IND vs SL: ತನ್ನ ದೌರ್ಬಲ್ಯವನ್ನು ಮೆಟ್ಟಿ ನಿಲ್ಲುವತ್ತ ಟೀಂ ಇಂಡಿಯಾ ಚಿತ್ತ – Kannada News | Team India’s Fielding Woes: Gambhir Aims to Fix Dropped Catches in Sri Lanka Tour

ಕ್ರಿಕೆಟ್​ನಲ್ಲಿ ಕ್ಯಾಚ್​ಗಳು ಪಂದ್ಯಗಳನ್ನು ಗೆಲ್ಲಿಸುತ್ತವೆ ಎಂಬ ನಾಣ್ಣುಡಿ ಪ್ರಸಿದ್ಧವಾಗಿದೆ. ಇದಕ್ಕೆ ನಿದರ್ಶನವಾಗಿ ಹಲವು ಪಂದ್ಯಗಳು ನಮ್ಮ ಮುಂದೆ ಉದಾಹರಣೆಯಾಗಿವೆ. ಅದರಂತೆ ಕ್ಯಾಚ್‌ಗಳನ್ನು ಕೈಚೆಲ್ಲುವುದು ಪಂದ್ಯದ ಸೋಲಿಗೆ ಆಹ್ವಾನ ನೀಡಿದಂತೆ ಎಂಬುದು ಕೂಡ ಅಷ್ಟೇ ಸತ್ಯ. ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾ (Team India) ಪದೇ ಪದೇ ಕ್ಯಾಚ್‌ಗಳನ್ನು ಕೈಚೆಲ್ಲುತ್ತಿದೆ. ಇದರಿಂದಾಗಿ ಹಲವು ಪಂದ್ಯಗಳನ್ನು ಸೋತಿದೆ. ಹೀಗಾಗಿ ತಂಡದ ಫಿಲ್ಡಿಂಗ್​ ಕೋಚ್​​ನ ತಲೆದಂಡ ಕೂಡ ಆಗಿದೆ. ಇದೀಗ ಹೋಸ ಕೋಚ್​ನ ಉಪಸ್ಥಿತಿಯಲ್ಲಿ ಟೀಂ ಇಂಡಿಯಾ ತನ್ನ ನ್ಯೂನತೆಯನ್ನು ಸರಿಪಡಿಸಿಕೊಳ್ಳಲು ಸಜ್ಜಾಗಿದೆ.

ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಿರುವ ಟೀಂ ಇಂಡಿಯಾ ಇಂದಿನಿಂದ ತನ್ನ ಅಭ್ಯಾಸ ಆರಂಭಿಸಿದೆ. ಅಭ್ಯಾಸದ ಮೊದಲ ದಿನದಂದು ತಂಡದ ಆಟಗಾರೆಲ್ಲರು ಕ್ಯಾಚಿಂಗ್ ಅಭ್ಯಾಸ ನಡೆಸಿದರು. ಶ್ರೀಲಂಕಾದ ಕೊಲಂಬೊದಲ್ಲಿರುವ ಎನ್‌ಸಿಸಿ ಮೈದಾನದಲ್ಲಿ, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ರಿಷಭ್ ಪಂತ್, ಧ್ರುವ್ ಜುರೆಲ್ ಸ್ಲಿಪ್ ಕ್ಯಾಚಿಂಗ್ ಕೌಶಲ್ಯವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಅಭ್ಯಾಸ ನಡೆಸಿದರು. ಇದಕ್ಕೆ ಕಾರಣವೂ ಇದ್ದು ಕಳೆದ ಕೆಲವು ತಿಂಗಳುಗಳಿಂದ ತಂಡದ ಫಿಲ್ಡಿಂಗ್ ಪ್ರದರ್ಶನ ತೀರ ಕಳಪೆಯಾಗಿದೆ ಎಂಬುದನ್ನು ಈ ಕೆಳಗಿನ ಅಂಕಿಅಂಶಗಳೇ ಹೇಳುತ್ತಿವೆ.

13 ಪಂದ್ಯಗಳಲ್ಲಿ 21 ಕ್ಯಾಚ್‌ ಡ್ರಾಪ್

ಟೀಂ ಇಂಡಿಯಾ ಇತ್ತೀಚೆಗೆ ಯುಕೆ ಮತ್ತು ಜಿಂಬಾಬ್ವೆ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸದಲ್ಲಿ ಒಟ್ಟು 13 ಪಂದ್ಯಗಳು ನಡೆದವು. ಯುಕೆಯಲ್ಲಿ ನಡೆದ 10 ಪಂದ್ಯಗಳಲ್ಲಿ ಟೀಂ ಇಂಡಿಯಾ 11 ಕ್ಯಾಚ್‌ಗಳನ್ನು ಕೈಬಿಟ್ಟರೆ, ಜಿಂಬಾಬ್ವೆಯಲ್ಲಿ ನಡೆದ ಮೂರು ಪಂದ್ಯಗಳಲ್ಲಿ 10 ಕ್ಯಾಚ್‌ಗಳನ್ನು ಕೈಬಿಟ್ಟಿತ್ತು. ಯುಕೆ ಮತ್ತು ಜಿಂಬಾಬ್ವೆ ಪ್ರವಾಸಗಳಲ್ಲಿ ಟೀಂ ಇಂಡಿಯಾ ಒಟ್ಟಾರೆಯಾಗಿ ಕೇವಲ ನಾಲ್ಕು ಕ್ಯಾಚ್‌ಗಳನ್ನು ಮಾತ್ರ ತೆಗೆದುಕೊಂಡಿತು.

ಪ್ರತಿ ಪಂದ್ಯದಲ್ಲೂ 2-3 ಕ್ಯಾಚ್‌ ಡ್ರಾಪ್

2026 ರ ಟಿ20 ವಿಶ್ವಕಪ್‌ನಲ್ಲೂ ಇದೇ ರೀತಿಯ ಪರಿಸ್ಥಿತಿ ಉಂಟಾಗಿತ್ತು, ಅಲ್ಲಿ ಗುಂಪು ಹಂತದಲ್ಲಿ 10 ತಂಡಗಳಲ್ಲಿ ಭಾರತ ತಂಡದ ಕ್ಯಾಚಿಂಗ್ ಪ್ರದರ್ಶನ ಅತ್ಯಂತ ಕೆಟ್ಟದಾಗಿತ್ತು. ಟಿ20 ವಿಶ್ವಕಪ್ ಗುಂಪು ಹಂತದ ಪ್ರತಿ ಪಂದ್ಯದಲ್ಲೂ ಎರಡರಿಂದ ಮೂರು ಕ್ಯಾಚ್‌ಗಳನ್ನು ಕೈಬಿಟ್ಟಿತು. ಹೀಗಾಗಿ ತಂಡದ ಕ್ಯಾಚಿಂಗ್ ಶೇಕಡಾವಾರು 70 ಕೂಡ ಇರಲಿಲ್ಲ.

ಟೆಸ್ಟ್ ಸರಣಿಯಲ್ಲಿ 23 ಕ್ಯಾಚ್‌ಗಳು ಡ್ರಾಪ್

ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದಲ್ಲಿ ಆಡಿದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 23 ಕ್ಯಾಚ್‌ಗಳನ್ನು ಕೈಬಿಟ್ಟಿತು. ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಮೊದಲ ಎರಡು ಟೆಸ್ಟ್‌ಗಳಲ್ಲಿ 23 ಕ್ಯಾಚ್‌ಗಳಲ್ಲಿ 13 ಕ್ಯಾಚ್‌ಗಳನ್ನು ಕೈಬಿಟ್ಟಿತು. ಆ 13 ಕ್ಯಾಚ್‌ಗಳಲ್ಲಿ ಎಂಟು ಕ್ಯಾಚ್‌ಗಳನ್ನು ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಕೈಬಿಡಲಾಯಿತು. ಗಮನಾರ್ಹವಾಗಿ, ಲೀಡ್ಸ್ ಟೆಸ್ಟ್‌ನಲ್ಲಿ ಆ ಎಂಟು ಕ್ಯಾಚ್‌ಗಳಲ್ಲಿ, ಯಶಸ್ವಿ ಜೈಸ್ವಾಲ್ ಒಬ್ಬರೇ ನಾಲ್ಕು ಕ್ಯಾಚ್‌ಗಳನ್ನು ಕೈಬಿಟ್ಟರು. ಸ್ಲಿಪ್‌ನಲ್ಲಿ ಮೂರು ಕ್ಯಾಚ್‌ಗಳನ್ನು ಕೈಚೆಲ್ಲಿದ ಜೈಸ್ವಾಲ್, ಔಟ್‌ಫೀಲ್ಡ್‌ನಲ್ಲಿ ಒಂದನ್ನು ಕೈಬಿಟ್ಟರು.

ಏಷ್ಯನ್ ಗೇಮ್ಸ್‌ ಕ್ರಿಕೆಟ್ ವೇಳಾಪಟ್ಟಿ ಪ್ರಕಟ; ಹೀಗಾದ್ರೆ ಮಾತ್ರ ಭಾರತ- ಪಾಕ್ ಮುಖಾಮುಖಿ

ಅನುಭವಿಗಳ ಅನುಪಸ್ಥಿತಿಯ ಪರಿಣಾಮ

ರಹಾನೆ, ರೋಹಿತ್ ಮತ್ತು ವಿರಾಟ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾದ ಫೀಲ್ಡಿಂಗ್ ಮತ್ತು ಸ್ಲಿಪ್ ಫೀಲ್ಡಿಂಗ್ ಅತ್ಯಂತ ಕಳಪೆಯಾಗಿದೆ. ಇದಕ್ಕೆ ಅತ್ಯಂತ ಗಮನಾರ್ಹ ಉದಾಹರಣೆಯೆಂದರೆ ರಹಾನೆ, ರೋಹಿತ್ ಮತ್ತು ವಿರಾಟ್ ತಂಡದಲ್ಲಿದ್ದಾಗ, ಟೀಂ ಇಂಡಿಯಾ 2018 ಮತ್ತು 2021-22 ಇಂಗ್ಲೆಂಡ್ ಪ್ರವಾಸಗಳಲ್ಲಿ ಕೇವಲ 13 ಕ್ಯಾಚ್‌ಗಳನ್ನು ಮಾತ್ರ ಕೈಬಿಟ್ಟಿತು. ಆದರೆ ಈ ಮೂವರ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ 2025 ರಲ್ಲಿ ಬರೋಬ್ಬರಿ 23 ಕ್ಯಾಚ್‌ಗಳನ್ನು ಕೈಬಿಟ್ಟಿತು.

ಹೀಗಾಗಿ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಶ್ರೀಲಂಕಾಕ್ಕೆ ಬಂದ ಕೂಡಲೇ ಬ್ಯಾಟಿಂಗ್ ಮತ್ತು ಬೌಲಿಂಗ್ ಅನ್ನು ಬದಿಗಿಟ್ಟು, ಮೊದಲು ತಮ್ಮ ತಂಡದ ದೊಡ್ಡ ದೌರ್ಬಲ್ಯವನ್ನು ಸರಿಪಡಿಸಿಕೊಳ್ಳಲು ಮುಂದಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:45 pm, Wed, 5 August 26

Source link

‘ರಾಮಾಯಣ’ ರಿಲೀಸ್ ದಿನಾಂಕದ ಕುತೂಹಲಕ್ಕೆ ತೆರೆ? ಚಿತ್ರತಂಡದ ಪ್ಲ್ಯಾನ್ ಬಹಿರಂಗ – Kannada News | Ranbir Kapoor Yash Sai Pallavi starrer Ramayana Movie likely to be released on This date

ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ರಾಮಾಯಣ’ (Ramayana) ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಈ ಚಿತ್ರವು ದೀಪಾವಳಿ ಹಬ್ಬದಂದು ಬಿಡುಗಡೆಯಾಗಲಿದೆ ಎಂದು ಟ್ರೇಲರ್‌ನಲ್ಲಿ ಹೇಳಲಾಗಿತ್ತಾದರೂ, ನಿಖರವಾದ ದಿನಾಂಕವನ್ನು (Ramayana  Release Date) ಬಹಿರಂಗಪಡಿಸಿರಲಿಲ್ಲ. ಇದರಿಂದಾಗಿ ಸಿನಿಮಾ ನವೆಂಬರ್ 8ರ ದೀಪಾವಳಿಯಂದೇ ಬರುತ್ತದೋ ಅಥವಾ ನವೆಂಬರ್ 6ರ ಶುಕ್ರವಾರವೇ ತೆರೆಕಾಣುತ್ತದೋ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ.

