಾಖಲಿಸಿದ್ದಕ್ಕೆ ತರಾಟೆಗೆ ತೆಗೆದುಕೊಂಡಿತ್ತಲ್ಲದೆ, ನ್ಯಾಯಾಧೀಶೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ರಿಜಿಸ್ಟ್ರಾರ್‌ಗೆ ಸೂಚನೆ ನೀಡಿದ್ದರು.

ಇದನ್ನೂ ಓದಿ: 120 ಕೋಟಿ ಮಠದ ಜಮೀನು ಕಬಳಿಕೆ ಕೇಸ್: ಕೊನೆಗೂ ಪೊಲೀಸರ ಮುಂದೆ ಹಾಜರಾದ ಕಿಂಗ್‌ಪಿನ್ ನರೇಶ್ ಗೌಡ

ಹೈಕೋರ್ಟ್ ನೀಡಿದ ನಿರ್ದೇಶನದ ಬೆನ್ನಲ್ಲೇ ಇದೀಗ ನ್ಯಾಯಾಧೀಶೆ ಗಾಯತ್ರಿ ಅವರನ್ನು ಹುಮ್ನಾಬಾದ್‌ಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿತ್ಯ ಭವಿಷ್ಯ : ಇಂದು ಈ ರಾಶಿಯವರ ಜವಾಬ್ದಾರಿ ಅಧಿಕವಾಗಿದ್ದು, ಅವರ ನಂಬಿಕೆಯ ಮೇಲೆ ಹೂಡಿಕೆ ಮಾಡುವರು – Kannada News | Daily Horoscope August 6, 2026: Zodiac Insights, Challenges and Opportunities for You

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಗ್ರೀಷ್ಮ ಋತುವಿನ ಆಷಾಢ ಮಾಸದ ಕೃಷ್ಣ ಪಕ್ಷದ ಅಷ್ಟಮೀ ತಿಥಿಯ ಗುರುವಾರದಂದು ಕ್ರಿಯಾಶೀಲತೆ, ನಿಮ್ಮ ಸುತ್ತಲೂ ವಿರೋಧ, ಗಣ್ಯರ ಭೇಟಿ, ವಿಳಂಬ ನಿರ್ಣಯ, ಅಧ್ಯಾತ್ಮದಲ್ಲಿ ನಿರಾಸಕ್ತಿ, ಗೆಲುವಿನ ನಡೆ, ಕೆಟ್ಟ ಕನಸು ಇವೆಲ್ಲ ಈ ದಿನದ ಭವಿಷ್ಯ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಆಶ್ಲೇಷಾ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ಧ್ರುವ, ಕರಣ : ತೈತಿಲ, ಸೂರ್ಯೋದಯ – 06 – 07 am, ಸೂರ್ಯಾಸ್ತ – 06 – 43 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14:00 – 15:35, ಯಮಗಂಡ ಕಾಲ 06:07 – 07:42, ಗುಳಿಕ ಕಾಲ 09:16 – 10:51

ಮೇಷ ರಾಶಿ :

ನಿಮ್ಮ ಹಣವು ಹೋಗಬೇಕಾದ ವ್ಯಕ್ತಿಗೆ ಹೋಗದೇ ತಪ್ಪಿ ಇನ್ನೊಬ್ಬರಿಗೆ ಹೋಗಿ ನಿಮಗೆ ತೊಂದರೆ ಆದೀತು. ಹಿರಿಯರ ಮಾತಿಗೆ ಅಗೌರವ ಬೇಡ.‌ ಸಮೂಹದಲ್ಲಿ ಇರುವಾಗ ಎಲ್ಲರ ಮಾತಿಗೂ ಬೆಲೆ ಕೊಡಬೇಕಾಗುವುದು. ಒಂದು ಉದ್ಯೋಗದಲ್ಲಿ ಮನವು ಸ್ಥಿರವಾಗಿರಲಿ. ಧನಾಗಮನದ ನಿರೀಕ್ಷೆಯಲ್ಲಿ ನೀವಿರುವಿರಿ. ಸತ್ಯಾಸತ್ಯತೆಗಳ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಸಿಗದೇ ಇದ್ದೀತು. ಪತ್ನಿಯ ಸಹಕಾರವನ್ನು ಅತಿಯಾಗಿ ತೆಗದುಕೊಳ್ಳುವುದು ಬೇಡ.

ವೃಷಭ ರಾಶಿ :

ನಿಮಗೆ ಅಸ್ಪಷ್ಟ ಮಾಹಿತಿಗಳು ನಿಮ್ಮ ದಿಕ್ಕು ತಪ್ಪಿಸಬಹುದು. ಅದೃಷ್ಟವನ್ನು ಹುಡುಕುತ್ತಿದ್ದರೆ ಅದಕ್ಕೆ ನಿಮ್ಮ ಅನುವರ್ತಿತ್ವವೂ ಇರಲಿ. ಅತಿಯಾದ ಪ್ರಯಾಣದಿಂದ ಆಯಾಸ ಮತ್ತು ಒತ್ತಡಗಳು ನಿರ್ಮಾಣವಾಗುವುದು. ಹಣದಿಂದ ಮನೆಯನ್ನು ಖದೀದಿಸಬಹುದು ನೆಮ್ಮದಿ, ಸಂತೋಷ, ಬಾಂಧವ್ಯವನ್ನಲ್ಲ. ನೀವು ಇಂದು ಮಿತ ಬಳಕೆಯನ್ನು ಇಷ್ಟೊಡವಹುದು. ಭೂಮಿಯ ವ್ಯವಹಾರವನ್ನು ಒಬ್ಬೊಂಟಿಯಾಗಿ ನಿರ್ವಹಿಸುವಿರಿ.

ಮಿಥುನ ರಾಶಿ :

ಅಧಿಕಾರವನ್ನು ನಡೆಸಲು ಕೇವಲ ಬುದ್ಧಿ ಜ್ಞಾನ ಸಾಲದು. ಎದೆಗಾರಿಕೆ ಹಾಗೂ ತಂತ್ರವೂ ಬೇಕು. ನಿಯಮಗಳು ನಿಮಗೆ ತೊಂದರೆಯಾದೀತು. ಅದನ್ನು ಮುರಿಯಲು ನೀವು ಪ್ರಯತ್ನಿಸಬಹುದು.‌ ನಿಮಗೆ ಮಾರ್ಗದರ್ಶನ ಮಾಡಲು ಯಾರಾದರೂ ಬರಬಹುದು. ನಿಮ್ಮ ಮಾತನ್ನು ಯಾರೂ ಕೇಳದೇಹೋಗಬಹುದು. ಸಕಾರಾತ್ಮಕ ವಿಷಯಗಳು ವೇಗವನ್ನು ಪಡೆಯುತ್ತವೆ.‌ ಮಕ್ಕಳಿಗಾಗಿ ನೀವು ಹೊಸ ವಾಹನವನ್ನು ಖರೀದಿಸಬಹುದು.

ಕರ್ಕಾಟಕ ರಾಶಿ :

ನಿಮ್ಮ ಎಲ್ಲ ಕಾರ್ಯವನ್ನೂ ಗಮನಿಸುವರು. ಇಂದು ನಿಮಗೆ ಬೆಳಗ್ಗೆಯಿಂದ ಮನಸ್ಸು ಜಾಡ್ಯದಿಂದ ಇರಲಿದೆ. ಸ್ವಾಭಿಮಾನದ ವಿಚಾರಕ್ಕೆ ಬಂದರೆ ನೀವು ಬಹಳ ನಿಷ್ಠುರರು.‌ ಯಾರ ಸಹಾಯವನ್ನೂ ಬಾಯೊಡೆದು ಕೇಳುವ ಜಾಯಮಾನವಲ್ಲ. ಅತಿಯಾದ ಆಯಾಸವು ನಿಮ್ಮನ್ನು ವಿಶ್ರಾಂತಿಗೆ ತಳ್ಳಬಹುದು. ಈ ದಿನ ಬೇಸರ ಎನಿಸಿದರೆ ಹೊರಗೆ ಒಂಟಿಯಾಗಿ ಸುತ್ತಾಡಿ ಬನ್ನಿ.‌ ಅಪರಿಚಿತರ ನಂಬಿ ವ್ಯವಹಾರವನ್ನು ಮಾಡಲು ಯೋಜಿಸುವುದು ಬೇಡ.

