2 ತಿಂಗಳ ಸಂಚು, 27 ಬಾರಿ ಇರಿತ; ಫರೀದಾಬಾದ್ ಶಿಕ್ಷಕಿಯ ಭೀಕರ ಕೊಲೆಯ ಹಿಂದಿನ ಸತ್ಯ ಬಯಲು – Kannada News | Stabbed 27 times 2 months of preperation Chilling details of Faridabad teacher Sandhya Sharmas murder
ಫರೀದಾಬಾದ್, ಆಗಸ್ಟ್ 5: ಹರಿಯಾಣದ ಫರೀದಾಬಾದ್‌ನಲ್ಲಿ ಸೋಮವಾರ ನಡೆದ 28 ವರ್ಷದ ಖಾಸಗಿ ಶಾಲಾ ಶಿಕ್ಷಕಿ ಸಂಧ್ಯಾ ಶರ್ಮಾ ಅವರ ಕೊಲೆಗೆ (Faridabad Teacher Killing) 2 ತಿಂಗಳುಗಳ ಮುಂಚಿತವಾಗಿಯೇ ಸಂಚು ರೂಪಿಸಲಾಗಿತ್ತು. ಈ ಕೃತ್ಯ ಎಸಗಲೆಂದೇ ಆರೋಪಿ ವಿಶೇಷವಾಗಿ ಚಾಕುವನ್ನು ಖರೀದಿಸಿದ್ದು, ದಾಳಿ ನಡೆಸಲು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ನಡೆದ ಈ ಕೃತ್ಯದಲ್ಲಿ ಸಂಧ್ಯಾ ಶರ್ಮಾ ಅವರ ಕುತ್ತಿಗೆ ಮತ್ತು ಎದೆಗೆ 27ಕ್ಕೂ ಹೆಚ್ಚು ಬಾರಿ ಇರಿಯಲಾಗಿದ್ದು, ಅವರು ಸ್ಥಳದಲ್ಲೇ…