ಕಲಬುರಗಿಯಲ್ಲಿ ನಕಲಿ ಡಿಎಪಿ ರಸಗೊಬ್ಬರ ಮಾರಾಟ: ರೈತರ ತೀವ್ರ ಆಕ್ರೋಶ

ಕಲಬುರಗಿ, ಜೂನ್ 13: ರಾಜ್ಯಾದ್ಯಂತ ರಸಗೊಬ್ಬರ ಕೊರತೆ ಎದುರಾಗಿರುವಾಗಲೇ, ಕಲಬುರಗಿಯಲ್ಲಿ ನಕಲಿ ಡಿಎಪಿ ರಸಗೊಬ್ಬರ ಮಾರಾಟವಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ಡಿಎಪಿ ಹೆಸರಿನಲ್ಲಿ ಮರಳು ಮತ್ತು ಮಣ್ಣು ಮಿಶ್ರಿತ ಕಳಪೆ ಗೊಬ್ಬರವನ್ನು ದುಪ್ಪಟ್ಟು ಬೆಲೆಗೆ ವಿತರಿಸಲಾಗುತ್ತಿದೆ ಎಂದು ರೈತರು ಟಿವಿ9ಗೆ ತಿಳಿಸಿದ್ದಾರೆ.

ರೈತರು ತಂದಿದ್ದ ಗೊಬ್ಬರದ ಮೂಟೆಗಳನ್ನು ಪರಿಶೀಲಿಸಿದಾಗ, ಕೆಲವಲ್ಲಿ ಕೇವಲ ಶೇ 20ರಷ್ಟು ಮಾತ್ರ ಗೊಬ್ಬರವಿತ್ತು ಎಂದು ತಿಳಿದುಬಂದಿದೆ. ಉಳಿದ ಶೇ 80ರಷ್ಟು ಮರಳು ಮತ್ತು ಮಣ್ಣು ಮಿಶ್ರಣವಾಗಿತ್ತು. ಇಂತಹ ಕಳಪೆ ಗೊಬ್ಬರವನ್ನು ಖರೀದಿಸಿ, ಮಣ್ಣಿಗೆ ಸುರಿಯುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಕೃಷಿ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ತನಿಖೆ ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದು ರೈತರು ದೂರಿದ್ದಾರೆ. ಜೆವರ್ಗಿ ಮತ್ತು ಚಂದ್ರಿಕಾ ಆಗ್ರೋ ಸಿಂಡಿಕೇಟ್‌ನಂತಹ ಅಂಗಡಿಗಳಿಂದ ಕಳಪೆ ಗೊಬ್ಬರ ಬಂದಿರುವುದು ಕಂಡುಬಂದಿದೆ. ರೈತರು ತಾವು ಖರೀದಿಸಿದ ಗೊಬ್ಬರವನ್ನು ಪ್ರಯೋಗಾಲಯಕ್ಕೆ ಕಳುಹಿಸಿ, ತಪ್ಪಿತಸ್ಥ ಅಂಗಡಿಗಳ ವಿರುದ್ಧ ಕೃಷಿ ಕಾಯಿದೆ 1985ರ ಅಡಿ ಕ್ರಮ ಜರುಗಿಸಿ, ಅಂಗಡಿಗಳನ್ನು ಸೀಜ್ ಮಾಡುವಂತೆ ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AFG: 25 ಓವರ್‌ಗಳ ಪಂದ್ಯ; ಟಾಸ್ ಗೆದ್ದ ಗಿಲ್, ಟೀಂ ಇಂಡಿಯಾ ಪರ ಇಬ್ಬರ ಪಾದಾರ್ಪಣೆ – Kannada News | India vs Afghanistan ODI: Rain Delays, Gill Wins Toss, 25 Over Thriller and Debut

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಏಕದಿನ ಸರಣಿ ಜೂನ್ 13 ರಿಂದ ಆರಂಭವಾಗಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮಳೆಯಿಂದಾಗಿ ಈ ಪಂದ್ಯದ ಟಾಸ್ ವಿಳಂಬವಾಯಿತು. ಅದೃಷ್ಟವಶಾತ್ ಮಳೆ ನಿಂತಿದ್ದು, ಪಂದ್ಯ ಆರಂಭವಾಗಿದೆ. ತಲಾ 25 ಓವರ್​ಗಳ ಪಂದ್ಯವನ್ನು ನಡೆಸಲು ತೀರ್ಮಾನಿಸಲಾಗಿದೆ. ಅಂದರೆ ಉಭಯ ತಂಡಗಳು ತಲಾ 25 ಓವರ್​ಗಳ ಇನ್ನಿಂಗ್ಸ್ ಆಡಲಿವೆ. ಇನ್ನು ಈ ಪಂದ್ಯದ ಟಾಸ್ ಕೂಡ ನಡೆದಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ (Shubman Gill) ಬೌಲಿಂಗ್ ಆಯ್ದುಕೊಂಡಿದ್ದಾರೆ.

ಟಾಸ್ ಗೆದ್ದ ಟೀಂ ಇಂಡಿಯಾ

ವಾಸ್ತವವಾಗಿ ಈ ಮೊದಲೇ ನಿಗದಿಪಡಿಸಿದಂತೆ ಪಂದ್ಯದ ಟಾಸ್ ಮಧ್ಯಾಹ್ನ 1ಗಂಟೆಗೆ ನಡೆಯಬೇಕಿತ್ತು. ನಂತರ ಪಂದ್ಯ 1:30ಕ್ಕೆ ಆರಂಭವಾಗಬೇಕಿತ್ತು. ಆದರೆ ಮಳೆಯಿಂದಾಗಿ ಪಂದ್ಯದ ಟಾಸ್ ಸರಿಯಾದ ಸಮಯಕ್ಕೆ ನಡೆಯಲಿಲ್ಲ. ಅಂತಿಮವಾಗಿ ನಿಂತ ಕಾರಣ ಸಂಜೆ 5:15 ಕ್ಕೆ ಪಂದ್ಯದ ಟಾಸ್ ನಡೆಸಲಾಯಿತು. ಟಾಸ್ ಗೆದ್ದ ಶುಭ್​ಮನ್ ಗಿಲ್ ಬೌಲಿಂಗ್‌ ಆಯ್ದುಕೊಂಡರು. ಇದರ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದ್ದು, ಟೀಂ ಇಂಡಿಯಾ ಪರ ಇಬ್ಬರು ಆಟಗಾರರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅದರಂತೆ ಹರ್ಷ್ ದುಬೆ ಹಾಗೂ ಗುರ್ನೂರ್ ಬ್ರಾರ್​ಗೆ ಚೊಚ್ಚಲ ಪಂದ್ಯವನ್ನಾಡುವ ಅವಕಾಶ ಸಿಕ್ಕಿದೆ.

ಉಭಯ ತಂಡಗಳ ಪ್ಲೇಯಿಂಗ್ 11

ಟೀಂ ಇಂಡಿಯಾ: ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಹರ್ಷ್ ದುಬೆ, ಗುರ್ನೂರ್ ಬ್ರಾರ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ.