ಸಿಂಹ ರಾಶಿ :

ಹೊಸ ಉದ್ಯಮಕ್ಕೆ ಬಂಡವಾಳ ಹಾಕುವುದು ಸದ್ಯ ಮುಂದುವರಿಯುವುದು ಬೇಡ. ನ್ಯಾಯಾಲಯದ ಮೆಟ್ಟಲೇರುವ ಸಂದರ್ಭವನ್ನು ನೀವು ತಂದುಕೊಳ್ಳುವುದು ಬೇಡ. ಬೆಟ್ಟ ಗುಡ್ಡಗಳನ್ನು ಸುತ್ತುವುದು ನಿಮಗೆ‌ ಪ್ರಿಯವಾದ ಸಂಗತಿಯಾದೀತು. ಒತ್ತಡಗಳಿಗೆ ಸಿಲುಕಿ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವುದು ಬೇಡ. ಮನೆಯಲ್ಲಿಯೇ ವಾಸಿಸುವವರು ಸಣ್ಣ ಆದಾಯದ ಬಗ್ಗೆ ಆಲೋಚಿಸುವರು. ಯಾರಾದರೂ ಮುಖಸ್ತುತಿಯನ್ನು ಮಾಡಬಹುದು.

ಕನ್ಯಾ ರಾಶಿ :

ಇಂದು ಮನೆಯ ಸಣ್ಣ ಖರ್ಚುಗಳೂ ದೊಡ್ಡದಾದ ಮೊತ್ತವನ್ನು ಕಳೆಯುವುದು. ನಿಮಗೆ ದಂಪತಿಯ ಜೊತೆ ಪುಣ್ಯಸ್ಥಳಗಳ ಭೇಟಿ ಮಾಡುವ ಬಯಕೆ ಇರಲಿದೆ. ಭೂಮಯಿಂದ ಪಡೆಯುವ ವಸ್ತುಗಳ ಮಾರಾಟಕ್ಕೆ ಶ್ರಮ ಹೆಚ್ಚು ಬೇಕಾಗುವುದು. ಪತ್ನಿಗಾಗಿ ಅಚ್ಚರಿಯ ಉಡುಗೊರೆಯೊಂದನ್ನು ನೀವು ಕೊಡುವಿರಿ.‌ ನಿಮ್ಮ ವರ್ತನೆಯನ್ನು ಗಮನಿಸುತ್ತಿರಬಹುದು. ವೈದ್ಯವೃತ್ತಿಯನ್ನು ಬಹಳ ನಾಜೂಕಾಗಿ ಮಾಡಬೇಕಾಗುವುದು. ಹಿರಿಯರು ನಿಮ್ಮ‌ ಬಗ್ಗೆ ವ್ಯಂಗ್ಯವಾಗಿ ಮಾತನಾಡಬಹುದು.

ತುಲಾ ರಾಶಿ :

ಭೂಮಿ ವ್ಯವಹಾರದಲ್ಲಿ ಅನಿರೀಕ್ಷಿತ ಆದಾಯವು ಆಗುವುದು. ನೀವು ಅನುಮಾನ ಬರುವಂತಹ ವರ್ತನೆಯನ್ನು ತೋರಿಸುವಿರಿ. ಸ್ವಲ್ಪ ಕಾಲದ ಏನನ್ನೂ ಯೋಚಿಸದೇ ಇರಲು ಪ್ರಯತ್ನಿಸಿ. ನಿಮ್ಮ‌ ಕೆಲಸವು ಮಂದಗತಿಯಲ್ಲಿ ಸಾಗಬಹುದು. ಮನೆಯ ನಿರ್ಮಾಣವೂ ನಿಧಾನವಾಗಿ ನಿಮಗೆ ಬೇಸರವಾದೀತು‌. ಪಕ್ಷಪಾತ ಧೋರಣೆಯನ್ನು ನೀವು ಬಿಟ್ಟರೆ ಮಾತ್ರ ಒಳ್ಳೆಯದು. ಕೆಲವು ಜನರ ಭೇಟಿಯು ನಿಮಗೆ ಖುಷಿ ಕೊಡುವುದು. ಹೂಡಿಕೆಯ ವಿಚಾರದಲ್ಲಿ ಸಮಸ್ಯೆಯಾಗಬಹುದು. ಕಾನೂನಿನ ತೀರ್ಮಾನಕ್ಕೆ ತಲೆಬಾಗುವುದು ಸೂಕ್ತ.

ವೃಶ್ಚಿಕ ರಾಶಿ :

ಇಂದು ನಿಮ್ಮ ಕಲ್ಪನೆಯಂತೆ ಬದುಕು ನಡೆಯದು ಎಂಬ ಸತ್ಯ ತಿಳಿಯುವುದು. ದೂರಪ್ರಯಾಣ ಸುಖಕರವಾಗಿ ಇರುವಿದಾದರೂ ಅನಂತರ ಕಷ್ಟಪಡಬೇಕಾದೀತು. ನೀವು ಇಂದು ಕುಟುಂಬದ ವೃತ್ತಿಯಲ್ಲಿ ಮುಂದುವರಿಯುವ ಆಸೆ ಬರುವುದು. ಅನ್ಯರಿಗೆ ತೋರಿದ ಸಹಾನುಭೂತಿಯಿಂದ ನಿಮಗೇ ವಂಚನೆ. ಯಾರನ್ನೂ ಅವಲಂಬಿಸುವುದು ನಿಮಗೆ ಕಷ್ಟವಾಗುವುದು. ಕಾದಾಟದಿಂದ ಸಮಯವು ವ್ಯರ್ಥವಾಗಲಿದೆ. ಬೇಸರದ ಮಾತಿನಿಂದ ಆಪ್ತರನ್ನು ದೂರ ಮಾಡಿಕೊಳ್ಳುವಿರಿ.

ಇದನ್ನೂ ಓದಿ: ಈ ರಾಶಿಗೆ ಸೂರ್ಯನ ಆಗಮನ, ಈ ರಾಶಿಗಳಿಗೆ ಸೂರ್ಯನ ಬೆಳಕು…?

ಧನು ರಾಶಿ :

ಮನೆಯಲ್ಲಿ ನಿಮ್ಮ ಮಾತಿಗೆ ಬೆಲೆ ಸಿಗುತ್ತದೆ. ಯಾರ ಬಗ್ಗೆಯೂ ತಿಳಿಯದೇ ಮಾತನಾಡುವುದು ನಿಮಗೆ ಉಚಿತವಲ್ಲ. ವಂಚನೆಗೆ ನೀವು ಬೆಲೆಯನ್ನು ಕೊಡಬೇಕಾದೀತು. ಇಂದಿನ ಕೆಲವು ಅಂಶಗಳು ನಿಮಗೆ ಪಾಠವಾಗಲಿವೆ. ನೀವು ಇಂದು ಬಯಸಿದ್ದನ್ನು ಪಡೆದುಕೊಂಡು ನೆಮ್ಮದಿಯಾಗಿ ಇರುವಿರಿ. ತಂದೆಯಿಂದ ಸಹಕಾರವನ್ನು ಪಡೆಯುವಿರಿ. ನಿಮ್ಮ ನೇರ ಮಾತಿನಿಂದ ತೊಂದರೆ ಆಗಬಹುದು. ಪ್ರೇಮದಲ್ಲಿ ಯಾರನ್ನಾದರೂ ನಿಮ್ಮವರನ್ನಾಗಿ ಮಾಡಿಕೊಳ್ಳುವ ಕಲೆ ನಿಮಗೆ ತಿಳಿಯದು.

ಮಕರ ರಾಶಿ :

ನೀವು ಸಣ್ಣ ಬುದ್ಧಿಯನ್ನು ಬಿಟ್ಟು ವ್ಯವಹರಿಸಿದರೆ ವ್ಯಾಪರಕ್ಕೆ ಅನುಕೂಲವಿದೆ. ಅನೇಕ ಶುಭಸೂಚನೆಗಳು ನಿಮಗೆ ಕಾಣಿಸುವುದು. ನಿಮ್ಮದೇ ಹಣವಾದರೂ ನೀವು ಅದನ್ನು ಪಡೆಯಲು ಓಡಾಟ ಮಾಡಬೇಕಾದೀತು. ನಿಮಗೆ ಹೇಳಿದ ಕಾರ್ಯವನ್ನು ಶ್ರದ್ಧೆಯಿಂದ ಮಾಡುವಿರಿ. ಪಾಲುದಾರಿಕೆಯಲ್ಲಿ ಸಣ್ಣ ವಿಷಯವನ್ನೂ ಗಂಭೀರವಾಗಿ ಪರಿಹಣಿಸುವಿರಿ. ಸಹೋದ್ಯೋಗಿಗಳ ಕಿರಿಕಿರಿಯಿಂದ ಉದ್ಯೋಗವನ್ನು ಬದಲಿಸುವಿರಿ.