ವರದಿಗಳ ಪ್ರಕಾರ, ‘ರಾಮಾಯಣ’ ಚಿತ್ರವು ನವೆಂಬರ್ 6ರ ಶುಕ್ರವಾರದಂದು ವಿಶ್ವದಾದ್ಯಂತ ಏಕಕಾಲಕ್ಕೆ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಇದರ ಹಿಂದೆ ಚಿತ್ರತಂಡದ ಲೆಕ್ಕಾಚಾರ ಇದೆ. ರಿಲೀಸ್ ದಿನಾಂಕದ ಬಗ್ಗೆ ಚಿತ್ರತಂಡದ ಮೂಲಗಳು ಮಾಹಿತಿ ನೀಡಿರುವುದಾಗಿ ‘ಬಾಲಿವುಡ್ ಹಂಗಾಮಾ’ ವರದಿ ಮಾಡಿದೆ.

ಸಾಮಾನ್ಯವಾಗಿ ದೀಪಾವಳಿ ಹಬ್ಬಕ್ಕೂ ಮುಂಚಿನ ದಿನಗಳಲ್ಲಿ ಸಿನಿಮಾ ಬಿಡುಗಡೆಯಾದರೆ ಗಲ್ಲಾಪೆಟ್ಟಿಗೆಯಲ್ಲಿ ಕೊಂಚ ಮಂದಗತಿಯ ಬಿಸಿನೆಸ್ ಕಾಣುತ್ತವೆ. ಆದರೆ ‘ರಾಮಾಯಣ’ ಚಿತ್ರದ ಮೇಲಿರುವ ಅಪಾರ ನಿರೀಕ್ಷೆಯಿಂದಾಗಿ ಈ ಸಿನಿಮಾ ಮೊದಲ ದಿನವೇ ದಾಖಲೆ ಮಟ್ಟದ ಗಳಿಕೆ ಕಾಣಲಿದೆ ಎಂದು ಟ್ರೇಡ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಈ ಸಿನಿಮಾ ನವೆಂಬರ್ 6ರಂದು ಬಿಡುಗಡೆ ಆದರೂ ಕೂಡ ನವೆಂಬರ್ 9ರ ಸೋಮವಾರದಿಂದ ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈ ಬಹುನಿರೀಕ್ಷಿತ ಚಿತ್ರವನ್ನು ಭಾರತದಲ್ಲಿ ‘ಧರ್ಮ ಪ್ರೊಡಕ್ಷನ್ಸ್’ ಸಂಸ್ಥೆ ವಿತರಣೆ ಮಾಡುತ್ತಿದ್ದರೆ, ವಿದೇಶಗಳಲ್ಲಿ ‘ಸೋನಿ ಪಿಕ್ಚರ್ಸ್’ ವಿತರಣೆಯ ಹಕ್ಕನ್ನು ಪಡೆದುಕೊಂಡಿದೆ. ಇನ್ನು ಚಿತ್ರದ ಎರಡೂ ಭಾಗಗಳ ಮ್ಯೂಸಿಕ್ ರೈಟ್ಸ್ ಅನ್ನು ‘ಟಿ-ಸಿರೀಸ್’ ಸಂಸ್ಥೆಯು ಬರೋಬ್ಬರಿ 75 ಕೋಟಿ ರೂಪಾಯಿಗೆ ಖರೀದಿಸಿದೆ.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾ ಬಿಡುಗಡೆಗೂ ಮುನ್ನ ಬರಲಿದೆ ರಾಮಾಯಣ್ ಧಾರಾವಾಹಿ ಕುರಿತು ಸಾಕ್ಷ್ಯಚಿತ್ರ

‘ದಂಗಲ್’ ಖ್ಯಾತಿಯ ನಿತೇಶ್ ತಿವಾರಿ ನಿರ್ದೇಶನದ ಈ ದೃಶ್ಯಕಾವ್ಯವನ್ನು ನಮಿತ್ ಮಲ್ಹೋತ್ರಾ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್, ಹನುಮಂತನಾಗಿ ಸನ್ನಿ ಡಿಯೋಲ್ ಹಾಗೂ ಲಕ್ಷ್ಮಣನಾಗಿ ರವಿ ದುಬೆ ಅಭಿನಯಿಸುತ್ತಿದ್ದಾರೆ. ಎ.ಆರ್. ರೆಹಮಾನ್ ಮತ್ತು ಹಾನ್ಸ್ ಜಿಮ್ಮರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರು-ಮಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರಕ್ಕೆ ಮುಹೂರ್ತ ಫಿಕ್ಸ್, ಆ ಘಾಟಿನಲ್ಲಿ ಹೋಗುವುದೇ ಮಜಾ – Kannada News | Bengaluru Mangaluru Vande Bharat Express train trial run on Sakleshpur Subrahmanya Ghat section from August 11

ಬೆಂಗಳೂರು, (ಆಗಸ್ಟ್​ 05): ಬಹುನಿರೀಕ್ಷಿತ ಬೆಂಗಳೂರು-ಮಂಗಳೂರು (Bengaluru-Mangaluru Vande Bharat Express) ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಟ್ರಯಲ್ ರನ್​​​ಗೆ (Trial Run) ಹೊಸ ಮುಹೂರ್ತ ಫಿಕ್ಸ್ ಆಗಿದೆ. ಕೆಲ ತಾಂತ್ರಿಕ ಕಾರಣಾಂತರಗಳಿಂದ ಜೂನ್ 3ರಂದು ನಡೆಯಬೇಕಿದ್ದ ಪ್ರಾಯೋಗಿಕ ಸಂಚಾರವನ್ನು ರದ್ದುಗೊಂಡಿದ್ದು, ಇದೀಗ ಇದೇ ಆಗಸ್ಟ್ 11ರಂದು ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ(Bengaluru-Mangaluru Vande Bharat Express) ಪ್ರಾಯೋಗಿಕ ಸಂಚಾರ ಆರಂಭವಾಗಲಿದ್ದ, ಸಕಲೇಶಪುರ-ಸುಬ್ರಹ್ಮಣ್ಯ ಘಾಟಿ ಪ್ರದೇಶದ ದಟ್ಟ ಕಾಡು, ಪ್ರಕೃತಿ ಸೊಬಿಗನ ಮಧ್ಯೆ ರೈಲು ಓಡಾಟಕ್ಕೆ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಸಕಲ ಸಿದ್ಧತೆ ಮಾಡಿಕೊಂಡಿದೆ.

ಆಗಸ್ಟ್ 11ರಿಂದ ಆಗಸ್ಟ್ 20ರವರೆಗೆ ಪ್ರಾಯೋಗಿಕ ಸಂಚಾರ

ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ(Somanna) ಅವರು ಜೂನ್ ತಿಂಗಳೊಳಗಾಗಿ ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಸೇವೆಯನ್ನು ಆರಂಭಿಸುವುದಾಗಿ ಈ ಹಿಂದೆ ತಿಳಿಸಿದ್ದರು. ಆದರೆ ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದ ಕ್ಲಿಷ್ಟಕರ ಘಾಟ್ ಪ್ರದೇಶದಲ್ಲಿ ಸಂಚರಿಸಲು ಅತ್ಯಗತ್ಯವಾದ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (AEB) ವ್ಯವಸ್ಥೆ ಹೊಂದಿರುವ ರೇಕ್ ಲಭ್ಯವಿಲ್ಲದ ಕಾರಣ ಪ್ರಕ್ರಿಯೆ ತಡವಾಗಿತ್ತು. ಆದ್ರೆ, ಇದೀಗ ಆಗಸ್ಟ್ 11ರಿಂದ ಆರಂಭವಾಗಲಿರುವ ಪ್ರಾಯೋಗಿಕ ಸಂಚಾರವು ಆಗಸ್ಟ್ 20ರವರೆಗೆ ನಡೆಯಲಿದೆ. ಭಾರತೀಯ ರೈಲ್ವೆಯ ಸಂಶೋಧನೆ, ವಿನ್ಯಾಸ ಮತ್ತು ಮಾನಕ ಸಂಸ್ಥೆಯ (RDSO) ತಂಡವು ಶೀಘ್ರದಲ್ಲೇ ಆಗಮಿಸಿ ಈ ಪರೀಕ್ಷಾರ್ಥ ಸಂಚಾರದ ಉಸ್ತುವಾರಿ ವಹಿಸಲಿದೆ ಎಂದು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಕೇವಲ 5 ಗಂಟೆಗಳಲ್ಲಿ ತಲುಪಬಹುದು! ಅದು ಹೇಗೆ ಗೊತ್ತಾ?

ಘಾಟಿ ಸುರಕ್ಷತಾ ಕ್ರಮ ಸವಾಲು

ಸಕಲೇಶಪುರ – ಸುಬ್ರಹ್ಮಣ್ಯ ಮಧ್ಯೆ ಸುಮಾರು 55 ಕಿಮೀ ಉದ್ದದ ಘಾಟ್‌ನಲ್ಲಿ ರೈಲ್ವೆ ಹಳಿ ಹಾದು ಹೋಗಿದೆ. ಇದರಲ್ಲಿ 57 ಸುರಂಗಗಳು, 258 ಸೇತುವೆಗಳು, 108 ತೀಕ್ಷ್ಣ ತಿರುವುಗಳಿರುವುದರಿಂದ ಅತ್ಯಂತ ಸೂಕ್ಷ್ಮವಾದ ಸಂಚಾರವಾಗಿದೆ. ವಂದೇ ಭಾರತ್‌ ಈ ಘಾಟ್‌ನಲ್ಲಿಸಂಚರಿಸಬೇಕಾದರೆ ಘಾಟ್‌ ಇಳಿಯುವಾಗ ಬ್ರೇಕಿಂಗ್‌ ಸಿಸ್ಟಮ್‌ನಲ್ಲಿಅಳವಡಿಸಬೇಕಾದ ತಾಂತ್ರಿಕ ಸೌಲಭ್ಯದಲ್ಲಿನ ಕೊರತೆ ಕಾರಣ ಪ್ರಾಯೋಗಿಕ ಪ್ರಯಾಣವನ್ನು ರದ್ದುಗೊಳಿಸಲಾಗಿತ್ತು.

ಘಾಟ್ ಮಾರ್ಗಕ್ಕೆ AEB ತಂತ್ರಜ್ಞಾನ

ವಂದೇ ಭಾರತ್ ರೈಲು ಸಾಮಾನ್ಯವಾಗಿ ಅತ್ಯಾಧುನಿಕ ಎಲೆಕ್ಟ್ರೋ-ನ್ಯೂಮ್ಯಾಟಿಕ್ (EP) ಡಿಸ್ಕ್ ಬ್ರೇಕ್ ಹಾಗೂ Regenerative Braking ವ್ಯವಸ್ಥೆಯನ್ನು ಹೊಂದಿರುತ್ತದೆ. ಆದರೆ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ನಡುವಿನ ಘಾಟ್ ಮಾರ್ಗವು ಅತ್ಯಂತ ಕಡಿದಾದ ಇಳಿಜಾರು ಹೊಂದಿದೆ.