ಅಫ್ಘಾನಿಸ್ತಾನ ತಂಡ: ಇಬ್ರಾಹಿಂ ಜದ್ರಾನ್, ರಹಮಾನುಲ್ಲಾ ಗುರ್ಬಾಜ್, ಸೇದಿಕುಲ್ಲಾ ಅಟಲ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಜ್ಮತುಲ್ಲಾ ಒಮರ್ಜಾಯ್, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ರಶೀದ್ ಖಾನ್, ಮೊಹಮ್ಮದ್ ಸಲೀಮ್, ಎಎಮ್ ಗಜನ್ಫರ್ ಮತ್ತು ಜಿಯಾವುರ್ ರೆಹಮಾನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:29 pm, Sat, 13 June 26

Source link

Karnataka Weather Forecast: ನಾಳೆಯಿಂದ ರಾಜ್ಯದಲ್ಲಿ ಮುಂದಿನ ಮೂರು ದಿನ ವರುಣದ್ದೇ ಹಾವಳಿ! – Kannada News | Karnataka Weather Forecast: Heavy Rain Alert Across Coastal and Interior Districts for Next 3 Days

ಮುಂದಿನ ಮೂರು ದಿನಗಳ ಕಾಲ ರಾಜ್ಯಾದ್ಯಂತ ಭಾರಿ ಮಳೆಯಾಗುವ ಮುನ್ನೆಚ್ಚರಿಕೆ Image Credit source: Getty Images

ಬೆಂಗಳೂರು, ಜೂನ್ 13: ನಗರದಲ್ಲಿ ಇಂದು ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಮಧ್ಯಾಹ್ನದ ಬಳಿಕ ಹಲವೆಡೆ ಗುಡುಗು-ಮಿಂಚು ಸಹಿತ ಮಳೆಯಾಗಿದೆ. ಅಂತೆಯೇ ಮುಂದಿನ 3 ದಿನಗಳ ಕಾಲ ರಾಜ್ಯದ ಹಲವೆಡೆ ಮಳೆಯ (Weather) ಅಬ್ಬರ ಜೋರಾಗಿರಲಿದ್ದು, ಭಾರಿ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ. ಕರಾವಳಿ ಮತ್ತು ಮಲೆನಾಡಿನ ಬಹುತೇಕ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಲವಾದ ಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಖ್ಯಾಂಶಗಳು

  • ಮುಂದಿನ ಮೂರು ದಿನಗಳ ಕಾಲ ರಾಜ್ಯಾದ್ಯಂತ ಭಾರಿ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ.
  • ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
  • ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು ಮಧ್ಯಾಹ್ನದ ಬಳಿಕ ಮಳೆಯಾಗುವ ಮುನ್ಸೂಚನೆ ಇದೆ.

ಕರಾವಳಿಯಲ್ಲಿ ಮಳೆಯ ಮುನ್ಸೂಚನೆ

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಭಾನುವಾರ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬೀದರ್, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಕೆಲವು ಕಡೆಗಳಲ್ಲಿ ಗುಡುಗು ಮತ್ತು ಗಾಳಿ (ಗಂಟೆಗೆ 30-40 ಕಿ.ಮೀ ವೇಗ) ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇನ್ನುಳಿದಂತೆ ಬಾಗಲಕೋಟೆ, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಹಗುರ ಮಳೆಯಾಗಬಹುದು.

ಮಲೆನಾಡಿನಲ್ಲೂ ಭಾರೀ ಮಳೆ

ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬೀಸುವ ಬಲವಾದ ಗಾಳಿಯೊಂದಿಗೆ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸಾರ್ವಜನಿಕರು ಮತ್ತು ರೈತರು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:31 pm, Sat, 13 June 26

Source link

ಎಲ್ಲಾ ನಾವಿಕರು ಸೇಫ್; ಒಮಾನ್ ಬಳಿ ಮತ್ತೊಂದು ಭಾರತೀಯ ಹಡಗಿನ ಮೇಲೆ ದಾಳಿ ಸುಳ್ಳೆಂದ ಭಾರತ – Kannada News | All crew members safe India Denies attack on another Indian crewed vessel targeted near Oman

ನವದೆಹಲಿ, ಜೂನ್ 13: ಒಮಾನ್ ಕರಾವಳಿಯ ಬಳಿ ಭಾರತೀಯ ನಾವಿಕರಿದ್ದ ಮತ್ತೊಂದು ವಾಣಿಜ್ಯ ಹಡಗಿನ ಮೇಲೆ ದಾಳಿಯಾಗಿದೆ ಎಂಬ ವರದಿಗಳನ್ನು ಭಾರತ ಸರ್ಕಾರ ತಳ್ಳಿಹಾಕಿದ್ದು, ಇವೆಲ್ಲವೂ ಸುಳ್ಳು ಸುದ್ದಿಗಳು ಎಂದು ಸ್ಪಷ್ಟಪಡಿಸಿದೆ. ಇತ್ತೀಚೆಗೆ ಒಮಾನ್ (Oman) ಸಮುದ್ರ ವಲಯದಲ್ಲಿ ಭಾರತೀಯ ಸಿಬ್ಬಂದಿಯಿದ್ದ ಹಡಗುಗಳ ಮೇಲೆ ಸರಣಿ ದಾಳಿಗಳು ನಡೆದ ಬೆನ್ನಲ್ಲೇ, ಮತ್ತೊಂದು ಹಡಗು ಅಪಾಯಕ್ಕೆ ಸಿಲುಕಿದೆ ಎಂಬ ವದಂತಿಗಳು ಹರಡಿದ್ದವು. ಆದರೆ ವಿದೇಶಾಂಗ ಸಚಿವಾಲಯವು ಆ ಹಡಗಿನ ಕ್ಯಾಪ್ಟನ್ ಜೊತೆ ನೇರ ಸಂಪರ್ಕ ಸಾಧಿಸಿ, ನಾವಿಕರೆಲ್ಲರೂ ಕ್ಷೇಮವಾಗಿದ್ದಾರೆ ಎಂದು ಅಧಿಕೃತವಾಗಿ ಪ್ರಕಟಿಸಿದೆ.

ಮಾರ್ಷಲ್ ಐಲ್ಯಾಂಡ್ಸ್ ಧ್ವಜದ ಅಡಿಯಲ್ಲಿ ಸಂಚರಿಸುತ್ತಿದ್ದ ‘ಎಂವಿ ಲಿಯಾಕಿ ಫ್ರೀಡಂ’ ಎಂಬ ತೈಲ ಮತ್ತು ರಾಸಾಯನಿಕ ಟ್ಯಾಂಕರ್ ಹಡಗು ಶುಕ್ರವಾರ ರಾತ್ರಿ ಒಮಾನ್ ಕೊಲ್ಲಿಯಲ್ಲಿ ವಿಎಚ್‌ಎಫ್ (ರೇಡಿಯೋ ಸಂಪರ್ಕ) ಕಳೆದುಕೊಂಡಿದೆ. ಆ ಹಡಗಿನ ಮೇಲೆ ದಾಳಿಯಾಗಿದೆ ಎಂದು ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಇದರಲ್ಲಿ ಹಲವು ಭಾರತೀಯ ನಾವಿಕರಿದ್ದು, ಸಾವು-ನೋವಿನ ಭೀತಿ ವ್ಯಕ್ತವಾಗಿತ್ತು.

