ಕೂದಲು ಬೇಗ ಬಿಳಿಯಾಗುವುದಕ್ಕೆ ಈ ವಿಟಮಿನ್ ಕೊರತೆಯೂ ಕಾರಣವಾಗಿರಬಹುದು! – Kannada News | Can Premature Grey Hair Turn Black Again? Dermatologist Explains the Truth
ಇತ್ತೀಚಿನ ದಿನಗಳಲ್ಲಿ 20ರಿಂದ 30 ವರ್ಷದ ಯುವಕರಲ್ಲಿ ಬೇಗ ಕೂದಲು ಬಿಳಿಯಾಗುವ ಸಮಸ್ಯೆ ಹೆಚ್ಚುತ್ತಿದೆ. ಹಿಂದೆ ವಯಸ್ಸಾದ ಬಳಿಕ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಈ ಸಮಸ್ಯೆ ಈಗ ಯುವಜನರಲ್ಲಿಯೇ ಸಾಮಾನ್ಯವಾಗಿದೆ. ಒತ್ತಡ, ಅಸಮತೋಲಿತ ಆಹಾರ, ವಿಟಮಿನ್ ಕೊರತೆ, ಮಾಲಿನ್ಯ ಹಾಗೂ ಜೀವನಶೈಲಿಯ ಬದಲಾವಣೆಗಳು ಇದರ ಪ್ರಮುಖ ಕಾರಣಗಳಾಗಿವೆ. ಹಾಗಾದರೆ ಒಮ್ಮೆ ಬಿಳಿಯಾದ ಕೂದಲು ಮತ್ತೆ ಸಹಜವಾಗಿ ಕಪ್ಪಾಗಬಹುದೇ, ಈ ಬಗ್ಗೆ ಚರ್ಮರೋಗ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ. ಅಕಾಲಿಕವಾಗಿ ಕೂದಲು ಬಿಳಿಯಾಗಲು ಕಾರಣವೇನು? ಚರ್ಮರೋಗ ತಜ್ಞೆ ಡಾ. ಅರ್ಜು…