ಕುಂಭ ರಾಶಿ :

ಇಂದು ನಿಮ್ಮ ಕೆಲವು ಮಾತುಗಳು ಬೇರೆಯವರು ಆತುರದ ನಿರ್ಧಾರವನ್ನು ತೆಗದುಕೊಳ್ಳುವಂತೆ ಮಾಡಬಹುದು. ಇಂದು ನಿಮ್ಮ ಸ್ನೇಹ ಸಂಬಂಧವು ಸಡಿಲಾಗುವ ಸಾಧ್ಯತೆ ಇದೆ. ಅಗ್ನಿ, ವಿದ್ಯುತ್ ಗಳಿಗೆ ಸಂಬಂಧಿಸಿದ ವಿಚಾರದಲ್ಲಿ ಜಾಗರೂಕತೆ ಇರಲಿ. ಹೊಸ ವಿಚಾರದ ಸಾಹಿತ್ಯ ಸಂಪಾದನೆಗೆ ತೊಡಗುವಿರಿ. ವಸ್ತುಗಳನ್ನು ಕಳೆದುಕೊಂಡು ಸಂಕಟಪಡಬೇಕಾದೀತು. ವ್ಯಾಪಾರ ಮಾಡುವ ಜನರ ಜೊತೆ ಸೇರಿ ಕೆಲವು ಕೆಲಸಗಳನ್ನು ಮಾಡಲು ಅವಕಾಶವಿದೆ.

ಮೀನ ರಾಶಿ :

ಧಾರ್ಮಿಕ ಕಾರ್ಯಗಳಿಂದ ಉತ್ತಮ‌ ಯಶಸ್ಸು ಪ್ರಾಪ್ತಿಯಾಗುವುದು. ನೀರಿನ ಸೇವೆನೆಯಿಂದ ಆರೋಗ್ಯ ಸುಧಾರಣೆ ಸಾಧ್ಯತೆ. ನಿಮಗೆ ತೋರಿದ ಪ್ರೀತಿಯನ್ನು ಉಳಿಸಿಕೊಳ್ಳಬೇಕಾಗುವುದು. ತೆರಿಗೆಗೆ ಸಂಬಂಧಿಸಿದಂತೆ ನಿಮ್ಮ ದಾಖಲೆಗಳು ಸರಿಯಾಗಿರಲಿ. ಆರೋಗ್ಯವು ಹದವು ತಪ್ಪಬಹುದು. ವಾಹನಕ್ಕಾಗಿ ಖರ್ಚನ್ನು ಮಾಡಬೇಕಾದೀತು. ನಿಮ್ಮ ಸಣ್ಣ ಮನಸ್ಸನ್ನು ಅವರಿಗೆ ತೋರಿಸಬೇಡಿ. ಉನ್ನತ ಅಧ್ಯಯನವನ್ನು ಬಯಸಿ ಬೇರೆ ಕಡೆಗೆ ತೆರಳುವಿರಿ.

-ಲೋಹಿತ್ ಹೆಬ್ಬಾರ್-8762924271 (what’s app only)

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತ ಮತ್ತು ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ಬಾಂಗ್ಲಾದೇಶದ ಮಾಜಿ ಪಿಎಂ ಶೇಖ್ ಹಸೀನಾ – Kannada News | Sheikh Hasina Says India Always Stands By Bangladesh Hails PM Modi

ನವದೆಹಲಿ, ಆಗಸ್ಟ್ 5: 2024ರಲ್ಲಿ ಬಾಂಗ್ಲಾದೇಶದ ಪ್ರಧಾನಿ ಸ್ಥಾನದಿಂದ ಪದಚ್ಯುತಗೊಂಡ ನಂತರ ದೆಹಲಿಯಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ (Sheikh Hasina) ಇಂದು ನಡೆಸಿದ ತಮ್ಮ ಮೊದಲ ಮಾಧ್ಯಮ ಸಂವಾದದಲ್ಲಿ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ದೆಹಲಿಯಿಂದ ವರ್ಚುವಲ್ ಆಗಿ ಅಂತಾರಾಷ್ಟ್ರೀಯ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶೇಖ್ ಹಸೀನಾ, ಭಾರತವನ್ನು ಬಾಂಗ್ಲಾದೇಶದ ದೊಡ್ಡ ಮಿತ್ರ ಎಂದು ಬಣ್ಣಿಸಿದರು. ಬಾಂಗ್ಲಾದೇಶದ ಕಷ್ಟದ ಸಮಯದಲ್ಲಿ ಭಾರತ ಯಾವಾಗಲೂ ಬಾಂಗ್ಲಾದೇಶದ ಪರವಾಗಿ ನಿಂತಿದೆ ಮತ್ತು ಮುಂದೆಯೂ ನಿಲ್ಲಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಭಾರತವನ್ನು ಅತ್ಯಂತ ನಂಬಿಕಸ್ಥ ಮಿತ್ರ ರಾಷ್ಟ್ರ ಎಂದು ಬಣ್ಣಿಸಿದ್ದು, 1971ರ ವಿಮೋಚನಾ ಯುದ್ಧ, 1975ರ ಕಠಿಣ ಸಮಯ ಹಾಗೂ ಪ್ರಸ್ತುತ ಎದುರಾಗಿರುವ ಬಿಕ್ಕಟ್ಟು ಸೇರಿದಂತೆ ಪ್ರತಿಯೊಂದು ಸಂಕಷ್ಟದ ಸಂದರ್ಭಗಳಲ್ಲೂ ಭಾರತವು ಬಾಂಗ್ಲಾದೇಶಕ್ಕೆ ನಿರಂತರ ಬೆಂಬಲ ನೀಡಿದೆ ಎಂದು ಹೇಳಿದ್ದಾರೆ. ಹಾಗೇ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, ಭಾರತ ಸರ್ಕಾರವು ತಮ್ಮನ್ನು ರಾಷ್ಟ್ರದ ಮುಖ್ಯಸ್ಥೆಯಂತೆ ಅತ್ಯಂತ ಗೌರವ ಮತ್ತು ಆತ್ಮೀಯತೆಯಿಂದ ನಡೆಸಿಕೊಂಡಿದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs SL: ತನ್ನ ದೌರ್ಬಲ್ಯವನ್ನು ಮೆಟ್ಟಿ ನಿಲ್ಲುವತ್ತ ಟೀಂ ಇಂಡಿಯಾ ಚಿತ್ತ – Kannada News | Team India’s Fielding Woes: Gambhir Aims to Fix Dropped Catches in Sri Lanka Tour

ಕ್ರಿಕೆಟ್​ನಲ್ಲಿ ಕ್ಯಾಚ್​ಗಳು ಪಂದ್ಯಗಳನ್ನು ಗೆಲ್ಲಿಸುತ್ತವೆ ಎಂಬ ನಾಣ್ಣುಡಿ ಪ್ರಸಿದ್ಧವಾಗಿದೆ. ಇದಕ್ಕೆ ನಿದರ್ಶನವಾಗಿ ಹಲವು ಪಂದ್ಯಗಳು ನಮ್ಮ ಮುಂದೆ ಉದಾಹರಣೆಯಾಗಿವೆ. ಅದರಂತೆ ಕ್ಯಾಚ್‌ಗಳನ್ನು ಕೈಚೆಲ್ಲುವುದು ಪಂದ್ಯದ ಸೋಲಿಗೆ ಆಹ್ವಾನ ನೀಡಿದಂತೆ ಎಂಬುದು ಕೂಡ ಅಷ್ಟೇ ಸತ್ಯ. ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾ (Team India) ಪದೇ ಪದೇ ಕ್ಯಾಚ್‌ಗಳನ್ನು ಕೈಚೆಲ್ಲುತ್ತಿದೆ. ಇದರಿಂದಾಗಿ ಹಲವು ಪಂದ್ಯಗಳನ್ನು ಸೋತಿದೆ. ಹೀಗಾಗಿ ತಂಡದ ಫಿಲ್ಡಿಂಗ್​ ಕೋಚ್​​ನ ತಲೆದಂಡ ಕೂಡ ಆಗಿದೆ. ಇದೀಗ ಹೋಸ ಕೋಚ್​ನ ಉಪಸ್ಥಿತಿಯಲ್ಲಿ ಟೀಂ ಇಂಡಿಯಾ ತನ್ನ ನ್ಯೂನತೆಯನ್ನು ಸರಿಪಡಿಸಿಕೊಳ್ಳಲು ಸಜ್ಜಾಗಿದೆ.

ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಿರುವ ಟೀಂ ಇಂಡಿಯಾ ಇಂದಿನಿಂದ ತನ್ನ ಅಭ್ಯಾಸ ಆರಂಭಿಸಿದೆ. ಅಭ್ಯಾಸದ ಮೊದಲ ದಿನದಂದು ತಂಡದ ಆಟಗಾರೆಲ್ಲರು ಕ್ಯಾಚಿಂಗ್ ಅಭ್ಯಾಸ ನಡೆಸಿದರು. ಶ್ರೀಲಂಕಾದ ಕೊಲಂಬೊದಲ್ಲಿರುವ ಎನ್‌ಸಿಸಿ ಮೈದಾನದಲ್ಲಿ, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ರಿಷಭ್ ಪಂತ್, ಧ್ರುವ್ ಜುರೆಲ್ ಸ್ಲಿಪ್ ಕ್ಯಾಚಿಂಗ್ ಕೌಶಲ್ಯವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಅಭ್ಯಾಸ ನಡೆಸಿದರು. ಇದಕ್ಕೆ ಕಾರಣವೂ ಇದ್ದು ಕಳೆದ ಕೆಲವು ತಿಂಗಳುಗಳಿಂದ ತಂಡದ ಫಿಲ್ಡಿಂಗ್ ಪ್ರದರ್ಶನ ತೀರ ಕಳಪೆಯಾಗಿದೆ ಎಂಬುದನ್ನು ಈ ಕೆಳಗಿನ ಅಂಕಿಅಂಶಗಳೇ ಹೇಳುತ್ತಿವೆ.

13 ಪಂದ್ಯಗಳಲ್ಲಿ 21 ಕ್ಯಾಚ್‌ ಡ್ರಾಪ್

ಟೀಂ ಇಂಡಿಯಾ ಇತ್ತೀಚೆಗೆ ಯುಕೆ ಮತ್ತು ಜಿಂಬಾಬ್ವೆ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸದಲ್ಲಿ ಒಟ್ಟು 13 ಪಂದ್ಯಗಳು ನಡೆದವು. ಯುಕೆಯಲ್ಲಿ ನಡೆದ 10 ಪಂದ್ಯಗಳಲ್ಲಿ ಟೀಂ ಇಂಡಿಯಾ 11 ಕ್ಯಾಚ್‌ಗಳನ್ನು ಕೈಬಿಟ್ಟರೆ, ಜಿಂಬಾಬ್ವೆಯಲ್ಲಿ ನಡೆದ ಮೂರು ಪಂದ್ಯಗಳಲ್ಲಿ 10 ಕ್ಯಾಚ್‌ಗಳನ್ನು ಕೈಬಿಟ್ಟಿತ್ತು. ಯುಕೆ ಮತ್ತು ಜಿಂಬಾಬ್ವೆ ಪ್ರವಾಸಗಳಲ್ಲಿ ಟೀಂ ಇಂಡಿಯಾ ಒಟ್ಟಾರೆಯಾಗಿ ಕೇವಲ ನಾಲ್ಕು ಕ್ಯಾಚ್‌ಗಳನ್ನು ಮಾತ್ರ ತೆಗೆದುಕೊಂಡಿತು.

ಪ್ರತಿ ಪಂದ್ಯದಲ್ಲೂ 2-3 ಕ್ಯಾಚ್‌ ಡ್ರಾಪ್

2026 ರ ಟಿ20 ವಿಶ್ವಕಪ್‌ನಲ್ಲೂ ಇದೇ ರೀತಿಯ ಪರಿಸ್ಥಿತಿ ಉಂಟಾಗಿತ್ತು, ಅಲ್ಲಿ ಗುಂಪು ಹಂತದಲ್ಲಿ 10 ತಂಡಗಳಲ್ಲಿ ಭಾರತ ತಂಡದ ಕ್ಯಾಚಿಂಗ್ ಪ್ರದರ್ಶನ ಅತ್ಯಂತ ಕೆಟ್ಟದಾಗಿತ್ತು. ಟಿ20 ವಿಶ್ವಕಪ್ ಗುಂಪು ಹಂತದ ಪ್ರತಿ ಪಂದ್ಯದಲ್ಲೂ ಎರಡರಿಂದ ಮೂರು ಕ್ಯಾಚ್‌ಗಳನ್ನು ಕೈಬಿಟ್ಟಿತು. ಹೀಗಾಗಿ ತಂಡದ ಕ್ಯಾಚಿಂಗ್ ಶೇಕಡಾವಾರು 70 ಕೂಡ ಇರಲಿಲ್ಲ.

ಟೆಸ್ಟ್ ಸರಣಿಯಲ್ಲಿ 23 ಕ್ಯಾಚ್‌ಗಳು ಡ್ರಾಪ್

ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದಲ್ಲಿ ಆಡಿದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 23 ಕ್ಯಾಚ್‌ಗಳನ್ನು ಕೈಬಿಟ್ಟಿತು. ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಮೊದಲ ಎರಡು ಟೆಸ್ಟ್‌ಗಳಲ್ಲಿ 23 ಕ್ಯಾಚ್‌ಗಳಲ್ಲಿ 13 ಕ್ಯಾಚ್‌ಗಳನ್ನು ಕೈಬಿಟ್ಟಿತು. ಆ 13 ಕ್ಯಾಚ್‌ಗಳಲ್ಲಿ ಎಂಟು ಕ್ಯಾಚ್‌ಗಳನ್ನು ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಕೈಬಿಡಲಾಯಿತು. ಗಮನಾರ್ಹವಾಗಿ, ಲೀಡ್ಸ್ ಟೆಸ್ಟ್‌ನಲ್ಲಿ ಆ ಎಂಟು ಕ್ಯಾಚ್‌ಗಳಲ್ಲಿ, ಯಶಸ್ವಿ ಜೈಸ್ವಾಲ್ ಒಬ್ಬರೇ ನಾಲ್ಕು ಕ್ಯಾಚ್‌ಗಳನ್ನು ಕೈಬಿಟ್ಟರು. ಸ್ಲಿಪ್‌ನಲ್ಲಿ ಮೂರು ಕ್ಯಾಚ್‌ಗಳನ್ನು ಕೈಚೆಲ್ಲಿದ ಜೈಸ್ವಾಲ್, ಔಟ್‌ಫೀಲ್ಡ್‌ನಲ್ಲಿ ಒಂದನ್ನು ಕೈಬಿಟ್ಟರು.

ಏಷ್ಯನ್ ಗೇಮ್ಸ್‌ ಕ್ರಿಕೆಟ್ ವೇಳಾಪಟ್ಟಿ ಪ್ರಕಟ; ಹೀಗಾದ್ರೆ ಮಾತ್ರ ಭಾರತ- ಪಾಕ್ ಮುಖಾಮುಖಿ

ಅನುಭವಿಗಳ ಅನುಪಸ್ಥಿತಿಯ ಪರಿಣಾಮ

ರಹಾನೆ, ರೋಹಿತ್ ಮತ್ತು ವಿರಾಟ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾದ ಫೀಲ್ಡಿಂಗ್ ಮತ್ತು ಸ್ಲಿಪ್ ಫೀಲ್ಡಿಂಗ್ ಅತ್ಯಂತ ಕಳಪೆಯಾಗಿದೆ. ಇದಕ್ಕೆ ಅತ್ಯಂತ ಗಮನಾರ್ಹ ಉದಾಹರಣೆಯೆಂದರೆ ರಹಾನೆ, ರೋಹಿತ್ ಮತ್ತು ವಿರಾಟ್ ತಂಡದಲ್ಲಿದ್ದಾಗ, ಟೀಂ ಇಂಡಿಯಾ 2018 ಮತ್ತು 2021-22 ಇಂಗ್ಲೆಂಡ್ ಪ್ರವಾಸಗಳಲ್ಲಿ ಕೇವಲ 13 ಕ್ಯಾಚ್‌ಗಳನ್ನು ಮಾತ್ರ ಕೈಬಿಟ್ಟಿತು. ಆದರೆ ಈ ಮೂವರ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ 2025 ರಲ್ಲಿ ಬರೋಬ್ಬರಿ 23 ಕ್ಯಾಚ್‌ಗಳನ್ನು ಕೈಬಿಟ್ಟಿತು.