ಇದಕ್ಕೆ ವಿದೇಶಾಂಗ ಸಚಿವಾಲಯದ ಪ್ರತಿಕ್ರಿಯೆ ನೀಡಿದ್ದು, “ನಾವು ಲಿಯಾಕಿ ಫ್ರೀಡಂ ಹಡಗಿನ ಮಾಸ್ಟರ್ (ಕ್ಯಾಪ್ಟನ್) ಅವರೊಂದಿಗೆ ನೇರವಾಗಿ ಮಾತನಾಡಿದ್ದೇವೆ. ಹಡಗಿನಲ್ಲಿರುವ ಎಲ್ಲಾ ಸಿಬ್ಬಂದಿ ಸಂಪೂರ್ಣ ಸುರಕ್ಷಿತವಾಗಿದ್ದಾರೆ ಮತ್ತು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ದಾಳಿಯ ಮಾಹಿತಿ ಸುಳ್ಳು ಎಂಬುದನ್ನು ಅವರು ಖಚಿತಪಡಿಸಿದ್ದಾರೆ” ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ದಾಳಿ ಕೊನೆಗೊಳ್ಳಬೇಕು; 3 ಭಾರತೀಯರು ಸಾವನ್ನಪ್ಪಿದ ಒಮಾನ್ ಹಡಗಿನ ಮೇಲಿನ ಅಮೆರಿಕದ ದಾಳಿಗೆ ಭಾರತ ಖಂಡನೆ

ಸದ್ಯಕ್ಕೆ ಒಮಾನ್ ಕರಾವಳಿಯ ಬಳಿ ಭಾರತೀಯ ಸಿಬ್ಬಂದಿಯಿದ್ದ ಮೂರು ವಾಣಿಜ್ಯ ಹಡಗುಗಳ ಮೇಲೆ ಮಾತ್ರ ದಾಳಿ ನಡೆದಿರುವುದು ದೃಢಪಟ್ಟಿದೆ. ಜೂನ್ 8ರಂದು ಎಂಟಿ ಮರಿವೆಕ್ಸ್ ಎಂಬ ಪಲಾವ್ ಧ್ವಜದ ಹಡಗಿನಲ್ಲಿ 24 ಭಾರತೀಯರಿದ್ದರು. ಇವರನ್ನು ಒಮಾನ್ ಅಧಿಕಾರಿಗಳು ಸುರಕ್ಷಿತವಾಗಿ ರಕ್ಷಿಸಿದ್ದರು. ಜೂನ್ 10ರಂದು ಎಂಟಿ ಸೆಟ್ಟೆಬೆಲ್ಲೊ ಎಂಬ ಪಲಾವ್ ಧ್ವಜದ ಈ ಟ್ಯಾಂಕರ್ ಮೇಲಿನ ಭೀಕರ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ದುರಂತವಾಗಿ ಸಾವನ್ನಪ್ಪಿದ್ದರು.

ಜೂನ್ 11ರಂದು ಎಂಟಿ ಜಲವೀರ್ ಎಂಬ ಗಿನಿ-ಬಿಸೌ ಧ್ವಜದ ಈ ಹಡಗಿನಲ್ಲಿದ್ದ 20 ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿತ್ತು. ಭಾರತೀಯ ನಾವಿಕರ ಸಾವಿಗೆ ಕಾರಣವಾದ ಈ ಮಿಲಿಟರಿ ದಾಳಿಗಳ ವಿರುದ್ಧ ನವದೆಹಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಭಾರತ ಸರ್ಕಾರವು ನವದೆಹಲಿಯಲ್ಲಿರುವ ಅಮೆರಿಕದ ಉಪ ರಾಯಭಾರಿ ಜೇಸನ್ ಮೀಕ್ಸ್ ಅವರಿಗೆ ಕೇವಲ ಒಂದೇ ವಾರದಲ್ಲಿ ಎರಡು ಬಾರಿ ಸಮನ್ಸ್ ಜಾರಿ ಮಾಡಿದೆ. ವಾಣಿಜ್ಯ ಹಡಗುಗಳ ಸಂಚಾರ ಮಾರ್ಗ ಮುಕ್ತ ಮತ್ತು ಸುರಕ್ಷಿತವಾಗಿರಬೇಕು ಎಂದು ಭಾರತ ಪ್ರತಿಪಾದಿಸಿದೆ.

ಇದನ್ನೂ ಓದಿ: ಒಮಾನ್ ಕರಾವಳಿಯಲ್ಲಿ ಭಾರತೀಯರಿದ್ದ ವಾಣಿಜ್ಯ ಹಡಗಿನ ಮೇಲೆ ಅಮೆರಿಕ ದಾಳಿ, ನಾಪತ್ತೆಯಾಗಿದ್ದ ಮೂವರ ಸಾವು ದೃಢ

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಶುಕ್ರವಾರ ತಡರಾತ್ರಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ತಮ್ಮ ತೀವ್ರ ಆಕ್ಷೇಪವನ್ನು ತಿಳಿಸಿದ್ದಾರೆ. “ವಾಣಿಜ್ಯ ಹಡಗುಗಳ ಮೇಲೆ ಇಂತಹ ಮಾರಣಾಂತಿಕ ದಾಳಿಗಳನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ” ಎಂದು ಎಸ್.​ ಜೈಶಂಕರ್ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ದಾಳಿಗಳಿಗೆ ಇರಾನ್ ಕಾರಣ ಎಂದು ಆರೋಪಿಸಿದ್ದರೆ, ಇರಾನ್‌ನ ತೆಹ್ರಾನ್ ಆಡಳಿತವು ಈ ಆರೋಪಗಳನ್ನು ಸಂಪೂರ್ಣ ಆಧಾರರಹಿತ ಮತ್ತು ಜಾಗತಿಕ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಎಂದು ತಳ್ಳಿಹಾಕಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಡದಿ ಟೌನ್​ಶಿಪ್​​ ಯೋಜನೆ ಲೂಟಿ ಸ್ಕೀಮ್​​​ ಡೌಟೇ ಬೇಡ: ಹೆಚ್​ಡಿ ಕುಮಾರಸ್ವಾಮಿ

ಬೆಂಗಳೂರು, ಜೂನ್​ 13: ಬಿಡದಿ ಟೌನ್​ಶಿಪ್ ವಿವಾದ​ ಸದ್ಯ ಸಿಎಂ ಡಿಕೆ ಶಿವಕುಮಾರ್​ ಮತ್ತು ಕೇಂದ್ರ ಸಚಿವ ಹೆಚ್​​ಡಿ ಕುಮಾರಸ್ವಾಮಿ ಮಧ್ಯೆ ಮತ್ತೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಈ ಬಗ್ಗೆ ಮಾತನಾಡಿರುವ ಹೆಚ್​​ಡಿ ಕುಮಾರಸ್ವಾಮಿ, ಬಿಡದಿ ಟೌನ್​ಶಿಪ್​​ ಎಂದರೆ ಲೂಟಿ ಸ್ಕೀಮ್​​​ ಡೌಟೇ ಬೇಡ ಎಂದು ಹೇಳಿದ್ದಾರೆ. ಬಿಡದಿ ಟೌನ್​ಶಿಪ್ ಅವರ ಕನಸಿನ ಕೂಸಲ್ಲ, ನನ್ನ ಕನಸಿನ ಕೂಸು. ಬಿಡದಿ ಟೌನ್​ಶಿಪ್ ವಿಚಾರದಲ್ಲಿ ಅವತ್ತಿನ ನನ್ನ ಉದ್ದೇಶ ಬೇರೆ ಇತ್ತು, ಆದರೆ ಇವತ್ತಿನ ಉದ್ದೇಶ ಬೇರೆಯೇ ಇದೆ. ಎಲ್ಲದಕ್ಕೂ ಅಜ್ಜಯ್ಯ ಬಳಿ ಹೋಗ್ತೀರಿ, ಅಜ್ಜಯ್ಯ ಹೇಳಿದ್ದಾರಾ ಟೌನ್​ಶಿಪ್ ಮಾಡಿ ರೈತರ ಒಕ್ಕಲೆಬ್ಬಿಸಿ ಎಂದು. ಜೆಡಿಎಸ್​ನಿಂದ ಪ್ರತಿಭಟನೆ, ಕಾನೂನು ಹೋರಾಟಕ್ಕೆ ಸಿದ್ಧರಾಗಿದ್ದೇವೆ. 450 ದಿನದಿಂದ ಹೋರಾಟ ಮಾಡುತ್ತಿರುವವರ ಧ್ವನಿಯಾಗಿದ್ದೇವೆ ಅಷ್ಟೇ. ರೈತ ಮುಖಂಡರನ್ನು ಬಂಧಿಸುವಂತೆ ಕೆಲಸವಾಗುತ್ತಿದೆ. ಅಗತ್ಯವಿದ್ದರೆ ನಾನೇ ಹೋರಾಟಕ್ಕೆ ಹೋಗುವೆ ಎಂದು ಹೆಚ್​​ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕರ್ನಾಟಕದ ಶೈಕ್ಷಣಿಕ ರಂಗದಲ್ಲಿ ಹೊಸ ಕ್ರಾಂತಿ: ಸರ್ಕಾರಿ ಕಾಲೇಜುಗಳಲ್ಲಿ 50 AI ಲ್ಯಾಬ್‌ಗಳ ಸ್ಥಾಪನೆಗೆ ಅಸ್ತು! – Kannada News | Karnataka Government Approves 50 AI Labs in Government Colleges to Boost Youth Employability