ಈಗ ಈ ಮಾರ್ಗದಲ್ಲಿ ಚಲಿಸುವ ರೈಲುಗಳ ಸುರಕ್ಷತೆಗಾಗಿ ಬ್ಯಾಂಕರ್ ಇಂಜಿನ್‌ಗಳನ್ನು (ಹೆಚ್ಚುವರಿ ಇಂಜಿನ್) ಜೋಡಿಸಲಾಗುತ್ತದೆ. ಇವುಗಳನ್ನು ಜೋಡಿಸಲು ಮತ್ತು ಕಳಚಲು ಸುಮಾರು 15 ನಿಮಿಷ ಬೇಕಾಗುತ್ತದೆ. ವಂದೇ ಭಾರತ್ ರೈಲಿಗೆ ಈ ರೀತಿ ಹೊರಗಿನಿಂದ ಬ್ಯಾಂಕರ್ ಎಂಜಿನ್ ಜೋಡಿಸಬೇಕಾದರೆ ರೈಲಿನ ಮುಂಭಾಗದ ನೋಸ್ (Nose) ಭಾಗವನ್ನು ಕಳಚಬೇಕಾಗುತ್ತದೆ. ಇದು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಜೊತೆಗೆ ರೈಲಿನ ಅತಿವೇಗವನ್ನು ಕಂಟ್ರೋಲ್ ಮಾಡುತ್ತದೆ.

ಈ ಕಾರಣಕ್ಕೆ ರೈಲಿನಲ್ಲೇ ಸ್ವಯಂಚಾಲಿತವಾಗಿ ಗರಿಷ್ಠ 30 ಕಿ.ಮೀ ವೇಗವನ್ನು ನಿಯಂತ್ರಿಸುವ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ವ್ಯವಸ್ಥೆ ಹೊಂದಿರುವ ವಿಶೇಷ ರೇಕ್‌ಗಾಗಿ ರೈಲ್ವೇ ಕಾಯುತ್ತಿತ್ತು. ಈಗ ಎಇಬಿ ವ್ಯವಸ್ಥೆ ಹೊಂದಿರುವ ರೇಕ್ ಬಂದಿರುವುದರಿಂದ ಪ್ರಾಯೋಗಿಕ ಸಂಚಾರ ಯಶಸ್ವಿಯಾದ ತಕ್ಷಣವೇ ವಾಣಿಜ್ಯ ಸಂಚಾರಕ್ಕೆ ರೈಲ್ವೆ ಮಂಡಳಿಯಿಂದ ಅಧಿಕೃತ ಅನುಮೋದನೆ ಸಿಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹೊಸೂರು-ಬೆಂಗಳೂರು ರಸ್ತೆಯಲ್ಲಿ ಸಂಚಾರ ದಟ್ಟಣೆ: ಮಡಿವಾಳ ವ್ಯಾಪ್ತಿಯಲ್ಲಿ ಟ್ರಾಫಿಕ್ ಮಾರ್ಗ ಬದಲಾವಣೆ – Kannada News | Madiwala Traffic Diversion: New Rules for Hosur Road to Combat Bengaluru Congestion

ಬೆಂಗಳೂರು ಆ. 5: ಹೊಸೂರು-ಬೆಂಗಳೂರು ರಸ್ತೆಯಲ್ಲಿ ದಿನೇ ದಿನೇ ಸಂಚಾರ ದಟ್ಟಣೆ (Traffic Jam) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸಂಚಾರ ಸುಗಮಗೊಳಿಸಲು ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸರು ಪ್ರಾಯೋಗಿಕವಾಗಿ ಹೊಸ ಮಾರ್ಗ ಬದಲಾವಣೆಯನ್ನು (Traffic Diversion) ಜಾರಿಗೆ ತಂದಿದ್ದಾರೆ. ಈ ನೂತನ ಸಂಚಾರ ನಿಯಮಗಳು ಪ್ರತಿದಿನ ಬೆಳಗ್ಗೆ 8:00 ರಿಂದ 10:30 ರವರೆಗೆ ಜಾರಿಯಲ್ಲಿರಲಿವೆ.

ಸರ್ಜಾಪುರ ರಸ್ತೆ ಜಂಕ್ಷನ್‌ನಿಂದ ಮಡಿವಾಳ ಪೊಲೀಸ್ ಠಾಣಾ ಜಂಕ್ಷನ್ ಕಡೆಗೆ ಬರುವ ಎಲ್ಲಾ ವಾಹನಗಳಿಗೆ ಸರ್ಜಾಪುರ ರಸ್ತೆ ಜಂಕ್ಷನ್‌ನಲ್ಲೇ ಪ್ರವೇಶ ನಿಷೇಧಿಸಲಾಗಿದೆ. 100 ಅಡಿ ರಸ್ತೆಯಿಂದ ವಾಟರ್ ಟ್ಯಾಂಕ್ ಜಂಕ್ಷನ್ ಮೂಲಕ ಅಯ್ಯಪ್ಪ ಜಂಕ್ಷನ್‌ಗೆ ಬಂದು, ಮಡಿವಾಳ ಪೊಲೀಸ್ ಠಾಣಾ ಜಂಕ್ಷನ್ ಕಡೆಗೆ ತೆರಳುವ ವಾಹನಗಳಿಗೆ ಅಯ್ಯಪ್ಪ ಜಂಕ್ಷನ್‌ನಲ್ಲಿ ನಿಷೇಧ ಹೇರಲಾಗಿದೆ.

ಸರ್ಜಾಪುರ ರಸ್ತೆ ಜಂಕ್ಷನ್‌ನಿಂದ ಮಡಿವಾಳ ಪೊಲೀಸ್ ಠಾಣಾ ಜಂಕ್ಷನ್ ಕಡೆಗೆ ಹಾಗೂ ವಾಟರ್ ಟ್ಯಾಂಕ್ ಜಂಕ್ಷನ್ ಕಡೆಯಿಂದ ಅಯ್ಯಪ್ಪ ಜಂಕ್ಷನ್ ಮೂಲಕ ಮಡಿವಾಳ ಠಾಣೆ ಕಡೆಗೆ ಹೋಗುವ ವಾಹನಗಳು ಕೃಪಾನಿಧಿ ಜಂಕ್ಷನ್/ಸರ್ಜಾಪುರ ರಸ್ತೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು, ವಾಟರ್ ಟ್ಯಾಂಕ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದುಕೊಳ್ಳಬೇಕು. ಬಳಿಕ ಮಡಿವಾಳ ಮಾರುಕಟ್ಟೆ ರಸ್ತೆ ಮೂಲಕ ಸಾಗಿ, ಮಡಿವಾಳ ಪೊಲೀಸ್ ಠಾಣಾ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಹೊಸೂರು ಮುಖ್ಯರಸ್ತೆಯ ಮೂಲಕ ಮುಂದೆ ಸಂಚರಿಸಬಹುದು.

ಇದನ್ನೂ ಓದಿ: 120 ಕೋಟಿ ಮಠದ ಜಮೀನು ಕಬಳಿಕೆ ಕೇಸ್: ಕೊನೆಗೂ ಪೊಲೀಸರ ಮುಂದೆ ಹಾಜರಾದ ಕಿಂಗ್‌ಪಿನ್ ನರೇಶ್ ಗೌಡ

ಸಾರ್ವಜನಿಕರು ಹಾಗೂ ಸವಾರರು ಪೊಲೀಸರೊಂದಿಗೆ ಸಹಕರಿಸಿ, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮಡಿವಾಳ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಂಗ್ಲಾದೇಶ ಮತ್ತೊಂದು ಪಾಕಿಸ್ತಾನವಾಗುತ್ತಿದೆ; ಭಾರತಕ್ಕೆ ಶೇಖ್ ಹಸೀನಾ ಮಗ ಎಚ್ಚರಿಕೆ – Kannada News | Bangladesh has become another Pakistan Sheikh Hasinas Son Sajeeb Wazed alert India

ನವದೆಹಲಿ, ಆಗಸ್ಟ್ 5: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರ ಪುತ್ರ ಸಾಜೀಬ್ ವಾಝೇದ್ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದು, ಬಾಂಗ್ಲಾದೇಶದಲ್ಲಿ ಕ್ಷೀಣಿಸುತ್ತಿರುವ ಭದ್ರತಾ ಪರಿಸ್ಥಿತಿಯು ಭಾರತಕ್ಕೆ ಬೆದರಿಕೆಯನ್ನು ಒಡ್ಡಬಹುದು ಎಂದು ಎಚ್ಚರಿಸಿದ್ದಾರೆ. ನವದೆಹಲಿಯಲ್ಲಿ ನಡೆದ ‘ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ ಆಫ್ ಸೌತ್ ಏಷ್ಯಾ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಾಜೀದ್ ವಾಝೇದ್, “ಬಾಂಗ್ಲಾದೇಶ ಈಗಾಗಲೇ ವಿಫಲವಾಗಿರುವ ರಾಷ್ಟ್ರವಾಗಿದೆ. ಆ ದೇಶದಲ್ಲಿ ಮಾನವ ಹಕ್ಕುಗಳಿಲ್ಲ, ವಾಕ್ ಸ್ವಾತಂತ್ರ್ಯವಿಲ್ಲ” ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಭಾರತದ ಭದ್ರತೆಯ ಮೇಲಾಗುವ ಪರಿಣಾಮಗಳ ಕುರಿತು ಎಚ್ಚರಿಸಿದ ವಾಝೇದ್, ಭಾರತದ ಪೂರ್ವ ಗಡಿಯಲ್ಲಿ ಬಾಂಗ್ಲಾದೇಶವು ಮತ್ತೊಂದು ಪಾಕಿಸ್ತಾನವಾಗುತ್ತಿದೆ ಎಂದು ಎಚ್ಚರಿಸಿದರು. “ಇದನ್ನು ಈಗಲೇ ತಡೆಯದಿದ್ದರೆ ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದ ಭಯೋತ್ಪಾದಕರು ಬಾಂಗ್ಲಾದೇಶದಿಂದ ಬರಲಿದ್ದಾರೆ” ಎಂದು ವಾಝೇದ್ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಗಸ್ಟ್ 19 ರಂದು ಭಾರತ- ಪಾಕಿಸ್ತಾನ ನಡುವೆ ಪಂದ್ಯ; ಉಭಯ ತಂಡಗಳು ಪ್ರಕಟ – Kannada News | 2026 Hockey World Cup: India vs Pakistan High Voltage Clash and Full Guide

2026 ರ ಹಾಕಿ ವಿಶ್ವಕಪ್ (2026 Hockey World Cup) ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಬಾರಿಯ ಹಾಕಿ ವಿಶ್ವಕಪ್ ಅನ್ನು ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ಸ್ ಜಂಟಿಯಾಗಿ ಆಯೋಜಿಸುತ್ತಿವೆ. ಇದು ಹಾಕಿ ವಿಶ್ವಕಪ್‌ನ 16 ನೇ ಆವೃತ್ತಿಯಾಗಿದ್ದು, ಒಟ್ಟು 16 ತಂಡಗಳು ಭಾಗವಹಿಸುತ್ತಿವೆ. ಎಲ್ಲಾ ಪಂದ್ಯಗಳನ್ನು ಎರಡು ಆತಿಥೇಯ ನಗರಗಳ (ವಾವ್ರೆ ಮತ್ತು ಆಮ್ಸ್ಟೆಲ್ವೀನ್) ಎರಡು ಕ್ರೀಡಾಂಗಣಗಳಲ್ಲಿ ಆಡಲಾಗುತ್ತದೆ. ಈ ಕ್ರೀಡಾಕೂಟ ಆಗಸ್ಟ್ 14 ರಿಂದ ಆಗಸ್ಟ್ 30 ರವರೆಗೆ ನಡೆಯಲಿದ್ದು, ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ಹೈವೋಲ್ಟೇಜ್ ಕದನ ಆಗಸ್ಟ್ 19 ರಂದು ನಡೆಯಲಿದೆ.