ಹೀಗಾಗಿ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಶ್ರೀಲಂಕಾಕ್ಕೆ ಬಂದ ಕೂಡಲೇ ಬ್ಯಾಟಿಂಗ್ ಮತ್ತು ಬೌಲಿಂಗ್ ಅನ್ನು ಬದಿಗಿಟ್ಟು, ಮೊದಲು ತಮ್ಮ ತಂಡದ ದೊಡ್ಡ ದೌರ್ಬಲ್ಯವನ್ನು ಸರಿಪಡಿಸಿಕೊಳ್ಳಲು ಮುಂದಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:45 pm, Wed, 5 August 26

Source link

‘ರಾಮಾಯಣ’ ರಿಲೀಸ್ ದಿನಾಂಕದ ಕುತೂಹಲಕ್ಕೆ ತೆರೆ? ಚಿತ್ರತಂಡದ ಪ್ಲ್ಯಾನ್ ಬಹಿರಂಗ – Kannada News | Ranbir Kapoor Yash Sai Pallavi starrer Ramayana Movie likely to be released on This date

ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ರಾಮಾಯಣ’ (Ramayana) ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಈ ಚಿತ್ರವು ದೀಪಾವಳಿ ಹಬ್ಬದಂದು ಬಿಡುಗಡೆಯಾಗಲಿದೆ ಎಂದು ಟ್ರೇಲರ್‌ನಲ್ಲಿ ಹೇಳಲಾಗಿತ್ತಾದರೂ, ನಿಖರವಾದ ದಿನಾಂಕವನ್ನು (Ramayana  Release Date) ಬಹಿರಂಗಪಡಿಸಿರಲಿಲ್ಲ. ಇದರಿಂದಾಗಿ ಸಿನಿಮಾ ನವೆಂಬರ್ 8ರ ದೀಪಾವಳಿಯಂದೇ ಬರುತ್ತದೋ ಅಥವಾ ನವೆಂಬರ್ 6ರ ಶುಕ್ರವಾರವೇ ತೆರೆಕಾಣುತ್ತದೋ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ.

ವರದಿಗಳ ಪ್ರಕಾರ, ‘ರಾಮಾಯಣ’ ಚಿತ್ರವು ನವೆಂಬರ್ 6ರ ಶುಕ್ರವಾರದಂದು ವಿಶ್ವದಾದ್ಯಂತ ಏಕಕಾಲಕ್ಕೆ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಇದರ ಹಿಂದೆ ಚಿತ್ರತಂಡದ ಲೆಕ್ಕಾಚಾರ ಇದೆ. ರಿಲೀಸ್ ದಿನಾಂಕದ ಬಗ್ಗೆ ಚಿತ್ರತಂಡದ ಮೂಲಗಳು ಮಾಹಿತಿ ನೀಡಿರುವುದಾಗಿ ‘ಬಾಲಿವುಡ್ ಹಂಗಾಮಾ’ ವರದಿ ಮಾಡಿದೆ.

ಸಾಮಾನ್ಯವಾಗಿ ದೀಪಾವಳಿ ಹಬ್ಬಕ್ಕೂ ಮುಂಚಿನ ದಿನಗಳಲ್ಲಿ ಸಿನಿಮಾ ಬಿಡುಗಡೆಯಾದರೆ ಗಲ್ಲಾಪೆಟ್ಟಿಗೆಯಲ್ಲಿ ಕೊಂಚ ಮಂದಗತಿಯ ಬಿಸಿನೆಸ್ ಕಾಣುತ್ತವೆ. ಆದರೆ ‘ರಾಮಾಯಣ’ ಚಿತ್ರದ ಮೇಲಿರುವ ಅಪಾರ ನಿರೀಕ್ಷೆಯಿಂದಾಗಿ ಈ ಸಿನಿಮಾ ಮೊದಲ ದಿನವೇ ದಾಖಲೆ ಮಟ್ಟದ ಗಳಿಕೆ ಕಾಣಲಿದೆ ಎಂದು ಟ್ರೇಡ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಈ ಸಿನಿಮಾ ನವೆಂಬರ್ 6ರಂದು ಬಿಡುಗಡೆ ಆದರೂ ಕೂಡ ನವೆಂಬರ್ 9ರ ಸೋಮವಾರದಿಂದ ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈ ಬಹುನಿರೀಕ್ಷಿತ ಚಿತ್ರವನ್ನು ಭಾರತದಲ್ಲಿ ‘ಧರ್ಮ ಪ್ರೊಡಕ್ಷನ್ಸ್’ ಸಂಸ್ಥೆ ವಿತರಣೆ ಮಾಡುತ್ತಿದ್ದರೆ, ವಿದೇಶಗಳಲ್ಲಿ ‘ಸೋನಿ ಪಿಕ್ಚರ್ಸ್’ ವಿತರಣೆಯ ಹಕ್ಕನ್ನು ಪಡೆದುಕೊಂಡಿದೆ. ಇನ್ನು ಚಿತ್ರದ ಎರಡೂ ಭಾಗಗಳ ಮ್ಯೂಸಿಕ್ ರೈಟ್ಸ್ ಅನ್ನು ‘ಟಿ-ಸಿರೀಸ್’ ಸಂಸ್ಥೆಯು ಬರೋಬ್ಬರಿ 75 ಕೋಟಿ ರೂಪಾಯಿಗೆ ಖರೀದಿಸಿದೆ.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾ ಬಿಡುಗಡೆಗೂ ಮುನ್ನ ಬರಲಿದೆ ರಾಮಾಯಣ್ ಧಾರಾವಾಹಿ ಕುರಿತು ಸಾಕ್ಷ್ಯಚಿತ್ರ

‘ದಂಗಲ್’ ಖ್ಯಾತಿಯ ನಿತೇಶ್ ತಿವಾರಿ ನಿರ್ದೇಶನದ ಈ ದೃಶ್ಯಕಾವ್ಯವನ್ನು ನಮಿತ್ ಮಲ್ಹೋತ್ರಾ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್, ಹನುಮಂತನಾಗಿ ಸನ್ನಿ ಡಿಯೋಲ್ ಹಾಗೂ ಲಕ್ಷ್ಮಣನಾಗಿ ರವಿ ದುಬೆ ಅಭಿನಯಿಸುತ್ತಿದ್ದಾರೆ. ಎ.ಆರ್. ರೆಹಮಾನ್ ಮತ್ತು ಹಾನ್ಸ್ ಜಿಮ್ಮರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರು-ಮಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರಕ್ಕೆ ಮುಹೂರ್ತ ಫಿಕ್ಸ್, ಆ ಘಾಟಿನಲ್ಲಿ ಹೋಗುವುದೇ ಮಜಾ – Kannada News | Bengaluru Mangaluru Vande Bharat Express train trial run on Sakleshpur Subrahmanya Ghat section from August 11

ಬೆಂಗಳೂರು, (ಆಗಸ್ಟ್​ 05): ಬಹುನಿರೀಕ್ಷಿತ ಬೆಂಗಳೂರು-ಮಂಗಳೂರು (Bengaluru-Mangaluru Vande Bharat Express) ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಟ್ರಯಲ್ ರನ್​​​ಗೆ (Trial Run) ಹೊಸ ಮುಹೂರ್ತ ಫಿಕ್ಸ್ ಆಗಿದೆ. ಕೆಲ ತಾಂತ್ರಿಕ ಕಾರಣಾಂತರಗಳಿಂದ ಜೂನ್ 3ರಂದು ನಡೆಯಬೇಕಿದ್ದ ಪ್ರಾಯೋಗಿಕ ಸಂಚಾರವನ್ನು ರದ್ದುಗೊಂಡಿದ್ದು, ಇದೀಗ ಇದೇ ಆಗಸ್ಟ್ 11ರಂದು ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ(Bengaluru-Mangaluru Vande Bharat Express) ಪ್ರಾಯೋಗಿಕ ಸಂಚಾರ ಆರಂಭವಾಗಲಿದ್ದ, ಸಕಲೇಶಪುರ-ಸುಬ್ರಹ್ಮಣ್ಯ ಘಾಟಿ ಪ್ರದೇಶದ ದಟ್ಟ ಕಾಡು, ಪ್ರಕೃತಿ ಸೊಬಿಗನ ಮಧ್ಯೆ ರೈಲು ಓಡಾಟಕ್ಕೆ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಸಕಲ ಸಿದ್ಧತೆ ಮಾಡಿಕೊಂಡಿದೆ.