ಕರ್ನಾಟಕದ ಸರ್ಕಾರಿ ಕಾಲೇಜುಗಳಲ್ಲಿ 50 ಎಐ ಪ್ರಯೋಗಾಲಯಗಳ ಸ್ಥಾಪನೆಗೆ ಅನುಮೋದನೆ

ಬೆಂಗಳೂರು, ಜೂನ್ 13: ರಾಜ್ಯದ ಪ್ರಮುಖ ನಗರಗಳ ಹೊರತಾಗಿ, ಗ್ರಾಮೀಣ ಹಾಗೂ ಹಂತ-2 (Tier-2) ಮತ್ತು ಹಂತ-3 (Tier-3) ನಗರಗಳ ಯುವಜನರಿಗೆ ಉದಯೋನ್ಮುಖ ತಂತ್ರಜ್ಞಾನಗಳ ಪರಿಚಯ ಮಾಡಿಸಲು ಮತ್ತು ಅವರ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಒಟ್ಟು 50 ಕೃತಕ ಬುದ್ಧಿಮತ್ತೆ (AI) ಪ್ರಯೋಗಾಲಯಗಳನ್ನ ಸ್ಥಾಪಿಸಲು ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ.

ಮುಖ್ಯಾಂಶಗಳು

  • ಕರ್ನಾಟಕದ ಸರ್ಕಾರಿ ಕಾಲೇಜುಗಳಲ್ಲಿ 50 ಎಐ ಪ್ರಯೋಗಾಲಯಗಳ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ.
  • ಸಣ್ಣ ನಗರಗಳ ವಿದ್ಯಾರ್ಥಿಗಳ ಉದ್ಯೋಗಾವಕಾಶ ಹೆಚ್ಚಿಸಲು ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.
  • ಕೇಂದ್ರದ ಎಐ ಮಿಷನ್ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

ಆಯ್ದ ಸರ್ಕಾರಿ ಕಾಲೇಜುಗಳಲ್ಲಿ ಈ ಅತ್ಯಾಧುನಿಕ AI ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು. ಇದು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ, ಹೊಸ ಪ್ರಯೋಗಗಳು, ಕೌಶಲ್ಯಾಭಿವೃದ್ಧಿ ಮತ್ತು ನಾವೀನ್ಯತೆಗೆ ಭದ್ರವಾದ ಮೂಲಸೌಕರ್ಯವನ್ನು ಒದಗಿಸಲಿದೆ.

ಕೇಂದ್ರದ ‘AI ಮಿಷನ್’ ಜೊತೆ ಕೈಜೋಡಿಸಿದ ರಾಜ್ಯ

2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಕೇಂದ್ರ ಸರ್ಕಾರದ ‘ಎಐ ಮಿಷನ್’ (AI Mission) ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಸ್ಥಾಪನೆಯಾಗುವ ಪ್ರತಿ ಪ್ರಯೋಗಾಲಯಕ್ಕೆ ಒಟ್ಟು 68.98 ಲಕ್ಷ ರೂಪಾಯಿ ಆರ್ಥಿಕ ನೆರವು ಸಿಗಲಿದ್ದು, ಮೂರು ವರ್ಷಗಳ ಅವಧಿಯಲ್ಲಿ ಮೂರು ಕಂತುಗಳಲ್ಲಿ ಈ ಹಣ ಬಿಡುಗಡೆಯಾಗಲಿದೆ. ಇದರ ಜೊತೆಗೆ, ಕರ್ನಾಟಕ ಸರ್ಕಾರವು ಈ ಯೋಜನೆಗಾಗಿ 10 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದು, ಅದರಲ್ಲಿ 6.29 ಕೋಟಿ ರೂಪಾಯಿಗಳನ್ನು ಮೊದಲ ವರ್ಷದಲ್ಲೇ ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ.

ಇದನ್ನೂ ಓದಿ Career in AI after SSLC: ಎಸ್​ಎಸ್​ಎಲ್​ಸಿ ನಂತರ AI ಲೋಕಕ್ಕೆ ಎಂಟ್ರಿ ಕೊಡಬೇಕೇ? ಟಾಪ್ ಕೋರ್ಸ್‌ಗಳ ವಿವರ ಇಲ್ಲಿವೆ

ಮೊದಲ ಹಂತದಲ್ಲಿ 23 ಕಾಲೇಜುಗಳ ಆಯ್ಕೆ

ಈ ಯೋಜನೆಯ ಮೊದಲ ಹಂತವಾಗಿ ರಾಜ್ಯದ 23 ಪ್ರಮುಖ ಶೈಕ್ಷಣಿಕ ಸಂಸ್ಥೆಗಳನ್ನು ಆಯ್ಕೆ ಮಾಡಲು ಸರ್ಕಾರ ಹಸಿರು ನಿಶಾನೆ ತೋರಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಮುಂದಿನ ದಿನಗಳಲ್ಲಿ ಉದ್ಯೋಗದ ಭವಿಷ್ಯವನ್ನು ತಂತ್ರಜ್ಞಾನವೇ ನಿರ್ಧರಿಸಲಿದೆ. ಹೀಗಾಗಿ ಇಂತಹ ಅತ್ಯಾಧುನಿಕ ತಾಂತ್ರಿಕ ಕೌಶಲ್ಯಗಳನ್ನು ಕಲಿಯುವ ಅವಕಾಶಗಳು ಕೇವಲ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗದೆ ಎಲ್ಲರಿಗೂ ಸಿಗಬೇಕು ಎನ್ನುವುದು ನಮ್ಮ ಆಶಯವಾಗಿದೆ. ಈ AI ಪ್ರಯೋಗಾಲಯಗಳ ಮೂಲಕ ಸಣ್ಣ ನಗರಗಳ ಯುವಜನರು ಜಾಗತಿಕ ಡಿಜಿಟಲ್ ಆರ್ಥಿಕತೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಂಭೀರ ಲೋಪ ಎಸಗಿದ ಮಲಯಾಳಂ ಸಿನಿಮಾ, ತನಿಖೆ ಆರಂಭಿಸಿದ ಸಿಎಬಿಎಫ್​​ಸಿ – Kannada News | Mollywood Times movie allegedly broke CBFC rules