ಮೊದಲ ಹಂತದಲ್ಲಿ, ಎಲ್ಲಾ ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ‘ಪೂಲ್ ಡಿ’ಯಲ್ಲಿವೆ. ಈ ಪೂಲ್​ನಲ್ಲಿ ವೇಲ್ಸ್ ಮತ್ತು ಇಂಗ್ಲೆಂಡ್ ಕೂಡ ಸೇರಿವೆ. ‘ಪೂಲ್ ಸಿ’ಯಲ್ಲಿ ಆಸ್ಟ್ರೇಲಿಯಾ, ಸ್ಪೇನ್, ಐರ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸೇರಿವೆ. ‘ಪೂಲ್ ಎ’ಯಲ್ಲಿ ನೆದರ್ಲ್ಯಾಂಡ್ಸ್, ಅರ್ಜೆಂಟೀನಾ, ನ್ಯೂಜಿಲೆಂಡ್ ಮತ್ತು ಜಪಾನ್ ತಂಡಗಳಿದ್ದರೆ, ‘ಪೂಲ್ ಬಿ’ಯಲ್ಲಿ ಬೆಲ್ಜಿಯಂ, ಜರ್ಮನಿ, ಫ್ರಾನ್ಸ್ ಮತ್ತು ಮಲೇಷ್ಯಾ ಸೇರಿವೆ.

ಮುಖಾಮುಖಿ ದಾಖಲೆ

ಭಾರತ ಮತ್ತು ಪಾಕಿಸ್ತಾನ ನಡುವೆ ಒಟ್ಟು 183 ಹಾಕಿ ಪಂದ್ಯಗಳು ನಡೆದಿವೆ. ಇದರಲ್ಲಿ ಪಾಕಿಸ್ತಾನ 82 ಪಂದ್ಯಗಳನ್ನು ಗೆದ್ದಿದ್ದರೆ, ಭಾರತ 69 ಪಂದ್ಯಗಳನ್ನು ಗೆದ್ದಿದೆ. ಉಳಿದಂತೆ 32 ಪಂದ್ಯಗಳು ಡ್ರಾ ಆಗಿವೆ. ಪಾಕಿಸ್ತಾನ 407 ಗೋಲುಗಳನ್ನು ಗಳಿಸಿದ್ದರೆ, ಭಾರತ 390 ಗೋಲುಗಳನ್ನು ಗಳಿಸಿದೆ. ಆದಾಗ್ಯೂ, ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ, ಭಾರತೀಯ ಹಾಕಿ ತಂಡವು ಬಲಿಷ್ಠವಾಗಿ ಕಾಣುತ್ತಿದೆ. ಈ ವರ್ಷ, ಭಾರತವು ಪ್ರೊ ಲೀಗ್‌ನಲ್ಲಿ ಎರಡು ಬಾರಿ ಪಾಕಿಸ್ತಾನವನ್ನು ಸೋಲಿಸಿತ್ತು. ಮೊದಲ ಪಂದ್ಯವನ್ನು 4-3 ಅಂತರದಿಂದ ಗೆದ್ದಿದ್ದ ಭಾರತ ಎರಡನೇ ಪಂದ್ಯದಲ್ಲಿ 7-1 ಅಂತರದಿಂದ ಸೋಲಿಸಿತ್ತು.

ಹಾಕಿ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಯಾವಾಗ?

ಭಾರತ ಹಾಕಿ ತಂಡ ಮತ್ತು ಪಾಕಿಸ್ತಾನ ಹಾಕಿ ತಂಡದ ನಡುವಿನ ಪಂದ್ಯ ಆಗಸ್ಟ್ 19 ರಂದು ನೆದರ್ಲ್ಯಾಂಡ್ಸ್‌ನ ವ್ಯಾಗ್ನರ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಬೆಳಿಗ್ಗೆ 11:30 ರ ಸುಮಾರಿಗೆ ಆರಂಭವಾಗಲಿದೆ. ಇದು ಮೊದಲ ಹಂತದಲ್ಲಿ ಭಾರತದ ಕೊನೆಯ ಪಂದ್ಯವಾಗಿರುತ್ತದೆ.

ಭಾರತ ಹಾಕಿ ತಂಡ

ಗೋಲ್‌ಕೀಪರ್‌ಗಳು: ಮೋಹಿತ್ ಎಚ್‌ಎಸ್, ಸೂರಜ್ ಕರ್ಕೇರಾ.

ಡಿಫೆಂಡರ್ಸ್: ಜರ್ಮನ್‌ಪ್ರೀತ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್ (ನಾಯಕ), ಅಮಿತ್ ರೋಹಿದಾಸ್, ಜುಗ್ರಾಜ್ ಸಿಂಗ್, ಸಂಜಯ್, ಸುಮಿತ್, ಯಶ್‌ದೀಪ್ ಸಿವಾಚ್.

ಮಿಡ್‌ಫೀಲ್ಡರ್‌ಗಳು: ರಾಜಿಂದರ್ ಸಿಂಗ್, ರಾಜ್ ಕುಮಾರ್ ಪಾಲ್, ಹಾರ್ದಿಕ್ ಸಿಂಗ್, ಮನ್‌ಪ್ರೀತ್ ಸಿಂಗ್, ನೀಲಕಂಠ ಶರ್ಮಾ, ವಿವೇಕ್ ಸಾಗರ್ ಪ್ರಸಾದ್.

ಫಾರ್ವರ್ಡ್‌ಗಳು: ದಿಲ್‌ಪ್ರೀತ್ ಸಿಂಗ್, ಶಿಲಾನಂದ್ ಲಾಕ್ರಾ, ಸುಖಜೀತ್ ಸಿಂಗ್, ಮನ್‌ದೀಪ್ ಸಿಂಗ್, ಅಭಿಷೇಕ್.

ಹಾಕಿ ತಂಡದ ಜೆರ್ಸಿ ಬಣ್ಣ ನೀಲಿಯಿಂದ ಕೇಸರಿಗೆ ಬದಲು; ಹೊಸ ವಿವಾದ ಸೃಷ್ಟಿ

ಪಾಕಿಸ್ತಾನ ತಂಡ: ವಕಾರ್, ಮುಹಮ್ಮದ್ ಅಬ್ದುಲ್ಲಾ, ಮುಹಮ್ಮದ್ ಸುಫ್ಯಾನ್ ಖಾನ್, ಮೊಯಿನ್ ಶಕೀಲ್, ಅಬ್ದುಲ್ ವಹೀದ್ ಅಶ್ರಫ್ ರಾಣಾ, ಅಬ್ದುಲ್ ಹನನ್ ಶಾಹಿದ್, ಜಕಾರಿಯಾ ಹಯಾತ್, ಅರ್ಷದ್ ಲಿಯಾಕತ್, ಅದೀಲ್ ಲತೀಫ್, ಅಹ್ಮದ್ ನದೀಮ್, ಗಜನ್ಫರ್ ಅಲಿ, ಇಮಾದ್ ಶಕೀಲ್ ಬಟ್, ಮುಹಮ್ಮದ್ ಹಮ್ಮದುದ್ದೀನ್ ಅಂಜುಮ್, ಮುಹಮ್ಮದ್ ಹಮ್ಮದುದ್ದೀನ್ ಅಂಜುಮ್, ರೆಹಮಾನ್ ಅಬ್ದುಲ್, ಅಫ್ರಾಜ್, ಒಮರ್ ಮುಸ್ತಫಾ, ಅಬು ಬಕರ್ ಮಹಮೂದ್, ಅಲಿ ರಝಾ, ಅಬ್ದುಲ್ ಮತಾನ್ ಮತ್ತು ಮುಹಮ್ಮದ್ ಇಮಾದ್.

ಗೋಲ್‌ಕೀಪರ್‌ಗಳು: ವಕಾರ್ ಮತ್ತು ಅಲಿ ರಜಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:04 pm, Wed, 5 August 26

Source link

ಅಸಿಸ್ಟೆಂಟ್ ಮ್ಯಾನೇಜರ್ ಇಶಾನ್ ಕಿಶನ್​ಗೆ RBI ನೀಡುವ ಸಂಭಾವನೆ ಎಷ್ಟು ಗೊತ್ತಾ?

Source link

‘ಫ್ರೀಡಂ ಹಬ್ಬ’ ಘೋಷಣೆ: ವಿಧಾನಸೌಧದಲ್ಲಿ ಇದೇ ಮೊದಲ ಬಾರಿಗೆ ಸಾರ್ವಜನಿಕರ ಬೃಹತ್ ಸ್ವಾತಂತ್ರ್ಯೋತ್ಸವ ಸಂಭ್ರಮ – Kannada News | Krishna byre gowda Announces freedom Habba Celebration for independence day Special at Vidhana soudha on august 15

ಬೆಂಗಳೂರು, (ಆಗಸ್ಟ್ 5): ಸ್ವಾತಂತ್ರ್ಯ ದಿನವನ್ನು (independence day) ಕೇವಲ ಸರ್ಕಾರಿ ಆಚರಣೆಗೆ ಸೀಮಿತಗೊಳಿಸದೇ ಜನರ ಸಂಭ್ರಮದ ಹಬ್ಬವನ್ನಾಗಿ ರೂಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಫ್ರಿಂಡಂ ಹಬ್ಬವನ್ನು (Freedom Habba) ಆಯೋಜಿಸುತ್ತಿದೆ. ಹೌದು… ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಇಂದು ಫ್ರೀಡಂ ಹಬ್ಬವನ್ನು ಘೋಷಣೆ ಮಾಡಿದ್ದು, ಆಗಸ್ಟ್​ 15ರಂದು ವಿಧಾನಸೌಧದ ಮುಂಭಾಗ ಬೆಳಗ್ಗೆಯಿಂದ ರಾತ್ರಿ 10 ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ಈ ಮೂಲಕ ದೇಶದ ಸ್ವಾತಂತ್ರ್ಯ ದಿನಾಚರಣೆಯನ್ನು ಬೆಂಗಳೂರು ನಗರವು ಇದುವರೆಗೆ ಎಂದೂ ಕಾಣದ ರೀತಿಯಲ್ಲಿ ಆಚರಿಸಲಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ (krishna byre gowda )ಅವರು ನಾಗರಿಕರೇ ಮುಂಚೂಣಿಯಲ್ಲಿರುವ ಮೊದಲ ರೀತಿಯ ‘ಫ್ರೀಡಂ ಹಬ್ಬ’ವನ್ನು ಘೋಷಿಸಿದರು. ಇದು ಬೆಂಗಳೂರನ್ನು ತಮ್ಮ ನೆಲೆಯಾಗಿಸಿಕೊಂಡಿರುವ ವಿವಿಧ ಸಮುದಾಯಗಳನ್ನು ಪ್ರತಿನಿಧಿಸುವ ಬೆಂಗಳೂರಿಗರು ಒಂದೆಡೆ ಸೇರಿ ಆಚರಿಸುವ ಸ್ವಾತಂತ್ರ್ಯದ ಹಬ್ಬವಾಗಿದೆ. ಫ್ರೀಡಂ ಹಬ್ಬವು ಸ್ವಾತಂತ್ರ್ಯ ದಿನಾಚರಣೆಯನ್ನು ಕೇವಲ ಸರ್ಕಾರದ ಔಪಚಾರಿಕ ಕಾರ್ಯಕ್ರಮವಾಗಿರಿಸದೆ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ವೈವಿಧ್ಯತೆ ಮತ್ತು ಸಂಸ್ಕೃತಿಯ ದಿನಪೂರ್ತಿ ಸಾರ್ವಜನಿಕ ಸಂಭ್ರಮಾಚರಣೆಯನ್ನಾಗಿ ಪರಿವರ್ತಿಸುತ್ತದೆ.