ಆಗಸ್ಟ್ 11ರಿಂದ ಆಗಸ್ಟ್ 20ರವರೆಗೆ ಪ್ರಾಯೋಗಿಕ ಸಂಚಾರ

ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ(Somanna) ಅವರು ಜೂನ್ ತಿಂಗಳೊಳಗಾಗಿ ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಸೇವೆಯನ್ನು ಆರಂಭಿಸುವುದಾಗಿ ಈ ಹಿಂದೆ ತಿಳಿಸಿದ್ದರು. ಆದರೆ ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದ ಕ್ಲಿಷ್ಟಕರ ಘಾಟ್ ಪ್ರದೇಶದಲ್ಲಿ ಸಂಚರಿಸಲು ಅತ್ಯಗತ್ಯವಾದ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (AEB) ವ್ಯವಸ್ಥೆ ಹೊಂದಿರುವ ರೇಕ್ ಲಭ್ಯವಿಲ್ಲದ ಕಾರಣ ಪ್ರಕ್ರಿಯೆ ತಡವಾಗಿತ್ತು. ಆದ್ರೆ, ಇದೀಗ ಆಗಸ್ಟ್ 11ರಿಂದ ಆರಂಭವಾಗಲಿರುವ ಪ್ರಾಯೋಗಿಕ ಸಂಚಾರವು ಆಗಸ್ಟ್ 20ರವರೆಗೆ ನಡೆಯಲಿದೆ. ಭಾರತೀಯ ರೈಲ್ವೆಯ ಸಂಶೋಧನೆ, ವಿನ್ಯಾಸ ಮತ್ತು ಮಾನಕ ಸಂಸ್ಥೆಯ (RDSO) ತಂಡವು ಶೀಘ್ರದಲ್ಲೇ ಆಗಮಿಸಿ ಈ ಪರೀಕ್ಷಾರ್ಥ ಸಂಚಾರದ ಉಸ್ತುವಾರಿ ವಹಿಸಲಿದೆ ಎಂದು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಕೇವಲ 5 ಗಂಟೆಗಳಲ್ಲಿ ತಲುಪಬಹುದು! ಅದು ಹೇಗೆ ಗೊತ್ತಾ?

ಘಾಟಿ ಸುರಕ್ಷತಾ ಕ್ರಮ ಸವಾಲು

ಸಕಲೇಶಪುರ – ಸುಬ್ರಹ್ಮಣ್ಯ ಮಧ್ಯೆ ಸುಮಾರು 55 ಕಿಮೀ ಉದ್ದದ ಘಾಟ್‌ನಲ್ಲಿ ರೈಲ್ವೆ ಹಳಿ ಹಾದು ಹೋಗಿದೆ. ಇದರಲ್ಲಿ 57 ಸುರಂಗಗಳು, 258 ಸೇತುವೆಗಳು, 108 ತೀಕ್ಷ್ಣ ತಿರುವುಗಳಿರುವುದರಿಂದ ಅತ್ಯಂತ ಸೂಕ್ಷ್ಮವಾದ ಸಂಚಾರವಾಗಿದೆ. ವಂದೇ ಭಾರತ್‌ ಈ ಘಾಟ್‌ನಲ್ಲಿಸಂಚರಿಸಬೇಕಾದರೆ ಘಾಟ್‌ ಇಳಿಯುವಾಗ ಬ್ರೇಕಿಂಗ್‌ ಸಿಸ್ಟಮ್‌ನಲ್ಲಿಅಳವಡಿಸಬೇಕಾದ ತಾಂತ್ರಿಕ ಸೌಲಭ್ಯದಲ್ಲಿನ ಕೊರತೆ ಕಾರಣ ಪ್ರಾಯೋಗಿಕ ಪ್ರಯಾಣವನ್ನು ರದ್ದುಗೊಳಿಸಲಾಗಿತ್ತು.

ಘಾಟ್ ಮಾರ್ಗಕ್ಕೆ AEB ತಂತ್ರಜ್ಞಾನ

ವಂದೇ ಭಾರತ್ ರೈಲು ಸಾಮಾನ್ಯವಾಗಿ ಅತ್ಯಾಧುನಿಕ ಎಲೆಕ್ಟ್ರೋ-ನ್ಯೂಮ್ಯಾಟಿಕ್ (EP) ಡಿಸ್ಕ್ ಬ್ರೇಕ್ ಹಾಗೂ Regenerative Braking ವ್ಯವಸ್ಥೆಯನ್ನು ಹೊಂದಿರುತ್ತದೆ. ಆದರೆ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ನಡುವಿನ ಘಾಟ್ ಮಾರ್ಗವು ಅತ್ಯಂತ ಕಡಿದಾದ ಇಳಿಜಾರು ಹೊಂದಿದೆ.

ಈಗ ಈ ಮಾರ್ಗದಲ್ಲಿ ಚಲಿಸುವ ರೈಲುಗಳ ಸುರಕ್ಷತೆಗಾಗಿ ಬ್ಯಾಂಕರ್ ಇಂಜಿನ್‌ಗಳನ್ನು (ಹೆಚ್ಚುವರಿ ಇಂಜಿನ್) ಜೋಡಿಸಲಾಗುತ್ತದೆ. ಇವುಗಳನ್ನು ಜೋಡಿಸಲು ಮತ್ತು ಕಳಚಲು ಸುಮಾರು 15 ನಿಮಿಷ ಬೇಕಾಗುತ್ತದೆ. ವಂದೇ ಭಾರತ್ ರೈಲಿಗೆ ಈ ರೀತಿ ಹೊರಗಿನಿಂದ ಬ್ಯಾಂಕರ್ ಎಂಜಿನ್ ಜೋಡಿಸಬೇಕಾದರೆ ರೈಲಿನ ಮುಂಭಾಗದ ನೋಸ್ (Nose) ಭಾಗವನ್ನು ಕಳಚಬೇಕಾಗುತ್ತದೆ. ಇದು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಜೊತೆಗೆ ರೈಲಿನ ಅತಿವೇಗವನ್ನು ಕಂಟ್ರೋಲ್ ಮಾಡುತ್ತದೆ.

ಈ ಕಾರಣಕ್ಕೆ ರೈಲಿನಲ್ಲೇ ಸ್ವಯಂಚಾಲಿತವಾಗಿ ಗರಿಷ್ಠ 30 ಕಿ.ಮೀ ವೇಗವನ್ನು ನಿಯಂತ್ರಿಸುವ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ವ್ಯವಸ್ಥೆ ಹೊಂದಿರುವ ವಿಶೇಷ ರೇಕ್‌ಗಾಗಿ ರೈಲ್ವೇ ಕಾಯುತ್ತಿತ್ತು. ಈಗ ಎಇಬಿ ವ್ಯವಸ್ಥೆ ಹೊಂದಿರುವ ರೇಕ್ ಬಂದಿರುವುದರಿಂದ ಪ್ರಾಯೋಗಿಕ ಸಂಚಾರ ಯಶಸ್ವಿಯಾದ ತಕ್ಷಣವೇ ವಾಣಿಜ್ಯ ಸಂಚಾರಕ್ಕೆ ರೈಲ್ವೆ ಮಂಡಳಿಯಿಂದ ಅಧಿಕೃತ ಅನುಮೋದನೆ ಸಿಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹೊಸೂರು-ಬೆಂಗಳೂರು ರಸ್ತೆಯಲ್ಲಿ ಸಂಚಾರ ದಟ್ಟಣೆ: ಮಡಿವಾಳ ವ್ಯಾಪ್ತಿಯಲ್ಲಿ ಟ್ರಾಫಿಕ್ ಮಾರ್ಗ ಬದಲಾವಣೆ – Kannada News | Madiwala Traffic Diversion: New Rules for Hosur Road to Combat Bengaluru Congestion

ಬೆಂಗಳೂರು ಆ. 5: ಹೊಸೂರು-ಬೆಂಗಳೂರು ರಸ್ತೆಯಲ್ಲಿ ದಿನೇ ದಿನೇ ಸಂಚಾರ ದಟ್ಟಣೆ (Traffic Jam) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸಂಚಾರ ಸುಗಮಗೊಳಿಸಲು ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸರು ಪ್ರಾಯೋಗಿಕವಾಗಿ ಹೊಸ ಮಾರ್ಗ ಬದಲಾವಣೆಯನ್ನು (Traffic Diversion) ಜಾರಿಗೆ ತಂದಿದ್ದಾರೆ. ಈ ನೂತನ ಸಂಚಾರ ನಿಯಮಗಳು ಪ್ರತಿದಿನ ಬೆಳಗ್ಗೆ 8:00 ರಿಂದ 10:30 ರವರೆಗೆ ಜಾರಿಯಲ್ಲಿರಲಿವೆ.