ಸಿನಿಮಾಗಳು (Cinema), ಭಾರತದ ಸಿನಿಮಾಟೊಗ್ರಫಿ ಕಾಯ್ದೆಯಡಿಯೇ ಪ್ರದರ್ಶನ ಕಾಣಬೇಕು. ಅದರಲ್ಲೂ ಸಿಬಿಎಫ್​​ಸಿ ನೀಡಿದ ಪ್ರಮಾಣ ಪತ್ರದ ಹೊರತಾಗಿ ಹಾಗೂ ಸಿಬಿಎಫ್​​ಸಿ ಸೂಚಿಸಿದ ರೀತಿಯಲ್ಲಿಯೇ ಸಿನಿಮಾಗಳು ಪ್ರದರ್ಶನ ಕಾಣಬೇಕು ಎಂಬುದು ಕಡ್ಡಾಯ ನಿಯಮ. ಸಿಬಿಎಫ್​​ಸಿ ಸೂಚಿಸಿದ ಕಡೆ, ಕಟ್ ಮಾಡಬೇಕು, ಮ್ಯೂಟ್ ಮಾಡಬೇಕು, ಒಂದೊಮ್ಮೆ ಸಿಬಿಎಫ್​​ಸಿ, ಸಿನಿಮಾವನ್ನು ಬಿಡುಗಡೆ ಮಾಡಬಾರದು ಎಂದರೆ ಬಿಡುಗಡೆ ಮಾಡುವಂತಿಲ್ಲ. ಸಿಬಿಎಫ್​​ಸಿಯನ್ನು ನಿಯಮವನ್ನು ಮೀರಿ ಯಾರೂ ಸಿನಿಮಾ ಪ್ರದರ್ಶಿಸುವಂತಿಲ್ಲ. ಆದರೆ ಇದೀಗ ಮಲಯಾಳಂ ಸಿನಿಮಾ ಒಂದು ಈ ದುಸ್ಸಾಹಸ ಮಾಡಿದೆ.

‘ಪ್ರೇಮಲು’, ‘ಲೋಕ’ ಖ್ಯಾತಿಯ ನಟ ನಸ್ಲೆನ್ ಅಭಿನಯದ ‘ಮಾಲಿವುಡ್ ಟೈಮ್ಸ್’ ಹೆಸರಿನ ಮಲಯಾಳಂ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಈ ಸಿನಿಮಾವು ಮಲಯಾಳಂ ಚಿತ್ರರಂಗದ ಕುರಿತಾದ ಕತೆಯನ್ನು ಒಳಗೊಂಡಿದ್ದು, ನಸ್ಲೆನ್ ಅವರು ಮಲಯಾಳಂ ಚಿತ್ರರಂಗದ ಸಿನಿಮಾ ನಿರ್ದೇಶಕನಾಗಿ ನಟಿಸಿದ್ದಾರೆ. ಆದರೆ ಈ ಸಿನಿಮಾ ಸಿಬಿಎಫ್​​ಸಿಯ ನಿಯಮ ಉಲ್ಲಂಘಿಸಿದ್ದು, ಸಿಬಿಎಫ್​​ಸಿ ಸೂಚಿಸಿದ ಕಟ್ ಹಾಗೂ ಮ್ಯೂಟ್ ಮಾಡದೆ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಸಿಬಿಎಫ್​​ಸಿಗೆ ಸಲ್ಲಿಕೆಯಾಗಿದ್ದ ಸಿನಿಮಾಕ್ಕೂ ಈಗ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ ಸಿನಿಮಾಕ್ಕೂ ವ್ಯತ್ಯಾಸವಿದೆ ಎನ್ನಲಾಗುತ್ತಿದೆ.

ವರದಿಗಳ ಪ್ರಕಾರ, ಪ್ರಮಾಣೀಕರಣಕ್ಕಾಗಿ ಸಲ್ಲಿಸಲಾದ ಸಿನಿಮಾನಲ್ಲಿ ಕೆಲವು ಅವಾಚ್ಯ ಶಬ್ದಗಳನ್ನು ಮ್ಯೂಟ್ ಮಾಡಲಾಗಿತ್ತು. ಆದರೆ, ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಆ ಶಬ್ದಗಳನ್ನು ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದಿದ್ದಾರೆ. ಸಿಬಿಎಫ್​​ಸಿ ಸೂಚಿಸಿದ್ದರೂ ಸಹ ಸಿನಿಮಾ ತಂಡದವರು ಅಶ್ಲೀಲ ಪದಗಳನ್ನು ಮ್ಯೂಟ್ ಮಾಡದೆ ಬಿಡುಗಡೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಿಬಿಎಫ್​​ಸಿಯು ಇದೀಗ ತನಿಖೆ ಆರಂಭಿಸಿದ್ದು, ಘಟನೆ ಕುರಿತಾಗಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ಒಂದೊಮ್ಮೆ ಸಿಬಿಎಫ್​​ಸಿ ಸೂಚಿಸಿದ ಕಟ್​​ ಹಾಗೂ ಮ್ಯೂಟ್​​ ರಹಿತವಾಗಿ ಸಿನಿಮಾವನ್ನು ಬಿಡುಗಡೆ ಮಾಡಿದ್ದಲ್ಲಿ ನಿರ್ಮಾಪಕರು ಗಂಭೀರ ದಂಡವನ್ನೇ ತೆರಬೇಕಾಗುತ್ತದೆ. ಪರಿಶೀಲನೆಯಲ್ಲಿ ತಪ್ಪು ಸಾಬೀತಾದರೆ, ಇದು ಗಂಭೀರವಾದ ನಿಯಮ ಉಲ್ಲಂಘನೆ ಆಗಿದೆ ಈ ಉಲ್ಲಂಘನೆಗೆ ಸಿನಿಮಾ ಮೇಲೆ ಶಾಶ್ವತ ನಿಷೇಧ, ನಿರ್ಮಾಪಕರಿಗೆ ದಂಡ ಮತ್ತು ಶಿಕ್ಷೆ ವಿಧಿಸಬಹುದಾಗಿರುತ್ತದೆ.

ಇದನ್ನೂ ಓದಿ:ಕರ್ನಾಟಕದಲ್ಲಿ ಭಾರೀ ಗಳಿಕೆ ಮಾಡಿದ ಹಾಲಿವುಡ್ ಚಿತ್ರ; ಕನ್ನಡ ಸಿನಿಮಾಗಳಿಗೇ ಇಲ್ಲ ಬೇಡಿಕೆ

1952ರ ಸಿನೆಮಾಟೋಗ್ರಾಫ್ ಕಾಯಿದೆಯ ನಿಬಂಧನೆಗಳ ಪ್ರಕಾರ, ಪ್ರಮಾಣೀಕೃತ ಚಲನಚಿತ್ರ ಆವೃತ್ತಿಗಳಿಗೆ ಸಂಬಂಧಿಸಿದ ಉಲ್ಲಂಘನೆಗಳು ದಂಡಕ್ಕೆ ಕಾರಣವಾಗಬಹುದು. ಅಧಿಕಾರಿಗಳು ನಿಯಮ ಉಲ್ಲಂಘನೆಯಾಗಿದೆ ಎಂದು ತೀರ್ಮಾನಿಸಿದರೆ, ನಿರ್ಮಾಪಕರು ಕಾನೂನಿನ ಅನ್ವಯ ಕ್ರಮಗಳನ್ನು ಎದುರಿಸಬೇಕಾಗಿರುತ್ತದೆ. ಮತ್ತು ‘ಮಾಲಿವುಡ್ ಟೈಮ್ಸ್’ ನ ಪ್ರದರ್ಶನ ನಿಲ್ಲಿಸಿ ಮತ್ತೊಮ್ಮೆ ಪ್ರಮಾಣೀಕೃತ ಗೊಳಿಸಬೇಕಾಗುತ್ತದೆ. ಸದ್ಯಕ್ಕೆ ಈ ಸಿನಿಮಾಕ್ಕೆ ‘ಯುಎ13’ ಪ್ರಮಾಣ ಪತ್ರವನ್ನು ಸಿಬಿಎಫ್​​ಸಿ ನೀಡಿದೆ.