ಈ ಕಾರ್ಯಕ್ರಮವನ್ನು ಘೋಷಿಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಫ್ರೀಡಂ ಹಬ್ಬವು ಸರಳವಾದರೂ ಶಕ್ತಿಯುತವಾದ ಆಲೋಚನೆಯ ಮೇಲೆ ಆಧಾರಿತವಾಗಿದೆ. ಸ್ವಾತಂತ್ರ್ಯ ದಿನವು ಪ್ರತಿಯೊಬ್ಬ ನಾಗರಿಕನಿಗೂ ಸೇರಿದ್ದು. ಆದರೆ, ದಶಕಗಳಿಂದ ಸ್ವಾತಂತ್ರ್ಯ ದಿನವು ಹೆಚ್ಚಾಗಿ ನಾಗರಿಕರು ವೀಕ್ಷಿಸುವ ಒಂದು ಸಮಾರಂಭವಾಗಿದೆಯೇ ವಿನಃ ನಾಗರಿಕರು ಸ್ವತಃ ಒಟ್ಟಾಗಿ ರೂಪಿಸುವ ಹಬ್ಬವಾಗಿ ಪರಿವರ್ತಿತವಾಗಿಲ್ಲ. ಆ ನಿಟ್ಟಿನಲ್ಲಿ ನಾವು ಇಂದು ಮಹತ್ವದ ಹೆಜ್ಜೆ ಇಟ್ಟಿದ್ದೇವೆ. ಫ್ರೀಡಂ ಹಬ್ಬವು ವೀಕ್ಷಿಸಲು ಇರುವ ಸರ್ಕಾರಿ ಕಾರ್ಯಕ್ರಮವಲ್ಲ; ಇದು ಬೆಂಗಳೂರಿನ ಜನರು ಒಟ್ಟಾಗಿ ಆಚರಿಸುವ, ನಿರ್ಮಿಸುವ ಮತ್ತು ತಮ್ಮದಾಗಿಸಿಕೊಳ್ಳುವ ಹಬ್ಬವಾಗಿದೆ. ಜನರು ಸ್ವತಃ ಈ ಆಚರಣೆಯ ಭಾಗವಾದಾಗ ಸ್ವಾತಂತ್ರ್ಯದ ನಿಜವಾದ ಸಂಭ್ರಮ ವ್ಯಕ್ತವಾಗುತ್ತದೆ” ಎಂದರು.

ಫ್ರೀಡಂ ಹಬ್ಬ

ಹೆಚ್ಚಿನ ವಿವರಗಳನ್ನು ಹಂಚಿಕೊಂಡ ಕೃಷ್ಣ ಬೈರೇಗೌಡ ಅವರು, ಫ್ರೀಡಂ ಹಬ್ಬವನ್ನು ಆಗಸ್ಟ್ 15ರ ಭಾವನೆಯನ್ನು ಔಪಚಾರಿಕ ಆಚರಣೆಯಿಂದ ನಗರದಾದ್ಯಂತ ಸಂಭ್ರಮಿಸುವ ಜೀವಂತಿಕೆಯಿಂದ ಕೂಡಿದ ಸ್ವಾತಂತ್ರ್ಯ, ಸಂಸ್ಕೃತಿ ಮತ್ತು ನಾಗರಿಕ ಹೆಮ್ಮೆಯ ಹಬ್ಬವಾಗಿ ಪರಿವರ್ತಿಸುವ ಸಾರ್ವಜನಿಕ ಕೇಂದ್ರಿತ ಸ್ವಾತಂತ್ರ್ಯ ದಿನಾಚರಣೆಯಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು.

ಸಾಮಾಜಿಕ ಜೀವನದ ಪ್ರತಿಯೊಂದು ಸ್ತರದ ಬೆಂಗಳೂರಿಗರನ್ನು ಒಂದೆಡೆ ತರುವ ಈ ಹಬ್ಬವು, ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ಸಮುದಾಯಗಳ ಭವ್ಯ ಪೆರೇಡ್, ಸಾಂಪ್ರದಾಯಿಕ ಉಡುಪುಗಳು, ಜಾನಪದ ಕಲೆಗಳು, ಸಂಗೀತ, ನೃತ್ಯ, ಕರಕುಶಲ ವಸ್ತುಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಭಾರತದ ಅಸಾಧಾರಣ ಸಾಂಸ್ಕೃತಿಕ ವೈವಿಧ್ಯತೆ ಎರಡನ್ನೂ ಸಂಭ್ರಮಿಸಲಿದೆ.

ಬೆಂಗಳೂರಿನಲ್ಲಿ ನೆಲೆಗೊಂಡಿರುವ ಕನ್ನಡ, ತಮಿಳು, ತೆಲುಗು, ಮಲಯಾಳಂ, ಬಂಗಾಳಿ, ಗುಜರಾತಿ, ಹಿಂದಿ, ಒಡಿಯಾ ಮತ್ತು ಈಶಾನ್ಯ ರಾಜ್ಯಗಳ ಸಮುದಾಯಗಳು ಸೇರಿದಂತೆ ಹಲವು ಭಾಷಿಕ ಸಂಪ್ರದಾಯಗಳನ್ನು ಪ್ರತಿನಿಧಿಸುವ ನಾಗರಿಕರು, ಕೊಡಗು, ಮಂಗಳೂರು, ಉತ್ತರ ಕರ್ನಾಟಕ ಮತ್ತು ರಾಜ್ಯದ ಇತರ ಪ್ರದೇಶಗಳ ಪ್ರತಿನಿಧಿಗಳೊಂದಿಗೆ ಪಾಲ್ಗೊಳ್ಳಲಿದ್ದಾರೆ. ಇದು ವಿಧಾನಸೌಧವನ್ನು ಭಾರತದ ‘ವಿವಿಧತೆಯಲ್ಲಿ ಏಕತೆ’ಯ ಜೀವಂತ ವೇದಿಕೆಯನ್ನಾಗಿ ಮಾಡಲಿದೆ. ಫ್ರೀಡಂ ಹಬ್ಬವು ಕುಟುಂಬಗಳು, ಮಕ್ಕಳು, ಕಲಾವಿದರು, ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಸಮುದಾಯಗಳನ್ನು ಸ್ವಾತಂತ್ರ್ಯದ ಜಂಟಿ ಸಂಭ್ರಮಾಚರಣೆಯಲ್ಲಿ ಒಂದಾಗಲು ಆಹ್ವಾನಿಸುತ್ತದೆ.

ಈ ಆಚರಣೆಯನ್ನು ಸಾರ್ವಜನಿಕರ ಹಬ್ಬವಾಗಿ ರೂಪಿಸಿ, ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ನಡೆಸಲು ಸಲಹೆ ನೀಡಿದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ನಾಯಕತ್ವ ಮತ್ತು ದೂರದೃಷ್ಟಿ ಮುತ್ಸದ್ದಿ ತನಕ್ಕೆ ಸಾಕ್ಷಿ. ಫ್ರೀಡಂ ಹಬ್ಬವು ಬೆಳಿಗ್ಗೆ 11 ಗಂಟೆಗೆ ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ನಡೆಯುವ ಅಧಿಕೃತ ಸ್ವಾತಂತ್ರ್ಯ ದಿನಾಚರಣೆಯ ನಂತರ ಪ್ರಾರಂಭವಾಗಿ ರಾತ್ರಿ 10 ಗಂಟೆಯವರೆಗೆ ಮುಂದುವರಿಯಲಿದೆ. ಈ ಸಮಯದಲ್ಲಿ ವಿಧಾನಸೌಧದ ಸುತ್ತಮುತ್ತಲಿನ ರಸ್ತೆಗಳು ವರ್ಣರಂಜಿತ ಸಾಂಸ್ಕೃತಿಕ ಕಾರಿಡಾರ್ ಆಗಿ ಬದಲಾಗಲಿವೆ.

ಭಾರತದ ಏಕತೆ ಮತ್ತು ಬೆಂಗಳೂರಿನ ಸಾಂಸ್ಕೃತಿಕ ವೈವಿಧ್ಯತೆಯ ಸಂಭ್ರಮ

ಪ್ರಮುಖ ಆಕರ್ಷಣೆಗಳಲ್ಲಿ ಸುಮಾರು 40 ತುಕಡಿಗಳನ್ನೊಳಗೊಂಡ ವರ್ಣರಂಜಿತ ‘ಇಂಡಿಯಾ ಪೆರೇಡ್’, ಸ್ವಾತಂತ್ರ್ಯ ಚಳವಳಿಯ ‘ಲಿವಿಂಗ್ ಮ್ಯೂಸಿಯಂ’, ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರ್ನಾಟಕದ ಕೊಡುಗೆಯನ್ನು ಬಿಂಬಿಸುವ ಜಿಲ್ಲಾ ಆಧಾರಿತ ಪೆವಿಲಿಯನ್ಗಳು, ಸಂವಿಧಾನ ಚೌಕ, ಮಕ್ಕಳ ಕಲಿಕೆ ಮತ್ತು ಚಟುವಟಿಕೆ ವಲಯಗಳು, ವಿಧಾನಸೌಧದ ಮಾರ್ಗದರ್ಶಿತ ಪ್ರವಾಸಗಳು, 200 ಅಡಿಗಳ ಸಾರ್ವಜನಿಕ ಕಲಾ ಗೋಡೆ, ಸೋಲ್ ಸಂತೆಯ ಮಳಿಗೆಗಳು, ಸಂಜೆಯ ಸಂಗೀತ ಕಛೇರಿ ಮತ್ತು ಭವ್ಯ ಪಟಾಕಿ ಬಾಣಬಿರುಸುಗಳ (ಫೈರ್ವರ್ಕ್ಸ್) ಪ್ರದರ್ಶನ ಒಳಗೊಂಡಿರಲಿವೆ.

ಇವೆಲ್ಲವೂ ಒಟ್ಟಾಗಿ ನಾಗರಿಕರಿಗೆ ಕಲಿಕೆ, ಭಾಗವಹಿಸುವಿಕೆ ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆಯ ಮೂಲಕ ಸ್ವಾತಂತ್ರ್ಯದ ಸ್ಪೂರ್ತಿಯನ್ನು ಆಚರಿಸಲು ಒಂದು ಅಪರೂಪದ ಅವಕಾಶವನ್ನು ನೀಡುತ್ತವೆ. ಫ್ರೀಡಂ ಹಬ್ಬವು ಆ ಜೀವಂತ ವಾಸ್ತವತೆಯನ್ನು ಸಂಭ್ರಮಿಸುತ್ತದೆ. ಬೆಂಗಳೂರು ಕೇವಲ ಕರ್ನಾಟಕದ ರಾಜಧಾನಿಯಾಗಿ ಮಾತ್ರವಲ್ಲದೆ, ದಿನನಿತ್ಯ ವೈವಿಧ್ಯತೆಯನ್ನು ಅನುಭವಿಸುವ ಕಿರು ಭಾರತವಾಗಿ ಮೂಡಿಬಂದಿದೆ. “ನಮ್ಮ ಅನೇಕ ಸಂಸ್ಕೃತಿಗಳು, ಭಾಷೆಗಳು ಮತ್ತು ಸಂಪ್ರದಾಯಗಳು ಒಟ್ಟಾಗಿ ಬೆಂಗಳೂರಿನ ಗುರುತನ್ನು ಹೇಗೆ ರೂಪಿಸುತ್ತವೆ ಎಂಬುದರ ಸಂಭ್ರಮ ಇದಾಗಿದೆ. ಅದುವೇ ಭಾರತದ ಪರಿಕಲ್ಪನೆ ಮತ್ತು ಅದುವೇ ಬೆಂಗಳೂರಿನ ಸ್ಪೂರ್ತಿ” ಎಂದು ಸಚಿವರು ಹೇಳಿದರು.

ನಗರದ ಮಕ್ಕಳಿಗೆ ಬಾಗಿಲು ತೆರೆಯಲಿದೆ ವಿಧಾನಸೌಧ

ಮಕ್ಕಳು ಈ ಆಚರಣೆಯ ಕೇಂದ್ರಬಿಂದುವಾಗಿದ್ದಾರೆ. ಅನೇಕ ಮಕ್ಕಳಿಗೆ ಭವ್ಯವಾದ ವಿಧಾನಸೌಧದ ಒಳಗಡೆ ಹೆಜ್ಜೆ ಹಾಕುವ ಅಪರೂಪದ ಅವಕಾಶ ಸಿಗಲಿದೆ. ಬಹುತೇಕರಿಗೆ ಇದು ಮೊದಲ ಅನುಭವವಾಗಿದ್ದು, ಅವರನ್ನು ರಾಜ್ಯದ ಶ್ರೇಷ್ಠ ಸಂಸ್ಥೆಯೊಂದರ ಜೊತೆ ಮಾತ್ರವಲ್ಲದೆ, ಅದು ಪ್ರತಿನಿಧಿಸುವ ಪ್ರಜಾಪ್ರಭುತ್ವ ಮತ್ತು ಪೌರತ್ವದ ಮೌಲ್ಯಗಳೊಂದಿಗೂ ಜೋಡಿಸಲಿದೆ.