ಸರ್ಜಾಪುರ ರಸ್ತೆ ಜಂಕ್ಷನ್‌ನಿಂದ ಮಡಿವಾಳ ಪೊಲೀಸ್ ಠಾಣಾ ಜಂಕ್ಷನ್ ಕಡೆಗೆ ಬರುವ ಎಲ್ಲಾ ವಾಹನಗಳಿಗೆ ಸರ್ಜಾಪುರ ರಸ್ತೆ ಜಂಕ್ಷನ್‌ನಲ್ಲೇ ಪ್ರವೇಶ ನಿಷೇಧಿಸಲಾಗಿದೆ. 100 ಅಡಿ ರಸ್ತೆಯಿಂದ ವಾಟರ್ ಟ್ಯಾಂಕ್ ಜಂಕ್ಷನ್ ಮೂಲಕ ಅಯ್ಯಪ್ಪ ಜಂಕ್ಷನ್‌ಗೆ ಬಂದು, ಮಡಿವಾಳ ಪೊಲೀಸ್ ಠಾಣಾ ಜಂಕ್ಷನ್ ಕಡೆಗೆ ತೆರಳುವ ವಾಹನಗಳಿಗೆ ಅಯ್ಯಪ್ಪ ಜಂಕ್ಷನ್‌ನಲ್ಲಿ ನಿಷೇಧ ಹೇರಲಾಗಿದೆ.

ಸರ್ಜಾಪುರ ರಸ್ತೆ ಜಂಕ್ಷನ್‌ನಿಂದ ಮಡಿವಾಳ ಪೊಲೀಸ್ ಠಾಣಾ ಜಂಕ್ಷನ್ ಕಡೆಗೆ ಹಾಗೂ ವಾಟರ್ ಟ್ಯಾಂಕ್ ಜಂಕ್ಷನ್ ಕಡೆಯಿಂದ ಅಯ್ಯಪ್ಪ ಜಂಕ್ಷನ್ ಮೂಲಕ ಮಡಿವಾಳ ಠಾಣೆ ಕಡೆಗೆ ಹೋಗುವ ವಾಹನಗಳು ಕೃಪಾನಿಧಿ ಜಂಕ್ಷನ್/ಸರ್ಜಾಪುರ ರಸ್ತೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು, ವಾಟರ್ ಟ್ಯಾಂಕ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದುಕೊಳ್ಳಬೇಕು. ಬಳಿಕ ಮಡಿವಾಳ ಮಾರುಕಟ್ಟೆ ರಸ್ತೆ ಮೂಲಕ ಸಾಗಿ, ಮಡಿವಾಳ ಪೊಲೀಸ್ ಠಾಣಾ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಹೊಸೂರು ಮುಖ್ಯರಸ್ತೆಯ ಮೂಲಕ ಮುಂದೆ ಸಂಚರಿಸಬಹುದು.

ಇದನ್ನೂ ಓದಿ: 120 ಕೋಟಿ ಮಠದ ಜಮೀನು ಕಬಳಿಕೆ ಕೇಸ್: ಕೊನೆಗೂ ಪೊಲೀಸರ ಮುಂದೆ ಹಾಜರಾದ ಕಿಂಗ್‌ಪಿನ್ ನರೇಶ್ ಗೌಡ

ಸಾರ್ವಜನಿಕರು ಹಾಗೂ ಸವಾರರು ಪೊಲೀಸರೊಂದಿಗೆ ಸಹಕರಿಸಿ, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮಡಿವಾಳ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಂಗ್ಲಾದೇಶ ಮತ್ತೊಂದು ಪಾಕಿಸ್ತಾನವಾಗುತ್ತಿದೆ; ಭಾರತಕ್ಕೆ ಶೇಖ್ ಹಸೀನಾ ಮಗ ಎಚ್ಚರಿಕೆ – Kannada News | Bangladesh has become another Pakistan Sheikh Hasinas Son Sajeeb Wazed alert India

ನವದೆಹಲಿ, ಆಗಸ್ಟ್ 5: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರ ಪುತ್ರ ಸಾಜೀಬ್ ವಾಝೇದ್ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದು, ಬಾಂಗ್ಲಾದೇಶದಲ್ಲಿ ಕ್ಷೀಣಿಸುತ್ತಿರುವ ಭದ್ರತಾ ಪರಿಸ್ಥಿತಿಯು ಭಾರತಕ್ಕೆ ಬೆದರಿಕೆಯನ್ನು ಒಡ್ಡಬಹುದು ಎಂದು ಎಚ್ಚರಿಸಿದ್ದಾರೆ. ನವದೆಹಲಿಯಲ್ಲಿ ನಡೆದ ‘ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ ಆಫ್ ಸೌತ್ ಏಷ್ಯಾ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಾಜೀದ್ ವಾಝೇದ್, “ಬಾಂಗ್ಲಾದೇಶ ಈಗಾಗಲೇ ವಿಫಲವಾಗಿರುವ ರಾಷ್ಟ್ರವಾಗಿದೆ. ಆ ದೇಶದಲ್ಲಿ ಮಾನವ ಹಕ್ಕುಗಳಿಲ್ಲ, ವಾಕ್ ಸ್ವಾತಂತ್ರ್ಯವಿಲ್ಲ” ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಭಾರತದ ಭದ್ರತೆಯ ಮೇಲಾಗುವ ಪರಿಣಾಮಗಳ ಕುರಿತು ಎಚ್ಚರಿಸಿದ ವಾಝೇದ್, ಭಾರತದ ಪೂರ್ವ ಗಡಿಯಲ್ಲಿ ಬಾಂಗ್ಲಾದೇಶವು ಮತ್ತೊಂದು ಪಾಕಿಸ್ತಾನವಾಗುತ್ತಿದೆ ಎಂದು ಎಚ್ಚರಿಸಿದರು. “ಇದನ್ನು ಈಗಲೇ ತಡೆಯದಿದ್ದರೆ ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದ ಭಯೋತ್ಪಾದಕರು ಬಾಂಗ್ಲಾದೇಶದಿಂದ ಬರಲಿದ್ದಾರೆ” ಎಂದು ವಾಝೇದ್ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಗಸ್ಟ್ 19 ರಂದು ಭಾರತ- ಪಾಕಿಸ್ತಾನ ನಡುವೆ ಪಂದ್ಯ; ಉಭಯ ತಂಡಗಳು ಪ್ರಕಟ – Kannada News | 2026 Hockey World Cup: India vs Pakistan High Voltage Clash and Full Guide

2026 ರ ಹಾಕಿ ವಿಶ್ವಕಪ್ (2026 Hockey World Cup) ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಬಾರಿಯ ಹಾಕಿ ವಿಶ್ವಕಪ್ ಅನ್ನು ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ಸ್ ಜಂಟಿಯಾಗಿ ಆಯೋಜಿಸುತ್ತಿವೆ. ಇದು ಹಾಕಿ ವಿಶ್ವಕಪ್‌ನ 16 ನೇ ಆವೃತ್ತಿಯಾಗಿದ್ದು, ಒಟ್ಟು 16 ತಂಡಗಳು ಭಾಗವಹಿಸುತ್ತಿವೆ. ಎಲ್ಲಾ ಪಂದ್ಯಗಳನ್ನು ಎರಡು ಆತಿಥೇಯ ನಗರಗಳ (ವಾವ್ರೆ ಮತ್ತು ಆಮ್ಸ್ಟೆಲ್ವೀನ್) ಎರಡು ಕ್ರೀಡಾಂಗಣಗಳಲ್ಲಿ ಆಡಲಾಗುತ್ತದೆ. ಈ ಕ್ರೀಡಾಕೂಟ ಆಗಸ್ಟ್ 14 ರಿಂದ ಆಗಸ್ಟ್ 30 ರವರೆಗೆ ನಡೆಯಲಿದ್ದು, ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ಹೈವೋಲ್ಟೇಜ್ ಕದನ ಆಗಸ್ಟ್ 19 ರಂದು ನಡೆಯಲಿದೆ.