‘ಮಾಲಿವುಡ್ ಟೈಮ್ಸ್’ ಸಿನಿಮಾನಲ್ಲಿ ನಸ್ಲಿನ್ ನಾಯಕ, ಸಿನಿಮಾ ಅನ್ನು ಅಭಿನಯ್ ಸುಂದರ್ ನಾಯಕ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಆಶಿಖ್ ಉಸ್ಮಾನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತದಲ್ಲಿ ನಕ್ಸಲ್ ಚಟುವಟಿಕೆಗೆ ವಿದೇಶದಿಂದ ಕೋಟ್ಯಂತರ ಫಂಡಿಂಗ್: ರಾಜ್ಯದ ನಾಲ್ವರು ಸೇರಿ 7 ಜನರ ವಿರುದ್ಧ ಎಫ್​ಐಆರ್​ – Kannada News | Foreign Funding Worth Crores Allegedly Linked to Naxal Activities in India; FIR Filed Against 7, Including 4 From Karnataka

ಪ್ರಾತಿನಿಧಿಕ ಚಿತ್ರImage Credit source: ipleaders.in

ಬೆಂಗಳೂರು, ಜೂನ್​ 13: ಭಾರತದಲ್ಲಿ ನಕ್ಸಲ್ (Naxal) ಚಟುವಟಿಕೆಗಳಿಗೆ ವಿದೇಶದಿಂದ ಫಂಡಿಂಗ್ ಆರೋಪ ಕೇಳಿಬಂದಿದೆ. ಹೀಗಾಗಿ ಅಮೆರಿಕಾ ಮೂಲದ ಟಿಟಿಐ (ದಿ ತಿಮೋತಿ ಇನಿಶಿಯೇಟಿವ್) ಕ್ರಿಶ್ಚಿಯನ್ ಮಿಷಿನರಿ ಸಂಸ್ಥೆ ಹಾಗೂ ಕರ್ನಾಟಕದ (Karnataka) ನಾಲ್ವರು ಸೇರಿದಂತೆ ಏಳು ಜನರ ವಿರುದ್ಧ ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮುಖ್ಯಾಂಶಗಳು

  • ನಕ್ಸಲ್ ಚಟುವಟಿಕೆಗೆ ವಿದೇಶದಿಂದ ಫಂಡಿಂಗ್​
  • ಅಮೆರಿಕಾ ಮೂಲದ ಸಂಸ್ಥೆ ಸೇರಿದಂತೆ 7 ಜನರ ಮೇಲೆ FIR
  • ಅಕ್ರಮವಾಗಿ ವಿದೇಶಿ ಮೂಲದ ಹಣ ಬಳಕೆ ಬೆಳಕಿಗೆ

ಎಫ್‌ಐಆರ್ ದಾಖಲು

ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಯುಎಪಿಎ ಹಾಗೂ ಬಿಎನ್‌ಎಸ್ ಕಾಯ್ದೆಯಡಿ ಒಳಸಂಚು, ವಂಚನೆ ಮತ್ತು ಸುಳ್ಳು ದಾಖಲೆ ಸೃಷ್ಟಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಬೆಂಗಳೂರಿನ ಜೋನಾಥನ್ ಎಸ್ ರಾಜನ್, ಮೈಸೂರಿನ ಸುಪ್ರೀಂ ಜಾಯ್, ಮಿಕಾ ಮಾರ್ಕ್, ಅಜಿತ್ ವರ್ಗೀಸ್ ಮಥಾಯಿ, ಛತ್ತೀಸ್ ಘಟ್​ದ ವರ್ಗೀಸ್ ಚಾಕೊ, ಅಸ್ಸಾಂನ ಬಬ್ಲು ಕುರ್ಮಿ ಹಾಗೂ ಟಿಟಿಐ ಸಂಸ್ಥೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಇದ್ನೂ ಓದಿ: ಪಾಕ್ ಉಗ್ರನ ಜೊತೆ ರಾಜ್ಯದ ಇಬ್ಬರ ಲಿಂಕ್: ಆರೋಪಿಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಯಲು!

ಕಳೆದ ಏಪ್ರಿಲ್‌ನಲ್ಲಿ ಇಡಿ ಅಧಿಕಾರಿಗಳು ನಡೆಸಿದ ದಾಳಿ ವೇಳೆ 95 ಕೋಟಿ ರೂಪಾಯಿಗೂ ಅಧಿಕ ಅಕ್ರಮ ವಿದೇಶಿ ಹಣ ಬಳಕೆಯಾಗಿರುವುದು ಬೆಳಕಿಗೆ ಬಂದಿದ್ದು, ಸಂತೋಷ್ ಕುಮಾರ್ ಎಂಬ ಸುಳ್ಳು ಹೆಸರಿನ ಯುಎಸ್‌ಎ ಟ್ರೂಯಿಸ್ಟ್ ಬ್ಯಾಂಕ್‌ನ ಸಾವಿರಕ್ಕೂ ಹೆಚ್ಚು ವಿದೇಶಿ ಡೆಬಿಟ್ ಕಾರ್ಡ್‌ಗಳನ್ನು ಭಾರತದಲ್ಲಿ ಅಕ್ರಮವಾಗಿ ವಿತರಿಸಿ ಹಣ ಡ್ರಾ ಮಾಡಿರುವುದು ಪತ್ತೆಯಾಗಿತ್ತು.

ಬೆಂಗಳೂರಿನ ಶೆಲ್ ಕಂಪನಿಗಳ ವಹಿವಾಟು ಬೆಳಕಿಗೆ

ಆರೋಪಿಗಳಲ್ಲೊಬ್ಬನಾದ ಮಿಕಾ ಮಾರ್ಕ್ ಬಳಿ 24 ವಿದೇಶಿ ಡೆಬಿಟ್ ಕಾರ್ಡ್‌ಗಳು ಪತ್ತೆಯಾಗಿದ್ದು, ನಕ್ಸಲ್ ಪೀಡಿತ ಪ್ರದೇಶಗಳು ಸೇರಿದಂತೆ ಛತ್ತೀಸ್‌ಗಢದಲ್ಲಿ ಈ ಕಾರ್ಡ್‌ಗಳ ಮೂಲಕ ಶಂಕಾಸ್ಪದ ನಗದು ಚಟುವಟಿಕೆಗಳು ನಡೆದಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಮತ್ತೊಬ್ಬ ಆರೋಪಿ ಅಜಿತ್ ವರ್ಗೀಸ್ ವಿಚಾರಣೆ ವೇಳೆ ಬೆಂಗಳೂರಿನ ಶೆಲ್ ಕಂಪನಿಗಳ ವಹಿವಾಟು ಬೆಳಕಿಗೆ ಬಂದಿದ್ದು, ಈ ಅಕ್ರಮ ಹಣವನ್ನು ಧರ್ಮೋಪದೇಶ ಹಾಗೂ ಎಡಪಂಥೀಯ ಉಗ್ರವಾದದ ತರಬೇತಿಗೆ ಬಳಸಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಸದ್ಯ ಎಸಿಪಿ ನೇತೃತ್ವದ ಪೊಲೀಸ್ ತಂಡವು ತನಿಖೆ ನಡೆಸಿ ಇಡಿಗೆ ವರದಿ ಸಲ್ಲಿಸಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗೃಹಲಕ್ಷ್ಮಿ ಹಣದಿಂದ ಸರ್ಕಾರಿ ಶಾಲೆಯ ಅಡುಗೆ ಕೋಣೆ ನವೀಕರಣ! – Kannada News | Gruha Lakshmi Success: Village Women Pool Schemes Money to Renovate Government School in Ankola

ಗೃಹಲಕ್ಷ್ಮಿ ಹಣದಿಂದ ಸರ್ಕಾರಿ ಶಾಲೆಯ ಅಡುಗೆ ಕೋಣೆ ನವೀಕರಣ!