“ನಾವು ನಮ್ಮ ಮಕ್ಕಳಿಗೆ ವಿಧಾನಸೌಧದ ಬಾಗಿಲುಗಳನ್ನು ತೆರೆಯುತ್ತಿದ್ದೇವೆ. ಆಗಸ್ಟ್ 15 ರಂದು ಆ ಬಾಗಿಲುಗಳ ಮೂಲಕ ನಡೆದುಬರುವ ಪ್ರತಿಯೊಂದು ಮಗುವೂ ಜೀವಮಾನವಿಡೀ ನೆನಪಿನಲ್ಲಿ ಉಳಿಯುವ ನೆನಪಿನೊಂದಿಗೆ ಮನೆಗೆ ಹಿಂತಿರುಗಬೇಕೆಂಬುದು ನನ್ನ ಆಸೆ. ಪ್ರಜಾಪ್ರಭುತ್ವವು ಮಕ್ಕಳು ಪಠ್ಯಪುಸ್ತಕಗಳಲ್ಲಿ ಮಾತ್ರ ಓದುವ ವಿಷಯವಾಗಿ ಉಳಿಯಬಾರದು; ಅದು ಜೀವಂತವಾಗುವ ಸಂಸ್ಥೆಯಲ್ಲೇ ಅವರು ಅದನ್ನು ಅನುಭವಿಸಬೇಕು. ನಮ್ಮ ಮಕ್ಕಳು ಕೇವಲ ನಮ್ಮ ಸ್ವಾತಂತ್ರ್ಯವನ್ನು ಆಚರಿಸುವುದು ಮಾತ್ರವಲ್ಲದೆ, ನಮ್ಮ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವ ಮೌಲ್ಯಗಳು, ಸಂಸ್ಥೆಗಳು ಮತ್ತು ಹಂಚಿಕೆಯ ಪೌರತ್ವವನ್ನು ಅರ್ಥಮಾಡಿಕೊಳ್ಳಬೇಕೆಂದು ನಾವು ಬಯಸುತ್ತೇವೆ,” ಎಂದು ಸಚಿವರು ತಿಳಿಸಿದರು.

ಮಾರ್ಗದರ್ಶಿತ ಪ್ರವಾಸಗಳ ಜೊತೆಗೆ, ‘ಮಕ್ಕಳ ಮೇಳ’, ಕಲಾಕಾರರು ಸ್ವಾತಂತ್ರ್ಯ ಹೋರಾಟಗಾರರನ್ನು ಜೀವಂತಗೊಳಿಸುವ ‘ಮಕ್ಕಳ ಫ್ರೀಡಂ ವಿಲೇಜ್’, ಸಂವಾದಾತ್ಮಕ ಕಲಿಕೆಯ ಆಟಗಳು, ಕಥೆ ಹೇಳುವಿಕೆ ಮತ್ತು ಕರಕುಶಲ ಕಾರ್ಯಾಗಾರಗಳನ್ನು ಕಿರಿಯ ಮಕ್ಕಳಿಗೆ ವಿದ್ಯಾರ್ಥಿಗಳ ಪಾಲಿಗೆ ಈ ದಿನವನ್ನು ಶೈಕ್ಷಣಿಕ ಹಾಗೂ ಆನಂದದಾಯಕವಾಗಿಸಲು ವಿನ್ಯಾಸಗೊಳಿಸಲಾಗಿದೆ.

ಪ್ರತಿಯೊಬ್ಬ ಬೆಂಗಳೂರಿಗನೂ ಭಾಗವಹಿಸುವವನಾಗಬೇಕು

ಬ್ಯಾರಿಕೇಡ್ಗಳ ಹಿಂದೆ ನಿಂತು ಅಧಿಕೃತ ಸಮಾರಂಭಗಳನ್ನು ವೀಕ್ಷಿಸುವ ಬದಲಿಗೆ, ನಾಗರಿಕರು ಸ್ವತಃ ಕಲಾವಿದರಾಗಿ, ಸ್ವಯಂಸೇವಕರಾಗಿ, ಸಾಂಸ್ಕೃತಿಕ ರಾಯಭಾರಿಗಳಾಗಿ ಮತ್ತು ಭಾಗವಹಿಸುವವರಾಗಿ ಪ್ರಮುಖ ವೇದಿಕೆಯನ್ನು ಪಡೆದುಕೊಳ್ಳಲಿದ್ದಾರೆ. ಜಾನಪದ ಪ್ರದರ್ಶನಗಳು, ಸಾಂಪ್ರದಾಯಿಕ ಸಂಗೀತ, ಸಮುದಾಯದ ಮೆರವಣಿಗೆಗಳು ಮತ್ತು ಸಾಂಸ್ಕೃತಿಕ ಪ್ರಸ್ತುತಿಗಳು ವಿಧಾನಸೌಧದ ಸುತ್ತಮುತ್ತಲಿನ ರಸ್ತೆಗಳನ್ನು ವರ್ಣರಂಜಿತ ಸಾಂಸ್ಕೃತಿಕ ಕಾರಿಡಾರ್ ಆಗಿ ಪರಿವರ್ತಿಸುವುದರೊಂದಿಗೆ, ಫ್ರೀಡಂ ಹಬ್ಬವನ್ನು ಕೇವಲ ವೀಕ್ಷಿಸುವುದಕ್ಕಿಂತ ಹೆಚ್ಚಾಗಿ ಭಾಗವಹಿಸಲು ಆಹ್ವಾನಿಸುವಂತೆ ವಿನ್ಯಾಸಗೊಳಿಸಲಾಗಿದೆ. “ಪ್ರತಿಯೊಬ್ಬ ಬೆಂಗಳೂರಿಗನೂ ಕೇವಲ ವೀಕ್ಷಕನಾಗದೆ ಭಾಗವಹಿಸುವವನಾಗಬೇಕೆಂದು ನಾನು ವಿನಂತಿಸುತ್ತೇನೆ. ಆಚರಣೆಗಳನ್ನು ಕೇವಲ ವೀಕ್ಷಿಸಬೇಡಿ – ಅವುಗಳ ಭಾಗವಾಗಿ. ಇದು ನಿಮ್ಮ ಹಬ್ಬ. ಬನ್ನಿ, ನಮ್ಮೊಂದಿಗೆ ಇದನ್ನು ನಿರ್ಮಿಸಿ,” ಎಂದರು.

ವಿಶೇಷ ಫ್ರೀಡಂ ಹಬ್ಬದ ವೆಬ್ಸೈಟ್ ಮತ್ತು ಸಹಾಯವಾಣಿಯ ಮೂಲಕ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳಿಗೆ ನೋಂದಾಯಿಸಿಕೊಳ್ಳುವಂತೆ ಅವರು ನಾಗರಿಕರಿಗೆ ಮನವಿ ಮಾಡಿದರು. ಇದರ ವಿವರಗಳನ್ನು ಮುಂದಿನ 48 ಗಂಟೆಗಳಲ್ಲಿ ಹಾಗೂ ಸರ್ಕಾರದ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಪ್ರಕಟಿಸಲಾಗುವುದು. ಈ ದಿನವನ್ನು ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಒಗ್ಗಟ್ಟಿನ ಸಂಭ್ರಮವಾಗಿ ಯೋಜಿಸುವಂತೆ ಅವರು ಕುಟುಂಬಗಳಿಗೆ ಪ್ರೋತ್ಸಾಹಿಸಿದರು.

ನಮ್ಮೂರು, ನಿಮ್ಮೂರು, ನಮ್ಮೆಲ್ಲರ ಬೆಂಗಳೂರು

ಈ ಆಚರಣೆಗಳು “ನಮ್ಮೂರು. ನಿಮ್ಮೂರು. ನಮ್ಮೆಲ್ಲರ ಬೆಂಗಳೂರು” ಎಂಬ ಸಂದೇಶವನ್ನು ಹೊರಹಾಕಲಿವೆ. “ನಾವು ಕನ್ನಡ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದ್ದರೂ, ಬೆಂಗಳೂರನ್ನು ತಮ್ಮ ಮನೆಯಾಗಿಸಿಕೊಂಡಿರುವ ಪ್ರತಿಯೊಬ್ಬ ಭಾರತೀಯನಿಗೂ ನಮ್ಮ ಬಾಗಿಲು ಮತ್ತು ಹೃದಯಗಳನ್ನು ತೆರೆದು ಭಾರತವನ್ನು ‘ಬೆಂಗಳೂರು ಶೈಲಿ’ಯಲ್ಲಿ ಆಚರಿಸುತ್ತೇವೆ. ಫ್ರೀಡಂ ಹಬ್ಬವು ಆ ಉದಾರ ಮನೋಭಾವದ ಆಚರಣೆಯಾಗಿದೆ” ಎಂದು ಸಚಿವರು ತಿಳಿಸಿದರು.