ಮೊದಲ ಹಂತದಲ್ಲಿ, ಎಲ್ಲಾ ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ‘ಪೂಲ್ ಡಿ’ಯಲ್ಲಿವೆ. ಈ ಪೂಲ್​ನಲ್ಲಿ ವೇಲ್ಸ್ ಮತ್ತು ಇಂಗ್ಲೆಂಡ್ ಕೂಡ ಸೇರಿವೆ. ‘ಪೂಲ್ ಸಿ’ಯಲ್ಲಿ ಆಸ್ಟ್ರೇಲಿಯಾ, ಸ್ಪೇನ್, ಐರ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸೇರಿವೆ. ‘ಪೂಲ್ ಎ’ಯಲ್ಲಿ ನೆದರ್ಲ್ಯಾಂಡ್ಸ್, ಅರ್ಜೆಂಟೀನಾ, ನ್ಯೂಜಿಲೆಂಡ್ ಮತ್ತು ಜಪಾನ್ ತಂಡಗಳಿದ್ದರೆ, ‘ಪೂಲ್ ಬಿ’ಯಲ್ಲಿ ಬೆಲ್ಜಿಯಂ, ಜರ್ಮನಿ, ಫ್ರಾನ್ಸ್ ಮತ್ತು ಮಲೇಷ್ಯಾ ಸೇರಿವೆ.

ಮುಖಾಮುಖಿ ದಾಖಲೆ

ಭಾರತ ಮತ್ತು ಪಾಕಿಸ್ತಾನ ನಡುವೆ ಒಟ್ಟು 183 ಹಾಕಿ ಪಂದ್ಯಗಳು ನಡೆದಿವೆ. ಇದರಲ್ಲಿ ಪಾಕಿಸ್ತಾನ 82 ಪಂದ್ಯಗಳನ್ನು ಗೆದ್ದಿದ್ದರೆ, ಭಾರತ 69 ಪಂದ್ಯಗಳನ್ನು ಗೆದ್ದಿದೆ. ಉಳಿದಂತೆ 32 ಪಂದ್ಯಗಳು ಡ್ರಾ ಆಗಿವೆ. ಪಾಕಿಸ್ತಾನ 407 ಗೋಲುಗಳನ್ನು ಗಳಿಸಿದ್ದರೆ, ಭಾರತ 390 ಗೋಲುಗಳನ್ನು ಗಳಿಸಿದೆ. ಆದಾಗ್ಯೂ, ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ, ಭಾರತೀಯ ಹಾಕಿ ತಂಡವು ಬಲಿಷ್ಠವಾಗಿ ಕಾಣುತ್ತಿದೆ. ಈ ವರ್ಷ, ಭಾರತವು ಪ್ರೊ ಲೀಗ್‌ನಲ್ಲಿ ಎರಡು ಬಾರಿ ಪಾಕಿಸ್ತಾನವನ್ನು ಸೋಲಿಸಿತ್ತು. ಮೊದಲ ಪಂದ್ಯವನ್ನು 4-3 ಅಂತರದಿಂದ ಗೆದ್ದಿದ್ದ ಭಾರತ ಎರಡನೇ ಪಂದ್ಯದಲ್ಲಿ 7-1 ಅಂತರದಿಂದ ಸೋಲಿಸಿತ್ತು.

ಹಾಕಿ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಯಾವಾಗ?

ಭಾರತ ಹಾಕಿ ತಂಡ ಮತ್ತು ಪಾಕಿಸ್ತಾನ ಹಾಕಿ ತಂಡದ ನಡುವಿನ ಪಂದ್ಯ ಆಗಸ್ಟ್ 19 ರಂದು ನೆದರ್ಲ್ಯಾಂಡ್ಸ್‌ನ ವ್ಯಾಗ್ನರ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಬೆಳಿಗ್ಗೆ 11:30 ರ ಸುಮಾರಿಗೆ ಆರಂಭವಾಗಲಿದೆ. ಇದು ಮೊದಲ ಹಂತದಲ್ಲಿ ಭಾರತದ ಕೊನೆಯ ಪಂದ್ಯವಾಗಿರುತ್ತದೆ.

ಭಾರತ ಹಾಕಿ ತಂಡ

ಗೋಲ್‌ಕೀಪರ್‌ಗಳು: ಮೋಹಿತ್ ಎಚ್‌ಎಸ್, ಸೂರಜ್ ಕರ್ಕೇರಾ.

ಡಿಫೆಂಡರ್ಸ್: ಜರ್ಮನ್‌ಪ್ರೀತ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್ (ನಾಯಕ), ಅಮಿತ್ ರೋಹಿದಾಸ್, ಜುಗ್ರಾಜ್ ಸಿಂಗ್, ಸಂಜಯ್, ಸುಮಿತ್, ಯಶ್‌ದೀಪ್ ಸಿವಾಚ್.

ಮಿಡ್‌ಫೀಲ್ಡರ್‌ಗಳು: ರಾಜಿಂದರ್ ಸಿಂಗ್, ರಾಜ್ ಕುಮಾರ್ ಪಾಲ್, ಹಾರ್ದಿಕ್ ಸಿಂಗ್, ಮನ್‌ಪ್ರೀತ್ ಸಿಂಗ್, ನೀಲಕಂಠ ಶರ್ಮಾ, ವಿವೇಕ್ ಸಾಗರ್ ಪ್ರಸಾದ್.

ಫಾರ್ವರ್ಡ್‌ಗಳು: ದಿಲ್‌ಪ್ರೀತ್ ಸಿಂಗ್, ಶಿಲಾನಂದ್ ಲಾಕ್ರಾ, ಸುಖಜೀತ್ ಸಿಂಗ್, ಮನ್‌ದೀಪ್ ಸಿಂಗ್, ಅಭಿಷೇಕ್.

ಹಾಕಿ ತಂಡದ ಜೆರ್ಸಿ ಬಣ್ಣ ನೀಲಿಯಿಂದ ಕೇಸರಿಗೆ ಬದಲು; ಹೊಸ ವಿವಾದ ಸೃಷ್ಟಿ

ಪಾಕಿಸ್ತಾನ ತಂಡ: ವಕಾರ್, ಮುಹಮ್ಮದ್ ಅಬ್ದುಲ್ಲಾ, ಮುಹಮ್ಮದ್ ಸುಫ್ಯಾನ್ ಖಾನ್, ಮೊಯಿನ್ ಶಕೀಲ್, ಅಬ್ದುಲ್ ವಹೀದ್ ಅಶ್ರಫ್ ರಾಣಾ, ಅಬ್ದುಲ್ ಹನನ್ ಶಾಹಿದ್, ಜಕಾರಿಯಾ ಹಯಾತ್, ಅರ್ಷದ್ ಲಿಯಾಕತ್, ಅದೀಲ್ ಲತೀಫ್, ಅಹ್ಮದ್ ನದೀಮ್, ಗಜನ್ಫರ್ ಅಲಿ, ಇಮಾದ್ ಶಕೀಲ್ ಬಟ್, ಮುಹಮ್ಮದ್ ಹಮ್ಮದುದ್ದೀನ್ ಅಂಜುಮ್, ಮುಹಮ್ಮದ್ ಹಮ್ಮದುದ್ದೀನ್ ಅಂಜುಮ್, ರೆಹಮಾನ್ ಅಬ್ದುಲ್, ಅಫ್ರಾಜ್, ಒಮರ್ ಮುಸ್ತಫಾ, ಅಬು ಬಕರ್ ಮಹಮೂದ್, ಅಲಿ ರಝಾ, ಅಬ್ದುಲ್ ಮತಾನ್ ಮತ್ತು ಮುಹಮ್ಮದ್ ಇಮಾದ್.

ಗೋಲ್‌ಕೀಪರ್‌ಗಳು: ವಕಾರ್ ಮತ್ತು ಅಲಿ ರಜಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:04 pm, Wed, 5 August 26

Source link

Exit mobile version