ಕಾರವಾರ, ಜೂನ್ 13: ಗೃಹಿಣಿಯರನ್ನು ಆರ್ಥಿಕವಾಗಿ ಸದೃಢವಾಗಿಸಲು ಸರ್ಕಾರ ನೀಡಿದ ಗೃಹಲಕ್ಷ್ಮಿ (Gruhalakshmi) ಯೋಜನೆಯ ಹಣವನ್ನು ತಮ್ಮ ಸ್ವಂತಕ್ಕೆ ಬಳಸಿಕೊಳ್ಳುವ ಬದಲು, ಇಡೀ ಗ್ರಾಮದ ಮಕ್ಕಳ ಭವಿಷ್ಯಕ್ಕಾಗಿ ಮೀಸಲಿಡುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಮಹಿಳೆಯರು ರಾಜ್ಯಕ್ಕೇ ಮಾದರಿಯಾಗಿದ್ದಾರೆ. ಜಿಲ್ಲೆಯ ಅಂಕೋಲಾ ತಾಲೂಕಿನ ಅಂಬುಕೋಣ ಎಂಬ ಕುಗ್ರಾಮದ ಗೃಹಲಕ್ಷ್ಮಿಯರು ಒಟ್ಟಾಗಿ ಸೇರಿ, ತಮ್ಮೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆಯನ್ನು ನವೀಕರಿಸುವ ಮೂಲಕ ಹೊಸ ಕಾಯಕಕ್ಕೆ ನಾಂದಿ ಹಾಡಿದ್ದಾರೆ.

ಮುಖ್ಯಾಂಶಗಳು

  • ಅಂಕೋಲಾದ ಅಂಬುಕೋಣ ಗ್ರಾಮದ ಗೃಹಲಕ್ಷ್ಮಿಯರು ಸರ್ಕಾರಿ ಶಾಲೆಗೆ ಆಸರೆಯಾಗಿ ನಿಂತಿದ್ದಾರೆ.
  • ಮಾಸಿಕ ಗೃಹಲಕ್ಷ್ಮಿ ಹಣ ಒಟ್ಟುಗೂಡಿಸಿ ಶಾಲೆಯ ಅಡುಗೆ ಕೋಣೆ ನವೀಕರಿಸಿದ್ದಾರೆ.
  • ಒಟ್ಟು 98 ಸಾವಿರ ರೂಪಾಯಿ ವೆಚ್ಚದಲ್ಲಿ ಮಕ್ಕಳಿಗೆ ಸುಸಜ್ಜಿತ ಕೋಣೆ ನಿರ್ಮಿಸಿದ್ದಾರೆ.

ಗ್ರಾಮದ ಏಕೈಕ ಶಾಲೆ ಮುಚ್ಚಿಹೋಗಬಹುದೆಂಬ ಆತಂಕ

ಅಂಬುಕೋಣ ಗ್ರಾಮದಲ್ಲಿ ಕೇವಲ 49 ಮನೆಗಳಿದ್ದು, ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಸದ್ಯ 30 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ ಸರ್ಕಾರದಿಂದ ಸೂಕ್ತ ಅನುದಾನ ಬರುತ್ತಿರಲಿಲ್ಲ. ಇದರಿಂದಾಗಿ ಶಾಲೆಯ ಅಡುಗೆ ಕೋಣೆ ಸಂಪೂರ್ಣ ಹಾಳಾಗಿ ಹೋಗಿತ್ತು. ದಿನನಿತ್ಯ ಮಕ್ಕಳು ಕುಳಿತು ಊಟ ಮಾಡುವ ಕೋಣೆಯೂ ಸುಸಜ್ಜಿತವಾಗಿರಲಿಲ್ಲ. ಇದರಿಂದಾಗಿ ಮುಂದೊಂದು ದಿನ ಅನುದಾನದ ಕೊರತೆಯಿಂದ ತಮ್ಮೂರಿನ ಏಕೈಕ ಶಾಲೆ ಮುಚ್ಚಿಹೋಗಬಹುದು ಎಂಬ ಭೀತಿ ಗ್ರಾಮಸ್ಥರನ್ನು ಕಾಡತೊಡಗಿತ್ತು.

98 ಸಾವಿರ ರೂಪಾಯಿಯಲ್ಲಿ ಸುಂದರವಾಗಿ ನಿರ್ಮಾಣವಾದ ಅಡುಗೆ ಕೋಣೆ

ಈ ವೇಳೆ ಗ್ರಾಮದ ಮಹಿಳೆಯರು ಸ್ವಯಂಪ್ರೇರಿತರಾಗಿ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಲು ನಿರ್ಧರಿಸಿದರು. ತಮಗೆ ಸರ್ಕಾರದಿಂದ ಬರುವ ಒಂದು ತಿಂಗಳ ‘ಗೃಹಲಕ್ಷ್ಮಿ’ ಯೋಜನೆಯ 2,000 ರೂಪಾಯಿ ಹಣವನ್ನು ಶಾಲೆಗೆ ನೀಡಲು ಒಮ್ಮತದ ತೀರ್ಮಾನ ಕೈಗೊಂಡರು. ಹೀಗೆ ಎಲ್ಲ ಮಹಿಳೆಯರು ಒಟ್ಟುಗೂಡಿಸಿದ ಒಟ್ಟು 98 ಸಾವಿರ ರೂಪಾಯಿ ಹಣದಲ್ಲಿ ಶಾಲೆಯ ಅಡುಗೆ ಕೋಣೆಯನ್ನು ಸುಂದರವಾಗಿ ನವೀಕರಿಸಲಾಗಿದೆ. ಸರ್ಕಾರದ ಹಣವನ್ನು ಸಮಾಜದ ಹಿತಕ್ಕಾಗಿ ಬಳಸಿ, ಶಾಲೆಯ ಅಸ್ತಿತ್ವವನ್ನು ಉಳಿಸಿದ ಅಂಬುಕೋಣ ಗ್ರಾಮದ ಗೃಹಲಕ್ಷ್ಮಿಯರ ಈ ಕಾರ್ಯಕ್ಕೆ ಈಗ ಎಲ್ಲೆಡೆ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧರ್ಮಶಾಲಾದಲ್ಲಿ ನಿಲ್ಲದ ಮಳೆ; ಫಲಿತಾಂಶ ನಿರ್ಧರಿಸಲು ಕನಿಷ್ಠ ಎಷ್ಟು ಓವರ್​ಗಳನ್ನು ಆಡಬೇಕು? – Kannada News | India vs Afghanistan ODI: Rain Delays Dharamshala Match; Check Rules for Minimum Overs, Refunds