ಫ್ರೀಡಂ ಹಬ್ಬದ ಮುಖ್ಯಾಂಶಗಳು

  • ಫ್ರೀಡಂ ಪೆರೇಡ್ (ಸ್ವಾತಂತ್ರ್ಯ ನಡಿಗೆ): ಭಾರತದ ವೈವಿಧ್ಯಮಯ ಸಂಸ್ಕೃತಿಗಳು, ಕರ್ನಾಟಕದ ಪ್ರದೇಶಗಳು ಮತ್ತು ವೃತ್ತಿಪರರನ್ನು ಪ್ರತಿನಿಧಿಸುವ ಸುಮಾರು 40 ತುಕಡಿಗಳು ಜಾನಪದ ಪ್ರದರ್ಶನಗಳು, ಸಂಗೀತ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನೊಳಗೊಂಡ ವರ್ಣರಂಜಿತ ಸ್ವಾತಂತ್ರ್ಯ ದಿನದ ಪೆರೇಡ್ನಲ್ಲಿ ಪಾಲ್ಗೊಳ್ಳಲಿವೆ.
  • ಮಕ್ಕಳ ಮೇಳ: ಸ್ವಾತಂತ್ರ್ಯದ ಬಗ್ಗೆ ಕಲಿಯುವುದನ್ನು ತೊಡಗಿಸಿಕೊಳ್ಳುವಂತೆ ಮತ್ತು ಆನಂದದಾಯಕವಾಗಿಸಲು ಸಂವಾದಾತ್ಮಕ ಆಟಗಳು, ಕಥೆ ಹೇಳುವಿಕೆ, ಕಲೆ, ಕರಕುಶಲ ವಸ್ತುಗಳು, ಸೃಜನಶೀಲ ಕಾರ್ಯಾಗಾರಗಳು ಮತ್ತು ಕುಟುಂಬ ಚಟುವಟಿಕೆಗಳನ್ನು ಹೊಂದಿರುವ ಮಕ್ಕಳಿಗಾಗಿಯೇ ಮೀಸಲಾದ ವಲಯ.
  • ಸೋಲ್ ಸಂತೆ ಹಬ್ಬ: 120 ಕ್ಕೂ ಹೆಚ್ಚು ಆಯ್ದ ಜೀವನಶೈಲಿ, ಕರಕುಶಲ ವಸ್ತುಗಳು, ಜೈವಿಕ ಉಡುಪುಗಳು, ಆಟಿಕೆಗಳು, ಜವಳಿ ಮತ್ತು ಆಹಾರ ಮಳಿಗೆಗಳು ದಿನವಿಡೀ ಉತ್ಸಾಹಭರಿತ ಹಬ್ಬದ ವಾತಾವರಣವನ್ನು ನಿರ್ಮಿಸಲಿವೆ.
  • ಲಿವಿಂಗ್ ಮ್ಯೂಸಿಯಂ – ಸ್ವಾತಂತ್ರ್ಯದ ಪಯಣ: ಕಲಾಕೃತಿಗಳು, ಪ್ರದರ್ಶನಗಳು, ಜೀವಂತ ಅಭಿನಯಗಳು ಮತ್ತು ಸ್ಮರಣಾರ್ಥ ಅಂಚೆಕಾರ್ಡ್ಗಳ ಮೂಲಕ ಭಾರತದ ಸ್ವಾತಂತ್ರ್ಯ ಚಳವಳಿಯ ಪ್ರಮುಖ ಮೈಲಿಗಲ್ಲುಗಳನ್ನು ಮರುಸೃಷ್ಟಿಸುವ ವಾಕ್-ಥ್ರೂ ಮ್ಯೂಸಿಯಂ.
  • ಕರ್ನಾಟಕ ಫ್ರೀಡಂ ಪಾಥ್ (ಸ್ವಾತಂತ್ರ್ಯ ಪಥ): ನಾಟಕ, ಸಾಂಸ್ಕೃತಿಕ ಪ್ರದರ್ಶನಗಳು, ಸ್ಥಳೀಯ ಸಂಪ್ರದಾಯಗಳು ಮತ್ತು ಬೆಂಗಳೂರಿನ ಜಿಲ್ಲಾ ಸಮುದಾಯಗಳ ಭಾಗವಹಿಸುವಿಕೆಯ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಕರ್ನಾಟಕದ ಕೊಡುಗೆಯನ್ನು ಆಚರಿಸುವ ಜಿಲ್ಲಾ ಆಧಾರಿತ ಪೆವಿಲಿಯನ್ಗಳು.
  • ಸಂವಿಧಾನ ಚೌಕ: ಸಾರ್ವಜನಿಕರು ಸಂವಿಧಾನ ರಚನಾ ಸಭೆಯ ಗ್ಯಾಲರಿಗಳನ್ನು ವೀಕ್ಷಿಸಬಹುದು, ಅಪರೂಪದ ಸಂವಿಧಾನಾತ್ಮಕ ದಾಖಲೆಗಳನ್ನು ನೋಡಬಹುದು ಮತ್ತು ದಿನವಿಡೀ ಪ್ರಸ್ತಾವನೆಯ ಸಮೂಹ ವಾಚನದಲ್ಲಿ ಪಾಲ್ಗೊಳ್ಳಬಹುದು.
  • ಚಿಲ್ಡ್ರನ್ಸ್ ಫ್ರೀಡಂ ವಿಲೇಜ್ (ಮಕ್ಕಳ ಸ್ವಾತಂತ್ರ್ಯ ಗ್ರಾಮ): ಭಾರತದ ಸ್ವಾತಂತ್ರ್ಯ ಚಳವಳಿಯ ಅರಿವನ್ನು ಮೂಡಿಸುವ ಮೂಲಕ ಮಕ್ಕಳ ಎದುರು ಸ್ವಾತಂತ್ರ್ಯ ಹೋರಾಟಗಾರರನ್ನು ಜೀವಂತಗೊಳಿಸುವುದು, ರಸಪ್ರಶ್ನೆಗಳು, ಸಂವಾದಾತ್ಮಕ ಕಲಿಕೆ ಮತ್ತು ತಕ್ಷಣದ ಬಹುಮಾನಗಳ ಮೂಲಕ ಮಕ್ಕಳನ್ನು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವುದು.
  • ವಿಧಾನಸೌಧದ ಮಕ್ಕಳ ಮಾರ್ಗದರ್ಶಿತ ಪ್ರವಾಸ: ಕಿರಿಯ ವೀಕ್ಷಕರು ಮತ್ತು ಅವರ ಕುಟುಂಬದವರು ತರಬೇತಿ ಪಡೆದ ಸ್ವಯಂಸೇವಕರ ನೇತೃತ್ವದಲ್ಲಿ ವಿಶೇಷವಾಗಿ ಆಯೋಜಿಸಲಾದ ಮಾರ್ಗದರ್ಶಿತ ಪ್ರವಾಸಗಳ ಮೂಲಕ ಶಾಸನಸಭೆಯನ್ನು ವೀಕ್ಷಿಸುವ ಅಪರೂಪದ ಅವಕಾಶವನ್ನು ಪಡೆಯಲಿದ್ದಾರೆ.
  • ಫ್ರೀಡಂ ವಾಲ್ (ಸ್ವಾತಂತ್ರ್ಯ ಗೋಡೆ): 200 ಅಡಿಗಳ ಸಾರ್ವಜನಿಕ ಕಲಾ ಗೋಡೆಯು ನಾಗರಿಕರಿಗೆ ಬರವಣಿಗೆ, ವರ್ಣಚಿತ್ರ ಮತ್ತು ಜಂಟಿ ಕಲಾಕೃತಿಗಳ ಮೂಲಕ ಸ್ವಾತಂತ್ರ್ಯದ ಅರ್ಥವನ್ನು ವ್ಯಕ್ತಪಡಿಸಲು ಆಹ್ವಾನಿಸುತ್ತದೆ.
  • ಫ್ರೀಡಂ ಕಲೆಕ್ಟಿವ್ ಸಂಗೀತ ಹಬ್ಬ: ಪ್ರಮುಖ ಸಂಗೀತಗಾರರು ಮತ್ತು ಕಲಾವಿದರು ಪ್ರದರ್ಶನ ನೀಡಲಿದ್ದು, ಕನ್ನಡ ಹಾಗೂ ಇತರ ಭಾರತೀಯ ಭಾಷೆಗಳಲ್ಲಿ ಪ್ರದರ್ಶನ ನೀಡಿ ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಆಚರಿಸುವ ಬೃಹತ್ ಸಂಜೆ ಸಂಗೀತ ಕಛೇರಿಯ ನೇತೃತ್ವ ವಹಿಸಲಿದ್ದು, ಸಾರ್ವಜನಿಕರ ಸಾಮೂಹಿಕ ಗಾಯನದೊಂದಿಗೆ ಮುಕ್ತಾಯಗೊಳ್ಳಲಿದೆ.

ಬೃಹತ್ ಬಾಣಬಿರುಸು (ಫೈರ್ವರ್ಕ್ಸ್) ಪ್ರದರ್ಶನ: ಫ್ರೀಡಂ ಹಬ್ಬವು ವಿಧಾನಸೌಧದ ಮೇಲೆ ನಡೆಯುವ ಅದ್ಭುತ ಪಟಾಕಿ ಪ್ರದರ್ಶನದೊಂದಿಗೆ ಮುಕ್ತಾಯಗೊಳ್ಳಲಿದ್ದು, ಬೆಂಗಳೂರಿಗೆ ಈ ವರ್ಷದ ಸ್ವಾತಂತ್ರ್ಯ ದಿನವು ಸ್ಮರಣೀಯವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಮುಖಕ್ಕೆ ಫೇಸ್ ಪ್ಯಾಕ್‌ ಹಚ್ಚಿಕೊಂಡೇ ಆನ್ಲೈನ್ ಮೀಟಿಂಗ್‌ ಹಾಜರಾದ ಜೆನ್ ಝೆಡ್ ಉದ್ಯೋಗಿ – Kannada News | Young woman attends online meeting wearing a face pack; gives a sharp reply when the manager questions her.

ವರ್ಕ್ ಫ್ರಮ್ ಹೋಮ್ ಮಾಡುವವರು ಮನೆ ಹಾಗೂ ಉದ್ಯೋಗ ಎರಡನ್ನು ನಿಭಾಯಿಸಿಕೊಂಡು ಹೋಗುತ್ತಾರೆ. ಆದರೆ ಇಲ್ಲೊಬ್ಬ ಜೆನ್ ಝೆಡ್ ಉದ್ಯೋಗಿಯದ್ದು ಅದೇ ಕಥೆ. ತನ್ನ ಲಂಚ್ ಬ್ರೇಕನ್ನು ವೈಯುಕ್ತಿಕ ಬೆಳೆವಣಿಗೆಗಾಗಿ ಬಳಸಿಕೊಂಡಿದ್ದಾಳೆ. ಯುವತಿಯೊಬ್ಬಳು  ಮುಖಕ್ಕೆ ಫೇಸ್ ಪ್ಯಾಕ್ ಹಚ್ಚಿಕೊಂಡು, ಆನ್ಲೈನ್ ಮೀಟಿಂಗ್‌ನಲ್ಲಿ ಪಾಲ್ಗೊಂಡಿದ್ದಾಳೆ. ಇದನ್ನು ನೋಡಿದ ಮ್ಯಾನೇಜರ್ ತಾಳ್ಮೆ ಕಳೆದುಕೊಂಡು ಪ್ರಶ್ನೆ ಮಾಡಿದ್ದಾರೆ. ಆದರೆ ಈ ಜೆನ್ ಝೆಡ್ ಉದ್ಯೋಗಿ (Gen Z employee) ಮಾತ್ರ ಮ್ಯಾನೇಜರ್‌ಗೆ ನಾಟುವಂತೆ ಉತ್ತರ ನೀಡಿ ಬಾಯಿ ಮುಚ್ಚಿಸಿದ್ದಾಳೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದಂತೆ ಈ ಯುವತಿ ಹಾಸ್ಯಮಯ ಪ್ರತಿಕ್ರಿಯೆಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಟೀಮ್ ಬ್ರಿಡ್ಜ್ರಸ್ (team bridgers) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಮ್ಯಾನೇಜರ್ ಆನ್‌ಲೈನ್ ಮಿಟೀಂಗ್‌ ಆಯೋಜಿಸಿದ್ದಾರೆ. ಇದೇ ವೇಳೆ ಉದ್ಯೋಗಿಗಳು ಕ್ಯಾಮೆರಾ ಆನ್ ಮಾಡಿದ್ದಾರೆ. ಹೀಗಿರುವಾಗ ಮ್ಯಾನೇಜರ್, ದಯವಿಟ್ಟು ನಿಮ್ಮ ಕ್ಯಾಮೆರಾವನ್ನು ಆನ್ ಮಾಡಬಹುದೇ? ನಾನು ನಿಮ್ಮೊಂದಿಗೆ ಕೆಲಸದ ಒಂದಷ್ಟು ಯೋಜನೆಗಳ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಮ್ಯಾನೇಜರ್ ಹೀಗೆನ್ನುತ್ತಿದ್ದಂತೆ ಉದ್ಯೋಗಿ ತನ್ನ ಕ್ಯಾಮೆರಾವನ್ನು ಆನ್ ಮಾಡಿದ್ದು, ಈ ಯುವತಿ ಮುಖದ ಮೇಲೆ ಫೇಸ್‌ ಪ್ಯಾಕ್ ಮುಖಕ್ಕೆ ಹಚ್ಚಿಕೊಂಡು ಮೀಟಿಂಗ್ ಹಾಜರಾಗಿರುವುದನ್ನು ಕಾಣಬಹುದು. ಯುವತಿಯ ಮುಖ ನೋಡಿದ ಮ್ಯಾನೇಜರ್ ಕೆಲಸದ ಸಮಯದಲ್ಲಿ ಈ ರೀತಿ ಮಾಡುವುದು ಸರಿಯೇ, ಈ ಕೆಲಸವನ್ನು ನಿಮ್ಮ ಲಂಚ್‌ ಬ್ರೇಕ್‌ ವೇಳೆ ಮಾಡಿಕೊಳ್ಳಿ ಎಂದು ಸಮಾಧಾನದಿಂದಲೇ ಉತ್ತರಿಸಿದ್ದಾರೆ.

ಆದರೆ ಈ ಯುವತಿ ಮ್ಯಾನೇಜರ್‌ಗೆ ನಾಟುವಂತೆ ಉತ್ತರ ನೀಡಿದ್ದು, ನೀವು ಕೊಡುವುದೇ ಹದಿನೈದು ನಿಮಿಷ ಬ್ರೇಕ್. ಆದರೆ ಈ ಫೇಸ್ ಪ್ಯಾಕ್ ಒಣಗಲು 20 ನಿಮಿಷವಾದ್ರೂ ಬೇಕು. ನಾನು ಈಗ ಕ್ಯಾಮೆರಾ ಆಫ್ ಮಾಡಬಹುದೇ? ಎಂದು ಕೇಳಿರುವುದನ್ನು ಕಾಣಬಹುದು.

ಇದನ್ನೂ ಓದಿ: ಇಂದು ಅವರಿಬ್ಬರ ಸರದಿ, ಮುಂದೆ ನನ್ನದು; ಕಾರ್ಪೊರೇಟ್ ಜಗತ್ತಿನ ಉದ್ಯೋಗ ಅಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಉದ್ಯೋಗಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ವೃತ್ತಿ ಜತೆಗೆ ವೈಯುಕ್ತಿಕವಾಗಿ ಸಮಯ ಕೊಡುವುದು ಮುಖ್ಯ ಎಂದಿದ್ದಾರೆ. ಇನ್ನೊಬ್ಬರು, ಈ ಮ್ಯಾನೇಜರ್ ಗೆ ಇದೆಲ್ಲಾ ಹೊಸದು ಎಂದು ಕಾಣಿಸುತ್ತದೆ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, ಈ ಯುವತಿಯ ಧೈರ್ಯಕ್ಕೆ ನನ್ನದೊಂದು ಸಲಾಂ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:25 pm, Wed, 5 August 26

Source link

ಫೇಸ್​​ಬುಕ್​ನಿಂದ ಪ್ರಧಾನಿ ಮೋದಿ ವಿಡಿಯೋ ಡಿಲೀಟ್ ವಿವಾದ; ಕೊನೆಗೂ ಮೆಟಾ ಮುಖ್ಯಸ್ಥ ಮಾರ್ಕ್ ಝುಕರ್​ಬರ್ಗ್ ಕ್ಷಮೆಯಾಚನೆ – Kannada News | Meta CEO Mark Zuckerberg apologises for Child Abuse content and operational errors amid PM Modi video row

ನವದೆಹಲಿ, ಆಗಸ್ಟ್ 5: ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯ ಕುರಿತು ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿ ಪ್ರಧಾನಿ ನರೇಂದ್ರ ಮೋದಿ (PM Narendra Modi Video Delete) ಸೆಲ್ಫಿ ವಿಡಿಯೋ ರಿಲೀಸ್ ಮಾಡಿದ್ದರು. ಆ ವಿಡಿಯೋವನ್ನು ಫೇಸ್​​ಬುಕ್​ನಿಂದ ಕೆಲಕಾಲ ಡಿಲೀಟ್ ಮಾಡಲಾಗಿತ್ತು. ಈ ಘಟನೆ ದೇಶಾದ್ಯಂತ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಈ ವಿವಾದಕ್ಕೆ ಸಂಬಂಧಿಸಿದಂತೆ ಮೆಟಾ (Meta) ಸಂಸ್ಥೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಕೇಂದ್ರ ಸರ್ಕಾರ ಕ್ಷಮೆಯಾಚನೆಗೆ ಪಟ್ಟುಹಿಡಿದಿತ್ತು. ಇದೀಗ ಕೊನೆಗೂ ಮೆಟಾ ಮುಖ್ಯಸ್ಥ ಮಾರ್ಕ್ ಝುಕರ್​ಬರ್ಗ್ ಈ ಕುರಿತು ಕ್ಷಮೆಯಾಚಿಸಿದ್ದಾರೆ.

ಮೆಟಾ ಪ್ಲಾಟ್‌ಫಾರ್ಮ್‌ಗಳಲ್ಲಿ ಬಾಲ ಲೈಂಗಿಕ ಶೋಷಣೆ ವಿಷಯ, ಡೀಪ್‌ಫೇಕ್ ವಿಷಯಗಳು ಮತ್ತು ಪ್ಲಾಟ್‌ಫಾರ್ಮ್ ಕಾರ್ಯಾಚರಣೆಯಲ್ಲಾದ ದೋಷಗಳ ಕುರಿತು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಕಠಿಣ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮೆಟಾ ಸಿಇಒ ಮಾರ್ಕ್ ಝುಕರ್‌ಬರ್ಗ್ ಕ್ಷಮೆಯಾಚಿಸಿದ್ದಾರೆ. ತಮ್ಮ ತಪ್ಪಿಗೆ ಕ್ಷಮೆ ಕೋರಿದ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರದಿಂದ ಮೆಟಾ ಅಧಿಕಾರಿಗಳನ್ನು ಮತ್ತೊಮ್ಮೆ ವಿಚಾರಣೆಗೆ ಕರೆಯಲಾಗುವುದು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಪ್ರಧಾನಿ ಮೋದಿ ವಿಡಿಯೋ ತೆಗೆದುಹಾಕಿದ ವಿವಾದ: ಕೇಂದ್ರಕ್ಕೆ ಕ್ಷಮೆಯಾಚಿಸಿ ಸುರಕ್ಷತಾ ಕ್ರಮಗಳ ವಿವರಣೆ ಕೊಟ್ಟ ಮೆಟಾ

ಸಾಮಾಜಿಕ ಜಾಲತಾಣವು ನಿರ್ದಿಷ್ಟ ಬಳಕೆದಾರರಿಗೆ ಯಾವ ವಿಷಯ ತಲುಪಬೇಕು ಎಂಬುದನ್ನು ತಾನೇ ಆಯ್ಕೆ ಮಾಡುತ್ತಿದ್ದರೆ, ಅದು ಭಾರತದ ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯಡಿ ಮಧ್ಯವರ್ತಿ (Intermediary) ವ್ಯಾಖ್ಯಾನದ ಅಡಿಯಲ್ಲಿ ಬರುವುದಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ವಿಷಯ ಪ್ರಸಾರವನ್ನು ನಿಯಂತ್ರಿಸುವ ಪ್ಲಾಟ್‌ಫಾರ್ಮ್‌ಗಳು ‘ಸೇಫ್ ಹಾರ್ಬರ್’ (ಸುರಕ್ಷಿತ ರಕ್ಷಣೆ) ಪಡೆಯಲು ಸಾಧ್ಯವಿಲ್ಲ ಎಂದು ಸರ್ಕಾರ ಪ್ರತಿಪಾದಿಸಿದೆ.

ಮೆಟಾಗೆ ಸಚಿವ ಅಶ್ವಿನಿ ವೈಷ್ಣವ್ ಎಚ್ಚರಿಕೆ:

ಮೆಟಾದ ಜಾಗತಿಕ ವ್ಯವಹಾರಗಳ ಅಧಿಕಾರಿ ಜೋಯಲ್ ಕಾಪ್ಲನ್ ನೇತೃತ್ವದ ನಿಯೋಗದೊಂದಿಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಇಂತಹ ಘಟನೆಗಳನ್ನು ಭಾರತದಲ್ಲಿ ಸಹಿಸುವುದಿಲ್ಲ ಎಂದು ಗಂಭೀರ ಎಚ್ಚರಿಕೆ ನೀಡಿದರು. “ಭಾರತ ಸರ್ಕಾರವು ತನ್ನ ದೇಶದ ಜನರನ್ನು ರಕ್ಷಿಸಲು ಬದ್ಧವಾಗಿದೆ. ಆ ಹಾದಿಯಲ್ಲಿ ಯಾವುದೂ ಅಡ್ಡ ಬರಲು ಸಾಧ್ಯವಿಲ್ಲ” ಎಂದು ಸಚಿವರು ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಭಾರತೀಯ ಕಾನೂನುಗಳ ಉಲ್ಲಂಘನೆ ಮತ್ತು ಹಾನಿಕಾರಕ ವಿಷಯಗಳ ವಿರುದ್ಧ ಕ್ರಮ ಕೈಗೊಳ್ಳದಿರುವ ಬಗ್ಗೆಯೂ ಅವರು ಮೆಟಾ ತಂಡವನ್ನು ಪ್ರಶ್ನಿಸಿದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿ ಪೋಸ್ಟ್​ಗೆ ನಿರ್ಬಂಧ; ಅಲ್ಗಾರಿದಮ್‌ ತಾರತಮ್ಯದ ಬಗ್ಗೆ ಮೆಟಾ ತಂಡಕ್ಕೆ ಸರ್ಕಾರದಿಂದ ಸಮನ್ಸ್

“ನೀವು ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಅಕ್ರಮ ವಿಷಯಗಳಿಂದ ಹಣ ಗಳಿಸುತ್ತಿದ್ದೀರಿ. ಹೀಗಿರುವಾಗ ನೀವು ಭಾರತದ ಕಾನೂನು ರಕ್ಷಣೆ ಪಡೆಯಲು ಹೇಗೆ ಸಾಧ್ಯ? ಇಂತಹ ವಿಷಯಗಳನ್ನು ನಿಮ್ಮ ಜೇಬು ತುಂಬಿಸಿಕೊಳ್ಳಲು ಬಳಸಿಕೊಳ್ಳುತ್ತಿರುವುದಕ್ಕೆ ನಿಮ್ಮಂತಹ ಪ್ಲಾಟ್‌ಫಾರ್ಮ್‌ಗಳು ನಾಚಿಕೆಪಡಬೇಕು” ಎಂದು ಸಚಿವ ಅಶ್ವಿನಿ ವೈಷ್ಣವ್ ಮೆಟಾ ಅಧಿಕಾರಿಗಳನ್ನು ಟೀಕಿಸಿದ್ದರು ಎನ್ನಲಾಗಿದೆ.

ಮೂರು ದಿನಗಳಲ್ಲಿ ಮೂರು ಸಭೆಗಳು:

ಕಳೆದ ಮೂರು ದಿನಗಳಲ್ಲಿ ಮೆಟಾ ಜೊತೆಗಿನ ಸರ್ಕಾರದ ಮಾತುಕತೆ ತೀವ್ರಗೊಂಡಿದೆ. ಆಗಸ್ಟ್ 3ರಂದು ಐಟಿ ತಂಡದೊಂದಿಗೆ, ಆಗಸ್ಟ್ 5ರಂದು ಐಟಿ ಕಾರ್ಯದರ್ಶಿ ಎಸ್. ಕೃಷ್ಣನ್ ಅವರೊಂದಿಗೆ 45 ನಿಮಿಷಗಳ ಚರ್ಚೆ ನಡೆಸಿದ ನಂತರ, ಮೆಟಾ ಪ್ರತಿನಿಧಿಗಳು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾದರು.

ಹಾಗೇ, ಪ್ರಧಾನಿ ನರೇಂದ್ರ ಮೋದಿ ಅವರ ಜುಲೈ 23ರ ವೀಡಿಯೊವನ್ನು ಫೇಸ್‌ಬುಕ್‌ನಿಂದ ತಾತ್ಕಾಲಿಕವಾಗಿ ತೆಗೆದುಹಾಕಿದ್ದಕ್ಕೆ ಮೆಟಾ ಸಿಇಒ 3 ದಿನಗಳಲ್ಲಿ ಕ್ಷಮೆಯಾಚಿಸಬೇಕು ಮತ್ತು ಜವಾಬ್ದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ‘ಸೇಫ್ ಹಾರ್ಬರ್’ ರಕ್ಷಣೆಯನ್ನು ಹಿಂಪಡೆಯಲಾಗುವುದು ಎಂದು ಸಂಸದೀಯ ಸಮಿತಿಯು ಗಡುವು ನೀಡಿತ್ತು. ಈ ಹಿನ್ನೆಲೆಯಲ್ಲಿ ಮಾರ್ಕ್ ಝುಕರ್​​ಬರ್ಗ್ ಕ್ಷಮೆ ಕೋರಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:55 pm, Wed, 5 August 26

Source link

Exit mobile version