ಭಾರತ ಹಾಗೂ ಅಫ್ಘಾನಿಸ್ತಾನ (India vs Afghanistan) ನಡುವಿನ ಏಕದಿನ ಸರಣಿ ಇಂದಿನಿಂದ ಆರಂಭವಾಗಿದೆ. ಸರಣಿಯ ಮೊದಲ ಪಂದ್ಯ ಧರ್ಮಶಾಲಾದಲ್ಲಿ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ಪಂದ್ಯವನ್ನು ಇದುವರೆಗೂ ಆರಂಭಿಸಲು ಸಾಧ್ಯವಾಗಿಲ್ಲ.ಈ ಮೊದಲೇ ನಿಗದಿಪಡಿಸಿದಂತೆ ಪಂದ್ಯದ ಟಾಸ್ ಮಧ್ಯಾಹ್ನ 1ಗಂಟೆಗೆ ನಡೆಯಬೇಕಿತ್ತು. ನಂತರ ಪಂದ್ಯ 1:30ಕ್ಕೆ ಆರಂಭವಾಗಬೇಕಿತ್ತು. ಆದರೆ ಮಳೆ ಟಾಸ್​ ನಡೆಸುವುದಕ್ಕೂ ಅವಕಾಶ ಮಾಡಿಕೊಟ್ಟಿಲ್ಲ. ಹೀಗಾಗಿ ಆಟಗಾರರು ಮತ್ತು ಅಭಿಮಾನಿಗಳು ಮಳೆ ನಿಲ್ಲುವುದಕ್ಕಾಗಿ ದೇವರಲ್ಲಿ ಮೊರೆ ಇಡುತ್ತಿದ್ದಾರೆ. ಅದೃಷ್ಟವಶಾತ್ ಮಳೆ ನಿಂತು ಪಂದ್ಯ ತಡವಾಗಿ ಆರಂಭವಾದರೆ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಉಭಯ ತಂಡಗಳು ಕನಿಷ್ಠ ಎಷ್ಟು ಓವರ್‌ಗಳನ್ನು ಆಡಬೇಕು?. ಒಂದು ವೇಳೆ ಮಳೆಯಿಂದ ಪಂದ್ಯ ನಡೆಯದೆ ಹೋದರೆ ಟಿಕೆಟ್ ಖರೀದಿಸಿದವರಿಗೆ ಹಣ ವಾಪಸ್ ಸಿಗುತ್ತದೆಯೇ? ಈ ಬಗ್ಗೆ ನಿಯಮ ಏನು ಹೇಳುತ್ತದೆ ಎಂಬುದನ್ನು ನೋಡುವುದಾದರೆ..

ಕನಿಷ್ಠ ಎಷ್ಟು ಓವರ್‌ಗಳನ್ನು ಆಡಬೇಕು?

ಈ ಪಂದ್ಯಕ್ಕೆ ಕಟ್-ಆಫ್ ಸಮಯ ಸರಿಸುಮಾರು ಸಂಜೆ 6:30. ಇದರರ್ಥ ಸಂಜೆ 6:30 ರ ನಂತರ ಮಳೆ ನಿಂತರೆ, ಪಂದ್ಯವನ್ನು ಪ್ರಾರಂಭಿಸಲಾಗುವುದಿಲ್ಲ. ಈ ಸಮಯದೊಳಗೆ ಮಳೆ ನಿಂತು ಪಂದ್ಯ ಆರಂಭಕ್ಕೆ ಮೈದಾನ ಸಿದ್ಧವಾದರೆ ಪಂದ್ಯ ಆರಂಭವಾಗಲಿದೆ. ಸಂಜೆ 6:30 ರೊಳಗೆ ಪಂದ್ಯ ಆರಂಭವಾದರೆ ಉಭಯ ತಂಡಗಳಿಗೆ ತಲಾ ಎಷ್ಟು ಓವರ್ ಸಿಗುತ್ತದೆ ಎಂಬುದನ್ನು ನೋಡುವುದಾದರೆ..

ನಿಯಮಗಳ ಪ್ರಕಾರ, ಮಳೆ ಅಥವಾ ಇನ್ನಾವುದೇ ಕಾರಣದಿಂದಾಗಿ ಪಂದ್ಯಕ್ಕೆ ಅಡ್ಡಿ ಉಂಟಾದರೆ, ಫಲಿತಾಂಶ ನಿರ್ಧಾರವಾಗಬೇಕೆಂದರೆ ಉಭಯ ತಂಡಗಳ ನಡುವೆ ಕನಿಷ್ಠ 20 ಓವರ್‌ಗಳ ಆಟವಾದರೂ ನಡೆಯಬೇಕು. ಇದರರ್ಥ ಸಂಜೆ 6:30 ಕ್ಕಿಂತ ಮೊದಲು ಪಂದ್ಯ ಶುರುವಾದರೆ, ಉಭಯ ತಂಡಗಳು ತಲಾ 20 ಓವರ್‌ಗಳ ಪಂದ್ಯವನ್ನು ಆಡಲಿವೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸುವ ತೀರ್ಮಾನಕ್ಕೆ ಬರಲಿದ್ದಾರೆ. ಇದರರ್ಥ ಸಂಜೆ 6:30 ರಷ್ಟರಲ್ಲಿ ಪಂದ್ಯ ಆರಂಭವಾಗದಿದ್ದರೆ, ಪಂದ್ಯ ರದ್ದಾಗಲಿದೆ.

ಸೂಪರ್ ಓವರ್ ಆಡಿಸಲಾಗುತ್ತದೆಯೇ?

ವಾಸ್ತವವಾಗಿ ಏಕದಿನ ಸ್ವರೂಪಕ್ಕೆ ಈ ನಿಯಮ ಅನ್ವಯವಾಗುವುದಿಲ್ಲ. ನಿರ್ದಿಷ್ಟವಾಗಿ ಹೇಳುವುದಾದರೆ, ದ್ವಿಪಕ್ಷೀಯ ಸರಣಿಯಲ್ಲಿ ಪಂದ್ಯ ರದ್ದಾದರೆ ಸೂಪರ್ ಓವರ್ ಇರುವುದಿಲ್ಲ. ಐಸಿಸಿ ಈವೆಂಟ್‌ಗಳಲ್ಲಿ ನಾಕೌಟ್ ಪಂದ್ಯಗಳಲ್ಲಿ ಮಾತ್ರ ಈ ನಿಯಮವನ್ನು ಬಳಸಲಾಗುತ್ತದೆ. ಏಕದಿನ ಪಂದ್ಯಗಳಲ್ಲಿ, ಪಂದ್ಯ ಟೈ ಆದಾಗ ಮಾತ್ರ ಸೂಪರ್ ಓವರ್ ನಿಯಮನ್ನು ಬಳಸಲಾಗುತ್ತದೆ. ಇದರರ್ಥ ಧರ್ಮಶಾಲಾದಲ್ಲಿ ಮಳೆ ನಿಂತರೂ ಒಂದೇ ಒಂದು ಚೆಂಡು ಆಡದಿದ್ದರೆ, ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ.

IND vs AFG: ಭಾರತ- ಅಫ್ಘನ್ ನಡುವಿನ ಮೊದಲ ಏಕದಿನ ಪಂದ್ಯ ಎಲ್ಲಿ, ಎಷ್ಟು ಗಂಟೆಗೆ ಆರಂಭ?

ಟಿಕೆಟ್ ಖರೀದಿಸಿದವರಿಗೆ ಹಣ ವಾಪಸ್ ಆಗುತ್ತಾ?

ಧರ್ಮಶಾಲಾದಲ್ಲಿ ಮಳೆ ನಿಂತು ಪಂದ್ಯ ಆರಂಭವಾಗಿ ಒಂದು ಓವರ್ ಅಥವಾ ಒಂದು ಎಸೆತವನ್ನು ಬೌಲ್ ಮಾಡಿದ ಬಳಿಕ ಮತ್ತೆ ಮಳೆಬಂದು ಪಂದ್ಯ ರದ್ದಾದರೆ, ಟಿಕೆಟ್ ಖರೀದಿಸಿ ಪಂದ್ಯ ನೋಡಲು ಬಂದವರಿಗೆ ಟಿಕೆಟ್ ಹಣ ಸಿಗುವುದಿಲ್ಲ. ಇದರರ್ಥ ಅಭಿಮಾನಿಗಳು ಖಾಲಿ ಕೈಯಲ್ಲಿ ವಾಪಸ್ ಹೋಗಬೇಕಾಗುತ್ತದೆ. ಒಂದು ವೇಳೆ ಮಳೆ ನಿಂತರೂ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ಆಗ ಪೂರ ಟಿಕೆಟ್ ಹಣ ವಾಪಸ್ ಸಿಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:59 pm, Sat, 13 June 26

Source link

Exit mobile version